ನಾನು ಮೆಚ್ಚಿದ ವಾಟ್ಸಪ್

Wednesday, October 21, 2020

ಇಂದಿನ ಇತಿಹಾಸ History Today ಅಕ್ಟೋಬರ್ 21

  ಇಂದಿನ ಇತಿಹಾಸ  History Today ಅಕ್ಟೋಬರ್ 21

2020: ನವದೆಹಲಿಕೇಂದ್ರ ಸರ್ಕಾರಿ ನೌಕರರಿಗೆ ವಿಜಯದಶಮಿಗೆ ಮುನ್ನವೇ ದಸರಾ ಉಡುಗೊರೆಯಾಗಿ ೨೦೧೯-೨೦೨೦ನೇ ಸಾಲಿನ ಬೋನಸ್‌ನ್ನು ಕೇಂದ್ರ ಸರ್ಕಾರ 2020 ಅಕ್ಟೋಬರ್ 21ರ ಬುಧವಾರ ಘೋಷಿಸಿದೆಗೆಜೆಟೆಡ್ ಅಲ್ಲದ ೩೦.೬೭ ಲಕ್ಷ ಮಂದಿ ನೌಕರರಿಗೆ ಇದರ ಲಾಭ ಸಿಗಲಿದ್ದುಸರ್ಕಾರ ಇದಕ್ಕಾಗಿ ,೭೩೭ ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆಹಬ್ಬದ ಅವಧಿಯಲ್ಲಿ ಖರ್ಚನ್ನು ಉತ್ತೇಜಿಸುವ ಉದ್ದೇಶದಿಂದ ೨೦೧೯-೨೦೨೦ರ ಸಾಲಿನ ಬೋನಸ್ ನೀಡುವ ನಿರ್ಣಯಕ್ಕೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ ವಿಷಯವನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು ಸಚಿವ ಸಂಪುಟ ಸಭೆಯ ಬಳಿಕ ಪ್ರಕಟಿಸಿದರುಉತ್ಪಾದಕತೆ ಸಂಬಂಧಿತ ಬೋನಸ್ ಮತ್ತು ಉತ್ಪಾದಕತೆ ಸಂಬಂಧಿತವಲ್ಲದ ಬೋನಸ್ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಜಾವಡೇಕರ್ ಹೇಳಿದರುಕೋವಿಡ್ -೧೯ ಸಾಂಕ್ರಾಮಿಕ ರೋಗದಿಂದಾಗಿ  ವರ್ಷ ಬೋನಸ್ ಘೋಷಣೆಯ ಬಗೆಗಿನ ಅನಿಶ್ಚಿತತೆಯಿಂದ ಚಿಂತಿತರಾಗಿದ್ದ ಸರ್ಕಾರಿ ನೌಕರರಲ್ಲಿ ಕೇಂದ್ರ ಸರ್ಕಾರದ ಪ್ರಕಟಣೆಯು ಹೊಸ ಉತ್ಸಾಹವನ್ನು ತುಂಬಿಸುತ್ತದೆ.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿಭಾರತದಲ್ಲಿ ಕೊರೋನಾವೈರಸ್ ಕಾಯಿಲೆಯ ಪ್ರಕರಣಗಳ ದೈಂದಿನ ಸಂಖ್ಯೆಯು ಇಳಿಮುಖವಾಗುತ್ತಿದ್ದುಸತತ ಎರಡನೇ ದಿನವೂ ಸಕ್ರಿಯ ಪ್ರಕರಣಗಳು . ಲಕ್ಷಕ್ಕಿಂತಲೂ ಕಡಿಮೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಅಕ್ಟೋಬರ್ 21ರ ಬುಧವಾರ ಹೇಳಿತು. ದೇಶದಲ್ಲಿ ಕೋವಿಡ್ -೧೯ ಸಾಂಕ್ರಾಮಿಕದ ,೪೦,೦೯೦ ಸಕ್ರಿಯ ಪ್ರಕರಣಗಳಿವೆಇದು ಒಟ್ಟು ಪ್ರಕರಣಗಳ ಶೇಕಡಾ .೬೭ ರಷ್ಟಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವುಪ್ರತಿದಿನ ಹೆಚ್ಚಿನ ಸಂಖ್ಯೆಯ ಕೋವಿಡ್ -೧೯ ರೋಗಿಗಳು ಚೇತರಿಸಿಕೊಳ್ಳುತ್ತಿರುವುದರಿಂದಹೆಚ್ಚಿನ ಮಟ್ಟದ ದೈನಂದಿನ ಚೇತರಿಕೆಯಲ್ಲಿ ಸ್ಥಿರ ಪ್ರವೃತ್ತಿಯನ್ನು ಭಾರತ ಮುಂದುವರೆಸಿದೆ ಎಂದು ಸಚಿವಾಲಯ ಹೇಳಿತುದೇಶದಲ್ಲಿ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೬೧,೭೭೫ ಚೇತರಿಕೆ ಪ್ರಕರಣಗಳು ದಾಖಲಾಗಿದ್ದುಇದೇ ಅವಧಿಯಲ್ಲಿ ೫೪,೦೪೪ ಹೊಸ ಸೋಂಕುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆರಾಷ್ಟ್ರೀಯ ಪ್ರಕರಣಗಳ ಸಾವಿನ ಪ್ರಮಾಣ (ಸಿಎಫ್‌ಆರ್ಶೇಕಡಾ .೫೧ ಕ್ಕೆ ಇಳಿದಿದೆ ಎಂದು ಅದು ಹೇಳಿದೆಛತ್ತೀಸ್‌ಗಢಜಾರ್ಖಂಡ್ಆಂಧ್ರಪ್ರದೇಶತೆಲಂಗಾಣಬಿಹಾರಅಸ್ಸಾಂಒಡಿಶಾ ಮತ್ತು ಕೇರಳ ಸೇರಿದಂತೆ ೧೪ ರಾಜ್ಯಗಳಲ್ಲಿ ಪ್ರಕರಣಗಳ ಸಾವಿನ ಪ್ರಮಾಣ ಶೇಕಡಾ  ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿಮುಂದಿನ ವಾರ ನಡೆಯಲಿರುವ  ನೇ ಟು ಪ್ಲಸ್ ಟು ಸಚಿವ ಸಭೆಯು ಭಾರತ ಮತ್ತು ಅಮೆರಿಕ  ಎರಡೂ ಪ್ರಜಾಪ್ರಭುತ್ವಗಳ ನಡುವಣ ಸೇನೆ-ಸೇನಾ ಸಂಬಂಧವನ್ನು ಸಾಂಸ್ಥಿಕ ಗುಪ್ತಚರ-ಮಾಹಿತಿ ಹಂಚಿಕೆ ಒಪ್ಪಂದದತ್ತ ಮತ್ತು ತ್ರಿ-ಸೇವಾ ಕವಾಯತುಗಳನ್ನು ಮೀರಿ ಮಾನವರಹಿತಬಾಹ್ಯಾಕಾಶ ಮತ್ತು ನೀರೊಳಗಿನ ವೇದಿಕೆಯತ್ತ ಒಯ್ಯಲಿವೆ ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 21ರ ಬುಧವಾರ ತಿಳಿಸಿದವು. ಅಕ್ಟೋಬರ್ ೨೬-೨೭ ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಒಪ್ಪಿದ ಉನ್ನತ ಕಾರ್ಯತಂತ್ರದ ಸಂವಾದದ ಮೂರನೇ ಸುತ್ತಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರನ್ನು ಭೇಟಿ ಮಾಡಲಿದ್ದಾರೆ.  ೨೦೧೭ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟು ಪ್ಲಸ್ ಟು  ಮಾತುಕತೆಯನ್ನು ಆರಂಭಿಸಿದ್ದರುಮೂರನೇ ಸುತ್ತಿನ ಮಾತುಕತೆಯಲ್ಲಿ ಅಮೆರಿಕದಿಂದ ಎಂಕ್ಯೂ೯ಎಂಬಿ ಯಂತಹ ನಿಗದಿತ ಗುರಿಯ ದಾಳಿ ಮಾಹಿತಿ ಬಳಸುವ ಸಶಸ್ತ್ರ ಡ್ರೋನ್‌ಗಳನ್ನು ಭಾರತವು ಪಡೆದುಕೊಳ್ಳಲು ಪೂರ್ವಭಾವಿಯಾಗಿ ಬಿಇಸಿಎ (ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದಎಂಬ ಭೌಗೋಳಿಕ-ಪ್ರಾದೇಶಿಕ ಮಿಲಿಟರಿ ಅಡಿಪಾಯ ಒಪ್ಪಂದಕ್ಕೆ ಉಭಯ ಕಡೆಯವರು ಸಹಿ ಹಾಕುವ ನಿರೀಕ್ಷೆಯಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಮುಂಬೈಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಏಕನಾಥ್ ಖಡ್ಸೆ ಅವರು 2020 ಅಕ್ಟೋಬರ್ 21ರ ಬುಧವಾರ ಪಕ್ಷವನ್ನು ತೊರೆದಿದ್ದು,  ಅಕ್ಟೋಬರ್ 23ರ ಶುಕ್ರವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿಸೇರಲಿದ್ದಾರೆರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್  ಘೋಷಣೆ ಮಾಡಿದರು. ಬಿಜೆಪಿಯನ್ನು ತೊರೆಯಲು ನಿರ್ಧರಿಸಿರುವುದಾಗಿ ಖಡ್ಸೆ ಅವರು ತಮಗೆ "ಸ್ವಲ್ಪ ಸಮಯದ ಹಿಂದೆತಿಳಿಸಿರುವುದಾಗಿ ಪಾಟೀಲ್ ಪ್ರಕಟಿಸಿದರು.  ಮಹಾರಾಷ್ಟ್ರದಲ್ಲಿ ಬಿಜೆಪಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಹಿರಿಯ ಬಿಜೆಪಿ ನಾಯಕ ಏಕನಾಥ್ ಖಡ್ಸೆ ತಮ್ಮ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆಸ್ವಲ್ಪ ಸಮಯದ ಹಿಂದೆ ಅವರು ತಮ್ಮ ನಿರ್ಧಾರದ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆಇದು ಎನ್‌ಸಿಪಿಗೆ ಅವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆಶುಕ್ರವಾರ ಮಧ್ಯಾಹ್ನ ಖಡ್ಸೆ ಔಪಚಾರಿಕವಾಗಿ ಪಕ್ಷವನ್ನು ಸೇರುತ್ತಾರೆ ಎಂದು ಪಾಟೀಲ್ ಹೇಳಿದರುಖಡ್ಸೆ ಅವರು ಬುಧವಾರ ರಾಜೀನಾಮೆ ನೀಡಿದ ನಂತರತಮ್ಮ ಪಕ್ಷ ತೊರೆಯುವ ನಿರ್ಧಾರಕ್ಕೆ  ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಹೊಣೆಗಾರರನ್ನಾಗಿ ಮಾಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿಪೂರ್ವ ಲಡಾಖ್‌ನಲ್ಲಿ ಭಾರತದೊಂದಿಗೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ಮಧ್ಯೆ ಚೀನಾ ಕಾಲಾಳುಪಡೆಯು ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿಉದ್ದಕ್ಕೂ ಬೀಡುಬಿಟ್ಟಿರುವ ತನ್ನ ಗಡಿ ಪಡೆಗಳಿಗೆ ಶಸ್ತ್ರಾಸ್ತ್ರ ಮತ್ತು ವ್ಯವಸ್ಥಾಪಕ ಬೆಂಬಲವನ್ನು ವೇಗವಾಗಿ ನವೀಕರಿಸುತ್ತಿದೆ ಎಂದು ರಾಜ್ಯ ಮಾಧ್ಯಮಗಳು 2020 ಅಕ್ಟೋಬರ್ 21ರ ಬುಧವಾರ ವರದಿ ಮಾಡಿವೆಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎವೆಸ್ಟರ್ನ್ ಥಿಯೇಟರ್ ಕಮಾಂಡ್ (ಡಬ್ಲ್ಯುಎಸಿಹೊಸ ಮತ್ತು ನಿಖರ ಗುರಿಯ ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದರ ಜೊತೆಗೆ ತನ್ನ ಸೈನಿಕರಿಗೆ ಚಳಿಗಾಲದ ಬಟ್ಟೆಗಳನ್ನು ಮತ್ತು ಶಾಶ್ವತ ಬ್ಯಾರಕ್‌ಗಳನ್ನು ಒದಗಿಸುತ್ತಿದೆ ಎಂದು ವರದಿಗಳು ಹೇಳಿವೆಲಡಾಖ್ ವಲಯದ ಸುದೀರ್ಘ ವಿವಾದಿತ ಭಾರತ-ಚೀನಾ ಗಡಿಯು ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ಅಡಿಯಲ್ಲಿ ಬರುತ್ತದೆಪೂರ್ವ ಲಡಾಖ್‌ನಲ್ಲಿ ತಿಂಗಳುಗಳಿಂದ ಬಿಕ್ಕಟ್ಟು ಮುಂದುವರೆದಿರುವ ಹಿನ್ನೆಲೆಯಲ್ಲಿ ನವೀಕರಣಗಳು ನಡೆಯುತ್ತಿವೆಎಲ್‌ಎಸಿಯ ಉದ್ದಕ್ಕೂ ಉಭಯ ಕಡೆಯವರು ಸೇನೆ ಮತ್ತು ಸಾಧನಗಳನ್ನು ಸಂಗ್ರಹವನ್ನು ಮುಂದುವರೆಸಿವೆಎಲ್‌ಎಸಿಯಾದ್ಯಂತ ಪಿಎಲ್‌ಎ ಪಡೆಗಳ ಉಪಸ್ಥಿತಿಯನ್ನು ಭಾರತ ಸತತವಾಗಿ ವಿರೋಧಿಸಿದೆಭಾರತಕ್ಕೆ ನಿರ್ಣಾಯಕ ಭದ್ರತಾ ಸವಾಲನ್ನು ಇದು ಉಂಟು ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕಳೆದ ವಾರ ಹೇಳಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿಭಾರತೀಯ ಜನತಾ ಪಕ್ಷದ (ಬಿಜೆಪಿನಾಯಕಿಸಚಿವೆ ಇಮಾರ್ತಿ ದೇವಿ ವಿರುದ್ಧದ ‘ಐಟಂ ಟೀಕೆಗಾಗಿ ಚುನಾವಣಾ ಆಯೋಗವು 2020 ಅಕ್ಟೋಬರ್ 21ರ ಬುಧವಾರ ಕಾಂಗ್ರೆಸ್ ಮುಖಂಡ ಕಮಲನಾಥ್ ಅವರಿಗೆ ನೋಟಿಸ್ ಜಾರಿ ಮಾಡಿತು. ಮುಂದಿನ ೪೮ ಗಂಟೆಗಳಲ್ಲಿ ತಮ್ಮ ಉತ್ತರ ನೀಡುವಂತೆ ಆಯೋಗವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗೆ ಸೂಚಿಸಿತು. ಮಧ್ಯಪ್ರದೇಶದ ಉಪಚುನಾವಣೆಗಳಿಂದಾಗಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯಾವುದೇ ಪಕ್ಷವು ಅಸ್ತಿತ್ವದಲ್ಲಿರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವಪರಸ್ಪರ ದ್ವೇಷ ಮೂಡಿಸುವ ಅಥವಾ ವಿವಿಧ ಜಾತಿಗಳು ಹಾಗೂ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟು ಮಾಡುವ ಯಾವುದೇ ಹೇಳಿಕೆ ನೀಡಬಾರದು ಎಂದು ಹೇಳುತ್ತದೆ ಎಂದು ಕಮಲನಾಥ್ ಅವರಿಗೆ ಕಳುಹಿಸಿದ ನೋಟಿಸಿನಲ್ಲಿ ಅವರ ಟೀಕೆಗೆ ಆಕ್ಷೇಪ ಸೂಚಿಸಿದ ಚುನಾವಣಾ ಆಯೋಗ ತಿಳಿಸಿದೆಬಿಜೆಪಿಯ ಇಮಾರ್ತಿ ದೇವಿ ಅವರನ್ನು ಕಣಕ್ಕಿಳಿಸಿರುವ ಗ್ವಾಲಿಯರ್‌ನ ದಬ್ರಾ ಪಟ್ಟಣದಲ್ಲಿ ನವೆಂಬರ್   ಉಪಚುನಾವಣೆಗೆ ಭಾನುವಾರ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲನಾಥ್ಕಾಂಗ್ರೆಸ್ ಅಭ್ಯರ್ಥಿ ’ಸರಳ ವ್ಯಕ್ತಿ ಎದುರಾಳಿ ’ಐಟಂನಂತೆ ಅಲ್ಲ ಎಂದು ಹೇಳಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ History Today ಅಕ್ಟೋಬರ್ 21 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment