ನಾನು ಮೆಚ್ಚಿದ ವಾಟ್ಸಪ್

Friday, October 9, 2020

ಇಂದಿನ ಇತಿಹಾಸ History Today ಅಕ್ಟೋಬರ್ 09

 ಇಂದಿನ ಇತಿಹಾಸ  History Today ಅಕ್ಟೋಬರ್ 09

2020: ನವದೆಹಲಿ: ಶತ್ರು ರಾಡಾರ್ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಛಿದ್ರಗೊಳಿಸಲು ಭಾರತೀಯ ವಾಯುಪಡೆಯು ತನ್ನ ಸುಖೋಯ್ -೩೦ ಎಂಕೆಐ ಫೈಟರ್ ಜೆಟ್ಗಳಿಂದ ಉಡಾಯಿಸಬಹುದಾದ ಯುದ್ಧತಂತ್ರದ ತನ್ನ ಚೊಚ್ಚಲ ವಿಕಿರಣ ನಿರೋಧಿ ಕ್ಷಿಪಣಿ ರುದ್ರಮ್- ನ್ನು ಭಾರತ 2020 ಅಕ್ಟೋಬರ್ 09ರ ಶುಕ್ರವಾರ ಯಶಸ್ವಿಯಾಗಿ ಪರೀಕ್ಷಿಸಿತು. ರುದ್ರಮ್- ಕ್ಷಿಪಣಿಯು ಮ್ಯಾಕ್ ವರೆಗೆ ಅಂದರೆ ಶಬ್ಧದ ವೇಗದ ಎರಡು ಪಟ್ಟಿನಷ್ಟು ಉಡಾವಣಾ ವೇಗವನ್ನು ಹೊಂದಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಹೊಸ ಪೀಳಿಗೆಯ ಶಸ್ತ್ರವನ್ನು ಅಭಿವೃದ್ಧಿ ಪಡಿಸಿದೆ. ಬೆಳಿಗ್ಗೆ ೧೦.೩೦ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿನ ಒಡಿಶಾ ತೀರದಲ್ಲಿರುವ ಬಾಲಸೋರ್ ಮಧ್ಯಂತರ ಪರೀಕ್ಷಾ ವಲಯದಲ್ಲಿ ಇದನ್ನು ಪರೀಕ್ಷಿಸಲಾಯಿತು. "ಇದು ಒಂದು ಬೃಹತ್ ಹೆಜ್ಜೆಯಾಗಿದೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಡಿಆರ್ಡಿಒದ ಯಸ್ವೀ  ಪರೀಕ್ಷೆ ಬಗ್ಗೆ ಹೇಳಿದರು. "ಭಾರತೀಯ ವಾಯುಪಡೆಯು (ಐಎಎಫ್) ಈಗ ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಮಾಡಲು ಶತ್ರು ಪ್ರದೇಶಕ್ಕೆ ನುಗ್ಗಿ ಸೀಡ್ (ಸಪ್ರೆಷ್ಷನ್ ಆಫ್ ಎನಿಮಿ ಏರ್ ಡಿಫೆನ್ಸ್) ಕಾರ್ಯಾಚರಣೆಯನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿ ಹೇಳಿದರು. ಇದು ಭಾರತೀಯ ವಾಯುಪಡೆಯ ದಾಳಿ ವಿಮಾನಗಳು ತಮ್ಮ ಕಾರ್ಯಾಚರಣೆಯನ್ನು ಯಾವುದೇ ಅಡೆತಡೆಯಿಲ್ಲದೆ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. "ವಿಕಿರಣ-ನಿರೋಧಿ ಕ್ಷಿಪಣಿಯ ಪರೀಕ್ಷೆಯು ಭಾರತದ ಸಾಮರ್ಥ್ಯವನ್ನು ವರ್ಧಿಸಿದೆ ಎಂದು ಇನ್ನೊಬ್ಬ ಅಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತವು 2020 ಅಕ್ಟೋಬರ್ 09ರ ಶುಕ್ರವಾರ ಯಶಸ್ವಿಯಾಗಿ ಪರೀಕ್ಷಿಸಿರುವ ರುದ್ರಮ್- ವಿಕಿರಣ ನಿರೋಧಿ ಕ್ಷಿಪಣಿಯು (ಎನ್ಜಿಎಆರ್ಎಂ) ಹಲವಾರು ವಿಶಿಷ್ಠತೆಗಳನ್ನು ಹೊಂದಿದೆ. ಭಾರತೀಯ ವಾಯುಪಡೆಗಾಗಿ (ಐಎಎಫ್) ರಕ್ಷಣೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಇದನ್ನು ಅಭಿವೃದ್ಧಿ ಪಡಿಸಿದೆ. ಪೂರ್ವ ಕರಾವಳಿಯಲ್ಲಿ ಹೊಸ ತಲೆಮಾರಿನ ಕ್ಷಿಪಣಿಯ ಪರೀಕ್ಷೆಗಾಗಿ  ಸುಖೋಯ್ -೩೦ ಯುದ್ಧ ವಿಮಾನವನ್ನು ಬಳಸಲಾಯಿತು. ರುದ್ರಮ್ ಕ್ಷಿಪಣಿಯನ್ನು  ಐಎಎಫ್ ಸುಖೋಯ್ -೩೦ ಜೆಟ್ಗಳೊಂದಿಗೆ ಸಂಯೋಜಿಸಬಹುದು ಮತ್ತು ಯುದ್ಧ ವಿಮಾನಗಳನ್ನೇ ಅದರ ಉಡಾವಣಾ ವೇದಿಕೆಯಾಗಿ ಬಳಸಬಹುದು. ರಕ್ಷಣಾ ವೆಬ್ಸೈಟ್ ಡಿಫೆನ್ಸ್ ಅಪ್ಡೇಟ್.ಇನ್ ಪ್ರಕಾರ, ರುದ್ರಮ್ ಕ್ಷಿಪಣಿಯನ್ನು ರೇಡಿಯೋ ಕಣಗಳ ಮೂಲವನ್ನು ಪತ್ತೆಹಚ್ಚಲು ಮತ್ತು ಅಭಿವೃದ್ಧಿಗೊಳಿಸಲು ಬಳಸಬಹುದು. ಇದು ರುದ್ರಮ್ ಕ್ಷಿಪಣಿಗೆ  ನೆಲದ ಮೇಲೆ ಶತ್ರು ರಾಡಾರ್ಗಳನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ನೀಡುತ್ತದೆ. ಕ್ಷಿಪಣಿಗಳು ನೆಲದ ಮೇಲೆ ಶತ್ರು ರಾಡಾರ್ಗಳನ್ನು ನಿಶ್ಯಸ್ತ್ರಗೊಳಿಸಿದ ನಂತರ, ಮೊದಲ ತರಂಗವನ್ನು ಅನುಸರಿಸುವ ದಾಳಿಯಲ್ಲಿ ಹೆಚ್ಚಿನ ಹಾನಿ ಉಂಟುಮಾಡಲು ಇದು ಸಹಾಯ ಮಾಡುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ೯೫೦ ಕೋಟಿ ರೂಪಾಯಿಗಳ ಮೇವು ಹಗರಣಕ್ಕೆ ಸಂಬಂಧಿಸಿದ ಚೈಬಾಸ ಖಜಾನೆ ಪ್ರಕರಣದಲ್ಲಿ  ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ 2020 ಅಕ್ಟೋಬರ್ 09ರ ಶುಕ್ರವಾರ ಜಾಮೀನು ನೀಡಿತು. ೧೯೯೨-೯೩ರ ಅವಧಿಯಲ್ಲಿ ಆರ್ಜೆಡಿ ನಾಯಕ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಚೈಬಾಸ ಖಜಾನೆಯಿಂದ ೩೩.೬೭ ಕೋಟಿ ರೂ.ಹಣ ಹಿಂಪಡೆದ ಪ್ರಕರಣ ಇದಾಗಿದೆ. ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಿದ್ದರೂ ದುಮ್ಕಾ ಖಜಾನೆ ಹಣ ನುಂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೪ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿರುವುದರಿಂದ ಅವರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. ೧೯೯೧ ಮತ್ತು ೧೯೯೬ ನಡುವಣ ಅವಧಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಅವಿಭಜಿತ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಧುಮ್ಕಾ ಖಜಾನೆಯಿಂದ . ಕೋಟಿ ರೂಪಾಯಿಗಳನ್ನು ಮೇವು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಹಿಂಪಡೆದಿದ್ದರು. ಪ್ರಕರಣದಲ್ಲಿ ಲಾಲೂ ಪ್ರಸಾದ್ ಅವರ ಮೇಲಿನ ಆರೋಪ ಸಾಬೀತಾಗಿ ಅವರಿಗೆ ೧೪  ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ಚೀನಾದ ವಿಡಿಯೋ ಹಂಚಿಕೆ ಅಪ್ಲಿಕೇಶನ್ ಟಿಕ್-ಟಾಕ್ನ್ನು 2020 ಅಕ್ಟೋಬರ್ 09ರ ಶುಕ್ರವಾರ ನಿರ್ಬಂಧಿಸಿತು. ಆದರೆ ಭಾರತ, ಅಮೆರಿಕ ದೇಶಗಳಂತೆ ಭದ್ರತೆಯ ಕಾರಣಕ್ಕಾಗಿ ಅಲ್ಲ, ಬದಲಿಗೆ ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಕಾರಣಕ್ಕಾಗಿ..! ಪಾಕಿಸ್ತಾನದ ಸುದ್ದಿ ಚಾನೆಲ್ ಜಿಯೋ ನ್ಯೂಸ್ ವರದಿಯ ಪ್ರಕಾರ, ಕಾನೂನುಬಾಹಿರ ಆನ್ಲೈನ್ ವಿಷಯವನ್ನು ಪೂರ್ವಭಾವಿಯಾಗಿ ನಿಯಂತ್ರಿಸಲು ಪರಿಣಾಮಕಾರಿ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವಂತೆ ಸರ್ಕಾರ ನೀಡಿದ ಸೂಚನೆಗಳನ್ನು ಅನುಸರಿಸಲು ಚೀನಾದ ಅಪ್ಲಿಕೇಶನ್ ವಿಫಲವಾಗಿದೆ ಎನ್ನಲಾಯಿತು. ಅಮೆರಿಕ, ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ವರ್ಷ ಸಮಸ್ಯೆಗಳನ್ನು ಎದುರಿಸುತ್ತಿರುವ ಟಿಕ್-ಟಾಕ್ ಆಪ್ಗೆ  ತನ್ನ ವೇದಿಕೆಯಲ್ಲಿ ಹಂಚಿಕೊಳ್ಳುವ ವಿಷಯಗಳನ್ನು ಅತಿರೇಕಗೊಳಿಸದಂತೆ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ಜುಲೈ ತಿಂಗಳಲ್ಲಿ ಅಂತಿಮ ಎಚ್ಚರಿಕೆ ನೀಡಿತ್ತು. "ವೀಡಿಯೊ-ಹಂಚಿಕೆ ಅಪ್ಲಿಕೇಶನ್ನಲ್ಲಿ ಅನೈತಿಕ ಮತ್ತು ಅಸಭ್ಯ ವಿಷಯ ಬಗ್ಗೆ ಸಮಾಜದ ಹಲವಾರು ವರ್ಗದ ಜನರು ತಮ್ಮ ದೂರುಗಳನ್ನು ನೀಡಿರುವುದರಿಂದ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ. ಜುಲೈ ತಿಂಗಳಲ್ಲಿ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಟಿಕ್-ಟಾಕ್, ೨೦೧೯ ಉತ್ತರಾರ್ಧದಲ್ಲಿ ಪಾಕಿಸ್ತಾನದ . ಮಿಲಿಯನ್ (೩೭ ಲಕ್ಷ) ವಿಡಿಯೋಗಳನ್ನು ನಿಯಮಾವಳಿ ಉಲ್ಲಂಘನೆಗಾಗಿ ಕಿತ್ತು ಹಾಕಲಾಗಿದೆ ಎಂದು ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಜೈಪುರ: ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ದೇವಾಲಯದ ಭೂಮಿಯನ್ನು ಅತಿಕ್ರಮಣದಿಂದ ತಡೆಯಲು ಯತ್ನಿಸಿದ ೫೦ರ ಹರೆಯದ ಅರ್ಚಕರಿಗೆ ಬೆಂಕಿ ಹಚ್ಚಿದ ಘಟನೆ ಘಟಿಸಿದ್ದು, ತೀವ್ರ ಸುಟ್ಟ ಗಾಯಗಳಿಂದ ಅರ್ಚಕ 2020 ಅಕ್ಟೋಬರ್ 08ರ ಗುರುವಾರ ಸಂಜೆ ಜೈಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತತ್ ಕ್ಷಣ ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹಿಸಿ ಅರ್ಚಕರ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು. ಜೈಪುರದ ಎಸ್ಎಂಎಸ್ ಆಸ್ಪತ್ರೆಯಲ್ಲಿ ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಅರ್ಚಕ ಬಾಬುಲಾಲ್ ವೈಷ್ಣವ್ ನಿಧನರಾದರು. ನಾವು ಹಳ್ಳಿಯ ಐದು ಜನರ ವಿರುದ್ಧ ಕೊಲೆ ಯತ್ನಕ್ಕಾಗಿ ಪ್ರಕರಣ ದಾಖಲಿಸಿದ್ದೇವೆ, ಈಗ ಆರೋಪವನ್ನು ಕೊಲೆ ಆರೋಪಕ್ಕೆ ಪರಿವರ್ತಿಸಲಾಗುತ್ತದೆ ಎಂದು ಕರೌಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಮೃದೂಲ್ ಕಚವಾ ಹೇಳಿದ್ದಾರೆ. ಅರ್ಚಕರು ಸಾವಿಗೆ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದರು. ಆರೋಪಿ ಕೈಲಾಶ್ ಮೀನಾ ಮತ್ತು ಅವರ ಕುಟುಂಬದ ಇತರರು ಸಪೋತ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬುಕ್ನಾ ಗ್ರಾಮದಲ್ಲಿ ಅರ್ಚಕರ ಗುಡಿಸಲಿಗೆ ಬುಧವಾರ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಅರ್ಚಕರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ವೈದ್ಯರು ಜೈಪುರಕ್ಕೆ ಕಳುಹಿಸಿದರು.  ಗಂಭೀರ ಸ್ಥಿತಿಯಲ್ಲಿ ವೈಷ್ಣವ್ ಅವರನ್ನು ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ಸಂಜೆ ತಡವಾಗಿ ಅವರು ಸಾವನ್ನಪ್ಪಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಲಕ್ನೋ:  ಹತ್ತೊಂಬತ್ತು ವರ್ಷದ ದಲಿತ ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ಇತರ ಗ್ರಾಮಸ್ಥರು ನೀಡುತ್ತಿರುವ ಹೇಳಿಕೆಗಳ ನಡುವೆ "ಕಾಣೆಯಾದ ಕೊಂಡಿಗಳನ್ನು ಪತ್ತೆ ಹಚ್ಚಲು ಉತ್ತರ ಪ್ರದೇಶ ಪೊಲೀಸರು ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಗಳು 2020 ಅಕ್ಟೋಬರ್ 09ರ ಶುಕ್ರವಾರ ತಿಳಿಸಿದರು. ಸೆಪ್ಟೆಂಬರ್ ೧೪ ರಂದು ಮೇಲ್ಜಾತಿಯ ಯುವಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಳೆನ್ನಲಾಗಿರುವ ದಲಿತ ಸಂತ್ರಸ್ತೆ ತೀವ್ರವಾಗಿ ಗಾಯಗೊಂಡಿದ್ದಳು. ಬಳಿಕ ಸೆಪ್ಟೆಂಬರ್ ೨೯ ರಂದು ದೆಹಲಿ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದಳು. ಅಪರಾಧಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಕುಟುಂಬ ಮತ್ತು ಇತರ ಸಾಕ್ಷಿಗಳ ಹೇಳಿಕೆಗಳು ಸಾಕಷ್ಟು ಭಿನ್ನವಾಗಿರುವುದರಿಂದ ತನಿಖಾಧಿಕಾರಿಗಳು ಅಪರಾಧದ ದೃಶ್ಯವನ್ನು ವಿಭಿನ್ನ ರೀತಿಯಲ್ಲಿ ಮರುಸೃಷ್ಟಿಸಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ತನಿಖಾಧಿಕಾರಿಗಳು ಅಪರಾಧದ ಸ್ಥಳzಲ್ಲಿ ಸಂತ್ರಸ್ತೆಯ ಮನೆಗೆ ಸಮೀಪದ ಬಜ್ರಾ ಮೈದಾನದಲ್ಲಿ ನಾಲ್ಕು ಕುಡುಗೋಲುಗಳು ಮತ್ತು ಚಪ್ಪಲಿಯನ್ನು ಪತ್ತೆ ಮಾಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಇನ್ನೊಬ್ಬ ಅಧಿಕಾರಿ ಹೇಳಿದರು. ಘಟನಾ ಸ್ಥಳದ ಸಮೀಪ ಬೆಳೆ ಕಟಾವು ಮಾಡುತ್ತಿದ್ದ ಕನಿಷ್ಠ ನಾಲ್ಕು ಜನರಿದ್ದರು ಮತ್ತು ಇಡೀ ಪ್ರಸಂಗಕ್ಕೆ ಅವರು ಪ್ರತ್ಯಕ್ಷದರ್ಶಿಯಾಗಿರಬಹುದು ಎಂಬುದನ್ನು ಇದು  ಸೂಚಿಸುತ್ತದೆ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ಸಮಗ್ರ ಆಂತರಿಕ ಉತ್ಪನ್ನ ದರವು (ಜಿಡಿಪಿ) ಶೇಕಡ .೫ರಷ್ಟು ಕುಸಿತಗೊಳ್ಳಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜು ಮಾಡಿದೆ. ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ (ಏಪ್ರಿಲ್,ಮೇ, ಜೂನ್) ಆರ್ಥಿಕ ವೃದ್ಧಿ ದರ ಋಣಾತ್ಮಕವಾಗಿ ಶೇಕಡ ೨೩.೯ರಷ್ಟು ಕುಸಿದಿತ್ತು. 2020 ಅಕ್ಟೋಬರ್ 09ರ ಶುಕ್ರವಾರ ನಡೆದ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ವಿವರ ನೀಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಕೊರೊನಾ ವೈರಸ್ ವಿರೋಧಿ ಹೋರಾಟದಲ್ಲಿ ಭಾರತದ ಆರ್ಥಿಕತೆ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ ಎಂದು ಹೇಳಿದರು. ಹಣದುಬ್ಬರ ದರವು ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಡಿಮೆಯಾಗಬಹುದು ಎಂದು ಅವರು ಅಂದಾಜಿಸಿದರು. ಹಣದುಬ್ಬರ ದರವನ್ನು ಶೇಕಡ ೪ರಷ್ಟು ಇರುವಂತೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆರ್ಬಿಐಗೆ ಸೂಚಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಸ್ಟಾಕ್ ಹೋಮ್: ೨೦೨೦ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ವಿಶ್ವ ಸಂಸ್ಥೆಯ ಭಾಗವಾಗಿರುವ ವಿಶ್ವ ಆಹಾರ ಯೋಜನೆಯನ್ನು (ಡಬ್ಲ್ಯುಎಫ್ಪಿ) 2020 ಅಕ್ಟೋಬರ್ 09ರ ಶುಕ್ರವಾರ ಆಯ್ಕೆ ಮಾಡಲಾಯಿತು. ಹಸಿವು ನೀಗಿಸುವ ನಿಟ್ಟಿನಲ್ಲಿ ಡಬ್ಲ್ಯುಎಫ್ಪಿ ನಡೆಸಿರುವ ಕಾರ್ಯಕ್ರಮಗಳು, ಪ್ರಯತ್ನಗಳನ್ನು ಪರಿಗಣಿಸಿ ನೊಬೆಲ್ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಘರ್ಷಣೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಸಂಸ್ಥೆ ಶ್ರಮಿಸಿದೆ ಹಾಗೂ ಹಸಿವನ್ನು ಯುದ್ಧಕ್ಕೆ ಅಸ್ತ್ರವಾಗಿ ಬಳಸುವುದನ್ನು ತಪ್ಪಿಸುವ ಪ್ರಯತ್ನಗಳನ್ನು ಮಾಡಿದೆ. ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ೨೧೧ ವ್ಯಕ್ತಿಗಳು ಹಾಗೂ ೧೦೭ ಸಂಸ್ಥೆಗಳು ನಾಮನಿರ್ದೇಶನವಾಗಿದ್ದವು. ಪ್ರಶಸ್ತಿಯು ೧೦ ಮಿಲಿಯನ್ ಕ್ರೋನಾ (ಅಂದಾಜು ಕೋಟಿ ರೂಪಾಯಿ) ನಗದು ಬಹುಮಾನ ಮತ್ತು ಚಿನ್ನದ ಪದವನ್ನು ಒಳಗೊಂಡಿರಲಿದೆ. ಡಿಸೆಂಬರ್ ೧೦ರಂದು ನಾರ್ವೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 09 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment