ನಾನು ಮೆಚ್ಚಿದ ವಾಟ್ಸಪ್

Saturday, October 10, 2020

ಇಂದಿನ ಇತಿಹಾಸ History Today ಅಕ್ಟೋಬರ್ 10

 ಇಂದಿನ ಇತಿಹಾಸ  History Today ಅಕ್ಟೋಬರ್ 10

2020: ನವದೆಹಲಿ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಮುಂದಿನ ವಾರ ೮೦೦ ಕಿ.ಮೀ ವ್ಯಾಪ್ತಿಯ ನಿರ್ಭಯ ಸಬ್-ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಹಾರಿಸಲಿದೆ. ಇದು ಸೇನೆ ಮತ್ತು ನೌಕಾಪಡೆಗೆ ಔಪಚಾರಿಕವಾಗಿ ಸೇರ್ಪಡೆಯಾಗುವುದಕ್ಕೆ ಮುನ್ನ ಘನ ರಾಕೆಟ್ ಬೂಸ್ಟರ್ ಕ್ಷಿಪಣಿಯ ಪರೀಕ್ಷೆಗಳಲ್ಲಿ  ಕೊನೆಯದು ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 10 ಶನಿವಾರ ತಿಳಿಸಿವೆ. ಕಳೆದ ೩೫ ದಿನಗಳಲ್ಲಿ ಭಾರತದ ಪ್ರಮುಖ ರಕ್ಷಣಾ ಸಂಶೋಧನಾ ಸಂಸ್ಥೆ ನಡೆಸಿದ ಹತ್ತನೇ ಕ್ಷಿಪಣಿ ಪರೀಕ್ಷೆ ಇದಾಗಲಿದೆ. ಚೀನಾವು ವಾಸ್ತವ ನಿಯಂತ್ರಣ ರೇಖೆಯಿಂದ ಹಿಂದೆ ಸರಿಯಲು ನಿರಾಕರಿಸಿದ ಹಿನ್ನೆಲೆಯಲ್ಲಿಮೇಡ್ ಇನ್ ಇಂಡಿಯಾ ಕಾರ್ಯತಂತ್ರದ ಅಡಿಯಲ್ಲಿ ಪರಮಾಣು ಮತ್ತು ಸಾಂಪ್ರದಾಯಿಕ ಕ್ಷಿಪಣಿಗಳ ಅಭಿವೃದ್ಧಿಗೆ ಡಿಆರ್‌ಡಿಒ ಮಾಡಿದ ಪ್ರಯತ್ನದ ಫಲವಾಗಿ ಸುಮಾರು ಒಂದು ತಿಂಗಳಲ್ಲಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ಭಾರತವು ಪರೀಕ್ಷಾ ಕ್ಷಿಪಣಿಯನ್ನು ಹಾರಿಸಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ವರ್ಷದ ಮೇ ರಂದು ಲಡಾಖ್‌ನ ಪ್ಯಾಂಗೊಂಗ್ ತ್ಸೋ ಸರೋವರದ ಉತ್ತರದ ದಂಡೆಯಲ್ಲಿ ಭಾರತೀಯ ಸೈನಿಕರೊಂದಿಗೆ ಘರ್ಷಣೆ ನಡೆಸಿ, ಪೂರ್ವ ಲಡಾಖ್‌ನ ನಾಲ್ಕು ಸ್ಥಳಗಳಿಗೆ ಕ್ಷಿಪ್ರವಾಗಿ  ಸೇನೆಯನ್ನು ವಿಸ್ತರಿಸಿತ್ತು. ಜೂನ್ ತಿಂಗಳಿನಲಿ ರಕ್ತಸಿಕ್ತ ಘರ್ಷಣೆಗೆ ನಿಂತು ಎರಡೂ ಕಡೆಗಳಲ್ಲೂ ಸೈನಿಕರ ಬಲಿದಾನವಾಗುವಂತೆ ಮಾಡಿತು. ನಾಲ್ಕು ದಶಕಗಳಲ್ಲಿ ಉಭಯ ದೇಶಗಳು ಗಡಿಯಲ್ಲಿ ಸೈನಿಕರನ್ನು ಕಳೆದುಕೊಂಡಿರುವುದು ಇದೇ ಮೊದಲು. ಎರಡು ತಿಂಗಳ ನಂತರ, ೭೦೦ ಚದರ ಕಿ.ಮೀ ಉದ್ದಕ್ಕೆ ಹರಡಿರುವ ಸುಂದರವಾದ ಉಪ್ಪುನೀರಿನ ಸರೋವರದ ಉತ್ತರ ದಂಡೆಯಲ್ಲಿ ಭಾರತೀಯ ಸೈನಿಕರು ಎತ್ತರವನ್ನು ಆಕ್ರಮಿಸಿದಾಗಲೂ ಪೀಪಲ್ಸ್ ಲಿಬರೇಶನ್ ಆರ್ಮಿ ಗುಂಡುಗಳನ್ನು ಹಾರಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ವಾಷಿಂಗ್ಟನ್: ಕೆಟ್ಟ ವರ್ತನೆ ಮತ್ತು ಕ್ವಾಡ್ ದೇಶಗಳಿಗೆ ಅದು ಒಡ್ಡುತ್ತಿರುವ ಬೆದರಿಕೆಗಾಗಿ ಚೀನಾವನ್ನು 2020 ಅಕ್ಟೋಬರ್ 10ರ ಶನಿವಾರ ತರಾಟೆಗೆ ತೆಗೆದುಕೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರುಭಾರತದ ಉತ್ತರ ಗಡಿಯಲ್ಲಿ ಚೀನಾ ೬೦,೦೦೦ ಸೈನಿಕರನ್ನು ಜಮಾಯಿಸಿದೆ ಎಂದು ಆಪಾದಿಸಿದರು. ಟೋಕಿಯೋದಲ್ಲಿ ನಡೆದ ಕ್ವಾಡ್ ಗುಂಪು ಎಂಬುದಾಗಿ ಕರೆಯಲ್ಪಡುವ ಇಂಡೋ- ಪೆಸಿಫಿಕ್ ರಾಷ್ಟ್ರಗಳಾದ ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಪಾಲ್ಗೊಂಡು ವಾಪಸಾದ ಬಳಿಕ ಪೊಂಪಿಯೋ ಸಂದರ್ಶನ ಒಂದರಲ್ಲಿ ಮಾತನಾಡಿದರು. ಕೊರೋನವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಕ್ವಾಡ್ ರಾಷ್ಟ್ರಗಳ ಮೊದಲ ವೈಯಕ್ತಿಕ ಮಾತುಕತೆ ಇದಾಗಿದ್ದು, ಇಂಡೋ-ಪೆಸಿಫಿಕ್, ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾದ ಆಕ್ರಮಣಕಾರಿ ಮಿಲಿಟರಿ ನಡವಳಿಕೆಯ ಹಿನ್ನೆಲೆಯಲ್ಲಿ ಸಮಾವೇಶ ನಡೆಯಿತು. ಟೋಕಿಯೊದಿಂದ ಹಿಂದಿರುಗಿದ ನಂತರ  ದಿ ಗೈ ಬೆನ್ಸನ್ ಶೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೊಂಪಿಯೋಭಾರತದ ಉತ್ತರ ಗಡಿಯಲ್ಲಿ ಚೀನಾ ೬೦,೦೦೦ ಸೈನಿಕರನ್ನು ಜಮಾಯಿಸಿದೆ ಎಂದು ಹೇಳಿದರು. "ನಾನು ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ವಿದೇಶಾಂಗ ಸಚಿವರು ಸಭೆಯಲ್ಲಿ ಇದ್ದೆವು. ಕ್ವಾಡ್ ಸಮೂಹವು  ನಾಲ್ಕು ದೊಡ್ಡ ಪ್ರಜಾಪ್ರಭುತ್ವಗಳು, ನಾಲ್ಕು ಪ್ರಬಲ ಆರ್ಥಿಕತೆಗಳು, ನಾಲ್ಕು ರಾಷ್ಟ್ರಗಳು ಎಂದು ಕರೆಯುವ ಒಂದು ಸಮೂಹವಾಗಿದ್ದು, ಇದರ ಪ್ರತಿಯೊಬ್ಬ ಸದಸ್ಯರೂ ಚೀನೀ ಕಮ್ಯೂನಿಸ್ಟ್ ಪಕ್ಷವು ಹೇರಿರುವ ಬೆದರಿಕೆಗಳಿಗೆ ಒಳಗಾಗಿದೆ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಚೀನಾವು ತನ್ನ ಪ್ರಾದೇಶಿಕ ಆಕ್ರಮಣದ ಭಾಗವಾಗಿ ಭಾರತ ಜೊತೆಗಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ನಿಯಂತ್ರಣವನ್ನು "ವಶಪಡಿಸಿಕೊಳ್ಳಲು" ಪ್ರಯತ್ನಿಸಿದೆ. ಸಂವಾದ ಮತ್ತು ಒಪ್ಪಂದಗಳ ಮೂಲಕ ಚೀನಾದ ಮನವೊಲಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಅಮೆರಿಕ 2020 ಅಕ್ಟೋಬರ್ 10 ಶನಿವಾರ ಹೇಳಿತು. ಉತಾಹ್‌ನಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಬ್ರಿಯೆನ್ ಅವರು ಮಾತನ್ನು ಹೇಳಿದ್ದಾರೆ. ಭಾರತ ಮತ್ತು ಚೀನಾ ಪೂರ್ವ ಲಡಾಖ್‌ನಲ್ಲಿ ಐದು ತಿಂಗಳುಗಳಿಂದ ಗಡಿ ಬಿಕ್ಕಟ್ಟಿನ ಪರಿಣಾಮವಾಗಿ ಉದ್ವಿಗ್ನತೆ ಎದುರಿಸುತ್ತಿವೆ. ಇದು s ರಾಷ್ಟ್ರಗಳ ಬಾಂಧವ್ಯಗಳನ್ನು ಗಮನಾರ್ಹವಾಗಿ ಕುಂಠಿತಗೊಳಿಸಿದೆ. ಗಡಿ ಬಿಕ್ಕಟ್ಟನ್ನು ಇತ್ಯರ್ಥ ಪಡಿಸಿಕೊಳ್ಳಲು ಉಭಯ ಕಡೆಯವರೂ ಉನ್ನತ ಮಟ್ಟದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ನಡೆಸಿದ್ದಾರೆ. ಆದಾಗ್ಯೂ, ನಿಲುವನ್ನು ಕೊನೆಗೊಳಿಸುವಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲಾಗಿಲ್ಲ. "ಸಿಸಿಪಿಯ (ಚೀನೀ ಕಮ್ಯುನಿಸ್ಟ್ ಪಾರ್ಟಿ) ಪ್ರಾದೇಶಿಕ ಆಕ್ರಮಣವು ಅದರ ಭಾರತೀಯ ಗಡಿಯಲ್ಲಿ ಸ್ಪಷ್ಟವಾಗಿದೆ, ಅಲ್ಲಿ ಚೀನಾ ನೈಜ ನಿಯಂತ್ರಣ ರೇಖೆಯ ನಿಯಂತ್ರಣವನ್ನು ಬಲ ಪ್ರಯೋಗದಿಂದ ವಶಪಡಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಬ್ರಿಯೆನ್ ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕೇರನ್ ವಲಯದ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಹಗ್ಗ ಮತ್ತು ಟ್ಯೂಬ್ ಬಳಸಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡನ್ನು ಭಾರತದ ಒಳಕ್ಕೆ ತಳ್ಳುವ ಪಾಕಿಸ್ತಾನದ ಯತ್ನವನ್ನು ಭಾರತೀಯ ಸೇನೆಯು  2020 ಅಕ್ಟೋಬರ್ 10 ಶನಿವಾರ ವಿಫಲಗೊಳಿಸಿದೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತಳ್ಳುವ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿದ ಸೇನೆಯು ನಾಲ್ಕು ಎಕೆ ೭೪ ರೈಫಲ್‌ಗಳು ಸೇರಿದಂತೆ ಭಾರೀ ಮದ್ದುಗುಂಡು ಸಂಗ್ರಹವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು. ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ವಲಯಲ್ಲಿರುವ ನೈಜ ನಿಯಂತ್ರಣ ರೇಖೆಯಾದ್ಯಂತ ಶಸ್ತ್ರಾಸ್ತ್ರಗಳನ್ನು ತಳ್ಳುವ ಪಾಕಿಸ್ತಾನದ ಪ್ರಯತ್ನವನ್ನು ಭಾರತೀಯ ಸೇನೆಯ ಜಾಗೃತಾ ಪಡೆಗಳು ವಿಫಲಗೊಳಿಸಿದವು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು. ಕಿಶೆನ್‌ಗಂಗಾ ನದಿಗೆ ಅಡ್ಡಲಾಗಿ ಹಗ್ಗಕ್ಕೆ ಕಟ್ಟಿದ ಟ್ಯೂಬ್‌ನಲ್ಲಿ ಇಬ್ಬರು- ಮೂವರು ವ್ಯಕ್ತಿಗಳು ಕೆಲವು ವಸ್ತುಗಳನ್ನು ಸಾಗಿಸುತ್ತಿರುವುದನ್ನು ಸೇನೆ ಗಮನಿಸಿತು. ಪಡೆಗಳು ತತ್ ಕ್ಷಣ ಸ್ಥಳಕ್ಕೆ ಧಾವಿಸಿದವು ಮತ್ತು ಎರಡು ಎಕೆ ೭೪ ರೈಫಲ್, ಎಂಟು ಮ್ಯಾಗಜೀನ್ ಮದ್ದುಗುಂಡು ಮತ್ತು ಎರಡು ಚೀಲಗಳಲ್ಲಿ ಅಡಗಿಸಿಟ್ಟಿದ್ದ ೨೪೦ ಸುತ್ತು ಮದ್ದುಗುಂಡನ್ನು ವಶಪಡಿಸಿಕೊಂಡವು. ಪ್ರದೇಶವನ್ನು ಸುತ್ತುರೆಯಲಾಗಿದ್ದು, ಶೋಧ ಪ್ರಗತಿಯಲ್ಲಿದೆ ಎಂದು ಅಧಿಕಾರಿ ತಿಳಿಸಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರು ಯುದ್ಧ ಮಳಿಗೆಗಳನ್ನು ಕಳ್ಳಸಾಗಣೆ ಮಾಡುವ ಮತ್ತೊಂದು ಪ್ರಯತ್ನ ಇದಾಗಿತ್ತು. ಆದರೆ ಜಾಗೃತಾ ಪಡೆಗಳ ತ್ವರಿತ ಕ್ರಮದಿಂದ ಇದನ್ನು ಯಶಸ್ವಿಯಾಗಿ ವಿಫಲಗೊಳಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಸಾಲ ಶಿಸ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಾಲ ಸ್ಥಗಿತದ ಅವಧಿಯನ್ನು ವಿಸ್ತರಿಸಲು ಅಥವಾ ಈಗಾಗಲೇ ತಿಳಿಸಿರುವುದಕ್ಕಿಂತ ಹೆಚ್ಚಿನ ಪರಿಹಾರವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2020 ಅಕ್ಟೋಬರ್ 10 ಶನಿವಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಸುಪ್ರೀಂಕೋರ್ಟಿಗೆ ಹೊಸ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಿರುವ ಆರ್‌ಬಿಐ, ಕೊರೋನಾವೈರಸ್ ಸಾಂಕ್ರಾಮಿಕ ಪೀಡಿತ ವಲಯಕ್ಕೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ. ಸಾಲ ಸ್ಥಗಿತ ಅವಧಿಯನ್ನು ಆರು ತಿಂಗಳು ಮೀರಿ ವಿಸ್ತರಿಸಲಾಗದು ಎಂದು ಹೇಳಿದೆ.  ಆರು ತಿಂಗಳುಗಳನ್ನು ಮೀರಿದ ದೀರ್ಘಾವಧಿಯ ಸಾಲ ಸ್ಥಗಿತವು "ಒಟ್ಟಾರೆ ಸಾಲ ಶಿಸ್ತನ್ನು ದುರ್ಬಲಗೊಳಿಸಲು ಕಾರಣವಾಗಬಹುದು, ಇದು ಆರ್ಥಿಕತೆಯಲ್ಲಿ ಸಾಲ ಸೃಷ್ಟಿಯ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಪರಿಣಾಮವನ್ನು ಬೀರುತ್ತದೆ" ಎಂದು ಆರ್‌ಬಿಐ ಹೇಳಿದೆ. ಕ್ರಮವು "ನಿಗದಿತ ಪಾವತಿಗಳ ಪುನಾರಂಭದ ನಂತರದ ಅಪರಾಧಗಳ ಅಪಾಯಗಳನ್ನು ಹೆಚ್ಚಿಸುತ್ತದೆ ಮತ್ತು "ಸಾಲಗಾರರಿಗೆ ಮರುಪಾವತಿ ಒತ್ತಡವನ್ನು ಹೆಚ್ಚಿಸುತ್ತದೆ" ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಕೇಂದ್ರೀಯ ಬ್ಯಾಂಕ್ ಮುನ್ನ ಸಲ್ಲಿಸಿದ ಪ್ರಮಾಣಪತ್ರಕ್ಕೆ ಸೋಮವಾರ ಪ್ರತಿಕ್ರಿಯಿಸಿದ್ದ ಸುಪ್ರೀಂಕೋರ್ಟ್ ಪ್ರಮಾಣ ಪತ್ರವು "ಅಗತ್ಯ ವಿವರಗಳನ್ನು" ಹೊಂದಿಲ್ಲ ಎಂದು ಸರ್ಕಾರಕ್ಕೆ ತಿಳಿಸಿತ್ತು ಮತ್ತು ವಿವಿಧ ಕ್ಷೇತ್ರಗಳ ಮೇಲಿನ ಕೋವಿಡ್ -೧೯ ಸಂಬಂಧಿತ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಸಾಲ ಪುನರ್ರಚನೆ ಕುರಿತು ಕೆವಿ ಕಾಮತ್ ಸಮಿತಿಯ ಸಲ್ಲಿಸಿದ ಶಿಫಾರಸು, ಸಾಲದ ನಿಷೇಧದ ಕುರಿತು ಇಲ್ಲಿಯವರೆಗೆ ನೀಡಲಾದ ಅಧಿಸೂಚನೆಗಳು ಮತ್ತು ಸುತ್ತೋಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ಸೂಚಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ನೇವಲ್ ಆಂಡ್ ಇಂಜಿನಿಯರಿಂಗ್ ಲಿಮಿಟೆಡ್‌ಗೆ ನೀಡಲಾಗಿದ್ದ ,೫೦೦ ಕೋಟಿ ರೂಪಾಯಿಗಳ ಗುತ್ತಿಗೆ ಒಪ್ಪಂದವನ್ನು ರಕ್ಷಣಾ ಇಲಾಖೆ ರದ್ದು ಪಡಿಸಿದೆ. ನೌಕಾ ಪಡೆಗಾಗಿ ಕಡಲಾಚೆಯ ಗಸ್ತು ಹಡಗುಗಳ ನಿರ್ಮಾಣಕ್ಕಾಗಿ ಗುತ್ತಿಗೆ ಟೆಂಡರನ್ನು ರಿಲಯನ್ಸ್ ಕಂಪೆನಿಗೆ ನೀಡಲಾಗಿತ್ತು. ಆದರೆ ಗಸ್ತು ಹಡಗುಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದನ್ನು ಅನುಸರಿಸಿ, ಒಪ್ಪಂದ ರದ್ದು ಪಡಿಸಲು ಭಾರತೀಯ ಸೇನೆ ನಿರ್ಧರಿಸಿದೆ. ಎರಡು ವಾರಗಳ ಹಿಂದೆ ಒಪ್ಪಂದವನ್ನು ರದ್ದು ಪಡಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಸುದ್ದಿ ಮೂಲಗಳು ತಿಳಿಸಿವೆ. ರಿಲಯನ್ಸ್ ಸಂಸ್ಥೆಯು ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ೨೦೧೧ರಲ್ಲಿ ಐದು ಯುದ್ಧ ಹಡಗುಗಳ ನಿರ್ಮಾಣಕ್ಕೆ ಗುಜರಾತ್ ಮೂಲದ ಪಿಪ್ವಾವ್ ಡಿಫೆನ್ಸ್ ಆಂಡ್ ಆಫ್‌ಶೋರ್ ಇಂಜಿನಿಯರಿಂಗ್ ಲಿ. ಕಂಪೆನಿ ಜೊತೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು. ಆಗ ನಿಖಿಲ್ ಗಾಂಧಿ ಕಂಪೆನಿಯ ಮಾಲಿಕರಾಗಿದ್ದರು. ನಂತರ ಅನಿಲ್ ಅಂಬಾನಿ ಅವರು ಕಂಪೆನಿಯನ್ನು ಖರೀದಿಸಿದ್ದರು. ನಂತರ ಕಂಪೆನಿಯ ಹೆಸರನ್ನು ರಿಲಯನ್ಸ್ ನೇವಲ್ ಆಂಡ್ ಇಂಜಿನಿಯರಿಂಗ್ ಲಿಮಿಟೆಡ್ (ಆರ್‌ಎನ್‌ಇಎಲ್ ) ಎಂಬುದಾಗಿ ಬದಲಾಯಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕುಲಗಂ ಜಿಲ್ಲೆಯಲ್ಲಿ ಗುರುವಾರ ಪೊಲೀಸರೊಂದಿಗೆ ನಡೆದ ಘರ್ಷಣೆಯ ಬಳಿಕ ಪುಲ್ವಾಮ ಜಿಲ್ಲೆಯಲ್ಲಿ 2020 ಅಕ್ಟೋಬರ್ 10 ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ  ಎಂದು ಪೊಲೀಸರು ತಿಳಿಸಿದರು. ದಕ್ಷಿಣ ಕಾಶ್ಮೀರ ಜಿಲ್ಲೆಯ ದಾದೂರಾ ಪ್ರದೇಶದಲ್ಲಿ ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್‍ಯಾಚರಣೆ ನಿರತವಾಗಿವೆ ಎಂದು ಅವರು ಹೇಳಿದರು. ಕುಲಗಂ ಜಿಲ್ಲೆಯ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಲಭಿಸಿದ ಸುಳಿವನ್ನು ಅನುಸರಿಸಿ ಭದ್ರತಾ ಪಡೆಗಳು ಶುಕ್ರವಾರ ರಾತ್ರಿ ಶೋಧ ಕಾರ್ಯಾಚರಣೆ ನಡೆಸಿದವು. ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಶೋಧ ಕಾರ್‍ಯಾಚರಣೆಯು ಗುಂಡಿನ ಘರ್ಷಣೆಯಾಗಿ ಪರಿವರ್ತನೆಗೊಂಡಿತ್ತು. ಬಳಿಕ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾದರು. ಸತ್ತ ಇಬ್ಬರು ಭಯೋತ್ಪಾದಕರ ಗುರುತು ಪತ್ತೆ ಹಚ್ಚಲಾಗಿಲ್ಲ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 10 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment