ನಾನು ಮೆಚ್ಚಿದ ವಾಟ್ಸಪ್

Tuesday, October 13, 2020

ಇಂದಿನ ಇತಿಹಾಸ History Today ಅಕ್ಟೋಬರ್ 13

 ಇಂದಿನ ಇತಿಹಾಸ  History Today ಅಕ್ಟೋಬರ್ 13

2020: ನವದೆಹಲಿ: ಭಾರತದ ಉತ್ತರ ಗಡಿಯಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ಧಕ್ಕೂ ಭಾರತ ಮತ್ತು ಚೀನಾದ  ಸುಮಾರು ಲಕ್ಷ ಸೈನಿಕರನ್ನು ನಿಯೋಜಿಸಲಾಗಿರುವುದರಿಂದ ಲಡಾಖ್ ಗಡಿ ಬಿಕ್ಕಟ್ಟಿಗೆ ಶೀಘ್ರ ಇತ್ಯರ್ಥ ಅಸಂಭವವಾಗಿದೆ ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 13ರ ಮಂಗಳವಾರ ತಿಳಿಸಿವೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಉದ್ವಿಗ್ನತೆಯನ್ನು ನಿವಾರಿಸುವ ಪ್ರಯತ್ನದಲ್ಲಿ, ಭಾರತ ಮತ್ತು ಚೀನಾ ನಡುವೆ ಕೋರ್ ಕಮಾಂಡರ್-ಮಟ್ಟದ ಮಾತುಕತೆ ಅಕ್ಟೋಬರ್ ೧೨ ರಂದು ನಡೆಯಿತು. ಪ್ಯಾಂಗೊಂಗ್ ತ್ಸೋ ಸರೋವರದ ತೀರದಿಂದ ಮತ್ತು ಲಡಾಖ್ ಇತರ ಘರ್ಷಣೆ ಕೇಂದ್ರಗಳಿಂದ ಚೀನೀ ಸೈನಿಕರು ವಾಪಸಾಗಬೇಕು ಏಪ್ರಿಲ್ ತಿಂಗಳ ಯಥಾಸ್ಥಿತಿ ಪುನಃಸ್ಥಾಪಿಸಬೇಕು ಎಂದು ಸಭೆಯಲ್ಲಿ ಭಾರತ ಆಗ್ರಹಿಸಿತು, ಆದರೆ ಚೀನಾವು ಭಾರತದ ಸೈನಿಕರೇ ಮೊದಲು ವಾಪಸಾಗಬೇಕು ಎಂದು ಪಟ್ಟು ಹಿಡಿಯಿತು ಎಂದು ಮೂಲಗಳು ಹೇಳಿವೆ. ಭಾರತ ಮತ್ತು ಚೀನಾದ ಸೇನಾ ಪ್ರತಿನಿಧಿಗಳ ಸಭೆ ೧೧ ಗಂಟೆಗಳಿಗಿಂತ ಹೆಚ್ಚು ಕಾಲ ನಡೆಯಿತು. ಪೂರ್ವ ಲಡಾಖ್ ಎಲ್ಎಸಿಯ ಭಾರತದ ಭಾಗದಲ್ಲಿರುವ ಚುಶುಲ್ನಲ್ಲಿ ಉಭಯ ನಿಯೋಗಗಳ ಸಭೆ ಪ್ರಾರಂಭವಾಯಿತು. ಆದರೆ ಉಭಯ ಕಡೆಯವರೂ ಮೊದಲು ಸೇನಾ ವಾಪಸಾತಿಗೆ ಹಿಂಜರಿದ ಕಾರಣ ಲಡಾಖ್ ಬಿಕ್ಕಟ್ಟಿಗೆ ಆರಂಭಿಕ ಇತ್ಯರ್ಥ ಸಾಧ್ಯತೆಗಳು ಮಂಕಾಗಿವೆ ಎಂದು ಮೂಲಗಳು ಹೇಳಿವೆ. ಮೂಲಗಳ ಪ್ರಕಾರ ಉಭಯ ಕಡೆಗಳ ಒಟ್ಟು ,೦೦,೦೦೦ ಸೈನಿಕರು ಪ್ರದೇಶದಲ್ಲಿ ನಿಯೋಜನೆಗೊಂಡಿದ್ದಾರೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳನ್ನು ತೆರೆಯುವ ಬಗ್ಗೆ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಮತ್ತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ 2020 ಅಕ್ಟೋಬರ್ 13ರ ಮಂಗಳವಾರ ಪತ್ರ ಸಮರ ನಡೆದಿದ್ದು ಉಭಯರ ಜಗಳ ಇನ್ನಷ್ಟು ಉಲ್ಬಣಗೊಂಡಿದೆ. ವಿಷಯದ ಬಗ್ಗೆ ಕೋಶ್ಯಾರಿ ಪತ್ರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯಪಾಲರಿಂದ ಹಿಂದುತ್ವದ ಬಗ್ಗೆ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಚುಚ್ಚಿದರು. ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಕುರಿತು ರಾಜ್ಯಪಾಲರು ಬರೆದ ಪತ್ರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಉದ್ಧವ್, ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂಬುದಾಗಿ ಕರೆದ ವ್ಯಕ್ತಿಯನ್ನು ಸ್ವಾಗತಿಸಲು ತಮ್ಮ ಹಿಂದುತ್ವವು ಅನುಮತಿ ನೀಡುವುದಿಲ್ಲ ಎಂದು ಬರೆದಿದ್ದಾರೆ. ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರೆಯುವ ಬೇಡಿಕೆಗಳ ಬಗ್ಗೆ ಸರ್ಕಾರ ಸಕ್ರಿಯವಾಗಿ ಯೋಚಿಸುತ್ತಿದೆ. ಆದರೆ, ಸಾಂಕ್ರಾಮಿಕ ಸಮಯದಲ್ಲಿ ಜನರ ಸುರಕ್ಷತೆಯೇ ಅದರ ಪ್ರಾಥಮಿಕ ಕರ್ತವ್ಯ ಎಂದು ಮುಖ್ಯಮಂತ್ರಿ ಪತ್ರದಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ ೧೨ ಪತ್ರದಲ್ಲಿ, ರಾಜ್ಯಪಾಲರು, ಪೂಜಾ ಸ್ಥಳಗಳನ್ನು ಪುನಃ ತೆರೆಯುವುದನ್ನು ಮುಂದೂಡಲು ನೀವು ಯಾವುದೇ ದೈವೀಕ ಮುನ್ಸೂಚನೆಯನ್ನು ಸ್ವೀಕರಿಸುತ್ತೀರಾ ಅಥವಾ ನೀವು ಇದ್ದಕ್ಕಿದ್ದಂತೆ ನೀವೇ ದ್ವೇಷಿಸುತ್ತಿದ್ದ ಜಾತ್ಯತೀತರಾಗಿ ಪರಿವರ್ತನೆಗೊಂಡಿದ್ದೀರಾ ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದು ವ್ಯಂಗ್ಯವಾಗಿ ಬರೆದಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಒಂದು ದಿನದಲ್ಲಿ ೫೫,೩೪೩ ಪ್ರಕರಣಗಳು ದಾಖಲಾಗುವುದರೊಂದಿಗೆ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ 2020 ಅಕ್ಟೋಬರ್ 13ರ ಮಂಗಳವಾರ ೭೧,೭೫,೮೮೦ಕ್ಕೆ ಏರಿಕೆಯಾಗಿದೆ. ಆದರೆ ಕಳೆದ ದಿನಗಳಿಂದ ದಾಖಲಾಗುತ್ತಿರುವ ಸೋಂಕು ಪ್ರಕರಣಗಳ ಸಂಖ್ಯೆ ನಿರಂತರವಾಗಿ ೬೦,೦೦೦ಕ್ಕಿಂತ ಕೆಳಗಿಳಿದಿದೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ. ೨೪ ಗಂಟೆಗಳ ಅವಧಿಯಲ್ಲಿ ಕೋವಿಡ್-೧೯ ಒಟ್ಟು ೭೦೬ ಜನರನ್ನು ಬಲಿ ತೆಗೆದುಕೊಂಡಿದ್ದು, ಸಾವಿನ ಸಂಖ್ಯೆ ,೦೯,೮೫೬ಕ್ಕೆ ಏರಿದೆ. ಸತತ ಐದನೇ ದಿನ, ಕೊರೋನಾವೈರಸ್ ಸಕ್ರಿಯ ಪ್ರಕರಣಗಳು ಲಕ್ಷಕ್ಕಿಂತ ಕಡಿಮೆಯಾಗಿವೆ ಮತ್ತು ಸತತ ಐದನೇ ದಿನವೂ ದೇಶದಲ್ಲಿ ಪ್ರತಿದಿನ ೭೫,೦೦೦ ಕ್ಕಿಂತ ಕಡಿಮೆ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಸತತ ೧೦ ದಿನಗಳಿಂದ ದಾಖಲಾಗುತ್ತಿರುವ ಸಾವಿನ ಸಂಖ್ಯೆ ಕೂಡಾ ,೦೦೦ ಕ್ಕಿಂತ ಕೆಳಗಿದೆ ಎಂದು ಅಂಕಿಸಂಖ್ಯೆಗಳು ಹೇಳಿವೆ. ಭಾರತವು ಸೆಪ್ಟೆಂಬರ್ ೧೭ ರಂದು ೯೭,೮೯೪ ಕೋವಿಡ್ -೧೯ ಪ್ರಕರಣಗಳನ್ನು ದಾಖಲಿಸಿತ್ತು. ದೇಶದಲ್ಲಿ ಒಟ್ಟು ,೩೮,೭೨೯ ಕೊರೋನಾ ಸಕ್ರಿಯ ಪ್ರಕರಣಗಳು ಇದ್ದು, ಇದು ಒಟ್ಟು ಪ್ರಕರಣಗಳ ಶೇಕಡಾ ೧೧.೬೯ರಷ್ಟಾಗಿದೆ. ದೇಶದಲ್ಲಿ ಕೊರೋನಾ ಸಾವಿನ ಪ್ರಮಾಣ ಈಗ ಶೇಕಡಾ .೫೩ಕ್ಕೆ ಇಳಿದಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟನ್ನು ಎದುರಿಸುತ್ತಿರುವ ವೇಳೆ ಹಾಗು ಗಡಿ ಘರ್ಷಣೆ ಕಡಿಮೆ ಮಾಡಲು ಯತ್ನಗಳು ನಡೆಯುತ್ತಿರುವ ವೇಳೆಯಲ್ಲಿ ಸೈನಿಕರಿಗೆ ಒದಗಿಸಲಾಗುವ ಎತ್ತರಪ್ರದೇಶಗಳ ಉಡುಪು, ವಸತಿ ಮತ್ತು ಪಡಿತರ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಂಸತ್ ಸದಸ್ಯರ ಗುಂಪೊಂದು ಲಡಾಖ್ಗೆ ಭೇಟಿ ನೀಡಲು ಸಜ್ಜಾಗಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸದಸ್ಯರು ಅಕ್ಟೋಬರ್ ೨೮-೨೯ರಂದು ಲೇಹ್ಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು 2020 ಅಕ್ಟೋಬರ್ 13ರ ಮಂಗಳವಾರ ತಿಳಿಸಿದರು. ಕಳೆದ ತಿಂಗಳು ಚೌಧರಿ ಅವರು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದ ನಂತರ ಭೇಟಿಯನ್ನು ಅಂತಿಮಗೊಳಿಸಲಾಗಿದೆ. ಸಮಿತಿಯು ಪ್ರಸ್ತುತ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ನೀಡಿದ ಇತ್ತೀಚಿನ ವರದಿಯನ್ನು ಪರಿಶೀಲಿಸುತ್ತಿದೆ. ವರದಿಯು ಸೈನಿಕರನ್ನು ಎತ್ತರದ ಪ್ರದೇಶಗಳಲ್ಲಿನ ಉಡುಪು ಮತ್ತು ಸಲಕರಣೆಗಳ ನ್ಯೂನತೆ ನಿವಾರಿಸಿ ಸರಿಯಾದ ಸಾಧನಗಳೊಂದಿಗೆ ಸಜ್ಜುಗೊಳಿಸುವ ಅಗತ್ಯವನ್ನು ತಿಳಿಸಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್: ಭಾರತವು ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ರಚಿಸಿದ್ದು ಅಕ್ರಮವಾಗಿದ್ದು ತಾನು ಅದನ್ನು ಮಾನ್ಯ ಮಾಡುವುದಿಲ್ಲ ಎಂದು 2020 ಅಕ್ಟೋಬರ್ 13ರ ಮಂಗಳವಾರ ಪುನರುಚ್ಚರಿಸಿರುವ ಚೀನಾ, ಭಾರತವು ಗಡಿ ಪ್ರದೇಶದಲ್ಲಿ ೪೪ ಪ್ರಮುಖ ಸೇತುವೆಗಳ ನಿರ್ಮಾಣವನ್ನೂ ವಿರೋಧಿಸಿತು. ಕಾರ್ಯತಂತ್ರದ ಪ್ರಾಮುಖ್ಯತೆಯ ಪ್ರದೇಶಗಳಲ್ಲಿ ನಿರ್ಮಿಸಲಾದ ೪೪ ಪ್ರಮುಖ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದ ಮರುದಿನ ಇದನ್ನು ವಿರೋಧಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವಂತಹ ಕ್ರಮಗಳನ್ನು ಉಭಯ ಕಡೆಯವರೂ ಕೈಗೊಳ್ಳಬಾರದು ಎಂದು ಹೇಳಿದರು. ಭಾರತ ಮತ್ತು ಚೀನಾ ಏಳನೇ ಸುತ್ತಿನ ಸೇನಾ ಮಾತುಕತೆ ನಡೆಸಿದ ಒಂದು ದಿನದ ನಂತರ ಲಿಜಿಯಾನ್ ಹೇಳಿಕೆ ನೀಡಿದ್ದಾರೆ. ಜೂನ್ ತಿಂಗಳಲ್ಲಿ ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಜೊತೆಗಿನ ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ಹುತಾತ್ಮರಾದ ಬಳಿಕ ವರ್ಷದ ಆರಂಭದಿಂದ ಭಾರತ ಮತ್ತು ಚೀನಾ ಮಧ್ಯೆ ಗಡಿ ಬಿಕ್ಕಟ್ಟು ತೀವ್ರಗೊಂಡಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪೂರ್ವ ಲಡಾಖ್ ವಲಯದಲ್ಲಿ ಗಡಿ ಬಿಕ್ಕಟ್ಟನ್ನು ಕ್ಷಿಪ್ರವಾಗಿ ಕೊನೆಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳಲು ಸಂವಾದ ಹಾಗೂ ಪ್ರಕ್ರಿಯೆಯನ್ನು ಮುಂದುವರೆಸಲು ಚುಶುಲ್ನಲ್ಲಿ ನಡೆದ ಮಾತುಕತೆಯಲ್ಲಿ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ಉಭಯ ರಾಷ್ಟ್ರಗಳು 2020 ಅಕ್ಟೋಬರ್ 13ರ ಮಂಗಳವಾರ ಪ್ರಕಟಿಸಿವೆ. ಹಿರಿಯ ಮಿಲಿಟರಿ ಕಮಾಂಡರ್ಗಳ ನಡುವಿನ ಏಳನೇ ಸುತ್ತಿನ ಮಾತುಕತೆಯ ಒಂದು ದಿನದ ನಂತರ ಉಭಯ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ವಿಷಯವನ್ನು ತಿಳಿಸಿವೆ. ಗಡಿ ಪ್ರದೇಶಗಳ ಪಶ್ಚಿಮ ವಲಯದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಸೇನಾ ಚಟುವಟಿಕೆ ನಿವಾರಿಸುವ ಕುರಿತು ಸೋಮವಾರ ಸುಮಾರು ೧೨ ಗಂಟೆಗಳ ಕಾಲ ಮಾತುಕತೆ ನಡೆದಿತ್ತು. ಚುಶುಲ್ ಪ್ರದೇಶದ ಎಲ್ಎಸಿಯ ಭಾರತೀಯ ಭಾಗದಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ, ಉಭಯ ಕಡೆಯವರು ಒಂದು ತಿಂಗಳ ಅವಧಿಯ ಬಿಕ್ಕಟ್ಟಿನ ಮಧ್ಯೆ, ಎಲ್ಎಸಿಯ ಉದ್ದಕ್ಕೂ ಸೇನಾ ಚಟುವಟಿಕೆ ನಿಷ್ಕ್ರಿಯಗೊಳಿಸುವಿಕೆಯ ಬಗ್ಗೆ ಪ್ರಾಮಾಣಿಕ, ಆಳವಾದ ಮತ್ತು ರಚನಾತ್ಮಕ ಅಭಿಪ್ರಾಯಗಳನ್ನು ಹೊಂದಿದ್ದರು ಎಂದು ಜಂಟಿ ಹೇಳಿಕೆ ತಿಳಿಸಿತು. ಚರ್ಚೆಗಳು ಸಕಾರಾತ್ಮಕ, ರಚನಾತ್ಮಕ ಮತ್ತು ಪರಸ್ಪರರ ನಿಲುವುಗಳ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿವೆ.  ಸಾಧ್ಯವಾದಷ್ಟು ಬೇಗ ಸೇನಾ ವಾಪಸಾತಿ ನಿಟ್ಟಿನಲ್ಲಿ ಪರಸ್ಪರ ಸ್ವೀಕಾರಾರ್ಹ ಪರಿಹಾರಕ್ಕೆ ಉಭಯ ಕಡೆಗಳು ತಲುಪಲಿವೆ ಎಂದು ಹೇಳಿಕೆ ತಿಳಿಸಿತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ವಾಷಿಂಗ್ಟನ್: ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತತ್ತರಿಸಿರುವ ಭಾರತೀಯ ಆರ್ಥಿಕತೆಯು ವರ್ಷ (೨೦೨೦) ಭಾರೀ ಪ್ರಮಾಣದಲ್ಲಿ ಶೇಕಡಾ ೧೦. ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2020 ಅಕ್ಟೋಬರ್ 13ರ ಮಂಗಳವಾರ ತಿಳಿಸಿತು. ಆದಾಗ್ಯೂ, ಭಾರತವು ೨೦೨೧ ರಲ್ಲಿ ಶೇಕಡಾ . ರಷ್ಟು ಬೆಳವಣಿಗೆಯೊಂದಿಗೆ ಪುಟಿದೇಳುವ ಸಾಧ್ಯತೆ ಇದೆ., ಹೀಗಾಗಿ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಯ ಸ್ಥಾನವನ್ನು ಮರಳಿ ಪಡೆಯುತ್ತದೆ. ಚೀನಾದ ನಿರೀಕ್ಷಿತ ಬೆಳವಣಿಗೆಯ ಪ್ರಮಾಣ ಶೇಕಡಾ . ರಷ್ಟಿದೆ ಎಂದು ಐಎಂಎಫ್ ತನ್ನ ಇತ್ತೀಚಿನ ವಿಶ್ವ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ ತಿಳಿಸಿತು. ಐಎಂಎಫ್ ಮತ್ತು ವಿಶ್ವಬ್ಯಾಂಕ್ ವಾರ್ಷಿಕ ಸಭೆಗಳಿಗೆ ಮುಂಚಿತವಾಗಿ ಬಿಡುಗಡೆಯಾದ ವರದಿಯಲ್ಲಿ ಜಾಗತಿಕ ಬೆಳವಣಿಗೆ ವರ್ಷ ಶೇಕಡಾ . ರಷ್ಟು ಕುಗ್ಗುತ್ತದೆ ಮತ್ತು ೨೦೨೧ ರಲ್ಲಿ ಶೇ . ಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಹಬ್ಬಗಳ ಋತುವಿನ ಸಲುವಾಗಿ ಅಕ್ಟೋಬರ್ ೨೦ ಮತ್ತು ನವೆಂಬರ್ ೩೦ ನಡುವೆ ೧೯೬ ಉತ್ಸವ ವಿಶೇಷ ರೈಲುಗಳನ್ನು ಓಡಿಸುವುದಾಗಿ ಭಾರತೀಯ ರೈಲ್ವೆ 2020 ಅಕ್ಟೋಬರ್ 13ರ ಮಂಗಳವಾರ ಪ್ರಕಟಿಸಿತು. ಮುಂಬರುವ ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರೀಕ್ಷಿಸುತ್ತಿರುವುದರಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತು. ದುರ್ಗಾ ಪೂಜೆ, ದಸರಾ, ದೀಪಾವಳಿ ಮತ್ತು ಛಾತ್  ಪೂಜೆಯ ಹಿನ್ನೆಲೆಯಲ್ಲಿ ಮುಂದಿನ ರಜಾದಿನಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೋಲ್ಕತಾ, ಪಾಟ್ನಾ, ವಾರಣಾಸಿ, ಲಕ್ನೋ ಮುಂತಾದ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಅದು ಹೇಳಿತು. " ಸೇವೆಗಳನ್ನು ಸಾಧ್ಯವಾದಷ್ಟು ಕನಿಷ್ಠ ೫೫ ಕಿ.ಮೀ ವೇಗದಲ್ಲಿ ನಿರ್ವಹಿಸಬೇಕು ಇದರಿಂದ ಅವು ಸೂಪರ್ಫಾಸ್ಟ್ ಸೇವೆಗಳಾಗಿವೆ. ಹಬ್ಬದ ವಿಶೇಷ ಸೇವೆಗಳಿಗೆ ಅನ್ವಯವಾಗುವ ಶುಲ್ಕವು ವಿಶೇಷ ರೈಲುಗಳಿಗೆ ಅನ್ವಯವಾಗಲಿದೆ ಎಂದು ಹೇಳಿಕೆ ತಿಳಿಸಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮುಂದಿನ ವರ್ಷದ ಆದಿಯಲ್ಲಿ ಭಾರತಕ್ಕೆ ವಿವಿಧ ಮೂಲಗಳಿಂದ ಕೊರೊನಾವೈರಸ್ ವಿರುದ್ಧದ ಲಸಿಕೆ ಲಭ್ಯವಾಗುವ ಸಾಧ್ಯತೆ ಇದ್ದು, ದೇಶದಾದ್ಯಂತ ಲಸಿಕೆಯನ್ನು ಹೇಗೆ ಪೂರೈಸಬೇಕು ಎಂಬುದರ ಬಗ್ಗೆ ತಜ್ಞರ ಗುಂಪು ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ 2020 ಅಕ್ಟೋಬರ್ 13ರ ಮಂಗಳವಾರ ಹೇಳಿದ್ದಾರೆ. ಲಭ್ಯವಾಗಲಿರುವ ಲಸಿಕೆಗಳ ಪ್ರಮಾಣ ಹಾಗೂ ಭಾರತದ ಜನಸಂಖ್ಯೆಯ ಗಾತ್ರವನ್ನು ಹೋಲಿಸಿ ನೋಡಿದಾಗ, ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸಬೇಕಾದರೆ ಒಂದಕ್ಕಿಂತ ಹೆಚ್ಚು ಲಸಿಕೆ ತಯಾರಕರೊಂದಿಗೆ ನಾವು ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದು ಹರ್ಷವರ್ಧನ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರೂ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದ ವೇಳೆಗೆ ನೋಂದಣಿ ಮಾಡಿಸಲು ಲಸಿಕೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಸುಮಾರು ೪೦ ಕಂಪನಿಗಳು ತಾವು ಅಭಿವೃದ್ಧಿಪಡಿಸಿರುವ ಲಸಿಕೆಗಳನ್ನು ಕ್ಲಿನಿಕಲ್ ಟ್ರಯಲ್ಗೆ  ಒಳಪಡಿಸುತ್ತಿವೆ. ಅವುಗಳಲ್ಲಿ ೧೦ ಕಂಪನಿಗಳ ಲಸಿಕೆಗಳು ಮೂರನೇ ಹಂತದ ಪ್ರಯೋಗದಲ್ಲಿವೆ. ಇದು ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗ. ಹಂತದಲ್ಲಿ ಲಸಿಕೆಗಳ ಪರಿಣಾಮಕಾರಿ ಮತ್ತು ಸುರಕ್ಷತೆ ಬಗ್ಗೆ ಫಲಿತಾಂಶ ಲಭ್ಯವಾಗಲಿದೆ ಎಂದು ಸೌಮ್ಯ ತಿಳಿಸಿದ್ದಾರೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 13 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment