ನಾನು ಮೆಚ್ಚಿದ ವಾಟ್ಸಪ್

Tuesday, October 6, 2020

ಇಂದಿನ ಇತಿಹಾಸ History Today ಅಕ್ಟೋಬರ್ 06

 ಇಂದಿನ ಇತಿಹಾಸ  History Today ಅಕ್ಟೋಬರ್ 06

2020: ಸ್ಟಾಕ್ ಹೋಮ್: ಕಪ್ಪು ಕುಳಿಗಳ (ಕೃಷ್ಣರಂಧ್ರ) ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ ಮೂವರು ವಿಜ್ಞಾನಿಗಳು ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು 2020 ಅಕ್ಟೋಬರ್ 06ರ ಮಂಗಳವಾರ ಗೆದ್ದಿದ್ದಾರೆ. ಬ್ರಿಟನ್ನಿನ ರೋಜರ್ ಪೆನ್ರೋಸ್ ವರ್ಷದ ಅರ್ಧದಷ್ಟು ಬಹುಮಾನವನ್ನು "ಕಪ್ಪು ಕುಳಿ ರಚನೆಯು ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ದೃಢವಾದ ಮುನ್ಸೂಚನೆಯಾಗಿದೆ" ಎಂಬುದಾಗಿ ಪತ್ತೆ ಹಚ್ಚಿದ್ದಕ್ಕಾಗಿ ಪಡೆದಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಟಿಸಿತು.. ಜರ್ಮನಿಯ ರೀನ್ಹಾರ್ಡ್ ಜೆನ್ಜೆಲ್ ಮತ್ತು ಅಮೇರಿP ಆಂಡ್ರಿಯಾ ಘೆಜ್ ಅವರು ಬಹುಮಾನದ ಉಳಿದ ಅರ್ಧ ಮೊತ್ತವನ್ನು "ನಮ್ಮ ನಕ್ಷತ್ರಪುಂಜದ ಮಧ್ಯಭಾಗದಲ್ಲಿನ ಒಂದು ಸೂಪರ್ ಮ್ಯಾಸಿವ್ ಕಾಂಪ್ಯಾಕ್ಟ್ ವಸ್ತುವಿನ ಪತ್ತೆಗಾಗಿ ಪಡೆಯುತ್ತಾರೆ ಎಂದು ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಗೊರನ್ ಕೆ ಹ್ಯಾನ್ಸನ್ ಹೇಳಿದರು. ಪ್ರಶಸ್ತಿಗಳು "ಬ್ರಹ್ಮಾಂಡದ ಅತ್ಯಂತ ವಿಲಕ್ಷಣ ವಸ್ತುಗಳಲ್ಲೊಂದಾದಕಪ್ಪು ಕುಳಿಗಳ ಪತ್ತೆಯನ್ನು ಸಂಭ್ರಮಿಸುತ್ತವೆ. ಕಪ್ಪು ಕುಳಿಗಳು ವೈಜ್ಞಾನಿಕ ಕಾದಂಬರಿ ಮತ್ತು ವೈಜ್ಞಾನಿಕ ವಾಸ್ತವಾಂಶಗಳ ಪ್ರಧಾನ ಅಂಗವಾಗಿರುವುದರ ಜೊತೆಗೆ ಇಂದಿಗೂ ಕೌತುಕ ಉಂಟಾಗುವಂತೆ ಮಾಡಿವೆ ಎಂದು ನೊಬೆಲ್ ಸಮಿತಿಯ ವಿಜ್ಞಾನಿಗಳು ಹೇಳಿದರು. ಕಪ್ಪು ರಂಧ್ರಗಳ ರಚನೆ ಸಾಧ್ಯ ಎಂದು ಪೆನ್ರೋಸ್ ಗಣಿತದೊಂದಿಗೆ ಸಾಬೀತುಪಡಿಸಿದರು, ಇದು ಆಲ್ಬರ್ಟ್ ಐನ್ಸ್ಟೈನ್ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವನ್ನು ಆಧರಿಸಿದೆ. ಗೆನ್ಜೆಲ್ ಮತ್ತು ಘೆಜ್ ನಮ್ಮ ಕ್ಷೀರಪಥ ನಕ್ಷತ್ರಪುಂಜದ ಧೂಳಿನಿಂದ ಆವೃತವಾದ ಕೇಂದ್ರವನ್ನು ಗಮನಿಸಿದರು, ಆದರೆ ತಾರೆಗಳು ಸುತ್ತುತ್ತಿದ್ದರೂ ಏನು ವಿಚಿತ್ರ ಸಂಗತಿ ನಡೆಯುತ್ತಿದೆ ಎಂಬುದನ್ನು ನೋಡಲು ಅವರಿಗೆ ಸಾಧ್ಯವಾಗಿರಲಿಲ್ಲ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಹತ್ರಾಸ್ ಮೂಲದ ೨೦ ವರ್ಷದ ಯುವತಿಯ ಮೇಲೆ ಚಿತ್ರಹಿಂಸೆ ಮತ್ತು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಕುಟುಂಬ ಮತ್ತು ಸಾಕ್ಷಿಗಳ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳು 2020 ಅಕ್ಟೋಬರ್ 06ರ ಮಂಗಳವಾರ ಸುಪ್ರೀಂಕೋರ್ಟ್ ಮುಂದೆ ಬಂದಿದ್ದು, ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿ ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಕುಟುಂಬಕ್ಕೆ ವಕೀಲರ ನೆರವು ಪಡೆಯಲು ಸಾಧ್ಯವಾಗಿದೆಯೇ ಎಂದೂ ಸುಪ್ರೀಂಕೋರ್ಟ್ ಪ್ರಶ್ನಿಸಿತು. ರಾಷ್ಟ್ರಮಟ್ಟದಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ಸತ್ಯಮಾ ದುಬೆ ಮತ್ತು ಇತರರು ಅರ್ಜಿ ಸಲ್ಲಿಸಿದ್ದು, ಪ್ರಕರಣದ ಬಗ್ಗೆ ಕೇಂದ್ರ ತನಿಖಾ ದಳ ಅಥವಾ ವಿಶೇಷ ತನಿಖಾ ತಂಡವು ತನಿಖೆ ನಡೆಸಬೇಕು ಎಂದು ಕೋರಿತ್ತು. ಪ್ರಕರಣದ "ನ್ಯಾಯಯುತ ತನಿಖೆ ನಡೆಯಬೇಕು ಎಂದು ಕೋರಿರುವ ಅರ್ಜಿಯು, ಪ್ರಕರಣ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ, ನಸುಕಿನ .೩೦ರ ವೇಳೆಗೆ ನಡೆದ ರಹಸ್ಯ ಸ್ವರೂಪದ ಅಂತ್ಯ ಸಂಸ್ಕಾರ ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡದಂತೆ ವಿರೋಧಿ ನಾಯಕರನ್ನು ತಡೆಯುವಲ್ಲಿ ಪೊಲೀಸರ ಪಾತ್ರವನ್ನು ಪ್ರಶ್ನಿಸಿದೆ. ನೀವು ಏಕೆ ಅಲಹಾಬಾದ್ ಹೈಕೋರ್ಟನ್ನು ಸಂಪರ್ಕಿಸಿಲ್ಲ ಎಂದು ಅರ್ಜಿ ಸಲ್ಲಿಸಿದ ಮಹಿಳಾ ಗುಂಪನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗೂಢಚರ್ಯೆ ಆಪಾದನೆಯಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ವಕೀಲರನ್ನು ನೇಮಿಸಲು ಇಸ್ಲಾಮಾಬಾದ್ ಹೈಕೋರ್ಟ್ ಭಾರತಕ್ಕೆ ನೀಡಿದ್ದ ಎರಡನೇ ಗಡುವು ಕೂಡಾ 2020 ಅಕ್ಟೋಬರ್ 06ರ ಮಂಗಳವಾರ ಮುಕ್ತಾಯಗೊಂಡಿದೆ. ಪಾಕಿಸ್ತಾನದ ಇಬ್ಬರು ಹಿರಿಯ ವಕೀಲರಾದ ಅಬಿದ್ ಹಸನ್ ಮಾಂಟೊ ಮತ್ತು ಮಖ್ದೂಮ್ ಅಲಿ ಖಾನ್ ಕ್ರಮವಾಗಿ ವೈದ್ಯಕೀಯ ಮತ್ತು ವೃತ್ತಿಪರ ಹಿನ್ನೆಲೆಯಲ್ಲಿ ಜಾಧವ್ ಪರ ಹಾಜರಾಗಲು ನಿರಾಕರಿಸಿದ್ದನ್ನು ಅನುಸರಿಸಿ ಇದೀಗ ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್ಸಿ) ಸ್ವತಃ ಪಾಕಿಸ್ತಾನದ ಇಬ್ಬರು ವಕೀಲರನ್ನು ನೇಮಿಸಬಹುದು ಎಂದು ಕಾನೂನು ಮೂಲಗಳು ಹೇಳಿವೆ. ಸೆಪ್ಟೆಂಬರ್ ರಂದು ಐಎಚ್ಸಿ ಪ್ರಕರಣವನ್ನು ಎರಡನೇ ಬಾರಿಗೆ ಆಲಿಸಿತ್ತು ಮತ್ತು ಜಾಧವ್ ಅವರನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸಲು ಭಾರತಕ್ಕೆ "ಮತ್ತೊಂದು ಅವಕಾಶವನ್ನು ನೀಡುವಂತೆ ಫೆಡರಲ್ ಸರ್ಕಾರಕ್ಕೆ ನಿರ್ದೇಶನ ನೀಡಿತು. ಪಾಕಿಸ್ತಾನದ ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಐಎಚ್ಸಿಯ ವಿಶಾಲ ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದು, ವಿಷಯದ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ಭಾರತದಿಂದ ಇನ್ನೂ ಉತ್ತರ ಬಂದಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಪ್ರಕರಣದ ಪರಿಣಾಮಕಾರಿ ಪುನರ್ ಪರಿಶೀಲನೆಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ (ವಿಮರ್ಶೆ ಮತ್ತು ಮರುಪರಿಶೀಲನೆ) ೨೦೨೦ರಲ್ಲಿ ನೀಡಿದ ಆದೇಶ ಲಾಭವನ್ನು ಪಡೆಯಲು ತಾವು ಬಯಸುವುದಿಲ್ಲ, ಬದಲಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥರ ಮುಂದೆ ಈಗಾಗಲೇ ಬಾಕಿ ಉಳಿದಿರುವ ತಮ್ಮ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಪರಿಗಣಿಸಬೇಕು ಎಂದು ಕೋರಿದ್ದಾರೆ ಎಂದು ಹೈಕೋರ್ಟಿಗೆ ಪಾಕಿಸ್ತಾನದ ಅಟಾರ್ನಿ ಜನರಲ್ ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
 
2020: ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯೊಂದಿಗೆ ಸೀಟು ಹಂಚಿಕೆ ವ್ಯವಸ್ಥೆಯನ್ನು 2020 ಅಕ್ಟೋಬರ್ 06ರ ಮಂಗಳವಾರ ಪ್ರಕಟಿಸಿದರು. "ಜೆಡಿಯುಗೆ ೧೨೨ ಸ್ಥಾನಗಳನ್ನು ನೀಡಲಾಗಿದೆ. ಕೋಟಾ ಅಡಿಯಲ್ಲಿ ನಾವು ಎಚ್ಎಎಮ್ಗೆ ಏಳು ಸ್ಥಾನಗಳನ್ನು ನೀಡುತ್ತಿದ್ದೇವೆ. ಬಿಜೆಪಿಗೆ ೧೨೧ ಸ್ಥಾನಗಳಿವೆ. ಮಾತುಕತೆ ನಡೆಯುತ್ತಿದೆ, ಬಿಜೆಪಿ ತನ್ನ ಕೋಟಾ ಅಡಿಯಲ್ಲಿ ವಿಕಾಸಶೀಲ್ ಇನ್ಸಾನ್ ಪಕ್ಷಕ್ಕೆ ಸ್ಥಾನಗಳನ್ನು ನೀಡಲಿದೆ ಎಂದು ನಿತೀಶ್ ಕುಮಾರ್ ಮಾತುಕತೆಗಳ ಬಳಿಕ ಹೇಳಿದರು. ಬಿಜೆಪಿ ತನ್ನ ಕೋಟಾದಿಂದ ವಿಐಪಿಗೆ ಆರು ಸ್ಥಾನಗಳನ್ನು ನೀಡಲಿದೆ ಎಂದು ಕುಮಾರ್ ನಂತರ ತಿಳಿಸಿದರು. ಮಧ್ಯೆ, ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ ನಿಲುವನ್ನು ಬಿಜೆಪಿ ಖಂಡಿಸಿ, ಜೆಡಿಯು ಜೊತೆಗಿನ ಮೈತ್ರಿ "ಮುರಿಯಲಾಗದು" ಎಂದು ಹೇಳಿದೆ. "ನಿತೀಶ್ ಕುಮಾರ್ ಬಿಹಾರದಲ್ಲಿ ನಮ್ಮ ನಾಯಕ ಎಂಬುದರಲ್ಲಿ ಯಾವುದೇ ಸಂದೇಹವಿಲ, ಕೇಂದ್ರದಲ್ಲಿ ಎಲ್ಜೆಪಿ ನಮ್ಮ ಮಿತ್ರ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. "ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ, ಬಿಜೆಪಿಯೊಂದಿಗೆ ಚುನಾವಣಾ ಹೋರಾಟ ನಡೆಸಲಾಗುವುದು ಎಂದು ಎಲ್ಜೆಪಿ ಹಿಂದೆ ಹೇಳಿತ್ತು. ಎನ್ಡಿಎಯಿಂದ ಹೊರನಡೆದ ಒಂದು ದಿನದ ನಂತರ, ಚಿರಾಗ್ ಪಾಸ್ವಾನ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು, ’ಬಿಹಾರ ಮುಖ್ಯಮಂತ್ರಿಯನ್ನು ಇನ್ನು ಮುಂದೆ ನಂಬುವುದಿಲ್ಲವಾದ್ದರಿಂದ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬೇಕು ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ’ ಶಾಸನಗಳ ವಿರುದ್ಧದ ಹೋರಾಟವು ರೈತರು ಅಥವಾ ಕಾರ್ಮಿಕರ ಹೋರಾಟ ಮಾತ್ರವಲ್ಲ, ಇದು "ಭಾರತದ ಹೋರಾಟ ಎಂಬುದಾಗಿ ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ 2020 ಅಕ್ಟೋಬರ್ 06ರ ಮಂಗಳವಾರ ಕೇಂದ್ರದ ಹೊಸ ಕೃಷಿ ಕಾನೂನುಗಳ ಮೇಲೆ ದಾಳಿ ನಡೆಸಿದರು. ಭಾನುವಾರ ಮೊಗಾ ಜಿಲ್ಲೆಯಿಂದ ಪ್ರಾರಂಭವಾದ ಅವರಖೇತಿ ಬಚಾವೊ ಯಾತ್ರೆ ಮುಕ್ತಾಯದ ದಿನವಾದ ಮಂಗಳವಾರ ಹರಿಯಾಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಕ್ರಮಗಳನ್ನು ಜಾರಿಗೊಳಿಸಿದರೆ ರೈತರು ಮತ್ತು ಕಾರ್ಮಿಕರು ಕೆಲವು ಕಾರ್ಪೊರೇಟ್ಗಳ "ಗುಲಾಮರಾಗುತ್ತಾರೆ. ಒಂದು ಅಥವಾ ಎರಡು ವರ್ಷಗಳಲ್ಲಿ, ಕಾರ್ಪೊರೇಟ್ಗಳು ಅವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂದು ಹೇಳಿದರು. "ನೀವು ಅದನ್ನು ನಂಬಲು ಬಯಸುತ್ತೀರೋ ಇಲ್ಲವೋ, ನಿಮ್ಮ ಭೂಮಿಯನ್ನು ಕಸಿದುಕೊಳ್ಳಲಾಗುವುದು ಎಂದು ರಾಹುಲ್ ಮತ್ತು ಅಮರಿಂದರ್ ಸಿಂಗ್ ಒಮ್ಮೆ ಹೇಳಿದ್ದನ್ನು ನೆನಪಿಡಿ ಎಂದು ಅವರು ತಮ್ಮ ಟ್ರಾಕ್ಟರುಗಳ ಜೊತೆಗೆ ಹಾಜರಿದ್ದ ರೈತರ ಸಭೆಗೆ ತಿಳಿಸಿದರು. "ಇದು ಕ್ರಮ ತೆಗೆದುಕೊಳ್ಳುವ ಸಮಯ. ನೀವು ಆರು ತಿಂಗಳು ಅಥವಾ ಒಂದು ವರ್ಷ ಕಾಯುತ್ತಿದ್ದರೆ,  ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಗಾಂಧಿ ಹೇಳಿದರು. ನಷ್ಟವು ಕೇವಲ ರೈತರು, ಕೃಷಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳದ್ದು ಮಾತ್ರವಲ್ಲ, ಅದು ಇಡೀ ದೇಶಕ್ಕೆ ಆಗುವ ನಷ್ಟ ಎಂದು ರಾಹುಲ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 06 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment