ನಾನು ಮೆಚ್ಚಿದ ವಾಟ್ಸಪ್

Sunday, October 11, 2020

ಇಂದಿನ ಇತಿಹಾಸ History Today ಅಕ್ಟೋಬರ್ 11

 ಇಂದಿನ ಇತಿಹಾಸ  History Today ಅಕ್ಟೋಬರ್ 11

2020: ನವದೆಹಲಿ: ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದ ಸ್ವಾಮಿತ್ವ ಯೋಜನೆ ಮೂಲಕ ಆಸ್ತಿ ಕಾರ್ಡ್ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೦ ಅಕ್ಟೋಬರ್ ೧೧ರ ಭಾನುವಾರ ಚಾಲನೆ ನೀಡಿದರು. ಕಾರ್ಡ್ಗಳು ಹಳ್ಳಿಗರ ಮನೆಗಳು ಮತ್ತು ಅವರು ಹೊಂದಿರುವ ಸುತ್ತಮುತ್ತಲಿನ ಪ್ರದೇಶಗಳ ಆಸ್ತಿ ಹಕ್ಕುಪತ್ರಗಳ ಭೌತಿಕ ಪ್ರತಿಗಳಾಗಲಿವೆ. ಏಪ್ರಿಲ್ ನಲ್ಲಿ ಆರಂಭಿಸಿದ ಸ್ವಾಮಿತ್ವ ಯೋಜನೆಯು ಗ್ರಾಮೀಣ ಜನರು ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಅವಕಾಶ ನೀಡಲಿದೆ. ಯೋಜನೆಯಿಂದ .೬೨ ಲಕ್ಷ ಗ್ರಾಮಗಳಿಗೆ ಲಾಭವಾಗಲಿದ್ದು, ಯೋಜನೆಯಡಿಯಲ್ಲಿ ರೈತರ ಜಮೀನುಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ. ಯೋಜನೆಯಲ್ಲಿ ಉತ್ತರಪ್ರದೇಶದ ೩೪೬, ಹರಿಯಾಣದ ೨೨೧, ಮಹಾರಾಷ್ಟ್ರದ ೧೦೦, ಮಧ್ಯಪ್ರದೇಶದ ೪೪, ಉತ್ತರಾಖಂಡದ ೫೦ ಮತ್ತು ಕರ್ನಾಟಕದ ಗ್ರಾಮಗಳು ಸೇರಿ ಒಟ್ಟು ೭೬೩ ಗ್ರಾಮಗಳು ಫಲಾನುಭವಿಸಿಗಳು ಯೋಜನೆಯ ಲಾಭವನ್ನು ಪಡೆಯಲಿದ್ದಾರೆ.

2020
: ನವದೆಹಲಿ: ಕರ್ನಾಟಕದ ಪಡುಬಿದ್ರಿ ಮತ್ತು ಕಾಸರಕೋಡು ಸೇರಿ ಐದು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಕಡಲ ತೀರಗಳು ಪರಿಶುದ್ಧತೆಗಾಗಿ ನೀಡಲಾಗುವ ಅಂತಾರಾಷ್ಟ್ರೀಯ ಬ್ಲೂಫ್ಲ್ಯಾಗ್ ಮನ್ನಣೆಗೆ ಆಯ್ಕೆಯಾಗಿವೆ. ಕರಾವಳಿ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ಡೆನ್ಮಾರ್ಕ್ ನೇತೃತ್ವದ ಅಂತಾರಾಷ್ಟ್ರೀಯ ತೀರ್ಪುಗಾರರ ತಂಡ ಮೆಚ್ಚುಗೆ ವ್ಯಕ್ತಪಡಿಸಿತು. ಕರ್ನಾಟಕದ ಉಡುಪಿ ಜಿಲ್ಲೆಯ ಪಡುಬಿದ್ರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು, ಕಪ್ಪಡ್ (ಕೇರಳ), ಶಿವರಾಜಪುರ (ದ್ವಾರಕಾ-ಗುಜರಾತ್), ಘೋಘ್ಲಾ(ದಿಯು), ಋಷಿಕೊಂಡ (ಆಂಧ್ರಪ್ರದೇಶ), ಗೋಲ್ಡನ್ ಬೀಚ್ (ಪುರಿ-ಒಡಿಶಾ) ಮತ್ತು ರಾಧಾನಗರ (ಅಂಡಮಾನ್-ನಿಕೋಬಾರ್) ಬಹುಮಾನಕ್ಕೆ ಪಾತ್ರವಾದ ಕರಾವಳಿ ಪ್ರದೇಶಗಳು.ಯಾವ ದೇಶವೂ ಒಂದೇ ವರ್ಷ ಕಡಲ ತೀರಗಳಿಗೆ ಬ್ಲೂಫ್ಲ್ಯಾಗ್ ಮನ್ನಣೆ ಪಡೆದಿಲ್ಲ. ಇದು ನಮ್ಮ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳಿಗೆ ದೊರೆತ ಜಾಗತಿಕ ಮನ್ನಣೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿ ಹೆಮ್ಮೆ ವ್ಯಕ್ತ ಪಡಿಸಿದರು.

2020:
ನವದೆಹಲಿ: ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷ ಪರಿಸ್ಥಿತಿ ಶಮನವಾಗಬೇಕಾದರೆ ಪೂರ್ವ ಲಡಾಖ್ ಆಯಕಟ್ಟಿನ ಸ್ಥಳಗಳಿಂದ ಯೋಧರನ್ನು ಹಿಂದಕ್ಕೆ ಕರೆಸುವ ಪ್ರಕ್ರಿಯೆ ಶೀಘ್ರ ಮತ್ತು ಸಂಪೂರ್ಣವಾಗಿ ಅನುಷ್ಠಾನಗೊಳ್ಳಬೇಕು ಎಂದು ಭಾರತ ಪುನರುಚ್ಚರಿಸಿತು. ಸಂಘರ್ಷ ಪರಿಸ್ಥಿತಿಯನ್ನು ಶಮನಗೊಳಿಸುವ ಸಂಬಂಧ ಭಾರತ ಮತ್ತು ಚೀನಾದ ಭದ್ರತಾ ಪಡೆಗಳ ಉನ್ನತ ಅಧಿಕಾರಿಗಳ ನಡುವೆ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿಯ ಚುಶೂಲ್ನಲ್ಲಿ ಸೋಮವಾರ (. ೧೨) ನಡೆಯಲಿರುವ ೭ನೇ ಸುತ್ತಿನ ಮಾತುಕತೆ ವೇಳೆ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಎಂದು ಮೂಲಗಳು ಹೇಳಿದವು.

2020:
ಬೆಂಗಳೂರು: ಭಾರತೀಯ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ಅಕ್ಟೋಬರ್ ೧೧ರ  ರಾತ್ರಿ ೧೦.೩೦ಕ್ಕೆ ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ, ಅವರು ಮನೆಯಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರು ಎಳೆದರು. ಮೂಲತಃ ಮೈಸೂರಿನವರಾದ ರಾಜನ್, ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿಕೊಂಡು ರಾಜನ್-ನಾಗೇಂದ್ರ ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರು. ೧೯೫೨ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಜೋಡಿ, ಸುಮಾರು ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು. ೧೯೫೨ರಿಂದ ೧೯೯೯ರವರೆಗೆ ೩೭೫ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಇದರಲ್ಲಿ ಕನ್ನಡದ ೨೦೦ಕ್ಕೂ ಅಧಿಕ ಸಿನಿಮಾಗಳು. ತೆಲುಗಿನಲ್ಲಿಯೂ ಜೋಡಿ ದೊಡ್ಡ ಯಶಸ್ಸು ಕಂಡಿತ್ತು. ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದರು. ರಾಜನ್ ಅವರ ಸಹೋದರ ನಾಗೇಂದ್ರ ಅವರು ೨೦೦೦ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಮಂತ್ರಾಲಯ ಮಹಾತ್ಮೆ, ಗಂಧದ ಗುಡಿ, ನಾ ನಿನ್ನ ಬಿಡಲಾರೆ, ಎರಡು ಕನಸು, ಕಳ್ಳ ಕುಳ್ಳ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಆಟೋ ರಾಜ, ಗಾಳಿಮಾತು, ಚಲಿಸುವ ಮೋಡಗಳು, ಬೆಟ್ಟದ ಹೂವು, ಸುಪ್ರಭಾತ, ಮತ್ತೆ ಹಾಡಿತು ಕೋಗಿಲೆ, ಕರುಳಿನ ಕುಡಿ, ಪರಸಂಗದ ಗೆಂಡೆತಿಮ್ಮ, ಶ್ರೀನಿವಾಸ ಕಲ್ಯಾಣ ಮುಂತಾದವು. ಅದರಲ್ಲಿ ಡಾ. ರಾಜ್ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳೇ ಜಾಸ್ತಿ. ಬಾನಲ್ಲೂ ನೀನೇ ಭುವಿಯಲ್ಲೂ ನೀನೇ.., ಬಂz ಬಾಳಿನ ಬೆಳಕಾಗಿ.., ಚೆಲುವೆಯ ಅಂದದ ಮೊಗಕೆ.., ಎಂದೆಂದೂ ನಿನ್ನನು ಮರೆತು..., ಹೊಸ ಬಾಳಿಗೆ ನೀ ಜೊತೆಯಾದೆ..,ನಲಿವಾ ಗುಲಾಬಿ ಹೂವೇ.., ನಾವಾಡುವ ನುಡಿಯೇ ಕನ್ನಡ ನುಡಿ...., ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು.., ತೇರಾ ಏರಿ ಅಂಬರದಾಗೆ ನೇಸರ ನಗುತಾನೇ... ಮುಂತಾದವು ರಾಜನ್-ನಾಗೇಂದ್ರ ಜೋಡಿಯ ಸಾರ್ವಕಾಲಿಕ ಹಿಟ್ ಗೀತೆಗಳು.

2020: ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಮಾಡಲಾದ ಮಹತ್ವದ ಬದಲಾವಣೆಯಲ್ಲಿ ಬಿ ಶ್ರೀರಾಮುಲು ಅವರ ಆರೋಗ್ಯ ಖಾತೆಯನ್ನು ಬದಲಾಯಿಸಿ ವೈದ್ಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಯಿತು. ಸಚಿವ ಬಿ ಶ್ರೀರಾಮುಲು ಅವರಿಗೆ  ಸಮಾಜ ಕಲ್ಯಾಣ ಖಾತೆ ಜವಾಬ್ದಾರಿಯನ್ನು ನೀಡಲಾಯಿತು. ಹಿಂದೆ ಸಮಾಜ ಕಲ್ಯಾಣ ಖಾತೆ ಸಚಿವ ಗೋವಿಂದ ಕಾರಜೋಳ ಬಳಿಯಿತ್ತು. ಈಗ ಡಿಸಿಎಂ ಅವರ ಬಳಿ ಕೇವಲ ಲೋಕೋಪಯೋಗಿ ಇಲಾಖೆ ಹೊಣೆ ಮಾತ್ರ ಇದೆ. ಬಹುದಿನಗಳಿಂದ ಶ್ರೀರಾಮುಲು ಅವರು ಖಾತೆ ಬದಲಾವಣೆ ಮಾಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರೆನ್ನಲಾಗಿದ್ದು, ಅವರ ಬೇಡಿಕೆ ಮಣಿದು ಖಾತೆ ಬದಲಾಯಿಸಲಾಯಿತು ಎನ್ನಲಾಯಿತು.

2020: ಬೆಂಗಳೂರು: ಕರ್ನಾಟಕದಾದ್ಯಂತ ಈದಿನ ಒಂದೇ ದಿನ ೧೦,೧೦೭ ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ರಾಜ್ಯದಲ್ಲಿ ೨೪ ಗಂಟೆಗಳ ಅವಧಿಯಲ್ಲಿ ,೫೨೩ ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ೭೫ ಮಂದಿ ಮೃತರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿತು. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ,೧೦,೩೦೯ಕ್ಕೆ ಏರಿಕೆಯಾಗಿದ್ದು, ಈವರೆಗೆ ,೯೬೬ ಮಂದಿ ಮೃತರಾಗಿದ್ದಾರೆ. ಇದುವರೆಗೆ ,೮೦,೦೫೪ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ,೨೦,೨೭೦ ಸಕ್ರಿಯ ಪ್ರಕರಣಗಳಿವೆ. ಪೈಕಿ ೯೦೪ ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಹೊಸದಾಗಿ ,೬೨೩ ಪ್ರಕರಣಗಳು ಪತ್ತೆಯಾಗಿದ್ದು, ೨೪ ಮಂದಿ ಮೃತರಾದರು. ಮೈಸೂರಿನಲ್ಲಿ ೫೪೧, ಹಾಸನ ೪೬೩, ಚಿತ್ರದುರ್ಗ ೩೭೮, ಬೆಳಗಾವಿ ೩೩೧, ತುಮಕೂರು ೨೮೫, ಮಂಡ್ಯ ೨೬೭, ದಕ್ಷಿಣ ಕನ್ನಡ ೨೬೫, ಬಳ್ಳಾರಿ ಜಿಲ್ಲೆಯಲ್ಲಿ ೨೨೬ ಪ್ರಕರಣಗಳು ಪತ್ತೆಯಾದವು.

2020: ವಾಷಿಂಗ್ಟನ್: ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶವು ದಿನಕ್ಕೊಂದು ಬ್ರಹ್ಮಾಂಡದ ಅಚ್ಚರಿಯನ್ನು ಉಣಬಡಿಸುತಿದ್ದು, ಭೂಮಿಯಿಂದ ಸುಮಾರು ೬೦ ಮಿಲಿಯನ್ ( ಕೋಟಿ) ಜ್ಯೋತಿರ್ವರ್ಷ ದೂರದಲ್ಲಿರುವ ಗ್ರೇಟ್ ಬ್ಯಾರೆಡ್ ಎನ್ಜಿಸಿ--೧೩೬೫ ಸುರಳಿಯಾಕಾರದ ನಕ್ಷತ್ರ ಪುಂಜದಲ್ಲಿ ಹೊಸ ನಕ್ಷತ್ರಗಳ ರಚನೆಯ ಪ್ರಕ್ರಿಯೆಯನ್ನು ಸೆರೆಹಿಡಿದಿದೆ. ಎನ್ಜಿಸಿ-೧೩೬೫ ನಕ್ಷತ್ರ ಪುಂಜದಲ್ಲಿ ನೀಲಿ ಮತ್ತು ಉರಿಯುತ್ತಿರುವ ಕಿತ್ತಳೆ ಬಣ್ಣದ ಅನಿಲಗಳು ಸುತ್ತುತ್ತಿರುವ ವಿದ್ಯಮಾನವನ್ನು ಹಬಲ್ ಸೆರೆಹಿಡಿದಿದ್ದು, ನಕ್ಷತ್ರ ಪುಂಜದಲ್ಲಿ ಹೊಸ ನಕ್ಷತ್ರಗಳು ಜನ್ಮ ತಳೆಯುತ್ತಿವೆ ಎಂದು ನಾಸಾ ಖಗೋಳ ವಿಜ್ಷಾನಿಗಳು ಅಂದಾಜು ಮಾಡಿದ್ದಾರೆ. ನಕ್ಷತ್ರ ಪುಂಜದ ಅಂಚಿನಲ್ಲಿ ಅನಿಲ ಮತ್ತು ಧೂಳನ್ನು ಒಟ್ಟುಗೂಡಿಸುವುದರಿಂದ, ಪ್ರಕಾಶಮಾನವಾದ ತಿಳಿ-ನೀಲಿ ಪ್ರದೇಶ ನಿರ್ಮಾಣವಾಗಿದೆ. ಪ್ರದೇಶದಲ್ಲಿ ನೂರಾರು ನಕ್ಷತ್ರಗಳು ಈಗಷ್ಟೇ ಜನ್ಮ ತಳೆದಿವೆ ಎಂದು ನಾಸಾ ಹೇಳಿದೆ.

2020: ರಿಯೋ ಡಿ ಜನೈರೊ (ಬ್ರೆಜಿಲ್): ಅತಿ ಹೆಚ್ಚು ಕೋವಿಡ್-೧೯ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ ಸಾವಿನ ಸಂಖ್ಯೆ ,೫೦,೦೦೦ ತಲುಪಿತು. ಇದರೊಂದಿಗೆ ಜಗತ್ತಿನಲ್ಲಿ ಕೋವಿಡ್ ಕಾರಣದಿಂದ ಅತಿಹೆಚ್ಚು ಸಾವು ಕಂಡ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರೆಜಿಲ್ ಸದ್ಯ ಎರಡನೇ ಸ್ಥಾನಕ್ಕೇರಿದೆ. ಜಗತ್ತಿನಲ್ಲಿ ವರೆಗೆ ಕೊರೋನಾದಿಂದ ೧೦,೭೪,೨೭೬ ಮಂದಿ ಮೃತರಾಗಿದ್ದಾರೆ. ವರೆಗೆ ,೭೨,೮೮,೩೬೨ ಮಂದಿಗೆ ಕೊರೋನಾ ಸೋಂಕು ತಗುಲಿದೆ. ,೮೧,೯೮,೮೭೦ ಮಂದಿ ವರೆಗೆ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ ವಿಶ್ವದಲ್ಲಿ ೮೩,೨೪,೮೧೭ ಸಕ್ರಿಯ ಪ್ರಕರಣಗಳಿದ್ದು, ೬೮,೭೫೨ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಕೋವಿಡ್ ಟ್ರ್ಯಾಕರ್ ವೆಬ್ಸೈಟ್ ವರ್ಲ್ಡೋಮೀಟರ್ ಹೇಳಿದೆ. ವಿಶ್ವದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿದೆ. ಇಲ್ಲಿ ೭೭,೩೩,೨೫೮ ಪ್ರಕರಣಗಳಿದ್ದರೆ, ,೧೪,೫೯೯ ಮಂದಿ ಮೃತರಾಗಿದ್ದಾರೆ. ಅದರ ನಂತರದ ಸ್ಥಾನದಲ್ಲಿ ಭಾರತ ಇದ್ದು, ಇಲ್ಲಿ ವರೆಗೆ ೭೦,೫೩,೮೦೬ ಮಂದಿಗೆ ಸೋಂಕು ಬಾಧಿಸಿದೆ. ಭಾರತದಲ್ಲಿ ವರೆಗೆ ,೦೮,೩೩೪ ಮಂದಿ ಮೃತರಾಗಿದ್ದಾರೆ. ಮೂರನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, ಇಲ್ಲಿ ವರೆಗೆ ೫೦,೮೨,೬೩೭ ಮಂದಿಗೆ ಸೋಂಕು ತಗುಲಿದೆ.

ಇಂದಿನ ಇತಿಹಾಸ  History Today ಅಕ್ಟೋಬರ್ 11 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment