ನಾನು ಮೆಚ್ಚಿದ ವಾಟ್ಸಪ್

Sunday, October 18, 2020

ಇಂದಿನ ಇತಿಹಾಸ History Today ಅಕ್ಟೋಬರ್ 19

 ಇಂದಿನ ಇತಿಹಾಸ  History Today ಅಕ್ಟೋಬರ್ 19

2020: ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಮಲಬಾರ್ ನೌಕಾ ಕವಾಯತಿನಲ್ಲಿ ಆಸ್ಟ್ರೇಲಿಯಾ ಸೇರಲಿದೆ ಎಂದು ಭಾರತ 2020 ಅಕ್ಟೋಬರ್ 19 ಸೋಮವಾರ ಪ್ರಕಟಿಸಿತು. ಇದರರ್ಥ ಕ್ವಾಡ್ ಅಥವಾ ಚತುರ್ಭುಜ ಒಕ್ಕೂಟದ ಎಲ್ಲಾ ನಾಲ್ಕು ಸದಸ್ಯ ರಾಷ್ಟ್ರಗಳು ಮೆಗಾ ಡ್ರಿಲ್ನಲ್ಲಿ ಭಾಗವಹಿಸಲಿವೆ. ಇದರೊಂದಿಗೆ ಕ್ವಾಡ್ ಗುಂಪಿನ ಅಧಿಕೃತತೆಗೆ ಭದ್ರ ತಳಪಾಯ ಬೀಳುವ ನಿರೀಕ್ಷೆ ಇದೆ. ಅಮೆರಿಕ ಮತ್ತು ಜಪಾನ್ ಮಲಬಾರ್ ನೌಕಾ ಕವಾಯತಿಯನಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ದೃಢಪಡಿಸಿವೆ. ಕವಾಯತು ಮುಂದಿನ ತಿಂಗಳು ಬಂಗಾಳಕೊಲ್ಲಿಯಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ನಡೆಯುವ ಸಾಧ್ಯತೆಯಿದೆ. ಬೃಹತ್ ನೌಕಾ ಕವಾಯತಿನಲ್ಲಿನ ಭಾಗವಾಗಬೇಕೆಂಬ ಆಸ್ಟ್ರೇಲಿಯಾದ ಮನವಿಗೆ ಕಿವಿಗೊಟ್ಟ ಭಾರತದ ನಿರ್ಧಾರವು ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದೊಂದಿಗಿನ ಸಂಬಂಧದಲ್ಲಿ ಹೆಚ್ಚುತ್ತಿರುವ ಪ್ರಕ್ಷುಬ್ಧತೆಯ ಮಧ್ಯೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮುಂದಿನ ತಿಂಗಳು ನಡೆಯುವ ವಾರ್ಷಿಕ ಮಲಬಾರ್ ನೌಕಾ ಕಸರತ್ತಿನಲ್ಲಿ ಪಾಲ್ಗೊಳ್ಳುವಂತೆ ಆಸ್ಟ್ರೇಲಿಯಾವನ್ನು ಆಹ್ವಾನ ನೀಡಿದ್ದು, ಆಸ್ಟ್ರೇಲಿಯಾ ಅದಕ್ಕೆ ಒಪ್ಪಿಗೆ ನೀಡಿದೆ. ಮಲಬಾರ್ ನೌಕಾ ಕಸರತ್ತು ಬಂಗಾಳಕೊಲ್ಲಿಯಲ್ಲಿ ಎರಡು ಹಂತಗಳಲ್ಲಿ ನಡೆಯಲಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ೨೦೧೯ ಕಸರತ್ತು ಸೆಪ್ಟೆಂಬರ್ ೨೬ ರಿಂದ ಅಕ್ಟೋಬರ್ ರವರೆಗೆ ಜಪಾನ್ ಕರಾವಳಿಯಲ್ಲಿ ನಡೆದಿತ್ತು. ಕ್ವಾಡ್ ಪಾಲುದಾರರನ್ನು ಒಳಗೊಂಡ ನೌಕಾ ಕಸರತ್ತು ನವೆಂಬರ್ - ಮತ್ತು ನವೆಂಬರ್ ೧೭-೨೦ ರಂದು ನಡೆಯಲಿದೆ. ಹಿಂದೂ ಮಹಾಸಾಗರ-ಶಾಂತಸಾಗರ (ಇಂಡೋ-ಪೆಸಿಫಿಕ್) ವಲಯದಲ್ಲಿ ಉಚಿತ ಮತ್ತು ಮುಕ್ತ ಸಂಚರಣೆಯ ವ್ಯವಸ್ಥೆ ಮಾಡುವುದು ಎಲ್ಲ ನಾಲ್ಕು ದೇಶಗಳ ಉದ್ದೇಶವಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ/ ಮೈಸೂರು: ಹಾಲಿ ದಶಕವನ್ನು ಭಾರತದ ದಶಕವನ್ನಾಗಿ ರೂಪಿಸಲು ಬೆಳವಣಿಗೆಯನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ಭಾರತದಲ್ಲಿ  ಪ್ರತಿವಲಯದಲ್ಲೂ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಅಕ್ಟೋಬರ್ 19ರ ಸೋಮವಾರ ಹೇಳಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, "ಕಳೆದ - ತಿಂಗಳುಗಳಲ್ಲಿ ನೀವು ವೇಗವನ್ನು ನೋಡಿರಬಹುದು ಮತ್ತು ಸುಧಾರಣೆಗಳ ಮಹತ್ವಾಕಾಂಕ್ಷೆ ಹೆಚ್ಚುತ್ತಿದೆ. ಅದು ಕೃಷಿ, ಬಾಹ್ಯಾಕಾಶ, ರಕ್ಷಣೆ, ವಾಯುಯಾನ ಅಥವಾ ಕಾರ್ಮಿಕರೇ ಆಗಿರಲಿ. ಪ್ರತಿಯೊಂದು ವಲಯದಲ್ಲೂ ಬೆಳವಣಿಗೆಗೆ ಅಗತ್ಯವಾದ ಬದಲಾವಣೆಗಳನ್ನು ಮಾಡಲಾಗುತ್ತಿದೆ" ಎಂದು ಮೋದಿ ಹೇಳಿದರು. ದೇಶದಲ್ಲಿ ಕೋಟ್ಯಂತರ ಯುವಕರ ಹಿತದೃಷ್ಟಿಯಿಂದ ಮತ್ತು ದಶಕವನ್ನು ಭಾರತವನ್ನಾಗಿ ಮಾಡಲು ಇದನ್ನು ಮಾಡಲಾಗುತ್ತಿದೆ. ನಾವು ನಮ್ಮ ಅಡಿಪಾಯವನ್ನು ಬಲಪಡಿಸಿದಾಗ ಮಾತ್ರ ದಶಕವು ಭಾರತದದ್ದಾಗಬಹುದು. ದಶಕವು ಯುವಕರಿಗೆ ಅಪಾರ ಅವಕಾಶವನ್ನು ತಂದಿದೆ ಎಂದು ಅವರು ಹೇಳಿದರು. "ನಾಡ ಹಬ್ಬ ದಸರಾ ಸಂದರ್ಭದಲ್ಲಿ ಪ್ರಧಾನಿಯವರು ರಾಜ್ಯದ ಜನತೆಗೆ ಶುಭ ಕೋರಿದರು. ರಾಜ್ಯದ ಹಲವಾರು ಭಾಗಗಳಲ್ಲಿ ಪ್ರವಾಹದಿಂದ ಹಾನಿಗೊಳಗಾದವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಪ್ರಧಾನಿ, ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳು ಒಟ್ಟಾಗಿ ಸಂತ್ರಸ್ತರಿಗೆ ಪರಿಹಾರ ನೀಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ/ ಲಡಾಖ್: ಲಡಾಖ್ ಚುಮಾರ್- ಡೆಮ್ಚೋಕ್ ಪ್ರದೇಶದಲ್ಲಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ ಚೀನಾದ ಯೋಧನೊಬ್ಬನನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದ ಘಟನೆ ಘಟಿಸಿದೆ. ಚೀನೀ ಯೋಧ ಕಣ್ತಪ್ಪಿನಿಂದ ಭಾರತೀಯ ಭೂ ಪ್ರದೇದ ಒಳಕ್ಕೆ ಬಂದಿರಬಹುದು ಎಂದು ಮೂಲಗಳು ತಿಳಿಸಿವೆ. ಶಿಷ್ಟಾಚಾರದ ಪ್ರಕಾರ ಸೂಕ್ತ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಯೋಧನನ್ನು ಚೀನೀ ಸೇನೆಗೆ ಒಪ್ಪಿಸಲಾಗುತ್ತದೆ ಎಂದು ಭಾರತೀಯ ಸೇನೆ 2020 ಅಕ್ಟೋಬರ್ 19ರ ಸೋಮವಾರ ಹೇಳಿತು. ಪ್ರಸ್ತುತ ಭಾರತ ಸೇನೆಯ ವಶದಲ್ಲಿರುವ ಯೋಧನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್) ಕಾರ್ಪೊರಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿದೆ. ಪೂರ್ವ ಲಡಾಖ್ನಲ್ಲಿ ನೈಜ ನಿಯಂತ್ರಣ ರೇಖೆ (ಎಲ್ಎಸಿ) ದಾಟಿ ಓಡಾಡುತ್ತಿದ್ದಾಗ ಭಾರತೀಯ ಭದ್ರತಾ ಪಡೆಗಳು ಅವರನ್ನು ವಶಕ್ಕೆ ಪಡೆದವು ಎಂದು ಸುದ್ದಿ ಮೂಲಗಳು ಹೇಳಿವೆ. ಪೂರ್ವ ಲಡಾಖ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವಣ ಗಡಿ ಘರ್ಷಣೆಯ ಮಧ್ಯೆ ಚೀನೀ ಯೋಧ ಭಾರತೀಯ ಗಡಿಯೊಳಕ್ಕೆ ಪ್ರವೇಶಿಸಿದ ಘಟನೆ ಘಟಿಸಿದೆ. ಮೇ ಆರಂಭದಲ್ಲಿ ಪ್ರಾರಂಭವಾದ ಐದು ತಿಂಗಳ ಸುದೀರ್ಘ ಮಿಲಿಟರಿ ಬಿಕ್ಕಟ್ಟು ಉಲ್ಬಣಗೊಂಡ ನಂತರ, ಭಾರತ ಮತ್ತು ಚೀನಾದ ಸೈನ್ಯಗಳು ಪೂರ್ವ ಲಡಾಖ್  ಎಲ್ಎಸಿಯ ಉದ್ದಕ್ಕೂ ಡೆಮ್ಚಾಕ್ ವಲಯವನ್ನು ಒಳಗೊಂಡಂತೆ ತಲಾ ೫೦,೦೦೦ ಸೈನಿಕರನ್ನು ನಿಯೋಜಿಸಿವೆ. ೬ನೇ ಯಾಂತ್ರಿಕೃತ ಕಾಲಾಳುಪಡೆ ವಿಭಾಗದವನು ಎಂದು ಹೇಳಲಾಗುತ್ತಿರುವ ಸೈನಿಕನನ್ನು ಗೂಢಚರ್ಯೆ ಕಾರ್ಯಾಚರಣೆಯಲ್ಲಿದ್ದಾನೆಯೇ ಎಂದು ಸೇನೆಯು ಪ್ರಶ್ನಿಸುತ್ತಿದೆ. ಯೋಧನ ಬಳಿ ನಾಗರಿಕ ಮತ್ತು ಮಿಲಿಟರಿ ದಾಖಲೆಗಳಿದ್ದವು ಎಂದು ಮೂಲಗಳು ತಿಳಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಕೋಲ್ಕತ: ಕೋವಿಡ್ -೧೯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಎಲ್ಲಾ ದುರ್ಗಾ ಪೂಜಾ ಪಂಡಾಲ್ಗಳನ್ನು ವಾಸ್ತವಿಕವಾಗಿ ಪ್ರವೇಶವಿಲ್ಲದ ವಲಯ ಎಂದು ಕಲ್ಕತ್ತ ಹೈಕೋರ್ಟ್ 2020 ಅಕ್ಟೋಬರ್ 19ರ ಸೋಮವಾರ ಘೋಷಿಸಿತು. ಕೊರೋನಾವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಪಂಡಾಲ್ಗಳಿಗೆ ವೀಕ್ಷಕರ ಪ್ರವೇಶವನ್ನು ಹೈಕೋರ್ಟ್ ನಿಷೇಧಿಸಿತು. ಸಂಘಟಕರು ಮಾತ್ರ ಪಂಡಾಲ್ಗಳನ್ನು ಪ್ರವೇಶಿಸಬಹುದು. ಪ್ರವೇಶಾನುಮತಿ ಇರುವ ವ್ಯಕ್ತಿಗಳ ಹೆಸರನ್ನು ಪಂಡಾಲ್ ಹೊರಭಾಗದಲ್ಲಿ ಪ್ರದರ್ಶಿಸಬೇಕು ಎಂದೂ ಹೈಕೋರ್ಟ್ ಆಜ್ಞಾಪಿಸಿತು. ಮಂಗಳವಾರದಿಂದ ಪ್ರಾರಂಭವಾಗುವ ಐದು ದಿನಗಳ ಸುದೀರ್ಘ ದುರ್ಗಾ ಪೂಜಾ ಹಬ್ಬ ಆಚರಣೆಯ ಉತ್ಸಾಹದಲ್ಲಿ ಜನರು ಇದ್ದ ವೇಳೆಯಲ್ಲೇ ಹೈಕೋರ್ಟಿನಿಂದ ಆದೇಶ ಬಂದಿತು. ೩,೯೮೩ ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ದಾಖ .೨೧ ಲಕ್ಷಕ್ಕೆ ತಲುಪಿದೆ. ಹೊಸದಾಗಿ ೬೪ ಮಂದಿ ಸಾವನ್ನಪ್ಪುವುದರೊಂದಿಗೆ ರಾಜ್ಯದಲ್ಲಿ ಕೊರೋನಾವೈರಸ್ಸಿಗೆ ಸಾವನ್ನಪ್ಪಿದವರ ಸಂಖ್ಯೆ ,೦೦೦ ಗಡಿ ದಾಟಿದೆ. ಪಶ್ಚಿಮ ಬಂಗಾಳದಲ್ಲಿ, ದುರ್ಗಾ ಪೂಜೆಯನ್ನು ರಾಜ್ಯ ಸರ್ಕಾರದ ಹೆಚ್ಚಿನ ಭಾಗವಹಿಸುವಿಕೆಯೊಂದಿಗೆ ಭವ್ಯವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಸುಮಾರು ೩೭,೦೦೦ ಪಂಡಾಲ್ಗಳನ್ನು ಸ್ಥಾಪಿಸಲಾಗುತ್ತದೆ. ದುರ್ಗಾ ಪೂಜೆಯು ರಾಜ್ಯದಲ್ಲಿ ಆರ್ಥಿಕ ಉತ್ಕರ್ಷವನ್ನೂ ತರುತ್ತದೆ. ರಾಜ್ಯದ ಎಲ್ಲ ದುರ್ಗಾ ಪೂಜಾ ಪಂಡಾಲ್ಗಳನ್ನೂ ಪ್ರವೇಶ ರಹಿತ ವಲಯಗಳು ಎಂಬುದಾಗಿ ಘೋಷಿಸುವಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಪಶ್ಚಿಮ ಬಂಗಾಳ ಆಡಳಿತಕ್ಕೆ ನಿರ್ದೇಶನ ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ಕಾರಣ (ಕೋವಿಡ್ -೧೯) ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನ ವಿಳಂಬವಾಗಿದೆ, ಶೀಘ್ರದಲ್ಲೇ ಅದನ್ನು ಜಾರಿಗೆ ತರಲಾಗುವುದು ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ 2020 ಅಕ್ಟೋಬರ್ 19 ಸೋಮವಾರ ಹೇಳಿದರು. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಸಾಮಾಜಿಕ ಗುಂಪುಗಳ ಜೊತೆಗಿನ ಸಭೆಯನ್ನುದ್ದೇಶಿಸಿ ನಡ್ಡಾ ಮಾತನಾಡುತ್ತಿದ್ದರು. ಮುಂದಿನ ವರ್ಷ ತಮಿಳುನಾಡು, ಕೇರಳ ಮತ್ತು ಅಸ್ಸಾಂ ಜೊತೆಗೆ ಪಶ್ಚಿಮ ಬಂಗಾದಲ್ಲಿಯೂ ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಮೋದಿ ಜಿ ಅವರ ಮೂಲ ನೀತಿ ಒಳಗೊಳ್ಳುವಿಕೆ - ಸಬ್ಕಾ ಸಾಥ್, ಸಬ್ಕಾ ವಿಕಾಸ್. ಇತರ ಪಕ್ಷಗಳ ನೀತಿ ಸಮಾಜವನ್ನು ವಿಭಜಿಸಿ, ಪ್ರತ್ಯೇಕವಾಗಿ ಇರಿಸಿ ಆಳುವುದು ಎಂದು ನಡ್ಡಾ ಹೇಳಿದರು. ಮಮತಾ ಸರ್ಕಾರದ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದೂ ಸಮುದಾಯಕ್ಕೆ ದೊರೆತ ಏಟುಗಳನ್ನು ನೀವು ನೋಡಿರಬೇಕು. ಈಗ, ಇದನ್ನು ಅರಿತುಕೊಂಡಾಗ, ಸಮಾಜದ ಪ್ರತಿಯೊಬ್ಬ ಸದಸ್ಯರನ್ನು ಸೇರಿಸಲು ಪ್ರಯತ್ನಗಳು ನಡೆಯುತ್ತಿವೆ. ಇವರು ಮತ ಬ್ಯಾಂಕ್ ರಾಜಕೀಯವನ್ನು ಮಾತ್ರ ಮಾಡುತ್ತಾರೆ, ಅಧಿಕಾರದಲ್ಲಿರಲು ಮಾತ್ರ ರಾಜಕೀಯ ಮಾಡುತ್ತಾರೆ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಮೊಬೈಲ್ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಯನ್ನು ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಸಿದ್ಧಪಡಿಸಿದೆ, ಇದು ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು ಕಣಿವೆಯಲ್ಲಿ ನುಸುಳಲು ಸಹಾಯ ಮಾಡುವುದು ಮಾತ್ರವಲ್ಲದೆ ಭಾರತ ಸರ್ಕಾರವು ವಿಧಿಸಿರುವ ಭವಿಷ್ಯದ ಸಂವಹನ ದಿಗ್ಬಂಧನದ ಪರಿಣಾಮವನ್ನು ತಟಸ್ಥಗೊಳಿಸಲಿದೆ ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 19 ಸೋಮವಾರ ತಿಳಿಸಿದವು. ನವದೆಹಲಿಯ ಉನ್ನತ ಭದ್ರತಾ ಅಧಿಕಾರಿಯೊಬ್ಬರ ಪ್ರಕಾರ, ಅಸ್ತಿತ್ವದಲ್ಲಿರುವ ಟೆಲಿಕಾಂ ಟವರ್ಗಳನ್ನು ತಿರುಚಲು ಮತ್ತು ಹೊಸದನ್ನು ನಿರ್ಮಿಸುವ ಯೋಜನೆ ಸುಮಾರು ಒಂದು ವರ್ಷದಿಂದ ನಡೆಯುತ್ತಿದೆ. ಕಾಶ್ಮೀರಕ್ಕೆ ನುಸುಳಿರುವ ಭಯೋತ್ಪಾದಕರಿಗೆ ಸಹಾಯ ಮಾಡಲು ಅಸ್ತಿತ್ವದಲ್ಲಿರುವ ಫೋನ್ ನೆಟ್ವರ್ಕ್ ಅನ್ನು ಬಲಪಡಿಸುವ ಪ್ರಕ್ರಿಯೆ ಇದು ಆರಂಭದಲ್ಲಿ ಕಲ್ಪಿಸಲಾಗಿತ್ತು ಎಂದು ಸುದ್ದಿ ಮೂಲಗಳು ಹೇಳಿವೆ. ಆದರೆ ಕಳೆದ ವರ್ಷದ ಆಗಸ್ಟ್ ರಂದು ಜಮ್ಮು -ಕಾಶ್ಮೀರರಾಜ್ಯದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ಭಾರತ ಸರ್ಕಾರದ ನಿರ್ಧಾರದ ನಂತರ ಕಾಶ್ಮೀರದಲ್ಲಿ ಜಾರಿಗೊಳಿಸಲಾದ ಸಂವಹನ ದಿಗ್ಬಂಧನವನ್ನು ಹಾಳುಮಾಡುವ ಸಾಮರ್ಥ್ಯವನ್ನು ನೀಡುವ ಕಸgತ್ತಿಗೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಶ್ರಮಿಸಿತು ಎಂದು ಮೂಲಗಳು ತಿಳಿಸಿವೆ. ಭಾರತೀಯ ಭದ್ರತಾ ಪಡೆಗಳಿಂದ ನಿರ್ಬಂಧಿಸಲಾಗದ ಪಾಕಿಸ್ತಾನದ ಟೆಲಿಕಾಂ ಸೇವೆಗಳನ್ನು ಕಾಶ್ಮೀರಿಗಳು ಬಳಸುವಂತಹ ಪರ್ಯಾಯ ಮೊಬೈಲ್ ಜಾಲ ನಿರ್ಮಿಸಬೇಕು ಎಂದು ಪಾಕಿಸ್ತಾನ ಬಯಸಿದೆ ಎಂದು ಮೂಲಗಳು ಹೇಳಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಹೈದರಾಬಾದ್: ತೆಲಂಗಾಣದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಲಿಯಾದವರ ಸಂಖ್ಯೆ 2020 ಅಕ್ಟೋಬರ್ 19 ಸೋಮವಾರ ೭೦ಕ್ಕೆ ಏರಿಕೆಯಾಯಿತು.
೧೯೦೮ರ ಬಳಿಕ ರಾಜ್ಯವು ಕಂಡ ಅತ್ಯಂತ ಭೀಕರ ಮಳೆಯಿಂದಾಗಿ ಹೈದರಾಬಾದ್ ಬಹುತೇಕ ಜಲಾವೃತವಾಗಿದ್ದು, ಮಳೆ ಸಂಬಂಧಿತ ದುರಂತಗಳಲ್ಲಿ ಹೈದರಾಬಾದ್ ನಗರ ಒಂದರಲ್ಲೇ ೩೩ ಮಂದಿ ಸಾವನ್ನಪ್ಪಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ೩೭ ಜನರು ಮೃತರಾಗಿದ್ದಾರೆ. ಮಧ್ಯೆ, ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮತ್ತಷ್ಟು ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದು ಜನರು ಮತ್ತು ಸರ್ಕಾರದ ಆತಂಕವನ್ನು ಹೆಚ್ಚಿಸಿದೆ. ಭೀಕರ ಮಳೆ ಹಾಗೂ ನೆರೆಯಿಂದ ನಲುಗಿರುವ ಮಹಾರಾಷ್ಟ್ರವು ಪರಿಹಾರ ಕಾರ್ಯಕ್ಕಾಗಿ ಸಾಲ ಮಾಡಲು ನಿರ್ಧರಿಸಿದೆ. ಮೈತ್ರಿ ಸರ್ಕಾರದ ಭಾಗವಾಗಿರುವ ಎನ್ಸಿಪಿ ವರಿಷ್ಠ ಶರದ್ ಪವಾರ್ ಸೋಮವಾರ ವಿಷಯ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 19 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment