ನಾನು ಮೆಚ್ಚಿದ ವಾಟ್ಸಪ್

Thursday, October 15, 2020

ಇಂದಿನ ಇತಿಹಾಸ History Today ಅಕ್ಟೋಬರ್ 15

 ಇಂದಿನ ಇತಿಹಾಸ  History Today ಅಕ್ಟೋಬರ್ 15

2020: ನವದೆಹಲಿ: ಗಡಿಯಲ್ಲಿ ಭಾರತ ರಚಿಸುತ್ತಿರುವ ಮೂಲಸೌಕರ್ಯ ಯೋಜನೆಗಳ ಬಗ್ಗೆ ಪದೇ ಪದೇ ದೂರುತ್ತಿರುವುದರ ವಿರುದ್ಧ ಚೀನಾಕ್ಕೆ 2020 ಅಕ್ಟೋಬರ್ 15ರ ಗುರುವಾರ ಖಡಕ್ ಖಂಡನೆ ವ್ಯಕ್ತ ಪಡಿಸಿದ ಭಾರತ ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಬಾರದು ಎಂದು ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿತು. ಆಂತರಿಕ ವಿಷಯಗಳ ಬಗ್ಗೆ ಇತರ ದೇಶಗಳು ನಿರೀಕ್ಷಿಸುವಂತೆಯೇ ಭಾರತದ ಆಂತರಿಕ ವಿಷಯಗಳ ಬಗ್ಗೆ ಚೀನಾ ಪ್ರತಿಕ್ರಿಯಿಸಬಾರದು ಎಂದು ಭಾರತ ಸ್ಪಷ್ಟವಾಗಿ ಸಾರಿತು.  ಪೂರ್ವ ಲಡಾಖ್‌ನ ಐದು ತಿಂಗಳುಗಳ ಗಡಿ ಬಿಕ್ಕಟ್ಟಿನ ಬಳಿಕ ಚೀನಾದ ವಿದೇಶಾಂಗ ಸಚಿವಾಲಯವು ಭಾರತವು ಗಡಿಯಲ್ಲಿ ಮಾಡುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯನ್ನು ಚೀನಾ ಪ್ರಸ್ತಾಪಿಸಿದ ಕೆಲವೇ ದಿನಗಳಲ್ಲಿ ಭಾರತದಿಂದ ಕಠಿಣ ಸಂದೇಶದ ರವಾನೆಯಾಗಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್  ಅವರು ವಾರ ಗಡಿಯಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ್ದರು ಮತ್ತು ಸೇನೆ ನಿಯೋಜನೆಯೊಂದಿಗೆ ಮೂಲಸವಲತ್ತು ಅಭಿವೃದ್ಧಿ ಪಡಿಸುತ್ತಿರುವುದೇ ಉಭಯ ರಾಷ್ಟ್ರಗಳ ನಡುವಣ ಉದ್ವಿಗ್ನತೆಗೆ ಮೂಲ ಕಾರಣ ಎಂದು ವಿವರಿಸಲು ಮುಂದಾಗಿದ್ದರು. "ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿ ಉಳಿದಿವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಪ್ರಸ್ತುತ ವರ್ಷದ ಅಂತ್ಯದ ವೇಳೆಗೆ ಪ್ರಚೋದಕ ಕೊಡುಗೆಯೊಂದನ್ನು ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 15ರ ಗುರುವಾರ ತಿಳಿಸಿದವು. ಯಾವ ವಲಯಕ್ಕೆ ಕೊಡುಗೆಯನ್ನು ನೀಡಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರವು ಈಗಾಗಲೇ ಮಾಹಿತಿ ಸಂಗ್ರಹ ಮಾಡುತ್ತಿದೆ ಎಂದು ಮೂಲಗಳು ಹೇಳಿದವು. ಒಂದು ಸೂಚನೆಯ ಪ್ರಕಾರ ತೀವ್ರ ತೊಂದರೆಗೆ ಒಳಗಾಗಿರುವ ಆಹಾರ, ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇvಕ್ಕೆ ಬಾರಿ ಪ್ರಚೋದಕ ಕೊಡುಗೆ ಲಭಿಸುವ ಸಾಧ್ಯತೆಗಳು ಇವೆ. ಇತರ ಕ್ಷೇತ್ರಗಳಲ್ಲಿನ ಚೇತರಿಕೆ ನಿಧಾನವಾಗಿರುವುದು ಖಚಿತವಾಗಿದ್ದರೂ, ಜನರು ಪ್ರಯಾಣ ಮತ್ತು ಊಟ ಮಾಡುವ ಬಗ್ಗೆ ಇನ್ನೂ ಭಯಭೀತರಾಗಿದ್ದಾರೆ. ಕೊಡುಗೆ ನೀಡುವಾಗ, ವಲಯದತ್ತ ಗಮನ ಹರಿಸುವುದರಿಂದ ಅದು ಉದ್ಯೋಗವನ್ನು ಸೃಷ್ಟಿಸುತ್ತದೆ ಎಂಬುದು ವಲಯಗಳತ್ತ ಗಮನ ಹರಿಸಲು ಕಾರಣ ಎಂದು ಮೂಲಗಳು ಹೇಳಿವೆ. ಆಹಾರ, ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯಗಳ ಹೊರತಾಗಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳತ್ತ (ಎಂಎಸ್‌ಎಂಇ) ಕೇಂದ್ರ ಸರ್ಕಾರವು ಗಮನ ಹರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರು ಹಬ್ಬದ ಋತುವಿನ ಮಾರಾಟದ ಬಗ್ಗೆ ತಾವು ಬಹಳ ಭರವಸೆ ಹೊಂದಿರುವುದಾಗಿ ಹೇಳಿದರು. "ನೀವು ಖರೀದಿ ವ್ಯವಸ್ಥಾಪಕ ಸೂಚ್ಯಂಕವನ್ನು ನೋಡಿದರೆ, ಇದು ಸೆಪ್ಟೆಂಬರ್‌ನಲ್ಲಿ ೫೬. ಆಗಿದೆ, ಇದು ಸೆಪ್ಟೆಂಬರ್‌ನಲ್ಲಿ ಕಳೆದ ಎಂಟು ವರ್ಷಗಲ್ಲೇ ಗರಿಷ್ಠವಾಗಿದೆ. ಇದಕ್ಕೆ ಕಾರಣ ಆಶಾವಾದ. ಅತ್ಯಂತ ಪ್ರಮುಖವಾದದ್ದು ವಾಹನಗಳು ಮತ್ತು ತಿಂಗಳು ವಲಯ ತುಂಬಾ ಉತ್ತಮವಾಗಿದೆ ಎಂದು ಅಮಿತಾಬ್ ಕಾಂತ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀ ಕುಮಾರ್ ಅವರ ಜನತಾದಳದಿಂದ (ಯು) ಬೇರ್ಪಡೆಗೊಳ್ಳಲು ವಿಧಾನಸಭಾ ಚುನಾವಣೆಗಾಗಿ ಸೀಟು ಹಂಚಿಕೆ ಕಾರಣವಲ್ಲ ಎಂಬುದಾಗಿ 2020 ಅಕ್ಟೋಬರ್ 15ರ ಗುರುವಾರ ಇಲ್ಲಿ ಸ್ಪಷ್ಟ ಪಡಿಸಿ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ನಿತೀಶ ಕುಮಾರ್ ವರ್ತನೆಯೇ ನಿರ್ಧಾರಕ್ಕೆ ಕಾರಣ ಎಂದು ಹೇಳಿದರು.ನಾವು ನಿತೀಶ ಕುಮಾರ್ ಅವರ ರಾಜಕೀಯವನ್ನು ವಿರೋಧಿಸುತ್ತೇವೆ ಎಂದು ಚಿರಾಗ್ ವಿವರಿಸಿದರು. ಕಳೆದ ವರ್ಷ ಎನ್‌ಡಿಎಗೆ ಮರಳಿದ ಬಳಿಕ ಅನಿವಾರ್ಯವಾಗಿ ತಮ್ಮ ಪಕ್ಷವು ಜೆಡಿಯು ಜೊತೆಗೆ ಮೈತ್ರಿ ಮಾಡಿಕೊಂಡು ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಹೋರಾಡಿತು, ಆದರೆ ಚುನಾವಣೆಯಲ್ಲಿ ನಿತೀಶ ಕುಮಾರ್ ಎಲ್‌ಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದರು. ಇದು ಪಕ್ಷ ಸಮ್ಮಿಶ್ರ ಧರ್ಮದ ಉಲ್ಲಂಘನೆ ಎಂದು ಎಲ್‌ಜೆಪಿ ನಾಯಕ ನುಡಿದರು. ಎಲ್‌ಜೆಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಇತ್ತೀಚೆಗೆ ಕಳೆದುಕೊಂಡಿರುವ ೩೭ ವರ್ಷದ ಚಿರಾಗ್, ಬಿಹಾರದ ಮುಖ್ಯಮಂತ್ರಿ ಕಳೆದ ವರ್ಷ ಜೆಡಿಯು ಮುಖ್ಯಸ್ಥರನ್ನು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಕರೆಸಿಕೊಂಡಾಗ ಅಹಂಕಾರಿ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ೨೦೧೯ ರಲ್ಲಿ ಖರೀದಿ ಸಾಮರ್ಥ್ಯ ಸಮಾನತೆ (ಪಿಪಿಪಿ) ಆಧಾರದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬಾಂಗ್ಲಾದೇಶಕ್ಕಿಂತ ೧೧ ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರದ ಮೂಲಗಳು 2020 ಅಕ್ಟೋಬರ್ 15ರ ಗುರುವಾರ ತಿಳಿಸಿದವು. ೨೦೧೯ ರಲ್ಲಿ, ಖರೀದಿ ಸಮಾನತೆಯ ನೆಲೆಯಲ್ಲಿ ಭಾರತದ ಜಿಡಿಪಿ ಬಾಂಗ್ಲಾದೇಶಕ್ಕಿಂತ ೧೧ ಪಟ್ಟು ಹೆಚ್ಚಿದ್ದರೆ, ಜನಸಂಖ್ಯೆಯು ಪಟ್ಟು ಹೆಚ್ಚಾಗಿದೆ. ಕೊಳ್ಳುವ ಶಕ್ತಿ ಸಮಾನತೆಯ ದೃಷ್ಟಿಯಿಂದ, ೨೦೨೦  ಬಾಂಗ್ಲಾದೇಶದ ೫೧೩೯ ಡಾಲರ್‌ಗಳಿಗೆ ಹೋಲಿಸಿದರೆ ಐಎಂಎಫ್ ಭಾರತದ ತಲಾ ಜಿಡಿಪಿಯನ್ನು ೬೨೮೪ ಡಾಲರ್ ಎಂದು ಅಂದಾಜು ಮಾಡಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಐಎಂಎಫ್ ೨೦೨೧ ರಲ್ಲಿ ಭಾರತದ ಜಿಡಿಪಿ ಶೇಕಡಾ . ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಿದೆ. ಇದು ಬಾಂಗ್ಲಾದೇಶದ ಶೇಕಡಾ .೪ರ ಎರಡು ಪಟ್ಟಿನಷ್ಟು ಆಗುತ್ತದೆ ಎಂದು ಮೂಲಗಳು ಹೇಳಿವೆ. ಹಾಲಿ ಕೇಂದ್ರ ಸರ್ಕಾರದ ಅವಧಿಯಲ್ಲಿ ತಲಾ ಜಿಡಿಪಿಯು ೨೦೧೪-೧೫ರಲ್ಲಿ ಇದ್ದ ೮೩,೦೯೧ ರೂಪಾಯಿಗಳಿಂದ  ೨೦೧೯-೨೦ರಲ್ಲಿ  ,೦೮,೬೨೦ ರೂಪಾಯಿಗಳಿಗೆ ಏರಿದೆ. ಅಂದರೆ ಇದು ಶೇಕಡಾ ೩೦. ರಷ್ಟು ಹೆಚ್ಚಾಗಿದೆ. ಯುಪಿಎ ಅವಧಿಯಲ್ಲಿ ಇದು ಶೇಕಡಾ ೧೯. ರಷ್ಟು ಹೆಚ್ಚಾಗಿತ್ತು ಎಂದು ಸರ್ಕಾರದ ಮೂಲಗಳು ವಿವರಿಸಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ದೇಶದ ತಲಾ ಒಟ್ಟು ದೇಶೀಯ ಉತ್ಪನ್ನವನ್ನು (ಜಿಡಿಪಿ) ನೆರೆಯ ಬಾಂಗ್ಲಾದೇಶದೊಂದಿಗೆ ಹೋಲಿಸಿದ್ದನ್ನು ಉಲ್ಲೇಖಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ತರಾಟೆಗೆ ತೆಗೆದುಕೊಂಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಹೈದರಾಬಾದ್ ನಗರಕ್ಕೆ ದಾಖಲೆ ಪ್ರಮಾಣದಲ್ಲಿ ಅಪ್ಪಳಿಸಿ ಹಲವಾರು ಪ್ರಾಣಗಳನ್ನು ಬಲಿ ಪಡೆದ ಮಹಾ ಮಳೆ 2020 ಅಕ್ಟೋಬರ್ 15ರ ಗುರುವಾರ ಕೊಂಕಣ, ಪುಣೆ, ಮುಂಬೈ, ಮರಾಠವಾಡ ಹಾಗೂ ಕರ್ನಾಟಕದತ್ತ ಚಲಿಸಿ ವ್ಯಾಪಕ ಬೆಳೆಹಾನಿಯನ್ನು ಉಂಟು ಮಾಡಿತು. ಭಾರೀ ಮಳೆ, ಪ್ರವಾಹದಿಂದಾಗಿ ತೆಲಂಗಾಣದಲ್ಲಿ ಕನಿಷ್ಠ ೫೦ ಮಂದಿ ಮೃತರಾಗಿದ್ದು, ೫೦೦೦ ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟವಾಗಿದೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ೧೩೫೦ ಕೋಟಿ ರೂ. ಪರಿಹಾರ ಒದಗಿಸುವಂತೆಯೂ ಅವರು ಕೋರಿದರು. ಅಕಾಲಿಕ ಮತ್ತು ಭಾರೀ ಮಳೆಯು ಪುಣೆ ನಗರ ಮತ್ತು ಅದರ ಉಪನಗರಗಳಲ್ಲಿ ಹಲವಾರು ಪ್ರದೇಶಗಳನ್ನು ಜಲಾವೃತಗೊಳಿಸಿತು. ಮರಾಠವಾಡದಲ್ಲಿ ಬೇಸಿಗೆಯ ಪ್ರಮುಖ ಸೋಯಾಬೀನ್ ಮತ್ತು ಹತ್ತಿಯ ಬೆಳೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿತು ಎಂದು ರೈತರು ಹೇಳಿದರು. ರಾಜ್ಯದ ಪಶ್ಚಿಮ ಭಾಗದಲ್ಲಿ, ಕೊಂಬನ್ ಜೊತೆಗೆ ಮುಂಬೈ, ಪುಣೆ ನಗರ ಮತ್ತು ಪುಣೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯಿತು. ಪುಣೆ ನಗರದ ಸಾಂತಕ್ರೂಜ್ ಮತ್ತು ಮುಂಬೈಯಲ್ಲಿ ಕ್ರಮೇಣ ೮೬ ಮಿ.ಮೀ ಮತ್ತು ೧೧೨ ಮಿ.ಮೀ ಮಳೆ ಸುರಿದರೆ ಬಾರಾಮತಿಯಲ್ಲಿ ೧೪೮. ಮಿ.ಮೀ., ರತ್ನಾಗಿರಿ ಪಟ್ಟಣದಲ್ಲಿ ೧೨೨. ಮಿ.ಮೀ.ಮಳೆ ಸುರಿದಿದೆ. ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಭತ್ತದ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ವರದಿಯಾಗಿದೆ. ಪುಣೆಯಲ್ಲಿನ ಮಳೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ನೀರು ಹರಿಯಿತು. ಕರಾವಳಿ ಕರ್ನಾಟಕದ ಉಡುಪಿಯಲ್ಲಿ ಗುರುವಾರ ಬೆಳಗ್ಗಿನವರೆಗೆ ೧೯೦ ಮಿ.ಮೀ ಗಿಂತ ಹೆಚ್ಚಿನ ಮಳೆಯಾಗಿದೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ೨೦೦ ಮಿ.ಮೀ. ಮಳೆಯಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ತ್ರಿಶ್ಶೂರ್: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಕವಿ ಅಕ್ಕಿಥಂ ಅಚ್ಯುತನ್ ನಂಬೂದಿರಿ (೯೪) ಅವರು ತ್ರಿಶ್ಶೂರಿನ ಖಾಸಗಿ ಆಸ್ಪತ್ರೆಯಲ್ಲಿ 2020 ಅಕ್ಟೋಬರ್ 15ರ ಗುರುವಾರ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕಳೆದ ವಾರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಮಹಾಕವಿ ಬಿರುದಿನ ಅಕ್ಕಿಥಂ ಅಗಲಿದ್ದಾರೆ. ಹಳೆಯ ಬೇರುಗಳ ಜೊತೆ ಆಧುನಿಕಯ ಸೊಗಡನ್ನು ಜೋಡಿಸಿ ಬರೆದ ಅಕ್ಕಿಥಂ, ಸಹಜ ಕವಿ ಎನಿಸಿದ್ದರು. ಬಾಲ್ಯದಿಂದಲೇ ಕವಿತೆ ಬರೆಯುವ ವ್ಯಾಮೋಹಕ್ಕೆ ಸಿಲುಕಿದ್ದ ಅವರು, ಇರುಪತಾಂ ನೂಟ್ಟಾಂಡಿಂಟೆ ಇತಿಹಾಸಂ ಸಂಕಲನದ ಮೂಲಕ ಮಲಯಾಳಂ ಕಾವ್ಯ ಜಗತ್ತಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದರು.  ದುಃಖವನ್ನು ತಮ್ಮ ಕಾವ್ಯದ ಆಪ್ತ ವಸ್ತುವನ್ನಾಗಿ ಪರಿಗಣಿಸಿದ್ದ ಅಕ್ಕಿಥಂ, ಬೆಳಕು ದುಃಖವನ್ನು, ಕತ್ತಲೆ ಆನಂದವನ್ನು ತರುತ್ತದೆ ಎಂದು ಗ್ರಹಿಸಿ ಬರೆದ ಕಾವ್ಯ ಕೇರಳದಲ್ಲಿ ಮನೆಮಾತಾಗಿತ್ತು. ಕವನ ಸಂಕಲನ, ನಾಟಕ ಮತ್ತು ಸಣ್ಣ ಕಥೆಗಳು ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೪೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಮುಂಬೈ: ಬಾಲಿವುಡ್ ಮತ್ತು ಹಾಲಿವುಡ್ಡಿನ  ಹಲವು ಚಿತ್ರಗಳಲ್ಲಿ ವಸ್ತ್ರ ವಿನ್ಯಾಸಕಿ ಆಗಿ ಕೆಲಸ ಮಾಡಿದ್ದ ಭಾನು ಅಥೈಯಾ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಮುಂಬೈಯಲ್ಲಿ 2020 ಅಕ್ಟೋಬರ್ 15ರ ಗುರುವಾರ ನಿಧನರಾದರು. ಅವರಿಗೆ ೯೧ ವರ್ಷ ವಯಸ್ಸಾಗಿತ್ತು. ನಿದ್ರಾವಸ್ಥೆಯಲ್ಲಿ ಇರುವಾಗಲೇ ಇಹಲೋಕ ತ್ಯಜಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿದವು. ೧೯೮೨ರಲ್ಲಿ ರಿಚರ್ಡ್ ಅಟೆನ್ಬರೋ ನಿರ್ದೇಶಿಸಿದ್ದ ’ಗಾಂಧಿ’ ಚಿತ್ರದ ವಸ್ತ್ರ ವಿನ್ಯಾಸಕ್ಕಾಗಿ ಭಾನು ಅಥೈಯಾ ಅವರು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದ್ದರು. ಆ ಮೂಲಕ ಆಸ್ಕರ್ ಪಡೆದ ಮೊದಲ ಭಾರತೀಯ ವ್ಯಕ್ತಿ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದರು. ’ಸ್ವದೇಸ್’, ’ಲಗಾನ್’, ’೧೯೪೨: ಎ ಲವ್ ಸ್ಟೋರಿ’ ಸೇರಿದಂತೆ ಅನೇಕ ಸಿನಿಮಾಗಳಿಗೆ ವಸ್ತ್ರ ವಿನ್ಯಾಸಕಿಯಾಗಿ ಭಾನು ಕೆಲಸ ಮಾಡಿದ್ದರು. ೧೯೫೬ರಲ್ಲಿ ಗುರುದತ್ ನಿರ್ದೇಶನದ ’ಸಿಐಡಿ’ ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದ ಭಾನು ಅವರು ನೂರಕ್ಕೂ ಅಧಿಕ ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದರು. ೨೦೧೨ರಲ್ಲಿ ಅವರಿಗೆ ಬ್ರೇನ್ ಟ್ಯೂಮರ್ ಇರುವುದು ಗೊತ್ತಾಗಿತ್ತು. ೨೦೧೬ರಲ್ಲಿ ಪಾರ್ಶ್ವವಾಯು ಆದ ಬಳಿಕ ಅವರು ಹಾಸಿಗೆ ಹಿಡಿದಿದ್ದರು. ಇತ್ತೀಚಿಗೆ ಅವರಿಗೆ ಜ್ವರ ಮತ್ತು ಕೆಮ್ಮು ಕೂಡ ಶುರು ಆಗಿತ್ತು. 

ಇಂದಿನ ಇತಿಹಾಸ  History Today ಅಕ್ಟೋಬರ್ 15 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment