ನಾನು ಮೆಚ್ಚಿದ ವಾಟ್ಸಪ್

Wednesday, October 7, 2020

ಇಂದಿನ ಇತಿಹಾಸ History Today ಅಕ್ಟೋಬರ್ 07

 ಇಂದಿನ ಇತಿಹಾಸ  History Today ಅಕ್ಟೋಬರ್ 07

2020: ಸ್ಟಾಕ್ ಹೋಮ್: ಫ್ರಾನ್ಸಿನ ವಿಜ್ಞಾನಿ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಅಮೆರಿಕದ ವಿಜ್ಞಾನಿ ಜೆನ್ನಿಫರ್ . ಡೌಡ್ನಾ ಅವರಿಗೆ ರಸಾಯನ ಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ೨೦೨೦ರ ಸಾಲಿನ ನೊಬೆಲ್ ಪ್ರಶಸ್ತಿಯನ್ನು 2020 ಅಕ್ಟೋಬರ್ 07 ಬುಧವಾರ ಘೋಷಿಸಲಾಯಿತು. ಜೀನೋಮ್ ಸಂಪಾದನೆಗಾಗಿ ಸಿಆರ್ಐಎಸ್ಪಿಆರ್ ಎಂಬುದಾಗಿ ಪರಿಚಿತವಾಗಿರುವ ಎಡಿಟಿಂಗ್ ವಿಧಾನವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಫ್ರೆಂಚ್ ವಿಜ್ಞಾನಿ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಅಮೇರಿಕದ ವಿಜ್ಞಾನಿ ಜೆನ್ನಿಫರ್ . ಡೌಡ್ನಾ ಅವರು ಜಂಟಿಯಾಗಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗೆದ್ದರು. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಪ್ರಧಾನ ಕಾರ್ಯದರ್ಶಿ ಗೋರನ್ ಹ್ಯಾನ್ಸನ್ ಅವರು ರಸಾಯನ ಶಾಸ್ತ್ರದಲ್ಲಿ ಮಾಡಿದ ಸಾಧನೆಗಾಗಿ ಉಭಯ ವಿಜ್ಞಾನಿಗಳಿ ಬುಧವಾರ ಪ್ರಶಸ್ತಿಯನ್ನು ಘೋಷಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೇರಳ ಮೂಲದ ಪತ್ರಕರ್ತ ಮತ್ತು ತೀವ್ರವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್) ಜೊತೆಗೆ ಸಂಪರ್ಕ ಹೊಂದಿದ್ದ ಇತರ ಮೂವರನ್ನು 2020 ಅಕ್ಟೋಬರ್ 07 ಬುಧವಾರ ದೆಹಲಿಯಿಂದ ಹತ್ರಾಸ್ಗೆ ತೆರಳುತ್ತಿದ್ದಾಗ ಮಥುರಾದಲ್ಲಿ ಬಂಧಿಸಿ ಅವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ೧೪ ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು. ಈ ವರ್ಷದ ಆರಂಭದಲ್ಲಿ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಗೆ ಹಣ  ಒದಗಿಸಿದ ಆರೋಪ ಪಿಎಫ್ ಮೇಲಿದೆ. ಉತ್ತರ ಪ್ರದೇಶದ ಪೊಲೀಸರು ಸಂಘಟನೆಯನ್ನು ನಿಷೇಧಿಸುವಂತೆ ಕೋರಿದ್ದರು. ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿ ದಲಿತ ಮಹಿಳೆ ಸಾವನ್ನಪ್ಪಿದ್ದ ಹತ್ರಾಸ್ಗೆ ಆರೋಪಿಗಳು ದೆಹಲಿಯಿಂದ ಹೊರಟಿದ್ದರು ಎಂದು ಪೊಲೀಸರು ಹೇಳಿದರು. "ಅಕ್ಟೋಬರ್ ರಂದು ಮಥುರಾದಲ್ಲಿ ಬಂಧಿಸಲ್ಪಟ್ಟ ಮತ್ತು ಪಿಎಫ್ ಜೊತೆ ಸಂಪರ್ಕ ಹೊಂದಿದ್ದ ನಾಲ್ವರು ಶಾಂತಿಯನ್ನು ಭಂಗಗೊಳಿಸುವ ದೊಡ್ಡ ಫಿತೂರಿಯ ಭಾಗವಾಗಿ ಹತ್ರಾಸ್ಗೆ ಹೋಗುತ್ತಿದ್ದರು ಎಂದು ಅವರ ವಿರುದ್ಧ ದಾಖಲಾದ ಎಫ್ಐಆರ್ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನಟ ರಿಯಾ ಚಕ್ರವರ್ತಿ ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲ ಎಂದು ಹೇಳಿ ಬಾಂಬೆ ಹೈಕೋರ್ಟ್ 2020 ಅಕ್ಟೋಬರ್ 07 ಬುಧವಾರ ಜಾಮೀನು ಮಂಜೂರು ಮಾಡಿದ್ದು ಅವರು ಬಿಡುಗಡೆಯಾಗಿ ತಮ್ಮ ನಿವಾಸಕ್ಕೆ ವಾಪಸಾದರು. ಇದರ ಬೆನ್ನಲ್ಲೇ ಯಾರೇ ಸೆಲೆಬ್ರಿಟಿ, ವಕೀಲ ಅಥವಾ ಸಂದರ್ಶನ ಮಾಡಬಯಸುವ ವ್ಯಕ್ತಿಯ ವಾಹನ ಬೆನ್ನತ್ತುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂಬೈ ಪೊಲೀಸರು ನಿರ್ಧರಿಸಿದರು. ಯಾವುದೇ ಸೆಲೆಬ್ರಿಟಿ, ವಕೀಲ ಅಥವಾ ಸಂದರ್ಶನ ಮಾಡಲು ಬಯಸುವ ವ್ಯಕ್ತಿಯ ವಾಹನವನ್ನು ಬೆನ್ನಟ್ಟಿದರೆ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ಸಾವಿನ ತನಿಖೆಗೆ ಸಂಬಂಧಿಸಿರುವ ಮಾದಕವಸ್ತು ಪ್ರಕರಣದಲ್ಲಿ ೨೧ ಗಂಟೆಗಳ ಕಾಲ ಮಾದಕ ದ್ರವ್ಯ ನಿಯಂತ್ರಣ ದಳ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ -ಎನ್ಸಿಬಿ) ಕಚೇರಿಯಲ್ಲಿ ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ ಸೆಪ್ಟೆಂಬರ್ ರಂದು ಬಂಧಿಸಲ್ಪಟ್ಟ ರಿಯಾ ಚಕ್ರವರ್ತಿ ಅವರನ್ನು ನ್ಯಾಯಾಲಯದ ಆದೇಶ ಪ್ರಕಾರ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಬೈಕುಲ್ಲಾದಿಂದ ಬಿಡುಗಡೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ’ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕ ಸ್ಥಳ, ರಸ್ತೆಗಳನ್ನು ಅನಿರ್ದಿಷ್ಟ ಕಾಲ ಆಕ್ರಮಿಸಲಾಗದು ಎಂದು ಶಾಹೀನ್ ಬಾಗ್ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 2020 ಅಕ್ಟೋಬರ್ 07 ಬುಧವಾರ ಮಹತ್ವದ ತೀರ್ಪು ನೀಡಿತು. ಶಾಹೀನ್ ಬಾಗ್ ಪ್ರತಿಭಟನೆಯ ಕಾನೂನುಬದ್ಧತೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಸಂಜಯ್ ಕೆ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವgನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠವು ಪ್ರತಿಭಟನೆಯ ಹಕ್ಕನ್ನು ಚಲಾಯಿಸಲು ಸಾರ್ವಜನಿಕ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳುವುದಕ್ಕೆ ಕಾನೂನು ಅನುಮತಿ ನೀಡುವುದಿಲ್ಲ ಎಂದು ಅಭಿಪ್ರಾಯಪಟ್ಟಿತು. "ಶಾಹೀನ್ ಬಾಗ್ ಇರಲಿ ಅಥವಾ ಬೇರೆಡೆಯೇ ಇರಲಿ, ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳನ್ನು ಅನಿರ್ದಿಷ್ಟವಾಗಿ ಆಕ್ರಮಿಸಲಾಗದು. ಇದು ಇತರರಿಗೆ ಅನಾನುಕೂಲ ಉಂಟು ಮಾಡುತ್ತದೆ ಎಂದು ನ್ಯಾಯಾಧೀಶರು ತೀರ್ಪಿನ ಆದೇಶದ ಭಾಗವನ್ನು ಓದುತ್ತಾ ತಿಳಿಸಿದರು. ಪ್ರತಿಭಟನೆಯ ಹಕ್ಕನ್ನು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ಪ್ರತಿಭಟನೆಗಳು ಗೊತ್ತುಪಡಿಸಿದ ಪ್ರದೇಶಗಳಲ್ಲಿ ನಡೆಯಬೇಕು ಎಂದು ನ್ಯಾಯಪೀಠ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಸಿರ್ಸಾ (ಹರಿಯಾಣ): ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ದುಶ್ಯಂತ ಚೌತಾಲ ಮತ್ತು ಸೆರೆಮನೆ ಖಾತೆ ಸಚಿವ ರಂಜಿತ್ ಚೌತಾಲ ಅವರ ಮನೆಗಳ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತ ಯೋಗೇಂದ್ರ ಯಾದವ್ ಮತ್ತು ಇತರ ಹಲವಾರು ರೈತರನ್ನು ಪೊಲೀಸರು 2020 ಅಕ್ಟೋಬರ್ 07 ಬುಧವಾರ ಬಂಧಿಸಿದರು. ಕೋವಿಡ್ -೧೯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಸಿವಿಲ್ ಲೈನ್ಸ್ ಪೊಲೀಸರು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಮತ್ತು ಸುಮಾರು ೧೦೦ ರೈತರನ್ನು ವಶಕ್ಕೆ ತೆಗೆದುಕೊಂಡರು. ಮಂಗಳವಾರ ರಾತ್ರಿಯಿಂದ ಅವರು ಭೂಮನ್ ಶಾ ಚೌಕದಲ್ಲಿ ಅನಿರ್ದಿಷ್ಟ ಮುಷ್ಕg ಆರಂಭಿಸಿದ್ದರುದುಶ್ಯಂತ್ ಮತ್ತು ಅವರ ಮೊಮ್ಮಗ ರಂಜಿತ್ ಚೌತಾಲ ಅವರು ಮನೋಹರ ಲಾಲ್ ಖಟ್ಟರ್ ಸರ್ಕಾರಕ್ಕೆ ರಾಜೀನಾಮೆ ನೀಡುವವರೆಗೂ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಯಾದವ್ ಹೇಳಿದರು. ಹರಿಯಾಣದಲ್ಲಿ ನೀವು ರೈತರೊಂದಿಗೆ ಇರಲು ಬಯಸುತ್ತೀರೋ ಬಿಜೆಪಿ ಸರ್ಕಾರದೊಂದಿಗೆ ಇರಬಯಸುತ್ತೀರೋ ಎಂಬುದಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಯಾದವ್ ಚೌತಾಲದ್ವಯರನ್ನು ಒತ್ತಾಯಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಹೊಸದಾಗಿ ಒಂದೇ ದಿನ ೭೨,೦೪೯ ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಕೋವಿಡ್ -೧೯ ಪ್ರಕರಣ ಸಂಖ್ಯೆ 2020 ಅಕ್ಟೋಬರ್ 07 ಬುಧವಾರ ೬೭.೫೭ ಲಕ್ಷಕ್ಕೆ ಏರಿಕೆಯಾಯಿತು. ಒಟ್ಟು ೫೭,೪೪,೬೯೩ ಜನರು ರೋಗದಿಂದ ಗುಣಮುಖರಾಗಿ ಈವರೆಗೆ ಚೇತರಿಸಿಕೊಂಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇಕಡಾ ೮೫.೦೨ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿತು. ಒಟ್ಟು ಕೊರೋನವೈರಸ್ ಪ್ರಕರಣಗಳು ೬೭,೫೭,೧೩೧ ಕ್ಕೆ ಏರಿದರೆ, ಸಾವಿನ ಸಂಖ್ಯೆ ,೦೪,೫೫೫ ಕ್ಕೆ ಏರಿದೆ, ಕೊರೋನಾವೈರಸ್ ದೇಶದಲ್ಲಿ ೨೪ ಗಂಟೆಗಳ ಅವಧಿಯಲ್ಲಿ ೯೮೬ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಬೆಳಗ್ಗೆ ಗಂಟೆಗೆ ನವೀಕರಿಸಿದ ಮಾಹಿತಿ ತೋರಿಸಿದೆ. ದೇಶದಲಿ ಕೋವಿಡ್-೧೯ ಪ್ರಕರಣಗಳ ಸಾವಿನ ಪ್ರಮಾಣವು ಇನ್ನೂ ಕಡಿಮೆಯಾಗಿದ್ದು ಶೇಕಡಾ .೫೫ ಕ್ಕೆ ಇಳಿದಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತ ಮತ್ತು ಜಪಾನ್ ಜಿ ತಂತ್ರಜ್ಞಾನ ಮತ್ತು ನಿರ್ಣಾಯಕ ಮಾಹಿತಿ ಮೂಲಸೌಕರ್ಯಗಳ ಮೇಲಿನ ಸಹಕಾರವನ್ನು ಹೆಚ್ಚಿಸಲು ಸೈಬರ್-ಸುರಕ್ಷತೆಯ ಬಗ್ಗೆ ಮಹತ್ವಾಕಾಂಕ್ಷೆಯ ಒಪ್ಪಂದವನ್ನು 2020 ಅಕ್ಟೋಬರ್ 07 ಬುಧವಾರ ಅಂತಿಮಗೊಳಿಸಿದವು. ಇದಲ್ಲದೆ ವೈವಿಧ್ಯಮಯ ಪೂರೈಕೆ ಸರಪಳಿಗಳೊಂದಿಗೆ ಉಚಿತ ಮತ್ತು ಮುಕ್ತ ಇಂಡೋ-ಪೆಸಿಪಿಕ್ಗಾಗಿ ಕೆಲಸ ಮಾಡುವುದಾಗಿಯೂ ಉಭಯ ದೇಶಗಳು ಪ್ರತಿಜ್ಞೆ ಮಾಡಿದವು. ಟೋಕಿಯೊದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಜಪಾನ್ ವಿದೇಶಾಂಗ ತೊಶಿಮಿತ್ಸು ಮೊಟೆಗಿ ಅವರು ಮಾತುಕತೆಗಳ ಬಳಿಕ ಬಿಡುಗಡೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯು ಉದ್ದೇಶಿತ ಸೈಬರ್-ಭದ್ರತಾ ಒಪ್ಪಂದವು ಸಾಮರ್ಥ್ಯ ವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಕಾರವನ್ನು ಉತ್ತೇಜಿಸುತ್ತದೆ ಮತ್ತು ನಿರ್ಣಾಯಕ ಮಾಹಿತಿ ಮೂಲಸೌಕರ್ಯ, ಜಿ, ವಸ್ತುಗಳ ಅಂತರ್ಜಾಲ (ಐಒಟಿ) ಮತ್ತು ಕೃತಕ ಬುದ್ಧಿಮತ್ತೆ (ಎಐ) ನಲ್ಲಿ ಸುರಕ್ಷತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 07 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment