ನಾನು ಮೆಚ್ಚಿದ ವಾಟ್ಸಪ್

Saturday, October 3, 2020

ಇಂದಿನ ಇತಿಹಾಸ History Today ಅಕ್ಟೋಬರ್ 03

 ಇಂದಿನ ಇತಿಹಾಸ  History Today ಅಕ್ಟೋಬರ್ 03

2020: ನವದೆಹಲಿ: ಮನಾಲಿ ಮತ್ತು ಲೆಹ್ ನಡುವಣ ನಡುವಿನ ಅಂತರವನ್ನು ೪೬ ಕಿ.ಮೀ ಮತ್ತು ಪ್ರಯಾಣದ ಅವಧಿಯನ್ನು ನಾಲ್ಕರಿಂದ ಐದು ಗಂಟೆಗಷ್ಟು ಕಡಿಮೆ ಮಾಡುವ ಆಯಕಟ್ಟಿನ ಸರ್ವ ಋತುಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2020 ಅಕ್ಟೋಬರ್ 03ರ ಶನಿವಾರ ಲೋಕಾರ್ಪಣೆ ಮಾಡಿದರು. ಹಿಮಾಚಲ ಪ್ರದೇಶದ ರೋಹ್ತಾಂಗ್‌ನಲ್ಲಿ ಗಡಿ ರಸ್ತೆಗಳ ಸಂಸ್ಥೆ ನಿರ್ಮಿಸಿರುವ . ಕಿಮೀ ಉದ್ದದ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಅಟಲ್ ಸುರಂಗದ ಪೂರ್ಣಗೊಳಿಸುವಿಕೆಯು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸುಗಳನ್ನು ಈಡೇರಿಸಿದೆ ಮಾತ್ರವಲ್ಲದೆ ಹಿಮಾಚಲ ಪ್ರದೇಶದ ಜನರ ಕಾಯುವಿಕೆಯನ್ನು ಕೊನೆಗೊಳಿಸಿದೆ ಎಂದು ಹೇಳಿದರು. "ಅಟಲ್ ಸುರಂಗವು ಭಾರತದ ಗಡಿ ಮೂಲಸೌಕರ್ಯಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ. ಇದು ವಿಶ್ವ ದರ್ಜೆಯ ಗಡಿ ಸಂಪರ್ಕಕ್ಕೆ ಒಂದು ಉದಾಹರಣೆಯಾಗಿದೆ. ಗಡಿ ಮೂಲಸೌಕರ್ಯವನ್ನು ಸುಧಾರಿಸುವ ಬೇಡಿಕೆಗಳಿವೆ. ಆದರೆ ದೀರ್ಘಕಾಲದವರೆಗೆ, ಅಂತಹ ಯೋಜನೆಗಳು ಯೋಜನಾ ಹಂತದಿಂದ ಹೊರಬರಲು ಸಾಧ್ಯವಾಗಲಿಲ್ಲ ಅಥವಾ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದವು ಎಂದು ಮೋದಿ ಹೇಳಿದರು. ಹಿಂದಿನ ಸರ್ಕಾರದ ಅಡಿಯಲ್ಲಿ ಯೋಜನೆಯ ವಿಳಂಬದ ಕುರಿತು ಉಲ್ಲೇಖಿಸಿದ ಅವರು, ವಾಜಪೇಯಿ ಅವರ ಅಧಿಕಾರಾವಧಿ ಮುಗಿದ ನಂತರ, ಯೋಜನೆಯನ್ನು ಮರೆತುಹೋದಂತೆ ಕಂಡುಬಂದಿದೆ ಎಂದು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 2020 ಅಕ್ಟೋಬರ್ 03ರ ಶನಿವಾರ . ಕಿ.ಮೀ ಉದ್ದದ ಅಟಲ್ ಸುರಂಗದ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತ್ವರಿತ ಗಡಿ ಮೂಲ ಸೌಕರ್ಯಗಳ ನವೀಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರಗಳು ಕಾರ್ಯತಂತ್ರದ ದೃಷ್ಟಿ ಹೊಂದಿರಲಿಲ್ಲ ಮತ್ತು ಅವುಗಳ ನವೀಕರಣಕ್ಕೆ ಮುಂದಾಗಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು. ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡುವಣ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ಕಾರಕೋರಂ ಪಾಸ್ ಬಳಿಯ ದೌಲತ್ ಬೇಗ್ ಓಲ್ಡಿ ಪೋಸ್ಟ್‌ನಲ್ಲಿ ೧೬,೮೦೦ ಅಡಿ ಎತ್ತರದ ಏರ್‌ಸ್ಟ್ರಿಪ್‌ನ ಉದಾಹರಣೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ೧೯೬೫ ರಿಂದ ೨೦೦೮ ರವರೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಿರ್ಮಾಣಗೊಂಡಿರದ ಏರ್ ಸ್ಟ್ರಿಪ್‌ನ್ನು ೨೦೦೮ ರಲ್ಲಿ ರಷ್ಯಾದ ಎಎನ್ -೩೨ ವಿಮಾನವನ್ನು ಬಳಸಿಕೊಂಡು ಭಾರತೀಯ ವಾಯುಪಡೆಯು (ಐಎಎಫ್) ಸುಧಾರಿತ ಲ್ಯಾಂಡಿಂಗ್ ಮೈದಾನವನ್ನು ಸಕ್ರಿಯಗೊಳಿಸಿತು ಮತ್ತು ಯೋಜನೆ ಪೂರ್ಣಗೊಂಡ ನಂತರ ಅಂದಿನ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರಕ್ಕೆ ತಿಳಿಸಿತು. ಡಿಬಿಒ-ಡೆಪ್ಸಾಂಗ್ ಬಲ್ಜ್ ಪ್ರದೇಶದಲ್ಲಿನ ಸೈನಿಕರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಪ್ರಮುಖವಾದ ಏರ್‌ಸ್ಟ್ರಿಪ್ ಅನ್ನು ಈಗ ಸಿ -೧೩೦ ಜೆ ಹರ್ಕ್ಯುಲಸ್ ವಿಮಾನವು ಬಳಸುತ್ತಿರುವುದು ಚೀನೀ ಕಮಾಂಡರ್‌ಗಳ ಕಣ್ಣು ಕೆಂಪಾಗಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ / ಮುಂಬೈ: ಕೊರೋನಾವೈರಸ್ ಪ್ರಸರಣ ತಡೆಗಾಗಿ ಲಾಕ್ ಡೌನ್ ಹೇರಿದ ಅವಧಿಯಲ್ಲಿ ಘೋಷಿಸಲಾಗಿದ್ದ ಇಎಂಐ ಮುಂದೂಡಿಕೆ ಕ್ರಮದ ಅಡಿಯಲ್ಲಿ, ಆಗಸ್ಟ್ ಅಂತ್ಯದವರೆಗಿನ ಆರು ತಿಂಗಳಗಳಲ್ಲಿ ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ 2020 ಅಕ್ಟೋಬರ್ 03ರ ಶನಿವಾರ ಹೇಳಿತು. ಆದರೆ ಇದು ಕೊರೋನವೈರಸ್ ವಿರೋಧೀ ಹೋರಾಟದಬದ್ಧತೆಗಳ ಮೇಲೆ ಒತ್ತಡದ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸಾಲದ ಬಡ್ಡಿಯ ಮೇಲಿನ ಬಡ್ಡಿ (ಚಕ್ರಬಡ್ಡಿ) ಮನ್ನಾ ಮಾಡುವುದಾಗಿ ನೀಡಿದ ಹೇಳಿಕೆಯನ್ನು ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ಚಿಲ್ಲರೆ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಗಳು ಸ್ವಾಗತಿಸಿದರು. ಬಡ್ಡಿಗೆ ಬಡ್ಡಿ ಪಾವತಿಸುವ ವೆಚ್ಚವನ್ನು ಭರಿಸುವ ಕ್ರಮವು ಸಾಂಕ್ರಾಮಿಕ ನಿರ್ವಹಣೆಗೆ ಸಂಬಂಧಿಸಿದ ನೇರ ವೆಚ್ಚಗಳನ್ನು ಪೂರೈಕೆ, ಜೀವನೋಪಾಯದ ನಷ್ಟದಿಂದ ಉಂಟಾಗುವ ಸಾಮಾನ್ಯ ಮನುಷ್ಯನ ಸಮಸ್ಯೆಗಳು ಹಾಗೂ ಸಾಮಾನ್ಯ ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಸೇರಿದಂತೆ ರಾಷ್ಟ್ರವು ಎದುರಿಸುತ್ತಿರುವ ಹಲವಾರು ಇತರ ಬದ್ಧತೆಗಳ ಮೇಲೆ ಸ್ವಾಭಾವಿಕವಾಗಿ ಪರಿಣಾಮ ಬೀರುತ್ತದೆ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಆಗ್ರಾ: ಹತ್ರಾಸ್‌ನಲ್ಲಿ ಸಂಭವಿಸಿದ ೧೯ರ ಹರೆಯದ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಸಾವು ಪ್ರಕರಣದ ಸಮಗ್ರ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ 2020 ಅಕ್ಟೋಬರ್ 03ರ ಶನಿವಾರ ರಾತ್ರಿ ಆದೇಶ ನೀಡಿದರು. ಇದೇ ವೇಳೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹತ್ರಾಸ್ ತಲುಪಿ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಇದಕ್ಕೆ ಮುನ್ನ, ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಾವನ್ನಪ್ಪಿದ ೧೯ ವರ್ಷದ ಸಂತ್ರಸ್ತ ಮಹಿಳೆಯ ಕುಟುಂಬ ಸದಸ್ಯರು ಎತ್ತಿರುವ ಎಲ್ಲ ವಿಷಯಗಳ ಬಗೆಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ಗಮನಿಸಲಿದೆ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ ಶನಿವಾರ ಹತ್ರಾಸ್‌ನಲ್ಲಿ ತಿಳಿಸಿದ್ದರು. ಗ್ರಾಮಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ಸಾರ್ವಜನಿಕ ಪ್ರತಿನಿಧಿಗಳು ಹಾಗೆ ಮಾಡಬಹುದು ಆದರೆ ಒಂದು ಸಮಯದಲ್ಲಿ ಕೇವಲ ಐದು ಮಂದಿ ಮಾತ್ರ ಭೇಟಿ ನೀಡಬಹುದು ಎಂದು ಅವರು ಸ್ಪಷ್ಟಪಡಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹತ್ರಾಸ್ ಭೇಟಿ ರಾಜಕೀಯ ಪ್ರೇರಿತ. ಸಂತ್ರಸ್ತೆಯ ಕುಟುಂಬದವರಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ಕೂಡಿದ್ದಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ 2020 ಅಕ್ಟೋಬರ್ 03ರ ಶನಿವಾರ ಟೀಕಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ಸಿನ ತಂತ್ರಗಳ ಬಗ್ಗೆ ಜನರಿಗೆ ತಿಳಿದಿದೆ. ಅದಕ್ಕಾಗಿಯೇ ೨೦೧೯ರಲ್ಲಿ ಬಿಜೆಪಿಗೆ ಐತಿಹಾಸಿಕ ಜಯ ಒದಗಿಸಿಕೊಟ್ಟಿದ್ದಾರೆ. ಅವರು (ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ) ಹತ್ರಾಸ್‌ಗೆ ಭೇಟಿ ನೀಡಿರುವುದು ರಾಜಕೀಯಕ್ಕಾಗಿ ವಿನಃ ಸಂತ್ರಸ್ತೆಗೆ ನ್ಯಾಯ ಒದಗಿಸುವುದಕ್ಕಲ್ಲ ಎಂದು ನುಡಿದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಗುರುವಾರ ಹತ್ರಾಸ್‌ಗೆ ತೆರಳಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ಮುಂದಾಗಿದ್ದರು. ಅವರನ್ನು ಉತ್ತರ ಪ್ರದೇಶ ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆದಿದ್ದರು. ರಾಹುಲ್, ಪ್ರಿಯಾಂಕಾ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭ ಸಾರ್ವಜನಿಕರ ಓಡಾಟದ ಮೇಲಿನ ನಿರ್ಬಂಧ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸಾವಿನ ಸಂಖ್ಯೆ ಲಕ್ಷವನ್ನು ದಾಟಿದೆ. ಆದರೆ ಚೇತರಿಕೆ ಪ್ರಮಾಣ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು 2020 ಅಕ್ಟೋಬರ್ 03ರ ಶನಿವಾರ ತಿಳಿಸಿದವು. ಭಾರತವು ಶೇಕಡಾ ೧೮.೬ರಷ್ಟು ಜಾಗತಿಕ ಕೊರೋನವೈರಸ್ ಪ್ರಕರಣಗಳನ್ನು ಹೊಂದಿದೆ. ಆದರೆ ವಿಶ್ವದ ಚೇತರಿಕೆ ಪ್ರಮಾಣದಲ್ಲಿ ಶೇಕಡಾ ೨೧ರಷ್ಟು ಪಾಲು ಭಾರತದ್ದು ಎಂದು ಅದು ಹೇಳಿದೆ. ಜಾಗತಿಕವಾಗಿ ಕೊರೊನಾವೈರಸ್ ಕಾಯಿಲೆಯ (ಕೋವಿಡ್ -೧೯) ಎರಡನೇ ಅತಿಹೆಚ್ಚು ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. ಕೋವಿಡ್-೧೯ರಿಂದ ಅತಿಯಾಗಿ ಬಾಧಿಸಿರುವ ರಾಷ್ಟ್ರಗಳ ಪೈಕಿ ಭಾರತವು ಅಮೆರಿಕದ ಬಳಿಕ ಎರಡನೇ ಸ್ಥಾನದಲ್ಲಿದೆ. ಆದರೆ, ಭಾರತವು ಸೋಂಕಿನಿಂದ ಹೆಚ್ಚಿನ ಸಂಖ್ಯೆಯ ಚೇತರಿಕೆಗಳನ್ನು ದಾಖಲಿಸುತ್ತಿದೆ. ವಿಶ್ವಾದ್ಯಂತ ವರದಿಯಾದ ಎಲ್ಲಾ ಚೇತರಿಕೆಯ ಪ್ರಮಾಣದ ಶೇಕಡಾ ೨೧ರಷ್ಟು ಪಾಲು ಭಾರತದ್ದಾಗಿದೆ. ವಿಶ್ವದ ಒಟ್ಟು ಸೋಂಕು ಪ್ರಕರಣಗಳ ಶೇಕಡಾ ೧೮. ಪ್ರಕರಣಗಳು ಭಾರತದಲ್ಲಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 03 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment