ನಾನು ಮೆಚ್ಚಿದ ವಾಟ್ಸಪ್

Monday, October 5, 2020

ಇಂದಿನ ಇತಿಹಾಸ History Today ಅಕ್ಟೋಬರ್ 05

 ಇಂದಿನ ಇತಿಹಾಸ  History Today ಅಕ್ಟೋಬರ್ 05

2020: ಸ್ಟಾಕ್ ಹೋಮ್: ಹೆಪಟೈಟಿಸ್ ಸಿ ವೈರಸ್ ಪತ್ತೆ ಮಾಡಿದ್ದಕ್ಕಾಗಿ ಅಮೆರಿಕದ ಹಾರ್ವೆ ಜೆ.ಆಲ್ಟರ್, ಚಾರ್ಲ್ಸ್ ಎಂ.ರೈಸ್ ಮತ್ತು ಬ್ರಿಟನ್ನಿನ ಮೈಕೆಲ್ ಹೌಟನ್ ಹಾಗೂ ಅವರಿಗೆ ಜಂಟಿಯಾಗಿ ಪ್ರಸಕ್ತ ಸಾಲಿನ ವೈದ್ಯಕೀಯ ಅಥವಾ ಶರೀರಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು 2020 ಅಕ್ಟೋಬರ್ 05 ಸೋಮವಾರ ಘೋಷಿಸಲಾಯಿತು. ಇತಿಹಾಸದಲ್ಲಿ ಮೊದಲ ಬಾರಿಗೆ ಹೆಪಟೈಟಿಸ್ ಸಿ ವೈರಸ್ ಶಮನಗೊಳಿಸುವುದು ವಿಜ್ಞಾನಿಗಳ ಸಂಶೋಧನೆಗಳಿಂದ ಸಾಧ್ಯವಾಯಿತು. ಹೆಪಟೈಟಿಸ್ ಮತ್ತು ಬಿ ಸಂಶೋಧನೆಗಳ ನಂತರವೂ ದೀರ್ಘಕಾಲದವರೆಗೂ ಕಾಡುವ ಯಕೃತಿನ ಸಮಸ್ಯೆಗೆ ಪೂರ್ಣ ಪರಿಹಾರ ದೊರೆತಿರಲಿಲ್ಲ. ಹೆಪಟೈಟಿಸ್ ಸಿ ವೈರಸ್ ಕುರಿತು ಪತ್ತೆಯಾದ ನಂತರದಲ್ಲಿ ಅದಕ್ಕೆ ಅಗತ್ಯವಿರುವ ರಕ್ತ ಪರೀಕ್ಷೆಗಳು ಹಾಗೂ ಹೊಸ ಔಷಧಗಳ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಜನರ ಜೀವ ಉಳಿದಿದೆ ಎಂದು ನೊಬೆಲ್ ಸಮಿತಿಯ ಮುಖ್ಯಸ್ಥ ಥಾಮಸ್ ಪರ್ಲ್ಮನ್ ಹೇಳಿಕೆ ತಿಳಿಸಿತು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ  ಸುಮಾರು ಕೋಟಿ ಹೆಪಟೈಟಿಸ್ ಪ್ರಕರಣಗಳಿದ್ದು, ಪ್ರತಿ ವರ್ಷ ಹೆಪಟೈಟಿಸ್ ವೈರಸ್ನಿಂದಾಗಿ ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ದೀರ್ಘಾವಧಿವರೆಗೂ ಕಾಡುವ ಹೆಪಟೈಟಿಸ್ ಕಾಯಿಲೆಯು ಕ್ಯಾನ್ಸರ್ ಮತ್ತು ಯಕೃತ್ತಿನ ಸಮಸ್ಯೆ ಉಂಟು ಮಾಡುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಚೀನಾ ಮತ್ತು ಪಾಕಿಸ್ತಾನ ಎರಡೂ ಕಡೆಯಿಂದ ನಡೆಯಬಹುದಾದ ದ್ವಿಮುಖ ಹೋರಾಟ ಸೇರಿದಂತೆ ಸೇರಿದಂತೆ ಯಾವುದೇ ಸಂಘರ್ಷಕ್ಕೆ ಭಾರತ ಸಿದ್ಧವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅವರು 2020 ಅಕ್ಟೋಬರ್ 05 ಸೋಮವಾರ ಹೇಳಿದರು. "ನಾವು ಪೂರ್ವ ಲಡಾಖ್ನಲ್ಲಿ ನಮ್ಮ ಪಡೆಗಳನ್ನು ಬಲವಾಗಿ ನಿಯೋಜಿಸಿದ್ದೇವೆ. ಪೂರ್ವ ಲಡಾಖ್ನಲ್ಲಿ ಚೀನಾದ ಯಾವುದೇ ಬೆದರಿಕೆ ಎದುರಿಸಲು ಸಿದ್ಧರಿದ್ದೇವೆ ಎಂದು ಅಕ್ಟೋಬರ್ ರಂದು ನಡೆಯಲಿರುವ ವಾಯುಪಡೆ ದಿನಾಚರಣೆಯ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಭದೌರಿಯಾ ನುಡಿದರು. ಭಾರತೀಯ ವಾಯುಪಡೆಯು ತ್ವರಿತಗತಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ ಎಂದು ಅವರು ಪ್ರತಿಪಾದಿಸಿದರು. "ದೇಶವು ಎದುರಿಸುತ್ತಿರುವ ಬೆದರಿಕೆಯ ವ್ಯೂಹವು ಸಂಕೀರ್ಣವಾಗಿದೆ ಎಂದು ಅವರು ಹೇಳಿದರು, "ಉದಯೋನ್ಮುಖ ಬೆದರಿಕೆಗಳು ಭಾರತೀಯ ವಾಯುಪಡೆಯ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ನಮಗೆ ಆದೇಶ ನೀಡುತ್ತವೆ. ಭಾರತವು ಚೀನಾ ವಿರುದ್ಧದ ವೈಮಾನಿಕ ದಾಳಿಯ ಸಮೀಪಕ್ಕೆ ಬಂದಿಲ್ಲವಾದರೂ, ಅದಕ್ಕಾಗಿ ಸನ್ನದ್ಧವಾಗಿಯೇ ಇದೆ ಎಂದು ಅವರು ಹೇಳಿದರು. ರಫೇಲ್ ಜೆಟ್Uಳು ನಮಗೆ ಕಾರ್ಯಾಚರಣೆಗೆ ಭೀಮಬಲ ನೀಡಿವೆ ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ತಡೆಯಲು ವಿಧಿಸಲಾದ ರಾಷ್ಟ್ರವ್ಯಾಪಿ ದಿಗ್ಬಂಧನ ಅವಧಿಯಲ್ಲಿ ಘೋಷಿಸಲಾದ ಬ್ಯಾಂಕ್ ಸಾಲ ಕಂತು ಮರುಪಾವತಿ ಮುಂದೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಕೇಂದ್ರ ಸರ್ಕಾರಕ್ಕೆ 2020 ಅಕ್ಟೋಬರ್ 05 ಸೋಮವಾರ ಕಾಲಾವಕಾಶ ನೀಡಿದ ಸುಪ್ರೀಂಕೋಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ ೧೩ಕ್ಕೆ ಮುಂದೂಡಿತು. ವಿವಿಧ ಕ್ಷೇತ್ರಗಳ ಮೇಲಿನ ಕೋವಿಡ್-೧೯ ಸಂಬಂಧಿತ ಒತ್ತಡದ ಹಿನ್ನೆಲೆಯಲ್ಲಿ ಸಾಲ ಪುನರ್ರಚನೆ ಕುರಿತು ಕೆ.ವಿ. ಕಾಮತ್ ಸಮಿತಿಯು ಸಲ್ಲಿಸಿದ ಶಿಫಾರಸನ್ನು ನ್ಯಾಯಾಲಯದಲ್ಲಿ ದಾಖಲಿಸುವಂತೆ ಕೂಡಾ ಕೇಂದ್ರ ಮತ್ತು ಆರ್ ಬಿಐಗೆ ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವ ಪೀಠ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ ನಿರ್ದೇಶಿಸಿತು. ಸಾಲ ನಿಷೇಧದ ತಿಂಗಳ ಅವಧಿಯ ಬಡ್ಡಿ ಮನ್ನಾ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು. ನ್ಯಾಯಮೂರ್ತಿಗಳಾದ ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಕೂಡ ಪೀಠದ ಸದಸ್ಯರಾಗಿದ್ದಾರೆ. ಆರು ತಿಂಗಳ ನಿಷೇಧದ ಅವಧಿಯಲ್ಲಿ ಕೋಟಿ ರೂ.ಗಳವರೆಗೆ ಸಾಲಕ್ಕೆ ವಿಧಿಸಲಾಗುವ ಚಕ್ರಬಡ್ಡಿಯನ್ನು (ಬಡ್ಡಿಯ ಮೇಲಿನ ಬಡ್ಡಿ) ಮನ್ನಾ ಮಾಡಲು ಒಪ್ಪಿಗೆ ನೀಡುವ ಮೂಲಕ ವೈಯಕ್ತಿಕ ಸಾಲಗಾರರಿಗೆ ಮತ್ತು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪರಿಹಾರ ನೀಡಲು ಹಣಕಾಸು ಸಚಿವಾಲಯ ನಿರ್ಧರಿಸಿದ ನಂತರ ಸುಪ್ರೀಂ ಕೋರ್ಟ್ ನಿರ್ದೇಶನ ಬಂದಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತವು ಸೆಪ್ಟೆಂಬರ್ನಲ್ಲಿ ಕೋವಿಡ್ -೧೯ ಶಿಖರವನ್ನು ದಾಟಿದೆ ಎಂದು ಕೊರೋನಾವೈರಸ್ ಪ್ರಸರಣದ ಅಂಕಿಸಂಖ್ಯೆ ಮಾಹಿತಿಯನ್ನು ವಿಶ್ಲೇಷಿಸಿದ ಬಳಿಕ ಹಣಕಾಸು ಸಚಿವಾಲಯ 2020 ಅಕ್ಟೋಬರ್ 05 ಸೋಮವಾರ ತಿಳಿಸಿತು. ಕಳೆದ ಒಂದು ವಾರದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಸೆಪ್ಟೆಂಬರ್ನಲ್ಲಿ ಭಾರತ ತನ್ನ ಕೋವಿಡ್ -೧೯ ಗರಿಷ್ಠ ಮಟ್ಟವನ್ನು ದಾಟಿರುವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವಾಲಯ ಹೇಳಿತು. ಆದಾಗ್ಯೂ, ಸಾಂಕ್ರಾಮಿಕ ರೋಗವು ಅಂತ್ಯಗೊಂಡಿಲ್ಲ ಎಂದು ಸಚಿವಾಲಯ ಎಚ್ಚರಿಸಿತು. "ಅಖಿಲ ಭಾರತ ಮಟ್ಟದಲ್ಲಿ ಕ್ಷೀಣಿಸುತ್ತಿರುವ ಸೋಂಕು ದೃಢೀಕರಣದ ಪ್ರಮಾಣವು ಆರ್ಥಿಕ ಚೇತರಿಕೆಯ ಅಂಚುಗಳನ್ನು ಮತ್ತಷ್ಟು ಹೆಚ್ಚಿಸಲು ವೇದಿಕೆ ಕಲ್ಪಿಸುತ್ತದೆ. ಸಂಪರ್ಕ ಮತ್ತು ಚಲನಶೀಲತೆಯ ಮೇಲಿನ ನಿರ್ಬಂಧಗಳನ್ನು ಕಡಿಮೆಗೊಳಿಸಿರುವುದರಿಂದ ಎಲ್ಲ ಪಾಲುದಾರರೂ ಸಕ್ರಿಯರಾಗುವ ಮೂಲಕ ಆರ್ಥಿಕ ಚಟುವಟಿಕೆಗೆ ವೇಗ ನೀಡಬೇಕು ಎಂದು ಹಣಕಾಸು ಸಚಿವಾಲಯ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾನುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರು 2020 ಅಕ್ಟೋಬರ್ 05 ಸೋಮವಾರ ಹುತಾತ್ಮರಾದರು.  ದಾಳಿಯಲ್ಲಿ ಗಾಯಗೊಂಡಿದ್ದ ಐವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಿಬ್ಬಂದಿಯ ಪೈಕಿ ಇಬ್ಬರು ತೀವ್ರ ಗಾಯಗಳ ಪರಿಣಾಮವಾಗಿ ಕೊನೆಯುಸಿರು ಎಳೆದಿದ್ದಾರೆ ಅಧಿಕಾರಿಗಳು ತಿಳಿಸಿದರು. ಭಾನುವಾರ ಶ್ರೀನಗರ ಬಳಿಯ ಪಾಂಪೋರ್ ಬೈಪಾಸ್ನಲ್ಲಿ ಬೆಟಾಲಿಯನ್ ರಸ್ತೆ ತೆರೆಯುವ ತಂಡದ (ಆರ್ಒಪಿ) ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರಿಂದ ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಗಾಯಗೊಂಡ ಸಿಆರ್ಪಿಎಫ್ ಸಿಬ್ಬಂದಿಯನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಹೈದರಾಬಾದ್: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು 2020 ಅಕ್ಟೋಬರ್ 06ರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸಜ್ಜಾಗಿದ್ದು, ಆಂಧ್ರಪ್ರದೇಶದ ಪಕ್ಷವು ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟವನ್ನು ಸೇರಬಹುದು ಎಂಬ ಊಹಾಪೋಹವನ್ನು ಹುಟ್ಟುಹಾಕಿದೆ. ಕಳೆದ ವಾರವಷ್ಟೇ, ಎನ್ಡಿಎಯ ಹಳೆಯ ಮಿತ್ರ ಶಿರೋಮಣಿ ಅಕಾಲಿ ದಳ, ವಿವಾದಾತ್ಮಕ ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ಮೈತ್ರಿಕೂಟದಿಂದ ಹೊರಬಂದಿತ್ತು. ಕಳೆದ ವರ್ಷ, ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನದ ವಿವಾದದ ಹಿನ್ನೆಲೆಯಲ್ಲಿ ಶಿವಸೇನೆ ಮೈತ್ರಿಕೂಟವನ್ನು ತ್ಯಜಿಸಿತ್ತು. ಜಗನ್ ರೆಡ್ಡಿ ಅವರು ವೈಎಸ್ಆರ್ ಕಾಂಗ್ರೆಸ್ ಎನ್ಡಿಎಗೆ ಸಂಜೆ ನವದೆಹಲಿಗೆ ತೆರಳಿದ್ದು, ಮಂಗಳವಾರ ಬೆಳಿಗ್ಗೆ ೧೦.೩೦ ಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. "ಪ್ರಧಾನಿಯವರು ವೈಎಸ್ಆರ್ಸಿಪಿಯನ್ನು ಎನ್ಡಿಎಗೆ ಆಹ್ವಾನಿಸುವ ಸಾಧ್ಯತೆಯಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದರು. ಕಳೆದ ಎರಡು ವಾರಗಳಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯ ಎರಡನೇ ಭೇಟಿ ಇದು. ಸೆ.೨೨ರಂದು ಅವರು ದೆಹಲಿಗೆ ಎರಡು ದಿನಗಳ ಭೇಟಿ ನೀಡಿ, ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ಮಾತನಾಡಿದ್ದರು. ಮಾತುಕತೆ ಪಕ್ಷವನ್ನು ಎನ್ ಡಿಎಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದ್ದಾಗಿತ್ತು ಎಂಬ ಊಹಾಪೋಹಗಳಿದ್ದವು. ಆದರೆ, ಆಗ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಲಭಿಸಿರಲಿಲ್ಲ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಸಂಗ್ರಹಿಸಿರುವ ೨೦,೦೦೦ ಕೋಟಿ ರೂಪಾಯಿಗಳ ಪರಿಹಾರ ಸೆಸ್ನ್ನು ಇದೇದಿನ ರಾತ್ರಿ ಎಲ್ಲ ರಾಜ್ಯಗಳಿಗೆ ವಿತರಿಸಲಾಗುವುದು ಎಂಬುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಅಕ್ಟೋಬರ್ 05ರ ಸೋಮವಾರ ಪ್ರಕಟಿಸಿದರು. ಜಿಎಸ್ಟಿ ಸೆಸ್ ಕೊರತೆ ವಿಚಾರದಲ್ಲಿ ರಾಜ್ಯಗಳಿಗೆ ಪರಿಹಾರ ಒದಗಿಸುವ ಬಗ್ಗೆ ಅಕ್ಟೋಬರ್ ೧೨ರಂದು ಜಿಎಸ್ಟಿ ಮಂಡಳಿ ಇನ್ನೊಮ್ಮೆ ಸಭೆ ಸೇರಲಿದೆ. ಹಿಂದೆ ಕಡಿಮೆ ಐಜಿಎಸ್ಟಿ ಪಡೆದ ರಾಜ್ಯಗಳಿಗೆ ಮುಂದಿನ ವಾರದ ಅಂತ್ಯದ ಒಳಗಾಗಿ ೨೪,೦೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲೂ ಮಂಡಳಿ ನಿರ್ಧರಿಸಿತು. ವರ್ಷ ಇಲ್ಲಿಯವರೆಗೆ ಸಂಗ್ರಹಿಸಿದ ಪರಿಹಾರ ಸೆಸ್, ಅಂದಾಜು ೨೦,೦೦೦ ಕೋಟಿ ರೂಪಾಯಿಗಳು. ಅದನ್ನು ಇಂದು ರಾತ್ರಿ ಎಲ್ಲಾ ರಾಜ್ಯಗಳಿಗೆ ವಿತರಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ ಸಭೆಯ ಬಳಿಕ ಪ್ರಕಟಿಸಿದರು. ಜಿಎಸ್ಟಿ ಮಂಡಳಿಯು ಸಮಗ್ರ ಸರಕು ಮತ್ತು ಸೇವಾ ತೆರಿಗೆಯ ದೀರ್ಘಾವಧಿಯ ಸಮಸ್ಯೆಯನ್ನು ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದರು. ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ೪೨ ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕೌನ್ಸಿಲ್ ಸಭೆಯಲ್ಲಿ ಸೆಸ್ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 05 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment