ನಾನು ಮೆಚ್ಚಿದ ವಾಟ್ಸಪ್

Saturday, October 17, 2020

ಇಂದಿನ ಇತಿಹಾಸ History Today ಅಕ್ಟೋಬರ್ 17

 ಇಂದಿನ ಇತಿಹಾಸ  History Today ಅಕ್ಟೋಬರ್ 17

2020: ನವದೆಹಲಿ: ರಷ್ಯಾದ ಸ್ಪುಟ್ನಿಕ್ - ವಿ ಕೋವಿಡ್-೧೯ ಲಸಿಕೆಯ ಮಾನವ ಪರೀಕ್ಷೆಗೆ ಮೊದಲು ಸಲ್ಲಿಸಿದ್ದ ಪ್ರಸ್ತಾವವನ್ನು ತಳ್ಳಿ ಹಾಕಿದ್ದ ಭಾರತದ ಔಷಧ ಮಹಾ ನಿಯಂತ್ರಕರು (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ-ಡಿಸಿಜಿಐ) ಅಂತಿಮವಾಗಿ ಡಾ. ರೆಡ್ಡಿ ಅವರ ಹಂತ /೩ರ ಕ್ಲಿನಿಕಲ್ ಮಾನವ ಪರೀಕ್ಷೆಗೆ ಒಪ್ಪಿಗೆ ನೀಡಿದೆ. ಸ್ಪುಟ್ನಿಕ್ ವಿ, ಕೋವಿಡ್ -೧೯ ಲಸಿಕೆಯು ರಷ್ಯಾವು ಮಾನವರ ಮೇಲೆ ಪರೀಕ್ಷಾರ್ಥ ಪ್ರಯೋಗಕ್ಕೆ ಅನುಮತಿ ನೀಡಿದ ಚೊಚ್ಚಲ ಕೊರೋನಾವೈರಸ್ ಲಸಿಕೆಯಾಗಿದೆ. "ಇದು ಬಹು-ಕೇಂದ್ರ ಮತ್ತು ಯಾದೃಚ್ಛಿಕ ನಿಯಂತ್ರಿತ ಅಧ್ಯಯನವಾಗಿದ್ದು, ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಅಧ್ಯಯನವನ್ನು ಒಳಗೊಂಡಿರುತ್ತದೆ" ಎಂದು ಡಾ. ರೆಡ್ಡಿ ಮತ್ತು ರಷ್ಯನ್ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) 2020 ಅಕ್ಟೋಬರ್ 17ರ ಶನಿವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆ ತಿಳಿಸಿದೆ. ಚುಚ್ಚುಮದ್ದಾಗಿ ನೋಂದಾಯಿಸಿಕೊಳ್ಳುವ ಮೊದಲು ಸ್ಪುಟ್ನಿಕ್- ವಿ ಲಸಿಕೆಯನ್ನು ರಷ್ಯಾದಲ್ಲಿ ಅಲ್ಪ ಸಂಖ್ಯೆಯ ಜನರ ಮೇಲೆ ಪರೀಕ್ಷೆ ನಡೆಸಿರುವುದರಿಂದ ಭಾರತದಲ್ಲಿ ದೊಡ್ಡ ಸಂಖ್ಯೆಯ ಜನರ ಮೇಲೆ ಪರೀಕ್ಷಿಸುವ ಡಾ. ರೆಡ್ಡಿ ಪ್ರಯೋಗಾಲಯದ ಪ್ರಾಥಮಿಕ ಪ್ರಸ್ತಾವವನ್ನು ಡಿಸಿಜಿಐ ಪ್ರಶ್ನಿಸಿ ಅವಕಾಶ ನಿರಾಕರಿಸಿತ್ತು. ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಸ್ತುತ ನೋಂದಣಿ ಮಾಡಿಕೊಂಡಿರುವ ೪೦,೦೦೦ ಮಂದಿಯ ಮೇಲೆ ಕ್ಲಿನಿಕಲ್ ಪರೀಕ್ಷಾ ಹಂತ ೩ಕ್ಕೆ ಒಳಪಡಿಸಲಾಗುತ್ತಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ವೆಲ್ಲಿಂಗ್ಟನ್: ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಅವರು ನ್ಯೂಜಿಲೆಂಡ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿ ಎರಡನೇ ಅವಧಿಗೆ ಪುನರಾಯ್ಕೆಯಾದರು. ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಮತ್ತು ಸಾಮಾಜಿಕ ಅಸಮಾನತೆಯನ್ನು ನಿಭಾಯಿಸಲು ಜನಾದೇಶವನ್ನು ಬಳಸಿಕೊಳ್ಳುವುದಾಗಿ ಅರ್ಡೆನ್ 2020 ಅಕ್ಟೋಬರ್ 17ರ ಶನಿವಾರ  ಹೇಳಿದರು. "ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚಿನ ಕೆಲಸಗಳಿವೆ" ಎಂದು ಅವರು ಆಕ್ಲೆಂಡ್‌ನಲ್ಲಿ ಬೆಂಬಲಿಗರಿಗೆ ತಿಳಿಸಿದರು. "ನಾವು ಕೋವಿಡ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸುತ್ತೇವೆ ಮತ್ತು ಚೇತರಿಕೆಯನ್ನು ತ್ವರಿತಗೊಳಿಸಲು ಮತದಾರರು ನಮಗೆ ಆದೇಶ ನೀಡಿದ್ದಾರೆ ಎಂದು ಅವರು ನುಡಿದರು. ಶೇಕಡಾ ೮೭ರಷ್ಟು ಮತಗಳ ಎಣಿಕೆಯ ವೇಳೆಗೆ ಅರ್ಡೆರ್ನ್ ಅವರ ಲೇಬರ್ ಪಕ್ಷವು ಶೇಕಡಾ ೪೯ರಷ್ಟು ಬೆಂಬಲವನ್ನು ಪಡೆದಿತ್ತು. ೧೯೩೦ರ ನಂತರ ಪಕ್ಷವು ಇದೇ ಮೊದಲ ಬಾರಿಗೆ ಅತಿದೊಡ್ಡ ಗೆಲುವಿನತ್ತ ಸಾಗಿದೆ. ಅನೇಕ ನಗರ ಮತ್ತು ಪ್ರಾಂತೀಯ ಮತದಾರರಲ್ಲಿ ಎಡಪಕ್ಷದತ್ತ ಜನರಿಂದ ಭಾರಿ ಪ್ರಮಾಣದ ಒಲವು ವ್ಯಕ್ತವಾಗುವುದರೊಂದಿಗೆ ವಿರೋಧಿ ನ್ಯಾಷನಲ್ ಪಾರ್ಟಿಯ ಬೆಂಬಲ ಶೇಕಡಾ ೨೭ಕ್ಕೆ ಕುಸಿಯಿತು. ಇದು ೨೦೦೨ರ ಬಳಿಕ ಪಕ್ಷದ ಅತ್ಯಂತ ಕಳಪೆ ಸಾಧನೆಯಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಲಡಾಖ್ ಬಿಕ್ಕಟ್ಟನ್ನು ಬಗೆ ಹರಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಭಾರತ-ಚೀನಾ ನಡುವಣ ಸೇನೆ ಹಾಗೂ ರಾಜತಾಂತ್ರಿಕ ಮಾತುಕತೆಗಳು ಅತ್ಯಂತ ರಹಸ್ಯವಾಗಿದ್ದರೂ, ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್‌ಎ) ಸೇನಾ ವಾಪಸಾತಿಯ ಭಾರತದ ಪ್ರಸ್ತಾವಕ್ಕೆ ಪ್ರತಿಯಾಗಿ ಉದ್ವಿಗ್ನತೆ ಶಮನದ ಬಳಿಕ ಸೇನೆ ವಾಪಸಾತಿಯ ಪ್ರತಿಪಟ್ಟು ಹಾಕಿದೆ ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 17ರ ಶನಿವಾರ  ತಿಳಿಸಿವೆ. ಏನಾದರೂ ಅನಾಹುತ ಸಂಭವಿಸದಂತೆ ತಪ್ಪಿಸಲು ಟ್ಯಾಂಕ್ ಮತ್ತು ಫಿರಂಗಿಗಳನ್ನು ಪರಸ್ಪರರ ಸಮ್ಮತಿಯೊಂದಿಗೆ ಒಟ್ಟಿಗೆ ಹಿಂತೆಗೆದುಕೊಳ್ಳಬೇಕು ಎಂಬ ಪ್ರಸ್ತಾಪವನ್ನೂ ಚೀನಾ ಮುಂದಿಟ್ಟಿದೆ ಎನ್ನಲಾಗಿದೆ. ಹಂತಹಂತವಾಗಿ ಸೇನಾ ವಾಪಸಾತಿ, ಪರಿಶೀಲನೆ ಪ್ರಕ್ರಿಯೆ ಮತ್ತು ಬಳಿಕ ಉದ್ವಿಗ್ನತೆ ಶಮನದ ಮಾರ್ಗದ ಮೂಲಕ ಪಡೆಗಳ ಸಮಗ್ರ ವಾಪಸಾತಿ ಕ್ರಮ ಅನುಸರಿಸಬೇಕು ಎಂದು ಭಾರತ ಹೇಳಿದೆ. ವಾಪಸಾತಿಯು ಲಡಾಖ್‌ನ ೧೫೯೭ ಕಿಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯುದ್ಧಕ್ಕೂ ಸೇನೆಗಳು ೨೦೨೦ರ ಏಪ್ರಿಲ್ ಪೂರ್ವ ಸ್ಥಿತಿಗೆ ಹೋಗಬೇಕು ಎಂಬ ಸೂತ್ರವನ್ನು ಒಳಗೊಂಡಿರಬೇಕು ಎಂದು ಭಾರತ ಪ್ರತಿಪಾದಿಸಿದೆ. ಒಮ್ಮೆ ಇದು ಆಗುತ್ತಿದ್ದಂತೆಯೇ ಉದ್ವಿಗ್ನತೆ ಶಮನಗೊಳ್ಳುತ್ತದೆ ಎಂದು ಭಾರತ ಹೇಳಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನವೈರಸ್ ಲಸಿಕೆ ವಿತರಣೆ ಮತ್ತು ವಿತರಣೆಯ ವ್ಯವಸ್ಥೆಗಳನ್ನು ಪರಿಶೀಲಿಸಲು 2020 ಅಕ್ಟೋಬರ್ 17ರ ಶನಿವಾರ ನಡೆದ ಸಭೆಯ ಅಧ್ಯಕ್ಷತೆ  ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಲಭ್ಯವಾದಾಗ ಜನಸಮುದಾಯದ ಎಲ್ಲ ಸದಸ್ಯರಿಗೂ ತ್ವರಿತವಾಗಿ ವಿತರಣೆ ಸಾಧ್ಯವಾಗುವಂತಹ ವ್ಯವಸ್ಥೆಯನ್ನು ರೂಪಿಸಲು ಸಲಹೆ ಮಾಡಿದರು. ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡುವಾಗ ದೇಶದ ಭೌಗೋಳಿಕ ವ್ಯಾಪ್ತಿ ಮತ್ತು ವೈವಿಧ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಸಾಗಣೆಗೆ ವ್ಯವಸ್ಥೆ ಮಾಡುವಂತೆ ಪ್ರಧಾನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸರ್ಕಾರದ ಹೇಳಿಕೆಯ ಪ್ರಕಾರ, ಲಸಿಕೆ ಸಂಗ್ರಹ ಮತ್ತು ವಿತರಣೆ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ಕಟ್ಟುನಿಟ್ಟಾಗಿ ಪರೀಕ್ಷಿಸಬೇಕು ಎಂದು ಪ್ರಧಾನಿ ಸೂಚಿಸಿದರು. ಲಸಿಕೆ ಪ್ರಮಾಣವನ್ನು ಶೈತ್ಯಾಗಾರದಲ್ಲಿ ಇಡುವ ಯೋಜನೆ, ಸಿರಿಂಜ್ ವ್ಯವಸ್ಥೆ, ಲಸಿಕೆ ನೀಡುವ ಚಿಕಿತ್ಸಾಲಯಗಳ ಮೇಲ್ವಿಚಾರಣೆ ಮಾಡುವ ಕಾರ್‍ಯ ವಿಧಾನಗಳು ಮತ್ತು ಪೂರಕ ಉಪಕರಣಗಳ ತಯಾರಿಕೆ ಮತ್ತು ದಾಸ್ತಾನು ಮಾಡುವಿಕೆ ಸಮಗ್ರ ಯೋಜನೆಯಲ್ಲಿ ಒಳಗೊಂಡಿರಬೇಕು ಎಂದು ಪ್ರಧಾನಿ ಹೇಳಿದರು. ಕೋವಿಡ್ ಲಸಿಕೆಯ ಶೇಖರಣೆ, ವಿತರಣೆ ಮತ್ತು ನಿರ್ವಹಣೆಗಾಗಿ ವಿವರವಾದ ನೀಲನಕ್ಷೆಯನ್ನು ಸಿದ್ಧಪಡಿಸಲು ಕೋವಿಡ್-೧೯ ಸಲುವಾಗಿ ರಾಷ್ಟ್ರೀಯ ತಜ್ಞರ ಗುಂಪು (ಎನ್‌ಇಜಿವಿಎಸಿ) ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲ ಸಂಬಂಧಿತ ಪಾಲುದರರೊಂದಿಗೆ ಸಮಾಲೋಚಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಸರ್ಕಾರ ತಿಳಿಸಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಪಾಟ್ನಾ: ಬಿಹಾರ ವಿಧಾನಸಭೆಯ ೭೧ ಸ್ಥಾನಗಳಿಗೆ ಅಕ್ಟೋಬರ್ ೨೮ ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಕೇವಲ ೧೦ ದಿನಗಳು ಬಾಕಿ ಇರುವಾಗ, ಎಲ್‌ಜೆಪಿ ತಮ್ಮ ಮೈತ್ರಿಕೂಟದ ಭಾಗವಲ್ಲ ಎಂಬ ಮತದಾರರಲ್ಲಿ ಅನುಮಾನಗಳನ್ನು ಹೋಗಲಾಡಿಸಲು ಬಿಜೆಪಿಯು 2020 ಅಕ್ಟೋಬರ್ 17ರ ಶನಿವಾರ ಮತ್ತೊಮ್ಮೆ ಸ್ಪಷ್ಟೀಕರಣವನ್ನು ನೀಡಿದೆ. ಬಿಜೆಪಿ ತನ್ನ ನಿಲುವಿನಲ್ಲಿ ಬಹಳ ಸ್ಪಷ್ಟವಾಗಿದೆ. ಎಲ್‌ಜೆಪಿ ನಮ್ಮ ಮೈತ್ರಿಯ ಭಾಗವಲ್ಲ. ಚಿರಾಗ್ ಪಾಸ್ವಾನ್ ಅವರು ಯಾವುದೇ ಭ್ರಮೆಯನ್ನು ಇಟ್ಟುಕೊಳ್ಳಬಾರದು ಎಂದು ನಾವು ಹೇಳಲು ಬಯಸುತ್ತೇವೆ. ಬಿಜೆಪಿ-ಜೆಡಿಯು ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುತ್ತಿವೆ ಮತ್ತು ನಿತೀಶ್ ಕುಮಾರ್ ಜಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಹಾರ ಬಿಜೆಪಿ ಉಸ್ತುವಾರಿ ಭೂಪೇಂದರ್ ಯಾದವ್ ಶನಿವಾರ ಹೇಳಿದರು. ನಾನು ಪ್ರಧಾನಿ ನರೇಂದ್ರ ಮೋದಿಯವರ ಹನುಮಂತ ಮತ್ತು ಬಿಜೆಪಿಯ ಹಿರಿಯ ನಾಯಕನೊಂದಿಗಿನ ನನ್ನ ಸಂಬಂಧವು ಕೇಂದ್ರ ಮತ್ತು ಬಿಹಾರದಲ್ಲಿನ ಆಡಳಿತ ಪಕ್ಷದ ಇತರ ನಾಯಕರ ಹೇಳಿಕೆUಳಿಂದ ಪ್ರಭಾವಿತವಾಗುವುದಿಲ್ಲ ಎಂಬುದಾಗಿ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಶುಕ್ರವಾರ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಎಲ್‌ಜೆಪಿಯು ಬಿಹಾರ ಚುನಾವಣೆಯಲ್ಲಿ ಉಳಿವಿಗಾಗಿ ಹೋರಾಡುತ್ತಿರುವ ಆರ್‌ಎಲ್‌ಎಸ್‌ಪಿ ಮತ್ತು  ಮತ್ತು ಪಪ್ಪು ಯಾದವ್ ಅವರ ಜೆಎಪಿಯ ಹಾಗಿದೆ ಎಂದು ಯಾದವ್ ಹೇಳಿದರು. ಎಲ್‌ಜೆಪಿ ಸ್ವಂತ ನೆಲೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಪಕ್ಷವು ಹಿಂದೆ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲವಿಲ್ಲದೆ ಸ್ಪರ್ಧಿಸಿತ್ತು ಮತ್ತು ಬಹಳ ಕೆಟ್ಟದಾಗಿ ಸೋತಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ೨೦೨೦ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ (ಜಿಹೆಚ್‌ಐ) ಭಾರತವು ೧೦೭ ರಾಷ್ಟ್ರಗಳ ಪೈಕಿ ೯೪ ನೇ ಸ್ಥಾನದಲ್ಲಿದೆ ಮತ್ತು ಗಂಭೀರ ಹಸಿವಿನ ವಿಭಾಗದಲ್ಲಿದೆ. ಬಾರಿ ೧೦೭ ದೇಶಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ಕಳಪೆ ಅನುಷ್ಠಾನ ಪ್ರಕ್ರಿಯೆಗಳು ಮತ್ತು ಅಪೌಷ್ಟಿಕತೆಯನ್ನು ನಿಭಾಯಿಸುವಲ್ಲಿ ಪರಿಣಾಮಕಾರಿ ಮೇಲ್ವಿಚಾರಣೆಯ ಕೊರತೆ ಮತ್ತು ಕಡಿಮೆ ಶ್ರೇಣಿಗೆ ದೊಡ್ಡ ರಾಜ್ಯಗಳ ಕಳಪೆ ಕಾರ್ಯಕ್ಷಮತೆ ಕಾರಣ ಎಂದು ತಜ್ಞರು ದೂಷಿಸಿದ್ದಾರೆ. ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ ದೇಶಗಳಲ್ಲಿ  ನಡೆಸಿದ ಸಮೀಕ್ಷೆಯನ್ನು ಆಧರಿಸಿ ಸಿದ್ಧಪಡಿಸಲಾಗಿರುವ ವರದಿಯನ್ನು ಗ್ಲೋಬಲ್ ಹಂಗರ್ ಇಂಡೆಕ್ಸ್ (ಜಿಎಚ್‌ಐ) ವೆಬ್ ಸೈಟಿನಲ್ಲಿ 2020 ಅಕ್ಟೋಬರ್ 17ರ ಶನಿವಾರ  ಪ್ರಕಟಿಸಲಾಗಿದೆ. ಕಳೆದ ವರ್ಷ ೧೧೭ ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಆಗ ಭಾರತ ೧೦೨ನೇ ಸ್ಥಾನದಲ್ಲಿತ್ತು. ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇಕಡಾ ೧೪ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಐದು ವರ್ಷದೊಳಗಿನ ಮಕ್ಕಳಲ್ಲಿ ದೇಶವು ಶೇಕಡಾ ೩೭. ಕುಂಠಿತಗೊಳಿಸುವ ಪ್ರಮಾಣವನ್ನು ಮತ್ತು ಶೇಕಡಾ ೧೭.೩ರಷ್ಟು ವ್ಯರ್ಥ ಪ್ರಮಾಣವನ್ನು ದಾಖಲಿಸಿದೆ. ಐದು ವರ್ಷದೊಳಗಿನ ಮರಣ ಪ್ರಮಾಣವು ಶೇಕಡಾ .೭ರಷ್ಟಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 17 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment