ನಾನು ಮೆಚ್ಚಿದ ವಾಟ್ಸಪ್

Saturday, November 30, 2019

ಇಂದಿನ ಇತಿಹಾಸ History Today ನವೆಂಬರ್ 30

2019: ಮುಂಬೈ: ಮಹಾರಾಷ್ಟ್ರದ ೧೮ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದ ಉದ್ಧವ್ ಠಾಕ್ರೆ ಶನಿವಾರ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸಿದ್ದು, ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು. ನಂತರ ಸುಪ್ರೀಂಕೋರ್ಟ್ ಆದೇಶದಂತೆ ತಲೆ ಎಣಿಕೆ ಮೂಲಕ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ದಿಲೀಪ್ ಪಾಟೀಲ್ ನಡೆಸಿದರು. ವಿಶ್ವಾಸಮತದ ಪರ ಇರುವ ಶಾಸಕರ ತಲೆ ಎಣಿಕೆ ಮೊದಲಿಗೆ ಮಾಡಲಾಯಿತು. ವಿಶ್ವಾಸಮತ ಯಾಚನೆಯಲ್ಲಿ ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರಕ್ಕೆ ೧೬೯ ಶಾಸಕರ ಮತ ಸಿಕ್ಕಿದೆ. ೨೮೮ ಶಾಸಕರ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ ೧೪೫ ಶಾಸಕರ ಬೆಂಬಲದ ಅಗತ್ಯವಿದೆ. ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸೇರಿ ಮೂರು ಪಕ್ಷಗಳ ಶಾಸಕರ ಸಂಖ್ಯೆ ೧೫೪. ವಿಶ್ವಾಸಮತ ಯಾಚನೆ ವೇಳೆ ಬಹುಜನ್ ವಿಕಾಸ್ ಅಘಾಡಿ ಮತ್ತು ಪಕ್ಷೇತರರು ಕೆಲವು ಶಾಸಕರು ಉದ್ಧವ್ ಠಾಕ್ರೆಗೆ ಬೆಂಬಲ ನೀಡಿದ್ದಾರೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ೧೦೫ ಬಿಜೆಪಿ ಶಾಸಕರು ಕಲಾಪದಿಂದ ಹೊರನಡೆದಿದ್ದರು. ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲು ಹಂಗಾಮಿ ಸ್ಪೀಕರ್ ಕಾಳಿದಾಸ್ ಅವರನ್ನು ಬದಲಿಸಿ ಕಾಂಗ್ರೆಸ್ ದಿಲೀಪ್ ಪಾಟೀಲ್ ಅವರನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸಂದರ್ಭದಲ್ಲಿ ಪ್ರೋ ಟೆಮ್ ಸ್ಪೀಕರ್ ದಿಲೀಪ್ ಪಾಟೀಲ್, ಗದ್ದಲ ನಡೆಸದಂತೆ ಮನವಿ ಮಾಡಿಕೊಂಡರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಪುಣೆ: ಭಯೋತ್ಪಾದನೆ ಮೂಲಕ ಪಾಕಿಸ್ತಾನವು ಭಾರತದ ವಿರುದ್ಧ ಛಾಯಾಸಮರ ಹೂಡಿದ್ದು, ಅದರಲ್ಲಿ ಅದು ಸೋಲುವುದು ಖಚಿತ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಇಲ್ಲಿ ಹೇಳಿದರು. ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ೧೩೭ ನೇ ತಂಡದ ನಿರ್ಗಮನ ಪೆರೇಡ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇದೇ ವೇಳೆ ಭಯೋತ್ಪಾದಕರನ್ನು ಬಗ್ಗು ಬಡಿಯುತ್ತಿರುವ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಸಚಿವರುಇವರು ದೇಶದ ಶಕ್ತಿ. ಪಾಕಿಸ್ತಾನ ಈಗ ಭಯೋತ್ಪಾದನೆಯಿಂದಾಗಿ ವಿಶ್ವ ಮಟ್ಟದಲ್ಲಿ ಏಕಾಂಗಿಯಾಗಿದೆಎಂದು ಹೇಳಿದರು. ವಿದೇಶಿ ವಿದ್ಯಾರ್ಥಿಗಳೂ ಸೇರಿದಂತೆ ೨೮೪ ಮಂದಿ ವಿದ್ಯಾರ್ಥಿಗಳು ಬಾರಿ ಪದವಿಗಳನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ಸುಖೋಯ್, ಸಾರಂಗ್ ಹೆಲಿಕಾಪ್ಟರುಗಳನ್ನು ಚಾಲನೆ ಮಾಡಿ ವಿವಿಧ ಕಸರತ್ತುಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ದೇಶಾದ್ಯಂತ ಉದ್ಯೋಗ ಕೊರತೆ ಕಾಡಿರುವಂತೆಯೇ, ಕೇಂದ್ರ ಸರ್ಕಾರದ  ಇಲಾಖೆಗಳಲ್ಲಿ ಸುಮಾರು ಲಕ್ಷ ಹುದ್ದೆಗಳು ಖಾಲಿ ಇರುವ ಸಂಗತಿ ಬಯಲಾಯಿತು.  ೨೦೧೪ರ ಬಳಿಕ ಇಷ್ಟೊಂದು ಹುದ್ದೆಗಳು ೨೦೧೮ರವರೆಗೆ ಖಾಲಿಯಿದ್ದವು ಎಂದು ಕೇಂದ್ರ ಸಿಬಂದಿ ಸಚಿವಾಲಯ ಇತ್ತೀಚೆಗೆ ಲೋಕಸಭೆಗೆ ತಿಳಿಸಿತು. ಸಿಬಂದಿ ಸಚಿವಾಲಯ ತಿಳಿಸಿದಂತೆ,  ೨೦೧೮ ಮಾ.೧ರವರೆಗೆ ೩೧.೧೮ ಲಕ್ಷ ಸಿಬಂದಿಯಷ್ಟೇ ಕೇಂದ್ರದ ಅಧೀನ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಸಿಬಂದಿ ಸಾಮರ್ಥ್ಯ ಒಟ್ಟು ೩೮ ಲಕ್ಷದಷ್ಟು ಇದೆ. ೨೦೧೪ರ ಬಳಿಕ ಸುಮಾರು .೫೭ ಲಕ್ಷ ಹುದ್ದೆ ನೇಮಕಾತಿಗೆ ಸರ್ಕಾರ ಮುಂದಾಗಿದ್ದರೂ, ೨೦೧೮ರ ವೇಳೆಗೆ ೩೨.೨೩ ಲಕ್ಷದಷ್ಟು ಸಿಬಂದಿ ಮಾತ್ರ ಹುದ್ದೆಯಲ್ಲಿದ್ದಾರೆ ಎಂದು ಮಾಹಿತಿ ತಿಳಿಸಿತು. ರೈಲ್ವೇ ಇಲಾಖೆ ಅತಿ ದೊಡ್ಡ ಸಂಖ್ಯೆಯಲ್ಲಿ ಸಿಬಂದಿಗಳನ್ನು ಹೊಂದಿದ್ದು, ಇದರಲ್ಲಿ . ಲಕ್ಷದಷ್ಟು ಹುದ್ದೆಗಳು ೨೦೧೮ ಮಾ.೧ರ ವೇಳೆಗೆ ಖಾಲಿ ಇದ್ದವು. ರಕ್ಷಣಾ ಖಾತೆ (ಸಿವಿಲ್)ನಲ್ಲಿ . ಲಕ್ಷದಷ್ಟು ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಯಿತು. ಇದೇ ವೇಳೆ ೨೦೧೭-೧೮ರ ಅವಧಿಯಲ್ಲಿ ಕೇಂದ್ರ ಸರ್ಕಾರ ಸಿಬ್ಬಂದಿಗೆ .೯೦ ಲಕ್ಷ ಕೋಟಿ ರೂ. ವೇತನ, ಭತ್ಯೆಗಳನ್ನು ಪಾವತಿಸಿದೆ ಎಂದು ಇಲಾಖೆ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ರಾಂಚಿ: ಜಾರ್ಖಂಡ್ ವಿಧಾನಸಭೆಯ ೧೩ ವಿಧಾನಸಭಾ ಕ್ಷೇತ್ರಗಳಿಗಾಗಿ ಶನಿವಾರ ಮೊದಲ ಹಂತದ ಮತದಾನ ನಡೆದಿದ್ದು, ಶೇಕಡಾ ೬೨.೮೭ರಷ್ಟು ಮತದಾನ ನಡೆಯಿತು. ಚುನಾವಣೆ ಬಹಿಷ್ಕರಿಸುವಂತೆ ಮಾವೋವಾದಿ ನಕ್ಸಲೀಯರು ನೀಡಿದ್ದ ಕರೆಗೆ ಸೊಪ್ಪು ಹಾಕದ ಮತದಾರರು ಮತಗಟ್ಟೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು ಎಂದು ವರದಿಗಳು ತಿಳಿಸಿದವು. ಚುನಾವಣಾ ಆಯೋಗದ ಪ್ರಕಾರ ಶೇಕಡಾ ೬೨.೮೭ರಷ್ಟು ಮತದಾನವಾಗಿದೆ. ಬಿಷ್ಣುಪುರದಲ್ಲಿ ಅತ್ಯಂತ ಹೆಚ್ಚು - ಶೇಕಡಾ ೬೭.೦೪ರಷ್ಟು ಮತದಾನವಾಗಿದ್ದು, ಮನಿಕಾ ಸ್ಥಾನಕ್ಕೆ ಅತ್ಯಂತ ಕಡಿಮೆ - ಶೇಕಡಾ ೫೭.೬೧ರಷ್ಟು ಮತದಾನವಾಗಿದೆ. ಡಾಲ್ಟನ್ ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದ ಬಗ್ಗೆ ವರದಿಯಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


No comments:

Post a Comment