Friday, June 28, 2019

ಇಂದಿನ ಇತಿಹಾಸ History Today ಜೂನ್ 28

ಇಂದಿನ ಇತಿಹಾಸ History Today  ಜೂನ್  28
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯನ್ನು ೨೦೧೯ರ ಜುಲೈ ೩ರಿಂದ ಮುಂದಿನ ಆರು ತಿಂಗಳುಗಳ ಅವಧಿಗೆ ವಿಸ್ತರಿಸುವ ಗೊತ್ತುವಳಿಗೆ ಲೋಕಸಭೆಯು ಅನುಮೋದನೆ ನೀಡಿತು. ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯನ್ನು ತಿಂಗಳುಗಳ ಅವಧಿಗೆ ವಿಸ್ತರಿಸುವ ಗೊತ್ತುವಳಿ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜಮ್ಮು ಮತ್ತು ಕಾಶ್ಮೀರದ ಜನತೆಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸುವಜಮ್ಮು ಮತ್ತು ಕಾಶ್ಮೀರ ವಿಶೇಷ ಮೀಸಲಾತಿ (ತಿದ್ದುಪಡಿ) ಮಸೂದೆ, ೨೦೧೯ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಬಳಿಕ ಸದನವು ಗೊತ್ತುವಳಿಯನ್ನು ಅಂಗೀಕರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದಲ್ಲಿ ಗೃಹ ಸಚಿವರಾಗಿ ನೇಮಕಗೊಂಡ ಬಳಿಕ ಅಮಿತ್ ಶಾ ಅವರು ಮಂಡಿಸಿರುವ ಚೊಚ್ಚಲ ಮಸೂದೆ ಕಾಶ್ಮೀರಕ್ಕೆ ಸಂಬಂಧಿಸಿದ್ದಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಜನರ ಹಿತಾಸಕ್ತಿ ರಕ್ಷಣೆಗೆ ಸರ್ಕಾರವು ಅಗ್ರ ಪ್ರ್ರಾಶಸ್ತ್ಯ ನೀಡಿದೆ ಎಂದು ಹೇಳಿದರುಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ತುಳಿಯುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕೆಂಡಾಮಂಡಲರಾದ ಅಮಿತ್ ಶಾ, ’ಕಾಂಗ್ರೆಸ್ ನಮಗೆ ಪ್ರಜಾಪ್ರಭುತ್ವದ ಪಾಠ ಕಲಿಸಬೇಕಾಗಿಲ್ಲ, ರಾಷ್ಟ್ರ ವಿಭಜನೆಗೆ, ಕಾಶ್ಮೀರದ ಒಂದು ಭಾಗ ಪಾಕಿಸ್ತಾನ ಸೇರಲು ಜವಾಹರಲಾಲ್ ನೆಹರೂ ಕಾರಣ ಎಂದು ವಾಗ್ದಾಳಿ ನಡೆಸಿದರುಜಮ್ಮು ಮತ್ತು ಕಾಶ್ಮೀರದಲ್ಲಿನ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಂತಿರುವ ಪ್ರದೇಶಗಳ ಜನರಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವ ಮಸೂದೆಯು ಅಲ್ಲಿನ ಜನರಿಗೆ ನೇರ ನೇಮಕಾತಿ, ಬಡ್ತಿ ಮತ್ತು ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಅವಕಾಶ ಕಲ್ಪಿಸುತ್ತದೆ ಮಸೂದೆಯ ಜೊತೆಗೇ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಕಾಯ್ದೆ, ೨೦೦೪ ಗೆ ತಿದ್ದುಪಡಿ ಮಾಡುವ ಮಸೂದೆಯನ್ನೂ ಅಮಿತ್ ಶಾ ಮಂಡಿಸಿದರುರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿರುವ ಕಾರಣ ಮತ್ತು ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಷಾಂತ್ಯದಲ್ಲಿ ಹೊಸದಾಗಿ ಚುನಾವಣೆ ನಡೆಸಲು ನಿರ್ಧರಿಸಿರುವ ಕಾರಣ ೨೦೧೯ರ ಜುಲೈ ೩ರಿಂದ ಅನ್ವಯವಾಗುವಂತೆ ಮುಂದಿನ ತಿಂಗಳುಗಳಿಗೆ ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆ ಅನಿವಾರ್ಯವಾಗಿದೆ ಎಂದು ಶಾ ಗೊತ್ತುವಳಿ ಮತ್ತು ಮಸೂದೆಯನ್ನು ಮಂಡಿಸುತ್ತಾ ನುಡಿದರು. ರಾಜ್ಯಪಾಲರ ಆಡಳಿತ ಮತ್ತು ಬಳಿಕ ರಾಷ್ಟ್ರಪತಿ ಆಳ್ವಿಕೆಯ ಅವಧಿಯಲ್ಲಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೇರುಗಳಿಗೇ ಪೆಟ್ಟು ಕೊಟ್ಟಿದೆ ಎಂದು ಅವರು ಹೇಳಿದರು. ಹಿಂದಿನ ಚುನಾವಣೆಗಳ ವೇಳೆ ರಾಜ್ಯ ರಕ್ತಪಾತವನ್ನು ಕಂಡಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.  ‘ ಬಾರಿ ಒಬ್ಬನೇ ಒಬ್ಬ ವ್ಯಕ್ತಿಯ ಸಾವೂ ಇಲ್ಲದೆಯೇ ೪೦,೦೦೦ ಹುದ್ದೆಗಳಿಗೆ ವರ್ಷ ಚುನಾವಣೆಗಳು ನಡೆದವು. ರಾಜ್ಯದಲ್ಲಿ ಮಹಾಚುನಾವಣೆ ವೇಳೆಯಲ್ಲಿ ಕೂಡಾ ಹಿಂಸಾಚಾರ ಸಂಭವಿಸಿಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಕಾನೂನು ಸುವ್ಯವಸ್ಥೆ ಸುಧಾರಿಸಿರುವುದನ್ನು ಇದು ತೋರಿಸುತ್ತದೆ ಎಂದು ಶಾ ನುಡಿದರು. ಎನ್ಡಿಎ ಸರ್ಕಾರವು ೪೦೦೦ಕ್ಕೂ ಹೆಚ್ಚು ಪಂಚಾಯತಿಗಳಿಗೆ ಚುನಾವಣೆ ನಡೆಸಿತ್ತು ಪರಿಣಾಮವಾಗಿ ೪೦,೦೦೦ಕ್ಕೂ ಹೆಚ್ಚು ಗ್ರಾಮ ಮುಖ್ಯಸ್ಥರ ಆಯ್ಕೆ ಸಾಧ್ಯವಾಗಿತ್ತು ಎಂದೂ ಅವರು ಹೇಳಿದರು. ರಾಜ್ಯದಲ್ಲಿ ಹಲವಾರು ವಿಧದ ಅನುಕೂಲ ಮಾಡಿಕೊಟ್ಟಿರುವ ರಾಷ್ಟ್ರಪತಿ ಆಳ್ವಿಕೆಯನ್ನು ವಿಸ್ತರಿಸುವ ಗೊತ್ತುವಳಿಯನ್ನು ಪಕ್ಷಾತೀತವಾಗಿ ಬೆಂಬಲಿಸುವಂತೆ ಅವರು ಸದಸ್ಯರನ್ನು ಆಗ್ರಹಿಸಿದರುಶಾ ಅವರ ಬಳಿಕ ಮಾತನಾಡಿದ ಕಾಂಗ್ರೆಸ್ ಸಂಸತ್ ಸದಸ್ಯ ಮನಿಶ್ ತಿವಾರಿ ಅವರು ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆಯನ್ನು ವಿರೋಧಿಸಿದರು ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಹದಗೆಡಲು ಬಿಜೆಪಿ-ಪಿಡಿಪಿ ಸರ್ಕಾರ ಕಾರಣ ಎಂದು ದೂಷಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ ತಿಂಗಳುಗಳ ಕಾಲ ವಿಸ್ತರಣೆಗೆ ಬಿಜೆಪಿ ಮತ್ತು ಪಿಡಿಪಿ ಮೈತ್ರಿಕೂಟ ರಚಿಸಿದತಾಳಮೇಳ ರಹಿತ ಸರ್ಕಾರ ಕಾರಣ ಎಂದು ತಿವಾರಿ ನುಡಿದರು. ೨೦೧೫ ಮತ್ತು ೨೦೧೮ರ ನಡುವಣ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಸಂಪೂರ್ಣವಾಗಿ ಕೆಟ್ಟಿದೆ. ಅವಧಿಯಲ್ಲಿ ಯುವಕರು ಬೀದಿಗಳಿಗೆ ಇಳಿದಿದ್ದರು ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಇಲ್ಲದೇ ಇರುವುದು ಭಾರತದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ನುಡಿದ ಅವರು ರಾಜ್ಯದಲ್ಲಿ ಶಾಂತಿಯುತವಾಗಿ ನಡೆದ ಲೋಕಸಭಾ ಚುನಾವಣೆಗಳ ಜೊತೆಗೇ ವಿಧಾನಸಭಾ ಚುನಾವಣೆಗಳನ್ನೂ ಏಕೆ ನಡೆಸಲಿಲ್ಲ? ಎಂದು ಪ್ರಶ್ನಿಸಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೦ನೇ ವಿಧಿಯು ತಾತ್ಕಾಲಿಕ ಸ್ವರೂಪದ್ದು, ಕಾಯಂ ಸ್ವರೂಪದ್ದಲ್ಲ ಎಂದು ಅಮಿತ್ ಶಾ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡುತ್ತಾ ಪ್ರತಿಪಾದಿಸಿದರು. ಸಂಸದೀಯ ಚುನಾವಣೆಗಳು ಕೇವಲ ರಾಜ್ಯದಲ್ಲಿ ಕೇವಲ ಸ್ಥಾನಗಳಿಗಾಗಿ ನಡೆದವು, ಆದರೆ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಹೆಚ್ಚು ವಿಸ್ತೃತ ವ್ಯವಸ್ಥೆ ಮತ್ತು ಭದ್ರತೆ ಬೇಕಾಗುತ್ತದೆ ಎಂಬುದಾಗಿ ಲೋಕಸಭೆ  ಮತ್ತು ವಿಧಾನಸಭೆಗೆ ಜಂಟಿಯಾಗಿ ಚುನಾವಣೆ ನಡೆಸದೇ ಇರುವುದಕ್ಕೆ ಕಾರಣವನ್ನು ವಿವರಿಸಿದ ಗೃಹ ಸಚಿವರುಈಗ ಲೋಕಸಭಾ ಚುನಾವಣೆ ಮುಗಿದಿರುವುದರಿಂದ ಯಾವಾಗ ಬೇಕಿದ್ದರೂ ವಿಧಾನಸಭಾ ಚುನಾವಣೆಗಳನ್ನು ನಡೆಸಬಹುದು ಎಂದು ಹೇಳಿದರು. ಏನಿದ್ದರೂ ಚುನಾವಣೆಗಳನ್ನು ನಿರ್ಧರಿಸುವುದು ಚುನಾವಣಾ ಆಯೋಗ. ವರ್ಷಾಂತ್ಯದಲ್ಲಿ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ. ಆದ್ದರಿಂದ ರಾಷ್ಟ್ರಪತಿ ಆಳ್ವಿಕೆಯ ವಿಸ್ತರಣೆ ಅನಿವಾರ್ಯವಾಗಿದೆ ಎಂದು ಶಾ ನುಡಿದರು. ಜಮ್ಮು ಮತ್ತು ಕಾಶ್ಮೀರದ ಜನತೆಯ ವಿಶ್ವಾಸ ಗಳಿಸುವುದಕ್ಕೆ ನಮ್ಮ ಸರ್ಕಾರ ಆಗ್ರ ಪ್ರಾಶಸ್ತ್ಯ ನೀಡಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ನೆರವು ನೀಡಲೂ ನಾವು ಸಿದ್ಧರಿದ್ದೇವೆ. ರಾಜ್ಯಕ್ಕೆ ಈವರೆಗೆ ಅತ್ಯಂತ ದೊಡ್ಡ ಪ್ರಮಾಣದ ಪ್ಯಾಕೇಜ್ ನೀಡಿದ್ದು ಪ್ರಧಾನಿ ಮೋದಿ. ವಿವಿಧ ಕೊಡುಗೆಗಳ ಅಡಿಯಲ್ಲಿ ಹಲವಾರು ಯೋಜನೆಗಳು ಆರಂಭಗೊಂಡಿವೆ ಎಂದು ಅವರು ನುಡಿದರು ಮತ್ತು ರಾಜ್ಯದಲ್ಲಿ ಕೈಗೊಳ್ಳಲಾದ ಯೋಜನೆಗಳ ಪಟ್ಟಿ ಮಾಡಿದರು.  ನಾವು ಜಮ್ಮು ಮತ್ತು ಕಾಶ್ಮೀರದ ಜನರನ್ನು ನಮ್ಮ ಸಹೋದರರೆಂದು ಪರಿಗಣಿಸುತ್ತೇವೆ. ನಮ್ಮದು ಜಮ್ಮು ಮತ್ತು ಕಾಶ್ಮೀರದ ಜನರ ಚಿಂತೆಗಳ ಬಗ್ಗೆ ಕಾಳಜಿ ವಹಿಸುವ ಸರ್ಕಾರ. ಕಾರಣಕ್ಕಾಗಿಯೇ ನಾವು ಅಲ್ಲಿ ಹಿಂದೆ ನಡೆಯದೇ ಇದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಈಗ ನಡೆಸಿದ್ದೇವೆ ಎಂದು ಅಮಿತ್ ಶಾ ವಿವರಿಸಿದರುಭಾರತದ ಆತ್ಮರಕ್ಷಣೆಗಾಗಿ ಪಾಕಿಸ್ತಾನದ ಒಳಕ್ಕೆ ನುಗ್ಗಿ ಭಯೋತ್ಪಾದನೆಯ ಬೇರುಗಳನ್ನೇ ಗುರಿಯಾಗಿಟ್ಟುಕೊಂಡು ಸರ್ಜಿಕಲ್ ದಾಳಿಗಳನ್ನು ಮತ್ತು ವಾಯುದಾಳಿಗಳನ್ನು ನಡೆಸಿದ್ದು ಮೋದಿ ಸರ್ಕಾರ ಎಂದು ಅಮಿತ್ ಶಾ ಹೇಳಿದರು. ಕಾಂಗ್ರೆಸ್ ನಾಯಕ ಮನಿಶ್ ತಿವಾರಿ ಅವರು ಭಾರತದ ವಿಭಜನೆಯ ಪ್ರಸ್ತಾಪ ಮಾಡಿದ್ದನ್ನು ಉಲ್ಲೇಖಿಸಿದ ಗೃಹ ಸಚಿವರುರಾಷ್ಟ್ರದ ವಿಭಜನೆಗೆ ಯಾರು ಹೊಣೆಗಾರರು? ಇಂದು ಜಮ್ಮು ಮತ್ತು ಕಾಶ್ಮೀರದ ಮೂರನೇ ಒಂದು ಭಾಗ ಭಾರತದ ಜೊತೆ ಇಲ್ಲದೇ ಇರುವುದು ಯಾರ ತಪ್ಪಿನಿಂದ? ಆಗ ಕದನವಿರಾಮಕ್ಕೆ ಕರೆ ಕೊಟ್ಟವರು ಯಾರು? ಆಗ ಕದನ ವಿರಾಮ ಮಾಡಿಸಿದವರು ಮತ್ತು ಜಮ್ಮು ಮತ್ತು ಕಾಶ್ಮೀರದ ಭಾಗವನ್ನು (ಪಾಕ್ ಆಕ್ರಮಿತ ಕಾಶ್ಮೀರ) ಪಾಕಿಸ್ತಾನಕ್ಕೆ ಕೊಟ್ಟವರು ಜವಾಹರಲಾಲ್ ನೆಹರೂ. ನಾವು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನೀವು ಹೇಳುತ್ತಿದ್ದೀರಿ, ಆದರೆ ನೆಹರೂಜಿ ಅವರು ಕೆಲಸವನ್ನು ಗೃಹ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಮಾಡಿದರು. ಸರ್ದಾರ್ ಪಟೇಲ್ ಅವರು ಕಾಶ್ಮೀರ ಆಕ್ರಮಣವನ್ನು  ನಿಭಾಯಿಸಿದ್ದಿದ್ದರೆ, ಪಾಕ್ ಆಕ್ರಮಿತ ಪ್ರದೇಶ ಇಂದು ನಮ್ಮ ಬಳಿಯೇ ಇರುತ್ತಿತ್ತು. ಅದ್ದರಿಂದ ಮನಿಶ್ (ತಿವಾರಿ) ಜಿ ನಮಗೆ ಇತಿಹಾಸ ಕಲಿಸಬೇಡಿ ಎಂದು ಚಾಟಿ ಬೀಸಿದರು. ಜಮಾತ್--ಇಸ್ಲಾಮೀಯನ್ನು ಏಕೆ ಇಲ್ಲಿಯವರೆಗೆ ನಿಷೇಧಿಸಲಿಲ್ಲ? ಯಾರನ್ನು ಸಂತುಷ್ಟಿಪಡಿಸಲು ನೀವು ಇಚ್ಛಿಸಿದ್ದೀರಿ? ಜಮಾತ್-- ಇಸ್ಲಾಮಿಯನ್ನು ನಿಷೇಧಿಸಿದ್ದು ಬಿಜೆಪಿ ಸರ್ಕಾರ. ಜೆಕೆಎಲ್ಎಫ್ ಮೇಲೆ  ನಿಷೇಧ ವಿಧಿಸಿದವರು ಯಾರು? ಕೆಲಸ ಮಾಡಿದ್ದು ಬಿಜೆಪಿ ಎಂದು ನುಡಿದ ಅಮಿತ್ ಶಾಸರ್ಕಾರದ ಮರುಪರಿಶೀಲನೆಯ ಬಳಿಕ ಯಾವುದೇ ಭದ್ರತಾ ಅಪಾಯ ಇಲ್ಲ ಎಂದು ದೃಢಪಟ್ಟಾಗ ೯೧೯ ಜನರ ಭದ್ರತೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂತೆಗೆದುಕೊಳ್ಳಲಾಯಿತು ಎಂದು ಹೇಳಿದರು. ಗಡಿಗಳಲ್ಲಿ ಭದ್ರತೆಯ ಖಾತರಿ ನೀಡುವುದು ಮತ್ತು ರಾಷ್ಟ್ರವನ್ನು ಭಯೋತ್ಪಾದನೆ ಮುಕ್ತಗೊಳಿಸುವುದು ನಮ್ಮ ಗುರಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರವು ೨೩೦೭ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ ಎಂದು ಅಮಿತ್ ಶಾ ನುಡಿದರು.  ಮೋದಿ ಸರ್ಕಾರವು ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹನೆ ನೀತಿಯನ್ನು ಅನುಸರಿಸುತ್ತಿದೆನಮ್ಮ ನಾಗರಿಕರ ನೆರವಿನೊಂದಿಗೆ ಇದು ಯಶಸ್ವಿಯಾಗುವುದು ಎಂಬ ವಿಶ್ವಾಸ ನನಗೆ ಇದೆ ಎಂದು ಗೃಹ ಸಚಿವರು ಹೇಳಿದರು.   ‘ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ತುಳಿಯುತ್ತಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಈವರೆಗೆ ೧೩೨ ಬಾರಿ ಸಂವಿಧಾನದ ೩೫೬ನೇ ವಿಧಿಯನ್ನು ಬಳಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿದೆ. ೯೩ ಬಾರಿ ಕಾಂಗ್ರೆಸ್ ಇದನ್ನು ಮಾಡಿದೆ. ಈಗ ಜನ ನಮಗೆ ಪ್ರಜಾಪ್ರಭುತ್ವವನ್ನು ಕಲಿಸುತ್ತಿದ್ದಾರೆ ಎಂದು ಅವರು ಛೇಡಿಸಿದರು.

2019: ಒಸಾಕ (ಜಪಾನ್):  ಪ್ರಧಾನಿ ನರೇಂದ್ರ ಮೋದಿ ಅವರು ಜಿ-೨೦ ಶೃಂಗಸಭೆಗೆ ಮುನ್ನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಇರಾನ್, ೫ಜಿ ಸಂಪರ್ಕ ಜಾಲ, ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಇಲ್ಲಿ ಮಾತುಕತೆ ನಡೆಸಿದರುಇತ್ತೀಚೆಗೆ ಬರೆದ ಪತ್ರವೊಂದರಲ್ಲಿ ಭಾರತದ ಬಗ್ಗೆ ತಮ್ಮ ಪ್ರೀತಿ ವ್ಯಕ್ತ ಪಡಿಸಿದ್ದಕ್ಕಾಗಿ ಟ್ರಂಪ್ ಅವರಿಗೆ ಮೋದಿ ಧನ್ಯವಾದ ಸಲ್ಲಿಸಿದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪೆಯೋ ಮೂಲಕ ಟ್ರಂಪ್ ಅವರು ಪತ್ರವನ್ನು ಮೋದಿ ಅವರಿಗೆ ಕಳುಹಿಸಿದ್ದರುಇರಾನ್, ೫ಜಿ ಸಂಪರ್ಕ ಜಾಲ, ದ್ವಿಪಕ್ಷೀಯ ಬಾಂಧ್ಯವ್ಯಗಳು ಮತ್ತು ರಕ್ಷಣಾ ಬಾಂಧವ್ಯಗಳ ಬಗ್ಗೆ ಟ್ರಂಪ್ ಜೊತೆಗೆ ಮಾತುಕತೆ ನಡೆಸಲು ತಾವು ಬಯಸುವುದಾಗಿ ಪ್ರಧಾನಿ ಮೋದಿ ಅವರು ಮಾತುಕತೆಗೆ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದರು. ಟೆಹರಾನ್ ಮತ್ತು ಜಾಗತಿಕ ಶಕ್ತಿ ರಾಷ್ಟ್ರಗಳ ಜೊತೆಗಿನ ೨೦೧೫ರ ಪರಮಾಣು ಒಪ್ಪಂದದಿಂದ ಹೊರಬಂದ ಬಳಿಕ ನವೆಂಬರಿನಲ್ಲಿ ಅಮೆರಿಕವು ಇರಾನ್ ವಿರುದ್ಧ ದಿಗ್ಬಂಧನಗಳನ್ನು ಮರುಜಾರಿಗೊಳಿಸಿತ್ತು. ಇರಾನಿನ ಕಚ್ಛಾ ತೈಲ ಆಮದನ್ನು ಶೂನ್ಯಗೊಳಿಸುವ ಅಮೆರಿಕದ ಗಡುವು ಮೇ ೨ಕ್ಕೆ ಅಂತ್ಯಗೊಂಡಿತ್ತು. ಭಾರತ ಸೇರಿದಂತೆ ಇರಾನಿ ತೈಲ ಖರೀದಿದಾರರಿಗೆ ಅಮೆರಿಕ ನೀಡಿದ್ದ ಮನ್ನಾ ಮುಂದಿನ ತಿಂಗಳುಗಳವರೆಗೆ ಮಾತ್ರ ಮುಂದುವರೆಯುತ್ತದೆ. ಅಮೆರಿಕದ ದಿಗ್ಬಂಧನಕ್ಕೆ ಬದ್ಧತೆ ವ್ಯಕ್ತ ಪಡಿಸಿದ್ದ ಭಾರತ ಇರಾನಿನಿಂದ ತನ್ನ ಎಲ್ಲ ತೈಲ ಆಮದನ್ನು ರದ್ದು ಪಡಿಸಿತ್ತು. ಟ್ರಂಪ್ ಅವರು ಪ್ರಧಾನಿ ಮೋದಿ ಅವರನ್ನು ಇತ್ತೀಚಿನ ಚುನಾವಣಾ ವಿಜಯಕ್ಕಾಗಿ ಅಭಿನಂದಿಸಿದರು ಮತ್ತು ಉಭಯ ರಾಷ್ಟ್ರಗಳು ಸೇನಾ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಲಿವೆ ಎಂದು ಹೇಳಿದರು.  ‘ಇದು ದೊಡ್ಡ ವಿಜಯ. ನೀವು ಅದಕ್ಕೆ ಅರ್ಹರಾಗಿದ್ದೀರಿ. ನೀವು ಮಹಾನ್ ಕೆಲಸ ಮಾಡಿದ್ದೀರಿ. ದೊಡ್ಡ ವಿಷಯಗಳನ್ನು ನಾವು ಪ್ರಕಟಿಸಿದ್ದೇವೆ. ವ್ಯಾಪಾರ, ಉತ್ಪಾದನೆ, ಜಿ ಜಾಲ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನಾವು ಮಾತುಕತೆ ನಡೆಸಲಿದ್ದೇವೆ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ  ಮತ್ತು ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಟ್ರಂಪ್ ಮಾತುಕತೆಗೆ ಮುನ್ನ ಹೇಳಿದರು.  ‘ನಾವು ಮಹಾನ್ ಮಿತ್ರರಾಗಿದ್ದೇವೆ ಮತ್ತು ನಮ್ಮ ರಾಷ್ಟ್ರಗಳು ಹಿಂದೆಂದಿಗಿಂತಲೂ ಹೆಚ್ಚು ಆಪ್ತವಾಗಿವೆ. ನಾನು ಇದನ್ನು ಖಚಿತವಾಗಿ ಹೇಳಬಲ್ಲೆ. ಸೇನಾ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ನಾವು ಜೊತೆಯಾಗಿ ಕೆಲಸ ಮಾಡಲಿದ್ದೇವೆ. ವ್ಯಾಪಾರದ ಬಗ್ಗೆ ನಾವು ಈದಿನ ಚರ್ಚಿಸುತ್ತೇವೆ ಎಂದು ಟ್ರಂಪ್ ತಿಳಿಸಿದ್ದರು. ಇರಾನ್ ವಿಷಯಕ್ಕೆ ಸಂಬಂಧಿಸಿದಂತೆನಮಗೆ ಬೇಕಾದಷ್ಟು ಸಮಯವಿದೆ. ಅವಸರ ಏನಿಲ್ಲ. ಅವರು ತಮ್ಮದೇ ಕಾಲಾವಕಾಶವನ್ನು ತೆಗೆದುಕೊಳ್ಳಬಹುದು. ಸಮಯದ ಒತ್ತಡ ಖಂಡಿತವಾಗಿ ಇಲ್ಲ ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದರು. ಒಸಾಕದಲ್ಲಿ ಜಿ-೨೦ ಶೃಂಗಸಭೆಯ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ವಿವಿಧ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಎಂದು ಪ್ರಧಾನ ಮಂತ್ರಿಯವರ ಕಚೇರಿಯು ಮಾತುಕತೆಯ ಬಳಿಕ ಟ್ವೀಟ್ ಮಾಡಿತು. ತ್ರಿಪಕ್ಷೀಯ ಮಾತುಕತೆ: ಜಪಾನ್-ಅಮೆರಿಕ-ಭಾರತ ತ್ರಿಪಕ್ಷೀಯ ಸಭೆ ನಡೆಸಿದ ಸ್ವಲ್ಪ ಹೊತ್ತಿನ ಬಳಿಕ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಮಾತುಕತೆ ನಡೆಸಿದರು. ತ್ರಿಪಕ್ಷೀಯ ಮಾತುಕತೆಯಲ್ಲಿ ಗುಂಪುರಚನೆಯ ಮಹತ್ವವನ್ನು ಮೋದಿ ಒತ್ತಿ ಹೇಳಿದರು. ಅಮೆರಿಕದ ಅಧ್ಯಕ್ಷರುಅಮೆರಿಕ ಮೊದಲು ನೀತಿಯನ್ನು ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ - ಟ್ರಂಪ್ ಮಾತುಕತೆ ಹೆಚ್ಚಿನ ಮಹತ್ವ ಪಡೆದಿದೆ. ’ಅಮೆರಿಕ ಮೊದಲು ನೀತಿಯನ್ನು ಪ್ರತಿಪಾದಿಸುತ್ತಿರುವ ಟ್ರಂಪ್ ಅವರು ಅಮೆರಿಕದ ಉತ್ಪನ್ನಗಳ ಮೇಲೆ ಭಾರತವು ವಿಧಿಸುತ್ತಿರುವ ಅತಿಯಾದ ಸುಂಕವನ್ನು ಕಟುವಾಗಿ ಟೀಕಿಸುತ್ತಿದ್ದಾರೆ.  ಜಪಾನಿಗೆ ಬರುವ ಮುನ್ನ ಟ್ರಂಪ್ ಅವರುಪ್ರಧಾನಿ (ನರೇಂದ್ರ) ಮೋದಿ ಅವರ ಜೊತೆಗಿನ ಮಾತುಕತೆಯನ್ನು ನಾನು ಎದುರು ನೋಡುತ್ತಿದ್ದೇನೆ. ಹಲವಾರು ವರ್ಷಗಳಿಂದ ಭಾರತವು ಅಮೆರಿಕದ ವಿರುದ್ಧ ಅತಿಯಾದ ಸುಂPಗಳನ್ನು ವಿಧಿಸುತ್ತಿದೆ. ಇತ್ತೀಚೆಗೆ ಅದು ಸುಂಕಗಳನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಅತಿಯಾದ ಸುಂಕಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು. ಸಂಸದೀಯ ಚುನಾವಣೆಯಲ್ಲಿ ಬಿಜೆಪಿಯು ಪ್ರಚಂಡ ವಿಜಯಗಳಿಸಿ ಅಧಿಕಾರಕ್ಕೆ ಮರಳಿ ಬಂದ ಬಳಿಕ ಟ್ರಂಪ್ ಅವರ ಜೊತೆಗೆ ಮೋದಿ ಅವರ ಮೊದಲ ಭೇಟಿ ಇದಾಗಿದೆ. ಅಮೆರಿಕವು ಭಾರತೀಯ ಉತ್ಪನ್ನಗಳಿಗೆ ನೀಡಲಾಗಿದ್ದ ಆದ್ಯತೆಯನ್ನು ಹಿಂತೆಗೆದುಕೊಂಡದ್ದಕ್ಕೆ ಪ್ರತಿಯಾಗಿ ಭಾರತವು ಬಾದಾಮಿ, ದ್ವಿದಳ ಧಾನ್ಯಗಳು, ಆಕ್ರೋಡು (ವಾಲ್ನಟ್) ಸೇರಿದಂತೆ ಅಮೆರಿಕದಿಂದ ಆಮದಾಗುವ ೨೮ ಉತ್ಪನ್ನಗಳ ಮೇಲೆ ಸುಂಕಗಳನ್ನು ಇತ್ತೀಚೆಗೆ ಏರಿಸಿತ್ತುಪ್ರಧಾನಿ ಮೋದಿ ಅವರು ವ್ಯಾಪಾರದ ಅಡಚಣೆಗಳನ್ನು ತಗ್ಗಿಸಬೇಕು ಮತ್ತು ನ್ಯಾಯೋಚಿತ ಹಾಗೂ ಸ್ಪಂದನಶೀಲ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಟ್ರಂಪ್ ಆಡಳಿತ ಬಯಸುತ್ತಿದೆ. ಭಾರತವು ಐಕಾನಿಕ್ ಹಾರ್ಲೇ ಡೇವಿಡ್ಸನ್ ಮೋಟಾರ್ ಸೈಕಲ್ಗಳ ಮೇಲೆ ಅತಿಯಾದ ಸುಂಕ ವಿಧಿಸಿದ್ದನ್ನೂ ಟ್ರಂಪ್ ಅವರು ಟೀಕಿಸಿದ್ದರು ಮತ್ತು ಇದು ಸ್ವೀಕಾರಾರ್ಹ ಅಲ್ಲ ಎಂದು ಪ್ರಧಾನಿ ಮೋದಿ ಅವರು ತಮ್ಮ  ಅತ್ಯುತ್ತಮ ಗೆಳೆಯ ಎಂಬುದಾಗಿ ಹೇಳುತ್ತಲೇ ದೃಢ ಪಡಿಸಿದ್ದರು. ಪ್ರಧಾನಿ ಮೋದಿ ಅವರು ಸುಂಕವನ್ನು ಶೇಕಡಾ ೧೦೦ರಿಂದ ಶೇಕಡಾ ೫೦ಕ್ಕೆ ಇಳಿಸಿದ್ದನ್ನು ಅವರು ಬಳಿಕ ಮೆಚ್ಚಿದ್ದರು. ಕಳೆದ ಫೆಬ್ರುವರಿಯಲ್ಲಿ ಭಾರತ ವಿಧಿಸುತ್ತಿರುವ ಸುಂಕವನ್ನು ನ್ಯಾಯೋಚಿತವಲ್ಲ ಎಂಬುದಾಗಿ ಟೀಕಿಸಿದ್ದ ಟ್ರಂಪ್ ಅವರು ಅಮೆರಿಕಕ್ಕೆ ಆಮದಾಗುವ ಭಾರತೀಯ ಬೈಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವುದಾಗಿ ಬೆದರಿಕೆ ಹಾಕಿದ ಬಳಿಕ ಭಾರತವು ಹಾರ್ಲೆ ಡೇವಿಡ್ಸನ್ ಸೇರಿದಂತೆ ಹಲವಾರು ಆಮದು ಮೋಟಾರುಸೈಕಲ್ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ ೫೦ರಷ್ಟು ಇಳಿಸಿತ್ತುಕೆಲವೊಂದು ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಅಮೆರಿಕವು ಗಮನಾರ್ಹವಾಗಿ ಹೆಚ್ಚಿಸಿದ್ದಕ್ಕೆ ಪ್ರತಿಯಾಗಿ ಭಾರತ ಸರ್ಕಾರವು ಕಳೆದ ವರ್ಷ ಜೂನ್ ೨೧ರಂದು ಸುಂಕಗಳನ್ನು ವಿಧಿಸಲು ನಿರ್ಧರಿಸಿತ್ತು. ಅಮೆರಿಕವು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಉಕ್ಕಿನ ಮೇಲೆ ಶೇಕಡಾ ೨೫ರಷ್ಟು ಸುಂಕವನ್ನೂ ಮತ್ತು ಅಲ್ಯೂಮಿನಿಯಂ ಮೇಲೆ ಶೇಕಡಾ ೧೦ರಷ್ಟು ಆಮದು ಸುಂಕವನ್ನೂ ವಿಧಿಸಿತ್ತು.

2019: ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ಪದತ್ಯಾಗ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪ್ರಕಟಿಸಿದ ಬಳಿಕ ಪಕ್ಷದ ಸಾಲು ಸಾಲು ಕಾಂಗ್ರೆಸ್ ನಾಯಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು.  ಪಕ್ಷದ ಮರುಸಂಘಟನೆಗೆ ರಾಹುಲ್ ಗಾಂಧಿಯವರಿಗೆ ಮುಕ್ತಹಸ್ತ ನೀಡುವ ಸಲುವಾಗಿ ತಾನು ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ ಮೊದಲಿಗರಾಗಿ ರಾಜೀನಾಮೆ ಸಲ್ಲಿಸಿದ ರಾಜ್ಯಸಭಾ ಸದಸ್ಯ ವಿವೇಕ ಥಂಕಾ ಅವರ ಹೆಜ್ಜೆಯನ್ನು ನೂರಾರು ಮಂದಿ ತುಳಿದರು. ದೆಹಲಿ ಮತ್ತು ತೆಲಂಗಾಣದಲ್ಲಿ ಪಕ್ಷದ ಇಬ್ಬರು ಕಾರ್ಯಾಧ್ಯಕ್ಷರು ರಾಜೀನಾಮೆ ನೀಡಿದ್ದರೆ, ದೇಶಾದ್ಯಂತ ೧೨೦ಕ್ಕೂ ಹೆಚ್ಚು ಇತರ ಪದಾಧಿಕಾರಿಗಳು ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿಯವರು ಕಾಂಗ್ರೆಸ್ ಮುಖ್ಯಸ್ಥರಾಗಿ ಮುಂದುವರೆಯುವುದಾಗಿ ಭರವಸೆ ನೀಡುವವರೆಗೂ ತಾವು ತಮ್ಮ ರಾಜೀನಾಮೆಗಳನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಅವರಲ್ಲಿ ಹಲವರು ತಿಳಿಸಿದರು. ರಾಷ್ಟ್ರೀಯ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯನ್ನು ಅನುಸರಿಸಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ, ಅದಕ್ಕೂ ಮುನ್ನ ರಾಜ್ಯ ಮಟ್ಟದ ಯಾವೊಬ್ಬ ಪಕ್ಷ ನಾಯಕನೂ ಸೋಲಿನ ಹೊಣೆ ಹೊತ್ತುಕೊಂಡಿಲ್ಲ ಎಂಬುದಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದರು.  ಹರಿಯಾಣ ಕಾಂಗ್ರೆಸ್ ನಾಯಕರ ಜೊತೆಗಿನ ಸಭೆಯೊಂದರಲ್ಲಿ ರಾಹುಲ್ ಗಾಂಧಿಯವರು ತಾವು ಪಕ್ಷದ ಸೋಲಿನ ಸಂಪೂರ್ಣ ಹೊಣೆಯನ್ನು ಹೊತ್ತು ಪದತ್ಯಾಗ ಮಾಡಿರುವುದಾಗಿ ತಿಳಿಸಿದ್ದರು. ’ಬೇರೆಯವರಿಗೂ ರಾಜೀನಾಮೆ ನೀಡುವಂತೆ ನಾನು ಸೂಚಿಸಲಾರೆ. ಜವಾಬ್ದಾರಿ ಹೊತ್ತುಕೊಳ್ಳಬಯಸುವುದಿದ್ದರೆ ಅದು ಅವರವರಿಗೆ ಬಿಟ್ಟ ವಿಷಯ ಎಂದು ರಾಹುಲ್ ಗಾಂಧಿ ಹೇಳಿದ್ದರು. ಕಳೆದ ಸಂಜೆ ಥಂಕಾ ಅವರು ಪಕ್ಷದ ಕಾನೂನು ಮತ್ತು ಮಾನವ ಹಕ್ಕುಗಳ ಸೆಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಮತ್ತು ತಮ್ಮ ದಾರಿ ಅನುಸರಿಸುವಂತೆ ಇತರ ನಾಯಕರಿಗೆ ಸಲಹೆ ಮಾಡಿದ್ದರು.  ‘ನಾವೆಲ್ಲರೂ ಪಕ್ಷದ ಹುದ್ದೆಗಳಿಗೆ ನಮ್ಮ ರಾಜೀನಾಮೆಗಳನ್ನು ಸಲ್ಲಿಸಬೇಕು ಮತ್ತು ರಾಹುಲ್ ಜಿ ಅವರಿಗೆ ತಮ್ಮ ತಂಡವನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತ ಹಸ್ತ ನೀಡಬೇಕು. ನಿಟ್ಟಿನಲ್ಲಿ ಕಮಲನಾಥ್ ಅವರು ನೀಡಿರುವ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆಎಐಸಿಸಿಯ ಕಾನೂನು, ಮಾನವ ಹಕ್ಕುಗಳ ಸೆಲ್ ಅಧ್ಯಕ್ಷ ಸ್ಥಾನಕ್ಕೆ ನಾನು ನಿಸ್ಸ್ಸಂಧಿಗ್ಧವಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದರು.  ‘ರಾಹುಲ್ಜಿ ದಯವಿಟ್ಟು ಪಕ್ಷದ ಪುನರುಜ್ಜೀವನಕ್ಕಾಗಿ ಅದನ್ನು ಸಮರದಳವಾಗಿ ಪರಿವರ್ತಿಸಲು ಪರಿಣಾಮಕಾರಿ ಬದಲಾವಣೆಗಳನ್ನು ಕೈಗೊಳ್ಳಿ. ನಿಮಗೆ ಬದ್ಧತೆ ಮತ್ತು ಗುರಿ ಇದೆ. ಉತ್ತಮ, ಸ್ವೀಕಾರಾರ್ಹರಾದ ಮತ್ತು ಪ್ರಭಾವಶಾಲಿಯಾದ ರಾಷ್ಟ್ರಮಟ್ಟದ ತಂಡವನ್ನು ರಚಿಸಿ. ಎಲ್ಲ ಸಂದರ್ಭಗಳಲ್ಲೂ ನಾನು ನಿಮ್ಮ ಜೊತೆಗಿದ್ದೇನೆ ಎಂದು ಥಂಕಾ ತಿಳಿಸಿದ್ದರುಸೋಲಿನ ಹೊಣೆ ಹೊತ್ತ ದೆಹಲಿ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್ ಲಿಲೋಥಿಯಾ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪೂನಂ ಪ್ರಭಾಕರ್ ಅವರೂ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದರು. ಹಲವಾರು ಮಂದಿ ಎಐಸಿಸಿ ಪದಾಧಿಕಾರಿಗಳು ಚುನಾವಣಾ ಸೋಲಿನ ಹೊಣೆಗಾರಿಕೆ ಹೊತ್ತುಕೊಳ್ಳಲು ಮುಂದೆ ಬಂದಿದ್ದಾರೆ ಮತ್ತು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ, ಹೊಣೆಗಾರಿಕೆಯು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಬ್ಬರೊಂದಿಗೇ ಕೊನೆಗೊಳ್ಳುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.
ರಾಷ್ಟ್ರೀಯ ಚುನಾವಣಾ ಫಲಿತಾಂಶದ ಬಳಿಕ ರಾಹುಲ್ ಗಾಂಧಿಯವರು ಪ್ರಕಟಿಸಿದ ರಾಜೀನಾಮೆಯನ್ನು ಪಕ್ಷವು ಈವರೆಗೂ ಅಂಗೀಕರಿಸಿಲ್ಲ. ಆದರೆ ರಾಹುಲ್ ಅವರು ಪದೇ ಪದೇ ಮಾಡಲಾದ ಮನವಿಗಳ ಹೊರತಾಗಿಯೂ ತಮ್ಮ ನಿರ್ಧಾರದ ಮರುಪರಿಶೀಲನೆಗೆ ನಿರಾಕರಿಸಿದ್ದರು.


2018: ಪ್ಯಾರಿಸ್‌, ಫ್ರಾನ್ಸ್‌ : ನೀಡಲಾಗಿದ್ದ  ಎಲ್ಲ  ಎಚ್ಚರಿಕೆಗಳನ್ನು ಕಡೆಗಣಿಸಿ ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ಮುಂದುವರೆಸಿರುವ ಪಾಕಿಸ್ಥಾನವನ್ನು ಫ್ರಾನ್ಸ್ ಉಗ್ರ ನಿಗ್ರಹ ಹಣಕಾಸು ಕಗ್ಗಾವಲು ಸಂಸ್ಥೆಯಾಗಿರುವ ಫೈನಾನ್ಶಿಯಲ್ಟಾಸ್ಕ್ ಫೋರ್ಸ್‌ (ಎಫ್ಎಟಿಎಫ್) ಅಧಿಕೃತವಾಗಿ "ಗ್ರೇ ಲಿಸ್ಟ್‌' ಗೆ ಸೇರಿಸಿತು. ಪ್ಯಾರಿಸ್ಸಿನಲ್ಲಿ  ಇತ್ತೀಚೆಗೆ  ನಡೆದ ಎಫ್ಎಟಿಎಫ್ ಮಹಾಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಯಿತು. ಪಾಕಿಸ್ಥಾನ ಹಲವು ಎಚ್ಚರಿಕೆಗಳನ್ನು ಸಂಪೂರ್ಣವಾಗಿ ಅಲಕ್ಷಿಸಿ ತನ್ನ ನೆಲದಲ್ಲಿ  ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದನ್ನು ಮುಂದುವರಿಸಿದೆ ಎಂದು ಸಭೆ ಹೇಳಿತು.  ಎಸ್ ಟಿಎಫ್ ಎನ್ನುವುದು ಒಂದು ಕಣ್ಗಾವಲು ಸಂಸ್ಥೆಯಾಗಿದ್ದು ಇದು ಜಗತ್ತಿನಾದ್ಯಂತ ಭಯೋತ್ಪಾದಕ ಸಂಘಟನೆಗಳಿಗೆ ನಿಗೂಢವಾಗಿ ಒದಗುವ ಹಣಕಾಸು ನೆರವು ಮತ್ತು ಒಟ್ಟಾರೆಯಾಗಿ ನಡೆಯುವ ಹಣ ದುರುಪಯೋಗ ವಿದ್ಯಮಾನಗಳ ಮೇಲೆ ಹದ್ದಿನ ಕಣ್ಣಿಡುತ್ತದೆಪಾಕಿಸ್ಥಾನವನ್ನು ಎಫ್ಎಟಿಎಫ್ ಗ್ರೇ ಲಿಸ್ಟ್ಗೆ ಸೇರಿಸುವ ಉಪಕ್ರಮಕ್ಕೆ ಮುನ್ನ ಪಾಕಿಸ್ಥಾನದ ಮಧ್ಯಾವಧಿ ಹಣಕಾಸು ಸಚಿವ ಡಾ. ಶಂಶದ್ಅಖ್ತರ್ಅವರು ಪಾಕ್ಉಗ್ರರಿಗೆ ದೊರಕುತ್ತಿರುವ ಹಣಕಾಸು ನೆರವನನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಪಾಕಿಸ್ಥಾನವನ್ನು ಗ್ರೇ ಲಿಸ್ಟ್ಗೆ ಸೇರಿಸಬಾರದೆಂದು ಬಿನ್ನವಿಸಿಕೊಂಡರು ಎಂಬುದಾಗಿ ಪಾಕಿಸ್ಥಾನದ ಖಾಸಗಿ ಟಿವಿ ಚ್ಯಾನಲ್ಜಿಯೋ ನ್ಯೂಸ್ವರದಿ ಮಾಡಿತು.



2018:  ಉಡುಪಿ: ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದುಪರಿಣಾಮ ಆಗುಂಬೆ ಘಾಟಿಯ 7 ನೇ ಸುತ್ತಿನಲ್ಲಿ ಕುಸಿತವಾಗಿದ್ದು ಅಪಾಯದ ಅಂಚಿಗೆ ತಲುಪಿತು.  ರಸ್ತೆಗೆ ಹಾಕಲಾಗಿದ್ದ ಟಾರು ಮಣ್ಣಿನೊಡನೆ ಕುಸಿದು ಹೋಗಿದ್ದು ಅಪಾಯ ಎದುರಾಯಿತು. ಕೆಲ ದಿನಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲಿ  ಭಾರೀ ಮಳೆಯ ಪ್ರಮಾಣ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿ ಸಂಚಾರಕ್ಕೆ ವ್ಯಾಪಕ ತೊಂದರೆಯಾಗಿತ್ತುಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

2016:ಜುನಾಗಢ: ಗೋವು ಪವಿತ್ರವಾದ ಪ್ರಾಣಿಕಾಮಧೇನು ಎಂದೆಲ್ಲಾ ಪೂಜಿಸುವ ಪರಿಪಾಠ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆಅದಕ್ಕೆ ಪೂರಕವಾಗಿ ಗೋ ಮೂತ್ರದಲ್ಲಿ ಈಗ ಚಿನ್ನದ ಅಂಶಗಳು ಪತ್ತೆಯಾಗಿರುವುದು ಈದಿನ ಹೊಸ ಸುದ್ದಿ.  ಸತತ 4 ವರ್ಷಗಳ ನಿರಂತರ ಸಂಶೋಧನೆಯ  ಫಲಿತಾಂಶವನ್ನು ಜುನಾಗಢ ಕೃಷಿ ವಿವಿ ವಿಜ್ಞಾನಿಗಳು ಈ ದಿನ ಬಹಿರಂಗ ಪಡಿಸಿದರು. ಗಿರ್ ತಳಿಯ 400 ಗೋವುಗಳ ಮೂತ್ರವನ್ನು ಸಂಗ್ರಹಿಸಿ ವಿವಿಯ ಆಹಾರ ಪರೀಕ್ಷಾ ಲ್ಯಾಬ್ನಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿತ್ತು1ಲೀಟರ್ ಗೋಮೂತ್ರದಲ್ಲಿ 3 ರಿಂದ 10 ಗ್ರಾಂ ಚಿನ್ನ ಪತ್ತೆಯಾಗಿದೆ. ನೀರಿನಲ್ಲಿ ಕರಗಬಲ್ಲ ಅಯಾನ್ಗಳ ರೂಪದಲ್ಲಿ ಪತ್ತೆಯಾಗಿರುವ ಚಿನ್ನವನ್ನು ರಾಸಾಯನಿಕ ವಿಧಾನದಿಂದ ಘನ ರೂಪಕ್ಕೂ ತರಬಹುದು ಎಂದು ಸಂಶೋಧನಾ ತಂಡದ ಮುಖ್ಯಸ್ಥ, ಬಯೋ ಟೆಕ್ನಾಲಜಿ ವಿಭಾಗ ಅಧ್ಯಕ್ಷ ಡಾ. ಬಿ..ಗೋಲಾಕಿಯಾ ಹೇಳಿದರು. 
338ಕ್ಕೂ ಹೆಚ್ಚು ಪ್ರತಿಜೀವಕ ಪತ್ತೆ: ಗ್ಯಾಸ್ ಕ್ರೋಮೆಟೋಗ್ರಾಫಿ-ಮಾಸ್ ಸ್ಪೆಕ್ಟೋಮೆಟ್ರಿ ವಿಧಾನ ಬಳಸಿ ಪ್ರಯೋಗ ಮಾಡಿದ್ದು ಯಶ ನೀಡಿದೆ . 5100 ಸಂಯುಕ್ತಗಳೂ ಗೋಮೂತ್ರದಲ್ಲಿ ಕಂಡುಬಂದಿದೆ. ಇವುಗಳಲ್ಲಿ 338ಕ್ಕೂ ಹೆಚ್ಚು ಪ್ರತಿಜೀವಕ (ಆಂಟಿ ಬಯಾಟಿಕ್)ಗಳಾಗಿದ್ದು, ಜೌಷಧೀಯ ಬಳಕೆಗೆ ಬರುತ್ತದೆ. ಎಮ್ಮೆ, ಕುದುರೆ, ಒಂಟೆ, ಮೇಕೆ ಗಳ ಮೂತ್ರವನ್ನೂ ಪ್ರಯೋಗಕ್ಕೆ ಒಲಪಡಿಸಿದ್ದೆವು. ಗೋಮೂತ್ರದಲ್ಲಿ ಕಂಡುಬಂದ ಯಾವುದೇ ಆಂಟಿ ಬಯಾಟಿಕ್ಗಳು ಅವುಗಳಲ್ಲಿ ಪತ್ತೆಯಾಗಿಲ್ಲ ಎಂದು ವಿಜ್ಞಾನಿಗಳು ವಿವರಿಸಿದರು.

2016: ಹೈದರಾಬಾದ್: ತೆಲಂಗಾಣಕ್ಕೆ ಪ್ರತ್ಯೇಕ ಹೈಕೋರ್ಟ್ ಸ್ಥಾಪಿಸಬೇಕು ಎಂದು ನ್ಯಾಯಾಧೀಶರು ನಡೆಸುತ್ತಿರುವ ಹೋರಾಟ ತೀವ್ರವಾಗಿದ್ದು, ಹೈದರಾಬಾದ್ ಹೈಕೋರ್ಟ್ ಶಿಸ್ತು ಕ್ರಮದ ಆಧಾರದ ಮೇಲೆ 11 ನ್ಯಾಯಾಧೀಶರನ್ನು ಅಮಾನತುಗೊಳಿಸಿತು. ಹಿಂದಿನ ದಿನ  ತೆಲಂಗಾಣ ನ್ಯಾಯಾಧೀಶರ ಅಸೋಸಿಯೇಷನ್ ಅಧ್ಯಕ್ಷ ಕೆ. ರವೀಂದ್ರ ರೆಡ್ಡಿ ಮತ್ತು ಕಾರ್ಯದರ್ಶಿ ವರಪ್ರಸಾದ್ ಅವರನ್ನು ಅಮಾನತು ಮಾಡಲಾಗಿತ್ತು. ಈದಿನ
ಮತ್ತೂ 9 ನ್ಯಾಯಾಧೀಶರನ್ನು ಅಮಾನತು ಮಾಡಿ ಹೈದರಾಬಾದ್ ಹೈಕೋರ್ಟ್ ಅದೇಶ ಹೊರಡಿಸಿತು.  11 ನ್ಯಾಯಾಧೀಶರನ್ನು ಅಮಾನತು ಮಾಡಿರುವ ಕ್ರಮವನ್ನು ವಿರೋಧಿಸಿ ತೆಲಂಗಾಣದ ಸುಮಾರು 200 ನ್ಯಾಯಾಧೀಶರು ಸಾಮೂಹಿಕ ರಜೆಯ ಮೇಲೆ ತೆರಳಲು ನಿರ್ಧರಿಸಿದರು.

2016: ಬಾಕು (ಅಜರ್ಬೈಜಾನ್): ಐಎಸ್ಎಸ್ಎಫ್ ವಿಶ್ವ ಶೂಟಿಂಗ್ ಟೂರ್ನಿಯ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಭಾರತದ ಸಂಜೀವ್ ರಜಪೂತ್ ಬೆಳ್ಳಿ ಪದಕ ಜಯಿಸಿದರು. ಸಂಜೀವ್ ರಜಪೂತ್ ಫೈನಲ್ನಲ್ಲಿ 456.9 ಅಂಕ ಕಲೆ ಹಾಕುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು. ಕ್ರೋಷಿಯಾದ ಪೀಟರ್ ಗ್ರೋಸಾ 457.5 ಅಂಕ ಕಲೆ ಹಾಕಿ ಚಿನ್ನದ ಪದಕ ಗೆದ್ದರೆ, ಕೊರಿಯಾದ ಹುಯೆಂಜುನ್ ಕಿಮ್ 445.5 ಅಂಕ ಕಲೆ ಹಾಕಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಸಂಜೀವ್ 1167 ಅಂಕ ಕಲೆ ಹಾಕಿ 7ನೇ ಸ್ಥಾನ ಪಡೆಯುವ ಮೂಲಕ ಫೈನಲ್ಗೆ ಅರ್ಹತೆ ಗಿಟ್ಟಿಸಿದ್ದರು. ಆದರೆ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಸಾಧನೆ ಮಾಡಿರುವ ಗಗನ್ ನಾರಂಗ್ 1161 ಅಂಕ ಕಲೆಹಾಕಿ 23ನೇ ಸ್ಥಾನ ಪಡೆದರೆ, ಚೈನ್ ಸಿಂಗ್ 1159 ಅಂಕ ಕಲೆಹಾಕಿ 32ನೇ ಸ್ಥಾನ ಪಡೆಯುವ ಮೂಲಕ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

2016: ನವದೆಹಲಿ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ನೂತನ ಶ್ರೇಯಾಂಕ ಪ್ರಕಟಿಸಿದ್ದು, ಭಾರತ ಪುರುಷರ ಹಾಕಿ ತಂಡ ಏಳನೇ ಶ್ರೇಯಾಂಕದಿಂದ ಐದನೇ ಶ್ರೇಯಾಂಕಕ್ಕೆ ಬಡ್ತಿ ಪಡೆದುಕೊಳ್ಳುವ ಮೂಲಕ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡಿತು. ಲಂಡನ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಳ್ಳಿ ಪದಕ ಗೆದ್ದ ಭಾರತ ತಂಡ ಎರಡು ಸ್ಥಾನ ಬಡ್ತಿ ಪಡೆಯುವ ಮೂಲಕ ಐದನೇ ಸ್ಥಾನ ಅಲಂಕರಿಸಿತು. ನೂತನ ಶ್ರೇಯಾಂಕದ ಪ್ರಕಾರ ಆಸ್ಟ್ರೇಲಿಯಾ ಪ್ರಥಮ ಸ್ಥಾನವನ್ನು ಭದ್ರಪಡಿಸಿಕೊಂಡಿತು. ದ್ವಿತೀಯ ಸ್ಥಾನ ನೆದರ್ಲ್ಯಾಂಡ್ ಹಾಗೂ ತೃತೀಯ ಸ್ಥಾನವನ್ನು ಜರ್ಮನಿ ತನ್ನದಾಗಿಸಿಕೊಂಡವು. ಮುಂಬರುವ ಅಗಸ್ಟ್ನಲ್ಲಿ ನಡೆಯಲಿರುವ ರಿಯೋಡಿ’ಜನೈರೋದಲ್ಲಿ ಒಲಿಂಪಿಕ್ ನಡೆಯಲಿರುವ ಹಿನ್ನೆಲೆ ಭಾರತ ಟಾಪ್ ಫೈವ್ನಲ್ಲಿ ಸ್ಥಾನ ಪಡೆದಿರುವುದು ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿತು.
ಮಹಿಳಾ ವಿಭಾಗದಲ್ಲಿ ಅರ್ಜೆಂಟೀನಾ ಅಗ್ರ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿವೆ. ಭಾರತದ ವನಿತೆಯರು 13ನೇ ಸ್ಥಾನ ಪಡೆದುಕೊಂಡರು.

2016: ಉತಾಹ್: ನಾಸಾದಿಂದ ಜಗತ್ತಿನ ಪ್ರಥಮ ಶಕ್ತಿಶಾಲಿ ರಾಕೆಟನ್ನು ಉತಾಹ್ ಉಡಾವಣೆ ಕೇಂದ್ರದಿಂದ ಜೂನ್ 28ರಂದು (ಭಾರತದಲ್ಲಿ ಜೂನ್ 29) ಉಡಾವಣೆ ಮಾಡಲಿದೆ. ಬಾಹ್ಯಾಕಾಶ ಯಾತ್ರಿಗಳಿಗೆ ಮತ್ತು ಮಂಗಳ ಗೃಹ ಹಾಗೂ ಇನ್ನಿತರ ಬಾಹ್ಯಾಕಾಶ ಯಾತ್ರೆಗಳಿಗೆ ರಾಕೆಟ್ ಸಹಾಯವಾಗಲಿದೆ ಎಂದು ನಾಸಾ ಪ್ರಕಟಿಸಿತು. ಜೂನ್ 28ರ  ಬೆಳಗಿನ ಜಾವ ಉಡಾವಣೆ ಮಾಡಲಾಗುವ ರಾಕೆಟ್ ಜಗತ್ತಿನ ಶಕ್ತಿದಾಯಕ ರಾಕೆಟ್ ಆಗಲಿದೆ ಎಂದು ನಾಸಾ ತಿಳಿಸಿತು. ಬಾಹ್ಯಾಕಾಶದಲ್ಲಿ ಯಾನಿಗಳ ನಿರ್ದಿಷ್ಟ ಕಕ್ಷೆ ಜತೆಗೆ ದತ್ತಾಂಶ ಕೂಡ ಒದಗಿಸಲಿದೆ ಎಂದು ನಾಸಾ ಹೇಳಿದೆ. ಉಡಾವಣೆ ಮಾಡಲಿರುವ ರಾಕೆಟ್ ಪ್ರಯೋಗ ಕಡೆಯ ಸಲದ್ದಾಗಿದ್ದು ಇದರ ನಂತರ 2018 ರಲ್ಲಿ ನಾಸಾ ನಿಗದಿತ ಇಎಮ್1 ಎಂಬ ಹೆಸರಿನಲ್ಲಿ ಅಧಿಕೃತ ಸೇವೆಯನ್ನು ಓರಿಯನ್ ಬಾಹ್ಯಾಕಾಶ ನೌಕೆಗೆ ಜೋಡಣೆ ಮಾಡಲಿದೆ. ಓರಿಯನ್ ನೌಕೆ ಚಂದ್ರಯಾನಕ್ಕೆ ರಾಕೆಟ್ ಜತೆ ಇನ್ನೂ 13 ಉಪಗ್ರಹಗಳನ್ನು 2018 ರಲ್ಲಿ ಹೊತ್ತೊಯ್ಯಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಉಪಕರಣಗಳು ಅಥವಾ ಕೂಬ್ಸ್ಯಾಟ್ಸ್ ಎಂದು ಕರೆಯಲ್ಪಡುವ ವಸ್ತುಗಳನ್ನು ಹೊರಲಿದೆ. ಇವು ಮುಂಬರುವ ಉದ್ದೇಶಿತ ಮನುಕುಲದ ಮಂಗಳ ಗೃಹ ವಾಸದ ಬಗ್ಗೆ ನಿಖರ ಮಾಹಿತಿ ಒದಗಿಸುತ್ತವೆ ಎಂದು ನಾಸಾದ ಉಪ ನಿರ್ವಾಹಕ ದಾವಾ ನ್ಯೂಮಾನ್ ಹೇಳಿದರು.

2016: ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸ್ಥಳೀಯ ನಾಯಕ ಎನಿಸಿಕೊಂಡಿದ್ದ ವ್ಯಕ್ತಿಯೋರ್ವ ಈದಿನ ಮುಂಜಾನೆಯಿಂದ ಕುಪ್ವಾರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬಲಿಯಾಗಿದ್ದಾನೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದರು. ಮುಜಾಹಿದ್ದೀನ್ ಸಂಘಟನೆಯಲ್ಲಿ ಗುರುತಿಸಿಕೊಂಡು ಪ್ರಮುಖ ನಾಯಕನಾಗಿ ಹೊರಹೊಮ್ಮಿ, ಈಗ ಯೋಧರ ಗುಂಡಿಗೆ ಬಲಿಯಾದ ವ್ಯಕ್ತಿಯನ್ನು ಸಮೀರ್ ವಾನಿ ಎಂದು ಗುರುತಿಸಲಾಯಿತು. ಕಳೆದೆರಡು ದಿನಗಳಿಂದಲೂ ಗಡಿಯಲ್ಲಿ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇದ್ದು, ಇದೀಗ ಬಲಿಯಾದ ಸಮೀರ್ ಎಂಬಾತ ನಗ್ರಿ ಹಳ್ಳಿಯಲ್ಲಿ ನಡೆಸಲಾದ ಎನ್ಕೌಂಟರ್ ವೇಳೆ ಬಲಿಯಾದ ಬಳಿಕ ಭಾರತೀಯ ಯೋಧರು ನಗ್ರಿಯ ಮನೆ ಮನೆಯಲ್ಲೂ ಶೋಧ ಕಾರ್ಯ ನಡೆಸುತ್ತಿದ್ದು, ಉಗ್ರರು ಅಡಗಿರುವ ಸಾಧ್ಯತೆ ಇದೆ. ಅಲ್ಲದೆ, ಸ್ಥಳೀಯರನ್ನು ಸ್ಥಳಾಂತರಿಸಲಾಗಿದ್ದು, ಉಗ್ರರು ಹೇಗೂ ತಪ್ಪಿಸಿಕೊಳ್ಳಬಾರದೆನ್ನುವ ಕಾರಣಕ್ಕಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಸಮೀರ್ ವಾನಿ ಹತ್ಯೆ ಬಳಿಕ ಹಿಂಸಾತ್ಮಕ ಪ್ರತಿಭಟನೆಗಳೂ ನಡೆದವು ಎಂದು ವರದಿಗಳು ತಿಳಿಸಿದವು.

2008: ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷೆಯಾಗಿ ನಟಿ-ನಿರ್ಮಾಪಕಿ ಡಾ.ಜಯಮಾಲಾ ಆಯ್ಕೆಯಾದರು. ಈದಿನ ನಡೆದ ಚುನಾವಣೆಯಲ್ಲಿ ನಿರ್ಮಾಪಕ ಭಾ.ಮ.ಹರೀಶ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಜಯಮಾಲಾ ಪಾತ್ರರಾದರು.

2007: ದೇಶದ ಆರ್ಥಿಕ ಬುನಾದಿಯನ್ನೇ ನಡುಗಿಸಿದ್ದ ನಕಲಿ ಛಾಪಾ ಕಾಗದ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿಗೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ನ್ಯಾಯಾಲಯ 13 ವರ್ಷ ಕಠಿಣ ಸಜೆ ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿತು. ಇಷ್ಟೊಂದು ಮೊತ್ತದ ದಂಡ ವಿಧಿಸಿದ್ದು ರಾಷ್ಟ್ರದಲ್ಲೇ ಇದು ಮೊಲನೆಯ ಬಾರಿ ಎನ್ನಲಾಗಿದೆ. ನ್ಯಾಯಾಧೀಶರಾದ ಚಿತ್ರಾ ಬೇಡಿ ಅವರು ಈ ತೀರ್ಪು ನೀಡಿದರು.

2007: ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹಾಗೂ ಅವರ ಸಂಪುಟದ ಸಹೋದ್ಯೋಗಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು.

2007: ಮೊಘಲರ ಕಾಲದ ಐತಿಹಾಸಿಕ ಕೆಂಪು ಕೋಟೆಯನ್ನು ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿತು. ವಿಶ್ವದಾದ್ಯಂತ ಒಟ್ಟು 45 ಸ್ಮಾರಕಗಳನ್ನು ಈ ಪಟ್ಟಿಗೆ ಸೇರಿಸಲು ಗುರುತಿಸಲಾಗಿತ್ತು. ಕೆಂಪುಕೋಟೆಯ ಜೊತೆಗೆ ಜಪಾನಿನ ಇವಾಮಿ ಜಿನ್ ಜಾನ್ ಸಿಲ್ವರ್ ಮೈನ್, ತುರ್ಕಮೆನಿಸ್ಥಾನದ ಪಾರ್ಥಿಯಾನ ಪೋರ್ಟ್ರೆಸೆಸ್ ಆಫ್ ಆಫ್ ನಿಸಾ, ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಒಪೆರಾ ಹೌಸ್ ಸಹಾ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಯಾದವು. ಐದನೆಯ ಮೊಘಲ್ ಚಕ್ರವರ್ತಿ ಷಹಜಹಾನ್ ರಾಜಧಾನಿಯನ್ನು ಆಗ್ರಾದಿಂದ ಷಹಜನಾಬಾದಿಗೆ ಸ್ಥಳಾಂತರಗೊಳಿಸಿದಾಗ ಕೆಂಪುಕೋಟೆಯನ್ನು ನಿರ್ಮಿಸಿದ. ಹೊಸ ರಾಜಧಾನಿಯ ಪೂರ್ವದ ಅಂಚಿನಲ್ಲಿ ಕಟ್ಟಿದ ಈ ಕೋಟೆಗೆ ಕೆಂಪು ಬಣ್ಣದ ಕಲ್ಲುಗಳನ್ನು ಬಳಸಿದ್ದರಿಂದ `ಕೆಂಪು ಕೋಟೆ' (ಲಾಲ್ ಕಿಲಾ) ಎಂಬ ಹೆಸರು ಬಂತು. ಯಮುನಾ ನದಿಯ ತಟದಲ್ಲಿರುವ ಈ ಕೆಂಪುಕೋಟೆ 2.5 ಕಿ.ಮೀ. ಉದ್ದವಿದ್ದು, 16ರಿಂದ 33 ಮೀಟರುವರೆಗೆ ಎತ್ತರವಿದೆ. 1638ರಲ್ಲಿ ಈ ಕೋಟೆಯ ನಿರ್ಮಾಣಕಾರ್ಯ ಆರಂಭವಾಗಿ 1648ರಲ್ಲಿ ಪೂರ್ಣಗೊಂಡಿತು.

2007: ಕನ್ನಡದ ಖ್ಯಾತ ಲೇಖಕ ಹಂಪ ನಾಗರಾಜಯ್ಯ ಮತ್ತು ತೆಲುಗಿನ ವೆಟೂರಿ ಆನಂದ ಮೂರ್ತಿ ಅವರು `ಭಾಷಾ ಸಮ್ಮಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ವಿಶ್ವಸಂಸ್ಥೆಯ 192ನೇ ಸದಸ್ಯ ರಾಷ್ಟ್ರವಾಗಿ ಮಾಂಟೆನಿಗ್ರೊ ಗಣರಾಜ್ಯ ಹೊರಹೊಮ್ಮಿತು. 191 ಸದಸ್ಯ ಬಲದ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ಮಾಂಟೆನಿಗ್ರೊ ಸದಸ್ಯತ್ವವನ್ನು ಒಪ್ಪಿಕೊಂಡಿತು.

1997: ಲಾಸ್ ವೆಗಾಸ್ನಲ್ಲಿ ವಿಶ್ವ ಬಾಕ್ಸಿಂಗ್ ಸಂಘದ ಹೆವಿವೇಯ್ಟ್ ಪ್ರಶಸ್ತಿಗಾಗಿ ಹೋರಾಟದ ಮೂರನೇ ಸುತ್ತಿನ ಬಳಿಕ ಎದುರಾಳಿ ಇವಾಂಡರ್ ಹೋಲಿಫೀಲ್ಡ್ ಅವರ ಕಿವಿ ಕಚ್ಚಿದ್ದಕ್ಕಾಗಿ ಮೈಕ್ ಟೈಸನ್ ಅವರನ್ನು ಬಾಕ್ಸಿಂಗ್ ಕ್ರೀಡೆಯಿಂದ ಅನರ್ಹಗೊಳಿಸಲಾಯಿತು. ನೆವಾಡಾ ಸ್ಟೇಟ್ ಅಥ್ಲೆಟಿಕ್ ಕಮೀಷನ್ ನಂತರ ಟೈಸನ್ ಅವರ ಬಾಕ್ಸಿಂಗ್ ಲೈಸೆನ್ಸನ್ನು ನವೀಕರಿಸಿತು.

1982: ಕಾನ್ಪುರ ಮತ್ತು ಮೈನ್ ಪುರಿ ಜಿಲ್ಲೆಗಳಲ್ಲಿ ನಡೆದ 16 ಜನರ ಕಗ್ಗೊಲೆ ಪ್ರಕರಣದ ಪ್ರತಿಧ್ವನಿಯಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ವಿಶ್ವನಾಥ ಪ್ರತಾಪ್ ಸಿಂಗ್ ರಾಜೀನಾಮೆ ಸಲ್ಲಿಸಿದರು.

1972: ಭಾರತದ ಸಂಖ್ಯಾಶಾಸ್ತ್ರಜ್ಞ ಹಾಗೂ ಭೌತತಜ್ಞ ಪ್ರಶಾಂತ ಚಂದ್ರ ಮಹಾಲನೋಬಿಸ್ (1893-1972) ಅವರು ತಮ್ಮ 79ನೇ ಹುಟ್ಟುಹಬ್ಬಕ್ಕಿಂತ ಒಂದು ದಿನ ಮೊದಲು ನಿಧನರಾದರು. ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ ಸ್ಟಿಟ್ಯೂಟ್ ಹುಟ್ಟು ಹಾಕಿದ ಅವರು ಭಾರತದ ಕೈಗಾರಿಕಾ ಧೋರಣೆ ಮತ್ತು ಎರಡನೆಯ ಪಂಚವಾರ್ಷಿಕ ಯೋಜನೆ (1956-61) ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 1950ರಲ್ಲಿ ನ್ಯಾಷನಲ್ ಸ್ಯಾಂಪಲ್ ಸರ್ವೆ ನಡೆಸಿದ ಅವರು ಭಾರತದಲ್ಲಿ ಸಂಖ್ಯಾಶಾಸ್ತ್ರ ಸಂಬಂಧಿ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಸೇಷನ್ ಸ್ಥಾಪಿಸಿದರು.

1948: ಸಂಗೀತ, ಪತ್ರಿಕೋದ್ಯಮ, ಜಾಹೀರಾತು, ಸಾರ್ವಜನಿಕ ಸಂಪರ್ಕ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಬಹುಮುಖ ಪ್ರತಿಭೆ ಹೊಂದಿದ್ದ ಗಾಯತ್ರಿ ಚಂದ್ರಶೇಖರ ಅವರು ನೇತ್ರ ಶಸ್ತ್ರಚಿಕಿತ್ಸಕ ಎಸ್. ಕೃಷ್ಣಮೂರ್ತಿ- ರುಕ್ಮಿಣಿ ದಂಪತಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿದರು.

1944: ಗ್ರಾಮೀಣ ವೈದ್ಯರಾಗಿ, ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಖ್ಯಾತರಾಗಿರುವ ಡಾ. ನಾರಾಯಣ ಭಟ್ಟ ಮೊಗಸಾಲೆ (ಡಾ. ನಾ. ಮೊಗಸಾಲೆ) ಅವರು ವಿಠಲಭಟ್ಟ- ಸರಸ್ವತಿ ದಂಪತಿಯ ಮಗನಾಗಿ ಕಾಸರಗೋಡು ಜಿಲ್ಲೆ ಕೋಳ್ಯೂರು ಗ್ರಾಮದ ಮೊಗಸಾಲೆಯಲ್ಲಿ ಜನಿಸಿದರು. 1966ರಲ್ಲಿ ಕಾಂತಾವರದಲ್ಲಿ ರೈತ ಯುವಕ ಸಂಘ, 1976ರಲ್ಲಿ ಬೇಲಾಡಿಯಲ್ಲಿ ಕಾಂತಾವರ ಕನ್ನಡ ಸಂಘ, 1978ರಲ್ಲಿ ಮೂಡುಬಿದರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠ ಸ್ಥಾಪಿಸಿದ ವೈದ್ಯ ನಾ. ಮೊಗಸಾಲೆ ಅವರು ಈ ಪ್ರಶಸ್ತಿ ಪೀಠದ ಮೂಲಕ ಕರ್ನಾಟಕದಾದ್ಯಂತ ಸಾಹಿತ್ಯ ವಲಯದಲ್ಲಿ ಸುಪರಿಚಿತ ವ್ಯಕ್ತಿ. ಸಾಹಿತ್ಯ ಸಂಘಟನೆಯೊಂದಿಗೆ 14ಕ್ಕೂ ಹೆಚ್ಚು ಸೃಜನಶೀಲ ಸಾಹಿತ್ಯ ಕೃತಿಗಳನ್ನು ರಚಿಸಿದ ಮೊಗಸಾಲೆ ಹಲವಾರು ಕವನ ಸಂಕಲನಗಳನ್ನೂ ಪ್ರಕಟಿಸಿದವರು. ಕಡೆಂಗೋಡ್ಲು ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಹಾವನೂರು ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ಮೊಗಸಾಲೆ ಅವರನ್ನು ಅಭಿಮಾನಿಗಳು `ಅಯಸ್ಕಾಂತಾವರ' ಅಭಿನಂದನಾ ಗ್ರಂಥ ಸಮರ್ಪಿಸಿ ಉಡುಪಿಯಲ್ಲಿ ಅಭಿನಂದಿಸಿದರು.

1928: ಸಮನ್ವಯ ಕವಿ, ಸೌಜನ್ಯದ ಕವಿ, ಭಾವಜೀವಿ ಎಂದೆಲ್ಲ ಖ್ಯಾತರಾದ ಚೆನ್ನವೀರ ಕಣವಿ ಅವರು ಸಕ್ರಪ್ಪ- ಪಾರ್ವತವ್ವ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು.

1921: ರಾಜಾಮಣಿ ನಾಗರಾಜರಾವ್ ಜನನ.

1921: ಪಿ.ವಿ. ನರಸಿಂಹರಾವ್ ಜನ್ಮದಿನ. ಕಾಂಗ್ರೆಸ್ (ಐ) ಪಕ್ಷದ ಧುರೀಣರಾಗಿದ್ದ ಇವರು 1991ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ (ಐ) ಗೆದ್ದಾಗ ಭಾರತದ ಪ್ರಧಾನಮಂತ್ರಿಯಾದರು.

1919: ಫ್ರಾನ್ಸಿನಲ್ಲಿ `ವಾರ್ಸಿಲ್ಲಿಸ್ ಒಪ್ಪಂದ'ಕ್ಕೆ ಸಹಿ ಮಾಡಿ ಮೊದಲನೇ ಜಾಗತಿಕ ಯುದ್ಧವನ್ನು ಕೊನೆಗೊಳಿಸಲಾಯಿತು.

1914: ಸರ್ಬ್ ರಾಷ್ಟ್ರೀಯವಾದಿ ಗಾವ್ರಿಲೋ ಪ್ರಿನ್ಸಿಪ್ ಆಸ್ಟ್ರಿಯಾದ ಆರ್ಕ್ ಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡ್ ಮತ್ತು ಅವರ ಪತ್ನಿ ಸೋಫಿ ಅವರನ್ನು ಸರಯೇವೊದಲ್ಲಿ ಹತ್ಯೆ ಮಾಡಿದ. ಈ ಘಟನೆ ಮೊದಲ ಜಾಗತಿಕ ಯುದ್ಧಕ್ಕೆ ಕಾರಣವಾಯಿತು.

1461: ಇಂಗ್ಲೆಂಡಿನ ರಾಜನಾಗಿ 4ನೇ ಎಡ್ವರ್ಡನ ಪಟ್ಟಾಭಿಷೇಕ ನಡೆಯಿತು.

No comments:

Post a Comment