Showing posts with label ಇಸ್ರೋ. Show all posts
Showing posts with label ಇಸ್ರೋ. Show all posts

Wednesday, August 28, 2024

PARYAYA: ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

 ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆ. 29ಕ್ಕೆ ಬೆಂಗಳೂರಿನಲ್ಲಿ ಉಪನ್ಯಾಸ ಮಾಲಿಕೆ

ಬೆಂಗಳೂರು: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನಗಳನ್ನು ತನ್ನ ʼಭುವನʼದಂತಹ ವೇದಿಕೆಯ ಜೊತೆಗೆ ಸಂಯೋಜಿಸುವ ಸಾಧ್ಯತೆ ಬಗ್ಗೆ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ – ಇಸ್ರೋ  ಆಸಕ್ತಿ ತಾಳಿದ್ದು, ಈ ಬಗ್ಗೆ ಚರ್ಚಿಸಲು ಉಪನ್ಯಾಸ ಮಾಲಿಕೆಯೊಂದನ್ನು ಬೆಂಗಳೂರಿನಲ್ಲಿ ಸಂಘಟಿಸಲಾಗಿದೆ.

ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ- ನಿಯಾಸ್‌ (ಎನ್‌ ಐ ಎಎಸ್) ಮತ್ತು ಹ್ಯಾನ್ಸ್‌ ಸೀಡೆಲ್‌ ಫೌಂಡೇಷನ್‌ ಜಂಟಿಯಾಗಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ನಿಯಾಸ್‌ ಸಭಾಂಗಣದಲ್ಲಿ  ಆಗಸ್ಟ್‌ 29ರ ಗುರುವಾರ  ಬೆಳಗ್ಗೆ 10 ಗಂಟೆಗೆ ‘ಸ್ಥಳೀಯ ಆಡಳಿತದ ಬಲವರ್ಧನೆ-ತಂತ್ರಜ್ಞಾನ ಮೂಲಕ ಅಂತರ ನಿವಾರಣೆʼ ಉಪನ್ಯಾಸ ಕಾರ್ಯಕ್ರಮವನ್ನು ಸಂಘಟಿಸಿವೆ.

ಕಾರ್ಯಕ್ರಮದಲ್ಲಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಡಾ.ಶಂಕರ ಕೆ. ಪ್ರಸಾದ್‌, ನಿಯಾಸ್‌ನಲ್ಲಿ ʼಇಸ್ರೋ ಚೇರ್‌ ಪ್ರೊಫೆಸರ್‌ ಆಗಿರುವ ಡಾ. ಪಿ.ಜಿ. ದಿವಾಕರ್‌ ಮತ್ತು ನಿಯಾಸ್‌ನಲ್ಲಿ ಸಂಘರ್ಷ ಪರಿಹಾರ  ಮತ್ತು ಶಾಂತಿ ಸಂಶೋಧನಾ ಕಾರ್ಯಕ್ರಮದ ಸಹಾಯಕ ಪ್ರಾಧ್ಯಾಪಕ ಡಾ. ಅಂಶುಮಾನ್‌ ಬೆಹೆರಾ ಪಾಲ್ಗೊಳ್ಳಲಿದ್ದಾರೆ.

ಡಾ. ಶಂಕರ ಪ್ರಸಾದ್‌ ಅವರು ಬ್ಲಾಕ್‌ ಚೈನ್‌, ಇಂಡಿಯಾ ಸ್ಟಾಕ್‌ ಮತ್ತು ಧ್ವನಿ ಸಂವಹನದೊಂದಿಗೆ ಇ-ಆಡಳಿತವನ್ನು ಸಂಯೋಜಿಸುವ ಬಗ್ಗೆ, ಡಾ. ಪಿ. ದಿವಾಕರ್‌ ಅವರು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನಾ ಯೋಜನೆ, ಭೂ ವೀಕ್ಷಣಾ ಉಪಗ್ರಹಗಳು ಮತ್ತು ಜಿಯೋ ಸ್ಪೇಷಿಯಲ್‌ ಟೆಕ್ನಾಲಜಿಗಳ ಮೂಲಕ ಡೇಟಾ ಪ್ರಕ್ರಿಯೆ ಮತ್ತು ಡಾ. ಆಂಶುಮಾನ್‌ ಬೆಹೆರಾ ಭಾರತದಲ್ಲಿ ರಾಜಕೀಯ ಹಿಂಸೆ ಮತ್ತು ಆಂತರಿಕ ಸಂಘರ್ಷಗಳು, ರಾಜಕೀಯ ಸಿದ್ಧಾಂತ ಹಾಗೂ ಅಭಿವೃದ್ಧಿಯ ಸಾಮಾಜಿಕ ಪರಿಣಾಮಗಳ ಬಗ್ಗೆ ಚರ್ಚಿಸುವರು.

ಆಡಳಿತವನ್ನು ವಿಕೇಂದ್ರೀಕರಿಸಲು ಮತ್ತು ಅಂತರ್ಗತ ನಿರ್ಧಾರ ಕೈಗೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ತಳಮಟ್ಟದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಗುರಿಯನ್ನು 73 ನೇ ತಿದ್ದುಪಡಿ ಕಾಯಿದೆ (1992)  ಹೊಂದಿದೆ. ಆದರೆ ಸ್ಥಳೀಯ ಆಡಳಿತದ ತತ್ವಗಳು ಮತ್ತು ಕಾರ್ಯಗಳ ಬಗ್ಗೆ ಸಾಮಾನ್ಯ ಜನರಲ್ಲಿ ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿ ಅರಿವಿನ ಕೊರತೆಯಿಂದಾಗಿ ಅದರ ಯಶಸ್ಸು ಹೆಚ್ಚಾಗಿ ಸೀಮಿತವಾಗಿದೆ.

ಸ್ಥಳೀಯ ಆಡಳಿತದ ತತ್ವಗಳು ಮತ್ತು ಕಾರ್ಯಗಳ ಬಗ್ಗೆ ಜನ ಸಾಮಾನ್ಯರು ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿನ ಅರಿವಿನ ಕೊರತೆಯ ಅಂತರದಿಂದಾಗಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು ಅಗತ್ಯವಾದ ಮಾಹಿತಿಗಳನ್ನು ಹೊಂದಿರುವುದಿಲ್ಲ. ಇಂತಹ ಸವಾಲುಗಳನ್ನು ಗೆಲ್ಲಲು ತಂತ್ರಜ್ಞಾನ ಚಾಲಿತ ಉಪಕ್ರಮಗಳು ನೆರವಾಗುತ್ತವೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದ ಭುವನ್‌ನಂತಹ ಜ್ಞಾನ ವೇದಿಕೆಯು ತಳಮಟ್ಟದಲ್ಲಿ ಉತ್ತಮ ಯೋಜನೆ ಮತ್ತು ನಿರ್ಧಾರ ಕೈಗೊಳ್ಳುವಿಕೆಯನ್ನು ಬೆಂಬಲಿಸಲು ಬೇಕಾದ ಅಮೂಲ್ಯವಾದ ಭೌಗೋಳಿಕ ಮಾಹಿತಿ ಒದಗಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳನ್ನು ಈ ವೇದಿಕೆಯ ಜೊತೆಗೆ ಸಂಯೋಜಿಸುವ ಮೂಲಕ ಪಂಚಾಯಿತ್‌ ರಾಜ್‌ ಸಂಸ್ಥೆಗಳು ಸ್ಥಳೀಯ ಆಡಳಿತವನ್ನು ಬಲಪಡಿಸಬಹುದು. ಈ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆಯು ಆಡಳಿತದ ಅಂತರ ನಿವಾರಣೆ ಮತ್ತು ಅದಕ್ಕಾಗಿ ತಾಂತ್ರಿಕ ಪರಿಹಾರಗಳನ್ನು ಸಂಯೋಜಿಸುವ ಮಾರ್ಗಗಳನ್ನು ಅನ್ವೇಷಿಸುತ್ತದೆ ಎಂದು ನಿಯಾಸ್‌ ಪ್ರಜಾತಂತ್ರ ವೇದಿಕೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
Click the image to see closer view:

PARYAYA: ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ:   ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ ಆ. 29ಕ್ಕೆ ಬೆಂಗಳೂರಿನಲ್ಲಿ ಉಪನ್ಯಾಸ ಮಾಲಿಕೆ ಬೆಂ ಗಳೂರು: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಜನರ ...

Friday, September 1, 2023

PARYAYA: ಸೂರ್ಯನೆಡೆಗೆ ʼಆದಿತ್ಯʼಪಯಣ ಯಶಸ್ವೀ ಉಡ್ಡಯನ

 ಸೂರ್ಯನೆಡೆಗೆ ʼಆದಿತ್ಯʼಪಯಣ: ಯಶಸ್ವೀ ಉಡ್ಡಯನ


ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕಾರಿಗೆ ಹೊರಟಿರುವ ಭಾರತದ ಇಸ್ರೋ ಇಂದು ೨೦೨೩ ಸೆಪ್ಟೆಂಬರ್‌ ೨ರ ಶನಿವಾರ ಸೂರ್ಯನ ಅಧ್ಯಯನಕ್ಕಾಗಿ 
ʼಆದಿತ್ಯ-ಎಲ್-‌೧ ಅಂತರಿಕ್ಷ ವೀಕ್ಷಣಾಲಯವನ್ನು ನಭಕ್ಕೆ ಹಾರಿಸಿತು.

ಬೆಳಗ್ಗೆ ೧೧.೫೦ಕ್ಕೆ ಸರಿಯಾಗಿ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್‌ ಎಲ್‌ ವಿ ಸಿ -೫೭ ರಾಕೆಟ್‌ ಮೂಲಕ ಗಗನಕ್ಕೆ ಚಿಮ್ಮುವ ಮೂಲಕ ʼಆದಿತ್ಯʼ ಅಂತರಿಕ್ಷ ವೀಕ್ಷಣಾಲಯ ಉಡ್ಡಯನಗೊಂಡಿತು.

ಕೆಳಗೆ ಕ್ಲಿಕ್ಕಿಸುವ ಮೂಲಕ ಸೂರ್ಯಯಾನ ಸೊಬಗು ವೀಕ್ಷಿಸಬಹುದು:


ಯಾನದ ನೇರ ಪ್ರಸಾರಕ್ಕಾಗಿ ಕೆಳಗೆ ಕ್ಲಿಕ್‌ ಮಾಡಿ:


PARYAYA: ಸೂರ್ಯನೆಡೆಗೆ ʼಆದಿತ್ಯʼಪಯಣ ಯಶಸ್ವೀ ಉಡ್ಡಯನ:   ಸೂರ್ಯನೆಡೆಗೆ ʼ ಆದಿತ್ಯ ʼ ಪಯಣ  ಯಶಸ್ವೀ ಉಡ್ಡಯನ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕ...

PARYAYA: ಸೂರ್ಯನೆಡೆಗೆ ʼಆದಿತ್ಯʼಪಯಣ

ಸೂರ್ಯನೆಡೆಗೆ ʼಆದಿತ್ಯʼಪಯಣ

 ಸೂರ್ಯನೆಡೆಗೆ ʼಆದಿತ್ಯʼಪಯಣ

ಇಲ್ಲಿಂದ ನೋಡಿ ನೇರವಾಗಿ

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕಾರಿಗೆ ಹೊರಟಿರುವ ಭಾರತದ ಇಸ್ರೋ ಇಂದು ೨೦೨೩ ಸೆಪ್ಟೆಂಬರ್‌ ೨ರ ಶನಿವಾರ ಸೂರ್ಯನ ಅಧ್ಯಯನಕ್ಕಾಗಿ ʼಆದಿತ್ಯ-ಎಲ್-‌೧ ಅಂತರಿಕ್ಷ ವೀಕ್ಷಣಾಲಯವನ್ನು ನಭಕ್ಕೆ ಹಾರಿಸಲಿದೆ.

ಬೆಳಗ್ಗೆ ೧೧ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್‌ ಎಲ್‌ ವಿ ಸಿ -೫೭ ರಾಕೆಟ್‌ ಮೂಲಕ ಗಗನಕ್ಕೆ ಚಿಮ್ಮಲಿರುವ ʼಆದಿತ್ಯʼ ಅಂತರಿಕ್ಷ ವೀಕ್ಷಣಾಲಯದ ಉಡ್ಡಯನವನ್ನು ಈ ಕೆಳಗಿನ ಚಿತ್ರವನ್ನು ಕ್ಲಿಕ್ಕಿಸುವ ಮೂಲಕ ಇಸ್ರೋ ಸೂರ್ಯಯಾನವನ್ನು ನೇರವಾಗಿ ವೀಕ್ಷಿಸಬಹುದು:

PARYAYA: ಸೂರ್ಯನೆಡೆಗೆ ʼಆದಿತ್ಯʼಪಯಣ:   ಸೂರ್ಯನೆಡೆಗೆ ʼ ಆದಿತ್ಯ ʼ ಪಯಣ ಇಲ್ಲಿಂದ ನೋಡಿ ನೇರವಾಗಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂ...

Saturday, August 26, 2023

PARYAYA: ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತ ಇಳಿದ ೨೦೨೩ ಆಗಸ್ಟ್‌ ೨೩ರ ದಿನದ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದವರು ಒಬ್ಬಿಬ್ಬರಲ್ಲ. ತಮ್ಮದೇ ಆದ ರೀತಿಯಲ್ಲಿ ಅದನ್ನು ಮಂದಿ ಸಂಭ್ರಮಿಸಿದ್ದಾರೆ. ಈ ದಿನವನ್ನು ಇನ್ನು ಮುಂದೆ ಪ್ರತಿವರ್ಷ ʼರಾಷ್ಟ್ರೀಯ ಬಾಹ್ಯಾಕಾಶ ದಿನʼ ಎಂಬುದಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ೨೦೨೩ ಆಗಸ್ಟ್‌ ೧೬ರಂದು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ಇಸ್ರೋದಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಿ ಚಂದ್ರಯಾನ-೩ರ ʼವಿಕ್ರಮʼ ಇಳಿದ ಸ್ಥಳವನ್ನು ʼಶಿವಶಕ್ತಿʼ ಎಂಬುದಾಗಿಯೂ, ಚಂದ್ರನಲ್ಲಿ ಇಳಿದ ಆಗಸ್ಟ್‌ ೨೩ರ ದಿನವನ್ನು ʼರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ದಿನʼ ಎಂಬುದಾಗಿ ಆಚರಿಸುವುದಾಗಿಯೂ, ಚಂದ್ರಯಾನ -೨ರ ತನ್ನ ಗುರುತನ್ನು ಬಿಟ್ಟಿ ಚಂದ್ರನ ನೆಲವನ್ನು ʼತಿರಂಗʼ ಎಂಬುದಾಗಿ ಹೆಸರಿಸುವುದಾಗಿಯೂ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸಿದ ಹಲವರ ಕಲ್ಪನೆಯ ಕೆಲವು ಚಿತ್ರ, ವಿಡಿಯೋಗಳನ್ನೂ ʼಪರ್ಯಾಯʼ ಇಲ್ಲಿ ಪ್ರಕಟಿಸುತ್ತಿದೆ. ಅದರಲ್ಲಿ ಚಂದ್ರನಲ್ಲಿ ಇಳಿದ ಹರ್ಷವನ್ನು ಹಾಡಿನ ರೂಪದಲ್ಲಿ ಬಣ್ಣಿಸಿದ ಹರ್ಷ ಕಾವೇರಿಪುರ ಅವರ ವಿಡಿಯೋ ಒಂದು. ಇದರ ಸಾಹಿತ್ಯ, ಸಂಗೀತ, ಗಾಯನ ಹಳ್ಳೇರಾವ ಕುಲ್ಕರ್ಣಿ ಕೆಂಭಾವಿ ಅವರದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ 
ʼಹರ್ಷ ಕಾವೇರಿಪುರʼ ಅವರ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ:


ಈ ವಿಡಿಯೋ ಕರ್ತೃ ಹರ್ಷ ಅವರ ಬಗ್ಗೆ ತಿಳಿಯಲು ಗೂಗಲ್‌ ಎಂಜಿನ್ನಿನಲ್ಲಿ ಸರ್ಚ್‌ ಮಾಡಿದರೆ ನಿಮಗೆ ಅವರ ಬಗ್ಗೆ ಹೆಚ್ಚಿನ ವಿವರ ಸಿಗುವುದಿಲ್ಲ. ಆದರೆ ಅವರ ಹಲವಾರು ವಿಡಿಯೋ, ರೀಲ್‌ಗಳು ಸಿಗುತ್ತವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆಂದು ಅನಿಸುವ ವಿಡಿಯೋಗಳು ಇವು. ಆಸಕ್ತರು ಗೂಗಲ್‌ ನಲ್ಲಿ ತಡಕಾಡಿ ʼಹರ್ಷ ಕಾವೇರಿಪುರʼ ಅವರ ವಿಡಿಯೋಗಳ ಸೊಬಗು ಸವಿಯಬಹುದು.

ಆದರೆ ಇಲ್ಲಿ ಹಾಕಿರುವ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಹರ್ಷ ಕಾವೇರಿಪುರ ಅವರ ವಿಡಿಯೋ ಮಾತ್ರ ನನಗೆ ಅಲ್ಲಿ ಸಿಗಲಿಲ್ಲ. ನಿಮಗೆ ಸಿಕ್ಕಿದರೆ ಖಂಡಿತ ʼಪರ್ಯಾಯʼಕ್ಕೆ ತಿಳಿಸಿ.

ಮೇಲೆ ತಿಳಿಸಿದಂತೆ ಚಂದ್ರಯಾನ ಯಶಸ್ಸಿನ ಸಂದರ್ಭವನ್ನು ಹಲವಾರು ಮಂದಿ ತಮ್ಮದೇ ಕಲ್ಪನೆ, ತಮಗೆ ಕಂಡಂತೆ ಚಿತ್ರ, ತಮ್ಮಿಷ್ಟದಂತೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದಾರೆ.

ಯಾರೋ ಒಬ್ಬರು ಉಡುಪಿಯ ಕೃಷ್ಣನನ್ನು ಚಂದ್ರನ ಹಿನ್ನೆಲೆ ಇಟ್ಟು ಚಿತ್ರಿಸಿದರೆ, ಇನ್ನೊಬ್ಬರಿಗೆ ಚಂದ್ರನಲ್ಲಿ ಇಳಿದ ʼವಿಕ್ರಮ್ʼ ʼತಿರುಪತಿʼ ತಿಮ್ಮಪ್ಪನಂತೆ ಕಂಡಿದೆ.

ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿಯವರು ತಮ್ಮದೇ ʼಇಮೋಜಿʼ ರಚಿಸಿದ್ದಾರೆ. 

ನಂಜುಂಡಸ್ವಾಮಿ ಅವರ ಕಲ್ಪನೆಯನ್ನೂ ನೀವಿಲ್ಲಿ ನೋಡಬಹುದು.

ಇದರೊಂದಿಗೆ ಇನ್ನೊಂದು ಪುಟ್ಟ ವಿಡಿಯೋ ಇದೆ. ಅದು ಚಂದ್ರಯಾನದ ಸ್ಫೂರ್ತಿಯ ʼಪುಟ್ಟುʼ.

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ, ಆನಂದಿಸಿ.







PARYAYA: ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!: ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ! ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತ ಇಳಿದ ೨೦೨೩ ಆಗಸ್ಟ್‌ ೨೩ರ ದಿನದ ಐತಿಹಾಸಿಕ ಕ್...

Wednesday, August 23, 2023

PARYAYA: ಚಂದ್ರನತ್ತ ಪಯಣ: ಭಾರತದ ದಾಪುಗಾಲು

 ʼಚಂದಮಾಮʼ ಸ್ಪರ್ಶಕ್ಕೆ ತ್ರಿ ʼವಿಕ್ರಮʼ ಹೆಜ್ಜೆ

ಚಂದ್ರನತ್ತ ಪಯಣ: ಭಾರತದ ದಾಪುಗಾಲು

ಚಂದ್ರಯಾನ ೧
೨೦೦೩ ಆಗಸ್ಟ್‌ ೧೫: ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಂದ ಚಂದ್ರಯಾನ ಕಾರ್ಯಕ್ರಮದ ಘೋಷಣೆ

೨೦೦೮ ಆಕ್ಟೋಬರ್‌ ೨೦೦೮: ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೧ ಉಡ್ಡಯನ

೨೦೦೮ ನವೆಂಬರ್‌ ೦೮: ಚಂದ್ರಯಾನ ೧ರಿಂದ ಚಂದ್ರನ ವರ್ಗಾವಣೆ ಪಥ ಪಯಣ ಪ್ರಾರಂಭ.

೨೦೦೮ ನವೆಂಬರ್‌ ೧೪: ಚಂದ್ರಯಾನ ೧ರ ಮೊದಲ ಮೂನ್‌ ಇಂಪ್ಯಾಕ್ಟ್‌ ಪ್ರೋಬ್‌ ಹೊರ ಹಾರಿತು ಮತ್ತು ಚಂದ್ರನ ಮೇಲ್ಮೈಗೆ ಸಮೀಪ ಅಪ್ಪಳಿಸಿತು. ಚಂದ್ರನ ಮೇಲ್ಮೈಯಲ್ಲಿ ನೀರಿನ ಕಣಗಳ ಅಸ್ತಿತ್ವ ದೃಢಪಟ್ಟಿತು.

೨೦೦೯ ಆಗಸ್ಟ್‌ ೨೮: ಇಸ್ರೋ ಪ್ರಕಾರ ಚಂದ್ರಯಾನ ೧ ಕಾರ್ಯಕ್ರಮ ಕೊನೆಗೊಂಡಿತು.

ಚಂದ್ರಯಾನ ೨

೨೦೧೯ ಜುಲೈ ೨೨: ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೨ ಉಡಾವಣೆ

೨೦೧೯ ಆಗಸ್ಟ್‌ ೨೦: ಚಂದ್ರಯಾನ -೨ ಬಾಹ್ಯಾಕಾಶ ನೌಕೆ ಚಂದ್ರಕಕ್ಷೆಯನ್ನು ಪ್ರವೇಶಿಸಿತು.

೨೦೧೯ ಸೆಪ್ಟೆಂಬರ್‌ ೦೨: ಚಂದ್ರಧ್ರುವ ಕಕ್ಷೆಯಲ್ಲಿ ೧೦೦ ಕಿಮೀ ಎತ್ತರದಲ್ಲಿದ್ದಾಗ ಚಂದ್ರಯಾನದಿಂದ ವಿಕ್ರಮ್‌ ಲ್ಯಾಂಡರನ್ನು ಬೇರ್ಪಡಿಸಲಾಯಿತು. ವಿಕ್ರಮ್‌ ಲ್ಯಾಂಡರ್‌  ಚಂದ್ರನ ಮೇಲ್ಮೈಯಿಂದ ೨.೧ ಕಿಮೀ ಎತ್ತದಲ್ಲಿದ್ದಾಗ ಭೂ ಕೇಂದ್ರದ ಸಂಪರ್ಕ ಕಡಿದುಹೋಯಿತು.

ಚಂದ್ರಯಾನ ೩

೨೦೨೩ ಜುಲೈ ೧೪: ಚಂದ್ರಯಾನ -೩ ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

ಚಂದ್ರಯಾನ ೩ರ ಎಲ್ಲ ಪರೀಕ್ಷೆಗಳೂ ಸಫಲವಾಗಿದ್ದು, ಚಂದ್ರಕಕ್ಷೆಯಲ್ಲಿ ಚಂದ್ರನಿಗೆ ಅತ್ಯಂತ ಸಮೀಪಕ್ಕೆ ತಲುಪಿದೆ. ಬಾಹ್ಯಾಕಾಶ ನೌಕೆಯನ್ನು ನಿಧಾನವಾಗಿ ವೇಗ ತಗ್ಗಿಸುತ್ತಾ ಚಂದ್ರ ನೆಲದ ಸಮೀಪಕ್ಕೆ ಒಯ್ಯಲಾಗಿದೆ.

೨೦೨೩ ಆಗಸ್ಟ್‌ ೨೩: ಚಂದ್ರಯಾನ -೩ ವಿಕ್ರಮ್‌ ಲ್ಯಾಂಡರ್‌ ಮತ್ತು ರೋವರ್‌ ಚಂದ್ರನೆಲದ ಮೇಲೆ ʼಹಗುರ ಸ್ಪರ್ಶʼಕ್ಕೆ ಸಜ್ಜಾಗಿದೆ. ಕೊನೆಯ ಕ್ಷಣಗಳಲ್ಲಿ ಏನಾದರೂ ಅನಿರೀಕ್ಷಿತ ಸಮಸ್ಯೆ ಕಂಡು ಬಂದರೆ ಚಂದ್ರ ಸ್ಪರ್ಶ ಕಾರ್ಯಕ್ರಮವನ್ನು ಆಗಸ್ಟ್‌ ೨೭ರವರೆಗೆ ವಿಳಂಬಿಸಬಹುದು ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಆದರೆ ಇಸ್ರೋದ ಎಲ್ಲ ವಿಜ್ಞಾನಿಗಳೂ ಈದಿನ ಯಶಸ್ವೀ ಚಂದ್ರ ಸ್ಪರ್ಶ ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ.

ಚಂದ್ರ ಸ್ಪರ್ಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಜೆ ೬ ಗಂಟೆ ಸುಮಾರಿಗೆ ಚಂದ್ರಸ್ಪರ್ಶಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಈ ಸಾಧನೆಯೊಂದಿಗೆ ಚಂದ್ರನೆಲವನ್ನು ಈವರೆಗೆ ಯಾರೂ ಸ್ಪರ್ಶಿಸದ ಭಾಗವನ್ನು ತಲುಪಿದ ಪ್ರಪ್ರಥಮ ದೇಶ ಭಾರತ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.

ಈ ಕೌತುಕದ ಕ್ಷಣವನ್ನು ನೇರವಾಗಿ ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ: 


 ಇವುಗಳನ್ನೂ ಓದಿ: 

Zanda Ooncha Rahe Hamara.. Vijyaee Chandra Tiranga Pyara.!


PARYAYA: ಚಂದ್ರನತ್ತ ಪಯಣ: ಭಾರತದ ದಾಪುಗಾಲು:   ʼ ಚಂದಮಾಮ ʼ ಸ್ಪರ್ಶಕ್ಕೆ ತ್ರಿ ʼ ವಿಕ್ರಮ ʼ ಹೆಜ್ಜೆ ಚಂದ್ರನತ್ತ ಪಯಣ: ಭಾರತದ ದಾಪುಗಾಲು ಚಂದ್ರಯಾನ ೧ ೨೦೦೩ ಆಗಸ್ಟ್‌ ೧೫ : ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪ...

Monday, September 2, 2019

ಚಂದ್ರಯಾನ ೨ : ಆರ್ಬಿಟರ್ ನಿಂದ ವಿಕ್ರಮ್ ಲ್ಯಾಂಡರ್ ಪ್ರತ್ಯೇಕ

ಚಂದ್ರಯಾನ :  ಆರ್ಬಿಟರ್ ನಿಂದ 
ವಿಕ್ರಮ್  ಲ್ಯಾಂಡರ್  ಪ್ರತ್ಯೇಕ

ಇಸ್ರೋಗೆ ಮತ್ತೊಂದು ಯಶಸ್ಸು
ನವದೆಹಲಿ:  ಚಂದ್ರಯಾನ -2 ಬಾಹ್ಯಾಕಾಶ ನೌಕೆಯ ಆರ್ಬಿಟರ್ ನಿಂದ ವಿಕ್ರಮ್ ಲ್ಯಾಂಡರ್ ನಿಂದ ಬೇರ್ಪಡೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನವು 2019ರ ಸೆಪ್ಟೆಂಬರ್ 2ರಂದು  ಮಹತ್ವದ  ಯಶಸ್ಸನ್ನು ಸಾಧಿಸಿತು.

 ಚಂದ್ರಯಾನ  - ರಲ್ಲಿದ್ದ  ಲ್ಯಾಂಡರ್-ರೋವರ್ ನ್ನು ಈದಿನ  ಮಧ್ಯಾಹ್ನ ಸಂಯೋಜಿತ ಮಾಡ್ಯೂಲ್ನಿಂದ ಬೇರ್ಪಡಿಸಲಾಯಿತು.  ಈಗ, ಲ್ಯಾಂಡರ್ ಮತ್ತು ಆರ್ಬಿಟರ್ ಅನ್ನು ಪ್ರತ್ಯೇಕವಾಗಿ ನಿಯಂತ್ರಿಸಲಾಗುತ್ತದೆ.

ವಿಕ್ರಮ್  ಲ್ಯಾಂಡರ್  ಈದಿನ ಮಧ್ಯಾಹ್ನ ಭಾರತೀಯ ಕಾಲಮಾನ  ೧೩.೧೫ ಗಂಟೆಗೆ ಚಂದ್ರಯಾನ- ಆರ್ಬಿಟರ್ನಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ಚಂದ್ರಯಾನ ಆರ್ಬಿಟರ್ ಮತ್ತು ಲ್ಯಾಂಡರ್ ನ  ಎಲ್ಲಾ ವ್ಯವಸ್ಥೆಗಳು ಸುಸ್ಥಿತಿಯಲ್ಲಿವೆಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೇಳಿಕೆ ತಿಳಿಸಿತು.
ಬೆಂಗಳೂರು ಸಮೀಪದ  ಬ್ಯಾಲಾಳುವಿನಲ್ಲಿರುವ  ಭಾರತೀಯ  ಅಂತರಿಕ್ಷ ಜಾಲವು (ಇಂಡಿಯನ್  ಡೀಪ್ ಸ್ಪೇಸ್  ನೆಟ್ವರ್ಕ್ -ಐಡಿಎಸ್ಎನ್) ಆಂಟೆನಾಗಳ ಬೆಂಬಲದೊಂದಿಗೆ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ನಲ್ಲಿ  (ಐಎಸ್ಟಿಆರ್ಎಸಿ) ಇರುವ  ಮಿಷನ್ ಆಪರೇಶನ್ಸ್  ಕಾಂಪ್ಲೆಕ್ಸಿನಿಂದ (ಎಂಒಎಕ್ಸ್) ಲ್ಯಾಂಡರ್ ಮತ್ತು ಆರ್ಬಿಟರ್  ಅನ್ನು ಪರೀಕ್ಷಿಸುತ್ತಿದೆ.

ಇಸ್ರೋ  ವಿಜ್ಞಾನಿಗಳು  ನಾಳೆ  (ಸೆಪ್ಟೆಂಬರ್ 3ರ ಬೆಳಿಗ್ಗೆ ೦೯:೦೦ ರಿಂದ ೧೦:೦೦ ವೇಳೆಯಲ್ಲಿ  ಎರಡು ಡಿಬೂಸ್ಟಿಂಗ್  ಕಾರ್ಯವನ್ನು   ನಿರ್ವಹಿಸಲಿದ್ದಾರೆ. ಉಭಯ ಕಾರ್ಯಗಳು  ಲ್ಯಾಂಡರ್-ರೋವರ್ ಅನ್ನು ೩೬x ೧೦೦ ಕಿಮೀ ಕಕ್ಷೆಗೆ ಇಳಿಸಲಿದೆ.

ದೇಶೀಯವಾಗಿ  ಅಭಿವೃದ್ಧಿ ಪಡಿಸಿದ ಲ್ಯಾಂಡರ್ ನ ವ್ಯವಸ್ಥೆಗಳು ಚೆನ್ನಾಗಿ ಕಾರ್ಯ ನಿರ್ವರ್ಹಿಸುತ್ತಿವೆಯೇ ಎಂಬುದಾಗಿ ಪರೀಕ್ಷಿಸಲು ನಡೆದ ಚೊಚ್ಚಲ ಯತ್ನವಾದ್ದರಿಂದ ಚಂದ್ರಯಾನ 2ರ ಆರ್ಬಿಟರ್ ನಿಂದ ಲ್ಯಾಂಡರ್- ರೋವರ್ ನ್ನು ಪ್ರತ್ಯೇಕಿಸಿರುವ ಈದಿನದ ಕಾರ್ಯವು ಚಂದ್ರಯಾನ 2 ಯೋಜನೆಯ ನಿರ್ಣಾಯಕ ಕಾರ್ಯವಾಗಿತ್ತು.
ಚಂದ್ರನೆಲದ ಮೇಲೆ ಇಳಿಯುವ ಪ್ರಕ್ರಿಯೆ  ಪೂರ್ಣಗೊಳ್ಳುವವರೆಗೆ, ಅದು ಭಯಾನಕವಾಗಿರುತ್ತದೆ. ಇಲ್ಲಿಯವರೆಗೆ, ನಾವು ಲ್ಯಾಂಡರ್ನಲ್ಲಿರುವ  ವ್ಯವಸ್ಥೆಗಳನ್ನು, ವಿಶೇಷವಾಗಿ ಪ್ರೊಪಲ್ಷನ್ ಸಿಸ್ಟಮನ್ನು ನಿರ್ವಹಿಸಿಲ್ಲ. ಚಾಲಿತ ಮೂಲವನ್ನು ಒಳಗೊಂಡಂತೆ ಇದೇ ಮೊದಲ ಬಾರಿಗೆ  ನಾವು ಇದನ್ನು ನಿರ್ವಹಿಸುತ್ತಿದ್ದೇವೆ. ಹೀಗಾಗಿಯೇ ಇದು ನಿರ್ಣಾಯಕ’  ಎಂದು ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಗೆ ಪ್ರವೇಶಿಸಿದ ನಂತರ ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದರು.

Monday, April 1, 2019

ವೈರಿ ರಾಡಾರ್ ಮೇಲೆ ಇನ್ನು ಭಾರತದ ಉಪಗ್ರಹ ಕಣ್ಣು..!

ವೈರಿ ರಾಡಾರ್ ಮೇಲೆ ಇನ್ನು ಭಾರತದ ಉಪಗ್ರಹ ಕಣ್ಣು..!
ಶ್ರೀಹರಿಕೋಟಾ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿ ಪಡಿಸಿದಎಮಿಸ್ಯಾಟ್- ವಿದ್ಯುನ್ಮಾನ ಬುದ್ಧಿಮತ್ತೆ ಉಪಗ್ರಹ (ಎಲೆಕ್ಟ್ರೋನಿಕ್  ಇಂಟಲಿಜೆನ್ಸ್ ಸೆಟಲೈಟ್) ಮತ್ತು  28 ವಿದೇಶೀ ಉಪಗ್ರಹಗಳನ್ನು ಒಂದೇ ಯಾನದಲ್ಲಿ ಮೂರು ಕಕ್ಷೆಗಳಲ್ಲಿ ಇಳಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ2019 ಎಪ್ರಿಲ್ 1 ಸೋಮವಾರ ಇನ್ನೊಂದುವಿಕ್ರಮವನ್ನು ಮೆರೆಯಿತು.

436 ಕಿಲೋಗ್ರಾಂ ತೂಕದಎಮಿಸ್ಯಾಟ್ಉಪಗ್ರಹವು ವೈರಿ ದೇಶಗಳ ನೆಲದಲ್ಲಿರುವ ರಾಡಾರ್ ಗಳನ್ನು ಪತ್ತೆ ಹಚ್ಚುವ ಹಾಗೂ ಅವುಗಳ ಮೇಲೆ ಕಣ್ಗಾವಲು ಇಡುವ ಸಾಮರ್ಥ್ಯವನ್ನು ಹೊಂದಿದ್ದು ಭಾರತೀಯ ರಕ್ಷಣಾ ಪಡೆಗಳಿಗೆ ಭೀಮಬಲ ತಂದು ಕೊಡಲಿವೆ.

ಎಮಿಸ್ಯಾಟ್, 28 ವಿದೇಶೀ ಉಪಗ್ರಹಗಳು ಮತ್ತು ಮೂರು ವೈಜ್ಞಾನಿಕ  ಉಪಕರಣಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ45 ಉಡಾವಣಾ ವಾಹಕವು  ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ  ಎರಡನೇ ಉಡಾವಣಾ ವೇದಿಕೆಯಿಂದ ಬೆಳಗ್ಗೆ 9.27 ಗಂಟೆಗೆ ನಭಕ್ಕೆ ನೆಗೆಯಿತು.

 
ಉಡಾವಣೆಗೊಂಡ ಸುಮಾರು 17 ನಿಮಿಷಗಳ ಬಳಿಕ ಪಿಎಸ್ ಎಲ್ ವಿಯು ಎಮಿಸ್ಯಾಟ್ ಉಪಗ್ರಹವನ್ನು  753.6 ಕಿಮೀ ಎತ್ತರದ ಕಕ್ಷೆಯಲ್ಲಿ ನಿಲ್ಲಿಸಿತು.

ಮುಂದಿನ 1.5 ಗಂಟೆಯಲ್ಲಿ ಉಡಾವಣಾ ವಾಹಕವು ನಾಲ್ಕನೇ ಮತ್ತು ಅಂತಿಮ ಹಂತವಾದಪಿಎಸ್4- ಮರುಚಾಲನೆಗೊಂಡು ಎರಡು ಬಾರಿ ಶಟ್ ಡೌನ್ ಮಾಡಿಕೊಂಡು 504 ಕಿಮೀ ಕಕ್ಷೆಯನ್ನು ಪ್ರವೇಶಿಸಿತು. ಮಿಷನ್ ಆರಂಭವಾದ ಎರಡು ಗಂಟೆಗಳ ಬಳಿಕ ,  ಪಿಎಸ್4  ಅಮೆರಿಕ, ಲಿಥುವೇನಿಯಾ, ಸ್ಪೇನ್ ಮತ್ತು ಸ್ವಿಜರ್ಲೆಂಡ್ ದೇಶಗಳ 28 ವಿದೇಶೀ ಉಪಗ್ರಹಗಳನ್ನು ಅವುಗಳ ಕಕ್ಷೆಯಲ್ಲಿ ಇಳಿಸಿತು.

ಇದು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 47ನೇ ಯಾನ. ಭೂಮಿಯ ಸುತ್ತ  3 ಗಂಟೆ ಪಯಣಿಸಿದ   ಯಾನ ಪಿಎಸ್ ಎಲ್ ವಿಯ  ಸುದೀರ್ಘ ಯಾನಗಳಲ್ಲಿ ಒಂದಾಗಿದೆ. 2018 ಜನವರಿಯಲ್ಲಿ ಉಡಾವಣೆಗೊಂಡಿದ್ದ ಪಿಎಸ್ ಎಲ್ ವಿ  ಸಿ-40 ಯಾನವು ಹಿಂದಿನ ಸುದೀರ್ಘ ಯಾನವಾಗಿದ್ದು 21 ನಿಮಿಷಗಳನ್ನು ತೆಗೆದುಕೊಂಡಿತ್ತು.