ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮಾನದಂಡ ರೆಪೋ ದರವನ್ನು ಮತ್ತೆ 25 ಮೂಲ ಪಾಯಿಂಟ್ ನಷ್ಟು (ಬಿಪಿಎಸ್) ಇಳಿಸಿದೆ. 2019ರಲ್ಲಿ ಕೇಂದ್ರೀಯ ಬ್ಯಾಂಕ್ ಮಾಡಿರುವ ಮೂರನೇ ದರ ಕಡಿತ ಇದಾಗಿದ್ದು ಇದರೊಂದಿಗೆ
ರೆಪೋ ದರ ಶೇಕಡಾ 5.75ಕ್ಕೆ ಇಳಿದಿದೆ.
ಆರ್ಥಿಕ ತಜ್ಞರ ನಿರೀಕ್ಷೆಯಂತೆಯೇ ವಾಣಿಜ್ಯ ಬ್ಯಾಂಕುಗಳಿಗೆ ತಾನು ನೀಡುವ ಹಣದ ಮೇಲಿನ ರೆಪೊ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಡಿತಗೊಳಿಸಿದ್ದು, ಪರಿಣಾಮವಾಗಿ ಹೊಸ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರಗಳು ಇಳಿಯುವ ಸಂಭವ ಇದೆ.
ಆರ್ಥಿಕ ತಜ್ಞರ ನಿರೀಕ್ಷೆಯಂತೆಯೇ ವಾಣಿಜ್ಯ ಬ್ಯಾಂಕುಗಳಿಗೆ ತಾನು ನೀಡುವ ಹಣದ ಮೇಲಿನ ರೆಪೊ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಡಿತಗೊಳಿಸಿದ್ದು, ಪರಿಣಾಮವಾಗಿ ಹೊಸ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರಗಳು ಇಳಿಯುವ ಸಂಭವ ಇದೆ.
ಅಮೆರಿಕದ- ಚೀನಾ ವಾಣಿಜ್ಯ ಸಮರದ ನಡುವೆ ತಮ್ಮ ಆರ್ಥಿಕತೆಗಳಿಗೆ ಒತ್ತು ನೀಡುವ ಸಲುವಾಗಿ ಸಡಿಲ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿರುವ ಏಷ್ಯಾದ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಫಿಲಿಪ್ಪೈನ್ಸ್, ಮಲೇಶ್ಯಾ ಮತ್ತು ನ್ಯೂಜಿಲೆಂಡ್ ಕಳೆದ ತಿಂಗಳು ತಮ್ಮ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಸಿವೆ. ಆಸ್ಟ್ರೇಲಿಯಾ ಸುಮಾರು ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ವಾರ ತನ್ನ ಬಡ್ಡಿ ದರಗಳನ್ನು ಕಡಿತ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಸಭೆಯಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ)
ತನ್ನ ಪಾಲಿಸಿ ರೆಪೋ ದರದಲ್ಲಿ 25 ಮೂಲ ಪಾಯಿಂಟಿನಷ್ಟು ದರ ಕಡಿತವನ್ನು ಪ್ರಕಟಿಸಿತು.
ಐಎಲ್ ಮತ್ತು ಎಫ್ ಎಸ್ ಗಳ ಸುಸ್ತಿ ಹಿನ್ನೆಲೆಯಲ್ಲಿ ಮಾರುಕಟ್ಟೆಗಳ ಮೇಲೆ ಬಿದ್ದಿರುವ ಒತ್ತಡ ಹಾಗೂ ಸಮಗ್ರ ಆಂತರಿಕ ಉತ್ಪನ್ನ (ಜಿಡಿಪಿ) ಮಂದಗತಿಯ ಹಾದಿಯಲ್ಲಿ ಇರುವುದನ್ನು ಅನುಸರಿಸಿ ಆರ್ಥಿಕ ವಿಶ್ಲಷಕರು ಪಾಲಿಸಿ ರೆಪೋ ದರಲ್ಲಿ 25 ಮೂಲ ಪಾಯಿಂಟಿನಷ್ಟು ಇಳಿಕೆಯನ್ನು ನಿರೀಕ್ಷಿಸಿದ್ದವು.
ಅಸ್ಥಿರ ಹಣದುಬ್ಬರ ಪ್ರವೃತ್ತಿ ಮತ್ತು ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಕಡಿತವನ್ನು ಅನುಸರಿಸಿ ಹಣಕಾಸು ನೀತಿ ಸಡಿಲಿಕೆಗೆ ಬೇಡಿಕೆ ಬಂದಿತ್ತು.
ಎನ್ ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರೀಯ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ಬಾಂಧವ್ಯ ಘರ್ಷಣಾತ್ಮಕವಾಗಿದ್ದು ಆಗಿನ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಯಲ್ಲಿ ಪರ್ಯವಸಾನಗೊಂಡಿತ್ತು. ಕೇಂದ್ರೀಯ ಬ್ಯಾಂಕಿನ ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯ ಹಣಕಾಸು ನೀತಿ ಸಮಿತಿಯು (ಎಂಪಿಸಿ) 2019ರಲ್ಲಿ ಸತತವಾಗಿ ಎರಡು ಬಾರಿ ರೆಪೋ ದರಗಳನ್ನು ಇಳಿಸಿತ್ತು.
2019ರ ಏಪ್ರಿಲ್ ತಿಂಗಳಲ್ಲಿ ನಡೆದ ಹಿಂದಿನ ಎಂಪಿಸಿ ಸಭೆಯಲ್ಲಿ ಪಾಲಿಸಿ ರೆಪೋ ದರವನ್ನು ಮೂಲಪಾಯಿಂಟ್ 25ರಷ್ಟು ಕಡಿತ ಮಾಡಿ ಶೇಕಡಾ 6ಕ್ಕೆ ಇಳಿಸಲಾಗಿತ್ತು. ಚಿಲ್ಲರೆ ಹಣದುಬ್ಬರ ಶೇಕಡಾ 4ರ ಗುರಿಯ ಒಳಗೆ ಇದ್ದುದರಿಂದ ತಟಸ್ಥ ನೀತಿಯನ್ನು ಮುಂದುವರೆಸಲಾಗಿತ್ತು.
2019ರ ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯು 4:2 ಬಹುಮತದೊಂದಿಗೆ ಮೊದಲ ಬಾರಿಗೆ ಪಾಲಿಸಿ ರೆಪೋ ದರವನ್ನು 25 ಮೂಲಪಾಯಿಂಟಿನಷ್ಟು ಇಳಿಸುವ ನಿರ್ಧಾರವನ್ನು ಕೈಗೊಂಡಿತ್ತು.
2019ರ ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯು 4:2 ಬಹುಮತದೊಂದಿಗೆ ಮೊದಲ ಬಾರಿಗೆ ಪಾಲಿಸಿ ರೆಪೋ ದರವನ್ನು 25 ಮೂಲಪಾಯಿಂಟಿನಷ್ಟು ಇಳಿಸುವ ನಿರ್ಧಾರವನ್ನು ಕೈಗೊಂಡಿತ್ತು.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:
No comments:
Post a Comment