ಇಂದಿನ ಇತಿಹಾಸ History Today ಜೂನ್ 18
2019:
ನವದೆಹಲಿ: ಕಾಂಗ್ರೆಸ್ ಪಕ್ಷ ತನ್ನ ಲೋಕಸಭಾ ನಾಯಕನಾಗಿ ಅಧೀರ್ ರಂಜನ್ ಚೌಧುರಿ ಅವರನ್ನು ಹೆಸರಿಸಿತು. ಕಾಂಗ್ರೆಸ್ ಅಧ್ಯಕ್ಷ
ರಾಹುಲ್ ಗಾಂಧಿ ಅವರು ಈ ಹುದ್ದೆಯನ್ನು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಚೌಧುರಿ ಅವರನ್ನು ನೇಮಿಸಲಾಯಿತು.
ಚೌಧುರಿ ಪಶ್ಚಿಮ ಬಂಗಾಳದಿಂದ ಲೋಕಸಭೆಗೆ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ' ‘ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನ ಹೊಣೆಯನ್ನು ನನಗೆ ವಹಿಸಲಾಗಿದೆ. ಪಕ್ಷದ ಸಾಲಿನಲ್ಲಿ ಮುಂದೆ ನಿಲ್ಲುವಂತೆ ನನಗೆ ಸೂಚಿಸಲಾಗಿದೆ. ನಾನು ಅದಕ್ಕೆ ಒಪ್ಪಿದ್ದೇನೆ. ಪಕ್ಷದಲ್ಲಿ ನಾನೊಬ್ಬ ಕಾಲಾಳು ಸೈನಿಕನಾಗಿದ್ದೇನೆ. ಕಾಲಾಳು
ದಳದ ಯೋಧ
ಯಾವಾಗಲೂ ಮುಂದೆ ನಿಂತು ಬಡಿದಾಡಬೇಕು. ನಾನು ಆ ಕೆಲಸ ಮಾಡುತ್ತೇನೆ' ಎಂದು ಚೌಧುರಿ ಪ್ರತಿಕ್ರಿಯಿಸಿದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್‌ನ ಸಂಸದೀಯ ಕಾರ್ಯತಂತ್ರ ಸಮಿತಿ ಈದಿನ ಬೆಳಗ್ಗೆ ಸಭೆ ನಡೆಸಿ ಚೌಧುರಿ ಅವರನ್ನು ಲೋಕಸಭೆ ನಾಯಕನಾಗಿ ಆಯ್ಕೆ ಮಾಡುವ ನಿರ್ಧಾರ ಕೈಗೊಂಡಿತು. ಸಭೆಯಲ್ಲಿ ಚೌಧುರಿ ಕೂಡ ಪಾಲ್ಗೊಂಡಿದ್ದರು.
ಎ.ಕೆ ಆಂಟನಿ, ಜೈರಾಮ್ ರಮೇಶ್, ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಪಿ. ಚಿದಂಬರಂ, ಕೆ. ಸುರೇಶ್ ಮುಂತಾದ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಸಂಸದೀಯ ಕಾರ್ಯತಂತ್ರ ಸಮಿತಿಯ ಸಭೆಯಲ್ಲಿ ಹಾಜರಿದ್ದರು.
2019: ಅಲಹಾಬಾದ್: ಅಯೋಧ್ಯೆ ಮೇಲೆ 2005ರಲ್ಲಿ ನಡೆದ ಉಗ್ರ ದಾಳಿ ಪ್ರಕರಣದಲ್ಲಿ ನಾಲ್ವರು ದೋಷಿಗಳಿಗೆ ಅಲಹಾಬಾದ್ ಹೈಕೋರ್ಟಿನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಒಬ್ಬನನ್ನು ದೋಷಮುಕ್ತಗೊಳಿಸಲಾಯಿತು. ಅಂದಿನ ದಾಳಿಯಲ್ಲಿ 14 ಸಿಆರ್‌ಪಿಎಫ್ ಜವಾನರು ಗಾಯಗೊಂಡಿದ್ದರು. ಐವರು ಜೈಶ್-ಇ- ಮೊಹಮ್ಮದ್ (ಜೆಇಎಂ) ಸಂಘಟನೆ ಉಗ್ರರು ಈ ದಾಳಿಯ ಸಂಚು ರೂಪಿಸಿದ್ದರು. ಯಾತ್ರಿಕರಂತೆ ವೇಷ ಹಾಕಿಕೊಂಡು ಫೈಜಾಬಾದ್ನಿಂದ ಬಾಡಿಗೆ ಟ್ಯಾಕ್ಸಿ ಮೂಲಕ ಅಯೋಧ್ಯೆಗೆ ಬಂದಿದ್ದರು. ಬಳಿಕ ಅದೇ ವಾಹನವನ್ನು ಸ್ಫೋಟಕಗಳಿಂದ ಉಡಾಯಿಸಿದ್ದರು. ಬಳಿಕ ನಡದ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ ಯೋಧರು ಗಾಯಗೊಂಡಿದ್ದರು.
2019: ನವದೆಹಲಿ: ಇತ್ತೀಚೆಗಷ್ಟೆ ೧೨ ಸರ್ಕಾರಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ
ಮತ್ತೆ ೧೫ ಹಿರಿಯ ಅಧಿಕಾರಿಗಳಿಗೆ
ಕಡ್ಡಾಯ ನಿವೃತ್ತಿಯ ಆದೇಶ ನೀಡಿತು. ಸಿಬಿಐಸಿ ಮುಖ್ಯ ಆಯುಕ್ತ
ಅನುಪ್ ಶ್ರೀವಾಸ್ತವ್, ಆಯುಕ್ತರಾದ ಅತುಲ್ ದೀಕ್ಷಿತ್, ಸಂಸಾರ್ ಚಂದ್, ಜಿ ಶ್ರೀ ಹರ್ಷ, ವಿಜಯ್ ಬ್ರಿಜ್, ಹೆಚ್ಚುವರಿ
ಆಯುಕ್ತರಾದ ಅಶೋಕ್ ಕೆ ಮಹಿಂದಾ, ವೀರೇಂದ್ರ ಕುಮಾರ್ ಅಗರ್ವಾ ಲ್, ಉಪ ಆಯುಕ್ತರಾದ ಅಮರೇಶ್ ಜೈನ್,
ಜಂಟಿ ಆಯುಕ್ತರಾದ ನಳಿನ್ ಕುಮಾರ್, ಸಹಾಯಕ ಆಯುಕ್ತ
ಎ ಸ್ ಎ ಸ್ ಪಬನಾ, ಎ ಸ್ ಎ ಸ್ ಬಿಶ್ತ್ ಮತ್ತು ವಿನೋದ್
ಕುಮಾರ್ ಸಂಗಾ ಅವರಿಗೆ ಕಡ್ಡಾಯ ನಿವೃತ್ತಿ
ತೆಗೆದುಕೊಳ್ಳುವಂತೆ ಆದೇಶಿ ಸ ಲಾಯಿತು. ಈ ಹದಿನೈದು ಜನರಲ್ಲಿ ಪರೋಕ್ಷ ಮತ್ತು ಕ ಸ್ಟಮ್ಸ್ ತೆರಿಗೆ
ಕೇಂದ್ರ ಮಂಡಳಿ(ಸಿಬಿಐಸಿ)ಯ ಮುಖ್ಯ ಆಯುಕ್ತ, ಆಯುಕ್ತ, ಹೆಚ್ಚುವರಿ ಆಯುಕ್ತ ಮತ್ತು ಉಪ ಆಯುಕ್ತರು ಸೇರಿದ್ದಾರೆ ಎನ್ನಲಾಯಿತು. ಅಪರಾಧ ಪಿತೂರಿ ಮತ್ತು ಭ್ರಷ್ಟಾಚಾರ ಆರೋಪದ ಮೇ ಲೆ ಇವರಿಗೆ ಕಡ್ಡಾಯ ನಿವೃತ್ತಿ
ಘೋಷಿ ಸ ಲಾಗಿದ್ದು, ಇದು ಕಳೆದ ಒಂದು ವಾರದಲ್ಲಿ ನಡೆದ ಎರಡನೇ ಮಹತ್ವದ ಘಟನೆ ಎನ್ನಿಸಿತು. ಕಡ್ಡಾಯ ನಿವೃತ್ತಿಗೆ
ಸೂಚಿಸ ಲಾಗಿರುವ ೧೫ ಜನರ ಪೈಕಿ ೧೧ ಜನ ಸಿಬಿಐ
ತನಿಖೆ ಎದುರಿಸುತ್ತಿದ್ದರು. ಪ್ರಕರಣ ಎದುರಿಸುತ್ತಿರುವ ಎಲ್ಲರೂ ಉನ್ನತ ಪದವಿಯ ಅಧಿಕಾರಿಗಳೇ ಇದ್ದು,
ಸಾಮಾನ್ಯವಾಗಿ ಈ ಎಲ್ಲರ ವಿರುದ್ಧವೂ ಹಣ ದುರುಪಯೋಗ ಹಾಗೂ ಹಗರಣ ಸಂಬಂಧ ಪ್ರಕರಣಗಳೇ ದಾಖ ಲಾಗಿರುವುದು ಉ ಲ್ಲೇಖಾರ್ಹ. ಇ ಲಾಖೆಯ ಆಯುಕ್ತ ಅತುಲ್ ದೀಕ್ಷಿತ್ ವಿರುದ್ಧ
ಸಿಬಿಐ ನಲ್ಲಿ ವಂಚನೆ ಮತ್ತು ಆದಾಯ ಮೀರಿದ ಆಸ್ತಿ ಗಳಿಕೆ
ಸಂಬಂಧ ಎರಡು ಪ್ರಕರಣಗಳು ದಾಖ ಲಾಗಿದ್ದವು.
ಕೇಂದ್ರ ನಾಗರೀಕ ಸೇವೆ ೧೯೭೨ ಹಾಗೂ ಸಾಮಾನ್ಯ ಹಣಕಾ ಸು ನಿಯಮ ೫೬ರ ಅನ್ವಯ ೫೦ ರಿಂದ ೫೫ ವರ್ಷ ದಾಟಿದ ಅಥವಾ ೩೦ ವರ್ಷಕ್ಕೂ ಹೆಚ್ಚು ಕಾಲ ಸರ್ಕಾರಿ
ಸೇವೆ ಸಲ್ಲಿಸಿದವರಿಗೆ ಕಡ್ಡಾಯವಾಗಿ ನಿವೃತ್ತಿ
ನೀಡುವ ಅಧಿಕಾರ ಸರ್ಕಾರಕ್ಕಿದೆ. ಈ ಹಿಂದೆಯೂ ಐಎಎ
ಸ್ ಅಧಿಕಾರಿಗಳಾದ ಎಂ.ಎನ್. ವಿಜಯಕುಮಾರ್, ಕೆ. ನರಸಿಂಹನ್ ಹಾಗೂ ಐಪಿಎ ಸ್ ಅಧಿಕಾರಿಗಳಾದ ಮಾಯಾಂಹ್
ಶೀ ಲ್ ಚೌವ್ಹಾನ್ ಹಾಗೂ ರಾಜ್ ಕುಮಾರ್ ದೇವಂಗನ್ ಅವರಿಗೆ
ಕಡ್ಡಾಯ ನಿವೃತ್ತಿ ನೀಡ ಲಾಗಿತ್ತು.ಜೂನ್
೧೦ ರಂದು ಭ್ರಷ್ಟಾಚಾರ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಹನ್ನೆರಡು ಮಂದಿ ಹಿರಿಯ ಐಟಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ
ಸೂಚನೆ ನೀಡಿತ್ತು. ಈ ಎಲ್ಲ ಅಧಿಕಾರಿಗಳೂ
ಹಣಕಾ ಸು ಇ ಲಾಖೆಗೆ ಸಂಬಂಧಿಸಿದ
ಅಧಿಕಾರಿಗಳಾಗಿದ್ದರು. ಹನ್ನೆರಡರಲ್ಲಿ ಎಂಟು ಜನರನ್ನು
ಈಗಾಗ ಲೇ ಸಿಬಿಐ ತನಿಖೆಗೊಳಡಿಸಿದ್ದು, ಆರೋಪ ಸಾಬೀತಾದ
ಹಿನ್ನೆ ಲೆಯಲ್ಲಿ ಅವರನ್ನು ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಲು ಸೂಚನೆ ನೀಡ ಲಾಗಿತ್ತು. ಸರ್ಕಾರ ಮೊದಲ
ಬಾರಿಗೆ ಉನ್ನತಾಧಿಕಾರಿಗಳ ವಿರುದ್ಧ ಇಂಥ ಕ್ರಮ ಕೈಗೊಂಡಿದೆ ಎನ್ನಲಾಗಿತ್ತು.
2019: ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಕೊನೆಗೂ ದುಬೈಯಲ್ಲಿ ಪತ್ತೆಯಾದ. ಮನ್ಸೂರ್ ಖಾನ್ ಹಾಗೂ ಆತನ ಕುಟುಂಬವನ್ನು
ರಾ ಸಂ ಸ್ಥೆಯ ಅಧಿಕಾರಿಗಳು ದು ಬೈನಿಂದ ೧೨೨ ಕಿ.ಮೀ.
ದೂರವಿರುವ ಬೀಚ್ ಸಿಟಿಯ ರಾ
ಸ್-ಅ ಲ್- ಕೈಯಮ್ ಬಳಿ ಪತ್ತೆ ಮಾಡಿದರು. ದುಬೈಯಿಂದ ಬೇರೆ ಕಡೆ ಹೋಗದಂತೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ಅಲ್ಲದೆ
ಮನ್ಸೂರ್ ಬಗ್ಗೆ ದು ಬೈ ಪೊಲೀ ಸರಿಗೆ ಮಾಹಿತಿ
ನೀಡುತ್ತಿದ್ದರು. ೧೫ ದಿನದಲ್ಲಿ ಮನ್ಸೂರ್ ನನ್ನು ಕರ್ನಾಟಕಕ್ಕೆ ಕರೆ ತರಲು ಯತ್ನಿಸುತ್ತಿದ್ದಾರೆ ಎಂದು ಪೊಲೀ
ಸ್ ಉನ್ನತ ಮೂಲಗಳು ತಿಳಿಸಿದವು. ಮನ್ಸೂರ್ ಸಿಗಲುಬಗ್ಗೆ ಮೌಲ್ವಿಯೊಬ್ಬರು ಸುಳಿವು ಕೊಟ್ಟಿದ್ದರು. ಆ ಮೌಲ್ವಿಯ ಎಡವಟ್ಟಿನಿಂದ ಮನ್ಸೂರ್ ಬಲೆಗೆ ಬಿದ್ದಿದ್ದಾನೆ. ಇಂಟರ್
ನೆಟ್ ಕರೆಯಲ್ಲಿ ಮನ್ಸೂರ್
ಬೆಂಗಳೂರಿನ ಮೌಲ್ವಿ ಶೋಯಬ್ ನನ್ನು ನಿರಂತರವಾಗಿ ಸಂಪರ್ಕಿ ಸುತ್ತಿದ್ದ. ಮನ್ಸೂರ್ ಗಂಟೆಗೊಮ್ಮೆ ಫೇ ಸ್‌ಬುಕ್‌ನಲ್ಲಿ
ಆನ್ ಲೈನ್‌ಗೆ ಬಂದು ಹೋಗುತ್ತಿದ್ದ. ಹಾಗಾಗಿ ಪೊಲೀಸರು ಆತನ ಇಂಟರ್ ನೆಟ್ ಕರೆಯ ಮೇ ಲೆ ಕಣ್ಣಿಟ್ಟಿದ್ದರು.
ಮನ್ಸೂರ್ ಮೆ ಸೆಂಜರ್ ಮೂಲಕ ಮೌಲ್ವಿ ಶೋಯಬ್‌ಗೆ ಕರೆ ಮಾಡುತ್ತಿದ್ದ. ಯಾರು ಮೌಲ್ವಿ ಶೋಯಬ್ ಶೋಯ ಬ್
ಹೆಣ್ಣೂರು ರಸ್ತೆಯಲ್ಲಿ ಮದರಸಾ ನಡೆ ಸುತ್ತಿದ್ದು, ಮನ್ಸೂರ್ ಈ ಮೌಲ್ವಿ ಜೊತೆ ನಿಕಟ ಸಂಪರ್ಕ ಹೊಂದಿದ್ದ. ಬೆಂಗಳೂರಿನಲ್ಲಿದ್ದಾಗ ಮದರಸಾ ಕಟ್ಟಲು ಮನ್ಸೂರ್, ಮೌಲ್ವಿಗೆ
೨೦ ಕೋಟಿ ರೂ. ನೀಡಿದ್ದ. ಮನ್ಸೂರ್ ಸಹಾಯದೊಂದಿಗೆ
ಮೌಲ್ವಿ ಮದರಸಾ ನಿರ್ಮಾಣ ಮಾಡಿಕೊಂಡಿದ್ದನು. ಆ ಮದರಸಾದಲ್ಲಿಯೇ ಮನ್ಸೂರ್ ಖಾನ್ ಜನರನ್ನು ಮರಳು ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿದವು.
2018: ನವದೆಹಲಿ: ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ೧೮ ಮಂದಿ ಎಐಎಡಿಎಂಕೆ
ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆಗಾಗಿ ಮೂರನೇ ನ್ಯಾಯಮೂರ್ತಿಯಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ
ಎಂ. ಸತ್ಯನಾರಾಯಣನ್ ಅವರನ್ನು ಸುಪ್ರೀಂಕೋರ್ಟ್ ನೇಮಕ ಮಾಡಿತು. ಅನರ್ಹಗೊಂಡ ಶಾಸಕರು ತಮ್ಮ ಪ್ರಕರಣವನ್ನು
ಮದ್ರಾಸ್ ಹೈಕೋರ್ಟಿನಿಂದ ಸುಪ್ರೀಂಕೋರ್ಟಿಗೆ ವರ್ಗಾಯಿಸಬೇಕು ಎಂದು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ
ಸಲ್ಲಿಸಿದ್ದರು. ಶಾಸಕರ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಮೂರನೇ ನ್ಯಾಯಮೂರ್ತಿ
ಬಗ್ಗೆ ಜನರಿಗೆ ವಾಟ್ಸ್ ಆಪ್ ಮೂಲಕ ಮೂರನೇ ನ್ಯಾಯಮೂರ್ತಿಯ ನೇಮಕಾತಿ ವಿಚಾರ ಗೊತ್ತಾಗಿದೆ ಎಂದು ಆಪಾದಿಸಿದ್ದರು. ಪಕ್ಷದಲ್ಲಿ
ಮೂಲೆಗುಂಪಾದ ನಾಯಕ ಟಿ.ಟಿ.ವಿ. ದಿನಕರನ್ ಅವರಿಗೆ ನಿಷ್ಠರಾದ ೧೮ ಮಂದಿ ಶಾಸಕರನ್ನು ಅನಹಗೊಳಿಸಿದ್ದನ್ನು
ಪ್ರಶ್ನಿಸಿದ ಅರ್ಜಿಗಳ ಬಗ್ಗೆ ಮದ್ರಾಸ್ ಹೈಕೋರ್ಟ್ ಜೂನ್ ೧೪ರಂದು ’ವಿಭಜಿತ ತೀರ್ಪು’ ನೀಡಿತ್ತು. ೧೮ ಶಾಸಕರ ಅನರ್ಹತೆ ಪರಿಣಾಮವಾಗಿ
ತಮಿಳುನಾಡಿನ ಅಧಿಕಾರದ ಮೊಗಸಾಲೆಯಲ್ಲಿ ಯಥಾಸ್ಥಿತಿ ನೆಲೆಸಿತ್ತು. ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ
ಮತ್ತು ನ್ಯಾಯಮೂರ್ತಿ ಎಂ. ಸುಂದರ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಮುಖ್ಯಮಂತ್ರಿ ಪಳನಿಸ್ವಾಮಿ
ಅವರನ್ನು ಪದಚ್ಯುತಿಗೊಳಿಸಬೇಕೆಂದು ಕೋರಿದ್ದ ೧೮ ಮಂದಿ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ
ವಿಧಾನಸಭಾಧ್ಯಕ್ಷ ಪಿ. ಧನಪಾಲ್ ಅವರು ೨೦೧೭ರ ಸೆಪ್ಟೆಂಬರ್ ೧೮ರಂದು ಅನರ್ಹಗೊಳಿಸಿದ್ದು ಸರಿಯೇ ಎಂಬ
ಬಗ್ಗೆ ಪರಸ್ಪರ ವಿರುದ್ಧಾಭಿಪ್ರಾಯದ ತೀರ್ಪು ನೀಡಿತ್ತು.
ಅತ್ಯಂತ ಹಿರಿಯ ನ್ಯಾಯಮೂರ್ತಿಯವರನ್ನು ಇದೀಗ ಮುಖ್ಯ ನ್ಯಾಯಮೂರ್ತಿ ಬಳಿಕದ ಆಸನದಲ್ಲಿ ಕೂರಲು
ಆಯ್ಕೆ ಮಾಡುವಂತೆ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಹೊಸದಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್
ನಿರ್ದೇಶನ ನೀಡಿತು. ತನ್ನ ೨೦೦ ಪುಟಗಳ ಆದೇಶದಲ್ಲಿ ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಇಂದಿರಾ
ಬ್ಯಾನರ್ಜಿಯವರು ವಿಧಾನಸಭಾಧ್ಯಕ್ಷರ ನಿರ್ಧಾರವನ್ನು ಎತ್ತಿ ಹಿಡಿದಿದ್ದರು. ವಿಧಾನಸಭಾಧ್ಯಕ್ಷರ ನಿರ್ಧಾರವು
ಯಾವುದೇ ರೀತಿಯಿಂದ ನ್ಯಾಯೋಚಿತವಲ್ಲ, ತರ್ಕಬದ್ಧವಲ್ಲ ಅಥವಾ ವಿಕೃತ ಎಂದು ನಾನು ಹೇಳಲಾರೆ ಎಂದು ಅವರು
ತಮ್ಮ ಆದೇಶದಲ್ಲಿ ತಿಳಿಸಿದ್ದರು. ನ್ಯಾಯಮೂರ್ತಿ ಸುಂದರ್
ಅವರು ತಮ್ಮ ೧೩೫ ಪುಟಗಳ ತೀರ್ಪಿನಲ್ಲಿ ವಿಧಾನಸಭಾಧ್ಯಕ್ಷ ಧನಪಾಲ್ ಅವರ ಆದೇಶವು ವಿಕೃತಿ, ಸಹಜ ನ್ಯಾಯದ
ತತ್ವಗಳಿಗೆ ಬದ್ಧವಾಗದೇ ಇದ್ದುದು ಹಾಗೂ ಸಾಂವಿಧಾನಿಕ ಜನಾದೇಶದ ಉಲ್ಲಂಘನೆಯ ನೆಲೆಯಲ್ಲಿ ತಳ್ಳಿಹಾಕಲು
ಯೋಗ್ಯವಾಗಿದೆ ಎಂದು ಹೇಳಿದ್ದರು. ಜೂನ್ ೧೮ರಂದು ಮದ್ರಾಸ್
ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಮೂರ್ತಿಯವರಾದ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು ೧೮ ಮಂದಿ
ಶಾಸಕರ ಅನರ್ಹತೆ ಪ್ರಕರಣದಲ್ಲಿ ಮೂರನೇ ನ್ಯಾಯಮೂರ್ತಿಯಾಗಿ ಪೀಠಕ್ಕೆ ನ್ಯಾಯಮೂರ್ತಿ ಎಸ್. ವಿಮಲಾ ಅವರನ್ನು
ಪೀಠಕ್ಕೆ ಮೂರನೇ ನ್ಯಾಯಮೂರ್ತಿಯಾಗಿ ನೇಮಿಸಿದ್ದರು.
2009: ಅಪಾರ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರ ಹರ್ಷೋದ್ಗಾರಗಳ ನಡುವೆ ವಿ. ಸೋಮಣ್ಣ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ವಸತಿ, ಮುಜರಾಯಿ ಖಾತೆ ನೀಡಲಾಯಿತು. ಸಚಿವ ಸ್ಥಾನ ತ್ಯಾಗ ಮಾಡಿದ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನೂತನ ಮುಜರಾಯಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಯಿತು.
2009: ಉತ್ತರಪ್ರದೇಶದ 400ಕ್ಕೂ ಹೆಚ್ಚು ಪೊಲೀಸರು ಸುಮಾರು 52 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಕುಖ್ಯಾತ ಡಕಾಯಿತ ಘನಶ್ಯಾಮ್ ಕೇವತ್ ಎಂಬಾತನನ್ನು ಗುಂಡಿಕ್ಕಿ ಕೊಂದ ಘಟನೆ ಚಿತ್ರಕೂಟ ಬಳಿ ಸಂಭವಿಸಿತು. ಇದಕ್ಕೂ ಮುನ್ನ, ಡಕಾಯಿತ ತನ್ನ ಬಂದೂಕಿನಿಂದ ಗುಂಡು ಹಾರಿಸಿ ನಾಲ್ವರು ಪೊಲೀಸರನ್ನು ಹತ್ಯೆ ಮಾಡಿ, ಹಲವರನ್ನು ಗಾಯಗೊಳಿಸಿ, ನಂತರ ಪರಾರಿಯಾಗಲು ಯತ್ನಿಸಿದ್ದ. ಆದರೆ ಅಪಾರ ಸಂಖ್ಯೆಯಲ್ಲಿದ್ದ ಪೊಲೀಸರು ಕಟ್ಟಡದಿಂದ ಕಟ್ಟಡಕ್ಕೆ ಹಾರುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆತನನ್ನು ಸುತ್ತುವರಿದು, ಗುಂಡಿಟ್ಟು ಕೊಂದರು. ಮೃತ ಕೇವತ್ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ದೊಡ್ಡ ತಂಡವನ್ನು ಕಟ್ಟಿಕೊಂಡು ಡಕಾಯಿತಿ ನಡೆಸುತ್ತಾ, ಸುಮಾರು 12ಕ್ಕೂ ಹೆಚ್ಚು ಕೊಲೆ, ಅಪಹರಣ, ಮತ್ತಿತರ ಹಲವಾರು ಅಪರಾಧಗಳನ್ನು ಎಸಗಿದ್ದ.
2009: ಹೃದ್ರೋಗ ದೂರವಿಡಬೇಕೆ? ಹಾಗಾದರೆ, ದಿನಕ್ಕೊಂದು ಬಟ್ಟಲು ಬ್ಯ್ಲಾಕ್ ಟೀ ಸೇವಿಸಿ ಸಾಕು- ಇದು ಇಟಲಿಯ ಎಲ್‌ಅಕ್ವಿಲಾ ವಿ.ವಿ.ಯ ಸಂಶೋಧಕರ ಸಲಹೆ. ಬ್ಯ್ಲಾಕ್ ಟೀ ಕುಡಿದರೆ ರಕ್ತನಾಳಗಳ ಕ್ರಿಯೆ ಚುರುಕಾಗುವುದಷ್ಟೇ ಅಲ್ಲದೆ ರಕ್ತದ ಒತ್ತಡ ಮತ್ತು ನಾಳಗಳ ಬಿಗಿತ ತಗ್ಗುತ್ತದೆ. ಇದು ಹೃದಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿ ಎಂಬುದು ಅವರ ವಿವರಣೆ. 19 ಆರೋಗ್ಯವಂತ ಪುರುಷರನ್ನು ಐದು ವಾರಗಳ ಕಾಲ ಹಲವು ಪ್ರಯೋಗಗಳು- ಪರೀಕ್ಷೆಗಳಿಗೆ ಒಳಪಡಿಸಿದಾಗ ಇದು ಖಚಿತಪಟ್ಟಿದೆ ಎಂದೂ ವಿಜ್ಞಾನಿಗಳು ತಿಳಿಸಿದರು.
2009: ಭೋಪಾಲ್ ಅನಿಲ ದುರಂತ ಸಂತ್ರಸ್ತರ ಆರ್ಥಿಕ ಪುನಃಶ್ಚೇತನಕ್ಕೆ ಶೀಘ್ರವೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಮೆರಿಕದ ಸುಮಾರು 20 ಕಾಂಗ್ರೆಸ್ ಸದಸ್ಯರು (ಸಂಸದರು) ಡೋವ್ ಕೆಮಿಕಲ್ ಕಂಪೆನಿಗೆ (ಈಗ ಯೂನಿಯನ್ ಕಾರ್ಬೈಡ್ ಒಡೆತನ ಹೊಂದಿರುವ) ಸೂಚನೆ ನೀಡಿದರು. ಸಂತ್ರಸ್ತರಿಗೆ ವೈದ್ಯಕೀಯ ಹಾಗೂ ಆರ್ಥಿಕ ನೆರವು ನೀಡಬೇಕು. ಕಾರ್ಖಾನೆ ಇದ್ದ ಸ್ಥಳದ ಸುತ್ತಮುತ್ತ ಕಲುಷಿತಗೊಂಡಿರುವ ಮಣ್ಣು ಹಾಗೂ ಅಂತರ್ಜಲವನ್ನು ಶುಚಿಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಡೌ ಕಂಪೆನಿ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಂಡ್ರೂ ಲೈವ್‌ರಿಸ್ ಅವರಿಗೆ ಬರೆದ ಪತ್ರದಲ್ಲಿ ಸಂಸದರು ತಿಳಿಸಿದರು.
2009: ಸಂಶೋಧಕರಿಗೆ ಜಾಗತಿಕ ಮಟ್ಟದಲ್ಲಿ ನಡೆದ ಅಪರೂಪದ ಘಟನೆಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಲಂಡನ್ನಿನ ಬ್ರಿಟಿಷ್ ಲೈಬ್ರರಿ 1857 ರಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮ ಸೇರಿದಂತೆ 19ನೇ ಶತಮಾನ ಮತ್ತು 20ನೇ ಶತಮಾನದ ಪತ್ರಿಕೆಗಳ ಎರಡು ದಶಲಕ್ಷ ಪುಟಗಳನ್ನು ಕಂಪ್ಯೂಟರಿನಲ್ಲಿ ಅಳವಡಿಸಿರುವುದಾಗಿ ಪ್ರಕಟಿಸಿತು. ಚಾರ್ಲ್ಸ್ ಡಿಕನ್ಸ್ ಮತ್ತು ಥ್ಯಾಕರೇ ಸೇರಿದಂತೆ 19ನೇ ಶತಮಾನದ ಖ್ಯಾತ ಬರಹಗಾರರ ಬರಹಗಳು, ಬ್ರಿಟನ್ನಿನ 49 ರಾಷ್ಟ್ರೀಯ ಪತ್ರಿಕೆಗಳ ವರದಿಗಳ ಪುಟಗಳನ್ನು ಆನ್‌ಲೈನಿನಲ್ಲಿ ನೋಡಬಹುದು. ಇದುವರೆಗೆ ಲೈಬ್ರರಿಯಲ್ಲಿ ಹಾರ್ಡ್‌ಕಾಪಿಯಲ್ಲಿ ಮಾತ್ರ ದೊರೆಯುತ್ತಿದ್ದ ಇದನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.
2009: ಉದ್ದೀಪನ ಮದ್ದು ಹೊಂದಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಕುಸ್ತಿಪಟು ಜಗದೀಶ್ ಸಿಂಗ್ ವಿರುದ್ಧ ಕ್ರೀಡಾ ಇಲಾಖೆ ಕ್ರಮ ಕೈಗೊಂಡಿತು. ಮೊದಲ ಹೆಜ್ಜೆಯಾಗಿ ಜಗದೀಶ್ ಅವರಿಗೆ 1998ರಲ್ಲಿ ನೀಡಲಾಗಿದ್ದ 'ಅರ್ಜನ ಪ್ರಶಸ್ತಿ'ಯನ್ನು ಹಿಂದಕ್ಕೆ ಪಡೆಯಲಾಯಿತು. ದೇಶದ ಉನ್ನತ ಕ್ರೀಡಾ ಪ್ರಶಸ್ತಿಯ ಘನತೆ ಕಾಪಾಡುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕ್ರೀಡಾ ಇಲಾಖೆ ಸ್ಪಷ್ಟಪಡಿಸಿತು.
2009: ಗರ್ಭಿಣಿ ಮಹಿಳೆ ಮತ್ತು ಮೂರು ವರ್ಷದ ಹೆಣ್ಣು ಮಗುವನ್ನು ಜಿಆರ್‌ಪಿ ಪೊಲೀಸರಿಬ್ಬರು ಚಲಿಸುತ್ತಿದ್ದ ರೈಲಿನಿಂದ ಹೊರತಳ್ಳಿದ ಪರಿಣಾಮ ಆಕೆ ಮೃತಳಾಗಿ, ಮಗು ಗಾಯಗೊಂಡ ದಾರುಣ ಘಟನೆ ಉತ್ತರಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯಲ್ಲಿ ಘಟಿಸಿತು. ಮಾಲಿನಿಗೊಂಡ ಪ್ರಯಾಣಿಕರ ರೈಲಿನಲ್ಲಿ ಈ ಘಟನೆ ಜರುಗಿತು. ಮೃತ ಮಹಿಳೆಯನ್ನು ಕವಿತಾ ಎಂದು ಗುರುತಿಸಲಾಯಿತು. ಕವಿತಾ ಅವರ ಪತಿ ದಿನೇಶ್ ರೈಲಿನಲ್ಲಿ ಸೈಕಲ್ ಹಾಕಿದ ಪರಿಣಾಮ ಅವರಿಂದ ಜಿಆರ್‌ಪಿ ಪೊಲೀಸರು ಹಣ ಕೇಳಿದರು. ಈ ಸಂಬಂಧ ಗಲಾಟೆ ಪ್ರಾರಂಭವಾಗಿ, ಜಿಆರ್‌ಪಿ ಪೊಲೀಸರು ದಿನೇಶ್ ಅವರ ಪತ್ನಿ ಕವಿತಾ ಹಾಗೂ ಮಗುವನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದರು ಎಂದು ರೈಲ್ವೆ ಪೊಲೀಸರು ತಿಳಿಸಿದರು.
2008: ಗುಜ್ಜರ್ ಜನಾಂಗಕ್ಕೆ ವಿಶೇಷ ಪ್ರತ್ಯೇಕ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಶೇಕಡಾ ಐದರಷ್ಟು ಮೀಸಲಾತಿ ನೀಡಲು ರಾಜಸ್ಥಾನ ಸರ್ಕಾರ ಒಪ್ಪುವುದರೊಂದಿಗೆ ಒಂದು ತಿಂಗಳಿಂದ ನಡೆಯುತ್ತಿದ್ದ ಮೀಸಲಾತಿ ಚಳವಳಿಗೆ ತೆರೆ ಬಿದ್ದಿತು. ಈ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡ ಸರ್ಕಾರ ಮೇಲ್ಜಾತಿ ಬಾಹ್ಮಣ, ರಜಪೂತ್, ವೈಶ್ಯರು ಮತ್ತು ಕಾಯಸ್ಥ ವರ್ಗದ ಅತೀ ಬಡವರಿಗೆ ಶೇಕಡಾ 14ರಷ್ಟು ಮೀಸಲಾತಿ ನೀಡಲು ನಿರ್ಧರಿಸಿತು.
2007: ಅಮೆರಿಕದ ಪ್ರಜೆಯಾಗಿರುವ ಭಾರತೀಯ ಸಂಜಾತೆ ಬಾಲಾ ಕೃಷ್ಣಮೂರ್ತಿ ಅವರು ತಂತ್ರಜ್ಞಾನ ಅಭಿವೃದ್ಧಿಗೆ ನೀಡಲಾಗುವ ಎಂಜೆಲ್ ಬರ್ಗರ್ ರೊಬೋಟಿಕ್ಸ್ (ಯಂತ್ರ ಮಾನವ ವಿಜ್ಞಾನ) ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. ಏವೋಲಿನ್ ಇಂಕ್ ಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಾ ಕೃಷ್ಣಮೂರ್ತಿ ಅವರು ಕಳೆದ 25 ವರ್ಷಗಳಿಂದ ವಿವಿಧ ತಂತ್ರಾಂಶ, ಸಂಪರ್ಕಜಾಲ ಮತ್ತು ಯಂತ್ರ ಮಾನವ ವಿಜ್ಞಾನದ ಅಭಿವೃದ್ಧಿಗೆ ಪೂರಕವಾದ ಅನೇಕ ಸಾಫ್ಟ್ ವೇರ್ ಅಭಿವೃದ್ಧಿಗೊಳಿಸಿದ್ದು, ಈ ಸಾಧನೆಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2007: ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಿಂದ ಅಧಿಕೃತ ಪ್ರಮಾಣ ಪತ್ರ ಪಡೆಯುವುದರೊಂದಿಗೆ ಜಪಾನಿನ 111 ವರ್ಷದ ತೊಮೊಜಿ ತನಾಬೆ ಅವರು ಅಧಿಕೃತವಾಗಿ ವಿಶ್ವದ ಅತ್ಯಂತ ವೃದ್ಧ ಎಂಬ ಹೆಗ್ಗಳಿಕಗೆ ಪಾತ್ರರಾದರು.
2007: ಲಂಡನ್ನಿನಲ್ಲಿ ನಡೆದ ಬಿಗ್ ಬ್ರದರ್ ರಿಯಾಲಿಟಿ ಶೋ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಅದೇ ಲಂಡನ್ ನಗರದಲ್ಲಿ ತನ್ನದೇ ಹೆಸರಿನ ಪರಿಮಳ ದ್ರವ್ಯ ಬಿಡುಗಡೆ ಮಾಡಿದರು. ಇದರಿಂದಾಗಿ ಶಿಲ್ಪಾ ಅವರು ಹಾಲಿವುಡ್ಡಿನ ಖ್ಯಾತ ತಾರೆಯರಾದ ಜೆನಿಫರ್ ಲೋಪೆಜ್, ಪ್ಯಾರಿಸ್ ಹಿಲ್ಟನ್ ಅವರಿಗೆ ಸರಿ ಸಮಾನವಾಗಿ ಕಾಣಿಸಿಕೊಂಡರು.
2007: ಅಟ್ಲಾಂಟಿಸ್ ಅಂತರಿಕ್ಷ ಯಾನದ ಅಂಗವಾಗಿ ಅಮೆರಿಕದ ಇಬ್ಬರು ಗಗನಯಾತ್ರಿಗಳು ಕೊನೆಯ ಬಾರಿ ಅಂತರಿಕ್ಷ ನಡಿಗೆ ಕೈಗೊಂಡರು. ಇದರೊಂದಿಗೆ ಅಟ್ಲಾಂಟಿಸ್ ನೌಕೆ ಭೂಮಿಗೆ ವಾಪಸಾಗಲು ಸಜ್ಜಾಯಿತು.
2007: ಬಾಂಗ್ಲಾದೇಶದ ಸ್ಥಾಪನೆಗೆ ಕಾರಣರಾದ ಷೇಕ್ ಮುಜಿಬುರ್ ರಹಮಾನ್ ಅವರನ್ನು ಕೊಂದು ತಲೆ ಮರೆಸಿಕೊಂಡು ಅಮೆರಿಕದಲ್ಲಿದ್ದ ನಿವೃತ್ತ ಸೇನಾ ಅಧಿಕಾರಿ ಮೇಜರ್ ಎ.ಕೆ. ಮೊಹಿಯ್ದುದೀನ್ ಭಾರಿ ಭದ್ರತೆಯ ಮಧ್ಯೆ ಬಾಂಗ್ಲಾದೇಶಕ್ಕೆ ವಾಪಸಾದ. ಆತನನ್ನು ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಬಳಿಕ ಢಾಕಾ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು.
2007: ತಾರಾ ಅಯ್ಯರ್ ಅವರು ಪೋರ್ಚುಗಲ್ಲಿನ ಮೊಂಟೆ ಮೋರ್- ಒ - ನೋವಾದಲ್ಲಿ ಮುಕ್ತಾಯವಾದ ಹತ್ತು ಸಾವಿರ ಅಮೆರಿಕನ್ ಡಾಲರ್ ಮೊತ್ತದ ಬಹುಮಾನ ಐಟಿ ಎಫ್ ಮಹಿಳಾ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಪಡೆದುಕೊಂಡರು.
2007: ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಎಂಟು ಪ್ರಾದೇಶಿಕ ಪಕ್ಷಗಳು ಚೆನ್ನೈಯಲ್ಲಿ ಸಭೆ ಸೇರಿ `ಸಂಯುಕ್ತ ರಾಷ್ಟ್ರೀಯ ಪ್ರಗತಿಪರ ಮೈತ್ರಿಕೂಟ' (ಯುಎನ್ಪಿಎ) ಹೆಸರಿನಲ್ಲಿ ಹೊಸದಾಗಿ ತೃತೀಯ ರಂಗ ರಚಿಸಿಕೊಂಡವು. ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ನಿವಾಸದಲ್ಲಿ ಈ ಸಭೆ ನಡೆಯಿತು.
2006: ಕಳೆದ 44 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಆಯಕಟ್ಟಿನ `ನಾಥು ಲಾ ಪಾಸ್' ಮೂಲಕ ಜುಲೈ 6ರಿಂದ ಗಡಿ ವ್ಯಾಪಾರ ಪುನರಾರಂಭಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸಮ್ಮತಿಸಿದವು. ಈ ಮಾರ್ಗವನ್ನು ತೆರೆಯುವುದರಿಂದ ಗಡಿ ಮುಚ್ಚಿದ್ದ ಏಷ್ಯಾದ ಎರಡು ಬೃಹತ್ ರಾಷ್ಟ್ರಗಳ ಪರ್ವತ ಪ್ರಾಂತ್ಯಗಳ ಸ್ಥಳೀಯ ಆರ್ಥಿಕತೆ ಮತ್ತು ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಹೆಚ್ಚಿನ ನೆರವಾಗಲಿದೆ. ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದು ಎರಡೂ ರಾಷ್ಟ್ರಗಳ ಗಡಿಭಾಗದಲ್ಲಿ ವಾಸಿಸುವ ಜನರಿಗೆ 1991, 1992 ಹಾಗೂ 2003ರ ಗಡಿ ವ್ಯಾಪಾರ ಒಪ್ಪಂದದಲ್ಲಿ ಪ್ರಸ್ತಾಪಿಸಲಾದ ಸುಮಾರು 30 ವಸ್ತುಗಳನ್ನು ರಫ್ತು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
2006: ಸತತ 30 ಗಂಟೆಗಳ ಕಾಲ ಮೃದಂಗ ನುಡಿಸುವ ಮೂಲಕ ಕೇರಳದ ಪಾಲಕ್ಕಾಡಿನ ಯುವ ಕಲಾವಿದ ವಿನೀತ್ (17) ಶಾರದಾ ಪೀಠ ಪ್ರವಚನ ಮಂದಿರದಲ್ಲಿ ವಿಶೇಷ ಸಾಧನೆ ಮೆರೆದರು.
1980: ಭಾರತದ ಶಕುಂತಲಾದೇವಿ ಅವರು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ 13 ಅಂಕಿಗಳ ಎರಡು ಸಂಖ್ಯೆಯನ್ನು ತೆಗೆದುಕೊಂಡು ಕೇವಲ 28 ಸೆಕೆಂಡುಗಳಲ್ಲಿ ಅವುಗಳನ್ನು ಗುಣಿಸಿ ಉತ್ತರ ಹೇಳಿದರು. ಅವರು ತೆಗೆದುಕೊಂಡಿದ್ದ ಸಂಖ್ಯೆಗಳು: 7,686,369,774,870 ಮತ್ತು 2,465,099,745,779. ಈ ಎರಡು ಸಂಖ್ಯೆಗಳನ್ನು ಗುಣಿಸಿ ಆಕೆ ನೀಡಿದ ಸಮರ್ಪಕ ಉತ್ತರ: 18,947,668,177,995,426,462,773,730.
1968: ವೈವಿಧ್ಯಮಯ ಕಲಾಕೃತಿಗಳ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಎಸ್. ಮಂಜುನಾಥ ಆಚಾರ್ಯ ಅವರು ಎಸ್. ಶಂಕರನಾರಾಯಣಾಚಾರ್ಯ- ಸಿದ್ದಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಶಿವಾರ ಪಟ್ಟಣದಲ್ಲಿ ಜನಿಸಿದರು.
1942: ಶಂಶ ಐತಾಳ ಜನನ.
1939: ಚಂದ್ರಶೇಖರ ಪಾಟೀಲ (ಚಂಪಾ) ಜನನ.
1928: ಬಿ.ಎಸ್. ಅಣ್ಣಯ್ಯ ಜನನ.
1928: ವಿಮಾನಯಾನಿ ಅಮೇಲಿಯಾ ಈಯರ್ ಹಾರ್ಟ್ ಅಟ್ಲಾಂಟಿಕ್ ಸಾಗರದ ಮೇಲಿನಿಂದ ವಿಮಾನ ಮೂಲಕ ಕ್ರಮಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕೆ ನ್ಯೂಫೌಂಡ್ ಲ್ಯಾಂಡಿನಿಂದ ವೇಲ್ಸ್ ವರೆಗೆ ವಿಮಾನದಲ್ಲಿ ಪೈಲಟ್ ವಿಲ್ಮರ್ ಸ್ಟಲ್ಜ್ ಜೊತೆಗೆ ಪ್ರಯಾಣಿಕಳಾಗಿ 21 ಗಂಟೆಗಳ ಕಾಲ ಪಯಣಿಸಿದರು.
1918: ಸಾಹಿತಿ ಸಿದ್ಧಯ್ಯ ಪುರಾಣಿಕ ಜನನ.
1912: ವಿಶಿಷ್ಟ ನವೋದಯ ಕಥೆಗಾರರೆಂದು ಖ್ಯಾತಿ ಪಡೆದಿದ್ದ ಅಶ್ವತ್ಥ ನಾರಾಯಣ ರಾವ್ ಅವರು ಸೋಮಯ್ಯ- ಲಕ್ಷ್ಮಮ್ಮ ದಂಪತಿಯ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು.
1817: ಜಂಗ್ ಬಹದ್ದೂರ್ (1817-1877) ಜನ್ಮದಿನ. 1846ರಿಂದ 1877ರವರೆಗೆ ನೇಪಾಳದ ಪ್ರಧಾನಮಂತ್ರಿ ಹಾಗೂ ಆಡಳಿತಗಾರನಾಗಿದ್ದ ಈತ ರಾಣಾ ವಂಶವನ್ನು ಪ್ರಧಾನಮಂತ್ರಿಗಳ ವಂಶವಾಗಿ ಪ್ರತಿಷ್ಠಾಪಿಸಿದ. 1951ರವರೆಗೂ ಪ್ರಧಾನಮಂತ್ರಿಗಳ ಹುದ್ದೆ ಈ ವಂಶದಲ್ಲೇ ಮುಂದುವರಿಯಿತು.
1815: ವೆಲ್ಲಿಂಗ್ಟನ್ನಿನ ಮೊದಲ ಡ್ಯೂಕ್ ಆರ್ಥರ್ ವೆಲ್ಲೆಸ್ಲ್ಲೆ ಮತ್ತು ಪ್ರಷಿಯಾದ ಜನರಲ್ ಗ್ಲೆಭರ್ಡ್ ಬ್ಲುಚರ್ ಒಟ್ಟಾಗಿ ಬ್ರಸೆಲ್ಸಿನಿಂದ ದಕ್ಷಿಣಕ್ಕೆ ನಾಲ್ಕು ಕಿ.ಮೀ. ದೂರದ ವಾಟರ್ಲೂನಲ್ಲಿ ನೆಪೋಲಿಯನ್ ಬೋನಪಾರ್ಟೆ ವಿರುದ್ಧ ಹೋರಾಡಿ ಆತನನ್ನು ಸೋಲಿಸಿದರು. ನಾಲ್ಕು ದಿನಗಳ ಬಳಿಕ ನೆಪೋಲಿಯನ್ ಎರಡನೇ ಬಾರಿಗೆ ಪದತ್ಯಾಗ ಮಾಡಿದ.
1769: ರಾಬರ್ಟ್ ಸ್ಟೀವರ್ಟ್ ವೈಕೌಂಟ್ ಕ್ಯಾಸೆಲ್ ರೀಗ್ (1769-1822) ಜನ್ಮದಿನ. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಈತ ವಿಯೆನ್ನಾ ಕಾಂಗೆಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ವಿಯೆನ್ನಾ ಕಾಂಗ್ರೆಸ್ 1815ರಲ್ಲಿ ಯುರೋಪಿನ ನಕ್ಷೆಯನ್ನು ಬದಲಾಯಿಸಿತು.
1633: ಕೊಂಕಣಿ ಭಾಷಾ ನಿಘಂಟು ತಯಾರಕ ರೆವೈರು ಡಿಗೊ ನಿಧನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment