ನಾನು ಮೆಚ್ಚಿದ ವಾಟ್ಸಪ್

Saturday, June 8, 2019

ಇಂದಿನ ಇತಿಹಾಸ History Today ಜೂನ್ 08

ಇಂದಿನ ಇತಿಹಾಸ History Today ಜೂನ್ 08
2019: ಗುರುವಾಯೂರು (ಕೇರಳ): ಕೇರಳದ ಗುರುವಾಯೂರಿನ ಖ್ಯಾತ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ, ಪ್ರಾರ್ಥನೆ, ಕಮಲ ತುಲಾಭಾರ ಸೇವೆ ಸಲ್ಲಿಸಿದ  ಬಳಿಕ ಪ್ರಧಾನಿ ನರೇಂದ್ರ ಮೋದಿ  ಅವರುನವ ಭಾರತ ನಿರ್ಮಾಣದ ಪ್ರತಿಜ್ಞೆ ಮಾಡಿದರು. ಗುರುವಾಯೂರಿನಲ್ಲಿ ಕೇರಳದ ಸಾಂಪ್ರದಾಯಿಕ ಮುಂಡು (ಬಿಳಿ ಪಂಚೆ) ಮತ್ತು ಶಲ್ಯ ಧರಿಸಿ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಅವರು ಅದೇ ಉಡುಪಿನಲ್ಲಿ ಬಳಿಕ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರುಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶದಲ್ಲಿಯೇ ಪ್ರಪ್ರಥಮವಾಗಿ ಕೇರಳಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.  ‘ ಬಾರಿಯ ಚುನಾವಣೆಯಲ್ಲಿ ಧನಾತ್ಮಕತೆ ಪ್ರತಿಫಲಿಸಿತು ಮತ್ತು  ಅದು ಗೆದ್ದಿತು ಮತ್ತು ನಕಾರಾತ್ಮಕತೆ ಅತ್ಯಂತ ದಯನೀಯವಾಗಿ ಸೋತಿತು. ಇಡೀ ವಿಶ್ವವೇ ನಮ್ಮ ಪ್ರಜಾಪ್ರಭುತ್ವವನ್ನು ಗಮನಿಸುತ್ತಿದೆ. ಗುರುವಾಯೂರಿನ ನೆಲದಲ್ಲಿ ನವಭಾರತ ನಿರ್ಮಾಣದ ಪ್ರತಿಜ್ಞೆಯನ್ನು ನಾನು ಮಾಡುತ್ತೇನೆ. ನಾವು ಧನಾತ್ಮಕತೆಯೊಂದಿಗೆ ಮುಂದುವರೆಯಲಿದ್ದೇವೆ. ನಾವು ೧೩೦ ಕೋಟಿ ಭಾರತೀಯರ ನಿರೀಕ್ಷೆಗಳಿಗೆ ಅನುಗುಣವಾಗಿ ಎದ್ದು ನಿಲ್ಲಬೇಕು ಎಂದು ಪ್ರಧಾನಿ ಗುರುವಾಯೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು. ಜನತೆಗೆ ಧನ್ಯವಾದ ಅರ್ಪಣೆಯ ತನ್ನ ವಾರಾಣಸಿ ಭೇಟಿಯ ಬಳಿಕ  ಕೇರಳದಲ್ಲಿ ಜನರೊಂದಿಗೆ ಮೊತ್ತ ಮೊದಲ ಸಂವಹನ ನಡೆಸಿದ ಪ್ರಧಾನಿ ಕೇರಳವು ತನಗೆ ಸ್ವಂತ ಕ್ಷೇತ್ರವಾದ ವಾರಾಣಸಿಯಷ್ಟೇ ಪ್ರಿಯವಾದುದು ಎಂದು ಹೇಳಿದರು.  ‘ನಮ್ಮನ್ನು ಗೆಲ್ಲುವಂತೆ ಮಾಡಿದವರು ನಮ್ಮವರು, ನಮ್ಮನ್ನು ಗೆಲ್ಲದಂತೆ ಮಾಡಿದವರು ಕೂಡಾ ನಮ್ಮವರೇ. ಕೇರಳದಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದ್ದರೂ, ಮೋದಿಯವರು ಯಾಕೆ ತಮ್ಮ ಮೊದಲ ರಾಜಕೀಯ ಭಾಷಣಕ್ಕೆ ಕೇರಳವನ್ನು ಆಯ್ಕೆ ಮಾಡಿಕೊಂಡರು ಎಂದು ನೀವು ಕೇಳಬಹುದು....ನನಗೆ ಕೇರಳವು ವಾರಾಣಸಿಯಷ್ಟೇ ಆಪ್ತ ಎಂದು ಮೋದಿ ನುಡಿದರು.  ‘ಚುನಾವಣೆಗಳಿಗೆ ತಮ್ಮದೇ ಆದ ಸ್ಥಾನವಿದೆ, ಆದರೆ ಸರ್ಕಾರಕ್ಕೆ ಇಡೀ ದೇಶದ, ಸಂಪೂರ್ಣ ಜನತೆಯ ಬಗೆಗಿನ ಹೊಣೆಗಾರಿಕೆ ಇದೆ ಎಂದು ಪ್ರಧಾನಿ ನುಡಿದರು.  ‘ಪ್ರಜಾಪ್ರಭುತ್ವದ ಉತ್ಸವದ ಸ್ಫೂರ್ತಿಗಾಗಿ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದರು. ’ನಾನು ಜನತೆಗೆ ವಂದಿಸುತ್ತೇನೆ. ಜನರು ನನ್ನ ದೇವರು ಎಂದು ಮೋದಿ ನುಡಿದರು. ತಮ್ಮ ಸರ್ಕಾರವು ಯಾವುದೇ ತಾರತಮ್ಯ ರಹಿತವಾಗಿ ಎಲ್ಲರಿಗಾಗಿ ಕೆಲಸ ಮಾಡುವುದು ಎಂದು ಮೋದಿ ಒತ್ತಿ ಹೇಳಿದರು.   ‘ನಾನು ಎಲ್ಲರ ಸೇವಕ. ನನ್ನ ರಾಷ್ಟ್ರವನ್ನು ಗತವೈಭವಕ್ಕೆ ಒಯ್ಯುವ ಸಲುವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಇರುವುದು ಎಲ್ಲರಿಗಾಗಿ. ನಾವು ಗೆದ್ದರೂ ಅಥವಾ ಸೋತರೂ ನಾವು ಎಲ್ಲರಿಗೂ ಬದ್ಧರಾಗಿದ್ದೇವೆ ಎಂದು ಪ್ರಧಾನಿ ನುಡಿದರುಬಿಜೆಪಿ ಕಾರ್ಯಕರ್ತರನ್ನು ಜೀವನ ಪರ್ಯಂತ ಜನರ ಸೇವೆಗೆ ಬದ್ಧರಾದಜನ ಸೇವಕರು ಎಂಬುದಾಗಿ ಪ್ರಧಾನಿ ಬಣ್ಣಿಸಿದರುಜನ ಸೇವಕರು ಎಂದೆಂದಿಗೂ ಇರುತ್ತಾರೆ, ಕೇವಲ ಐದು ವರ್ಷಗಳಿಗಾಗಿ ಅಲ್ಲ ಎಂದು ಅವರು ಹೇಳಿದರು. ಕೇರಳಕ್ಕೆ ಎರಡನೇ ಬಾರಿಗೆ ಕಾಲಿಟ್ಟಿರುವನಿಫಾ ವೈರಾಣು (ನಿಫಾ ವೈರಸ್) ಬಗ್ಗೆ ಚಿಂತಿಸಬೇಕಾದ ಅಥವಾ ಭಯಗ್ರಸ್ತರಾಗಬೇಕಾದ ಅಗತ್ಯ ಇಲ್ಲ ಎಂದು ಮೋದಿ ನುಡಿದರು. ಸರ್ಕಾರ ಜನರ ಜೊತೆಗಿದೆ. ನಿಫಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ದುಡಿಯಲಿವೆ. ಕೇಂದ್ರ ಸರ್ಕಾರವು ಅತ್ಯಂತ ನಿಕಟವಾಗಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ ಎಂದು ಮೋದಿ ಹೇಳಿದರು.

2019: ಮಾಲೆ: ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾಲ್ದೀವ್ಸ್ ಮತ್ತು ಶ್ರೀಲಂಕಾ ಎರಡು ರಾಷ್ಟ್ರಗಳ ಚೊಚ್ಚಲ ವಿದೇಶೀ ಪ್ರವಾಸ ಕೈಗೊಂಡು ಈದಿನ ಮಾಲೆಗೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಲ್ದೀವ್ಸ್ ತನ್ನರೂಲ್ ಆಫ್ ನಿಶಾನ್ ಇಜ್ಜುದ್ದೀನ್  ಅತ್ಯುನ್ನತ ಗೌರವವನ್ನು ಪ್ರದಾನ ಮಾಡಿತುಮಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರು ಪ್ರತಿಷ್ಠಿತ ಗೌರವವನ್ನು ಮೋದಿ ಅವರಿಗೆ ಪ್ರದಾನ ಮಾಡಿದರು. ಕೇರಳದ ದೇಗುಲನಗರಿ ಗುರುವಾಯೂರಿಗೆ ಭೇಟಿ ನೀಡಿ ಶ್ರೀಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆ ಹಾಗೂಕಮಲ ತುಲಾಭಾರ ಸೇವೆ ಸಲ್ಲಿಸಿದ ಬಳಿಕ ಮಧ್ಯಾಹ್ನದ ವೇಳೆಗೆ ಪ್ರಧಾನಿ ಮಾಲ್ದೀವ್ಸ್ ರಾಜಧಾನಿ ಮಾಲೆಗೆ ಆಗಮಿಸಿದರು.  ‘ರೂಲ್ ಆಫ್ ನಿಶಾನ್ ಇಜ್ಜುದ್ದೀನ್ ಗೌರವವು ವಿದೇಶೀ ಗಣ್ಯರಿಗೆ ಮಾಲ್ದೀವ್ ನೀಡುವ ಪರಮೋಚ್ಛ ಗೌರವವಾಗಿದ್ದು, ಗೌರವವನ್ನು ಸ್ವೀಕರಿಸುತ್ತಾ ಪ್ರಧಾನಿ ಮೋದಿಯವರುಈದಿನ ನನಗೆ ಮಾಲ್ದೀವ್ಸ್ ಅತ್ಯುನ್ನತ ಗೌರವವನ್ನು ಪ್ರದಾನ ಮಾಡಲಾಗಿದೆ. ನಾನು ಇದನ್ನು ಅತ್ಯಂತ ವಿನಯಪೂರ್ವಕವಾಗಿ ಸ್ವೀಕರಿಸುತ್ತೇನೆ. ಇದು ಕೇವಲ ನನಗೆ ನೀಡಿದ ಗೌರವ ಅಲ್ಲ, ಬದಲಾಗಿ ಉಭಯ ರಾಷ್ಟ್ರಗಳ ನಡುವಣ ಗೆಳೆತನ ಮತ್ತು ಬಾಂಧವ್ಯಕ್ಕೆ ನೀಡಿದ ಗೌರವ ಎಂದು ಹೇಳಿದರು.  ‘ರೂಲ್ ಆಫ್ ನಿಶಾನ್ ಇಜ್ಜುದ್ದೀನ್ ವಿದೇಶೀ ಗಣ್ಯರಿಗೆ ಮಾಲ್ದೀವ್ ನೀಡುವ ಅತ್ಯುನ್ನತ ಗೌರವವಾಗಿದೆ ಎಂದು ಮಾಲ್ದೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರು ಟ್ವೀಟ್ ಮಾಡಿದರು. ಅದಕ್ಕೂ ಮುನ್ನ ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರ ಜೊತೆಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಮಾತುಕತೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಾಇದು ಉಭಯ ರಾಷ್ಟ್ರಗಳ ಬಾಂಧವ್ಯದ ಹೊಸ ಬೆಳಗು ಎಂದು ಬಣ್ಣಿಸಿದರು.  ‘ನಾವು ಮಾಲ್ದೀವ್ಸ್ ಗೆ ಸಾಲ ನೀಡಿಕೆಯನ್ನು ಆರಂಭಿಸಿದ್ದು, ಇದು ರಾಷ್ಟ್ರದ ಮೇಲೆ ಅಗಾಧವಾದ ಸಾಮಾಜಿಕ ಪರಿಣಾಮ ಬೀರಲಿದೆ. ಭಾರತವು ಮಾಲ್ದೀವ್ಸ್ನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ನೆರವಾಗಲಿದೆ. ಮಾಲ್ದೀವ್ಸ್ ಮತ್ತು ಕೋಚಿ ಮಧ್ಯೆ ನೌಕಾಯಾನ ಸೇವೆ ಆರಂಭಿಸಲೂ ನಾವು ಯೋಜಿಸುತ್ತಿದ್ದೇವೆ ಎಂದು ಮೋದಿ ನುಡಿದರು. ಉಭಯ ರಾಷ್ಟ್ರಗಳ ಜನರ ನಡುವಣ ಬಾಂಧವ್ಯ ವೃದ್ಧಿಗಾಗಿ ಕ್ರೀಡೆಯನ್ನು ಅಭಿವೃದ್ದಿ ಪಡಿಸಬೇಕು ಎಂಬ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಸೊಲಿಹ್ ಅವರ ಯೋಜನೆಯನ್ನು  ಈಡೇರಿಸುವ ಸಲುವಾಗಿ ಭಾರತವು ಮಾಲ್ದೀವ್ಸ್ ನಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ನೆರವಾಗುವುದು ಎಂದು ಪ್ರಧಾನಿ ಹೇಳಿದರು. ದ್ವಿಪಕ್ಷೀಯ ಮಾತುಕತೆಗಳ ಬಳಿಕ ಪ್ರಧಾನಿ ಮೋದಿಯವರು ಸೊಲಿಹ್ ಅವರಿಗೆ ಭಾರತೀಯ ವಿಶ್ವಕಪ್ ಕ್ರಿಕೆಟ್ ತಂಡವು ಸಹಿ ಮಾಡಿದ ಕ್ರಿಕೆಟ್ ಬ್ಯಾಟನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರು ಮಾಲೆಯಲ್ಲಿ ನಿಯೋಗ ಮಟ್ಟದ ಮಾತುಕತೆಗಳನ್ನೂ ನಡೆಸಿದರು. ಮಾಲ್ದೀವ್ಸ್ ಅಭಿವೃದ್ಧಿ ಮತ್ತು ಅದರ ಆರ್ಥಿಕತೆಯ ಪುನಃಶ್ಚೇತನ ಸಲುವಾಗಿ ನೆರವಾಗಲು ಉಭಯ ರಾಷ್ಟ್ರಗಳು ಹಲವಾರು ತಿಳಿವಳಿಕೆ ಪತ್ರಗಳಿಗೆ (ಎಂಒಯು) ಸಹಿ ಮಾಡಲಿದ್ದಾರೆ. ಕ್ರಮಗಳ ಅಡಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ನೆರವು, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆಯನ್ನು ಭಾರತ ಒದಗಿಸಲಿದೆ. ಪರಿಣಾಮಕಾರಿ ಸಮುದಯ ಅಭಿವೃದ್ಧಿ ಯೋಜನೆಗಳು, ಕಸ್ಟಮ್ಸ್ ಮತ್ತು ವೈಟ್ ಶಿಪ್ಪಿಂಗ್ಗೂ ಭಾರತ ಸಾಲ ರೂಪದ ನೆರವು ನೀಡಲಿದೆ. ಪ್ರಧಾನಿ ಮೋದಿಯವರು ಮಾಲೆಗೆ ಆಗಮಿಸಿದ ಬಳಿಕ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರುಎಂದೆಂದಿಗೂ ಮೈತ್ರಿ (ಫ್ರೆಂಡ್ ಶಿಪ್ ಫಾರೆವರ್) ಎಂಬುದಾಗಿ ಟೀಟ್ ಮಾಡಿದರು.  ಉಭಯ ರಾಷ್ಟ್ರಗಳ ಜನರ ನಡುವಣ ಬಾಂಧವ್ಯ ವೃದ್ಧಿಗಾಗಿ ಪ್ರಧಾನಿ ಮೋದಿಯವರು ಇದೀಗ ದ್ವೀಪರಾಷ್ಟ್ರದಲ್ಲಿಕ್ರಿಕೆಟ್ ರಾಜತಾಂತ್ರಿಕತೆಗೆ (ಕ್ರಿಕೆಟ್ ಡಿಪ್ಲಮೆಸಿ) ಒತ್ತು ನೀಡಲು ತೀರ್ಮಾನಿಸಿದ್ದಾರೆ. ತನ್ಮೂಲಕ ದ್ವೀಪರಾಷ್ಟ್ರದಲ್ಲಿ ಕ್ರಿಕೆಟ್ ಅಭಿವೃದ್ಧಿಯ ಅಧ್ಯಕ್ಷ ಸೊಲಿಹ್ ಯೋಜನೆಗೆ ನೆರವಾಗಲಿದ್ದಾರೆ. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಣ ಸಂಪರ್ಕ ವೃದ್ಧಿಗಾಗಿ ಕೋಚಿಯಿಂದ ಮಾಲ್ದೀವ್ಸ್ ಗೆ ನೌಕಾಯಾನ ಸೇವೆ ಆರಂಭಿಸಲೂ ಭಾರತ ಯೋಜಿಸಿದೆಉಭಯ ನಾಯಕರೂ ರಕ್ಷಣೆಗೆ ಸಂಬಂಧಿಸಿದ ಎರಡು ಯೋಜನೆಗಳನ್ನೂ ಜಂಟಿಯಾಗಿ ಉದ್ಘಾಟಿಸಲಿದ್ದು, ಕರಾವಳಿ ಕಣ್ಗಾವಲು ರಾಡಾರ್ ವ್ಯವಸ್ಥೆ ಮತ್ತು ಮಾಲ್ದೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗಳಿಗೆ (ಎಂಎನ್ಡಿಎಫ್) ಸಂಯುಕ್ತ ತರಬೇತಿ ಕೇಂದ್ರ ಸ್ಥಾಪನೆ ಮೂಲಕ ರಕ್ಷಣಾ ಬಾಂಧವ್ಯ ಬಲವರ್ಧನೆಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿದವು. ಮೋದಿಯವರು ಉಪಾಧ್ಯಕ್ಷ ಫೈಸಲ್ ನಸೀಮ್, ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್, ವಿದೇಶಾಂಗ ಸಚಿವ ಶಾಹಿದ್ ಮತ್ತು ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಜೊತೆಗೆ ಪ್ರತ್ಯೇಕ ಮಾತುಕತೆ ನಡೆಸಿದರು. ಇದಕ್ಕೆ ಮುನ್ನ ಭಾರತದಿಂದ ಮಾಲೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಗರದ ರಿಪಬ್ಲಿಕ್ ಚೌಕದಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಸ್ವಾಗತಿಸಿದರು. ಬಳಿಕ ಮೋದಿಯವರಿಗೆ ರಿಪಬ್ಲಿಕ್ ಚೌಕದಲ್ಲೇ ಸಾಂಪ್ರದಾಯಿಕ ಸ್ವಾಗತ ಮತ್ತು ಗೌರವ ರಕ್ಷೆ ನೀಡಲಾಯಿತು. ೨೧ ಗನ್ ಸೆಲ್ಯೂಟ್ನ್ನು ಪ್ರಧಾನಿಯವರಿಗೆ ನೀಡಲಾಯಿತುಪ್ರಧಾನಿ ಮೋದಿಯವರ ಮಾಲ್ದೀವ್ಸ್ ಭೇಟಿ ಒಂದು ಸ್ಮರಣಾರ್ಹ ಭೇಟಿ. ಇದು ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯಲಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷರು ಟ್ವೀಟ್ ಮಾಡಿದರು. ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ಮಾಲ್ದೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲ ಶಾಹಿದ್ ಸ್ವಾಗತಿಸಿದರುಮಾಲ್ದೀವ್ಸ್ ಅಧ್ಯಕ್ಷ ಯಾಮೀನ್ ಅವರು ಫೆಬ್ರುವರಿ ೫ರಂದು ದ್ವೀಪರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ಭಾರತ ಮತ್ತು ಮಾಲ್ದೀವ್ಸ್ ಬಾಂಧವ್ಯ ಶಿಥಿಲಗೊಂಡಿತ್ತು. ದ್ವೀಪರಾಷ್ಟ್ರದ ವಿರೋಧಿ ನಾಯಕರ ತಂಡವೊಂದನ್ನು ಬಿಡುಗಡೆ ಮಾಡುವಂತೆ ದೇಶದ ಸುಪ್ರೀಂಕೋರ್ಟ್ ಆದೇಶಿಸಿದ ಬಳಿಕ ಫೆಬ್ರುವರಿ ೫ರಂದು ಅಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ತೀವ್ರ ಟೀಕಾಸ್ಪದವಾಗಿದ್ದ ವಿಚಾರಣೆಗಳ ಬಳಿಕ ವಿರೋಧಿ ನಾಯಕರಿಗೆ ಶಿಕ್ಷೆ ವಿಧಿಸಲಾಗಿತ್ತು. ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಭಾರತವು ಯಾಮೀನ್ ಸರ್ಕಾರವನ್ನು ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಟೀಕಿಸಿ, ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಚುನಾವಣೆ ಮತ್ತು ರಾಜಕೀಯ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮರುಸ್ಥಾಪಿಸುವಂತೆ ಆಗ್ರಹಿಸಿತ್ತು. ೪೫ ದಿನಗಳ ಬಳಿಕ ತುರ್ತ ಪರಿಸ್ಥಿತಿಯನ್ನು ತೆರವುಗೊಳಿಸಲಾಗಿತ್ತು.

2019: ಮಾಲೆ: ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಎರಡನೆ ಅವಧಿಗೆ ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ ಬಳಿಕ ಮಾಲ್ದೀವ್ಸ್ ಗೆ ಚೊಚ್ಚಲ ವಿದೇಶ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಸಂಸತ್ತಿನಲ್ಲಿ ಭಾಷಣ ಮಾಡುತ್ತಾ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವಿಕೆ ವಿರುದ್ಧ ಗುಡುಗಿದರು. ರಾಷ್ಟ್ರಗಳು ಭಯೋತ್ಪಾದನೆಗೆ ನೆರವು ನೀಡುವುದು ನಿಲ್ಲಬೇಕು. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವಿಕೆ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಬೇಕು, ನಿಟ್ಟಿನಲ್ಲಿ ಜಾಗತಿಕ ಸಮ್ಮೇಳನ ನಡೆಯಬೇಕು ಎಂದು ಪ್ರಧಾನಿ ಕರೆ ನೀಡಿದರು.  ‘ಜನರು ಈಗಲೂ ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದನೆ ಎಂಬುದಾಗಿ ಗುರುತಿಸಲು ಯತ್ನಿಸುವ ತಪ್ಪನ್ನು ಮಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದ ಮೋದಿ, ಭಾರತವು ಇತರರನ್ನು ದುರ್ಬಲಗೊಳಿಸುವ ಸಲುವಾಗಿ ಇಲ್ಲಿಗೆ ಬಂದಿಲ್ಲ. ನಾವು ಪರಸ್ಪರ ಬಲಪಡಿಸುವ ಸಲುವಾಗಿ ಇಲ್ಲಿದ್ದೇವೆ. ಭಾರತ ಯಾವಾಗಲೂ ತನ್ನ ನೆರೆಯ ರಾಷ್ಟ್ರಗಳಿಗೆ ಬೆಂಬಲ ನೀಡುತ್ತಲೇ ಬಂದಿದೆ ಎಂದು ನುಡಿದರು. ನೀಲ ಆರ್ಥಿಕತೆಯ ಅಭಿವೃದ್ಧಿ ವಿಚಾರದಲ್ಲಿ ಮಾಲ್ದೀವ್ಸ್ ಭಾರತದ ಪಾಲಿನ ದೊಡ್ಡ ಪಾಲುದಾರ. ಇಂಡೋ-ಪೆಸಿಫಿಕ್ ಪ್ರದೇಶವು ನಮ್ಮ ಜೀವನ ರೇಖೆಯಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಿನ ವ್ಯಾಪಾರ ಅವಕಾಶ ಕಲ್ಪಿಸುವ ಅಗತ್ಯ ಇದೆ ಎಂದು ನಾನು ಸಿಂಗಾಪುರದಲ್ಲಿ ಹೇಳಿದ್ದೇನೆ. ಇದರಿಂದ ಪ್ರದೇಶದ ನಮ್ಮ ಎಲ್ಲ ರಾಷ್ಟ್ರಗಳು ಉತ್ತಮ ಸಂಪರ್ಕ ಹೊಂದುವುದರ ಜೊತೆಗೆ ಸಮೃದ್ಧಿ ಹೊಂದಲೂ ಸಾಧ್ಯವಿದೆ ಎಂದು ಪ್ರಧಾನಿ ಹೇಳಿದರು. ಪರಿಸರ ಹಾಗೂ ಹವಾಮಾನ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ವಿಷಯವು ನಮ್ಮೆಲ್ಲರನ್ನೂ ಬಾಧಿಸುತ್ತಿದೆ. ನವೀಕರಿಸಲಾಗುವ ಇಂಧನ ಬಳಕೆಗೆ ಬದಲಾಗುವ ಮೂಲಕ ಹವಾಮಾನವನ್ನು ಬದಲಾಯಿಸಬಹುದು. ಮಾಲ್ದೀವ್ಸ್ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಭಾಗವಾಗಿದೆ ಎಂಬುದಕ್ಕೆ ನನಗೆ ಹರ್ಷವಿದೆ ಎಂದು ನುಡಿದರು. ತಂತ್ರಜ್ಞಾನದಿಂದ ಮಾತ್ರವೇ ಪರಿಸರ ಬದಲಾವಣೆ ಸಾಧ್ಯವಿಲ್ಲ ಎಂದು ನುಡಿದ ಮೋದಿ ಮಾಲ್ದೀವ್ಸ್ ಸುಸ್ಥಿರ ಅಭಿವೃದ್ಧಿ ನಿಟ್ಟಿನಲ್ಲಿ ಯತ್ನಗಳು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು. ಭಯೋತ್ಪಾದನೆ ಉಭಯ ರಾಷ್ಟ್ರಗಳಿಗೂ ದೊಡ್ಡ ಬೆದರಿಕೆ ಎಂದು ನುಡಿದ ಮೋದಿ, ಭಯೋತ್ಪಾದನೆ ನಿಗ್ರಹವು ವಿಶ್ವದ ನಾಯಕತ್ವಕ್ಕೆ ದೊಡ್ಡ ಸವಾಲು ಎಂದು ಹೇಳಿದರು. ವಿಷಯದ ಬಗ್ಗೆ ಚರ್ಚಿಸಲು ಜಾಗತಿಕ ಸಮ್ಮೇಳನ ನಡೆಸಬೇಕು ಎಂದು ಕರೆ ನೀಡಿದ ಅವರು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಕೊನೆಗೊಳಿಸಬೇಕು ಎಂದು ಆಗ್ರಹಿಸಿದರು. ಭದ್ರತೆ, ನೈಸರ್ಗಿಕ ಪ್ರಕೋಪ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಭಾರತವು ಮಾಲ್ದೀವ್ಸ್ ಭುಜಕ್ಕೆ ಭುಜಕೊಟ್ಟು ನೆರವಾಗಲಿದೆ ಎಂದು ಮೋದಿ ನುಡಿದರು. ನೆರೆಹೊರೆ ಪ್ರಥಮ ನೀತಿಗೆ ಭಾರತ ಅಗ್ರಪ್ರಾಶಸ್ತ್ಯ ನೀಡುತ್ತದೆ. ಭಾರತ ಮತ್ತು ಮಾಲ್ದೀವ್ಸ್ ಮಧ್ಯೆ ಚರಿತ್ರೆಗಿಂತಲೂ ಹಳೆಯ ಬಾಂಧವ್ಯ ಇದೆ. ಮಾಲ್ದೀವ್ಸ್ ಪ್ರಗತಿ ಬಗ್ಗೆ ನನಗೆ ಹೆಮ್ಮೆ ಇದೆ. ಮಾಲ್ದೀವ್ಸ್ಪ್ರಾಚೀನ ರತ್ನವಾಗಿದ್ದು, ಅದು ಭಾರತಕ್ಕೆ ಸ್ಫೂರ್ತಿಯಾಗಿದೆ ಎಂದು ಮೋದಿ ಹೇಳಿದರು.

2019: ನವದೆಹಲಿ: ಸಾಮಾನ್ಯವಾಗಿ ಜೂನ್ ೧ರಂದು ಆಗಮಿಸುವ ಮುಂಗಾರು ಒಂದು ವಾರ ತಡವಾಗಿ ಈದಿನ  ಕೇರಳಕ್ಕೆ ಆಗಮಿಸಿತು. ‘ಕಳೆದ ೪೮ ಗಂಟೆಗಳಲ್ಲಿ ಒಳ್ಳೆಯ ಮುಂಗಾರುಪೂರ್ವ ಮಳೆ ಸುರಿದಿದೆ. ಮುಂಗಾರು ಆಗಮನದ ಉಳಿದ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಆದ್ದರಿಂದ ಶನಿವಾರ ಕೇರಳಕ್ಕೆ ಮುಂಗಾರು ಆಗಮನವಾಗಿದೆ ಎಂಬುದಾಗಿ ನಾವು ಘೋಷಿಸುತ್ತಿದ್ದೇವೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ಹವಾಮಾನ ತಜ್ಞ ಎಂ. ಮೊಹಾಪಾತ್ರ ಹೇಳಿದರುಮುಂದಿನ ೪೮ ಗಂಟೆಗಳಲ್ಲಿ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ ಎಂದೂ ಅವರು ನುಡಿದರು.  ‘ಏನಿದ್ದರೂ, ಅಶುಭ ಮೋಡಗಳೂ ಇವೆ ಎಂದೂ ಇದೇ ವೇಳೆಯಲ್ಲಿ ಅವರು ಎಚ್ಚರಿಕೆ ನೀಡಿದರು. ಕಡಿಮೆ ಒತ್ತಡ ವ್ಯವಸ್ಥೆ ಎಂಬುದಾಗಿ ಕರೆಯಲಾಗುವ ಸಾಗರ ಅಸ್ತವಸ್ತತೆ ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ಳುತ್ತಿದೆ. ಇದು ಭಾರತದ ಪಶ್ಚಿಮ ಕರಾವಳಿಯತ್ತ ಮುಂಗಾರು ಸಾಗುವ ಮಾಮೂಲಿ ಪ್ರಕ್ರಿಯೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆಯೂ ಇಲ್ಲದೇ ಇಲ್ಲ ಎಂದು ಅವರು ಹೇಳಿದರು. ಕಡಿಮೆ ಒತ್ತಡ ವ್ಯವಸ್ಥೆಯು ಉತ್ತರ- ವಾಯವ್ಯ ಕಡೆಗೆ ಚಲಿಸಿದರೆ ಮುಂಗಾರು ಚಲನೆಗೆ ಅನುಕೂಲವಾಗುತ್ತದೆ. ಬದಲಿಗೆ ಅದೇನಾದರೂ ಓಮನ್ ಕರಾವಳಿಯೆಡೆಗೆ ಚಲಿಸಿದರೆ ತಾತ್ಕಾಲಿಕವಾಗಿ ಮುಂಗಾರು ಚಲನೆಗೆ ಅಡ್ಡಿಯಾಗಬಹುದು ಎಂದು ಮೊಹಾಪಾತ್ರ ನುಡಿದರುಭಾರತದಲ್ಲಿನ ಮಿನಿಕಾಯ್, ಅಮಿನಿ, ತಿರುವನಂತಪುರಂ, ಪುನಲೂರ್, ಕೊಲ್ಲಂ, ಅಲಪುಳ, ಕೊಟ್ಟಾಯಂ, ಕೋಚಿ, ತ್ರಿಶ್ಯೂರ್, ಕೋಯಿಕ್ಕೋಡ್, ತಲಶ್ಶೇರಿ, ಕಣ್ಣೂರು, ಕುಡುಲು ಮತ್ತು ಮಂಗಳೂರು ೧೪ ಹವಾಮಾನ ಕೇಂದ್ರಗಳು ಮೇ ೧೦ರ ಬಳಿಕ ನೀಡುವ ಶೇಕಡಾ ೬೦ರಷ್ಟು ಮುನ್ಸೂಚನೆಯನ್ನು ಆಧರಿಸಿ ಭಾರತೀಯ ಹವಾಮಾನ ಇಲಾಖೆಯು ಕೇರಳಕ್ಕೆ ಮುಂಗಾರು ಆಗಮನವಾಗಿದೆಯೇ ಅಥವಾ ಇಲ್ಲವೇ ಎಂಬುದಾಗಿ ಘೋಷಿಸುತ್ತದೆ. ಕೇಂದ್ರಗಳು ನಿರಂತರವಾಗಿ ಎರಡು ದಿನ . ಮಿಮಿ ಮಳೆ ಸುರಿದ ಬಗ್ಗೆ ಮತ್ತು ಇತರ ಅಂಶಗಳ ಬಗ್ಗೆ ನೀಡುವ ವರದಿಯನ್ನು ಇದು ಆಧರಿಸಿರುತ್ತದೆಮೇ ೧೫ರಂದು ಭಾರತೀಯ ಹವಾಮಾನ ಇಲಾಖೆಯು ಕೇರಳಕ್ಕೆ ಜೂನ್ ೬ರಂದು ಮುಂಗಾರು ಆಗಮಿಸುವುದು ಎಂದು ಹೇಳಿತ್ತು. ಮುಂಗಾರು ಆಗಮನದ ದಿನಾಂಕವು ಮುಂಗಾರು ಮಳೆಯ ಪ್ರಮಾಣದ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಪ್ರತಿಪಾದಿಸಿತು. ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸುರಿಯವ ಶೇಕಡಾ ೯೬ರಷ್ಟು ಮಳೆ ದೀರ್ಘ ಅವಧಿಯ ಸರಾಸರಿ (ಎಲ್ಪಿಎ) ಮಳೆಯು ಮಾಮೂಲಿ ಮಳೆಗಿಂತ ಸ್ವಲ್ಪ ಕಡಿಮೆ ಇರುತ್ತದೆ ಎಂದು ಏಪ್ರಿಲ್ ತಿಂಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಹೇಳಿತ್ತು. ೧೯೫೧ರಿಂದ ೨೦೦೦ದ ನಡುವಣ ಅವಧಿಯಲ್ಲಿ ಒಟ್ಟಾರೆ ದೇಶದ ದೀರ್ಘಾವಧಿ ಅವಧಿಯ ಸರಾಸರಿ ಮಳೆಯ ಪ್ರಮಾಣ ೮೯ ಸೆಂಮೀ ಆಗಿತ್ತು. ಜೂನ್ ತಿಂಗಳಲ್ಲಿ ಸುರಿಯವ ಮಳೆಯ ಮೇಲೆ ದುರ್ಬಲವಾದ ಎಲ್-ನಿನೋ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ದೇಶಾದ್ಯಂತ ಸುರಿಯಲಿರುವ ಮಳೆಯ ವಿವರಗಳ ಬಗ್ಗೆ ತಿಂಗಳ ಕೊನೆಗೆ ಐಎಂಡಿಯು ವಿವರವಾದ ಅಂದಾಜು ಮಾಡುವ ನಿರೀಕ್ಷೆ ಇದೆ. ದೇಶದ ಬಹುತೇಕ ಭಾಗಗಳು ಬರಪರಿಸ್ಥಿತಿ ಎದುರಿಸುತ್ತಿದ್ದು, ಜಲಾಶಯಗಳಲ್ಲಿ ನೀರು ಅತ್ಯಂತ ಕಡಿಮೆಯಾಗಿರುವ  ಹಿನ್ನೆಲೆಯಲ್ಲಿ ಮುಂಗಾರು ಆಗಮನವಾದರೂ, ಬಿತ್ತನೆಯನ್ನು ಕನಿಷ್ಠ ಎರಡು ವಾರಗಳ ಕಾಲ ಮುಂದೂಡುವಂತೆ ಹವಾಮಾನ ಇಲಾಖೆ ಬಹುತೇಕ ರಾಜ್ಯಗಳ ರೈತರಿಗೆ ಸಲಹೆ ಮಾಡಲಾಯಿತು.

2019: ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸಂಪುಟದ ೨೫ ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಆದರೆ ಜಗನ್  ಸಂಪುಟದಲ್ಲಿ ನಟಿ ಹಾಗೂ ಎರಡು ಬಾರಿ ಶಾಸಕಿ ಯಾಗಿ ಆಯ್ಕೆಯಾಗಿರುವ ವೈಎಸ್ ಆರ್  ಪಿಯ ಬೆಂಕಿ ಚೆಂಡು ಎಂದೇ ಕರೆಸಿಕೊಳ್ಳುವ ರೋಜಾ ಅವರಿಗೆ ಸ್ಥಾನ ನೀಡದಿರುವದು ಎಲ್ಲರ ಅಚ್ಚರಿಗೆ ಕಾರಣವಾ ಯಿತು.  ರಾಜ್ಯಪಾಲ ಇಎಸ್ ಎಲ್  ನರಸಿಂಹನ್  ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.ವೆಲಗಾಪುಡಿಯ ರಾಜ್ಯ ಸಚಿವಾಲಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮೂವರು ಮಹಿಳೆಯರು ಸೇರಿದಂತೆ ೨೫ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಇಪ್ಪತ್ತೈದು ಸಚಿವರ ಪೈಕಿ ಐವರು ಉಪಮುಖ್ಯ ಮಂತ್ರಿಗಳನ್ನು ನೇಮಕ ಮಾಡಲು ಜಗನ ರೆಡ್ಡಿ ಮುಂದಾಗಿದ್ದಾರೆ. ರಾಜ್ಯಕ್ಕೆ ಐವರು ಉಪಮುಖ್ಯಮಂತ್ರಿ ಗಳ ಪರಿಕಲ್ಪನೆ ದೇಶದಲ್ಲಿ ಇದೇ ಮೊದಲು. ಎಲ್ಲಾ ಸಮು ದಾಯಕ್ಕೂ ಸಮಾನ ಪ್ರಾತಿನಿಧ್ಯ ನೀಡುವ ಉದ್ದೇಶ ದಿಂದ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಂಡಿ ದ್ದರು.  ಅಲ್ಲದೆ ವೈಎಸ್ ಆರ್  ಕಾಂಗ್ರೆಸ್  ಪಕ್ಷದಿಂದ ಗೆದ್ದಿರುವ ಇತರೆ ಶಾಸಕರಿಗೂ ಎರಡೂವರೆವರ್ಷದ ನಂತರ ಅವಕಾಶ ನೀಡಲಾಗುವುದು ಎಂದು ಜಗನ್  ಭರವಸೆ ನೀಡಿದ್ದರು.

2019: ಇಸ್ಲಾಮಾಬಾದ್: ಹಲವು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಎದ್ದಿರುವ ವೈಮನಸ್ಯಕ್ಕೆ ತೆರೆ ಎಳೆಯಲು ಪಾಕ ಪ್ರಧಾನಿ ಇಮ್ರಾನ ಖಾನ್ ಮುಂದಾ ಗಿದ್ದು, ಸಂಬಂಧ ಭಾರತಕ್ಕೆ ಪತ್ರ ಬರೆದರು. ಪತ್ರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ಎಲ್ಲಾ ಬಗೆಯ ವಿವಾದಗಳು, ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದಾರೆ ಎನ್ನಲಾಯಿತು.  ಈ ಕುರಿತು ಪಾಕಿಸ್ತಾನದ ಪತ್ರಿಕೆ ಗಳೂ ಕೂಡ ವರದಿ ಮಾಡಿದ್ದು, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮೂಡುವಂತೆ ಮಾಡಲು ಪಾಕ್ ಬದ್ಧವಾಗಿದೆ. ಆದ್ದರಿಂದ ವಿಷಯವಾಗಿ ಉಭಯ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಪತ್ರದಲ್ಲಿ ತಿಳಿಸಿದರು. ಮತ್ತೊಮ್ಮೆ ಪ್ರಧಾನಿಯಾಗಿ ಅಧಿ ಕಾರ ಸ್ವೀಕರಿಸಿರುವುದಕ್ಕೆ ನರೇಂದ್ರ ಮೋದಿ ಅವರನ್ನು ಪತ್ರ ದಲ್ಲಿ ಮತ್ತೊಮ್ಮೆ ಅಭಿ ನಂದಿಸಿದ ಪಾಕ್ ಪ್ರಧಾನಿ, ಕಾಶ್ಮೀರ ಸೇರಿ ಎಲ್ಲ ವಿವಾದಗಳನ್ನು ಪರಿ ಹರಿಸಿಕೊಳ್ಳಲು ಪಾಕ್ ಉತ್ಸುಕವಾಗಿದೆ ಎಂದು ಹೇಳಿದ್ದಾರೆ ಎಂದು ವರದಿಗಳು ಹೇಳಿದವು.

2019: ಡೆಹ್ರಾಡೂನ್: ಡ್ರೋನ್  ಮೂಲಕ ಕೇವಲ ೧೮ ನಿಮಿಷದಲ್ಲಿ ೩೦ ಕಿ.ಮೀ ಸಂಚರಿಸಿ ರಕ್ತದ ಮಾದರಿಯನ್ನು ನೀಡಿದ ಘಟನೆ ಮೊದಲ ಬಾರಿಗೆ ಉತ್ತರಾಖಂಡದಲ್ಲಿ ನಡೆಯಿತು.
ನಂದಗೋನ್ನ ಜಿಲ್ಲಾಸ್ಪತ್ರೆಯಿಂದ ರಕ್ತದ ಮಾದರಿಯನ್ನು ಡ್ರೋನ್  ಮೂಲಕ ತೇರಿಯಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಯಿತು. .ಮೊದಲ ಪ್ರಯತ್ನದಲ್ಲೇ ಇದು ಸಫಲವಾಗಿದ್ದು, ಭಾರತದ ಆರೋಗ್ಯದ ಸೇವೆಯಲ್ಲಿ ಇದೊಂದು ದೊಡ್ಡ ಹೆಜ್ಜೆ ಆಗಲಿದೆ. ಡ್ರೋನ್ ನಂದಗೋನದಿಂದ ತೇರಿ ನಡುವಿನ ೩೦ ಕಿ.ಮೀ ದೂರವನ್ನು ೧೮ ನಿಮಿಷದಲ್ಲಿ ಡ್ರೋನ್  ಕ್ರಮಿಸಿದೆ. ಡ್ರೋನ್ ಪ್ರತಿ ಗಂಟೆಗೆ ೧೦೦ ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ  ಹೊಂದಿದೆ. ಈ ಪ್ರಯತ್ನ ಯಶಸ್ವಿ ಆಯಿತು.  ಆಸ್ಪತ್ರೆ ೩೦ ಕಿ.ಮೀ ದೂರವಿದ್ದು ಕೇವಲ ೧೮ ನಿಮಿಷದಲ್ಲಿ ರಕ್ತದ ಮಾದರಿಯನ್ನು ಕಳುಹಿಸಲಾಯಿತು.. ಇದು ದೂರದ ಪ್ರದೇಶದಲ್ಲಿ ಇರುವ ರೋಗಿಗಳಿಗೆ ಸಹಾಯವಾಗಲಿದೆ ಎಂದು ತೇರಿ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು. ರಸ್ತೆ ಮೂಲಕ ರಕ್ತದ ಮಾದರಿ ಬರಬೇಕಾದರೆ ೬೦ ರಿಂದ೮೦ ನಿಮಿಷ ಬೇಕಾಗುತಿತ್ತು. ಸರಿಯಾದ ರಸ್ತೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಉಪಯುಕ್ತವಾಗಲಿದೆ. ಬಿಸಿಲಿನಿಂದ ರಕ್ತ ಹಾಳಾಗಬಾರದು ಎಂದು ಅದರ ಜೊತೆ ಕೂಲ್  ಕಿಟ್  ಕೂಡ ಇಡಲಾಗಿತ್ತು ಎಂದು ತೇರಿ ಗ್ರಾಮದ ಬುರಾರಿ ಆಸ್ಪತ್ರೆಯ ವೈದ್ಯರು ಹೇಳಿದರು. ಐಐಟಿಯ ಹಳೆಯ ವಿದ್ಯಾರ್ಥಿ ನಿಖಿಲ ಉಪಾದ್ಯಾಯ ಮಾಲೀಕತ್ವ ಸಿಡಿ ಸ್ಪೇಸ ರೋಬೋಟಿಕ್ಸ್  ಲಿಮಿಟೆಡ್  ಕಂಪನಿ ಈ ಡ್ರೋನ್  ನಿರ್ಮಾಣ ಮಾಡಿತ್ತು.  ೫೦೦ ಗ್ರಾಂ ತೂಕದ ವಸ್ತುಗಳನ್ನು ಹೊರುವ ಸಾಮರ್ಥ್ಯವನ್ನು  ಈ ಡ್ರೋನ್  ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ೫೦ ಕಿ.ಮೀ ಸಂಚರಿಸುತ್ತದೆ
2018: ಪುಣೆ: ಮಾವೋವಾದಿ ನಕ್ಸಲೀಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರೋಡ್ ಶೋ ವೇಳೆಯಲ್ಲಿ
ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ರೀತಿಯಲ್ಲಿಯೇ ಹತ್ಯೆಗೈಯಲು ಯೋಜಿಸಿದ್ದರೆಂಬುದಕ್ಕೆ ಇದಕ್ಕೆ ಇಂಬು ನೀಡುವ ಪತ್ರವನ್ನು ದೇಶದ ವಿವಿಧೆಡೆಗಳಿಂದ ಉನ್ನತ ನಕ್ಸಲೀಯ ನಾಯಕರ ಜೊತೆ ಸಂಪರ್ಕ ಹೊಂದಿರುವುದಕ್ಕಗಿ ಬಂಧಿಸಲಾಗಿರುವ ಐವರು ಕಾರ್ಯಕರ್ತರ ಪೈಕಿ ಒಬ್ಬರ ಮನೆಯಿಂದ ವಶ ಪಡಿಸಿಕೊಳ್ಳಲಾಗಿದ್ದು, ದಾಖಲೆಯನ್ನು ಪುಣೆ ಸೆಷನ್ಸ್ ಕೋರ್ಟಿಗೆ ಸಲ್ಲಿಸಲಾಯಿತು. ಪತ್ರವುಮೋದಿ ರಾಜ್ ಕೊನೆಗೊಳಿಸಲು ಸಮಗ್ರ ಕ್ರಮಗಳ ಭಾಗವಾಗಿಇನ್ನೊಂದು ರಾಜೀವ್ ಗಾಂದಿ ಘಟನೆ ಮಾದರಿ ಕ್ರಮದ ಬಗ್ಗೆ ಚರ್ಚಿಸಿದೆ ಎಂದು ಆಪಾದಿಸಲಾಯಿತು.  ಪುಣೆ ಪೊಲೀಸ್ ತಂಡಗಳು ಜೂನ್ 7ರ ಬುಧವಾರ ಮುಂಬೈಯಲ್ಲಿ  ಖ್ಯಾತ ದಲಿತ ಕಾರ್ಯಕರ್ತ ಪ್ರಕಾಶಕ ಸುಧೀರ್ ಧವಳೆ, ನಾಗಪುರದಲ್ಲಿ ಖ್ಯಾತ ಮಾನವ ಹಕ್ಕುಗಳ ವಕೀಲ ಸುರೇಂದ್ರ ಗಡ್ಲಿಂಗ್, ಬುಡಕಟ್ಟು ಕಾರ್ಯಕರ್ತ ಮಹೇಶ ರೌತ್ ಮತ್ತು ನಾಗಪುರ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕಿ ಶೋಮಾ ಸೆನ್ ಹಾಗೂ ರೋನಾ ವಿಲ್ಸನ್ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದವು.  ನಕ್ಸಲೀಯರ ಜೊತೆಗೆ ಸಂಪರ್ಕ ಹಾಗೂಎಲ್ಗಾರ್ ಪರಿಷದ್ ಸಂಘಟನೆ, ಮತ್ತು ನಂತರ ವರ್ಷ ಜನವರಿ ೧ರಂದು ಸಂಭವಿಸಿದ ಭೀಮಾ -ಕೋರೆಗಾಂವ್ ಹಿಂಸಾಚಾರದಲ್ಲಿನ ಪಾತ್ರಕ್ಕಾಗಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತುನವದೆಹಲಿಯಲ್ಲಿ ವಿಲ್ಸನ್ ಮನೆಯಿಂದ ಇತರ ವಸ್ತುಗಳ ಜೊತೆಗೆ ವಶ ಪಡಿಸಿಕೊಳ್ಳಲಾಗಿರುವ ಪತ್ರವೊಂದು ಎಂ - ಕಾರ್ಬೈನುಗಳು ಮತ್ತು ನಾಲ್ಕು ಲಕ್ಷ ಸುತ್ತಿನಷ್ಟು ಮದ್ದುಗುಂಡು ಸರಬರಾಜಿಗಾಗಿ ಕೋಟಿ ರೂಪಾಯಿಗಳ ಅಗತ್ಯ ಇರುವ ಬಗ್ಗೆ ಪ್ರಸ್ತಾಪಿಸಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.  ಪತ್ರವುಅವರ (ಪ್ರಧಾನಿ ಮೋದಿ) ರೋಡ್ ಶೋಗಳ ಕಾಲದಲ್ಲಿ ಗುರಿ ಇಡುವ ಮೂಲಕಇನ್ನೊಂದು ರಾಜೀವ್ ಗಾಂಧಿ ಮಾದರಿ ಘಟನೆ ಯೋಜಿಸುವ ಬಗ್ಗೆ ಪ್ರಸ್ತಾಪಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ ಪವಾರ್ ನ್ಯಾಯಾಲಯಕ್ಕೆ ತಿಳಿಸಿದರು. ‘ನಾವು ಇನ್ನೊಂದು ರಾಜೀವ್ ಗಾಂಧಿ ಘಟನೆ ಮಾದರಿ ಬಗ್ಗೆ ಯೋಚಿಸುತ್ತಿದ್ದೇವೆ. ಇದು ಆತ್ಮಹತ್ಯಾಕಾರಿ ಎನಿಸುತ್ತದೆ. ನಾವು ವಿಫಲರಾಗಬಹುದಾದ ಸಾಧ್ಯತೆಯೂ ಇದೆ. ಆದರೆ ಪಕ್ಷದ ಪಾಲಿಟ್ ಬ್ಯೂರೋ/ ಕೇಂದ್ರೀಯ ಸಮಿತಿಯು (ಪಿಬಿ/ಸಿಸಿ) ನಮ್ಮ ಪ್ರಸ್ತಾಪದ ಬಗ್ಗೆ ಪರಿಶೀಲಿಸಲೇಬೇಕು ಎಂದು ಪತ್ರದ ಒಕ್ಕಣೆಯನ್ನು ಪವಾರ್ ಉಲ್ಲೇಖಿಸಿದರುಐವರೂ ಬಂಧಿತರನ್ನು ಈದಿನ ಇಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಜೂನ್ ೧೪ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿತುಆರೋಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಕೋರಿದ ಪವಾರ್, ವಿಲ್ಸನ್ ಮನೆಯಿಂದ ವಶ ಪಡಿಸಿಕೊಳ್ಳಲಾದ ಇನ್ನೊಂದು ಪತ್ರದಲ್ಲಿ ಎಲ್ಲ ನಗರ ಕಾಮ್ರೇಡ್ಗಳ ಪ್ರಯತ್ನವನ್ನು ಉನ್ನತ ಸಿಪಿಐ (ಮಾವೋವಾದಿ) ನಾಯಕರು ಮೆಚ್ಚಿರುವ ಅಂಶವೂ ಪ್ರಸ್ತಾಪಗೊಂಡಿದೆ ಎಂದು ಹೇಳಿದರು.  ‘ಕಾಮ್ರೇಡರಾದ ಮಂಗಲು ಮತ್ತು ದೀಪು ಅವರು ಕೋರೆಗಾಂವ್ ಕಾರ್ಯಕ್ರಮವನ್ನು ಕಳೆದ ಎರಡು ತಿಂಗಳುಗಳಿಂದ ಕಾಮ್ರೇಡ್ ಸುಧೀರ್ ಜೊತೆಗೆ ಸಂಯೋಜಿಸುತ್ತಿದ್ದಾರೆ ಎಂದು ಪವಾರ ನುಡಿದರುನ್ನೊಂದು ಪತ್ರವು (ಎಲ್ಗಾರ್ ಪರಿಷದ್ ಮತ್ತು  ಇತರ ಚಟುವಟಿಕೆಗಳಿಗೆ) ಮಾವೋವಾದಿಗಳು ಒದಗಿಸಿದ ಹಣದ ಬಗ್ಗೆ ಪ್ರಸ್ತಾಪಿಸಿದ್ದು, ಹಣವನ್ನು ಮಾವೋವಾದಿಗಳು ಕಾಮ್ರೇಡ್ ಸುಧೀರ್ ಗೆ ಭೀಮಾ -ಕೋರೆಗಾಂವ್ ಕೆಲಸಕ್ಕಾಗಿ  ಒದಗಿಸುವ ಬಗ್ಗೆ ಮತ್ತು ಭವಿಷ್ಯದ ಕಾರ್ಯಕ್ರಮಗಳಿಗೆ ನಿಧಿ ಒದಗಿಸುವ ಅಧಿಕಾರವನ್ನು ಕಾಮ್ರೇಡ್ ಗಳಾದ ಶೋಮಾ ಮತ್ತು ಸುರೇಂದ್ರ ಅವರಿಗೆ ವಹಿಸಿರುವ ಬಗ್ಗೆ ಪ್ರಸ್ತಾಪಿಸುತ್ತದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರುನಕಲಿ ಪತ್ರಗಳು: ಆರೋಪಿಗಳ ಪರ ವಾದ: ಆರೋಪಿಗಳ ಪರ ವಕೀಲರುಪತ್ರಗಳು ಮತ್ತು ಇತರ ದಾಖಲೆಗಳನ್ನು ಅಧಿಕಾರಿಗಳು ಸೃಷ್ಟಿಸಿದ್ದಾರೆ ಮತ್ತು ಆರೋಪಿಗಳನ್ನು ಸಂಚಿನಲ್ಲಿ ಸಿಲುಕಿಸಲಾಗಿದೆ ಎಂದು ಪ್ರತಿಪಾದಿಸಿದರು.  ‘ಇವು (ಪತ್ರಗಳು) ಗೊಂದಲಮಯವಾಗಿವೆ. ಪತ್ರ, ದಾಖಲೆಗಳಲ್ಲಿ ಇರುವ ಅಂಶಗಳ ಸಾಚಾತನ ಇನ್ನೂ ಸಾಬೀತಾಗಬೇಕಾಗಿದೆ ಎಂದು ಆರೋಪಿ ಪರ ವಕೀಲರಲ್ಲಿ ಒಬ್ಬರಾದ ತೋಸಿಫ್ ಶೇಖ್ ಹೇಳಿದರುಏಪ್ರಿಲ್ ತಿಂಗಳಲ್ಲಿ ದಾಳಿಗಳು ನಡೆದಿದ್ದು, ಆಗ ವಶಪಡಿಸಿಕೊಳ್ಳಲಾದ ಲ್ಯಾಪ್ ಟಾಪ್, ಎಲೆಕ್ಟ್ರಾನಿಕ್ ಸಾಧನಗಳು, ದಾಖಲೆಗಳನ್ನು ತನಿಖಾ ಅಧಿಕಾರಿಗಳು ಈಗ ಸಲ್ಲಿಸುತ್ತಿರುವ ಬಗ್ಗೆ ಪ್ರಶ್ನಿಸಿರುವ ಆರೋಪಿ ಪರ ವಕೀಲ ದಾಖಲೆಗಳನ್ನು ಸೃಷ್ಟಿಸಿರುವ ಸಾಧ್ಯತೆಗಳಿವೆ ಎಂದು ನುಡಿದರು. ಪೊಲೀಸರು ಆರೋಪಗಳನ್ನು ಸಮಯದಲ್ಲೇ ಏಕೆ ಬಂಧಿಸಲಿಲ್ಲ ಎಂದು ಅವರು ಪ್ರಶ್ನಿಸಿರು.

2018: ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಾಗಪುರದಲ್ಲಿ ಆರೆಸ್ಸೆಸ್ ಕೇಂದ್ರ ಕಚೇರಿಗೆ ನೀಡಿದ ಭೇಟಿಯನ್ನುಭಾರತೀಯ ರಾಷ್ಟ್ರಿಯತೆಯ ಉದಾತ್ತ ಕಲ್ಪನೆ ಮತ್ತು ಆದರ್ಶಗಳು ಪ್ರಕಾಶಿಸಿದ ಘಟನೆಎಂದು ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಬಣ್ಣಿಸಿದರು.ರಾಷ್ಟ್ರದ ಸಮಕಾಲೀನ ಇತಿಹಾಸದಲ್ಲಿ ಇದೊಂದು ಮಹತ್ವದ ಘಟನೆ ಎಂದು ಅವರು ಶ್ಲಾಘಿಸಿದರುಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದ್ದಕ್ಕಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ಮತ್ತು ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಮಾಜಿ ರಾಷ್ಟ್ರಪತಿಯವರನ್ನು ಶ್ಲಾಘಿಸಿದ ಅಡ್ವಾಣಿಉಭಯರೂ ವ್ಯಕ್ತ ಪಡಿಸಿದ ಅಭಿಪ್ರಾಯಗಳಲ್ಲಿ ಮಹತ್ವದ ಸಾಮರಸ್ಯ ಮತ್ತು ಅನುರಣನವಿತ್ತು ಎಂದು ಹೇಳಿದರು. ಜೀವನದುದ್ದಕ್ಕೂ ಆರೆಸ್ಸೆಸ್ಸಿನ ಸ್ವಯಂ ಸೇವಕರಾದ ಬಿಜೆಪಿ ನಾಯಕ ಮುಖರ್ಜಿ ಮತ್ತು ಭಾಗ್ವತ್ ಅವರು ನಿಜವಾಗಿಯೂ ಸೈದ್ಧಾಂತಿಕ ಹೊಂದಾಣಕೆ ಮತ್ತು ವ್ಯತ್ಯಾಸಗಳನ್ನು ಸಂಭಾಷಣೆಯನ್ನಾಗಿ ಪರಿವರ್ತಿಸುವ ಶ್ಲಾಘನೀಯ ಉದಾಹರಣೆಯನ್ನು ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟರುಉಭಯರೂ ಬಹುವಿಧ ನಂಬಿಕೆಗಳು ಸೇರಿದಂತೆ ಎಲ್ಲ ವೈವಿಧ್ಯತೆಗಳನ್ನೂ ಅಂಗೀಕರಿಸುವ ಮತ್ತು ಗೌರವಿಸುವ ಭಾರತದ ಏಕತೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಎಂದು ಅಡ್ವಾಣಿ ನುಡಿದರು. ಮೋಹನ್ ಭಾಗ್ವತ್ ಅವರ ಕೈಕೆಳಗೆ ಆರೆಸ್ಸೆಸ್ ರಾಷ್ಟ್ರದ ವಿವಿಧ ವರ್ಗಗಳನ್ನು ಸಂಭಾಷಣೆಯ ಸ್ಫೂರ್ತಿಯೊಂದಿಗೆ ತಲುಪುವ ಪ್ರಯತ್ನಗಳನ್ನು ವಿಸ್ತರಿಸಿದ್ದಕ್ಕಾಗಿ ಮತ್ತು ತೀವ್ರಗೊಳಿಸಿದ್ದಕ್ಕಾಗಿ, ದೀರ್ಘಕಾಲ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಡ್ವಾಣಿ ಅವರು  ಸಂತಸ ವ್ಯಕ್ತ ಪಡಿಸಿದರು. ಮುಕ್ತತೆ ಮತ್ತು ಪರಸ್ಪರ ಗೌರವದ ಸ್ಫೂರ್ತಿಯೊಂದಿಗೆ qಯುವ ಇಂತಹ ಸಂಭಾಷಣೆಗಳು ನಮ್ಮೆಲ್ಲರ ಕನಸುಗಳ ಸಾಕಾರದ ಭಾರತ ನಿರ್ಮಾಣಕ್ಕೆ ಅತ್ಯಂತ ಅಗತ್ಯವಾಗಿ ಇಂದು ಬೇಕಾಗಿರುವ ಸಹನೆ, ಸಾಮರಸ್ಯ ಮತ್ತು ಸಹಕಾರದ ಪರಿಸರವನ್ನು ನಿರ್ಮಿಸುತ್ತವೆ ಎಂದು ಅಡ್ವಾಣಿ ಹೇಳಿದರು. ಮುಖರ್ಜಿಯವರು ಆರೆಸ್ಸೆಸ್ ಆಹ್ವಾನವನ್ನು ಸ್ವೀಕರಿಸುವ ಮೂಲಕ ಘನತೆ ಮತ್ತು ಸದಾಶಯವನ್ನು ಮೆರೆದರು ಎಂದು ಅಡ್ವಾಣಿ ಪ್ರಶಂಸಿಸಿದರು. ಮುಖರ್ಜಿ ಜೊತೆಗಿನ ದೀರ್ಘಕಾಲದ ಒಡನಾಟವನ್ನು ನೆನಪಿಸಿದ ಅಡ್ವಾಣಿ, ಸಾರ್ವಜನಿಕ ಬದುಕಿನ ಸುದೀರ್ಘ ಅನುಭವ ಅವರನ್ನು ವಿವಿಧ ಸೈದ್ಧಾಂತಿಕ ಮತ್ತು ರಾಜಕೀಯ ಹಿನ್ನೆಲೆಗಳನ್ನು ಹೊಂದಿದ ಜನರ ನಡುವೆ ಸಂಭಾಷಣೆ ಮತ್ತು ಸಹಕಾರದ ಅಗತ್ಯ ಇರಬೇಕೆಂದು ಪ್ರಬಲವಾಗಿ ನಂಬುವ ಮುತ್ಸದ್ಧಿಯನ್ನಾಗಿ ರೂಪಿಸಿದೆ ಎಂದು ಹೇಳಿದರುಆರೆಸ್ಸೆಸ್ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಲು ಒಪ್ಪಿಗೆ ನೀಡಿದ ಮಾಜಿ ರಾಷ್ಟ್ರಪತಿಯವರ ನಿರ್ಧಾರವು ಹಲವಾರು ಮಂದಿ ಕಾಂಗ್ರೆಸ್ ನಾಯಕರು ಮತ್ತು ಇತರ ಬಿಜೆಪಿ ಪ್ರತಿಸ್ಪರ್ಧಿಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.  ಏನಿದ್ದರೂ, ಮುಖರ್ಜಿಯವರು ಮಾಡಿದ ಭಾಷಣ ಕಾಂಗೆಸ್ ನಾಯಕರಿಂದ ಮಾತ್ರವೇ ಅಲ್ಲ ಆರೆಸ್ಸೆಸ್ ಜೊತೆಗೆ ಒಡನಾಟ ಹೊಂದಿದ್ದವರಿಂದಲೂ ಪ್ರಶಂಸೆಗೆ ಪಾತ್ರವಾಯಿತು. ದ್ವೇಷ ಮತ್ತು ಅಸಹನೆಯು ರಾಷ್ಟ್ರೀಯ ಅಸ್ಮಿತೆಯನ್ನು ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಸಿದ ಮುಖರ್ಜಿ, ರಾಷ್ಟ್ರೀಯತೆಯು ಜನಾಂಗ ಅಥವಾ ಧರ್ಮಕ್ಕೆ ಬಂಧನಕಾರಿಯಲ್ಲ ಎಂದು ಹೇಳಿ ಭಿನ್ನಾಭಿಪ್ರಾಯಗಳನ್ನು ದೂರಮಾಡಲು ಸಂಭಾಷಣೆ ಅಗತ್ಯ ಎಂದು ಕರೆ ನೀಡಿದ್ದರು.

2018: ಮುಂಬೈ: ಭಯೋತ್ಪಾದನೆ ಸಂಚಿನಲ್ಲಿ ಪಾಕಿಸ್ತಾನಿ ಒಬ್ಬನನ್ನು ಸಿಲುಕಿಸಲು ಹಿಂದು ರಾಷ್ಟ್ರೀಯರು ಪ್ರಯತ್ನಿಸುವುದನ್ನು ತೋರಿಸುವ ತನ್ನ ಅಪರಾಧ ನಾಟಕಕ್ವಾಂಟಿಕೋದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ವ್ಯಕ್ತವಾದ ವ್ಯಾಪಕ ಅಂತರ್ಜಾಲ ಆಕ್ರೋಶಕ್ಕೆ ಮಣಿದ ಅಮೆರಿಕನ್ ಟೆಲಿವಿಷನ್ ಸ್ಟುಡಿಯೋ ಎಬಿಸಿ ಭಾರತೀಯ ಅಭಿಮಾನಿಗಳ ಕ್ಷಮೆ ಯಾಚಿಸಿತು.  ‘ಸರಣಿಯು ಪ್ರಿಯಾಂಕಾ ಚೋಪ್ರಾ ವಿರುದ್ಧ ವ್ಯಾಪಕವಾದ ಭಾವುಕ ಟೀಕೆಗೆ ಕಾರಣವಾಗಿತ್ತು. ಪ್ರಿಯಾಂಕಾ ಚೋಪ್ರಾ ಅವರು ಪ್ರದರ್ಶನ ಸೃಷ್ಟಿಸಿಲ್ಲ, ಬರೆದಿಲ್ಲ ಅಥವಾ ನಿರ್ದೇಶನ ಕೂಡಾ ಮಾಡಿಲ್ಲ. ಟೀಕೆಗಳು ಅವರನ್ನು ಗುರಿಯನ್ನಾಗಿಸಿದ್ದು ಸರಿಯಲ್ಲ ಎಂದು ವಾಲ್ಟ್ ಡಿಸ್ನಿ ಮಾಲೀಕತ್ವದ ಎಬಿಸಿ ಹೇಳಿಕೆಯೊಂದರಲ್ಲಿ ತಿಳಿಸಿತು.  ‘ಕ್ವಾಂಟಿಕೋ ಪ್ರಕರಣದ ಬಳಿಕ ಚೋಪ್ರಾ ಅವರು ಭಾರತದ ಅಂತರ್ಜಾಲದಲ್ಲಿ ವ್ಯಾಪಕ ಟೀಕೆಗೆ ಗುರಿಯಾದರು. ಕೆಲವರು ದಕ್ಷಿಣ ಕೊರಿಯಾದ ದೈತ್ಯ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕಂಪೆನಿ ಸೇರಿದಂತೆ ಪ್ರಿಯಾಂಕಾ ಅವರು ಪರಿಚಯಿಸುತ್ತಿರುವ ಬ್ರ್ಯಾಂಡುಗಳನ್ನು ಬಹಿಷ್ಕರಿಸುವಂತೆಯೂ ಕರೆ ನೀಡಿದ್ದರುಇನ್ನು ಕೆಲವರು ಸರಣಿಯಲ್ಲಿ ಎಫ್ ಬಿಐ ಏಜೆಂಟ್ ಆಗಿ ಚೋಪ್ರಾ ಅವರು ನಟಿಸಿರುವ ದೃಶ್ಯಗಳನ್ನು ಅಳಿಸಿಹಾಕುವಂತೆಯೂ (ಬ್ಲಾಕ್ ಔಟ್) ಆಗ್ರಹಿಸಿದ್ದರು. ನ್ಯೂಯಾರ್ಕಿನಲ್ಲಿ ಪರಮಾಣು ಬಾಂಬ್ ಸ್ಪೋಟಿಸಲು ಯೋಜಿಸುತ್ತಿರುವ ವ್ಯಕ್ತಿ ಹಿಂದು ರಾಷ್ಟ್ರೀಯ ಎಂಬುದಕ್ಕೆ ಸಾಕ್ಷಿಯಾಗಿ ಹಿಂದು ಪ್ರಾರ್ಥನೆಗಾರನೊಬ್ಬನಪವಿತ್ರ ಮಣಿಯನ್ನು ಎಫ್ ಬಿಐ ಏಜೆಂಟ್ ಆಗಿ ನಟಿಸುತ್ತಿರುವ ಚೋಪ್ರಾ ಕೈಯಲಿ ತೋರಿಸುವ ದೃಶ್ಯ ಸರಣಿಯಲ್ಲಿತ್ತು.
ಕಟ್ಟುಕತೆಯೊಂದರ ಮೂಲಕ ಹಿಂದೂ ಭಯೋತ್ಪಾದನೆಯ ಮಿಥ್ಯೆ ಪ್ರಿಯಾಂಕಾ ಚೋಪ್ರಾ ನೆರವಿನೊಂದಿಗೆ ಅಮೆರಿಕದ ಟೆಲಿವಿಷನ್ಗೆ ಪ್ರವೇಶಿಸಿದೆ. ಯಾರಾದರೂ ಪಾಕಿಸ್ತಾನಿ ನಟಿ ಪಾಕಿಸ್ತಾನ ಅಥವಾ ಇಸ್ಲಾಮಿಗೆ ಈಕೆ ಭಾರತ ಮತ್ತು ಹಿಂದುತ್ವಕ್ಕೆ ದ್ರೋಹ ಬಗೆದ ರೀತಿಯಲ್ಲಿ ದೋಹ ಬಗೆಯಬಲ್ಲಳೇ?’ ಎಂದು ಅಮೆರಿಕ ಮೂಲದ ಹಿಂದೂ ವಿದ್ವಾಂಸ ಡೇವಿಡ್ ಫ್ರಾಲೆ ಟ್ವೀಟ್ ಮಾಡಿ ಟೀಕಿಸಿದ್ದರು.  ‘ಸರಣಿಯಲ್ಲಿ ಬಿಂಬಿತವಾದ ಕಥಾಮಾರ್ಗದಲ್ಲಿ ಚೋಪ್ರಾ ಅವರು ಯಾವುದೇ ರೀತಿಯಲ್ಲೂ ಶಾಮೀಲಾಗಿಲ್ಲ ಎಂದು ಎಬಿಸಿ ತನ್ನ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿತು.  ‘ಸರಣಿಯು ಬಿನ್ನ ಜನಾಂಗಗಳ ಮತು ಹಿನ್ನೆಲೆಗಳ ಹಲವಾರು ವಿರೋಧಿಗಳನ್ನು ಬಿಂಬಿಸಿದೆ. ಆದರೆ ಪ್ರಕರಣದಲ್ಲಿ ನಾವು ಪ್ರಮಾದವಶಾತ್ ಮತ್ತು ವಿಷಾದಕರವಾಗಿ ಸಂಕೀರ್ಣ ರಾಜಕೀಯ ವಿಷಯಕ್ಕೆ ಕಾಲಿಟ್ಟಿದ್ದೇವೆ. ಯಾರಿಗೂ ನೋವು ಉಂಟು ಮಾಡುವುದು ಖಂಡಿತವಾಗಿ ನಮ್ಮ ಉದ್ದೇಶವಾಗಿರಲಿಲ್ಲ ಎಂದು ಎಬಿಸಿ ಹೇಳಿಕೆ ತಿಳಿಸಿತು.

2018: ಛತ್ತೀಸ್ ಗಢ: ದಕ್ಷಿಣ ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಈದಿನ ನಸುಕಿನ ವೇಳೆಯಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಮಾವೋವಾದಿ ಕಮಾಂಡರ್ ಒಬ್ಬನನ್ನು ಪೊಲೀಸರು ಗುಂಡಿಟ್ಟು ಕೊಂದರು. ‘ಶುಕ್ರವಾರ ನಸುಕಿನ .೩೦ರ ವೇಳೆಯಲ್ಲಿ ಬಿಜಾಪುರ ಜಿಲ್ಲೆಯ ಭೈರಾಮಘಡ ಪೊಲೀಸ್ ಠಾಣೆ ವ್ಯಾಪ್ತಿಯ ಜರಮೊಂಗಿಯ ಗ್ರಾಮದ ಬಳಿ ಮಾವೋವಾದಿಗಳು ಮತ್ತು ಪೊಲೀಸರ ಮಧ್ಯೆ ಗುಂಡಿನ ಘರ್ಷಣೆ ಶುರುವಾಯಿತು. ಮಾವೋವಾದಿಗಳ ಪ್ಲಟೂನ್ ಕಮಾಂಡರ್ ಮಲ್ಲೇಶ್ ನೇತೃತ್ವದಲ್ಲಿ ಸುಮಾರು ೨೫ರಿಂದ ೩೦ ಮಂದಿ ಮಾವೋವಾದಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ಸುಮಾರು ೩೦-೪೦ ನಿಮಿಷಗಳ ಕಾಲ ಗುಂಡಿನ ವಿನಿಮಯ ನಡೆಯಿತು. ಬಳಿಕ ಮಾವೋವಾದಿಗಳು ಅಲ್ಲಿಂದ ಪರಾರಿಯಾಗಿ ದಟ್ಟಾರಣ್ಯ ಮತ್ತು ನದಿಯಲ್ಲಿ ಅಡಗಿದರು ಎಂದು ಪೊಲೀಸ್ ಅಧಿಕಾರಿ ನುಡಿದರುಮಾವೋವಾದಿ ಸಮವಸ್ತ್ರದಲ್ಲಿದ್ದ ಒಂದು ಶವ ಬಳಿಕ ಪೊಲೀಸರಿಗೆ ಲಭಿಸಿತು. ’.೬೨ ಎಂಎಂ ಪಿಸ್ತೂಲು, ಮೂರು ಜೀವಂತ ಗುಂಡುಗಳು, ಒಂದು ಇನ್ ಸಾಸ್ ರೈಫಲ್ ಮ್ಯಾಗಜಿನ್ ಜೀವಂತ ಗುಂಡುಗಳು, ಸ್ಫೋಟಕಗಳು, ಡಿಟೋನೇಟರ್ ಗಳು, ವಯರುಗಳು, ಟಿಫನ್ ಬಾಕ್ಸ್ ಬಾಂಬ್, ಸ್ಪೈಕ್ ಗಳು, ಮಾವೋವಾದಿ ಸಾಹಿತ್ಯ ಕೂಡಾ ಘರ್ಷಣೆ ನಡೆದ ಸ್ಥಳದಲ್ಲಿ ಪತ್ತೆಯಾದವು ಎಂದು ಅಧಿಕಾರಿ ಹೇಳಿದರು.
ಮೃತ ವ್ಯಕ್ತಿಯನ್ನು ನಿಷೇಧಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯ ಇದೆರ ಪ್ರದೇಶದ ಉಗ್ರಗಾಮಿ ಪ್ಲಟೂನ್ ಕಮಾಂಡರ್ ಮೋತಿ ಫರ್ಸಾ ಎಂಬುದಾಗಿ ಗುರುತಿಸಲಾಯಿತು.

2018: ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪಾಲ್ಗೊಂಡಿದ್ದ ಸಂಘ ಕಾರ್ಯಕ್ರಮದ  ‘ತಿರುಚಿದ ಫೋಟೋ, ವಿಭಜನಕಾರಿ ರಾಜಕೀಯ ಶಕ್ತಿಗಳ ಕೆಲಸ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಆಪಾದಿಸಿತು. ‘ವಿಭಜನಕಾರಿ ರಾಜಕೀಯ ಶಕ್ತಿಗಳು ಮೊದಲಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಆರೆಸ್ಸೆಸ್ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಮಾಡಲು ಯತ್ನಿಸಿದವು ಮತ್ತು ಈಗ ಸಂಘ ಪ್ರಾರ್ಥನೆಯಲ್ಲಿ ಸಂಘಟನೆ ಸದಸ್ಯರ ರೀತಿಯಲ್ಲೇ ಕೈಯನ್ನು ಎದೆಯ ಮೇಲೆ ಇರಿಸಿ ತಲೆಗೆ ಕಪ್ಪು ಟೋಪಿ ಧರಿಸಿ ಪಾಲ್ಗೊಂಡಿರುವಂತೆ ತೋರಿಸುವತಿರುಚಿದ ಫೋಟೋವನ್ನು ಅಂತರ್ಜಾಲದಲ್ಲಿ ಪ್ರಚುರ ಪಡಿಸಿವೆ ಎಂದು ಆರೆಸ್ಸೆಸ್ ದೂಷಿಸಿತು.  ‘ಕೆಲವು ವಿಭಜನಕಾರಿ ರಾಜಕೀಯ ಶಕ್ತಿಗಳು ಮಾಜಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಅವರು ನಾಗಪುರದಲ್ಲಿ ಹಿಂದಿನ ದಿನ  ನಡೆದ ಆರೆಸ್ಸೆಸ್ ಸಮಾರಂಭದ ಸಂಘ ಪ್ರಾರ್ಥನೆಯಲ್ಲಿ ಸಂಘಟನೆಯ ಸದಸ್ಯರ ರೀತಿಯಲ್ಲೇ ನಿಂತು ಪಾಲ್ಗೊಂಡಂತೆ ತೋರಿಸುವರೂಪಾಂತರ ಫೋಟೋವನ್ನು ಪೋಸ್ಟ್ ಮಾಡಿವೆ ಎಂದು ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.   ‘ಈ ಶಕ್ತಿಗಳು ಮೊದಲು ಮುಖರ್ಜಿಯವರು ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಮಾಡುವ ಸಲುವಾಗಿ ವಿರೋಧವನ್ನು ಸೃಷ್ಟಿಸಿದವು. ಈಗ ಭ್ರಮನಿರಸನಗೊಂಡ ಶಕ್ತಿಗಳು ಆರೆಸ್ಸೆಸ್ಸಿಗೆ ಉದ್ದೇಶಪೂರ್ವಕವಾಗಿ ಮಸಿ ಬಳಿಯಲು ಇಂತಹ ಕೊಳಕು ಉಪಾಯಗಳನ್ನು ಮಾಡುತ್ತಿವೆ. ಶಕ್ತಿಗಳ ಕೊಳಕು ಕೃತ್ಯವನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ ಎಂದು ಅವರು ನುಡಿದರು.  ಪ್ರಣಬ್ ಮುಖರ್ಜಿ ಅವರು ಆರೆಸ್ಸೆಸ್ ಸಮಾರಂಭದಲ್ಲಿ ಪಾಲ್ಗೊಳ್ಳುವುದನ್ನು ವಿರೋಧಿಸಿದ್ದ ಅವರ ಪುತ್ರಿ, ಕಾಂಗ್ರೆಸ್ ನಾಯಕಿ ಶರ್ಮಿಷ್ಠಾ ಮುಖರ್ಜಿ ಫೊಟೋವನ್ನು ಟ್ವೀಟ್ ಮಾಡಿಇದನ್ನು ನೋಡಿ. ನಾನು ಏನು ಭೀತಿ ಪಟ್ಟಿದ್ದೆನೋ ಮತ್ತು ತಂದೆಯವರಿಗೆ ಎಚ್ಚರಿಕೆ ನೀಡಿದ್ದೆನೋ ಅದೇ ಆಗಿದೆ. ಕೆಲವು ಗಂಟೆಗಳು ಕೂಡಾ ಕಳೆದಿಲ್ಲ, ಆದರೆ ಬಿಜೆಪಿ/ ಆರೆಸ್ಸೆಸ್ ಕೊಳಕು ಉಪಾಯಗಳ ಇಲಾಖೆಯು ಪೂರ್ಣ ಪ್ರಮಾಣದಲ್ಲಿ ತನ್ನ ಕಾರ್ ಆರಂಭಿಸಿದೆ!’ ಎಂದು ಬರೆದಿದ್ದರು.

2018: ಬೆಂಗಳೂರು:  ಭಿನ್ನಮತದ ಅಲೆಗಳ ನಡುವೆಯೇ  ಜನತಾದಳ (ಎಸ್) – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವರ ಖಾತೆ ಹಂಚಿಕೆಯಾಗಿ,. ಸಚಿವರ ಖಾತೆಗಳ ಪಟ್ಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರ ಸಮ್ಮತಿಯ ಮುದ್ರೆ ಬಿದ್ದಿತು. ಭಾರಿ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ಇಂಧನ ಖಾತೆಯನ್ನು ಸ್ವತಃ ಕುಮಾರಸ್ವಾಮಿ ಅವರೇ ಉಳಿಸಿಕೊಂಡರು.   ಖಾತೆಗಳ ವಿವರ ಹೀಗಿದೆ: ಎಚ್ಡಿ ಕುಮಾರಸ್ವಾಮಿ (ಮುಖ್ಯಮಂತ್ರಿ) - ಹಣಕಾಸು, ವಾರ್ತಾ ಮತ್ತು ಸಂಪರ್ಕ, ಇಂಧನ, ಅಬಕಾರಿ, ಗುಪ್ತಚರ, ಜವಳಿ, ಯೋಜನಾ ಮತ್ತು ಸಾಂಖ್ಯಿಕ . ಡಾ.ಜಿ. ಪರಮೇಶ್ವರ್‌ (ಉಪ ಮುಖ್ಯಮಂತ್ರಿ) - ಗೃಹ, ಬೆಂಗಳೂರು ಅಭಿವೃದ್ಧಿ, ಯುವಜನ, ಕ್ರೀಡೆ. ಕಾಂಗ್ರೆಸ್‌ ಸಚಿವರು:  ಆರ್.ವಿ. ದೇಶಪಾಂಡೆ - ಕಂದಾಯ, ಕೌಶಲ್ಯ ಅಭಿವೃದ್ಧಿ.  ಡಿ.ಕೆ. ಶಿವಕುಮಾರ್ - ಜಲಸಂಪನ್ಮೂಲ/ ವೈದ್ಯಕೀಯ ಶಿಕ್ಷಣ . ಕೆ.ಜೆ. ಜಾರ್ಜ್ - ಬೃಹತ್ ಕೈಗಾರಿಕೆ, ಐಟಿ-ಬಿಟಿ.  ಕೃಷ್ಣ ಬೈರೇಗೌಡ - ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್‌, ಕಾನೂನುಶಿವಶಂಕರ ರೆಡ್ಡಿ - ಕೃಷಿ . ರಮೇಶ್ ಜಾರಕಿಹೊಳಿ - ಪೌರಾಡಳಿತ, ನಗರ, ಸ್ಥಳೀಯ ಸಂಸ್ಥೆ, ಬಂದರು, ಒಳನಾಡು ಸಾರಿಗೆ.  ಪ್ರಿಯಾಂಕ್ ಖರ್ಗೆ - ಸಮಾಜ ಕಲ್ಯಾಣಯು.ಟಿ. ಖಾದರ್ - ನಗರಾಭಿವೃದ್ಧಿ (ಬೆಂಗಳೂರು, ಬಿಪಿಎಂಪಿ ಹೊರತುಪಡಿಸಿ) ವಸತಿ , ಜಮೀರ್ ಅಹ್ಮದ್ - ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್‌.  ಶಿವಾನಂದ ಪಾಟೀಲ್ - ಆರೋಗ್ಯ . ವೆಂಕಟರಮಣಪ್ಪಕಾರ್ಮಿಕ.  ರಾಜಶೇಖರ್ ಪಾಟೀಲ್ - ಗಣಿ ಮತ್ತು ಭೂ ವಿಜ್ಞಾನ, ಮುಜರಾಯಿ.  ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ.  ಶಂಕರ್ - ಅರಣ್ಯ, ಪರಿಸರ ವಿಜ್ಞಾನ . ಜಯಮಾಲಾ - ಮಹಿಳಾ ಮತ್ತು ಮಕ್ಕಳ ಕಲ್ಯಾಣಜೆಡಿಎಸ್ಸಚಿವರು:  ಎಚ್.ಡಿ.ರೇವಣ್ಣ - ಲೋಕೋಪಯೋಗಿ. ಬಂಡೆಪ್ಪ ಕಾಶೆಂಪುರಸಹಕಾರ. ಜಿ.ಟಿ. ದೇವೇಗೌಡ - ಉನ್ನತ ಶಿಕ್ಷಣ.  ಮನಗೂಳಿ - ತೋಟಗಾರಿಕೆಗುಬ್ಬಿ ಶ್ರೀನಿವಾಸ್ - ಸಣ್ಣ ಕೈಗಾರಿಕೆ.  ವೆಂಕಟರಾವ್ ನಾಡಗೌಡ - ಪಶು ಸಂಗೋಪನಾ.  ಸಿ.ಎಸ್.ಪುಟ್ಟರಾಜು - ಸಣ್ಣ ನೀರಾವರಿ.  ಸಾ.ರಾ.ಮಹೇಶ್ಪ್ರವಾಸೋದ್ಯಮ. ಎನ್.ಮಹೇಶ್ - ಪ್ರಾಥಮಿಕ, ಪ್ರೌಢ ಶಿಕ್ಷಣ. ಡಿ.ಸಿ ತಮ್ಮಣ್ಣಸಾರಿಗೆ.


2017: ನವದೆಹಲಿ: ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗೆ ನೆರವು ನೀಡಲು
ಪ್ರಯತ್ನಿಸುತ್ತಿರುವ ತಮ್ಮ ಹಾಗೂ ಸಚಿವಾಲಯದ ಕಾಲೆಳೆಯಲು ಯತ್ನಿಸಿದ ಟ್ವಿಟರ್ಬಳಕೆದಾರರೊಬ್ಬರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ಅವರು ಜಾಣ್ಮೆಯಿಂದ ಪ್ರತಿಕ್ರಿಯಿಸಿ ಟ್ವಿಟರಿಗರ ಮೆಚ್ಚುಗೆಗೆ ಪಾತ್ರರಾದರು. ಕರಣ್ಸೈನಿ ಎಂಬವರು ಸುಷ್ಮಾ ಅವರನ್ನು ಉದ್ದೇಶಿಸಿ, ‘ಸುಷ್ಮಾ ಸ್ವರಾಜ್ಅವರೇ, ನಾನು ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಮಂಗಳಯಾನದ (987 ದಿನಗಳ ಹಿಂದೆ) ಮೂಲಕ ಕಳುಹಿಸಿದ ಆಹಾರ ಖಾಲಿಯಾಗಿದೆ. ಮಂಗಳಯಾನ–2 ಅನ್ನು ಯಾವಾಗ ಕಳುಹಿಸುತ್ತೀರಿ?’ ಎಂದು ಟ್ವೀಟ್ಮಾಡಿದ್ದರು. ಸಂದೇಶಕ್ಕೆ ಇಸ್ರೊದ ಹೆಸರನ್ನೂ ಜೋಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವೆ, ‘ನೀವು ಮಂಗಳಗ್ರಹದಲ್ಲಿ ತೊಂದರೆಗೆ ಸಿಲುಕಿದರೂ, ನಿಮಗೆ ನೆರವಾಗುವುದಕ್ಕೆ ಭಾರತೀಯ ರಾಯಭಾರ ಕಚೇರಿ ಅಲ್ಲಿ ಇದೆಎಂದು ಟ್ವೀಟ್ಮಾಡಿದ್ದರು. ಸೈನಿ ಅವರು ತಮ್ಮ ಟ್ವೀಟ್ಗೆ ಇತರ ಬಳಕೆದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ,  ಕ್ಷಮೆ ಕೋರಿದರು.  ‘ಸುಷ್ಮಾ ಸ್ವರಾಜ್ಮತ್ತು ಅವರ ತಂಡದ ಬಗ್ಗೆ ನಮಗೆಲ್ಲರಿಗೂ ಗೌರವವಿದೆ. ನಾನು ತಮಾಷೆ ಮಾಡಲು ಯತ್ನಿಸಿದ್ದೆಎಂದು ಅವರು ನಂತರ ಸ್ಪಷ್ಟನೆ ನೀಡಿದರು. ಸುಷ್ಮಾ ಸ್ವರಾಜ್ಅವರು ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದ ಟ್ವಿಟರಿಗರು, ಕರಣ್ಸೈನಿ ಅವರಿಗೆ ನೀಡಿರುವ ಪ್ರತಿಕ್ರಿಯೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಸುಷ್ಮಾ ಸ್ವರಾಜ್ ಅವರ ಪ್ರತಿಕ್ರಿಯೆ ವೈರಲ್ ಆಗಿ,, 2,200 ಬಾರಿ ರಿಟ್ವೀಟ್ ಆಯಿತು. ಪೋಸ್ಟ್ಮಾಡಿದ ಒಂದು ಗಂಟೆಯ ಒಳಗೆ 4,500 ಜನ ಲೈಕ್ ಮಾಡಿದರು. ವಿದೇಶಾಂಗ ಸಚಿವೆಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸುಷ್ಮಾ ಸ್ವರಾಜ್ ಅವರನ್ನು ಅಣಕಿಸಿದ್ದಕ್ಕೆ ಬಹಳಷ್ಟು ಜನ ಸೈನಿ ಅವರನ್ನು ತರಾಟೆಗೆ ತೆಗೆದುಕೊಂಡರು.
2017: ತಿರುವನಂತಪುರ: ಮಾರುಕಟ್ಟೆಯಿಂದ ಕಸಾಯಿಖಾನೆಗೆ  ಜಾನುವಾರು ಮಾರಾಟ ಮತ್ತು
ಖರೀದಿಗೆ ನಿರ್ಬಂಧ ಹೇರಿ ಕೇಂದ್ರ ಪರಿಸರ ಸಚಿವಾಲಯ ಮೇ 23ರಂದು ಹೊರಡಿಸಿದ ಅಧಿಸೂಚನೆಯನ್ನು ವಾಪಸ್ಪಡೆಯಬೇಕು ಎಂದು ಆಗ್ರಹಿಸಿ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ಅವರು ಮಂಡಿಸಿದ ನಿರ್ಣಯವನ್ನು ಸಿಪಿಎಂ ನೇತೃತ್ವದ ಆಡಳಿತಾರೂಢ ಎಡರಂಗ ಮತ್ತು ಕಾಂಗ್ರೆಸ್ನೇತೃತ್ವದ ವಿರೋಧ ಪಕ್ಷಗಳು ಬೆಂಬಲಿಸಿದವುಬಿಜೆಪಿಯ ಏಕೈಕ ಸದಸ್ಯ . ರಾಜಗೋಪಾಲ್ಅವರು ಮಾತ್ರ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿದರು. ಕೇಂದ್ರ ಸರ್ಕಾರದಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ನಿಯಮಗಳು–2017’ ಅಧಿಸೂಚನೆಯು ರಾಜ್ಯಗಳು, ಕೃಷಿ ಆರ್ಥಿಕತೆ, ಆಹಾರ ಭದ್ರತೆ ಮತ್ತು ಜಾನುವಾರುಗಳ ಮಾರಾಟದ ಮೇಲೆ ಬೀರುವ ನಕಾರಾತ್ಮಕ ಪರಿಣಾಮಗಳನ್ನು ನಿರ್ಣಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಕಾನೂನು ಮತ್ತು ನೀತಿಗಳನ್ನು ರೂಪಿಸುವ ರಾಜ್ಯಗಳ ಹಕ್ಕುಗಳನ್ನು ಕೇಂದ್ರ ಸರ್ಕಾರ ಗೌರವಿಸಬೇಕುಎಂದು ನಿರ್ಣಯದಲ್ಲಿ ಹೇಳಲಾಯಿತು.  ಗೋವು ಮತ್ತು ಎತ್ತುಗಳು ಪವಿತ್ರ ಎಂಬ ಸಿದ್ಧಾಂತವನ್ನು ಜನರ ಮೇಲೆ ಹೇರಲಾಗುತ್ತಿದೆ. ಸಿದ್ಧಾಂತವು ಡಾರ್ವಿನ್ಅವರ ವಿಕಾಸವಾದಕ್ಕೂ ಸವಾಲು ಎಸೆದಿದೆಎಂದು ಸಿಪಿಎಂನ ಹಿರಿಯ ಮುಖಂಡ ವಿ.ಎಸ್‌. ಅಚ್ಯುತಾನಂದನ್ಹೇಳಿದರು. ನಿರ್ಣಯವನ್ನು ವಿರೋಧಿಸಿದ ಬಿಜೆಪಿ ಶಾಸಕ . ರಾಜಗೋಪಾಲ್‌, ವಿಚಾರದಲ್ಲಿ ಪಕ್ಷದ ನಿಲುವನ್ನು ಬಲವಾಗಿ ಸಮರ್ಥಿಸಿದರು.  ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಕೇಂದ್ರವನ್ನು ಗುರಿಯಾಗಿಸಿಕೊಂಡಿವೆ. ಗಂಭೀರವಲ್ಲದ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಅವರು ದೂರಿದರುಇದಕ್ಕೆ ಮುನ್ನ ಬೆಳಗ್ಗೆ ಕೇರಳದ ಶಾಸಕರಿಗೆ ವಿಧಾನಸಭೆಯ ಕ್ಯಾಂಟೀನ್ನಲ್ಲಿ ಅಚ್ಚರಿ ಕಾದಿತ್ತು. ಉಪಾಹಾರ ಪಟ್ಟಿಯಲ್ಲಿ ದನದ ಮಾಂಸ ಫ್ರೈ ಸೇರಿಕೊಂಡಿತ್ತು! ಕೆಲವು ಶಾಸಕರು ಅದನ್ನು ತಿಂದು  ಕೇಂದ್ರ ಸರ್ಕಾರದ ಆದೇಶದ ವಿರುದ್ಧ  ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡರು.
2017:  ಒಂಟಾರಿಯೊ: ಕೆಂಪು ಈರುಳ್ಳಿಯ ಸೇವನೆಯು ಕ್ಯಾನ್ಸರ್ತಡೆಗಟ್ಟಲು ನೆರವಾಗಲಿದೆ
ಎಂಬುದು ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದರು. ಕೆಂಪು ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳು ಟ್ಯೂಮರ್ಅನ್ನು ನಾಶಪಡಿಸುವಂಥ ಸಾಮರ್ಥ್ಯ ಹೊಂದಿವೆ ಎಂದು ಕೆನಡಾದ ಗುಲೆಫ್ ವಿಶ್ವವಿದ್ಯಾಲಯದ ಸಂಶೋಧಕ ಅಬ್ದುಲ್ಮೊನೆಮ್ ಮುರಯ್ಯನ್ ತಿಳಿಸಿದರು. ಕೆಂಪು ಈರುಳ್ಳಿ ಮಾತ್ರವಲ್ಲದೆ ಇತರ ತಳಿಯ ಈರುಳ್ಳಿಯಲ್ಲಿಯೂ ಕ್ಯಾನ್ಸರ್ಕೋಶಗಳನ್ನು ನಾಶಪಡಿಸುವ ಶಕ್ತಿ ಇದೆ ಎಂದು ಅವರು ತಿಳಿಸಿದರು. ದೊಡ್ಡ ಕರುಳಿನ ಕ್ಯಾನ್ಸರ್ಕೋಶಗಳನ್ನು ಬಳಸಿಕೊಂಡು ಅಧ್ಯಯನ ನಡೆಸಲಾಗಿತ್ತು. ವಿವಿಧ ತಳಿಯ ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳನ್ನು ದೊಡ್ಡ ಕರುಳಿನ ಕ್ಯಾನ್ಸರ್ಕೋಶಗಳ ಜತೆ ನೇರ ಸಂಪರ್ಕಕ್ಕೆ ಬರುವಂತೆ ಇರಿಸಿ ಅಧ್ಯಯನ ನಡೆಸಲಾಗಿತ್ತು. ವೇಳೆ, ಕೆಂಪು ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳು ಕ್ಯಾನ್ಸರ್ಕೋಶಗಳನ್ನು ನಾಶಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು ಕಂಡುಬಂದಿತ್ತು. ಹೃದ್ರೋಗ ತಡೆ, ಕೊಬ್ಬು ಕರಗಿಸುವಿಕೆ ಮತ್ತಿತರ ಅನೇಕ ವಿಷಯಗಳಿಗೆ ಈರುಳ್ಳಿ ಸೇವನೆ ನೆರವಾಗುವುದು ಹಿಂದಿನ ಸಂಶೋಧನೆಗಳಲ್ಲೇ ಬೆಳಕಿಗೆ ಬಂದಿತ್ತು.
2016: ವಾಷಿಂಗ್ಟನ್
: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ ಸಿ ಯಲ್ಲಿ ಉಪಾಧ್ಯಕ್ಷ ಜೋಯಿ ಬೈಡನ್ ಭೇ
ಟಿ ಮಾಡಿದ ಬಳಿಕ ಅಮೆರಿಕ ಕಾಂಗ್ರೆಸ್ ಸದಸ್ಯರನ್ನುದ್ದೇಶಿಸಿ ಭಾರತದ ಪ್ರಧಾನಿ ಮೋದಿ
ಮಾತನಾಡಿದರುಜಂಟಿ ಸದನ ಉದ್ದೇಶಿಸಿ ಮಾತನಾಡುವುದು ಒಂದು ಸೌಭಾಗ್ಯ ಎನ್ನುತ್ತಾಅಮೆರಿಕ ಸಂವಿಧಾನ ದೇವಾಲಯ ಜಗತ್ತಿನ ಇನ್ನಿತರ ಸಂವಿಧಾನಗಳಿಗೆ ಮಾದರಿಯಾಗಿದೆಅಮೆರಿಕ ಜತೆ ಭಾರತದ ಸಂವಿಧಾನದ ಜವಾಬ್ದಾರಿ ಹೊಂದಿರುವ ನಾನು ಜಗತ್ತಿನ ಹಿರಿಯ ನಾಯಕರೊಂದಿಗೆ ನಡೆಸುತ್ತಿರುವ ಸಭೆ ಖುಷಿ ತಂದಿದೆಭಾರತ ಶೂರರ ನಾಡು ಮನುಕುಲದ ರಕ್ಷಣೆಗೆ ಯಾವತ್ತೂ ಬದ್ದವಾಗಿದೆ ಎಂದು ಹೇಳಿದರು. ಭಾರತ ಆರ್ಥಿಕ ಅಭಿವೃದ್ದಿಗೆ ಹೊಸ ರೂಪಗಳನ್ನು ಕೊಟ್ಟಿದೆಭಾರತಕ್ಕೆ ಪ್ರಜಾಪ್ರಭುತ್ವವೇ ಮೇಲುಭಾರತ-ಅಮೆರಿಕ ಮೈತ್ರಿಯು ನೈಸರ್ಗಿಕವಾದದ್ದು ಎಂದಿದ್ದ ಮಾಜಿ ಪ್ರಧಾನಿ ವಾಜಪೇಯಿಯವರ ಮಾತು ನೆನೆಸುತ್ತ ಜಗತ್ತಿನಿಂದ ಭಯೋತ್ಪಾದನೆ ಕಿತ್ತೆಸೆಯಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ನುಡಿದರು. ಅಂದಾಜಿನ ಪ್ರಕಾರ ಭಾರತದ ಕಲೆ ಯೋಗವನ್ನು ಅಮೆರಿಕದಲ್ಲಿ 30 ಮಿಲಿಯನ್ ಜನ ಅನುಸರಿಸುತ್ತಿದ್ದಾರೆ. ಆದರೆ ಭಾರತಕ್ಕೆ ಯೋಗದ ಮೇಲೆ ಬೌದ್ದಿಕ ಹಕ್ಕು ದೊರೆತಿಲ್ಲಭಾರತ-ಅಮೆರಿಕ ರಕ್ಷಣಾ ವ್ಯವಹಾರ ಹಿಂದೆಂದಿಗಿಂತಲೂ ಅಂದರೆ 10 ಬಿಲಿಯನ್ ಡಾಲರ್ಗಳಷ್ಟು ಹೆಚ್ಚಿದೆ ಹಿಂದೆ ವಿವೇಕಾನಂದರು ಚಿಕ್ಯಾಗೋದಲ್ಲಿ ಭಾಷಣ ಮಾಡಿದ್ದರುಅಮೆರಿಕದಲ್ಲಿರುವ ಹೆಚ್ಚಿನ ತಂತ್ರಜ್ಞರು ಭಾರತೀಯರೆಶೈಕ್ಷಣಿಕವಿಜ್ಞಾನಅರ್ಥಶಾಸ್ತ್ರವೈದ್ಯ ಹಾಗೂ ಹನೀ ಬಿ ಸ್ಪೆಲ್ಲಿಂಗ್ ವಿಭಾಗದಲ್ಲಿಯೂ ಭಾರತೀಯರೆ ಮುಂದಿದ್ದಾರೆಮಾರ್ಟಿನ್ ಲೂಥರ್ ಗಾಂಧೀಜಿಯವರಿಂದ ಪ್ರಭಾವಿತಗೊಂಡಿದ್ದರು ಎಂದ ಮೋದಿ ಜಾಗತಿಕವಾಗಿ ಭಾರತದ ಬಲ ಜಗತ್ತಿಗೆ ತಿಳಿಯುತ್ತಿದೆ ಎಂದು ವಿವರಿಸಿದರು. ತಮ್ಮ ಭಾಷಣದ ನಂತರ ಮೋದಿ ಯುಎಸ್ ಕಾಂಗ್ರೆಸ್ ಸದಸ್ಯರೊಂದಿಗೆ ಔಪಚಾರಿಕ ಮಾತುಕತೆ ನಡೆಸಿದರುಅಮೆರಿಕದ ಬಹುತೇಕ ಸಂಸದರು ಮೋದಿ ಭಾಷಣವನ್ನು ಮೆಚ್ಚಿಕೊಂಡರು.

2016: ಲಂಡನ್: ರಷ್ಯಾದ ಖ್ಯಾತ ಟೆನಿಸ್ ತಾರೆ ಮರಿಯಾ ಶರಪೋವಾ ಅವರಿಗೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ಸ್ವತಂತ್ರ ಸಮಿತಿ ಈದಿನ ಎರಡು ವರ್ಷಗಳ ನಿಷೇಧ ಶಿಕ್ಷೆ ಪ್ರಕಟಿಸಿತು. ನಿಷೇಧಿತ ಮೆಲ್ಡೋನಿಯಂ ಸೇವಿಸದ ಹಿನ್ನೆಲೆಯಲ್ಲಿ ಟೆನಿಸ್ ಫೆಡರೇಷನ್  ಮಹತ್ವದ ತೀರ್ಪನ್ನು ನೀಡಿದ್ದುಮರಿಯಾ 2018 ಫ್ರೆಂಚ್ ಓಪನ್ವರೆಗೆ ಯಾವುದೇ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಹಾಗಿಲ್ಲಅಷ್ಟೇ ಅಲ್ಲ  ವರ್ಷ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸಹ ಪಾಲ್ಗೊಳ್ಳುವ ಹಾಗಿಲ್ಲಇದರಿಂದಾಗಿ ಐದು ಗ್ರ್ಯಾಂಡ್ ಸ್ಲ್ಯಾಮ್ ವಿಜೇತೆಗೆ ಭಾರಿ ಹಿನ್ನಡೆಯಾದಂತಾಯಿತು. ಈ ತೀರ್ಪಿನಿಂದ ಅಸಮಧಾನಗೊಂಡ ಮರಿಯಾಮಧ್ಯಂತರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದರು. ಕಳೆದ ಮಾರ್ಚ್ನಲ್ಲಿ ನಿಷೇಧಿತ ಮೆಲ್ಡೋನಿಯಂ ಸೇವಿಸಿದ ಆರೋಪದ ಮೇಲೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ ಮರಿಯಾರನ್ನು ಅಮಾನತ್ತುಗೊಳಿಸಿತ್ತು.

2016: ಪುಣೆ: ಆರು ವರ್ಷದ ಪುಟ್ಟ ಬಾಲಕಿ ಹಲವು ದಿನಗಳಿಂದ ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದಳುಚಿಕಿತ್ಸೆ ಪಡೆಯಲು ಹಣವಿರಲಿಲ್ಲಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಳು. ಬಾಲಕಿಯ ನೋವಿಗೆ ಸ್ಪಂದಿಸಿದ ಪ್ರಧಾನಿ ಆರ್ಥಿಕ ಸಹಾಯ ಮಾಡಿದ್ದುಚಿಕಿತ್ಸೆ ಫಲಪ್ರದಗೊಂಡ ವರದಿಗಳು ಈದಿನ ಬಂದವು.  ವೈಶಾಲಿ ಯಾದವ್ ಎಂಬ ಬಾಲಕಿಯ ಹೃದಯದಲ್ಲಿ ರಂಧ್ರವಾಗಿತ್ತುಇದರಿಂದಾಗಿ ಎರಡನೇ ತರಗತಿ ಓದುತ್ತಿರುವ  ಪುಟ್ಟ ಬಾಲಕಿ ಅಪಾರವಾದ ನೋವನ್ನು ಅನುಭವಿಸುತ್ತಿದ್ದಳುತಂದೆ ಅರೆಕಾಲಿಕ ವರ್ಣ ಚಿತ್ರಕಾರರಾಗಿದ್ದರಿಂದ ಕುಟುಂಬದ ಆದಾಯ ದಿನ ನಿತ್ಯದ ಖರ್ಚಿಗೆ ಸಾಕಾಗುತ್ತಿತ್ತುವೈಶಾಲಿಯ ಹೃದಯ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಬೇಕಾದ ಹಣ ಅವರ ಬಳಿ ಇರಲಿಲ್ಲಮಾತ್ರೆಗಳಿಗೆ ವೈಶಾಲಿ ಬಳಿಯಿರುವ ಆಟಿಕೆ ಹಾಗೂ ಸೈಕಲ್ ಮಾರಿ ಹಣ ಹೊಂದಿಸಿದ್ದರುಕುಟುಂಬದ ಪರಿಸ್ಥಿತಿ ಅರಿತ ಬಾಲಕಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಳು. ಅದರಲ್ಲಿ ತನ್ನ ರೋಗದ ತೀವ್ರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಳು. ಇದಕ್ಕೆ ತಗಲುವ ಖರ್ಚು ಎಷ್ಟು ಎನ್ನುವುದನ್ನು ನಮೂದಿಸಿದ್ದಳು.  ಪತ್ರ ಓದಿದ ಪ್ರಧಾನಿ ಅವರು ಬಾಲಕಿಯ ನೆರವಿಗೆ ಧಾವಿಸುವಂತೆ ಪುಣೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು.  ಜಿಲ್ಲಾಡಳಿತ ವೈಶಾಲಿಯ ವಿಳಾಸ ಪತ್ತೆ ಮಾಡಿ ರೂಬೀ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ಕೊಡಿಸಿದರು.  ಇದರಿಂದಾಗಿ ವೈಶಾಲಿಯ ಹೃದಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿತು..

2016: ನ್ಯೂಯಾರ್ಕ್ತಾಯಿಯ ಗರ್ಭದಲ್ಲಿ ಗರ್ಭಾವಸ್ಥೆಯ ಅವಧಿಗಿಂತ ಒಂದು ವಾರ ಹೆಚ್ಚು ಉಳಿದುಕೊಳ್ಳುವ ಮಕ್ಕಳು ಹೆಚ್ಚು ಮಾನಸಿಕ ಸಾಮರ್ಥ್ಯ ವನ್ನು ಹೊಂದುತ್ತಾರೆಅದರೆ ಅಂತಹ ಮಕ್ಕಳು ಸ್ವಲ್ಪ ದೈಹಿಕ ನ್ಯೂನತೆಗೆ ಒಳಗಾಗುವ ಅಪಾಯವೂ ಇದೆ ಎಂದು ಅಧ್ಯಯನವೊಂದು ತಿಳಿಸಿತು. 40 ವಾರಗಳ ಬದಲಿಗೆ ಒಂದು ವಾರ ತಡವಾಗಿ ಅಂದರೆ 41 ವಾರಗಳ ಗರ್ಭಾವಸ್ಥೆಯ ಬಳಿಕ ಜನಿಸುವ ಮಕ್ಕಳನ್ನು ‘ವರದಾನ’ ಎಂಬುದಾಗಿ ಭಾವಿಸಬಹುದುಏಕೆಂದರೆ ಅವರು 40 ವಾರಗಳ ಮಾಮೂಲಿ ಗರ್ಭಾವಸ್ಥೆಯಲ್ಲಿ ಜನಿಸುವ ಮಕ್ಕಳಿಗಿಂತ ಮಾನಸಿಕವಾಗಿ ಹೆಚ್ಚು ಸಾಮರ್ಥ್ಯ ವಂತರಾಗುತ್ತಾರೆ ಎಂದು ಅಧ್ಯಯನವೊಂದು ಬಹಿರಂಗ ಪಡಿಸಿತು. ಏನಿದ್ದರೂ ವಾರ ತಡವಾಗಿ ಜನಿಸುವ ಇಂತಹ ಮಕ್ಕಳಿಗೆ ದೈಹಿಕ ನ್ಯೂನತೆಯ ಅಪಾಯಗಳ ಸಾಧ್ಯತೆಯೂ ಸಾಮಾನ್ಯವಾಗಿ ನಿಗದಿತ ಗರ್ಭಾವಸ್ಥೆಯಲ್ಲಿ ಜನಿಸುವ ಮಕ್ಕಳಿಗಿಂತ ಹೆಚ್ಚು ಎಂದು ಅಧ್ಯಯನ ಹೇಳಿತು. 40 ವಾರಗಳ ಗರ್ಭಾವಸ್ಥೆಯ ಅವಧಿ ಹುಟ್ಟುವ ಮಕ್ಕಳ ಪಾಲಿಗೆ ಅತ್ಯಂತ ಸುರಕ್ಷಿತ ಅವಧಿಆದರೆ 41 ವಾರಗಳ ಗರ್ಭಾವಸ್ಥೆಯ ಬಳಿಕ ಜನಿಸುವ ಮಕ್ಕಳು ಶಾಲೆಯಲ್ಲಿ ಹೆಚ್ಚು ಚುರುಕಾಗಿ ಇರಬಲ್ಲರು ಎಂದು ಅಮೆರಿಕದ ಯುನಿವರ್ಸಿಟಿ ಆಫ್ ಫ್ಲಾರಿಡಾ ಕಾಲೇಜ್ ಆಫ್ ಮೆಡಿಸಿನ್ ಜೆಫ್ರಿ ರೋತ್ ಹೇಳಿದರುಜಾಮಾ ಪೇಡಿಯಾಟ್ರಿಕ್ಸ್ ನಿಯತಕಾಲಿಕದಲ್ಲಿ ಅಧ್ಯಯನ ವರದಿ ಪ್ರಕಟಗೊಂಡಿತು.

2016: ಬ್ಯಾಂಕಾಕ್: ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ ಥಾಯ್ಲೆಂಡ್ ಸಾಧನೆ ಮಾಡಿದ ಏಷಿಯಾದ ಪ್ರಥಮ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತು. ರೋಗದ ವಿರುದ್ಧ ಸಮರ ಸಾರುವಲ್ಲಿ ಮಾಡಿದ ಪ್ರಯತ್ನಕ್ಕೆ ಉತ್ತಮ ಫಲಿತಾಂಶ ಲಭ್ಯವಾಗಿದೆಇದರೊಂದಿಗೆ ಥಾಯ್ಲೆಂಡಿನ ಆರೋಗ್ಯ ಸಿಬ್ಬಂದಿ ಹಾಗೂ ರೋಗಿಗಳು ರೋಗದ ವಿರುದ್ಧ್ದ ನಡೆಸುತ್ತಿರುವ ಹೋರಾಟಕ್ಕೆ ಫಲ ಸಿಕ್ಕಿದಂತಾಯಿತು.  ಮುಂಬರುವ ದಿನಗಳಲ್ಲಿ ಥಾಯ್ಲೆಂಡ್ ಏಡ್ಸ್ ಮುಕ್ತ ರಾಷ್ಟ್ರವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತು. ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಹರಡುವುದನ್ನು  ಮೊದಲು ಕ್ಯೂಬಾ ದೇಶ 2015  ಜುಲೈನಲ್ಲಿ ತಡೆಗಟ್ಟುವಲ್ಲಿ ಯಶಸ್ವಿಯಾಗಿತ್ತು.

2016: ಮುಂಬೈ: ಮಂಗಳೂರಿನ ಬೆಡಗಿಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ 41ನೇ ವಸಂತಕ್ಕೆ ಈದಿನ ಕಾಲಿಟ್ಟಿ್ಟ್ದುಪತಿ ರಾಜ್ ಕುಂದ್ರಾ ಜನತೆಗೆ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಶಿಲ್ಪಾ ತಮ್ಮ ನೆಚ್ಚಿನ ರೆಸ್ಟೋರೆಂಟ್ಗೆ ತೆರಳಿಏಕಾಂತದಲ್ಲಿ ಜನ್ಮ ದಿನ ಆಚರಿಸಿಕೊಂಡಿರುವುದು ವಿಶೇಷಅಷ್ಟೇ ಅಲ್ಲ ಪತಿಯೊಂದಿಗಿನ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರು.  ಮೂಲಕ ವಿಚ್ಛೇದನ ವಿಚಾರವಾಗಿ ಹುಟ್ಟಿಕೊಂಡ ಗುಸು ಗುಸು ಸುದ್ದಿಗೆ ತೆರೆ ಎಳೆದರು. 2009ರಲ್ಲಿ ರಾಜ್ ಕುಂದ್ರಾ ಕೈ ಹಿಡಿದ ಶಿಲ್ಪಾ ದಾಂಪತ್ಯ ಬದುಕಿಗೆ ಇದೀಗ 7ನೇ ವರ್ಷಾಚರಣೆಯಾಗಿದ್ದು, 2012ರಲ್ಲಿ ವಿಯಾನ್ ಎಂಬ ಗಂಡು ಮಗು ಜನಿಸಿದೆಹಿಂದಿಯಲ್ಲಿ ಬಾಜಿಗಾರ್ದಡ್ಕನ್ಜಂಗ್ಇಂಡಿಯನ್ದಸ್ದೋಸ್ತಾನ ಸೇರಿದಂತೆ ಹಲವು ಚಿತ್ರದಲ್ಲಿ ಶಿಲ್ಪಾ ಅಭಿನಯಿಸಿದ್ದಾರೆಕನ್ನಡದಲ್ಲಿ ಪ್ರೀತ್ಸೋದ್ ತಪ್ಪಾಆಟೋ ಶಂಕರ್ ಚಿತ್ರದಲ್ಲಿ ನಟಿಸಿದ್ದಾರೆ.

2016: ಪಟನಾ: ಬಿಹಾರದಲ್ಲಿ ಪಿಯು ಪರೀಕ್ಷೆಯಲ್ಲಿ ನಡೆದ ಅವ್ಯವಹಾರದ ಹಿನ್ನೆಲೆಯಲ್ಲಿ ಬಿಹಾರ ಪರೀಕ್ಷಾ ಮಂಡಳಿಯ ಅಧ್ಯಕ್ಷ ಪ್ರೊ.ಲಾಲ್ಕೇಶ್ವರ್ ಸಿಂಗ್ ಬುಧವಾರ ರಾಜಿನಾಮೆ ಸಲ್ಲಿಸಿದರು. ಇತ್ತೀಚೆಗಷ್ಟೇ ಬಿಹಾರ ದ್ವಿತೀಯ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಮೂಲಕ ವಿದ್ಯಾರ್ಥಿಗಳು ಅಗ್ರಸ್ಥಾನ ಪಡೆದಿದ್ದರುಅಕ್ರಮ ಪತ್ತೆಯಾದ ಹಿನ್ನಲೆಯಲ್ಲಿ ಫಲಿತಾಂಶವನ್ನು ತಡೆಹಿಡಿದು ನಂತರ ಮರುಪರೀಕ್ಷೆ ನಡೆಸಲಾಗಿತ್ತುಮರುಪರೀಕ್ಷೆಯಲ್ಲಿ ಅನುತ್ತೀರ್ಣರಾದ ವೈಶಾಲಿ ವಿ.ಆರ್ ಕಾಲೇಜಿನ ಟಾಪರ್ಗಳಾದ ಸೌರವ್ ಶ್ರೇಷ್ಠರೂಬಿ ರಾಯ್ರಾಹುಲ್ ರಾಜ್ ಹಾಗೂ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪರೀಕ್ಷಾ ಮೇಲ್ವಿಚಾರಕನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತನಿಖೆಯಲ್ಲಿ ಅಪರಾಧಗಳೇನಾದರೂ ಕಂಡುಬಂದಲ್ಲಿ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದೂ ಹೇಳಿದ್ದರು.

2016: ಮುಂಬೈ: ಬಾಲಿವುಡ್ ನಟ ಹೃತಿಕ್ ರೋಶನ್ ಬಹು ನಿರೀಕ್ಷಿತ ಚಿತ್ರವಾದ ಪ್ರಣಯಭರಿತ ಸಾಹಸ ಚಿತ್ರ ಮೊಹೆಂಜೊದಾರೊದ ಟೀಸರ್(ಫಸ್ಟ್ ಲುಕ್ಬಿಡುಗಡೆಯಾಯಿತು. ಅದರ ಪ್ರಚಾರಕ್ಕಾಗಿ ನಟ ಹೃತಿಕ್ ರೋಶನ್ ಸ್ವತಃ ದೇಶಾದ್ಯಂತ ಪ್ರಯಾಣ ಮಾಡಲಿದ್ದಾರೆಚಿತ್ರವನ್ನು ‘ಲಗಾನ್’ ಖ್ಯಾತಿಯ ಸ್ಟಾರ್ ಡೈರೆಕ್ಟರ್ ಅಶುತೋಶ್ ಗೋವಾರಿಕರ್ ನಿರ್ದೇಶನ ಮಾಡಿದ್ದಾರೆ.  ಮೊಹೆಂಜೊದಾರೊ ಭಾರತದ ನಾಗರೀಕತೆ ಉಗಮ ಎಂದು ನಂಬಲಾದ ಸಿಂಧೂ ನಾಗರೀಕತೆ ಮೇಲೆ ಚಿತ್ರಿತವಾಗಿದ್ದುಚಿತ್ರದ ಬಗ್ಗೆ ಮೆಚ್ಚುಗೆ ಮಾತನಾಡಿರುವ ನಟ ಹೃತಿಕ್ ಟ್ವಿಟರ್ನಲ್ಲಿ ಚಿತ್ರದ ಪೋಸ್ಟರ್ ಹಾಗೂ ಪ್ರೀತಿ ಮತ್ತು ಅಧಿಕಾರದ ಕುರುಹುಗಳು ಎಂದು ಹೇಳಿದರು. ಸ್ವಾತಂತ್ರ್ಯ ಪೂರ್ವ ಭಾರತವನ್ನು ಬ್ರಿಟಿಷರುಕ್ರೈಸ್ತರ, ಮೊಘಲರಮುಸ್ಲಿಮರ ಆಳ್ವಿಕೆ ಬಗ್ಗೆ ಎಲ್ಲರಿಗೂ ಗೊತ್ತಿರವ ವಿಷಯಅದರ ಮಧ್ಯೆ ಮೊಹೆಂಜೊದಾರೊ ಕಥೆ ಯಾರಿಗೂ ತಿಳಿದಿಲ್ಲಅದೇ ನಮ್ಮ ಚಿತ್ರದ ಹೈಲೈಟ್ ಎಂದಿರುವ ಹೃತಿಕ್ ಚಿತ್ರವನ್ನು ತೆರೆಗೆ ತರಲು ಬರೊಬ್ಬರಿ 3 ವರ್ಷ ಅವಧಿ ತೆಗೆದುಕೊಳ್ಳಲಾಗಿದೆಬರುವ ಅಗಸ್ಟ್ 12 ರಂದು ತೆರೆಗೆ ಬರುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿವೆ.

2016: ನವದೆಹಲಿ: ಉಡ್ತಾ ಪಂಜಾಬ್ ಚಿತ್ರದಲ್ಲಿ ಡ್ರಗ್ ಮಾಫಿಯಾ ಹಾಗೂ ಶೀರ್ಷಿಕೆಯಲ್ಲಿ ಪಂಜಾಬ್ ಹೆಸರು ನಮೂದಿಸಿರುವುದನ್ನು ವಿರೋಧಿಸಿ ಚಿತ್ರದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ನೀಡಿದ ಆದೇಶದ ವಿರುದ್ಧ ಚಿತ್ರ ತಂಡವು  ಹೈಕೋರ್ಟ್ನಲ್ಲಿ ದೂರು ದಾಖಲಿಸಿತು. ಚಿತ್ರ ಶೀರ್ಷಿಕೆಯಲ್ಲಿ ಪಂಜಾಬ್ ಎಂಬ ಹೆಸರನ್ನು ಕೈ ಬಿಡಬೇಕು, 89 ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಸೆನ್ಸಾರ್ ಮಂಡಳಿ ಸೂಚಿಸಿತ್ತುಇದರಿಂದ ಬೇಸತ್ತ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಹೈಕೋರ್ಟ್ ಮೆಟ್ಟಿಲೇರಿದರು. ಅಷ್ಟೇ ಅಲ್ಲಉದ್ದೇಶ ಪೂರ್ವಕವಾಗಿ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹಲಜ್ ನಿಹಲಾನಿ ನಮ್ಮ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರೀಯ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹಲಜ್ ನಿಹಲಾನಿಚಿತ್ರದ ಹಲವು ದೃಶ್ಯಗಳು ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆಅನುರಾಗ್ ಕಶ್ಯಪ್ ಆರೋಪದಲ್ಲಿ ಯಾವುದೇ ಹುರುಳಿಲ್ಲಆಟಿಕೆ ವಸ್ತುವನ್ನು ಕಳೆದುಕೊಂಡ ಚಿಕ್ಕ ಮಗುವೊಂದು ಅಳುವಂತೆ ಅವರು ವರ್ತಿಸುತ್ತಿದ್ದಾರೆ ಎಂದು ತಿಳಿಸಿದರು. ಉಡ್ತಾ ಪಂಜಾಬ್ ಚಿತ್ರದ ಕುರಿತು ಹುಟ್ಟಿಕೊಂಡ ವಿವಾದದ ಕುರಿತು ನಟ ಕಪಿಲ್ ಶರ್ಮಕ್ರಿಕೆಟಿಗ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿಪಂಜಾಬ್ ನೈಜ ಸಮಸ್ಯೆಯನ್ನು ಚಿತ್ರ ಬಿಂಬಿಸುತ್ತಿದೆಚಿತ್ರಕ್ಕೆ ತಡೆಯೊಡ್ಡುವುದು ಸರಿಯಲ್ಲ ಎಂದು ತಿಳಿಸಿದ್ದರು.

2016: ಜೊಹಾನ್ಸ್ಬರ್ಗ್: ಮಂಗಗಳು ಮನಸ್ಸು ಮಾಡಿದ್ರೆ ಏನೇನೆಲ್ಲಾ ಮಾಡುತ್ತವೆ ನೋಡಿಅಬ್ಬಾ…, ನಂಬಲಿಕ್ಕೆ ಕಷ್ಟಆದರೂ ಇದು ಸತ್ಯಕೀನ್ಯಾದ ಬಹುತೇಕ ಭಾಗಗಳನ್ನು ಕತ್ತಲಲ್ಲಿ ಇರುವಂತೆ ಮಾಡಿರುವ ಘಟನೆ ಹಿಂದಿನ ದಿನ ಘಟಿಸಿತು. ಜೊಹಾನ್ಸ್ ಬರ್ಗಿನ ಗಿಟಾರು ಜಲವಿದ್ಯುತ್ ಕೇಂದ್ರದಲ್ಲಿರುವ ಗ್ರಿಡ್ ಉಪಕರಣ ಕೇಬಲ್ಗಳನ್ನು ಕಡಿದು ಕತ್ತರಿಸಿದ ಪರಿಣಾಮ ಕೀನ್ಯಾದ ಹೆಚ್ಚಿನ ಭಾಗಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು ಬಗ್ಗೆ ಪ್ರತಿಕ್ರಿಯಿಸಿರುವ ನಿರ್ವಾಹಕ ಕೆನ್ಜೆನ್ಜನತೆ ಗ್ರಿಡ್ಗೆ ಕರೆ ಮಾಡಿ ವಿದ್ಯುತ್ ಇಲ್ಲ ಎಂದು ದೂರು ನೀಡಿದಾಗ ಅಧಿಕಾರಿಗಳಿಗೆ ಕಾರಣ ಹೇಳೋದೇ ಮುಜುಗರ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತುಮಂಗಗಳ ‘ಮಂಗಾಟ’ ಜಾಸ್ತಿಯಾಗಿದ್ದುಇದರಿಂದ 180 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆಕೇಬಲ್ಗಳನ್ನೆಲ್ಲ ಕಡಿದು ಹಾಕುತ್ತಿವೆಇದರಿಂದಾಗಿ ಹೆಚ್ಚೂಕಡಿಮೆ ನಾಲ್ಕು ಗಂಟೆಗಳ ಕಾಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಅವರು ಹೇಳಿದರು. ಹೀಗಾಗಿ ವಿದ್ಯುದಾಗಾರವನ್ನು ಮಂಗಗಳಿಂದ ಮುಕ್ತಗೊಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

2016: ತಿರುವನಂತಪುರಂನೈಋತ್ಯ ಮುಂಗಾರು ಕೇರಳವನ್ನು ಈದಿನ ಪ್ರವೇಶಿಸಿತು. ಕೇರಳ ಮತ್ತು ಲಕ್ಷ ದ್ವೀಪದಲ್ಲಿ ಬೆಳಗ್ಗೆ ಭಾರೀ ಮಳೆಯಾಗಿ ಇಡುಕ್ಕಿಯಲ್ಲಿ ಓರ್ವ ಸಾವನ್ನಪ್ಪಿದ  ಎಂದು ವರದಿಗಳು ಹೇಳಿದವು. ನೈಋತ್ಯ ಮುಂಗಾರು ಮಳೆ ಕೇರಳಕ್ಕೆ ಪ್ರವೇಶಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಖಚಿತಪಡಿಸಿತು. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗಲಿದ್ದುವಾಡಿಕೆಗಿಂತ  ಭಾರಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು  ಹಿಂದೆ ಹವಾಮಾನ ಇಲಾಖೆ ತಿಳಿಸಿತ್ತುಪಶ್ಚಿಮ ಮತ್ತು ಪೂರ್ವ ರಾಜಸ್ಥಾನಪಶ್ಚಿಮ ಹರಿಯಾಣ ಮತ್ತು ಗುಜರಾತ್ ಕೆಲವು ಕಡೆಗಳಲ್ಲಿ ಸದ್ಯ ಈಗಿರುವ ಹವಾಮಾನವೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಮುಖ್ಯಸ್ಥರು ತಿಳಿಸಿದರು.

2016: ಮುಂಬೈನಟ ಮನೋಜ್ ಬಾಜಪೇಯಿ ಅವರು ನಟಿಸಿರುವ ‘ಬುಧಿಯಾ ಸಿಂಗ್ಬಾರ್ನ್ ಟು ರನ್’ ಚಿತ್ರವು ಆಗಸ್ಟ್ 5ರಂದು ಬಿಡುಗಡೆಯಾಗಲಿದೆಸೌಮೇಂದ್ರ ಪಾಧಿ ಅವರು ನಿರ್ದೇಶಿಸಿರುವ ‘ಬುಧಿಯಾ ಸಿಂಗ್ಬಾರ್ನ್ ಟು ರನ್’ ಚಿತ್ರವು ಐದರ ಹರೆಯದಲ್ಲೇ ಭುವನೇಶ್ವರದಿಂದ ಪುರಿಯವರೆಗೆ ಓಡಿದ್ದು ಸೇರಿದಂತೆ 48 ಮ್ಯಾರಥಾನ್ಗಳಲ್ಲಿ ಓಡಿದ ಬುಧಿಯಾ ಸಿಂಗ್ ಜೀವನಾಧಾರಿತ ಚಿತ್ರ ಎಂದು ಹೇಳಿಕೆಯೊಂದು ಈದಿನ  ತಿಳಿಸಿತು. ವಯಾಕೊಮ್ 18 ಮೋಷನ್ ಪಿಕ್ಚರ್ಸ್ ಮತ್ತು ಕೋಡ್ ರೆಡ್ ಫಿಲ್ಮ್ ಪ್ರೊಡಕ್ಷನ್ಸ್ ಅವರು ನಿರ್ಮಿಸಿರುವ ಚಿತ್ರದಲ್ಲಿ ತಿಲೋತ್ತಮ ಶೊಮೆ ಮತ್ತು ಮಾಸ್ಟರ್ ಮಯೂರ್ ಅವರೂ ಅಭಿನಯಿಸಿದ್ದಾರೆ.

2016: ತಿರುವನಂತಪುರಂ: ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ  ಈಗ ಇನ್ನೊಂದು ಕಂಟಕ ಎದುರಾಯಿತು.ಕೇರಳದ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಕಂಪನಿಯೊಂದು ಸೋನಿಯಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿತು. ಪ್ರಾಥಮಿಕ ವರದಿಯ ಪ್ರಕಾರ ಹೀದರ್ ಕನ್ಸ್ಸ್ಟ್ರಕ್ಷನ್ ಹೆಸರಿನ ಕಂಪನಿ ಪ್ರಕರಣ ದಾಖಲಿಸಿದೆ ಎಂದು ವರದಿಯಾಯಿತು. ಕಂಪನಿಗೆ ನೀಡಬೇಕಾದ ಹಣವನ್ನು ಪಾವತಿಸಿಲ್ಲ ಎನ್ನುವ ಕಾರಣಕ್ಕಾಗಿ ಅದು ಪ್ರಕರಣ ದಾಖಲಿಸಿತು. ರಾಜೀವ್ ಗಾಂಧಿ ಇನ್ಸ್ಸ್ಟಿಟ್ಯೂಟ್ ಆಫ್ ಡೆವಲಪ್ವೆುಂಟ್ ಸ್ಟಡೀಸ್ ಕಟ್ಟಡ ನಿರ್ಮಾಣ ಮಾಡಿಸಿಕೊಂಡು ಹಣ ಪಾವತಿಸಿಲ್ಲ ಎಂದು ದೂರಿನಲ್ಲಿ ಆಪಾದಿಸಲಾಯಿತು. ಆದರೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಇದನ್ನು ತಳ್ಳಿಹಾಕಿತು. ಯಾವುದೇ ಹಣ ಬಾಕಿ ಉಳಿಸಿಕೊಳ್ಳಲಾಗಿಲ್ಲಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅದು ಹೇಳಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ಇನ್ಸ್ಸ್ಟಿಟ್ಯೂಟ್ ಆಫ್ ಡೆವಲಪ್ವೆುಂಟ್ ಸ್ಟಡೀಸ್ ಚೇರ್ಮನ್ ರಮೇಶ್ ಚೆನ್ನಿತ್ತಲ, ಮಾಜಿ ಸಿಎಂ ಓಮನ್ ಚಾಂಡಿ ಮತ್ತು ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ವಿ.ಎಂಸುಧೀರನ್ ವಿರುದ್ಧವೂ ಪ್ರಕರಣ ದಾಖಲಾಯಿತು..

2016: ಲಖನೌ: ಲಿಂಗವನ್ನು ಆಧರಿಸಿ ಗರ್ಭಪಾತ (ಸ್ತ್ರೀ ಭ್ರೂಣ ಗರ್ಭಪಾತಮಾಡುವುದರ ವಿರುದ್ಧ ಮುಸ್ಲಿಂ ಸೆಮಿನರಿ ದಾರುಲ್ ಉಲೂಮ್ ದೇವಬಂದ್ ಫತ್ವಾ ಹೊರಡಿಸಿತು. ಲಿಂಗಾಧಾರಿತ ಗರ್ಭಪಾತ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ದಾರುಲ್ ಉಲೂಮ್ ದೇವಬಂದ್ ವಕ್ತಾರರು ತಿಳಿಸಿದರು. ಲಿಂಗಾಧಾರಿತ ಗರ್ಭಪಾತದ ವಿರುದ್ಧ ಹೊರಡಿಸಲಾಗಿರುವ ಮೊತ್ತ ಮೊದಲ ಫತ್ವಾ ಇದುಜನರಿಂದ ಹಾಗೂ ಮಾಧ್ಯಮಗಳಿಂದ ಸಂಗ್ರಹಿಸಲಾದ ಲಿಂಗಾಧಾರಿತ ಗರ್ಭಪಾತದ ವರದಿಅಂಕಿ ಅಂಶಗಳನ್ನು ಪರಿಶೀಲಿಸಿದ ಬಳಿಕ ಫತ್ವಾ ಹೊರಡಿಸಲಾಯಿತು. ಸರ್ಕಾರದ ವರದಿಗಳ ಪ್ರಕಾರ ಮುಸ್ಲಿಂ ಧರ್ಮದಲ್ಲಿ 6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 2001ರಲ್ಲಿ 950ರಷ್ಟಿದ್ದ ಹೆಣ್ಣು ಮಕ್ಕಳ ಸಂಖ್ಯೆ 2011ರಲ್ಲಿ 941ಕ್ಕೆ ಕುಸಿದಿದೆ.
2016: ಮಥುರಾಮಥುರಾದ ಜವಾಹರ ಬಾಗ್ನಲ್ಲಿ ಕಳೆದ ವಾರ ಪೊಲೀಸರು ಮತ್ತು ಅತಿಕ್ರಮಣಕಾರರ ಮಧ್ಯೆ ನಡೆದ ಗುಂಡಿನ ಘರ್ಷಣೆಹಿಂಸಾಚಾರದಲ್ಲಿ ಸಹಸ್ರಾರು ಮರಗಳು ಸುಟ್ಟು ಅಗ್ನಿಗಾಹುತಿಯಾದವು. ಸಂಪೂರ್ಣ ಬೆಳೆದು ಫಲ ನೀಡುತ್ತಿದ್ದ ಸುಮಾರು 8000 ಮರಗಳ ಅಗ್ನಿಗಾಹುತಿಯಾಗಿವೆ ಇಲ್ಲವೇ ನಾಶಗೊಂಡಿವೆ ಉತ್ತರ ಪ್ರದೇಶ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಹೇಳಿದರು. ಭಾರಿ ಪ್ರಮಾಣದ ಹಸಿರು ನಾಶಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ. 260 ಎಕರೆ ಉದ್ಯಾನದ ಸ್ವಾಮ್ಯವನ್ನು ಹೊಂದಿದ ರಾಜ್ಯ ತೋಟಗಾರಿಕಾ ಇಲಾಖೆಯು ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳುವ ಭರಾಟೆಯಲ್ಲಿ ಪರಿಸರಕ್ಕೆ ಆದ ಹಾನಿಯನ್ನು ಇಲಾಖೆ ನಿರ್ಲಕ್ಷಿಸಿತು ಎಂದು ಬ್ರಜ್ ಬಚಾವೋ ಸಮಿತಿ ಸದಸ್ಯರು ಆಪಾದಿಸಿದರುಆದರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಾವು ಪೊಲೀಸರಿಗೆ ಹಲವಾರು ದೂರುಗಳನ್ನು ನೀಡಿದ್ದಲ್ಲದೆ ಹಿರಿಯ ಜಿಲ್ಲಾ ಅಧಿಕಾರಿಗಳಿಗೂ ಪದೇ ಪದೇ ಮನವಿಗಳನ್ನು ಸಲ್ಲಿಸಿದ್ದುದಾಗಿ ಪ್ರತಿಪಾದಿಸಿದರು. ನಾಶವಾಗಿರುವ ಮರಗಳು ಹಲವಾರು ವರ್ಷಗಳ ಕಠಿಣ ಶ್ರಮದ ಫಲವಾಗಿ ಸಂಪೂರ್ಣವಾಗಿ ಬೆಳೆದು ನಿಂತಿದ್ದ ಮರಗಳಾಗಿದ್ದವು ಹಸಿರನ್ನು ಮರುಸೃಷ್ಟಿ ಮಾಡಲು ಹಲವಾರು ವರ್ಷಗಳೇ ಬೇಕಾಗುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

2009:  ಲೋಕಸಭೆಯ ಉಪ ಸಭಾಧ್ಯಕ್ಷರಾಗಿ ಬಿಜೆಪಿಯ ಹಿರಿಯ ಸಂಸದ, ಜಾರ್ಖಂಡ್‌ನ ಬುಡಕಟ್ಟು
ಸಮುದಾಯದ ನಾಯಕ ಕರಿಯಾ ಮುಂಡಾ ಅವಿರೋಧವಾಗಿ ಆಯ್ಕೆಯಾದರು. ಏಳನೇ ಬಾರಿಗೆ ಸಂಸತ್ ಸದಸ್ಯರಾಗಿರುವ 72 ವರ್ಷದ ಮುಂಡಾ ಅವರ ಹೆಸರನ್ನು ಉಪ ಸಭಾಧ್ಯಕ್ಷ ಸ್ಥಾನಕ್ಕೆ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಸೂಚಿಸಿದರು. ಇದನ್ನು ರಾಜನಾಥ್ ಸಿಂಗ್ ಅನುಮೋದಿಸಿದರು. ನಂತರ ಅವರನ್ನು ಧ್ವನಿಮತದ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

2009: ಪ್ರಖ್ಯಾತ ನಾಟಕ ರಚನಾಕಾರ ಹಾಗೂ ರಂಗಭೂಮಿ ನಿರ್ದೇಶಕ ಹಬೀಬ್ ನ್ವೀರ್ (85) ಭೋಪಾಲ್‌ನಲ್ಲಿ ನಿಧನರಾದರು. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮೂರು ವಾರಗಳ ಹಿಂದೆ ಇಲ್ಲಿನ ನ್ಯಾಷನಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. 1923ರ ಸೆಪ್ಟೆಂಬರ್ 1ರಂದು ರಾಜ್‌ಪುರದಲ್ಲಿ ಜನಿಸಿದ್ದ ಹಬೀಬ್ ಮೊದಲಿಗೆ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ದೇಶದ ಪ್ರಖ್ಯಾತ ನಾಟಕ ರಚನಾಕಾರನಾಗಿ ಹಾಗೂ ರಂಗಭೂಮಿ ನಿರ್ದೇಶಕನಾಗಿ ಅಪಾರ ಖ್ಯಾತಿ, ಜನಮನ್ನಣೆ ಗಳಿಸಿದ್ದರು. ಹಬೀಬ್ ಅವರ ಆಗ್ರಾ ಬಜಾರ್, ಚರಣ್‌ದಾಸ್ ಚೋರ್ ಅತ್ಯಂತ ಜನಪ್ರಿಯ ಹಾಗೂ ಉತೃಷ್ಟ ನಾಟಕಗಳಾಗಿವೆ. ಹಲವಾರು ಸಿನಿಮಾಗಳಿಗೆ ಕಥೆ, ಸಂಭಾಷಣೆ ಬರೆದಿದ್ದ ಇವರು ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು. 1959ರಲ್ಲಿ ಇವರು ನವ್ಯ ರಂಗಭೂಮಿ ಕಂಪೆನಿ ಹುಟ್ಟುಹಾಕಿದರು. 1969ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ 1983ರಲ್ಲಿ ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದರು. 1996ರಲ್ಲಿ ಸಂಗೀತ ನಾಟಕ ಅಕಾಡೆಮಿ ಫೆಲೊಷಿಪ್ ಪಡೆದಿದ್ದ ಇವರು 2002ರಲ್ಲಿ ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿದ್ದರು. ಜನಪದೀಯ ಹಾಗೂ ಕಾವ್ಯ ಪ್ರಕಾರಗಳ ರಸಮಯ ಸಮ್ಮಿಶ್ರದೊಂದಿಗೆ ಭಾರತಿಯ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಬಹುಮುಖ ಪ್ರತಿಭೆ ಹಬೀಬ್ ಹುಟ್ಟಿದ್ದು 1923ರಲ್ಲಿ ಮಧ್ಯಪ್ರದೇಶದಲ್ಲಿ ರಾಜ್‌ಪುರದಲ್ಲಿ. ಇವರು ಚಿಕ್ಕಂದಿನಲ್ಲಿ ಕವಿತೆ ಬರೆಯಲು ಆರಂಭಿಸಿದಾಗ 'ತನ್ವೀರ್' ಎಂಬ ನಾಮಾಂಕಿತದೊಂದಿಗೆ ಬೆಳಕಿಗೆ ಬಂದರು. ಸ್ವಾತಂತ್ರ್ಯಪೂರ್ವ ಮತ್ತು ನಂತರದ ರಂಗಭೂಮಿಯನ್ನು ಅರಗಿಸಿಕೊಂಡು ಕುಡಿದ ಭಾರತದ ಹಿರಿಯ ರಂಗಕರ್ಮಿ ಅವರಾಗಿದ್ದರು. ಪದವಿ ಶಿಕ್ಷಣವನ್ನು ನಾಗಪುರದಲ್ಲಿ ಪೂರೈಸಿದ ಬಳಿಕ ಲಖನೌಗೆ ತೆರಳಿದ ಅವರು ಅಲ್ಲಿನ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ 1945ರಲ್ಲಿ ಮುಂಬೈಗೆ ಬಂದು ವೃತ್ತಿ ಜೀವನ ಆರಂಭಿಸಿದಾಗ ಮೊದಲಿಗೆ ಕೈಗೊಂಡಿದ್ದು ಬಾಂಬೆ ಆಲ್ ಇಂಡಿಯಾ ರೇಡಿಯೊದಲ್ಲಿ ನಿರ್ಮಾಪಕನ ಜವಾಬ್ದಾರಿ. ಈ ಸಮಯದಲ್ಲಿ ಹಿಂದಿ ಸಿನಿಮಾಗಳಿಗೆ ಚಿತ್ರಗೀತೆಗಳನ್ನೂ ಬರೆದರಲ್ಲದೆ ಕೆಲವು ಚಲನಚಿತ್ರಗಳಲ್ಲಿ ಅಭಿನಯಿಸಿದರು. ಇವರು ಒಟ್ಟು ಒಂಬತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1982ರಲ್ಲಿ ರಿಚರ್ಡ್ ಆಟಿನ್‌ಬರೋ ನಿರ್ದೇಶಿಸಿದ ಗಾಂಧಿ ಚಲನಚಿತ್ರದಲ್ಲೂ ಪಾತ್ರ ನಿರ್ವಹಿಸಿದ ಹೆಗ್ಗಳಿಕೆ ಇವರದ್ದು. ಮುಂಬೈನಲ್ಲಿದ್ದ ವೇಳೆ ತನ್ವೀರ್ ಅಂದಿನ ದಿನಗಳಲ್ಲಿ ಪ್ರಮುಖವಾಗಿದ್ದ 'ಪ್ರಗತಿಪರ ಬರಹಗಾರರ ಸಂಘ'ವನ್ನು ಸೇರಿದರು. ಇದು ಕ್ರಮೇಣ 'ಇಂಟೆಗ್ರಲ್ ಪಾರ್ಟ್ ಆಫ್ ಇಂಡಿಯನ್ ಪೀಪಲ್ಸ್ ಥಿಯೇಟರ್ ಸಂಘ' 'ಇಪ್ಟಾ' ಆಗಿ ಪರಿವರ್ತಿತವಾಯಿತು. ಬ್ರಿಟಿಷ್ ವಸಾಹತು ಆಡಳಿತವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಈ ಸಂಘದ ಪ್ರಮುಖ ಸದಸ್ಯರನ್ನು ಜೈಲಿಗೆ ತಳ್ಳಿದ ನಂತರ ತನ್ವೀರ್ ಅವರೇ ಇದರ ಸಾರಥ್ಯ ವಹಿಸಿದರು. 1954ರಲ್ಲಿ ದೆಹಲಿಗೆ ಬಂದು ನೆಲೆಯೂರಿದ ತನ್ವೀರ್, ಖುದ್ಸಿಯಾ ಜಿಯಾದಿಸ್ ಅವರ ಹಿಂದೂಸ್ಥಾನಿ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿದರು. ಅಂತೆಯೇ ಈ ಸಮಯದಲ್ಲಿ ಅವರು ಹಲವಾರು ಮಕ್ಕಳ ನಾಟಕಗಳನ್ನೂ ರಚಿಸಿದರು. ಈ ದಿನಗಳಲ್ಲಿ ಅವರು ತಮ್ಮ ಸಂಪರ್ಕಕ್ಕೆ ಬಂದ ನಟಿ-ನಿರ್ದೇಶಕಿ ಮೊನಿಕಾ ಮಿಶ್ರಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು. 18ನೇ ಶತಮಾನದ ಪ್ರಖ್ಯಾತ ಭಾರತೀಯ ಉರ್ದು ಕವಿ ಮಿರ್ಜಾ ಗಾಲಿಬ್‌ನ ಸಮಕಾಲೀನ ಕವಿ ನಜೀರ್ ಅಕ್ಬರ್‌ಬಾದಿ ಕುರಿತು ತನ್ವೀರ್ ನಿರ್ಮಿಸಿದ 'ಆಗ್ರಾ ಬಜಾರ್' ಭಾರಿ ಜನಮನ್ನಣೆ ಗಳಿಸಿದ ನಾಟಕ. ಭಾರತೀಯ ರಂಗಭೂಮಿ ಹಿಂದೆಂದೂ ಕಾಣದ ಹೊಸ ಸ್ಪರ್ಶವನ್ನು ಅವರು ಈ ನಾಟಕದಲ್ಲಿ ಉಣಬಡಿಸಿದರು. ಸ್ಥಳೀಯ ಜನಪದ, ಕಾವ್ಯ ಮತ್ತು ರಂಗಭೂಮಿಯ ನವೀನ ಕಲ್ಪನೆಯನ್ನು ಈ ನಾಟಕ ಮೇಳೈಸಿಕೊಂಡಿತ್ತು. 1975ರಲ್ಲಿ ಇವರು ತಮ್ಮ ಮತ್ತೊಂದು ಜನಪ್ರಿಯ ನಾಟಕ 'ಚರಣದಾಸ್ ಚೋರ್' ಅನ್ನು ನಿರ್ಮಿಸಿದರು. ಇದು 1982ರಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ತನ್ವೀರ್ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು. ಶೂದ್ರಕನ  ಸಂಸ್ಕೃತ ನಾಟಕ 'ಮೃಚ್ಛಕಟಿಕಮ್' ಆಧಾರಿತ 'ಮಿಠ್ಠಿ ಕಾ ಗಾದಿ' ನಿರ್ಮಿಸಿದರು. ಇದು ಛತ್ತೀಸ್‌ಗಢದ ನಾಟಕ ಇತಿಹಾಸದಲ್ಲೇ ಹೊಸ ಮೈಲುಗಲ್ಲಾಯಿತು. ಛತ್ತೀಸ್‌ಗಢದ ಸಾಂಪ್ರದಾಯಿಕ ಕಲೆ, ಸಂಸ್ಕೃತಿಗಳನ್ನು ಹಾಸು ಹೊಕ್ಕಾಗಿಸಿಕೊಂಡು ಇವರು ನಿರ್ಮಿಸಿ, ನಿರ್ದೇಶಿಸಿದ ಹಲವು ನಾಟಕಗಳು ನಂತರ ಇಡೀ ಭಾರತೀಯ ರಂಗಭೂಮಿಗೆ ಹೊಸದೊಂದು ದಿಕ್ಕನ್ನು ತೆರೆದವು. ಅಂತೆಯೇ ತನ್ವೀರ್ ಕೂಡಾ ಕಾಲಕ್ರಮೇಣ ಹಿಂದಿ ನಾಟಕಗಳ ರಚನೆಯತ್ತಲೇ ಹೆಚ್ಚಿನ ಗಮನ ಹರಿಸಿದರು. 1955ರಲ್ಲಿ ಇಂಗ್ಲೆಂಡಿಗೆ ತೆರಳಿದ ಇವರು ಅಲ್ಲಿನ 'ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್'ನಲ್ಲಿ (ಆರ್‌ಎಡಿಎ) ನಟನೆ ಮತ್ತು ಬ್ರಿಸ್ಟಾಲ್‌ನ ಓಲ್ಡ್ ವಿಕ್ ರಂಗಭೂಮಿ ಶಾಲೆ (1956)ಯಲ್ಲಿ ನಿರ್ದೇಶನ ಶಿಕ್ಷಣವನ್ನು ಪೂರೈಸಿದರು. ಮುಂದಿನ ಎರಡು ವರ್ಷಗಳ ಕಾಲ ಅವರು ಇಡೀ ಯೂರೋಪಿನಲ್ಲಿ ಸುತ್ತುವ ಮೂಲಕ ತಮ್ಮ ರಂಗಭೂಮಿಯ ಜ್ಞಾನವನ್ನು ವಿಸ್ತರಿಸಿಕೊಂಡರು. ಈ ಸಮಯದಲ್ಲಿ ಯೂರೋಪ್‌ನ ಖ್ಯಾತ ನಾಟಕಕಾರ ಬರ್ಟ್ರೊಲ್ಡ್ ಬ್ರೆಕ್ಟ್‌ನ ನಾಟಕಗಳು ಇವರ ಮೇಲೆ ಭಾರಿ ಪ್ರಭಾವ ಬೀರಿದವು. ಇದರಿಂದಾಗಿಯೇ ಅವರು ಭಾರತೀಯ ರಂಗಭೂಮಿಗೆ ಹೊಸ ನುಡಿಕಟ್ಟು, ಸಂಸ್ಕೃತಿ, ಸಿದ್ಧಾಂತಗಳ ಮಿಶ್ರಣದ ಹದವಾದ ಹೊಸ ಪರಂಪರೆಯನ್ನು ಪರಿಚಯಿಸುವಂತಾಯಿತು. 1958ರಲ್ಲಿ ಭಾರತಕ್ಕೆ ಮರಳಿದ ನಂತರ ಅವರು ಸಂಪೂರ್ಣ ನಿರ್ದೇಶನದತ್ತಲೇ ವಾಲಿದರು. ಬದುಕಿನುದ್ದಕ್ಕೂ ತನ್ವೀರ್ ಕಿರೀಟದಲ್ಲಿ ಸೇರಿದ ಪ್ರಶಸ್ತಿಗಳ ಗರಿಗಳಿಗೆ ಲೆಕ್ಕವಿಲ್ಲ. 1972ರಿಂದ 78ರವರೆಗೆ ರಾಜ್ಯಸಭಾ ಸದಸ್ಯರೂ ಆಗಿದ್ದ ಅವರು 1959ರಲ್ಲಿ ತಮ್ಮ ಪತ್ನಿಯೊಡಗೂಡಿ ಭೋಪಾಲ್‌ನಲ್ಲಿ ಹುಟ್ಟುಹಾಕಿದ 'ನವ್ಯ ರಂಗಭೂಮಿ' ಈ ವರ್ಷ ತನ್ನ 50 ವಸಂತಗಳನ್ನು ಪೂರೈಸಿತು.

2009: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ.ಎಸ್.ಸುಬ್ರಹ್ಮಣ್ಯ ಅವರು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿರುದ್ಧ ದಾಖಲಿಸಿದ್ದ ಮಾನಹಾನಿ ಮೊಕದ್ದಮೆಯನ್ನು ಹಿಂದಕ್ಕೆ ಪಡೆದರು. ಲೋಕಾಯುಕ್ತ ಸಂಸ್ಥೆಯ ಘನತೆ, ಸ್ಥಾನಮಾನದ ಹಿನ್ನೆಲೆಯಲ್ಲಿ ಮೊಕ್ದದಮೆ ಹಿಂದಕ್ಕೆ ಪಡೆಯಬೇಕು. ಸರ್ಕಾರದ ವಿವಿಧ ಸಂಸ್ಥೆಗಳ ನಡುವೆ ಸೌಹಾರ್ದಯುತ ಸಂಬಂಧ ಇರಬೇಕು ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆ ಸುಬ್ರಹ್ಮಣ್ಯ ಅವರಿಗೆ ಪತ್ರ ಬರೆದಿದ್ದೇನೆ' ಎಂದು ಇದಕ್ಕೂ ಮುನ್ನ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದರು. ಮಳೆ ನೀರಿನಲ್ಲಿ ಕೊಚ್ಚಿಹೋದ ನಗರದ ಲಿಂಗರಾಜಪುರ ಬಾಲಕ ಅಭಿಷೇಕನ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಲಿಲ್ಲ ಎಂದು ತಮ್ಮ ವಿರುದ್ಧ ಲೋಕಾಯುಕ್ತರು ವಿನಾಕಾರಣ ಆರೋಪ ಮಾಡಿರುವುದಾಗಿ ದೂರಿ, ಸುಬ್ರಹ್ಮಣ್ಯ ಎಸಿಎಂಎಂ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರ ವಿಚಾರಣೆಯನ್ನು ನಡೆಸಿದ್ದ ಕೋರ್ಟ್, ಮುಂದಿನ ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿತ್ತು. ಆದರೆ ವಿಚಾರಣೆಗೆ ನಿಗದಿಯಾದ ದಿನಕ್ಕಿಂತ ಒಂದು ದಿನ ಮುಂಚಿತವಾಗಿಯೇ ಕೋರ್ಟ್‌ಗೆ ಮನವಿ ಸಲ್ಲಿಸಿದ ಸುಬ್ರಹ್ಮಣ್ಯ ಪ್ರಕರಣ ಮುಂದುವರಿಸಲು ಇಷ್ಟ ಇಲ್ಲದ ಕಾರಣ, ಅದನ್ನು ಹಿಂದಕ್ಕೆ  ಪಡೆಯುವುದಾಗಿ ಮನವಿ ಸಲ್ಲಿಸಿದ್ದರು.

2009: ಈಶಾನ್ಯ ಮೆಕ್ಸಿಕೋದ ಸೊನೊರಾದ ಮಕ್ಕಳ ಕೇಂದ್ರವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 42 ಮಕ್ಕಳು ಮೃತರಾದರು.

2008:  ನಗಾರಿಯ ಸದ್ದು ಹಾಗೂ ವೇದ ಮಂತ್ರ ಘೋಷಗಳ ಮಧ್ಯೆ ಬ್ರಿಟನ್ನ ಪ್ರಪ್ರಥಮ ಹಿಂದೂ ಶಾಲೆಗೆ ಉತ್ತರ ಲಂಡನ್ನಿನ ಹ್ಯಾರೋದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.`ಕೃಷ್ಣ-ಅವಂತಿ'  ಹೆಸರಿನ ಈ ಪ್ರಾಥಮಿಕ ಶಾಲೆಯಲ್ಲಿ ಯೋಗ ಹಾಗೂ ಸಂಸ್ಕೃತ ಪಾಠ ಕಲಿಸಲಾಗುತ್ತದೆ. ಕಟ್ಟುನಿಟ್ಟಾಗಿ ಸಸ್ಯಾಹಾರಿ ನಿಯಮವನ್ನು ಜಾರಿಗೆ  ತರಲು ಇಲ್ಲಿ ತರಕಾರಿಯನ್ನೂ ಬೆಳೆಯಲಾಗುತ್ತದೆ.

2007: `ಏರಿಯಾನ್-5' ರಾಕೆಟ್ ಮೂಲಕ ಹಾರಿಬಿಡಲಾದ ಉಪಗ್ರಹ  ಅಪ್ಪಟ ದೇಶೀ ತಂತ್ರಜ್ಞಾನದ ಇನ್ಸಾಟ್ 4 ಬಿ ಉಪಗ್ರಹವನ್ನು ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹಾಸನದ ಎಂ.ಸಿ.ಎಫ್. ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ದೇಶಕ್ಕೆ ಅರ್ಪಿಸಿದರು. ಇನ್ಸಾಟ್-4 ಬಿ ಉಪಗ್ರಹವು ಒಟ್ಟು 12 ಟ್ರಾನ್ಸ್ ಪಾಂಡರ್ ಮತ್ತು 12 ಕೆಯು ಬ್ಯಾಂಡುಗಳನ್ನು ಒಳಗೊಂಡಿದೆ. ದೇಶದ ದೂರಸಂಪರ್ಕ, ಡಿಟಿಎಚ್, ಟೆಲಿ ಎಜುಕೇಷನ್, ಟೆಲಿ ಮೆಡಿಸಿನ್ ಮೊದಲಾದ 10 ಕಾರ್ಯಕ್ರಮಗಳಿಗೆ ಇದರಂದ ಪ್ರಯೋಜನವಾಗುವುದು.

2007: ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ಇಸ್ರೋ' ಹೆಸರಿನಲ್ಲಿ ಬಾಹ್ಯಾಕಾಶ ವಿಜ್ಞಾನಿ ಯು.ಆರ್. ರಾವ್ ಅವರಿಗೆ `ಜೀವಮಾನದ ಸಾಧನೆ' ಪ್ರಶಸ್ತಿಯನ್ನು ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರದಾನ ಮಾಡಿದರು.

2007: ಮನೋಹರ ಪಾರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರವನ್ನು 2005ರಲ್ಲಿ ಪದಚ್ಯುತಿಗೊಳಿಸಲು ಪ್ರಮುಖ ಪಾತ್ರ ವಹಿಸಿ ನಂತರ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದ ದಿಗಂಬರ ಕಾಮತ್ ಅವರು ಗೋವಾದ 19ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

2007: ಬಾರಾಬಂಕಿ ಜಿಲ್ಲೆಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಹೆಸರಿನಲ್ಲಿದ್ದ ಕೃಷಿ ಭೂಮಿಯನ್ನು ರದ್ದು ಪಡಿಸಿರುವ ವಿಭಾಗಾಧಿಕಾರಿ ನ್ಯಾಯಾಲಯದ ಆದೇಶಕ್ಕೆ ಅಲಹಾಬಾದ್ ಹೈಕೋರ್ಟಿನ ಲಖನೌ ಪೀಠವು ತಡೆಯಾಜ್ಞೆ ನೀಡಿತು.

2007: ಅಧಿಸೂಚಿತ ಧಾರ್ಮಿಕ ಪ್ರದೇಶದ ವ್ಯಾಪ್ತಿಯಲ್ಲಿ ಅನ್ಯಧರ್ಮದ ಪ್ರಚಾರ ನಿಷೇಧಿಸುವ ಸುಗ್ರೀವಾಜ್ಞೆಯನ್ನು ಆಂಧ್ರಪ್ರದೇಶ ಸರ್ಕಾರ ಹೊರಡಿಸಿತು. ಈ ಸುಗ್ರೀವಾಜ್ಞೆ ತಿರುಪತಿಗೂ ಅನ್ವಯಿಸುವುದು. ತಿರುಪತಿ, ತಿರುಮಲೆ ಪ್ರದೇಶದಲ್ಲಿ ಹಿಂದೂಗಳು ಹೊರತು ಪಡಿಸಿ ಬೇರೆ ಯಾವುದೇ ಧರ್ಮದವರು ಧಾರ್ಮಿಕ ಪ್ರಚಾರ ಮಾಡುವುದನ್ನು ಈ ಸುಗ್ರೀವಾಜ್ಞೆಯು ನಿಷೇಧಿಸುತ್ತದೆ. ಕ್ರೈಸ್ತರ ಮತ ಪ್ರಚಾರದ ಹಿನ್ನೆಲೆಯಲ್ಲಿ ಈ ಸುಗ್ರೀವಾಜ್ಞೆ ಭಾರಿ ಮಹತ್ವ ಪಡೆಯಿತು.

2007: ವಿಶ್ವಸಂಸ್ಥೆಯ 10 ಕೋಟಿ ಡಾಲರ್ ಮೊತ್ತದ ಗುತ್ತಿಗೆ ವ್ಯವಹಾರವನ್ನು ತಮ್ಮ ಸ್ನೇಹಿತನ ಕಂಪೆನಿಗೆ ದೊರಕಿಸಿಕೊಡಲು ಲಂಚ ಪಡೆದು ಪ್ರಭಾವ ಬೀರಿದ ಭಾರತೀಯ ಮೂಲದ ವಿಶ್ವಸಂಸ್ಥೆ ಮಾಜಿ ಅಧಿಕಾರಿ ಸಂಜಯ ಬಹೆಲ್ ಅವರಿಗೆ ಅಮೆರಿಕದ ನ್ಯಾಯಾಲಯವೊಂದು 30 ವರ್ಷಗಳ ಸೆರೆವಾಸ ವಿಧಿಸಿತು.

2007: ಇಂದೋರಿನ ಖ್ಯಾತ ಪ್ರಸೂತಿ ಹಾಗೂ ಉದರ ದರ್ಶಕ ತಜ್ಞೆ ಅರ್ಚನಾ ಬಾಸೆರ್ ಅವರು ಮಹಿಳೆಯೊಬ್ಬಳ ದೇಹದಿಂದ 10 ಕಿ.ಗ್ರಾಂ.ಗೂ ಹೆಚ್ಚು ಭಾರವಿದ್ದ ಗಡ್ಡೆಯನ್ನು ತೆಗೆದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದರು. ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕವು ಈ ಬಗ್ಗೆ ಪ್ರಮಾಣ ಪತ್ರ ನೀಡಿತು.

2006: ಸೂಪರ್ ಸಾನಿಕ್ ಯುದ್ಧ ವಿಮಾನ ಸುಖೋಯ್-30 ಎಂಕೆಐಯನ್ನು ಗಗನದಲ್ಲಿ ಹಾರಿಸುವ ಮೂಲಕ ಕೇವಲ ಹಾರುವುದಷ್ಟೇ ಅಲ್ಲ, ಪೈಲಟ್ ಆಗಿ ಅದನ್ನು ನಡೆಸಿದ ಭಾರತದ ಪ್ರಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಭಾಜನರಾದರು. ಜಲಾಂತರ್ಗಾಮಿಯಲ್ಲಿ ಪಯಣಿಸಿದ ಹಾಗೂ ಅತೀ ಎತ್ತರದಲ್ಲಿರುವ ಸಿಯಾಚಿನ್ನಿಗೆ ತೆರಳಿ ಸೈನಿಕರ ಜೊತೆಗೆ ಮಾತನಾಡಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಈಗಾಗಲೇ ಅವರಿಗೆ ಇತ್ತು. 75 ವರ್ಷ ವಯಸ್ಸಿನ  ರಾಷ್ಟ್ರಪತಿ ಕಲಾಂ ಗಂಟೆಗೆ 1500 ಕಿ.ಮೀ. ವೇಗದಲ್ಲಿ 40 ನಿಮಿಷಗಳ ಕಾಲ ಸಮರ ವಿಮಾನದ ಹಾರಾಟ ನಡೆಸಿದರು.

2006: ಇರಾಕಿನಲ್ಲಿ ಹಲವು ಆತ್ಮಹತ್ಯಾ ದಾಳಿ ನಡೆಸಿ ರಕ್ತ ಸಿಕ್ತ ಅಧ್ಯಾಯಕ್ಕೆ ಕಾರಣನಾಗಿದ್ದ ಅಲ್ ಖೈದಾ ಬೆಂಬಲಿತ ಉಗ್ರಗಾಮಿ ಅಬು ಮಸಬ್ ಅಲ್ ಜರ್ಕಾವಿಯನ್ನು ಅಮೆರಿಕ ಮತ್ತು ಇರಾಕ್ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆಗೈದವು.

2001: ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ದಾಖಲೆ ಮತಗಳ ಅಂತರದೊಂದಿಗೆ ಗೆದ್ದು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದರು.

1999: ಲಿಯಾಂಡರ್ ಪೇಸ್ ಮತ್ತು ಮಹೇಶ ಭೂಪತಿ ಅವರದ್ದು ಜಗತ್ತಿನಲ್ಲಿ ನಂಬರ್ 1 ಡಬಲ್ಸ್ ಟೀಮ್ ಎಂಬುದಾಗಿ ಎಟಿಪಿ (ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಷನಲ್ಸ್) ಪ್ರಕಟಿಸಿತು.

1968: ಕರ್ನಾಟಕ ಘರಾಣಾದ ಖ್ಯಾತ ಗಾಯಕ ಮಧುರೆ ಮಣಿ ಅಯ್ಯರ್ ನಿಧನರಾದರು.

1957: ಅಮೆರಿಕದ ಕಾರ್ಟೂನಿಸ್ಟ್ ಸ್ಕಾಟ್ ಕಾರ್ಟೂನಿಸ್ಟ್ ಸ್ಕಾಟ್ ಆಡಮ್ಸ್ ಜನ್ಮದಿನ. `ಡಿಲ್ ಬರ್ಟ್' ಎಂಬ ಕಾರ್ಟೂನ್ ಸ್ಟ್ರಿಪ್ ಮೂಲಕ ಇವರು ಖ್ಯಾತರಾಗಿದ್ದಾರೆ.

1955: ಟಿಮ್ ಬೆರ್ನರ್ಸ್ ಲೀ ಜನ್ಮದಿನ. ಇವರು ಈಗ ಡಬ್ಲ್ಯುಡಬ್ಲ್ಯುಡಬ್ಲ್ಯು ಎಂದು ಪರಿಚಿತವಾಗಿರುವ `ವರ್ಲ್ಡ್ ವೈಡ್ ವೆಬ್' ನ್ನು ವಿನ್ಯಾಸ ಮಾಡಿದ ವ್ಯಕ್ತಿ. ಈತನಿಗೆ ಈಚೆಗೆ `ಮಿಲೆನಿಯಂ ಪ್ರಶಸ್ತಿ' ಲಭಿಸಿದೆ.

1948: ಏರ್ ಇಂಡಿಯಾದ `ಮಲಬಾರ್ ಪ್ರಿನ್ಸೆಸ್' ಹೆಸರಿನ ಅಂತಾರಾಷ್ಟ್ರೀಯ ವಿಮಾನ ಮೊದಲ ಬಾರಿಗೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಟಿತು. ಕೈರೋ ಮತ್ತು ಜಿನೀವಾ ಮೂಲಕ ಲಂಡನ್ನಿಗೆ ಹೋಗುತ್ತಿದ್ದ ಈ ವಿಮಾನ ವಾರಕ್ಕೊಮ್ಮೆ ಹಾರಾಟ ನಡೆಸುತ್ತಿತ್ತು.

1946: ರವೀಂದ್ರ ಕರ್ಜಗಿ ಜನನ.

1943: ಸಾಹಿತಿ ವಿಷ್ಣುಮೂರ್ತಿ ಜನನ.

1938: ಸಾಹಿತಿ ದಯಾನಂದ ತೊರ್ಕೆ ಜನನ.

1936: ಇಂಡಿಯನ್ ಸ್ಟೇಟ್ ಬ್ರಾಡ್ ಕಾಸ್ಟಿಂಗ್ ಸರ್ವೀಸ್ ತನ್ನ ಹೆಸರನ್ನು `ಆಲ್ ಇಂಡಿಯಾ ರೇಡಿಯೋ' ಎಂಬುದಾಗಿ ಬದಲಾಯಿಸಿತು.

1918: ತಂದೆ ಬರೆದ ಕಾವ್ಯಗಳಿಗೆ ದೃಶ್ಯ ರೂಪ ನೀಡಿದ ಕಲಾವಿದ ಎಸ್. ಶ್ರೀಕಂಠ ಶಾಸ್ತ್ರಿ ಅವರು ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು - ಸಂಕಮ್ಮ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.

1915: ಸಾಹಿತಿ ಕಯ್ಯಾರ ಕಿಂಞಣ್ಣ ರೈ ಜನನ.

1902: ಸಂಶೋಧಕ, ಛಂದಸ್ಸು, ನಿಘಂಟು ಕ್ಷೇತ್ರದ ವಿದ್ವಾಂಸ ಸೇಡಿಯಾಪು ಕೃಷ್ಣಭಟ್ಟ ಅವರು ರಾಮಭಟ್ಟ- ಮೂಕಾಂಬಿಕೆ ದಂಪತಿಯ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಸೇಡಿಯಾಪು ಗ್ರಾಮದಲ್ಲಿ ಜನಿಸಿದರು.

1625: ಗಿಯಾನ್ ಡೊಮಿನಿಕೊ ಕ್ಯಾಸಿನಿ (1625-1712) ಜನ್ಮದಿನ. ಇಟಲಿ ಸಂಜಾತ ಫ್ರೆಂಚ್ ಖಗೋಳತಜ್ಞನಾದ ಈತ ಶನಿಗ್ರಹದ `ಎ' ಮತ್ತು `ಬಿ' ಬಳೆಗಳ ಮಧ್ಯೆ  ಭಾರೀ ಪ್ರಮಾಣದಲ್ಲಿ ಕಪ್ಪು ಬಳೆಗಳು ಇರುವುದು ಸೇರಿದಂತೆ ಅನೇಕ ಖಗೋಳ ಸಂಶೋಧನೆಗಳನ್ನು ನಡೆಸಿದ ವ್ಯಕ್ತಿ. ಕ್ಯಾಸಿನಿ ಹೆಸರಿನ ನೌಕೆಯೊಂದು ಈಗ ಶನಿಯ ಒಂದು ಉಪಗ್ರಹ `ಟೈಟಾನ್' ನನ್ನು ಸುತ್ತುತ್ತಿದೆ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment