ನಾನು ಮೆಚ್ಚಿದ ವಾಟ್ಸಪ್

Tuesday, June 4, 2019

ಇಂದಿನ ಇತಿಹಾಸ History Today ಜೂನ್ 04

ಇಂದಿನ ಇತಿಹಾಸ History Today ಜೂನ್ 04
2019: ನವದೆಹಲಿ: ನೂತನ ಗೃಹ ಸಚಿವ ಅಮಿತ್ ಶಾ ಅವರ ಕೈಕೆಳಗೆ ಕೇಂದ್ರ ಗೃಹ ಸಚಿವಾಲಯವು ಕಾಶ್ಮೀರ ಕಣಿವೆಯ ಟಾಪ್ ೧೦ ಉಗ್ರಗಾಮಿಗಳ ಪಟ್ಟಿ ಸಿದ್ಧ ಪಡಿಸಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಮನಕ್ಕೆ ಸಜ್ಜಾಯಿತು.  ಟಾಪ್ ೧೦ ಉಗ್ರಗಾಮಿಗಳ ಪಟ್ಟಿಯಲ್ಲಿ ಸರ್ಕಾರಕ್ಕೆ ಬೇಕಾಗಿರುವ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ರಿಯಾಜ್ ನೈಕೂ, ಲಷ್ಕರ್--ತೊಯ್ಬಾ ಜಿಲ್ಲಾ ಕಮಾಂಡರ್ ವಾಸಿಮ್ ಅಹ್ಮದ್ ಯಾನೆ ಒಸಾಮಾ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯು ಅಶ್ರಫ್ ಮೌಲ್ವಿ ಸೇರಿದ್ದಾರೆಪಡೆಗಳು ನೀಡಿದ ಮಾಹಿತಿಯನ್ನು ಅನುಸರಿಸಿ ಪಟ್ಟಿಯನ್ನು ಸಿದ್ಧ ಪಡಿಸಲಾಗಿದ್ದು, ಅದು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಕಾರ್ಯೋನ್ಮುಖರಾಗಿರುವ ಭಯೋತ್ಪಾದಕರ ಮತ್ತು ಸರ್ಕಾರಕ್ಕೆ ಬೇಕಾಗಿರುವ ಹಿಜ್ಬುಲ್ ಮುಜಾಹಿದೀನ್, ಲಷ್ಕರ್--ತೊಯ್ಬಾ, ಜೈಶ್--ಮೊಹಮ್ಮದ್ ಮತ್ತು ಅಲ್ ಬದರ್ ಭಯೋತ್ಪಾದಕ ಸಂಘಟನೆಗಳ ಭಯೋತ್ಪಾದಕರ ಹೆಸರುಗಳನ್ನು ಒಳಗೊಂಡಿದೆಪಟ್ಟಿಯಲ್ಲಿರುವ ಇತರರ ಹೆಸರುಗಳಲ್ಲಿ ಬಾರಾಮುಲ್ಲಾದ ಹಿಜ್ಬುಲ್ ಮುಜಾಹಿದ್ದೀನ್ ಜಿಲ್ಲಾ ಕಮಾಂಡರ್ ಮೆಹ್ರಜುದ್ದೀನ್, ಶ್ರೀನಗರದಲ್ಲಿ ಮುಜಾಹಿದ್ದೀನ್ ಭಯೋತ್ಪಾದಕರ ಬಲವನ್ನು ಹೆಚ್ಚಿಸಲು ಸಕ್ರಿಯವಾಗಿ ಯತ್ನಿಸುತ್ತಿರುವ ಡಾ. ಸೈಫುಲ್ಲಾ ಯಾನೆ ಸೈಪುಲ್ಲಾ ಮೀರ್ ಯಾನೆ ಡಾ. ಸೈಫ್, ಪುಲ್ವಾಮದಲ್ಲಿನ ಹಿಜ್ಬುಲ್ ಮುಜಾಹಿದ್ದೀನ್ ಜಿಲ್ಲಾ ಕಮಾಂಡರ್ ಅರ್ಶದ್ ಉಲ್ ಹಕ್ಜೈಶ್--ಮೊಹಮ್ಮದ್ ಸಂಘಟನೆಗೆ ಸೇರಿದ ಝಹೀದ್ ಶೇಖ್ ಯಾನೆ ಒಮರ್ ಆಫ್ಘಾನಿ, ಅಲ್-ಬದರ್ಗೆ ಸೇರಿದ ಜಾವೇದ್ ಮಟೂ ಯಾನೆ ಫೈಸಲ್ ಯಾನೆ ಶಾಕಿಬ್ ಯಾನೆ ಮುಸಾಬ್ ಮತ್ತು ಇತ್ತೀಚೆಗೆ ಕುಪ್ವಾರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಜಿಲ್ಲಾ ಕಮಾಂಡರ್ ಆಗಿ ನೇಮಕಗೊಂಡ ಎಜಾಜ್ ಅಹ್ಮದ್ ಇವರ ಹೆಸರುಗಳು ಸೇರಿವೆ.  ಕಣಿವೆಯಲ್ಲಿ ವರ್ಷ ೧೦೨ ಉಗ್ರಗಾಮಿಗಳನ್ನು ಕೊಲ್ಲಲಾಗಿದೆ ಮತ್ತು ಇನ್ನೂ ೨೮೬ ಉಗ್ರಗಾಮಿಗಳು ಸಕ್ರಿಯರಾಗಿದ್ದಾರೆ ಎಂದು ನಂಬಲಾಗಿದೆ ಎಂದೂ ಸಚಿವಾಲಯ ಹೇಳಿತು. ಅಧಿಕಾರ ವಹಿಸಿಕೊಂಡ ತತ್ ಕ್ಷಣವೇ ಶಾ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರನ್ನು ಭೇಟಿ ಮಾಡಿದ್ದು, ಮಲಿಕ್ ಅವರು ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ರಾಜ್ಯದ ಸುರಕ್ಷತಾ ಪರಿಸ್ಥಿತಿ ಬಗ್ಗೆ ವಿವರಿಸಿದರು೧೫ ನಿಮಿಷಗಳ ಭೇಟಿಯಲ್ಲಿ ರಾಜ್ಯಪಾಲರು ಗೃಹ ಸಚಿವರಿಗೆ ಅಮರನಾಥ ಯಾತ್ರೆಯ ಸಿದ್ಧತೆ ಬಗ್ಗೆ ವಿವರಿಸಿದರು. ೪೬ ದಿನಗಳ ಯಾತ್ರೆಯು ಜುಲೈ ೧ರ ಮಾಸ ಶಿವರಾತ್ರಿಯಂದು ಆರಂಭವಾಗಲಿದ್ದು, ಆಗಸ್ಟ್ ೧೫ರ ಶ್ರಾವಣ ಪೂರ್ಣಿಮೆಯ ದಿನ ಸಮಾಪ್ತಗೊಳ್ಳಲಿದೆಉಭಯರೂ ಕಾಶ್ಮೀರ ಕಣಿವೆ ಮತ್ತು ಗಡಿ ಪ್ರದೇಶಗಳ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹಾಗೂ ವಿವಿಧ ಅಭಿವೃದ್ಧಿ ವಿಷಯಗಳ ಬಗೆಗೂ ಮಾತುಕತೆ ನಡೆಸಿದರು. ’ನಾನು ಭದ್ರತಾ ವಿಷಯಗಳು ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡಿದೆ ಎಂದು ಮಲಿಕ್ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ಏನಿದ್ದರೂ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ವಿಚಾರ ಭಾರತದ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ಇರುವ ಕಾರಣ ಚರ್ಚೆಗೆ ಬರಲಿಲ್ಲ ಎಂದು ರಾಜ್ಯಪಾಲರು ಹೇಳಿದರು. ಜಮ್ಮು ಮತ್ತು ಕಾಶ್ಮೀರವು ೨೦೧೮ರ ಜೂನ್ ತಿಂಗಳಿನಿಂದ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದ್ದು, ವರ್ಷ ತಡವಾಗಿ ವಿಧಾನಸಭೆಗೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.

2019: ನವದೆಹಲಿ: ’ಇಫ್ತಾರ್ ಕೂಟದಲ್ಲಿ ಪಾಲ್ಗೊಂಡದ್ದಕ್ಕಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕ ಸುಶೀಲ್ ಮೋದಿ ಅವರನ್ನು ಟೀಕಿಸಿದ್ದಕ್ಕಾಗಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಛೀಮಾರಿ ಹಾಕಿದರು. ಗಿರಿರಾಜ್ ಸಿಂಗ್ ಅವರು ಟ್ವೀಟ್ ಮೂಲಕ ನಿತೀಶ್ ಕುಮಾರ್ ಮತ್ತು ಸುಶೀಲ್ ಮೋದಿ ಅವರನ್ನುಇಫ್ತಾರ್ ಕೂಟದಲ್ಲಿ ಪಾಲ್ಗೊಂಡದ್ದಕ್ಕಾಗಿ ಟೀಕಿಸಿದ್ದರು. ಗಿರಿರಾಜ್ ಸಿಂಗ್ ಟ್ವೀಟ್ ಪ್ರಕಟಗೊಂಡ ಬೆನ್ನಲ್ಲೇ ಅವರಿಗೆ ದೂರವಾಣಿ ಕರೆ ಮಾಡಿದ ಅಮಿತ್ ಶಾಇಂತಹ ಹೇಳಿಕೆಗಳನ್ನು ನೀಡದಂತೆ ಸೂಚಿಸಿದರು. ’ಇಂತಹ ಘಟನೆ ಮತ್ತೊಮ್ಮೆ ಘಟಿಸಬಾರದು ಎಂದು ಅಮಿತ್ ಶಾ, ಪದೇ ಪದೇ ಇಂತಹ ವಿವಾದಾತ್ಮಕ ಟೀಕೆಗಳನ್ನು ಮಾಡುವ ಗಿರಿರಾಜ್ ಸಿಂಗ್ ಅವರಿಗೆ ಕಟ್ಟಪ್ಪಣೆ ಮಾಡಿದರು ಎಂದು ವರದಿಗಳು ಹೇಳಿದವು. ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ಗಿರಿರಾಜ್ ಸಿಂಗ್ ಅವರು ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ನಿತೀಶ್ ಕುಮಾರ್, ಸುಶೀಲ್ ಮೋದಿ, ರಾಮ್ ವಿಲಾಸ್ ಪಾಸ್ವಾನ್ ಅವರ ಸಮೂಹ ಚಿತ್ರವನ್ನು ಗುರಿಮಾಡಿ ಟೀಕಿಸಿದ್ದರು.  ‘ ಚಿತ್ರ ನವರಾತ್ರಿ ಊಟದ ಚಿತ್ರವಾಗಿದ್ದರೆ ಮತ್ತು ಇಷ್ಟೇ ಕಾಳಜಿ ಅಂತಹ ಊಟ ಸಂಘಟಿಸಲು ವ್ಯಕ್ತವಾಗಿದ್ದರೆ ಎಷ್ಟೊಂದು ಸುಂದರವಾಗಿರುತ್ತಿತ್ತು? ನಾವು ನಮ್ಮದೇ ಮತ ನಂಬಿಕೆಯನ್ನು ಮೂಲೆಗುಂಪು ಮಾಡಿ ಇಂತಹ ನಟನೆಗಳನ್ನು ಏಕೆ ಮಾಡಬೇಕು?’ ಎಂದು ಗಿರಿರಾಜ್ ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರುಟ್ವೀಟ್ ಜೊತೆಗೆ ಲಗತ್ತಿಸಲಾದ ಫೋಟೋದಲ್ಲಿ ಇಫ್ತಾರ್ ಕೂಟದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುಶೀಲ್ ಮೋದಿ, ಇನ್ನೊಂದು ಮಿತ್ರಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಮತ್ತು ಅವರ ಪುತ್ರ ಚಿರಾಗ್ ಪಾಸ್ವಾನ್ ಪಾಲ್ಗೊಂಡ ದೃಶ್ಯವಿತ್ತು. ವಿರೋಧಿ ಮೈತ್ರಿಕೂಟದ ಭಾಗವಾದ ಹಿಂದುಸ್ಥಾನ್ ಆವಾಮ್ ಮೋರ್ಚಾ (ಸೆಕ್ಯುಲರ್) ನಾಯಕ ಜಿತನ್ ರಾಮ್ ಮಾಂಜ್ಹಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು.   ‘ಗಿರಿರಾಜ್ ಸಿಂಗ್ ಅವರು ಇಂತಹ ಟೀಕೆಗಳನ್ನು ನಿಮಗೆ ಸುದ್ದಿ ಸಿಗಲಿ ಎಂದು ಉದ್ದೇಶಪೂರ್ವಕವಾಗಿಯೇ ಮಾಡುತ್ತಾರೆ ಎಂದು ಗಿರಿರಾಜ್ ಸಿಂಗ್ ಟ್ವೀಟಿಗೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ತಮ್ಮ ಪಕ್ಷಕ್ಕೆ ಸಮರ್ಪಕ ಪ್ರಾತಿನಿಧ್ಯ ಲಭಿಸಿಲ್ಲ ಎಂದು ಈಗಾಗಲೇ ನಿತೀಶ್ ಕುಮಾರ್ ಸಿಡಿಮಿಡಿಗೊಂಡಿದ್ದರು. ಪಕ್ಷ ಸಹೋದ್ಯೋಗಿ ಸುಶೀಲ್ ಕುಮಾರ್ ಅವರು ಗಿರಿರಾಜ್ ಸಿಂಗ್ ಟ್ವೀಟಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.  ’ಹಿಂದು ಆಗಿರಲು ನಾನು ಹೆಮ್ಮೆ ಪಡುತ್ತೇನೆ. ನಾನು ಇಫ್ತಾರ್ ಮಾತ್ರವೇ ಅಲ್ಲ, ಹೋಳಿ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತೇನೆ. ನಾನು ೨೫ ವರ್ಷಗಳಿಂದ ಇಫ್ತಾರ್ ಆಚರಣೆಯಲ್ಲಿ ಪಾಲ್ಗೊಂಡಿದ್ದೇನೆ. ಎಂದೂ ಹೋಳಿ ಮಿಲನ್ ಪಾರ್ಟಿ ನೀಡದ ಜನರು ಇಂದು ಪ್ರಶ್ನೆ ಎತ್ತುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದರು.
ವಿವಾದಾತ್ಮಕ ಹೇಳಿಕೆಗಳಿಗಾಗಿ ಕುಖ್ಯಾತಿ ಪಡೆದ ಗಿರಿರಾಜ್ ಸಿಂಗ್ ಅವರು ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ರಾಷ್ಟ್ರೀಯ ಚುನಾವಣೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಪ್ರಬಲ ಎದುರಾಳಿ ಎಂಬುದಾಗಿ ಪರಿಗಣಿಸಲಾಗಿದ್ದ ಕನ್ಹಯ್ಯ ಕುಮಾರ್ ವಿರುದ್ಧ ವಿಜಯಗಳಿಸಿದ್ದರು. ತಮ್ಮ ಬಲಪಂಥೀಯ ನಂಬಿಕೆಗಳನ್ನು ಬಲವಾಗಿ ಪ್ರತಿಪಾದಿಸುವ ಗಿರಿರಾಜ್ ಸಿಂಗ್ ಅವರು ಒಮ್ಮೆ ಬಿಜೆಪಿಯ ಟೀಕಾಕಾರರಿಗೆ  ’ಪಾಕಿಸ್ತಾನಕ್ಕೆ ಹೋಗಿ ಎಂದು ಕಟ್ಟಪ್ಪಣೆ ಮಾಡಿದ್ದರು.  ಗಿರಿರಾಜ್ ಸಿಂಗ್ ಟೀಕೆಯು ಸಚಿವ ಸಂಪುಟ ಸ್ಥಾನಗಳಿಗೆ ಸಂಬಂಧಿಸಿದಂತೆ ಆಡಳಿತಾರೂಢ ಮೈತ್ರಿಕೂಟದಲ್ಲಿ ಉದ್ಭವಿಸಿದ ಅಸಮಾಧಾನದ ಕಿಚ್ಚಿಗೆ ತುಪ್ಪ ಸುರಿದಂತಾಗಿತ್ತು. ಕೇಂದ್ರ ಸಂಪುಟದಲ್ಲಿ ತಮ್ಮ ಪಕ್ಷಕ್ಕೆ ಏಕೈಕ ಸಚಿವ ಸ್ಥಾನ ನೀಡಿದ್ದನ್ನು ಒಪ್ಪದ ನಿತೀಶ್ ಕುಮಾರ್ ಅವರು ಕಳೆದ ವಾರ ಮೋದಿ ಸಂಪುಟಕ್ಕೆ ಪಕ್ಷದ ಪ್ರತಿನಿಧಿಯನ್ನು ಸೇರ್ಪಡೆ ಮಾಡಲು ನಿರಾಕರಿಸಿದ್ದರು.
  
2019: ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೈಗೊಂಬೆಯಾಗಿರುವ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಉಭಯ ಪಕ್ಷಗಳಲ್ಲಿ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿದ್ದರಿಂದ ಲೋಕಸಭಾ ಚುನಾ ವಣೆಯಲ್ಲೂ ಸೋಲಾಗಿದ್ದಷ್ಟೇ  ಅಲ್ಲ, ಸರ್ಕಾರವೂ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ,  ಜೆಡಿಎಸ್‌ನ ಹಿರಿಯ ನಾಯಕ ಹೆಚ್.ವಿಶ್ವ ನಾಥ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ನೆತ್ತಿಯ ಮೇಲೆ ತೂಗಾಡುತ್ತಿರುವ ತೂಗುಕತ್ತಿ ಯನ್ನು ಆಧರಿಸಿರುವ ಹಗ್ಗ ಮತ್ತಷ್ಟು ದುರ್ಬಲವಾಗಿದ್ದು ಇದೇ ಕಾಲದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಿಬ್ಬರು ಪಕ್ಷದ ವಿರುದ್ಧ ಗುಡುಗು ಹಾಕಿರುವುದು ಸರ್ಕಾರಕ್ಕೆ ಮತ್ತಷ್ಟು ಆತಂಕ ತಂದಿತು. ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಹೆಚ್.ವಿಶ್ವನಾಥ್ ಅವರು ತಮ್ಮ ರಾಜೀನಾಮೆಯ ಕುರಿತು ಪ್ರಕಟಿಸಿದ್ದಲ್ಲದೆ ಸಿದ್ಧರಾಮಯ್ಯ ಅವರ ಅಧ್ಯಕ್ಷತೆ ಯ ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ತುಘಲಕ್ ದರ್ಬಾರ್‌ನ ಪ್ರತಿಬಿಂಬ ಎಂದು ಹೀಯಾಳಿಸಿದರು.  ಸಿದ್ಧರಾಮಯ್ಯ ಅವರ ವ್ಯವಸ್ಥಿತ ಸಂಚಿನಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು,ಮಂಡ್ಯ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿ ಸಬೇಕಾಯಿತು ಎಂದ ಅವರು,ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಿ ಎಂದರೆ ಕೇಳದೆ ಹಾಲಿ ಎಂಪಿಯಾಗಿದ್ದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ದೇವೇಗೌಡರಿಗೆ ಟಿಕೆಟ್ ನೀಡಲಾಯಿತು. ದೇವೇಗೌಡರು ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು.ಆದರೆಉದ್ದೇಶಪೂರ್ವಕವಾಗಿ ಮೈಸೂರಿನಲ್ಲಿ ಟಿಕೆಟ್ ತಪ್ಪಿಸಿ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ಧರಾಮಯ್ಯ ನೋಡಿಕೊಂಡರು.ಪರಿಣಾಮವಾಗಿ ದೇವೇಗೌಡರು ಹೀನಾಯ ಸೋಲು ಅನುಭವಿಸುವಂತಾಯಿತು.  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಹಿಂದ ವರ್ಗದ ಒಂದು ಮತ ಬೀಳದಂತೆ ಸಿದ್ಧರಾಮಯ್ಯ ನೋಡಿ ಕೊಂಡರು.ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅವರು ಉಭಯ ಪಕ್ಷಗಳ ನಡುವೆ ಸಮನ್ವಯ ಸಾಧಿಸಲು ಕಾರಣರಾಗಿದ್ದರೆ ಮೈತ್ರಿಕೂಟ ಈ ಮಟ್ಟದ ಹೀನಾಯ ಸೋಲು ಅನುಭವಿಸುತ್ತಿರಲಿಲ್ಲ.ಹಾಗೆಯೇ ಬಿಜೆಪಿಗೆ ಇಂತಹ ಭಾರೀ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂದರು.  ಬಿಜೆಪಿಗೆ ಸೇರ್ಪಡೆಯಾಗುವ ಕಾರಣಕ್ಕಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,ಅಂತಹ ಯಾವ ಯೋಚನೆಯೂ ಇಲ್ಲ.ನಗರ ಸ್ಥಳೀಯ ಸಂಸ್ಥೆಗಳ ಚುನಾ ವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲನ್ನು ನೋಡಿದ ಮೇಲೆಯೂ ಯಾವ ಕಾರಣಕ್ಕಾಗಿ ಅಲ್ಲಿಗೆ ಹೋಗಬೇಕು ಎಂದು ಮರು ಪ್ರಶ್ನಿಸಿದರು.

2019: ಪಾಟ್ನಾ: ಬಿಜೆಪಿ- ಜೆಡಿ(ಯು) ಬಾಂಧವ್ಯ ಹದಗೆಡುತ್ತಿರುವ ಬೆನ್ನಲ್ಲೇ ಅದರ ಲಾಭ ಪಡೆಯಲು ಯತ್ನಿಸಿರುವ ಹಿರಿಯ ಆರ್‌ಜೆಡಿ ನಾಯಕ ರಘುವಂಶ ಪ್ರಸಾದ್ ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಡೆಗೆ  ಸ್ನೇಹಹಸ್ತ ಚಾಚಿದರು. ಜೆಡಿ(ಯು) ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಬಿಜೆಪಿಯ ವಿರುದ್ಧ ಒಂದಾಗಬೇಕು, ತಮ್ಮ ಪಕ್ಷಕ್ಕೆ ಯಾರ ಬಗೆಗೂ ಅಲರ್ಜಿ ಇಲ್ಲ ಎಂಬುದಾಗಿ ರಘುವಂಶ ಪ್ರಸಾದ್ ಸಿಂಗ್ ಹೇಳಿದರು. ಈಮಧ್ಯೆ ಮಹಾಘಟಬಂಧನ್ ಅಂಗ ಪಕ್ಷವಾಗಿರುವ ರಾಷ್ಟ್ರೀಯ ಲೋಕಸಮತಾ ಪಕ್ಷದ ಮುಖಂಡ ಉಪೇಂದ್ರ ಕುಶವಾಹ ಅವರೂ ಹೇಳಿಕೆಯೊಂದನ್ನು ನೀಡಿ ’ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿ(ಯು) ನಾಯಕ ನಿತೀಶ್ ಕುಮಾರ್ ಅವರು ತನ್ನ ಮಿತ್ರ ಪಕ್ಷ ಬಿಜೆಪಿಗೆ ವಿಶ್ವಾಸದ್ರೋಹ ಮಾಡಲಿದ್ದಾರೆ ಎಂದು ಹೇಳಿದ್ದಾದರು. ಏನಿದ್ದರೂ, ರಾಜ್ಯದಲ್ಲಿನ ತ್ರಿಪಕ್ಷ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ಎಲ್‌ಜೆಪಿ ನಾಯಕ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ’ಮೈತ್ರಿಕೂಟವು ಭದ್ರವಾಗಿದೆ ಎಂದು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಮಹಾಘಟ ಬಂಧನ್ ಅನುಭವಿಸಿರುವ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಜೊತೆಗೆ ಮುನಿಸಿಕೊಂಡಿರುವ ನಿತೀಶ್ ಕುಮಾರ್ ಬಗ್ಗೆ ಆರ್‌ಜೆಡಿ ತನ್ನ ಕಠಿಣ ನಿಲುವನ್ನು ಮೆದುಗೊಳಿಸಿರುವ ಸಂಕೇತವನ್ನು  ಆರ್‌ಜೆಡಿ ನಾಯಕ ನೀಡಿದ್ದಾರೆ ಎಂದು ಇಲ್ಲಿನ ರಾಜಕೀಯ ವಲಯಗಳು ವಿಶ್ಲೇಷಿಸಿದವು.  ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ತಮ್ಮ ಪಕ್ಷಕ್ಕೆ ನೀಡಲಾದ ’ಸಾಂಕೇತಿಕ ಪ್ರಾನಿನಿಧ್ಯದ ಕೊಡುಗೆಯನ್ನು ಬದಿಗೆ ತಳ್ಳಿದ್ದ ನಿತೀಶ್ ಕುಮಾರ್ ಅವರು ಪಕ್ಷ ಸದಸ್ಯರ ’ಪ್ರಮಾಣಾನುಸಾರ ಪ್ರಾತಿನಿಧ್ಯಕ್ಕೆ ಒತ್ತಾಯಿಸಿದ್ದರು. ನಿತೀಶ್ ನಿಲುವಿನ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆ ನೀಡಿರುವ ಸಿಂಗ್, ’ನಿತೀಶ್ ಅಥವಾ ಎ ಅಥವಾ ಬಿ ಯಾರೇ ಆಗಿರಲಿ, ಎಲ್ಲ ಬಿಜೆಪಿಯೇತರ ಪಕ್ಷಗಳು ರಾಷ್ಟ್ರೀಯ ಪರ್ಯಾಯ ಒದಗಿಸುವ ಸಲುವಾಗಿ ಒಂದೇ ವೇದಿಕೆಗೆ ಬರಬೇಕು. ನಾವು ಯಾವುದೇ ನಿರ್ದಿಷ್ಟ ಪಕ್ಷ ಅಥವಾ ನಾಯಕನ ಬಗ್ಗೆ ಅಲರ್ಜಿ ಹೊಂದಿಲ್ಲ ಎಂದು ಮಹಾಘಟಬಂಧನಕ್ಕೆ ನಿತೀಶ್ ಕುಮಾರ್ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.  ‘ಸಣ್ಣ ಪಕ್ಷಗಳು ವಿಲೀನವಾಗಿ ಏಕೈಕ ಪಕ್ಷವಾದರೆ ಬಿಜೆಪಿ ಎಸೆದಿರುವ ಸವಾಲು ಸ್ವೀಕರಿಸಿಲು ಇನ್ನೂ ಒಳ್ಳೆಯದು ಎಂದು ಅವರು ನುಡಿದರು. ನಿಮ್ಮ ಅಭಿಪ್ರಾಯಕ್ಕೆ ಸೆರೆಮನೆಯಲ್ಲಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಅನುಮೋದನೆ ಇದೆಯೇ ಎಂಬ ಪ್ರಶ್ನೆಗೆ ’ನಾನು ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಬಹಿರಂಗ ಪಡಿಸಿದ್ದೇನೆ ಎಂದು ಮಾಜಿ ಕೇಂದ್ರ ಸಚಿವ ಉತ್ತರಿಸಿದರು. ’ನಾನು ಮತ್ತು ಲಾಲೂ ಪ್ರಸಾದ್ ಜೊತೆಯಾಗಿ ಹಲವಾರು ವರ್ಷಗಳ ಕಾಲ ದುಡಿದಿರುವುದರಿಂದ ಬಹುತೇಕ ಸಂದರ್ಭಗಳಲ್ಲಿ ನಮ್ಮಿಬ್ಬರ ಚಿಂತನೆಯೂ ಒಂದೇ ಆಗಿರುತ್ತದೆ ಎಂದು ಅವರು ನುಡಿದರು. ಮಾಜಿ ಮುಖ್ಯಮಂತ್ರಿ ಆರ್‌ಜೆಡಿ ನಾಯಕಿ ರಾಬ್ಡಿ ದೇವಿ ಮತ್ತು ಹಿಂದುಸ್ಥಾನ್ ಆವಾಮ್ ಮೋರ್ಚಾದ (ಎಚ್‌ಎಎಂ) ನಾಯಕ ಜಿತನ್ ರಾಮ್ ಮಾಂಜ್ಹಿ ಅವರು ಕೂಡಾ ನಿತೀಶ್ ಕುಮಾರ್ ಅವರ ಕಡೆಗೆ ಮೆದು ನಿಲುವು ತಾಳಿದಂತೆ ಕಂಡು ಬರುತ್ತಿದೆ. ಎಚ್‌ಎಎಂ ನಾಯಕ ಸೋಮವಾರ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಜಿತನ್ ರಾಮ್ ಅವರು ನಿತೀಶ್ ಕುಮಾರ್ ಅವರನ್ನು ಆತ್ಮೀಯವಾಗಿ ಆಲಂಗಿಸಿ ಸ್ವಾಗತಿಸಿದ್ದರು. ತನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತುಹಾಕಿದ ರೀತಿ ಬಗ್ಗೆ ನನಗೆ ಜೆಡಿ(ಯು) ನಾಯಕನ ಜೊತೆಗೆ ಭಿನ್ನಾಭಿಪ್ರಾಯಗಳಿದ್ದವು. ಅದರೆ ಅದು ಆಗಿ ೪ ವರ್ಷವಾಗಿದೆ. ಗಂಗಾನದಿಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ ಎಂದು ಮಾಂಜ್ಹಿ ಸುದ್ದಿಗಾರರ ಜೊತೆ ಮಾತನಾಡುತ್ತಾ ನುಡಿದರು. ಈ ಹಿಂದೆ, ಜೆಡಿ(ಯು)ನಲ್ಲಿಯೇ ಇದ್ದ ಮಾಂಜ್ಹಿ ಅವರು ೨೦೧೪ರ ಮಹಾಚುನಾವಣೆಯಲ್ಲಿ ಪಕ್ಷವು ಅನುಭವಿಸಿದ ಸೋಲಿನ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಪದ ತ್ಯಾಗ ಮಾಡಿದಾಗ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು.  ಆದರೆ ಒಂದು ವರ್ಷದ ಒಳಗಾಗಿ, ತಮಗೆ ಮುಖ್ಯಮಂತ್ರಿಯಾಗಲು ದಾರಿ ಸುಗಮಗೊಳಿಸುವ ಸಲುವಾಗಿ ರಾಜೀನಾಮೆ ನೀಡುವಂತೆ ಮಾಂಜ್ಹಿ ಅವರಿಗೆ ನಿತೀಶ್ ಕುಮಾರ್ ಅವರು ಸೂಚಿಸಿದ್ದರು. ಆಗ ಅಸಮಾಧಾನಗೊಂಡು ಬಂಡಾಯ ಎದ್ದ ಮಾಂಜ್ಹಿ ಜೆಡಿ(ಯು) ತ್ಯಜಿಸಿ ತಮ್ಮದೇ ಪಕ್ಷ ಸ್ಥಾಪಿಸಿದ್ದರು.  ಮಾಂಜ್ಹಿ ಅವರು ಹಿಂದಿನ ದಿನ ಜೆಡಿ(ಯು) ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲೂ ಪಾಲ್ಗೊಂಡಿದ್ದರು. ನಿತೀಶ್ ಕುಮಾರ್ ಜೊತೆಗೆ ಖುಶಿ ಖುಶಿಯಾಗಿದ್ದ ಅವರ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡು ಎಲ್ಲರ ಹುಬ್ಬೇರಿಸಿದ್ದವು. ಬಿಜೆಪಿ ಮತ್ತು ಜೆಡಿ (ಯು) ಎರಡೂ ಪಕ್ಷಗಳು ಏರ್ಪಡಿಸಿದ್ದ ಇಫ್ತಾರ್ ಕೂಟಗಳಲ್ಲಿ ಪರಸ್ಪರ ಪಾಲ್ಗೊಂಡಿರಲಿಲ್ಲ. ನಿತೀಶ್ ಕುಮಾರ್ ಅವರು ಬರುವುದಕ್ಕೆ ಕೆಲವೇ ನಿಮಿಷಗಳ ಮುನ್ನ ರಾಬ್ಡಿ ದೇವಿ ಮತ್ತು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮಾಂಜ್ಹಿ ನಿವಾಸದಿಂದ ಹೊರಟಿದ್ದರು. ಈ ವೇಳೆಯಲ್ಲಿ, ಜೆಡಿ(ಯು) ಜೊತೆ ಮರುಹೊಂದಾಣಿಕೆ ಸಾಧ್ಯತೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ಮೊದಲು ನಿರಾಕರಿಸಿದ ರಾಬ್ಡಿ ದೇವಿ ಬಳಿಕ ಮಾಂಜ್ಹಿ ಅವರ ಬಳಿ ಕೇಳುವುದು ಒಳ್ಳೆಯದು ಎಂದಿದ್ದರು. ಪತ್ರಕರ್ತರು ಇನ್ನಷ್ಟು ಆಗ್ರಹಿಸಿದಾಗ, ’ಹೊಸ ಮೈತ್ರಿ ಸೇರಿದಂತೆ ಯಾವುದೇ ನಿರ್ಧಾರವನ್ನು ಎಲ್ಲ ಮಿತ್ರಪಕ್ಷಗಳ ಜೊತೆ ಸಮಾಲೋಚಿಸಿದ ಬಳಿಕವೇ ಕೈಗೊಳ್ಳಲಾಗುವುದು ಎಂದ ರಾಬ್ಡಿ ದೇವಿ ಹೇಳಿದ್ದರು. ನಿತೀಶ್ ಕುಮಾರ್ ಅವರು ೨೦೧೭ರ ಜುಲೈ ತಿಂಗಳಲ್ಲಿ ಮಹಾಘಟಬಂಧನ್ ತ್ಯಜಿಸಿ ಮುಂದಿನ ೨೪ ಗಂಟೆಗಳ ಒಳಗಾಗಿ ಬಿಜೆಪಿ ಜೊತೆ ಸೇರಿ  ಹೊಸ ಸರ್ಕಾರ ರಚಿಸಿದ ಬಳಿಕ ’ನಿತೀಶ್ ಕುಮಾರ್ ಅವರು ಜನಾದೇಶಕ್ಕೆ ದ್ರೋಹ ಬಗೆಗಿದ್ದಾರೆ ಎಂದು ರಾಬ್ಡಿ ದೇವಿ ಈ ಹಿಂದೆ ಆಪಾದಿಸಿದ್ದರು.  ಈ ಮಧ್ಯೆ, ತಾವು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದ ನಿತೀಶ್ ಕುಮಾರ್ ಹಾಗೂ ಬಿಜೆಪಿ ನಾಯಕರಾದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಜೊತೆಗೆ ಪತ್ರಕರ್ತರ ಬಳಿ ಮಾತನಾಡಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ’ಎನ್‌ಡಿಎ ಸುಭದ್ರವಾಗಿದೆ ಎಂದು ಹೇಳಿದ್ದರು. ’ಎನ್‌ಡಿಎಯಲ್ಲಿ ಎಲ್ಲವೂ ಸುಸೂತ್ರವಾಗಿದೆ ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ನಮ್ಮ ನಾಯಕರಾಗಿದ್ದಾರೆ ಎಂದೂ ಪಾಸ್ವಾನ್ ಹೇಳಿದ್ದರು.  ಜೆಡಿಯು ಮತ್ತು ಬಿಜೆಪಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಪರಸ್ಪರರು ಪಾಲ್ಗೊಂಡಿಲ್ಲವಲ್ಲ ಎಂಬ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ. ’ನಾನು ಎರಡರಲ್ಲೂ ಪಾಲ್ಗೊಂಡಿದ್ದೇನೆ. ಇಲ್ಲಿ ಉಭಯ ಪಕ್ಷಗಳ ನಾಯಕರೂ ಇದ್ದಾರೆ, ನೀವೇ ನೋಡುತ್ತಿದ್ದೀರಲ್ಲ?’ ಎಂದು ಪಾಸ್ವಾನ್ ಮರುಪ್ರಶ್ನೆ ಮಾಡಿದ್ದರು. ಜೆಡಿ(ಯು)ವನ್ನು ಸಂಪುಟಕ್ಕೆ ಸೇರ್ಪಡೆ ಮಾಡಲು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ತೀವ್ರ ಯತ್ನ ನಡೆಸಿದ್ದರೂ, ಪಕ್ಷಗಳ ಪ್ರಮಾಣಾನುಸಾರ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ ನಿತೀಶ್ ಕುಮಾರ್ ಬಿಜೆಪಿ ನೀಡಿದ್ದ ಒಂದು ಸಚಿವ ಸ್ಥಾನದ ಕೊಡುಗೆಯನ್ನು ನಿರಾಕರಿಸಿದ್ದರು. ಬಳಿಕ ಬಿಹಾರದಲ್ಲಿ ತಮ್ಮ ಸಂಪುಟ ವಿಸ್ತರಣೆಯಲ್ಲಿ ಕೇವಲ ಜೆಡಿ(ಯು) ನಿಂದ ೮ ಮಂದಿ ಹೊಸಬರನ್ನು ಸೇರಿಸಿಕೊಳ್ಳುವ ಮೂಲಕ ಬಿಜೆಪಿ ವಿರುದ್ಧ ಮುಯ್ಯಿ ತೀರಿಸಿಕೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಹಾರದ ೪೦ ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಹೊರತು ಪಡಿಸಿ ಉಳಿದ ಎಲ್ಲ ಸ್ಥಾನಗಳನ್ನೂ ಗೆಲ್ಲುವ ಮೂಲಕ ಮಹಾಘಟಬಂಧನ್ ಮೂಲೆಪಾಲಾಗುವಂತೆ ಎನ್‌ಡಿಎ ಮಾಡಿತ್ತು. ಈ ಏಕೈಕ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಆರ್‌ಜೆಡಿ ಶೂನ್ಯ ಸಂಪಾದನೆ ಮಾಡಿತ್ತು.

2019: ನವದೆಹಲಿ: ೮ ಮಂದಿ ಸಿಬ್ಬಂದಿ ಮತ್ತು ಐವರು ಪ್ರಯಾಣಿಕರು ಸೇರಿ ೧೩ ಮಂದಿಯೊಂದಿಗೆ ಅರುಣಾಚಲ ಪ್ರದೇಶದಲ್ಲಿ ಕಣ್ಮರೆಯಾದ ಭಾರತೀಯ ವಾಯುಪಡೆಯ ಎಎನ್- ೩೨ ಯುದ್ಧ ವಿಮಾನದ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಯಿತು.  ನೌಕಾಪಡೆಯ ಕಣ್ಗಾವಲು ವಿಮಾನ ಮತ್ತು ಇಸ್ರೋ ಉಪಗ್ರಹಗಳು ಕೂಡಾ ಶೋಧಕಾರ್ಯದಲ್ಲಿ ಭಾಗಿಯಾದವು. ೨೪ ಗಂಟೆಗಳ ಹಿಂದೆ ಕಣ್ಮರೆಯಾಗಿರುವ ವಿಮಾನದ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಸುದ್ದಿ ಮೂಲಗಳು ಹೇಳಿದವು. ಅಸ್ಸಾಮಿನ ಜೊರ್‍ಹಾಟ್‌ನಿಂದ ಜೂನ್ 3ರ  ಮಧ್ಯಾಹ್ನ ೧೨.೨೭ ಗಂಟೆಗೆ ಗಗನಕ್ಕೆ ಏರಿದ್ದ ವಿಮಾನ ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯ ಮೆಚುಕಾದಲ್ಲಿನ ಅಡ್ವಾನ್ಸಡ್ ಲ್ಯಾಂಡಿಂಗ್ ಮೈದಾನದ ಕಡೆಗೆ ಹೊರಟಿತ್ತು. ಗಗನಕ್ಕೆ ಏರಿದ ೩೫ ನಿಮಿಷಗಳ ಬಳಿಕ ಮೆಚುಕಾದ ತನ್ನ ಗಮ್ಯ ಸ್ಥಳದಿಂದ ೭೦ ಕಿಮೀ ದೂರದಲ್ಲಿದ್ದಾಗ ವಿಮಾನ ರಾಡಾರ್ ಕಣ್ಣಿನಿಂದ ಕಣ್ಮರೆಯಾಯಿತು. ಭಾರತೀಯ ವಾಯುಪಡೆಯ ವಿಮಾನಗಳು ಮತ್ತು ಸೇನಾ ಹೆಲಿಕಾಪ್ಟರುಗಳು ಮೆಚುಕಾ ದಟ್ಟ ಅರಣ್ಯ ಪ್ರದೇಶದಲ್ಲಿ ವಿಮಾನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ನೆಲದಲ್ಲಿ ಕೂಡಾ ಸೈನಿಕರು ಶೋಧ ಕಾರ್ಯದಲ್ಲಿ ಮಗ್ನರಾದರು.  ಜೂನ್ 4ರ ಮಂಗಳವಾರ ಮಧ್ಯಾಹ್ನ ನೌಕಾಪಡೆಯು ’ಜಲಾಂತರ್ಗಾಮಿ ಬೇಟೆಗಾರ ಎಂದೂ ಕರೆಯಲಾಗುವ ಅಮೆರಿಕ ನಿರ್ಮಿತ ಪಿ೮ಐ ನೌಕಾ ಕಣ್ಗಾವಲು ವಿಮಾನವನ್ನು ಶೋಧ ಕಾರ್‍ಯಕ್ಕಾಗಿ ಕಳುಹಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಡಾರ್ ಇಮೇಜಿಂಗ್ ಸ್ಯಾಟಲೈಟ್‌ನ್ನು (ರೀಸ್ಯಾಟ್) ಕೂಡಾ ಯುದ್ಧ ವಿಮಾನ ಶೋಧ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಐಎಎಫ್ ವಕ್ತಾರರು ಟ್ವೀಟ್ ಮಾಡಿದರು. ವಿಮಾನದಲ್ಲಿ ಇದ್ದ ಇಂಧನವನ್ನು ಆಧರಿಸಿ, ಕೆಲವು ನೂರು ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಶೋಧ ತೀವ್ರಗೊಳಿಸಲಾಗಿದೆ. ಅದರೆ ದಟ್ಟ ಅರಣ್ಯ ಪ್ರದೇಶವು ದೊಡ್ಡ ಸವಾಲು ಒಡ್ಡಿದೆ  ಎಂದು ವಾಯುಪಡೆ ಅಧಿಕಾರಿಯೊಬ್ಬರು ಹೇಳಿದರು.  ಇಲ್ಲಿಯವರೆಗೂ ವಿಮಾನದ ಬಗ್ಗೆ ಯಾವುದೇ ಸುಳಿವೂ ಸಿಕ್ಕಿಲ್ಲ ಎಂದು ಅವರು ನುಡಿದರು. ಭಾರತೀಯ ಸೇನೆಯ ಪದಾತಿದಳವಲ್ಲದೆ, ಭಾರತ -ಟಿಬೆಟ್ ಗಡಿ ಪೊಲೀಸ್ ಪಡೆ, ಸಿ-೧೩೦ಜೆ ಹರ್ಕುಲಿಸ್ ವಿಶೇಷ ಕಾರ್‍ಯಾಚರಣಾ ವಿಮಾನ, ಅಮೆರಿಕ ನಿರ್ಮಿತ ನೌಕಾ ಕಣ್ಗಾವಲು ವಿಮಾನ -ಪಿ೮ಐ ಮತ್ತು ರಶ್ಯಾ ನಿರ್ಮಿತ ಎಂಐ-೧೭ ಹೆಲಿಕಾಪ್ಟರುಗಳು ಮತ್ತು ಅತ್ಯಾಧುನಿಕ ಹಗುರ ಹೆಲಿಕಾಪ್ಟರುಗಳು ಶೋಧ ಕಾರ್‍ಯದಲ್ಲಿ ನಿಯೋಜನೆಗೊಂಡಿವೆ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.  ಏಎನ್ -೩೨ ವಿಮಾನ ಈ ಹಿಂದೆಯೂ ಅಪಘಾತಕ್ಕೆ ಈಡಾದ ಉದಾಹರಣೆಗಳಿವೆ. ೨೦೧೬ರಲ್ಲಿ ೨೯ ಜನರಿದ್ದ ಎಎನ್ -೩೨ ವಿಮಾನವೊಂದು ಬಂಗಾಳ ಕೊಲ್ಲಿಯಲ್ಲಿ ಪತನಗೊಂಡಿತ್ತು. ದಶಕದ ಹಿಂದ ಪಶ್ಚಿಮ ಸಿಯಾಂಗ್‌ನಲ್ಲಿ ಎಎಎನ್-೩೨ ವಿಮಾನ ದುರಂತಕ್ಕೆ ಈಡಾಗಿ ಅದರಲ್ಲಿದ್ದ ಎಲ್ಲ ೧೩ ಮಂದಿಯೂ ಸಾವನ್ನಪ್ಪಿದ್ದರು. ದುರಂತದ ೨೪ ಗಂಟೆಗಳ ಬಳಿಕ ಸಮುದ್ರ ಮಟ್ಟದಿಂದ ೧೨,೦೦೦ ಅಡಿ ಎತ್ತರದ ಪ್ರದೇಶದಲ್ಲಿ ಶೋಧ ತಂಡವು ಈ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿತ್ತು. ೧೯೯೯ರ ಮಾರ್ಚ್ ತಿಂಗಳಲ್ಲಿ ಇನ್ನೊಂದು ಎಎನ್-೩೨ ವಿಮಾನ ಪಾಲಂ ಬಳಿ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ ಎಲ್ಲ ೧೮ ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದರು.


2018: ಭುವನೇಶ್ವರ/ಪುರಿ : ಹನ್ನೆರಡನೇ ಶತಮಾನದ ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬೀಗದ ಕೈ ಕಣ್ಮರೆಯಾಗಿರುವುದಾಗಿ ವರದಿಗಳು ತಿಳಿಸಿದವು.
ಪುರಿಯ ಶ್ರೀ ಶಂಕರಾಚಾರ್ಯ, ಸ್ವಾಮಿ ನಿಶ್ಚಲಾನಂದ ಸರಸ್ವತಿ ಮತ್ತು ಭಾರತೀಯ ಜನತಾ ಪಕ್ಷದ ಪ್ರಬಲ ಪ್ರತಿಭಟನೆಯ ಬಳಿಕ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು ಸೋಮವಾರ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದರು.  ಕಳೆದ ಏಪ್ರಿಲ್ ೪ರಂದು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯ ಸಭೆ ನಡೆದಾಗಲೇ ರತ್ನ ಭಂಡಾರದ ಬೀಗದ ಕೈ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿತ್ತು.   ಸುಮಾರು ೩೪ ವರ್ಷಗಳ ಬಳಿಕ ಕಳೆದ ಏಪ್ರಿಲ್ ೪ರಂದು ಒಡಿಶಾ ಹೈಕೋರ್ಟ್ ಆದೇಶದ ಪ್ರಕಾರ ದೇವಾಲಯದ ರತ್ನ ಭಂಡಾರದ ಸ್ಥಿತಿಗತಿಯನ್ನು ಪರಿಶೀಲಿಸಲು ೧೬ ಸದಸ್ಯರ ತಂಡವು ಬಿಗಿ ಭದ್ರತೆಯೊಂದಿಗೆ ಭಂಡಾರವನ್ನು ಪ್ರವೇಶಿಸಬೇಕಾಗಿತ್ತು. ೨೦೧೬ರಲ್ಲಿ  ಭಾರತದ ಪ್ರಾಕ್ತನ ಸರ್ವೇಕ್ಷಣ ಇಲಾಖೆ (ಎಎಸ್ ಐ) ಕೈಗೊಂಡಿದ್ದ ದುರಸ್ತಿ ಕಾರ್ಯದ ಉಸ್ತುವಾರಿ ನಡೆಸಿದ್ದ  ಕೋರ್ಟ್, ರತ್ನ ಭಂಡಾರ ಕಟ್ಟಡದ ಭದ್ರತೆ ಮತ್ತು ಸುರಕ್ಷೆಯನ್ನು ಪರಿಶೀಲಿಸುವಂತೆ ಎಎಸ್‌ಐಗೆ ನಿರ್ದೇಶಿಸಿತ್ತು.  ಏ.೪ರಂದು ರತ್ನ ಭಂಡಾರ ಪ್ರವೇಶಿಸಬೇಕಾಗಿದ್ದ ತಂಡಕ್ಕೆ ಭಂಡಾರದ ಬೀಗದ ಕೈ ಸಿಗದೇ ಇದ್ದ ಕಾರಣ ಒಳಪ್ರವೇಶ ಸಾಧ್ಯವಾಗಿರಲಿಲ್ಲ. ಆಗ ಅದು ಸರ್ಚ್ ಲೈಟ್ ನೆರವಿನಿಂದ ಹೊರಗಿನಿಂದಲೇ ಕಬ್ಬಿಣದ ಸರಳುಗಳ ಮೂಲಕ ಒಳಗಿನ ಭಾಗವನ್ನು ವೀಕ್ಷಿಸಿತ್ತು.   ೧೨ನೇ ಶತಮಾನದ ಈ ಪ್ರಾಚೀನ ದೇವಾಲಯದ ರತ್ನ ಭಂಡಾರ ಒಟ್ಟು ೭ ಕೋಣೆಗಳನ್ನು ಹೊಂದಿದೆ. ಮೊದಲ ಎರಡು ಕೋಣೆಗಳನ್ನು ಕಾಲಕಾಲಕ್ಕೆ ಉಪಯೋಗಿಸಲಾಗಿದೆ. ಉಳಿದ ಕೋಣೆಗಳು ಒಳಗಿನ ಸಾಲಿನಲ್ಲಿ ಇವೆ.
ಜಗನ್ನಾಥ ದೇವಾಲಯದ ಆಡಳಿತ ಸಮಿತಿಯ ಬಳಿಯಾಗಲೀ ಪುರಿ ಜಿಲ್ಲಾ ಭಂಡಾರದಲ್ಲಾಗಲೀ ರತ್ನ ಭಂಡಾರದ ಬೀಗದ ಕೈಗಳು ಇಲ್ಲ ಎಂದು ರಾಮಚಂದ್ರ ದಾಸ ಮಹಾಪಾತ್ರ ತಿಳಿಸಿದರು.  ಈ ಬಗ್ಗೆ ಪುರಿಯ ಶ್ರೀ ಶಂಕರಾಚಾರ್ಯರು ಮತ್ತು ಬಿಜೆಪಿ ಪತ್ರ ಮೂಲಕ ಒಡಿಶಾ ಮುಖ್ಯಮಂತ್ರಿಯಿಂದ ಸ್ಪಷ್ಟನೆ ಕೇಳಿದರು.  ಬೀಗದ ಕೈಗಳು ಎಲ್ಲಿ, ಹೇಗೆ, ಯಾವಾಗ ನಾಪತ್ತೆಯಾದವು ಎಂಬ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಡಲೇಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಪೀತಾಂಬರ ಆಚಾರ್ಯ  ಆಗ್ರಹಿಸಿದರು.
  
2018: ಬೆಂಗಳೂರು: ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಖ್ಯಾತ ನಟ ಕಮಲ್ ಹಾಸನ್ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೊತೆಗೆ ಮಾತುಕತೆ ನಡೆಸಿದರು. ಕಾವೇರಿ ವಿವಾದ ಇತ್ಯರ್ಥಕ್ಕಾಗಿ ತಾವು ಸಂಧಾನ ಸೇತುವೆಯಾಗಲು ಸಿದ್ಧ ಎಂದು ಕಮಲ್ ಹಾಸನ್ ನುಡಿದರು.  ಉಭಯ ನಾಯಕರು ಕಾವೇರಿ ನದಿ ನೀರಿನ ವಿವಾದ ಹಾಗೂ ಬಿಡುಗಡೆಯಾಗಬೇಕಾಗಿರುವ ಕಮಲ್ ಹಾಸನ್ ಅವರ ’ಕಾಲಾ ಚಿತ್ರಕ್ಕೆ ಸಂಬಂಧಿಸಿಂತೆ ಸುಮಾರು ೧೦ ನಿಮಿಷಕ್ಕೂ ಹೆಚ್ಚು ಕಾಲ ಚರ್ಚಿಸಿದರು. ಮಾತುಕತೆಯ ಬಳಿಕ ಕಮಲ್ ಹಾಸನ್ ಮತ್ತು ಕುಮಾರ ಸ್ವಾಮಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.  ‘ನಾವು ಉಭಯ ರಾಜ್ಯದವರೂ ಸಹೋದರತ್ವದಿಂದ ಬಾಳಬೇಕಾಗಿದೆ. ನಾನು ಸರ್ಕಾರದ ಪ್ರತಿನಿಧಿಯಾಗಿ ಕರ್ನಾಟಕಕ್ಕೆ ಬಂದಿಲ್ಲ, ಜನರ ಪ್ರತಿನಿಧಿಯಾಗಿ ಬಂದಿದ್ದೇನೆ. ಅಷ್ಟೇ ಅಲ್ಲ ಕುರುವೈ ಬೆಳೆಗೆ ನೀರು ಕೇಳಲು ಬಂದಿದ್ದೇನೆ. ನನಗೆ ಈ ಸಂದರ್ಭದಲ್ಲಿ ಸಿನಿಮಾಗಿಂತ ಕಾವೇರಿ ವಿಷಯವೇ ಮುಖ್ಯ ಎಂದು ಕಮಲ್ ಹಾಸನ್ ನುಡಿದರು.  ‘ಕಾವೇರಿ ನಾವು ಹುಟ್ಟುವ ಮೊದಲೇ ಇತ್ತು. ಆದರೆ ನಾವೀಗ ಕಚ್ಚಾಡಿಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ಎರಡೂ ರಾಜ್ಯಗಳ ರೈತರೇ ಬಗೆಹರಿಸಿಕೊಳ್ಳಬೇಕು. ನಮ್ಮ ಕೊನೆಯ ಆಯ್ಕೆ ಕೋರ್ಟ್ ಆಗಿರಬೇಕಿತ್ತು. ಆದರೆ ಈಗಾಗಲೇ ಪ್ರಕರಣ ಕೋರ್ಟ್ ನಲ್ಲಿದೆ. ಆದರೂ ನಾವು ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.  ‘ಕಾಲಾ ಚಿತ್ರ ವಿವಾದದ ಬಗ್ಗೆ ನಾನು ಹೆಚ್ಚಿನ ಚರ್ಚೆ ಮಾಡಿಲ್ಲ. ಅದಕ್ಕಾಗಿ ವಾಣಿಜ್ಯ ಮಂಡಳಿ ಇದೆ. ಅವರು ನೋಡಿಕೊಳ್ಳುತ್ತಾರೆ. ನಾನು ತಮಿಳುನಾಡು ಜನತೆಯ ಪರವಾಗಿ ಬಂದಿದ್ದೇನೆ. ಕುರುವೈ ಬೆಳೆಗೆ ನೀರು ಬೇಕು. ನಮ್ಮದು ಚಿಕ್ಕ ಪಕ್ಷ, ತಮಿಳು ನಾಡು ಜನತೆಗಾಗಿ ನಾನು ಕರ್ನಾಟಕ-ತಮಿಳುನಾಡು ಸರ್ಕಾರಗಳ ನಡುವೆ ಮಧ್ಯಸ್ಥಿಕೆಗೆ ನಾನು ಸಿದ್ಧನಿದ್ದೇನೆ. ನಮ್ಮ ಕುಟುಂಬದಲ್ಲೂ ವಕೀಲರಿದ್ದಾರೆ. ಎಲ್ಲರೂ ಸಹ ಕಾವೇರಿ ವಿವಾದ ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಬೇಕೆಂದೆ ಸಲಹೆ ನೀಡಿದ್ದಾರೆ ಎಂದು ಕಮಲಹಾಸನ್ ಹೇಳಿದರು.  ನಾವು ಮತ್ತು ಕರ್ನಾಟಕದ ಜನ ಸಹೋದರರೇ ತಾನೆ... ಕಾವೇರಿ ಇಲ್ಲದೆ ಎರಡೂ ರಾಜ್ಯಗಳ ಜನತೆ ಬದುಕಲು ಸಾಧ್ಯವಿಲ್ಲ. ಹಾಗಾಗಿಯೇ ಕಾವೇರಿ ವಿವಾದದ ಕುರಿತೂ ಚರ್ಚಿಸಿದ್ದೇವೆ. ಕುಮಾರಸ್ವಾಮಿಯವರ ಮಾತಿನಿಂದ ಹೃದಯ ತುಂಬಿ ಬಂದಿದೆ ಎಂದು ಕಮಲಹಾಸನ್ ನುಡಿದರು.  ಸೌಹಾರ್ದತೆ ಇರಬೇಕು- ಎಚ್ ಡಿಕೆ: ಕರ್ನಾಟಕ ತಮಿಳುನಾಡು ನಡುವೆ ಸೌಹಾರ್ದತೆ ಇರಬೇಕು. ಎರಡೂ ರಾಜ್ಯಗಳು ಸಹೋದರ ಭಾವನೆಯಲ್ಲಿರಬೇಕು. ಈ ನಿಟ್ಟಿನಲ್ಲಿಯೇ ನಮ್ಮಿಬ್ಬರ ಚರ್ಚೆ ನಡೆಯಿತು. ನಮ್ಮ ರೈತರು ಬದುಕಬೇಕು, ತಮಿಳುನಾಡಿನ ರೈತರು ಬದುಕಬೇಕು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.  ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸೌಹಾರ್ದಯುತ ವಾತಾವಣ ಮೂಡಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ನಾವು ಚರ್ಚಿಸಿದೆವು ಎಂದು ಮುಖ್ಯಮಂತ್ರಿ ನುಡಿದರು.  ಕಾವೇರಿ ವಿವಾದ ಇಂದು ನಿನ್ನೆಯದಲ್ಲ, ಎರಡೂ ರಾಜ್ಯಗಳ ರೈತರ ನಡುವೆ ಕಾವೇರಿ ನೀರು ಹಂಚಿಕೆಯಾಗಬೇಕು. ಈ ಸಂಬಂಧ ತಮಿಳುನಾಡು ಸರ್ಕಾರದ ಜತೆಯೂ ಮಾತುಕತೆಗೆ ನಾನು ಸಿದ್ಧ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನವಾಗಿ ಹೋಗಬೇಕು ಎಂದು ಕುಮಾರ ಸ್ವಾಮಿ ಹೇಳಿದರು.

2018: ಚೆನ್ನೈ:  ಜೆ. ಜಯಲಲಿತಾ ಅವರ ಆಪ್ತ ವೈದ್ಯ ಶಿವಕುಮಾರ್ ಮತ್ತು ಜಯಲಲಿತಾ ಅವರ ನಿಕಟವರ್ತಿ ವಿ.ಕೆ. ಶಶಿಕಲಾ ಅವರು ಜಯಲಲಿತಾ ಅವರ ಅಸ್ವಸ್ಥತೆಗೆ ಸಂಬಂಧಿಸಿದಂತೆ ಒಂದೇ ವೇಳೆಯಲ್ಲಿ ಘಟಿಸಿದ ಘಟನೆಗಳ ಬಗ್ಗೆ ನೀಡಿರುವ ವಿಭಿನ್ನ ಹೇಳಿಕೆಗಳು ದಿವಂಗತ ಮುಖ್ಯಮಂತ್ರಿಯ ಕೊನೆದಿನಗಳಿಗೆ ಸಂಬಂಧಿಸಿದ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿದವು.  ಶಿವಕುಮಾರ್ ಅವರು ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತನಿಖಾ ಆಯೋಗಕ್ಕೆ ನೀಡಿರುವ ತಮ್ಮ ಹೇಳಿಕೆಯಲ್ಲಿ ತಮಗೆ ೨೦೧೬ರ ಸೆಪ್ಟೆಂಬರ್ ೨೨ ರಂದು ರಾತ್ರಿ ಸುಮಾರು ೭ ಗಂಟೆಗೆ ವಿಕೆ ಶಶಿಕಲಾ ಅವರಿಂದ ’ನಾಯಕಿಯು ಕೆಮ್ಮಿನ ಸಮಸ್ಯೆ ಹಾಗೂ ಜ್ವರದಿಂದ ನರಳುತ್ತಿದ್ದಾರೆ ಎಂಬುದಾಗಿ ದೂರವಾಣಿ ಕರೆ ಬಂತು’ ಎಂದು ತಿಳಿಸಿದರು.  ಆದರೆ ಶಶಿಕಲಾ ಅವರು ನ್ಯಾಯಮೂರ್ತಿ ಎ. ಅರ್ಮುಗಸ್ವಾಮಿ ಆಯೋಗಕ್ಕೆ ನೀಡಿರುವ ೮೮ ಪ್ಯಾರಾಗಳ ತಮ್ಮ ಪ್ರಮಾಣಪತ್ರದಲ್ಲಿ ದೂರವಾಣಿ ಕರೆ ಬಗ್ಗೆ ಪ್ರಸ್ತಾಪವನ್ನೇ ಮಾಡದೇ ಇರುವುದು ಜಯಲಲಿತಾ ಸಾವಿಗೆ ಸಂಬಂಧಿಸಿದ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿತು.
ಶಶಿಕಲಾ ಅವರು ತಮ್ಮ ಪ್ರಮಾಣಪತ್ರದ ೨೮ನೇ ಪ್ಯಾರಾದಲ್ಲಿ ’ಜಯಲಲಿತಾ ಅವರು ತುಂಬಾ ಸುಸ್ತಾಗಿರುವಂತೆ ಕಂಡ ಕಾರಣ ಆಸ್ಪತ್ರೆಗೆ ತೆರಳಲು ನಾನು ಸಲಹೆ ಮಾಡಿದೆ ಎಂದು ತಿಳಿಸಿದ್ದಾರೆ.  ಆದರೆ ದಿವಂಗತ ಮುಖ್ಯಮಂತ್ರಿ ’ಅದು ಅನಗತ್ಯ ಎಂದು ಹೇಳಿ ಸಲಹೆಯನ್ನು ತಳ್ಳಿಹಾಕಿದರು ಎಂದು ಶಶಿಕಲಾ ತಿಳಿಸಿದ್ದರು.  ‘ಜಯಲಲಿತಾ ಅವರ ಜ್ವರ ಬಳಿಕ ತಾನಾಗಿಯೇ ಕಡಿಮೆಯಾಯಿತು ಮತ್ತು ಡಾ. ಶಿವಕುಮಾರ್ ಅವರು ಫೋಸ್ ಗಾರ್ಡನ್ ನಿವಾಸಕ್ಕೆ ರಾತ್ರಿ ಸುಮಾರು ೯ ಗಂಟೆಗೆ ಅವರನ್ನು (ಜಯಲಲಿತಾ) ನೋಡಲು ಬಂದರು ಎಂದು ಶಶಿಕಲಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು.  ಏನಿದ್ದರೂ ಡಾ. ಶಿವಕುಮಾರ್ ಅವರ ಪ್ರಮಾಣ ಪತ್ರದ ಪ್ರಕಾರ ಜಯಲಲಿತಾ ಅವರು ಸಂಜೆ ತಾನು ಮಾತನಾಡುವಾಗ ಮಾಮೂಲಿಯಾಗಿಯೇ ಇದ್ದರು. ರಾತ್ರಿ ೭ ಗಂಟೆ ಸುಮಾರಿಗೆ ಶಶಿಕಲಾ ಅವರು ತಮಗೆ ಕರೆ ಮಾಡಿ ಮುಖ್ಯಮಂತ್ರಿಯವರ ಆರೋಗ್ಯ ಬಗ್ಗೆ ತಿಳಿಸಿದರು. ತಾವು ರಾತ್ರಿ ೮.೪೫ರ ವೇಳೆಗೆ ಜಯಲಲಿತಾ ನಿವಾಸಕ್ಕೆ ತಲುಪಿದುದಾಗಿ ಶಿವಕುಮಾರ್ ಹೇಳಿದರು.  ಶಿವಕುಮಾರ್ ಅವರು ತಮ್ಮ ಹೇಳಿಕೆಯಲ್ಲಿ ತಾವು ಭೇಟಿ ನೀಡಿದಾಗ ಜಯಲಲಿತಾ ನಿವಾಸದಲ್ಲಿ ತಮಗೆ ಪರಿಚಿತರಲ್ಲದ ಆದರೆ ತಾನು ಗುರುತಿಸಬಹುದಾದ ಇಬ್ಬರು ಕೆಲಸಗಾರರು ಇದ್ದರು ಎಂದು ತಿಳಿಸಿದರು.  ಆದರೆ  ಮೊದಲ ಮಹಡಿಯಲ್ಲಿನ ದಿವಂಗತ ಮುಖ್ಯಮಂತ್ರಿಯ ಕೊಠಡಿಯಲ್ಲಿ ಆದಿನ ಏನೇನೇನಾಯಿತು ಎಂಬ ವಿವರಗಳನ್ನು ಒದಗಿಸಿರುವ ಶಶಿಕಲಾ ಅವರ ಹೇಳಿಕೆಯು ಜಯಲಲಿತಾ ನಿವಾಸದಲ್ಲಿದ್ದ ಕೆಲಸಗಾರರ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ.  ಜಯಲಲಿತಾ ಅವರಿಗೆ ಪ್ರಜ್ಞೆ ತಪ್ಪುವ ಮುನ್ನ ಏನೇನಾಯಿತು ಎಂಬ ಬಗ್ಗೆ ಶಿವಕುಮಾರ್ ಮತ್ತು ಶಶಿಕಲಾ ಅವರು ನೀಡಿರುವ ವಿವರಣೆಗಳಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ.  ‘ನಾನು ಮೊದಲ ಮಹಡಿಯ ಕೊಠಡಿಯಲ್ಲಿ ಅಕ್ಕ ಜೊತೆಗಿದ್ದಾಗ, ರಾತ್ರಿ ಸುಮಾರು ೯.೩೦ರ ಸುಮಾರಿಗೆ, ಜಯಲಲಿತಾ ಅವರು ಹಲ್ಲುಜ್ಜುವ ಸಲುವಾಗಿ ಸ್ನಾನ ಗೃಹದತ್ತ್ತ ನಿಧಾನವಾಗಿ ನಡೆಯುತ್ತ ಹೊರಟರು. ಬಾಯಿ ತೊಳೆದ ಬಳಿಕ ಅವರು ಸ್ನಾನಗೃಹದಿಂದಲೇ ’ಶಶಿ, ತಲೆ ಸುತ್ತು ಬರುತ್ತಿದೆ, ಇಲ್ಲಿಗೆ ಬಾ ಎಂದು ಕರೆದರು. ನಾನು ಸ್ನಾನಗೃಹದತ್ತ ಧಾವಿಸಿದೆ ಮತ್ತು ಜಯಲಲಿತಾ ಅವರನ್ನು ಅವರ ಮಂಚದವರೆಗೆ ಕರೆತಂದು ಮಂಚದಲ್ಲಿ ಕೂರಿಸಿದೆ, ನಾನೂ ಬಳಿಯಲ್ಲೇ ಕುಳಿತೆ.  ಆಗ ದಿಢೀರನೆ ಆಕೆ ಪ್ರಜ್ಞೆ ಕಳೆದುಕೊಂಡು ನನ್ನ ಭುಜದ ಮೇಲೆ ಒರಗಿದರು. ಆ ವೇಳೆಗೆ ಶಿವಕುಮಾರ್ ಕೊಠಡಿಯನ್ನು  ಪ್ರವೇಶಿಸಿದರು ಎಂದು ಶಶಿಕಲಾ ಹೇಳಿಕೆ ತಿಳಿಸಿತ್ತು. ಆದರೆ ಶಿವಕುಮಾರ್ ಅವರು ತಾವು ದಿವಂಗತ ಮುಖ್ಯಮಂತ್ರಿಯ ನಿವಾಸಕ್ಕೆ ಭೇಟಿ ನೀಡಿದಾಗ, ಅವರು ಕೆಮ್ಮುತ್ತಿದ್ದರು ಮತ್ತು ಜ್ವರದಿಂದ ನರಳುತ್ತಿದ್ದರು. ಜಯಲಲಿತಾ ಅವರು ತನ್ನ ಬಳಿ ಅಲ್ಲಿಂದ ತೆರಳುವಂತೆ  ಸೂಚಿಸಿದರು. ಆದರೆ ತಾನು ಅಲ್ಲೇ ಉಳಿದೆ ಮತ್ತು ಅಪೋಲೋ ಆಸ್ಪತ್ರೆಯ ವ್ಯಕ್ತಿಯೊಬ್ಬರಿಗೆ ನೆಬ್ಯುಲೆಸರ್ ತರುವಂತೆ ಫೋನ್ ಮೂಲಕ ತಿಳಿಸಿದೆ ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದರು.  ‘ಜಯಲಲಿತಾ ಅವರು ಯಾರ ನೆರವೂ ಇಲ್ಲದೆ ಸ್ನಾನಗೃಹದತ್ತ ಹೋದರು, ಬಳಿಕ ನಿರಂತರ ಕೆಮ್ಮಲು ಆರಂಭಿಸಿದರು. ಅಲ್ಲಿಂದ ಹಿಂದಕ್ಕೆ ಬಂದವರೇ ತಮ್ಮ ಹಾಗೂ ಶಶಿಕಲಾ ಮೇಲೆ ಒರಗಿದರು. ತತ್ ಕ್ಷಣವೇ ನಾನು ಪ್ರೀತಾರೆಡ್ಡಿ (ಅಪೋಲೋ ಆಸ್ಪತ್ರೆಯ ಉನ್ನತ ಎಕ್ಸಿಕ್ಯೂಟಿವ್) , ವಿಜಯಕುಮಾರ್ ಅವರಿಗೆ ಕರೆ ಮಾಡಿ ತುರ್ತು ಆಂಬುಲೆನ್ಸ್ ಕಳುಹಿಸುವಂತೆ ಕೋರಿದೆ ಎಂದು ಶಶಿಕುಮಾರ್ ಹೇಳಿಕೆ ತಿಳಿಸಿತು. ಜಯಲಲಿತಾ ಅವರು ಆಂಬುಲೆನ್ಸಿನಲ್ಲಿ ಪ್ರಜ್ಞಾವಸ್ಥೆಗೆ ಮರಳಿದರು ಮತ್ತು ತಾನು ಎಲ್ಲಿದ್ದೇನೆ ಎಂಬುದಾಗಿ ಪ್ರಶ್ನಿಸಿದರು ಎಂದು ಶಶಿಕಲಾ ಹೇಳಿಕೆ ತಿಳಿಸಿದರೆ, ದಿವಂಗತ ಮುಖ್ಯಮಂತ್ರಿಯವರು ಅಪೋಲೋ ಆಸ್ಪತ್ರೆಯಲ್ಲಿ ಇಸಿಜಿ ಮತ್ತು ಇತರ ಕೆಲವು ಪರೀಕ್ಷೆಗಳ ಬಳಿಕ ತಾವು ಎಲ್ಲಿರುವುದಾಗಿ ತನ್ನನ್ನು ಕೇಳಿದರು ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದರು.  ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ವಾರ್ಡಿನ ಹೊರಭಾಗದಲ್ಲಿ ಸೆಪ್ಟೆಂಬರ್ ೨೨ರ ರಾತ್ರಿ ಯಾವ ಅಧಿಕಾರಿಗಳು ಇದ್ದರು ಎಂಬ ಬಗೆಗೂ ಉಭಯರ ಹೇಳಿಕೆಗಳಲ್ಲಿ ಭಿನ್ನ ಅಂಶಗಳಿವೆ. ಜಯಲಲಿತಾ ಅವರು ಮುಖ್ಯಕಾರ್‍ಯದರ್ಶಿ ರಾಮಮೋಹನ ರಾವ್, ಸಲಹೆಗಾರ್ತಿ ಶೀಲಾ ಬಾಲಕೃಷ್ಣನ್ ಮತ್ತು ಇತರ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಅಪೋಲೋ ಆಸ್ಪತ್ರೆಗೆಯ ಉನ್ನತ ಎಕ್ಸಿಕ್ಯೂಟಿವ್ ಗಳು ಇದ್ದುದನ್ನು ಜಯಲಲಿತಾ ಅವರು ಗುರುತಿಸಿದರು ಎಂದು ಶಶಿಕಲಾ ಹೇಳಿದರೆ, ಅಪೋಲೋ ಆಸ್ಪತ್ರೆಯಲ್ಲಿ ಯಾರೇ ಸರ್ಕಾರಿ ಅಧಿಕಾರಿಗಳನ್ನು ಕಂಡದ್ದು ತಮಗೆ ನೆನಪಿಲ್ಲ ಎಂದು ಶಿವಕುಮಾರ್ ಹೇಳಿದರು. ೬೮ರ ಹರೆಯದ ಜಯಲಲಿತಾ ಅವರು ೨೦೧೬ರ ಡಿಸೆಂಬರ್ ತಿಂಗಳಲ್ಲಿ ನಿಧನರಾಗಿದ್ದು, ಅವರ ದೇಹಸ್ಥಿತಿ ಕುರಿತ ರಹಸ್ಯ ಹಾಗೂ ಅವರ ಭೇಟಿಗೆ ಇದ್ದ ಸೀಮಿತ ಅವಕಾಶಗಳ ಹಿನ್ನೆಲೆಯಲ್ಲಿ ತೀವ್ರ ಪ್ರಶ್ನೆಗಳು ಉದ್ಭವಿಸಿದ್ದವು.

2018: ಪ್ರಿಟೋರಿಯಾ: ಅಂತರಾಷ್ಟ್ರೀಯ ವಾಣಿಜ್ಯ ಮತ್ತು ನಿಯಮ ಆಧಾರಿತ ಜಗತ್ತಿನ ವ್ಯವಸ್ಥೆಗೆ ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ತೀವ್ರವಾದದಿಂದ ವಿಮುಕ್ತಗೊಳಿಸುವಿಕೆ ಸವಾಲಾಗಿದ್ದು ಈ ನಿಟ್ಟಿನಲ್ಲಿ ಜಂಟಿ ಕಾರ್‍ಯಾಚರಣೆಯ ಅಗತ್ಯವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಇಲ್ಲಿ ಹೇಳಿದರು. ದಕ್ಷಿಣ ಆಫ್ರಿಕಾಕ್ಕೆ ಐದು ದಿನಗಳ ಭೇಟಿ ನೀಡಿರುವ ಸ್ವರಾಜ್ ಅವರು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ- ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಂಡರು. ಸಭೆಯು ಜೋಹಾನ್ಸ್ ಬರ್ಗ್ ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಾರ್ಷಿಕ ಶೃಂಗಸಭೆಗೆ ಅಡಿಗಟ್ಟು ಹಾಕುವ ನಿರೀಕ್ಷೆ ಇದೆ.  ‘ಇಲ್ಲಿನ ನಮ್ಮ ಕಲಾಪಗಳು ಬ್ರಿಕ್ಸ್ ಸಹಕಾರವನ್ನು ಇನ್ನಷ್ಟು ಸಮೃದ್ಧಗೊಳಿಸುವತ್ತ ಕಾಣಿಕೆ ನೀಡಲಿವೆ ಎಂದು ಸಚಿವೆ ನುಡಿದರು.  ‘ಅಂತರ್ ಬ್ರಿಕ್ಸ್ ಸಹಕಾರ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬ್ರಿಕ್ಸ್ ಪಾತ್ರಕ್ಕೆ ಭಾರತ ಹೆಚ್ಚಿನ ಮಹತ್ವ ನೀಡಿದೆ ಎಂದು ಸುಷ್ಮಾ ಹೇಳಿದರು. ದೂರಗಾಮೀ ಬೆಳವಣಿಗೆಯ ಸವಾಲುಗಳನ್ನು ಎದುರಿಸಲು ಜಂಟಿ ಕ್ರಮಕ್ಕಾಗಿ ಕರೆ ನೀಡಿದ ಅವರು ಬಹುಪಕ್ಷೀಯತೆ, ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ನಿಯಮ ಆಧಾರಿತ ವಿಶ್ವ ವ್ವವಸ್ಥೆ ಪ್ರಬಲ ಸವಾಲು ಎದುರಿಸುತ್ತಿರುವ ಹೊತ್ತಿನಲ್ಲಿ ನಾವು ಈ ಸಭೆ ನಡೆಸುತ್ತಿದ್ದೇವೆ ಎಂದು ನುಡಿದರು.  ಜಾಗತಿಕ ಬೆಳವಣಿಗೆ ಪುನಃಶ್ಚೇತನದ ಲಕ್ಷಣಗಳನ್ನು ತೋರಿಸುತ್ತಿದ್ದರೂ, ದೀರ್ಘಗಾಮೀ ಬೆಳವಣಿಗೆಗೆ ಎದುರಾಗಿರುವ ಸವಾಲುಗಳು ಇನ್ನೂ ಮುಂದುವರೆದಿವೆ. ಜಾಗತೀಕರಣದ ಲಾಭಗಳನ್ನು ಹಂಚಿಕೊಳ್ಳುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಹೇಳಿದರು.  ಹಣ ವರ್ಗಾವಣೆಗೆ, ಭಯೋತ್ಪಾದನೆ -ಹಣಕಾಸು, ಸೈಬರ್ ಸ್ಪೇಸ್ ಮತ್ತು ತೀವ್ರವಾದದಿಂದ ವಿಮುಕ್ತಗೊಳಿಸುವಿದೆ ಜೊತೆಗೆ ಭಯೋತ್ಪಾದನೆ ವಿರೋಧಿ ತಂತ್ರಕ್ಕಾಗಿ ಜಂಟಿ ಕ್ರಮ ಕೈಗೊಳ್ಳುವುದು ನಮ್ಮ ಆದ್ಯತೆಯಾಗಬೇಕು ಎಂಬುದಾಗಿ ಪ್ರಧಾನಿ ಮೋದಿ ಅವರು ಬ್ರಿಕ್ಸ್ ಸಭೆಗೆ ಕರೆ ಕೊಟ್ಟಿದ್ದಾರೆ ಎಂದು ಸ್ವರಾಜ್ ನುಡಿದರು.   ವಿಶ್ವ ಸಂಸ್ಥೆಯ ಭಯೋತ್ಪಾದನೆ ನಿಗ್ರಹ ಚೌಕಟ್ಟನ್ನು ದಕ್ಷ ಹಾಗೂ ಪರಿಣಾಮಕಾರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ನಾಯಕರು ಕರೆ ಕೊಟ್ಟಿದ್ದಾರೆ. ಭಯತ್ಪಾದನೆ ನಿಗ್ರಹ ನಿಟ್ಟಿನಲ್ಲಿ ನಮ್ಮ ನಾಯಕರು ನೀಡಿರುವ ಕರೆಗೆ ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ಅವರು ನುಡಿದರು.  ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವೆ ವಾಂಗ್ ಇ, ದಕ್ಷಿಣ ಆಫ್ರಿಕಾದ ಲಿಂಡ್‌ವೆ ಸಿಸುಲು, ಬ್ರೆಜಿಲ್ನ ಮಾರ್ಕೋಸ್ ಬೆಝೆರಾ ಅಬ್ಬೋಟ್ ಗಲ್ವೋ ಮತ್ತು ರಷ್ಯಾದ ಸೆರ್ಗೀ ಲಾವ್ರೋವ್ ಅವರು ಸಭೆಯಲ್ಲಿ ಪಾಲ್ಗೊಂಡಿರುವ ಇತರ ದೇಶಗಳ ವಿದೇಶಾಂಗ ಸಚಿವರು.  ಭದ್ರತೆ, ಭಯೋತ್ಪಾದನೆ ನಿಗ್ರಹ, ವಿಶ್ವ ಸಂಸ್ಥೆ ಸುಧಾರಣೆಗಳು, ಶಾಂತಿ ಪಾಲನೆ, ತೀವ್ರವಾದ ನಿವಾರಣೆ, ಸೈಬರ್ ಭದ್ರತೆ, ಇಂಧನ ಭದ್ರತೆ, ಜಾಗತಿಕ ಆಡಳಿತ, ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕವಾದ ಜ್ವಲಂತ ಸಮಸ್ಯೆಗಳು ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಗಳಲ್ಲಿ ವಿವರವಾಗಿ ಬ್ರಿಕ್ಸ್ ಸಹಕಾರದ ನಿಟ್ಟಿನಲ್ಲಿ ಚರ್ಚೆಯಾಗಲಿರುವ ವಿಷಯಗಳು ಎಂದು ಸಉಷ್ಮಾ ಹೇಳಿದರು.  ಎನ್ ಎಸ್ ಎಗಳ ಸಭೆಯಲ್ಲಿ ಬ್ರಿಕ್ಸ್ ಭದ್ರತಾ ವೇದಿಕೆ ರಚನೆ ಕುರಿತು ಕೈಗೊಳ್ಳಲಾಗಿದೆ ನಿರ್ಧಾರವನ್ನು ಇದೀಗ ಅನುಷ್ಠಾನಗೊಳಿಸಲಾಗಿದೆ ಎಂಬುದು ಅತ್ಯಂತ ಗಮನಾರ್ಹ ವಿಚಾರ ಎಂದು ಸ್ವರಾಜ್ ನುಡಿದರು.

2018: ನವದೆಹಲಿ: ಮೇಘಾಲಯದ ಶಿಲ್ಲಾಂಗ್ ನಗರದ ಪಂಜಾಬಿ ಲೈನ್ ಪ್ರದೇಶದ ನಿವಾಸಿಗಳು ಮತ್ತು ರಾಜ್ಯ ಸ್ವಾಮ್ಯದ ಬಸ್ಸುಗಳ ಖಾಸಿ ಚಾಲಕರ ನಡುವಣ ಘರ್ಷಣೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸುಮಾರು ೧೦೦೦ ಅರೆಸೇನಾ ಸಿಬ್ಬಂದಿಯನ್ನು ಶಿಲ್ಲಾಂಗಿಗೆ ರವಾನಿಸಲಾಯಿತು.. ಮೇಘಾಲಯದ ರಾಜಧಾನಿಯು ಪಂಜಾಬಿ ಲೈನ್ ಪ್ರದೇಶದ ನಿವಾಸಿಗಳು ಮತ್ತು ರಾಜ್ಯ ಸ್ವಾಮ್ಯದ ಬಸ್ಸುಗಳ ಖಾಸಿ ಚಾಲಕರ ನಡುವಣ ಘರ್ಷಣೆ ಪರಿಣಾಮವಾಗಿ ಗುರುವಾರದಿಂದ ಹಿಂಸಾಚಾರದ ಕಪಿಮುಷ್ಟಿಗೆ ಸಿಲುಕಿದೆ.  ಕೇಂದ್ರ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳು ಮೇಘಾಲಯ ರಾಜಧಾನಿಯ ಪರಿಸ್ಥಿತಿ ಬಗ್ಗೆ ರಾಜ್ಯ ಅಧಿಕಾರಿಗಳಿಂದ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿದವು. ರಾಜ್ಯ ಸರ್ಕಾರದ ಮನವಿ ಮೇರೆಗೆ ಶಿಲ್ಲಾಂಗ್ ಪರಿಸ್ಥಿತಿ ನಿಯಂತ್ರಿಸಲು ಕೇಂದ್ರೀಯ ಪಡೆಗಳನ್ನು ಕಳುಹಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದರು.  ತಲಾ ೧೦೦ ಸಿಬ್ಬಂದಿ ಇರುವ ಅರೆಸೇನಾ ಪಡೆಗಳ ೧೦ ಕಂಪೆನಿಗಳನ್ನು ಮೇಘಾಲಯಕ್ಕೆ ಕಳುಹಿಸಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.
ಪೊಲೀಸರು ಮತ್ತು ಸ್ಥಳೀಯರ ಮಧ್ಯೆ ಶುಕ್ರವಾರದಿಂದೀಚೆಗೆ ನಡೆಯುತ್ತಿರುವ ಘರ್ಷಣೆಗಳನ್ನು ಅನುಸರಿಸಿ ಶನಿವಾರದಿಂದ ಮೇಘಾಲಯ ರಾಜಧಾನಿಯಲ್ಲಿ ಕರ್ಫ್ಯೂ ವಿಧಿಸಲಾಯಿತು. ಸೇನಾ ಪಥ ಸಂಚಲನ: ನಗರದ ವಿವಿಧ ಬಡಾವಣೆಗಳಲ್ಲಿ ಶುಕ್ರವಾರ ತಡರಾತ್ರಿ ಸೇನೆ ಪಥಸಂಚಲನವನ್ನೂ ನಡೆಸಿತ್ತು. ರಾಜ್ಯ ಸಾರಿಗೆ ಬಸ್ಸುಗಳ ಚಾಲಕರು ಮತ್ತು ಸ್ಥಳೀಯರ ಮಧ್ಯೆ ಸ್ವೀಪರ್‍ಸ್ ಲೇನ್ ಎಂದು ಪರಿಚಿತವಾಗಿರುವ ಲ್ಯೂ ಮಾವ್ಲೊಂಗ್ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಘರ್ಷಣೆ ಉಂಟಾಗಿತ್ತು.  ಪ್ರದೇಶದ ಹುಡುಗಿಯೊಬ್ಬಳನ್ನು ಬಸ್ಸೊಂದರ ಚಾಲಕ ಚುಡಾಯಿಸಿದ್ದು ಬುಡಕಟ್ಟು ಜನರು ಮತ್ತು ದಲಿತರ ಮಧ್ಯೆ ಘರ್ಷಣೆಗೆ ಕಾರಣವಾಯಿತು ಎಂದು ಒಂದು ವರದಿ ತಿಳಿಸಿದೆ. ಇನ್ನೊಂದು ವರದಿಯ ಪ್ರಕಾರ ನೀರು ಸಂಗ್ರಹ ಜಾಗದ ಬಳಿ ಬಸ್ಸು ನಿಲ್ಲಿಸಿ ಮಾರ್ಗವನ್ನು ತಡೆದದ್ದನ್ನು ಪ್ರದೇಶದ ಮಹಿಳೆಯರು ಆಕ್ಷೇಪಿಸಿದ ಪರಿಣಾಮವಾಗಿ ಘರ್ಷಣೆ ಶುರುವಾಯಿತು ಎಂದು ಹೇಳಲಾಯಿತು. ಈ ಘರ್ಷಣೆಯಲ್ಲಿ ಬಸ್ಸಿನಲ್ಲಿದ್ದ ಬುಡಕಟ್ಟು ಬಾಲಕನೊಬ್ಬ ಗಾಯಗೊಂಡ ಎಂದು ಹೇಳಲಾಗಿದೆ. ಆದರೆ ಬುಡಕಟ್ಟು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಎಂಬುದಾಗಿ ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳು ಹರಡಿದ್ದು ಶಿಲ್ಲಾಂಗಿನಲ್ಲಿ ಕೋಮು ಘರ್ಷಣೆಗೆ ಕಾರಣವಾಯಿತು ಎಂದು ಹೇಳಲಾಯಿತು.


2018: ನವದೆಹಲಿ: ೨೦೧೮ರ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶ ಪ್ರಕಟಗೊಂಡಿತು.  ಬಿಹಾರ ಮೂಲದ ಕಲ್ಪನಾ ಕುಮಾರಿ ಮೊದಲ ರಾಂಕ್ ಪಡೆದರು.   ಕಲ್ಪನಾ ಕುಮಾರಿ ಅವರು ೭೨೦ರಲ್ಲಿ ೬೯೧ ಅಂಕ ( ಶೇ.೯೯.೯೯) ಪಡೆಯುವ ಮೂಲಕ ಸಿಬಿಎಸ್ ಇ ನೀಟ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದರು. ಅವರು ಭೌತಶಾಸ್ತ್ರದಲ್ಲಿ ೧೭೧ (೧೮೦ರಲ್ಲಿ) ಅಂಕ, ರಸಾಯನ ಶಾಸ್ತ್ರ ೧೬೦ (೧೮೦ರಲ್ಲಿ), ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಲ್ಲಿ ೩೬೦ರಲ್ಲಿ ೩೬೦ ಅಂಕ ಗಳಿಸಿದರು.  ತೆಲಂಗಾಣದ ರೋಹನ್ ಪುರೋಹಿತ್ ಹಾಗೂ ದೆಹಲಿಯ ಹಿಮಾಂಶು ಶರ್ಮಾ ೬೯೦ ಅಂಕ ಗಳಿಸಿ ದ್ವಿತೀಯ ರಾಂಕ್ ಪಡೆದಿದ್ದು, ದೆಹಲಿಯ ಆರೋಷ್ ಧಾಮಿಜಾ ಹಾಗೂ ರಾಜಸ್ಥಾನದ ಪ್ರಿನ್ಸ್ ಚೌಧರಿ ೬೮೬ ಅಂಕ ಪಡೆದು ತೃತೀಯ ರಾಂಕ್ ಗಳಿಸಿದರು.  ವರುಣ್ ಮುಪ್ಪಿಡಿ ೬೮೫ ಅಂಕ ಗಳಿಸಿ ನಾಲ್ಕನೇ ರಾಂಕ್ ಪಡೆದರು.  ಪ್ರಸಕ್ತ ಸಾಲಿನಲ್ಲಿ ಒಟ್ಟು ೧೩.೩೬ ಲಕ್ಷ ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದು ಕಳೆದ ವರ್ಷಕ್ಕಿಂತ ಶೇ.೧೬.೪೯ರಷ್ಟು ಹೆಚ್ಚು. ಇದರಲ್ಲಿ ೧೨.೬೯ ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ೭.೧೪ ಲಕ್ಷ ಅಭ್ಯರ್ಥಿಗಳು ತೇರ್ಗಡೆ ಹೊಂದಿದರು.  ಉತ್ತರಪ್ರದೇಶದ ೭೬,೭೭೮ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾದರು.  ಅದೇ ರೀತಿ ಕೇರಳದ ೭೨ ಸಾವಿರ ಹಾಗೂ ಮಹಾರಾಷ್ಟ್ರದ ೭೦ ಸಾವಿರ ಅಭ್ಯರ್ಥಿಗಳು ತೇರ್ಗಡೆಯಾದರು.  ಸಾಮಾನ್ಯ ವರ್ಗದಲ್ಲಿ ೨,೬೮,೩೧೬ ವಿದ್ಯಾರ್ಥಿಗಳು, ಒಬಿಸಿಯಲ್ಲಿ ೩,೨೭,೫೭೫; ೮೭,೩೧೧ ಎಸ್‌ಸಿ ಹಾಗೂ ಎಸ್‌ಟಿ ವರ್ಗದಲ್ಲಿ ೩೧,೩೬೦ ವಿದ್ಯಾರ್ಥಿಗಳು ಅರ್ಹತೆ ಪಡೆದರು.. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಕಟ್‌ಆಫ್ ಅಂಕ ೬೯೧-೧೧೯, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ೧೧೮-೯೬ ಅಂಕ ನಿಗದಿಯಾಗಿದೆ. ೬೯೧-೧೧೯ ಕಟ್‌ಆಫ್‌ನಲ್ಲಿ ಒಟ್ಟು ೬,೩೪,೮೯೭ ವಿದ್ಯಾರ್ಥಿಗಳು ಅರ್ಹರಾದರು. ಆದರೆ, ದೇಶದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸಂಸ್ಥೆಗಳಲ್ಲಿ ಲಭ್ಯವಿರುವುದು ೬೦ ಸಾವಿರ ಸೀಟ್‌ಗಳು.  ಸೆಂಟ್ರಲ್ ಬೋರ್ಡ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ ಇ) ಮೇ ೬ರಂದು ೧೩೬ ನಗರಗಳಲ್ಲಿ ಒಟ್ಟು ೧೧ ಭಾಷೆಯಲ್ಲಿ ಪರೀಕ್ಷೆ ನಡೆಸಿತ್ತು. ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜ್‌ಗಳಲ್ಲಿ ಯಾವುದೇ ಪದವಿ ವೈದ್ಯಕೀಯ ಕೋರ್ಸ್ (ಎಮ್‌ಬಿಬಿಎಸ್/ದಂತವೈದ್ಯಕೀಯ ಕೋರ್ಸ್  ಬಿಡಿಎಸ್) ಅಥವಾ ಸ್ನಾತಕೋತ್ತರ ಕೋರ್ಸ್ (ಎಮ್‌ಡಿ, ಎಮ್‌ಎಸ್) ಅಭ್ಯಸಿಸಲು ಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ರಾಷ್ಟ್ರ ಮಟ್ಟದ ಪರೀಕ್ಷೆ ಇದು.
2016: ಹೆರಾತ್ (ಅಫ್ಘಾನಿಸ್ಥಾನ): ಪಂಚರಾಷ್ಟ್ರ ಪ್ರವಾಸ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಅಫ್ಘಾನಿಸ್ಥಾನಕ್ಕೆ ಆಗಮಿಸಿ ಅಲ್ಲಿ ಇರಾನ್ ಪಕ್ಕದಲ್ಲಿರುವ ಹೆರಾತ್ ಪ್ರಾಂತ್ಯಕ್ಕೆ ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿರುವಅಫ್ಘನ್- ಭಾರತ ಮೈತ್ರಿ ಅಣೆಕಟ್ಟು’ (ಅಫ್ಘನ್- ಇಂಡಿಯಾ ಫ್ರೆಂಡ್ಶಿಪ್ ಡ್ಯಾಮ್ ಉದ್ಘಾಟಿಸಿದರು. ‘ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ಈದಿನ ಶೌರ್ಯಶಾಲಿ ಅಫ್ಘನ್ ಜನ ವಿನಾಶ, ಮೃತ್ಯು, ನಿರಾಕರಣೆ ಮತ್ತು ಪ್ರಾಬಲ್ಯ ಸಾಧಿಸಲು ಯತ್ನಿಸುವ ಶಕ್ತಿಗಳಿಗೆ ಉಳಿಗಾಲ ಇಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಸಮರಗ್ರಸ್ತ ಅಫ್ಘಾನಿಸ್ಥಾನಕ್ಕೆ ಯಾವುದೇ ಅಡೆತಡೆ ಇದ್ದರೂ ಭಾರತ ಸರ್ವ ಸಹಕಾರವನ್ನೂ ನೀಡುವುದು ಎಂದು ಮೋದಿ ಹೇಳಿದರು. ಹಿಂದೆ ಸಲ್ಮಾ ಅಣೆಕಟ್ಟು ಎಂಬುದಾಗಿ ಕರೆಯಲಾಗುತ್ತಿದ್ದ ಅಣೆಕಟ್ಟಿಗೆ ಈಗ ಅಫ್ಘನ್- ಭಾರತ ಮೈತ್ರಿ ಅಣೆಕಟ್ಟು ಎಂಬುದಾಗಿ ಹೆಸರಿಡಲಾಗಿದೆ. ಭಾರತದ ಪಾಲುದಾರಿಕೆಯೊಂದಿಗೆ 1700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟು 75,000 ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸುವುದರ ಜೊತೆಗೆ 42 ಮೆವಾ ವಿದ್ಯುತ್ ಉತ್ಪಾದಿಸಲಿದೆಪಂಚರಾಷ್ಟ್ರ ಪ್ರವಾಸದಲ್ಲಿ ಖತಾರ್, ಸ್ವಿಜರ್ಲೆಂಡ್, ಅಮೆರಿಕ ಮತ್ತು ಮೆಕ್ಸಿಕೊ ದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡುವರು.
2016: ಖತಾರ್: ಪಂಚ ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿ ಖತಾರ್ಗೆ ಅಡಿ ಇಟ್ಟ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಶೇಖ್ ಅಬ್ದುಲ್ಲಾ ಬಿನ್ ನಸರ್ ಸಕಲ ಗೌರವದೊಡನೆ ಬರಮಾಡಿಕೊಂಡರು. ನಂತರ ಅರೆಬಿಕ್ನಲ್ಲಿ ಟ್ವೀಟ್ ಮಾಡಿದ ಮೋದಿ, ಉಭಯ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಸಂಬಂಧ ವೃದ್ಧಿಯನ್ನು ತಾವು ನಿರೀಕ್ಷಿಸಿರುವುದಾಗಿ ಹೇಳಿದರು. ಭಾರತವು ಖತಾರ್ಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಬಯಸಿದೆ. ದ್ವಿಪಕ್ಷೀಯ ಮಾತುಕತೆ ಮೂಲಕ ಇದು ನೆರವೇರುವುದೆಂಬ ಆಶಾ ಭಾವನೆ ತಮಗಿದೆ ಎಂದು ಮೋದಿ ಹೇಳಿದರು. 8 ವರ್ಷಗಳ ನಂತರ (2008 ರಲ್ಲಿ ಮನಮೋಹನ ಸಿಂಗ್ ಭೇಟಿ) ಭಾರತದ ಪ್ರಧಾನಿ ನೆಲಕ್ಕೆ ಅಡಿ ಇಡುತ್ತಿರುವುದು ಹರ್ಷ ತಂದಿದೆ ಎಂದು ಕತಾರ್ ಭಾರತದ ಉದ್ಯಮಿಗಳ ಸಮೂಹ ಹರ್ಷ ವ್ಯಕ್ತಪಡಿಸಿತು.  6 ಲಕ್ಷದ 30 ಸಾವಿರ ಭಾರತೀಯ ಕಾರ್ವಿುಕರು ಕತಾರ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇಂಡಿಯನ್ ವರ್ಕರ್ಸ್ ಕ್ಯಾಂಪ್ಗೂ ಮೋದಿ ಭೇಟಿ ನೀಡಲಿರುವುದು ಭಾರತೀಯ ಮೂಲದ ಕಾರ್ವಿುಕರಲ್ಲಿ ಅತೀವ ಹರ್ಷ ಉಂಟುಮಾಡಿದೆ. ಭಾರತ- ಖತಾರ್ ಹಣಕಾಸು ಒಪ್ಪಂದಕ್ಕೆ ಹೊಸ ಸ್ಪರ್ಶ ನೀಡಲಿರುವ ಮೋದಿ ಭೇಟಿ, ಹೈಡ್ರೋ ಕಾರ್ಬನ್ ವಲಯದಲ್ಲಿಯೂ ಬಂಡವಾಳ ತೊಡಗಿಸುವಂತೆ ಕತಾರ್ ಉದ್ಯಮಿಗಳಿಗೆ ಬೇಡಿಕೆ ಇಡುವ ನಿರೀಕ್ಷೆ ಇದೆ.
2016: ಶ್ರೀನಗರ:  ವರ್ಷದ ಪವಿತ್ರ ಅಮರನಾಥ ಯಾತ್ರೆಯ ಮೇಲೆ ಉಗ್ರರು ದಾಳಿ ನಡೆಸಲು ಹೊಂಚು ಹಾಕಿದ್ದಾರೆ. ಆದರೆ ಉಗ್ರರ ದಾಳಿಯನ್ನು ತಡೆಯಲು ಬಿಎಸ್ಎಫ್ ಸಕಲ ಸಿದ್ಧತೆ ನಡೆಸಿದೆ ಎಂದು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕ ಕೆ.ಕೆ. ಶರ್ಮಾ ತಿಳಿಸಿದರು. ನಮಗೆ ಲಭ್ಯವಾಗಿರುವ ಗುಪ್ತಚರ ಮಾಹಿತಿಯ ಪ್ರಕಾರ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಒಳನುಸುಳಲು ಹೊಂಚು ಹಾಕುತ್ತಿದ್ದಾರೆ. ಹೀಗಾಗಿ ಉಗ್ರರ ಒಳನುಸುಳುವಿಕೆ ತಡೆಯಲು ಬೇಲಿಯನ್ನು ಭದ್ರ ಪಡಿಸುವ ಕೆಲಸ ನಡೆಯುತ್ತಿದೆ. ಜತೆಗೆ ಗಡಿ ಭದ್ರತೆಯಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಕೆಲಸ ಪ್ರಗತಿಯಲ್ಲಿದೆ. ಗಡಿಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮೂಲಕ ಗಡಿಯನ್ನು ಅಭೇದ್ಯವಾಗಿಸಲು ಬಿಎಸ್ಎಫ್ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದು ಶರ್ಮಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಬಿಜ್ಬೆಹರಾದಲ್ಲಿ ಹಿಂದಿನ ದಿನ  ಉಗ್ರರ ದಾಳಿಯಿಂದ ಮೃತರಾದ ಮೂವರ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ನಂತರ ಶರ್ಮಾ ವರದಿಗಾರರೊಂದಿಗೆ ಮಾತನಾಡಿದರು. ಹಿಂದಿನ ವರ್ಷಗಳಲ್ಲಿ ಯಶಸ್ವಿಯಾಗಿ ಯಾತ್ರೆಯನ್ನು ಆಯೋಜಿಸಲಾಗಿತ್ತು. ಸಲವೂ ಸಹ ಅಮರನಾಥ ಯಾತ್ರೆಯಲ್ಲಿ ಯಾವುದೇ ಅವಘಡ ನಡೆಯದಂತೆ ಭದ್ರತೆ ಒದಗಿಸಲಾಗುವುದು ಎಂದು ಶರ್ಮಾ ನುಡಿದರು.
2016: ಚಂಡೀಗಢ : ಬ್ಲೂಸ್ಟಾರ್ ಕಾರ್ಯಾಚರಣೆಯ 32ನೇ ವಾರ್ಷಿಕ ಸ್ಮರಣೆ ಸಂದರ್ಭ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಹಲವು ಮಂದಿ ಸಿಖ್ ಮುಖಂಡರು ಮತ್ತು ಸಂಘಟನೆ ಕಾರ್ಯಕರ್ತರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. ಲೂಧಿಯಾನಾದಲ್ಲಿ ದಳ್ ಖಾಲ್ಸಾ ಮುಖಂಡ ದಲ್ಜೀತ್ಸಿಂಗ್ ಬಿಟ್ಟು ಸೇರಿದಂತೆ ಸಂಘಟನೆಯ ಮೂವರು ಪ್ರಮುಖ ನಾಯಕರು, ಜಿಯಾಸ್ಪುರದಲ್ಲಿ ಸಮುದಾಯದ ಮುಖಂಡರಾದ ಮನವೀಂದರ್ಸಿಂಗ್, ಅಮೃತಸರದ ಜಸವಂತಸಿಂಗ್ ಚೀಮಾ ಬಂಧಿತರಲ್ಲಿ ಪ್ರಮುಖರುಮುಖಂಡರ ಮನೆಗೇ ತೆರಳಿ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಕೆಲವು ಮುಖಂಡರು ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆಆದಾಗ್ಯೂ ಅಮೃತಸರ ಮತ್ತು ಸ್ವರ್ಣ ಮಂದಿರದ ಸುತ್ತ ವಿಶೇಷ ಸೇನಾ ಪಡೆ ಯೋಧರನ್ನು ನಿಯೋಜಿಸಿ, ಕಣ್ಗಾವಲು ಇರಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದವು. 1984 ಜೂನ್ 3ರಿಂದ 10 ವರೆಗೆ ಪ್ರಧಾನಿ ಇಂದಿರಾಗಾಂಧಿ ಆದೇಶಾನುಸಾರ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆದಿತ್ತು. ಸಾವಿರಾರು ಸಿಖ್ ಮುಖಂಡರು ಸಂದರ್ಭ ನಡೆದ ಸೇನಾ ದಾಳಿಗೆ ಪ್ರಾಣಾರ್ಪಣೆ ಮಾಡಿದ್ದರು. ಸ್ವರ್ಣ ಮಂದಿರವನ್ನು ಸಂಪೂರ್ಣ ವಶಕ್ಕೆ ಪಡೆದ ಸೇನೆ ಜರ್ನಾಲಿ ಸಿಂಗ್ ಬಿಂದ್ರನ್ ವಾಲಾ ನೇತೃತ್ವದ  ಉಗ್ರಗಾಮಿಗಳ ತಂಡದಲ್ಲಿದ್ದ ಸಾವಿರಕ್ಕೂ ಹೆಚ್ಚು ಜನರನ್ನು ಗುಂಡಿಟ್ಟು ಕೊಂದಿತ್ತು.

2016: ಲಖನೌ: ಕಿಂಗ್ ಜಾರ್ಜ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಿರಿಯ ವೈದ್ಯರು ನಡೆಸಿದ 4 ದಿನದ ಮುಷ್ಕರ 16 ರೋಗಿಗಳ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ  ಹೈಕೋರ್ಟ್ ಮೃತರ ಕುಟುಂಬಕ್ಕೆ ವೈದ್ಯರು ಪರಿಹಾರ ಧನ ನೀಡಬೇಕು ಎಂದು ಆದೇಶಿಸಿತು. ಪ್ರತಿ ಕುಟುಂಬಕ್ಕೆ ವೈದ್ಯರು ತಲಾ 25ಲಕ್ಷ ನೀಡಬೇಕು ಎಂದು ನ್ಯಾಯಾಲಯ ಅದೇಶಿಸಿತು. ಪರಿಹಾರದ ಹಣವನ್ನು ಸರ್ಕಾರ ವೈದ್ಯರ ವೇತನದಿಂದ ಕಡಿತಗೊಳಿಸಬೇಕು ಎಂದೂ ಕೋರ್ಟ್ ಹೇಳಿತು. ಸಾರ್ವಜನಿಕ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯರಿಗೆ ಮುಷ್ಕರ ಮಾಡುವ ಹಕ್ಕು ಇರುವುದಿಲ್ಲ ಮತ್ತು ರಾಜ್ಯ ಸರ್ಕಾರ ಬಗ್ಗೆ ರೋಗಿಗಳಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆಯಬೇಕು ಹಾಗೂ ಮುಂದೆ ರೀತಿಯ ಘಟನೆಗಳು ಘಟಿಸದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತುಸ್ನಾತಕೋತ್ತರ ಪದವಿ ಪ್ರವೇಶದ ಮಾನದಂಡ ಪರಿಷ್ಕರಿಸಿದ್ದನ್ನು ವಿರೋಧಿಸಿ ಕಿಂಗ್ ಜಾರ್ಜ್ ವೈದ್ಯಕೀಯ ಮಾಹಾವಿದ್ಯಾಲಯದ ಕಿರಿಯ ವೈದ್ಯರು ಮುಷ್ಕರ ಹೂಡಿದ್ದರು. ಹಿನ್ನೆಲೆಯಲ್ಲಿ 2000 ರಷ್ಟು ರೋಗಿಗಳಿರುವ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯುಂಟಾಗಿ 16 ರೋಗಿಗಳು ಸಾವನ್ನಪ್ಪಿದ್ದರು.

2016: ಹೆರಾತ್: ಭಾರತ-ಆಫ್ಘಾನಿಸ್ಥಾನದ ಸ್ನೇಹದ ಪ್ರತೀಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಆಫ್ಘಾನಿಸ್ಥಾನದ ಉನ್ನತ ನಾಗರಿಕ ಪ್ರಶಸ್ತಿಯಾದಆಮೀರ್ ಅಮಾನುಲ್ಲಾ ಖಾನ್ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಭಾರತದ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವಮೈತ್ರಿ ಅಣೆಕಟ್ಟುಉದ್ಘಾಟನೆ ಮಾಡಿದ ನಂತರ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

2016: ಡಮಾಸ್ಕಸ್: 2014 ಬಳಿಕ ಇದೇ ಮೊದಲ ಬಾರಿಗೆ ಸಿರಿಯಾ ಪಡೆಗಳು ಐಸಿಸ್ (ಇಸ್ಲಾಮಿಕ್ ಸ್ಟೇಟ್) ಕೋಟೆಯಾಗಿರುವ ರಖಾ ಪ್ರಾಂತ್ಯಕ್ಕೆ ಲಗ್ಗೆ ಇಟ್ಟು ರಾಷ್ಟ್ರದ ಅತ್ಯಂತ ದೊಡ್ಡ ಅಣೆಕಟ್ಟಿನತ್ತ ಮುಂದುವರೆದಿವೆ ಎಂದು ವರದಿಗಳು ತಿಳಿಸಿದವು. ಯೂಫ್ರೆಟಿಸ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತಬ್ಖಾ ಅಣೆಕಟ್ಟು ರಖಾ ನಗರದಿಂದ 40 ಕಿಮೀ (25 ಮೈಲು) ಮೇಲ್ಭಾಗದಲ್ಲಿದೆ. ಕಳೆದ ತಿಂಗಳು ಅಮೆರಿಕ ಬೆಂಬಲಿತ ಖುರ್ದಿಶ್ ಪಡೆಗಳೂ ಇದೇ ಭಾಗದಲ್ಲಿ ಪ್ರತ್ಯೇಕ ದಾಳಿ ನಡೆಸಿದ್ದವು. ‘ರಷ್ಯಾದ ವಾಯುಪಡೆಗಳು ಮತ್ತು ರಷ್ಯಾದಿಂದ ತರಬೇತಿ ಪಡೆದ ಸಿರಿಯಾ ಸೇನೆ ಬೆಳಗ್ಗೆ ರಖಾ ಪ್ರಾಂತ್ಯವನ್ನು ಪ್ರವೇಶಿಸಿವೆ. 2014 ಬಳಿಕ ಸಿರಿಯಾ ಸೇನೆ ಪ್ರಾಂತ್ಯವನ್ನು ಪ್ರವೇಶಿಸಿದ್ದು ಇದೇ ಮೊದಲುಎಂದು ಮಾನವ ಹಕ್ಕುಗಳ ಉಲ್ಲಂಘನೆ ಮೇಲೆ ಕಣ್ಣಿರಿಸಿರುವ ಸಿರಿಯಾ ವೀಕ್ಷಣಾಲಯದ ನಿರ್ದೇಶಕ ರಮಿ ಅಬ್ದೆಲ್ ರಹಮಾನ್ ಸುದ್ದಿ ಸಂಸ್ಥೆಗೆ ತಿಳಿಸಿದರು.
.
2016: ಟೋಕಿಯೊ: ಜಪಾನಿನ 96 ಇಳಿ ವಯಸ್ಸಿನ ವೃದ್ಧರೊಬ್ಬರು ಕ್ಯೋಟೊ ವಿಶ್ವವಿದ್ಯಾಲಯದಿಂದ ಪದವಿ ಪಡೆದು ವಿಶ್ವದಾಖಲೆ ನಿರ್ಮಿಸಿದರು.  ಸೆರಾಮಿಕ್ ಕಲೆ ವಿಭಾಗದಲ್ಲಿ ಪದವಿ ಪಡೆದಿರುವ ಶಿಗೆಮಿ ಹಿರಾತಾ ಅವರು ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿ ಅಚ್ಚರಿ ಮೂಡಿಸಿದರು. 1919 ರಲ್ಲಿ ಹಿರೋಶಿಮಾದಲ್ಲಿ ಜನಿಸಿದ ಶಿಗೆಮಿ ಹಿರಾತಾ ತಮ್ಮ ಪದವಿ ಮುಗಿಸಲು ಬರೊಬ್ಬರಿ 11 ವರ್ಷ ತೆಗೆದುಕೊಂಡಿದ್ದರು.. 100 ವರ್ಷ ಬದುಕಬೇಕು ಎಂಬ ಹಂಬಲದಲ್ಲಿರುವ ಹಿರಾತಾ ಅವರು ವಿಶ್ವಮಹಾಯುದ್ದ 2 ಸಂದರ್ಭದಲ್ಲಿ ಜಪಾನಿ ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ಜಪಾನಿನ 100 ಪ್ರಾಯದ ಮಿಯಿಕೊ 1,500 ಮೀಟರ್ ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಯಶಸ್ವಿಯಾಗಿ ವಿಶ್ವದಾಖಲೆ ನಿರ್ವಿುಸಿದ್ದು ಇವರ ಮತ್ತೊಂದು ಸಾಧನೆ. ಜಪಾನಿನ ಹಿರಿಯ ನಾಗರಿಕ ಸಂಸ್ಕೃತಿ ಒಂದಿಲ್ಲೊಂದು ಸಾಹಸಕ್ಕೆ ಕೈಹಾಕಿ ನಿಯಮಿತವಾಗಿ ವಿಶ್ವದಾಖಲೆ ನಿರ್ಮಿಸಿದ್ದು ವಿಶೇಷ.
.
2016: ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೆ ದೂರವಾಣಿ ಸಂಪರ್ಕ ಹೊಂದಿದ್ದ ಹಾಗೂ ಲಂಚ ಸ್ವೀಕಾರದ ಆರೋಪಗಳಿಗೆ ಗುರಿಯಾಗಿದ್ದ ಮಹಾರಾಷ್ಟ್ರದ ಹಿರಿಯ ಸಚಿವ ಏಕನಾಥ ಖಡ್ಸೆ ಅವರು ರಾಜ್ಯ ಸಚಿವ ಸಂಪುಟಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆಯನ್ನು ಅಂಗೀಕರಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯಪಾಲರಿಗೆ ಕಳಿಹಿಸಿದ್ದಲ್ಲದೆ, ಖಡ್ಸೆ ಅವರ ವಿರುದ್ಧದ ಆಪಾದನೆಗಳ ತನಿಖೆಯನ್ನು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಒಬ್ಬರಿಗೆ ವಹಿಸಲಾಘುವುದು ಎಂದು ಹೇಳಿದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ, ಖಡ್ಸೆ ಅವರು ಕಂದಾಯ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಸೇರಿದಂತೆ ತಾವು ಹೊಂದಿದ್ದ ಖಾತೆಗಳಿಗೆ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ನವದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರನ್ನೂ ಭೇಟಿ ಮಾಡಿದ ಮುಖ್ಯಮಂತ್ರಿ ಫಡ್ನವಿಸ್ ಅವರು ಖಡ್ಸೆ ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವರದಿ ಸಲ್ಲಿಸ ಬಳಿಕ ವಿದ್ಯಮಾನ ಘಟಿಸಿದೆಮುಖ್ಯಮಂತ್ರಿಯವರು ಬಳಿಕ ಪ್ರಧಾನಿ ನರೇಂದ್ರ ಮೋದಿ ಜೊತೆಗೂ ಬಳಿಕ ಮಾತುಕತೆ ನಡೆಸಿದ್ದರು. ಫಡ್ನವಿಸ್ ಸಂಪುಟದಲ್ಲಿ ಪ್ರಬಲ ಸಚಿವರಾಗಿ ನಂ.2 ಸ್ಥಾನದಲ್ಲಿದ್ದ ಖಡ್ಸೆ ವಿರುದ್ಧ ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಮತ್ತು ಆಮ್ ಆದ್ಮಿ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ ಖಡ್ಸೆ ಅವರು ತಮ್ಮ ಮೇಲಿನ ಎಲ್ಲಾ ಆಪಾದನೆಗಳನ್ನು ನಿರಾಕರಿಸಿ ತಾವು ನಿರಪರಾಧಿ ಎಂಬುದಾಗಿ ಸಾಬೀತು ಮಾಡುವುದಾಗಿ ಹೇಳಿದ್ದರು.

2016: ಸ್ಯಾಂಟಿಯಾಗೊ: ಪುಟ್ಟ ರಾಷ್ಟ್ರ ಚಿಲಿ ತನ್ನ ಸೌರಶಕ್ತಿ ಉತ್ಪಾದನೆಯಲ್ಲಿ ಪಾರುಪತ್ಯ ಸಾಧಿಸಿ ಇದೀಗ ತನ್ನ ನೆರೆ ರಾಷ್ಟ್ರಗಳಿಗೆ ಉಚಿತವಾಗಿ ವಿದ್ಯುತ್ ನೀಡುವ ಮೂಲಕ ವಿಕ್ರಮ ಸಾಧಿಸಿತು. ಕಳೆದ ಏಪ್ರಿಲ್ನಿಂದ ಚಿಲಿಯಲ್ಲಿ ನಿಗದಿತ ವಿದ್ಯುತ್ ದರ ಶೂನ್ಯಕ್ಕೆ ಇಳಿಯಿತು.  ಚಿಲಿಯಲ್ಲಿ ಹೆಚ್ಚಿರುವ ಸೌರಶಕ್ತಿಯಿಂದ ಗಣಿಗಾರಿಕೆ ಉತ್ಪನ್ನಗಳಿಗೆ ಪುಷ್ಠಿ ಸಿಕ್ಕಿದ್ದು, ಇದು ಆರ್ಥಿಕತೆಯ ಅಭಿವೃದ್ದಿ ಎಂದು ಕೇಂದ್ರ ಸೌರಶಕ್ತಿ ಘಟಕದ ನಿರ್ದೇಶಕರು ಹೇಳಿದರು. 2017 ವೇಳೆಗೆ ಎರಡು ಉನ್ನತ ಘಟಕಗಳ ಉತ್ಪಾದನೆಯ ಪ್ರಸರಣವನ್ನು ಒಂದೆಡೆ ಸೇರಿಸಲು ಸುಮಾರು 3 ಸಾವಿರ ಕಿ ಮೀ ಗಳ ಲೈನ್ ನಿರ್ಮಿಸಿ ಅದರಿಂದ ಹೆಚ್ಚಿನ ಪ್ರಯೋಜನ ಪಡೆಯಲು ಚಿಲಿ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಚಿಲಿಯ ಇಂಧನ ಸಚಿವ ಮಾಕ್ಸಿಮೊ ಪಚೆಕೊ ಹೇಳಿದರು.

2016: ಭುವನೇಶ್ವರ (ಒಡಿಶಾ): ರೂಸ್ 2016 ವಿಶ್ವ ಮರಳುಶಿಲ್ಪ ಉತ್ಸವದ ಚಾಂಪಿಯನ್ಷಿಪ್ನಲ್ಲಿ ಭಾರತದ ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ್ ಅವರು ಜನರ ಆಯ್ಕೆ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದರು. ಪಟ್ನಾಯಕ್ ಅವರಡ್ರಗ್ಸ್ ಕಿಲ್ ಸ್ಪೋರ್ಟ್ಸ್ಮರಳು ಶಿಲ್ಪಕ್ಕೆ ಚಿನ್ನದ ಪದಕ ಲಭಿಸಿತು. ಹಿಂದಿನ ದಿನ ಚಿನ್ನದ ಪದಕ ಗೆದ್ದ ಸುದರ್ಶನ್ ಅವರಿಗೆ ಸಂದರ್ಶಕರಿಂದ ಅತ್ಯಂತ ಹೆಚ್ಚು ಮತಗಳು ಬಂದಿವೆ ಎಂದು ಉತ್ಸವ ಸಂಘಟಕರು ಈದಿನ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿತು.  ಉತ್ಸವದಲ್ಲಿ ಸುದರ್ಶನ್ ಪಟ್ನಾಯಕ್ ಅವರು ಭಾರತವನ್ನು ಪ್ರತಿನಿಧಿಸಿದ್ದರು. ನನ್ನ ಮರಳು ಶಿಲ್ಪಕ್ಕೆ ಚಿನ್ನದ ಪದಕ ಬಂದಿರುವುದು ಸಂತಸವನ್ನು ಉಂಟು ಮಾಡಿದೆ. ಶಿಲ್ಪದಲ್ಲಿ ನಾನು ಎರಡು ಮುಖಗಳನ್ನು ರಚಿಸಿದ್ದೆ. ಒಂದು ಲಾನ್ಸ್ ಆರ್ಮ್ಸ್ಟ್ರಾಂಗ್ ಮತ್ತು ಇನ್ನೊಂದು ಮರಿಯಾ ಶರಪೋವಾ. ಇಬ್ಬರು ಐಕಾನಿಕ್ ಆಟಗಾರರು ಮಾದಕ ದ್ರವ್ಯ ವಿವಾದದಲ್ಲಿ ಸಿಲುಕಿ ಬಿದ್ದು ತಮಗೆ ವೈಯಕ್ತಿಕವಾಗಿ ಅಷ್ಟೇ ಅಲ್ಲ ಇಡೀ ಕ್ರೀಡಾ ಜಗತ್ತಿಗೂ ಕೆಟ್ಟ ಹೆಸರು ತಂದಿದ್ದರುಎಂದು ಸುದರ್ಶನ್ ಹೇಳಿಕೆಯೊಂದರಲ್ಲಿ ಪ್ರತಿಕ್ರಿಯಿಸಿದರು. ಕ್ರೀಡಾ ಸ್ಪೂರ್ತಿಯನ್ನು ಉಳಿಸಿಕೊಂಡು ಆಟದ ಕೀರ್ತಿಯನ್ನು ಬೆಳಗಬೇಕು ಎಂಬ ಸಂದೇಶವನ್ನು ಮೂಲಕ ಕ್ರೀಡಾಜಗತ್ತಿಗೆ ರವಾನಿಸುವುದು ನನ್ನ ಆಶಯವಾಗಿತ್ತು ಎಂದೂ ಅವರು ಹೇಳಿದರು.
.
2016: ಅಥೆನ್ಸ್ (ಗ್ರೀಸ್): ಮೂರು ವರ್ಷಗಳ ಹಿಂದೆ ಗ್ರೀಸ್ ದ್ವೀಪವೊಂದರ ಸಮೀಪ ಸಮುದ್ರದ ಕೆಳಗೆ ಪತ್ತೆಯಾಗಿದ್ದಪುರಾತನ ನಗರಮಾನವ ನಿರ್ಮಿತ ಅಲ್ಲ ಎಂಬುದು ಈಗ ಬೆಳಕಿಗೆ ಬಂದಿತು. ಗ್ರೀಕ್ ದ್ವೀಪ ಝುಕಿಂತೋಸ್ ಸಮೀಪ ಸಮುದ್ರದಲ್ಲಿ 20 ಅಡಿ ಆಳದಲ್ಲಿ ನಿಗೂಢ ರಚನೆಗಳನ್ನು ಕಂಡ ಪ್ರವಾಸಿಗರು ಇದು ಬಹುಶಃ ಸಮುದ್ರದಲ್ಲಿ ಮುಳುಗಿನ ಪುರಾತನ ನಗರದ ಪಳೆಯುಳಿಕೆ ರಚನೆಗಳು ಎಂದು ಭಾವಿಸಿದ್ದರು. ಹೌದು, ರಚನೆಗಳೇನೂ ಸಾಮಾನ್ಯ ರಚನೆಗಳಲ್ಲ. ಭಾರೀ ಸಿಲಿಂಡರ್ ರೂಪದ ಸ್ಥಂಭದಂತಹ ರಚನೆಗಳು, ರಸ್ತೆಗಳಂತೆ ಹಾಸಿದ ಕಲ್ಲುಗಳು, ನೀರು ಹೋಗುವಂತಹ ಚರಂಡಿ ಇತ್ಯಾದಿಗಳೆಲ್ಲ ಅಲ್ಲಿದ್ದವು. ಪ್ರಾಕ್ತನ ತಜ್ಞರು ಕೂಡಾ ಇದು ಲಕ್ಷಾಂತರ ವರ್ಷಗಳ ಹಿಂದೆ ಸಮುದ್ರಡಿ ಮುಳುಗಿದ ನಾಗರಿಕತೆಯೊಂದರ ಕಾಲದ ನಗರವಾಗಿದ್ದಿರಬಹುದು ಎಂದು ನಂಬಿದ್ದರು. ಆದರೆ ಈಗ ರಚನೆಗಳು ಮಾನವ ನಿರ್ಮಿತ ರಚನೆ ಅಲ್ಲ ಎಂದು ಅಧ್ಯಯನಗಳು ಹೇಳಿದವು. ಸಮುದ್ರ ಹಾಗೂ ಪೆಟ್ರೋಲಿಯಂ ಭೂಗರ್ಭ ತಜ್ಞರು ನಡೆಸಿದ ಅಧ್ಯಯನದಿಂದ ರಚನೆಗಳ ನಿಗೂಢ ಒಡೆದಿದೆ. ಇದು ಮಾನವ ನಿರ್ಮಿತ ನಗರವಲ್ಲ, ಸೂಕ್ಷ್ಮ ಜೀವಿಗಳಿಂದ ಆದ ರಚನೆ ಎಂದು  ಅಧ್ಯಯನ ವರದಿ ಹೇಳಿತು. ಅಂದರೆ ಇದು ಬ್ಯಾಕ್ಟೀರಿಯಾ ನಿರ್ಮಿತ ನೈಸರ್ಗಿಕ ರಚನೆ ಎಂದು ಅಧ್ಯಯನ ಹೇಳಿತು. ಸಮುದ್ರದೊಳಕ್ಕೆ ಮುಳುಗಿ ಅಧ್ಯಯನ ನಡೆಸಿದ್ದ ಪ್ರಾಕ್ತನ ತಜ್ಞರಿಗೆ ಅಲ್ಲಿ ನಾಣ್ಯಗಳು, ಮಡಕೆ/ ಪಾತ್ರೆ ಚೂರುಗಳು ಇತ್ಯಾದಿ ಮಾನವ ಬದುಕಿನ ಅಗತ್ಯದ ಯಾವುದೇ ವಸ್ತುಗಳ ಕುರುಹುಗಳೂ ಲಭಿಸಿರಲಿಲ್ಲ. ಹಿನ್ನೆಲೆಯಲ್ಲಿ ಸಾಗರ ಹಾಗೂ ಭೂಗರ್ಭ ತಜ್ಞರು ಇಲ್ಲಿರುವ ಸ್ಥಂಭಗಳು ಹಾಗೂ ರಸ್ತೆಗಳು ನೈಸರ್ಗಿಕವಾಗಿ ನಿರ್ಮಿತಗೊಂಡವು ಎಂದು ಅಭಿಪ್ರಾಯಪಟ್ಟರು. ಸಮುದ್ರದೊಳಗೆ ಮಿಥೇನ್ ಅನಿಲ ಸೋರಿಕೆಯಾಗಿ ಅದರಲ್ಲಿನ ಸೂಕ್ಷ್ಮ ಜೀವಿಗಳಿಂದ ಇಂತಹ ರಚನೆಗಳು ರೂಪುಗೊಂಡಿವೆ ಎಂದು ವರದಿ ಹೇಳಿತು.

2016: ಫೀನಿಕ್ಸ್:  ಉಸಿರಾಟ ಸಮಸ್ಯೆಯಿಂದ ಅರಿಜೋನಾ ನಗರದ ಫೀನಿಕ್ಸ್ ಪ್ರದೇಶದ ಆಸ್ಪತ್ರೆಗೆ ದಾಖಲಾಗಿದ್ದ ಬಾಕ್ಸಿಂಗ್ ದಿಗ್ಗಜ ಮಹಮ್ಮದ್ ಅಲಿ ಈದಿನ ಕೊನೆಯುಸಿರೆಳೆದರು. ಮೊದಲು ಮೆದುಳು ಮತ್ತು ಹೃದಯ ಸಂಬಂಧಿ ರೋಗಕ್ಕೆ ತುತ್ತಾಗಿದ್ದ ಅಲಿ ಅವರಿಗೆ 74 ವರ್ಷ ವಯಸ್ಸಾಗಿತ್ತು. ಅಮೆರಿಕದ ಬಾಕ್ಸರ್ ತನ್ನ ವೃತ್ತಿ ಜೀವನದಲ್ಲಿ ಮೂರು ಬಾರಿ ವಿಶ್ವ ಬಾಕ್ಸಿಂಗ್ ಹೆವಿವೇಟ್ ಚಾಂಪಿಯನ್ ಆಗಿದ್ದರು. ತಾವಾಡಿದ್ದ 61 ಪಂದ್ಯಗಳಲ್ಲಿ 56 ರಲ್ಲಿ ಜಯಿಸಿ ದಾಖಲೆ ನಿರ್ವಿುಸಿದ್ದರು. ಟ್ರೆವರ್ ಬೆರ್ಬಿಕ್ ಎಂಬುವರ ವಿರುದ್ದ 1981 ರಲ್ಲಿ ಸೋಲುಂಡ ಬಳಿಕ ಬಾಕ್ಸಿಂಗ್ಗೆ ವಿದಾಯ ಹೇಳಿದ್ದರು. 2014 ರಿಂದ ನಿರಂತರವಾಗಿ ಅಲಿ ಅವರಿಗೆ ಆರೋಗ್ಯ ಸಮಸ್ಯೆ ಕಾಡತೊಡಗಿತ್ತು. ಅಲ್ಲಿಂದ ಅಲಿ ತಮ್ಮ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲೆ ಕಳೆದಿದ್ದರು.

2015: ದುಬೈ: ದುಬೈ ಮೂಲದ ಎಮಿರೇಟ್ಸ್ ಇತಿಹಾದ್ ಏರ್ಲೈನ್ಸ್ 80,000 ಡಾಲರ್ ಪ್ರಯಾಣ ದರದ ಜಗತ್ತಿನ ದುಬಾರಿ ವಿಮಾನಯಾನವನ್ನು  ಲಂಡನ್-ಮೆಲ್ಬೋರ್ನ್ ಮಾರ್ಗದಲ್ಲಿ ಪರಿಚಯಿಸಿತು. ಏನಪ್ಪಾ ಇದರ ವಿಶೇಷ ಅಂದ್ರಾ! ಇದು ಹಾರಾಡುವ ಪೆಂಟ್ ಹೌಸ್ ಅಂದರೆ ಗಗನದ ಮನೆ, ಯಾವ ಐಷಾರಾಮಿ ಹೋಟೆಲ್ಗಳ ವ್ಯವಸ್ಥೆಗೂ ಕಡಿಮೆ ಇಲ್ಲದಂತೆ ವಿಮಾನವನ್ನು ಸಜ್ಜುಗೊಳಿಸಲಾಗಿದೆ. ಸೂಟ್ ರೂಮುಗಳಿರುವ ವಿಮಾನದಲ್ಲಿ ಸಿಂಗಲ್ ಮತ್ತು ಡಬಲ್ ಬೆಡ್ರೂಮ್ಳು ಹೊಂದಿವೆ. ನಿಮಗಿಷ್ಟವಾಗುವ ಅಡುಗೆ ಭಟ್ಟರೊಬ್ಬರು ನಿಮ್ಮ ಸೇವೆಗೆ ಸದಾ ಸಿದ್ದರಿರುತ್ತಾರೆ. ಫೈವ್ ಸ್ಟಾರ್ ಹೋಟೆಲ್ಗಳಲ್ಲಿರುವಂತೆ ಒಳಾಂಗಣ ವಿನ್ಯಾಸದ ಜತೆ 32 ಇಂಚಿನ ಫ್ಲ್ಯಾಟ್ ಟಿವಿ, ಲೆದರ್ ಸೋಫಾ, ಡೈನಿಂಗ್ ಟೇಬಲ್ ಹೊಂದಿದೆ. ಒಟ್ಟಾರೆ ಹಾರಾಡುವ ಮನೆಯಲ್ಲಿ ನೀವು ಪ್ರಯಾಣಿಸಬಹುದಾಗಿದೆ. ಇದಕ್ಕೂ ಮೊದಲು 4500 ಡಾಲರ್ ಬೆಲೆಯಲ್ಲಿ ಇದೇ ಮಾದರಿ ಹೋಲುವ ಏರ್ಬಸ್ ಸೇವೆಯನ್ನು ಇತಿಹಾದ್ ನ್ಯೂಯಾರ್ಕ-ಮುಂಬೈ ಮಧ್ಯೆ ಪ್ರಾರಂಭಿಸಿತ್ತು. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಒಳಾಂಗಣ ವಿನ್ಯಾಸ ಮಾಡಲಾಗಿದ್ದು, ಸದ್ಯ ದಿನನಿತ್ಯ ಮಾದರಿಯ 3 ವಿಮಾನಗಳು ಕಾರ್ಯಾರಂಭ ಮಾಡಿವೆ ಎಂದು ಇತಿಹಾದ್ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಶೇನ್ ಓಹರೆ ತಿಳಿಸಿದರು.

2016: ಪ್ಯಾರಿಸ್: ಭಾರತದ ಜನಪ್ರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಇನ್ನೊಂದು ಗ್ರಾಂಡ್ ಸ್ಲಾಂ ಪ್ರಶಸ್ತಿಗೆ ಭಾಜನರಾದರು. ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಮತ್ತು ಸ್ವಿಜರ್ಲೆಂಡ್ ಮಾರ್ಟಿನಾ ಹಿಂಗೀಸ್ ಜೋಡಿ ಸಾನಿಯಾ ಮಿರ್ಜಾ ಮತ್ತು ಇವಾನ್ ಡಾಡಿಗ್ ಜೋಡಿಯನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಶ್ರೇಯಾಂಕ ರಹಿತ ಇಂಡೋ-ಸ್ವಿಸ್ ಜೋಡಿ ಒಂದು ಗಂಟೆ 28 ನಿಮಿಷ ನಡೆದ ಹಣಾಹಣಿಯಲ್ಲಿ 4-6, 6-4, 10-8 ಅಂತರದಿಂದ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಆಸ್ಟ್ರೇಲಿಯ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ಟೂರ್ನಿಗಳಲ್ಲಿ ಮಾರ್ಟಿನಾ ಹಿಂಗೀಸ್ ಜತೆಗೂಡಿ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದು ಕೊಂಡಿದ್ದ 42 ವರ್ಷದ ಲಿಯಾಂಡರ್ ಪೇಸ್ ಈಗ ಫ್ರೆಂಚ್ ಓಪನ್ ಟೂರ್ನಿಯಲ್ಲಿಯೂ ಪ್ರಶಸ್ತಿ ಗೆದ್ದು ಮತ್ತೊಂದು ಮೈಲಿಗಲ್ಲು ತಲುಪಿದ ಸಾಧನೆಗೆ ಪಾತ್ರರಾದರು. ಪೇಸ್ಗೆ ಇದು 18ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯಾಗಿದ್ದು, ಮಿಶ್ರ ಡಬಲ್ಸ್ನಲ್ಲಿ 10ನೇ ಪ್ರಶಸ್ತಿಯಾಗಿದೆ. ಇನ್ನು 35 ವರ್ಷದ ಮಾರ್ಟಿನಾ ಹಿಂಗೀಸ್ಗೆ ಇದು 22ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯಾಗಿದ್ದು, ಮಿಶ್ರ ಡಬಲ್ಸ್ನಲ್ಲಿ 5ನೇ ಪ್ರಶಸ್ತಿಯಾಗಿದೆ.

2016: ಮಥುರಾ:ಭೂ ಒತ್ತುವರಿ ತೆರವು ವೇಳೆ ಪೊಲೀಸರು ಮತ್ತು ಅತಿಕ್ರಮಣಕಾರರ ನಡುವೆ ವಾಹರ್ಬಾಗ್ನಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳೂ ಸೇರಿದಂತೆ 24 ಮಂದಿಯ ಸಾವಿಗೆ ಕಾರಣಕರ್ತನಾದ ಕ್ರಾಂತಿಕಾರಿ ನಾಯಕ ರಾಮ ವೃಕ್ಷ ಯಾದವ್ ಮೃತನಾಗಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ದೃಢಪಡಿಸಿದರು. ಪೊಲೀಸರು ಮತ್ತು ಅತಿಕ್ರಮಣಕಾರರ ನಡುವೆ ನಡೆದ ಗಲಭೆಯ ಸ್ಥಳದಲ್ಲಿ ದೊರೆತ ರಾಮ ಯಾದವ್ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆತನ ನಿಕಟ ವರ್ತಿಗಳು ಗುರುತು ದೃಢಪಡಿಸಿದರು.
ಸ್ವಾಧೀನಭಾರತ್ ವಿಧಿಕ್ ಸತ್ಯಾಗ್ರಹ ಪಂಥದ ಸಂಸ್ಥಾಪಕನಾದ ಈತನಿಗೆ ಉತ್ತರ ಪ್ರದೇಶ ರಾಜ್ಯಾದ್ಯಂತ ಸಾವಿರ ಸಂಖ್ಯೆಯ ಅನುಯಾಯಿಗಳಿದ್ದರು.  ಅತಿಕ್ರಮಣ ಮಾಡಿಕೊಂಡಿದ್ದ 280 ಎಕರೆ ಪ್ರದೇಶದಲ್ಲಿ ಈಗಾಗಲೇ 3 ಸಾವಿರ ಮನೆ ನಿರ್ಮಾಣವಾಗಿತ್ತು. ಅವರನ್ನೆಲ್ಲಾ ಒಗ್ಗೂಡಿಸಿಕೊಂಡು ಒತ್ತುವರಿ ತೆರವು ಕಾರ್ಯಾಚರಣೆಗೆ ಬಂದಿದ್ದ ಪೊಲೀಸರ ಮೇಲೆ ಈತ ಗುಂಪು ಕಟ್ಟಿಕೊಂಡು ಕಲ್ಲು ಮತ್ತು ಗುಂಡಿನ ದಾಳಿನಡೆಸಿದ್ದ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರೀಕ್ಷಕ ಜಾವೇದ್ ಅಹ್ಮದ್ ತಿಳಿಸಿದರು.
 2009: ವಾಯವ್ಯ ಹಿಮಾಲಯ ಭಾಗದಲ್ಲಿ ಕಳೆದ 100 ವರ್ಷಗಳ ಅವಧಿಯಲ್ಲಿ ಸರಾಸರಿ ಉಷ್ಣತೆ 1.4 ಡಿ.ಸೆ. ಏರಿಕೆಯಾಗಿದ್ದು, ಇದು ಜಗತ್ತಿನ ಬೇರಾವುದೇ ಭೂಪ್ರದೇಶದಲ್ಲಿ ಆಗಿರುವ ತಾಪಮಾನ ಹೆಚ್ಚಳಕ್ಕಿಂತ ಅಧಿಕ. ಜಗತ್ತಿನ ಬೇರೆ ಭೂಭಾಗಗಳ ಉಷ್ಣತೆಯಲ್ಲಿ 0.5ರಿಂದ 1.1 ಡಿ.ಸೆ.ನಷ್ಟು ಏರಿಕೆಯಾಗಿದ್ದರೆ ಹಿಮಾಲಯದಲ್ಲಿ ಅದಕ್ಕಿಂತ ಹೆಚ್ಚಿನ ಏರಿಕೆಯಾಗಿದೆ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಹಾಗೂ ಪುಣೆ ವಿ.ವಿ.ಯ ಭೂಗರ್ಭಶಾಸ್ತ್ರ ವಿಭಾಗಗಳು ನಡೆಸಿದ ಅಧ್ಯಯನ ತಿಳಿಸಿತು. ವಾಯವ್ಯ ಹಿಮಾಲಯದಲ್ಲಿ ಕಳೆದ ಮೂರು ದಶಕಗಳಿಂದ ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ತೀವ್ರ ಏರಿಕೆಯಾಗುತ್ತಿರುವುದು ಅಧ್ಯಯನದಿಂದ ಬಯಲಾಗಿರುವ ಮತ್ತೊಂದು ಗಮನಾರ್ಹ ಸಂಗತಿ. ಈ ಪ್ರದೇಶದಲ್ಲಿ ಹಿಮಹಾಸು ಪ್ರದೇಶದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಕುಗ್ಗುತ್ತಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥರಾಗಿದ್ದ ಡಿಆರ್‌ಡಿಓ ಎಂ.ಆರ್.ಭೂತಿಯಾನಿ ತಿಳಿಸಿದರು. ಇದರಿಂದಾಗಿ ರಾಷ್ಟ್ರದಲ್ಲಿ ಮುಂಗಾರು ಮಳೆ ಪ್ರಮಾಣ ಕ್ಷೀಣಿಸುವ ಜತೆಗೆ  ಚಳಿಗಾಲದ ಅವಧಿ ಕೂಡ ಮೊಟಕಾಗಿದೆ. ಮುಂಚೆ ಚಳಿಗಾಲದಲ್ಲಿ ವಸುಂಧರೆಯನ್ನು ಮುಸುಕುತ್ತಿದ್ದ ಮಂಜು ಈಗ ಹಿಂದಿನಷ್ಟು ದಟ್ಟವಾಗಿಲ್ಲ. ಒಟ್ಟಾರೆ ಈ ತಾಪಮಾನ ಏರಿಕೆಯಿಂದ ಜೀವವೈವಿಧ್ಯದ ಮೇಲೆಯೇ ದುಷ್ಪರಿಣಾಮವಾಗಿದೆ ಎಂದು ಭೂತಿಯಾನಿ ಹೇಳಿದರು. ಕೈಗಾರಿಕೀಕರಣ, ಹೆಚ್ಚಿದ ಮಾನವ ಚಟುವಟಿಕೆಗಳೇ ಉಷ್ಣತೆ ಏರಿಕೆಗೆ ಕಾರಣ ಎಂದು ಅಧ್ಯಯನ ಅಭಿಪ್ರಾಯಪಟ್ಟಿತು. ಬ್ರಿಟನ್ನಿನ ರಾಯಲ್ ಮೆಟಿರಿಯಾಲಾಜಿಕಲ್‌ ಸೊಸೈಟಿಯು ಹೊರತರುವ ಜಾಗತಿಕ ಹವಾಮಾನ ನಿಯತಕಾಲಿಕದಲ್ಲಿ ಅಧ್ಯಯನದ ವಿವರ ಪ್ರಕಟಿಸಲಾಯಿತು.

2009: ತನ್ನ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ಸಾಮೂಹಿಕ ದಾಳಿ ಜನಾಂಗೀಯ ದ್ವೇಷಕ್ಕೆ ಸಂಬಂಧಿಸಿದ್ದು ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿತು. ಈ ಮುನ್ನ ಇಂತಹ ದಾಳಿಗಳನ್ನು ಖಂಡಿಸಿದರೂ, ಇದಕ್ಕೆ ಜನಾಂಗೀಯ ದ್ವೇಷ ಕಾರಣವಲ್ಲ ಎಂದೇ ಅಲ್ಲಿನ ಸರ್ಕಾರ ಪ್ರತಿಪಾದಿಸಿತ್ತು.
ಭಾರತದಲ್ಲಿರುವ ಆಸ್ಟ್ರೇಲಿಯಾದ ಹೈ ಕಮಿಷನರ್ ಜಾನ್ ಮೆಕಾರ್ತಿ ಅವರು, 'ಈ ದಾಳಿಗಳಲ್ಲಿ ಜನಾಂಗೀಯ ದ್ವೇಷದ ಲಕ್ಷಣ ಕಂಡುಬಂದಿದೆ' ಎಂದು ಹೇಳಿದರು. ಸಾಗರೋತ್ತರ ಭಾರತೀಯ ವ್ಯವಹಾರ ಸಚಿವ ವಯಲಾರ್ ರವಿ ಅವರನ್ನು ಭೇಟಿ ಮಾಡಿದ್ದ ಮೆಕಾರ್ತಿ, ಭಾರತೀಯ ವಿದ್ಯಾರ್ಥಿಗಳ ಮೇಲಿನ ದಾಳಿ ತಡೆಗೆ ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಕಳೆದ ತಿಂಗಳೊಂದರಲ್ಲೇ ಆಸ್ಟ್ರೇಲಿಯಾದಲ್ಲಿ 8 ಭಾರತೀಯ ವಿದ್ಯಾರ್ಥಿಗಳು ಹಲ್ಲೆಗೆ ಒಳಗಾಗಿದ್ದರು.

2009: ಲೋಕಸಭೆಯ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ನಾಯಕರಾಗಿ ಪಕ್ಷದ ಅಧ್ಯಕ್ಷ ಮತ್ತು ಕೃಷಿ ಸಚಿವ ಶರದ್ ಪವಾರ್ ಆಯ್ಕೆಯಾದರು. ಉಪನಾಯಕರಾಗಿ ನಾಗರಿಕ ವಿಮಾನಯಾನ ರಾಜ್ಯ ಸಚಿವ ಪ್ರಫುಲ್ ಪಟೇಲ್ ಮತ್ತು ಮುಖ್ಯ ಸಚೇತಕರಾಗಿ ಸಂಜೀವ್ ನಾಯಕ್ ಅವರನ್ನು ಆಯ್ಕೆಮಾಡಲಾಯಿತು.

2009: ಬೆಲ್‌ಗ್ರೇಡ್ (ಟಾನ್‌ಜುಂಗ್): ಕೋಸ್ಟಲಾಕ್ ಸಮೀಪದ ಪ್ರಾಚ್ಯ ಉದ್ಯಾನದಲ್ಲಿ ಸುಮಾರು ಹತ್ತು ಲಕ್ಷ ವರ್ಷಗಳಷ್ಟು ಹಿಂದಿನದು ಎಂದು ಅಂದಾಜಿಸಲಾದ ಅಸ್ಥಿಪಂಜರವೊಂದು ಪತ್ತೆಯಾಯಿತು. ಐದು ಮೀಟರ್ ಉದ್ದ ಮತ್ತು 10 ಟನ್ ತೂಗುವ ಈ ಅಸ್ಥಿಪಂಜರ ದಕ್ಷಿಣ ಮಹಾಗಜ ಪ್ರಬೇಧಕ್ಕೆ ಸೇರಿದ್ದು ಎಂದು ಅಂದಾಜು ಮಾಡಲಾಯಿತು. ಹತ್ತು ಲಕ್ಷ ವರ್ಷಗಳ ಹಿಂದೆ ಇಂಥ ಮಹಾಗಜಗಳು ಉತ್ತರ ಆಫ್ರಿಕಾದಿಂದ ಯೂರೋಪಿನತ್ತ ವಲಸೆ ಹೋಗಿದ್ದವು ಎಂದು ಭಾವಿಸಲಾಗಿದ್ದು, 27 ಅಡಿ ಆಳದಲ್ಲಿ ಈ ಅಸ್ಥಿ ಪತ್ತೆಯಾಯಿತು ಎಂದು ಉದ್ಯಾನದ ನಿರ್ದೇಶಕ ಮಯೋಮಿರ್ ಕೊರಾಕ್ ತಿಳಿಸಿದರು.

2009: ಭಾರಿ ಭಿಗಿಭದ್ರತಾ ವ್ಯವಸ್ಥೆ ಹೊಂದಿರುವ ವಿಶ್ವದ ನಾನಾ ಜೈಲುಗಳಿಂದ ಪರಾರಿಯಾಗುವ ಮೂಲಕ ಕುಖ್ಯಾತನಾದ ಚಾರ್ಲ್ಸ್ ಶೋಭ್‌ ರಾಜ್‌ಗೆ ನೇಪಾಳದ ಕಠ್ಮಂಡುವಿನ ಕೆಳಹಂತದ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು 2000 ನೇಪಾಳ ರೂಪಾಯಿ ದಂಡ ವಿಧಿಸಿತು. ನಕಲಿ ಪಾಸ್‌ಪೋರ್ಟ್ ಬಳಸಿ ಇಲ್ಲಿಗೆ ಆಗಮಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತು. ಆದರೆ ಆತ ಇದಕ್ಕೆ ಮುನ್ನವೇ ಕೊಲೆ ಪ್ರಕರಣ ಒಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ.

2009: ದಾವಣಗೆರೆಯ 'ಗ್ರೀನ್ ಇಂಡಿಯಾ ವಾಲಂಟೀರ್ಸ್‌ ಫಾರ್ ಎನ್ವಿರಾನ್ಮೆಂಟ್' ಹಾಗೂ ವಿದ್ಯಾಸಾಗರ ಕಾನ್ವೆಂಟ್ ವತಿಯಿಂದ ನೀಡಲಾಗುವ ಪಂಪಾಪತಿ ಪರಿಸರ ಪ್ರಶಸ್ತಿಗೆ ಈ ವರ್ಷ ಬೆಂಗಳೂರಿನ ಸಹಕಾರ ನಗರದ ಪರಿಸರ ಪ್ರೇಮಿ ಎಂ.ಎಸ್. ಸುರೇಶ್‌ಕುಮಾರ್ ಅವರನ್ನು ಆಯ್ಕೆಮಾಡಲಾಯಿತು. ಸಹಕಾರ ನಗರದ ಎರಡೂವರೆ ಕಿ.ಮೀ. ರೈಲುಮಾರ್ಗದ ಎರಡೂ ಬದಿ ಒಂದು ಸಾವಿರ ಗಿಡನೆಟ್ಟು, ಪ್ರತಿ ಮರಕ್ಕೂ ಶ್ರೇಷ್ಠ ಕನ್ನಡಿಗರ ಹೆಸರಿಟ್ಟು ಪರಿಸರ ಹಾಗೂ ಕನ್ನಡದ ಪ್ರೀತಿ ಬೆಳೆಸಿದ ಸುರೇಶ್‌ಗೆ ಪಂಪಾಪತಿ ಪ್ರಶಸ್ತಿ ಒಲಿಯಿತು.

2008:  ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠದ ಕಾರ್ಯಾರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿತು. ಗಗನಕುಸುಮ ಎಂದೇ ಭಾವಿಸಲಾಗಿದ್ದ ಈ ಪೀಠಗಳ ಆರಂಭಕ್ಕೆ ಹೈಕೋರ್ಟ್ ಪೂರ್ಣಪೀಠದ ಮುದ್ರೆ ಬಿದ್ದಿದ್ದು, ಈ ಸಂಬಂಧ ಈದಿನ ಅಧಿಸೂಚನೆ ಹೊರ ಬಿದ್ದಿತು. ಪೀಠಗಳ ಕಾರ್ಯಾರಂಭಕ್ಕೆ ಜುಲೈ 7ರ ಮುಹೂರ್ತ ನಿಗದಿ ಪಡಿಸಲಾಯಿತು. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ವಕೀಲರ ಸುದೀರ್ಘ ಹೋರಾಟಕ್ಕೆ ಐದು ದಶಕಗಳ ನಂತರ (54 ವರ್ಷ) ನಂತರ ಫಲ ಸಿಕ್ಕಿದಂತಾಯಿತು.

2008: ಅಮೆರಿಕದ ಸೆನೆಟರ್ ಬರಾಕ್ ಒಬಾಮಾ ಅವರು ಅಂತಿಮವಾಗಿ ಅಧ್ಯಕ್ಷೀಯ ಚುನಾವಣೆಗೆ  ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರು. ಇದರೊಂದಿಗೆ  ರಾಷ್ಟ್ರದ ಮೊತ್ತ ಮೊದಲ ಕರಿಯ ಅಧ್ಯಕ್ಷರಾಗುವ ಗುರಿಯೆಡೆಗೆ ಅವರು ಚಾರಿತ್ರಿಕ ಹೆಜ್ಜೆ ಇರಿಸಿದರು. ಅಧ್ಯಕ್ಷೀಯ ಹುದ್ದಗೆ ಒಬಾಮಾ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಹಿಲರಿ  ಕ್ಲಿಂಟನ್ ಉಪಾಧ್ಯಕ್ಷ ಹುದ್ದೆಯೆಡೆಗೆ ತಮ್ಮ ದೃಷ್ಟಿ  ನೆಟ್ಟರು. ಒಬಾಮಾ ಅವರ ವಿಜಯವು ಅರಿಜೋನಾದ ರಿಪಬ್ಲಿಕನ್ ಸೆನೆಟರ್ ಜಾನ್ ಮೆಕ್ಕೈನ್ ಅವರ ಜೊತೆಗೆ ಐದು ತಿಂಗಳ ವಾಕ್ ಸಮರಕ್ಕೆ ವೇದಿಕೆಯನ್ನು ಸಜ್ಜುಗೊಳಿಸಿತು.

2008: ಯುನೈಟೆಡ್ ಅರಬ್ ಎಮಿರೇಟ್ಸಿನಲ್ಲಿ (ಯುಎಇ) ಹೋಟೆಲ್ ಕಟ್ಟಡ  ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ನಿರ್ಮಾಣ ಹಂತದಲ್ಲಿದ್ದ ಛಾವಣಿ ಕುಸಿದು ಮೂವರು ಭಾರತೀಯ ಕಾರ್ಮಿಕರು ಮೃತರಾದರು.

2008: ದಿನಕ್ಕೊಂದು ಲೋಟ ಕೆಂಪು  ವೈನ್ ಕುಡಿಯುವುದರಿಂದ ಹೃದಯಕ್ಕೆ ರಕ್ಷಣೆ ಒದಗುವುದು, ಜೊತೆಗೆ ವಯಸ್ಸಾಗುವುದನ್ನು ತಡೆಗಟ್ಟಬಹುದೆಂದು ಸಂಶೋಧನೆಯೊಂದು ತಿಳಿಸಿತು. ಕೆಂಪು ವೈನ್ ತಯಾರಿಕೆಯಲ್ಲಿ ಬಳಸುವ ಕೆಂಪು ದ್ರಾಕ್ಷಿಯ ತೊಗಟೆಯಲ್ಲಿನ ಅಂಶವೊಂದು ವಯಸ್ಸಾಗುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು  ಕಂಡುಕೊಂಡರು. ಕೆಂಪು ದ್ರಾಕ್ಷಿಯ ತೊಗಟೆಯಲ್ಲಿನ ಈ ಅಂಶ ಕ್ಯಾನ್ಸರ್ ತಡೆಯುವುದು, ಅಲ್ಲದೇ ಉರಿಯನ್ನು ಕಡಿಮೆ ಮಾಡುವುದು ಎಂಬುದನ್ನು ಈ ಮೊದಲೇ ಕಂಡುಕೊಳ್ಳಲಾಗಿತ್ತು. ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಈ ಸಂಗತಿ ಧೃಡಪಟ್ಟಿದೆ ಎಂದು  ಸಂಶೋಧಕರು ತಿಳಿಸಿದರು.

2008: ದೇಶದಾದ್ಯಂತ ವ್ಯಾಪಕ ವಿರೋಧದ ನಡುವೆಯೂ ಯುಪಿಎ ನೇತೃತ್ವದ ಕೇಂದ್ರ ಸಕರ್ಾರವು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಸಿತು. ಇಂಧನ ಕಂಪೆನಿಗಳ ನಷ್ಟದ ಭಾರ ಕಡಿಮೆ ಮಾಡಲು, ದೇಶದಲ್ಲಿನ ಚಿಲ್ಲರೆ ಮಾರಾಟದ ಪ್ರತಿ ಲೀಟರ್ ಪೆಟ್ರೋಲಿಗೆ ರೂ 5, ಡೀಸೆಲ್ಗೆ ರೂ 3 ಮತ್ತು ಅಡುಗೆ ಅನಿಲಕ್ಕೆ ರೂ 50 ರಷ್ಟು ಹೆಚ್ಚಳವನ್ನು ಈದಿನ ಮಧ್ಯರಾತ್ರಿಯಿಂದ ಮಾಡಲಾಯಿತು

 2008: ವಿವಿಧೆಡೆಗಳಲ್ಲಿ ಸಿಡಿಲಿಗೆ ಏಳು ಮಂದಿ ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ಘಟನೆ ಜಾರ್ಖಂಡಿನ ಡುಮಕ್ನಲ್ಲಿ ಸಂಭವಿಸಿತು.

2008: ನೇಪಾಳದಲ್ಲಿ ದೊರೆ ಪಟ್ಟದಿಂದ ಪದಚ್ಯುತಗೊಂಡ ಮೇಲೆ ತಮ್ಮ ವಂಶಜರು ವಂಶಪಾರಂಪರ್ಯವಾಗಿ ನೆಲೆಸುತ್ತಾ ಬಂದಿದ್ದ `ನಾರಾಯಣಹಿತಿ' ಅರಮನೆ ತೊರೆದ ಜ್ಞಾನೇಂದ್ರ ಅವರಿಗೆ ಕಠ್ಮಂಡುವಿನ ಹೊರವಲಯದಲ್ಲಿನ ನಾಗಾರ್ಜುನ ಅರಮನೆಯಲ್ಲಿ ನೆಲೆಸಲು ಸರ್ಕಾರ ಒಪ್ಪಿಗೆ ಕೊಟ್ಟಿತು. ಜ್ಞಾನೇಂದ್ರ ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡುವ ತನಕ ನಾಗಾರ್ಜುನ ಅರಮನೆಯಲ್ಲಿ ನೆಲೆಸಲು ಮಾವೊವಾದಿಗಳು ಸೇರಿದಂತೆ ಎಲ್ಲಾ ಪ್ರಮುಖ ಪಕ್ಷಗಳ, ಸರ್ಕಾರದ ಒಪ್ಪಿಗೆಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದರು.

2007: ಸಾಲುಮರದ ತಿಮ್ಮಕ್ಕ, ಡಾ. ವಿಜಯ್ ಅಂಗಡಿ, ಎಂ.ಆರ್. ಪ್ರಭಾಕರ ಮತ್ತು ಕೇಶವ ಹೆಗಡೆ ಕೊರ್ಸೆ ಸೇರಿದಂತೆ ನಾಲ್ಕು ಮಂದಿ ಗಣ್ಯರು ಹಾಗೂ ನಾಲ್ಕು ಸಂಸ್ಥೆಗಳು 2007-08ನೇ ಸಾಲಿನ `ಪರಿಸರ ಪ್ರಶಸ್ತಿ'ಗೆ ಆಯ್ಕೆಯಾದವು.

2007: ಬಂಜರು ಭೂಮಿಯಲ್ಲಿ ಹಸಿರುಕ್ಕಿಸಿರುವ ಬೀದರ್ ಅರಣ್ಯ ಅಭಿವೃದ್ಧಿ ಸಂಸ್ಥೆ ಮತ್ತು ಕೈಯಿಂದ ಹಣ ಖರ್ಜು ಮಾಡಿ ಚನ್ನರಾಯಪಟ್ಟಣದಲ್ಲಿ ನೂರಾರು ಮರಗಳನ್ನು ಬೆಳೆಸಿದ ಸಿ.ಎನ್. ಅಶೋಕ ಅವರು 2005ರ ಸಾಲಿನ ಕೇಂದ್ರ ಸರ್ಕಾರದ `ಇಂದಿರಾ ಪ್ರಿಯದರ್ಶಿನಿ' ಪ್ರಶಸ್ತಿಗೆ ಆಯ್ಕೆಯಾದರು.

2007: ಹೆಚ್ಚುತ್ತಿರುವ ಜಗ ತಾಪ ಏರಿಕೆ ಪರಿಣಾಮವಾಗಿ ಅಪರೂಪದ ಕೆಲವು ಜೀವ ಸಂಕುಲಗಳು ನಶಿಸುವ ಅಂಚಿಗೆ ತಲುಪಿವೆ. ನ್ಯೂಜಿಲೆಂಡ್ ನೆಲದಲ್ಲಿ ಮಾತ್ರ ಕಂಡು ಬರುವ ಡೈನೋಸಾರ್ ಯುಗಕ್ಕೆ ಸೇರಿದ ಅಪರೂಪದ ಸರೀಸೃಪ ಸಂತಾನೋತ್ಪತ್ತಿ ನಿಲ್ಲಿಸಿದೆ. ಆಮೆ, ಓತಿಕ್ಯಾತ ಇತ್ಯಾದಿ ಜೀವಿಗಳೂ, ಅವುಗಳಲ್ಲೂ ವಿಶೇಷವಾಗಿ ಓತಿಕ್ಯಾತಗಳು ವಿನಾಶದ ಅಂಚಿನತ್ತ ಸಾಗುತ್ತಿವೆ. ಅವುಗಳ ಮೊಟ್ಟೆಗಳಿಂದ ಗಂಡು ಸಂತಾನ ಮಾತ್ರ ಹುಟ್ಟುತ್ತಿದ್ದು ಇದಕ್ಕೆ ಜಗ ತಾಪ ಏರಿಕೆ ಕಾರಣ ಎಂದು ವೆಲ್ಲಿಂಗ್ಟನ್ ವಿಜ್ಞಾನಿಗಳು ಪ್ರಕಟಿಸಿದರು.

2007: ಧಾರವಾಡ ಸಮೀಪದ ಬೇಲೂರಿನಲ್ಲಿ ಟಾಟಾ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದ್ದ ಐಶಾರಾಮಿ ಮತ್ತು ಸಣ್ಣ ಬಸ್ ಹಾಗೂ ಲಘು ವಾಣಿಜ್ಯ ವಾಹನ ಉತ್ಪಾದನಾ ಘಟಕ್ಕೆ ಈಗಾಗಲೇ ನೀಡಲಾದ 600 ಎಕರೆ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 300 ಎಕರೆ ನೀಡುವ ಮೂಲಕ ಕರ್ನಾಟಕ ಸಚಿವ ಸಂಪುಟ ಈ ಯೋಜನೆಗೆ ಅನುಮತಿ ನೀಡಿತು.

2007: ಕುಡಿದು ವಾಹನ ಚಲಾಯಿಸಿದ ತಪ್ಪಿಗಾಗಿ 10 ದಿನಗಳ ಕಾಲ ಸಂಚಾರ ನಿರ್ವಹಣೆಯಲ್ಲಿ ಪೊಲೀಸರಿಗೆ ನೆರವಾಗುವಂತೆ ನವದೆಹಲಿಯ ವ್ಯಕ್ತಿಯೊಬ್ಬನಿಗೆ ಆಜ್ಞಾಪಿಸುವ ಮೂಲಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌತಮ್ ಮನನ್ ಇತಿಹಾಸ ನಿರ್ಮಿಸಿದರು. ದಕ್ಷಿಣ ದೆಹಲಿಯ ದೀಪಕ್ ಗುಪ್ತನಿಗೆ ಫೆಬ್ರುವರಿ 16ರಂದು ಕುಡಿದು ವಾಹನ ಚಲಾಯಿಸಿದ್ದಕ್ಕೆ ಈ ಶಿಕ್ಷೆ ನೀಡಲಾಯಿತು.

2006: ಅಸ್ವಸ್ಥಗೊಂಡು ಎರಡು ದಿನಗಳ ಹಿಂದೆ ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಾದ ರಾಹುಲ್ ಮಹಾಜನ್ ಮೂತ್ರದಲ್ಲಿ ಕೊಕೇನ್ ಪತ್ತೆಯಾಗಿದ್ದು ಮದ್ಯ ಹಾಗೂ ಮಾದಕ ದ್ರವ್ಯಗಳ ಮಿಶ್ರಣವೇ ವಿವೇಕ ಮೊಯಿತ್ರಾ ಸಾವು ಹಾಗೂ ರಾಹುಲ್ ಅಸ್ವಾಸ್ಥ್ಯಕ್ಕೆ ಕಾರಣ ಎಂದು ವೈದ್ಯಕೀಯ ವರದಿಗಳು ತಿಳಿಸಿದವು.

2006: ಬಿಜೆಪಿ ಧುರೀಣ ಪ್ರಮೋದ್ ಮಹಾಜನ್ ಅವರ ನೆರಳಿನಂತೆಯೇ ಇದ್ದ ವಿವೇಕ್ ಮೊಯಿತ್ರ ಅವರ ಅಂತ್ಯಕ್ರಿಯೆ ಮುಂಬೈಯಲ್ಲಿ ನಡೆಯಿತು. ಮಹಾಜನ್ ಅವರ ಅಂತ್ಯಕ್ರಿಯೆ ಮೇ 4ರಂದು ನಡೆದರೆ, ಒಂದು ತಿಂಗಳ ನಂತರ ಅದೇ ದಿನಾಂಕದಂದು ಮೈತ್ರ ಅವರೂ ಚಿತೆಯೇರುವಂತಾದುದು ವಿಧಿ ವಿಲಾಸ. 39 ವರ್ಷ ವಯಸ್ಸಿನ ಮೊಯಿತ್ರ ಅವರು ಜೂನ್ 2ರಂದು ನಸುಕಿನ ವೇಳೆಯಲ್ಲಿ ದೆಹಲಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ವಿಷಪ್ರಾಶನಕ್ಕೆ ಒಳಗಾಗಿ ಮೃತರಾದರು. ಕಳೆದ 22 ವರ್ಷಗಳಿಂದ ಬಿಜೆಪಿಯಲ್ಲಿ ಇದ್ದ ಮೊಯಿತ್ರ ಮೊದಲಿಗೆ ಗೋಪಿನಾಥ ಮುಂಡೆ ಹಾಗೂ ನಂತರ ಪ್ರಮೋದ್ ಮಹಾಜನ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು.

1997: ಅಜಿತ್ ಭಾರಿಹೋಕ್ ನೇತೃತ್ವದ ವಿಶೇಷ ನ್ಯಾಯಾಲಯವು ಸೇಂಟ್ ಕಿಟ್ಸ್ ಹಗರಣದಲ್ಲಿ ಆಪಾದಿತರಾಗಿದ್ದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಕೆ.ಕೆ. ತಿವಾರಿ ಅವರನ್ನು ಅರೋಪಮುಕ್ತಗೊಳಿಸಿತು. ನರಸಿಂಹರಾವ್ ವಿರುದ್ಧ ಹೂಡಲಾಗಿದ್ದ ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಿಟ್ಸ್ ಪ್ರಕರಣವೂ ಒಂದು. ಜಾರ್ಖಂಡ್ ಮುಕ್ತಿ ಮೋರ್ಚಾ ಹಗರಣ ಮತ್ತು ಲಖೂಬಾಯಿ ಪಾಠಕ್ ಹಗರಣ - ಇವು ನರಸಿಂಹರಾವ್ ವಿರುದ್ಧ ಹೂಡಲಾದ ಇತರ ಎರಡು ಭ್ರಷ್ಟಾಚಾರ ಪ್ರಕರಣಗಳು.
1989: ಚೀನಾದ ಪಡೆಗಳು ಪ್ರಜಾಪ್ರಭುತ್ವ ಪರ ಚಳವಳಿಗಾರರನ್ನು ದಮನ ಮಾಡುವ ಸಲುವಾಗಿ ಬೀಜಿಂಗಿನ ಟಿಯನಾನ್ ಮನ್ ಚೌಕದಲ್ಲಿ ಚಳವಳಿಗಾರರಿಗೆ ಮುತ್ತಿಗೆ ಹಾಕಿದವು. ಈ ದಮನ ಕಾರ್ಯಾಚರಣೆಯಲ್ಲಿ ಸುಮಾರು 2600 ಜನ ಸತ್ತು, 10,000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1959: ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಮದ್ರಾಸಿನ (ಈಗಿನ ಚೆನ್ನೈ) ವಿವೇಕಾನಂದ ಕಾಲೇಜಿನಲ್ಲಿ ಸ್ವತಂತ್ರ ಪಕ್ಷದ ಸ್ಥಾಪನೆ ಮಾಡಿದರು.

1955: ಸಾಹಿತಿ ಶಕುಂತಳಾ ಭಟ್ ಜನನ.

1955: ಭಾರತದ ಕಬ್ಬಿಣ ಮತ್ತು ಉಕ್ಕು ಸಚಿವಾಲಯ ಸ್ಥಾಪನೆ.

1953: ಗಾಯಕಿ ಡಾ.ಆರ್. ಎನ್. ಶ್ರೀಲತಾ ಅವರು ಆರ್. ಕೆ. ನಾರಾಯಣಸ್ವಾಮಿ- ಸಾವಿತ್ರಮ್ಮ ದಂಪತಿಯ ಮಗಳಾಗಿ ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ ಜನಿಸಿದರು.

1947: ಸಾಹಿತಿ ಸಂಶೋಧಕ ವೀರಣ್ಣ ರಾಜೂರ ಅವರು ಬಸಪ್ಪ- ಫಕೀರಮ್ಮ ದಂಪತಿಯ ಪುತ್ರನಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ ಈದಿನ ಜನಿಸಿದರು.

1936: ಭಾರತೀಯ ಚಲನಚಿತ್ರ ತಾರೆ ನೂತನ್ ಸಮರ್ಥ (1936-1991) ಜನ್ಮದಿನ.

1932: ರಾಮಕೃಷ್ಣ ಪರಮಹಂಸರ ಅನುಯಾಯಿ ಮಹೇಂದ್ರನಾಥ ಗುಪ್ತ ನಿಧನ.

1903: ಗಾಂಧೀಜಿ ಅವರು `ಇಂಡಿಯನ್ ಒಪೀನಿಯನ್' ಪತ್ರಿಕೆ ಆರಂಭಿಸಿದರು.

1872: ಇಂಗ್ಲಿಷ್ ರಸಾಯನ ವಿಜ್ಞಾನ ತಜ್ಞ ಆಗಸ್ಟಸ್ ಚೆಸ್ ಬ್ರೊ ತಾನು ಅಭಿವೃದ್ಧಿ ಪಡಿಸಿದ `ಪೆಟ್ರೋಲಿಯಂ ಜೆಲ್ಲಿಗಾಗಿ ಪೇಟೆಂಟ್ ಪಡೆದ. 1859ರಲ್ಲಿ ಪೆನ್ಸಿಲ್ವೇನಿಯಾ ಮತ್ತು ಟಿಟ್ಸುವಿಲ್ನಲ್ಲಿ ಹೊರಚಿಮ್ಮಿದ ತೈಲಕ್ಕೆ ಗಾಯಗಳನ್ನು ಗುಣಪಡಿಸುವ ಗುಣ ಇದೆ ಎಂದು ಕಾರ್ಮಿಕರು ಪತ್ತೆ ಹಚ್ಚಿದ್ದನ್ನು ಅನುಸರಿಸಿ ಸಂಶೋಧನೆ ನಡೆಸಿದ ಈತ 1870ರಿಂದ `ವ್ಯಾಸಲೀನ್' ಎಂಬ ಟ್ರೇಡ್ ಮಾರ್ಕಿನಲ್ಲಿ  ತಾನು ಕಂಡು ಹಿಡಿದ `ಪೆಟ್ರೋಲಿಯಂ ಜೆಲ್ಲಿ'ಯ ಉತ್ಪಾದನೆ ಆರಂಭಿಸಿದ.

1783: ಅನ್ನೋನೆಯ ಮಾರುಕಟ್ಟೆ ಪ್ರದೇಶದಲ್ಲಿ ಮಾಂಟೆಗೋಲ್ಫಿಯರ್ ಸಹೋದರರಾದ ಜೋಸೆಫ್ ಮೈಕೆಲ್ ಮತ್ತು ಜಾಕ್ವೆಸ್ ಎಟಿನ್ ಮೊತ್ತ ಮೊದಲ `ಏರ್ ಹಾಟ್ ಬಲೂನಿನ' (ಬಿಸಿಗಾಳಿ ಬಲೂನ್) ಸಾರ್ವಜನಿಕ ಪ್ರದರ್ಶನ ನಡೆಸಿದರು. ಬಲೂನ್ 3000 ಅಡಿಗಳಷ್ಟು ಎತ್ತರಕ್ಕೆ ಏರಿ 10 ನಿಮಿಷಗಳ ಕಾಲ ಆಕಾಶದಲ್ಲಿ ಉಳಿಯಿತು. ನಂತರ ಒಂದೂವರೆ ಮೈಲು ದೂರ ಸಾಗಿ ನೆಲಕ್ಕೆ ಇಳಿಯಿತು.

(
ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment