Thursday, February 21, 2019

ಇಂದಿನ ಇತಿಹಾಸ History Today ಫೆಬ್ರುವರಿ 21

ಇಂದಿನ ಇತಿಹಾಸ History Today ಫೆಬ್ರುವರಿ 21
2019: ಇಸ್ಲಾಮಾಬಾದ್​:  166ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ 2008 ಮುಂಬೈ ದಾಳಿಯ ಸೂತ್ರಧಾರಿಹಫೀಜ್ಸಯೀದ್ನೇತೃತ್ವದ ಜಮಾತ್​-ಉದ್​-ದವಾ  (ಜೆಯುಡಿ) ಮತ್ತು ಅದರ ಅಂಗಸಂಸ್ಥೆಯಾದ ಫಲ್ಹಾ--ಇನ್ಸಯಾತ್ಫೌಂಡೇಶನ್ಸಂಸ್ಥೆಯನ್ನು  ಪಾಕಿಸ್ತಾನ ನಿಷೇಧಿಸಿತು. 2019ರ ಫೆಬ್ರುವರಿ 14ರಂದು ಜೈಶ್ –ಇ-ಮೊಹಮ್ಮದ್  ಉಗ್ರಗಾಮೀ ಸಂಘಟನೆಗೆ ಸೇರಿದ ಭಯೋತ್ಪಾದಕರು  ದಕ್ಷಿಣ ಕಾಶ್ಮೀರದ ಪುಲ್ವಾಮ ಬಳಿ  ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ 40 ​ ಯೋಧರನ್ನು ಕೊಂದ ಬಳಿಕ ಉಗ್ರ ಸಂಘಟನೆಗಳನ್ನು ದಮನಿಸುವಂತೆ ಜಾಗತಿಕ ಒತ್ತಡ ಹೆಚ್ಚಾಗುತ್ತಿದ್ದಂತೆಯೇ  ಪಾಕ್  ಸರ್ಕಾರ ಕ್ರಮ ಕೈಗೊಂಡಿತು. ಈ ವಿಷಯವನ್ನು ತಿಳಿಸಿದ ಆಂತರಿಕ ಸಚಿವಾಲಯದ ವಕ್ತಾರ ರು,  ‘ಪ್ರಧಾನಿ ಇಮ್ರಾನ್ಖಾನ್ಅಧ್ಯಕ್ಷತೆಯಲ್ಲಿ ಈದಿನ ರಾತ್ರಿ  ನಡೆದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್ಎಸ್ಸಿ) ಸಭೆಯಲ್ಲಿ ಸಂಘಟನೆಗಳನ್ನು ನಿಷೇಧ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು’  ಎಂದು ತಿಳಿಸಿದರು. ಜಮಾತ್​-ಉದ್​-ದವಾ ಹಾಗೂ ಫಲ್ಹಾ--ಇನ್ಸಯಾತ್ ಸಂಘಟನೆಗಳನ್ನು ನಿಷೇಧ ಮಾಡುವಂತೆ ಆಂತರಿಕ ಸಚಿವಾಲಯ ನಿರ್ಧಾರ ತೆಗೆದುಕೊಂಡಿದೆ  ಎಂದೂ ಸಚಿವಾಲಯದ ವಕ್ತಾರರು  ಸ್ಪಷ್ಟಪಡಿಸಿದರು.  ಜಮಾತ್​-ಉದ್​-ದವಾ ಸಂಘಟನೆಯು 300 ಪಾಠಶಾಲೆ ಸೇರಿದಂತೆ ಶಾಲೆಗಳು, ಆಸ್ಪತ್ರೆಗಳು, ಪಬ್ಲಿಷಿಂಗ್ಹೌಸ್ಮತ್ತು ಆ್ಯಂಬುಲೆನ್ಸ್ಸೇವೆಯನ್ನು ಹೊಂದಿದೆ. ಎರಡು ಗುಂಪುಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಹಾಗು ನೂರಕ್ಕೂ ಹೆಚ್ಚು ವೇತನ ಕೆಲಸಗಾರರು ಇದ್ದಾರೆ ಎಂದು ಮೂಲಗಳು ತಿಳಿಸಿದವು. ಜಮಾತ್-ಉದ್​-ದವಾ ಸಂಘಟನೆಯು 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯ ಜವಾಬ್ದಾರಿ ಹೊತ್ತ ಲಷ್ಕರ್​--ತೊಯ್ಬಾ ಭಯೋತ್ಪಾದಕ ಸಂಘಟನೆಯ ಮುಂಚೂಣಿ ಸಂಘಟನೆ ಎಂದು ನಂಬಲಾಗಿದೆ.  2014ರಲ್ಲಿ ಸಂಘಟನೆಯನ್ನು ಅಮೆರಿಕ ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು. 2012ರಲ್ಲಿ ಸಯೀದ್ಬಗ್ಗೆ ಮಾಹಿತಿ ನೀಡಿದವರಿಗೆ 100 ಲಕ್ಷ  (1 ಕೋಟಿ) ಅಮೆರಿಕನ್ ಡಾಲರ್ಬಹುಮಾನವನ್ನು ಅಮೆರಿಕ ಹಣಕಾಸು ವಿಭಾಗ ಘೋಷಣೆ ಮಾಡಿತ್ತು. ವಿಶ್ವಸಂಸ್ಥೆ ಭದ್ರತಾ ಸಮಿತಿ ಕೂಡ 2008 ಡಿಸೆಂಬರಿನಲ್ಲಿ ಸಯೀದನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಿತ್ತು. 2017 ನವೆಂಬರ್ನಲ್ಲಿ ಈತನನ್ನು  ಪಾಕಿಸ್ತಾನದ ಗೃಹ ಬಂಧನದಿಂದ ಬಿಡುಗಡೆ ಮಾಡಿತ್ತು
ಉಗ್ರಗಾಮಿತ್ವ ಮತ್ತು ತೀವ್ರಗಾಮಿತ್ವ ಸಮಾಜದಲ್ಲಿ ಬೇರೂರಿದೆ. ಇದನ್ನು ಕಿತ್ತೊಗೆಯಬೇಕಾಗಿದೆ.  ಹಾಗೂ ತೀವ್ರವಾದಿಗಳಿಗೆ ರಾಜ್ಯವು ಆಶ್ರಯ ಒದಗಿಸುವುದಿಲ್ಲ ಎಂದು ಇಮ್ರಾನ್ಖಾನ್ಹೇಳಿದ್ದು, ಆಂತರಿಕ ಸಚಿವಾಲಯ ಮತ್ತು ಭದ್ರತಾ ಸಂಸ್ಥೆಗಳಿಗೆ ತಕ್ಷಣದಿಂದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು..

2019: ಲಕ್ನೋ: ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷ (ಎಸ್ಪಿ) ಲೋಕಸಭಾ ಚುನಾವಣೆಗಾಗಿ ಮೈತ್ರಿಯನ್ನು ಅಂತಿಮಗೊಳಿಸಿ ಸ್ಪರ್ಧಿಸಲಿರುವ ಸ್ಥಾನಗಳ ಪಟ್ಟಿಯನ್ನು ಪ್ರಕಟಿಸಿತು. ಸಮಾಜವಾದಿ ಪಕ್ಷವು ಅರ್ಧಕ್ಕಿಂತಲೂ ಕಡಿಮೆ ಸ್ಥಾನ ಪಡೆದುದಕ್ಕಾಗಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಪುತ್ರ ಅಖಿಲೇಶ್ ಯಾದವ್ ವಿರುದ್ಧ ಕೆಂಡಾಮಂಡಲ ಸಿಟ್ಟಿಗೆದ್ದರು. ಅಂತಿಮಗೊಳಿಸಲಾದ ಪಟ್ಟಿಯಂತೆ ಬಹುಜನ ಸಮಾಜ ಪಕ್ಷವು ೩೮ ಸ್ಥಾನಗಳಿಗೆ ಸ್ಪರ್ಧಿಸುವುದರೊಂದಿಗೆ ಮೈತ್ರಿಕೂಟದಲ್ಲಿ ಮಾಯಾವತಿದೊಡ್ಡಕ್ಕ ಸ್ಥಾನ ಗಿಟ್ಟಿಸಿಕೊಂಡಿದ್ದರು. ಸಮಾಜವಾದಿ ಪಕ್ಷವು ೩೭ ಸ್ಥಾನಗಳಿಗೆ ಸ್ಪರ್ಧಿಸಲಿದೆ. ಮೈತ್ರಿಕೂಟದ ಇತರ ಪಕ್ಷಗಳು ಎಷ್ಟೆಷ್ಟು ಸ್ಥಾನಗಳನ್ನು ಪಡೆಯಲಿವೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ರಾಷ್ಟ್ರೀಯ ಜನತಾದಳ (ಆರ್ಜೆಡಿ) ಮೂರು ಸ್ಥಾನಗಳನ್ನು ಪಡೆಯಬಹುದು ಎನ್ನಲಾಯಿತು. ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ಸಹಿ ಮಾಡಿರುವ ಜಂಟಿ ಹೇಳಿಕೆಯಲ್ಲಿ ಉಭಯ ಪಕ್ಷಗಳು ಸ್ಪರ್ಧಿಲಿರುವ ಕ್ಷೇತ್ರಗಳ ಹೆಸರುಗಳನ್ನು ಪ್ರಕಟಿಸಲಾಯಿತು. ಮುಲಾಯಂ ಕೆಂಡ: ಮೈತ್ರಿಯ ವಿವರಗಳು ಹೊರಬೀಳುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಮಗ ಅಖಿಲೇಶ್ ಯಾದವ್ ವಿರುದ್ಧ ಕೆಂಡಾಮಂಡಲ ಸಿಟ್ಟಿಗೆದ್ದಿದ್ದು ತಮ್ಮ ಅತೃಪ್ತಿಯನ್ನು ಬಹಿರಂಗವಾಗಿಯೇ ವ್ಯಕ್ತ ಪಡಿಸಿದರುಸಮಾಜವಾದಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಲಾಯಂಸಿಂಗ್ ಯಾದವ್ ಅವರು ಮಾಯಾವತಿ ಅವರ ಬಿಎಸ್ಪಿಗೆ ಮೈತ್ರಿಕೂಟದಲ್ಲಿ ಅರ್ಧದಷ್ಟು ಸ್ಥಾನಗಳನ್ನು ನೀಡಿರುವುದಕ್ಕೆ ತಾವು ಅಸಮಾಧಾನ ಗೊಂಡಿರುವುದಾಗಿ ಸ್ಪಷ್ಟ ಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿ ಬರಲಿ ಎಂಬುದಾಗಿ ಹಾರೈಸುವ ಮೂಲಕ ಸಂಸತ್ತಿನಲ್ಲಿ ಸಂಚಲನ ಮೂಡಿಸಿದ್ದ ಮುಲಾಯಂ ಸಿಂಗ್ ಅವರು ಈದಿನ ನೀಡಿದ ಹೇಳಿಕೆ ಉತ್ತರ ಪ್ರದೇಶದ ರಾಜಕೀಯವನ್ನು ಇನ್ನಷ್ಟು ಕುತೂಹಲದ ಘಟ್ಟಕ್ಕೆ ತಂದು ನಿಲ್ಲಿಸಿತು. ‘ರಾಜ್ಯದಲ್ಲಿ ಪಕ್ಷಕ್ಕೆ ೪೨ ಸ್ಥಾನಗಳನ್ನು ಗೆಲ್ಲಿಸಿಕೊಟ್ಟವನು ನಾನು. ಬಳಿಕ ನಾನು ರಾಷ್ಟ್ರದ ರಕ್ಷಣಾ ಸಚಿವನಾದೆ. ಆದರೆ ಇಂದು, ನಾವು ಕೇವಲ ಅರ್ಧದಷ್ಟು ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದೇವೆ. ಮೈತ್ರಿಯನ್ನು ಮಾಡಿಕೊಂಡಿರುವುದು ನನ್ನ ಮಗ. ನಾನಾಗಿದ್ದಿದ್ದರೆ ಕಥೆಯೇ ಬೇರಾಗುತ್ತಿತ್ತು..’ ಎಂದು ಮುಲಾಯಂ ಸಿಂಗ್ ಹಲ್ಲು ಕಡಿದರು. ಪಕ್ಷದ ಅತ್ಯಂತ ಹಿರಿಯನಾಗಿದ್ದರೂ, ನನ್ನ ಕೆಲಸ ಏನೆಂಬುದನ್ನು ವಿವರಿಸಲಾಗಿಲ್ಲ ಎಂದೂ ಅವರು ಅತೃಪ್ತಿ ವ್ಯಕ್ತ ಪಡಿಸಿದರು. ‘ಪಕ್ಷದಲ್ಲಿ ಮಹಿಳಾ ಪ್ರಾತಿನಿಧ್ಯ ಗಮನಾರ್ಹವಾಗಿ ಕುಸಿದಿದೆ. ಇದು ಕಳವಳಕಾರೀ ವಿಷಯ. ಹೊತ್ತಿಗಾಗಲೇ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಾಗಿತ್ತು, ಇಲ್ಲದೇ ಇದ್ದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತದೆ ಎಂದು ಅವರು ಟೀಕಿಸಿದರು.  ‘ನಾವು ಬಿಜೆಪಿಯೊಂದಿಗೆ ನೇರ ಹೋರಾಟ ಮಾಡುತ್ತಿದ್ದೇವೆ. ಏನಿದ್ದರೂ, ಈಗ ನಮ್ಮ ಸೀಟುಗಳು ಕಡಿಮೆಯಾಗಿವೆ, ಪರಿಣಾಮವಾಗಿ ನಮ್ಮ ಕಾರ್ಯಕರ್ತರನ್ನೂ ಟ್ರಿಮ್ ಮಾಡಲಾಗಿದೆ. ಯಾವ ಆಧಾರದಲ್ಲಿ ನಾವು ಅರ್ಧಕ್ಕಿಂತಲೂ ಕಡಿಮೆ ಕ್ಷೇತ್ರಗಳಲ್ಲಿ ಹೋರಾಡುತ್ತಿದ್ದೇವೆ  ಎಂಬುದಾಗಿ ಯಾರಾದರೂ ನನಗೆ ವಿವರಿಸಬೇಕು ಎಂದು ಅವರು ನುಡಿದರು. ಇದಕ್ಕೆ ಮುನ್ನ ಲೋಕಸಭೆಯಲ್ಲಿ ಮುಂಗಡಪತ್ರ ಅಧಿವೇಶನದ ಕೊನೆಯ ದಿನ ನರೆಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಿ ಬರಲಿ ಎಂಬುದಾಗಿ ಹಾರೈಸುವ ಮೂಲಕ ಸಮಾಜವಾದಿ ಪಕ್ಷದ ಸಂಸ್ಥಾಪಕ ಎಲ್ಲರ ಹುಬ್ಬೇರಿಸಿದ್ದರು. ಪುತ್ರ ಅಖಿಲೇಶ್ ಮತ್ತು ವಿರೋಧ ಪಕ್ಷಗಳ ಮೋದಿ ವಿರೋಧಿ ನಿಲುವಿಗೆ ಮುಲಾಯಂ ಸಿಂಗ್ ವರ್ತನೆ ವ್ಯತಿರಿಕ್ತವಾಗಿತ್ತು. ಹೊಂದಾಣಿಕೆ: ಗುರುವಾರ ಪ್ರಕಟಿಸಿರುವ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರ ಜಂಟಿ ಪ್ರಕಟಣೆಯ ಪ್ರಕಾರ ಕೈರಾನ, ಮೊರಾದಾಬಾದ್, ಸಂಭಲ್, ರಾಮ್ ಪುರ, ಮೈನ್ ಪುರಿ, ಫಿರೋಜಾಬಾದ್, ಬದೌನ್, ಬರೇಲಿ, ಲಕ್ನೋ, ಎಟಾವಾ, ಕಾನ್ಪುರ, ಕನೌಜ್, ಝಾನ್ಸಿ, ಬಂಡಾ, ಅಲಹಾಬಾದ್, ಕೌಶಾಂಬಿ, ಫುಲ್ಪುರ್, ಪೈಜಾಬಾದ್, ಗೊಂಡಾ, ಗೋರಖ್ ಪುರ, ಆಜಂಗಢ, ವಾರಾಣಸಿ ಮತ್ತು ಮಿರ್ಜಾಪುರ ಇತ್ಯಾದಿ ೩೭ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಸ್ಪರ್ಧಿಸಲಿದೆ. ಸಹರಾನಪುರ, ಬಿಜ್ನೂರ್, ನಗೀನಾ, ಅಲಿಗಢ, ಆಗ್ರಾ, ಫತೇಪುರ ಸಿಕ್ರಿ, ಧೌರಹರ, ಸೀತಾಪುರ, ಸುಲ್ತಾನಪುರ, ಪ್ರತಾಪಗಢ, ಕೈಸರ್ ಗಂಜ್, ಬಸ್ತಿ, ಸಲೇಮಪುರ, ಜೌನಪುರ, ಭದೋಹಿ ಮತ್ತು ದೇವರಿಯಾ ಸೇರಿದಂತೆ ೩೮ ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷ ಸ್ಪರ್ಧಿಸಲಿದೆ. ಕಳೆದ ತಿಂಗಳು ಉಭಯ ಪಕ್ಷಗಳ ಮೈತ್ರಿ ಘೋಷಿಸಿದ್ದ ಉಭಯು ನಾಯಕರು ಎರಡೂ ಪಕ್ಷಗಳು ಸಮಾನ ಸಂಖ್ಯೆಯ ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದರು. ಆದರೆ ಉಭಯ ನಾಯಕರ ಸಹಿಯೊಂದಿಗೆ ಪ್ರಕಟವಾದ ಪ್ರಕಟಣೆಯಂತೆ ಸಮಾಜವಾದಿ ಪಕ್ಷಕ್ಕೆ ಒಂದು ಸ್ಥಾನ ಕಡಿಮೆಯಾಗಿದೆ. ಮೈತ್ರಿ ಪ್ರಕಟಣೆ ವೇಳೆಯಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿರುವ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರದಲ್ಲಿ ಮೈತ್ರಿಕೂಟವು ಅಭ್ಯರ್ಥಿಗಳನ್ನು  ಕಣಕ್ಕೆ ಇಳಿಸುವುದಿಲ್ಲ ಎಂದು ಪ್ರಕಟಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷವು ಪೂರ್ಣ ಬಲದೊಂದಿಗೆ ಹೋರಾಟ ನಡೆಸುವುದು ಎಂಬುದಾಗಿ ಘೋಷಿಸಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರಪ್ರದೇಶ ಪೂರ್ವದ ಹೊಣೆ ನೀಡಿ ಎಐಸಿಸಿ ಕಾರ್ಯದರ್ಶಿಯನ್ನಾಗಿ ಪ್ರಕಟಿಸಿದ ಬಳಿಕ, ಅಖಿಲೇಶ್ ಯಾದವ್ ತಾವು ಕಾಂಗ್ರೆಸ್ ಪಕ್ಷವನ್ನು ಮೈತ್ರಿಯಿಂದ ಹೊರಗಿಟ್ಟಿಲ್ಲ, ಎರಡು ಸ್ಥಾನಗಳನ್ನು ಅವರಿಗಾಗಿ ಬಿಟ್ಟಿದ್ದೇವೆ ಎಂದು ಸಮಜಾಯಿಷಿ ನೀಡಿದ್ದರು. ಉತ್ತರ ಪ್ರದೇಶದ ಪಶ್ಚಿಮ ಭಾಗದ ಹೊಣೆಗಾರಿಕೆಯನ್ನು ಜ್ಯೋತಿರಾದಿತ್ಯ ಸಿಂಧಿಯ ಅವರಿಗೆ ರಾಹುಲ್ ಗಾಂಧಿ ವಹಿಸಿದ್ದರು. ಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ ಅವರಿಗೆನಿದ್ರೆ ರಹಿತ ರಾತ್ರಿಗಳನ್ನು ತರಲಿದೆ ಎಂದು ಅಖಿಲೇಶ್ ಯಾದವ್ ಮತ್ತು ಮಾಯಾವತಿ ಮೈತ್ರಿಕೂಟ ರಚನೆಯನ್ನು ಪ್ರಕಟಿಸುತ್ತಾ ಹೇಳಿದ್ದರು. ಬಿಎಸ್ ಪಿ ಜೊತೆಗಿನ ಮೈತ್ರಿಯು ರಾಜಕೀಯ ಕ್ರಾಂತಿ ಎಂದು ಅಖಿಲೇಶ್ ಯಾದವ್ ವರ್ಣಿಸಿದ್ದರು.

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರು ಇನ್ನು ರಜೆಯಲು ತೆರಳಲು ಮತ್ತು ಪುನಃ ಕರ್ತವ್ಯಕ್ಕೆ ಹಾಜರಾಗಲು ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಸಬಹುದುದಕ್ಷಿಣ ಕಾಶ್ಮೀರದ ಪುಲ್ವಾಮ ಪೈಶಾಚಿಕ ಭಯೋತ್ಪಾದಕ ದಾಳಿ ನಡೆದ ಒಂದು ವಾರದ ಬಳಿಕ ಈದಿನ ಕೇಂದ್ರ ಗೃಹ ಸಚಿವಾಲಯವು ಸಂಬಂಧಪಟ್ಟ ರಂಗಗಳಲ್ಲಿ ಯೋಧರಿಗೆ ವಿಮಾನಯಾನ ಪಯಣಕ್ಕೆ ಅನುಮೋದನೆ ನೀಡಿದೆ. ಕೇಂದ್ರದ ಕ್ರಮದಿಂದ .೮೦ ಲಕ್ಷ ಅರೆಸೇನಾ ಪಡೆ ಯೋಧರಿಗೆ ಅನುಕೂಲವಾಗಲಿದೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿತು. ದೆಹಲಿ-ಶ್ರೀನಗರ, ಶ್ರೀನಗರ-ದೆಹಲಿ, ಜಮ್ಮು-ಶ್ರೀನಗರ ಮತ್ತು ಶ್ರೀನಗರ -ಜಮ್ಮು ರಂಗಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಎಲ್ಲ ಸಿಬ್ಬಂದಿಗೆ ವಿಮಾನಯಾನ ಸವಲತ್ತಿಗೆ ಅನುಮೋದನೆ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಆದೇಶ ತಿಳಿಸಿತು. ‘ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್ ಮತ್ತು ಎಎಸ್ ದಜೆಯ ಯೋಧರು ಈಗ ಜಮ್ಮು ಮತ್ತು ಕಾಶ್ಮೀರದಿಂದ ರಜೆಂiಲ್ಲಿ ತೆರಳುವಾಗ ಮತ್ತು ವಾಪಸಾಗುವಾಗ ವಾಣಿಜ್ಯ ವಿಮಾನಗಳಲ್ಲಿ ಪಯಣಿಸಬಹುದು ಎಂದು ಆದೇಶ ಹೇಳಿತು. ಹಿಂದೆ ವರ್ಗದ ಯೋಧರಿಗೆ ವಿಮಾನಯಾನ ಸವಲತ್ತು ಇರಲಿಲ್ಲ. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಿಗೆ ಈಗ ಇರುವ ವೈಮಾನಿಕ ಕೊರಿಯರ್ ಸೇವೆಗಳಿಗೆ ಹೊಸದಾಗಿ ಸವಲತ್ತನ್ನು ಸೇರ್ಪಡೆ ಮಾಡಲಾಗಿದೆ. ಯೋಧರಿಗೆ ರಜೆಯಲ್ಲಿ ತೆರಳುವಾಗ ಮತ್ತು ಕರ್ತವ್ಯಕ್ಕೆ ಮತ್ತೆ ಹಾಜರಾಗುವಾಗ ಪಯಣದಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ನಿಟ್ಟಿನಲ್ಲಿ ಯೋಧರಿಗೆ ನೆರವಾಗಲು ಸವಲತ್ತನ್ನು ಗೃಹ ಸಚಿವಾಲಯವು ಎಲ್ಲ ರಂಗಗಳಿಗೆ ವಿಸ್ತರಿಸಿದೆ ಎಂದು ಸರ್ಕಾರದ ಆದೇಶ ಹೇಳಿತು. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಬೆಂಗಾವಲು ವಾಹನದ ಮೇಲೆ ಕಳೆದವಾರ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿತು. ಜಮ್ಮುವಿನಿಂದ ಶ್ರೀನಗರಕ್ಕೆ ೭೮ ಬೆಂಗಾವಲು ವಾಹನಗಳು ೨೫೦೦ ಅರೆಸೇನಾ ಪಡೆ ಯೋಧರನ್ನು ಒಯ್ಯುತ್ತಿದ್ದಾಗ ನಡೆದ ದಾಳಿಯಲ್ಲಿ ಕನಿಷ್ಠ ೪೦ ಯೋಧರು ಹುತಾತ್ಮರಾಗಿದ್ದರು. ಜಮ್ಮು -ಶ್ರೀನಗರ ಹೆದ್ದಾರಿಯಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ಪಿಎಫ್ ಬೆಂಗಾವಲು ವಾಹನವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿತ್ತು. ಸರ್ಕಾರದ ಆದೇಶದ ಪ್ರಕಾರ ಯೋಧರು ಈಗ ತಮ್ಮ ವಾಣಿಜ್ಯ ವಿಮಾನಯಾನದ ಟಿಕೆಟ್ಗಳನ್ನು ಬುಕ್ ಮಾಡಬಹುದು ಮತ್ತು ಅದಕೆ ಪಾವತಿ ಮಾಡಿದ ಹಣವನ್ನು ಸಂಸ್ಥೆ ಅಥವಾ ಪಡೆಯಿಂದ ಮರುಪಾವತಿ ಪಡೆಯಬಹುದು.

2019: ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆಯಾಗಿರುವ ನೌಕರರ ಭವಿಷ್ಯನಿಧಿ ಸಂಸ್ಥೆಯು (ಇಪಿಎಫ್) ಭವಿಷ್ಯ ನಿಧಿ ಠೇವಣಿಗೆ  ನೀಡಲಾಗುವ ಬಡ್ಡಿಯನ್ನು ೨೦೧೮-೧೯ರ ಸಾಲಿನಲ್ಲಿ ಶೇಕಡಾ .೬೫ಕ್ಕೆ ಏರಿಸಲು ನಿರ್ಧರಿಸಿತು.  ಸಂಸ್ಥೆಯು ಕಳೆದ ವರ್ಷ ಶೇಕಡಾ .೫೫ ಬಡ್ಡಿದರವನ್ನು ನಿಗದಿ ಪಡಿಸಿತ್ತು. ನೌಕರರ ಭವಿಷ್ಯನಿಧಿ ಬಡ್ಡಿ ದರ ಏರಿಕೆಯಿಂದ ಭವಿಷ್ಯ ನಿಧಿಯ ಕೋಟಿ ಚಂದಾದಾರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಶೇಕಡಾ .೫೫ಕ್ಕಿಂತ ಹೆಚ್ಚಾಗಲಿದೆ ಎಂದು ಉನ್ನತ ಮೂಲಗಳು ಇದಕ್ಕೆ ಮುನ್ನ ಸುಳಿವು ನೀಡಿದ್ದವು. ಮೋದಿ ಸರ್ಕಾರವು ವೇತನದಾರ ವರ್ಗಕ್ಕೆ ಆದಾಯ ತೆರಿಗೆ ಪರಿಹಾರವನ್ನು ಘೋಷಿಸಿದ್ದಕ್ಕೆ ಅನುಗುಣವಾಗಿ ಇಪಿಎಫ್ ಠೇವಣಿ ಮೇಲಿನ ಬಡ್ಡಿ ದರ ಏರಿಕೆಯನ್ನು ನಿರೀಕ್ಷಿಸಲಾಗಿತ್ತು.
ನೌಕರರ ಭವಿಷ್ಯನಿಧಿ ಸಂಸ್ಥೆಯ ಎಲ್ಲ ಕೇಂದ್ರೀಯ ಮಂಡಳಿ ಟ್ರಸ್ಟಿಗಳು (ಸಿಬಿಟಿ) ಗುರುವಾರ ನಡೆದ ಸಭೆಯಲ್ಲಿ ಪ್ರಸುತ ಹಣಕಾಸು ವರ್ಷದಲ್ಲಿ ಇಪಿಎಫ್ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಳಕ್ಕೆ ಒಪ್ಪಿದರು ಎಂದು ಸಚಿವರು ನುಡಿದರು. ಪ್ರಸ್ತಾವವನ್ನು ಅನುಮೋದನೆಗಾಗಿ ವಿತ್ತ ಸಚಿವಾಲಯಕ್ಕೆ ಕಳುಹಿಸಲಾಗುವುದು ಎಂದು ಗಂಗ್ವಾರ್ ಅವರು ಸಿಬಿಟಿ ಸಭೆಯ ಬಳಿಕ ತಿಳಿಸಿದರು. ನೌಕರರ ಭವಿಷ್ಯನಿಧಿ ಸಂಸ್ಥೆಯು ನೌಕರರ ಭವಿಷ್ಯನಿಧಿ ಮೇಲಿನ ಬಡ್ಡಿಯನ್ನು ಕಳೆದ ಹಣಕಾಸು ವರ್ಷದಲ್ಲಿ (೨೦೧೭-೧೮) ಅತ್ಯಂತ ಕೆಳಕ್ಕೆ ಇಳಿಸಿ ಶೇಕಡಾ .೫೫ಕ್ಕೆ ನಿಗದಿ ಪಡಿಸಿತ್ತು. ಸಂಸ್ಥೆಯು ೨೦೧೬-೧೭ರ ಸಾಲಿನಲ್ಲಿ ಶೇಕಡಾ .೬೫, ೨೦೧೫-೧೬ರಲ್ಲಿ ಶೇಕಡಾ . ಬಡ್ಡಿದರ ನೀಡಿತ್ತು. ೨೦೧೩-೧೪ ಹಾಗೂ ೨೦೧೪-೧೫ರ ಸಾಲಿನಲ್ಲಿ ಸಂಸ್ಥೆಯು ಶೇಕಡಾ .೭೫ ಬಡ್ಡಿಯನ್ನು ನೀಡಿತ್ತು. ೨೦೧೨-೧೩ರಲ್ಲಿ ಅದು ಶೇಕಡಾ . ಬಡ್ಡಿದರ ಒದಗಿಸಿತ್ತು.

2019: ನವದೆಹಲಿ: ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ ೧೪ರಂದು ಸಿಆರ್ಪಿಎಫ್ ಬೆಂಗಾವಲು ವಾಹನದ ಮೇಲೆ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಇನ್ನೂ ಒಂದು ಕಠಿಣ ಕ್ರಮವಾಗಿ, ಪಾಕಿಸ್ತಾನಕ್ಕೆ ಹರಿಯುವ ನದಿಗಳ ಭಾರತದ ಪಾಲಿನ ನೀರನ್ನು ಬಂದ್ ಮಾಡಲು ಭಾರತವು ನಿರ್ಧರಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದರು. ಪಾಕಿಸ್ತಾನಕ್ಕೆ ಹರಿಯುವ ನದಿಗಳ ನೀರನ್ನು ತಿರುಗಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬಿನ ಜನರಿಗೆ ಒದಗಿಸಲು ಸರ್ಕಾರವು ನಿರ್ಧರಿಸಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವರಾದ ಗಡ್ಕರಿ ನುಡಿದರು. ರಾವಿ ನದಿಗೆ ಅಡ್ಡವಾಗಿ ಶಾಹ್ ಪುರ-ಕಂಡಿಯಲ್ಲಿ ಅಣೆಕಟ್ಟು ನಿರ್ಮಾಣ ಕಾರ್ ಆರಂಭಿಸಲಾಗಿದೆ. ಇದಕ್ಕೂ ಹೆಚ್ಚಾಗಿ ಯುಜೆಎಚ್ ಯೋಜನೆಯು ನಮ್ಮ ಪಾಲಿನ ನೀರನ್ನು ಜಮ್ಮು ಮತ್ತು ಕಾಶ್ಮೀರದ ಜನರ ಸಲುವಾಗಿ ಬಳಸಲು ದಾಸ್ತಾನು ಮಾಡಲಿದೆ. ೨ನೇ ರಾವಿ -ಬಿಯಾಸ್ ಜೋಡಣೆ (ಲಿಂಕ್) ಮೂಲಕ ಹರಿಯುವ ಉಳಿಕೆ ನೀರನ್ನು ಇತರ ಜಲಾನಯನ ರಾಜ್ಯಗಳಿಗೆ ಒದಗಿಸಲಾಗುವುದು ಎಂದು ಗಡ್ಕರಿ ಟ್ವೀಟ್ ಮಾಡಿದರು. ಹಿಂದಿನ ದಿನ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಗಡ್ಕರಿ, ’ಒಮ್ಮೆ ಅಣೆಕಟ್ಟುಗಳ ನಿರ್ಮಾಣವಾಧರೆ, ಯಮುನಾ ನದಿಯು ಹೆಚ್ಚಿನ ನೀರನ್ನು ಪಡೆಯಲಿದೆ ಎಂದು ಹೇಳಿದ್ದರು. ನಮ್ಮ ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ಹೋಗುತ್ತಿದೆ. ಈಗ ನಾವು ಅಣೆಕಟ್ಟು ಯೋಜನೆಯನ್ನು ರೂಪಿಸುತ್ತಿದ್ದು ಮೂರು ನದಿಗಳ ನೀರನ್ನು ಯುಮನಾ ನದಿಗೆ ಹರಿಸಲಿದ್ದೇವೆ. ಇದು ಆಗುತ್ತಿದ್ದಂತೆಯೇ ಯುಮುನಾ ನದಿಗೆ ಹೆಚ್ಚಿನ ನೀರು ಲಭಿಸಲಿದೆ ಎಂದು ಅವರು ನುಡಿದರು. ಸಿಂಧೂ ಜಲ ಒಪ್ಪಂದದ ಪ್ರಕಾರ, ಕೆಲವು ಷರತ್ತುಗಳಿಗೆ ಒಳಪಟ್ಟು ಭಾರತವು ಪೂರ್ವಕ್ಕೆ ಹರಿಯುವ ಬಿಯಾಸ್, ರಾವಿ ಮತ್ತು ಸಟ್ಲೆಜ್ ನದಿಗಳ ನೀರು ಬಳಸುವ ಹಕ್ಕನ್ನು ಹೊಂದಿದೆ. ಪಾಕಿಸ್ತಾನಕ್ಕೆ ಪಶ್ಚಿಮಕ್ಕೆ ಹರಿಯುವ ಸಿಂಧೂ, ಝೇಲಂ ಮತ್ತು ಚೇನಾಬ್ ನದಿಗಳ ನೀರು ನಿಯಂತ್ರಿಸುವ ಹಕ್ಕಿದೆ. ಏನಿದ್ದರೂ, ನದಿಗಳಿಗೆ ಅಡ್ಡವಾಗಿ ಅಣೆಕಟ್ಟು ನಿರ್ಮಿಸುವ ಬಗ್ಗೆ ಮತ್ತು ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಬಂದ್ ಮಾಡುವ ಬಗ್ಗೆ ಗಡ್ಕರಿಯವರು ಮಾತನಾಡಿದ್ದು ಇದೇ ಮೊದಲ ಸಲವೇನಲ್ಲ.
ವರ್ಷ ಜನವರಿಯಲ್ಲಿ ಗಡ್ಕರಿಯವರು ಭಾರತದ ಪಾಲಿನ ನೀರು ಉಪಯೋಗವೇ ಇಲ್ಲದೆ ಪಾಕಿಸ್ತಾನಕ್ಕೆ ಹೋಗುತ್ತಿದೆ ಎಂದು ಹೇಳಿದ್ದರು. ನ್ಯಾಯಯುತವಾಗಿ ನಮಗೆ ಬರಬೇಕಾದ ನೀರನ್ನು ಪಾಕಿಸ್ತಾನಕ್ಕೆ ಹರಿಯದಂತೆ ಸ್ಥಗಿತಗೊಳಿಸಿ, ನಮ್ಮ ರಾಜ್ಯಗಳತ್ತ ತಿರುಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಆಗಲೂ ಹೇಳಿದ್ದರು. ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಳ್ಳುತ್ತಿರುವ ಸರಣಿ ಕ್ರಮಗಳಲ್ಲಿ ನದಿ ನೀರು ಬಂದ್ ಕೂಡಾ ಒಂದಾಗಿದೆ. ದಾಳಿ ನಡೆದ ಎರಡು ದಿನಗಳ ಬಳಿಕ ಭಾರತವು ಪಾಕಿಸ್ತಾನಕ್ಕೆ ೨೩ ವರ್ಷಗಳ ಹಿಂದೆ ನೀಡಲಾಗಿದ್ದಪರಮ ಆಪ್ತ ರಾಷ್ಟ್ರ ಸ್ಥಾನಮಾನವನ್ನು ರದ್ದು ಪಡಿಸಿ, ಉಭಯ ರಾಷ್ಟ್ರಗಳ ನಡುವಣ ವಹಿವಾಟನ್ನು ನಿರ್ಬಂಧಿಸಿತ್ತು. ಪಾಕಿಸ್ತಾನದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಶೇಕಡಾ ೨೦೦ ರಷ್ಟು ಹೆಚ್ಚಿನ ಪಾಕಿಸ್ತಾನ ಆರ್ಥಿಕ ಬೆನ್ನಮೂಳೆಗೆ ಪೆಟುಕೊಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನವು ದಾಳಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಪ್ರತೀಕಾರಕ್ಕಾಗಿ ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಕಟಿಸಿದ್ದರು. 


2018: ರಾಮೇಶ್ವರಂ: ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ  ಖ್ಯಾತ ಚಿತ್ರನಟ ಕಮಲಹಾಸನ್ ಅವರ ನೂತನ ರಾಜಕೀಯ ಪಕ್ಷ ’ಮಕ್ಕಳ್ ನೀಧಿ ಮಯ್ಯಮ್ ಮಧುರೈಯ  ಒತಕಾಡೈಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ  ಈದಿನ ಉದ್ಘಾಟನೆಗೊಂಡಿತು. ಕಮಲಹಾಸನ್ ಅವರು ಇದೇ ಸಂದರ್ಭದಲ್ಲಿ ತಮ್ಮ ನೂತನ ರಾಜಕೀಯ ಪಕ್ಷದ ಧ್ವಜವನ್ನೂ ಅನಾವರಣಗೊಳಿಸಿದರು.  ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರ್ತಿ ಮತ್ತು ರೈತನಾಯಕ ಪಿ.ಆರ್. ಪಾಂಡ್ಯನ್ ನೂತನ ರಾಜಕೀಯ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಕ್ಕಳ್ ನೀಧಿ ಮಯ್ಯಮ್ ಪಕ್ಷದ ಧ್ವಜ ಪರಸ್ಪರ ಬೆಸೆದ ಆರು ಕೈಗಳ ಚಿತ್ರವನ್ನು ಹೊಂದಿದೆ. ಮೂರು ಕೈಗಳು ಕೆಂಪುಬಣ್ಣದ್ದಾಗಿದ್ದರೆ, ಮೂರು ಬಣ್ಣಗಳು ಬಿಳಿ ಬಣ್ಣದಲ್ಲಿವೆ. ಮಧ್ಯದಲ್ಲಿ ಬಿಳಿಯ ನಕ್ಷತ್ರ ರಾರಾಜಿಸುತ್ತಿದೆ. ಪಕ್ಷದ ವೆಬ್ ಸೈಟ್ ಪ್ರಕಾರ ’ಮಕ್ಕಳ್ ನೀಧಿ ಮಯ್ಯಮ್ ಎಂದರೆ (ಸೆಂಟರ್ ಫಾರ್ ಜಸ್ಟೀಸ್) ಎಂದು ಅರ್ಥ. ೨೦೧೭ರಲ್ಲಿ ಕಮಲಹಾಸನ್ ಅವರು ಮಯ್ಯಮ್ ವಿಸಲ್ ಎಂಬ ವಿಸಲ್ ಬ್ಲೋಯರ್ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದರು. ‘ನಾನು ಸಾಧನ ಮಾತ್ರ. ನಾಯಕನಲ್ಲ, ಇದು ನಾಯಕರ ಪಕ್ಷ ಎಂದು ಕಮಲ ಹಾಸನ್ ನುಡಿದರು.  ಹೊಸದಾಗಿ ಸ್ಥಾಪನೆಯಾಗಿರುವ ಮಕ್ಕಳ್ ನೀಧಿ ಮಯ್ಯಮ್ ನಿಮ್ಮ ಪಕ್ಷ. ಇದು ಇಲ್ಲಿ ದೃಢವಾಗಿ ನೆಲೆಯೂರಲಿದೆ ಮತ್ತು ನಾವೆಲ್ಲರೂ ಬಯಸುತ್ತಿದ್ದ ಬದಲಾವಣೆಗಳನ್ನು ತರಲಿದೆ. ನಿಮ್ಮ ಸೇವೆ ಸಲ್ಲಿಸಲು ನಮಗೆ ಮಾರ್ಗದರ್ಶನ ಮಾಡಿ ಎಂದು ಅವರು ನುಡಿದರು.  ತಮಿಳುನಾಡಿನ ಆತ್ಮ ಇಂದು ಉರಿಯುತ್ತಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕೈಗಳು ಸುಟ್ಟುಹೋಗಲಿವೆ ಎಂದು ಕಮಲಹಾಸನ್ ಹೇಳಿದರು. ‘ಇದೊಂದೇ ಸಭೆ ಅಲ್ಲ, ಇನ್ನಷ್ಟು ಸಾರ್ವಜನಿಕ ಸಭೆಗಳು ನಡೆಯಲಿವೆ ಎಂದು ಬೆಂಬಲಿಗರಿಗೆ ಹೇಳಿದ ಕಮಲಹಾಸನ್, ’ಇದು ಒಂದು ದಿನದ ವಿಷಯವಲ್ಲ. ಇದು ಬದುಕಿನ ಮಾರ್ಗ. ನಾವು ಜನರ ಪಕ್ಷವನ್ನು ನಿರ್ಮಿಸುತ್ತಿದ್ದೇವೆ. ಇಂದಿನದು ಒಂದು ಉದಾಹರಣೆ ಮಾತ್ರ. ಇಂತಹ ಸಾಲು ಸಾಲು ಸಭೆಗಳು ನಡೆಯಲಿವೆ ಎಂದು ಹೇಳಿದ ಕಮಲಹಾಸನ್ ಬಳಿಕ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತಿತರರನ್ನು ವೇದಿಕೆ ಆಹ್ವಾನಿಸಿದರು.  ‘ಉತ್ತಮ ಶಿಕ್ಷಣ ಎಲ್ಲರಿಗೂ ತಲುಪಬೇಕು. ಕೋಮು, ಧಾರ್ಮಿಕ ಪ್ರಚೋದನೆಗಳು ಕೊನೆಯಾಗಬೇಕು. ನಾವು ಇದನ್ನು ಸಾಧಿಸಿ ಎಲ್ಲರಿಗೂ ಮಾದರಿಯಾಗಬೇಕು. ನಾವು ಭ್ರಷ್ಟಾಚಾರವ್ನು ಕೊನೆಗೊಳಿಸಿದರೆ, ಜನರಿಗೆ ಸೇವೆಗಳು ಲಭಿಸಲು ಯಾವುದೇ ಅಡ್ಡಿ ಆತಂಕಗಳೂ ಉಳಿಯುವುದಿಲ್ಲ ಎಂದು ಕಮಲಹಾಸನ್ ನುಡಿದರು.  ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ ಕೇಜ್ರಿವಾಲ್ ಅವರು ’ತಮಿಳುನಾಡಿನ ಜನರಿಗೆ ಪರ್‍ಯಾಯವೊಂದನ್ನು ಒದಗಿಸಿದ್ದಕ್ಕಾಗಿ ನಾನು ಕಮಲಹಾಸನ್ ಅವರನ್ನು ಅಭಿನಂದಿಸುತ್ತೇನೆ. ಇಲ್ಲಿಯವರೆಗೆ ರಾಜ್ಯವು ಎರಡು ಭ್ರಷ್ಟ ಪಕ್ಷಗಳ ಮಧ್ಯೆ ಸಿಕ್ಕಿಹಾಕಿಕೊಂಡಿತ್ತು. ದೆಹಲಿಯ ಜನರು ಮಾಡಿದಂತೆ, ನಾನೀಗ ಇಲ್ಲಿ ಭ್ರಷ್ಟಾಚಾರ ಮುಕ್ತ ರಾಜ್ಯವನ್ನು ಎದುರುನೋಡಬಹುದು ಎಂದು ನುಡಿದರು. ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಸರ್ಕಾರ ರಚಿಸಿದ ಕೇವಲ ಆರು ತಿಂಗಳಲ್ಲಿ ಬಹುದೊಡ್ಡ ಯಶಸ್ಸನ್ನು ಸಾಧಿಸಿದೆ. ಈ ರಾಜ್ಯದ ಜನರು ಶಾಲೆಗಳು, ಆಸ್ಪತ್ರೆಗಳು, ವಿದ್ಯುತ್ ಬಯಸುವುದಾದಲ್ಲಿ ಅವರು ಕಮಲಹಾಸನ್ ಅವರಿಗೆ ಮತ ನೀಡಬೇಕು ಎಂದು ನುಡಿದ ಅವರು ರಾಜ್ಯದ ಜನತೆ ಮತ್ತು ಕಮಲಹಾಸನ್ ಅವರಿಗೆ ಯಶಸ್ಸು ಹಾರೈಸುವೆ ಎಂದು ದೆಹಲಿ ಮುಖ್ಯಮಂತ್ರಿ ನುಡಿದರು. ಕೆಲ ಕಾಲ ಕಮಲಹಾಸನ್ ಅವರು ಮಯ್ಯಮ್ ಹೆಸರಿನ ನಿಯತಕಾಲಿಕವೊಂದನ್ನೂ ನಡೆಸಿದ್ದರು. ೨೦೧೦ರಲ್ಲಿ ಈ ನಿಯತಕಾಲಿಕವನ್ನು ಟ್ಯಾಬ್ಲಾಯಿಡ್ ಗಾತ್ರದಲ್ಲಿ ಪುನರುಜ್ಜೀವನಗೊಳಿಸಲಾಗಿತ್ತು. ಈ ನಿಯತಕಾಲಿಕ ಖ್ಯಾತ ಸಾಹಿತಿಗಳ ಸಂದರ್ಶನಗಳನ್ನು ಪ್ರಕಟಿಸಿಸುತ್ತಿತ್ತು.
೨೦೧೧ರಲ್ಲಿ ನಿಯತಕಾಲಿಕವನ್ನು ಸಂಪೂರ್ಣವಾಗಿ ವೆಬ್ಸೆನ್ (ವೆಬ್ ಸೈಟ್) ಆಗಿ ಪರಿವರ್ತಿಸಲಾಗಿತ್ತು. www.maiam.com ಈಗ ಸ್ವಯಂ ಸೇವಕರಿಗೆ ’ಪ್ರಗತಿಪರ ತಮಿಳಜ್ ನಾಡು ಕಟ್ಟಲು ನಾವೆಲ್ಲ ಒಂದಾಗೋಣ (ತಮಿಳು ಬದಲಿಗೆ ತಮಿಳಜ್ ಶಬ್ಧವನ್ನು ಅವರು ಪ್ರಯೋಗಿಸಿದ್ದಾರೆ) ಎಂದು ಘೋಷಣೆಯನ್ನು ಈಗ ನೀಡಿತು.  ಸಭೆ ಆರಂಭವಾಗುವುದಕ್ಕೆ ಮುನ್ನವೇ ರಾಜ್ಯದ ವಿವಿಧ ಕಡೆಗಳಿಂದ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳೂ ರಾಜಕೀಯ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ್ದರು.  ಪಕ್ಷದ ಧ್ವಜ ಮತ್ತು ಪ್ರಣಾಳಿಕೆಯನ್ನೂ ಕಮಲಹಾಸನ್ ಬಿಡುಗಡೆ ಮಾಡುವುದಾಗಿ ಈ ಮುನ್ನವೇ ಪ್ರಕಟಿಸಿದ್ದರು. ಇದಕ್ಕೂ ಮುನ್ನ ಪರಮಕುಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು ಹರ್ಷೋದ್ಘಾರ, ಹಾಡು, ನೃತ್ಯ, ಶಿಳ್ಳೆಗಳ ಮೂಲಕ ತಮ್ಮ ನಾಯಕನಿಗೆ ಸಂಭ್ರಮದ ಸ್ವಾಗತ ನೀಡಿದರು. ಪಕ್ಷದ ಉದ್ಘಾಟನಾ ಸಮಾರಂಭದಲ್ಲೇ ಪಕ್ಷದ ಪದಾಧಿಕಾರಿಗಳ ಹೆಸರನ್ನೂ ಕಮಲಹಾಸನ್ ಪ್ರಕಟಿಸಿದರು. ತಂಗವೇಲು ಅವರು ರಾಷ್ಟ್ರ ಮಟ್ಟದ ಪದಾಧಿಕಾರಿಯಾಗಿರುತ್ತಾರೆ ಎಂದು ಕಮಲಹಾಸನ್ ಹೇಳಿದರು. ಈವರೆಗೆ ರಾಜಕೀಯೇತರ ಸಂಘಟನೆಗಳಾಗಿ ಕಾರ್‍ಯ ನಿರ್ವಹಿಸುತ್ತಿದ್ದ ಕಮಲಹಾಸನ್ ಅಭಿಮಾನಿಗಳ ಕ್ಲಬ್ ಗಳು ಇನ್ನುಮುಂದೆ ಪಕ್ಷದ ಘಟಕಗಳಾಗಿ ಕಾರ್ಯ ನಿರ್ವಹಿಸಲಿವೆ ಎಂದು ಅವರು ನುಡಿದರು.
೧೫ ಮಂದಿಯ ಉನ್ನತ ತಂಡವನ್ನೂ ಕಮಲಹಾಸನ್ ಪ್ರಕಟಿಸಿದರು. ಈ ತಂಡದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಎ.ಜಿ. ಮೌರ್ಯ, ನಟಿ ಶ್ರೀಪ್ರಿಯ, ತಮಿಳು ಪ್ರೊಫೆಸರ್ ಮತ್ತು ನಟ ಎ.ಎಸ್. ಜ್ಞಾನಸಂಬಂಧನ್, ಕಮೀಲಾ ಜನರ್ (ನಟ ನಜರ್ ಪತ್ನಿ), ಬರಹಗಾರ ಸು ಕಾ ಮತ್ತಿತರರು ಈ ತಂಡದಲ್ಲಿದ್ದಾರೆ.  ಮಧುರೈ: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಪ್ರಸ್ತಾಪಿಸಿದ ಕಮಲಹಾಸನ್ ಉಭಯ ರಾಜ್ಯಗಳ ನಡುವಣ ಮಾತುಕತೆಯಿಂದ ವಿವಾದ ಇತ್ಯರ್ಥ ಸಾಧ್ಯ ಎಂದು ಹೇಳಿದರು. ‘ಸಮರ್ಪಕವಾದ ಮಾತುಕತೆ ಉಭಯ ರಾಜ್ಯಗಳ ಮಧ್ಯೆ ನಡೆದರೆ, ಎಲ್ಲ ವಿಷಯಗಳಿಗೂ ಇತ್ಯರ್ಥ ಕಂಡುಕೊಳ್ಳಬಹುದು. ಏನಿದ್ದರೂ ಈಗ ನಡೆಯುತ್ತಿರುವುದು ರಾಜಕೀಯ ಎಂದು ಅವರು ನುಡಿದರು.  ಪಕ್ಷದ ಲಾಂಛನ ಬಗ್ಗೆ ಮಾತನಾಡಿದ ಅವರು ’ಪರಸ್ಪರ ಜೋಡಿಸಿದ ಕೆಂಪು ಮತ್ತು ಬಿಳಿ ಬಣ್ಣದ ಕೈಗಳು ಹಾಗೂ ಮಧ್ಯೆ ಕಪ್ಪು ಬಣ್ಣದಲ್ಲಿ ನಕ್ಷತ್ರ ದಕ್ಷಿಣ ರಾಜ್ಯಗಳು ಎಲ್ಲರ ಅನುಕೂಲಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಪ್ರತಿನಿಧಿಸುತ್ತದೆ. ಕೇಂದ್ರದಲ್ಲಿ ಇರುವ ನಕ್ಷತ್ರ ಜನರನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ನಾನು ಎಡ ಅಥವಾ ಬಲ ಪಂಥದಲ್ಲಿ ಬೀಳುವುದಿಲ್ಲ. ನಾನು ಕೇಂದ್ರ ಪಂಥದವರನು ಎಂದು ನುಡಿದ ಅವರು ಈವರೆಗೆ ಚಲನಚಿತ್ರಗಳಲ್ಲಿ ನಟಿಸಲು ಹಣ ಪಡೆಯುತ್ತಿದ್ದೆ. ಇನ್ನು ಮುಂದೆ ಜೀವನ ಪೂರ್ತಿ ಜನರ ಸೇವೆಗೆ ಮೀಸಲು ಎಂದು ನುಡಿದರು.

2018: ನವದೆಹಲಿ:  ಮಲಯಾಳಿ ಚಿತ್ರನಟಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ಈ ಹಿಂದೆ ದಾಖಲಿಸಲಾದ ಅಥವಾ ಭವಿಷ್ಯದಲ್ಲಿ ದಾಖಲಿಸಬಹುದಾದ ಎಲ್ಲ ಕ್ರಿಮಿನಲ್ ಖಟ್ಲೆಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಇನ್ನೂ ಬಿಡುಗಡೆ ಆಗಬೇಕಾಗಿರುವ ಮಲಯಾಳಿ ಚಿತ್ರ ’ಒರು ಅಡಾರ್ ಲವ್ ಚಿತ್ರದ ಪ್ರಚಾರ ಗೀತೆಯಲ್ಲಿ ಕಣ್ಣು ಮಿಟುಕಿಸುವ ದೃಶ್ಯದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಪ್ರಿಯಾ ಅವರಿಗೆ ಅದೇ ದೃಶ್ಯ ಸಂಕಷ್ಟವನ್ನು ತಂದೊಡ್ಡಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು, ರಾಷ್ಟ್ರಾದ್ಯಂತ ಯಾವುದೇ ರಾಜ್ಯವೂ ಭವಿಷ್ಯದಲ್ಲಿ ಪ್ರಿಯಾ ವಾರಿಯರ್ ವಿರುದ್ಧ ಅಥವಾ ಚಿತ್ರದ ನಿರ್ದೇಶಕರ ವಿರುದ್ಧ ಪ್ರಚಾರ ಗೀತೆಗೆ ಸಂಬಂಧಿಸಿದಂತೆ ಯಾವುದೇ ಕ್ರಿಮಿನಲ್ ಖಟ್ಲೆ ಕ್ರಮ ಕೈಗೊಳ್ಳಬಾರದು ಎಂದು ಆಜ್ಞಾಪಿಸಿತು.  ‘ಪ್ರತಿವಾದಿ ರಾಜ್ಯಗಳು (ತೆಲಂಗಾಣ ಮತ್ತು ಮಹಾರಾಷ್ಟ್ರ) ಅಥವಾ ಒಟ್ಟಾರೆಯಾಗಿ ಯಾವುದೇ ರಾಜ್ಯ ಪ್ರಚಾರ ಗೀತೆಯನ್ನು ಆಧರಿಸಿ ಕೈಗೊಳ್ಳಬಹುದಾದ ಯಾವುದೇ ಕ್ರಿಮಿನಲ್ ಕಾನೂನು ಕ್ರಮವನ್ನು ತಡೆ ಹಿಡಿಯಲಾಗಿದೆ. ಚಿತ್ರದ ಪ್ರಚಾರ ಗೀತೆಯಲ್ಲಿ ಆಕೆ ಪಾಲ್ಗೊಂಡಿರುವುದನ್ನು ಆಧರಿಸಿ ಸಲ್ಲಿಸಬಹುದಾದ ಯಾವುದೇ ಎಫ್ ಐ ಆರ್, ಖಾಸಗಿ ದೂರುಗಳನ್ನು ದಾಖಲಿಸಿ ಕ್ರಮ ಕೈಗೊಳ್ಳುವುದನ್ನು ಈ ಮೂಲಕ ನಾವು ತಡೆ ಹಿಡಿದಿದ್ದೇವೆ ಎಂದು ಸುಪ್ರೀಂಕೋರ್ಟ್ ಹೇಳಿತು.  ಮಲಯಾಳಿಯೇತರ ರಾಜ್ಯಗಳಲ್ಲಿ ಹಲವಾರು ಕ್ರಿಮಿನಲ್ ಖಟ್ಲೆ ಕ್ರಮಗಳನ್ನು ಆರಂಭಿಸಲಾಗಿದೆ. ಕೇರಳದಲ್ಲಿ ಒಂದೇ ಒಂದು ದೂರನ್ನೂ ದಾಖಲಿಸಲಾಗಿಲ್ಲ ಎಂದು ವಕೀಲ ಹ್ಯಾರಿಸ್ ಬೀರನ್ ಅವರು ಪೀಠದ ಗಮನ ಸೆಳೆದರು. ಕೇರಳದ ಜನಪ್ರಿಯ ಮುಸ್ಲಿಮ್ ಹಾಡಿನ ದೃಶ್ಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂಬ ತಪ್ಪಭಿಪ್ರಾಯದ ನೆಲೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪ್ರಿಯಾ ವಾರಿಯರ್ ಅವರು ತಮ್ಮ ದೂರಿನಲ್ಲಿ ವಾದಿಸಿದ್ದರು. ಅಂತರ್ಜಾಲದಲ್ಲಿ ವೈರಲ್ ಆಗಿರುವ ಮಲಯಾಳಿ ಹಾಡಿನ ಭಾಷಾಂತರಗಳಲ್ಲಿ ಹಾಡಿನ ಅರ್ಥವನ್ನು ತಿರುಚಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ‘ಮಾಣಿಕ್ಯ ಮಲರಯ ಪೂವಿ ಹಾಡು ಕೇರಳದ ಮಲಬಾರ್ ಪ್ರದೇಶದ ಮಾಪಿಳ್ಳೆ ಹಾಡು ಅಥವಾ ಸಾಂಪ್ರದಾಯಿಕ ಮುಸ್ಲಿಮ್ ಹಾಡು. ಇದು ಪ್ರವಾದಿ ಮೊಹಮ್ಮದ್ ಮತ್ತು ಅವರ ಪತ್ನಿ ಖದೀಜಾರ ನಡುವಣ ಪ್ರೇಮವನ್ನು ಹೊಗಳುತ್ತದೆ. ಇದು ಕೇರಳದಲ್ಲಿನ ಮುಸ್ಲಿಮ್ ಸಂಪ್ರದಾಯದ ಒಂಗು ಭಾಗವಾಗಿದ್ದು, ಯಾವುದೇ ಧಾರ್ಮಿಕ, ಸಮುದಾಯ ಅಥವಾ ವ್ಯಕ್ತಿಯ ಭಾವನೆಗಳಿಗೆ ಧಕ್ಕೆ ಉಂಟು  ಮಾಡುವುದಿಲ್ಲ ಎಂದು ಅರ್ಜಿ ಪ್ರತಿಪಾದಿಸಿತ್ತು. ವಾರಿಯರ್ ಅವರು ತಮ್ಮ ಅರ್ಜಿಯಲ್ಲಿ ಸುಪ್ರೀಂಕೋರ್ಟ್ ಇತ್ತೀಚೆಗೆ ಪದ್ಮಾವತ್ ಚಿತ್ರದ ಬಿಡುಗಡೆ ಪರವಾಗಿ ನೀಡಿದ ಆದೇಶದ ಒಂದು ವಾಕ್ಯವನ್ನು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ’ಸೃಜನಾತ್ಮಕತೆಯು ಸತ್ತಾಗ, ನಾಗರೀಕತೆಯ ಮೌಲ್ಯಗಳು ನಶಿಸುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸುಪ್ರಿಂಕೋರ್ಟ್ ಪೀಠದ ಆದೇಶ ಹೇಳಿದ್ದುದನ್ನು ಅವರು ತಮ್ಮ ಅರ್ಜಿಯಲ್ಲಿ ನಮೂದಿಸಿದ್ದರು. ಚಿತ್ರದ ನಿರ್ದೇಶಕರ ಜೊತೆಗೆ ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ತಮ್ಮ ಜಂಟಿ ಅರ್ಜಿಯಲ್ಲಿ, ವಾರಿಯರ್ ಅವರು ಹಲವಾರು ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಕ್ರಿಮಿನಲ್ ಖಟ್ಲೆ ಕ್ರಮಗಳು ಸಂವಿಧಾನದ ಅಡಿಯಲ್ಲಿ ತಮಗೆ ಲಭ್ಯವಿರುವ ಮುಕ್ತವಾಗಿ ಮಾತನಾಡುವ ಮತ್ತು ವೃತ್ತಿ ನಡೆಸುವ ತಮ್ಮ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡಿವೆ ಎಂದು ಪ್ರತಿಪಾದಿಸಿದ್ದರು. ’ರಾಜ್ಯಗಳಿಂದ ಕ್ರಿಮಿನಲ್ ದೂರಿನ ದಾಖಲಾತಿ ಮತ್ತು ಎಫ್ ಐ ಆರ್ ದಾಖಲಾತಿಗಳ ಅರ್ಥ ಸೃಜನಶೀಲತೆಯ ನಿಗ್ರಹ ಹೊರತು ಬೇರೇನೂ ಅಲ್ಲ ಎಂದು ವಾರಿಯರ್ ಅವರನ್ನು ಪ್ರತಿನಿಧಿಸಿದ ಪಲ್ಲವಿ ಪ್ರತಾಪ್ ವಾದಿಸಿದರು.

2018: ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕರೆದಿದ್ದ ಸಭೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ಇಬ್ಬರು ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೆಹಲಿ ಮುಖ್ಯ ಕಾರ್ಯದರ್ಶಿ ಆಂಶು ಪ್ರಕಾಶ್ ಅವರು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಬಳಿ ಔಪಚಾರಿಕವಾಗಿ ದೂರು ದಾಖಲಿಸಿದರು. ಫೆ.19ರ ಸೋಮವಾರ ಸಂಜೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ನಿವಾಸದಲ್ಲಿ ಕರೆದಿದ್ದ ಸಭೆಯಲ್ಲಿ ಆಪ್ ಶಾಸಕರಾದ ಪ್ರಕಾಶ್ ಜರ್ವಾಲ್ ಮತ್ತು ಅಮಾನತುಲ್ಲಾ ಖಾನ್ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದರು ಎಂದು ಅಂಶು ಪ್ರಕಾಶ್ ಆಪಾದಿಸಿದರು. ವೈದ್ಯಕೀಯ ವರದಿ: ಈ ಮಧ್ಯೆ, ಬುಧವಾರ ಅರುಣಾ ಅಸಫ್ ಅಲಿ ಸರ್ಕಾರಿ ಆಸ್ಪತ್ರೆಯು ಪ್ರಕಾಶ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ಇದ್ದ ದೇಹಸ್ಥಿತಿ ಬಗ್ಗೆ, ಹಲ್ಲೆಯ ಗುರುತುಗಳ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ ನೀಡಿತು. ವೈದ್ಯಕೀಯ ವರದಿಯ ಪ್ರಕಾರ ಅವರ ಅಂಶುಪ್ರಕಾಶ್ ಅವರ ಮುಖದ ಮೇಲಿರುವ ಗುರುತುಗಳು ಸಭೆಯಲ್ಲಿ ತಮ್ಮ ಮೇಲೆ ಹಲ್ಲೆ ನಡೆಯಿತು ಎಂಬುದಾಗಿ ಅವರು ನೀಡಿರುವ ದೂರನ್ನು ಪುಷ್ಟೀಕರಿಸಿವೆ ಎಂದು ಹೇಳಲಾಯಿತು. ಮುಖ್ಯ ಕಾರ್ಯದರ್ಶಿಯವರು ಕತ್ತು ಅಲ್ಲಾಡಿಸುವಾಗ, ಕಿವಿಗಳ ಹಿಂಭಾಗದಲ್ಲಿ ಮತ್ತು ಬಲ ಕಣ್ಣಿನ ಹಿಂಭಾಗದಲ್ಲಿ ನೋವಿರುವ ಬಗ್ಗೆ ಹೇಳಿದ್ದಾರೆ ಎಂದು ವೈದ್ಯಕೀಯ ಪ್ರಮಾಣ ಪತ್ರ ತಿಳಿಸಿತು.  ಇತರ ಗುರುತುಗಳೂ ಪ್ರಕಾಶ್ ಅವರ ಮೇಲೆ ಹಲ್ಲೆ ನಡೆದಿರುವುದಕ್ಕೆ ಪೂರಕವಾಗಿವೆ ಎಂದು ವೈದ್ಯಕೀಯ ವರದಿ ಹೇಳಿತು. ಅಂಶು ಪ್ರಕಾಶ್ ಅವರು ಆಪ್ ಶಾಸಕರು ಸೋಮವಾರ  ತಡರಾತ್ರಿಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸಭೆಯಲ್ಲಿ ತಮ್ಮ ಮೇಲೆ ಪೂರ್ವಯೋಜಿತ ದಾಳಿ ನಡೆಸಿದ್ದಾರೆ ಎಂದು ಆಪಾದಿಸಿದ್ದು, ದೆಹಲಿ ಪೊಲೀಸರು ಆಪ್ ಶಾಸಕ ಅಮಾನತುಲ್ಲಾ ಖಾನ್ ಮತ್ತು ಇತರ ೧೧ ಮಂದಿ ಶಾಸಕರ ವಿರುದ್ಧ ಅಂಶು ಪ್ರಕಾಶ್ ದೂರನ್ನು ಆಧರಿಸಿ
ಎಫ್‌ಐ ಆರ್ ದಾಖಲಿಸಿದ್ದರು.  ಈದಿನ ಬೆಳಗ್ಗೆ ಅಮಾನತುಲ್ಲಾ ಖಾನ್ ಅವರು ತಮ್ಮ ಬೆಂಬಲಿಗರೊಂದಿಗೆ ಪ್ರತ್ಯಕ್ಷರಾಗಿದ್ದು, ಪೊಲೀಸರಿಗೆ ಶರಣಾಗತರಾಗುವುದಾಗಿ ತಿಳಿಸಿದರು. ತಮ್ಮನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು.  ‘ಕಳೆದ ರಾತ್ರಿ ನಾನು ಮನೆಯಲ್ಲಿದ್ದೆ. ಪೊಲೀಸರಿಂದ ತಲೆಮರೆಸಿಕೊಳ್ಳಲು ನನಗೆ ಯಾವುದೇ ಕಾರಣವೂ ಇಲ್ಲ. ನಾನೀಗ ಪೊಲೀಸ್ ಠಾಣೆಗೆ ಹೋಗುತ್ತೇನೆ ಎಂದು ನುಡಿದ ಖಾನ್, ತಾವು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿದರು. ಏನಿದ್ದರೂ ಇತರ ಆಪ್ ಶಾಸಕರು ತಮ್ಮ ನಿವಾಸಗಳಲ್ಲಿ ಲಭಿಸುತ್ತಿಲ್ಲ ಅಥವಾ ಅವರ ಫೋನ್ ಗಳು ಸ್ಚಿಚ್ ಆಫ್ ಆಗಿರುವ ಕಾರಣ ದೂರವಾಣಿಗೂ ಲಭಿಸುತ್ತಿಲ್ಲ ಎಂದು ವರದಿಗಳು ಹೇಳಿದವು.  ದೆಹಲಿ ಪೊಲೀಸ್ ಪಿಆರ್ ಒ ಮಧುರ್ ವರ್ಮಾ ಅವರು ಅಮಾನತುಲ್ಲಾ ಖಾನ್ ಅವರನ್ನು ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ ೧೧.೩೦ರ ವೇಳೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ  ಕೇಜ್ರಿವಾಲ್ ಅವರ ಸಲಹೆಗಾರ ವಿಕೆ ಜೈನ್ ಅವರನ್ನು ಅವರ ಮಹಾರಾಣಿ ಬಾಗ್ ನಿವಾಸದಲ್ಲಿ ಬುಧವಾರ ಬೆಳಗ್ಗೆ ತಮ್ಮ ವಶಕ್ಕೆ ತೆಗೆದುಕೊಂಡ ಪೊಲೀಸರು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿ ಬಳಿಕ ಬಿಡುಗಡೆ ಮಾಡಿದರು. ಆಪ್ ಶಾಸಕ ಪ್ರಕಾಶ್ ಜರ್ವಾಲ್ ಅವರನ್ನು ಪೊಲೀಸರು ಮಂಗಳವಾರ ರಾತ್ರಿ ದಿಯೋಲಿಯ ಅವರ ನಿವಾಸದಲ್ಲಿ ವಶಕ್ಕೆ ತೆಗೆದುಕೊಂಡಿದ್ದು, ಬಳಿಕ ಬಂಧಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿದವು.

2018: ಅಹಮದಾಬಾದ್: ೨೦೦೪ರಲ್ಲಿ ಇಶ್ರತ್ ಜಹಾಂ ಮತ್ತು ಇತರ ಮೂವರ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಗುಜರಾತಿನ ಮಾಜಿ ಉಸ್ತುವಾರಿ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪಿ.ಪಿ. ಪಾಂಡೆ ಅವರನ್ನು ವಿಶೇಷ ಸಿಬಿಐ ನ್ಯಾಯಾಲಯ ದೋಷಮುಕ್ತಿಗೊಳಿಸಿ ಪ್ರಕರಣದಿಂದ ಬಿಡುಗಡೆ ಮಾಡಿತು.  ಪಾಂಡೆ ಅವರು ಇಶ್ರತ್ ಜಹಾಂ ಮತ್ತು ಇತರ ಮೂವರ ಅಪಹರಣ ಮತ್ತು ಕೊಲೆ ಸಂಬಂಧಿತ ಪ್ರಕರಣದಲ್ಲಿ ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲದ ಕಾರಣ ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಪತ್ರವನ್ನು ವಿಶೇಷ ಸಿಬಿಐ ನ್ಯಾಯಾಧೀಶ ಜೆ.ಕೆ. ಪಾಂಡ್ಯ ಅವರು ಅಂಗೀಕರಿಸಿದರು.  ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಆಗ ಅಹಮದಾಬಾದ್ ಅಪರಾಧ ಶಾಖೆಯ ಮುಖ್ಯಸ್ಥರಾಗಿದ್ದ ಪಾಂಡೆ ಅವರು ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಶಾಮೀಲಾಗಿದ್ದರು ಎಂದು ಆಪಾದಿಸಿತ್ತು.  ಪಾಂಡೆ ವಿರುದ್ಧ ಕೊಲೆ ಮತ್ತು ಅಪಹರಣದಲ್ಲಿ ಶಾಮೀಲಾಗಿರುವುದನ್ನು ಸಾಬೀತು ಪಡಿಸುವ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಕೋರ್ಟ್ ಹೇಳಿತು.  ವಿವಿಧ ತನಿಖಾ ಸಂಸ್ಥೆಗಳ ಮುಂದೆ ಸಾಕ್ಷಿದಾರರ ನೀಡಿದ್ದ ಸಾಕ್ಷ್ಯಗಳು ಒಂದಕ್ಕೊಂದು ವಿರುದ್ಧವಾಗಿವೆ
ಎಂದೂ ನ್ಯಾಯಾಲಯ ಹೇಳಿತು. ಸರ್ಕಾರಿ ನೌಕರನಾಗಿದ್ದುದರಿಂದ ಪಾಂಡೆ ಅವರ ಪ್ರಕರಣದ ತನಿಖೆ ನಡೆಸುವ ಹಾಗೂ ದೋಷಾರೋಪ ಪಟ್ಟಿ ಸಲ್ಲಿಸುವ ಮುನ್ನ ತನಿಖಾಧಿಕಾರಿ ಪೂರ್ವಾನುಮತಿ ಪಡೆದುಕೊಳ್ಳಬೇಕಾಗಿತ್ತು, ಇದನ್ನು ಪಾಲಿಸಲಾಗಿಲ್ಲ ಎಂದೂ ನ್ಯಾಯಾಲಯ ಹೇಳಿತು.  ೨೦೧೩ರಲ್ಲಿ ಸಲ್ಲಿಸಲಾಗಿದ್ದ ತನ್ನ ಮೊದಲ ದೋಷಾರೋಪ ಪಟ್ಟಿಯಲ್ಲಿ ಸಿಬಿಐ, ೭ ಮಂದಿ ಪೊಲೀಸ್ ಅಧಿಕಾರಿಗಳನ್ನು ಆರೋಪಿಗಳು ಎಂದು ಹೆಸರಿಸಿತ್ತು, ಅವರಲ್ಲಿ ಐಪಿಎಸ್ ಅಧಿಕಾರಿಗಳಾದ ಪಿ.ಪಿ. ಪಾಂಡೆ, ಡಿ.ಜಿ. ವಂಝಾರ ಮತ್ತು ಜಿ.ಎಲ್. ಸಿಂಘಾಲ್ ಅವರ ಹೆಸರುಗಳೂ ಸೇರಿದ್ದವು. ಅವರೆಲ್ಲರ ವಿರುದ್ಧ ಅಪಹರಣ, ಕೊಲೆ ಮತ್ತು ಸಂಚು ಆರೋಪಗಳನ್ನು ಹೊರಿಸಲಾಗಿತ್ತು.  ತನ್ನ ಪೂರಕ ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಐಬಿ ವಿಶೇಷ ನಿರ್ದೇಶಕ ರಾಜೀಂದರ್ ಕುಮಾರ್ ಮತ್ತು ಅಧಿಕಾರಿ ಎಂ.ಎಸ್. ಸಿನ್ಹ ಸೇರಿದಂತೆ ನಾಲ್ವರು ಐಬಿ ಅಧಿಕಾರಿಗಳನ್ನು ಹೆಸರಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಅಪರಾಧ ಶಾಖೆ ಅಧಿಕಾರಿಗಳು ೨೦೦೪ರ ಜೂನ್ ೧೫ರಂದು ನಗರದ ಹೊರವಲಯದಲ್ಲಿ ನಡೆದಿತ್ತೆನ್ನಲಾದ ಎನ್ ಕೌಂಟರಿನಲ್ಲಿ ಮಹಾರಾಷ್ಟ್ರದ ಮುಂಬ್ರಾದ ಕಾಲೇಜು ವಿದ್ಯಾರ್ಥಿನಿ ೧೯ರ ಹರೆಯದ ಇಶ್ರತ್ ಜಹಾಂ ಮತ್ತು ಆಕೆಯ ಗೆಳೆಯರಾದ ಜಾವೇದ್ ಶೇಖ್ ಯಾನೆ ಪ್ರಾಣೇಶ್, ಜೀಶನ್ ಜೋಹರ್ ಮತ್ತು ಅಮ್ಜದ್ ರಾಣಾ ಅವರನ್ನು ಹತ್ಯೆಗೈದಿದ್ದರು ಎಂದು ಆಪಾದಿಸಲಾಗಿತ್ತು.


2018: ನವದೆಹಲಿ: ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಒಂದು ವಾಯುಪ್ರದೇಶವನ್ನು ಉಲ್ಲಂಘಿಸಿದ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆಗೆ ಅತ್ಯಂತ ಸಮೀಪ ಹಾರಾಟ ನಡೆಸಿದ ಘಟನೆ ಘಟಿಸಿರುವುದಾಗಿ ರಕ್ಷಣಾ ಮೂಲಗಳು ಹೇಳಿದವು.  ’ಈದಿನ ಪಾಕಿಸ್ತಾನಿ ಹೆಲಿಕಾಪ್ಟರ್ ಒಂದು ಗಡಿ ನಿಯಂತ್ರಣ ರೇಖೆಯ ಸಮೀಪ ೩೦೦ ಮೀಟರುಗಳಷ್ಟು ಸಮೀಪದಲ್ಲಿ ಪಾಕಿಸ್ತಾನದ ಕಡೆಯಲ್ಲಿ ಹಾರಾಟ ನಡೆಸಿತು ಮತ್ತು ಹಿಂದಕ್ಕೆ ಹೋಯಿತು. ಈ ಘಟನೆ ಪೂಂಚ್ ಪ್ರದೇಶದಲ್ಲಿ ಘಟಿಸಿತು. ಯಾವುದೇ ಗುಂಡಿನ ದಾಳಿ ಅಥವಾ ಪ್ರತಿರೋಧ ಕ್ರಮವನ್ನು ಉಭಯ ಕಡೆಯಿಂದಲೂ ಕೈಗೊಳ್ಳಲಿಲ್ಲ ಎಂದು ರಕ್ಷಣಾ ಮೂಲಗಳು ಹೇಳಿದವು.  ನಿಯಮಾವಳಿಗಳ ಪ್ರಕಾರ, ರೋಟರಿ ವಿಂಗ್ ಏರ್ ಕ್ರಾಫ್ಟ್ ಗಡಿ ನಿಯಂತ್ರಣ ರೇಖೆಯ ಸಮೀಪ ೧ ಕಿಮೀ ವ್ಯಾಪ್ತಿಯೊಳಕ್ಕೆ ಬರುವಂತಿಲ್ಲ. ರೆಕ್ಕೆ ಇರುವ ವಿಮಾನ ಗಡಿ ನಿಯಂತ್ರಣ ರೇಖೆಯ ೧೦ ಕಿಮೀ ವ್ಯಾಪ್ತಿಯ ಒಳಕ್ಕೆ ಬರುವಂತಿಲ್ಲ.

2018: ಅಮೃತಸರ: ಸಂಯಕ್ತ ಭಾರತದಲ್ಲಿ ಕೆನಡಾ ನಂಬಿಕೆ ಇರಿಸಿದೆ ಎಂದು ಈದಿನ ಇಲ್ಲಿ ಹೇಳಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆಯು ಅವರು ಭಾರತ ಅಥವಾ ಬೇರಾವುದೇ ಕಡೆಯಲ್ಲಿ ಪ್ರತ್ಯೇಕತಾವಾದಿ ಚಳವಳಿಗಳಿಗೆ ತಮ್ಮ ರಾಷ್ಟ್ರ ಬೆಂಬಲ ನೀಡುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಭರವಸೆ ನೀಡಿದರು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಜಸ್ಟಿನ್ ಅವರ ಮಧ್ಯೆ ಸುಮಾರು ೪೦ ನಿಮಿಷಗಳಿಗೂ ಹೆಚ್ಚು ಕಾಲ ಮುಖಾಮುಖಿ ಮಾತುಕತೆ ನಡೆಯಿತು. ಮಾತುಕತೆ ವೇಳೆ ತಾವು ಮುಖ್ಯವಾಗಿ ’ಖಲಿಸ್ತಾನಕ್ಕೆ ಸಂಬಂಧಿಸಿದಂತೆ ಕೆನಡಾ ಪ್ರಧಾನಿ ಜೊತೆ ಪ್ರಸ್ತಾಪಿಸಿದ್ದು ಅವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿಂಗ್ ಭೇಟಿಯ ಬಳಿಕ ಹೇಳಿದರು.  ‘ಖಲಿಸ್ತಾನಕ್ಕೆ ಸಂಬಂಧಿಸಿದ ವಿಷಯವನ್ನು ಅವರ ಬಳಿ ಪ್ರಸ್ತಾಪಿಸಿ ಅದು ತಮಗೆ ಅತ್ಯಂತ ಕಳವಳಕಾರಿ ವಿಚಾರ ಎಂಬುದಾಗಿ ತಿಳಿಸಿದೆ. ಟ್ರುಡೆಯು ಅವರು ತಮಗೆ ಅದರ ಅರಿವು ಇರುವುದಾಗಿ ಹೇಳಿದ್ದಲ್ಲದೆ, ಅದರ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸುವುದಾಗಿ ಭರವಸೆ ಕೊಟ್ಟರು ಎಂದು ಸಿಂಗ್ ನುಡಿದರು.  ಮಾತುಕತೆ ಕಾಲದಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪ್ರತ್ಯೇಕತಾವಾದ ಮತ್ತು ದ್ವೇಷ ಅಪರಾಧಗಳನ್ನು ಹತ್ತಿಕ್ಕಲು ಸಹಕಾರ ನೀಡುವಂತೆ ಕೆನಡಾ ಪ್ರಧಾನಿಯನ್ನು ಕೋರಿದರು. ತಮ್ಮ ರಾಷ್ಟ್ರವು ಭಾರತದಲ್ಲಾಗಲೀ ಅಥವಾ ಬೇರೆ ಯಾವುದೇ ಸ್ಥಳದಲ್ಲಾದರೂ ಯಾವುದೇ ಪ್ರತ್ಯೇಕತಾವಾದಿ ಚಳವಳಿಗೆ ಬೆಂಬಲ ನೀಡುವುದಿಲ್ಲ ಎಂದು ಟ್ರುಡೆಯು ಭರವಸೆ ನೀಡಿದರು. ಕ್ಯುಬೆಕ್‌ನಲ್ಲಿನ ಪ್ರತ್ಯೇಕತಾವಾದಿ ಚಳವಳಿಯನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಟ್ರುಡೆಯು ಅವರು ’ಇಂತಹ ಬೆದರಿಕೆಗಳ ಜೊತೆಗೆ ತಾವು ಬದುಕಿನುದ್ದಕ್ಕೂ ವ್ಯವಹರಿಸಿರುವುದಾಗಿ ನುಡಿದರು. ಹಿಂಸಾಚಾರದ ಅಪಾಯಗಳ ಪೂರ್ಣ ಅರಿವು ತಮಗಿದೆ, ಅದನ್ನು ಯಾವಾಗಲೂ ಸಂಪೂರ್ಣ ಶಕ್ತಿ ಬಳಸಿ ಆಚೆ ತಳ್ಳಿದ್ದೇನೆ ಎಂದು ಕೆನಡಾ ಪ್ರಧಾನಿ ನುಡಿದರು ಎಂದು ಅಧಿಕೃತ ವಕ್ತಾರರು ತಿಳಿಸಿದರು. ಪಂಜಾಬಿನಲ್ಲಿ ದ್ವೇಷ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗುತ್ತಿರುವ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಮತ್ತು ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿರುವ ಕೆನಡಾ ಮೂಲದ ವ್ಯಕ್ತಿ/ ಸಂಘಟನೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಕೆನಡಾ ಪ್ರಧಾನಿಗೆ ನೀಡಿದರು. ಪಂಜಾಬಿನ ಯುವಕರು ಮತ್ತು ಮಕ್ಕಳನ್ನು ತೀವ್ರವಾದದತ್ತ ಸೆಳೆಯುವ ಕೆಲಸದಲ್ಲಿ ಮಗ್ನರಾಗಿರುವವರ ಪಟ್ಟಯನ್ನೂ  ಅವರು ಟ್ರುಡೆಯು ಅವರಿಗೆ ಒಪ್ಪಿಸಿದರು.  ಕೆನಡಾದ ರಕ್ಷಣಾ ಸಚಿವ ಹರಿಜಿತ್ ಸಜ್ಜನ್ ಮತ್ತು ಪಂಜಾಬಿನ ಪೌರಾಡಳಿತ ಸಚಿವ ನವಜೋತ್ ಸಿಂಗ್ ಸಿಧು ಕೂಡಾ ಸಭೆಯಲ್ಲಿ ಹಾಜರಿದ್ದರು. ಪಂಜಾಬಿನ ಹಿಂಸಾಕೃತ್ಯಗಳಲ್ಲಿ ಭಾರತೀಯ ಕೆನಡಿಯನ್ನರ ಪಾತ್ರವಿದೆ ಎಂದು ಹೇಳಿದ ಕ್ಯಾಪ್ಟನ್, ಅಂತಹ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.   ಭಾರತೀಯ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯದ ಉಲ್ಲೇಖವಿದ್ದರೂ, ಪ್ರತ್ಯೇಕತಾವಾದಿಗಳು, ಉಗ್ರವಾದಿಗಳು ಮತ್ತು ಹಿಂಸೆಯನ್ನು ಬೋಧಿಸುವವರು ಪಂಜಾಬ್ ಜನರಂದ ತಿರಸ್ಕರಿಸಲ್ಪಟ್ಟಿರುವ ಕಾರಣ ಈ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದರು. ಭಯೋತ್ಪಾದನೆ, ಅಪರಾಧಗಳು, ಮಾದಕ ದ್ರವ್ಯ ಅಪರಾಧಗಳು ಮತ್ತಿತರ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಭದ್ರತೆ ಸಲುವಾಗಿ ಸಂಗತ ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ಅಮರೀಂದರ್ ಸಿಂಗ್ ಕರೆ ನೀಡಿದರು. ಕೆಲವು ಕಡೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗೆಗಿನ ವರದಿಗಳನ್ನು ಪ್ರಸ್ತಾಪಿಸಿದ ಸಿಂಗ್ ಇಂತಹುವುಗಳನ್ನು ಕಠಿಣವಾಗಿ ದಮನಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಪೊಲೀಸರನ್ನೂ ಬಿಡದೆ ಜೈಲಿಗೆ ಅಟ್ಟುತ್ತಿವೆ ಎಂದು ಮುಖ್ಯಮಂತ್ರಿ ಹೇಳಿದರು. ದ್ವಿಪಕ್ಷೀಯ ಬಾಂಧವ್ಯ ವೃದ್ಧಿ , ಆರ್ಥಿಕ ಸಹಕಾರ ವಿಸ್ತರಣೆ ಇತ್ಯಾದಿಗಳಿಗೆ ಉಭಯ ನಾಯಕರೂ ಒಪ್ಪಿದರು.

2018: ಲಕ್ನೋ: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಇನ್ನೂ ನನೆಗುದಿಯಲ್ಲಿ ಇದ್ದರೂ, ಪುನರ್ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯಾ ರೈಲು ನಿಲ್ದಾಣ ಶೀಘ್ರದಲ್ಲೇ ರಾಮ ಮಂದಿರದಂತೆ ಕಂಗೊಳಿಸಲಿದೆ.  ಹೌದು, ಅಯೋಧ್ಯೆ ರೈಲು ನಿಲ್ದಾಣದ ಪುನರ್ ನಿರ್ಮಾಣ ಕಾರ್ಯಕ್ಕೆ ಈದಿನ ಶಿಲಾನ್ಯಾಸ ನೆರವೇರಿಸಿದ ಕೇಂದ್ರ ರೈಲ್ವೆ ಸಚಿವ ಮನೋಜ್ ಸಿನ್ಹಾ, ರಾಮ ಮಂದಿರದ ಪ್ರತಿಕೃತಿಯಂತೆ ರೈಲು ನಿಲ್ದಾಣವನ್ನು ಮರು ನಿರ್ಮಾಣ ಮಾಡುವ ಕುರಿತು ಕೇಂದ್ರ ಸಂಪುಟಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಅಯೋಧ್ಯೆ ರೈಲು ನಿಲ್ದಾಣದ ಅಭಿವೃದ್ಧಿ ಬಗ್ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲೇ ಚರ್ಚಿಸಲಾಗಿತ್ತು. ರಾಮ ಮಂದಿರ ಪ್ರತಿಕೃತಿಯ ರೈಲು ನಿಲ್ದಾಣ ನಿರ್ಮಾಣ ಅಂತಿಮಗೊಂಡ ಬೆನ್ನಲ್ಲೇ ರಾಮ ಮಂದಿರ ನಿರ್ಮಾಣದ ಕಾರ್ಯ ಆರಂಭಗೊಳ್ಳಲಿದೆ ಎಂದು ಸಿನ್ಹಾ ನುಡಿದರು. ಸುಮಾರು ೨೦೦ ಕೋಟಿ ರೂ. ಯೋಜನೆ ಇದಾಗಿದ್ದು, ರೈಲು ನಿಲ್ದಾಣದ ಪುನರ್ ನಿರ್ಮಾಣ ಕಾರ್ಯಕ್ಕೆ ೮೦ ಕೋಟಿ ರೂ. ವೆಚ್ಚವಾಗಲಿದೆ ಎಂದು ಮನೋಜ್ ಸಿನ್ಹಾ ಹೇಳಿದರು.  ಅಯೋಧ್ಯೆಗೆ ರೈಲು ಮಾರ್ಗದ ಮೂಲಕ ರಾಷ್ಟ್ರದ ಎಲ್ಲ ಪ್ರಮುಖ ಪ್ರದೇಶಗಳಿಂದ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯು ಸರ್ಕಾರಕ್ಕೆ ಇದೆ. ರೈಲ್ವೆ ನಿಲ್ದಾಣದಲ್ಲಿ ಎಲ್ಲ ರಾಜ್ಯಗಳ ಕಲೆಗಳು ಅನಾವರಣಗೊಳ್ಳಲಿವೆ.  ಆಯೋಧ್ಯೆಗೆ ರಾಮ ಭಕ್ತರು ಆಗಮಿಸಿದಾಗ ರಾಮ ಜನ್ಮಭೂಮಿ ಪ್ರವೇಶಿಸಿದ ಅನುಭವವಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಹಮ್ಮಿ ಕೊಂಡಿರುವುದಾಗಿ ಸಿನ್ಹಾ ಹೇಳಿದರು. ೨೦೨೨ಕ್ಕೆ ರೈಲ್ವೆ ನಿಲ್ದಾಣ ಮರು ನಿರ್ಮಾಣ ಕಾರ್ಯ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಹಾಜರಿದ್ದರು.

2018: ನವದೆಹಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಬಹುಕೋಟಿ ಹಗರಣ ಮತ್ತು ರಫೇಲ್ ವ್ಯವಹಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿರುವ ’ಜಾಣ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರದಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಅವರು ನೀರವ್ ಮೋದಿ ಕುರಿತು ಯಾವಾಗ ಮಾತನಾಡುತ್ತಾರೆ ಎಂದು ನಾನು ಎದುರು ನೋಡುತ್ತಿದ್ದೇನೆ ಎಂದು  ರಾಹುಲ್ ಚುಚ್ಚಿದರು. ಪ್ರಧಾನಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ  ಪಂಜಾಬ್ ನ್ಯಾಶನಲ್ ಬ್ಯಾಂಕ್ ಬಹುಕೋಟಿ ಹಗರಣ ಕಳಂಕಿತ ಕೋಟ್ಯಧಿಪತಿ ವಜ್ರಾಭರಣ ವ್ಯಾಪಾರೋದ್ಯಮಿ ನೀರವ್ ಮೋದಿ ಬಗ್ಗೆ ಮತ್ತು ರಫೇಲ್ ವ್ಯವಹಾರದ ಬಗ್ಗೆ ಮಾತನಾಡಬೇಕು ಎಂದು ಇಡೀ ದೇಶ ಅಪೇಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದರು. ಅಧಿಕಾರದಲ್ಲಿರುವವರಿಂದ ರಕ್ಷಣೆ ಪಡೆದು ಬಹುಕೋಟಿ ಪಿಎನ್‌ಬಿ ಹಗರಣದ ಆರೋಪಿ ನೀರವ್ ಮೋದಿ ದೇಶದಿಂದ ಪಲಾಯನ ಮಾಡಿದ್ದಾರೆ; ಈ ಬಗ್ಗೆ ಪ್ರದಾನಿ ಮೋದಿ ಅವರು ಏಕೆ ಮೌನವಹಿಸಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದರು.  ೨೦೧೮ ಜನವರಿ ೨೮ರ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಜನರು ತಮಗೆ ಹೊಸ ಆಲೋಚನೆಗಳು ಮತ್ತು ಸಲಹೆಗಳನ್ನು ನೀಡುವಂತೆ ಕೋರಿದ್ದ ಪ್ರಧಾನಿ ಮೋದಿ ಅವರಿಗೆ "ನೀವು ದೇಶದಲ್ಲಿ ಅತ್ಯಾಚಾರಗಳನ್ನು ನಿಲ್ಲಿಸುವ ಬಗೆಗಿನ ಸರ್ಕಾರದ  ಯೋಜನೆಗಳ ಬಗ್ಗೆ, ಡೋಕ್ಲಾಮ್ ನಿಂದ ಚೀನೀ ಸೇನೆಯನ್ನು ಅಟ್ಟುವ ಬಗ್ಗೆ, ಯುವಕರಿಗೆ ಉದ್ಯೋಗಾವಕಾಶವನ್ನು  ಒದಗಿಸುವ ಬಗ್ಗೆ ಮಾತನಾಡಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದರು.


2009: ಅತ್ಯಂತ ಕಿರಿಯ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿ ಲಿಮ್ಕಾ ದಾಖಲೆಗೆ ಪಾತ್ರಳಾದ 7 ವರ್ಷದ ಸುಷ್ಮಾವರ್ಮಾ ಲಖನೌನ ತನ್ನ ಸೈಂಟ್ ಮೀರಾ ಇಂಟರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಲಿಮ್ಕಾ ಪ್ರಮಾಣ ಪತ್ರ ಪಡೆದರು.

2009: ಚೆನ್ನೈಯ ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ನಡೆದ ವಕೀಲರು- ಪೊಲೀಸರ ನಡುವಣ ಮಾರಾಮಾರಿ ಘಟನೆ ತಮಿಳುನಾಡು ರಾಜ್ಯವನ್ನು ಪ್ರಕ್ಷುಬ್ಧ ಸ್ಥಿತಿಗೆ ತಳ್ಳಿತು. ಸೇಲಂನಲ್ಲಿ ಸರ್ಕಾರಿ ವಕೀಲರೊಬ್ಬರನ್ನು ನಿಗೂಢವಾಗಿ ಕೊಲ್ಲಲಾಯಿತು. ರಾಜ್ಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಯಿತು. ಹೈಕೋರ್ರ್ಟಿಗೂ ಈ ಬಿಸಿ ತಟ್ಟಿ, ರಜೆ ಘೋಷಿಸಲಾಯಿತು.

2009: ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆ ಕಾಫಿ ಬೆಳೆಗಾರರಿಗೆ ಮಳೆ ವಿಮಾ ಯೋಜನೆ ಜಾರಿಗೆ ಸಂಬಂಧಿಸಿ ಅಂಚೆ ಇಲಾಖೆ ಹಾಗೂ ಅಗ್ರಿಕಲ್ಚರಲ್ ಇನ್ಸುರೆನ್ಸ್ ಕಂಪೆನಿ ಆಫ್ ಇಂಡಿಯ ಲಿ. (ಎಐಸಿಐಎಲ್) ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದವು. ಬೆಂಗಳೂರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಜಿ.ವಿ.ಕೃಷ್ಣರಾವು ಸಮ್ಮುಖ ಎಐಸಿಐಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಪರ್ಶದ್, ಅಂಚೆ ಇಲಾಖೆ ವ್ಯವಹಾರ ಅಭಿವೃದ್ಧಿ ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಕರುಣಾ ಪಿಳ್ಳೈ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. 3 ಜಿಲ್ಲೆಗಳಲ್ಲಿ ಅರೇಬಿಕಾ, ರೊಬೊಸ್ಟ ಕಾಫಿ ಬೆಳೆಗಾರರು ಈ ವಿಮೆ ಪಡೆಯಲು ಅರ್ಹರು. ಜಿಲ್ಲೆಯ ಅಂಚೆ ಕಚೇರಿಗಳಲ್ಲಿ ವಿಮಾ ಪ್ರೀಮಿಯಂ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ಮಳೆ ಬೀಳುವ ಹಾಗೂ ಕಾಫಿ ಮೊಗ್ಗು ಬಿಡುವ ಕಾಲಾವಧಿಗೆ ಸಂಬಂಧಿಸಿದಂತೆ ವಿವಿಧ ವಿಮಾ ಸ್ಕೀಮ್‌ಗಳಿವೆ ಎಂದು ತಿಳಿಸಲಾಯಿತು.

2009: 'ಭ್ರಷ್ಟಾಚಾರ ನಿಯಂತ್ರಣ ಕಾರ್ಯಕ್ಕೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಪದೇಪದೇ ಅಡ್ಡಿಪಡಿಸ್ದಿದರಿಂದ ಬೇಸತ್ತು ಅಧಿಕಾರಕ್ಕೆ ಬಂದ ಏಳು ತಿಂಗಳ ಬಳಿಕ ರಾಜ್ಯಪಾಲರ ಬಳಿಗೆ ತೆರಳಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೆ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿದರು. ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಬೆಂಗಳೂರು ನಗರದ ಸಚಿವಾಲಯ ಕ್ಲಬ್ಬಿನಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ತಮ್ಮ ಆಶಯಕ್ಕೆ ತಕ್ಕಂತೆ ಏನೂ ನಡೆಯುತ್ತಿಲ್ಲ ಎಂಬ ಬೇಸರವೇ ಈ ತೀರ್ಮಾನಕ್ಕೆ ಕಾರಣವಾಗಿತ್ತು' ಎಂದು ಹೇಳಿದರು.

2009: ಜ್ಞಾನಪೀಠ ವಿಜೇತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರು ರೂಪಿಸಿದ ಹೊಸ ರೀತಿಯ ನೃತ್ಯ- ನಾಟಕ ಪ್ರಕಾರವಾದ 'ಯಕ್ಷ ರಂಗ'ದ ಉಚಿತ ಪ್ರದರ್ಶನಗಳನ್ನು ಯಾವುದೇ ಹವ್ಯಾಸಿ ತಂಡ ಅಥವಾ ಸಂಸ್ಥೆ ನೀಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 'ಯಕ್ಷ ರಂಗ'ದ ಉಚಿತ ಪ್ರದರ್ಶನ ನೀಡುವುದು ಕೃತಿಸ್ವಾಮ್ಯ ಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಎಸ್.ಬಿ.ಸಿನ್ಹಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿತು. ಈ ತೀರ್ಪಿನಿಂದಾಗಿ ಈ ಮುನ್ನ 'ಯಕ್ಷ ರಂಗ'ದ ಹಕ್ಕುಸ್ವಾಮ್ಯ ಮಾಲಿನಿ ಮಲ್ಯ ಅವರಿಗೆ ಸೇರಿದ್ದಾಗಿದೆ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ತೀರ್ಪು ವಜಾ ಆಯಿತು. 'ಯಕ್ಷ ರಂಗ'ದ ಒಡೆತನದ ಸಂಬಂಧ ಬಿ.ಮಾಲಿನಿ ಮಲ್ಯ ಮತ್ತು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಧ್ಯೆ ವ್ಯಾಜ್ಯ ಇತ್ತು. ಈ ನೃತ್ಯ ಪ್ರಕಾರವನ್ನು ಕಾರಂತರು ತನ್ನ ಹೆಸರಿಗೆ ಉಯಿಲು ಬರೆದಿದ್ದಾರೆ ಎಂದು ಮಾಲಿನಿ ವಾದಿಸಿದ್ದರು. ಅಕಾಡೆಮಿಯು 2001ರ ಸೆ.18 ರಂದು ದೆಹಲಿಯಲ್ಲಿ ನೀಡಿದ ಯಕ್ಷ ರಂಗ ಪ್ರದರ್ಶನವೊಂದರ ವಿರುದ್ಧ ಮಾಲಿನಿ ಅವರು ರಾಜ್ಯದ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯವು ಈ ನೃತ್ಯ ಪ್ರಕಾರದ ಹಕ್ಕುಸ್ವಾಮ್ಯ ಮಾಲಿನಿ ಮಲ್ಯ ಅವರಿಗೇ ಸೇರಿರುತ್ತದೆ ಎಂದು ತೀರ್ಪು ನೀಡಿತ್ತು. ಆನಂತರ ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿ, ಅಲ್ಲಿಯೂ ಮಾಲಿನಿ ಅವರ ಪರವಾಗಿಯೇ ತೀರ್ಪು ಪ್ರಕಟವಾಗಿತ್ತು. ಆದರೆ ಸುಪ್ರೀಂಕೋರ್ಟ್ ಈ ವಾವನ್ನು ಒಪ್ಪಲಿಲ್ಲ. ಸಂಶೋಧನೆ ಅಥವಾ ವಿಮರ್ಶೆ ಒಳಗೊಂಡಂತೆ ಯಾವುದೇ ಖಾಸಗಿ ಉದ್ದೇಶಕ್ಕೆ ಸಾಹಿತ್ಯ ಅಥವಾ ನಾಟಕ ಕೃತಿಯನ್ನು ಬಳಸಿಕೊಂಡು ಅದಕ್ಕೆ ಬೇರೆ ಯಾವುದೇ ಸ್ವರೂಪ ನೀಡಿದರೆ ಅಂತಹ ಸಂದರ್ಭದಲ್ಲಿ ಕೃತಿಸ್ವಾಮ್ಯ ಹಕ್ಕು ಸಾಧಿಸಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

2009: ಇದೊಂದು ಗೋ ವಿವಾಹ. ಹಿಂದಿನ ವಾರ ಒರಿಸ್ಸಾದ ಬೆಹ್ರಾಂಪುರದಲ್ಲಿ ಹಸು ಮತ್ತು ಎತ್ತು ನಡುವೆ ವೇದ ಮಂತ್ರಗಳ ನಡುವೆ ಮದುವೆಯೊಂದು ನಡೆಯಿತು. ಗೋಮಾತೆಗೆ ಹರಕೆ ಹೊತ್ತುಕೊಂಡಿದ್ದ ವೃದ್ಧೆ ಸರೋಜಿನಿ ತನ್ನ ದಶಕಗಳಷ್ಟು ಹಿಂದಿನ ಆಶಯವನ್ನು ಹಸು ಮತ್ತು ದನದ ಮದುವೆಯನ್ನು ವೇದ ಘೋಷಗಳ ಮಧ್ಯೆ ಸಾಂಗೋಪ ಸಾಂಗವಾಗಿ ನೆರವೇರಿಸುವ ಮೂಲಕ ಈಡೇರಿಸಿಕೊಂಡರು. ಇಲ್ಲಿಯ ಕೇದಾರೇಶ್ವರ ದೇವಸ್ಥಾನದಲ್ಲಿ ಪುರೋಹಿತರ ನೇತೃತ್ವದಲ್ಲಿ ಯಜ್ಞ, ಸಂಸ್ಕೃತ ಶ್ಲೋಕಗಳ ಪಠಣ, ವಿಧಿವತ್ತಾದ ವೇದ ಘೋಷಗಳ ಮಧ್ಯೆ ಮದುವೆ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಅತಿಥಿಗಳೂ ಈ ವಿವಾಹಕ್ಕೆ ಸಾಕ್ಷಿಯಾದರು.

2008: ಭೂಕಕ್ಷೆ ಪ್ರವೇಶಿಸಲು ಅಣಿಯಾಗುತ್ತಿದ್ದ ನಿರುಪಯುಕ್ತ ಬೇಹುಗಾರಿಕಾ ಉಪಗ್ರವೊಂದನ್ನು ಅಮೆರಿಕದ ಕ್ಷಿಪಣಿಯು ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಹೊಡೆದುರುಳಿಸಿತು. 133 ನಾವಿಕ ಮೈಲುಗಳ (ಭೂಮಿಯಿಂದ 247 ಕಿ.ಮೀ. ದೂರ) ಅಂತರದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪಗ್ರಹದ ಒಳಗಿನ ವಿಷಾನಿಲ ತುಂಬಿದ ಟ್ಯಾಂಕ್ ಭೂಮಿಯ ಅಥವಾ ಸಾಗರದ ಯಾವ ಪ್ರದೇಶದಲ್ಲಿ ಸ್ಫೋಟಗೊಂಡಿದೆ ಎಂಬುದು ತಿಳಿದಿಲ್ಲ ಎಂದು ಪೆಂಟಗಾನ್ ಹೇಳಿಕೆ ನೀಡಿತು. 2006ರಲ್ಲಿ ಅಮೆರಿಕ ತನ್ನ ಬೇಹುಗಾರಿಕಾ ಅವಶ್ಯಕತೆಗಾಗಿ ಇದನ್ನು ಪರೀಕ್ಷಾರ್ಥ ಉಡಾಯಿಸಿತ್ತು. ಉಡಾವಣೆಗೊಂಡ ಕೆಲವೇ ಗಂಟೆಗಳಲ್ಲಿ ಇದು ತನ್ನ ಸಂಪರ್ಕ ಕಡಿದುಕೊಂಡಿತ್ತು. ಇದು ವಿರೋಧಿ ಶಕ್ತಿಗಳ ಕೈವಶವಾಗಬಾರದೆಂಬ ಉದ್ದೇಶದಿಂದ ಹೊಡೆದು ಉರುಳಿಸಿರುವುದಾಗಿ ಅಮೆರಿಕ ಹೇಳಿತು. ಎಸ್ಎಂ-3 ಹೆಸರಿನ ಈ ಕ್ಷಿಪಣಿಯ ತೂಕ 2,270 ಕೆ.ಜಿ.

2008: ಡಾ.ಪು.ತಿ.ನ. ಟ್ರಸ್ಟ್ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾಕರ ಕಡವೆ ಅವರಿಗೆ `ಡಾ.ಪುತಿನ ಕಾವ್ಯ ಪುರಸ್ಕಾರ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಪ್ರೊ.ಎಲ್.ಎಸ್. ಶೇಷಗಿರಿರಾವ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಶ್ರೀಕ್ಷೇತ್ರ ಶ್ರವಣಬೆಳಗೊಳ ಸ್ಥಾಪಿಸಿರುವ `ಚಾವುಂಡರಾಯ ಪ್ರಶಸ್ತಿ'ಯನ್ನು ಹಿರಿಯ ಸಾಹಿತಿ ಬಿ. ದೇವುಕುಮಾರ ಶಾಸ್ತ್ರಿ ಅವರಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು.

2008: ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು.ಆರ್.ರಾವ್ ಅವರು ಅಮೆರಿಕದ ವಿಶ್ವ ಕಲೆ ಮತ್ತು ವಿಜ್ಞಾನ ಅಕಾಡೆಮಿಯ ಫೆಲೋ ಆಗಿ ಆಯ್ಕೆಯಾದರು. ರಾವ್ ಅವರ ಸಾಮಾಜಿಕ ಸೇವೆ, ವೃತ್ತಿಯಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಫೆಲೋ ಆಗಿ ಆಯ್ಕೆ ಮಾಡಲಾಗಿದೆ ಎಂದು ಇಸ್ರೊ ಪ್ರಕಟಣೆ ತಿಳಿಸಿತು.

2007: ಸಮ್ ಜೌತಾ ಎಕ್ಸ್ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜಂಟಿ ತನಿಖೆ ನಡೆಸಬೇಕು ಎಂಬ ಪಾಕ್ ಪ್ರಸ್ತಾವವನ್ನು ಭಾರತ ತಿರಸ್ಕರಿಸಿತು.

2007: ಅಣ್ವಸ್ತ್ರ ಅಪಘಾತ ಅಪಾಯಗಳನ್ನು ಕಡಿಮೆಗೊಳಿಸುವ ಒಪ್ಪಂದ ಒಂದಕ್ಕೆ ಭಾರತ ಮತ್ತು ಪಾಕಿಸ್ಥಾನನವದೆಹಲಿಯಲ್ಲಿ ಸಹಿ ಹಾಕಿದವು. ಭಾರತದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೆ.ಸಿ. ಸಿಂಗ್ ಮತ್ತು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ತಾರೀಕ್ ಉಸ್ಮಾನ್ ಹೈದರ್ ಒಪ್ಪಂದಕ್ಕೆ ಸಹಿ ಹಾಕಿದರು.

2007: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಮತ್ತು ವಿರೋಧಿ ಕಾಂಗ್ರೆಸ್ ನಡುವೆ ಉಂಟಾಗಿದ್ದ ಬಿಕ್ಕಟ್ಟು ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರ ಮಧ್ಯಪ್ರವೇಶದಿಂದ ಕೊನೆಗೊಂಡಿತು. ಮುಂದಿನ ಅಧಿವೇಶನಕ್ಕೆ ಮುಂಚಿತವಾಗಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ರಾಜ್ಯಪಾಲರು ಪರಿಷತ್ ಸದಸ್ಯರಿಗೆ ಸೂಚಿಸಿದರು.

2007: ಕನ್ನಡಪ್ರಭದ ಮುಖ್ಯವರದಿಗಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಎಚ್. ಜಿ. ಪಟ್ಟಾಭಿರಾಮ್ (65) ನಿಧನರಾದರು. ಅಪರಾಧ ವರದಿಗಾರಿಕೆಗೆ ಅವರು ಖ್ಯಾತರಾಗಿದ್ದರು.

2007: ಭಾರತ ತಂಡದ ಮಾಜಿ ಆಟಗಾರ ಸುಜಿತ್ ಅವರು ಸೋಮವಾರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ಪ್ರತಿಭಾನ್ವಿತ ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಸುಜಿತ್ ಸೋಮಸುಂದರ್ 1990-91ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಪರ ರಣಜಿ ಪಂದ್ಯದಲ್ಲಿ ಆಡಿದ್ದರು.

2007: ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ಮತ್ತು ಇತರರ ವಿರುದ್ಧ ಉದ್ಯಮಿ ವಿ.ಜಿ. ಸಿದ್ಧಾರ್ಥ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿತು. ಕೋರ್ಟ್ ವೆಚ್ಚಕ್ಕಾಗಿ ಅಧಿಕಾರಿಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವಂತೆಯೂ ನ್ಯಾಯಾಲಯ ಸಿದ್ಧಾರ್ಥ ಅವರಿಗೆ ನ್ಯಾಯಾಲಯ ಸೂಚಿಸಿತು. ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗ್ದಿದಾಗ ಕಾಡುಗಳ್ಳ ವೀರಪ್ಪನ್ ಅವರು ಡಾ. ರಾಜಕುಮಾರ್ ಅವರನ್ನು ಅಪಹರಿಸಿ, ಬಿಡುಗಡೆ ಮಾಡಿದ ಪ್ರಕರಣ ಬಗ್ಗೆ ದಿನಕರ್ ಅವರು ಬರೆದ `ವೀರಪ್ಪನ್ಸ್ ಪ್ರೈಸ್ ಕ್ಯಾಚ್: ರಾಜಕುಮಾರ' ಪುಸ್ತಕದಲ್ಲಿ ತಮ್ಮ ಘನತೆಗೆ ಕುಂದು ತರುವಂತಹ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿ ಸಿದ್ಧಾರ್ಥ ಮೊಕದ್ದಮೆ ಹೂಡಿದ್ದರು.

2007: ಹಠಾತ್ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗವು ಉತ್ತರ ಪ್ರದೇಶ ರಾಜ್ಯ ವಿಧಾನಸಭೆಗೆ ಏಳು ಹಂತಗಳ ಚುನಾವಣೆಯನ್ನು ಘೋಷಿಸಿತು. ಇದರಿಂದಾಗಿ ವಜಾಭೀತಿಯಲ್ಲಿದ್ದ ಮುಲಯಂ ಸಿಂಗ್ ಸರ್ಕಾರವು ಈ ತೂಗುಕತ್ತಿಯಿಂದ ಸದ್ಯಕ್ಕೆ ಪಾರಾಯಿತು.

2006: ಉದರದ ಸಮಸ್ಯೆಗಳಿಗಾಗಿ ಶಸ್ತ್ರಚಿಕಿತ್ಸೆ ನಡೆದ ಎರಡು ತಿಂಗಳುಗಳಿಗೂ ಹೆಚ್ಚು ಕಾಲದ ವಿಶ್ರಾಂತಿಯ ಬಳಿಕ ಅಮಿತಾಭ್ ಬಚ್ಚನ್ ಅವರು ಬಾಬುಲ್ ಹಾಡು ಮುದ್ರಣ ಮಾಡಿಸಿಕೊಂಡರು.

2006: ರಾಷ್ಟ್ರದ್ಯಂತ ಕುತೂಹಲ ಕೆರಳಿಸಿದ್ದ, ನೂರಾರು ಜನರ ಸಮ್ಮುಖದಲ್ಲಿ ನಡೆದಿದ್ದ ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಮನುಶರ್ಮಾ ಸೇರಿದಂತೆ ಎಲ್ಲ ಒಂಬತ್ತು ಆರೋಪಿಗಳನ್ನು ದೆಹಲಿ ನ್ಯಾಯಾಲಯವು ಖುಲಾಸೆ ಮಾಡಿತು. 1999ರ ಏಪ್ರಿಲ್ 29ರ ಮಧ್ಯರಾತ್ರಿ ಜೆಸ್ಸಿಕಾಲಾಲ್ ಕೊಲೆ ನಡೆದಿತ್ತು. ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಭಾಯನಾ ಅವರು ಸಾಕ್ಷ್ಯಗಳ ಅಭಾವದ ಕಾರಣಕ್ಕಾಗಿ ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮಾ ಅವರ ಪುತ್ರ ಸಿದ್ಧಾರ್ಥ ವಸಿಷ್ಠ ಯಾನೆ ಮನು ಶರ್ಮಾ ಮತ್ತು ಇತರರನ್ನು ಆರೋಪಮುಕ್ತಗೊಳಿಸಿ ತೀರ್ಪು ನೀಡಿದರು. ಈ ತೀರ್ಪಿನ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಅಸಮಾಧಾನ ಭುಗಿಲೆದ್ದು, ಜನ ನೇರವಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಪ್ರಕರಣದ ಮರುವಿಚಾರಣೆ ನಡೆಸುವಂತೆ ಆಗ್ರಹಿಸಿ ಪತ್ರಗಳನ್ನು ಬರೆದರು.

1974: ಕಲಾವಿದ ಋತ್ವಿಕ್ ಸಿಂಹ ಜನನ.

1964: ಸುಗಮ ಸಂಗೀತ, ಜಾನಪದ, ರಂಗಭೂಮಿ ಮತ್ತಿತರ ಸಾಂಸ್ಕೃತಿಕ ಸಂಘಟನೆಗಳ ರೂವಾರಿ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಬಿ.ಎಸ್. ನಾರಾಯಣ ಭಟ್- ರುಕ್ಮಿಣಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು.

1961: ಕಲಾವಿದ ಮಂಜುಮಯ್ಯ ಜೆ. ಜನನ.

1947: ಎಡ್ವಿನ್ ಎಚ್ ಲ್ಯಾಂಡ್ ಸಾರ್ವಜನಿಕವಾಗಿ ತನ್ನ ಪೋಲರೈಡ್ ಲ್ಯಾಂಡ್ ಕ್ಯಾಮರಾವನ್ನು ಪ್ರದರ್ಶಿಸಿದ. ಈ ಕ್ಯಾಮರಾ 60 ಸೆಕೆಂಡುಗಳಲ್ಲಿ ಕಪ್ಪು ಬಿಳುಪು ಛಾಯಾಚಿತ್ರ ತೆಗೆದುಕೊಡುವ ಸಾಮರ್ಥ್ಯ ಹೊಂದಿತ್ತು.

1924: ರಾಬರ್ಟ್ ಮುಗಾಬೆ ಹುಟ್ಟಿದ ದಿನ. ಇವರು ಜಿಂಬಾಬ್ವೆಯ ಪ್ರಥಮ ಪ್ರಧಾನಿಯಾಗಿ 1980ರಿಂದ 1987ರ ಅವಧಿಯಲ್ಲಿ ಆಡಳಿತ ನಡೆಸಿದರು.

1916: ಮೊದಲ ಜಾಗತಿಕ ಸಮರ ಕಾಲದ `ವೆರ್ಡನ್ ಹೋರಾಟ' ಆರಂಭವಾಯಿತು. ಫ್ರೆಂಚ್ ಕಡೆಯಲ್ಲಿ ಅಪಾರ ಸಾವು ನೋವು ಆಗುವಂತೆ ಮಾಡುವಲ್ಲಿ ಸಫಲರಾದರೂ ವೆರ್ಡನನ್ನು ವಶಪಡಿಸಿಕೊಳ್ಳುವಲ್ಲಿ ಜರ್ಮನ್ನರು ವಿಫಲರಾದರು.

1894: ಭಾರತೀಯ ವಿಜ್ಞಾನಿ ಶಾಂತಿ ಸ್ವರೂಪ್ ಭಟ್ನಾಗರ್ (1894-1955) ಹುಟ್ಟಿದ ದಿನ. ವಿಜ್ಞಾನ ಕ್ಷೇತ್ರದಲ್ಲಿ ಮಾಡುವ ಸಾಧನೆಗೆ ನೀಡುವ ಸರ್ವೋನ್ನತ ಪ್ರಶಸ್ತಿಗೆ ಇವರ ಹೆಸರನ್ನೇ (ಭಟ್ನಾಗರ್ ಪ್ರಶಸ್ತಿ) ಇಡಲಾಗಿದೆ.

1822: ರಿಚರ್ಡ್ ಸೌತ್ ವೆಲ್ ಬೌರ್ಕೆ (1822-1872) ಹುಟ್ಟಿದ ದಿನ. ಐರಿಷ್ ರಾಜಕಾರಣಿ ಹಾಗೂ ಮೇಯೋವಿನ ಅಧಿಕಾರಿಯಾಗಿದ್ದ ಈತ ಭಾರತದ ವೈಸ್ ರಾಯ್ ಆಗಿದ್ದ ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಜನಗಣತಿ ನಡೆಸಿದ. ಅಜ್ಮೀರದಲ್ಲಿ ಮೇಯೊ ಕಾಲೇಜ್ ಸ್ಥಾಪಿಸಿದ. ಕೃಷಿ ಮತ್ತು ವಾಣಿಜ್ಯಕ್ಕಾಗಿ ಪ್ರತ್ಯೇಕ ಇಲಾಖೆಗಳನ್ನು ಆರಂಭಿಸಿದ.

1804: ಬ್ರಿಟಿಷ್ ಎಂಜಿನಿಯರ್ ರಿಚರ್ಡ್ ಟ್ರಿವಿಥಿಕ್ ಮೊತ್ತ ಮೊದಲ ಬಾರಿಗೆ ಹಳಿಗಳ ಮೇಲೆ ಉಗಿಯಂತ್ರವನ್ನು ಓಡಿಸಿದ.

1741: ಇಂಗ್ಲಿಷ್ ಕೃಷಿ ತಜ್ಞ ಜೆತ್ರೊ ಟುಲ್ (1674-1741) ಮೃತನಾದ. ಬರಹಗಾರ, ಸಂಶೋಧಕ ಹಾಗೂ ಕೃಷಿತಜ್ಞನಾದ ಈತನ ಕಲ್ಪನೆಗಳು ಆಧುನಿಕ ಬ್ರಿಟಿಷ್ ಕೃಷಿಗೆ ಅಡಿಪಾಯ ಹಾಕಿದವು.

No comments:

Post a Comment