Friday, February 1, 2019

ಇಂದಿನ ಇತಿಹಾಸ History Today ಫೆಬ್ರುವರಿ 01

ಇಂದಿನ ಇತಿಹಾಸ History Today ಫೆಬ್ರುವರಿ 01
2019: ನವದೆಹಲಿ: ರೈತರ ಖಾತೆಗೆ ನೇರಹಣ ಪಾವತಿ ಮಾಡುವ ಖಚಿತ ಆದಾಯ ಒದಗಿಸುವ ಒಟ್ಟು ೭೫,೦೦೦ ಕೋಟಿ ರೂಪಾಯಿ ಮೊತ್ತದಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಮಧ್ಯಮ ವರ್ಗ, ವೇತನದಾರರಿಗೆ ಲಕ್ಷ ರೂಪಾಯಿಗಳವರೆಗಿನ ಆದಾಯ ತೆರಿಗೆ ವಿನಾಯ್ತಿ ಮತ್ತು ಅಸಂಘಟಿತ ವಲಯದ ೬೦ ವರ್ಷ ಮೀರಿದ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಒದಗಿಸುವಪ್ರಧಾನಮಂತ್ರಿ ಶ್ರಮಯೋಗಿ ಮನ್ಧನ್ ಯೋಜನೆಗಳನ್ನು ಪ್ರಕಟಿಸುವ ಮೂಲಕ ೨೦೧೯-೨೦ರ ಸಾಲಿನ ತನ್ನ ಕೊನೆಯ ಮಧ್ಯಂತರಚುನಾವಣಾ ಮುಂಗಡಪತ್ರದ ಮೂಲಕ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಮಧ್ಯಮವರ್ಗ, ರೈತರು ಮತ್ತು ಬಡ ಕಾರ್ಮಿಕರನ್ನು ಸೆಳೆಯಲು ಯತ್ನಿಸಿತು. ರೈತರ ಸಾಲಮನ್ನಾ ಆಗ್ರಹದ ಹಿನ್ನೆಲೆ, ಪಂಚರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸಂಭವಿಸಿದ ರಾಜಕೀಯ ಹಿನ್ನೆಡೆಗಳಲ್ಲಿ ರೈತರಿಗೆ ಭಾರೀಕೊಡುಗೆ ಸಿಗಬಹುದು ಎಂಬುದಾಗಿ ನಿರೀಕ್ಷಿಸಲಾಗಿದ್ದ ಪ್ರಸ್ತುತ ಸರ್ಕಾರದ ಕೊನೆಯ ಮುಂಗಡಪತ್ರವು  ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹೊರತಾಗಿಯೂ ರೈತರಿಗೆ ವಿಶೇಷ ಸಮಾಧಾನ ಕೊಟ್ಟಿಲ್ಲ, ಆದರೆ ಮಧ್ಯಮ ವರ್ಗ ಮತ್ತು ವೇತನದಾರರಿಗೆ ತೆರಿಗೆ ಆದಾಯಮಿತಿ ದುಪ್ಪಟ್ಟುಗೊಳ್ಳುವುದರೊಂದಿಗೆಬಂಪರ್ ಕೊಡುಗೆ ನೀಡಿದೆ. ವೃದ್ಧ ಕಾರ್ಮಿಕರಿಗೆಪಿಂಚಣಿ ಯೋಜನೆ ನೆಮ್ಮದಿ ನೀಡಿದೆ. ಮಧ್ಯಂತರ ಬಜೆಟ್ ಜನತೆಯ ಮೇಲೆ ಯಾವುದೆ ತೆರಿಗೆ ಹೊರೆ ವಿಧಿಸಲಿಲ್ಲ. ಮುಂಗಡಪತ್ರವನ್ನು ಮಂಡಿಸಿದ ಹಣಕಾಸು ಸಚಿವ ಪೀಯೂಶ್ ಗೋಯೆಲ್ ಅವರು ಮುಂಗಡಪತ್ರವು ಪ್ರತಿಯೊಂದು ವರ್ಗದ ಜನರನ್ನೂ ಸ್ಪರ್ಶಿಸಲಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜನರ ಕೈಗಳಿಗೆ ಹೆಚ್ಚು ಹಣ ದೊರಕುವಂತೆ ಮಾಡುವ ಮೂಲಕ ಹಣದುಬ್ಬರದ ಬೆನ್ನಮೂಳೆ ಮುರಿಯುವಂತೆ ಮೂಡಿದೆ ಎಂದು ಅವರು ಹೇಳಿದರು. ಮುಂಗಡಪತ್ರವು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ತೆರಿಗೆ ಕೊಡುಗೆಯನ್ನೂ ರೈತರಿಗೆನಗದುಕೊಡುಗೆಯನ್ನು ನೀಡಿದೆ ಎಂದು ಅವರು ಹೇಳಿದರು. ಗೋವುಗಳ ಆರೋಗ್ಯ ರಕ್ಷಣೆಗಾಗಿರಾಷ್ಟ್ರೀಯ ಕಾಮಧೇನು ಆಯೋಗ ಮಲೆಮಾರಿ, ಅರೆ ಅಲೆಮಾರಿಗಳ ಅಭಿವೃದ್ಧಿಗೆ ಅತಿ ಶೀಘ್ರದಲ್ಲೇ ಹೊಸ ಮಂಡಳಿಯೊಂದನ್ನು ಸ್ಥಾಪಿಸಲಾಗುವುದು ಎಂದು ಸಚಿವ ಗೋಯೆಲ್ ಪ್ರಕಟಿಸಿದರುಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೂಲಕ ಎರಡು ಹೆಕ್ಟೇರಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ವರ್ಷಕ್ಕೆ ,೦೦೦ ರೂಪಾಯಿಗಳ ನೇರ ಆದಾಯದ ಬೆಂಬಲವನ್ನು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ಒದಗಿಸಿದ್ದು, ಸುಮಾರು ೧೨ ಕೋಟಿ ರೈತರು ನಗದು ಲಾಭವನ್ನು ಪಡೆಯಲಿದ್ದಾರೆ ಎಂದು ಸಚಿವರು ನುಡಿದರು. ವಾರ್ಷಿಕ ೬೦೦೦ ರೂಪಾಯಿಗಳ ಹಣವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಖಾತೆಗಳಿಗೆ ಯೋಜನೆಯ ಅಡಿಯಲ್ಲಿ ವರ್ಗಾಯಿಸಲಾಗುತ್ತದೆ. ಯೋಜನೆಯು ೨೦೧೮ರ ಡಿಸೆಂಬರ್ ೧ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.   ಯೋಜನೆಯಡಿಯಲ್ಲಿ ರೈತರಿಗೆ ಹಣ ವಿತರಿಸುವ ಸಲುವಾಗಿಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಸ್ಥಾಪಿಸಲಾಗುವುದು. ಪಿಎಂ ಕಿಸಾನ್ ಯೋಜನೆಗಾಗಿ ೨೦೧೯-೨೦- ಸಾಲಿಗೆ ೭೫,೦೦೦ ಕೋಟಿ ರೂಪಾಯಿಗಳ ನಿಧಿಯನ್ನು ಸಚಿವರು ಪ್ರಕಟಿಸಿದರು. ೧೦೧೮-೧೯ರ ಪ್ರಸ್ತುತ ಹಣಕಾಸು ವರ್ಷಕ್ಕೆ ೨೦,೦೦೦ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ಅವರು ನುಡಿದರು. ಬಡವರಿಗೆ ಆದಾಯ ಖಾತರಿಯ  ಕಲ್ಪನೆಯನ್ನು ಅರವಿಂದ ನರೇಂದ್ರ ಮೋದಿ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು ೨೦೧೬-೧೭ರ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಮುಂದಿಟ್ಟಿದ್ದರು. ಆದರೆ ನೀತಿ ಆಯೋಗವು ಇದು ಜಾರಿಗೊಳಿಸಲು ಸಾಧ್ಯವಿಲ್ಲದ ಯೋಜನೆ ಎಂದು ಹೇಳಿದ್ದರಿಂದ ಇದಕ್ಕೆ ಸರ್ಕಾರದ ಬೆಂಬಲ ಸಿಕ್ಕಿರಲಿಲ್ಲ. ೨೦೧೬-೧೭ರ ಆರ್ಥಿಕ ಸಮೀಕ್ಷೆ ಭಾಗಶಃ ಸಾರ್ವತ್ರಿಕ ಮೂಲ ಆದಾಯ ಯೋಜನೆ (ಕ್ವಾಸಿ ಯುನಿವರ್ಸಲ್ ಬೇಸಿಕ್ ಇನ್ ಕಮ್ ಸ್ಕೀಮ್) ಬಗ್ಗೆ ಪ್ರಸ್ತಾಪಿಸಿತ್ತು. ಈಗಿನ ಎಲ್ಲ ಸಬ್ಸಿಡಿಗಳ ಬದಲಿಗೆ ಸಾರ್ವತ್ರಿಕ ಮೂಲ ಆದಾಯ (ಯುಬಿಐ) ಯೋಜನೆ ಜಾರಿಗೆ ತರುವಂತೆ ಸಮೀಕ್ಷೆಯು ಸಲಹೆ ಮಾಡಿತ್ತು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಯೋಜನೆಯನ್ನು ಮುಖ್ಯ ಭರವಸೆಯನ್ನಾಗಿ ಮಾಡಿಕೊಳ್ಳುವ ಇಂಗಿತವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಚಂಡೀಗಢದ ಚುನಾವಣಾ ರ್ಯಾಲಿಯಲ್ಲಿ ನೀಡಿದ್ದರು. ೨೦೧೯ರ ಚುನಾವಣೆಗಳ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರವು ಬಡತನ ಮತ್ತು ಹಸಿರು ನಿವಾರಣೆಗಾಗಿ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ಕೊಟ್ಟಿದ್ದರು.  

2018: ನವದೆಹಲಿ: ಪ್ರಸ್ತುತ ಸಾಲಿನಲ್ಲಿ ಎಂಟು ವಿಧಾನಸಭೆ ಚುನಾವಣೆಗಳು ಮತ್ತು ಮುಂದಿನ ವರ್ಷ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ ೨೦೧೮-೧೯ನೇ ಸಾಲಿನ ಪೂರ್ಣ ಪ್ರಮಾಣದ ಮುಂಗಡಪತ್ರವನ್ನು ಲೋಕಸಭೆಯಲ್ಲಿ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರೈತರು, ಜನಸಾಮಾನ್ಯರು, ಮಧ್ಯಮವರ್ಗದವರು ಸೇರಿದಂತೆ ಎಲ್ಲರಿಗೂ ಪರಿಹಾರಗಳನ್ನು ಒದಗಿಸುವಜನಪ್ರಿಯ ಬಜೆಟನ್ನುಜನರ ಮುಂದಿಟ್ಟರು. ಸತತ ನಾಲ್ಕನೇ ಬಾರಿಗೆ ಮುಂಗಡಪತ್ರ ಮಂಡಿಸಿದ ಜೇಟ್ಲಿ ಅವರು ಬಾರಿ ಕೃಷಿ ಮತ್ತು ಆರೋಗ್ಯ ಸುರಕ್ಷತೆ (ಹೆಲ್ತ್ ಕೇರ್) ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟರು. ಮುಂಗಡಪತ್ರವನ್ನು ಅಭಿವೃದ್ಧಿ ಕೇಂದ್ರಿತ ಲೆಕ್ಕಾಚಾರವನ್ನಾಗಿ ಮಾಡಲು ಯತ್ನಿಸಿದ ಜೇಟ್ಲಿ  ಆರೋಗ್ಯ ವಲಯಕ್ಕೆ ಹೆಚ್ಚು ಅಗ್ರ ಪ್ರಾಶಸ್ತ್ಯ ನೀಡಿದರು. ದೇಶದ ೧೦ ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ವಿಶೇಷ ಯೋಜನೆಯನ್ನು ಪ್ರಕಟಿಸಿದ ಸಚಿವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗಾಗಿ ೧೨೦೦ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಹೇಳಿದರು. ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆಯ ಮೂಲಕ, ೧೦ ಕೋಟಿ ಬಡ ಕುಟುಂಬಗಳ ೫೦ ಕೋಟಿ ಜನರಿಗೆ ಆರೋಗ್ಯ ಸುರಕ್ಷತೆ ಸಿಗಲಿದೆ. ಸರ್ಕಾರವು ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ನೀಡಲಿದ್ದು, ದೇಶದ ೧೦ ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ವಿಶೇಷ ಯೋಜನೆಯನ್ನು ಸಚಿವರು ಪ್ರಕಟಿಸಿದರು. ಜಿಲ್ಲಾ ಆಸ್ಪತ್ರೆಗಳನ್ನು ವಿಕಸನಗೊಳಿಸಿ ಹೊಸದಾಗಿ ೨೪ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುವುದು. ಆಯುಷ್ಮಾನ್ ಭಾರತ್ ಯೋಜನೆ  ಅಂಗವಾಗಿ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ. ಒಂದೂವರೆ ಲಕ್ಷ  ಆರೋಗ್ಯ ಕೇಂದ್ರಗಳನ್ನು ಹೊಸದಾಗಿ ಆರಂಭಿಸಲಾಗುವುದು ಎಂದು ಜೇಟ್ಲಿ ನುಡಿದರು. ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಪೂರೈಸುವುದಕ್ಕಾಗಿ ೬೦೦ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ, ದೇಶದ ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದರಂತೆ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ವೈದ್ಯಕೀಯ ವೆಚ್ಚದ ತೆರಿಗೆ ವಿನಾಯ್ತಿಯನ್ನು ೪೦,೦೦೦ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಮಹಿಳಾ ಕ್ಷೇಮಾಭಿವೃದ್ಧಿಗಾಗಿ ಮುಂಗಡಪತ್ರದಲ್ಲಿ ಒತ್ತು ನೀಡಲಾಗಿದೆ. ಉಜ್ವಲ ಯೋಜನೆಯಡಿಯಲ್ಲಿ ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದು ಜೇಟ್ಲಿ ನುಡಿದರು. ೨೦೧೯ರಲ್ಲಿ ಮಹಾತ್ಮ ಗಾಂಧೀಜಿ ಅವರ ೧೫೦ನೇ ಜನ್ಮದಿನಾಚರಣೆ ಪ್ರಯುಕ್ತ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಮತ್ತು ಗಾಂಧೀವಾದಿಗಳು ಸದಸ್ಯರಾಗಿರುವ ಸಮಿತಿ ಆಯೋಜಿಸುವ ಕಾರ್ಯಕ್ರಮಗಳಿಗಾಗಿ ೧೫೦ ಕೋಟಿ ರೂಪಾಯಿಗಳನ್ನು ಮೀಸಲು ಇರಿಸಲಾಗಿದೆ. ಇದೇ ವೇಳೆಗೆ ರಾಷ್ಟ್ರಪತಿಯ ಪ್ರತಿ ತಿಂಗಳ ವೇತನವನ್ನು ಲಕ್ಷ ರೂಪಾಯಿ ಮತ್ತು ಉಪರಾಷ್ಟ್ರಪತಿಯ ವೇತನವನ್ನು ಲಕ್ಷ ರೂಪಾಯಿಗಳನ್ನು ಏರಿಸಲಾಗುವುದು. ಸಂಸತ್ ಸದಸ್ಯರ ವೇತನವನ್ನು ಪ್ರತಿ ಐದು ವರ್ಷಕ್ಕೊಮ್ಮೆ ಏರಿಸಲು ಕಾನೂನು ರೂಪಿಸಲಾಗುವುದು ಎಂದು ಜೇಟ್ಲಿ ಹೇಳಿದರು. ಮುಂಗಡಪತ್ರದ ಮುಖ್ಯಾಂಶಗಳು:  ಶೈಕ್ಷಣಿಕ ವಲಯ: * ಚೆನ್ನೈ ಐಐಟಿಯಲ್ಲಿ ೫ಜಿ ಅಧ್ಯಯನ ಕೇಂದ್ರ ಸ್ಥಾಪನೆ ಪ್ರಸ್ತಾವ. * ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯ ಹೆಚ್ಚಿಸಲು ಆದ್ಯತೆ. * ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯಲ್ಲಿಏಕಲವ್ಯ ವಸತಿ ಶಾಲೆಗಳ ಆರಂಭ. * ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯ ನಿರ್ಮಾಣ ಘೋಷಣೆಕೃಷಿ ವಲಯ: * ಕೃಷಿ ಉತ್ಪನ್ನ ಕಂಪೆನಿಗಳಿಗೆ ಶೇ ೧೦೦ರ ತೆರಿಗೆ ವಿನಾಯಿತಿ. * ೨೦೧೮-೧೯ನೇ ಸಾಲಿನಲ್ಲಿ ಕೃಷಿ ಸಾಂಸ್ಥಿಕ ಸಾಲದ ಮೊತ್ತವನ್ನು ೧೧ ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ಪ್ರಸ್ತಾವ. * ೫೦೦ ಕೋಟಿ ರೂಪಾಯಿ ಅನುದಾನದಲ್ಲಿಆಪರೇಷನ್ ಗ್ರೀನ್ ಯೋಜನೆ ಪ್ರಸ್ತಾವ. * ಬಿದಿರು ಕೃಷಿಗಾಗಿ ,೨೯೦ ಕೋಟಿ ರೂಪಾಯಿ ಮೊತ್ತದ ನಿಧಿ. * ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ ,೦೦೦ ಕೋಟಿ ರೂಪಾಯಿ ಮೊತ್ತದಲ್ಲಿಕೃಷಿ ಮಾರುಕಟ್ಟೆ ನಿಧಿ ಘೋಷಣೆ. * ೨೦೨೨ರ ವೇಳೆಗೆ ಕೃಷಿಕರ ಆದಾಯ ದ್ವಿಗುಣಗೊಳಿಸಲು ಯೋಜನೆ. * ೨೦೧೮-೧೯ನೇ ಸಾಲಿನಲ್ಲಿ ಕೃಷಿ ಸಾಂಸ್ಥಿಕ ಸಾಲದ ಮೊತ್ತವನ್ನು ೧೧ ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ಪ್ರಸ್ತಾವ. ಆರೋಗ್ಯ ವಲಯ:  * ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ ೪೦,೦೦೦ ರೂಪಾಯಿಗಳಿಗೆ ಹೆಚ್ಚಳ. * ೧೦ ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ಪ್ರತಿ ಕುಟುಂಬಕ್ಕೆ ಲಕ್ಷ ರೂಪಾಯಿಗಳ ವಿಮೆ. * ಕ್ಷಯ ರೋಗಿಗಳಿಗಾಗಿಆಯುಷ್ಮಾನ್ ಭಾರತ್ ಯೋಜನೆ, ೬೦೦ ಕೋಟಿ ರೂಪಾಯಿಗಳ ಅನುದಾನ. * ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ ೧೨,೦೦ ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ, ೧೦ ಕೋಟಿ ಬಡ ಕುಟುಂಬಗಳಿಗೆ ನೆರವು. * ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದರ ಜತೆ ೨೪ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸ್ಥಾಪನೆ. * ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯ ಹೆಚ್ಚಿಸಲು ಆದ್ಯತೆ. * ಸ್ವಚ್ಛ ಭಾರತ ಯೋಜನೆಯಡಿ ಈವರೆಗೆ ಕೋಟಿ ಶೌಚಾಲಯಗಳ ನಿರ್ಮಾಣವಾಗಿದ್ದು, ಇನ್ನೂ ಕೋಟಿ ಶೌಚಾಲಯ ನಿರ್ಮಾಣದ ಗುರಿ. ಒಟ್ಟಾರೆ ಪ್ರಮುಖಾಂಶಗಳು: )ವೈಯಕ್ತಿಕ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ) ವೇತನದಾರ ತೆರಿಗೆ ಪಾವತಿದಾರರಿಗೆ ಸಾರಿಗೆ ಭತ್ಯೆ ಮತ್ತು ಇತರ ವೈದ್ಯಕೀಯ ವೆಚ್ಚಗಳಿಗೆ ೪೦,೦೦೦ ರೂಪಾಯಿಗಳ ಸ್ಟ್ಯಾಂಡರ್ಡ್ ತೆರಿಗೆ ಕಡಿತ ಲಭಿಸಲಿದೆ. )  ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ ೨೦೦೦ ಕೋಟಿ ರೂಪಾಯಿಗಳ ನಿಧಿ ಸ್ಥಾಪನೆ. ) ಎಲ್ಲ ಹಿರಿಯ ನಾಗರಿಕರಿಗೆ ಯಾವುದೇ ವೈದ್ಯಕೀಯ ವಿಮೆಗೆ ೫೦,೦೦೦ ರೂಪಾಯಿಗಳ ಸ್ಟಾಂಡರ್ಡ್ ಕಡಿತದ ಲಾಭ ಪಡೆಯಲು ಅವಕಾಶ. ) ಗಂಭೀರ ಅಸ್ವಸ್ಥತೆಯ ಸಂದರ್ಭದಲ್ಲಿನ ತೆರಿಗೆ ಕಡಿತದ ಮಿತಿ ಲಕ್ಷ ರೂಪಾಯಿಗಳಿಗೆ ಏರಿಕೆ. ) ಕೋಟಿ ಮನೆಗಳಿಗೆ ಸೌಭಾಗ್ಯ ಯೋಜನೆಯ ಅಡಿಯಲಿ ಉಚಿತ ವಿದ್ಯುತ್ ಸಂಪರ್ಕ. ಉಜ್ವಲ ಯೋಜನೆಯಡಿಯಲ್ಲಿ ಬಡ ಮಹಿಳೆಯರಿಗೆ ಕೋಟಿ ಉಚಿತ ಅನಿಲ ಸಂಪರ್ಕ. )     ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಅನುಷ್ಠಾನ. ಅದನ್ನು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟಿನಷ್ಟು ಏರಿಸಲಾಗುವುದು. ) ಎಲ್ಲ ರಂಗಗಳಲ್ಲಿ ಹೊಸ ನೌಕರರಿಗೆ ಸರ್ಕಾರದಿಂದ ಶೇಕಡಾ ೧೨ರಷ್ಟು ವೇತನ ಕೊಡುಗೆ. ) ನೂತನ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆ ಆರಂಭ. ಇದರ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿವರ್ಷ ಲಕ್ಷ ರೂಪಾಯಿಗಳ ಆರೋಗ್ಯ ವಿಮಾ ಸೌಲಭ್ಯ. ೧೦) ೨೦೧೮-೧೯ ಸಾಲಿನಲ್ಲಿ ರೈಲ್ವೇ ವೆಚ್ಚ .೪೮ ಲಕ್ಷ ಕೋಟಿ ರೂಪಾಯಿ ನಿಗದಿ. ೧೧) ವರ್ಷದ ಹೂಡಿಕೆ ಹಿಂತೆಗೆತ ಗುರಿ ೮೦,೦೦೦ ಕೋಟಿ ರೂಪಾಯಿ. ೧೨) ಹಣದುಬ್ಬರಕ್ಕೆ ಅನುಗುಣವಾಗಿ ಐದು ವರ್ಷಕ್ಕೊಮ್ಮೆ ಸಂಸತ್ ಸದಸ್ಯರ ವೇತನ ಭತ್ಯೆಗಳ ಪರಿಷ್ಕರಣೆ.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪೂರ್ಣ ಪ್ರಮಾಣದ ಮುಂಗಡಪತ್ರವನ್ನು ಮಂಡಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನಿರೀಕ್ಷೆಯಂತೆ ಮುಂದಿನ ನಾಲ್ಕು ವರ್ಷಗಳಲ್ಲಿ ರೈತರ ವರಮಾನ ದುಪ್ಪಟ್ಟುಗೊಳಿಸುವ ಉದ್ದೇಶದೊಂದಿಗೆ ಕೃಷಿ, ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟರು. ಜೊತೆಗೆ ಬಡವರ ಮತ್ತು ಮಹಿಳೆಯರ ಅಭಿವೃದ್ಧಿ ಮಂತ್ರವನ್ನೂ ಜಪಿಸಿದರು. ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟಿನಷ್ಟು ಹೆಚ್ಚಿಸಿದರು. ಕೃಷಿ ಅಭಿವೃದ್ಧಿ ಸಲುವಾಗಿ ಆಪರೇಷನ್ ಗ್ರೀನ್ ಯೋಜನೆಗೆ ೫೦೦ ಕೋಟಿ ರೂಪಾಯಿ, ಬಿದಿರು ಕೃಷಿಗಾಗಿ ೧೨೯೦ ಕೋಟಿ ರೂಪಾಯಿಗಳಬಿದಿರು ಕೃಷಿ ಮಿಷನ್ ಯೋಜನೆ, ಮೀನುಗಾರಿಕೆ ಮತ್ತು ಪಶು ಸಂಗೋಪನೆಗೆ ೧೦,೦೦೦ ಕೋಟಿ ರೂಪಾಯಿಗಳ ಯೋಜನೆಯನ್ನು ವಿತ್ತ ಸಚಿವರು ಪ್ರಕಟಿಸಿದರು. ಗ್ರಾಮೀಣ ಮೂಲಸೌಕರ್ಯಕ್ಕೆ ೨೨ ಸಾವಿರ ಕೋಟಿ ರೂಪಾಯಿಗಳ ಅನುದಾನ. ಸಾಮಾಜಿಕ ಭದ್ರತೆಗೆ ,೯೭೫ ಕೋಟಿ ರೂಪಾಯಿಗಳನ್ನು ಮೀಸಲಿಟ್ಟರು.  ಕೈಗಾರಿಕೆ ಅಭಿವೃದ್ಧಿಗೆ ಆದ್ಯತೆ ನೀಡಿರುವ ಸಚಿವರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೆರಿಗೆ ಹೊರೆ ಇಳಿಕೆ, ಸ್ಟಾರ್ಟ್ ಅಪ್ ಕಂಪನಿಗಳ ಉತ್ತೇಜನಕ್ಕೆ ಆದ್ಯತೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಾಲ ಮಂಜೂರಾತಿ ಸರಳೀಕರಣ ಕ್ರಮಗಳನ್ನು ಪ್ರಕಟಿಸಿದರು. ‘ಮುಂಗಡಪತ್ರದಲ್ಲಿ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗೆ, ಹಿರಿಯ ನಾಗರಿಕರು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಶಿಕ್ಷಣದ ಗುಣಮಟ್ಟ ಸುಧಾರಿಸಲು ರಾಜ್ಯಗಳ ಜತೆ ನಿಕಟವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳುತ್ತಲೇ ಸಚಿವ ಅರುಣ್ ಜೇಟ್ಲಿ ಮುಂಗಡಪತ್ರ ಮಂಡನೆ ಆರಂಭಿಸಿದರು.  ರೈತರಿಗೆ ತಮ್ಮ ಉತ್ಪಾದನೆ ಹೆಚ್ಚಿಸಲು ಅನುಕೂಲವಾಗುವಂತೆ ಕೃಷಿ ವಲಯಕ್ಕೆ ಆದ್ಯತೆ ನೀಡಲಾಗುವುದು, ಮೀನುಗಾರಿಕೆ ಮತ್ತು ಕೃಷಿ ಮೂಲಸೌಲಭ್ಯಗಳ ಅಭಿವೃದ್ಧಿ ನಿಧಿ ಮತ್ತು ಜಾನುವಾರು ಮೇವು ಮೂಲ ಸೌಕರ್ಯಗಳ ನಿಧಿಯನ್ನು ೧೦,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು. ಎಲ್ಲ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಮೇ ಒಂದೂವರೆ ಪಟ್ಟಿನಷ್ಟು ಹೆಚ್ಚಿಸಲಾಗುವುದು. ಗ್ರಾಮೀಣ ಸಂತೆಗಳನ್ನು ಗ್ರಾಮೀಣ ಮಾರುಕಟ್ಟೆಗಳಾಗಿ ಅಭಿವೃದ್ಧಿ ಪಡಿಸಲಾಗುವುದು. ನರೇಗಾದಂತಹ ಯೋಜನೆಗಳ ಮೂಲಕ ಮೂಲಸವಲತ್ತುಗಳನ್ನು ಒದಗಿಸಲಾಗುವುದು ಎಂದು ಜೇಟ್ಲಿ ನುಡಿದರು. ಸರ್ಕಾರ ಈಗಾಗಲೇ ೪೭೦ ಎಪಿಎಂಸಿಗಳನ್ನು -ನ್ಯಾಮ್ (-ಎನ್ ಎಎಂ) ಜಾಲದ ಜೊತೆ ಜೋಡಿಸಿದೆ. ಉಳಿದವುಗಳನ್ನು ೨೦೧೮ರ ಮಾರ್ಚ್ ಒಳಗೆ ಜೋಡಿಸಲಾಗುವುದು ಎಂದು ನುಡಿದ ಹಣಕಾಸು ಸಚಿವರುಆಪರೇಷನ್ ಗ್ರೀನ್ ಯೋಜನೆಗೆ ೫೦೦ ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಕೃಷಿ ಕ್ಷೇತ್ರಕ್ಕೆ ಸಾಂಸ್ಥಿಕ ಸಾಲವನ್ನು ೨೦೧೭-೧೮ರ ೧೦ ಲಕ್ಷ ಕೋಟಿ ರೂಪಾಯಿಗಳಿಂದ ೨೦೧೮-೧೯ರ ಸಾಲಿನಲ್ಲಿ ೧೧ ಲಕ್ಷ ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ. ಟೊಮೆಟೋ, ಆಲೂಗಡ್ಡೆ, ಈರುಳ್ಳಿಯಂತಹ ಶೀಘ್ರ ಹಾಳಾಗವ ಉತ್ಪನ್ನಗಳ ದರ ಸ್ಥಿರತೆ ಮೂಲಕ ರೈತರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ೫೦೦ ಕೋಟಿ ರೂಪಾಯಿಗಳಆಪರೇಷನ್ ಗ್ರೀನ್ ಯೋಜನೆಯನ್ನು ಜೇಟ್ಲಿ ಪ್ರಕಟಿಸಿದರು. ಔಷಧೀಯ ಮತ್ತು ಪರಿಮಳದ್ರವ್ಯಗಳ ಗಿಡಗಳ ಸಂಘಟಿತ ವ್ಯವಸಾಯಕ್ಕಾಗಿ ೨೦೦ ಕೋಟಿ ರೂಪಾಯಿ ಒದಗಿಸಲಾಗುವುದು.  ೨೨,೦೦೦ ಗ್ರಾಮೀಣ ಸಂತೆಗಳನ್ನು ಗ್ರಾಮೀಣ ಕೃಷಿ ಮಾರುಕಟ್ಟೆಗಳಾಗಿ ಮೇಲ್ದರ್ಜೆಗೆ ಏರಿಸಿ, ನೇರವಾಗಿ ಗ್ರಾಹಕರಿಗೆ ಮಾರುವ ಸೌಲಭ್ಯವನ್ನು ರೈತರಿಗೆ ಒದಗಿಸಲಾಗುವುದು ಎಂದು ಅವರು ನುಡಿದರು. ಆಹಾರ ಮತ್ತು ಸಂಸ್ಕರಣಾ ರಂಗಕ್ಕೆ ನೀಡಲಾಗುವ ಅನುದಾನ ೧೪೦೦ ಕೋಟಿ ರೂಪಾಯಿಗಳಗೆ ಏರಿಕೆ, ಮೀನುಗಾರಿಕೆ ಮತ್ತು ಪಶುಸಂಗೋಪನೆಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸವಲತ್ತಿನ ವಿಸ್ತರಣೆ ಮಾಡಲಾಗುವುದು ಎಂದು ಜೇಟ್ಲಿ ಹೇಳಿದರು. ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ದೆಹಲಿಯ ವಾಯುಮಾಲಿನ್ಯ ತಗ್ಗಿಸುವ ಸಲುವಾಗಿ ಬೆಳೆತ್ಯಾಜ್ಯ ವಿಲೇವಾರಿಗೆ ಅಗತ್ಯವಾದ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಲು ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಜೇಟ್ಲಿ ನುಡಿದರು. ದೇಶವು ೭೫ನೇ ಸ್ವಾತಂತ್ರ್ಯೋತ್ಸವ ಅಚರಿಸಲಿರುವ ೨೦೨೨ರ ವೇಳೆಗೆ ರೈತರ ವರಮಾನವನ್ನು ದುಪ್ಪಟ್ಟುಗೊಳಿಸುವ ಕರೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಅದಕ್ಕೆ ಅನುಗುಣವಾಗಿ ರೈತರ ವರಮಾನ ಹೆಚ್ಚಳಕ್ಕೆ ನಾವು ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಕೃಷಿಯನ್ನು ಉದ್ಯಮ ಎಂಬುದಾಗಿ ಪರಿಗಣಿಸಿದ್ದು,  ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆಗೆ ರೈತರಿಗೆ ಪ್ರೋತ್ಸಾಹ ಕೊಡುತ್ತಿದ್ದೇವೆ. ಜೊತೆಗೇ ಹೆಚ್ಚಿನ ಬೆಲೆ ದೊರಕಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಜೇಟ್ಲಿ ಹೇಳಿದರು.  ರೈತ ಉತ್ಪನ್ನ ಕಂಪೆನಿಗಳಿಗೆ ಐದು ವರ್ಷಗಳ ಅವಧಿಗೆ ೧೦೦ ಕೋಟಿ ರೂಪಾಯಿಗಳವರೆಗಿನ ವಹಿವಾಟಿಗೆ ಶೇಕಡಾ ೧೦೦ ರಷ್ಟು ತೆರಿಗೆ ವಿನಾಯ್ತಿ ಘೋಷಿಸಿದ ವಿತ್ತ ಸಚಿವರು ಯೋಜನೆ ೨೦೧೮-೧೯ರಿಂದ ಆರಂಭವಾಗಲಿದೆ ಎಂದು ಹೇಳಿದರು.

2018: ನವದೆಹಲಿ:  2018 ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವ ಅರುಣ್ಜೇಟ್ಲಿ ಅವರು ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ಮಟ್ಟದಲ್ಲೇ ಉಳಿಸಿಕೊಂಡು ತಿಂಗಳ ಸಂಬಳ ಪಡೆಯುವ ನೌಕರ ವರ್ಗಕ್ಕೆ ನಿರಾಶೆ ಉಂಟು ಮಾಡಿದರೂ, ಈ ನಿರಾಶೆಯನ್ನು ಕೊಂಚ ಮಟ್ಟಿಗೆ ತಗ್ಗಿಸುವ ಪ್ರಯತ್ನವಾಗಿ ಅವರು 40,000 ರೂ.ಗಳ ಸ್ಟಾಂಡರ್ಡ್ಡಿಡಕ್ಷನ್ಗೆ ಅವಕಾಶ ಕಲ್ಪಿಸಿದರು. ಸ್ಟಾಂಡರ್ಡ್ಡಿಡಕ್ಷನ್ಪರಿಕಲ್ಪನೆಯನ್ನು  2005 ಬಜೆಟ್ನಲ್ಲಿ (ಅಸೆಸ್ಮೆಂಟ್ವರ್ಷ (2006-2007) ಕೈಬಿಡಲಾಗಿತ್ತು. 2004-05 ಅಸೆಸ್ಮೆಂಟ್ವರ್ಷದ ತನಕ 30,000 ರೂಸ್ಟಾಂಡರ್ಡ್ಡಿಡಕ್ಷನ್ಕಲ್ಪಿಸಲಾಗಿತ್ತು. ಆದರೆ ಇದನ್ನು ಪುನಃ ಆರಂಭಿಸಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬಂದಿತ್ತು ಬಾರಿಯ ಬಜೆಟ್ನಲ್ಲಿ ಮತ್ತೆ ಸ್ಟಾಂಡರ್ಡ್ಡಿಡಕ್ಷನ್ಪರಿಚಯಿಸಲಾಗಿರುವುದರಿಂದ ನೌಕರಿ ವರ್ಗದವರ ತೆರಿಗೆ ಹೊರೆ ಕಡಿಮೆಯಾಗುತ್ತದೆ. ಮಾತ್ರವಲ್ಲದೆ ತೆರಿಗೆ ಲೆಕ್ಕಾಚಾರ ಹಾಕುವಾಗಿನ ಕೆಲಸವೂ ಕಡಿಮೆಯಾಗುತ್ತದೆಅಲ್ಲದೆ ಉದ್ಯೋಗಪತಿಗಳು ನೌಕರರ ಸಂಬಳದಿಂದ ಆದಾಯ ತೆರಿಗೆಯನ್ನು ಮೂಲದಲ್ಲೇ ಕಡಿತ ಮಾಡುವ ಸಂದರ್ಭದಲ್ಲಿ 40,000 ರೂ. ಸ್ಟಾಂಡರ್ಡ್ಡಿಡಕ್ಷನ್ಕಳೆದು ತೆರಿಗೆ ಹೊರೆಯನ್ನು ಅಂದಾಜಿಸುವುದಕ್ಕೆ ಅವಕಾಶವಿರುತ್ತದೆ.
2018: ನವದೆಹಲಿ: ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದ ಬಹುಭಾಗವು ಮಾಸಿಕ ವೇತನ ಪಡೆಯುತ್ತಿರುವ ವರ್ಗದಿಂದ ಸಂಗ್ರಹವಾಗುತ್ತಿದೆ. ಕಳೆದ ವರ್ಷ 1.89 ಕೋಟಿ ಆದಾಯ ತೆರಿಗೆ ರಿಟರ್ನ್ಸ್ಸಲ್ಲಿಕೆಯಾಗಿದೆ ಹಾಗೂ ರೂ. 1.44 ಲಕ್ಷ ಕೋಟಿ ತೆರಿಗೆ ಸಂದಾಯವಾಗಿದೆ. ಬಾರಿ ವೈಯಕ್ತಿಕ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವೈದ್ಯಕೀಯ ವೆಚ್ಚ ಮತ್ತು ಸಾರಿಗೆ ಭತ್ಯೆ ತೆರಿಗೆ ವಿನಾಯಿತಿ ರೂ.40 ಸಾವಿರಕ್ಕೆ ಪ್ರಸ್ತಾಪಿಸಲಾಗಿದೆ. ರೂ..5-5 ಲಕ್ಷ ವರಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ, ರೂ.5–10 ಲಕ್ಷ ವರೆಗೆ ಶೇ.20 ಮತ್ತು ರೂ.10 ಲಕ್ಷ  ಮೇಲ್ಪಟ್ಟ ಆದಾಯಕ್ಕೆ ಶೇ.30 ತೆರಿಗೆ ಪಾವತಿಸಬೇಕಾದ ನಿಯಮ ಮುಂದುವರಿಯಿತು. ಬ್ಯಾಂಕ್ಮತ್ತು ಅಂಚೆ ಕಚೇರಿಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ಮಿತಿಯನ್ನು ರೂ.10 ಸಾವಿರದಿಂದ ರೂ.50 ಸಾವಿರಕ್ಕೆ ಹೆಚ್ಚಿಸಲಾಯಿತು. ಹಿರಿಯರು ನಾಗರಿಕರು ವೈದ್ಯಕೀಯ ವಿಮಾ ಪ್ರೀಮಿಯಂ ಅಡಿಯಲ್ಲಿ ರೂ.50 ಸಾವಿರ ವಿನಾಯಿತಿ ಪಡೆಯಬಹುದು. ರೈತ ಉತ್ಪಾದಕ ಸಂಸ್ಥೆಗಳಿಗೆ ಮೊದಲ ಐದು ವರ್ಷ ಶೇ 100 ತೆರಿಗೆ ವಿನಾಯಿತಿ ನೀಡುವ ಕುರಿತು ಅರುಣ್ಜೇಟ್ಲಿ ಪ್ರಸ್ತಾಪಿಸಿದರು.
2018: ನವದೆಹಲಿ:  1.48 ಲಕ್ಷ ಕೋಟಿ ಗಾತ್ರದ ರೈಲ್ವೆ ಬಜೆಟ್ನಲ್ಲಿ ಆಧುನೀಕರಣಕ್ಕೆ ಮಣೆ ಹಾಕಲಾಗಿದ್ದು ರಾಜ್ಯಕ್ಕೆ ಹಲವು ಕೊಡುಗೆ ಪ್ರಕಟಿಸಲಾಯಿತು. ಸಬರ್ಬನ್ರೈಲು ಕನಸಿಗೆ ಮರುಜೀವ: ನನಗೆಗುದಿಗೆ ಬಿದ್ದಿದ್ದ ಬೆಂಗಳೂರು ಉಪನಗರ ರೈಲು ಯೋಜನೆಗೆ ಬಾರಿ ರೈಲ್ವೆ ಬಜೆಟ್ಮರುಜೀವ ನೀಡಿದ್ದು, 17000 ಕೋಟಿ ರೂ. ಅನುದಾನ ಘೋಷಿಸಿತು. ಬೆಂಗಳೂರು ಮತ್ತು ಸುತ್ತಲಿನ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 160 ಕಿ.ಮೀ. ಮಾರ್ಗದ ಯೋಜನೆಗೆ ಮುಂದಿನ ಮೂರು ವರ್ಷಗಳಲ್ಲಿ ಅನುದಾನ ನೀಡಲಾಗುತ್ತದೆ. ಟ್ರ್ಯಾಕ್ಡಬ್ಲಿಂಗ್‌: ರಾಜ್ಯದ 13 ಕಡೆಗಳಲ್ಲಿ 218.73 ಕಿ.ಮೀ. ರೈಲ್ವೆ ಟ್ರ್ಯಾಕ್ಡಬ್ಲಿಂಗ್ಮಾಡಲು ರೈಲ್ವೆ ಬಜೆಟ್ನಲ್ಲಿ ಉದ್ದೇಶಿಸಲಾಗಿದೆ. ಹೊಸ ಮಾರ್ಗ: ಗಂಗಾವತಿ-ಕಾರಟಗಿ ನಡುವೆ 28 ಕಿ.ಮೀ. ಉದ್ದದ ಹೊಸ ಮಾರ್ಗ ನಿರ್ಮಾಣಕ್ಕೆ ಪ್ರಸ್ತಾಪಿಸಲಾಗಿದೆ ಎಂದು ಸಚಿವರು ತಿಳಿಸಿದರು. ರೈಲ್ವೆ ಬಜೆಟ್ಸ್ಪೆಷಲ್
600
ರೈಲು ನಿಲ್ದಾಣಗಳಲ್ಲಿ ವೈಫೈ, ಸಿಸಿಟಿವಿ, 18000 ಕಿ.ಮೀ ಹಳಿ ಮಾರ್ಗ ಡಬ್ಲಿಂಗ್
ವಡೋದರಲ್ಲಿ ರೈಲ್ವೆ ವಿವಿ ಸ್ಥಾಪನೆ, ಬೆಂಗಳೂರಿನಲ್ಲಿ ದೇಶದ ಮೊದಲ ರಕ್ಷಣಾ ಕೈಗಾರಿಕಾ ಕಾರ್ಯಾಗಾರ ಸ್ಥಾಪನೆ
2018: ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ೨೦೧೮-೧೯ರ ಸಾಲಿನ ಮುಂಗಡಪತ್ರದಲ್ಲಿ ಡಿಜಿಟಲ್ ಇಂಡಿಯಾ ಚಳವಳಿಗೆ ಬಹಳಷ್ಟು ಪ್ರಾಮುಖ್ಯತೆ ನೀಡಿದ್ದು, ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ೩೦೭೩ ಕೋಟಿ ರೂಪಾಯಿ ನಿಗದಿಪಡಿಸಿದರು. ಇದು ಕಳೆದ ಸಲದ ಮುಂಗಡಪತ್ರದಲ್ಲಿ ಒದಗಿಸಿದ್ದ ಹಣದ ದುಪ್ಪಟ್ಟು ಹಣ. ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ, ಡಿಜಿಟಲ್ ತಯಾರಿಕೆ, ಬಿಗ್ ಡಾಟಾ ವಿಶ್ಲೇಷಣೆ, ಕ್ವಾಂಟಮ್ ಸಂವಹನ ಮತ್ತು ಇಂಟರ್ನೆಟ್ಗೆ ಸಂಬಂಧಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಿಷನ್ ಆನ್ ಸೈಬರ್ ಫಿಸಿಕಲ್ ಸಿಸ್ಟಮ್ಸ್ ಸ್ಥಾಪಿಸಲಿರುವ ಸಂಶೋಧನೆ, ತರಬೇತಿ ಮತ್ತು ಪರಿಣತಿಗಾಗಿ ಶ್ರೇಷ್ಠ ಕೇಂದ್ರಗಳ ಸ್ಥಾಪನೆಗೆ ಮುಂಗಡಪತ್ರ ಒತ್ತು ನೀಡಿತು. ಕಳೆದ ವರ್ಷ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ೧೬೭೨.೭೬ ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ವರ್ಷ ಡಿಜಿಟಲ್ ಇಂಡಿಯಾ ಬಜೆಟ್ ಮೊತ್ತ ದುಪ್ಪಟ್ಟಾಗಿದೆ ಎಂದು ಜೇಟ್ಲಿ ತಿಳಿಸಿದರು. ಇದರ ಜೊತೆಗೆ ಜಾಗತಿಕ ಅರ್ಥ ವ್ಯವಸ್ಥೆ ಡಿಜಿಟಲೈಸ್ ಆಗುತ್ತಿದ್ದು ಹೈಸ್ಪೀಡ್ ಆಪ್ಟಿಕಲ್ ಫೈಬರ್ನಿಂದ ಗ್ರಾಮಗಳನ್ನು ಜೋಡಿಸಲಾಗುತ್ತದೆ. ದೇಶದ ಲಕ್ಷ ಗ್ರಾಮಗಳನ್ನು ವೈಫೈ ಮೂಲಕ ಜೋಡಣೆ ಮಾಡಲಾಗುತ್ತದೆ ಎಂದು ಜೇಟ್ಲಿ ವಿವರಿಸಿದರು. ಐಐಟಿ ಚೆನ್ನೈಯಲ್ಲಿ ೫ಜಿ ತಂತ್ರಜ್ಞಾನ ಕೇಂದ್ರ ಸ್ಥಾಪನೆಯಾಗಲಿದೆ. ರೋಡ್ ಪ್ಲಾಜಾಗಳನ್ನು ಡಿಜಿಟಲೈಸ್ ಮಾಡಲು ನಿರ್ಧರಿಸಲಾಗಿದೆ. ದೇಶದಲ್ಲಿ ಬಿಟ್ ಕಾಯಿನ್ ಚಲಾವಣೆಗೆ ನಿಷೇಧ ಜಾರಿ ಮಾಡಲಾಗಿದೆ ಎಂದು ಹೇಳಿದ ಸಚಿವರು, ಆಧಾರ್ ಜಾರಿಯಿಂದಾಗಿ ಹಲವಾರು ಅನುಕೂಲಗಳಾಗಿವೆ ಎಂದು ನುಡಿದರು. ಎಲ್ಲ್ಲ ವಿಮಾ ಕಂಪೆನಿಗಳನ್ನೂ ಒಗ್ಗೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜೇಟ್ಲಿ ಹೇಳಿದರು.

2018: ನವದೆಹಲಿ:  ೨೦೧೮-೧೯ರ ಸಾಲಿನ ಮುಂಗಡಪತ್ರದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿದರು. ಆದರೆ ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಯಲಿದೆಯೇ ಎಂಬ ಬಗ್ಗೆ ಮಾತ್ರ ವಿಶ್ಲೇಷಕರಲ್ಲಿ ಭಿನ್ನಾಭಿಪ್ರಾಯ ಮೂಡಿತು.
ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಎರಡು ರೂಪಾಯಿ ಕಡಿತಗೊಳಿಸಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಸು ಕಡಿಮೆಯಾಗುವ ಸಾಧ್ಯತೆ ಇದೆ ಎಂಬುದು ಬಹುತೇಕ ಮಂದಿಯ ನಿರೀಕ್ಷೆ.  ಮುಂಗಡಪತ್ರದಲ್ಲಿ ರಸ್ತೆ ಸೆಸ್ ಅನ್ನು ರೂಪಾಯಿಗೆ ಏರಿಸಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಯ ಉಂಟಾಗುವುದಿಲ್ಲ ಎಂದು ಆರ್ಥಿಕ ತಜ್ಞರು ಅಭಿಪಾಯ ವ್ಯಕ್ತ ಪಡಿಸಿದರು.

2018: ನವದೆಹಲಿ: ಕೇಂದ್ರ ಹಣಕಾಸು ಸಚಿವರು ಮಂಡಿಸಿದ ೨೦೧೮-೧೯ರ ಸಾಲಿನ ಮುಂಗಡಪತ್ರದಲ್ಲಿ ಆಮದು ಮೊಬೈಲ್ ಹ್ಯಾಂಡ್ ಸೆಟ್ಗಳು, ಕಾರುಗಳು, ಮೋಟಾರ್ ಸೈಕಲ್ಲುಗಳು, ಹಣ್ಣಿನ ರಸ (ಫ್ರುಟ್ ಜ್ಯೂಸ್), ಪರಿಮಳ ದ್ರವ್ಯಗಳು, ಪಾದರಕ್ಷೆಗಳು ಇತ್ಯಾದಿಗಳ ಮೇಲಿನ ಕಸ್ಸಮ್ಸ್ ದರವನ್ನು ಹೆಚ್ಚಿಸಿದ್ದು ಅವು ತುಟ್ಟಿಯಾಗಲಿವೆ. ಆದರೆ ಆಮದು ಗೇರುಬೀಜ, ಸೋಲಾರ್ ಟೆಂಪರ್ಡ್ ಗ್ಲಾಸ್ ಮತ್ತು ಕೆಲವು ಕೈಗಾರಿಕಾ ಘಟಕಗಳಲ್ಲಿ ಬಳಸಲಾಗುವ ಕಚ್ಚಾ ವಸ್ತುಗಳ ಇತ್ಯಾದಿ ಕೆಲವು ಆಯ್ದ ವಸ್ತುಗಳ ಮೇಲಿನ ಆಮದು ಸುಂಕ ಇಳಿಸಿದ್ದರಿಂದ ಅವುಗಳ ದರ ಇಳಿಯಲಿದೆ. ಮುಂಗಡಪತ್ರದ ಪರಿಣಾಮವಾಗಿ ತುಟ್ಟಿಯಾಗಲಿರುವ ಆಮದು ವಸ್ತುಗಳು:      ಕಾರುಗಳು, ಮೋಟಾರು ಸೈಕಲ್ಲುಗಳು,   ಮೊಬೈಲ್ ಫೋನುಗಳು, ಬೆಳ್ಳಿ, ಚಿನ್ನ,  ತರಕಾರಿ, ಕಿತ್ತಳೆ ಮತ್ತು ಕ್ರಾನ್ ಬೆರ್ರಿ ಸೇರಿದಂತೆ ವಿವಿಧ ಹಣ್ಣಿನ ರಸಗಳು, ಸನ್ ಗ್ಲಾಸ್ಗಳು,  ಸೋಯಾ ಪ್ರೊಟೀನ್ ಹೊರತಾದ ವಿವಿಧ ಆಹಾರ ಉತ್ಪನ್ನಗಳು, ಪರಿಮಳ ದ್ರವ್ಯಗಳು ಮತ್ತು ಟಾಯ್ಲೆಟ್ ವಾಟರ್,  ಸನ್ ಸ್ಕ್ರೀನ್, ಸನ್ ಟಾನ್, ಮನಿಕ್ಯೂರ್, ಪೆಡಿಕ್ಯೂರ್ ಇತ್ಯಾದಿ,  ಓರಲ್, ಡೆಂಟಲ್ ಹೈಜೀನ್, ಡೆಂಚ್ಯೂರ್ ಫಿಕ್ಸೇಟಿವ್ ಪೇಸ್ಟ್ ಮತ್ತು ಪೌಡರುಗಳೂ, ಡೆಂಟಲ್ ಫ್ಲಾಸ್,  ಪ್ರಿಶೇವ್, ಆಫ್ಟರ್ ಶೇವ್ ಕ್ರೀಮ್, ದುರ್ಗಂಧಹರಗಳು, ಸ್ನಾನ ದ್ರವ್ಯ, ಪರಿಮಳ ದ್ರವ್ಯಗಳು. ಸೆಂಟ್ ಸ್ಪ್ರೇಗಳು, ಟಾಯ್ಲೆಟ್ ಸ್ಪ್ರೇಗಳು,      ಟ್ರಕ್ ಮತ್ತು ಬಸ್ಸುಗಳ ರೇಡಿಯಲ್ ಟೈರುಗಳು, ರೇಷ್ಮೆ ಬಟ್ಟೆಗಳು,  ಪಾದರಕ್ಷೆಗಳು, ಬಣ್ಣದ ರತ್ನಕಲ್ಲುಗಳು, ವಜ್ರಗಳು, ಚಿನ್ನಾಭರಣ ಮಾದರಿಯ ಆಭರಣಗಳು, ಸ್ಮಾರ್ಟ್ ವಾಚುಗಳು/ ಧರಿಸುವ ಸಾಧನಗಳು, ಎಲ್ ಸಿಡಿ / ಎಲ್ ಇಡಿ ಟಿವಿ ಪ್ಯಾನೆಲ್ ಗಳು,            ಪೀಠೋಪಕರಣಗಳು, ಹಾಸಿಗೆಗಳು,  ದೀಪಗಳು (ಲ್ಯಾಂಪ್),   ಕೈಗಡಿಯಾರಗಳು, ಪಾಕೆಟ್ ಗಡಿಯಾರಗಳು, ಗಡಿಯಾರಗಳು,  ಟ್ರೈಸಿಕಲ್ಲುಗಳು, ಸ್ಕೂಟರ್ ಗಳು, ಪೆಡಲ್ ಕಾರುಗಳು, ಚಕ್ರದ ಆಟಿಕೆಗಳು, ಗೊಂಬೆ ವಾಹಕಗಳೂ, ಗೊಂಬೆಗಳು, ಆಟಿಕೆಗಳು ಎಲ್ಲ ಮಾದರಿಯ ಒಗಟಿನ ಆಟಿಕೆಗಳು, ವಿಡಿಯೋ ಗೇಮ್, ಕ್ರೀಡೆಗಳು, ಹೊರಾಂಗಣ ಆಟಗಳು, ಈಜುಕೊಳ, ಹುಟ್ಟುಹಾಕುವ ಕೊಳಗಳ ಸಾಧನೋಪಕರಣಗಳು, ಸಿಗರೇಟ್ ಮತ್ತು ಇತರ ಲೈಟರ್ ಗಳು, ಕ್ಯಾಂಡಲ್ ಗಳು,  ಗಾಳಿಪಟ (ಕೈಟ್ಸ್), ತಾಳೆ ಎಣ್ಣೆ, ನೆಲಗಡಲೆ ಎಣ್ಣಿ ಇತ್ಯಾದಿ ಖಾದ್ಯ/ ಸಸ್ಯ ಜನಕ ತೈಲಗಳು,  ತಂಬಾಕು ಉತ್ಪನ್ನಗಳು,  ಎಲ್ಇಡಿ ಲ್ಯಾಂಪ್ ಘಟಕ,  ಗೋಡಂಬಿ ಬೀಜ,              ಅಲ್ಯುಮಿನಿಯಮ್ ಅದಿರು,  ಆಪ್ಟಿಕಲ್ ಫೈಬರ್ ತಯಾರಿಕೆಯಲ್ಲಿ ಬಳಸುವ ಪಾಲಿಮರ್ ಲೇಪಿತ ಎಂಎಸ್ ಟೇಪ್,    ಬೆಳ್ಳಿ ನಾಣ್ಯ,  ಮೊಬೈಲ್ ಫೋನ್ ತಯಾರಿಕೆಯಲ್ಲಿ ಬಳಸುವ ಮುದ್ರಿತ ಸರ್ಕ್ಯೂಟ್ ಬೋರ್ಡ್. ಅಗ್ಗವಾಗಲಿರುವ ಆಮದು ವಸ್ತುಗಳು: ಕಚ್ಛಾ ಗೇರು ಬೀಜ, ಸೌರ ಫಲಕ/ ಮೊಡ್ಯೂಲ್ ತಯಾರಿಕೆಯಲ್ಲಿ ಬಳಸಲಾಗುವ ಸೋಲಾರ್ ಟೆಂಪರ್ಡ್ ಗ್ಲಾಸ್, ಕೋಕ್ಲೀಯರ್ ಇಂಪ್ಲಾಂಟ್ ಗಳನ್ನು ತಯಾರಿಸಲು ಬಳಸುವ ಕಚ್ಛಾ ವಸ್ತುಗಳು, ಅಥವಾ ಭಾಗಗಳು, ಬಾಲ್ ಸ್ಕ್ರೂ ಇತ್ಯಾದಿ ಆಯ್ದ ವಸ್ತುಗಳು,  ಆನ್ಲೈನ್ ರೈಲ್ವೆ ಟಿಕೆಟ್ ಬುಕಿಂಗ್,  ಎಲ್ಎನ್ಜಿ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ವ್ಯವಸ್ಥೆ, ಚರ್ಮ ಉತ್ಪನ್ನ,  ಪಿಓಎಸ್ ಮಶಿನ್ ಕಾರ್ಡ್, ರಕ್ಷಣಾ ಸೇವೆಗಳ ಗುಂಪು ವಿಮೆ, ಗೃಹ ಬಳಕೆಯ ಆರ್ ಮೆಂಬ್ರೇನ್ ವಸ್ತುಗಳು.

2018: ನವದೆಹಲಿ: ಕೈಗಾರಿಕಾ ಕ್ಷೇತ್ರದ ಎಲ್ಲ ರಂಗಗಳಲ್ಲಿನಿಗದಿತ ಅವಧಿಯ ನೌಕರಿ (ಫಿಕ್ಸೆಡ್ ಟರ್ಮ್ ಎಂಪ್ಲಾಯ್ ಮೆಂಟ್) ಯೋಜನೆ ಅಳವಡಿಸುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮುಂಗಡಪತ್ರ ಪ್ರಸ್ತಾವಕ್ಕೆ ನೌಕರ ಸಂಘಟನೆಗಳು ಗರಂ ಆದವು. ಆರೆಸ್ಸೆಸ್ ಬೆಂಬಲಿತ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಸೇರಿದಂತೆ ಹಲವಾರು ನೌಕರ ಸಂಘಟನೆಗಳು ಜೇಟ್ಲಿ ಯೋಚಿತ ಯೋಜನೆಯನ್ನು ವಿರೋಧಿಸಲು ಫೆಬ್ರುವರಿ 2ರ ಶುಕ್ರವಾರದಿಂದ ರಾಷ್ಟ್ರವ್ಯಾಪಿ ಚಳವಳಿ ಆರಂಭಿಸಲು ಚಿಂತಿಸಿದವು.  ‘ಯೋಜನೆಯು ಅಂತಾರಾಷ್ಟ್ರೀಯ ಕಾರ್ಮಿಕ ನಿಯಮಗಳು, ವಿಧಿ ವಿಧಾನಗಳಿಗೆ ವಿರುದ್ಧವಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದವು. ‘ಸರ್ಕಾರವು ಕಾರ್ಮಿಕ ಸಂಘಟನೆಗಳ ಜೊತೆಗೆ ಸಮಾಲೋಚನೆಯನ್ನೇ ಮಾಡದೆ ನೀತಿಯನ್ನು ಅಳವಡಿಸಿದೆ. ಇಂತಹ ನೀತಿಗಳನ್ನು ಕಾರ್ಖಾನೆ ಮಾಲೀಕರು, ಕಾರ್ಮಿಕ ಸಂಘಟನೆಗಳು ಮತ್ತು ಸರ್ಕಾರದ ನಡುವಣ ತ್ರಿಪಕ್ಷೀಯ ಒಪ್ಪಂದದ ಬಳಿಕ ಮಾತ್ರವೇ ಅಂಗೀಕರಿಸಬಹುದು. ಆದ್ದರಿಂದ ಶುಕ್ರವಾರದಿಂದ ರಾಷ್ಟ್ರವ್ಯಾಪಿ ಸಾಮೂಹಿಕ ಪ್ರತಿಭಟನೆಗಳನ್ನು ಆರಂಭಿಸಲು ನಾವು ನಿರ್ಧರಿಸಿದ್ದೇವೆ ಎಂದು ಬಿಎಂಎಸ್ ಪ್ರಧಾನ ಕಾರ್ಯದರ್ಶಿ ವೀರೇಶ್ ಉಪಾಧ್ಯಾಯ ಹೇಳಿದರು. ನೀತಿಯನ್ನು ಅಳವಡಿಸುವ ಮೂಲಕ ಸರ್ಕಾರವು ನೌಕರರನ್ನು ಸಾಮೂಹಿಕವಾಗಿ ವಜಾ ಮಾಡಲು ಅವಕಾಶ ಒದಗಿಸುವ ವಿಷವೃತ್ತವನ್ನು ಆರಂಭಿಸಿದೆ ಎಂದು ಅವರು ನುಡಿದರು.  ಇಂತಹ ನೀತಿಯು ನೌಕರಿ ಭದ್ರತೆಯನ್ನಾಗಲೀ, ವಿಧೇಯತೆಯನ್ನಾಗಲೂ ಒದಗಿಸುವುದಿಲ್ಲ. ಕಾರ್ಮಿಕರ ಮನಸ್ಸಿನಲ್ಲಿ ಅಸ್ಥಿರತೆಯ ಭಾವನೆಯನ್ನು ಮೂಡಿಸುವ ನೀತಿ ಅವರ ಕೆಲಸದ ಮೇಲೆ ದುಷ್ಪರಿಣಾಮ ಬೀರಿ, ಅಂತಿಮವಾಗಿ ವಜಾಗೊಳ್ಳುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ನೀತಿ ಅಳವಡಿಸುವ ಮೂಲಕ ಸರ್ಕಾರವು ಜೂಜಾಡಲು ಹೊರಟಿದೆ. ಅದು ಈಗ ಭಾರಿ ಪ್ರತಿಭಟನೆ ಎದುರಿಸಲು ಸಿದ್ಧವಾಗಬೇಕಾಗುತ್ತದೆ. ಇದರಿಂದ ಆರ್ಥಿಕತೆಯ ಮೇಲೆ ದುಷ್ಪರಿಣಾಮಕ್ಕೆ ದಾರಿಯಾಗುತ್ತದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕಾರ್ಯದರ್ಶಿ ವಿವೇಕ್ ಮೊಂಟೀರೋ ಹೇಳಿದರು.  ಯಾವುದೇ ಸಮಾಲೋಚನೆಗಳನ್ನೂ ಮಾಡದೆಯೇ ನೇರವಾಗಿ ಇಂತಹ ನೀತಿಯನ್ನು ಸಂಸತ್ತಿನಲ್ಲಿ ಇಡುವ ಕಲ್ಪನೆಯನ್ನೇ ವಿರೋಧಿಸಿದ ಮೋಂಟೀರೋ, ’ಇದು ಅಕ್ರಮ. ೧೯೪೭ರ ಕೈಗಾರಿಕಾ ವಿವಾದಗಳ ಕಾಯ್ದೆಯ ಅಡಿಯಲ್ಲಿ ಕಾರ್ಮಿಕರಿಗೆ ನೀಡಲಾಗಿರುವ ಹಕ್ಕುಗಳನ್ನು ಹಣಕಾಸು ಸಚಿವರು ಮುಂಗಡಪತ್ರ ಭಾಷಣದಲ್ಲಿ ನೀಡಿದ ಹೇಳಿಕೆ ಮೂಲಕ ತಳ್ಳಿಹಾಕಲು ಸಾಧ್ಯವಿಲ್ಲ. ತಮ್ಮ ಒಪ್ಪಿಗೆ ಇಲ್ಲದೆ ಕೈಗಾರಿಕಾ ವಿವಾದಗಳ ಕಾಯ್ದೆಗೆ ತಿದ್ದುಪಡಿ ತರಲು ಕಾರ್ಮಿಕ ಸಂಘಟನೆಗಳು ಒಪ್ಪುವುದಿಲ್ಲ ಎಂದು ನುಡಿದರು. ನಿಗದಿತ ಅವಧಿಯ ನೌಕರಿ ನೀತಿಯು ಕೈಗಾರಿಕೆಗಳಿಗೆ ನೌಕರರನ್ನು ಅಲ್ಪಾವಧಿಯ ಕೆಲಸಗಳಿಗಾಗಿ ನೇಮಿಸಿಕೊಂಡು ಯೋಜನೆ ಮುಗಿದ ಬಳಿಕ ಅವರ ಸೇವೆಗಳನ್ನು ರದ್ದು ಪಡಿಸಲು ಅಧಿಕಾರ ನೀಡುತ್ತದೆಯಾದ್ದರಿಂದ ಕಾರ್ಮಿಕ ಸಂಘಟನೆಗಳು ರಾಷ್ಟ್ರಾದ್ಯಂತ ಯೋಜನೆ ವಿರುದ್ಧ ಸಿಡಿದೆದ್ದವು. ಕಾಯ ನೌಕರಿ ನೆಲೆಯಲ್ಲಿಯೇ ಜನರು ಅದೇ ಕೆಲಸದ ಗಂಟೆಗಳು, ವೇತನ, ಭತ್ಯೆಗಳನ್ನು ಪಡೆಯುವುದರಿಂದ ನೀತಿಯು ನೌಕರರು ಮತ್ತು ಕೈಗಾರಿಕಾ ಘಟಕಗಳಿಗೆ ತುಂಬಾ ಅನುಕೂಲಕರ ಎಂದು ಸರ್ಕಾರ ಪ್ರತಿಪಾದಿಸಿತ್ತು. ಹಿಂದಿನ ಎನ್ ಡಿಎ ಸರ್ಕಾರ ೨೦೦೩ರಲ್ಲಿ ಹಾಲಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡಿ ಇಂತಹ ನೀತಿ ತರಲು ಯತ್ನಿಸಿತ್ತು. ಆದರೆ ಬಳಿಕ ಬಂದ ಯುಪಿಎ ಸರ್ಕಾರಗಳು ಇಂತಹ ಎಲ್ಲ ತಿದ್ದುಪಡಿಗಳನ್ನೂ ರದ್ದು ಪಡಿಸಿದ್ದವು. ಹಿಂದೆ ಇಂತಹ ಪ್ರಯತ್ನ ಮಾಡಿ ವಿಫಲವಾಗಿದ್ದರಿಂದ ಹಾಲಿ ಸರ್ಕಾರವು ಹಿಂಬಾಗಿಲ ಮೂಲಕ ತಿದ್ದುಪಡಿಗಳನ್ನು ಮತ್ತೆ ತರಲು ಹೊರಟಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಟಕ್) ರಾಷ್ಟ್ರೀಯ ಕಾರ್ಯದರ್ಶಿ ವಿ.ಎಸ್. ಗಿರಿ ಹೇಳಿದರು. ಪ್ರಸ್ತುತ ಸರ್ಕಾರದ ಯಾರೊಬ್ಬ ವ್ಯಕ್ತಿ ಕೂಡಾ ಹಾಲಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಕಾರ್ಮಿಕ ಸಂಘಗಳ ಜೊತೆಗೆ ಮಾತುಕತೆ ನಡೆಸಿಲ್ಲ. ಚರ್ಚೆ ನಡೆಸದೆಯೇ ಸಂಸತ್ತಿನಲ್ಲಿ ಕಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡುವಂತಿಲ್ಲ. ಕಾರ್ಮಿಕ ಸಂಘಗಳ ಜೊತೆಗೆ ಸಮಾಲೋಚಿಸದೆಯೇ ಸಂಸತ್ತಿನಲ್ಲಿ ಪ್ರಸ್ತಾಪಿಸುವ ಮೂಲಕ ಜೇಟ್ಲಿ ಅವರು ಸಂಸದೀಯ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಕಾನೂನಿನ ಅಡಿಯಲ್ಲಿ ಕ್ರೋಡೀಕರಣಗೊಂಡಿರುವ ಅಂತಾರಾಷ್ಟ್ರೀಯ ಕಾರ್ಮಿಕ ಕಾಯ್ದೆಗೂ ವಿರುದ್ಧವಾಗಿ ಸಚಿವರು ನಡೆದುಕೊಂಡಿದ್ದಾರೆ. ನಾವು ಇದರ ವಿರುದ್ಧ ಬೀದಿಗೆ ಇಳಿದು ಖಡಾಖಂಡಿತ ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಗಿರಿ ನುಡಿದರು.

2018: ನವದೆಹಲಿ: ಕರ್ನಾಟಕ ಸೇರಿದಂತೆ ರಾಷ್ಟ್ರದ ೧೦ ಹೈಕೋರ್ಟ್ಗಳು ಇಷ್ಟರಲ್ಲೇ ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆ) ಪಡೆಯಲಿವೆ. ಸುಪ್ರೀಂಕೋರ್ಟ್ ಕೊಲಿಜಿಯಂ ಜನವರಿ ೧೦ರಂದು ೧೦ ಮಂದಿ ಮುಖ್ಯ ನ್ಯಾಯಮೂರ್ತಿಗಳನ್ನು ದೆಹಲಿ, ಕಲ್ಕತ್ತ, ಕೇರಳ, ಕರ್ನಾಟಕ, ಛತ್ತೀಸ್ ಗಢ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ, ಮೇಘಾಲಯ, ತೆಲಂಗಾಣ ಮತ್ತು ಆಂಧ್ರಪ್ರದೇಶ ಹೈಕೋರ್ಟ್ಗಳಿಗೆ ಶಿಫಾರಸು ಮಾಡಿತ್ತು. ಸರ್ಕಾರ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಐವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂ ಮಧ್ಯೆ ಸಹಮತ ಇಲ್ಲದ ಪರಿಣಾಮವಾಗಿ ಬಹುತೇಕ ಹುದ್ದೆಗಳು ಖಾಲಿ ಬಿದ್ದಿದ್ದವು. ಇತರ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರು ಆಡಳಿತಾತ್ಮಕ ಅಧಿಕಾರಗಳನ್ನು ಚಲಾಯಿಸುವ ರೀತಿಯನ್ನು  ಪ್ರಶ್ನಿಸುವುದಕ್ಕೆ ಎರಡು ದಿನ ಮುಂಚಿತವಾಗಿ ಕೊಲಿಜಿಯಂ ಹತ್ತು ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿತ್ತು. ಕೊಲಿಜಿಯಂ ಶಿಫಾರಸು ಪ್ರಕಾರ ಕಲ್ಕತ್ತ ಹೈಕೋರ್ಟಿನ ಹಿರಿಯ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರನ್ನು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡಲಾಗಿತ್ತು. ಕಲ್ಕತ್ತ ಹೈಕೋರ್ಟಿನ ಖಾಲಿ ಹುದ್ದೆಗೆ ಅಲ್ಲಿನ ಅತ್ಯಂತ ಹಿರಿಯ ನ್ಯಾಯಮೂರ್ತಿ ಜ್ಯೋತಿರ್ಮಯ ಭಟ್ಟಾಚಾರ್ಯ ಅವರನ್ನು ಸೂಚಿಸಲಾಗಿತ್ತು. ಮೇಘಾಲಯ ಹೈಕೋರ್ಟಿನ ಹಾಲಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟಿಗೆ ಪ್ರಥಮ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಗಿತ್ತು. ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಅಲಹಾಬಾದ್ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಮೂರ್ತಿ ತರುಣ್ ಅಗರ್ವಾಲ ಅವರನ್ನು ನೇಮಿಸಲಾಗಿತ್ತು. ಪ್ರಸ್ತುತ ಛತ್ತೀಸ್ ಗಢ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿರುವ ಟಿ.ಬಿ. ರಾಧಾಕೃಷ್ಣನ್ ಅವರನ್ನು ತೆಲಂಗಾಣ ಮತ್ತು ಆಂಧ್ರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾಗಿಯೂ, ಪಾಟ್ನಾ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾದ ಅಜಯ್ ಕುಮಾರ್ ತ್ರಿಪಾಠಿ ಅವರನ್ನು ಛತ್ತೀಸ್ ಗಢ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿಯೂ ನೇಮಕ ಮಾಡಲಾಗಿತ್ತು. ಹಿಮಾಚಲ ಪ್ರದೇಶ ಹೈಕೋರ್ಟಿನ ನ್ಯಾಯಮೂರ್ತಿ ಅಭಿಲಾಷ ಕುಮಾರಿ ಅವರನ್ನು ಮಣಿಪುರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿಯೂ, ಕೇರಳ ಹೈಕೋರ್ಟಿನ ಹಿರಿಯ ನ್ಯಾಯಮೂರ್ತಿ ಆಂಟನಿ ಡೊಮಿನಿಕ್ ಅವರನ್ನು ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿಯೂ ಕಾಯಂಗೊಳಿಸಲು ಕೊಲಿಜಿಯಂ ಶಿಫಾರಸು ಮಾಡಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ಹಿರಿಯ ನ್ಯಾಯಮೂರ್ತಿ ನ್ಯಾಯಮೂರ್ತಿ ಸೂರ್ಯಕಾಂತ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪಡೆಯಲಿದೆ.  ಹಾಲಿ ಮುಖ್ಯ ನ್ಯಾಯಮೂರ್ತಿ ಫೆಬ್ರುವರಿ ೨೮ರಂದು ನಿವೃತ್ತರಾದ ಬಳಿಕ, ರಾಜಸ್ಥಾನ ಹೈಕೋರ್ಟಿನ ನಾಯಮೂರ್ತಿ ಅಜಯ್ ರಾಸ್ತೋಗಿ  ಅವರು ತ್ರಿಪುರಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವರು. ಇದಲ್ಲದೆ ಗುವಾಹಟಿ ಹೈಕೋರ್ಟಿನ ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರನ್ನು ಕೇರಳ ಹೈಕೋರ್ಟಿಗೆ ವರ್ಗಾಯಿಸಲೂ ಕೊಲಿಜಿಯಂ ಶಿಫಾರಸು ಮಾಡಿತ್ತು.
2017: ನವದೆಹಲಿ: ಕಾಳಧನದ ವಿರುದ್ಧ ಸರ್ಕಾರ ಸಾರಿದ ಸಮರಕ್ಕೆ ಬೆಂಬಲವಾಗಿ 3 ಲಕ್ಷ ರೂ. ಮೀರಿದ ನಗದು ವಹಿವಾಟನ್ನು ಅಮಾನ್ಯಗೊಳಿಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈದಿನ ಮಂಡಿಸಿದ ತಮ್ಮ 2017-18 ಮುಂಗಡಪತ್ರದಲ್ಲಿ ವೈಯಕ್ತಿಕ ಆದಾಯ ತೆರಿಗೆ ದರ ಮತ್ತು ಸಣ್ಣ ಮತ್ತು ಮಧ್ಯಮ ಸಂಸ್ಥೆಗಳ ಕಾರ್ಪೊರೇಟ್ ತೆರಿಗೆ ದರವನ್ನು ಇಳಿಸಿದರು.. ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬುವ ಹಾಗೂ ಭಾರತದ ಆರ್ಥಿಕತೆಯ ಹಲವಾರು ರಂಗಗಳ ಸುಧಾರಣೆಯ ಕ್ರಮಗಳನ್ನು ಪ್ರಕಟಿಸಿದರು.  5 ಲಕ್ಷ ರೂಪಾಯಿವರೆಗಿನ ವಾರ್ಷಿಕ ಆದಾಯ ಹೊಂದಿದವರ ಆದಾಯ ತೆರಿಗೆಯನ್ನು ಶೇಕಡಾ 10ರಿಂದ ಶೇ.5ಕ್ಕೆ ಇಳಿಸಿದ ಜೇಟ್ಲಿ 3 ಲಕ್ಷ ರೂ.ವರೆಗಿನ ಆದಾಯವನ್ನು ತೆರಿಗೆ ಮುಕ್ತ ಗೊಳಿಸಿದರು.. ಇದು ನೋಟು ರದ್ದತಿ ಕ್ರಮದ ಹಿನ್ನೆಲೆಯಲ್ಲಿ ರಾಷ್ಟ್ರದ ಪ್ರಾಮಾಣಿಕ ತೆರಿಗೆದಾತ ಪ್ರಜೆಗಳಿಗೆ ಬಜೆಟ್ ಕೊಡುಗೆ ಎಂದು ಜೇಟ್ಲಿ ಹೇಳಿದರು. ಭಾರತದ ಮುಂಗಡಪತ್ರ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ರೈಲ್ವೇ ಮುಂಗಡಪತ್ರವನ್ನೂ ವಿಲೀನಗೊಳಿಸಿದ ಮುಂಗಡಪತ್ರವನ್ನು ಸುಮಾರು 4 ವಾರ ಮುಂಚಿತವಾಗಿಯೇ ಮಂಡಿಸಿ ಜೇಟ್ಲಿ ಇತಿಹಾಸ ನಿರ್ಮಿಸಿದರು.
2017: ನವದೆಹಲಿ: ಈದಿನ ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹಣೆಗೆ ಮಿತಿ ಹೇರುವ ಮಹತ್ವದ ನಿರ್ಣಯವನ್ನು ಪ್ರಕಟಿಸಿದರು. ನಗದು ದೇಣಿಗೆ ಮಿತಿಯನ್ನು 20 ಸಾವಿರದಿಂದ 2000 ರೂ. ಇಳಿಕೆ ಮಾಡಲಾಯಿತು. ಚುನಾವಣಾ ಆಯೋಗದ ಸಲಹೆಯಂತೆ ಕೇಂದ್ರ ಸರ್ಕಾರ ರಾಜಕೀಯ ಪಕ್ಷಗಳು ನಗದು ರೂಪದಲ್ಲಿ ಸ್ವೀಕರಿಸುವ ದೇಣಿಗೆ ಮಿತಿಯನ್ನು ಕಡಿತಗೊಳಿಸಿತು. ಪ್ರಸ್ತುತ ರಾಜಕೀಯ ಪಕ್ಷಗಳು ಓರ್ವ ವ್ಯಕ್ತಿಯಿಂದ 2000 ರೂ. ಮಾತ್ರ ನಗದು ರೂಪದಲ್ಲಿ ಸ್ವೀಕರಿಸಬಹುದು. ಅದಕ್ಕಿಂತಲೂ ಹೆಚ್ಚಿನ ಮೊತ್ತದ ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಪಾವತಿ ಮಾಧ್ಯಮದ ಮೂಲಕ ಮಾತ್ರ ಸ್ವೀಕರಿಸಬೇಕು ಎಂದು ಜೇಟ್ಲಿ ತಿಳಿಸಿದರು. ಹೊಸ ಯೋಜನೆಯನ್ವಯ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಯಸುವವರು ಬ್ಯಾಂಕುಗಳಿಂದ ಚೆಕ್ ಅಥವಾ ಡಿಜಿಟಲ್ ಪಾವತಿ ಮೂಲಕ ಹಣ ಸಂದಾಯ ಮಾಡಿ ಬಾಂಡ್ಗಳನ್ನು ಖರೀದಿಸಬೇಕು. ಬಾಂಡ್ಗಳನ್ನು ರಾಜಕೀಯ ಪಕ್ಷಗಳು ಬ್ಯಾಂಕುಗಳಲ್ಲಿ ನೀಡಿ ನಗದನ್ನಾಗಿ ಪರಿವರ್ತಿಸಿಕೊಳ್ಳಬೇಕು. ವಿಧದಲ್ಲಿ ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆ ಸಂಪೂರ್ಣ ಸ್ವಚ್ಛವಾಗಿದ್ದು, ಕಪ್ಪು ಹಣ ರಾಜಕೀಯ ಪಕ್ಷಗಳ ಖಾತೆ ಸೇರುವುದು ತಪ್ಪುತ್ತದೆ. ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ವ್ಯವಸ್ಥೆ ರೂಪುಗೊಳ್ಳಲಿದೆ ಎಂದು ಜೇಟ್ಲಿ ಹೇಳಿದರು.
2017: ನವದೆಹಲಿ: ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಇಳಿಸುವ ಮೂಲಕ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಈದಿನ ಮಂಡಿಸಿದ ತಮ್ಮ 2017-18 ಸಾಲಿನ ಮುಂಗಡಪತ್ರದಲ್ಲಿ ವೇತನದಾರರು ಮತ್ತು ಹಿರಿಯ ನಾಗರಿಕರು ಮತ್ತು ಮಧ್ಯಮ ವರ್ಗದ ಆದಾಯ ಹೊಂದಿರುವವರಿಗೆ ನಿರಾಳತೆಯನ್ನು ಉಂಟು ಮಾಡಿದರು. ಮುಂಗಡ ಪತ್ರದಲ್ಲಿ ತಿಳಿಸಿರುವ ಪ್ರಕಾರ ಆದಾಯ ತೆರಿಗೆ ಇಳಿಕೆಯ ವಿವರ ಇಲ್ಲಿದೆ: (1). ರೂ.2,50,000 ವರೆಗಿನ ಆದಾಯ ಉಳ್ಳವರಿಗೆ ಆದಾಯ ತೆರಿಗೆ ಇಲ್ಲ. ರೂ.2,50,001ರಿಂದ ರೂ.5,00,000ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.5 (ಉಳಿತಾಯ ರೂ.7,725) (2). ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ವರ್ಷದ ಒಳಗೆ) ರೂ.3,00,000 ವರೆಗಿನ ಆದಾಯ ಉಳ್ಳವರಿಗೆ ತೆರಿಗೆ ಇಲ್ಲ. ರೂ 3,00,001ರಿಂದ ರೂ.5,00.000ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.5. (ಉಳಿತಾಯ ರೂ.2,575). (3). ಹಿರಿಯ ನಾಗರಿಕರಿಗೆ (80ವರ್ಷ ಮತ್ತು ಮೇಲ್ಪಟ್ಟವರು): ರೂ.5,00.000 ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಇ.ಲ್ಲ. ರೂ. 5,00,001 ರಿಂದ ರೂ. 10,00,000 ವರಿಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.20 (ಉಳಿತಾಯ 7,775). ಮೇಲ್ತೆರಿಗೆ (ಸರ್ಚಾರ್ಜ್): ರೂ. 50 ಲಕ್ಷಕ್ಕಿಂತ ಹೆಚ್ಚು ಮತ್ತು ರೂ. 1 ಕೋಟಿಗಿಂತ ಕಡಿಮೆ ಆದಾಯ ಹೊಂದಿರುವವರಿಗೆ 1 ಕೋಟಿ ರೂ ಮೀರಿದ ಆದಾಯದ ಮೇಲೆ ಶೇಕಡಾ 15 ಸರ್ಚಾರ್ಜ್.
2017: ನವದೆಹಲಿ: ಭ್ರಷ್ಟಾಚಾರ ಮತ್ತು ತೆರಿಗೆ ವಂಚನೆಯನ್ನು ನಿಯಂತ್ರಿಸುವ ಸಲುವಾಗಿ 3 ಲಕ್ಷ ರೂಪಾಯಿ ಮೇಲಿನ ನಗದು ವರ್ಗಾವಣೆ ಮೇಲಿನ ನಿಷೇಧವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಮ್ಮ 2017 ಸಾಲಿನ ಮುಂಗಡಪತ್ರದಲ್ಲಿ ಪ್ರಕಟಿಸಿದರುಮೂರು ಲಕ್ಷ ರೂಪಾಯಿ ಮೀರಿದ ನಗದು ವರ್ಗಾವಣೆಗಳು ಏಪ್ರಿಲ್ 1ರಿಂದ ನಿಷೇಧಗೊಳ್ಳಲಿವೆ. ಸುಪ್ರೀಂಕೋರ್ಟಿನಿಂದ ನೇಮಕ ಗೊಂಡಿದ್ದ ವಿಶೇಷ ತನಿಖಾ ತಂಡವು (ಎಸ್ಐಟಿ) ಸಂಬಂಧ ನೀಡಿದ್ದ ಶಿಫಾರಸನ್ನು ಅಂಗೀಕರಿಸಿಲು ಸರ್ಕಾರ ತೀರ್ಮಾನಿಸಿದೆ ಎಂದು ಜೇಟ್ಲಿ ನುಡಿದರು. ಕಾಳಧನ ಮತ್ತು ತೆರಿಗೆ ಪಾವತಿ ಮಾಡದ ಹಣವನ್ನು ನಿಯಂತ್ರಿಸಲು ಮತ್ತು ವಿದೇಶೀ ಬ್ಯಾಂಕ್ ಖಾತೆಗಳಲ್ಲಿ ಇಡಲಾದ ಅಕ್ರಮ ಹಣವನ್ನು ಭಾರತಕ್ಕೆ ತರುವ ಮಾರ್ಗಗಳ  ಬಗ್ಗೆ ಶಿಫಾರಸು ಮಾಡುವಂತೆ ಸುಪ್ರೀಂಕೋರ್ಟ್ ತಾನು ರಚಿಸಿದ್ದ ವಿಶೇಷ ತನಿಖಾ ತಂಡಕ್ಕೆ ನಿರ್ದೇಶಿಸಿತ್ತು. ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಷಾ ನೇತೃತ್ವದ ಎಸ್ಐಟಿ ಈಬಗ್ಗೆ ತಮ್ಮ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿತ್ತು. ವರದಿಯ ಶಿಫಾರಸು ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಜೇಟ್ಲಿ ಮುಂಗಡಪತ್ರ ಮಂಡಿಸುತ್ತಾ ನುಡಿದರು.
2017: ನವದೆಹಲಿ: ಡಿಜಿಟಲ್ ವಹಿವಾಟುಗಳನ್ನು ಸುಗಮಗೊಳಿಸಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಭೀಮ್ (Bharat Interface for Money) ಆ್ಯಪ್ಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೆಲವೊಂದು ಯೋಜನೆಗಳನ್ನು ಬಜೆಟ್ನಲ್ಲಿ ಪ್ರಸ್ತಾಪ ಮಾಡಲಾಯಿತು. ಆ ಆ್ಯಪ್ ರೆಫರ್ ಮಾಡುವವರಿಗೆ ಬೋನಸ್ ನೀಡುವುದಾಗಿ ರೆಫರಲ್ ಬೋನಸ್ (referral bonus) ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪ ಮಾಡಿದ ಜೇಟ್ಲಿ ಹೇಳಿದರು. ವ್ಯಾಪಾರಿಗಳಿಗಾಗಿ ಕ್ಯಾಶ್ ಬ್ಯಾಕ್ ಯೋಜನೆಯನ್ನೂ ಬಜೆಟ್ನಲ್ಲಿ ಪ್ರಸ್ತಾಪ ಮಾಡಿದ್ದು, ಆಧಾರ್ ಕಾರ್ಡ್ ಬಳಸಿ ನಡೆಸುವ ವಹಿವಾಟುಗಳಿಗೆ ಪದ್ದತಿ ಸೀಮಿತವಾಗಿರುತ್ತದೆ. ಗರಿಷ್ಠ ಮುಖಬೆಲೆಗಳ ನೋಟು ರದ್ದು ಮಾಡಿದ ನಂತರ ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಯವರು ಭೀಮ್ ಆ್ಯಪ್ ಬಿಡುಗಡೆ ಮಾಡಿದ್ದರು. ಪ್ರಸ್ತುತ ಭೀಮ್ ಆ್ಯಪ್ ಬಳಸುವವರ ಸಂಖ್ಯೆ 1. 25 ಕೋಟಿ ಇದೆ ಎಂದು ಜೇಟ್ಲಿ ಬಜೆಟ್ ಮಂಡನೆ ವೇಳೆ ಹೇಳಿದರು.
2017: ನವದೆಹಲಿ: ನಗದು ರಹಿತ ವಹಿವಾಟು, ಡಿಜಿಟಲ್ವಹಿವಾಟಿಗೆ ಉತ್ತೇಜನ ನೀಡಲು ಕೇಂದ್ರ ಬಜೆಟ್ನಲ್ಲಿ ಪಿಒಎಸ್ಮಷಿನ್ಮೇಲಿನ ಎಲ್ಲ ಮಾದರಿ ತೆರಿಗೆಗಳನ್ನು ಕಡಿತಗೊಳಿಸಲಾಯಿತು. ಸದ್ಯಕ್ಕೆ ಆನ್ಲೈನ್ವಹಿವಾಟು ನಡೆಸುವ ಮಷಿನ್ಗಳಿಗೆ ವಿಧಿಸಲಾಗುತ್ತಿರುವ ಮೂಲ ಸುಂಕ ಶುಲ್ಕ (ಬಿಸಿಡಿ), ಆಡಳಿತಾತ್ಮಕ ಶುಲ್ಕ(ಸಿವಿಡಿ), ವಿಶೇಷ ವಹಿವಾಟು ಶುಲ್ಕ(ಎಸ್ಎಡಿ) ಗಳನ್ನು ಪಿಒಎಸ್‌, ಫಿಂಗರ್ಪ್ರಿಂಟ್ಸ್ಕ್ಯಾನರ್ಮಷಿನ್ಗಳ ಮೂಲಕ ವಹಿವಾಟು ನಡೆಸುವ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ. ಇವುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಅರುಣ್ಜೇಟ್ಲಿ ಹೇಳಿದರು.  ಸದ್ಯ ಇರುವ ಪಿಒಎಸ್ಮಷಿನ್ಗಳನ್ನು ಮೇಲ್ದರ್ಜೆಗೆ ಏರಿಸಿ ತೆರಿಗೆ ಮುಕ್ತ ವಹಿವಾಟಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು. ಮಷಿನ್ಗಳ ಕೆಲಭಾಗಗಳನ್ನು ಭಾರತದಲ್ಲೇ ಅಭಿವೃದ್ಧಿಪಡಿಸಲು ವೇದಿಕೆ ನಿರ್ಮಿಸಲಾಗುವುದು ಎಂದು ಜೇಟ್ಲಿ ಹೇಳಿದರು. ಡಿಜಿಟಲ್ಇಂಡಿಯಾಗೆ ಅಗತ್ಯವಿರುವ ಹೆಚ್ಚುವರಿ 10 ಲಕ್ಷ ಪಿಒಎಸ್ಯಂತ್ರಗಳನ್ನು ಒದಗಿಸಲಾಗುವುದು ಎಂದು ಅವರು ಬಜೆಟ್ನಲ್ಲಿ ಘೋಷಿಸಿದರು. ಅದರ ಜತೆಗೆ ಯಂತ್ರದ ಬಿಡಿಭಾಗಗಳನ್ನು ಭಾರತದಲ್ಲೇ ನಿರ್ಮಾಣಕ್ಕೆ ನಿರ್ಧರಿಸಿರುವುದು ಪಿಒಎಸ್ಯಂತ್ರಗಳ ಬೇಡಿಕೆ ಶೀಘ್ರ ಪೂರೈಕೆಗೆ ಸಹಾಯವಾಗಲಿದೆ.
2017: ನವದೆಹಲಿ: ಹೃದಯಾಘಾತದಿಂದ ಸಂಸತ್ನಲ್ಲಿಯೇ ಕುಸಿದು ಬಿದ್ದಿದ್ದ ಕೇರಳ ಸಂಸದ . ಅಹಮದ್ ತಡರಾತ್ರಿ 2.15 ಸುಮಾರಿಗೆ ನಿಧನರಾದರು. ಜನವರಿ 31ರಂದು ಬಜೆಟ್ ಅಧಿವೇಶನದ ಆರಂಭದ ದಿನ ಸಂಸತ್ತಿನ ಉಭಯ ಸದನಗಳ ಜಂಟಿ ಸಮಾವೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಷಣ ಮಾಡುತ್ತಿರುವಾಗ ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದರು . ಅಹಮ್ಮದ್. ತಕ್ಷಣ ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಪ್ರಮಾಣದಲ್ಲಿ ಹೃದಯಾಘಾತ ಆಗಿದ್ದರಿಂದ ತಕ್ಷಣ ಯಾವುದೇ ನಿರ್ಧಾರ ಹೇಳಲು ನಿರಾಕರಿಸಿದ್ದರು. ಆದರೆ ಅಹಮದ್ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ವಕ್ತಾರರು ಖಚಿತ ಪಡಿಸಿದರು. . ಅಹಮದ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅವಧಿಯಲ್ಲಿ ಅಹಮದ್ ಅವರು ವಿದೇಶಾಂಗ ಇಲಾಖೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

2017: ಕಾನ್ಪುರ: ಕಾನ್ಪುರದ ಜಜ್ಮಾವು ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಬಿದ್ದು ಐವರು ಸಾವನ್ನಪ್ಪಿದರು. ಈದಿನ ಮಧ್ಯಾಹ್ನ ದುರಂತ ಸಂಭವಿಸಿ, 30 ಮಂದಿಗೆ ಗಾಯಗಳಾದವು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರನ್ನು ಹೊರತೆಗೆದಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು., ಇವರ ಸ್ಥಿತಿ ಗಂಭೀರವಾಗಿದೆ ಎಂದು ಬಲ್ಲಮೂಲಗಳು ಹೇಳಿದವು.
2016: ತಮಿಳುನಾಡಿನ ಐಪಿಎಸ್ ಅಧಿಕಾರಿ ಅರ್ಚನಾ ರಾಮಸುಂದರಂ ಅವರು ಕೇಂದ್ರೀಯ ಪೊಲೀಸ್ ಪಡೆಗಳ ಮುಖ್ಯಸ್ಥೆಯಾಗಿ ನೇಮಕಗೊಂಡರು. ಇದರೊಂದಿಗೆ ಕೇಂದ್ರೀಯ ಪೊಲೀಸ್ ಪಡೆಗಳನ್ನು ಮುನ್ನಡೆಸುವ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅರ್ಚನಾ ಪಾತ್ರರಾದರು. ಅರ್ಚನಾ ಅವರು ಪ್ರಸ್ತುತ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ನಿರ್ದೇಶಕಿಯಾಗಿದ್ದು, ಅವರು ಸೌರಾಷ್ಟ್ರ ಗಡಿ ಭದ್ರತಾ ಪಡೆ (ಎಸ್ಎಸ್ ಬಿ)ಯ ಮಹಾ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಸೌರಾಷ್ಟ್ರ ಗಡಿ ಭದ್ರತಾ ಪಡೆಯು ನೇಪಾಳ ಮತ್ತು ಭೂತಾನ್ ಜೊತೆಗಿನ ಭಾರತದ ಗಡಿಯನ್ನು ರಕ್ಷಿಸುತ್ತದೆ.

2009: ಹುರುಳಿ ಎಂದರೆ ಕುದುರೆ ತಿನ್ನುವ ಆಹಾರ. ಬಡವರ ಪಾಲಿನ ಕಡಿಮೆ ಬೆಲೆಯ ಪದಾರ್ಥ. ಬೇಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅಡುಗೆಗೆ ಸಿದ್ಧಗೊಳಿಸಲು ತುಂಬಾ ಕಾಲಾವಕಾಶಬೇಕು ಎಂಬುದು ಸಾಮಾನ್ಯ ಕಲ್ಪನೆ. ಆದರೆ ಹುರುಳಿಯಿಂದ ದಿಢೀರ್ ಸಿದ್ಧ ಆಹಾರ ತಯಾರಿಸುವ ವಿಧಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಕೇಂದ್ರದ (ಸಿಎಫ್‌ಟಿಆರ್‌ಐ) ವಿಜ್ಞಾನಿಗಳು ಪ್ರಕಟಿಸಿದರು. ಸಂಸ್ಕರಿಸಿದ ಹುರುಳಿಯಿಂದ ಕೇವಲ 15 ನಿಮಿಷದಲ್ಲೇ ರುಚಿಕಟ್ಟಾದ ಆಹಾರ ತಯಾರಿಸಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಹುರುಳಿ ಬಳಕೆಗೆ ಮುನ್ನ 24 ಗಂಟೆ ಮೊದಲೇ ನೀರಿನಲ್ಲಿ ನೆನೆಸಬೇಕು. ಬಳಿಕ ಅದನ್ನು ಬಟ್ಟೆಯಲ್ಲಿ ಕಟ್ಟಿ ಮೊಳಕೆಗೆ ಬಿಡಬೇಕು. ಆ ನಂತರವಷ್ಟೇ ಅದು ಉಪಯೋಗಕ್ಕೆ ಯೋಗ್ಯವಾಗುತ್ತದೆ. ಇದು ಹಳೆಯ ಕತೆ. ಆದರೆ 'ಇನ್‌ಸ್ಟಂಟ್ ಕುಕ್ಕಿಂಗ್'ಗೆ ಕಾಲಕ್ಕೆ ತಕ್ಕಂತೆ 5-10 ನಿಮಿಷ ನೀರಿನಲ್ಲಿ ಕುದಿಸಿದರೆ ಸಾಕು. ಹುರುಳಿ ಅಡುಗೆ ತಯಾರಿಕೆಗೆ ಸಿದ್ಧವಾಗುತ್ತದೆ. ಸಿಎಫ್‌ಟಿಆರ್‌ಐನ ಆಹಾರ ತಂತ್ರಜ್ಞಾನ ವಿಭಾಗ ಸಂಶೋಧನಾ ವಿಧಾನದಂತೆ ಮಾಮೂಲಿ ಹುರುಳಿಯನ್ನು 10ರಿಂದ 15 ನಿಮಿಷದಲ್ಲಿ ಅಡುಗೆ ಕಾರ್ಯಕ್ಕೆ ಪರಿವರ್ತಿಸಬಹುದು. ಹುರುಳಿಯನ್ನು ಬಹುತೇಕ ಸಾರು ಮಾಡಲು ಮಾತ್ರ ಬಳಸುವುದು ವಾಡಿಕೆಯ ಕ್ರಮ. ಆದರೆ ಈಗ ಅದರಿಂದ ರಾಗಿ ಅಂಬಲಿಯಂತೆ, ಹುರುಳಿ ಅಂಬಲಿ, ನಿತ್ಯ ಬಳಸುವ ಹಪ್ಪಳ, ಸೂಪು, ಚಾಟ್, ಪೌಡರ್ ತಯಾರಿಸಬಹುದು. ಜೊತೆಗೆ ಹುರುಳಿಯಿಂದ ಸಿಹಿ 'ಬೂಂದಿ'ಯನ್ನು ತಯಾರಿಸ್ಗಹುದು. ಆರೋಗ್ಯದ ದೃಷ್ಟಿಯಿಂದಲೂ ಹುರುಳಿ ಬಹು ಉಪಕಾರಿ. ದೀರ್ಘ ಕಾಲ ಕಾಡುವ ಮೂತ್ರಕೋಶ ಸಂಬಂಧಿಸಿ ಕಾಯಿಲೆಗಳಿಗೆ ಹುರುಳಿ ಬಳಕೆ ಉತ್ತಮ. ಮೂತ್ರಕೋಶ ತೊಂದರೆಯುಳ್ಳ ವ್ಯಕ್ತಿಗಳು ನಿತ್ಯ ಹುರುಳಿಯಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ ರೋಗ ಗುಣ ಪಡಿಸಿಕೊಳ್ಳಬಹುದು. ಹುರುಳಿ ಒಂದು ರೀತಿಯ ಗಟ್ಟಿ ಪದಾರ್ಥ, ನಿಧಾನವಾಗಿ ಜೀರ್ಣವಾಗುವಂತಹದು. ಹೀಗಾಗಿ ಕೊಲೆಸ್ಟ್ರಾಲ್, ಸಕ್ಕರೆ ಕಾಯಿಲೆಯ ನಿಯಂತ್ರಿಸುವ ಗುಣ ಹೊಂದಿದೆ ಎನ್ನುವುದು ವಿಜ್ಞಾನಿಗಳ ಅಭಿಮತ. ಹುರುಳಿ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಅದರ ಬಳಕೆ ವಿರಳ. ಆದರೆ, ಅದರಿಂದ ಆರೋಗ್ಯ ವೃದ್ಧಿಯಾಗುವ ಮತ್ತು ಆಧುನಿಕ ಜನತೆ ಬಯಸುವ 'ಈಸಿ ಕುಕ್ಕಿಂಗ್'ಗೆ ಪೂರಕವಾದ ವಿಧಾನವನ್ನು ತಾವು ರೂಪಿಸಿರುವುದಾಗಿ ಹೇಳುತ್ತಾರೆ ಸಿಎಫ್‌ಸಿಆರ್‌ಐ ಆಹಾರ ವಿಭಾಗದ (ಜಿಎಸ್‌ಟಿ) ಹಿರಿಯ ಸಂಶೋಧಕ ವಿ.ಎಂ. ಪ್ರತಾಪೆ. ಇದು ಕರ್ನಾಟಕದ ಮಟ್ಟಿಗೆ ಬಹಳ ಅಪರೂಪದ ಬೆಳೆ. ತಮಿಳುನಾಡು- ಕರ್ನಾಟಕ ಗಡಿ ಭಾಗದಲ್ಲಿ, ಮೈಸೂರು ಪ್ರಾಂತ್ಯ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಿದ್ದಲ್ಲಿ ಹಾಗೂ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಇಚ್ಛಿಸುವರು ದೂರವಾಣಿ 0821-2510843 ಸಂಪರ್ಕಿಸಬಹುದು.

2009: ಭಾರತದ ಟೆನಿಸ್ ಪ್ರೇಮಿಗಳಿಗೆ ಇದು ಸಂಭ್ರಮದ ದಿನ. ಸಾನಿಯಾ ಮಿರ್ಜಾ ಮತ್ತು ಮಹೇಶ್ ಭೂಪತಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್ನ ಮಿಶ್ರ ಡಬ್ಬಲ್ಸ್ ವಿಭಾಗದ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಭಾರತದ ಟೆನಿಸಿನ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹೊಂದಾಣಿಕೆಯ ಆಟವಾಡಿದ ಭಾರತದ ಜೋಡಿ 6-3, 6-1 ರಲ್ಲಿ ಫ್ರಾನ್ಸ್‌ನ ನಥಾಲಿ ಡೆಚಿ ಮತ್ತು ಇಸ್ರೇಲಿನ ರಾಂಡಿ ರಾಮ್ ಅವರನ್ನು ಮಣಿಸಿತು. ಶಕ್ತಿ ಹಾಗೂ ಯುಕ್ತಿಯನ್ನು ಅತ್ಯಂತ ಲಯಬದ್ಧ ರೀತಿಯಲ್ಲಿ ಅಳವಡಿಸಿಕೊಂಡು ಹೋರಾಡಿದ ಸಾನಿಯಾ- ಭೂಪತಿ ತಮ್ಮ ಆಟದಿಂದ ಅಭಿಮಾನಿಗಳ ಮನಸೂರೆಗೊಂಡರು. ಹಿಂದಿನ ದಿನ ಭಾರತದ ಯೂಕಿ ಭಾಂಬ್ರಿ ಅವರು ಇದೇ ಟೂರ್ನಿಯ ಜೂನಿಯರ್ ಬಾಲಕರ ವಿಭಾಗದ ಕಿರೀಟ ಮುಡಿಗೇರಿಸಿದ್ದರು. ಹೀಗಾಗಿ ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್ ಟೂರ್ನಿ ಭಾರತದ ಪಾಲಿಗೆ ಸಿಹಿಯಾಗಿ ಪರಿಣಮಿಸಿತು. ಈ ಸಾಧನೆಯ ಮೂಲಕ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಹಿರಿಮೆಯನ್ನು ಸಾನಿಯಾ ತಮ್ಮದಾಗಿಸಿಕೊಂಡರು. ಮಹೇಶ್ ಭೂಪತಿ ಅವರಿಗೆ ಇದು ವೃತ್ತಿಜೀವನದ 11ನೇ ಗ್ರ್ಯಾಂಡ್‌ಸ್ಲಾಮ್ ಕಿರೀಟ. ಇದರಲ್ಲಿ ಏಳು ಮಿಶ್ರ ಡಬ್ಬಲ್ಸ್ ಮತ್ತು 4 ಪುರುಷರ ಡಬ್ಬಲ್ಸ್ ಪ್ರಶಸ್ತಿಗಳು. ಇವರಿಬ್ಬರು ಜೊತೆಯಾಗಿ ಪಡೆದ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಇದು. ಕಳೆದ ವರ್ಷ ಈ ಜೋಡಿ ಇಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

2009: ಸಚಿವರು ಹಾಗೂ ಅವರ ಸಂಬಂಧಿಗಳ ಆಸ್ತಿ ವಿವರವನ್ನು ಬಹಿರಂಗಪಡಿಸದೇ ಇರಲು ಪ್ರಧಾನಿ ಕಾರ್ಯಾಲಯ ನಿರ್ಧರಿಸಿದ್ದು, ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿ ಇದಕ್ಕೆ ವಿನಾಯತಿ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿತು. ಸುಭಾಶ್ ಚಂದ್ರ ಅಗರವಾಲ್ ಎಂಬವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರಧಾನಿ ಕಾರ್ಯಾಲಯ ಈ ರೀತಿ ಉತ್ತರಿಸಿತು. ಆರ್‌ಟಿಐ ಕಾಯ್ದೆಯ 8ನೇ ಕಲಂ ಅಡಿ ಇದಕ್ಕೆ ವಿನಾಯತಿ ನೀಡಲಾಗಿದೆ ಎಂದು ಹೇಳಿದ ಪ್ರಧಾನಿ ಕಾರ್ಯಾಲಯ, ಇದೇ ಕಾರಣಕ್ಕೆ ಈ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿತು. ಆರ್‌ಟಿಐ ಅರ್ಜಿಗಳಿಗೆ ಉತ್ತರಿಸಲು ಸಂಪುಟ ಸಚಿವಾಲಯಕ್ಕೆ ಎಲ್ಲ ಮಾಹಿತಿಗಳನ್ನು ನೀಡಿದ್ದ ಪ್ರಧಾನಿ ಕಾರ್ಯಾಲಯ, ಧಿಡೀರನೆ ನಿರ್ಧಾರ ಬದಲಿಸಿ ಮಾಹಿತಿ ನಿರಾಕರಿಸಿತು. ಅಗರವಾಲ್ ಕಳೆದ ವರ್ಷ ಆರ್‌ಟಿಐ ಅರ್ಜಿ ಸಲ್ಲಿಸಿ, ಎಲ್ಲ ಕೇಂದ್ರ ಸಚಿವರು ಹಾಗೂ ಅವರ ಸಂಬಂಧಿಗಳು ಎರಡು ವರ್ಷಗಳಲ್ಲಿ ಸಂಪಾದಿಸಿದ ಆಸ್ತಿ ವಿವರ ಬಹಿರಂಗಪಡಿಸುವಂತೆ ಕೇಳಿದ್ದರು. ಪ್ರಧಾನಿ ಕಾರ್ಯಾಲಯಕ್ಕೆ ಈ ಅರ್ಜಿ ರವಾನಿಸಲಾಗಿತ್ತು. 2008ರ ಮೇ 19ರಂದು ಪ್ರಧಾನಿ ಕಾರ್ಯಾಲಯ ಸಚಿವರ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ಸಂಪುಟ ಸಚಿವಾಲಯಕ್ಕೆ ಕಳುಹಿಸಿತ್ತು. ಆದರೆ, ಅದರ ನಂತರ ಯಾರಿಂದಲೂ ನನಗೆ ಉತ್ತರ ಬರಲಿಲ್ಲ. ಕೇಂದ್ರ ಮಾಹಿತಿ ಆಯುಕ್ತರಿಗೂ ನಾನು ಈ ಬಗ್ಗೆ ಅರ್ಜಿ ಸಲ್ಲಿಸಿದ್ದೆ. ಆರು ತಿಂಗಳ ನಂತರ ಡಿಸೆಂಬರ್ 17ರಂದು ಪ್ರಧಾನಿ ಕಾರ್ಯಾಲಯದಿಂದ ನನಗೆ ಪತ್ರ ಬಂತು. ಆರ್‌ಟಿಐ ಕಾಯ್ದೆ ಅಡಿ ಇದಕ್ಕೆ ವಿನಾಯತಿ ನೀಡಲಾಗಿದೆ ಎಂದು ನನಗೆ ತಿಳಿಸಲಾಯಿತು ಎಂದು ಅಗರವಾಲ್ ಹೇಳಿದರು.

2009: ಪಶ್ಚಿಮ ಕೀನ್ಯಾದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 111ಜನರು ಮೃತರಾಗಿ, ಇತರೆ 200 ಜನ ಗಂಭೀರವಾಗಿ ಗಾಯಗೊಂಡರು. ನೈರೋಬಿಯಿಂದ 150 ಕಿ.ಮೀ.ದೂರದ ಮೊಲೊ ಎಂಬಲ್ಲಿನ ಜೊಲ್ಲಿ ಫಾರ್ಮಿನಲ್ಲಿ ಈ ದುರ್ಘಟನೆ ನಡೆಯಿತು ಎಂದು ಪೊಲೀಸ್ ವಕ್ತಾರ ಎರಿಕ್ ಕಿರಿಯಾತೆ ಹೇಳಿದರು. ಟ್ಯಾಂಕರ್ ಅಪಘಾತಕ್ಕೀಡಾದ ಸಂದರ್ಭ ಅದರಿಂದ ಸುರಿಯುತ್ತಿದ್ದ ಪೆಟ್ರೋಲ್ ಸಂಗ್ರಹಿಸಲು ಸ್ಥಳೀಯರು ಮುಂದಾದರು. ಈ ವೇಳೆ ಬೆಂಕಿ ಹೊತ್ತಿಕೊಂಡದ್ದೇ ದುರ್ಘಟನೆಗೆ ಕಾರಣವಾಯಿತು.

2009: ಶ್ರೀಲಂಕಾ ಸರ್ಕಾರ ಘೋಷಿಸಿದ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮಕ್ಕೆ ಗೌರವ ಕೊಡದ ಎಲ್‌ಟಿಟಿಇ ಬಂಡುಕೋರರ ವಿರುದ್ಧ ಸೇನೆ ಈದಿನ ರಾತ್ರಿ ತೀವ್ರ ಕಾರ್ಯಾಚರಣೆ ನಡೆಸಿ, ಎರಡು ಪ್ರಮುಖ ಶಿಬಿರಗಳಿರುವ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಮುಖ್ಯವಾಗಿ ಆತ್ಮಾಹುತಿ ದಾಳಿಕೋರರ ದಳ ವಾಸ್ತವ್ಯ ಹೂಡುತ್ತಿದ್ದ ವಿಸುವಮಡು ಪ್ರದೇಶದಲ್ಲಿನ ಈ ಶಿಬಿರ ಪ್ರದೇಶಗಳ ಮೇಲೆ ಸೇನೆ ದಾಳಿ ಮಾಡಿ 12 ಬಂಡುಕೋರರನ್ನು ಕೊಂದು ಹಾಕಿತು. ಅಲ್ಲದೇ, ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತು.

2009: ಕಾಡಿನಲ್ಲಿ ತಮ್ಮನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದ ಮಹಾರಾಷ್ಟ್ರ ಪೊಲೀಸರ ಗುಂಪಿನ ಮೇಲೆ ನಕ್ಸಲರು ಮನಸೋಇಚ್ಛೆ ಗುಂಡು ಹಾರಿಸಿ ಒಬ್ಬ ಯುವ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ 15 ಪೊಲೀಸರನ್ನು ಹತ್ಯೆ ಮಾಡಿದರು. ಗಡ್‌ಚಿರೋಲಿ ಜಿಲ್ಲೆಯ ಮರ್ಕೆಗಾಂವಿನಲ್ಲಿ ಈ ದಾರುಣ ಘಟನೆ ನಡೆಯಿತು.

2008: ಬೃಹತ್ ವಿದ್ಯುತ್ ಯೋಜನೆ ಕೈತಪ್ಪಿ ಹೋಗುವ ಸಾಧ್ಯತೆಗಳು ಇರುವುದರಿಂದ ಉತ್ತರಕನ್ನಡ ಜಿಲ್ಲೆಯ ತದಡಿಯ ಬದಲು ಬೇರೆ ಕಡೆ ವಿದ್ಯುತ್ ಸ್ಥಾವರ ಸ್ಥಾಪಿಸಬೇಕು ಎಂದು ಕೋರಿರುವ ತನ್ನ ಮೊದಲಿನ ನಿರ್ಧಾರವನ್ನು ಬದಲಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. 4000 ಮೆ. ವ್ಯಾ. ವಿದ್ಯುತ್ ಉತ್ಪಾದನಾ ಯೋಜನೆಗೆ ಈ ಮೊದಲು ತದಡಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸ್ಥಳೀಯರ ಹಾಗೂ ಪರಿಸರವಾದಿಗಳ ವಿರೋಧದಿಂದ ಈ ಯೋಜನೆಯನ್ನು ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದ ಬಳಿಯ ಘಟಪ್ರಭಾದಲ್ಲಿ ಆರಂಭಿಸಲು ನಿರ್ಧರಿಸಿ ಕೇಂದ್ರಕ್ಕೆ ತಿಳಿಸಿತ್ತು. ಆದರೆ ಕೇಂದ್ರ ಇಂಧನ ಖಾತೆಯು ಈ ವಿದ್ಯುತ್ ಯೋಜನೆಯನ್ನು ಕಡಲ ತೀರದ ಪ್ರದೇಶದಲ್ಲೇ ಆರಂಭಿಸಬೇಕು ಎಂದು ನಿರ್ಧರಿಸಿದ್ದರಿಂದ ಘಟಪ್ರಭಾದಲ್ಲಿ ಸ್ಥಾಪಿಸುವ ಕರ್ನಾಟಕ ರಾಜ್ಯದ ನಿರ್ಧಾರಕ್ಕೆ ಮಾನ್ಯತೆ ನೀಡಿರಲಿಲ್ಲ. ಈ ಮಧ್ಯೆ ಗುಜರಾತ್ ಮತ್ತು ತಮಿಳುನಾಡು ಸರ್ಕಾರಗಳು ಈ ಯೋಜನೆಯ ಬಗ್ಗೆ ಆಸಕ್ತಿ ತಳೆದಿದ್ದರಿಂದ ಕೇಂದ್ರ ಸರ್ಕಾರವು ಆದಷ್ಟು ಬೇಗ ನಿರ್ಧಾರ ತಿಳಿಸುವಂತೆ ಕರ್ನಾಟಕಕ್ಕೆ ಸೂಚಿಸಿತ್ತು.

2008: ಬೆನಜೀರ್ ಭುಟ್ಟೋ ಹತ್ಯೆಯ ಅರಾಜಕತೆಯಿಂದ ಪಾಕಿಸ್ಥಾನ ತತ್ತರಿಸದಿದ್ದಲ್ಲಿ ಉಡುಪಿಯ ಪರ್ಯಾಯ ಉತ್ಸವದಲ್ಲಿ ರಕ್ತದ ಓಕುಳಿ ಆಗುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಬಂಧಿತನಾದ ಶಂಕಿತ ಉಗ್ರಗಾಮಿ ರಿಯಾಜುದ್ದೀನ್ ನಾಸೀರ್ ದಾವಣಗೆರೆಯಲ್ಲಿ ಪೊಲೀಸ್ ವಿಚಾರಣೆ ಕಾಲದಲ್ಲಿ ಬಹಿರಂಗ ಪಡಿಸಿದ. ಉಡುಪಿಯ ಮಠ ಹಾಗೂ ಹೈದರಾಬಾದಿನ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಸ್ಫೋಟಕ್ಕೆ ಸಂಚು ನಡೆಸಿದ್ದುದಾಗಿ ಆತ ಒಪ್ಪಿಕೊಂಡದ್ದನ್ನು ಪೊಲೀಸ್ ಮೂಲಗಳು ಬಹಿರಂಗ ಪಡಿಸಿದವು. ಪಾಕಿಸ್ಥಾನದಲ್ಲಿ ಆಂತರಿಕ ಸಮಸ್ಯೆಗಳು ತಲೆದೋರದಿದ್ದಲ್ಲ್ಲಿ, ತಮಗೆ ನೇಪಾಳದ ಕಠ್ಮಂಡು ಮೂಲಕ ಸ್ಫೋಟಕಗಳು ಪೂರೈಕೆಯಾಗುತ್ತಿದ್ದವು. ಅವುಗಳನ್ನು ಪರ್ಯಾಯ ಉತ್ಸವದ ವೇಳೆ ಸ್ಫೋಟಿಸಲು ಅಗತ್ಯ ಯೋಜನೆ ರೂಪಿಸಲು ಪ್ರವಾಸಿಗನ ಸೋಗಿನಲ್ಲಿ ಈ ಹಿಂದೆ ಎರಡು ಬಾರಿ ಉಡುಪಿ ಹಾಗೂ ಮಂಗಳೂರಿಗೆ ತಾನು ಭೇಟಿ ನೀಡಿದ್ದುದಾಗಿ ಆತ ಒಪ್ಪಿಕೊಂಡ ಎಂದು ಪೊಲೀಸ್ ಮೂಲಗಳು ಹೇಳಿದವು.

2008: ಒಂದು ದಿನ ಹಿಂದೆ ಲೋಕಾಯುಕ್ತ ಪೊಲೀಸರ ದಾಳಿಗೆ ಒಳಗಾಗಿದ್ದ ರಾಜ್ಯ ಸರ್ಕಾರದ ಹತ್ತು ಹಿರಿಯ ಅಧಿಕಾರಿಗಳು ಒಟ್ಟು ಒಂದು ನೂರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವುದನ್ನು ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಬಹಿರಂಗ ಪಡಿಸಿದರು. ಈಗ ದಾಳಿಗೆ ಗುರಿಯಾದ ಎಲ್ಲ ಅಧಿಕಾರಿಗಳು ಒಟ್ಟಾರೆ ತಮ್ಮ ಸೇವಾ ಅವಧಿಯಲ್ಲಿ ರೂ 5.03 ಕೋಟಿ ಮೊತ್ತದ ಆದಾಯವನ್ನು ಸಂಬಳ ಮತ್ತು ಇತರ ಸೌಲಭ್ಯಗಳ ರೂಪದಲ್ಲಿ ಪಡೆದಿದ್ದಾರೆ. ಆದರೆ ಈ ಮೊತ್ತದ 20 ಪಟ್ಟಿಗಿಂತಲೂ ಹೆಚ್ಚು ಅಕ್ರಮ ಆಸ್ತಿ ದಾಳಿಯ ವೇಳೆ ಪತ್ತೆಯಾಗಿದೆ ಎಂದು ದಾಳಿಗೆ ತುತ್ತಾದ ಅಧಿಕಾರಿಗಳಿಂದ ವಶಪಡಿಸಿಕೊಳ್ಳಲಾದ ಆಸ್ತಿಪಾಸ್ತಿ ವಿವರ ನೀಡುತ್ತಾ ಲೋಕಾಯುಕ್ತರು ತಿಳಿಸಿದರು.

2008: ಇಂಟರ್ನೆಟ್ ಮಾಧ್ಯಮ ಸಂಸ್ಥೆ ಯಾಹೂ! ಇಂಕ್ ಅನ್ನು ಸಾಫ್ಟವೇರ್ ದೈತ್ಯ ಸಂಸ್ಥೆ ಮೈಕ್ರೊಸಾಫ್ಟ್ ಅಂದಾಜು 44.6 ಶತಕೋಟಿ ಡಾಲರುಗಳಿಗೆ ಖರೀದಿಸಲು ಮುಂದಾಯಿತು. ಅಂತರ್ಜಾಲ ಸೇವಾ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಮೈಕ್ರೊಸಾಫ್ಟ್ ಈ ಕ್ರಮಕ್ಕೆ ಮುಂದಾಯಿತು. ಬಿಲ್ ಗೇಟ್ಸ್ ಒಡೆತನದ ಮೈಕ್ರೊಸಾಫ್ಟ್, ಪ್ರತಿ ಷೇರಿಗೆ 31 ಡಾಲರ್ ಲೆಕ್ಕದಲ್ಲಿನ ಯಾಹೂ ಖರೀದಿ ಪ್ರಸ್ತಾವನೆಯು ನಗದು ಮತ್ತು ಷೇರು ಲೆಕ್ಕದಲ್ಲಿ ಅಂದಾಜು 44.6 ಶತಕೋಟಿ ಡಾಲರುಗಳಷ್ಟು ಆಗಲಿದೆ ಎಂದು ನ್ಯೂಯಾರ್ಕಿನಲ್ಲಿ ತಿಳಿಸಿತು.

2008: ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಮಧ್ಯಮ ಗತಿಯ ಖಂಡಾಂತರ ಕ್ಷಿಪಣಿ ಘೋರಿ (ಹತ್ಫಾ-5) ಪರೀಕ್ಷೆಯನ್ನು ಪಾಕಿಸ್ಥಾನ ಯಶಸ್ವಿಯಾಗಿ ನಡೆಸಿತು. ಸುಮಾರು 1,300 ಕಿ.ಮೀ ವರೆಗೆ ಗುರಿ ಇಡುವ ಸಾಮರ್ಥ್ಯ ಇದಕ್ಕಿದೆ. ಅಧ್ಯಕ್ಷ ಪರ್ವೇಜ್ ಮುಷರಫ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಅಷ್ಫಾಕ್ ಪರ್ವೇಜ್ ಕಯಾನಿ ಅವರು ಅಜ್ಞಾತ ಸ್ಥಳದಲ್ಲಿ ನಡೆದ ಈ ಪರೀಕ್ಷೆಯನ್ನು ಖುದ್ದು ವೀಕ್ಷಿಸಿದರು.

2008: ಬಾಗ್ದಾದಿನ ಜನನಿಬಿಡವಾದ ಎರಡು ಮಾರುಕಟ್ಟೆಗಳಲ್ಲಿ ಬಾಂಬ್ ಸ್ಫೋಟಿಸಿದ್ದರಿಂದ ಕನಿಷ್ಠ 64 ಮಂದಿ ಮೃತರಾಗಿ 100 ಮಂದಿ ಗಾಯಗೊಂಡರು. ಅಲ್-ಘಜಲ್ ಪೇಟ್ ಮಾರುಕಟ್ಟೆಯಲ್ಲಿ ಮರದ ಪೆಟ್ಟಿಗೆಯೊಂದರಲ್ಲಿ ಬಾಂಬ್ ಅಡಗಿಸಿಟ್ಟು ಸ್ಫೋಟಿಸಿದರೆ, ಮತ್ತೊಂದು ಬಾಂಬನ್ನು ಪಕ್ಕದ ಅಲ್-ಜಡಿಡ ಮಾರುಕಟ್ಟೆಯ ರಸ್ತೆಯಲ್ಲಿ ಮಧ್ಯಾಹ್ನ ಸ್ಫೋಟಿಸಲಾಯಿತು.

2008: ಚೀನಾದ ವಾಂಗ್ ಎಂಬ ವೂಲಾಂಗ್ ಪ್ರಾಂತದ ಪ್ರತಿನಿಧಿಯೊಬ್ಬ ಲಂಚ ಪಡೆದ ಅಪರಾಧಕ್ಕಾಗಿ ಮರಣದಂಡನೆಗೆ ಗುರಿಯಾದ. ವೂಲಾಂಗ್ ಪ್ರಾಂತದ ರಾಜಧಾನಿ ನಾಂಜಿಂಗಿನ ಮೇಯರ್ ಆಗಿದ್ದ ಸಂದರ್ಭದಲ್ಲಿ (1995- 2006) ವಾಂಗ್ ಎರಡು ಕಂಪೆನಿಗಳಿಂದ 940 ಸಾವಿರ ಅಮೆರಿಕ ಡಾಲರ್ ಲಂಚವಾಗಿ ಪಡೆದುಕೊಂಡ ಆರೋಪವಿತ್ತು. ಆದರೆ ಈ ಮರಣದಂಡನೆಯನ್ನು ಎರಡು ವರ್ಷ ಕಾಲ ಮುಂದೂಡಲು ಅವಕಾಶವಿದೆ. ಶಿಕ್ಷೆಗೊಳಗಾದ ವಾಂಗ್ ನ ಸಂಬಂಧಿಗಳು 180 ಸಾವಿರ ಅಮೆರಿಕ ಡಾಲರುಗಳನ್ನು ಹಿಂದಿರುಗಿಸಿದ್ದು, ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆಯೇ ಎಂಬುದು ಬೆಳಕಿಗೆ ಬರಲಿಲ್ಲ.

2007: ಭಾರತೀಯ ಮೂಲದ ಖಗೋಳಯಾನಿ ಸುನೀತಾ ವಿಲಿಯಮ್ಸ್ ಅವರು ತಮ್ಮ ಒಂಬತ್ತು ದಿನಗಳ ಬಾಹ್ಯಾಕಾಶ ನಡಿಗೆ ಮೊದಲ ಹಂತದಲ್ಲಿನ ಮೂರು ನಡಿಗೆಯನ್ನು ಬೆಳಗ್ಗೆ 9.14ಕ್ಕೆ ಸಹವರ್ತಿಗಳಾದ ಕಮಾಂಡರ್ ಮೈಕೇಲ್ ಲೋಪೆಜ್ ಅಲೆಗ್ರಿಯಾ ಜೊತೆಗೆ ಆರಂಭಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೊರಗಿರುವ ಕಷ್ಟಕರವಾದ ಅಮೋನಿಯಾ ಕೋಲಿಂಗ್ ಲೈನ್ಸ್ ಹಾದಿಯಲ್ಲಿ ಸುನೀತಾ ಅವರು ನಡಿಗೆ ಶುರು ಮಾಡಿದರು.

2007: ಅತಿಸಾರವನ್ನು (ಡಯೇರಿಯಾ) ನಿಯಂತ್ರಿಸಲು ಉಪ್ಪು- ಸಕ್ಕರೆ ಮಿಶ್ರಿತ ನೀರು ಸೇವನೆ ಅತ್ಯಂತ ಪರಿಣಾಮಕಾರಿ ಕ್ರಮ ಎಂಬುದನ್ನು ಕಂಡು ಹಿಡಿದ ಕೋಲ್ಕತದ (ಹಿಂದಿನ ಕಲ್ಕತ್ತ) ಅನ್ವಯಿಕ ಅಧ್ಯಯನ ಸಂಸ್ಥೆಯ ವೈದ್ಯ ದಿಲೀಪ್ ಮಹಲಾನಬಿಸ್ ಮತ್ತು ಇತರ ಮೂವರು ತಜ್ಞರಿಗೆ 2006ನೇ ಸಾಲಿನ ಪ್ರತಿಷ್ಠಿತ `ಪ್ರಿನ್ಸ್ ಮಹಿಡಾಲ್' ಪ್ರಶಸ್ತಿ ಲಭಿಸಿತು. ಥಾಯ್ ರಾಜಮನೆತನದ ಗೌರವವಾದ 50 ಸಾವಿರ ಡಾಲರ್ ನಗದು ಮೊತ್ತದ ಈ ಪ್ರಶಸ್ತಿಯನ್ನು ದೊರೆ ಭೂಮಿಬಲ್ ಅತುಲ್ಯ ತೇಜ್ ಅವರು ಬ್ಯಾಂಕಾಕಿನಲ್ಲಿ ಪ್ರದಾನ ಮಾಡಿದರು.

2007: ನೇತಾಜಿ ಸುಭಾಶ ಚಂದ್ರ ಬೋಸ್ ಅವರ ಕಣ್ಮರೆ ಕುರಿತಂತೆ ತನ್ನ ಬಳಿ ಯಾವುದೇ ಮಾಹಿತಿಯೂ ಇಲ್ಲ ಎಂಬುದಾಗಿ ಭಾರತದ ಪ್ರತಿಷ್ಠಿತ ತನಿಖಾ ಸಂಸ್ಥೆಯ ಅಂಗವಾದ ಸಂಶೋಧನಾ ವಿಶ್ಲೇಷಣಾ ದಳ (ರೀಸರ್ಚ್ ಅನಾಲಿಸಿಸ್ ವಿಂಗ್ -ಆರ್ ಎ ಡಬ್ಲ್ಯೂ- ರಾ) ಇದೇ ಮೊತ್ತ ಮೊದಲ ಬಾರಿಗೆ ಒಪ್ಪಿಕೊಂಡಿತು. ಬೋಸ್ ಅವರ ಚಲನವಲನಗಳ ಬಗೆಗೆ ತನ್ನ ಬಳಿ ಯಾವ ಮಾಹಿತಿಯೂ ಇಲ್ಲ ಎಂಬುದಾಗಿ `ರಾ' `ಮಿಷನ್ ನೇತಾಜಿ' ಸಂಸ್ಥೆಗೆ ಬರೆದ ಪತ್ರದಲ್ಲಿ ಒಪ್ಪಿಕೊಂಡಿತು. ನೇತಾಜಿ ಕಣ್ಮರೆ ಬಗ್ಗೆ `ಮಿಷನ್ ನೇತಾಜಿ' ಸ್ವ ಇಚ್ಛೆಯಿಂದ ತನಿಖೆ ನಡೆಸುತ್ತಿದ್ದು, `ರಾ' ಬಳಿ ಇರುವ ಮಾಹಿತಿ ಕೊಡುವಂತೆ ಕೇಳಿತ್ತು.

2007: ಕ್ರಿಕೆಟ್ ಸೇರಿದಂತೆ ಮಹತ್ವದ ಎಲ್ಲ ಕ್ರೀಡೆಗಳ ಪ್ರಸಾರ ಹಕ್ಕು ಪಡೆದಿರುವ ಖಾಸಗಿ ಚಾನೆಲ್ ಹಾಗೂ ಸಂಸ್ಥೆಗಳು ನೇರ ಪ್ರಸಾರವನ್ನು ದೂರದರ್ಶನ (ಡಿಡಿ) ಜೊತೆಗೆ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತು.

2006: ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳ ಅಧುನೀಕರಣ ಹರಾಜು ಪ್ರಕ್ರಿಯೆಗೆ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆ ತನ್ನ ಸಮ್ಮತಿ ನೀಡಿತು. ಜಿಎಂಆರ್ ಫ್ರಾಪೋರ್ಟ್ ಮತ್ತು ಜಿವಿಕೆ -ದಕ್ಷಿಣ ಆಫ್ರಿಕಾ ಏರ್ ಪೋರ್ಟ್ಸ್ ಸಂಸ್ಥೆಗಳಿಗೆ ಆಧುನೀಕರಣ ಕೆಲಸವನ್ನು ವಹಿಸಲು ನಡೆದ ಆಯ್ಕೆಗೆ ಸರ್ಕಾರದ ಪೂರ್ಣ ಒಪ್ಪಿಗೆ ಲಭಿಸಿತು.

2006: ಭಾರತದ ವಿಶ್ವವಿಖ್ಯಾತ ಬ್ಯಾಟಿಂಗ್ ಸಾಮ್ರಾಜ್ಯವನ್ನು ಹೊಸಕಿ ಹಾಕಿದ ಪಾಕ್ ತಂಡ ಕರಾಚಿಯಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು 341 ರನ್ನುಗಳ ಭಾರಿ ಅಂತರದಿಂದ ಗೆಲ್ಲುವ ಮೂಲಕ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು.

2005: ನೇಪಾಳದ ದೊರೆ ಜ್ಞಾನೇಂದ್ರ ಅವರು ಸರ್ಕಾರವನ್ನು ರದ್ದು ಪಡಿಸಿ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ನಾಯಕತ್ವವು ಚುನಾವಣೆಗಳನ್ನು ನಡೆಸಲು ಮತ್ತು ಶಾಂತಿ ಸ್ಥಾಪನೆಗೆ ವಿಫಲವಾಗಿತ್ತು ಎಂಬ ಸಮರ್ಥನೆಯನ್ನು ಅವರು ನೀಡಿದರು.

2004: ಸೌದಿ ಅರೇಬಿಯಾದ ಮೆಕ್ಕಾ ಪಟ್ಟಣ ಸಮೀಪದ ಮೆನಾದಲ್ಲಿ ಸೇತುವೆ ಮೇಲೆ ಕಾಲ್ತುಳಿತ ಉಂಟಾಗಿ ಕನಿಷ್ಟ 251 ಮುಸ್ಲಿಂ ಹಜ್ ಯಾತ್ರಿಗಳು ಮೃತರಾದರು.

2003: ಹದಿನಾರು ದಿನಗಳ ಯಾನದ ಬಳಿಕ ಮರಳಿ ಭೂಕಕ್ಷೆ ಪ್ರವೇಶಿಸುವಾಗ ಟೆಕ್ಸಾಸ್ ಮೇಲ್ಭಾಗದಲ್ಲಿ ಬಾಹ್ಯಾಕಾಶ ನೌಕೆ ಕೊಲಂಬಿಯಾ ಸ್ಪೋಟಗೊಂಡಿತು. ಅದರಲ್ಲಿದ್ದ ಎಲ್ಲ 7 ಮಂದಿ ಗಗನಯಾನಿಗಳು ಮೃತರಾದರು. ಅವರಲ್ಲಿ ಒಬ್ಬ ವ್ಯಕ್ತಿ ಇಸ್ರೇಲಿನ ಮೊತ್ತ ಮೊದಲ ಗಗನಯಾನಿ.

1989: ನಾರ್ವೆಯು ಗ್ರೊ ಹಾರ್ಲೆಮ್ ಬ್ರಂಟ್ ಲ್ಯಾಂಡ್ (Brundtland)
ಅವರನ್ನು ತನ್ನ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆ ಮಾಡಿತು.

1985: ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮಹಮ್ಮದ್ ಅಜರುದ್ದೀನ್ ಅವರು 122 ರನ್ ಗಳಿಕೆಯೊಂದಿಗೆ ತನ್ನ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದರು.

1982: ಕರ್ನಾಟಕದಲ್ಲಿ 378 ವರ್ಷಗಳ ಬಳಿಕ ಧರ್ಮಸ್ಥಳದಲ್ಲಿ ಮತ್ತೊಂದು ಬಾಹುಬಲಿ (ಗೊಮ್ಮಟೇಶ್ವರ) ಪ್ರತಿಷ್ಠಾಪನೆ ನೆರವೇರಿತು. ಧರ್ಮಸ್ಥಳದ ಪಾಲಿಗೆ ಈದಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸುದಿನವಾಯಿತು.

1977: ಭಾರತದಲ್ಲಿ ಕರಾವಳಿ ಕಾವಲು ಪಡೆ (ಕೋಸ್ಟ್ ಗಾರ್ಡ್) ಸ್ಥಾಪನೆಗೊಂಡಿತು.

1977: ಭಾರತದಲ್ಲಿ ರೈಲು ಮ್ಯೂಸಿಯಂ ಸ್ಥಾಪನೆಗೊಂಡಿತು. ಈ ಮಾದರಿಯ ವಸ್ತುಸಂಗ್ರಹಾಲಯ ಸ್ಥಾಪನೆಗೊಂಡದ್ದು ಇದೇ ಮೊದಲು.

1971: ಭಾರತದ ಕ್ರಿಕೆಟ್ ಆಟಗಾರ ಅಜಯ್ ಜಡೇಜಾ ಹುಟ್ಟಿದರು. ಇವರು ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಕ್ರಿಕೆಟಿನಿಂದ ನಿಷೇಧಕ್ಕೆ ಒಳಗಾದರು.

1964: ಭಾರತದಲ್ಲಿ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಸ್ಥಾಪನೆಗೊಂಡಿತು.

1940: ಸಾಹಿತಿ, ರಂಗನಟ, ನಿರ್ದೇಶಕ ಪ್ರೊ. ರಾಮದಾಸ್ ಅವರು ಗುರುರಾಜ ಕುಂಡಂತಾಯ- ಸತ್ಯಭಾಮ ದಂಪತಿಯ ಮಗನಾಗಿ ಉಡುಪಿ ತಾಲ್ಲೂಕಿನ ಉಚ್ಚಿಲ ಗ್ರಾಮದಲ್ಲಿ ಈ ದಿನ ಹುಟ್ಟಿದರು. ಬಾಲ್ಯದಿಂದಲೂ ಹಳ್ಳಿ ನಾಟಕದಲ್ಲಿ ಆಸಕ್ತಿ. ನಾಟಕ ನೋಡಿ, ಆಡಿಸಿದರು. ನಟ ನಿರ್ದೇಶಕರಾಗಿ ಬೆಳೆದರು. 15ಕ್ಕೂ ಹೆಚ್ಚು ಏಕಾಂಕ ನಾಟಕ, ಉಪನ್ಯಾಸಗಳು, ಅನುವಾದಗಳು, ಭೂಮಿಗೀತ ಕಾವ್ಯ ಪ್ರವೇಶ, ಅಧ್ಯಯನ, ರಂಗ ಅಂತರಂಗ, ಚಿಂತನ ಇತ್ಯಾದಿ ವಿಮರ್ಶಾ ಗ್ರಂಥಗಳು ಸೇರಿ 40ಕ್ಕೂ ಹೆಚ್ಚು ಕೃತಿಗಳ ರಚನೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು.

1931: ರಷ್ಯದ ರಾಜಕಾರಣಿ, ಅಧ್ಯಕ್ಷ ಬೋರಿಸ್ ಯೆಲ್ಸಿನ್ ಹುಟ್ಟಿದರು. 1990ರಿಂದ ರಷ್ಯದ ಅಧ್ಯಕ್ಷರಾದ ಅವರು 1991ರಲ್ಲಿ ರಷ್ಯದ ಇತಿಹಾಸದಲ್ಲೇ ಮೊದಲ ಚುನಾಯಿತ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು.

1930: `ದಿ ಟೈಮ್ಸ್' ತನ್ನ ಮೊದಲ ಕ್ರಾಸ್ ವರ್ಡನ್ನು ಪ್ರಕಟಿಸಿತು.

1929: ವೃತ್ತಿ ರಂಗಭೂಮಿಯ ಏಳಿಗೆಗಾಗಿ ಅಪಾರ ಕಾಳಜಿ ಹೊಂದಿದ್ದ ಕಂಠಿ ಹನುಮಂತರಾಯ ಅವರು ಬಸಪ್ಪ- ಬಸಲಿಂಗಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆ ಬೀಳಗಿ ತಾಲ್ಲೂಕಿನ ನಾಗರಾಳದಲ್ಲಿ ಜನಿಸಿದರು.

1928: ಕಲಾವಿದೆ ರಾಧಾ ಸುಜೀರ ಜನನ.

1884: ಆಕ್ಸ್ ಫರ್ಡ್ ಡಿಕ್ಸನರಿಯ ಮೊದಲ ಆವೃತ್ತಿ ಪ್ರಕಟಗೊಂಡಿತು.

1881: ದೆಹಲಿಯಲ್ಲಿ ಸೇಂಟ್ ಸ್ಟೀಫನ್ಸ್ ಕಾಲೇಜು ಸ್ಥಾಪನೆಗೊಂಡಿತು. ಆಗ ಇದ್ದದ್ದು ಮೂವರು ಶಿಕ್ಷಕರು ಮತ್ತು ಐವತ್ತು ವಿದ್ಯಾರ್ಥಿಗಳು ಮಾತ್ರ. 1891ರ ಡಿಸೆಂಬರ್ 8ರಂದು ಕಾಶ್ಮೀರಿ ಗೇಟಿನಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸರ್ ಜೇಮ್ಸ್ ಲಯಾಲ್ ಕಾಲೇಜಿನ ಕಟ್ಟಡವನ್ನು ಉದ್ಘಾಟಿಸಿದರು.

No comments:

Post a Comment