ವಿಂಗ್ ಕಮಾಂಡರ್ ಅಭಿನಂದನ್
ಭಾರತೀಯ ಹೈಕಮೀಷನ್ ವಶಕ್ಕೆ
ಇಸ್ಲಾಮಾಬಾದ್: ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಪಾಕಿಸ್ತಾನವು 2019 ಮಾರ್ಚ್ 1ರ ಶುಕ್ರವಾರ ಪಾಕಿಸ್ತಾನದಲ್ಲಿನ ಭಾರತೀಯ ಹೈಕಮೀಷನ್ ವಶಕ್ಕೆ ಒಪ್ಪಿಸಿದೆ.ಭಾರತೀಯ ಹೈಕಮೀಷನ್ ವಶಕ್ಕೆ
ಅಭಿನಂದನ್ ಅವರು ಮಧ್ಯಾಹ್ನ 3ರಿಂದ 4 ಗಂಟೆ ನಡುವಣ ಅವಧಿಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ
ನಿರೀಕ್ಷೆಯಿದೆ.
‘ಶಾಂತಿ
ಪ್ರಕ್ರಿಯೆ’ಯ
ದ್ಯೋತಕವಾಗಿ ಪಾಕಿಸ್ತಾನವು ಅಭಿನಂದನ್ ಅವರನ್ನು ಬಿಡುಗಡೆ ಮಾಡಿದೆ. ವಾಘಾ-ಅಟ್ಟಾರಿ ಜಂಟಿ
ಚೆಕ್ ಪೋಸ್ಟ್ ಮೂಲಕ
ಅವರು ಭಾರತ ಪ್ರವೇಶಿಸಲಿದ್ದಾರೆ.
ಪಾಕಿಸ್ತಾನದ ವಶಕ್ಕೆ ಸಿಲುಕಿದ್ದ ಅಭಿನಂದನ್ ಅವರನ್ನು ಎರಡು
ದಿನಗಳ ಬಳಿಕ, ಕೂದಲೂ
ಕೊಂಕದಂತೆ ಸುರಕ್ಷಿತವಾಗಿ ಭೇಷರತ್ ಬಿಡುಗಡೆ ಮಾಡಬೇಕು ಎಂಬುದಾಗಿ ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ
ಬಳಿಕ ಬಿಡುಗಡೆ ಮಾಡಲಾಗಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು
ಭಾರತದ ವಾಯುಪಡೆ ಅಧಿಕಾರಿಯನ್ನು ಶುಕ್ರವಾರ ‘ಶಾಂತಿ ಪ್ರಕ್ರಿಯೆ’ಯ ದ್ಯೋತಕವಾಗಿ ಬಿಡುಗಡೆ ಮಾಡಲಾಗುವುದು
ಎಂದು ಪಾಕ್ ಸಂಸತ್ತಿನಲ್ಲಿ ಪ್ರಕಟಿಸಿದ್ದರು.
No comments:
Post a Comment