ನಾನು ಮೆಚ್ಚಿದ ವಾಟ್ಸಪ್

Wednesday, February 13, 2019

ಇಂದಿನ ಇತಿಹಾಸ History Today ಫೆಬ್ರುವರಿ 13

ಇಂದಿನ ಇತಿಹಾಸ History Today ಫೆಬ್ರುವರಿ 13
2019: ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಖರೀದಿಸಿರುವ ೩೬ ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಸಂಧಾನ ನಡೆಸಿದ್ದ ದರಕ್ಕಿಂತ ಶೇಕಡಾ .೮೬ರಷ್ಟು ಅಗ್ಗವಾಗಿದೆ ಎಂದು ಸಂಸತ್ತಿನಲ್ಲಿ  ಮಂಡಿಸಲಾದ ನಿಯಂತ್ರಕರು ಮತ್ತು ಮಹಾ ಲೆಕ್ಕಪತ್ರ ಪರಿಶೋಧಕರ (ಸಿಎಜಿ) ವರದಿ ಹೇಳಿತು. ಏನಿದ್ದರೂ, ೨೦೦೭ರ ಯುಪಿಎ ಕಾಲದ ಒಪ್ಪಂದಕ್ಕೆ ಹೋಲಿಸಿದರೆ, ಹಾಲಿ ಒಪ್ಪಂದದಲ್ಲಿ ಬ್ಯಾಂಕ್ ಖಾತರಿಗಾಗಿ ಹಣಪಾವತಿ ಮಾಡಬೇಕಾದ ಅಗತ್ಯ ಇರಲಿಲ್ಲವಾದ್ದರಿಂದ ಯುದ್ಧ ವಿಮಾನ ನಿರ್ಮಾಣ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ಗೆ ಅನುಕೂಲವಾಗಿದೆ ಎಂದು ವರದಿ ತಿಳಿಸಿತು.  ‘ಆದ್ದರಿಂದ ಮಾರಾಟಗಾರರಿಗೆ ಉಳಿತಾಯ ಆಗಿದೆ. ಮಾರಾಟಗಾರರಿಗೆ (ಡಸ್ಸಾಲ್ಟ್ ಏವಿಯೇಷನ್) ಬ್ಯಾಂಕ್ ಶುಲ್ಕ ಪಾವತಿ ಮಾಡದ ಕಾರಣ ಆಗಿರುವ ಒಟ್ಟಾರೆ ಉಳಿತಾಯವು ಸಚಿವಾಲಯಕ್ಕೆ ವರ್ಗಾವಣೆ ಆಗಬೇಕಾಗಿತ್ತು ಎಂದು ಸರ್ಕಾರದ ಉನ್ನತ ಆಡಿಟರ್ ವರದಿ ಹೇಳಿತು. ಸಿಎಜಿ ವರದಿಯು ರಫೇಲ್ ವಹಿವಾಟಿಗೆ ಸಂಬಂಧಿಸಿದಂತೆ ಇದೀಗ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಣ ಘರ್ಷಣೆಗೆ ಹೊಸ ಅಂಶವಾಗಿ ಸೇರ್ಪಡೆಯಾಗಿದೆ. ಕಾಂಗ್ರೆಸ್ ಪಕ್ಷವು ವರದಿಯುಹಿತಾಸಕ್ತಿಗಳ ಘರ್ಷಣೆಯಾಗಿದೆ ಎಂದು ಬಣ್ಣಿಸಿತು. ಪ್ರಸ್ತುತ ಭಾರತದ ಸಿಎಜಿ ಆವಿರು ರಾಜೀವ್ ಮೆಹರ್ಶಿ ಅವರು ರಫೇಲ್ ವ್ಯವಹಾರದ ನಿರ್ಧಾರ ಪ್ರಕ್ರಿಯೆಯ ಭಾಗವಾಗಿದ್ದರು ಎಂದು ಕಾಂಗ್ರೆಸ್ ಪಕ್ಷವು ವಾದಿಸಿತ್ತು. ರಫೇಲ್ ಒಪ್ಪಂದಕ್ಕೆ ಸಹಿ ಹಾಕಿಒದಾಗ ಮೆಹರ್ಶಿ ಅವರು ಹಣಕಾಸು ಕಾರ್ಯದರ್ಶಿಯಾಗಿದ್ದರುಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಸಿಎಜಿ ವರದಿ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಪ್ರತಿಕ್ರಿಯಿಸಿ, ’ವರದಿಯು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಹೆಣೆಯಲು ಯತ್ನಿಸುತ್ತಿರುವ ಮಹಾಮೈತ್ರಿಯ ಸುಳ್ಳುಗಳನ್ನು ಬಯಲುಮಾಡಿದೆ ಎಂದು ಹೇಳಿದರು. ೨೦೦೭ರ ಒಪ್ಪಂದದಲ್ಲಿ ಹಾರಾಟದ ಸ್ಥಿತಿಯಲ್ಲಿ ಯುದ್ಧ ವಿಮಾನ ತರಲು ಮಾಡಿಕೊಳ್ಳಲಾದ ಒಪ್ಪಂದದ ದರದ ಜೊತೆಗೆ ೨೦೧೫ರ ಖರೀದಿ ಒಪ್ಪಂದವನ್ನು ಸಿಎಜಿ ತನ್ನ ವರದಿಯಲ್ಲಿ ಹೋಲಿಕೆ ಮಾಡಿತು. ಹಾಲಿ ಒಪ್ಪಂದವು ಮೂರು ವಿಚಾರಗಳಲ್ಲಿ ಅಗ್ಗವಾಗಿದ್ದು, ನಾಲ್ಕು ವಿಚಾರಗಳಲ್ಲಿ ತುಟ್ಟಿಯಾಗಿದೆ ಎಂದು ವರದಿಯು ತನ್ನ ಅಂತಿಮ ಅಭಿಪ್ರಾಯವನ್ನು ನೀಡಿದೆ. ’ಆದ್ದರಿಂದ ಒಟ್ಟಾರೆಯಾಗಿ, ೨೦೧೬ರ ಒಪ್ಪಂದವು ಹಿಂದಿನ ದರ ಕೊಡುಗೆಗಿಂತ ಶೇಕಡಾ .೮೬ರಷ್ಟು ಅಗ್ಗವಾಗಿದೆ ಎಂದು ವರದಿ ತಿಳಿಸಿತು. ಏನಿದ್ದರೂ, ಹಿಂದಿನ ಸರ್ಕಾರ ಮತ್ತು ಮೋದಿ ಸರ್ಕಾರವು ಮಾತುಕತೆ ನಡೆಸಿದ ಮೂಲ ವಿಮಾನದರದಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲ ಎಂದು ವರದಿ ಒತ್ತಿ ಹೇಳಿತು. ಮೋದಿ ಸರ್ಕಾರವು ಮಾತುಕತೆ ನಡೆಸಿದ ಹೆಲ್ಮೆಟೆಡ್ ಮೌಂಟೆಡ್ ಡಿಸ್ ಪ್ಲೇ, ಉತ್ತಮ ರಾಡಾರ್ಗಳು ಇತ್ಯಾದಿಗಳಲ್ಲಿ ಹಾಲಿ ಒಪ್ಪಂದವು ಹಿಂದಿನ ಒಪ್ಪಂದಕ್ಕಿಂತ ಶೇಕಡಾ ೧೭ರಷ್ಟು ಅಗ್ಗವಾಗಿವೆ. ಎಂಜಿನಿಯರಿಂಗ್ ಬೆಂಬಲ ಮತ್ತು ಫ್ಲೀಟ್ ಏರ್ ಫರ್ಪಾಮೆನ್ಸ್ ಆಧಾರಿತ ಲಾಜಿಸ್ಟಿಕ್ (ಪಿಬಿಎಲ್) ಶೇಕಡಾ ೬ರಷ್ಟು ತುಟ್ಟಿಯಾಗಿದೆ ಎಂದು ವರದಿ ತಿಳಿಸಿತು.  ವರದಿ ಬಂದ ತತ್ ಕ್ಷಣ ರಾಹುಲ್ ಗಾಂಧಿಯವರು ಪ್ರತಿಕ್ರಿಯೆ ನೀಡಲಿಲ್ಲ. ಆದರೆ ವರದಿ ಮಂಡನೆಗೆ ಕೆಲವು ಗಂಟೆಗಳ ಮೊದಲೇ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೊಸ ವಾಗ್ದಾಳಿ ನಡೆಸಿದ್ದರುಪ್ರಸ್ತಾಪಿತ ಯುದ್ಧ ವಿಮಾನಗಳ ನೂತನ ದರವು ಕಾಂಗ್ರೆಸ್ ನೇತೃತ್ವದ ಯುಪಿಎ ಕಾಲದ ದರಕ್ಕಿಂತ ಅಗ್ಗ ಮತ್ತು ಯುದ್ಧ ವಿಮಾನಗಳ ವಿತರಣೆ ತ್ವರಿತವಾಗಿರುತ್ತದೆ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ಮೋದಿ ಅವರು ತಮ್ಮ ವೈಯಕ್ಕಿಕ ರಫೇಲ್ ಬೈಪಾಸ್ ಒಪ್ಪಂದವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಗಾಂಧಿ ಹೇಳಿದ್ದರುಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿದ ರಾಹುಲ್ ಅವರುಎರಡೂ ವಾದಗಳನ್ನು ಪತ್ರಿಕಾ ವರದಿಯಲ್ಲಿ ಚಚ್ಚಿಹಾಕಲಾಗಿದೆ ಎಂದು ಹೇಳಿದ್ದರು.  ರಫೇಲ್ ದರ ಮತ್ತು ತ್ವರಿತ ವಿತರಣೆಯ ಸರ್ಕಾರದ ಪ್ರತಿಪಾದನೆಗೆ ವಿರುದ್ಧವಾಗಿ ಏಳು ಸದಸ್ಯರ ಭಾರತೀಯ ಸಂಧಾನ ತಂಡದ ಮೂವರು ಸದಸ್ಯರ ಅಂತಿಮ ನಿರ್ಧಾರವನ್ನು ಬಳಸಿಕೊಳ್ಳುವ ಮೂಲಕ ಪತ್ರಿಕಾ ವರದಿಯು ಮೋದಿ ಸರ್ಕಾರವು ಮಾತುಕತೆ ನಡೆಸಿ ಅಂತಿಮಗೊಳಿಸಿರುವ ರಫೇಲ್ ಒಪ್ಪಂದವು ಯುಪಿಎ ಆಡಳಿತಾವಧಿಯಲ್ಲಿ ಮಾತುಕತೆ ನಡೆಸಲಾಗಿದ್ದ  ಒಪ್ಪಂದಕ್ಕಿಂತ ಉತ್ತಮವಾಗಿಲ್ಲ ಎಂದು ವಿಶ್ಲೇಷಿಸಿತ್ತು. ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿಯು, ಕಾಂಗ್ರೆಸ್ ಪಕ್ಷವು ಸಿಎಜಿ ಸಂಸ್ಥೇಯ ಮೇಲೆ ದಾಳಿ ನಡೆಸುತ್ತಿದೆ ಎಂದು ಆಪಾದಿಸಿತುಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ನಿಲುವನ್ನು ಸಮರ್ಥಿಸಿಕೊಂಡರು. ’ನಾವು ಸಂಸ್ಥೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಸಿಎಜಿ ವರದಿಯನ್ನು ಸಿದ್ಧ ಪಡಿಸುತ್ತಿರುವ ಮಹಾನುಭಾವರು ನಿರ್ಧಾರ ಪ್ರಕ್ರಿಯೆಯ ಭಾಗವಾಗಿದ್ದರು ಎಂದು ರಾಹುಲ್ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದ್ದರು. ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರುಸಿಎಜಿ ವರದಿಯು ಪೂರ್ಣವಾಗಿ ಸರಿಯಲ್ಲ ಎಂದು ಹೇಳಿದರುರಫೇಲ್ಗೆ ಸಂಬಂಧಿಸಿದ ಬಹುನಿರೀಕ್ಷಿತ ಸಿಎಜಿ ವರದಿಯು ಪೂರ್ಣವೂ ಅಲ್ಲ ಅಥವಾ ಜನರ ಕಣ್ಣುಗಳಲ್ಲಿ ಸಂಪೂರ್ಣ ಸಮರ್ಪಕವೂ ಅಲ್ಲ ಎಂದು ಅವರು ಹೇಳಿದರುಬಿಜೆಪಿ ಸರ್ಕಾರದಲ್ಲಿ ಸಾಂವಿಧಾನಿಕ ಸಂಸ್ಥೆಗಳು ಒತ್ತಡಕ್ಕೆ ಒಳಗಾಗಿರುವುದು ಏಕೆ ಮತ್ತು ಪೂರ್ಣ ಪ್ರಾಮಾಣಿಕತೆಯೊಂದಿಗೆ ಕೆಲಸ ಮಾಡಲು ಸಾಧ್ಯವಾಗದೇ ಇರುವುದು ಏಕೆ ಎಂಬುದು ರಾಷ್ಟ್ರದ ಚಿಂತೆಯಾಗಿದೆ ಎಂದು ಮಾಯಾವತಿ ಟ್ವೀಟ್ ಮಾಡಿದರು.

2019: ನವದೆಹಲಿ: ಭಾರತ ಸರ್ಕಾರದ ಜೊತೆಗೆ ೨೦೧೬ರಲ್ಲಿ ಸಹಿಹಾಕಲಾದ ಒಪ್ಪಂದದಲ್ಲಿ ಬ್ಯಾಂಕ್ ಅಥವಾ ಸಾರ್ವಭೌಮ ಅಥವಾ ನಿರ್ವಹಣೆ ಸೇರಿದಂತೆ ಯಾವುದೇ ರೂಪದ ಖಾತರಿ ನೀಡಲು ಫ್ರೆಂಚ್ ಸರ್ಕಾರ ಮತ್ತು ಡಸ್ಸಾಲ್ಟ್ ಏವಿಯೇಶನ್ ಒಪ್ಪಿಕೊಂಡಿಲ್ಲ ಎಂದು ರಾಜ್ಯಸಭೆಯಲ್ಲಿ ಮಂಡಿಸಲಾದ ನಿಯಂತ್ರಕರು ಮತ್ತು ಮಹಾಲೆಕ್ಕಪತ್ರ ಪರಿಶೋಧಕರು(ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ- ಸಿಎಜಿ) ವರದಿಯು ಬಹಿರಂಗ ಪಡಿಸಿತು. ಖಾತರಿಯ ಬದಲಿಗೆ ಫ್ರೆಂಚ್ ಸರ್ಕಾರವು ಅಲ್ಲಿನ ಪ್ರಧಾನಿಯವರೇ ಸಹಿ ಮಾಡಿದಸೌಕರ್ಯ / ಸವಲತ್ತು ಪತ್ರವನ್ನು (ಲೆಟರ್ ಆಫ್ ಕಂಫರ್ಟ್) ಒದಗಿಸಿದೆ. ಫ್ರೆಂಚ್ ಸರ್ಕಾರ ಮತ್ತು ಮಾರಾಟಗಾರ ಸಂಸ್ಥೆಯು ಬ್ಯಾಂಕ್ ಖಾತರಿಗಳು ಇಲ್ಲವೇ ಸರ್ಕಾರಿ/ ಸಾರ್ವಭೌಮ  ಖಾತರಿಯನ್ನು ಒದಗಿಸಲು ಒಪ್ಪಿಲ್ಲ. ಬದಲಿಗೆ ಅದು ಪ್ರಂಚ್ ಪ್ರಧಾನಿ ಸಹಿ ಮಾಡಿದಸೌಕರ್ಯ ಪತ್ರವನ್ನು ನೀಡಿದೆ ಎಂದು ಸಿಎಜಿ ವರದಿ ಹೇಳಿತು. ೨೦೦೭ರಲ್ಲಿ ಯುಪಿಎ ಸರ್ಕಾರಕ್ಕೆ ಕೊಟ್ಟಿದ್ದ ಪ್ರಸ್ತಾವದಲ್ಲಿ ಡಸ್ಸಾಲ್ಟ್ ಕಂಪೆನಿಯು ಮುಂಗಡ ಪಾವತಿಗಳಿಗೆ ಸಂಬಂಧಿಸಿದಂತೆ ಶೇಕಡಾ ೧೫ರ ಬ್ಯಾಂಕ್ ಖಾತರಿಯನ್ನು ನೀಡಿತ್ತು, ಅದೇ ರೀತಿ ನಿರ್ವಹಣಾ ಗ್ಯಾರಂಟಿ ಮತ್ತು  ವಾರಂಟಿಗೆ ತಲಾ ಶೇಕಡಾ ೫ರಷ್ಟು ಖಾತರಿಯನ್ನು ನೀಡಿತ್ತು ಎಂದು ಸಿಎಜಿ ವರದಿ ತಿಳಿಸಿತು.  ‘೨೦೧೫ರಲ್ಲಿ ಫ್ರೆಂಚ್ ಮಾರಾಟಗಾರ ಕಂಪೆನಿಯು ಯಾವುದೇ ಹಣಕಾಸು ಅಥವಾ ನಿರ್ವಹಣಾ ಬ್ಯಾಂಕ್ ಖಾತರಿಯ ಪ್ರಸ್ತಾವ ಮಾಡಿಲ್ಲ. ಶೇಕಡಾ ೬೦ರಷ್ಟು ಮುಂಗಡ ಪಾವತಿಯನ್ನು ಫ್ರೆಂಚ್ ಮಾರಾಟಗಾರರೇ ಪಾವತಿ ಮಾಡಬೇಕಾಗಿದ್ದುದರಿಂದ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯವು ಪ್ರಸ್ತಾಪಿತ ಖರೀದಿಗೆ ಸಂಬಂಧಿಸಿದ ಮೌಲ್ಯಕ್ಕೆ ಸರ್ಕಾರಿ/ ಸಾರ್ವಭೌಮ ಖಾತರಿಗೆ ಕೋರಿಕೆ ಮಂಡಿಸಬೇಕು ಎಂದು ಸಲಹೆ ಮಾಡಿತ್ತು ಎಂದು ವರದಿ ಹೇಳಿದೆಆದರೆ ಸಾರ್ವಭೌಮ ಖಾತರಿಯ ವಿಷಯವನ್ನು ೨೦೧೬ರ ಸೆಪ್ಟೆಂಬರಿನಲ್ಲಿ ಭದ್ರತೆಗೆ ಸಂಬಂಧಿಸಿದ ಪ್ರಧಾನಿ ನರೆಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿಯ ಮುಂದಿಟ್ಟಾಗ, ಸಮಿತಿಯು ಕಾನೂನು ಸಚಿವಾಲಯವು ಮುಂದಿಟ್ಟಿದ್ದ ಕಳವಳಗಳನ್ನು ತಳ್ಳಿಹಾಕಿ ಫ್ರೆಂಚ್ ಸರ್ಕಾರದ ಸವಲತ್ತು ಪತ್ರವನ್ನು ಅಂಗೀಕರಿಸಿತು ಎಂದು ವರದಿ ಹೇಳಿತು.  ‘ಫ್ರೆಂಚ್ ಸರ್ಕಾರವು ಈಗಾಗಲೇ ನೀಡಿರುವ ಖಾತರಿಗಳು ದೂರಗಾಮಿ ಮತ್ತು ಅಭೂತಪೂರ್ವವಾದವು ಎಂಬುದಾಗಿ ಹೇಳುವ ಮೂಲಕ ಫ್ರೆಂಚ್ ಸರ್ಕಾರವೂ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯದ ಸಲಹೆಯನ್ನು ಒಪ್ಪಲು ನಿರಾಕರಿಸಿತುಫ್ರೆಂಚ್ ಮಾರಾಟ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿ ಮಾಡಲಾಗುವ ಮುಂಗಡ ಪಾವತಿಗಳನ್ನು ಫ್ರೆಂಚ್ ಸರ್ಕಾರಿ ನಿಯಂತ್ರಣದ ಬ್ಯಾಂಕಿನಲ್ಲಿ ತೆರೆದ ಖಾತೆಗಳ ಮೂಲಕವೇ ಪಡೆಯಬೇಕು ಎಂಬ ಶರತ್ತಿಗೆ ಅಂತರ್ ಸರ್ಕಾರಿ ಒಪ್ಪಂದದಲ್ಲಿ (ಐಜಿಎ) ಒಪ್ಪಿಗೆ ನೀಡಲಾಗಿದೆ ಸಿಎಜಿ  ವರದಿ ಹೇಳಿತುಒಪ್ಪಂದದ ಉಲ್ಲಂಘನೆಯಾದಲ್ಲಿ ಭಾರತವು ಮೊದಲು ಫೆಂಚ್ ಮಾರಾಟಗಾರರ ಜೊತೆಗೆ ನೇರ ಮಧ್ಯಸ್ಥಿಕೆ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕಾಗುತ್ತದೆ ಎಂಬುದುಸೌಕರ್ಯ ಪತ್ರಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದಲ್ಲಿ ಮೂಡಿಬಂದಿರುವ ಟೀಕೆಯಾಗಿದೆಮಧ್ಯಸ್ಥಿಕೆದಾರರು ನೀಡುವ ತೀರ್ಪು ಭಾರತದ ಪರವಾಗಿ ಬಂದರೆ ಮತ್ತು ಫ್ರೆಂಚ್ ಮಾರಾಟಗಾರ ಸಂಸ್ಥೆಯು ತೀರ್ಪನ್ನು ಗೌರವಿಸಲು ಒಪ್ಪದೇ ಇದ್ದಲ್ಲಿ (ಪಾವತಿ ವಿಚಾರದಲ್ಲಿ) ಭಾರತವು ತನ್ನ ಎಲ್ಲ ಕಾನೂನು ಅವಕಾಶಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರವೇ ಫ್ರೆಂಚ್ ಸರ್ಕಾರವು ಮಾರಾಟಗಾರ ಸಂಸ್ಥೆಯ ಪರವಾಗಿ ಪಾವತಿಗಳನ್ನು ಮಾಡುತ್ತದೆ ಎಂದು ವರದಿ ಹೇಳಿತು. ಏನಿದ್ದರೂ, ಯುಪಿಎ ಸರ್ಕಾರ ಒಪ್ಪಿದ್ದಂತೆ ಬ್ಯಾಂಕ್ ಖಾತರಿ ಮತ್ತು ಸಾರ್ವಭೌಮ ಖಾತರಿಗಾಗಿ ಭಾರತವು ಸಹಿ ಮಾಡಿದ್ದಿದ್ದರೆ, ಒಪ್ಪಂದವು ಹೆಚ್ಚು ಭದ್ರವಾಗುತ್ತಿತು. ಏಕೆಂದರೆ ಮಾರಾಟಗಾರನಿಂದ ಉಲ್ಲಂಘನೆಯಾದಲ್ಲಿ ಬ್ಯಾಂಕ್ ಖಾತರಿಯನ್ನು ನೇರವಾಗಿ ಮತ್ತು ತಾನೇ ತಾನಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಿಎಜಿ ವರದಿ ಹೇಳಿತು. ಬಿಜೆಪಿ ಬಂಡಾಯಗಾರರಾದ ಯಶವಂತ ಸಿನ್ಹ ಮತ್ತು ಅರುಣ್ ಶೌರಿ ಅವರು ಪ್ರಶಾಂತ ಭೂಷಣ್ ಅವರ ಜೊತೆಗೆ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.  ಸುಪ್ರೀಂಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ಕಾಲದಲ್ಲಿ ಅಟಾರ್ನಿ ಜನರಲ್ ಅವರು ಏನಾದರೂ ಅಗತ್ಯತೆಗಳು ಉಂಟಾದಾಗ ಖಾತರಿ ಪತ್ರದಂತೆಯೇ ಫ್ರಾನ್ಸ್ ಸರ್ಕಾರದಸೌಕರ್ಯ ಪತ್ರವು ನೆರವಿಗೆ ಬರುತ್ತದೆ ಎಂದು ಹೇಳಿದ್ದರುಅಂತರ್ ಸರ್ಕಾರಿ ಒಪ್ಪಂದದ ಪ್ರಸ್ತಾಪ ಬಂದಾಗ ಕಾನೂನು ಸಚಿವಾಲಯವು ಇದನ್ನು ಅಂಗೀಕರಿಸಿರಲಿಲ್ಲ. ಸವಲತ್ತು ಪತ್ರವು ಕಾನೂನುಬದ್ಧ ಪತ್ರವಲ್ಲ, ಭವಿಷ್ಯದಲ್ಲಿ ಯಾವುದಾದರೂ ಮಿತ್ರನಂತೆ ವರ್ತಿಸದ ಸರ್ಕಾರ ಇದನ್ನುಸಂಪೂರ್ಣವಾಗಿ ಬದಿಗೊತ್ತಬಹುದು ಎಂಂದು ಕಾನೂನು ಸಚಿವಾಲಯ ಅಭಿಪ್ರಾಯ ಪಟ್ಟಿತ್ತುಮಾಜಿ ರಕ್ಷಣಾ ಸಚಿವ ಪಿ. ಚಿದಂಬರಂ ಅವರು ವರದಿ ಮಂಡನೆಯ ಬಳಿಕ ಭಾರತವು ದೃಢವಾಗಿ ನಿಂತು ಸೌಕರ್ಯ ಪತ್ರದ ಬದಲಿಗೆ ಸಾರ್ವಭೌಮ ಖಾತರಿಯನ್ನು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

2019: ನವದೆಹಲಿ: ಬಹುಮತದ ಸರ್ಕಾರ ಇದ್ದಾಗ ಭಾರತಕ್ಕೆ ವಿಶ್ವ ಮಾನ್ಯತೆ ಲಭಿಸುತ್ತದೆ, ಛಿದ್ರ ಜನಾದೇಶವಿದ್ದಾಗ ಜಾಗತಿಕವಾಗಿ ಭಾರತಕ್ಕೆ ಹಿನ್ನಡೆಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಹೇಳಿದರು. ಮುಂಬರುವ ಮಹಾಚುನಾವಣೆಗೆ ಮುಂಚಿತವಾಗಿ ಲೋಕಸಭೆಯಲ್ಲಿ ತಮ್ಮ ಕೊನೆಯ ಭಾಷಣ ಮಾಡಿದ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಎಲ್ಲ ಕೆಲಸಗಳ ಶ್ರೇಯಸ್ಸನ್ನು ವಿಪಕ್ಷಗಳ ಜೊತೆಗೂ ಹಂಚಿಕೊಂಡರು, ಇದೇ ವೇಳೆಯಲ್ಲಿ ವಿಪಕ್ಷಗಳ ವಿರುದ್ಧ ವಾಗ್ಬಾಣಗಳನ್ನೂ ಬಿಟ್ಟರು.
ಲೊಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಶೇಷವಾಗಿ ಹೊಗಳಿದ ಪ್ರಧಾನಿ, ಸದನ ಕಲಾಪದಲ್ಲಿ ನಿಯಮಿತವಾಗಿ ಪಾಲ್ಗೊಳ್ಳೂವ ಹಿರಿಯ ಸದಸ್ಯ ಎಲ್.ಕೆ. ಅಡ್ವಾಣಿ ಅವರ ನಡೆಯನ್ನು ಅನುಸರಿಸಿದ ಖರ್ಗೆ ಅವರಿಂದ ನಾವೆಲ್ಲರೂ ಪಾಠ ಕಲಿಯಬೇಕು ಎಂದು ಹೇಳಿದರು. ಇಂದು  ಭಾರತವು ಜಗತ್ತಿನಲ್ಲಿ ೬ನೇ ದೊಡ್ಡ ಆರ್ಥಿಕತೆಯಾಗಿದೆ ಮತ್ತು ಟ್ರಿಲಿಯನ್ (೫೦೦೦ ಕೋಟಿ) ಡಾಲರ್ ಆರ್ಥಿಕತೆಯಾಗುವ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಮೋದಿ ವಿವರಿಸಿದರು. ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ’ಈಗ ರಾಷ್ಟ್ರದಲ್ಲಿ ಆತ್ಮವಿಶ್ವಾಸ ಮೂಡಿದೆ. ವಿಶ್ವಾದ್ಯಂತ ಬಹುತೇಕ ಸಂಘಟನೆಗಳು ಭಾರತದ ಬಗ್ಗೆ ಮಾತನಾಡುತ್ತಿವೆ. ಭಾರತವು ಡಿಜಿಟಲ್ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದೆ. ನಮ್ಮ  ’ಮೇಕ್ ಇಂಡಿಯಾ ಉಪಕ್ರಮಗಳಿಂದಾಗಿ ಈಗ ನಾವು ಆರ್ಥಿಕ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದೇವೆ ಎಂದು ಪ್ರಧಾನಿ ನುಡಿದರು.  ವಿಶ್ವವು ಪೂರ್ಣ ಬಹುಮತದ ಸರ್ಕಾರವನ್ನು ಮಾನ್ಯ ಮಾಡುತ್ತದೆ. ಛಿದ್ರ ಜನಾದೇಶಗಳಿಂದಾಗಿ ಭಾರತವು ಜಾಗತಿಕವಾಗಿ ದೀರ್ಘಕಾಲ ತೊಂದರೆ ಅನುಭವಿಸಿದೆ. ಈಗ ಬಹುಮತದ ಸರ್ಕಾರದ ಕಾರಣ ವಿಶ್ವವು ಭಾರತವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಮೋದಿ ಹೇಳಿದರು. ಕಾಂಗ್ರೆಸ್ಸೇತರಗೋತ್ರ ಸರ್ಕಾರವೊಂದು ಬಹುಮತದೊಂದಿಗೆ ರಚನೆಯಾದದ್ದು ಕಳೆದ ೩೦ವರ್ಷಗಳ ಅವಧಿಯಲ್ಲಿ ಇದೇ ಪ್ರಥಮ. ಹಿಂದೆ ಕಾಂಗ್ರೆಸ್ಸೇತರಗೋತ್ರ ಸರ್ಕಾರವನ್ನು ಅಟಲ್ ಬಿಹಾರಿ ವಾಜಪೇಯಿ ಅವರು ರಚಿಸಿದ್ದರು. ೨೦ ವರ್ಷದ ಬಳಿಕ ಇನ್ನೊಂದು ಕಾಂಗ್ರೆಸ್ಸೇತರಗೋತ್ರ ಸರ್ಕಾರ ೨೦೧೪ರಲ್ಲಿ ರಚನೆಯಾಯಿತು ಎಂದು ಅವರು ನುಡಿದರು. ನಮಗೆ ಮತ ನೀಡಿದ ರಾಷ್ಟ್ರದ ೧೨೫ ಕೋಟಿ ಜನರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ ಎಂದು ಮೋದಿ ನುಡಿದರು. ವಿಶ್ವವು ಈಗ ಭಾರತದ ಜೊತೆಗೆ ಕುಳಿತುಕೊಳ್ಳುತ್ತದೆ ಮತ್ತು ಭಾರತದ ಸಾಧನೆಗಳಿಂದ ಸ್ಫೂರ್ತಿ ಪಡೆದುಕೊಳ್ಳುತ್ತಿದೆ. ಇದು ಸಾಧ್ಯವಾದದ್ದು ಬಹುಮತದ ಸರ್ಕಾರ ಇದ್ದ ಕಾರಣ ಎಂದು ಮೋದಿ ಹೇಳಿದರು. ಸರ್ಕಾರದ ಅವಧಿಯಲ್ಲಿ ೨೧೯ರಷ್ಟು ಮಸೂದೆಗೆಳು ಸಂಸತ್ತಿನಲ್ಲಿ ಮಂಡನೆಯಾದವು. ಅವುಗಳ  ಪೈಕಿ ೨೦೩ ಮಸೂದೆಗಳು ಅನುಮೋದನೆ ಪಡೆದವು ಎಂದು ನುಡಿದ ಪ್ರಧಾನಿ, ಕಾನೂನುಗಳಾಗಿ ಮಾರ್ಪಟ್ಟ ಮಸೂದೆಗಳ ಬಗ್ಗೆ ಮಾತನಾಡುತ್ತಾ ಕಾಳಧನ ಮತ್ತು ಭ್ರಷ್ಟಾಚಾರದ ವಿರುದ್ಧ ಅಂಗೀಕರಿಸಲಾದ ಮಸೂದೆಗಳನ್ನು ಉಲ್ಲೇಖಿಸಿದರು. ೧೬ನೇ ಲೋಕಸಭೆಯ ಸದಸ್ಯರು ಭವಿಷ್ಯದಲ್ಲಿ ಕಾನೂನು ರೂಪಿಸಿದ್ದಕ್ಕಾಗಿ ಸ್ಮರಣೆಯಲ್ಲಿ ಉಳಿಯುತ್ತಾರೆ. ಕಾಳಧನ ಮತ್ತು ಭ್ರಷ್ಟಾಚಾರದ ವಿರುದ್ಧ ಕಾನೂನು ರೂಪಿಸಿ ರಾಷ್ಟ್ರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿ ಇತರ ದೇಶಗಳಿಗೆ ಪರಾರಿಯಾದವರ ವಿರುದ್ಧ ಕ್ರಮ ಕೈಗೊಂಡದ್ದಕ್ಕಾಗಿ ಸದನ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಧಾನಿ ಹೇಳಿದರು.  ೧೪೦೦ಕ್ಕೂ  ಹೆಚ್ಚು ನಿಷ್ಕ್ರಿಯ ಕಾನೂನುಗಳನ್ನು ರದ್ದು ಪಡಿಸುವ ನಿಟ್ಟಿನಲ್ಲಿ ಸದನದ ಸದಸ್ಯರು ಒಟ್ಟಾಗಿ ಕೆಲಸ ಮಾಡಿದ್ದಾರೆ ಎಂದು ಮೋದಿ ಹೊಗಳಿದರು. ಆದರೆ ಅವರ ಲೋಕಸಭೆಯಲ್ಲಿನ ಭಾಷಣವು ತಮ್ಮ ಸರ್ಕಾರದ ಐದು ವರ್ಷಗಳ ಸಾಧನೆಗಳ ನೆನಪು ಮಾಡುವುದಕ್ಕೆ ಮಾತ್ರವೇ ಮೀಸಲಾಗಿರಲಿಲ್ಲ. ವಿರೋಧ ಪಕ್ಷಗಳನ್ನು ಹೊಗಳುತ್ತಲೇ ಅವರತ್ತ ವಾಗ್ಬಾಣಗಳನ್ನೂ ಮೋದಿ ಎಸೆದರು. ಹೆಸರು ಪ್ರಸ್ತಾಪಿಸದೆಯೇ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮಗೆ ಮಾತನಾಡಲು ಅವಕಾಶ ನೀಡಿದರೆ ಭೂಕಂಪವಾಗುತ್ತದೆ ಎಂಬುದಾಗಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿಭೂಕಂಪವಾಗಲಿದೆ ಎಂಬ ಮಾತುಗಳನ್ನು  ನಾವು ಕೇಳಿದ್ದೆವು. ಆದರೆ ಅಂತಹದ್ದೇನೂ ನಡೆಯಲಿಲ್ಲ. ಕಾಗದದ ವಿಮಾನಗಳು  ಸದನದಲ್ಲಿ ಹಾರಾಡಿದ್ದನ್ನು ನಾವು ಕಂಡೆವು. ಆದರೆ ಪ್ರಜಾಪ್ರಭುತ್ವ ಮತ್ತು ಲೋಕಸಭೆಯ ಗೌರವ ಎಷ್ಟೊಂದು ಉನ್ನತವಾದುದು ಎಂದರೆ ಅದು ಭೂಕಂಪ ಮತ್ತು ವಿಮಾನಗಳನ್ನು ಜೀರ್ಣಿಸಿಕೊಂಡಿತು ಮತ್ತು ಅವು ಉತ್ತುಂಗಕ್ಕೆ ಏರಲೇ ಇಲ್ಲ ಎಂದು ಹೇಳಿದರು. ಖರ್ಗೆಗೆ ಶ್ಲಾಘನೆ: ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಅವರನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಗಂಟಲು ನೋವಿನ ಕಾರಣ ಖರ್ಗೆಯವರು ಹೆಚ್ಚು ಮಾತನಾಡಲಾಗುತ್ತಿಲ್ಲ ಎಂಬುದನ್ನು ತಿಳಿದು ದುಃಖ ವ್ಯಕ್ತ ಪಡಿಸಿದರು.  ‘ಅವರು ಈದಿನ ಮಾತನಾಡಿದ್ದರೆ ಒಳ್ಳೆಯದಿತ್ತು. ನಾನು ಹಲವಾರು ಬಾರಿ ಅವರ ಮಾತುಗಳನ್ನು ಕೇಳಿರಲಿಲ್ಲ, ಆದರೆ ನಂತರ ಅವರ ಮಾತುಗಳನ್ನು ವಿವರವಾಗಿ ಓದಿಕೊಳ್ಳುತ್ತಿದ್ದೆ. ಇದು ಮುಖ್ಯ. ಅವರ ಮಾತುಗಳು ನನ್ನನ್ನು ಚಿಂತನೆಗೆ ಹಚ್ಚುತ್ತಿದ್ದವು, ಮೂಲಕ ನನ್ನ ಭಾಷಣಗಳಿಗೆ ಅವರ ಪದಗಳಿಂದ ನನಗೆ ಇಂಧನ ಲಭಿಸುತ್ತಿತ್ತು. ನಾನು ಖರ್ಗೆಯವರಿಗೆ ಆಭಾರಿಯಾಗಿದ್ದೇನೆ ಎಂದು ಮೋದಿ ನುಡಿದರು. ಸಂಸತ್ತು ಸಮಾವೇಶಗೊಂಡಾಗಲೆಲ್ಲ ಹಾಜರಿದ್ದು, ಕಲಾಪದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಹಿರಿಯ ನಾಯಕ  ಎಲ್.ಕೆ. ಆಡ್ವಾಣಿ ಅವರ ಮಾರ್ಗವನ್ನು ಅನುಸರಿಸುತ್ತಿರುವುದಕ್ಕಾಗಿ ಖರ್ಗೆ ಅವರನ್ನು ಮೋದಿ ಶ್ಲಾಘಿಸಿದರು.  ‘ನಾವು ಶಾಸನಕರ್ತರು ಖರ್ಗೆ ಜಿ ಅವರಿಂದ ಕಲಿಯಬೇಕು. ಸಾರ್ವಜನಿಕ ಪ್ರತಿನಿಧಿಯಾಗಿ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ವಿಧಾನ ಶ್ಲಾಘನೀಯ ಎಂದು ಮೋದಿ ನುಡಿದರು. ಟಿಡಿಪಿ ಸಂಸದ ನರಮಲ್ಲಿ ಶಿವಪ್ರಸಾದ್ ಅವರು ಸಂಸತ್ತಿನ ಸಮಾವೇಶಗಳಲ್ಲಿ ಪ್ರತಿದಿನವೂ ವಿಭಿನ್ನ ಉಡುಪು ಧರಿಸಿ ಹಾಜರಾಗುತ್ತಿದ್ದುದನ್ನು ಉಲ್ಲೇಖಿಸಿದ ಮೋದಿಅವರ ಕಡೆ ಗಮನ ಹರಿದೊಡನೆಯೇ ಎಲ್ಲ ಉದ್ವಿಗ್ನತೆಗಳೂ ಮಾಯವಾಗುತ್ತದೆ ಎಂದು ಹೇಳಿದರು. ಇದಕ್ಕೆ ಮುನ್ನ ಸದನದಲಿ ಮಾತನಾಡಿದ್ದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಸೋನಿಯಾ ಅವರ ಪಕ್ಕದಲ್ಲೇ ನಿಂತುಕೊಂಡು ಮಾತನಾಡಿ, ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ತಮ್ಮ ಬೆಂಬಲಿಗರೊಂದಿಗೆ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿ ಎಂಬುದಾಗಿ ಹೇಳಿದರು. ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಅದನ್ನು ಸ್ವಾಗತಿಸಿದರು.
ತಮ್ಮ ಭಾಷಣದಲ್ಲಿ ಇದನ್ನೂ  ಪ್ರಸ್ತಾಪಿಸಿದ ಪ್ರಧಾನಿ ಮೋದಿ ಮುಲಾಯಂ ಸಿಂಗ್ ಅವರತ್ತ ತಿರುಗಿಮಾಡಬೇಕಾದ ಕೆಲಸಗಳು ತುಂಬಾ ಇವೆ. ಮುಲಾಯಂ ಸಿಂಗ್ ಜಿ ಅವರು ಅವರ ಆಶೀರ್ವಾದ ನೀಡಿದ್ದಾರೆ. ನಾನು ಅವರಿಗೆ ಅತ್ಯಂತ ಆಭಾರಿಯಾಗಿದ್ದೇನೆ ಎಂದು ಹೇಳಿ ಅವರಿಗೆ ಕೈಮುಗಿದರು.
                                                       
2019: ಪ್ರಯಾಗರಾಜ್: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತರ ಹಲವು ನಾಯಕರೊಂದಿಗೆ ೪೯ ದಿನಗಳ ಕುಂಭಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗರಾಜ್ ನಗರದ ಸಂಗಮದಲ್ಲಿ  ಪವಿತ್ರ ಸ್ನಾನ ನೆರವೇರಿಸಿದರು. ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಅವರು ಸಂಗಮದಲ್ಲಿಆರತಿಯನ್ನೂ ಮಾಡಿದರು. ಭಾರತೀಯ ಜನತಾ ಪಕ್ಷದ ಮುಖ್ಯಸ್ಥರು ಕುಂಭದಲ್ಲಿ ಪ್ರಮುಖ ಸಂತರು ಮತ್ತು ಧಾರ್ಮಿಕ ನಾಯಕರನ್ನು ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ಇತರ ನಾಯಕರ ಜೊತೆಗೆ ಭೇಟಿ ಮಾಡುವ ನಿರೀಕ್ಷೆಯಿದೆ.
೨೦೧೯ರ ಜನವರಿ ೧೫ರಂದು ಕುಂಭಮೇಳದ ಮೊದಲ ಶಾಹಿಸ್ನಾನದ ದಿನ ಸಾಧು ಸಂತರು ಸೇರಿದಂತೆ ಸಹಸ್ರಾರು ಭಕ್ತರು ಶಿವನ ಪವಿತ್ರ ನಾಮೋಚ್ಛಾರ ಮಾಡುತ್ತಾ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಮುಳುಗು ಹಾಕಿದ್ದರು ಬಳಿಕ ಇಲ್ಲಿಯವರೆಗೆ . ಕಿಮೀ ಉದ್ದದ ೩೫ ಸ್ನಾನ ಘಟ್ಟಗಳಲ್ಲಿ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ನೆರವೇರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಕುಂಭಮೇಳದಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಸಕಲ ಪಾಪಗಳ ನಿವಾರಣೆಯಾಗುತ್ತದೆ ಮತ್ತು ತನ್ಮೂಲಕ ಜೀವನ್ಮರಣ ಚಕ್ರದಿಂದ ಮುಕ್ತಿ ಲಭಿಸುತ್ತದೆ  ಎಂಬುದು ಹಿಂದುಗಳ ನಂಬಿಕೆಯಾಗಿದೆ.
ಕುಂಭಮೇಳದ ಸಲುವಾಗಿ ಪ್ರಯಾಗರಾಜ್ ನಗರದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಮತ್ತು ಅರೆ ಸೇನಾ ಪಡೆಗಳ ನಿಯೋಜನೆ ಸೇರಿದಂತೆ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ೨೦,೦೦೦ಕ್ಕೂ ಹೆಚ್ಚು ಮಂದಿ ಪೊಲೀಸರು, ಅರೆ ಸೇನಾಪಡೆ ಮತ್ತು ಇತರ ಸಿಬ್ಬಂದಿಯನ್ನು ಭಕ್ತರ ಭದ್ರತೆ ಸಲುವಾಗಿ ನೇಮಿಸಲಾಗಿತ್ತು. ಶಾ ಅವರಿಗಿಂತ ಮೊದಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡಾ ಸಂಗಮದಲ್ಲಿ ಕುಂಭಮೇಳದ ಮೊದಲ ದಿನವೇ ಪವಿತ್ರ ಸ್ನಾನ ನೆರವೇರಿಸಿ ತಾವು ಮುಳುಗು ಹಾಕುತ್ತಿರುವ ಚಿತ್ರವನ್ನುಹರ ಹರ ಗಂಗೆ ಅಡಿಬರಹದೊಂದಿಗೆ ಟ್ವೀಟ್ ಮಾಡಿದ್ದರು. 


 2018: ನವದೆಹಲಿ:  ಒರು ಅಡಾರ್ ಲವ್’ ಮಲಯಾಳಿ ಚಿತ್ರದ  ಒಂದೇ ಒಂದು ಕಣ್ಸನ್ನೆಯಿಂದ ಕ್ಷಿಪ್ರವಾಗಿ ಇಂಟರ್ ನೆಟ್ ಮೂಲಕ ಜಗತ್ತಿನಾದ್ಯಂತ ವೈರಲ್ ಆದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್  ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಹಾಕುವಲ್ಲಿ ಇತಿಹಾಸ ಸೃಷ್ಟಿಸಿದರು. ಓಮರ್ ಲಾಲು ಅವರ ನಿರೀಕ್ಷಿತ ಒರು ಅಡಾರ್ ಲವ್ ಸಿನಿಮಾದ ಮಾಣಿಕ್ಯ ಮಲರಯಾ ಪೂವಿ ಹಾಡಿನ ಸಣ್ಣ ತುಣುಕೊಂದು ಪ್ರಿಯಾಳನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ಸೆಲೆಬ್ರಿಟಿಯನ್ನಾಗಿ ಮಾಡಿಬಿಟ್ಟಿತು. 18 ವರ್ಷದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಹಾಲಿವುಡ್ ಸ್ಟಾರ್ ಗಳಾದ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲಿ ಜೆನ್ನರ್ ಮತ್ತು ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸಾಲಿನಲ್ಲಿ ಬಂದು ನಿಂತರು.   ಹಾಡನ್ನು ವಿನೀತ್ ಶ್ರೀನಿವಾಸನ್ ಹಾಡಿದ್ದು, ಚಿತ್ರದ ಹಾಡನ್ನು ಶಾನ್ ರಹಮಾನ್ ಸಂಯೋಜಿಸಿದ್ದರು.

 2018: ಮುಂಬೈ: ಭಾರತದ ಸ್ಕೈಡೈವಿಂಗ್ ಪಟು, ಶೀತಲ್ಮಹಾಜನ್ ಥಾಯ್ಲೆಂಡಿನ ಪಟ್ಟಾಯದಲ್ಲಿರುವ ಥಾಯ್ ಸ್ಕೈಡೈವಿಂಗ್ ಕೇಂದ್ರದಲ್ಲಿ ಫೆ.11ರ ಭಾನುವಾರ ಮಹಾರಾಷ್ಟ್ರದ ಸಾಂಪ್ರದಾಯಿಕ ನೌವಾರಿ ಸೀರೆ (ಒಂಭತ್ತು ಗಜ) ಉಟ್ಟು, 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಮಾಡುವ ಮೂಲಕ ಭಾರಿ ಸಾಧನೆ ಮಾಡಿದರು. ಏನಾದರೂ ವಿಭಿನ್ನವಾದುದನ್ನು ಮಾಡಲು ಬಯಸಿದ್ದೆ. ಅದನ್ನು ನೌವಾರಿ ಸೀರೆ ಉಟ್ಟು ಸ್ಕೈಡೈವಿಂಗ್ ಮಾಡುವ ಮೂಲಕ ಸಾಧಿಸಿದ್ದೇನೆ. ಇದು ಬರಲಿರುವ ವಿಶ್ವ ಮಹಿಳಾ ದಿನಕ್ಕೆ ನನ್ನ ಕಾಣಿಕೆಎಂದು 37 ವರ್ಷದ ಶೀತಲ್ ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದರು.  ಪದ್ಮಶ್ರೀ ಪುರಸ್ಕೃತರಾಗಿರುವ ಪುಣೆಯ ಶೀತಲ್ ಮಹಾಜನ್, ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ ಸೇರಿದಂತೆ ವಿಶ್ವದ ವಿವಿಧ ಭಾಗಗಳಿಂದ ಸ್ಕೈ ಡೈವಿಂಗ್ ಮಾಡಿದ್ದರು. 17 ರಾಷ್ಟ್ರೀಯ ದಾಖಲೆ ಮತ್ತು ಆರು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದರು. ಇವರ ಆಸಕ್ತಿ ಮತ್ತು ಸಾಧನೆಯಿಂದಾಗಿ 2007ರಲ್ಲಿ ಭಾರತೀಯ ವಾಯು ಪಡೆಯಲ್ಲಿ ಸ್ಕೈ ಡೈವಿಂಗ್ ಮೂಲ ಅಂಶಗಳ ಕುರಿತ ಕೋರ್ಸ್ಮಾಡಲು ಅವಕಾಶ ದೊರಕಿತು. ಮುಂದಿನ ದಿನಗಳಲ್ಲಿ ಮೌಂಟ್ಎವರೆಸ್ಟ್ಪರ್ವತದಿಂದ ಸ್ಕೈಡೈವಿಂಗ್ಮಾಡುವ ಯೋಜನೆ ಇಟ್ಟುಕೊಂಡಿದ್ದಾರೆ.

2018: ಇಸ್ಲಾಮಾಬಾದ್‌ : ಅಮೆರಿಕದ ಒತ್ತಡಕ್ಕೆ ಮಣಿದು ಪಾಕಿಸ್ಥಾನ ಕಳೆದ ವಾರ ಸದ್ದು ಗದ್ದಲವಿಲ್ಲದೆ ಮುಂಬಯಿ ಉಗ್ರ ದಾಳಿಯ ಮಾಸ್ಟರ್ಮೈಂಡ್ಹಫೀಜ್ಸಯೀದ್ನೇತೃತ್ವದ ಜಮಾತ್ಉದ್ದವಾ ಸಂಘಟನೆಯನ್ನು ನಿಷೇಧಿತ ಉಗ್ರ ಪಟ್ಟಿಗೆ ಸೇರಿಸಿತು. ಅಮೆರಿಕ ಹಿಂದೆಯೇ ಪಾಕ್ಮೂಲದ ಜಮಾತ್ಉದ್ದವಾ ಸಂಘಟನೆಯನ್ನು ಉಗ್ರ ಪಟ್ಟಿಗೆ ಸೇರಿಸಿ ನಿಷೇಧಿಸಿತ್ತು. ಈಗ ಪಾಕಿಸ್ಥಾನ ಕೂಡ ಜಮಾತ್ಸಂಘಟನೆಯನ್ನು ಉಗ್ರ ಪಟ್ಟಿಗೆ ಸೇರಿಸಿ ನಿಷೇಧ ಹೇರುವ ಮೂಲಕ ಅಮೆರಿಕದ ಕಟ್ಟು ನಿಟ್ಟಿನ ಸೂಚನೆಗೆ ತಕ್ಕಂತೆ ನಡೆದುಕೊಂಡಿತು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 27 ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಯಲ್ಲಿ ಈಗಾಗಲೇ ಇರುವ ಪಾಕ್ಮೂಲದ ಫರಾಹ್ ಇನ್ಸಾನಿಯತ್ಫೌಂಡೇಶನ್‌ (ಎಫ್ಐಎಫ್), ಲಷ್ಕರ್ ತೊಯ್ಬಾ ಮತ್ತು ಹರ್ಕತ್ಉಲ್ಮುಜಾಹಿದೀನ್ಮೊದಲಾದ ಹಲವಾರು ಉಗ್ರ ಸಂಘಟನೆಗಳಿಗೆ  ಈಗ ಪಾಕ್ಸರ್ಕಾರದಿಂದ ನಿಷೇಧದ ಬಿಸಿ ಮುಟ್ಟಿತು.  ಉಗ್ರ ನಿಗ್ರಹ ಕಾಯಿದೆ (ಎಟಿಎ) ಗೆ ಮಾಡಿರುವ ತಿದ್ದುಪಡಿಯಿಂದಾಗಿ ಈಗಿನ್ನು ತತ್ಕ್ಷಣದಿಂದಲೇ ನಿಷೇಧಿಕ ಉಗ್ರ ಸಂಘಟನೆಗಳ ಆಸ್ತಿಪಾಸ್ತಿಯನ್ನು ಪಾಕ್ಸರಕಾರ ಮುಟ್ಟುಗೋಲು ಹಾಕಲಿದೆಪಾಕ್ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ ಉಗ್ರ ನಿಗ್ರಹ ವಿಧೇಯಕಕ್ಕೆ ಅಧ್ಯಕ್ಷ ಮಮ್ನೂನ್‌ ಹುಸೇನ್ಅವರು ಕಳೆದ ಶುಕ್ರವಾರ (ಫೆ.9) ಅನುಮೋದನೆ ನೀಡಿದರು ಮತ್ತು ಅದನ್ನ ಅಂದೇ ಸಂಜೆ ಸಾರ್ವಜನಿಕವಾಗಿ ಪ್ರಕಟಿಸಲಾಯಿತು.
2018: ಕೋಚಿ: ಕೋಚಿಯ ಶಿಪ್ಯಾರ್ಡ್ನಲ್ಲಿ  ಭೀಕರ ಅವಘಡವೊಂದು ಸಂಭವಿಸಿ,, ಐವರು ದಾರುಣವಾಗಿ ಸಾವನ್ನಪ್ಪಿ 11ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು. ಓಎನ್ಜಿಸಿಯ ಕಡಲಾಚೆಯ ಡ್ರಿಲ್ಲಿಂಗ್ಘಟಕದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವ ವೇಳೆ ನೀರಿನ ಟ್ಯಾಂಕ್ಸ್ಫೋಟಗೊಂಡು ಅವಘಡ ಸಂಭವಿಸಿತು ಎಂದು ವರದಿ ತಿಳಿಸಿತು.  ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಹೇಳಿತು.
2018: ಕಾಶ್ಮೀರ : ''ಶ್ರೀನಗರದ ಕರಣ್ನಗರದಲ್ಲಿನ ಸಿಆರ್ಪಿಎಫ್ ಕ್ಯಾಂಪ್ಮೇಲೆ ಲಷ್ಕರ ತೊಯ್ಬಾ ಉಗ್ರರು ದಾಳಿಗೆ ಯತ್ನಿಸಿದ್ದರು. ಅವರನ್ನು 24 ತಾಸುಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಯಿತು'' ಎಂದು ಕಾಶ್ಮೀರ ಐಜಿಪಿ ಎಸ್ಪಿ ಪಾಣಿ ಅವರು ಶ್ರೀನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು ಕಾರ್ಯಾಚರಣೆಯಲ್ಲಿ ಓರ್ವ ಸಿಆರ್ಪಿಎಫ್ ಯೋಧ ಗಾಯಗೊಂಡಿದ್ದು ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಪಾಣಿ ತಿಳಿಸಿದರು. ಸಿಆರ್ಪಿಎಫ್ ಕ್ಯಾಂಪ್ಮೇಲೆ ಲಷ್ಕರ್ಉಗ್ರರ ದಾಳಿ ಯತ್ನ ಪೆ.12ರ ಸೋಮವಾರ ಆರಂಭಗೊಂಡಿತ್ತು. ಒಂದು ದಿನ ಪೂರ್ತಿ ಉಗ್ರರೊಂದಿಗೆ ಗುಂಡಿನ ಕಾಳಗ ನಡೆದಿತ್ತು. ಕರಣ್ನಗರ ಪ್ರದೇಶದಲ್ಲಿನ ನಿರ್ಮಾಣ ಹಂತದಲ್ಲಿದ್ದ ಕಟ್ಟಡದೊಳಗೆ ಉಗ್ರರು ಅಡಗಿಕೊಂಡಿದ್ದರು. ಅವರನ್ನು ಬೆನ್ನಟ್ಟಿ ಗುಂಡಿಟ್ಟು ಸಾಯಿಸಲಾಯಿತು ಎಂದು ಪಾಣಿ ಹೇಳಿದರು ಮೊದಲು ಸಂಜ್ವಾನಾ ಮತ್ತು ಕರಣ್ನಗರ ಸಿಆರ್ಪಿಎಫ್ ಶಿಬಿರದ ಮೇಲಿನ ಉಗ್ರ ದಾಳಿ ತನ್ನದೇ ಕೃತ್ಯ ಎಂದು ಜೈಶ್ ಮೊಹಮ್ಮದ್ಹೇಳಿಕೊಂಡಿತ್ತುಫೆ.10ರ  ಶನಿವಾರ ಸಂಜ್ವಾನಾ ಸೇನಾ ಶಿಬಿರದ ಮೇಲೆ ನಡೆದಿದ್ದ ದಾಳಿಯು ಉರಿ ಸೇನಾ ಶಿಬಿರದ ಮೇಲೆ ನಡೆದಿದ್ದ  ದಾಳಿಯ ಬಳಿಕದ ಅತ್ಯಂತ ಘೋರ ಉಗ್ರ ದಾಳಿ ಎನಿಸಿತ್ತು.

2017: ಬೆಂಗಳೂರು:  ಕರ್ನಾಟಕ ವಿಧಾನ ಸಭೆ  ಈದಿನ ಕಂಬಳ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿತು. ಇದರೊಂದಿಗೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯ ಪರ ನಡೆದ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿತು. ಇದೇ ವೇಳೆ ಉತ್ತರ ಕರ್ನಾಟಕ ಭಾಗದ ಎತ್ತಿನಗಾಡಿ ಓಟಕ್ಕೂ ಕಾನೂನು ಬಲ ಸಿಕ್ಕಿತು. ಪ್ರಾಣಿ ಹಿಂಸೆ ಎನ್ನುವ ಅಂಶವನ್ನಾಧರಿಸಿ ಸಾಂಪ್ರದಾಯಿಕ ಕ್ರೀಡೆಗಳಿಗೆ ಹೈಕೋರ್ಟ್ ನಿಷೇಧ ಹೇರಿತ್ತು. ತಮಿಳುನಾಡಿನ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಜಲ್ಲಿಕಟ್ಟು ಮೇಲಿನ ನಿಷೇಧದ ವಿರುದ್ಧ ನಡೆದ ಹೋರಾಟಕ್ಕೆ ಜಯ ಸಂದ ಹಿನ್ನೆಲೆಯಲ್ಲಿ ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಕರ್ನಾಟಕದಲ್ಲೂ ಭಾರಿ ಪ್ರತಿಭಟನೆ ನಡೆದಿತ್ತು. ಈದಿನ ವಿಧಾನಸಭೆಯಲ್ಲಿ ಪಶು ಸಂಗೋಪನಾ ಸಚಿವ . ಮಂಜು ಅವರು ಪ್ರಾಣಿಗಳ ಹಿಂಸೆ ತಡೆ ತಿದ್ದುಪಡಿ ಕಾಯ್ದೆ ಮಂಡಿಸಿದರು. ಇದಕ್ಕೆ  ಎಲ್ಲ ಸದಸ್ಯರೂ ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದರು ಜಲ್ಲಿಕಟ್ಟು ಕ್ರೀಡೆಗಾಗಿ ತಮಿಳುನಾಡು ಜನ ನಡೆಸಿದ ಹೋರಾಟದ ದಾರಿಯನ್ನೇ  ಅನುಸರಿಸಿ ಕಂಬಳ ಮತ್ತು ಎತ್ತಿನಗಾಡಿ ಓಟಕ್ಕಾಗಿ ಜನ ಬೀದಿಗಿಳಿಯುವ ಸಾಧ್ಯತೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡು 1960ರಲ್ಲಿ ಜಾರಿಗೆ ಬಂದಿದ್ದ ಪ್ರಾಣಿ ಹಿಂಸೆ ತಡೆ ಕಾಯ್ದೆಯಲ್ಲಿ ಒಂದಿಷ್ಟು ತಿದ್ದುಪಡಿ ತಂದು ಮಂಡಿಸಿತು.
2017: ಚೆನ್ನೈಶಶಿಕಲಾ ನಟರಾಜನ್ಬೆಂಬಲಿಗರು ಉಳಿದಿರುವ ರೆಸಾರ್ಟ್ನಿಂದ ತಪ್ಪಿಸಿಕೊಂಡು ಬಂದು ನಿಯೋಜಿತ ಮುಖ್ಯಮಂತ್ರಿ .ಪನ್ನೀರ್ಸೆಲ್ವಂ ಬಣ ಸೇರಿರುವ ಮತ್ತೊಬ್ಬ ಶಾಸಕ ಶರವಣನ್‌  ಅವರು ಶಶಿಕಲಾ ಬೆಂಬಲಿಗರು ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದ ನಂತರ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಕೂವತ್ತೂರ್ ಗೋಲ್ಡನ್ಬೇ ರೆಸಾರ್ಟ್ನಲ್ಲಿ ಎಐಡಿಎಂಕೆ ಶಾಸಕರು ಉಳಿದುಕೊಂಡಿದ್ದು, ಅಲ್ಲಿಂದ ತಪ್ಪಿಸಿಕೊಂಡು ಬಂದಿರುವ ಶರವಣನ್‌, ‘ಶಶಿಕಲಾ ಬೆಂಬಲಿಗರು ಬೆದರಿಕೆ ಒಡ್ಡಿದ್ದರು ಹಾಗೂ ಕಿರುಕುಳ ನೀಡುತ್ತಿದ್ದರುಎಂದು ಹೇಳಿದರು. ಈ ಘಟನೆ ತಮಿಳುನಾಡು ರಾಜಕೀಯದಲ್ಲಿ ಮತ್ತಷ್ಟು ಸಂಚಲನ ಉಂಟುಮಾಡಿತು.  ತಮಿಳುನಾಡು ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವುಗಳು ಉಂಟಾಗುತ್ತಿದ್ದು, ದಿನದಿಂದ ದಿನಕ್ಕೆ ಪನ್ನೀರ್ಸೆಲ್ವಂ ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 8 ಮಂದಿ ಶಾಸಕರು ಶಶಿಕಲಾ ಬಣದಿಂದ ಜಾರಿಕೊಂಡರು..
 2017: ನವದೆಹಲಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಅಕ್ರಮ
ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 14 ಫೆಬ್ರುವರಿ 2017ರ ಮಂಗಳವಾರ ಬೆಳಗ್ಗೆ 10.30 ಕ್ಕೆ ತೀರ್ಪು ಪ್ರಕಟಿಸಲಿದೆ. ತೀರ್ಪಿನ ಆಧಾರದ ಮೇಲೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.  ನ್ಯಾಯಮೂರ್ತಿ  ಪಿ.ಸಿ. ಘೋಷ್ ಮತ್ತು ನ್ಯಾಯಮೂರ್ತಿ ಅಮಿತವ್ ರಾಯ್ ಅವರ ಪೀಠ  ಬೆಳಗ್ಗೆ ತೀರ್ಪು ಪ್ರಕಟಿಸಲಿದೆ. ಪ್ರಕರಣದ ಸಂಬಂಧ ವಿಚಾರಣೆ ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಕಳೆದ ವಾರ ತಿಳಿಸಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಮತ್ತು ಇತರರನ್ನು ಕರ್ನಾಟಕ  ಹೈಕೋರ್ಟ್ ಖುಲಾಸೆ ಗೊಳಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ  ಸಲ್ಲಿಸಿತ್ತು. ಮಂಗಳವಾರದ ತೀರ್ಪಿನ ನಂತರ ಪ್ರಕರಣದಲ್ಲಿ ಆರೋಪಿಗಳಾಗಿರುವ ಸುಧಾಕರನ್ ಮತ್ತು ಇಳವರಸನ್ ಅವರ ಭವಿಷ್ಯ ಕೂಡ ನಿರ್ಧಾರವಾಗಿಲಿದೆ.
2017: ಹೈದರಾಬಾದ್: ರವಿಚಂದ್ರನ್ ಅಶ್ವಿನ್ (73ಕ್ಕೆ4) ಮತ್ತು ರವೀಂದ್ರ ಜಡೇಜಾ (78ಕ್ಕೆ4) ಅವರ
ಸ್ಪಿನ್ ದಾಳಿಯ ನೆರವಿನಿಂದ ಭಾರತ ತಂಡ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 208ರನ್ಗಳ ಭರ್ಜರಿ ಜಯ ಸಾಧಿಸಿ 1-0 ಅಂತರದಿಂದ ಸರಣಿ ಮುನ್ನಡೆ ಸಾಧಿಸಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನಿಂಗ್ಸ್ನಲ್ಲಿ 35 ಓವರ್ಗಳಲ್ಲಿ 3 ವಿಕೆಟ್ಗೆ 103 ರನ್ ಗಳಿಸಿದ್ದ ಬಾಂಗ್ಲಾದೇಶ ಅಂತಿಮ ದಿನವಾದ ಸೋಮವಾರ ಬ್ಯಾಟಿಂಗ್ ಮುಂದುವರಿಸಿ ಪಂದ್ಯ ಡ್ರಾ  ಮಾಡಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿತು. ಆದರೆ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಮ್ಮ ಸ್ಪಿನ್ ಮೋಡಿಯಿಂದ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಬಾಂಗ್ಲಾ 100.3 ಓವರ್ಗಳಲ್ಲಿ 250ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲು ಒಪ್ಪಿಕೊಂಡಿತು.
2017: ಇಸ್ಲಾಮಾಬಾದ್‌: ‘ಫೆಬ್ರುವರಿ 14ರಂದು ದೇಶದಲ್ಲಿ ಯಾರೂ ಪ್ರೇಮಿಗಳ ದಿನಾಚರಣೆ
ಮಾಡುವಂತಿಲ್ಲ. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಆಚರಣೆಎಂದು ಪಾಕಿಸ್ತಾನ ಹೈಕೋರ್ಟ್ಆದೇಶಿಸಿತು.  ಇಲ್ಲಿನ ನಾಗರಿಕ ಅಬ್ದುಲ್ವಹೀಬ್ಎಂಬಾತ ಪಾಕಿಸ್ತಾನ ಹೈಕೊರ್ಟ್ಗೆ, ‘ಪ್ರೇಮಿಗಳ ದಿನಾಚರಣೆ ನಮ್ಮ ಸಂಸ್ಕೃತಿಯಲ್ಲ. ಅದು ನಮ್ಮ ಧರ್ಮಕ್ಕೆ ವಿರುದ್ಧವಾದುದು. ಹಾಗಾಗಿ ದೇಶದಲ್ಲಿ ಯಾರೂ ಅದನ್ನು ಆಚರಿಸದಂತೆ ಆದೇಶಿಸಬೇಕು. ಜತೆಗೆ ಕುರಿತ ಮಾಹಿತಿಗಳನ್ನು ಭಿತ್ತರಿಸುವ ಸಾಮಾಜಿಕ ಮಾದ್ಯಮಗಳನ್ನು ಬಹಿಷ್ಕರಿಸಬೇಕುಎಂದು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ತಾನ ಹೈಕೋರ್ಟ್ದೇಶದ ಸರ್ಕಾರಕ್ಕೆ ಪ್ರೇಮಿಗಳ ದಿನಾಚರಣೆಯನ್ನು ನಿಷೇದಿಸುವಂತೆ ಸೂಚಿಸಿತು. ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಇಲಾಖೆ, ಪಾಕಿಸ್ತಾನ ವಿದ್ಯುನ್ಮಾನ ಮಾದ್ಯಮ ನಿಯಂತ್ರಣ ಮಂಡಳಿ ಹಾಗೂ ಇಸ್ಲಾಮಾಬಾದ್ಮುಖ್ಯ ಆಯುಕ್ತರಿಗೆ ಪತ್ರವನ್ನೂ ಬರೆದು, ತಕ್ಷಣ ಕ್ರಮ ಕೈಗೊಳ್ಳವಂತೆ ಆದೇಶಿಸಲಾಗಿದ್ದು, ಮುದ್ರಣ ಮತ್ತು ವಿದ್ಯುನ್ಮಾನ ಮಾದ್ಯಮಗಳಿಗೂ ಕುರಿತು ಎಚ್ಚರಿಕೆ ನೀಡಲಾಯಿತು.  
ಇದೇ ಮೊದಲ ಬಾರಿಗೆ ಪಾಕಿಸ್ತಾನ ಹೈಕೋರ್ಟ್‌ ‘ಪ್ರೇಮಿಗಳ ದಿನಆಚರಿಸದಂತೆ ಆದೇಶ ನೀಡಿದ್ದು, ದೇಶದಾದ್ಯಂತ ಭಾರೀ ಚರ್ಚೆ ಉಂಟು ಮಾಡಿತು.   2016ರಲ್ಲಿ ಅಧ್ಯಕ್ಷ ಮನ್ಮೂನ್ಹುಸೇನ್ದೇಶದ ಜನರನ್ನು ಉದ್ದೇಶಿಸಿ, ‘ಯಾರೂ ಪ್ರೇಮಿಗಳ ದಿನ ಆಚರಿಸಬಾರದು. ಅದರ ಬದಲಾಗಿ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕೆಂದು ಮನವಿ ಮಾಡಿದ್ದರು.

2017: ಲಾಹೋರ್‌: ಪಾಕಿಸ್ತಾನದ ಲಾಹೋರಿನ ಹೃದಯಭಾಗದಲ್ಲಿ ಈದಿನ ಸಂಜೆ ನಡೆದ
ಆತ್ಮಾಹುತಿ ಬಾಂಬ್ದಾಳಿಯಲ್ಲಿ 16 ಜನ ಮೃತರಾಗಿ 40ಕ್ಕೂ ಅಧಿಕ ಜನ ಗಾಯಗೊಂಡರು. ಮೃತರಾದವರಲ್ಲಿ ಇಬ್ಬರು ಹಿರಿಯ ಪೊಲೀಸ್ಅಧಿಕಾರಿಗಳು ಮತ್ತು ನಾಲ್ವರು ಪೇದೆಗಳು ಸೇರಿದ್ದರು. ಲಾಹೋರಿನ ಮಾಲ್ರೋಡ್ನಲ್ಲಿ ಔಷಧ ಕಾಯ್ದೆಗೆ ತಿದ್ದುಪಡಿ ತರುವಂತೆ ಔಷಧ ಮಾರಾಟಗಾರರ ಮತ್ತು ಉತ್ಪಾದಕರ ಸಂಘ ಪ್ರತಿಭಟನೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಆಗಂತುಕನೊಬ್ಬ ಸ್ಫೋಟಿಸಿಕೊಂಡ. ಪಾಕಿಸ್ತಾನದ ಪಂಜಾಬ್ಪ್ರಾಂತ್ಯದಲ್ಲಿ ಸರ್ಕಾರಿ ಕಚೇರಿ ಎದುರು ಪ್ರತಿಭಟನಾ ನಿರತರನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿ  ಇದು. ಪಾಕ್ನಲ್ಲಿರುವ ತಾಲಿಬಾನಿ ಬಣ ಜಮಾತ್‌–ಉಲ್‌–ಅಹ್ರಾರ್ ಕೃತ್ಯದ ಹೊಣೆ ಹೊತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. ಕೆಲ ದಿನಗಳ ಹಿಂದೆ ಗುಪ್ತಚರ ಇಲಾಖೆಯು ಬಾಂಬ್ದಾಳಿ ನಡೆಯಬಹುದು ಎಂದು ಎಚ್ಚರಿಕೆ ಸಂದೇಶ ರವಾನಿಸಿತ್ತು. ಲಾಹೋರಿಗೆ ಇಬ್ಬರು ಆತ್ಮಾಹುತಿ ಬಾಂಬರ್ಗಳು ಪ್ರವೇಶಿಸಿದ್ದಾರೆ ಎಂದು ಮಾಹಿತಿ ನೀಡಿತ್ತು.

2009: 19 ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಕ್ರೌರ್ಯ ಮೆರೆದಿದ್ದ ನಿಥಾರಿಯ ಉದ್ಯಮಿ ಮೊಣಿಂದರ್ ಸಿಂಗ್ ಪಂಧೇರ್ ಮತ್ತು ಆತನ ಸೇವಕ ಸುರೀಂದರ್ ಕೋಲಿಗೆ ರಿಂಪಾ ಹಲ್ದರ್ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಯಿತು. ಕಿಕ್ಕಿರಿದು ತುಂಬಿದ್ದ ಗಾಜಿಯಾಬಾದ್ ನ್ಯಾಯಾಲಯದಲ್ಲಿ 55 ವರ್ಷದ ಪಂಧೇರ್ ಮತ್ತು 38 ವರ್ಷದ ಕೋಲಿ ಅವರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ರಾಮಾ ಜೈನ್ ಇದೊಂದು ವಿರಳಾತಿವಿರಳ ಪ್ರಕರಣ ಎಂದು ಬಣ್ಣಿಸಿದರು. ಅತ್ಯಾಚಾರ, ಕೊಲೆ, ಷಡ್ಯಂತ್ರ ಹಾಗು ಸಾಕ್ಷ್ಯ ನಾಶಪಡಿಸಿರುವುದನ್ನು ಸಾಬೀತುಪಡಿಸಿದ ನ್ಯಾಯಾಲಯ ತನ್ನ ಮಹತ್ವದ ತೀರ್ಪು ಪ್ರಕಟಿಸಿತು.

2009: ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಅಭಿವೃದ್ಧಿಪಡಿಸಿದ ಐದು 'ಧ್ರುವ' ಹೆಲಿಕಾಪ್ಟರುಗಳನ್ನು ದಕ್ಷಿಣ ಅಮೆರಿಕಾದ ಈಕ್ವೆಡಾರ್ ದೇಶದ ವಾಯುಪಡೆಗೆ ಹಸ್ತಾಂತರಿಸಲಾಯಿತು. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜಿಸಲಾಗಿದ್ದ 'ಏರೋ ಇಂಡಿಯಾ-2009' ವೈಮಾನಿಕ ಪ್ರದರ್ಶನದಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಉತ್ಪಾದನಾ ಇಲಾಖೆ ಕಾರ್ಯದರ್ಶಿ ಪ್ರದೀಪ್ ಕುಮಾರ್, ಎಚ್‌ಎಎಲ್ ಅಧ್ಯಕ್ಷ ಅಶೋಕ್ ಬವೇಜಾ ಈ ಹೆಲಿಕಾಪ್ಟರುಳನ್ನು ಹಸ್ತಾಂತರಿಸಿದರು. ಈಕ್ವೆಡಾರ್ ವಾಯುಪಡೆ ಮುಖ್ಯಸ್ಥ ರೋಡ್ರಿಗೊ ಬಿ.ಪ್ಲೋರೆಸ್ ಈಕ್ವೇಡಾರ್ ದೇಶದ ಭಾರತದಲ್ಲಿನ ರಾಯಭಾರಿ ಕಾರ್ಲೋಸ್ ಅಬಾದ್ ಅವರು ತಮ್ಮ ದೇಶದ ಪರವಾಗಿ ಹೆಲಿಕಾಪ್ಟರುಗಳನ್ನು ಸ್ವೀಕರಿಸಿದರು.

2009: ದೇಶದ ಮೊದಲ ಗಗನಯಾತ್ರಿ ಎಂಬ ಕೀರ್ತಿಗೆ ಪಾತ್ರರಾದ ನಿವೃತ್ತ ವಿಂಗ್ ಕಮಾಂಡರ್ ರಾಕೇಶ್ ಶರ್ಮ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಅಮೆರಿಕ ನಿರ್ಮಾಣದ ಬೋಯಿಂಗ್ ಎಫ್-18 ಸೂಪರ್ ಹಾರ್ನೆಟ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಮತ್ತೊಂದು ದಾಖಲೆ ಬರೆದರು. 'ಏರೋ ಇಂಡಿಯಾ- 2009' ವೈಮಾನಿಕ ಪ್ರದರ್ಶನದ ಮೂರನೇ ದಿನ ಮಧ್ಯಾಹ್ನ ಬೋಯಿಂಗ್ ಕಂಪೆನಿಯ ಯುದ್ಧ ವಿಮಾನದಲ್ಲಿ ಸಹ ಪೈಲಟ್ ಡೇನಿಯಲ್ ಹೆನ್ನಂ ಅವರೊಂದಿಗೆ ಆಗಸಕ್ಕೆ ಹಾರಿದರು. ಒಂದು ಗಂಟೆಗೂ ಹೆಚ್ಚು ಕಾಲ ಬಾನಂಗಳದಲ್ಲಿ ಆಕರ್ಷಕ ಡೈವಿಂಗ್ ಪ್ರದರ್ಶಿಸಿದರು. ತಿಳಿಹಸಿರು ಬಣ್ಣದ ಸೇನಾ ಉಡುಗೆಯಲ್ಲಿ ರನ್‌ವೇಗೆ ಆಗಮಿಸಿದ ರಾಕೇಶ್, ಹಾರಾಟಕ್ಕೆ ನಿಗದಿ ಪಡಿಸಿದ್ದ ಎಫ್-18 ವಿಮಾನದಲ್ಲಿ ಕೆಲ ನಿಮಿಷಗಳ ಕಾಲ ಪೂರ್ವಸಿದ್ಧತೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಛಾಯಾಗ್ರಾಹಕರಿಗೆ ಕೆಲ ಫೋಸು ನೀಡಿದರು. ಬಳಿಕ ಪತ್ರಕರ್ತರತ್ತ ಕೈಬೀಸಿ ಕಾಕ್‌ಪಿಟ್ ಸೇರಿಕೊಂಡರು. 60 ವರ್ಷ ವಯಸ್ಸಿನ ರಾಕೇಶ್ ಶರ್ಮ ಈಗ ಅತ್ಯಾಧುನಿಕ ಯುದ್ಧ ವಿಮಾನ ಎಫ್-18ರಲ್ಲಿ ಹಾರಾಟ ನಡೆಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1984ರಲ್ಲಿ ರಷ್ಯಾ ನಿರ್ಮಾಣದ ಸುಯೊಜ್ ಟಿ-11 ರಾಕೆಟ್‌ನಲ್ಲಿ ಗಗನ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಕೆಲಕಾಲ ಎಚ್‌ಎಎಲ್‌ನಲ್ಲಿ ಪರೀಕ್ಷಾ ಪೈಲಟ್ ಆಗಿದ್ದ ಅವರು, ದೇಶೀಯ ನಿರ್ಮಾಣದ ಹೆಲಿಕಾಪ್ಟರುಗಳು ಮತ್ತು ಲಘು ವಿಮಾನಗಳ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದರು. ವೈಮಾನಿಕ ಕ್ಷೇತ್ರದಲ್ಲಿ ಭಾರತದ ಮಹತ್ವದ ಸಾಧನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

2009: ವಿಮಾನವೊಂದು ನೆಲದ ಮೇಲಿನ ಮನೆಗೆ ಅಪ್ಪಳಿಸಿ ಸಂಭವಿಸಿದ ದುರಂತದಲ್ಲಿ 49 ಜನ ಸ್ಥಳದಲ್ಲೇ ಸಾವಿಗೀಡಾದ ಘಟನೆ ನ್ಯೂಯಾರ್ಕಿನಲ್ಲಿ ಸಂಭವಿಸಿತು. ಮಡಿದವರಲ್ಲಿ 48 ಜನ ವಿಮಾನ ಪ್ರಯಾಣಿಕರು ಮತ್ತೊಬ್ಬರು ನೆಲದ ಮೇಲೆ ಇದ್ದವರು. ವಿಮಾನವು ನ್ಯೂಯಾರ್ಕಿನಿಂದ ಬಫೆಲೊ ನಯಾಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕ್ಲಾರೆನ್ಸ್ ಸೆಂಟರ್ ಎಂಬ ಹಳ್ಳಿಯ ಬಳಿ ಸ್ಥಳೀಯ ಕಾಲಮಾನ ರಾತ್ರಿ 10.17ಕ್ಕೆ ಅಪಘಾತಕ್ಕೀಡಾಯಿತು. ಕಾಂಟಿನೆಂಟಲ್ ಏರ್‌ಲೈನ್ಸ್ ವಿಮಾನದಲ್ಲಿ 44 ಪ್ರಯಾಣಿಕರು ಹಾಗೂ ನಾಲ್ವರು ಚಾಲಕ ಸಿಬ್ಬಂದಿ ಇದ್ದರು.

2008: ಬೆಲ್ಜಿಯಂ ಸರ್ಕಾರದಿಂದ ಗೌರವ ಸ್ವೀಕರಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಲು ಚುನಾವಣಾ ಆಯೋಗ ತೀರ್ಮಾನಿಸಿತು. 2006ರಲ್ಲಿ ಬೆಲ್ಜಿಯಂ ಸರ್ಕಾರ ನೀಡಿದ್ದ `ಆರ್ಡರ್ ಆಫ್ ಲಿಯೋಪೋಲ್ಡ್' ಪುರಸ್ಕಾರವನ್ನು ಒಪ್ಪಿಕೊಂಡ ಆಧಾರದ ಮೇಲೆ ಅವರ ಲೋಕಸಭಾ ಸದಸ್ಯತ್ವ ವಜಾ ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಯೋಗ ಈ ನಿರ್ಧಾರಕ್ಕೆ ಬಂದಿತು.

2008: ಚಿತ್ರಕಲಾ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಾದ ದಾವಣಗೆರೆಯ ಮಲ್ಲಿಕಾರ್ಜುನ ಜಾದವ್, ಬೆಂಗಳೂರಿನ ಜೆ.ಎಂ.ಎಸ್. ಮಣಿ, ಬೆಳಗಾವಿಯ ಎಸ್. ಅಪ್ಪಾಸಾಹೇಬ್ ಕಾಡಪುರಕರ ಅವರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ 2007ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಚಿತ್ರಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ವಿಶೇಷ ಗೌರವ ಸಮರ್ಪಣೆ ಮಾಡಲೂ ಅಕಾಡೆಮಿ ನಿರ್ಧರಿಸಿತು. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಚಿತ್ರಕಲಾವಿದರಲ್ಲ. ಆದರೆ ಚಿತ್ರಕಲಾ ಕ್ಷೇತ್ರಕ್ಕೆ ಮಹತ್ವಪೂರ್ಣ ಕೊಡುಗೆಗಾಗಿ ರಾಜ್ಯಮಟ್ಟದ ಒಬ್ಬರಿಗೆ ನೀಡಲಾಗುವ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಲು ಕಾರಣ ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪುರಾತನ ಮತ್ತು ಸಮಕಾಲೀನ ಕಲಾಕೃತಿಗಳ ಸಂಗ್ರಹಾಲಯವಾಗಿ `ಮಂಜೂಷಾ' ವನ್ನು ರೂಪಿಸಿರುವುದು, 39 ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರನ ಪ್ರತಿಷ್ಠಾಪನೆ, ಯಕ್ಷಗಾನ ಮೇಳಗಳಿಗೆ ಉತ್ತೇಜನ, ಜನಪದ ಸಾಹಿತ್ಯ ಮತ್ತು ಕಲಾ ಪ್ರಕಾರಗಳ ಸಂಗ್ರಹಣೆ, ತಾಳೆಯೋಲೆಗಳ ಸಂಗ್ರಹ, ಅಧ್ಯಯನ ಮತ್ತು ಸಂಶೋಧನೆ, ಶಿಲ್ಪಿಗಳು, ಕಲಾವಿದರಿಗೆ ಪ್ರೋತ್ಸಾಹ- ಇವೇ ಮೊದಲಾದ ರೀತಿಯಲ್ಲಿ ಕಲಾ ಪೋಷಣೆ ಮಾಡಿರುವುದು. ಮಲ್ಲಿಕಾರ್ಜುನ ಜಾದವ್ ಅವರು ಮೈಸೂರಿನ `ಕಾವಾ'ದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರೆ, ಜೆ.ಎಸ್.ಎಂ.ಮಣಿ ದೇಶ ವಿದೇಶಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿರುವ ಕಲಾವಿದರು. ಎಸ್. ಅಪ್ಪಾಸಾಹೇಬ್ ಕಾಡಪುರಕರ ಅವರು ಗಡಿ ಪ್ರದೇಶದದವರು. ಇವರು ನಿರುಪಯೋಗಿ ವಸ್ತುಗಳನ್ನು ಬಳಸಿ ಕಲಾತ್ಮಕ ಅಭಿವ್ಯಕ್ತಿ ನೀಡಬಲ್ಲ ಕಲಾವಿದ.

2008: ಉತ್ತರ ಕರ್ನಾಟಕದಲ್ಲಿ ಶಂಕಿತ ಉಗ್ರರ ಬೇಟೆ ಮುಂದುವರೆಸಿದ ಸಿಓಡಿ ಪೊಲೀಸರು ನಿಷೇಧಿತ ಸಿಮಿ ಸಂಘಟನೆಯ ಸಕ್ರಿಯ ಕಾರ್ಯಕರ್ತ ಶಕೀಲ ಮಹ್ಮದ್ ಮಾಳಿ ಎಂಬಾತನನ್ನು ಬಂಧಿಸಿದರು. ಬಂಧಿತ ಆರೋಪಿ ಟೈಮರ್ ಬಾಂಬ್ ತಯಾರಿಸಲು ಇಂಟರ್ನೆಟ್ ಮೂಲಕ ಮಾಹಿತಿ ಪಡೆದಿರುವ ಅಂಶ ವಿಚಾರಣೆಯ ವೇಳೆ ಬಹಿರಂಗವಾಗಿದ್ದು, ಎಲೆಕ್ಟ್ರಿಕಲ್ ಕೆಲಸದಲ್ಲಿ ಪರಿಣತಿ ಹೊಂದಿದ್ದುದರಿಂದ ಟೈಮರ್ ಬಾಂಬ್ ತಯಾರಿಸುವ ಬಗ್ಗೆ ಆಸಕ್ತಿ ಹೊಂದಿ, ಈ ನಿಟ್ಟಿನಲ್ಲಿ ಪ್ರಯೋಗ ನಡೆಸುತ್ತಿದ್ದುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದವು.

2008: ಪ್ರಾದೇಶಿಕತೆಯ ಆಧಾರದಲ್ಲಿ ಜನರ ನಡುವೆ ದ್ವೇಷ ಭಾವನೆ ಹರಡಲು ಯತ್ನಿಸಿದ್ದಕ್ಕಾಗಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂ ಎನ್ ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಬಂಧಿಸಲಾಯಿತು. ನಂತರ ನ್ಯಾಯಾಲಯ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಿತು.

2008: ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಅವರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು ನಗರದಲ್ಲಿನ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು.

2008: ಮಲೇಷ್ಯಾ ಪ್ರಧಾನಿ ಅಬ್ದುಲ್ಲಾ ಅಹ್ಮದ್ ಬದಾವಿ ಅವರು ಲೋಕಸಭೆ ವಿಸರ್ಜನೆ ಮಾಡುವ ಮೂಲಕ ಅವಧಿಗೆ ಮುನ್ನವೇ ಚುನಾವಣೆಗೆ ದಾರಿ ಮಾಡಿ ಕೊಟ್ಟರು.

2008: ಸುಮಾರು ಏಳು ತಿಂಗಳುಗಳಿಂದ ಖಾಲಿ ಇದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಧಾರವಾಡ ವಿವಿಯ ನಿವೃತ್ತ ಭಾಷಾ ಶಾಸ್ತ್ರಜ್ಞ ಡಾ. ಎ. ಮುರಿಗೆಪ್ಪ ಅವರನ್ನು ನೇಮಿಸಿ ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಆದೇಶ ಹೊರಡಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಡಾ. ಚಿರಂಜೀವಿ ಸಿಂಗ್ ನೇತೃತ್ವದ ಶೋಧನಾ ಸಮಿತಿ ಶಿಫಾರಸು ಮಾಡಿದ್ದ ಮೂವರನ್ನು ಕರೆಸಿ ವೈಯಕ್ತಿಕವಾಗಿ ಸಂದರ್ಶನ ನಡೆಸಿದ ರಾಜ್ಯಪಾಲರು ಅಂತಿಮವಾಗಿ ಮುರಿಗೆಪ್ಪ ಅವರನ್ನು ಕುಲಪತಿಯನ್ನಾಗಿ ನೇಮಿಸಿ ಆದೇಶ ನೀಡಿದರು. ಮೂಲತಃ ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದ ರೈತ ಕುಟುಂಬದವರಾದ ಮುರಿಗೆಪ್ಪ ಅವರು ಕರ್ನಾಟಕ ವಿವಿಯಲ್ಲಿ ಬಿ.ಎಸ್ಸಿ ಪದವಿ ಪಡೆದು, ಕನ್ನಡದಲ್ಲಿ (ಭಾಷಾ ವಿಜ್ಞಾನ) ಸ್ನಾತಕೋತ್ತರ ಪದವಿ ಪಡೆದವರು. `ಬೀದರ್ ಜಿಲ್ಲೆಯಲ್ಲಿನ ಕನ್ನಡ ಭಾಷೆ' ಕುರಿತು ಅವರು ರಚಿಸಿದ ಮಹಾಪ್ರಬಂಧಕ್ಕೆ ಪಿ. ಎಚ್ ಡಿ ಪದವಿ ಪಡೆದಿದ್ದರು. ಡಿ.ಲಿಟ್ ಪದವಿಯನ್ನೂ ಪಡೆದಿರುವ ಅವರು ವೃತ್ತಿ ಜೀವನ ಆರಂಭಿಸಿದ್ದು ತಮಿಳುನಾಡಿನ ಅಣ್ಣಾಮಲೈ ವಿವಿಯಲ್ಲಿ. ಅಲ್ಲಿ ಆರು ವರ್ಷ ಸೇವೆ ಸಲ್ಲಿಸಿದ ನಂತರ ರೀಡರ್ ಆಗಿ ಧಾರವಾಡದ ಕರ್ನಾಟಕ ವಿವಿಗೆ ಆಗಮಿಸಿದ್ದರು. ಅಲ್ಲಿ ವಿದ್ಯಾರ್ಥಿ ಕಲ್ಯಾಣನಿಧಿ ಅಧಿಕಾರಿ, ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ವಿವಿಯ ಹಂಗಾಮಿ ಕುಲಸಚಿವ ಹಾಗೂ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಇತ್ತೀಚೆಗೆ ಮೂರು ತಿಂಗಳು ಹಂಗಾಮಿ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. `ಜಾನಪದ ಹೊಸದೃಷ್ಟಿ' ಹಾಗೂ `ಡೊಂಬರು ಒಂದು ಅಧ್ಯಯನ' ಪುಸ್ತಕಗಳನ್ನು ಅವರು ಬರೆದಿದ್ದಾರೆ.

2007: ಒರಿಯಾ ಭಾಷಾ ಸಾಹಿತಿ ಡಾ. ಜಗನ್ನಾಥ ಪ್ರಸಾದ ದಾಸ್ ಅವರ `ಪರಿಕ್ರಮ' ಕವನ ಸಂಕಲನವು 2006ನೇ ಸಾಲಿನ ಪ್ರತಿಷ್ಠಿತ `ಸರಸ್ವತಿ ಸಮ್ಮಾನ್' ಪ್ರಶಸ್ತಿಗೆ ಆಯ್ಕೆಯಾಯಿತು. ಈ ಪ್ರಶಸ್ತಿ ಪಡೆದವರಲ್ಲಿ ದಾಸ್ 16ನೆಯವರು. 5 ಲಕ್ಷ ರೂಪಾಯಿ ನಗದು ಮತ್ತು ಪ್ರಮಾಣ ಪತ್ರ ಒಳಗೊಂಡಿರುವ ಈ ಪ್ರಶಸ್ತಿಯನ್ನು ಕೆ.ಕೆ. ಬಿರ್ಲಾ ಪ್ರತಿಷ್ಠಾನವು 1991ರಲ್ಲಿ ಸ್ಥಾಪಿಸಿತು.

2007: ಎನ್. ತಿಪ್ಪಣ್ಣ ಅವರನ್ನು ಹಂಗಾಮೀ ಸಭಾಪತಿಯನ್ನಾಗಿ ಒಪ್ಪದೆ ಹತ್ತನೇ ದಿನವೂ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ 26 ಮಂದಿ ಕಾಂಗ್ರೆಸ್ ಸದಸ್ಯರನ್ನು ವಿಧಾನ ಪರಿಷತ್ ಅಧಿವೇಶನ ಉಳಿದ ಅವಧಿಗೆ ಸಾಮೂಹಿಕವಾಗಿ ಅಮಾನತುಗೊಳಿಸಲಾಯಿತು.

2007: ಹೃದಯ ಮತ್ತು ಶ್ವಾಸಕೋಶದಲ್ಲಿನ ಖಾಯಿಲೆಯಿಂದ ತೀವ್ರ ಅಸ್ವಸ್ಥಗೊಂಡಿರುವ ಪಶ್ಚಿಮ ಇಂಗ್ಲೆಂಡಿನ ಬ್ರಿಸ್ಟಲ್ ನ 30ರ ಹರೆಯದ ಮಹಿಳೆ ಕ್ಲೆಲಿ ಟೈಲರ್ ಸ್ವತಃ ಸಾವಿಗೆ ತಲೆಬಾಗಲು ಬಿಡುವಂತೆ ತನ್ನ ವೈದ್ಯರ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಕಾನೂನು ಸಮರಕ್ಕೆ ಇಳಿದರು. ಅತಿಯಾದ ನೋವಿನಿಂದ ನರಳುತ್ತಿರುವ ತನ್ನನ್ನು ಪ್ರಜ್ಞೆ ತಪ್ಪುವಂತೆ ಮಾಡಲು ನೋವು ನಿವಾರಕ ಮಾರ್ಫಿನ್ ಗುಳಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿನೀಡಲು ವೈದ್ಯರಿಗೆ ನಿರ್ದೇಶನ ನೀಡಬೇಕು ಎಂದು ಆಕೆ ಬಯಸಿದರು.

2007: ಪಾಕಿಸ್ಥಾನದ ವೇಗದ ಬೌಲರುಗಳಾದ ಶೋಯೆಬ್ ಅಖ್ತರ್ ಮತ್ತು ಮೊಹಮ್ಮದ ಆಸಿಫ್ ಮತ್ತೆ ಉದ್ದೀಪನ ಮದ್ದು ಪರೀಕೆಯಲ್ಲಿ ಸಿಕ್ಕಿಬಿದ್ದರು. ರಹಸ್ಯವಾಗಿ ನಡೆಸಿದ ಪರೀಕ್ಷೆಯಲ್ಲಿ ಈ ಇಬ್ಬರೂ ನಿಷೇಧಿತ ಮದ್ದು ನಂಡ್ರೋಲೋನ್ ಸೇವಿಸಿದ್ದು ಸಾಬೀತಾಗಿದೆ ಎಂದು `ದಿ ನ್ಯೂಸ್' ದಿನಪತ್ರಿಕೆ ವರದಿ ಮಾಡಿತು.

2007: ಅಮೆರಿಕ ಮೂಲದ ವಿಶ್ವದ ಅತಿದೊಡ್ಡ ಚಿಲ್ಲರೆ ವಹಿವಾಟು ಸಂಸ್ಥೆ ವಾಲ್ ಮಾರ್ಟ್ ಜೊತೆಗೆ ಭಾರ್ತಿ ಗ್ರೂಪ್ ಬಾರ್ಸಿಲೋನಾದಲ್ಲಿ ಒಪ್ಪಂದ ಮಾಡಿಕೊಂಡಿತು. ಭಾರ್ತಿ ಗ್ರೂಪ್ ಅಧ್ಯಕ್ಷ ಸುನೀಲ್ ಮಿತ್ತಲ್ ಈ ವಿಷಯ ಪ್ರಕಟಿಸಿದರು. ಸಾಮಾನ್ಯ ಜನರ ಹಿತಾಸಕ್ತಿ ರಕ್ಷಣೆಗಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದು ಅವರ ಪ್ರತಿಪಾದನೆ.

2007: ಮಂಗಳೂರಿನ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರನ್ನು ಕನ್ನಡ ಪರಿಚಾರಿಕೆ ಮತ್ತು ಅನುವಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕೊಡುವ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ `ಭಾರತೀಯ ರೈಲ್ವೆ ವಲಯದ ಮಹಾನ್ ಸುಧಾರಕ' ಎಂಬುದಾಗಿ ಹೊಗಳಿಸಿಕೊಂಡ ಬೆನ್ನಲ್ಲೇ ರೈಲ್ವೇ ಸಚಿವ ಲಾಲೂ ಪ್ರಸಾದ್ ಅವರು, ಇದರ ನೆನಪು ಮಾಸುವ ಮುನ್ನವೇ ಮಾವ ಶಿವಪ್ರಸಾದ್ ಚೌಧುರಿ (ಲಾಲೂ ಪತ್ನಿ ರಾಬ್ಡಿ ದೇವಿ ತಂದೆ) ಮತ್ತು ಅತ್ತೆ ಮಹಾರಾಜೋದೇವಿ ಅವರು ಬಿಹಾರಿನ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ಸಿನ ಹವಾನಿಯಂತ್ರಿತ ಬೋಗಿಯಲ್ಲಿ ಟಿಕೆಟಿಲ್ಲದೆ ಪ್ರಯಾಣ ಮಾಡುತ್ತಿದ್ದಾಗ ಸಿಕ್ಕಿಹಾಕಿಕೊಂಡ ಪರಿಣಾಮ ಮುಜುಗರಕ್ಕೆ ಒಳಗಾದರು.

2007: ಕಾವೇರಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ಹಿರಿಯ ನಟ ವಿಷ್ಣುವರ್ಧನ್ನೇತೃತ್ವದಲ್ಲಿ ಸಾವಿರಾರು ಮಂದಿ ಬೆಂಗಳೂರಿನಲ್ಲಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ರಾಜಭವನದವರೆಗೆ ಬೃಹತ್ ರ್ಯಾಲಿ ನಡೆಸಿದರು. ಚಿತ್ರರಂಗದ ಬಹುತೇಕ ಕಲಾವಿದರು ಹಾಗೂ ಇತರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

2006: ವಿಶಾಖ ಪಟ್ಟಣದಿಂದ ಜಲಾಂತರ್ಗಾಮಿಯ ಮೂಲಕ ಕಡಲಾಳ ಯಾನ ಕೈಗೊಂಡು ಇತಿಹಾಸ ಸೃಷ್ಟಿಸಿದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಕಡಲಾಳ ಪ್ರಯಾಣ ಕೈಗೊಂಡ ಭಾರತದ ಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ನೌಕಾಪಡೆಗೆ ಸೇರಿದ ರಷ್ಯ ಮೂಲದ ಐ ಎನ್ ಎಸ್ ಸಿಂಧುರಕ್ಷಕ್ ಜಲಾಂತರ್ಗಾಮಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಸುಮಾರು ಮೂರೂವರೆ ತಾಸು ಕಾಲ ಅವರು ಪ್ರಯಾಣ ಮಾಡಿದರು. 2003ರಲ್ಲಿ ಅಂದಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಐ ಎನ್ ಎಸ್ ಸಿಂಧುವೀರ್ ಜಲಾಂತರ್ಗಾಮಿಯಲ್ಲಿ ಒಂದು ರಾತ್ರಿಯನ್ನು ಕಡಲಾಳದಲ್ಲಿ ಕಳೆದಿದ್ದರು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ವಿಶಾಖಪಟ್ಟಣಂನಲ್ಲಿ ಐ ಎನ್ ಎಸ್ ಚಕ್ರ ಜಲಾಂತರ್ಗಾಮಿಗೆ ಭೇಟಿ ನೀಡಿದ್ದರು. ಕಲಾಂ ಅವರು ಹಿಂದೆ ರಕ್ಷಣಾ ಸಚಿವಾಲಯದಲ್ಲಿ ವೈಜ್ಞಾನಿಕ ಸಲಹೆಗಾರರಾಗಿದ್ದಾಗ ಬಂದರಿನಲ್ಲಿದ್ದ ಒಂದು ಜಲಾಂತರ್ಗಾಮಿಗೆ ಭೇಟಿ ನೀಡಿದ್ದರು.

2006: ಸುಮಾರು 14 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿ, ಜನ ಚಳಿಯಲ್ಲಿ ಗಡ ಗಡ ನಡುಗಿದರು. ಈ ದಿನ ನಗರದಲ್ಲಿ ದಾಖಲಾದ ತಾಪಮಾನ 7.8 ಡಿಗ್ರಿ ಸೆಲ್ಸಿಯಸ್. 1992ರ ಫೆಬ್ರವರಿಯಲ್ಲಿ 7.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 1990ರ ಫೆಬ್ರವರಿಯಲ್ಲಿ 12.5, 1992ರ ಜನವರಿಯಲ್ಲಿ 10, 1992ರ ಮಾರ್ಚಿಯಲ್ಲಿ 14.1, 1994ರ ಮಾರ್ಚಿಯಲ್ಲಿ 14.1, 2005ರ ಫೆಬ್ರವರಿಯಲ್ಲಿ 14.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

2006: ಆರೋಪಿಗಳ ಪರ ವಕೀಲರ ಬಹಿಷ್ಕಾರದ ಮಧ್ಯೆ ಬಾಗ್ದಾದಿನಲ್ಲಿ ಪುನರಾರಂಭವಾದ ವಿಚಾರಣಾ ಕಲಾಪಕ್ಕೆ ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ `ಡೌನ್ ವಿತ್ ಬುಷ್' (ಬುಷ್ ಗೆ ಧಿಕ್ಕಾರ) ಘೋಷಣೆಯೊಂದಿಗೆ ಹಾಜರಾದರು. ಫೆಬ್ರುವರಿ 2ರಂದು ನಾಟಕೀಯ ಬೆಳವಣಿಗೆಯಲ್ಲಿ ಸದ್ದಾಂ ಮತ್ತು 7 ಮಂದಿ ಸಹಚರರು ವಿಚಾರಣೆ ಕಲಾಪಗಳನ್ನೇ ಬಹಿಷ್ಕರಿಸಿದ್ದರು.

2006: ಗುಜರಾತಿನ ಡ್ಯಾಂಗ್ ಜಿಲ್ಲೆಯ ಶಬರಿ ಕುಂಭ ಮೇಳದಲ್ಲಿ ನಸುಕಿನ ಜಾವದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿ, ಮೂರು ದಿನಗಳ ಹಿಂದೂ ತೀರ್ಥಯಾತ್ರೆಗಾಗಿ ಆಗಮಿಸಿದ ಸಹಸ್ರಾರು ಮಂದಿ ಹಿಂದೂ ಭಕ್ತರು ಭಯಗ್ರಸ್ತರಾದರು. ಅಗ್ನಿ ದುರಂತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿಯನ್ನು ಆರಿಸಲಾಯಿತು. ಚಳಿ ನಿವಾರಿಸಿಕೊಳ್ಳಲು ಕೈಲಾಸ ಪರ್ವತದ ಬುಡದಲ್ಲಿ ಕೆಲವು ಭಕ್ತರು ಹಾಕಿದ ಅಗ್ಗಿಷ್ಟಿಕೆಯಿಂದ ಹಾರಿದ ಕಿಡಿ ಪರ್ವತದ ಗಿಡಗಂಟಿಗಳಿಗೆ ಹರಡಿ ಈ ದುರಂತ ಸಂಭವಿಸಿತು. ಪರ್ವತದ ತುದಿಯಲ್ಲಿ ಹಲವಾರು ಪ್ರಮುಖರು, ಸಾಧುಗಳು ಸಂತರು ಶಿಬಿರಗಳಲ್ಲಿ ಬಿಡಾರ ಹೂಡಿದ್ದರು. ಜ್ಯೋತಿರ್ಮಠದ ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ ಅವರೂ ಈ ಶಿಬಿರದಲ್ಲಿ ಇದ್ದರು. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಲಿಲ್ಲ.

1948: ರಂಗಚಳವಳಿ, ರಂಗಯಾತ್ರೆ, ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ಗಿರಿಯಪ್ಪ- ಜಯಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗ ಪ್ರತಿಷ್ಠಾನ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳಿಗೆ ಪಾತ್ರರಾದ ಕಪ್ಪಣ್ಣ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೆ, ದೇಶ- ವಿದೇಶಗಳಲ್ಲಿ ಕನ್ನಡ ನಾಟಕಗಳನ್ನು ನಿರ್ದೇಶಿಸಿ ಖ್ಯಾತರಾದವರು.

1946: ಜಗತ್ತಿನ ಮೊತ್ತ ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ `ಈನ್ಯಾಕ್' (ದಿ ಎಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟೆಗ್ರೇಟರ್ ಅಂಡ್ ಕ್ಯಾಲ್ಕುಲೇಟರ್) ಮೊದಲ ಬಾರಿಗೆ ಜಾನ್ ಡಬ್ಲ್ಯೂ ಮೌಕ್ಲಿ ಮತ್ತು ಜೆ. ಪ್ರಸ್ಪರ್ ಎಕರ್ಟ್ ಅವರಿಂದ ಪೆನ್ಸಿಲ್ವೇನಿಯಾದ ಮೂರೆ ಸ್ಕೂಲ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗಿನಲ್ಲಿ ಪ್ರದರ್ಶನಗೊಂಡಿತು. ಜಗತ್ತಿನಲ್ಲೇ ಅತ್ಯಂತ ದೊಡ್ಡ ಏಕೈಕ ಕಂಪ್ಯೂಟರ್ ಇದಾಗಿತ್ತು. ಇದು 30-40 ಅಡಿ ಅಳತೆಯ ಇಡೀ ಕೊಠಡಿಯನ್ನು ವ್ಯಾಪಿಸಿತ್ತು. ಆಧುನಿಕ ಎಲೆಕ್ಟ್ರಾನಿಕ್ ಗಣಕ ಉದ್ಯಮಕ್ಕೆ ಬುನಾದಿ ಹಾಕಿದ್ದರಿಂದ ಇದು ಚಾರಿತ್ರಿಕ ಘಟನೆಯಾಯಿತು. ಆಗ ಲಭ್ಯವಿದ್ದ ವ್ಯಾಕ್ಯೂಂ ಟ್ಯೂಬ್ ತಂತ್ರಜ್ಞಾನ ಬಳಸಿ ಡಿಜಿಟಲ್ ಗಣಕದ ವೇಗವನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ಈ ಕಂಪ್ಯೂಟರ್ ಪ್ರದರ್ಶನದಿಂದ ಬೆಳಕಿಗೆ ಬಂತು.

1941: ಮೊತ್ತ ಮೊದಲ ಬಾರಿಗೆ ಆಕ್ಸ್ ಫರ್ಡ್ ನ ಒಬ್ಬ ಪೊಲೀಸ್ ಆಲ್ಬರ್ಟ್ ಅಲೆಗ್ಸಾಂಡರ್ ಎಂಬ ವ್ಯಕ್ತಿಯ ಮೇಲೆ ಪೆನ್ಸಿಲಿನ್ ಪ್ರಯೋಗಿಸಲಾಯಿತು. ಈತ ಗಡ್ಡ ಕ್ಷೌರ ಮಾಡುವಾಗ ಗಾಯವಾಗಿ ಬಳಿಕ ರಕ್ತ ವಿಷಮಯಗೊಂಡು ಸ್ಟೆಫೈಲೊಕೋಕಸ್ ಎಂಬ ಸೋಂಕಿಗೆ ತುತ್ತಾಗಿದ್ದ. ಈತನಿಗೆ ನೀಡಲಾದ ಯಾವುದೇ ಔಷಧಿಯೂ ಫಲ ನೀಡದೆ ಹೋದಾಗ ಆಸ್ಪತ್ರೆ ಅಧಿಕಾರಿಗಳು ಹೊವರ್ಡ್ ಫ್ಲೋರೇ ಮತ್ತು ಅರ್ನೆಸ್ಟ್ ಚೈನ್ ಅವರಿಗೆ ಸ್ವತಃ ತಾವೇ ತಯಾರಿಸಿದ ಹೊಸ ಔಷಧಿ ಪ್ರಯೋಗಿಸಲು ಒಪ್ಪಿಗೆ ನೀಡಿದರು. ಅವರು ತಯಾರಿಸಿದ್ದ ಪೆನ್ಸಿಲಿನನ್ನು ಸ್ವಲ್ಪ ಪ್ರಮಾಣದಲ್ಲಿ ನೀಡಲಾಯಿತು. ಸೋಂಕು ಹಾಗೇ ಮುಂದುವರಿಯಿತು. ರೋಗಿ ಮೃತನಾದ.

1849: ಲಾರ್ಡ್ ರಾಂಡೋಲ್ಫ್ ಚರ್ಚಿಲ್ ಹುಟ್ಟಿದ ದಿನ. ಬ್ರಿಟಿಷ್ ರಾಜಕಾರಣಿಯಾದ ಇವರು ವಿನ್ ಸ್ಟನ್ ಚರ್ಚಿಲ್ ಅವರ ತಂದೆ.

1788: ವಾರನ್ ಹೇಸ್ಟಿಂಗ್ಸ್ ನನ್ನು ಹೌಸ್ ಆಫ್ ಕಾಮನ್ಸ್ ನಲ್ಲಿ ಉನ್ನತ ಮಟ್ಟದ ಅಪರಾಧಗಳಿಗಾಗಿ ವಿಚಾರಣೆಗೆ ಗುರಿಪಡಿಸಲಾಯಿತು. 1795ರಲ್ಲಿ ಆತನನ್ನು ದೋಷಮುಕ್ತನನ್ನಾಗಿ ಮಾಡಲಾಯಿತು. ಈ ದೀರ್ಘಕಾಲದ ವಿಚಾರಣೆ ಒಂದು ಗಂಭೀರ ಅನ್ಯಾಯ ಎಂದು ಪರಿಗಣನೆಗೊಂಡಿದೆ.

No comments:

Post a Comment