ನಾನು ಮೆಚ್ಚಿದ ವಾಟ್ಸಪ್

Monday, February 18, 2019

ಇಂದಿನ ಇತಿಹಾಸ History Today ಫೆಬ್ರುವರಿ 18

ಇಂದಿನ ಇತಿಹಾಸ History Today ಫೆಬ್ರುವರಿ 18
2019: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ೪೦ ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಪೈಶಾಚಿಕ ದಾಳಿಯನ್ನು ರೂಪಿಸಿದ್ದ ಸೂತ್ರಧಾರಿ, ಜೈಶ್ ಕಮಾಂಡರ್ ರಶೀದ್ ಘಾಜಿ ಮತ್ತು ಇನ್ನಿಬ್ಬರು ಉಗ್ರಗಾಮಿಗಳನ್ನು ಭಾರತೀಯ ಪಡೆಗಳು ದಕ್ಷಿಣ ಕಾಶ್ಮೀರದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಸದೆ ಬಡಿದವು. ಇದರೊಂದಿಗೆ ಪುಲ್ವಾಮ ದಾಳಿಗೆ ಸೇಡು ತೀರಿಸುತ್ತೇವೆ, ಹನಿ ಹನಿ ರಕ್ತವೂ ವ್ಯರ್ಥವಾಗಲು ಬಿಡುವುದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ ಬೆನ್ನಲ್ಲೇ ಸೇನಾ ಪಡೆದ ಭಾರೀ ಯಶಸ್ತು ಸಾಧಿಸಿದಂತಾಯಿತು.  ರಶೀದ್ ಘಾಜಿ ಪುಲ್ವಾಮ ಹತ್ಯಾಕಾಂಡದ ಸೂತ್ರಧಾರಿಯಾಗಿದ್ದು, ಬಾಂಬ್ ತಯಾರಿಯಲ್ಲಿ ಚತುರನಾಗಿದ್ದ. ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನಂಬಿಕಸ್ತ ಬಂಟ ಈತನಾಗಿದ್ದ ಎಂದು ಹೇಳಲಾಯಿತು.  ಕಾಶ್ಮೀರದಲ್ಲಿ ಯುವಕರನ್ನು ಸೆಳೆದು ಸಂಘಟನೆಗೆ ಸೇರಿಸಿಕೊಳ್ಳುವ ಹಾಗೂ ಅವರಿಗೆ ತರಬೇತಿ ನೀಡುವ ಕೆಲಸವನ್ನು ಘಾಜಿ ನೋಡಿಕೊಳ್ಳುತ್ತಿದ್ದ ಎನ್ನಲಾಯಿತು.  ಹೋರಾಟದಲ್ಲಿ ಮೇಜರ್ ವಿಭೂತಿ ದೌಂಡಿಯಾಲ್ ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಕೂಡಾ ಹುತಾತ್ಮರಾದರು. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಬೆಂಗಾವಲು ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸಂಚನ್ನು ರೂಪಿಸಿದ್ದನೆಂದು ನಂಬಲಾಗಿರುವ ಭಯೋತ್ಪಾದಕ ಕಮ್ರಾನ್, ರಶೀದ್ ಘಾಜಿ ಮತ್ತು ಸ್ಥಳೀಯ ಉಗ್ರಗಾಮಿ ಹಿಲಾಲ್ ಪುಲ್ವಾಮ ಜಿಲ್ಲೆಯ ಪಿಂಗ್ಲನ್ ಪ್ರದೇಶದಲ್ಲಿ ನಡೆದ ಗುಂಡಿನ ಹೋರಾಟದಲ್ಲಿ ಹತರಾದರು.   ಭಯೋತ್ಪಾದಕರು ಫೆಬ್ರುವರಿ ೧೪ರ  ಕಾರು ಬಾಂಬ್ ದಾಳಿಗೆ ಸಂಬಂಧಪಟ್ಟವರು ಎಂದು ನಂಬಲಾಯಿತು. ಹತರಾಗಿರುವ ಇಬ್ಬರು ಭಯೋತ್ಪಾದಕರ ನಿಖರ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ರಕ್ಷಣಾ ವಕ್ತಾರರು ಹೇಳಿದರು. ಘರ್ಷಣೆಯಲ್ಲಿ ಹುತಾತ್ಮರಾಗಿರುವ ನಾಲ್ವರು ಸೇನಾ ಸಿಬ್ಬಂದಿ ೫೫ ರಾಷ್ಟ್ರೀಯ ರೈಫಲ್ಸ್ಗೆ ಸೇರಿದವರು. ಭದ್ರತಾ ಪಡೆಗಳು ಪಿಂಗ್ಲನ್ ಪ್ರದೇಶದಲ್ಲಿ ಉಗ್ರಗಾಮಿಗಳು ಇದ್ದಾರೆ ಎಂಬ ಮಾಹಿತಿ ಬಂದುದನ್ನು ಅನುಸರಿಸಿ ಹಿಂದಿನ  ರಾತ್ರಿಯೇ ಅಲ್ಲಿಗೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಪಡೆಗಳು ಶೋಧ ನಡೆಸುತ್ತಿದ್ದಾಗ ಉಗ್ರಗಾಮಿಗಳು ಅವರ ಮೇಲಕ್ಕೆ ಗುಂಡು ಹಾರಿಸಿದರು. ಪರಿಣಾಮವಾಗಿ ಗುಂಡಿನ ಘರ್ಷಣೆ ಆರಂಭವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿದ ವರದಿ ತಿಳಿಸಿತು. ಘಟನೆಯಲ್ಲಿ ಒಬ್ಬ ನಾಗರಿಕ ಕೂಡಾ ಸಾವನ್ನಪ್ಪಿರುವುದಾಗಿ ಹೇಳಲಾಗಿದ್ದು, ಆತನನ್ನು ಮುಷ್ತಾಖ್ ಅಹ್ಮದ್ ಭಟ್ ಎಂಬುದಾಗಿ ಗುರುತಿಸಲಾಯಿತು. ಪಾಕಿಸ್ತಾನ ಮೂಲದ ಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರಗಾಮಿ ಅದಿಲ್ ಅಹ್ಮದ್ ದಾರ್, ೧೦೦ ಕಿಗ್ರಾಂಗಳಿಗೂ ಹೆಚ್ಚಿನ ಸ್ಫೋಟಕ ತುಂಬಿದ್ದ ಕಾರನ್ನು  ಪುಲ್ವಾಮ ಜಿಲ್ಲೆಯಲ್ಲಿ ಸಿಆರ್ಪಿಎಫ್ ಬೆಂಗಾವಲು ವಾಹನಕ್ಕೆ ಢಿಕ್ಕಿ ಹೊಡೆಸಿ ನಡೆಸಿದ ದಾಳಿಯಲ್ಲಿ ೪೦ ಮಂದಿ ಯೋಧರು ಹುತಾತ್ಮರಾಗಿದ್ದರು. ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ತೀವ್ರ ರಾಜತಾಂತ್ರಿಕ ದಾಳಿ ನಡೆಸಿದ ಭಾರತ, ಭಯೋತ್ಪಾದನೆಯನ್ನು ದೇಶದ ನೀತಿಯಾಗಿ ಮಾಡಿಕೊಂಡಿದೆ ಎಂದು ಆಪಾದಿಸಿತ್ತು. ತನ್ನ ನಿಯಂತ್ರಣದಲ್ಲಿ ಇರುವ ಪ್ರದೇಶಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳ ವಿರುದ್ಧ ಪರಿಶೀಲಿಸಲು ಸಾಧ್ಯವಿರುವಂತಹ ಕ್ರಮವನ್ನು ತತ್ ಕ್ಷಣ ಕೈಗೊಳ್ಳಬೇಕು ಎಂದು ಪಾಕಿಸ್ತಾನವನ್ನು ಭಾರತ ಆಗ್ರಹಿಸಿತ್ತು. ಪಾಕಿಸ್ತಾನಕ್ಕೆ ನೀಡುತ್ತಾ ಬರಲಾಗಿದ್ದ ದಶಕಗಳಷ್ಟು ಹಿಂದಿನಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತ ಪಾಕಿಸ್ತಾನದಿಂದ ಆಮದಾಗುವ ಉತ್ಪನ್ನಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಶೇಕಡಾ ೨೦೦ರಷ್ಟು ಏರಿಸಿತ್ತು. ಕ್ರಮವನ್ನು ಭಾರತ ಶನಿವಾರದಿಂದಲೇ ಅನುಷ್ಠಾನಗೊಳಿಸಿತ್ತುಪುಲ್ವಾಮದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಸ್ಥಳದಿಂದ ೧೦ ಕಿಮೀ ದೂರದಲ್ಲಿ ಸೋಮವಾರ ಭಯೋತ್ಪಾದಕರ ಜೊತೆಗೆ ನಡೆದ ಗುಂಡಿನ ಘರ್ಷಣೆಯಲ್ಲಿ ಅಸು ನೀಗಿರುವವರಲ್ಲಿ ಒಬ್ಬ ಮೇಜರ್, ಮೂವರು ಯೋಧರು ಮತ್ತು ಒಬ್ಬ ನಾಗರಿಕ ಕೂಡಾ ಸೇರಿದ್ದು, ಮೃತನಾಗಿರುವ ನಾಗರಿಕನನ್ನು ಮುಷ್ತಾಖ್ ಅಹ್ಮದ್ ಎಂಬುದಾಗಿ ಗುರುತಿಸಲಾಯಿತು. ರಾಷ್ಟ್ರೀಯ ರೈಫಲ್ಸ್ (ಆರ್ಆರ್), ಸ್ಪೆಶ್ಯಲ್ ಆಪರೆಷನ್ಸ್ ಗ್ರೂಪ್ (ಎಸ್ಒಜಿ), ರಾಜ್ಯ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಭಾನುವಾರ ರಾತ್ರಿ ಗ್ರಾಮಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಗುಂಡಿನ ಘರ್ಷಣೆ ಸಂಭವಿಸಿತು. ಫೆಬ್ರುವರಿ ೧೪ರಂದು ಆತ್ಮಹತ್ಯಾ ದಾಳಿ ನಡೆಸಿದ ಜೈಶ್--ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರ ಗುಂಪು ಅವಿತಿದೆ ಎಂಬ ವರ್ತಮಾನ ಲಭಿಸಿದಾಗ ಭದ್ರತಾ ಪಡೆಗಳು ಗ್ರಾಮಕ್ಕೆ ಮುತ್ತಿಗೆ ಹಾಕಿದ್ದವು

2019: ಹೇಗ್ (ನೆದರ್ಲ್ಯಾಂಡ್ಸ್): ಪಾಕಿಸ್ತಾನವು ಭಾರತದ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಪ್ರಚಾರ ಸಾಧನವಾಗಿ ಬಳಸಿಕೊಳ್ಳುತ್ತಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ  (ಐಸಿಜೆ) ತಿಳಿಸಿದ ಭಾರತ, ಪಾಕ್ ಸೇನಾ ನ್ಯಾಯಾಲಯವು ವಿಚಾರಣೆಯನಾಟಕ ನಡೆಸಿ ಅವರಿಗೆ ನೀಡಿದ ಮರಣದಂಡನೆಯನ್ನುಅಕ್ರಮ ಎಂಬುದಾಗಿ ಘೋಷಿಸಬೇಕು ಎಂದು ಕೋರಿತು. ವಿಶ್ವಸಂಸ್ಥೆ ನ್ಯಾಯಾಲಯದಲ್ಲಿ ಭಾರತದ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರುಪಾಕಿಸ್ತಾನದ ಸೇನಾ ನ್ಯಾಯಾಲಯವು  ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕವನ್ನು ಕಲ್ಪಿಸದೆಯೇ ವಿಚಾರಣೆಯ ನಾಟಕ (ಪ್ರಹಸನ) ನಡೆಸಿ ಮರಣದಂಡನೆ ವಿಧಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಹೇಳಿದರು. ಅಂತರಾಷ್ಟ್ರೀಯ ನ್ಯಾಯಾಲಯವು ನಾಲ್ಕು ದಿನಗಳ ಕಾಲ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ. ’ ಪ್ರಕರಣದಲ್ಲಿ ಪಾಕಿಸ್ತಾನದ ರಕ್ಷಣಾತ್ಮಕ ವಾದದಲ್ಲಿ ಹುರುಳೇ ಇಲ್ಲ. ಅದು ಕುಲಭೂಷಣ್ ಜಾಧವ್ ಅವರಿಗೆ ಯಾವ ಅಪರಾಧಗಳಿಗಾಗಿ ಮರಣದಂಡನೆ ವಿಧಿಸಲಾಗಿದೆ ಎಂಬ ಮೂಲಭೂತ ವಿವರಣೆಗಳನ್ನು ಕೂಡಾ ನೀಡಿಲ್ಲ ಎಂದು ಸಾಳ್ವೆ ವಾದಿಸಿದರು. ಹಿಂದಿನ ವಾರ ನಡೆದಿರುವ ಪುಲ್ವಾಮ ಪೈಶಾಚಿಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾದವು.. ದಕ್ಷಿಣ ಕಾಶ್ಮೀರದಲ್ಲಿ ನಡೆದ ಆತ್ಮಹತ್ಯಾ ಭಯೋತ್ಪಾದಕ ದಾಳಿಯಲ್ಲಿ ೪೦ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಘಟನೆ ದೇಶಾದ್ಯಂತ ತೀವ್ರ ಆಕ್ರೋಶವನ್ನು ಹುಟ್ಟು ಹಾಕಿದ್ದು, ಭಾರತವು ಪಾಕಿಸ್ತಾನಕ್ಕೆ ದಶಕಗಳಿಂದ ನೀಡುತ್ತಾ ಬಂದಿದ್ದಪರಮ ಆಪ್ತ ರಾಷ್ಟ್ರ ಸ್ಥಾನಮಾನವನ್ನು ರದ್ದು ಪಡಿಸಿತ್ತು. ೨೦೧೭ರ ಮೇ ತಿಂಗಳಲ್ಲಿ ಭಾರತವು ದೂರು ನೀಡಿದ ಬಳಿಕ ಜಾಗತಿಕ ನ್ಯಾಯಾಲಯವು ಕುಲಭೂಷಣ್ ಜಾಧವ್ ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿತ್ತು. ಭಾರತ ಮತ್ತು ಪಾಕಿಸ್ತಾನ ಕಳೆದ ವರ್ಷ ಹಲವಾರು ಸಂದರ್ಭಗಳಲ್ಲಿ ಲಿಖಿತ ಅರ್ಜಿ, ಸಮರ್ಥನೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದವು. ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಸೇವೆಯಿಂದ ನಿವೃತ್ತರಾದ ಬಳಿಕ ತಮ್ಮ ವ್ಯವಹಾರವನ್ನು ಆರಂಭಿಸಿದ್ದರು ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ೨೦೧೬ರ ಮಾರ್ಚ್ ತಿಂಗಳಲ್ಲಿ  ಇರಾನಿಗೆ ಭೇಟಿ ನೀಡಿದ್ದರು. ಆಗ ಅವರನ್ನು ಇರಾನಿನಿಂದ ಅಪಹರಿಸಲಾಗಿತ್ತು ಎಂಬುದು ಭಾರತದ ವಾದ. ಕೆಲವು ವಾರಗಳ ಬಳಿಕ ಅವರು ಪಾಕಿಸ್ತಾನದಲ್ಲಿ ಬಂಧಿತರಾಗಿರುವುದು ಬೆಳಕಿಗೆ ಬಂದಿತ್ತು. ಜಾಧವ್ ಅವರನ್ನು ಬಲೂಚಿಸ್ಥಾನದಲ್ಲಿ ಬಂಧಿಸಲಾಗಿದೆ ಮತ್ತು ಅವರು ಗೂಢಚರ್ಯೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಪಾಕಿಸ್ತಾನದ ಸೇನಾ ನ್ಯಾಯಾಲಯವು ಪ್ರತಿಪಾದಿಸಿತ್ತು. ಭಾರತವು ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸುವಂತೆ ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ೧೩ ಬಾರಿ ಪಾಕಿಸ್ತಾನಕ್ಕೆ ನೆನಪೋಲೆಗಳನ್ನು ಕಳುಹಿಸಿತ್ತು. ಆದರೆ ಅದಕ್ಕೆ ಪಾಕಿಸ್ತಾನದಿಂದ ಯಾವುದೇ ಧನಾತ್ಮಕ ಸ್ಪಂದನೆ ಲಭಿಸಲಿಲ್ಲ ಎಂದು ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ ಸಾಳ್ವೆ ಅವರು ವಿಶ್ವಸಂಸ್ಥೆ ನ್ಯಾಯಾಲಯಕ್ಕೆ ವಿವರಿಸಿದರು. ಪಾಕಿಸ್ತಾನವು ತನಿಖೆಯ ಯಾವುದೇ ವಿವರಗಳನ್ನು ಒದಗಿಸಿಲ್ಲ ಮತ್ತು ಜಾಧವ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವುದಕ್ಕೂ ಮೊದಲೇ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆದುಕೊಂಡಿತ್ತು ಎಂದು ಸಾಳ್ವೆ ನ್ಯಾಯಾಲಯಕ್ಕೆ ಹೇಳಿದರು. ೨೦೧೬ರ ಏಪ್ರಿಲ್ ತಿಂಗಳಲ್ಲಿ ಜಾಧವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ೨೦೧೬ರ ಮೇ ತಿಂಗಳಲ್ಲಿ ಜಾಧವ್ ಅವರನ್ನು ಪ್ರಶ್ನಿಸಿ, ತನಿಖೆಗೆ ಗುರಿ ಪಡಿಸಲಾಗಿತ್ತು. ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಭಾರತವು ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸುವಂತೆ ನೆನಪೋಲೆಗಳನ್ನು ಕಳುಹಿಸಿತ್ತು . ರಾಜತಾಂತ್ರಿಕ ಸಂಪರ್ಕ ಒದಗಿಸುವ ಬಗೆ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ ಎಂದು ಸಾಳ್ವೆ ವಿವರಿಸಿದರು.  ’ಕಳೆದ ಮೂರು ವರ್ಷಗಳಿಂದ ಅವರು (ಜಾಧವ್) ಅನುಭವಿಸಿರುವ ಮಾನಸಿಕ ಆಘಾತವನ್ನು ಪರಿಗಣಿಸಿ, ಮಾನವ ಹಕ್ಕುಗಳನ್ನು ವಾಸ್ತವವನ್ನಾಗಿ ಮಾಡುವ ಸಲುವಾಗಿ ನ್ಯಾಯದ ಹಿತ ಕಾಪಾಡಲು ಅವರನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಸಾಳ್ವೆ ಅವರು ೧೫ ಸದಸ್ಯರ ನ್ಯಾಯಾಲಯವನ್ನು ಕೋರಿದರುವಿಚಾರಣಾ ಪ್ರಕ್ರಿಯೆಯ ಕನಿಷ್ಠ ಮಾನದಂಡಗಳನ್ನು ಕೂಡಾ ಪಾಲಿಸುವಲ್ಲಿ ವಿಫಲವಾಗಿರುವ ಪಾಕಿಸ್ತಾನದ ಸೇನಾ ನ್ಯಾಯಾಲಯದ ವಿಚಾರಣೆಯನ್ನು ಕಾನೂನು ಬಾಹಿರ ಎಂಬುದಾಗಿ ಘೋಷಿಸುವ ಮೂಲಕ ಭಾರತಕ್ಕೆ ಪರಿಹಾರವನ್ನು ಒದಗಿಸಬೇಕು ಎಂದು ಹೇಳಿದ ಸಾಳ್ವೆ ಅವರು ಪಾಕಿಸ್ತಾನ ಸರ್ಕಾರವು ಜಾಧವ್ ಪ್ರಕರಣವನ್ನು ಪ್ರಚಾರ ಸಾಧನವಾಗಿ ಕೂಡಾ ಬಳಸಿಕೊಳ್ಳುತ್ತಿದೆ ಎಂದೂ ಟೀಕಿಸಿದರು. ಜಾಧವ್ ತಪ್ಪೊಪ್ಪಿಗೆ ಹೇಳಿಕೆಯನ್ನು ಪ್ರಚಾರ ಸಾಧನವಾಗಿ ಪಾಕಿಸ್ತಾನ ಬಳಸಿಕೊಳ್ಳುತ್ತಿರುವುದು ವಿಯೆನ್ನಾ ಘೋಷಣೆಯ ಉಲ್ಲಂಘನೆಯಾಗಿದೆ ಎಂದೂ ಸಾಳ್ವೆ ಹೇಳಿದರು. ಪಾಕಿಸ್ತಾನವು ಫೆಬ್ರುವರಿ ೧೯ರಂದುಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತನ್ನ ವಾದವನ್ನು ಮಂಡಿಸಲಿದೆ. ಪಾಕಿಸ್ತಾನದ ವಾದಕ್ಕೆ ಭಾರತವು ಫೆಬ್ರುವರಿ ೨೦ರಂದು ಉತ್ತರ ನೀಡಲಿದೆ. ಫೆಬ್ರುವರಿ ೨೧ರಂದು ಪಾಕಿಸ್ತಾನವು ತನ್ನ ಪರಿಸಮಾಪ್ತಿ ಹೇಳಿಕೆಯನ್ನು ನೀಡಲಿದೆಅಂತಾರಾಷ್ಟ್ರೀಯ ನ್ಯಾಯಾಲಯವು ಕೆಲವು ತಿಂಗಳುಗಳ ಬಳಿಕ ತನ್ನ ತೀರ್ಪು ನೀಡುವ ನಿರೀಕ್ಷೆ ಇದೆ. ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ೨೦೧೭ರ ಏಪ್ರಿಲ್ ತಿಂಗಳಲ್ಲಿ ಮರಣದಂಡನೆ ವಿಧಿಸಿತ್ತು. ಹೇಗ್ನಲ್ಲಿ ಇರುವ ಅಂತಾರಾಷ್ಟ್ರೀಯ ನ್ಯಾಯಾಲಯವು ತನ್ನ ಮುಂದಿರುವ ಪ್ರಕರಣವು ಇತ್ಯರ್ಥವಾಗುವವರೆಗೆ ಮರಣದಂಡನೆಯನ್ನು ಅನುಷ್ಠಾನಗೊಳಿಸದಂತೆ ಪಾಕಿಸ್ತಾನಕ್ಕೆ ಕಳೆದ ವರ್ಷ ಆಜ್ಞಾಪಿಸಿತ್ತುಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನವು ೨೦೧೬ರಲ್ಲಿ ಬಂಧಿಸಿತ್ತು. ಜಾಧವ್ ಅವರು ಇರಾನಿನಿಂದ ನಕಲಿ ಪಾಸ್ಪೋರ್ಟ್ ಬಳಸಿ ರಾಷ್ಟ್ರವನ್ನು ಪ್ರವೇಶಿಸಿದ್ದರು ಎಂಬುದು ಪಾಕಿಸ್ತಾನಿ ಅಧಿಕಾರಿಗಳ ಪ್ರತಿಪಾದನೆ. ಪಾಕಿಸ್ತಾನದಲ್ಲಿ ,೩೪೫ ಜನರನ್ನು  ಬಲಿತೆಗೆದುಕೊಂಡಿರುವ ವಿವಿಧ ಭಯೋತ್ಪಾದಕ ಕೃತ್ಯಗಳಿಗೂ ಜಾಧವ್ಗೂ ನಂಟು ಇತ್ತು, ಉದ್ದೇಶಕ್ಕಾಗಿ ಜಾಧವ್ ಇರಾನಿಗೆ ನಿಗೂಢ ಭೇಟಿಗಳನ್ನು ನೀಡುತ್ತಿದ್ದರೆಂಬುದು ಪಾಕಿಸ್ತಾನದ ಅಧಿಕಾರಿಗಳ ಆರೋಪ.  ನೆದರ್ಲ್ಯಾಂಡ್ಸಿನ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್ ಪ್ರಕರಣದ ವಿಚಾರಣೆ ಆರಂಭಕ್ಕೂ ಮುನ್ನವೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್, ಪಾಕಿಸ್ತಾನಿ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್ ನ್ಯಾಯಾಲಯದಲ್ಲಿ ಹಾಜರಿದ್ದರು.

2019: ಮುಂಬೈ: ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಮತ್ತು ಶಿವಸೇನೆ  ಇಲ್ಲಿ ಪ್ರಕಟಿಸಿದವುಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕರೆ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಣೆ ಮಾಡಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆಯು ೨೩ ಸ್ಥಾನಗಳಿಗೆ ಮತ್ತು ಬಿಜೆಪಿಯು ೨೫ ಸ್ಥಾನಗಳಿಗೆ ಸ್ಪರ್ಧಿಸಲಿವೆ ಎಂದು ಫಡ್ನವಿಸ್ ನುಡಿದರುನಿರ್ಣಯದ ಬಗ್ಗೆ ವಿವರಣೆ ನೀಡಿದ ಫಡ್ನವಿಸ್, ರಾಷ್ಟ್ರದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ೨೦೧೯ರ ಚುನಾವಣೆಯಲ್ಲಿ ಬಿಜೆಪಿಯು ರಾಷ್ಟ್ರಮಟ್ಟದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಭವಿಷ್ಯ ನುಡಿದರು. ಶಿವಸೇನೆಯು ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಜೊತೆಗೆ ಬಹಿರಂಗವಾಗಿಯೇ ಭಿನ್ನಮತವನ್ನು ವ್ಯಕ್ತ ಪಡಿಸುತ್ತಾ ಬಂದಿತ್ತು. ಪ್ರಧಾನಿಯವರನ್ನು ಟೀಕಿಸಲು ಕೂಡಾ ಅದು ಹಿಂಜರಿಯುತ್ತಿರಲಿಲ್ಲ. ಕಳೆದವಾರ ಶಿವಸೇನಾ ನಾಯಕ ಸಂಜಯ್ ರೌತ್ ಅವರು ದೆಹಲಿಯಲ್ಲಿ ಚಂದ್ರಬಾಬು ನಾಯ್ಡು ಅವರು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆಸಿದ ಧರಣಿ ಸ್ಥಳಕ್ಕೂ ಅಚ್ಚರಿದಾಯಕ ಭೇಟಿ ನೀಡಿದ್ದರು. ಧರಣಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

2019: ನವದೆಹಲಿ: ಭಯೋತ್ಪಾದನೆ ವಿಚಾರದಲ್ಲಿ ಮಾತುಕತೆ ನಡೆಸುವ ಕಾಲ ಮುಗಿದಿದೆ ಎಂಬುದನ್ನು ಪುಲ್ವಾಮ ಭಯೋತ್ಪಾದಕ ದಾಳಿ ತೋರಿಸಿಕೊಟ್ಟಿದೆ. ಈಗ ಜಗತ್ತು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಪುಲ್ವಾಮದಾಳಿಯು ಮಾತುಕತೆಗಳ ಕಾಲ ಮುಗಿದಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಈಗ ಜಗತ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಮೋದಿ ಅವರು ಅಜೆಂಟೀನಾ ಅಧ್ಯಕ್ಷ ಮೌರಿಸಿಯೊ ಮ್ಯಾಕ್ರಿ ಅವರ ಜೊತೆಗೆ ಮಾತುಕತೆ ನಡೆಸಿದ ಬಳಿಕ ನುಡಿದರು.  ‘ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದು ಕೂಡಾ ಭಯೋತ್ಪಾದನೆಗೆ ನೀಡುವ ಒಂದು ರೀತಿಯ ಪ್ರೋತ್ಸಾಹವಾಗುತ್ತದೆ. -೨೦ ರಾಷ್ಟ್ರಗಳ ಭಾಗವಾಗಿ ನಾವು ಹಂಬರ್ಗ್ ನಾಯಕರ ಹೇಳಿಕೆಯ ೧೧ ಅಂಶಗಳ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುತ್ತಿರುವುದು ಕೂಡಾ ಮಹತ್ವದ್ದಾಗಿದೆ. ಭಾರತ ಮತ್ತು ಅರ್ಜೆಂಟೀನಾ ಭಯೋತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಘೋಷಣೆ ಮಾಡಲಿವೆ ಎಂದು ಪ್ರಧಾನಿ ನುಡಿದರು. ಮ್ಯಾಕ್ರಿ ಅವರು ಮೋದಿ ಅಭಿಪ್ರಾಯಗಳನ್ನು ಸಮರ್ಥಿಸಿದರು ಮತ್ತು ಭಯೋತ್ಪದನೆ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆಗೆ ಕೆಲಸ ಮಾಡುವುದಾಗಿ ಹೇಳಿದರು. ‘ಕ್ರೂರ (ಪುಲ್ವಾಮ) ದಾಳಿಒಯಲ್ಲಿ ಹುತಾತ್ಮರಾದವರಿಗೆ ನನ್ನ ಶೋಕವನ್ನು ವ್ಯಕ್ತ ಪಡಿಸಲು ನಾನು ಬಯಸುತ್ತೇನೆ. ಪ್ರತಿಯೊಂದು ಭಯೋತ್ಪಾದಕ ದಾಳಿಯನ್ನೂ ನಾವು ಖಂಡಿಸುತ್ತೇವೆ. ಮಾನವತೆಯ ವಿರುದ್ಧದ ಪೀಡೆಯ ವಿರುದ್ಧದ ಹೋರಾಟದಲ್ಲಿ ಒಟ್ಟಾಗಿ ಕೆಲಸ ಮಾಡುವುದಕ್ಕೆ ನನಗೆ ಖುಶಿ ಇದೆ ಎಂದು ಮ್ಯಾಕ್ರಿ ನುಡಿದರು. ಪುಲ್ವಾಮ ದಾಳಿಯ ಸೂತ್ರಧಾರರನ್ನು ಶಿಕ್ಷಿಸಲು ತಮ್ಮ ಸರ್ಕಾರವು  ಯೋಧರಿಗೆ ಮುಕ್ತ ಸ್ವಾತಂತ್ರ್ಯ ನೀಡಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಪುಲ್ವಾಮ ದಾಳಿ ನಡೆದ ಸ್ಥಳದಿಂದ ಕೆಲವೇ ಕಿಮೀ ದೂರದಲ್ಲಿ ಸೋಮವಾರ ಭಯೋತ್ಪಾಧಕರ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳು ಪುಲ್ವಾಮ ಸಿಆರ್ ಪಿಎಫ್ ಯೋಧರ ಮೇಲಿನ ದಾಳಿ ಸಂಚನ್ನು ರೂಪಿಸಿದ್ದ ಸೂತ್ರದಲ್ಲಿ ರಶೀದ್ ಘಾಜಿ ಸೇರಿದಂತೆ ಮೂವರು ಜೈಶ್--ಮೊಹಮ್ಮದ್ ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದವು. ರಶೀದ್ ಘಾಜಿ ಪಾಕಿಸ್ತಾನಿಯಾಗಿದ್ದು, ಬಾಂಬ್ ತಯಾರಿಕೆಯಲ್ಲಿ ಸಿದ್ಧ ಹಸ್ತನಾಗಿದ್ದ ಎನ್ನಲಾಯಿತು..

2019: ನವದೆಹಲಿ: ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿಯೇ, ಕೇಂದ್ರ ಸರ್ಕಾರಕ್ಕೆ ತನ್ನ ಲಾಭದ (ಡಿವಿಡೆಂಡ್) ಭಾಗವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಒಪ್ಪಿಗೆ ನೀಡಿದೆ. ತನ್ನ ಜನಪ್ರಿಯ ಕಾರ್ಯಕ್ರಮಗಳ ಜಾರಿಗೆ ಹಣ ಹೊಂದಿಸಲು ಸರ್ಕಾರಕ್ಕೆ ಇದರಿಂದ ಅನುಕೂಲವಾಗಲಿದೆ. ೨೮೦೦೦ ಕೋಟಿ (೨೮೦ ಬಿಲಿಯನ್) ರೂಪಾಯಿಗಳನ್ನು ಮಧ್ಯಂತರ ಲಾಭಾಂಶವಾಗಿ (ಡಿವಿಡೆಂಡ್) ಸರ್ಕಾರಕ್ಕೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಮಂಡಳಿಯು ಒಪ್ಪಿಗೆ ನೀಡಿದೆ ಎಂದು ಬ್ಯಾಂಕಿನ ಹೇಳಿಕೆ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಮುಂಗಡ ಹಣ ಪಾವತಿಯನ್ನು ಆರ್ಬಿಐ ಪ್ರಕಟಿಸಿರುವು ವರ್ಷದಲ್ಲಿ ಇದು ಎರಡನೇ ಬಾರಿ.
ಆರ್ ಬಿಐ ಲಾಭಾಂಶವು ಮೋದಿ ಸರ್ಕಾರಕ್ಕೆ ಮುಂಗಡ ಪತ್ರದ ಹಣಕಾಸು ಕೊರತೆಯನ್ನು ನೀಗಿಸಿ, ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿಯೇ ರೈತರ ಖಚಿತ ಆದಾಯ ಬೆಂಬಲ ಕಾರ್ಯಕ್ರಮ ಜಾರಿಗೆ ನಿಧಿ ಒದಗಿಸುವ ಸಾಧ್ಯತೆಗಳಿವೆ. ಸರ್ಕಾರಕ್ಕೆ ರೈತರಿಗೆ ಖಚಿತ ಆದಾಯ ಒದಗಿಸುವ ಕಾರ್ಯಕ್ರಮದ ಮೊದಲ ಕಂತಿಗೆ ಜಾರಿಗೆ ೨೦,೦೦೦ ಕೋಟಿ ರೂಪಾಯಿಗಳ ಅಗತ್ಯವಿದ್ದು, ಮಾರ್ಚ್ ೩೧ರ ಒಳಗಾಗಿ ಸರ್ಕಾರವು ಹಣವನ್ನು ಬಿಡುಗಡೆ ಮಾಡಬೇಕಾಗಿದೆ. ನಗದು ಬೆಂಬಲ ಯೋಜನೆಯ ಪ್ರಕಾರ ಎರಡು ಹೆಕ್ಟೃರ್ ಒಳಗಿನ ಭೂಮಿ ಹೊಂದಿರುವ ೧೨೦ ದಶಲಕ್ಷ ರೈತರಿಗೆ ಸರ್ಕಾರ ಒಂದು ವರ್ಷದಲ್ಲಿ  ಮೂರು ಕಂತುಗಳಲ್ಲಿ ತಲಾ ೨೦೦೦ ರೂಪಾಯಿಗಳಂತೆ ೬೦೦೦ ರೂಪಾಯಿಗಳನ್ನು ಪಾವತಿ ಮಾಡಲಿದೆ. 
 ಮಂಡ್ಯ: ರೈತ ಮುಖಂಡ, ಮೇಲುಕೋಟೆ ಕ್ಷೇತ್ರದ ಸರ್ವೋದಯ ಪಕ್ಷದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ  ಫೆಬ್ರುವರಿ 18ರ ಭಾನುವಾರ ವಿಧಿವಶರಾದರು.  ಅವರಿಗೆ 69 ವರ್ಷ ವಯಸ್ಸಾಗಿತ್ತು.  ಮಂಡ್ಯ ನಗರದಲ್ಲಿ ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ಪುಟ್ಟಣ್ಣಯ್ಯ ಅವರು ಎದೆ ನೋವಿನಿಂದ ಕುಸಿದು ಬಿದ್ದರು.  ಅವರನ್ನು ತತ್ ಕ್ಷಣವೇ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾದರು ಎಂದು ವರದಿಗಳು ತಿಳಿಸಿದವು.  ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಸರ್ವೋದಯ ಪಕ್ಷದ ವತಿಯಿಂದ ಮೇಲುಕೋಟೆ ಕ್ಷೇತ್ರದಲ್ಲಿ 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ  ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮೂಲಕ ರೈತರ ಏಕೈಕ ಪ್ರತಿನಿಧಿಯಾಗಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ್ದರು.  ರಾಜ್ಯ ರೈತರ ಧ್ವನಿಯಾಗಿದ್ದ ಕೆಎಸ್ ಪುಟ್ಟಣ್ಣಯ್ಯ ಅವರು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1994ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಸತರ ಮೂರು ಬಾರಿ ಸೋಲಿನ ಕಹಿ ಉಂಡಿದ್ದರು. ರಾಜ್ಯ ರೈತ ಸಂಘ ಹಾಗೂ ಚುನಾವಣೆ: 1989 ಚುನಾವಣೆಯಲ್ಲಿ ಬಾಬಾಗೌಡ ಪಾಟೀಲ್ ಅವರು ಕಿತ್ತೂರು ಹಾಗೂ ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದರು. ಕಿತ್ತೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಧಾರವಾಡ ಗ್ರಾಮಾಂತರ ಕ್ಷೇತ್ರವನ್ನು ಅಂದಿನ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರು ಪ್ರತಿನಿಧಿಸಿ, ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಬಾರಿ ಪುಟ್ಟಣ್ಣಯ್ಯ ಅವರು ಹಸಿರು ಶಾಲು ಹೊದ್ದು ರೈತರ ಪ್ರತಿನಿಧಿಯಾಗಿ ಮೇಲುಕೋಟೆಯಲ್ಲಿ ಪ್ರಚಾರಕ್ಕೆ ಆಗಮಿಸಿದಾಗಲೇ ಗೆಲುವಿನ ರುಚಿ ಉಂಡಿದ್ದರು. ಎಲ್ಲೆಡೆ ಮುದ್ದೆ ಬಸ್ಸಾರು ಊಟ, ನೀರು ಮಜ್ಜಿಗೆ ನೀಡಿದ ಜನರು ಮನೆ ಮಗನಂತೆ ತಮ್ಮ ಕ್ಷೇತ್ರ ಅಭ್ಯರ್ಥಿಯನ್ನು ಕಂಡರು. ಇದರ ಜೊತೆಗೆ ಕೆಎಸ್ ಪುಟ್ಟಣ್ಣಯ್ಯ ಅವರಿಗೆ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಬೆಂಬಲವೂ ಸಿಕ್ಕಿತ್ತು.  ಮೇಲುಕೋಟೆ ಕಣದಲ್ಲಿ 13 ಜನರಿದ್ದರೂ ಜೆಡಿಎಸ್ ಎರಡು ಬಾರಿ ಶಾಸಕ ಸಿ.ಎಸ್ ಪುಟ್ಟರಾಜು ಅವರ ಪ್ರಬಲ ಪೈಪೋಟಿ ನಡುವೆ ಪುಟ್ಟಣ್ಣಯ್ಯ ಅವರು 80041 ಮತ ಗಳಿಸಿದ್ದರು.  ಪುಟ್ಟರಾಜು 70193 ಮತ ಪಡೆದು ಸೊಲೊಪ್ಪಿಕೊಂಡಿದ್ದರು.  ಕಾವೇರಿ ನೀರಿಗಾಗಿ ಹೋರಾಟ, ಸಕ್ಕರೆ ಕಾರ್ಖಾನೆ, ಕಬ್ಬಿಗೆ ಬೆಂಬಲ ಬೆಲೆಗಾಗಿ ಹೋರಾಟ ಎಲ್ಲವೂ ರೈತ ಮುಖಂಡ ಪುಟ್ಟಣ್ಣಯ್ಯ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿರಪರಿಚಿತರನ್ನಾಗಿಸಿತ್ತು.  ಇದರ ಜೊತೆಗೆ ಪ್ರಚಾರ ಕಾರ್ಯದಲ್ಲಿ ಎಲ್ಲರಿಗಿಂತ ಮುಂದಿದ್ದರು. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪುಟ ಆರಂಭಿಸಿದರು, ಪ್ರತ್ಯೇಕ ಜಾಹೀರಾತು ನೀಡಿದರು. ತಮ್ಮದೇ ಆದ ಅಚ್ಚುಕಟ್ಟಾದ ವೆಬ್ ಸೈಟ್ ಅದೂ ಕನ್ನಡದಲ್ಲಿ ರೂಪಿಸಿ, ಕನ್ನಡ ಟೆಕ್ಕಿಗಳಿಗೂ ಹತ್ತಿರವಾದದ್ದೂ ಅವರ ಗೆಲುವಿಗೆ ಕಾರಣವಾಗಿತ್ತು.

2018: ಶ್ರವಣಬೆಳಗೊಳ: ಜಿನ ಗಣ ಮನದ ಅಧಿನಾಯಕನ ಆರಾಧನೆಯಿಂದ ತಂಪಾಗಿತ್ತು ಇಂದ್ರಗಿರಿಯ ನೆತ್ತಿ. ಮುಗಿಲವೀರ ಬಾಹುಬಲಿಯ ಕಣ್ಣ ಮಿಂಚಲ್ಲಿ ಭಕ್ತಿಯ ವರ್ಣರಂಜಿತ ಹೊನಲನ್ನು ಹುಡುಕುತಾ, ನೆತ್ತಿಯಿಂದ ಪಾದದ ವರೆಗೆ ಪುಟ್ಟ ಮಗುವಿನಂತೆ ಮೀಯುವ ಅವನ ಮುಗ್ಧತೆಯನ್ನು ನೋಡುತಾ, 88ನೇ ಮಹಾಮಸ್ತಕಾಭಿಷೇಕದ ಪುಳಕಕ್ಕೆ ಸಾಕ್ಷಿ ಆಯಿತು ಜೈನಕಾಶಿ. ಯಾವ ಶೃಂಗಾರ ಇಲ್ಲದಿದ್ದರೂ ಸರ್ವಸುಂದರನಾಗಿದ್ದ, ಯಾವ ಕಲೆಯೂ ಇಲ್ಲದಿದ್ದರೂ ಅಸಾಮಾನ್ಯ ಕಲೆಯಾಗಿದ್ದ ಬಾಹುಬಲಿ, ರೂಪ ರೂಪಗಳನು ದಾಟಿ, ಮೂಡಿಸಿದ ಬೆರಗಿಗೆ ಬಾಹುಬಲಿಯೇ ಸಾಟಿ. ಮೈಸುಡುವ ಘೋರ ಬಿಸಿಲು ಭರತನಂತೆ ಆರ್ಭಟಿಸಿದರೂ, ಅಲ್ಲಿ ತಣ್ಣಗೆ ಮೀಯುತ್ತಾ, ಭಕ್ತರ ಅಂತರಂಗಕ್ಕೂ ತಂಪೆರೆಯುತ್ತಾ, ಮಲ್ಲಯುದ್ಧ- ಜಲಯುದ್ಧ- ದೃಷ್ಟಿಯುದ್ಧಗಳ ಬಳಿಕ ನಾಲ್ಕನೇ ಯುದ್ಧದಲ್ಲಿ ಗೆದ್ದ ವೀರನಂತೆ ಕಾಣಿಸುವ ವಿರಾಗಿ ಮಂದಸ್ಮಿತನಾಗಿದ್ದ. ಪ್ರಖರ ಸೂರ್ಯ ಭಕ್ತರನ್ನು ಬಸವಳಿಸಲು ಸೋತು, ಧರ್ಮಜ್ಯೋತಿ ಬೆಳಗಿಸಿ ಅಸ್ತಂಗತನಾದ. ದರ್ಪಣದಂತೆ ನಿರ್ಮಲವಾದ ಶರೀರ, ಜಲದಂತೆ ಸ್ವತ್ಛವಾಗಿದ್ದ ಕಪೋಲ, ಭುಜ ಮುಟ್ಟುವಂತಿದ್ದ ಕಿವಿ, ಗಜರಾಜನ ಸೊಂಡಿಲಿನಂತೆ ಗತ್ತಿನಲ್ಲಿ ಇಳಿಬಿದ್ದ ಆಜಾನುಬಾಹುವನ್ನು ಸಂಪೂರ್ಣವಾಗಿ ಮೀಯಿಸಲು ನಾನಾ ಅಭಿಷೇಕಗಳು ಸಾಹಸಪಟ್ಟವು. ಕಂಗೊಳಿಸಿದ ಬಾಹುಬಲಿ: ಆರಂಭದ 13ನೇ ನಿಮಿಷದಲ್ಲಿ ಕಣ್ಣಂಚು ಪೂರ್ತಿಯಾಗಿ, 42ನೇ ನಿಮಿಷದಲ್ಲಿ ಕಿವಿಯು, 57ನೇ ನಿಮಿಷದಲ್ಲಿ ಹಾಲ್ಗಲ್ಲವು ಒದ್ದೆಯಾದಾಗ ಗೊಮ್ಮಟ ಒಮ್ಮೆಲೆ, ಗುಳ್ಳಕಾಯಜ್ಜಿಯನ್ನು ನೆನೆಸಿಕೊಂಡು ನಕ್ಕ. ನಂತರವೆಲ್ಲ ನಡೆದಿದ್ದು ಬಾಹುಬಲಿಯ ರಂಗಿನೋಕುಳಿ. ಒಂದೊಂದು ಅಭಿಷೇಕ, ಒಂದೊಂದು ರೂಪದಲ್ಲಿ ಬಾಹುಬಲಿಯನ್ನು ಚಿತ್ರಿಸಿತ್ತು. ಅರಿಶಿನಕ್ಕೆ ಬಂಗಾರವಾಗಿ, ಎಳನೀರಿಗೆ ತಿಳಿಮೂರ್ತಿಯಾಗಿ, ಶ್ವೇತ ಕಲ್ಕಚೂರ್ಣಕ್ಕೆ ನಿಂತಲ್ಲೇ ಹಬೆಯೆಬ್ಬಿಸಿದ ಹಾಗೆ, ಶ್ರೀಗಂಧಕ್ಕೆ ಘಮ್ಮೆನ್ನುವ ಕೊರಡಾಗಿ, ಕೇಸರಿಗೆ ಕೆಂಪುಧೀರನಾಗಿ, ಗಿಡಮೂಲಿಕೆ ಕಷಾಯ ಮೈಮೇಲೆ ಬಿದ್ದಾಗ ಕಗ್ಗಲ್ಲ ಮೂರ್ತಿಯಂತೆ, ಅಷ್ಟಗಂಧ ಲೇಪಿಸಿಕೊಂಡಾಗ ಕಡುಗೆಂಪಾಗಿ ಕಂಡ ಬಾಹುಬಲಿಗೆ ನಾನಾ ಉದ್ಗಾರಗಳು ಸ್ವರಾಭಿಷೇಕವಾದವು. ಪುಷ್ಪಗಳು ನೆತ್ತಿ ಮೇಲೆ ಮಳೆಗರೆದಾಗ, ಬಾಹುಬಲಿಯೇ ಹೂವಿನಂತೆ ಕಂಗೊಳಿಸಿದರು. ಇವನ್ನೆಲ್ಲ ದೇವಗಣ, ಮನುಷ್ಯಗಣ, ಭಕ್ತಿಗಣಗಳು ಪರಮಾಶ್ಚರ್ಯದಲ್ಲಿ ಕಣ್ತುಂಬಿಕೊಂಡವು. ಕಡಲ ಗಾಂಭೀರ್ಯದ ನಿಲುವು, ಗಗನದೌದಾರ್ಯದ ಬಾಹುಬಲಿಗೆ ಇಷ್ಟೆಲ್ಲ ವೈಭವದ ಆರಾಧನೆ ನಡೆದಿದ್ದು, ಮಧ್ಯಪ್ರದೇಶದ ವರ್ಧಮಾನ ಸಾಗರ ಮಹಾರಾಜರ ನೇತೃತ್ವದಲ್ಲಿ. ದಿಗಂಬರ ಮುನಿಗಳು, ಜೈನ ಆಚಾರ್ಯರು ಮೊದಲು ಕಲಶದ ಅಭಿಷೇಕದಿಂದ ಬಾಹುಬಲಿಯ ನೆತ್ತಿ ತಂಪು ಮಾಡಿದ ಬಳಿಕ, ಶ್ರವಣಬೆಳಗೊಳ ಜೈನಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಷೇಕ ಪೂರೈಸಿದರು. ನಂತರ ಹರಾಜಿನಲ್ಲಿ ಕಲಶ ಕೊಂಡವರು ತಮ್ಮ ನೆಚ್ಚಿನ ಸ್ವಾಮಿಗೆ ಮಂಡೆಸ್ನಾನ ಮಾಡಿದರು. ಕಡಲ ಗಾಂಭೀರ್ಯದ ನಿಲುವು, ಗಗನದೌದಾರ್ಯದ ಬಾಹುಬಲಿಗೆ ಇಷ್ಟೆಲ್ಲ ವೈಭವದ ಆರಾಧನೆ ನಡೆದಿದ್ದು, ಮಧ್ಯಪ್ರದೇಶದ ವರ್ಧಮಾನ ಸಾಗರ ಮಹಾರಾಜರ ನೇತೃತ್ವದಲ್ಲಿ. ದಿಗಂಬರ ಮುನಿಗಳು, ಜೈನ ಆಚಾರ್ಯರು ಮೊದಲು ಕಲಶದ ಅಭಿಷೇಕದಿಂದ ಬಾಹುಬಲಿಯ ನೆತ್ತಿ ತಂಪು ಮಾಡಿದ ಬಳಿಕ, ಶ್ರವಣಬೆಳಗೊಳ ಜೈನಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಷೇಕ ಪೂರೈಸಿದರು. ನಂತರ ಹರಾಜಿನಲ್ಲಿ ಕಲಶ ಕೊಂಡವರು ತಮ್ಮ ನೆಚ್ಚಿನ ಸ್ವಾಮಿಗೆ ಮಂಡೆಸ್ನಾನ ಮಾಡಿದರು. ಬಾಹುಬಲಿಯ ಮಂಡೆ ಮೇಲೆ ನಡೆದದ್ದು: ಜಲಾಭಿಷೇಕ, ಎಳನೀರು, ಕಬ್ಬಿನರಸ, ಕ್ಷೀರ, ಶ್ವೇತ ಕಲ್ಕ ಚೂರ್ಣ, ಅರಿಶಿನ, ಗಿಡಮೂಲಿಕೆ ಕಷಾಯ, ಪ್ರಥಮ ಕೋನ ಕಳಶ, ದ್ವಿತೀಯ ಕೋನ ಕಳಶ, ತೃತೀಯ ಕೋನ ಕಳಶ, ಚತುರ್ಥ ಕೋನ ಕಳಶ, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರ ವೃಷ್ಟಿ, ರಜತ ವೃಷ್ಟಿ, ಸುವರ್ಣ ವೃಷ್ಟಿ, ಪುಷ್ಪವೃಷ್ಟಿ, ಪೂರ್ಣಕುಂಭ, ಇಂದ್ರ- ಅಷ್ಟದ್ರವ್ಯ ಪೂಜೆ, ಮಹಾಮಂಗಳಾರತಿ. ಕಲಶಗಳ ವರ್ಗೀಕರಣ ಹೀಗೆ: ಪ್ರಥಮ ಕಲಶ, ಸುವರ್ಣ ಕಲಶ, ಕಾಂಸ್ಯ ಕಳಶ, ಶತಾಬ್ಧಿ ಕಲಶ, ದಿವ್ಯ ಕಲಶ, ಶುಭ ಮಂಗಳ ಕಲಶ, ರತ್ನ ಕಲಶ, ತಾಮ್ರ ಕಲಶ, ಗುಳಕಾಯಜ್ಜಿ ಕಲಶ. ದಾಖಲೆ ಬರೆದ ಮೊದಲ ಕಲಶ: ರಾಜಸ್ಥಾನ ಮೂಲದ ಆರ್‌.ಕೆ.ಮಾರ್ಬಲ್ಸ್ ಅಶೋಕ್ಪಾಟ್ನಿ ಕುಟುಂಬದವರು ಬಾರಿ 11.61 ಕೋಟಿ ರೂ. ಮೊತ್ತಕ್ಕೆ ಪ್ರಥಮ ಕಲಶವನ್ನು ಖರೀದಿಸಿ, ದಾಖಲೆ ಬರೆದರು. 2006ರಲ್ಲೂ ಇದೇ ಕುಟುಂಬ 1.8 ಲಕ್ಷ ಮೊತ್ತಕ್ಕೆ ಮೊದಲ ಕಲಶ ಪಡೆದು, ಪ್ರಥಮಾಭಿಷೇಕದ ಪುಳಕಕ್ಕೆ ಪಾತ್ರವಾಗಿತ್ತು. ಶನಿವಾರ ಮೊದಲ ದಿನ 108 ಕಲಶಗಳಅಭಿಷೇಕಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

2018: ಚೆನ್ನೈ: ತಮ್ಮ ರಾಜಕೀಯ ಪಕ್ಷದ ರಚನೆಗೆ ಮುಂಚಿತವಾಗಿಯೇ ಕಮಲಹಾಸನ್ ಅವರು ಭಾನುವಾರ ಚೆನ್ನೈಯ ಪೋಸ್ ಗಾರ್ಡನ್‌ನಲ್ಲಿ ಇರುವ ರಜನೀಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿ ರಜನೀಕಾಂತ್
ಅವರ ಜೊತೆಗೆ ಮಾತುಕತೆ ನಡೆಸಿದರು. ರಾಜಕಾರಣಿಗಳಾಗಿ ಪರಿವರ್ತನೆಗೊಂಡಿರುವ ಉಭಯ ನಟರೂ ತಮಿಳುನಾಡಿನ ರಾಜಕೀಯ ಪಕ್ಷಗಳನ್ನು ಎದುರಿಸುವ ಸಲುವಾಗಿ ತಾರಾ ಮೈತ್ರಿ ಮಾಡಿಕೊಳ್ಳಬಹುದು ಎಂಬ ಊಹಾಪೋಹಗಳ ಮಧ್ಯೆ ಉಭಯ ನಟರ ಈ ಭೇಟಿ ನಡೆಯಿತು. ಏನಿದ್ದರೂ ಕಮಲಹಾಸನ್ ಅವರು ಮಾತುಕತೆಯನ್ನು ಗೌಣಗೊಳಿಸಲು ಯತ್ನಿಸಿದರು. ಸಭೆಯ ಬಳಿಕ ವರದಿಗಾರರ ಜೊತೆ ಮಾತನಾಡಿದ ಅವರು ’ಇದು ಕೇವಲ ಸೌಜನ್ಯದ ಭೇಟಿಯಾಗಿತ್ತು. ರಾಜಕೀಯ ಸಭೆಯಲ್ಲ ಎಂದು ಹೇಳಿದರು. ’ನಾನು ನನ್ನ ರಾಜಕೀಯ ಪ್ರವಾಸದ ಬಗ್ಗೆ ಅವರಿಗೆ ತಿಳಿಸುವ ಸಲುವಾಗಿ ಬಂದೆ. ಅವರು ನನಗೆ ಶುಭ ಹಾರೈಸಿದರು ಎಂದು ಹಾಸನ್ ನುಡಿದರು. ಉಭಯರು ಕೈಜೋಡಿಸಲಿದ್ದೀರಾ ಎಂಬ ಪ್ರಶ್ನೆಗೆ ’ಕಾಲವೇ ಉತ್ತರ ನೀಡುತ್ತದೆ ಎಂದು ಅವರು ನುಡಿದರು.  ೬೩ರ ಹರೆಯದ ನಟ ತಮ್ಮ ರಾಜಕೀಯ ಪಕ್ಷದ ಹೆಸರನ್ನು ಅನಾವರಣಗೊಳಿಸಲು ಮತ್ತು ಫೆಬ್ರುವರಿ ೨೧ರಿಂದ ರಾಜ್ಯವ್ಯಾಪಿ ಪ್ರವಾಸ ನಡೆಸಲು ಸಜ್ಜಾಗಿದ್ದಾರೆ. ಅವರು ಪ್ರವಾಸದಲ್ಲಿ ತಮ್ಮ ಜೊತೆಗೂಡುವಂತೆ ರಜನೀಕಾಂತ್ ಅವರಿಗೆ ಆಹ್ವಾನ ನೀಡಿದರು.  ರಜನೀಕಾತ್ ಅವರೂ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಮಲಹಾಸನ್ ಅವರು ತಮ್ಮ ರಾಜಕೀಯ ಪ್ರವಾಸದಲ್ಲಿ ಜೊತೆಗೂಡುವಂತೆ ಆಹ್ವಾನ ನೀಡಿದ್ದನ್ನು ದೃಢ ಪಡಿಸಿದರು. ಆದರೆ ತಾವು ಪ್ರವಾಸದಲ್ಲಿ ಪಾಲ್ಗೊಳ್ಳುವ ಬಗ್ಗೆ ಸ್ಪಷ್ಟ ಪಡಿಸಲಿಲ್ಲ.  ಕಮಲಹಾಸನ್ ಅವರು ಹೆಸರು ಅಥವಾ ಹಣಕ್ಕಾಗಿ ರಾಜಕೀಯ ಪ್ರವೇಶಿಸುತ್ತಿಲ್ಲ. ರಾಜ್ಯದ ಜನರ ಸೇವೆಯ ಏಕೈಕ ಉದ್ದೇಶವಿಟ್ಟುಕೊಂಡು ಹೊರಟಿದ್ದಾರೆ. ಅವರು ಜನರ ಸೇವೆ ಮಾಡಬಯಸಿದ್ದಾರೆ. ಆದ್ದರಿಂದ ಅವರು ಯಶಸ್ಸು ಪಡೆಯಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ರಜನೀಕಾಂತ್ ನುಡಿದರು.  ‘ಉಭಯರ ಮೈತ್ರಿ ಆಗಲಿದೆಯೇ?’ ಎಂಬ ಪ್ರಶ್ನೆಗೆ, ’ನನ್ನ ಸ್ಟೈಲ್ ಮತ್ತು ಅವರ ಸ್ಟೈಲ್ ಚಿತ್ರಗಳಲ್ಲಿ ಕೂಡಾ ಭಿನ್ನ ಭಿನ್ನ ಎಂದು ರಜನೀಕಾಂತ್ ಉತ್ತರಿಸಿದರು.  ವಾಸ್ತವವಾಗಿ ಉಭಯರ ಮಧ್ಯೆ ಹಳೆಯ ಬಾಂಧವ್ಯ ಇದೆ. ಇಬ್ಬರೂ ಕಳೆದ ನಾಲ್ಕು ದಶಕಗಳಲ್ಲಿ ಹಲವಾರು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇಬ್ಬರ ನಡುವೆಯೂ ಉತ್ತಮ ವೈಯಕ್ತಿಕ ಬಾಂಧವ್ಯ ಇದೆ. ಈ ಬಾಂಧವ್ಯವನ್ನು ಅವರು ರಾಜಕೀಯ ಬಾಂಧವ್ಯವಾಗಿ ಪರಿವರ್ತಿಸಬಹುದು ಎಂಬ ವದಂತಿಗಳು ವ್ಯಾಪಕವಾಗಿದ್ದವು. ಇದಕ್ಕೆ ಮುನ್ನ ಕಮಲಹಾಸನ್ ಅವರು ರಜನೀಕಾಂತ್ ಜೊತೆಗೆ ಮೈತ್ರಿ ಸಾಧ್ಯತೆ ಇಲ್ಲ ಎಂದಿದ್ದರು.  ಆದರೂ, ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ತಮ್ಮ ಭಾಷಣದಲ್ಲಿ ರಜನೀಕಾಂತ್ ಅವರ ’ಬಣ್ಣ ಕೇಸರಿಯಲ್ಲ ಎಂಬುದಾಗಿ ತಾವು ಹಾರೈಸಿರುವುದಾಗಿ ಹೇಳಿದ್ದರು.  ‘ನಮ್ಮ ವಿಧಾನ ಭಿನ್ನವಾದದ್ದು. ಅವರ (ರಜನೀಕಾಂತ್) ಮೊತ್ತ ಮೊದಲ ಪ್ರಕಟಣೆಗಳೇ ನಿರ್ದಿಷ್ಟ ಹುಯಿಲು ಎಬ್ಬಿಸಿದವು. ಅದು ಕೇಸರಿ ಅಲ್ಲ ಎಂದು ನಾನು ಹಾರೈಸುವೆ ಎಂದು ಕಮಲ್ ಹಾಸನ್ ನುಡಿದರು.  ಚುನಾವಣೆ ಎದುರಿಸಲು ಉಭಯರೂ ಕೈಜೋಡಿಸುವ ಅಗತ್ಯ ಇದೆಯೇ ಎಂಬ ಬಗ್ಗೆ ರಜನೀಕಾಂತ್ ಅವರು ಪರಾಮರ್ಶೆ ನಡೆಸಬೇಕು ಎಂದೂ ಅವರು ಹೇಳಿದ್ದರು. ’ರಜನಿ ಸರ್ ಅವರು ಈ ಪ್ರಶ್ನೆಗೆ ಕಾಲವೇ ಉತ್ತರ ನೀಡುವುದು ಎಂಬುದಾಗಿ ಹೇಳಿದ್ದಾರೆ. ನಾನೂ ಆ ಅಭಿಪ್ರಾಯವನ್ನು ಅನುಮೋದಿಸಿದೇನೆ. ನಿಜವಾಗಿಯೂ ಕಾಲವೇ ಉತ್ತರ ನೀಡುವುದು ಎಂದು ಕಮಲಹಾಸನ್ ನುಡಿದರು.


2018: ರಾಯಗಡ (ಮಹಾರಾಷ್ಟ್ರ): ’ಹವಾಯಿ ಚಪ್ಪಲಿ ಧರಿಸುವವರೂ ’ಹವಾಯಿ-ಜಹಜ್ನಲ್ಲಿ (ಹವಾಯಿ ವಿಮಾನ) ಸಂಚರಿಸುವಂತೆ ಮಾಡಬೇಕು ಎಂಬುದು ತಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ಹೇಳಿದರು.  ೧೬,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ, ’ವಿಶ್ವಾದ್ಯಂತ ವೈಮಾನಿಕ ರಂಗ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನಾವು ಹಿಂದೆ ಉಳಿಯುವಂತಿಲ್ಲ. ಕಳೆದ ೭೦ ವರ್ಷಗಳಲ್ಲಿ ಭಾರತದಲ್ಲಿ ವಿಮಾನಯಾನ ನೀತಿ ಇರಲಿಲ್ಲ. ಕೈಗೆಟಕುವ ದರದಲ್ಲಿ ಭಾರತದ ಮೂಲೆ ಮೂಲೆಯನ್ನೂ ವಿಮಾನ ಮೂಲಕ ಸಂಪರ್ಕಿಸಲು ಸಾಧ್ಯವಾಗುವಂತೆ ಮಾಡುವ ಸಲುವಾಗಿ ಇತ್ತೀಚೆಗೆ ನಾವು ವಿಮಾನಯಾನ ನೀತಿಯನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.  ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶಿಲಾನ್ಯಾಸ ಫಲಕವನ್ನು ಸಮಾರಂಭದಲ್ಲಿ ಅನಾವರಣಗೊಳಿಸಿದ ಪ್ರಧಾನಿ  ಜವಾಹರಲಾಲ್ ನೆಹರೂ ಬಂದರಿನ ನಾಲ್ಕನೇ ಕಂಟೇನರ್ ಟರ್ಮಿನಲ್  ಉದ್ಘಾಟನೆಯನ್ನೂ ನೆರವೇರಿಸಿದರು. ’ಮಹಾನ್ ಶಿವಾಜಿ ಮಹಾರಾಜ್ ಅವರ ಜಯಂತಿಯ ಒಂದು ದಿನ ಮುಂಚಿತವಾಗಿ, ಮಹಾರಾಷ್ಟ್ರಕ್ಕೆ ಬರುವ ಅವಕಾಶ ನನಗೆ ಪ್ರಾಪ್ತವಾಗಿದೆ. ಜಾಗತೀಕರಣ ನಮ್ಮ ಕಾಲದ ವಾಸ್ತವ ಮತ್ತು ಅದರೊಂದಿಗೆ ಹೊಂದಿಕೊಂಡು ಸಾಗಲು ನಮಗೆ ಉನ್ನತ ಗುಣಮಟ್ಟದ ಮೂಲಸವಲತ್ತು ಬೇಕು. ಸಾಗರಮಾಲಾ ಯೋಜನೆಯು ಬಂದರುಗಳ ಅಭಿವೃದ್ಧಿಯ ಯೋಜನೆ. ಸರ್ಕಾರವು ಜಲಮಾರ್ಗಗಳ ಅಭಿವೃದ್ಧಿಯತ್ತ ಮಹತ್ವದ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಮೋದಿ ನುಡಿದರು.  ‘ನವಿ ಮುಂಬೈ ಮುಂಬೈ ವಿಷಯವು ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ನನೆಗುದಿಗೆ ಬಿದ್ದಿರುವ ಯೋಜನೆ ಇದೊಂದೇ ಅಲ್ಲ. ನಾನು ಅಧಿಕಾರ ಸ್ವೀಕರಿಸಿದಾಗ, ಇಂತಹ ಹಲವಾರು ಯೋಜನೆಗಳಿವೆ ಎಂಬುದು ನನ್ನ ಅರಿವಿಗೆ ಬಂತು. ಈ ಕಾರಣದಿಂದಲೇ ನಾವು ಪ್ರಗತಿ ಉಪಕ್ರಮಗಳನ್ನು ಆರಂಭಿಸಿದೆವು ಮತ್ತು ಯೋಜನೆಗಳನ್ನು ಪೂರ್ಣಗೊಳಿಸುವತ್ತ ಆದ್ಯತೆ ನೀಡಿದೆವು.’  ‘ನಮ್ಮ ರಾಷ್ಟ್ರದಲ್ಲಿ ಸುಮಾರು ೪೫೦ ವಿಮಾನಗಳು ಕಾರ್‍ಯಾಚರಣೆ ನಡೆಸುತ್ತಿವೆ. ೯೦೦ ಹೊಸ ವಿಮಾನಗಳನ್ನು ಈ ವರ್ಷ ತರಲಾಗಿದೆ. ವಿಮಾನಯಾನ ರಂಗ ಮುಂದುವರೆಯುತ್ತಿದೆ ಎಂದು ಅವರು ನುಡಿದರು.
ಜೆಎನ್ ಪಿಟಿಯ ನಾಲ್ಕನೇ ಕಂಟೇನರ್ ಟರ್ಮಿನಲ್ ನ ಒಂದನೇ ಹಂತವನ್ನು ೪,೭೧೯ ಕೋಟಿ ರೂಪಾಯಿ ವೆಚ್ಚದಲ್ಲಿ ದಾಖಲೆ ಕಾಲಾವಧಿಯಲ್ಲಿ ನಾವು ಪೂರ್ಣಗೊಳಿಸಿದ್ದೇವೆ ಎಂದು ಅವರು ಹೇಳಿದರು.  ೨೦೧೮ರ ಜನವರಿ ೮ರಂದು ಜಿವಿಕೆ ಪವರ್ ಅಂಡ್ ಇನ್ ಫ್ರಾಸ್ಟಕ್ಚರ್ ಲಿಮಿಟೆಡ್ ಈ ವಿಮಾನ ನಿಲ್ದಾಣ ಯೋಜನೆಗಾಗಿ ರಿಯಾಯ್ತಿ ಒಪ್ಪಂದಕ್ಕೆ ಸಹಿ ಹಾಕುತ್ತಿರುವ ವಿಚಾರವನ್ನು ಪ್ರಕಟಿಸಿತು. ಇದಕ್ಕೋಸ್ಕರ ಎಸ್ ಪಿವಿ (ಸ್ಪೆಶ್ಯಲ್ ಪರ್ಪಸ್ ವೆಹಿಕಲ್) ಸೃಷ್ಟಿಸಲಾಯಿತು ಅಂದರೆ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರೈವೇಟ್ ಲಿಮಿಟೆಡ್ (ಎನ್ ಎಂ ಐಎಎಲ್) ಅನ್ನು ಸಿಡ್ಕೊ ಜೊತೆಗೆ ಸ್ಥಾಪಿಸಲಾಯಿತು. ಇದು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮಹಾರಾಷ್ಟ್ರ ಸರ್ಕಾರದ ನೋಡಲ್ ಸಂಸ್ಥೆಯಾಗಿ ಕೆಲಸ ಮಾಡಿತ್ತು.

2018: ಟೆಹರಾನ್: ಇರಾನ್ ದಕ್ಷಿಣ ಭಾಗದ ಪರ್ವತ ಪ್ರದೇಶದಲ್ಲಿ ೬೬ ಪ್ರಯಾಣಿಕರಿದ್ದ ಇರಾನಿನ ದೇಶೀಯ ವಿಮಾನ ಭೀಕರವಾಗಿ ಸ್ಫೋಟಗೊಂಡಿದೆ ಎಂದು ವರದಿಗಳು ತಿಳಿಸಿದವು.
ಇರಾನ್‌ನ ಅಸೆಮಾನ್ ಏರ್‌ಲೈನ್ಸ್‌ನ ಎಟಿಆರ್-೭೨ ವಿಮಾನವು ರಾಜಧಾನಿ ಟೆಹರಾನ್ ನಿಂದ  ಯಜೂಜ್ ಪಟ್ಟಣದ ಮಾರ್ಗ ಮಧ್ಯೆ ವಿಮಾನ ಪತನಗೊಂಡಿತು ಎಂದು ವರದಿ ತಿಳಿಸಿತು. ಟೆಹರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಿಂದ ಬೆಳಗ್ಗೆ ೮ ಗಂಟೆಗೆ ಇಸ್ಫಹಾನ್ ಪ್ರಾಂತ್ಯದ ಯೂಸುಜ್‌ಗೆ ಪಯಣ ಹೊರಟ ವಿಮಾನ ಗಗನಕ್ಕೆ ಏರಿದ ಕೇವಲ ೨೦ ನಿಮಿಷಗಳಲ್ಲಿ ರಾಡಾರ್ ಸಂಪರ್ಕ ಕಳೆದುಕೊಂ ಎಂದು ವರದಿ ಹೇಳಿತು.  ವಿಮಾನವು ಸ್ಫೋಟಗೊಳ್ಳುವ ಮುನ್ನ ಹುಲ್ಲುಗಾವಲಿನ ಮೇಲೆ ತುರ್ತಾಗಿ ಇಳಿಯಲು ಯತ್ನಿಸಿತ್ತು ಎಂದು  ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ಮಾಧ್ಯಮ ವರದಿಗಳು ಹೇಳಿದವು.  ವಿಮಾನದಲ್ಲಿ ಒಂದು ಮಗು ಸೇರಿ ೬೦ ಪ್ರಯಾಣಿಕರು ಹಾಗೂ ಆರು ಮಂದಿ ವಿಮಾನದ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಟೆಹರಾನ್ ನಿಂದ  ೪೮೦ ಕಿ.ಮೀ. ದೂರದ ಸೆಮಿರೊಮ್ ವಲಯದಲ್ಲಿ ವಿಮಾನ ಪತಗೊಂಡಿದೆ. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವುದಾಗಿ ಅಸೆಮಾನ್ ವಿಮಾನ ಸಂಸ್ಥೆಯ ಸಾರ್ವಜನಿಕ ಸಂಪರ್ಕ ನಿರ್ದೇಶಕರು ತಿಳಿಸಿದರು.  ಪ್ರತಿಕೂಲ ಹವಾಮಾನ ಮತ್ತು ಪರ್ವತ ಪ್ರದೇಶವಾಗಿರುವ ಕಾರಣದಿಂದ ಆಂಬುಲೆನ್ಸ್‌ಗಳನ್ನು ಕಳುಹಿಸಲೂ ಸಾಧ್ಯವಾಗಿಲ್ಲ. ಇರಾನ್ ರೆಡ್ ಕ್ರೆಸೆಂಟ್‌ನ ೧೨ ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿವೆ ಎಂದು ವರದಿಗಳು ಹೇಳಿದವು.  ರಾಜಧಾನಿಯಿಂದ ದಕ್ಷಿಣಕ್ಕೆ ೫೦೦ ಕಿಮೀ ದೂರದಲ್ಲಿರುವ ದುರಂತ ಸ್ಥಳವು ಯಾಸುಜ್ ನಿಂದ ೨೩ ಕಿಮೀ ದೂರದಲ್ಲಿದ್ದು, ಡೇನಾ ಪರ್ವತ ಪ್ರದೇಶದ ಝಾರ್ಗೋಸ್ ವಲಯದ ಭಾಗವಾಗಿದೆ.  ಇತ್ತೀಚೆಗೆ ೨೦೧೪ರಲ್ಲಿ ಸೆಪಹಾನ್ ವಿಮಾನ ದುರಂತಕ್ಕೆ ಈಡಾಗಿ ೩೯ ಜನ ಅಸು ನೀಗಿದ್ದರು. ಅಸೆಮಾನ್ ಏರ್ ಲೈನ್ಸ್ ಪ್ರಸ್ತುತ ೩೬ ವಿಮಾನಗಳನ್ನು ಹೊಂದಿದೆ. ಅವುಗಳಲ್ಲಿ ಅರ್ಧದಷ್ಟಿ ವಿಮಾನಗಳು ೧೦೫ ಆಸನದ ಡಚ್ ಫಾಕರ್ ೧೦೦ ವಿಮಾನಗಳು. ಅದರ ಮೂರು ಬೋಯಿಂಗ್ ೭೨೭-೨೦೦ ವಿಮಾನಗಳು ಹೆಚ್ಚು ಕಡಿಮೆ ಇಸ್ಲಾಮಿಕ್ ಕ್ರಾಂತಿಯಷ್ಟೇ ಹಳೆಯ ವಿಮಾನಗಳು. ೧೯೮೦ರಲ್ಲಿ ಇವು ಚೊಚ್ಚಲ ಹಾರಾಟ ನಡೆಸಿದ್ದವು.

2018: ಹ್ಯೂಸ್ಟನ್: ನ್ಯೂಜೆರ್ಸಿಯ ಹೊಬೊಕೆನ್ ನಗರದ ಪ್ರಪ್ರಥಮ ಸಿಖ್ ಮೇಯರ್ ಭಾರತೀಯ ಮೂಲದ ಅಮೆರಿಕನ್ ಪ್ರಜೆ ರವೀಂದರ್ ಭಲ್ಲಾ ಅವರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಇತ್ತೀಚೆಗೆ ಪ್ರಾಣಬೆದರಿಕೆ
ಬಂದುದನ್ನು ಬಹಿರಂಗ ಪಡಿಸಿದರು. ಸಿಟಿಹಾಲ್ ಭದ್ರತಾ ಲೋಪದ ಬೆನ್ನಲ್ಲೇ  ಫೆಬ್ರುವರಿ ೧೬ರ ಶುಕ್ರವಾರ ಹೇಳಿಕೆಯೊಂದನ್ನು ನೀಡಿರುವ ಭಲ್ಲಾ ಅವರು ’ಸಿಟಿ ಹಾಲ್ ಭದ್ರತೆಯ ಸುಧಾರಣೆಗಾಗಿ ಎಫ್ ಬಿಐ ಜಂಟಿ ಭಯೋತ್ಪಾದನಾ ಕಾರ್ಯಪಡೆಯ ಜೊತೆಗೆ ನಗರವು ಕೆಲಸ ಮಾಡುತ್ತಿದೆ ಎಂದು ಹೇಳಿದರು.  ‘ನನಗೆ ಮತ್ತು ನನ್ನ ಕುಟುಂಬಕ್ಕೆ ಪ್ರಾಣಬೆದರಿಕೆ ಬಂದಿರುವುದರ ಜೊತೆಗೆ ಈ ಭದ್ರತಾ ಲೋಪದ ಘಟನೆಯು ದುರದೃಷ್ಟಕರ. ಇದು ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದುನ್ನು ನೆನಪಿಸಿದೆ ಎಂದು ಭಲ್ಲಾ ಅವರು ಬೆದರಿಕೆಗಳ ಬಗ್ಗೆ ಹೆಚ್ಚಿನ ವಿವರಣೆಯನ್ನು ನೀಡದೆಯೇ ನುಡಿದರು.  ‘ಜಂಟಿ ಭಯೋತ್ಪಾದನಾ ಕಾರ್ಯಪಡೆಯು ಸಿಟಿಹಾಲ್ ಪರಿಶೀಲನೆ ನಡೆಸಿದೆ. ಕಟ್ಟಡದ ಎಲ್ಲ ನೌಕರರ ಭದ್ರತಾ ವ್ಯವಸ್ಥೆ ಸುಧಾರಣೆ ಸಲುವಾಗಿ ಕೈಗೊಳ್ಳಬೇಕಾದ ಭೌತಿಕ ಮತ್ತು ವೈಧಾನಿಕ ಬದಲಾವಣೆಗೆ ಸಂಬಂಧಿಸಿದ ಶಿಫಾರಸುಗಳ ಜಾರಿ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ಅವರು ಹೇಳಿದರು. ನಗರದ ವಕ್ತಾರ ಜುವಾನ್ ಮೆಲ್ಲಿ ಅವರ ಪ್ರಕಾರ, ಸಿಟಿಹಾಲ್ ಪ್ರವೇಶಿಸಿದ ವ್ಯಕ್ತಿಯೊಬ್ಬ ಲೋಹ ಶೋಧಕದ ಮೂಲಕ ಬಂದ ಬಳಿಕ, ಭದ್ರತಾ ಸಿಬ್ಬಂದಿಯ ಜೊತೆಗೆ ತನಗೆ ಶೌಚಾಲಯಕ್ಕೆ ಹೋಗಬೇಕಾಗಿದೆ ಎಂದು ತಿಳಿಸಿದ. ಭಲ್ಲಾ ಅವರು ಆಗ ತಮ್ಮ ಕಚೇರಿಯಲ್ಲಿ ಇರಲಿಲ್ಲ. ಅವರ ಸಿಬ್ಬಂದಿ ಉಪ ಮುಖ್ಯಸ್ಥ ಜಾಸೋನ್ ಫ್ರೀಮಾನ್ ಅವರು ವ್ಯಕ್ತಿಯೊಬ್ಬ ಹೊರಕ್ಕೆ ಓಡಿಹೋಗುವ ಮುನ್ನ ಒಳಗೆ ಏನೋ ವಸ್ತು ಇದ್ದ ಚೀಲವೊಂದನ್ನು ಆಡಳಿತಾತ್ಮಕ ಸಹಾಯಕನ ಡೆಸ್ಕ್  ಕಡೆಗೆ ಎಸೆದುದನ್ನು ಗಮನಿಸಿದರು ಎಂದು ಮೆಲ್ಲಿ ಹೇಳಿಕೆಯಲ್ಲಿ ತಿಳಿಸಿದರು.  ಹೊಬೊಕೆನ್ ಪೊಲೀಸ್ ಮುಖ್ಯಸ್ಥ ಕೆನ್ನೆತ್ ಫರ್ರಾಂಟೆ ಅವರು ಇಲಾಖೆಯು ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುವುದು ಎಂದು ನುಡಿದರು. ’ನಾವು ಈ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಮತ್ತು ಮೇಯರ್ ಮತ್ತು ಸಿಟಿಹಾಲ್ ಗೆ ಭೇಟಿ ನೀಡುವ ಪ್ರತಿಯೊಬ್ಬರ ಭದ್ರತೆ ಖಾತರಿ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಅವರು ಹೇಳಿದರು.  ನ್ಯೂಜೆರ್ಸಿಯ ಮೇಯರ್ ಹುದ್ದೆಗೆ ನಡೆದ ತೀವ್ರ ಪೈಪೋಟಿಯಲ್ಲಿ ಗೆಲ್ಲುವ ಮೂಲಕ ಭಲ್ಲಾ ಅವರು ನ್ಯೂಜೆರ್ಸಿಯ ಪ್ರಪ್ರಥಮ ಸಿಖ್ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ವೇಳೆಯಲ್ಲಿ ಭಲ್ಲಾ ಅವರ ಬಗೆಗಿನ ಫ್ಲೈಯರ್ ಒಂದರಲ್ಲಿ ಭಲ್ಲಾ ಅವರಿಗೆ ಭಯೋತ್ಪಾದಕ ಎಂಬ ಹಣೆಪಟ್ಟಿ ಅಂಟಿಸುವ ಮೂಲಕ ಈ ಸ್ಪರ್ಧೆ ಅಸಹ್ಯ ತಿರುವನ್ನೂ ಪಡೆದಿತ್ತು..



2017: ವಾಷಿಂಗ್ಟನ್‌: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್ ಹಿಟ್ಲರ್ಬಳಸುತ್ತಿದ್ದಟೆಲಿಫೋನ್ನ್ನು ಹರಾಜು ಹಾಕಲು ಅಮೆರಿಕದ ಅಲೆಕ್ಸಾಂಡರ್ಐತಿಹಾಸಿಕ ವಸ್ತು ಸಂಗ್ರಹ ಸಂಸ್ಥೆ ಮುಂದಾಗಿದೆ. ತನ್ನ ಅಡಳಿತಾವಧಿಯಲ್ಲಿ ಹಿಟ್ಲರ್ಎಲ್ಲ ಆದೇಶಗಳನ್ನು ಹೊರಡಿಸಲು ಬಳಸುತ್ತಿದ್ದ ವೈಯಕ್ತಿಕ ದೂರವಾಣಿ ಇದ್ದಾಗಿತ್ತು. 1945ರಲ್ಲಿ ಸರ್ವಾಧಿಕಾರಿ ಹಿಟ್ಲರ್ಅಡಳಿತಾವಧಿ ಮುಕ್ತಾಯದ ನಂತರ ದೂರವಾಣಿ ರಷ್ಯಾ ಭದ್ರತಾಪಡೆಗಳ ವಶದಲ್ಲಿತ್ತು. ರಷ್ಯಾಟೆಲಿಫೋನ್ಅನ್ನು ಇಂಗ್ಲೆಂಡ್ಗೆ ಉಡುಗೋರೆಯಾಗಿ ನೀಡಿತ್ತು. ಬ್ರಿಟಿಷ್ಬ್ರಿಗೇಡಿಯರ್ ಸರ್ರಾಲ್ಫ್ರೇನಾರ್ಬಂಕರ್ರಷ್ಯಾಗೆ ಭೇಟಿ ನೀಡಿದ ವೇಳೆ ರಷ್ಯಾದ ಸೇನಾಧಿಕಾರಿಯೊಬ್ಬರು ರೇನಾರ್ಬಂಕರ್ಅವರಿಗೆ ಉಡುಗೋರೆಯಾಗಿ ನೀಡಿದ್ದರು. ದೂರವಾಣಿ ಮೂಲತಃ ಕಪ್ಪು ಬಣ್ಣದ್ದಾಗಿತ್ತು. ಆದರೆ, ಹಿಟ್ಲರ್ ಪೌರುಷತ್ವ ಸಂಕೇತಿಸುವ ಹಾಗೇ ಕಪ್ಪು ಬಣ್ಣದಿಂದ ಕೆಂಪು ಬಣ್ಣಕ್ಕೆ ಬದಲಾಯಿಸಲಾಗಿತ್ತು. ಟೆಲಿಫೋನನ್ನು ಹರಾಜಿಗೆ ಇಡಲಾಗಿದ್ದು, ಇದು ರೂ.13.41 ಕೋಟಿಯಿಂದ 20.12 ಕೋಟಿಗಳಿಗೆ ಹರಾಜಗುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿತು.
2017: ಇಸ್ಲಾಮಾಬಾದ್‌: ಬಹುನಿರೀಕ್ಷಿತ ಹಿಂದೂ ವಿವಾಹ ಕಾಯ್ದೆ ಮಸೂದೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿತು. ಹಿಂದೂ ವಿವಾಹ ಕಾಯ್ದೆ 2017 ಅನ್ವಯ ವೈಯಕ್ತಿಕ ಹಿಂದೂ ಕಾನೂನು ಜಾರಿಗೆ ಹಿಂದಿನ ದಿನ ಮಂಡಿಸಿದ್ದ ಅರ್ಜಿಗೆ ಮೇಲ್ಮನೆ ಸೆನೆಟ್  ಒಪ್ಪಿಗೆ ನೀಡಿತು. ಪಾಕ್ಸಂಸತ್ತಿನ ಕೆಳಮನೆ ಅಥವಾ ನ್ಯಾಷನಲ್ಅಸೆಂಬ್ಲಿ 2015 ಸೆಪ್ಟೆಂಬರ್‌ 26 ರಂದು ಕಾಯ್ದೆ ಜಾರಿಗೆ ಹಸಿರು ನಿಶಾನೆ ನೀಡಿತ್ತು. ಇದೀಗ ಮೇಲ್ಮನೆಯಲ್ಲೂ ಅನುಮೋದನೆ ದೊರಕಿತು. ರಾಷ್ಟ್ರಪತಿ ಅಂಕಿತ ದೊರೆತರೆ ಕಾಯ್ದೆಗೆ ಶಾಸನಬದ್ಧ ಮಾನ್ಯತೆ ಸಿಗಲಿದೆ.  ಇದರಿಂದ ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂಗಳಿಗೆ ವಿವಾಹ, ವಿವಾಹ ನೊಂದಣಿ, ಮರುವಿವಾಹ ಮತ್ತು ವಿವಾಹಕ್ಕೆ ನಿಗದಿತ ವಯಸ್ಸು ಮೀಸಲಾತಿ ಸೇರಿದಂತೆ ಇನ್ನಿತರ ಮಹತ್ವದ ಕಾನೂನುಗಳು ಅನ್ವಯವಾಗಲಿವೆ. ಹಿಂದೂ ಸಮುದಾಯದ ಸಲುವಾಗಿ ಪಾಕಿಸ್ತಾನದಲ್ಲಿ ದೊರೆತಿರುವ ಮೊಟ್ಟಮೊದಲ ಸಂವಿಧಾನಾತ್ಮಕ ವಿಧೇಯಕ ಇದಾಗಿದೆ.  ಪಾಕಿಸ್ತಾನದ ಪಂಜಾಬ್‌, ಬಲೂಚಿಸ್ತಾನ, ಖೈಬರ್ಫಕ್ತೂನ್ ಖ್ವಾ ಮತ್ತು ಸಿಂಧ್ಪ್ರಾಂತ್ಯಗಳಲ್ಲಿ ನೆಲೆಸಿರುವ ಹಿಂದೂಗಳು  ಇದರಿಂದ ನಿಟ್ಟಿಸಿರು ಬಿಟ್ಟಿದ್ದಾರೆ. ಕಾನೂನು ಸಚಿವ ಜಾಹಿದ್ಹಮಿದ್ಸಂಸತ್ತಿನಲ್ಲಿ ಮಂಡಿಸಿದ ಮಸೂದೆಗೆ ಯಾರಿಂದಲೂ ವಿರೋಧ ವ್ಯಕ್ತವಾಗಲಿಲ್ಲ. ಸರ್ವ ಪಕ್ಷಗಳು ಮಸೂದೆ ಜಾರಿಗೆ ಸಹಮತ ಸೂಚಿಸಿದವು.
2017: ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಅನುಸರಿಸಿದ ವಿಧಾನ
ನಿಯಮ ಬಾಹೀರವಾದುದು ಎಂದು ದೂರಿ ಸ್ಪೀಕರ್ವಿರುದ್ಧ ಮರೀನಾ ಬೀಚ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆ ಮುಖಂಡ ಸ್ಟಾಲಿನ್ಹಾಗೂ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ವಿಶ್ವಾಸ ಮತಯಾಚನೆಗೆ ಗುಪ್ತ ಮತದಾನಕ್ಕೆ ಅವಕಾಶ ನೀಡದ ಸ್ಪೀಕರ್ಅವರ ಕ್ರಮವನ್ನು ಖಂಡಿಸಿ ಮರೀನಾ ಬೀಚ್ನಲ್ಲಿ ಡಿಎಂಕೆ ಮುಖಂಡರು, ಶಾಸಕರು ಹಾಗೂ ಕಾರ್ಯರ್ತರು ಪ್ರತಿಭಟನೆ ನಡೆಸಿದರು. ಸ್ಪೀಕರ್ಅವರ ಕ್ರಮವನ್ನು ಖಂಡಿಸಿ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿ, ಘೋಷಣೆ ಕೂಗಿದರು. ವೇಳೆ ಪೊಲೀಸರು ಪಕ್ಷದ ಮುಖಂಡ ಸ್ಟಾಲಿನ್ ಅವರನ್ನು ಬಂಧಿಸಿದರು. ಸ್ಟಾಲಿನ್ಅವರ ಬಂಧನಕ್ಕೆ ಪೊಲೀಸರು ಮುಂದಾಗುತ್ತಿದ್ದಂತೆ ಕಾರ್ಯರ್ತರು ಪೊಲೀಸರಿಗೆ ಅಡ್ಡಿಪಡಿಸಿದರು. ಬಂಧನಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರನ್ನೂ ಬಂಧಿಸಲಾಯಿತು.
2017: ಚೆನ್ನೈ: ಡಿಎಂಕೆ ಸದಸ್ಯರಿಗೆ ಅರ್ಧಚಂದ್ರ ಪ್ರಯೋಗ ಹಾಗೂ ಕಾಂಗ್ರೆಸ್ಸದಸ್ಯರ
ಸಭಾತ್ಯಾಗದ ಬಳಿಕ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಪಳನಿಸ್ವಾಮಿ ಅವರಿಗೆ ವಿಶ್ವಾಸ ಮತ ಲಭಿಸಿತು. ಬೆಳಿಗ್ಗೆಯಿಂದ ಸದನದಲ್ಲಿ ಗದ್ದಲ ಎಬ್ಬಿಸಿದ ಡಿಎಂಕೆ ಮತ್ತು ಕಾಂಗ್ರೆಸ್ಸದಸ್ಯರು ತಲೆ ಎಣಿಕೆ ಬದಲು ಗುಪ್ತ ಮತದಾನಕ್ಕೆ ಅವಕಾಶ ನೀಡಬೇಕು ಆಗ್ರಹಸಿದ್ದರು. ಇದಕ್ಕೆ ಸಭಾಧ್ಯಕ್ ಧನಪಾಲ್ಅವರು ಅವಕಾಶ ನೀಡದೇ ಇದ್ದುದರಿಂದ ಡಿಎಂಕೆ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಟೇಬಲ್‌, ಕರ್ಚಿ ಒಡೆದು ಮೈಕ್ಗಳನ್ನು ಕಿತ್ತು ಹಾಕಿ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಡಿಎಂಕೆ ಸದಸ್ಯರನ್ನು ಹೊರಕ್ಕೆ ಕಳುಹಿಸುವಂತೆ ಆದೇಶ ನೀಡಿದ  ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನದ ನಂತರ ವಿಪಕ್ಷ ಸದಸ್ಯರ ಗೈರು ಹಾಜರಿಯಲ್ಲಿ ವಿಶ್ವಾಸ ಮತಯಾಚಿಸಲಾಯಿತು. ವಿಧಾನ ಸಭಾಧ್ಯಕ್ಷ ಧನಪಾಲ್ ಧನಪಾಲ್ಅವರು ಡಿಎಂಕೆ ಸದಸ್ಯರನ್ನ ಸದನದಿಂದ ಹೊರಗಿಟ್ಟು ವಿಶ್ವಾಸ ಮತಕ್ಕೆ ಅವಕಾಶ ಕಲ್ಪಿಸಿದರು. ಪಳನಿಸ್ವಾಮಿ ಅವರ ಪರ 122 ಮತ ಚಲಾವಣೆಯಾದರೆ, ವಿರುದ್ಧವಾಗಿ 11 ಮತಗಳು ಚಲಾವಣೆಯಾದವು. ಹೊಸ ಸರ್ಕಾರ ರಚನೆಗೆ ವಿಶ್ವಾಸಮತ ಕೋರಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ, ಶಶಿಕಲಾ ಜೈಲಿನಲ್ಲಿದ್ದರೂ ಅವರ ಬಣ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾಗಿದೆ.
2017: ಚೆನ್ನೈ: ಸದನದಲ್ಲಿ ಪ್ರತಿಭಟನೆ ನಡೆಸಿದ ನಮ್ಮ ಮೇಲೆ ಆಡಳಿತ ಪಕ್ಷ ಹಲ್ಲೆ ನಡೆಸಿದೆ ಎಂದು
ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ಆಪಾದಿಸಿದರು. ಗದ್ದಲ ಎಬ್ಬಿಸಿದ್ದರಿಂದ ಮಾರ್ಷಲ್ಗಳು ಸ್ಟಾಲಿನ್ಅವರನ್ನು ಸದನದಿಂದ ಹೊರ ಹಾಕಿದರು. ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್ಅವರು, ಮೈಮೇಲಿನ ಕಿತ್ತು ಹೋಗಿರುವ ಅಂಗಿಯನ್ನು ತೋರಿಸುತ್ತಾ ಮಾರ್ಷಲ್ಗಳು ಹಲ್ಲೆ ನಡೆಸಿ ಬಟ್ಟೆ ಕಿತ್ತಿದ್ದಾರೆ. ಇದು ಆಡಳಿತ ಪಕ್ಷ ನಡೆಸಿದ ಹಲ್ಲೆ. ನಮ್ಮನ್ನು ಸದನದಿಂದ ಹೊರಗಿಟ್ಟು ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿರುವ ಸಭಾಧ್ಯಕ್ಷರ ವಿರುದ್ಧ ರಾಜ್ಯಪಾಲ ವಿದ್ಯಾಸಾಗರ್ರಾವ್ಅರಿಗೆ ದೂರು ಕೊಡಲಾಗುವುದು ಎಂದು ಹೇಳಿದರು. ಇದರ ಬೆನ್ನಲ್ಲೇ ಡಿಎಂಕೆ ಕಾರ್ಯರ್ತರು, ಪಕ್ಷದ ಸದಸ್ಯರನ್ನು ಒತ್ತಾಯ ಪೂರ್ವಕವಾಗಿ ಸದನದಿಂದ ಹೊರ ತಳ್ಳಿದ್ದಾರೆ ಎಂದು ರಾಜಭನದ ಎದರು ಪ್ರತಿಭಟನೆ ನೆಡೆಸಿದರು.

2017: ಮುಂಬೈ: ವಿಶ್ವದ ಅತಿಭಾರತದ ಮಹಿಳೆ ಈಜಿಪ್ಟಿನ ಎಮನ್ಅಹ್ಮದ್ಅವರ ಚಿಕಿತ್ಸೆಗೆ ಬಾಲಿವುಡ್ಸ್ಟಾರ್ಹೃತಿಕ್ರೋಶನ್ಅವರ ತಾಯಿ ಪಿಂಕಿ ರೋಶನ್ರೂ. 10 ಲಕ್ಷ ಸಹಾಯಧನ ನೀಡಿದರು. ಮುಂಬೈಯ ಸೈಫಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಮನ್ಅವರ ದೇಹದ ಭಾರ ಕಡಿಮೆ ಮಾಡುವ ಚಿಕಿತ್ಸೆಗೆ ರೂ.1 ಕೋಟಿ ವೆಚ್ಚವಾಗಲಿದೆ. ಬಾರಿಯಾಟ್ರಿಕ್ಶಸ್ತ್ರಚಿಕಿತ್ಸೆ ನಡೆಸಲಿರುವ ವೈದ್ಯರು ಅದರ ವೆಚ್ಚವನ್ನು ಎಮನ್ಅವರಿಗೆ ಭರಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಬಾಲಿವುಡ್ನಿರ್ಮಾಪಕ ರಾಕೇಶ್ರೋಶನ್ಅವರ ಪತ್ನಿ ಪಿಂಕಿ ರೋಶನ್ಧನಸಹಾಯ ನೀಡಿದರು. ಎಮನ್ಭಾರತಕ್ಕೆ ಬಂದಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಅಂದಿನಿಂದಲೆ ಆಕೆಗೆ ಸಹಾಯ ಮಾಡಬೇಕು ಎಂಬ ವಿಚಾರ ಮನದಲ್ಲಿ ಮೂಡಿತ್ತು. ನಿಟ್ಟಿನಲ್ಲಿ ಆಕೆಗೆ ನಮ್ಮ ಕೈಲಾದ ಸಹಾಯ ಮಾಡಿದ್ದೇವೆಎಂದು ಪಿಂಕಿ ರೋಶನ್ತಿಳಿಸಿದರು. ಎಮನ್ಅವರ ಚಿಕಿತ್ಸೆಗೆ ಸಾರ್ವಜನಿಕರು ಮುಂದಾದರು. ಆಸ್ಪತ್ರೆ ಖಾತೆಗೆ ರೂ. 35 ಲಕ್ಷ ಜಮೆಯಾಗಿದೆ ಎಂದು ಸೈಫಿ ಆಸ್ಪತ್ರೆ ಆಡಳಿತ ಮಂಡಳಿ ಹೇಳಿತು.

2009: 'ವಿಕೃತ ಕಾಮಿ' ಉಮೇಶ್ ರೆಡ್ಡಿಗೆ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ಕಾಯಂ ಮಾಡಿ, ಆದೇಶ ಹೊರಡಿಸಿತು. 'ಒಂಟಿ ಮಹಿಳೆಯರ ಅಸಹಾಯಕತೆಯ ಪ್ರಯೋಜನ ಪಡೆದು, ಅವರ ಮೇಲೆ ಅತ್ಯಾಚಾರ ನಡೆಸುವುದು ಮಾತ್ರವಲ್ಲದೇ, ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಈತ ನರ ರೂಪದ ರಾಕ್ಷಸ' ಎಂದು ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ಅಭಿಪ್ರಾಯ ಪಟ್ಟರು. 1998ರ ಫೆ.28ರಂದು ಬೆಂಗಳೂರು ನಗರದ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಜಯಶ್ರಿ ಮರಡಿಸುಬ್ಬಯ್ಯ ಎಂಬವರ ಮೇಲೆ ಅತ್ಯಾಚಾರ ಹಾಗೂ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ನೀಡಿದ್ದ ಮರಣದಂಡನೆಯನ್ನು ನ್ಯಾಯಮೂರ್ತಿಗಳು ಕಾಯಂ ಮಾಡಿದರು. 'ಈ ಹತ್ಯೆ ಅಪರೂಪದಲ್ಲಿ ಅಪರೂಪ ಪ್ರಕರಣವಾಗಿದೆ. ಅಷ್ಟೇ ಅಲ್ಲದೇ ರೆಡ್ಡಿ, ಇದೊಂದೇ ಪ್ರಕರಣದಲ್ಲಿ ಮಾತ್ರವಲ್ಲದೇ ಡಕಾಯಿತಿ, ದರೋಡೆ, ಅತ್ಯಾಚಾರ, ಮಾನಭಂಗ ಸೇರಿದಂತೆ 21 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಜೈಲಿನಿಂದ ಅನೇಕ ಬಾರಿ ತಪ್ಪಿಸಿಕೊಂಡಿದ್ದಾನೆ.ಕೂಡ. ಈ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಯೇ ಈತನಿಗೆ ವಿಧಿಸಬಹುದಾದ ಗರಿಷ್ಠ ಶಿಕ್ಷೆಯಾಗಿದೆ' ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದರು.

2009: ಗುಲ್ಬರ್ಗ ವಿಭಾಗದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಡ್ಗುಡವರಿಗೆ ಉಚಿತ ಆರೋಗ್ಯ ವಿಮಾ ಸೌಕರ್ಯ ಒದಗಿಸುವ 'ಸುವರ್ಣ ಆರೋಗ್ಯ ಸುರಕ್ಷಾ ಯೋಜನೆ'ಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು. ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, 'ಗುಲ್ಬರ್ಗ, ಬೀದರ್, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ 16 ಲಕ್ಷ ಮಂದಿ ಫಲಾನುಭವಿಗಳಿಗೆ ಸುಮಾರು 300 ವಿವಿಧ ರೀತಿಯ ರೋಗಗಳಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಇದರ ವೆಚ್ಚವನ್ನು ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ' ಎಂದು ವಿವರಿಸಿದರು.

2009: ಕಳೆದ 80ವರ್ಷಗಳಲ್ಲಿ ಅಮೆರಿಕ ಅನುಭವಿಸದ ಭಾರಿ ಆರ್ಥಿಕ ಹಿಂಜರಿತಕ್ಕೆ ಶೀಘ್ರ ಪುನಶ್ಚೇತನ ನೀಡುವ ಉದ್ದೇಶದ 787 ಶತಕೋಟಿ ಡಾಲರ್ ಆರ್ಥಿಕ ಸುಧಾರಣಾ ಪ್ಯಾಕೇಜ್ ಮಸೂದೆಗೆ ಸಹಿ ಮಾಡುವದರೊಂದಿಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ದಿಟ್ಟ ಹೆಜ್ಜೆ ಇಟ್ಟರು. ಸಮೃದ್ಧ ಜೀವನ ನಡೆಸುವ ಅಮೆರಿಕದ ಜನತೆಯ ಆಶಯವನ್ನು ಜೀವಂತವಾಗಿರಿಸುವ ಅಗತ್ಯ ಕೆಲಸವನ್ನು ನಾವು ಇಂದಿನಿಂದ ಆರಂಭಿಸಿದ್ದೇವೆ ಎಂದು ಅವರು ಮಸೂದೆಗೆ ಸಹಿ ಮಾಡುವ ಮೊದಲು ತಿಳಿಸಿದರು.

2008: ಮಾತೃಭಾಷೆ ಬೋಧನೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ತಮಿಳುನಾಡಿನ ಶಾಲೆಗಳಲ್ಲಿ ತಮಿಳು ಭಾಷೆ ಕಡ್ಡಾಯಗೊಳಿಸುವುದರಿಂದ ಏನೂ ತೊಂದರೆಯಾಗದು ಎಂದು ಹೇಳಿತು. ಶಾಲೆಗಳಲ್ಲಿ ಸ್ಥಳೀಯ ಭಾಷೆ ಕಡ್ಡಾಯಗೊಳಿಸಬಾರದು ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದು, ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ಆದೇಶ ಹೆಚ್ಚು ಮಹತ್ವ ಪಡೆಯಿತು.

2006 ರ ತಮಿಳುನಾಡಿನ ತಮಿಳು ಕಲಿಕಾ ಕಾನೂನಿನ ಸಿಂಧುತ್ವವನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯ  ಪ್ರವೇಶಿಸಲು ನಿರಾಕರಿಸಿದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಹಾಗೂ ಜೆ.ಎಂ. ಪಂಚಾಲ್ ಅವರ ಪೀಠ, ರಾಜ್ಯ ನೀತಿ ನಿರ್ಣಯಗಳಲ್ಲಿ ನಾವು ಮಧ್ಯಪ್ರವೇಶಿಸಲಾಗದು' ಎಂದು ಹೇಳಿತು. ತಮಿಳುನಾಡಿನಲ್ಲಿ ತಮಿಳು ಕಡ್ಡಾಯಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿ ಕನ್ಯಾಕುಮಾರಿ ಜಿಲ್ಲೆಯ `ಮಲಯಾಳ ಸಮಾಜ' ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನೂ ಕೋರ್ಟ್ ಇದೇ ವೇಳೆ ವಜಾ ಮಾಡಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತೃಭಾಷೆ ಕಡ್ಡಾಯಗೊಳಿಸಿರುವುದನ್ನು ಕೋರ್ಟ್ ಈ ಸಂದರ್ಭದಲ್ಲಿ ಉಲ್ಲೇಖಿಸಿತು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ತಮ್ಮ ಮಾತೃಭಾಷೆಯಲ್ಲಿಯೇ ಕಲಿಸುವ ಹಕ್ಕಿಗೆ ಈ ಕಾಯ್ದೆ ತೊಡಕಾಗುವುದಿಲ್ಲ ಎಂದು ಈ ಸಂದರ್ಭದಲ್ಲಿ ಕೋರ್ಟ್ ಸ್ಪಷ್ಟಪಡಿಸಿತು.

2008: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಮತ್ತು ಮುಖ್ಯ ಚುನಾವಣಾಧಿಕಾರಿ ಆರ್. ರಾಮಶೇಷನ್ ಅವರು ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದರು. ಅದಕ್ಕೆ ರಾಜ್ಯ ಸರ್ಕಾರ ಅನುಮತಿಯನ್ನೂ ನೀಡಿತು.

2008: ತೀವ್ರ ಕುತೂಹಲ ಕೆರಳಿಸಿದ್ದ ಪಾಕಿಸ್ಥಾನದ ಸಾರ್ವತ್ರಿಕ ಚುನಾವಣೆ ಮುಗಿಯಿತು. ಹತ್ಯೆಗೆ ಒಳಗಾದ ಬೆನಜೀರ್ ಭುಟ್ಟೋ ಅವರ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಮೇಲುಗೈ ಸಾಧಿಸಿತು. ಚುನಾವಣೆ ಕಾಲದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾ ಮಾರಿ ಘಟನೆಗಳು ನಡೆದವು. ವಿವಿಧ ಪ್ರದೇಶಗಳಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದರು.

2008: ವಿವಾಹ ನೋಂದಣಿಗೆ ವಾಸಸ್ಥಳ ಪ್ರಮಾಣ ಪತ್ರದಲ್ಲಿ ನಕಲಿ ವಿಳಾಸ ನೀಡಿರುವುದಕ್ಕೆ ನಟ ಸಂಜಯ್ ದತ್ ಅವರ ಪತ್ನಿ ಮಾನ್ಯತಾಗೆ ದಕ್ಷಿಣ ಗೋವಾ ಜಿಲ್ಲಾಧಿಕಾರಿ ಕಚೇರಿ ಷೋಕಾಸ್ ನೋಟಿಸ್ ನೀಡಿತು. ವಾಸಸ್ಥಳ ಪ್ರಮಾಣಪತ್ರ ರದ್ದುಗೊಳಿಸುವ ಸಂಬಂಧ ಮಾನ್ಯತಾ ಅವರ ಮಾರ್ಗೋವಾ ವಿಳಾಸಕ್ಕೆ ನೋಟಿಸ್ ಕಳಿಸಲಾಗಿದೆ ಎಂದು ಕಂದಾಯ ಅಧಿಕಾರಿ ಪರೇಶ್ ಎಂ. ಫಲ್ ದೇಸಾಯಿ ತಿಳಿಸಿದರು. ಫೆಬ್ರುವರಿ 7 ರಂದು ಪಣಜಿಯ ಪಂಚತಾರಾ ಹೋಟೆಲಿನಲ್ಲಿ ಸಂಜಯ್ ಹಾಗೂ ಮಾನ್ಯತಾ ವಿವಾಹವಾಗಿದ್ದರು.

2008: ನಾಲ್ಕು ಕಿಡ್ನಿಗಳನ್ನು ಹೊಂದಿದ 18ರ ಹರೆಯದ ಅದೃಷ್ಟವಂತೆ ಲಂಡನ್ನಿನ ಲೌರಾ ಮೂನ್ ಎನ್ನುವ ಯುವತಿ ಕಿಡ್ನಿ ದಾನ ಮಾಡಲು ಮುಂದಾದಳು. ತನ್ನ ದೇಹದಲ್ಲಿ ಇರುವ ಹೆಚ್ಚಿನ ಎರಡು ಕಿಡ್ನಿಗಳನ್ನು ದಾನ ಮಾಡುವುದು ಈ ಯುವತಿಯ ಬಯಕೆ. `ಮತ್ತೊಬ್ಬರಿಗೆ ಈ ಮೂಲಕ ನೆರವಾಗುತ್ತೇನೆ ಎನ್ನುವುದು ನನ್ನ ಆಶಯ. ನಾನಿನ್ನೂ ಹರೆಯದ ಹುಡುಗಿ. ಕಿಡ್ನಿ ದಾನಿಯಾಗುವುದು ನನ್ನ ಶಕ್ತಿ ಸಾಮರ್ಥ್ಯದ ನೆಲೆಯಲ್ಲೇ' ಎಂದು ಈ ಯುವತಿ ಎದೆತಟ್ಟಿ ಹೇಳಿದಳು. ಸಾಮಾನ್ಯವಾಗಿ ಪ್ರತಿ 125 ಜನರಲ್ಲಿ ಒಬ್ಬರಿಗೆ ಹೆಚ್ಚಿನ ಒಂದು ಕಿಡ್ನಿ ಇರುತ್ತದೆ. ಆದರೆ ಈ ಯುವತಿಗೆ ಎರಡೂ ಬದಿಯ ಕಿಡ್ನಿಗೆ ತದ್ರೂಪಿ ಕಿಡ್ನಿ ಬೆಳೆದದ್ದು ವಿಶೇಷ ಎನ್ನುತ್ತಾರೆ ಹೆಸರಾಂತ ಕಿಡ್ನಿ ಸರ್ಜನ್ ನಿಯಾಜ್ ಅಹ್ಮದ್. ಈ ಎರಡೂ ಹೆಚ್ಚಿನ ಕಿಡ್ನಿಗಳನ್ನು ದಾನ ಮಾಡಲು ಮುಂದಾಗಿರುವ ಈ ಯುವತಿಯ ನಿರ್ಧಾರಕ್ಕೆ ಕಿಡ್ನಿ ಸರ್ಜನ್ನರು ತಮ್ಮ ಸಮ್ಮತಿ ಸೂಚಿಸಿದರು.

2008: ತಮಿಳಿನ ರಿಮೇಕ್, ಅಮೀರ್ ಖಾನ್ ಅಭಿನಯದ ಹಿಂದಿಯ `ಘಜನಿ' ಚಿತ್ರದ ವಿತರಣೆ ಹಕ್ಕನ್ನು 90 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿರುವುದಾಗಿ ವರದಿಯಾಯಿತು. ಕಳೆದ ವರ್ಷ ಶಾರೂಖ್ ಖಾನ್ ಅಭಿನಯದ `ಓಂ ಶಾಂತಿ ಓಂ' ಚಿತ್ರದ ವಿತರಣೆ ಹಕ್ಕು ಮಾರಾಟದಿಂದ 73 ಕೋಟಿ ರೂಪಾಯಿ ಸಂಗ್ರಹವಾಗಿತ್ತು

2008: ಲಂಡನ್ನಿನಲ್ಲಿ ಇತ್ತೀಚೆಗೆ `ದಯಾಮರಣ'ಕ್ಕೆ ಒಳಗಾದ ಹಸು `ಗಂಗೋತ್ರಿ'ಯ ಚಿತಾಭಸ್ಮವನ್ನು, ಕೆಲವು ಪುರೋಹಿತರ ವಿರೋಧದ ಮಧ್ಯೆ ಹರಿದ್ವಾರದ ಗಂಗೆಯಲ್ಲಿ ತೇಲಿ ಬಿಡಲಾಯಿತು. ಹರ್-ಕಿ-ಪೌರಿ ಹತ್ತಿರ ಚಿತಾಭಸ್ಮವನ್ನು ಗಂಗಾ ನದಿಗೆ ಬಿಡಲಾಯಿತು ಎಂದು ಶ್ರೀಗಂಗಾ ಸಭಾ ಅಧ್ಯಕ್ಷ ರಾಮಕುಮಾರ್ ಮಿಶ್ರ ಹೇಳಿದರು. ಹಿಂದೂ ಧರ್ಮದ ಪ್ರಕಾರ ಈ ಹಸುವಿನ ಚಿತಾಭಸ್ಮವನ್ನು ಗಂಗೆಗೆ ಬಿಡುವುದು ಸರಿಯಲ್ಲ ಎಂದು ಕೆಲವು ಪುರೋಹಿತರು ವಿರೋಧ ಮಾಡಿದ್ದರು. ಆದರೆ, ಕೆಲವು ಹಿರಿಯ ಪುರೋಹಿತರು ಮಧ್ಯಪ್ರವೇಶ ಮಾಡಿ ಮಾತುಕತೆ ನಡೆಸಿದ ಮೇಲೆ ಚಿತಾಭಸ್ಮವನ್ನು ಗಂಗೆಗೆ ಬಿಡಲು ಅವಕಾಶ ಕೊಡಲಾಯಿತು ಎಂದು ಮಿಶ್ರ ತಿಳಿಸಿದರು.

2008: ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಹರಿಹರದಲ್ಲಿ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣ ಮಹೋತ್ಸವ ನಡೆಯಿತು. ಹರಹರ ಮಹಾದೇವ, ಜಗದ್ಗುರುಗಳಿಗೆ ಜಯವಾಗಲಿ ಎಂಬ ಘೋಷಣೆಗಳ ನಡುವೆ ಸ್ಥಿರ ಪೀಠಾಧಿಪತಿ ಡಾ. ಮಹಾಂತ ಸ್ವಾಮೀಜಿ ಮತ್ತು ಚರ ಪೀಠಾಧಿಪತಿ ಸಿದ್ದಲಿಂಗೇಶ್ವರ ಸ್ವಾಮೀಜಿಗಳಿಗೆ ರುದ್ರಾಕ್ಷಿ ಕಿರೀಟ ಧಾರಣೆ ಮಾಡುವ ಮೂಲಕ ಪೀಠಾರೋಹಣ ನೆರವೇರಿತು.

2007: ಭಾರತದ ಅಂಚೆ ಕಚೇರಿಯ ಪ್ರಪ್ರಥಮ ಅಂಚೆ ಚೀಟಿ `ಸಿಂಧೆ ಡಾಕ್ಸ್' ನವದೆಹಲಿಯಲ್ಲಿ ಐದು ಸಾವಿರ ಡಾಲರುಗಳಿಗೆ (ಎರಡು ಲಕ್ಷ ರೂಪಾಯಿಗಳು) ಮಾರಾಟವಾಗುವುದರೊಂದಿಗೆ ದಾಖಲೆ ನಿರ್ಮಾಣಗೊಂಡಿತು. ಬ್ರಿಟಿಷ್ ಸಾಮ್ರಾಜ್ಯದ ಆಧೀನದಲ್ಲಿದ್ದ ಭಾರತದ ಸಿಂಧ್ ಪ್ರಾಂತ್ಯದಲ್ಲಿ ಅಂಚೆ ಸೇವೆ ಆರಂಭಿಸುವುದರೊಂದಿಗೆ ಏಷ್ಯಾ ಖಂಡದಲ್ಲಿ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂದಿತ್ತು. 1854ರಲ್ಲಿ ಸಿಂಧೆ ಡಾಕ್ಸ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಬ್ರಿಟಿಷರು ಸಿಂಧ್ ಪ್ರಾಂತಕ್ಕೆ ಸಿಂಧೆ ಎಂದು, ಡಾಕ್ ಗೆ (ಅಂಚೆ) ಡಾಕ್ಸ್ ಎಂದೂ ಉಚ್ಚರಿಸುತ್ತಿದ್ದುದರಿಂದ ಅಂಚೆ ಚೀಟಿಯನ್ನು ಸಿಂಧೆ ಡಾಕ್ಸ್ ಎಂದು ಕರೆಯುವುದು ರೂಢಿಯಲ್ಲಿ ಬಂತು. ವಿಶ್ವದಲ್ಲಿ 1840ರಲ್ಲಿ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂದ 14 ವರ್ಷಗಳ ನಂತರ ಅಂದರೆ 1854ರಲ್ಲಿ ಅಂದರೆ ಅಂಚೆ ವ್ಯವಸ್ಥೆ ಇನ್ನೂ ಅಂಬೆಗಾಲಿಡುವ ಸಮಯದಲ್ಲಿ ಪ್ರಥಮ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಸಿಂಧ್, ಕರಾಚಿ ಮತ್ತು ಮುಂಬೈ ಮಾರ್ಗವಾಗಿ ರವಾನೆಯಾಗುತ್ತ್ದಿದ ಪತ್ರಗಳ ಮೇಲೆ ಅಂಟಿಸಲಾಗುತ್ತಿತ್ತು.

2007: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಬಾಂಗ್ಲಾದೇಶದ `ಗ್ರಾಮೀಣ ಬ್ಯಾಂಕ್' ಸ್ಥಾಪಕ ಮಹಮ್ಮದ್ ಯೂನಸ್ ಅವರು ಢಾಕ್ಕಾದಲ್ಲಿ ತಮ್ಮ ಹೊಸ ರಾಜಕೀಯ ಪಕ್ಷದ ಸ್ಥಾಪನೆಯನ್ನು ಘೋಷಿಸಿದರು. ತಿಂಗಳ ಕೊನೆಯಲ್ಲಿ ಪಕ್ಷಕ್ಕೆ `ನಾಗರಿಕ ಶಕ್ತಿ' ಎಂಬುದಾಗಿ ನಾಮಕರಣ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.

2007: ಶಿವರಾತ್ರಿ ಆಚರಣೆಗಾಗಿ ಪಾಕಿಸ್ಥಾನಕ್ಕೆ ತೆರಳಿದ್ದ ಭಾರತದ ಹಿಂದೂ ಯಾತ್ರಿಕರು ಲಾಹೋರಿನ ಕೃಷ್ಣ ಮಂದಿರದಲ್ಲಿ ಕೃಷ್ಣ, ಹನುಮಾನ್ ಮತ್ತು ರಾಧೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಭಾರತದ ಪಂಡಿತ ವಿನಯಕುಮಾರ ಭೈರಾಗಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ದೇಶ ವಿಭಜನೆಯಾದ ಬಳಿಕ ಈ ಮೂವರು ದೇವರ ವಿಗ್ರಹಗಳು ಲಾಹೋರ್ ನಗರದಲ್ಲಿ ಇರಲಿಲ್ಲ.

2007: ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನಿಗೆ ಕಾವೇರಿ ನೀರಿನಿಂದ ಅಭಿಷೇಕ ಮತ್ತು ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ 5-1 ಕಲಶಗಳಿಂದ ಜಲಾಭಿಷೇಕ ಮಾಡಿ ಕಾವೇರಿ ಸಮಸ್ಯೆಗೆ ಶೀಘ್ರ ಪರಿಹಾರ ಲಭಿಸುವಂತಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

2007: ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ `ಕುವೆಂಪು ಕನ್ನಡ ತಂತ್ರಾಂಶ'ವನ್ನು ಸಾಹಿತಿ ಚಂದ್ರಶೇಖರ ಕಂಬಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

2007: ಗುವಾಹಟಿಯಲ್ಲಿ 33ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ತೆರೆ ಎಳೆದರು. ಅಂತಿಮ ದಿನದ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಗೆದ್ದುಕೊಂಡ ಸರ್ವೀಸಸ್ ತಂಡವು ಒಟ್ಟು 59 ಚಿನ್ನ, 46 ಬೆಳ್ಳಿ, 37 ಕಂಚಿನ ಪದಕಗಳೊಂದಿಗೆ ಅಗ್ರ ತಂಡವಾಗಿ ಹೊರಹೊಮ್ಮಿ `ಸಮಗ್ರ ಪ್ರಶಸ್ತಿ'ಯನ್ನು ಬಾಚಿಕೊಂಡಿತು. ನಂತರದ ಸ್ಥಾನಗಳನ್ನು ಮಣಿಪುರ ಮತ್ತು ಅತಿಥೇಯ ಅಸ್ಸಾಂ ಪಡೆದುಕೊಂಡವು. ಈಜುಕೊಳದಲ್ಲಿ ಕರ್ನಾಟಕ ಮತ್ತೆ ತನ್ನ ಪ್ರಭುತ್ವ ಸ್ಥಾಪಿಸಿತು.

2007: ಚಿತ್ರನಟಿ ರಾಧಿಕಾ ಅವರಿಗೆ ಸೇರಿದ ಬೆಂಗಳೂರಿನ ಬನಶಂಕರಿಯ ಕತ್ರಿಗುಪ್ಪೆಯಲ್ಲಿನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಮೊತ್ತದ ಹಣ, ಒಡವೆ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡರು. ಪ್ರತಿಷ್ಠಿತ ಡಾಲರ್ ಕಾಲೋನಿಯಲ್ಲಿ 13 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಯನ್ನು ರಾಧಿಕಾ ಅವರು ಇತ್ತೀಚೆಗೆ ಖರೀದಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು.

2006: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು 7 ಸಚಿವರು ಸೇರಿದಂತೆ 40 ಶಾಸಕರನ್ನು ಜನತಾದಳದಿಂದ (ಎಸ್) ಅಮಾನತುಗೊಳಿಸಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರ ಮಗ ಕುಮಾರಸ್ವಾಮಿ ಬಂಡಾಯದ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದು, ಅಮಾನತು ಪತ್ರಕ್ಕೆ ಸಹಿ ಹಾಕಿದರು.

2006: ಭಾರತಕ್ಕೆ ಪಕ್ಷಿಜ್ವರ (ಕೋಳಿಜ್ವರ) ಪ್ರವೇಶಿಸಿತು. ಮಹಾರಾಷ್ಟ್ರದ ನಂದೂರ್ ಬರ್ ಮತ್ತು ಧುಲೆ ಜಿಲ್ಲೆಯಲ್ಲಿ ಜ್ವರಕ್ಕೆ ತುತ್ತಾಗಿ ಕೋಳಿಗಳು ಅಸುನೀಗಿದ ಕೆಲವು ಪ್ರಕರಣಗಳನ್ನು ಮಹಾರಾಷ್ಟ್ರ ಸರ್ಕಾರ ದೃಢಪಡಿಸಿತು. ನಂದೂರ್ ಬರ್ ಜಿಲ್ಲೆಯಲ್ಲಿ ಸುಮಾರು 50,000 ಕೋಳಿಗಳು ಜ್ವರದಿಂದ ಸತ್ತವು.

1957: ಮರಿಟಾ ಕೊಚ್ ಹುಟ್ಟಿದ ದಿನ. ಪೂರ್ವ ಜರ್ಮನಿಯ ಕ್ರೀಡಾಪಟುವಾದ ಈಕೆ 1980ರಲ್ಲಿ ಮಾಸೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಪೂರ್ವ ಸಾಧನೆ ಮೆರೆದರು. ಈಕೆ ವೈಯಕ್ತಿಕ ಹಾಗೂ ಹೊರಾಂಗಣ ಆಟಗಳಲ್ಲಿ 16 ಜಾಗತಿಕ ದಾಖಲೆಗಳನ್ನು ಹಾಗೂ ಒಳಾಂಗಣ ಕ್ರೀಡೆಗಳಲ್ಲಿ 14 ಜಾಗತಿಕ ದಾಖಲೆಗಳನ್ನು ನಿರ್ಮಿಸಿದರು.

1930: ಅಮೆರಿಕದ ಖಗೋಳತಜ್ಞ ಕ್ಲೈಡ್ ಡಬ್ಲ್ಯೂ ಟೊಂಬಾಗ್ ಪ್ಲೂಟೊ ಗ್ರಹವನ್ನು ಕಂಡು ಹಿಡಿದರು. ಈ ಗ್ರಹ ಇರುವ ಬಗ್ಗೆ ಪರ್ಸಿವಲ್ ಲೊವೆಲ್ ಮತ್ತು ವಿಲಿಯಂ ಎಚ್. ಪಿಕರಿಂಗ್ ಭವಿಷ್ಯ ನುಡಿದಿದ್ದರು. ಇದಕ್ಕಿಂತ ದೊಡ್ಡದಾದ 10ನೇ ಗ್ರಹ ಈಚೆಗಷ್ಟೇ ಪತ್ತೆಯಾಗಿದೆ.

1836: ಭಾರತೀಯ ಸಂತ ರಾಮಕೃಷ್ಣ ಪರಮಹಂಸ (1836-1886) ಹುಟ್ಟಿದರು. ಇವರ ಶಿಷ್ಯ ಸಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿ ಪರಮಹಂಸರ ತತ್ವ ಪ್ರಸಾರ ಮಾಡಿದರು.

1745: ಇಟಲಿಯ ಭೌತತಜ್ಞ ಅಲೆಸ್ಸಾಂಡ್ರೊ ವೋಲ್ಟಾ (1745-1827) ಹುಟ್ಟಿದ ದಿನ. ಇವರು ಸಂಶೋಧಿಸಿದ ಎಲೆಕ್ಟ್ರಿಕ್ ಬ್ಯಾಟರಿ ನಿರಂತರ ವಿದ್ಯುತ್ತಿನ ಮೊದಲ ಮೂಲವಾಯಿತು.

1564: ಕಲಾವಿದ ಮೈಕೆಲೇಂಜೆಲೋ ತಮ್ಮ 88ನೇ ವಯಸ್ಸಿನಲ್ಲಿ ರೋಮ್ನಲ್ಲಿ ಮೃತನಾದ.

1546: ಜರ್ಮನಿಯ ಪ್ರೊಟೆಸ್ಟೆಂಟ್ ಸುಧಾರಣಾವಾದಿ ನಾಯಕ ಮಾರ್ಟಿನ್ ಲೂಥರ್ ತನ್ನ 62ನೇ ವಯಸ್ಸಿನಲ್ಲಿ ಜರ್ಮನಿಯ ಐಸೆಲ್ ಬೆನ್ನಲ್ಲಿ ಮೃತನಾದ.

No comments:

Post a Comment