ನಾನು ಮೆಚ್ಚಿದ ವಾಟ್ಸಪ್

Friday, July 31, 2020

ಇಂದಿನ ಇತಿಹಾಸ History Today ಜುಲೈ 31

ಇಂದಿನ ಇತಿಹಾಸ  History Today ಜುಲೈ 31

2020: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಸೆರೆವಾಸವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಮೂರು ತಿಂಗಳ ಅವಧಿಗೆ ವಿಸ್ತರಿಸಿ 2020 ಜುಲೈ 31ರ ಶುಕ್ರವಾರ ಆದೇಶ ಹೊರಡಿಸಿತು. ಕಳೆದ ವರ್ಷ ಆಗಸ್ಟ್ ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡು, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮಕ್ಕೆ ಮುಂಚಿತವಾಗಿ ಮುಂಜಾಗರೂಕತಾ ಕ್ರಮವಾಗಿ ಬಂಧಿಸಲ್ಪಟ್ಟ ನೂರಾರು ಮಂದಿಯಲ್ಲಿ ಮುಫ್ತಿ ಅವರೂ ಸೇರಿದ್ದಾರೆಮಾಜಿ ಮುಖ್ಯಮಂತ್ರಿಯವರ ಪ್ರಸ್ತುತ ಬಂಧನ ಆದೇಶವು ಆಗಸ್ಟ್ ರಂದು ಮುಕ್ತಾಯಗೊಳ್ಳುತ್ತಿದೆ. ಈಗ ಅದಕ್ಕೆ ಮುನ್ನವೇ ಮುಫ್ತಿ ಅವರ ಬಂಧನ ವಿಸ್ತರಿಸಿರುವ ಸುದ್ದಿಯನ್ನು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವು ಟ್ವೀಟ್ ಮೂಲಕ ದೃಢ ಪಡಿಸಿದೆ. ಗೃಹ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಮುಫ್ತಿ ಅವರುಆಧೀನ ಸೆರೆಮನೆ ಎಂಬುದಾಗಿ ಘೋಷಿಸಲ್ಪಟ್ಟಿರುವ ತಮ್ಮ ಅಧಿಕೃತ ನಿವಾಸವಾದ ಫೇರ್‌ವ್ಯೂ ಬಂಗಲೆಯಲ್ಲಿ ಇನ್ನೂ ಮೂರು ತಿಂಗಳು ಬಂಧನದಲ್ಲಿರುತ್ತಾರೆ. "ಕಾನೂನು ಜಾರಿ ಸಂಸ್ಥೆಗಳು ಇನ್ನಷ್ಟು ಪರಿಶೀಲನೆ ಸಲುವಾಗಿ ಮತ್ತಷ್ಟು ವಿಸ್ತರಣೆಯನ್ನು ಶಿಫಾರಸು ಮಾಡಿವೆ ಅದನ್ನು ಅನುಸರಿಸಿ ಬಂಧನ ಅವಧಿ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಯಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಚಂಡೀಗಢ: ಅಮೃತಸರ, ಬಟಾಲಾ ಮತ್ತು ತರನ್ ತಾರನ್‌ನಲ್ಲಿ ನಕಲಿ ಮದ್ಯ ಸೇವನೆಯಿಂದಾಗಿ ೨೧ ಜನರ ಅನುಮಾನಾಸ್ಪದ ಸಾವು ಸಂಭವಿಸಿದ್ದು, ಶಂಕಾಸ್ಪದ ಸಾವುಗಳ ಬಗ್ಗೆ ಜಲಂಧರದ ವಿಭಾಗೀಯ ಆಯುಕ್ತರಿಂದ ಮ್ಯಾಜಿಸ್ಟ್ರೇಟ್ ತನಿಖೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ 2020 ಜುಲೈ 31ರ ಶುಕ್ರವಾರ ಆದೇಶ ನೀಡಿದರು. ಶಂಕಿತ ಕಳ್ಳಭಟ್ಟಿ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳಿದವು. ತನಿಖೆಯು ಘಟನೆಗಳಿಗೆ ಕಾರಣವಾದ ಸಂದರ್ಭಗಳು ಮತ್ತು ವಾಸ್ತವಾಂಶಗಳು ಹಾಗೂ ಇತರ ಸಂಬಂಧಿತ ವಿಷಯಗಳ ಬಗ್ಗೆ ಪರಿಶೀಲಿಸಲಿದೆ. ಜಲಂಧರ್ ವಿಭಾಗೀಯ ಕಮೀಷನರ್ ಅವರು ಪಂಜಾಬಿನ ಅಬಕಾರಿ ಮತ್ತು ತೆರಿಗೆ ಜಂಟಿ ಆಯುಕ್ತರು ಹಾಗೂ ಸಂಬಂಧಿತ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಹಯೋಗದೊಂದಿಗೆ ತನಿಖೆ ನಡೆಸುವರು ಎಂದು ಅಧಿಕೃತ ವಕ್ತಾರರು ತಿಳಿಸಿದರು. ತನಿಖೆಯನ್ನು ತ್ವರಿತಗೊಳಿಸಲು ಯಾರೇ ನಾಗರಿಕ/ ಪೊಲೀಸ್ ಅಧಿಕಾರಿ ಅಥವಾ ಯಾರೇ ತಜ್ಞರನ್ನು ತಮ್ಮ ಜೊತೆಗೆ ಸೇರಿಸಿಕೊಳ್ಳಲು ಮುಖ್ಯಮಂತ್ರಿಯವರು ಜಲಂಧರ್ ಆಯುಕ್ತರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡು ಬರುವ ಯಾರೇ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಯಾಪ್ಟನ್ ಸಿಂಗ್ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ಹೋಟೆಲ್ ಮತ್ತು ಸಾಪ್ತಾಹಿಕ ಮಾರುಕಟ್ಟೆಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಮತ್ತೆ ತೆರೆಯಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಬ್ರೇಕ್ ಹಾಕಿರುವ ದೆಹಲಿಯ ಲೆಪ್ಟಿನೆಂಟ್ ಗವರ್ನರ್ (ಎಲ್‌ಜಿ) ಅನಿಲ್ ಬೈಜಾಲ್ ಅವರು ನಿರ್ಧಾರವನ್ನು 2020 ಜುಲೈ 31ರ ಶುಕ್ರವಾರ ರದ್ದು ಪಡಿಸಿದರು. ಅನ್ಲಾಕ್ .೦ರ ಹಿನ್ನೆಲೆಯಲ್ಲಿ ಹೋಟೆಲ್ ಮತ್ತು ಸಾಪ್ತಾಹಿಕ ಮಾರುಕಟ್ಟೆಗಳನ್ನು ಪ್ರಾಯೋಗಿಕ ನೆಲೆಯನ್ನು ತೆರೆಯಲು ಅರವಿಂದ ಕೇಜ್ರಿವಾಲ್ ಸರ್ಕಾರ ನಿರ್ಧರಿಸಿತ್ತು. ಮಧ್ಯೆ, ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅವರು ಶುಕ್ರವಾರ ಕೋವಿಡ್ -೧೯ ಪರಿಸ್ಥಿತಿ ಕುರಿತ ಸಚಿವರ ತಂಡದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ .೨೮ ಮಾತ್ರ ವೆಂಟಿಲೇಟರ್, ಶೇಕಡಾ .೬೧ ತೀವ್ರ ನಿಗಾ ಘಟಕ (ಐಸಿಯು) ಮತ್ತು ಶೇಕಡಾ .೩೨ ಆಮ್ಲಜನಕದ ಬೆಂಬಲದಲ್ಲಿ ಇವೆ ಎಂದು ಅವರು ಹೇಳಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಎಲ್ಲ ಶಾಸಕರಿಗೆ ಮೂರು ತಿಂಗಳ ವೇತನದಲ್ಲಿ ಶೇಕಡಾ ೩೦ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿದ್ದಾರೆ. "ನಾನು ನಿಧಿಗೆ ತಮ್ಮ ಕೊಡುಗೆಯನ್ನು ನೀಡುವಂತೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು. ಏತನ್ಮಧ್ಯೆ, ಭಾರತದ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಶುಕ್ರವಾರ ೧೬ ಲಕ್ಷವನ್ನು ದಾಟಿದೆ.  ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೫೫,೦೭೯ ಸೋಂಕು ಪ್ರಕರಣಗಳು ಪ್ರಕರಣಗಳು ದಾಖಲಾಗಿದ್ದು, ೭೭೯ ಸಾವುಗಳು ಸಂಭವಿಸಿವೆ. ಒಟ್ಟು ೧೬,೩೮,೮೭೧ ಪ್ರಕರಣಗಳ ಪೈಕಿ ೧೦,೫೭,೮೦೬ ಪ್ರಕರಣಗಳಲ್ಲಿ ರೋಗಿಗಳು ಸಂಪೂರ್ಣ ಗುಣಮುಖರಾಗಿ ಚೇತರಿಸಿದ್ದಾರೆ. ,೪೫,೩೧೮ ಸಕ್ರಿಯ ಪ್ರಕರಣಗಳಿವೆ. ಸಾವಿನ ಸಂಖ್ಯೆ ೩೫,೭೪೭ ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಭಾರತವು ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟದ ನಿಷೇಧವನ್ನು ಆಗಸ್ಟ್ ೩೧ ರವರೆಗೆ ವಿಸ್ತರಿಸಿ 2020 ಜುಲೈ 31ರ ಶುಕ್ರವಾರ ಆದೇಶ ಹೊರಡಿಸಿತು. ಆದರೆ ಅಂತಾರಾಷ್ಟ್ರೀಯ ಸರಕು ಸಾಗಣೆ ಕಾರ್ಯಾಚರಣೆ ಮತ್ತು ವಿಮಾನಯಾನ ನಿಯಂತ್ರಕ ಸಂಸ್ಥೆಯಾದ ನಾಗರಿಕ ವಿಮಾನಯಾನ ಮಹಾನಿರ್ದೇಶಕ- ಡಿಜಿಸಿಎ  ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಆದೇಶ ತಿಳಿಸಿತು. ಭಾರತದಿಂದ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳ ಅಮಾನತನ್ನು ಆಗಸ್ಟ್ ೩೧ ರಾತ್ರಿ ೧೨ ಗಂಟೆಯವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿಕೆ ತಿಳಿಸಿದೆ. ಜುಲೈ ತಿಂಗಳ ಆರಂಭದಲ್ಲಿ, ದೇಶಾದ್ಯಂತ ಕೋವಿಡ್ -೧೯ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯವು ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಜುಲೈ ೩೧ ರವರೆಗೆ ವಿಸ್ತರಿಸಿತ್ತು. ಇದಕ್ಕೂ ಮುನ್ನ, ಜುಲೈ ೧೫ರವೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿತ್ತು. ದೇಶೀಯ ಮಾರ್ಗಗಳಲ್ಲಿನ ವಿಮಾನಗಳ ಪ್ರಯಾಣಿಕರ ಸಾಮರ್ಥ್ಯವನ್ನು ಹಿಂದಿನ ಶೇಕಡಾ ೩೩ರಿಂದ ಶೇಕಡಾ ೪೫ಕ್ಕೆ ಏರಿಸಿದ್ದರ ನಡುವೆಯೇ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ವಿಸ್ತರಿಸಲಾಯಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 31 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ