ನಾನು ಮೆಚ್ಚಿದ ವಾಟ್ಸಪ್

Thursday, July 23, 2020

ಇಂದಿನ ಇತಿಹಾಸ History Today ಜುಲೈ 23

ಇಂದಿನ ಇತಿಹಾಸ  History Today ಜುಲೈ 23 

2020: ನವದೆಹಲಿ: ವಿಷಯಕ್ಕೆ ಸಂಬಂಧಿಸಿದಂತೆ ತಾನು ನಿರ್ಧಾರ ಕೈಗೊಳ್ಳುವವರೆಗೆ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಇತರ ೧೮ ಮಂದಿ ಬಂಡಾಯ ಕಾಂಗ್ರೆಸ್ ಶಾಸಕರ ಅನರ್ಹತೆ ಬಗ್ಗೆ ರಾಜಸ್ಥಾನ ವಿಧಾನಸಭಾ ಅಧ್ಯಕ್ಷ ಸಿಪಿ ಜೋಶಿ ಅವರು ನಿರ್ಧರಿಸಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ 2020 ಜುಲೈ 23ರ ಗುರುವಾರ ಮಧ್ಯಂತರ ಆದೇಶ ನೀಡಿತು. ಇದರೊಂದಿಗೆ ಸಚಿನ್ ಪೈಲಟ್ ಮತ್ತು ಅವರ ಬಣಕ್ಕೆ ಸುಪ್ರೀಂಕೋರ್ಟಿನಲ್ಲಿ ಮಿನಿ ವಿಜಯ ಲಭಿಸಿದೆ. ವಿಧಾನಸಭಾಧ್ಯಕ್ಷರು ಆರಂಭಿಸಿದ ಅನರ್ಹತೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಭಿನ್ನಮತೀಯ ಶಾಸಕರು ಸಲ್ಲಿಸಿರುವ ಅರ್ಜಿಯ ಬಗೆಗಿನ ತೀರ್ಪನ್ನು ನೀಡಲು ರಾಜಸ್ಥಾನ ಹೈಕೋರ್ಟಿಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್, ತೀರ್ಪು ಸುಪ್ರೀಂಕೋರ್ಟಿನಲ್ಲಿರುವ ಪ್ರಕರಣದ ವಿಚಾರಣೆಯ ಫಲಿತಾಂಶಕ್ಕೆ ಆಧೀನವಾಗಿರುತ್ತದೆ ಎಂದು ಹೇಳಿತು. ಭಿನ್ನಮತೀಯ ಕಾಂಗ್ರೆಸ್ ಶಾಸಕರು ಅನರ್ಹತೆ ಸಭಾಧ್ಯಕ್ಷರು ನೀಡಿರುವ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್ ಜುಲೈ ೨೪ರ ಶುಕ್ರವಾರ ತೀರ್ಪು ನೀಡಲಿದೆ. ರಾಜಸ್ಥಾನ ವಿಧಾನಸಭಾ ಅಧ್ಯಕ್ಷ ಸಿಪಿ ಜೋಶಿ ಅವರು ಸಂವಿಧಾನದ ೧೦ನೇ ಶೆಡ್ಯೂಲಿನ ಅಡಿಯಲ್ಲ್ಲಿ ತಾನು ಆರಂಭಿಸಿದ ಅನರ್ಹತೆ ಪ್ರಕ್ರಿಯೆಯಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಪ್ರತಿಪಾದಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಆದರೆ, ತಮ್ಮ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಪರಿಹಾರ ಪಡೆಯುವಲ್ಲಿ ಅವರು ವಿಫಲರಾದರು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠವು ಜೋಶಿಯವರ ಮನವಿಯು ಹಲವಾರು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದು ಬಗ್ಗೆ ಸುದೀರ್ಘ ವಿಚಾರಣೆ ಮಾಡಬೇಕಾಗುತ್ತದೆ ಎಂದು ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಸುಪ್ರೀಂಕೋರ್ಟ್ ಆದೇಶ ನೀಡಿದ ಐದು ತಿಂಗಳುಗಳ ಬಳಿಕ ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ಆಯೋಗ ರಚನೆಗೆ ಅನುಮತಿ ಪತ್ರವನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ 2020 ಜುಲೈ 23ರ ಗುರುವಾರ ಬಿಡುಗಡೆ ಮಾಡಿತು. ನ್ಯಾಯಾಧೀಶರು ಮತ್ತು ಅಡ್ವೊಕೇಟ್ ಜನರಲ್ (ಜೆಎಜಿ) ಮತ್ತು ಆರ್ಮಿ ಎಜುಕೇಷನಲ್ ಕೋರ್ (ಎಇಸಿ) ಶಾಖೆಗಳಿಗೆ  ಹೆಚ್ಚುವರಿಯಾಗಿ ಭಾರತೀಯ ಸೇನೆಯ ಎಲ್ಲಾ ಹತ್ತು ಶಾಖೆಗಳಲ್ಲಿ ಇರುವ ಶಾರ್ಟ್ ಸರ್ವಿಸ್ ಕಮಿಷನ್ಡ್ (ಎಸ್ಎಸ್ಸಿ) ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗದ ಅನುದಾನವನ್ನು ಆದೇಶವು ನಿರ್ದಿಷ್ಟಪಡಿಸುತ್ತದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ. ಆದೇಶವು ಮಹಿಳಾ ಅಧಿಕಾರಿಗಳಿಗೆ ಸಂಸ್ಥೆಯಲ್ಲಿ ಹೆಚ್ಚಿನ ಪಾತ್ರಗಳನ್ನು ವಹಿಸುವ ಅಧಿಕಾರವನ್ನು ನೀಡುತ್ತದೆ ಎಂದು ವಕ್ತಾರರು ಹೇಳಿದರು. "ಎಲ್ಲಾ ಎಸ್ಎಸ್ಸಿ ಮಹಿಳಾ ಅಧಿಕಾರಿಗಳು ತಮ್ಮ ಆಯ್ಕೆಯನ್ನು ಮತ್ತು ಸಂಪೂರ್ಣ ಅಗತ್ಯ ದಾಖಲಾತಿಗಳನ್ನು ಒದಗಿಸಿದ ಕೂಡಲೇ ಅವರ ಆಯ್ಕೆ ಮಂಡಳಿಯನ್ನು ನಿಗದಿಪಡಿಸಲಾಗುತ್ತದೆ" ಎಂದು ವಕ್ತಾರರು ನುಡಿದರು. ಇದಕ್ಕೆ ಮುನ್ನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಮಹಿಳಾ ಅಧಿಕಾರಿಗಳಿಗಾಗಿ ಶಾಶ್ವತ ಆಯೋಗ ರಚಿಸುವಂತೆ ನಿರ್ದೇಶಿಸಿದ ತನ್ನ ತೀರ್ಪಿನ ಜಾರಿಗೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಇನ್ನೂ ಒಂದು ತಿಂಗಳ ಕಾಲಾವಕಾಶವನ್ನು ಮಂಜೂರು ಮಾಡಿತ್ತು. ಸುಪ್ರೀಂಕೋರ್ಟ್ ಫೆಬ್ರುವರಿ ೧೭ರಂದು ನೀಡಿದ ತನ್ನ ತೀರ್ಪಿನಲ್ಲಿ ದೆಹಲಿ ಹೈಕೋರ್ಟ್ ೨೦೧೦ರಲ್ಲಿ ನೀಡಿದ್ದ ಆದೇಶವನ್ನು ಮನ್ನಿಸಿ ಕಾಯಂ ಆಯೋಗದ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಜ್ಞಾಪಿಸಿತ್ತು. ಎಲ್ಲ ಮಹಿಳಾ ಅಧಿಕಾರಿಗಳೂ ಸೇನೆಯಲ್ಲಿ ಪುರುಷರಿಗೆ ಸಮಾನವಾಗಿಆಜ್ಞೆ ಮತ್ತು ಮಾನದಂಡ ನೇಮಕಾತಿಗಳನ್ನು ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ನವದೆಹಲಿ: ಒಂದೇ ದಿನದಲ್ಲಿ ೨೯,೫೫೭ ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಚೇತರಿಸುವುದರೊಂದಿಗೆ ಭಾರತವು ಕೋವಿಡ್-೧೯ ಚೇತರಿಕೆಯಲ್ಲಿ 2020 ಜುಲೈ 23ರ ಗುರುವಾರ ದಾಖಲೆ ನಿರ್ಮಿಸಿದೆ. ಒಟ್ಟು ಸೋಂಕಿತರ ಪೈಕಿ ,೮೨,೬೦೬ ಮಂದಿ ಚೇತರಿಸಿದ್ದು, ಚೇತರಿಕೆ ಪ್ರಮಾಣ ಶೇಕಡಾ ೬೩.೧೮ಕ್ಕೆ ಏರಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳ ಪ್ರಕಾರ ದೇಶದಲ್ಲಿ ಈಗ ,೫೬ಮ೪೩೯ ಸಕ್ರಿಯ ಕೊರೋನಾವೈರಸ್ ಪ್ರಕರಣಗಳು ಇವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧೨,೩೮,೬೩೫. ದೇಶದಲ್ಲಿ ಕೋವಿಡ್-೧೯ ಪತ್ತೆಗಾಗಿ ನಡೆಸಲಾಗುತ್ತಿರುವ ಪರೀಕ್ಷೆಗಳ ಪ್ರಮಾಣವನ್ನೂ ಹೆಚ್ಚಿಸಲಾಗಿದ್ದು ಒಟ್ಟು ೧೫ ಮಿಲಿಯನ್ (೧೫೦ ಲಕ್ಷ) ಮಾದರಿಗಳನ್ನು ಪರೀಕ್ಷಿಸಲಾಗಿದೆ. ಜುಲೈ ೨೨ ರವರೆಗೆ ಒಟ್ಟು ,೫೦,೭೫,೩೬೯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ,೫೦,೮೨೩ ಮಾದರಿಗಳನ್ನು ಬುಧವಾರ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧಿಕಾರಿಗಳು ತಿಳಿಸಿದ್ದಾರೆ. "ಬುಧವಾರದವರೆಗೆ ಮೂರು ದಿನಗಳಲ್ಲಿ ಒಂದು ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಯಿತು. ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ ಸುಮಾರು ಲಕ್ಷಕ್ಕೆ ಹೆಚ್ಚಿಸಲಾಗಿದೆಎಂದು ಐಸಿಎಂಆರ್ ವಿಜ್ಞಾನಿ ಮತ್ತು ಮಾಧ್ಯಮ ಸಂಯೋಜಕ ಲೋಕೇಶ್ ಶರ್ಮಾ ಹೇಳಿದರು. "ಚೇತರಿಸಿಕೊಂಡ ಒಟ್ಟು ಪ್ರಕರಣಗಳ ಸಂಖ್ಯೆ ,೮೨,೬೦೬ ಕ್ಕೆ ಏರಿದ್ದು, ಚೇತರಿಕೆ ಪ್ರಮಾಣದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ, ಇದು ಶೇಕಡಾ ೬೩.೧೮ ರಷ್ಟಿದೆ" ಎಂದು ಸಚಿವಾಲಯ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ಬೀಜಿಂಗ್: ಚೀನಾದ ದಕ್ಷಿಣ ಪ್ರಾಂತ್ಯದ ಗುವಾಂಗ್ಡಾಂಗ್ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಂಪೂರ್ಣ ಗಾಜಿನ ಸೇತುವೆ ಪ್ರವಾಸಿಗರ ಮೈ ನವಿರೇಳಿಸುತ್ತಿದೆ. ಪ್ರವಾಸಿಗರಿಗೆ ಜೀವಮಾನದ ರೋಮಾಂಚನವನ್ನು ನೀಡುತಿರುವ ಸೇತುವೆ ಲಿಯಾನ್ಝೊವುದಲ್ಲಿನ  ಹುವಾಂಗ್ಚುವಾನ್ ಕಣಿವೆಗಳನ್ನು ವ್ಯಾಪಿಸಿದ್ದು ೫೨೬ ಮೀಟರ್ (,೭೨೫ ಅಡಿ) ಉದ್ದವಾಗಿದೆ. ಇದು ಪ್ರಸ್ತುತ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೂರು ಕಣಿವೆ ಪ್ರದೇಶದ ರಮ್ಯ ಸ್ಥಳ ಲಿಯಾಂಜಿಯಾಂಗ್ ನದಿಯ ಮೇಲೆ ನಿರ್ಮಿಸಲಾಗಿರುವ ಭವ್ಯವಾದ ರಚನೆಯನ್ನು 2020ರ ಜುಲೈ ೧೮ ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಸಾರ್ವಜನಿಕರಿಗಾಗಿ ಮುಕ್ತ ಗೊಳಿಸಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಗಿನ್ನೆಸ್ ವಿಶ್ವದಾಖಲೆಯ ಪ್ರತಿನಿಧಿಗಳು ಸದರಿ ರಚನೆಯು ಪ್ರಸ್ತುತ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಎಂಬುದಾಗಿ ಅಂಗೀಕರಿಸಿದ್ದಾರೆ. ಸೇತುವೆಯು ಮಧ್ಯದಲ್ಲಿ ನಾಲ್ಕು ವೀಕ್ಷಣಾ ಸ್ಥಳಗಳನ್ನು ಹೊಂದಿದೆ ಮತ್ತು ಏಕಕಾಲದಲ್ಲಿ ೫೦೦ ಪ್ರವಾಸಿಗರು ಇದರ ಮೇಲೆ ಸಾಗಬಹುದು ಎಂದು ವರದಿಗಳು ತಿಳಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ನವದೆಹಲಿ: ೧೩ ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮಾರುಕಟ್ಟೆ ಬಂಡವಾಳದೊಂದಿಗೆ ವಿಶ್ವದ ಅತ್ಯಂತ ಮೌಲ್ಯಯುತ (ಟಾಪ್) ೫೦ ಕಂಪೆನಿಗಳ ಸಾಲಿಗೆ ಸೇರಿದ ಭಾರತದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಕೋಟ್ಯಧೀಶ ಮುಖೇಶ ಅಂಬಾನಿ ಅವರ ರಿಲಯನ್ಸ್ 2020 ಜುಲೈ 23ರ ಗುರುವಾರ ಪಾತ್ರವಾಯಿತು. ತೈಲದಿಂದ ಟೆಲಿಕಾಮ್ವರೆಗೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ರಿಲಯನ್ಸ್ ವಿಶ್ವದಲ್ಲಿ ಅತ್ಯಧಿಕ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿಗಳ ಪೈಕಿ ೪೮ನೇ ಸ್ಥಾನಕ್ಕೆ ಏರಿದೆ ಎಂದು ಷೇರು ಮಾರುಕಟ್ಟೆ ಅಂಕಿಸಂಖ್ಯೆಗಳು ತಿಳಿಸಿದವು. ಜಾಗತಿಕವಾಗಿ . ಟ್ರಿಲಿಯನ್ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿರುವ ಸೌದಿ ಆರ್ಮ್ಯಾಕೋ ವಿಶ್ವದಲ್ಲೇ ಅತ್ಯಂತ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿಯಾಗಿದೆ. ಅದರ ನಂತರದ ಸ್ಥಾನದಲ್ಲಿ ಆಪಲ್, ಮೈಕ್ರೋಸಾಫ್ಟ್ , ಅಮೆಜಾನ್ ಮತ್ತು ಆಲ್ಫಾಬೆಟ್ ಇವೆ. ಗುರುವಾರ ರಿಲಯನ್ಸ್ ಷೇರುಬೆಲೆ ಬಿಎಸ್ಇಯಲ್ಲಿ ,೦೬೦.೬೫ ರೂಪಾಯಿಗಳೊಂದಿಗೆ ವಹಿವಾಟು ಮುಗಿಸಿತ್ತು. ಇದು ಹಿಂದಿನ ದಿನದ ಮುಕ್ತಾಯದ ದರಕ್ಕಿಂತ ಶೇಕಡಾ .೮೨ರಷ್ಟು ಹೆಚ್ಚು. ಇದು ಕಂಪೆನಿಗೆ ೧೩ ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಒದಗಿಸಿಕೊಟ್ಟಿತು. ಯಾವುದೇ ಭಾರತೀಯ ಕಂಪೆನಿಯು ೧೩ ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಈವರೆಗೆ ದಾಟಿಲ್ಲ. ರಿಲಯನ್ಸ್ ಮಾರುಕಟ್ಟೆ ಬಂಡವಾಳವು ಚೆವ್ರೋನ್ ೧೭೦ ಬಿಲಿಯನ್ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳವನ್ನು ಮೀರಿದೆ. ಅದೇ ರೀತಿ ಒರೇಕಲ್, ಯೂನಿಲಿವರ್,  ಬ್ಯಾಂಕ್ ಆಫ್ ಚೈನಾ, ಬಿಎಚ್ ಪಿ ಗ್ರೂಪ್, ರಾಯಲ್ ಡಚ್ ಶೆಲ್ ಮತ್ತು ಸಾಫ್ಟ್ ಬ್ಯಾಂಕ್ ಗ್ರೂಪ್ ಗಳ ಮಾರುಕಟ್ಟೆ ಬಂಡವಾಳಕ್ಕಿಂತ ಹೆಚ್ಚಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

 ಇಂದಿನ ಇತಿಹಾಸ  History Today ಜುಲೈ 23  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment