Thursday, July 2, 2020

ಇಂದಿನ ಇತಿಹಾಸ History Today ಜುಲೈ 02

ಇಂದಿನ ಇತಿಹಾಸ  History Today ಜುಲೈ 02  

2020: ನವದೆಹಲಿ: ೧೨ ಸು-೩೦ ಎಂಕೆಐ ಮತ್ತು ೨೧ ಮಿಗ್-೨೯ ವಿಮಾನಗಳು ಸೇರಿದಂತೆ ೩೩ ಹೊಸ ಯುದ್ಧ ವಿಮಾನಗಳನ್ನು ಖರೀದಿ ಮತ್ತು ೧೮,೧೪೮ ಕೋಟಿ ರೂಪಾಯಿ ವೆಚ್ಚದಲ್ಲಿ ೫೯ ಮಿಗ್-೨೯ ವಿಮಾನಗಳನ್ನು ನವೀಕರಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ 2020 ಜುಲೈ 02ರ ಗುರುವಾರ ಅನುಮೋದನೆ ನೀಡಿತು. "ಭಾರತೀಯ ವಾಯುಪಡೆಯ ತನ್ನ ಸಮರದಳಗಳನ್ನು ಹೆಚ್ಚಿಸುವ ದೀರ್ಘಕಾಲದ ಅಗತ್ಯವನ್ನು ತಿಳಿಸಿದ ಡಿಎಸಿ, ೨೧ ಮಿಗ್-೨೯ ಖರೀದಿ ಪ್ರಸ್ತಾಪವನ್ನು ಅಂಗೀಕರಿಸಿತು ಮತ್ತು ಬಳಕೆಯಲ್ಲಿರುವ ೫೯ ಮಿಗ್-೨೯ ವಿಮಾನಗಳನ್ನು ನವೀಕರಿಸುವುದು ಮತ್ತು ೧೨ ಸು-೩೦ ಎಂಕೆಐ ವಿಮಾನಗಳನ್ನು ಖರೀದಿಸುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯ ಬಳಿಕ ರಕ್ಷಣಾ ಸಚಿವಾಲಯ ಗುರುವಾರ ಹೇಳಿಕೆ ನೀಡಿತು. ರಷ್ಯಾದಿಂದ ಮಿಗ್-೨೯ ಖರೀದಿ ಮತ್ತು ನವೀಕರಣಕ್ಕೆ ೭೪೧೮ ಕೋಟಿ, ಎಚ್‌ಎಎಲ್‌ನಿಂದ ರೂ. ಸು-೩೦ ಎಂಕೆಐ ಖರೀದಿಗೆ ೧೦೭೩೦ ಕೋಟಿ ರೂ. ವೆಚ್ಚವಾಗಲಿದೆ. ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಮತ್ತು ಮತ್ತು ಚೀನೀ ಸೈನಿಕರ ಮಧ್ಯೆ ಹಲವಾರು ವಾರಗಳಿಂದ ಘರ್ಷಣೆ ನಡೆದಿದ್ದು, ಪ್ರಕ್ಷುಬ್ದತೆಯ ಸ್ಥಿತಿ ಇದೆ. ಅಂದಾಜು ೩೮,೯೦೦ ಕೋಟಿ ರೂ. ವೆಚ್ಚದಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ವಿವಿಧ ವೇದಿಕೆಗಳು ಮತ್ತು ಉಪಕರಣಗಳನ್ನು ಪಡೆದುಪಡಿಸಿಕೊಳ್ಳಲು ಡಿಎಸಿ ಅನುಮೋದನೆ ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಆಗ್ನೇಯ ಏಷ್ಯಾದ ಚೀನಾದ ನಿಕಟ ಮಿತ್ರ ಮ್ಯಾನ್ಮಾರ್, ದಂಗೆಕೋರ ಗುಂಪುಗಳನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತಗೊಳಿಸಲು ಬೀಜಿಂಗ್ ನೆರವು ನೀಡುತ್ತಿದೆ ಎಂದು ಆಪಾದಿಸಿದ್ದು, ಬಂಡುಕೋರ ಗುಂಪುಗಳ ನಿಗ್ರಹಕ್ಕಾಗಿ ಅಂತಾರಾಷ್ಟ್ರೀಯ ಸಹಕಾರಕ್ಕೆ 2020  ಜುಲೈ 02ರ ಗುರುವಾರ ಮನವಿ ಮಾಡಿತು. ರಷ್ಯಾದ ಸರ್ಕಾರಿ-ಟಿವಿ ಚಾನೆಲ್ ಜ್ವೆಜ್ಡಾಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ಮ್ಯಾನ್ಮಾರ್‌ನ ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್ ಅವರು, ಮ್ಯಾನ್ಮಾರ್‌ನಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳನ್ನುಪ್ರಬಲವಾದ ಶಕ್ತಿಗಳುಬೆಂಬಲಿಸುತ್ತಿವೆ ಎಂದು ಹೇಳಿದ್ದಲ್ಲದೆ, ಬಂಡಾಯ ಗುಂಪುಗಳನ್ನು ನಿಗ್ರಹಿಸಲು ಮ್ಯಾನ್ಮಾರ್ ಅಂತಾರಾಷ್ಟ್ರೀಯ ಸಹಕಾರವನ್ನು ಬಯಸುತ್ತದೆ ಎಂದು ಹೇಳಿದರು. ಪ್ರಬಲ ಶಕ್ತಿಎಂಬ ಉಲ್ಲೇಖವು ಉತ್ತರದಲ್ಲಿ ಮ್ಯಾನ್ಮಾರಿನ ನೆರೆಯ ದೇಶವಾದ ಚೀನಾಕ್ಕೆ ಸಂಬಂಧಿಸಿದ್ದು ಎಂದು ಭಾವಿಸಲಾಗಿದೆ. ಮ್ಯಾನ್ಮಾರಿನ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಝಾವ್ ಮಿನ್ ತುನ್ ಅವರು ಬಳಿಕ ಮ್ಯಾನ್ಮಾರ್ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್-ಇನ್-ಚೀಫ್) ವ್ಯಕ್ತ ಪಡಿಸಿದ ಅಭಿಪ್ರಾಯವನ್ನು ವಿಸ್ತಾರವಾಗಿ ವಿವರಿಸಿದರು. ಚೀನಾದ ಗಡಿಯ ಪಶ್ಚಿಮ ಮ್ಯಾನ್ಮಾರಿನ ರಾಖೈನ್ ರಾಜ್ಯದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳಾದ ಅರಾಕನ್ ಆರ್ಮಿ (ಎಎ) ಮತ್ತು ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್‌ಎಸ್‌ಎ) ಯನ್ನು ಸೇನಾ ಮುಖ್ಯಸ್ಥರು ಉಲ್ಲೇಖಿಸಿದ್ದಾರೆ ಎಂದು ವಕ್ತಾರರು ತಿಳಿಸಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಲಡಾಖ್ ಭೇಟಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಸೇನೆ ವಾಪಸಾತಿ ಬಗ್ಗೆ ನೀಡಿರುವ ಬದ್ಧತೆಯನ್ನು ಚೀನಾ ಈಡೇರಿಸುತ್ತದೆಯೇ ಎಂಬುದಾಗಿ ಕಾದು ನೋಡುವ ತಂತ್ರವಾಗಿ ಭಾರತ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಯಿತು. ಕಳೆದ ತಿಂಗಳು ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನೀ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಲು ಮತ್ತು ಸೇನೆಯ ಕಾರ್ಯಾಚರಣೆ ಸನ್ನದ್ಧತೆಯನ್ನು ಪರಿಶೀಲಿಸಲು ರಾಜನಾತ್ ಸಿಂಗ್ ಅವರು 2020 ಜುಲೈ 3ರ ಶುಕ್ರವಾರ ಮುಂಜಾನೆ ಲೆಹ್‌ಗೆ ಭೇಟಿ ನೀಡಬೇಕಾಗಿತ್ತು. ಪ್ರವಾಸವನ್ನು ಏತಕ್ಕಾಗಿ "ಮರುಹೊಂದಾಣಿಕೆ ಮಾಡಲಾಗಿದೆಎಂದು ಯಾರಿಗೂ ಸಂಪೂರ್ಣ ಸ್ಪಷ್ಟತೆ ಇಲ್ಲ. ಜೂನ್ , ಜೂನ್ ೨೨ ಮತ್ತು ಜೂನ್ ೩೦ ರಂದು ಮೂರು ಸುತ್ತುಗಳ ಕೋರ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ತಾನು ವ್ಯಕ್ತ ಪಡಿಸಿದ ಬದ್ಧತೆಯನ್ನು ಚೀನಾ ಗೌರವಿಸುವುದೇ ಎಂಬುದಾಗಿ ಕಾದು ನೋಡಲು ಭಾರತದ ಬಯಸಿದೆ ಎಂದು ಮೂಲಗಳು ಸೂಚಿಸಿವೆ. "ಮುಂಚೂಣಿಯಲ್ಲಿ ನಿಯೋಜಿಸಲಾಗಿರುವ ಸೈನಿಕರನ್ನು ಭೇಟಿ ಮಾಡಲು ರಕ್ಷಣಾ ಸಚಿವರು ಬಂದಾಗ, ಇದು ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಉದ್ವಿಗ್ನತೆ ಉಲ್ಬಣಗೊಂಡರೆ ನಾವು ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ ಎಂಬುದಾಗಿ ಶತ್ರುಗಳಿಗೆ ನೀಡುವ ಸಂಕೇತ ಇದಾಗುತ್ತದೆ. ಚೀನಾ ತನ್ನ ಬದ್ಧತೆ ಈಡೇರಿಸುವವರೆಗೆ  ನಾವು ನಮ್ಮ ಸಿಬ್ಬಂದಿಯನ್ನು ಕಡಿಮೆ ಮಾಡುವುದಿಲ್ಲ ಎಂಬುದು ಇದರ ಸ್ಪಷ್ಟ ಸೂಚನೆಎಂದು ಮೂಲವೊಂದು ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ೬೫ ವರ್ಷ ದಾಟಿದ ಹಿರಿಯ ನಾಗರಿಕರು ಮತ್ತು ಕೊರೋನಾವೈರಸ್ ಸೋಂಕಿತ ಅಥವಾ ಸೋಂಕು ತಗುಲಿದೆ ಎಂಬ ಶಂಕೆಗೆ ಒಳಗಾದ ವ್ಯಕ್ತಿಗಳಿಗೆ ಚುನಾವಣೆಗಳಲ್ಲಿ ಅಂಚೆ ಮೂಲಕ ಮತದಾನ (ಪೋಸ್ಟಲ್ ಬ್ಯಾಲೆಟ್) ಮಾಡಲು ಸರ್ಕಾರ 2020 ಜುಲೈ 02ರ ಗುರುವಾರ ಅನುಮತಿ ನೀಡಿತು. ಸಂಬಂಧ ೧೯೬೧ರ ಚುನಾವಣಾ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಕೋರೋನಾವೈರಸ್ ಸೋಂಕಿನ ಲಘು ಲಕ್ಷಣಗಳಿರುವ ಮತು ಯಾವುದೇ ವೈದ್ಯಕೀಯ ಸವಲತ್ತು ಕೇಂದ್ರದಲ್ಲಿ ಇರದೆ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾದ ವ್ಯಕ್ತಿಗಳು ಕೂಡಾ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಲವಾರು ಆರೋಗ್ಯ ಮಾರ್ಗಸೂಚಿಗಳು ೬೫ ವರ್ಷ ದಾಟಿದ ಜನರಿಗೆ ಮನೆಯಿಂದ ಹೊರಕ್ಕೆ ಹೋಗದಂತೆ ಸೂಚನೆ ನೀಡಿವೆ. ನಿರ್ದಿಷ್ಟವಾಗಿ  ವಯಸ್ಸಿನ ವ್ಯಕ್ತಿಗಳು ಬಹುಬೇಗನೆ ಅಂಟುವ ಕೊರೋನಾವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂದು ಮಾರ್ಗಸೂಚಿಗಳು ಹೇಳಿವೆ. ಬಿಹಾರ ಚುನಾವಣೆಗಳಿಗೆ ಮುಂಚಿತವಾಗಿ ಚುನಾವಣಾ ನಿಯಮಗಳಿಗೆ ತಿದ್ದುಪಡಿಗಳನ್ನು ತರಲಾಗಿದೆ. ಕೊರೋನಾವೈರಸ್ ಸಾಂಕ್ರಾಮಿಕವು  ರಾಜಕೀಯ ಚಟುವಟಿಕೆಗಳನ್ನು ಬಹುತೇಕ ಸ್ಥಗಿತಗೊಳಿಸಿದೆ. ಹಿಂದಿನ ನಿಯಮಾವಳಿಗಳ ಪ್ರಕಾರ ಸಶಸ್ತ್ರ ಪಡೆಗಳು ಮತ್ತು ಚುನಾವಣಾ ಕರ್ತವ್ಯಗಳಲ್ಲಿ ನಿಯೋಜಿತರಾದ ಅಧಿಕಾರಿಗಳಿಗೆ ಮಾತ್ರವೆ ಅಂಚೆ ಮೂಲಕ ಮತದಾನ ಮಾಡುವ ಸೌಲಭ್ಯವಿತ್ತು. ಫೆಬ್ರುವರಿಯಲ್ಲಿ  ತೀವ್ರ ಅಸ್ವಸ್ಥರಾದವರು ಅಥವಾ ೮೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮೂಲಕ ಮತದಾನದ ಅವಕಾಶ ಕಲ್ಪಿಸುವ ಪ್ರಯೋಗವನ್ನು  ಪ್ರಪ್ರಥಮ ಬಾರಿಗೆ ದೆಹಲಿ ರಾಜ್ಯದಲ್ಲಿ ಮಾಡಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿನ ಅಟ್ಟಹಾಸ ಅಗಾಧವಾಗಿ ಏರಿದ್ದರೂ, ಚೇತರಿಕೆಯ ಪ್ರಮಾಣ ಕೂಡಾ ಗಮನಾರ್ಹವಾಗಿ ಹೆಚ್ಚಿದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣ  2020 ಜುಲೈ 02ರ ಗುರುವಾರ ಶೇಕಡಾ ೬೦ರ ಸಮೀಪಕ್ಕೆ ಬಂದಿದ್ದು, ಪಶ್ಚಿಮ ಬಂಗಾಳದ ೯೯ರ ಹರೆಯದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ೪೩೪ ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಸೋಂಕಿನ ಪ್ರಕರಣಗಳ ಸಂಖ್ಯೆ ,೦೪,೬೪೧ಕ್ಕೆ ಏರಿಕೆಯಾಗಿದೆ. ಇದೇ ವೇಳೆಗೆ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರ ಸಂಖ್ಯೆ ,೫೯,೮೫೯ಕ್ಕೆ ಏರಿದೆ.  ಪಶ್ಚಿಮ ಬಂಗಾಳದ ದಕ್ಷಿಣ ೨೪ ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ನಿವಾಸಿ ಶ್ರೀಪತಿ ನ್ಯಾಯಬನ್ ಎಂಬ ೯೯ ವರ್ಷದ ರೋಗಿಯನ್ನು ಕೋಲ್ಕತ್ತಾದ ಪೂರ್ವ ಭಾಗದಲ್ಲಿರುವ ಖಾಸಗಿ ನರ್ಸಿಂಗ್ ಹೋಂನಿಂದ ಬುಧವಾರ ಬಿಡುಗಡೆ ಮಾಡಲಾಗಿದೆ. " ವ್ಯಕ್ತಿ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸಮಸ್ಯೆಗಳನ್ನು ಹೊಂದಿಲ್ಲ ಆದರೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರು" ಎಂದು ನರ್ಸಿಂಗ್ ಹೋಂನ ಸಿಬ್ಬಂದಿಯೊಬ್ಬರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು
: ಮಾರಕ ಕೊರೊನಾ ವೈರಸ್ ಪಿಡುಗಿಗೆ ಡಾ. ಗಿರಿಧರ್ ಕಜೆಯವರು ಕಂಡು ಹಿಡಿದಿರುವ ಔಷಧ ಪ್ರಯೋಗ ಯಶಸ್ವಿಯನ್ನು ಕಂಡಿತು. ಆಯುರ್ವೇದದ ಮೂಲಕ ಕೊರೊನಾ ಸೋಂಕಿತರನ್ನು ಗುಣಪಡಿಸಿದ ಡಾ.ಗಿರಿಧರ ಕಜೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ೨೩ ವರ್ಷದಿಂದ ೬೫ ವರ್ಷದವರೆಗಿನ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ಪಡೆದ ಸೋಂಕಿತರು ಗುಣಮುಖರಾಗಿದ್ದಾರೆ. ಹೃದ್ರೋಗ, ಕ್ಷಯ ರೋಗ, ಮಧುಮೇಹ ಇದ್ದ ರೋಗಿಗಳು ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಅತಿ ಕಡಿಮೆ ವೆಚ್ಚದ ಚಿಕಿತ್ಸೆ ಇದಾಗಿದ್ದು, ಡಾ. ಗಿರಿಧರ್ ಕಜೆಯವರ ಪ್ರಯೋಗ ಯಶಸ್ವಿಯನ್ನು ಕಂಡಿದೆ. ಬೇರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರು ಸೇರಿ ೧೦ ಜನ ಸೋಂಕಿತರು ಆಯುರ್ವೇದ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಿದ್ದಾರೆನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ಸ್ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧೀನ ಸಂಸ್ಥೆಯಾದ ಕ್ಲಿನಿಕಲಿ ಟ್ರಯಲ್ ರಿಜಿಸ್ಟರಿ ಆಫ್ ಇಂಡಿಯಾ ಅನುಮತಿ ನೀಡಿತ್ತು. ಜೂ. ರಿಂದ ೨೫ರವರೆಗೂ ಪ್ರಯೋಗ ನಡೆದಿತ್ತು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 02  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment