ನಾನು ಮೆಚ್ಚಿದ ವಾಟ್ಸಪ್

Friday, July 3, 2020

ಇಂದಿನ ಇತಿಹಾಸ History Today ಜುಲೈ 03

ಇಂದಿನ ಇತಿಹಾಸ  History Today ಜುಲೈ 03  

2020: ನವದೆಹಲಿ: ಸದ್ದು ಗದ್ದಲವಿಲ್ಲದೆ ಲಡಾಖ್ಗೆ 2020 ಜುಲೈ 03ರ ಶುಕ್ರವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ನೈಜ ನಿಯಂತ್ರಣ ರೇಖೆಯಲ್ಲಿ ನಿಯೋಜಿತರಾಗಿರುವ ಸೈನಿಕರಿಗೆ ಸ್ಫೂರ್ತಿ ತುಂಬಿದ್ದಲ್ಲದೆ, ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು. ‘ಗಡಿಯಲ್ಲಿ ನಿಯೋಜಿತರಾಗಿರುವ ಯೋಧರು ತಮ್ಮ ಶೌರ್ಯದ ಮೂಲಕ ಇಡೀ ಜಗತ್ತಿದೆ ಸಂದೇಶ ರವಾನಿಸಿದ್ದಾರೆಎಂದು ಪ್ರಧಾನಿ ನುಡಿದರು. ಲಡಾಖ್ನಲ್ಲಿ ನಿಯೋಜಿತರಾಗಿರುವ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿನಿಮ್ಮ ಶೌರ್ಯದ ಕಥೆಗಳು ಇಂದು ದೇಶಾದ್ಯಂತ ಮನೆ ಮನೆಗಳಲ್ಲೂ ಅನುರಣನಗೊಳ್ಳುತ್ತಿವೆಎಂದು ಹೇಳಿದರು. ವೈರಿಗಳಿಗೂ ನಿಮ್ಮ ಶೌರ್ಯ- ಕೆಚ್ಚೆದೆಯ ದರ್ಶನವಾಗಿದೆಎಂದು ಲಡಾಖ್ನಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನುಡಿದರು. ಜೂನ್ ೧೫ರಂದು ಗಲ್ವಾನ್ನಲ್ಲಿ ಭಾರತ ಮತ್ತು ಚೀನೀ ಯೋಧರ ಮಧ್ಯೆ ನಡೆದ ಹಿಂಸಾತ್ಮಕ ಘರ್ಷಣೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಹುತಾತ್ಮ ಯೋಧರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಲೆಹ್ನಿಂದ ಸಿಯಾಚಿನ್ ಮತ್ತು ಕಾರ್ಗಿಲ್ವರೆಗೆ ಮತ್ತು ಗಲ್ವಾನ್ ತಣ್ಣನೆಯ ನೀರಿನವರೆಗೆ ಪ್ರತಿಯೊಂದು ಪರ್ವತ, ಪ್ರತಿಯೊಂದು ಶಿಖರ ಕೂಡಾ ಭಾರತೀಯ ಯೋಧರ ಶೌರ್ಯಕ್ಕೆ ಸಾಕ್ಷಿಯಾಗಿವೆ. ಅವುಗಳನ್ನು ಜಯಿಸಲು ಪ್ರಯತ್ನಿಸಿ ಬಂದ ಜನರಿಗೆ ನೀವು ತಕ್ಕ ಉತ್ತರ ನೀಡಿದ್ದೀರಿಎಂದು ಯೋಧರನ್ನು ಹುರಿದುಂಬಿಸುವ ಮೂಲಕ ಪ್ರಧಾನಿ ಚೀನಾಕ್ಕೆ ನೇರ ಸಂದೇಶ ನೀಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಲೆಹ್: ಲೆಹ್ಗೆ 2020 ಜುಲೈ  03ರ ಶುಕ್ರವಾರ ದಿಢೀರ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಲೆಹ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ, ಅವರನ್ನು ಶ್ಲಾಘಿಸುವುದರ ಜೊತೆಗೆ ಅವರಲ್ಲಿ ಹುರುಪು ತುಂಬಿದರು. ನಮ್ಮ ದೇಶ ಎಂದಿಗೂ ವಿಶ್ವದ ಯಾವುದೇ ಶಕ್ತಿಯ ಮುಂದೆಯೂ ತಲೆಬಾಗಿಲ್ಲ, ಮುಂದೆ ಬಾಗುವುದೂ ಇಲ್ಲ. ನಿಮ್ಮಂಥ ಧೈರ್ಯಶಾಲಿಗಳಿಂದಾಗಿ ಮಾತುಗಳನ್ನಾಡಲು ನನಗೆ ಸಾಧ್ಯವಾಗಿದೆಎಂದು ಯೋಧರ ಜೊತೆ ಮಾತನಾಡುತ್ತಾ ಪ್ರಧಾನಿ ನುಡಿದರು. ಜೂನ್ ೧೫ರಂದು ಗಾಲ್ವನ್ ಕಣಿವೆಯಲ್ಲಿ ಚೀನಾ ಪಡೆಗಳ ಜತೆ ನಡೆದ ಸಂಘರ್ಷದಲ್ಲಿ ಗಾಯಗೊಂಡಿದ್ದ ಯೋಧರು ಲೆಹ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಮಗೆ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ಭಾರತ ಸ್ವಾವಲಂಬಿಯಾಗಿದೆ. ನಮ್ಮ ದೇಶ ಎಂದಿಗೂ ವಿಶ್ವದ ಯಾವುದೇ ಶಕ್ತಿಯ ಮುಂದೆಯೂ ತಲೆಬಾಗಿಲ್ಲ, ಮುಂದೆ ಬಾಗುವುದೂ ಇಲ್ಲ. ನಿಮಗೆ ಮತ್ತು ನಿಮ್ಮಂಥ ಧೈರ್ಯಶಾಲಿಗಳಿಗೆ ಜನ್ಮ ನೀಡಿದ ತಾಯಂದಿರಿಗೆ ಗೌರವ ಸಲ್ಲಿಸುತ್ತೇನೆ. ನೀವೆಲ್ಲ ಬೇಗ ಗುಣಮುಖರಾಗುವಿರೆಂದು ನಂಬಿದ್ದೇನೆಎಂದು ಪ್ರಧಾನಿ ಯೋಧರೊಂದಿಗೆ ಮಾತನಾಡುತ್ತಾ ನುಡಿದರು. ನಮ್ಮನ್ನಗಲಿದ ಶೌರ್ಯವಂತರು ವಿನಾಕಾರಣ ನಮ್ಮನ್ನು ಬಿಟ್ಟುಹೋಗಿಲ್ಲ. ನೀವೆಲ್ಲ ತಕ್ಕ ತಿರುಗೇಟು ನೀಡಿದ್ದೀರಿ. ನಿಮ್ಮ ಧೈರ್ಯ, ನೀವು ಚೆಲ್ಲುವ ರಕ್ತವು ಯುವಕರಿಗೆ, ದೇಶವಾಸಿಗಳಿಗೆ ಮತ್ತು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡಲಿದೆಎಂದು ಪ್ರಧಾನಿ ಯೋಧರಿಗೆ ಹುರುಪು ನೀಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು  2020 ಜುಲೈ 03ರ ಶುಕ್ರವಾರ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಜುಲೈ ೩೧ ರವರೆಗೆ ವಿಸ್ತರಿಸಿತು. ಹಿಂದಿನ ಆದೇಶದ ಪ್ರಕಾರ ಜುಲೈ ೧೫ ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನವನ್ನು ನಿಷೇಧಿಸಲಾಗಿತ್ತು. ದೇಶೀಯ ಮಾರ್ಗಗಳಲಿ ಪ್ರಯಾಣಿಕರ ಸಾಮರ್ಥ್ಯವನ್ನು ಹಿಂದಿನ ಶೇಕಡಾ ೩೩ರಿಂದ ಶೇಕಡಾ ೪೫ಕ್ಕೆ ಏರಿಸಿದ್ದರ ನಡುವೆಯೇ ವಿಮಾನಯಾನ ಸಚಿವಾಲಯವು ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧ ವಿಸ್ತಣೆಯ ನಿರ್ಧಾರ ಕೈಗೊಂಡಿದೆ. ಭಾರತವು ಅಮೆರಿಕ, ಕೆನಡಾ, ಐರೋಪ್ಯ ಮತ್ತು ಕೊಲ್ಲಿ ಪ್ರದೇಶಗಳ ದೇಶಗಳೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಗುಂಪುಗಳನ್ನು ಸ್ಥಾಪಿಸುವ ಕುರಿತು ಮಾತುಕತೆ ನಡೆಸುತಿದ್ದು, ಇದು ಪ್ರತಿ ದೇಶದ ವಿಮಾನಯಾನ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಡೆಸಲು ಅನುವು ಮಾಡಿಕೊಡಲಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧ್ಯಕ್ಷರು ಗುರುವಾರ ಹೇಳಿದ್ದರು. "ಅಮೆರಿಕ, ಕೆನಡಾ ಮತ್ತು ಕೊಲ್ಲಿ ರಾಷ್ಟ್ರಗಳೊಂದಿಗೆ ಮಾತುಕತೆ ಧನಾತ್ಮಕವಾಗಿದೆ ಎಂದು ನನಗೆ ಖಾತ್ರಿಯಿದೆ ಮತ್ತು ಮಾತುಕತೆಗಳು ಮುಂದುವರೆದಿವೆಎಂದು ಅರವಿಂದ್ ಸಿಂಗ್ ತಿಳಿಸಿದ್ದರು. ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ ೨೩ ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ. ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರು ಜೂನ್ -ಜುಲೈಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟವನ್ನು ಪುನಾರಂಭಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಹೇಳಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಇಸ್ಲಾಮಾಬಾದ್: ಪಾಕಿಸ್ತಾನದ ಶೇಖುಪುರ ಬಳಿ ಮಿನಿಬಸ್ ಮತ್ತು ರೈಲು ನಡುವೆ  2020 ಜುಲೈ 03ರ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ೨೯ ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಬಹುತೇಕ ಮಂದಿ ಸಿಖ್ ಯಾತ್ರಿಕರು ಎಂದು ವರದಿಗಳು ತಿಳಿಸಿದವು. ಕರಾಚಿಗೆ ಹೊgಟಿದ್ದ ಶಾ ಹುಸೇನ್ ಎಕ್ಸ್ಪ್ರೆಸ್ ರೈಲು ಮಾನವರಹಿತ ರೈಲ್ವೆ ಕ್ರಾಸಿಂಗ್ನಲ್ಲಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಯಾತ್ರಿಕರು ಪೇಶಾವರದಿಂದ ಪಯಣ ಹೊರಟಿದ್ದರು. ಅಪಘಾತದ ಸಮಯದಲ್ಲಿ ವ್ಯಾನಿನಲ್ಲಿ ೨೫-೨೭ ಜನರು ಇದ್ದರು ಎಂದು ಪೊಲೀಸರು ತಿಳಿಸಿದರು. ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗಾಗಿ ರೈಲ್ವೆ ಮತ್ತು ಜಿಲ್ಲಾ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ಪಾಕಿಸ್ತಾನ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಗಾಯಾಳುಗಳನ್ನು ಶೇಖುಪುರ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿತು. ಅಪಘಾತ ಸಂಭವಿಸಿದ ಕ್ರಾಸಿಂಗ್ ಗೇಟ್ ಮುಚ್ಚಲಾಗಿತ್ತು. ಆದರೆ ಕೋಚ್ ಚಾಲಕ ಕ್ರಾಸಿಂಗ್ನಲ್ಲಿ ಕಾಯುವ ಬದಲು ಶಾರ್ಟ್ಕಟ್ ತೆಗೆದುಕೊಳ್ಳಲು ಪ್ರಯತ್ನಿಸಿರಬಹುದು, ಇದರಿಂದಾಗಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪಾಕಿಸ್ತಾನದ ಸಿಖ್ ಗುರುದ್ವಾರ ಪ್ರಬಂz ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ದಾರ್ ಅಮೀರ್ ಸಿಂಗ್ ಅವರ ಪ್ರಕಾರ, ಮೃತರು ಮೂರು ಅಥವಾ ನಾಲ್ಕು ಕುಟುಂಬಗಳಿಗೆ ಸೇರಿದವರಾಗಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ/ ಬೀಜಿಂಗ್: ’ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್ ಲಡಾಖ್ ಭೇಟಿಗೆ ಚೀನಾ 2020 ಜುಲೈ 03ರ ಶುಕ್ರವಾರ ಆಕ್ಷೇಪ ವ್ಯಕ್ತ ಪಡಿಸಿತು. ನೈಜ ನಿಯಂತ್ರಣ ರೇಖೆಯ ಗಡಿ ಠಾಣೆಗಳಲ್ಲಿ ಪರಿಸ್ಥಿತಿಯ ಪರಿಶೀಲನೆ ಮತ್ತು ಸೇನೆ, ವಾಯುಪಡೆ ಮತ್ತು ಐಟಿಬಿಪಿ ಸಿಬ್ಬಂದಿಯೊಂದಿಗೆ  ಸಂವಹನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್ಗೆ ನೀಡಿದ ಅಚ್ಚರಿಯ ಭೇಟಿಗೆ ಚೀನಾ ಅಸಮಾಧಾನ ವ್ಯಕ್ತಪಡಿಸಿತು.  "ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಉದ್ವಿಗ್ನತೆ ಕಡಿಮೆ ಮಾಡುವ ಬಗ್ಗೆ ಸಂವಹನ ಮತ್ತು ಮಾತುಕತೆ ನಡೆಸುತ್ತಿವೆ. ಸಮಯದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮದಲ್ಲಿ ಯಾವುದೇ ಪಕ್ಷವು ತೊಡಗಬಾರದುಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದರು. ಪ್ರಧಾನ ಮಂತ್ರಿಯ ಭೇಟಿಯು ಸಶಸ್ತ್ರ ಪಡೆಗಳಿಗೆ ಮನೋಸ್ಥೈರ್ಯ ತುಂಬುವ ಮತ್ತು ಚೀನಾಕ್ಕೆ ಒಂದು ಪ್ರಬಲ ಸಂದೇಶವಾಗಿ ಕಾರ್ಯನಿರ್ವಹಿಸಿತು, ಇದು ಉಪಗ್ರಹ ಚಿತ್ರಗಳಲ್ಲಿ ಕಂಡುಬರುವ ಚೀನಾ ಪಡೆಗಳ ಆಕ್ರಮಣಕಾರಿ ಭಂಗಿಗಳಿಗೆ ಭಾರತದ ಉತ್ತರ ರೂಪದಲ್ಲಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ 2020 ಜುಲೈ 3ರ ಶುಕ್ರವಾರ ಇದೇ ಮೊತ್ತ ಮೊದಲ ಬಾರಿಗೆ ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಶೇಕಡಾ 60.73ನ್ನು ತಲುಪಿದ್ದು, ಸುಮಾರು 1.5 ಲಕ್ಷಕ್ಕೂ ಹೆಚ್ಚು ಅಂತರದೊಂದಿಗೆ ಸಕ್ರಿಯ ಪ್ರಕರಣಗಳನ್ನು ಹಿಂದೆ ಹಾಕಿದೆ. ಕಳೆದ 24 ಗಂಟೆಗಳಲ್ಲಿ 20,033 ಮಂದಿ ಗುಣಮುಖರಾಗಿ ಚೇತರಿಸಿದರು.  ಈವರೆಗೆ ಗುಣಮುಖರಾದ ರೋಗಿಗಳ ಸಂಖ್ಯೆ 3,79,891ಕ್ಕೆ ಏರಿದರೆ, ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 2,27,439 ಆಗಿದೆ. ಸಕ್ರಿಯ ಪ್ರಕರಣಗಳಿಗಿಂತ 1,52,452 ಹೆಚ್ಚು ಪ್ರಕರಣಗಳಲ್ಲಿ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)  

ಇಂದಿನ ಇತಿಹಾಸ  History Today ಜುಲೈ 03  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment