Tuesday, July 21, 2020

ಇಂದಿನ ಇತಿಹಾಸ History Today ಜುಲೈ 21

ಇಂದಿನ ಇತಿಹಾಸ  History Today ಜುಲೈ 21 

2020: ದೆಹಲಿ: ರಾಜ್ಯ ವಿಧಾನಸಭಾ ಅಧ್ಯಕ್ಷರು ನೀಡಿರುವ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಇತರ ೧೮ ಭಿನ್ನಮತೀಯ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ರಿಟ್ ಅರ್ಜಿಯ ಕುರಿತು ತೀರ್ಪು ಪ್ರಕಟಿಸುವುದಾಗಿ ರಾಜಸ್ಥಾನ ಹೈಕೋರ್ಟ್ 2020 ಜುಲೈ 21ರ ಮಂಗಳವಾರ ಪ್ರಕಟಿಸಿತು. ಅಲ್ಲಿಯವರೆಗೆ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ವಿಧಾನಸಭಾ ಅಧ್ಯಕ್ಷರಿಗೆ ನ್ಯಾಯಾಲಯ ಆಜ್ಞಾಪಿಸಿತು. ಕಾಂಗ್ರೆಸ್ ಪಕ್ಷವು ವಿಧಾನಸಭಾ ಅಧ್ಯಕ್ಷ ಸಿಪಿ ಜೋಶಿ ಅವರಿಗೆ ಸದರಿ ಶಾಸಕರು ಕಳೆದ ಸೋಮವಾರ ಮತ್ತು ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಎರಡು ಸಭೆಗಳಿಗೆ ಹಾಜರಾಗುವಂತೆ ನೀಡಿದ್ದ ಸಚೇತಕಾಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂಬುದಾಗಿ ದೂರು ನೀಡಿದ ಬಳಿಕ ಬಂಡಾಯ ಶಾಸಕರಿಗೆ ವಿಧಾನಸಭಾಧ್ಯಕ್ಷರು ಅನರ್ಹತೆ ನೋಟಿಸ್ ಜಾರಿ ಮಾಡಿದ್ದರು. ಪೈಲಟ್ ಮತ್ತು ಅವರನ್ನು ಬೆಂಬಲಿಸುತ್ತಿರುವ ಶಾಸಕರ ವಿರುದ್ಧ ಸಂವಿಧಾನದ ೧೦ನೇ ಶೆಡ್ಯೂಲಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭಾ ಅಧ್ಯಕ್ಷರಿಗೆ ನೀಡಿದ್ದ ದೂರಿನಲ್ಲಿ ಕಾಂಗ್ರೆಸ್ ಕೋರಿತ್ತು. ಏನಿದ್ದರೂ, ಪೈಲಟ್ ಬಣವು ಪಕ್ಷದ ಸಚೇತಕಾಜ್ಞೆ ಅನ್ವಯವಾಗುವುದು ವಿಧಾನಮಂಡಲ ಅಧಿವೇಶನವನ್ನು ನಡೆಸುವ ಹೊತ್ತಿನಲ್ಲಿ ಮಾತ್ರ ಎಂದು ಪ್ರತಿಪಾದಿಸಿದೆ. ತಾವು ಬಿಜೆಪಿ ಸೇರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿರುವ ಸಚಿನ್ ಪೈಲಟ್ ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನ ಮತ್ತು ರಾಜಸ್ಥಾನ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದ ಕಳೆದ ತಿಂಗಳು ವಜಾಗೊಳಿಸಲಾಗಿತ್ತು. ಗೋವಿಂದ ಸಿಂಗ್ ದೊಟಸ್ರಾ ಅವರನ್ನು ಪಕ್ಷದ ನೂತನ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.   (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ದೆಹಲಿಯಾದ್ಯಂತ ಕೊರೋನಾವೈರಸ್ ಸಾಂಕ್ರಾಮಿಕ ರೋಗ ವಿರೋಧಿ ಐಜಿಜಿ ಪ್ರತಿಕಾಯ ಹೊಂದಿರುವವರ ಸಂಖ್ಯೆ ಶೇಕಡಾ ೨೩.೪೮ ರಷ್ಟಿದೆ ಎಂದು ದೆಹಲಿ ಸಿರೊ-ಸಮೀಕ್ಷೆ 2020 ಜುಲೈ 21ರ ಮಂಗಳವಾರ ವರದಿ ಮಾಡಿತು. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ -ಎನ್ಸಿಡಿಸಿ) ನಡೆಸಿದ ಅಧ್ಯಯನವು ಹೆಚ್ಚಿನ ಸಂಖ್ಯೆಯ ಸೋಂಕಿತ ವ್ಯಕ್ತಿಗಳು ಲಕ್ಷಣರಹಿತರು ಎಂಬುದಾಗಿ ಕೂಡಾ ಸೂಚಿಸಿದೆ. ಸಮೀಕ್ಷೆಯನ್ನು ೨೭ ಜೂನ್ ೨೦೨೦ ರಿಂದ ಜುಲೈ ೧೦ ರವರೆಗಿನ ಅವಧಿಯಲ್ಲಿ ನಡೆಸಲಾಗಿತ್ತು. ಪ್ರಯೋಗಾಲಯ ಮಾನದಂಡಗಳ ಪ್ರಕಾರ ಒಟ್ಟು ೨೧,೩೮೭ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಯಿತು. ಇಂತಹ ಪರೀಕ್ಷೆಗಳು ಸಾಮಾನ್ಯ ಜನಸಂಖ್ಯೆಯಲ್ಲಿ ಪ್ರತಿಕಾಯಗಳ ಉಪಸ್ಥಿತಿಯನ್ನು ಗುರುತಿಸಲು ಸಹಾಯ ಮಾಡುತ್ತವೆ. ಪದೇ ಪದೇ ಸಿರೊ-ಕಣ್ಗಾವಲು ಅಂದರೆ ಪ್ರತಿಕಾಯ ಪರೀಕ್ಷೆಯನ್ನು ನಡೆಸುವುದರಿಂದ ಕಾಲಕಾಲಕ್ಕೆ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿರ್ಣಯಿಸಲು ಪ್ರಮುಖ ಪುರಾವೆಗಳು ಲಭ್ಯವಾಗುತ್ತವೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಸರ್ಕಾರ ನಡೆಸಿದ ವಿನೂತನ ಸಮೀಕ್ಷೆಯಲ್ಲಿ ೨೧,೩೮೭ ಮಾದರಿಗಳಲ್ಲಿ ಶೇಕಡಾ ೨೩.೪೮ರಷ್ಟು ಮಾದರಿಗಳಲ್ಲಿ ಕೋವಿಡ್-೧೯ ಪ್ರತಿಕಾಯಗಳು ಕಂಡುಬರುವುದರೊಂದಿಗೆ ದೆಹಲಿಯ ನಾಲ್ವರಲ್ಲಿ ಒಬ್ಬರಿಗೆ ಕೊರೋನಾವೈರಸ್ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಆದರೆ ಬಹುತೇಕ ಮಂದಿ ರೋಗಲಕ್ಷಣ ರಹಿತರಾಗಿದ್ದಾರೆ ಎಂಬುದು ಖಚಿತ ಪಟ್ಟಿದೆ ಎಂದು ಸಮೀಕ್ಷೆ 2020 ಜುಲೈ 21ರ ಮಂಗಳವಾರ ಹೇಳಿತು. ಸೋಂಕು ದೃಢಪಟ್ಟಿರುವ ಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ಸೋಂಕು ಹರಡಿದೆ ಎಂಬುದನ್ನು ಸಮೀಕ್ಷೆ ಸ್ಪಷ್ಟ ಪಡಿಸಿದೆ ಎಂದು ಅದು ಹೇಳಿತು. ದೆಹಲಿಯಲ್ಲಿ ಈವರೆಗೆ ,೨೩,೭೪೭ ಕೊರೋನಾವೈರಸ್ ಸೋಂಕಿನ ಪ್ರಕರಣUಳು ದಾಖಲಾಗಿವೆ. ಇದು ನಗರದ .೯೮ ಕೋಟಿ (೧೯. ಮಿಲಿಯನ್) ಜನಸಂಖ್ಯೆಯ ಶೇಕಡಾ ೧ರಷ್ಟು ಆಗುತ್ತದೆ. ಸಮೀಕ್ಷೆಯ ಪ್ರಕಾರ ಕೋವಿಡ್-೧೯ ಪ್ರತಿಕಾಯಗಳು ಪತ್ತೆಯಾಗಿರುವ ಶೇಕಡಾ ೨೩.೪೪ರ ಪ್ರಮಾಣಕ್ಕೆ ಜನಸಂಖ್ಯೆಯನ್ನು ಅನ್ವಯಿಸಿದರೆ ನಗರದಲ್ಲಿ ಕೋವಿಡ್-ಸೋಂಕಿಗೆ ಒಳಗಾಗಿರುವವರ ಸಂಖ್ಯೆ ೪೬.೫೦ ಲಕ್ಷದಷ್ಟು (.೬೫ ಮಿಲಿಯನ್) ಆಗುತ್ತದೆ. ಅಂದರೆ ಬಹುತೇಕ ಸೋಂಕಿತರು ರೋಗ ಲಕ್ಷಣ ರಹಿತರಾಗಿದ್ದಾರೆ ಎಂಬುದನ್ನು ಸಮೀಕ್ಷೆ ಸೂಚಿಸುತ್ತದೆ.  ಹಲವಾರು ಪ್ರದೇಶಗಳಲ್ಲಿ ಜನ ನಿಬಿಡತೆ ಹೆಚ್ಚಿರುವ ದೆಹಲಿಯಲ್ಲಿ ಶೇಕಡಾ ೨೩.೪೮ ಎಂಬುದು ಸಣ್ಣ ಸಂಖ್ಯೆ. ಆದರೂ ಗಮನಾರ್ಹ ಸಂಖ್ಯೆಯ ಜನರು ಇನ್ನೂ ಅಪಾಯದ ಅಂಚಿನಲ್ಲಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಆದ್ದರಿಂದ ಸುರಕ್ಷತೆಗಾಗಿ ಕಠಿಣ ಕ್ರಮಗಳ ಅನುಸರಣೆ ಅಗತ್ಯ ಎಂದು ಸಮೀಕ್ಷೆ ಹೇಳಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕಿರಿಕಿರಿ ಉಂಟು ಮಾಡುವ ಸಾಮಾಜಿಕ ಭದ್ರತಾ ತೆರಿಗೆ ಹೊರೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಅಮೆರಿಕವು ಅಂತಿಮವಾಗಿ ಒಪ್ಪಿದ್ದು, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವೃತ್ತಿ ನಿರತರಿಗೆ ಪಾವತಿ ಮಾಡಿದ ಸಾಮಾಜಿಕ ಭದ್ರತಾ ಠೇವಣಿಗಳನ್ನು ಹಿಂಪಡೆಯಲು ಅನುಕೂಲವಾಗುವಂತಹ ಒಪ್ಪಂದ ರೂಪಿಸುವ ನಿಟ್ಟಿನಲ್ಲಿ ಇದು ಮೊದಲ ಮೊದಲ ಹೆಜ್ಜೆಯಾಗಿದೆ. ಅಮೆರಿಕದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಪಾವತಿ ಮಾಡುವ ಸಾಮಾಜಿಕ ಭದ್ರತಾ ಠೇವಣಿಗಳನ್ನು ಕೆಲಸದ ವೀಸಾ ಮುಗಿದ ಬಳಿಕ ಹಿಂಪಡೆಯಲು ಅವಕಾಶ ನೀಡುವ ನಿಟ್ಟಿನಲ್ಲಿ ಮಾತುಕತೆ ಅನುಕೂಲಕರವಾಗುವ ಸಾಧ್ಯತೆ ಇದೆ ಎಂದು ಮೂವರು ಅಧಿಕಾರಿಗಳು 2020 ಜುಲೈ 21ರ ಮಂಗಳವಾರ ತಿಳಿಸಿದರು. ಉದ್ಯಮ ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಅಂದಾಜು ಕೋಟಿ ಡಾಲರ್ ( ಬಿಲಿಯನ್ ಡಾಲರ್) ಸಾಮಾಜಿಕ ಭದ್ರತಾ ತೆರಿಗೆ ರೂಪದ ಹಣವನ್ನು ಪ್ರತಿವರ್ಷ ಅಮೆರಿಕ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಬಹುತೇಕ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಅಮರಿಕವು ಸಾಮಾಜಿಕ ಭದ್ರತಾ ತೆರಿಗೆಯು ದ್ವಿಪಕ್ಷೀಯ ವಿಷಯ ಎಂಬುದಾಗಿ ಗುರುತಿಸಿ, ಅದರ ಬಗ್ಗೆ ಮಾತುಕತೆಗೆ ಇತ್ತೀಚೆಗೆ ಒಪ್ಪಿಕೊಂಡಿತ್ತು. ಇದೊಂದು ಮಹತ್ವದ ಸಾಧನೆ ಎಂದು ಹೆಸರು ಹೇಳಲು ಇಚ್ಛಿಸದ ಮೂರು ವಿಭಿನ್ನ ಸಚಿವಾಲಯಗಳ ಅಧಿಕಾರಿಗಳು ಹೇಳಿದರು. ಕಳೆದ ವಾರ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸ್ಸ್ ಅವರು ಭಾರತದ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರ ಜೊತೆಗೆ ಸಾಮಾಜಿಕ ಭದ್ರತಾ ತೆರಿಗೆ ವಿಷಯದ ಬಗ್ಗೆ ಮಾತನಾಡಬಹುದು ಎಂದು ಹೇಳಿದ್ದರು. ಇದು ಭಾರತ ಮತ್ತು ಅಮೆರಿಕ ಬಾಂಧವ್ಯಗಳನ್ನು ಗಾಢಗೊಳಿಸುವ ನಿಟ್ಟಿನಲ್ಲಿ ಯತ್ನಿಸುತ್ತಿವೆ ಎಂಬುದನ್ನು ಸೂಚಿಸುತ್ತದೆ. ಹಲವಾರು ವರ್ಷಗಳಿಂದ ಯಶಸ್ಸು ಗಳಿಸಲು ಸಾಧ್ಯವಾಗದೇ ಇದ್ದ ವಿಚಾರವನ್ನು ಮಾತುಕತೆಯ ಮೇಜಿಗೆ ತರುವಲ್ಲಿ ಭಾರತ ಯಶಸ್ವಿಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ನುಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಶೇಕಡಾ .೪೩ಕ್ಕೆ ಇಳಿದಿದ್ದು, ಎರಡು ಲಸಿಕೆಗಳು ಒಂದು ಮತ್ತು ಎರಡನೇ ಹಂತದ ಪ್ರಯೋಗದಲ್ಲಿವೆ. ೧೧. ಲಕ್ಷಕ್ಕೂ ಹೆಚ್ಚು ಕೋವಿಡ್ -೧೯ ಪ್ರಕರಣಗಳು 2020 ಜುಲೈ 21ರ ಮಂಗಳವಾರ ವರದಿಯಾಗಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೩೭,೧೪೮ ಹೊಸ ಪ್ರಕರಣಗಳು ಮತ್ತು ೫೮೭ ಸಾವುಗಳು ದಾಖಲಾಗಿವೆ. ದೇಶದಲ್ಲಿ ಒಟ್ಟಾರೆಯಾಗಿ, . ಲಕ್ಷ ಮಂದಿ ಚೇತರಿಸಿಕೊಂಡಿದ್ದು, ಕೋವಿಡ್ -೧೯ ಗೆ ಪ್ರಸ್ತುತ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ. ಮಂಗಳವಾರ ಸತತ ಆರನೇ ದಿನ ೩೦,೦೦೦ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಜುಲೈ ೨೦ ರವರೆಗೆ ಒಟ್ಟು ,೪೩,೮೧,೩೦೩ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸೋಮವಾರ ,೩೩,೩೯೫ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಏತನ್ಮಧ್ಯೆ, ಭಾರತದಲ್ಲಿ ಶೇ ೭೦ ರಷ್ಟು ಸಾವುಗಳು ಸಹ-ಕಾಯಿಲೆಗಳಿಂದಾಗಿ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ದೃಢ ಪಡಿಸಿದೆ. ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಮಹಾರಾಷ್ಟ್ರ, ನವದೆಹಲಿ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿವೆ. ಏನಿದ್ದರೂ ಧನಾತ್ಮಕ ಸೋಂಕಿನ ಪ್ರಕರಣಗಳ ಪ್ರಮಾಣವನ್ನು ಶೇಕಡಾ ೫ಕ್ಕಿಂತ ಕಡಿಮೆ ಮಾಡುವುದು ಗುರಿ ಎಂದು ಆರೋಗ್ಯ ಸಚಿವಾಲಯ ಹೇಳಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ).

ಇಂದಿನ ಇತಿಹಾಸ  History Today ಜುಲೈ 21  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment