Friday, July 10, 2020

ಇಂದಿನ ಇತಿಹಾಸ History Today ಜುಲೈ 10

ಇಂದಿನ ಇತಿಹಾಸ  History Today ಜುಲೈ 10

2020: ನವದೆಹಲಿ: ಮಧ್ಯಪ್ರದೇಶದ ರೇವಾದಲ್ಲಿ ಸ್ಥಾಪಿಸಲಾಗಿರುವ ಏಷ್ಯಾದ ಅತಿದೊಡ್ಡ ರೇವಾ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆಯು ರಾಜ್ಯಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಸ್ವಚ್ಛ, ಖಂಡಿತ ಮತ್ತು ಶುದ್ಧ ಪರಿಸರಕ್ಕೆ ಸುರಕ್ಷಿತ ಅಡಿಪಾಯವಾಗಿ ಸಹಾಯ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಜುಲೈ 10ರ ಶುಕ್ರವಾರ ಹೇಳಿದರು. ೭೫೦ ಮೆಗಾವ್ಯಾಟ್ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಸ್ಥಾವರವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟಕ್ಕೆ ಸಮರ್ಪಿಸಿದ ಪ್ರಧಾನಿ, ಪ್ರತಿವರ್ಷ ಸುಮಾರು ೧೫ ಲಕ್ಷ ಟನ್ಗೆ ಸಮಾನವಾದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಇದು ನಿವಾರಿಸುತ್ತದೆ ಎಂದು ಹೇಳಿದರು. "ಸೌರ ಶಕ್ತಿಯು ಇಂದು ಮಾತ್ರವಲ್ಲದೆ ೨೧ ನೇ ಶತಮಾನದಲ್ಲಿ ಶಕ್ತಿಯ ಅಗತ್ಯಗಳ ಪ್ರಮುಖ ಮಾಧ್ಯಮವಾಗಲಿದೆ. ಏಕೆಂದರೆ ಸೌರಶಕ್ತಿ ಖಚಿತ, ಶುದ್ಧ ಮತ್ತು ಸುರಕ್ಷಿತವಾಗಿz ಎಂದು ಪ್ರಧಾನಿ ಹೇಳಿದರು. ಇಂದು, ರೇವಾ ನಿಜವಾಗಿಯೂ ಇತಿಹಾಸವನ್ನು ಸೃಷ್ಟಿ ಮಾಡಿದೆ. ರೇವಾವನ್ನು ತಾಯಿ ನರ್ಮದಾ ಮತ್ತು ಬಿಳಿ ಹುಲಿಯ ಹೆಸರಿನೊಂದಿಗೆ ಗುರುತಿಸಲಾಗಿದೆ. ಈಗ, ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಯೋಜನೆಯ ಹೆಸರು ಸಹಾ ಇದಕ್ಕೆ ಸೇರಿದೆ ಎಂದು ಅವರು ಹೇಳಿದರು. ನಾನು ರೇವಾ ಮತ್ತು ಮಧ್ಯಪ್ರದೇಶದ ಜನರನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಸೌರ ಸ್ಥಾವರವು ದಶಕದಲ್ಲಿ ಇಡೀ ಪ್ರದೇಶವನ್ನು ಶಕ್ತಿಯ ದೊಡ್ಡ ಕೇಂದ್ರವನ್ನಾಗಿ ಮಾಡಲು ರೇವಾ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಕಾನ್ಪುರ: ವಾರದ ಹಿಂದೆ ಎಂಟು ಮಂದಿ ಪೊಲೀಸರನ್ನು ಕೊಂದು ಇತರ ಹಲವರನ್ನು ಗಾಯಗೊಳಿಸಿ ಪರಾರಿಯಾಗಿದ್ದ ಕ್ರಿಮಿನಲ್ ಅಪರಾಧಿ ವಿಕಾಸ್ ದುಬೆ 2020 ಜುಲೈ 10ರ ಶುಕ್ರವಾರ ಬೆಳಗ್ಗೆ ಪೊಲೀಸರ ಜೊತೆಗಿನ ಎನ್ ಕೌಂಟರಿನಲ್ಲಿ ಹತನಾದ.  ಗುರುವಾರ ಬಂಧಿಸಲ್ಪಟ್ಟಿದ್ದ ವಿಕಾಸ್ ದುಬೆ, ಉಜ್ಜೈನಿಯಿಂದ ಕಾನ್ಪುರಕ್ಕೆ ತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರ ಜೊತೆ ಘರ್ಷಣೆ ಸಂಭವಿಸಿತು ಎಂದು ಪೊಲೀಸ್ ಮೂಲಗಳು ಹೇಳಿದವು. ಉಜ್ಜೈನಿಯಿಂದ ಕಾನ್ಪುರಕ್ಕೆ ದುಬೆಯನ್ನು ಕರೆತರುತ್ತಿದ್ದಾಗ ಭಾರೀ ಮಳೆಯ ಮಧ್ಯೆ ಭವುಟಿ ಎಂಬ ಪ್ರದೇಶದಲ್ಲಿ ಆತನಿದ್ದ ಕಾರು ಅಪಘಾತಕ್ಕೆ ಈಡಾಯಿತು. ಸಂದರ್ಭವನ್ನು ಬಳಸಿ ದುಬೆ ಪರಾರಿಯಾಗಲು ಯತ್ನಿಸಿದ ಎಂದು ಪೊಲೀಸರು ತಿಳಿಸಿದರು.  ಅಪಘಾತದಲ್ಲಿ ನವಾಬ್ಗಂಜ್ನಲ್ಲಿ ನಿಯೋಜಿತರಾಗಿದ್ದ ಒಬ್ಬ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಕಾನ್ಪುರ ವಲಯದ ಇನ್ಸ್ಪೆಕ್ಟರ್ ಜನರಲ್ ಮೋಹಿತ್ ಅಗರವಾಲ್ ಹೇಳಿದರು. ಬೆಳಗ್ಗೆ ಭಾರೀ ಮಳೆಯಿಂದಾಗಿ ಕಾನ್ಪುರದ ಸಮೀಪ ಪೊಲೀಸ್ ವಾಹನ ಪಲ್ಟಿ ಹೊಡೆದ್ದರಿಂದ ಅಪಘಾತ ಸಂಭವಿಸಿತು ಎಂದು ಹಿರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಕಾನ್ಪುರ) ದಿನೇಶ ಕುಮಾರ್ ಪಿ ಹೇಳಿದರು. ಅಪಘಾತದ ಸಂದರ್ಭವನ್ನು ಬಳಸಿಕೊಂಡು ಇನ್ಸ್ಪೆಕ್ಟರ್ ಅವರ ಪಿಸ್ತೂಲ್ ಕಿತ್ತುಕೊಂಡು ಪರಾರಿಯಾಗಲು ದುಬೆ ಯತ್ನಿಸಿದ. ಆದರೆ ಪೊಲೀಸ್ ತಂಡ ಆತನನ್ನು ಸುತ್ತುವರೆಯಿತು. ಗುಂಡಿನ ವಿನಿಮಯದಲ್ಲಿ ಆತ ಗಾಯಗೊಂಡ ಎಂದು ಅಗರವಾಲ್ ವಿವರಿಸಿದರು. ಗಾಯಗೊಂಡಿದ್ದ ದುಬೆಯನ್ನು ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಆತ ಮೃತನಾಗಿರುವುದಾಗಿ ಘೋಷಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೈಯಲ್ಲಿ ಹಿಡಿದ ಬಂದೂಕಿನಂತೆ ಸಾಮಾಜಿಕ ಮಾಧ್ಯಮವನ್ನು ಬಳಸುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ 2020 ಜುಲೈ 10ರ ಶುಕ್ರವಾರ ಹೇಳಿದ್ದು, ಕ್ರಿಮಿನಲ್ ಪ್ರಕರಣಗಳಲ್ಲಿ ವಿಶೇಷವಾಗಿ ಜಾಮೀನು ವಿಚಾರಗಳಲ್ಲಿ ಮಾಧ್ಯಮವನ್ನು ಬಳಸುವ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲು ತೀರ್ಮಾನಿಸಿತು. ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರಿಗೆ ಕನಿಷ್ಠ ೧೮ ತಿಂಗಳು ಸಾಮಾಜಿಕ ಮಾಧ್ಯಮದಿಂದ ದೂರವಿರುವಂತೆ ಆದೇಶ ನೀಡಿದ ಪೀಠ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿರು ಬಂದೂಕನ್ನು ಬಳಸುವಂತೆಯೇ ಸಾಮಾಜಿಕ ಮಾಧ್ಯಮವನ್ನು ಬಳಸಬಹುದು ಎಂದು ಹೇಳಿತು. ಕ್ರಿಮಿನಲ್ ಪ್ರಕರಣಗಳಲ್ಲಿ, ವಿಶೇಷವಾಗಿ ಜಾಮೀನು ವಿಷಯಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸುವ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲು ಉನ್ನತ ನ್ಯಾಯಾಲಯ ನಿರ್ಧರಿಸಿತು. "ಸಾಮಾಜಿಕ ಮಾಧ್ಯಮವನ್ನು (ಸೋಶಿಯಲ್ ಮೀಡಿಯಾ) ಬಳಸದಂತೆ ಸೂಚಿಸುವ ಆದೇಶದಲ್ಲಿ ಏನು ತಪ್ಪಾಗಿದೆ? ನ್ಯಾಯಾಲಯವು ಆರೋಪಿಯನ್ನು ಬಂದೂಕಿನಿಂದ ದೂರವಿರಲು ಆದೇಶಿಸಬಹುದಾದರೆ, ಅದೇ ರೀತಿ ನಿಮ್ಮನ್ನು ಸಾಮಾಜಿಕ ಮಾಧ್ಯಮದಿಂದ ದೂರವಿರಲು ಕೇಳಬಹುದು" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್..ಬಾಬ್ಡೆ ಹೇಳಿದರು. ಕೇಂದ್ರ ಮತ್ತು  ಉತ್ತರ ಪ್ರದೇಶ ಸರ್ಕಾರಗಳನ್ನು ಟೀಕಿಸಲು ದಿಗ್ಬಂಧನ (ಲಾಕ್ಡೌನ್) ನಿಯಮಗಳನ್ನು ಉಲ್ಲಂಘಿಸಿ ಪತ್ರಿಕಾಗೋಷ್ಠಿ ನಡೆಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ರಾಜಕಾರಣಿ ಸಚಿನ್ ಚೌಧರಿ ಅವರ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ತಪ್ಪಾಗಿ ನಿರ್ವಹಿಸಿದ ಆರೋವನ್ನು ಹೊರಿಸಿ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಲು ಅಮ್ರೋಹಾದ ರಾಜಕಾರಣಿ ಸಾಮಾಜಿಕ ಮಾಧ್ಯಮವನ್ನು ಬಳಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020:  ಲಕ್ನೋ: ಉತ್ತರ ಪ್ರದೇಶದ ಬಹ್ರೆಚ್ ಜಿಲ್ಲೆಯ ಅಹಿರನ್ಪೂರ್ವ ಗ್ರಾಮದಲ್ಲಿ ವಿಶೇಷ ಪೊಲೀಸ್ ಪಡೆ 2020 ಜುಲೈ 09ರ ಗುರುವಾರ ರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಕುಖ್ಯಾತ ರೌಡಿ ಪನ್ನಾ ಯಾದವ್ ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್ ಪುರ ನಿವಾಸಿ ಪನ್ನಾ ಯಾದವ್ ಕೊಲೆ, ದೊಂಬಿ ಮತ್ತು ಹಫ್ತಾ ವಸೂಲಿ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ ನಾಲ್ಕನೇ ಪೊಲೀಸ್ ಎನ್ಕೌಂಟರ್ ಇದಾಗಿದೆ. ಗ್ಯಾಂಗ್ಸ್ಟರ್ ವಿಕಾಸ್ ದುಬೆ ಉತ್ತರ ಪ್ರದೇಶ ಪೊಲೀಸರ ಗುಂಡಿಗೆ ಶುಕ್ರವಾರ ಬೆಳಿಗ್ಗೆ ಬಲಿಯಾಗಿದ್ದಾನೆ. ದುಬೆಯ ಇಬ್ಬರು ಸಹಚರರನ್ನು ಉತ್ತರ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಗುರುವಾರ ಹತ್ಯೆಯಾಗಿದ್ದರು. ಪನ್ನಾ ಯಾದವ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೋರಖ್ ಪುರ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ, ಗುರುವಾರ ರಾತ್ರಿ ಬಹ್ರೆಚ್ ಜಿಲ್ಲೆಯ ಅಹಿರನ್ಪೂರ್ವ ಗ್ರಾಮದಲ್ಲಿ ಕುಖ್ಯಾತ ರೌಡಿ ಪನ್ನಾ ಯಾದವ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದು, ಆತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪನ್ನಾ ಯಾದವ್ ಸಾವಿಗೀಡಾಗಿದ್ದಾನೆ ಎಂದು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರvದಲ್ಲಿ ಒಂದೇ ದಿನ ದಾಖಲೆ ೨೬,೫೦೬ ಕೋವಿಡ್-೧೯ ಪ್ರಕರಣಳು ದಾಖಲಾಗುವುದರೊಂದಿಗೆ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 2020 ಜುಲೈ 10ರ ಶುಕ್ರವಾರ ,೯೩,೮೦೨ ಕ್ಕೆ ತಲುಪಿತು. ಹೊಸದಾಗಿ ೪೭೫ ಮಂದಿ ಸಾವನ್ನಪ್ಪುವುದರೊಂದಿಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ೨೧,೬೦೪ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿತು.  ರೋಗದಿಂದ ಸಂಪೂರ್ಣ ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ,೯೫,೦೫೧ಕ್ಕೆ ಏರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ,೭೬,೬೮೫ ಎಂದು ಶುಕ್ರವಾರ ಬೆಳಗ್ಗೆ ನವೀಕರಿಸಿದ ಮಾಹಿತಿ ಹೇಳಿತು.  "ಹೀಗಾಗಿ, ಇದುವರೆಗೆ ಸುಮಾರು ೬೨.೪೨ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಶುಕ್ರವಾರ ವರದಿಯಾದ ೪೭೫ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೨೧೯, ತಮಿಳುನಾಡಿನಿಂದ ೬೫, ದೆಹಲಿಯಿಂದ ೪೫, ಪಶ್ಚಿಮ ಬಂಗಾಳದಿಂದ ೨೭, ಉತ್ತರಪ್ರದೇಶದಿಂದ ೧೭, ಕರ್ನಾಟಕದಿಂದ ೧೬, ಗುಜರಾತಿನಿಂದ ೧೫, ಆಂಧ್ರಪ್ರದೇಶದಿಂದ ೧೩, ರಾಜಸ್ಥಾನದಿಂದ , ಬಿಹಾರದಿಂದ , ತೆಲಂಗಾಣದಿಂದ , ಅಸ್ಸಾಮಿನಿಂದ , ಹರಿಯಾಣ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ನಿಂದ ತಲಾ , ಒಡಿಶಾದಿಂದ ಮತ್ತು ಛತ್ತೀಸ್ಗಢ, ಗೋವಾ, ಜಾರ್ಖಂಡ್ ಮತ್ತು ಮೇಘಾಲಯದಿಂದ ತಲಾ ಒಂದು ಪ್ರಕರಣ ವರದಿಯಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 10 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment