ನಾನು ಮೆಚ್ಚಿದ ವಾಟ್ಸಪ್

Wednesday, July 22, 2020

ಇಂದಿನ ಇತಿಹಾಸ History Today ಜುಲೈ 22

ಇಂದಿನ ಇತಿಹಾಸ  History Today ಜುಲೈ 22 

2020: ನವದೆಹಲಿ: ಬಂಡಾಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ೧೮ ಮಂದಿ ಭಿನ್ನಮತೀಯ ಕಾಂಗ್ರೆಸ್ ಶಾಸಕರಿಗೆ ವಿಧಾನಸಭಾಧ್ಯಕ್ಷ ಸಿ.ಪಿ. ಜೋಶಿ ಜಾರಿಗೊಳಿಸಿದ್ದ ಅನರ್ಹತೆ ನೋಟಿಸನ್ನು ಪ್ರಶ್ನಿಸಿದ ಪ್ರಕರಣದ ತೀರ್ಪು ರಾಜಸ್ಥಾನ ಹೈಕೋರ್ಟಿನಿಂದ ಬರುವ ಮುನ್ನವೇ  ಬಂಡಾಯ ಪ್ರಕರಣ2020 ಜುಲೈ 22ರ ಬುಧವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ವಿಧಾನಸಭಾಧ್ಯಕ್ಷ ಸಿ.ಪಿ. ಜೋಶಿ ಅವರು ಸುಪ್ರಿಂಕೋರ್ಟಿಗೆ ವಿಶೇಷ ಅರ್ಜಿಯನ್ನು (ಎಸ್‌ಎಲ್‌ಪಿ) ಸಲ್ಲಿಸಿದ್ದು, ಸಚಿನ್ ಪೈಲಟ್ ಅವರು ವಿಶೇಷ ಅರ್ಜಿಯ ಮೇಲೆ ಭಿನ್ನಮತೀಯ ಶಾಸಕರ ಬಣದ ಅಹವಾಲು ಆಲಿಸುವ ಮುನ್ನ ಆದೇಶ ನೀಡಬಾರದು ಎಂದು ಕೋರಿ ಕೇವಿಯಟ್ ಸಲ್ಲಿಸಿದರು. ಸಿಪಿ ಜೋಶಿ ಅವರ ಪರವಾಗಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ರಾಜಸ್ಥಾನದ ವಿಷಯವನ್ನು (ಸಿಪಿ ಜೋಶಿ ಅವರ ಅರ್ಜಿ) ತುರ್ತಾಗಿ ಆಲಿಸಲು ಏನಾದರೂ ಮಾರ್ಗವಿದೆಯೇ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ವಿಷಯ ಪ್ರಸ್ತಾಪಿಸುತ್ತಾ ವಿಚಾರಿಸಿದರು. ಸಿಜೆಐ ಅವರು ರಿಜಿಸ್ಟ್ರಾರ್ ಅವರ ಬಳಿಗೆ ಹೋಗಿ ಎಂದು ಸೂಚಿಸಿದರು. ರಾಜಸ್ಥಾನ ಹೈಕೋರ್ಟ್ ಇನ್ನೊಂದು ಸಾಂವಿಧಾನಿಕ ಪ್ರಾಧಿಕಾರಕ್ಕೆಆದೇಶ ನೀಡಲು ಸಾಧ್ಯವಿಲ್ಲ  ಎಂಬ ನೆಲೆಯಲ್ಲಿ ಸಿಪಿ ಜೋಶಿ ಅವರು ಸುಪ್ರೀಂಕೋರ್ಟಿಗೆ ವಿಶೇಷ ಅರ್ಜಿ ಸಲ್ಲಿಸಿದ್ದಾರೆ. ಮಧ್ಯೆ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ ವರದಿಯೊಂದರಲ್ಲಿ ರಾಜಸ್ಥಾನ ಸರ್ಕಾರವು ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಮಾಡಲು ಅನುಮತಿ ನೀಡಿದ್ದರಲ್ಲಿ ತಾನು ಯಾವುದೇ ಪಾತ್ರ ವಹಿಸಿರುವುದನ್ನು ನಿರಾಕರಿಸಿದೆ. ಇದಕ್ಕೆ ಮುನ್ನ ಉಪಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಸಚಿನ್ ಪೈಲಟ್ ಮತ್ತು ಬಂಡಾಯ ಶಾಸಕರ ವಿರುದ್ಧದ ಕ್ರಮವನ್ನು ಮುಂದೂಡುವಂತೆ ರಾಜಸ್ಥಾನ ಹೈಕೋರ್ಟ್ ಆಜ್ಞಾಪಿಸಿದ ಒಂದು ದಿನದ ಬಳಿಕ ಪತ್ರಕರ್ತರ ಜೊತೆಗೆ ಮಾತನಾಡಿದ್ದ ವಿಧಾನಸಭಾಧ್ಯಕ್ಷ ಜೋಶಿಯವರು ತಾವು ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಪ್ರಕಟಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಸಿಯೋಲ್: ಹೊರಗಿನ ಸಂಪರ್ಕಕ್ಕಿಂತಲೂ ಹೆಚ್ಚಾಗಿ ಮನೆ ಮಂದಿಯ ಜೊತೆಗಿನ ಸಂಪರ್ಕದಿಂದಲೇ ಹೊಸದಾಗಿ ಕೊರೋನಾವೈರಸ್ ಸೋಂಕು ತಗುಲುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ದಕ್ಷಿಣ ಕೊರಿಯಾದ ಸಾಂಕ್ರಾಮಿಕ ತಜ್ಞರು ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ. ಜುಲೈ ೧೬ ರಂದು ಅಮೆರಿಕದ ರೋಗ ನಿಯಂತ್ರಣ ಮತ್ತು ಮುಂಜಾಗ್ರತೆ ತಡೆ ಕೇಂದ್ರವು (ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್-ಸಿಡಿಸಿ) ಪ್ರಕಟಿಸಿರುವ ಅಧ್ಯಯನವು ಕೊರೋನವೈರಸ್ ಸೋಂಕಿದ  ,೭೦೬ಸೂಚ್ಯಂಕ ರೋಗಿಗಳು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದ ೫೯,೦೦೦ ಕ್ಕೂ ಹೆಚ್ಚು ಜನರನ್ನು ವಿವರವಾಗಿ ಪರಿಶೀಲಿಸಿ ನಿರ್ಣಯಕ್ಕೆ ಬಂದಿದೆ. ಸೋಂಕಿತ ೧೦೦ ಜನರಲ್ಲಿ ಕೇವಲ ಇಬ್ಬರು ಮನೆಯ ಹೊರತಾದ ಸಂಪರ್ಕಗಳಿಂದ ಸೋಂಕಿಗೆ ಒಳಗಾಗಿದ್ದಾರೆ. ಆದರೆ ೧೦ ಮಂದಿಯಲ್ಲಿ ಒಬ್ಬರು ತಮ್ಮ ಕುಟುಂಬಗಳಿಂದ ಸೋಂಕಿಗೆ ಒಳಗಾಗಿದ್ದಾರೆ. ವಯಸ್ಸಿನ ಪ್ರಕಾರ, ಮೊದಲ ಸೋಂಕಿತ ವ್ಯಕ್ತಿ ಹದಿಹರೆಯದವನಾಗಿದ್ದರೆ ಅಥವಾ ೬೦ರಿಂದ ೭೦ ವರ್ಷ ವಯಸ್ಸಿನವರಾಗಿದ್ದರೆ ಮನೆಯೊಳಗಿನ ಸೋಂಕಿನ ಪ್ರಮಾಣವು ಹೆಚ್ಚಾಗಿದ್ದುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. " ವಯೋಮಾನದವರು ಕುಟುಂಬ ಸದಸ್ಯರೊಂದಿಗೆ ಹೆಚ್ಚು ನಿಕಟ ಸಂಪರ್ಕದಲ್ಲಿರುವುದರಿಂದ ಮತ್ತು ಗುಂಪಿಗೆ ಮನೆಯ ಸದಸ್ಯರಿಂದ ಹೆಚ್ಚಿನ ರಕ್ಷಣೆ ಅಥವಾ ಬೆಂಬಲ ಬೇಕಾಗುವುದರಿಂದ ಇತರರ ಜೊತೆ ಅವರ ಸಾಮೀಪ್ಯ ಹೆಚ್ಚುವುದೇ ಸೋಂಕು ಹರಡಲು ಕಾರಣ ಎಂದು ಕೊರಿಯಾ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಕೆಸಿಡಿಸಿ) ನಿರ್ದೇಶಕ ಜಿಯಾಂಗ್ ಯುನ್-ಕಿಯೊಂಗ್ ಹೇಳಿದರು. ಕಿಯೊಂಗ್ ಅವರು ಅಧ್ಯಯನದ ಲೇಖಕರಲ್ಲಿ ಒಬ್ಬರಾಗಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ವಾಷಿಂಗ್ಟನ್: ಪಿಫ್ ಝರ್ ಮತ್ತು ಬಯೋ ಎನ್ ಟೆಕ್ ಸೆ ಹೆಸರಿನ ಜರ್ಮನಿಯ ಜೈವಿಕ ತಂತ್ರಜ್ಞಾನ ಸಂಸ್ಥೆಗಳಿಂದ ೧೯೫ ಕೋಟಿ ಡಾಲರ್ (.೯೫ ಬಿಲಿಯನ್ ಡಾಲರ್) ಮೊತ್ತಕ್ಕೆ ೧೦೦ ಮಿಲಿಯನ್ (೧೦೦೦ ಲಕ್ಷ) ಡೋಸ್‌ನಷ್ಟು ಕೋವಿಡ್ ೧೯ ಲಸಿಕೆಗಳನ್ನು ಪಡೆಯಲು ಅಮೆರಿಕ ಒಪ್ಪಂದ ಮಾಡಿಕೊಂಡಿರುವುದಾಗಿ ಉಭಯ ಕಂಪೆನಿಗಳು 2020 ಜುಲೈ 22ರ ಬುಧವಾರ ಪ್ರಕಟಿಸಿದವು. ಒಪ್ಪಂದವು ಅಮೆರಿಕಕ್ಕೆ ಹೆಚ್ಚುವರಿಯಾಗಿ ೫೦೦ ಮಿಲಿಯನ್ (೫೦೦೦ ಲಕ್ಷ) ಡೋಸ್ ಲಸಿಕೆ ಪಡೆಯಲೂ ಅವಕಾಶ ನೀಡಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಮತ್ತು ಆರೋಗ್ಯ ಮತ್ತು ಮಾನವ ಸೇವಾ ಇಲಾಖೆ ತಿಳಿಸಿವೆ. ಡೊನಾಲ್ಡ್ ಟ್ರಂಪ್ ಆಡಳಿತವು ಕೋಟ್ಯಂತರ ಡಾಲರ್ ಹಣವನ್ನು ಸಮರ್ಥ ಲಸಿಕೆ ಅಭಿವೃದ್ಧಿ ಮತ್ತು ದಾಸ್ತಾನು ಸಲುವಾಗಿ ವೆಚ್ಚ ಮಾಡಲು ಒಪ್ಪಿದೆ. ಕೊರೋನಾವೈರಸ್ ಲಸಿಕೆ, ಚಿಕಿತ್ಸೆ ಮತ್ತು ರೋಗನಿದಾನ ಕ್ರಮಗಳ ಆವಿಷ್ಕಾರವನ್ನು ತ್ವರಿತಗೊಳಿಸಲು ಟ್ರಂಪ್ ಆಡಳಿತವುಆಪರೇಷನ್ ವಾರ್ಪ್ ಸ್ಪೀಡ್ಹೆಸರಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ವಿಶ್ವಾದ್ಯಂತ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಸುಮಾರು ೧೫೦ಕ್ಕೂ ಹೆಚ್ಚು ಕೊರೋನಾವೈರಸ್ ಲಸಿಕೆ ತಯಾರಿಗಾಗಿ ಯತ್ನಗಳು ನಡೆಯುತ್ತಿವೆ. ಪೈಕಿ ಎರಡು ಡಜನ್ ಲಸಿಕೆಗಳು ಮಾನರ ಮೇಲಿನ ಪ್ರಯೋಗದ ಹಂತಕ್ಕೆ ಈಗಾಗಲೇ ಬಂದಿವೆ. ಸರ್ಕಾರಗಳು ಔಷಧ ತಯಾರಕರ ಜೊತೆಗೆ ವಿವಿಧ ಲಸಿಕೆಗಳ ಸರಬರಾಜು ಪಡೆಯುವ ಖಾತರಿಗಾಗಿ ವಹಿವಾಟು ಒಪ್ಪಂದಗಳಿಗೆ ಸಹಿ ಹಾಕಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಹೊಸ ೩೭,೭೨೪ ಕೊರೋನಾ ಸೋಂಕು ಪ್ರಕರಣಗಳೊಂದಿಗೆ ದೇಶದ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ 2020 ಜುಲೈ 22ರ ಬುಧವಾರ ೧೧,೯೨,೯೧೫ಕ್ಕೆ ಏರಿದೆ. ಇದೇ ವೇಳೆಗೆ ಒಂದೇ ದಿನದಲ್ಲಿ ೨೮,೪೭೨ ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ ,೫೩,೦೪೯ಕ್ಕೆ ಏರಿತು. ಕಳೆದ ೨೪ ಗಂಟೆಗಳಲ್ಲಿ ೬೪೮ ಜನರು ಸೋಂಕಿಗೆ ಬಲಿಯಾಗುವುದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ ೨೮,೭೩೨ ಕ್ಕೆ ಏರಿದೆ ಎಂದು ಬುಧವಾರ ಬೆಳಗ್ಗೆ ನವೀಕರಿಸಲಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಒಟ್ಟು ಸೋಂಕಿತರ ಪೈಕಿ ,೫೩,೦೪೯ ಜನರು ಇಲ್ಲಿಯವರೆಗೆ ಚೇತರಿಸಿಕೊಂಡ ಪರಿಣಾಮವಾಗಿ ಚೇತರಿಕೆಯ ಪ್ರಮಾಣ ಶೇಕಡಾ ೬೩.೧೩ಕ್ಕೆ ಏರಿದೆ. ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ ,೧೧,೧೩೩ ಎಂದು ಆರೋಗ್ಯ ಸಚಿವಾಲಯ ತಿಳಿಸಿತು. ಕೋವಿಡ್-೧೯ ಪ್ರಕರಣಗಳು ಸತತ ಏಳನೇ ದಿನ ೩೦,೦೦೦ ಕ್ಕಿಂತ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ರಾಜ್ಯದಲ್ಲಿ ತಮ್ಮ ಸರ್ಕಾರವನ್ನು ಉರುಳಿಸಲುತುಚ್ಛಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಪಾದಿಸಿ 2020 ಜುಲೈ 22ರ ಬುಧವಾರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಬಂಡಾಯ ನಾಯಕ ಸಚಿನ್ ಪೈಲಟ್ ಅವರು ತಮ್ಮ ವಿರುದ್ಧ ಆಪಾದನೆ ಮಾಡಿದ ಕಾಂಗ್ರೆಸ್ ಶಾಸಕ ಗಿರಿರಾಜ ಸಿಂಗ್‌ಗೆ ರೂಪಾಯಿ ಪರಿಹಾರ ಮತ್ತು ಕ್ಷಮೆ ಕೋರಿಕೆ ಆಗ್ರಹಿಸಿ ಲೀಗಲ್ ನೋಟಿಸ್ ನೀಡಿದ್ದಾರೆ. ಪ್ರಧಾನಿಗೆ ಬರೆದ ತಮ್ಮ ಪತ್ರದಲ್ಲಿ ಗೆಹ್ಲೋಟ್ ಅವರು ರಾಜ್ಯದಲ್ಲಿ ತಮ್ಮ ಸರ್ಕಾರವನ್ನು ಉರುಳಿಸಲು ತುಚ್ಛ ಪ್ರಯತ್ನಗಳು ನಡೆಯುತ್ತಿವೆ ಎಂದು ಆಪಾದಿಸಿದ್ದಾರೆ. ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಶಾಸಕರನ್ನು ಬೇಟೆಯಾಡಲು ಭಾರತೀಯ ಜನತಾ ಪಕ್ಷದಿಂದ ಯತ್ನಗಳು ನಡೆಯುತ್ತಿವೆ ಎಂದು ಆಪಾದಿಸಿದ ಗೆಹ್ಲೋಟ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಹೆಸರನ್ನು ಪ್ರಧಾನಿಗೆ ಬರೆದ ಪತ್ರದಲ್ಲಿ ನಮೂದಿಸಿದ್ದಾರೆ. ಭಾನುವಾರ ಪ್ರಧಾನಿಯವರಿಗೆ ಬರೆದಿದ್ದಾರೆ ಎನ್ನಲಾಗಿರುವ ಪತ್ರದಲ್ಲಿ ಗೆಹ್ಲೋಟ್ ಅವರುಕುದುರೆ ವ್ಯಾಪಾರದ ಮೂಲಕ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವ ತುಚ್ಛ ಪ್ರಯತ್ನಗಳು ನಡೆಯುತ್ತಿವೆ. ಇದರ ಬಗ್ಗೆ ನಿಮಗೆ ಎಷ್ಟು ಗೊತ್ತಿದೆಯೋ ಅಥವಾ ನಿಮ್ಮನ್ನು ದಾರಿ ತಪ್ಪಿಸಲಾಗಿದೆಯೋ ಎಂಬುದು ನನಗೆ ಗೊತ್ತಿಲ್ಲ ಎಂದು ಗೆಹ್ಲೋಟ್ ಬರೆದಿದ್ದಾರೆ. ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಸ್ಥಿರಗೊಳಿಸುವ ಯತ್ನಗಳು ಕೆಲ ಸಮಯದಿಂದ ನಡೆಯುತ್ತಿವೆ. ಇದು ಜನಾದೇಶಕ್ಕೆ ಅವಮಾನ ಮತ್ತು ಸಾಂವಿಧಾನಿಕ ಮೌಲ್ಯಗಳ ಬಹಿರಂಗ ಉಲ್ಲಂಘನೆ. ಕರ್ನಾಟಕ ಮತ್ತು ಮಧ್ಯಪ್ರದೇಶ ಇವುಗಳಿಗೆ ಉದಾಹರಣೆಗಳು ಎಂದು ಗೆಹ್ಲೋಟ್ ಪತ್ರದಲ್ಲಿ ವಿವರಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 22  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ


No comments:

Post a Comment