Friday, July 17, 2020

ಇಂದಿನ ಇತಿಹಾಸ History Today ಜುಲೈ 17

ಇಂದಿನ ಇತಿಹಾಸ  History Today ಜುಲೈ 17 

2020: ನವದೆಹಲಿ: ದಾಖಲೆ ಪ್ರಮಾಣದ ಒಂದೇ ದಿನದ ಏರಿಕೆಯಲ್ಲಿ ೩೪,೯೫೬ ಹೊಸ ಕೋವಿಡ್-೧೯ ಪ್ರಕರಣಗಳು ಪ್ರಕರಣಗಳು ದಾಖಲಾಗಿದ್ದು, ಭಾರತದ ಕೊರೋನಾ ಪ್ರಕರಣಗಳ ಸಂಖ್ಯೆ 2020 ಜುಲೈ 17ರ ಶುಕ್ರವಾರ ಹತ್ತು ಲಕ್ಷ ದಾಟಿತು. ಕೋವಿಡ್ ಪ್ರಕರಣಗಳ ಸಂಖ್ಯೆ ಲಕ್ಷ ದಾಟಿದ ಕೇವಲ ಮೂರು ದಿನಗಳ ಬಳಿಕ ಅದು ೧೦ ಲಕ್ಷವನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು ತಿಳಿಸಿದವು. ದೇಶದ ಒಟ್ಟು ಕೊರೋನವೈರಸ್ ಪ್ರಕರಣಗಳ ಸಂಖ್ಯೆ ೧೦,೦೩,೮೩೨ ಕ್ಕೆ ಏರಿದರೆ, ಸಾವಿನ ಸಂಖ್ಯೆ ೨೫,೬೦೨ ಕ್ಕೆ ಏರಿದೆ. ಒಂದು ದಿನದಲ್ಲಿ ಅತಿ ಹೆಚ್ಚು ಅಂದರೆ ೬೮೭ ಸಾವುಗಳು ದಾಖಲಾಗಿವೆ ಎಂದು ಶುಕ್ರವಾರ ಬೆಳಿಗ್ಗೆ ಗಂಟೆಗೆ ನವೀಕರಿಸಲಾದ ಮಾಹಿತಿ ಹೇಳಿತು. ಕಳೆದ ೨೪ ಗಂಟೆಗಳಲ್ಲಿ ಒಟ್ಟು ೨೨,೯೪೨ ಜನರು ಚೇತರಿಸಿಕೊಂಡಿದ್ದು, ಚೇತರಿಕೆ ಕೂಡಾ ಏಕದಿನದಲ್ಲಿ ಅತ್ಯಂತ ಹೆಚ್ಚು ಚೇತರಿಕೆಯ ದಾಖಲೆ ನಿರ್ಮಿಇಸಿದೆ. ಸಂಪೂರ್ಣ ಗುಣಮುಖರಾಗಿ ಚೇತರಿಸಿದವರ ಒಟ್ಟು ಪ್ರಕರಣಗಳ ಸಂಖ್ಯೆ ,೩೫,೭೫೬ಕ್ಕೆ ಏರಿದೆ. ಪ್ರಸ್ತುತ ,೪೨,೪೭೩ ಸಕ್ರಿಯ ಕೋವಿಡ್-೧೯ ಪ್ರಕರಣಗಳಿವೆ. "ಹೀಗಾಗಿ, ಇದುವರೆಗೆ ಸುಮಾರು ೬೩.೩೩ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸತತ ಆರನೇ ದಿನ ೨೮,೦೦೦ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಜೈಪುರ: ಸಚಿನ್ ಪೈಲಟ್ ಮತ್ತು ೧೮ ಮಂದಿ ಕಾಂಗ್ರೆಸ್ ಶಾಸಕರ ಅನರ್ಹತೆ ಕುರಿತು ಪ್ರಸ್ತುತ ವಾರದಲ್ಲಿ ನೀಡಲಾದ ನೋಟಿಸ್ ಸಂಬಂಧವಾಗಿ ಯಾವುದೇ ಕ್ರಮವನ್ನು ತಡೆ ಹಿಡಿಯುವಂತೆ 2020 ಜುಲೈ 17ರ ಶುಕ್ರವಾರ ರಾಜಸ್ಥಾನ ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರಿಗೆನಿರ್ದೇಶನ ನೀಡಿದ ರಾಜಸ್ಥಾನ ಹೈಕೋರ್ಟಿನ ದ್ವಿಸದಸ್ಯ ವಿಭಾಗೀಯ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ ೨೦ರ ಸೋಮವಾರಕ್ಕೆ ಮುಂದೂಡಿತು. ವಿಧಾನಸಭಾಧ್ಯಕ್ಷರು ನೀಡಿದ್ದ ನೋಟಿಸಿಗೆ ಉತ್ತರಿಸಲು ನೀಡಲಾಗಿದ್ದ ಗಡುವು ಮುಗಿಯುವುದಕ್ಕೆ ಕೆಲವೇ ನಿಮಿಷಗಳ ಮುನ್ನ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತು. ವಿಧಾನಸಭಾಧ್ಯಕ್ಷರು ತಮಗೆ ನೀಡಿದ್ದ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ, ಸಚಿನ್ ಪೈಲಟ್ ಮತ್ತು ೧೮ ಕಾಂಗ್ರೆಸ್ ಬಂಡಾಯ ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್ ದ್ವಿಸದಸ್ಯ ವಿಭಾಗೀಯ ಪೀಠವು , ಜುಲೈ ೨೧ರ ಸಂಜೆ .೩೦ರವರೆಗೆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ವಿಧಾನಸಭಾಧ್ಯಕ್ಷರಿಗೆ ನಿರ್ದೇಶಿಸಿತು. (ವಿವರಗಳಿಗೆ ಇಲ್ಲಿಕ್ಲಿಕ್  ಮಾಡಿರಿ)

2020: ಇಸ್ಲಾಮಾಬಾದ್: ಭಾರತೀಯ ಅಧಿಕಾರಿಗಳು ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಿದ ಒಂದು ದಿನದ ಬಳಿಕ, ಪಾಕಿಸ್ತಾನದಲ್ಲಿ ಗೂಢಚರ್ಯೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ನೌಕಾಪಡೆ ಅಧಿಕಾರಿಯನ್ನು ಭೇಟಿ ಮಾಡಲು ಇನ್ನೊಂದು ರಾಜತಾಂತ್ರಿಕ ಅವಕಾಶ ನೀಡಲು ತಾನು ನಿರ್ಧರಿಸಿರುವುದಾಗಿ ಪಾಕಿಸ್ತಾನ 2020 ಜುಲೈ 17ರ ಶುಕ್ರವಾರ ಹೇಳಿತು. ಜಾಧವ್ ಭೇಟಿಗೆ ಇದು ಮೂರನೇ ರಾಜತಾಂತ್ರಿಕ ಅವಕಾಶವಾಗಲಿದೆ. ಬೆಳವಣಿಗೆಯನ್ನು ದೃಢಪಡಿಸಿದ ಪಾಕಿಸ್ತಾನಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ಸಭೆಯ ವೇಳೆಯಲ್ಲಿ ಭದ್ರತಾ ಸಿಬ್ಬಂದಿ ಇರಬಾರದು ಎಂಬ ಭಾರತದ ಬೇಡಿಕೆಯನ್ನು ತಾವು ಒಪ್ಪಿರುವುದಾಗಿ ಹೇಳಿದರು. ಆದಾಗ್ಯೂ, ಗುರುವಾರ ಜಾಧವ್ ಅವರನ್ನು ಭೇಟಿ ಮಾಡಲು ಬಂದ ಭಾರತೀಯ ಅಧಿಕಾರಿಗಳು ಅವರನ್ನು ಆಲಿಸದೆಯೇ ವಾಪಸಾದರು ಎಂದು ಖುರೇಶಿ ನುಡಿದರು. ’ಜಾಧವ್ ತನ್ನ ಜೊತೆ ಮಾತನಾಡುವಂತೆ ಭಾರತೀಯ ರಾಜತಾಂತ್ರಿಕರನ್ನು ಕೇಳುತ್ತಿದ್ದರು ಮತ್ತು ಅವರು (ಅಧಿಕಾರಿಗಳು) ನೇರ ಹೊರಟು ಹೋದರು ಎಂದು ಖುರೇಶಿ ಪ್ರತಿಪಾದಿಸಿದರು. ಭಾರತೀಯ ಅಧಿಕಾರಿಗಳ ವರ್ತನೆಚಕಿತಗೊಳಿಸುವಂತಹುದು ಎಂದು ನುಡಿದ ಖುರೇಶಿ, ’ಭಾರತೀಯ ರಾಜತಾಂತ್ರಿಕರಿಗೆ ಜಾಧವ್ ಜೊತೆ ಮಾತನಾಡಲು ಇಷ್ಟವಿಲ್ಲವಾದರೆ, ಅವರು ರಾಜತಾಂತ್ರಿಕ ಭೇಟಿಗೆ ಕೋರುವುದು ಏಕೆ?’ ಎಂದು ಪ್ರಶ್ನಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಲುಕುಂಗ್ (ಲಡಾಕ್): ಚೀನಾದ ಜೊತೆಗೆ ಲಡಾಕ್ ಪ್ರದೇಶದಲ್ಲಿನ ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ, ಆದರೆ ಇದರ ಬಗ್ಗೆ ಏನನ್ನೂ ಖಚಿತವಾಗಿ ಹೇಳಲಾಗದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ 2020 ಜುಲೈ 17ರ ಶುಕ್ರವಾರ ಇಲ್ಲಿ ಹೇಳಿದರು. ಲಡಾಖ್ ಲುಕುಂಗ್ ಪ್ರದೇಶಕ್ಕೆ ಭೇಟಿ ನೀಡಿದ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆ ಮತ್ತು ಭಾರತ - ಟಿಬೆಟ್ ಗಡಿ ಪೊಲೀಸ್ ಪಡೆ (ಇಂಡೊ-ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್-ಐಟಿಬಿಪಿ) ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಯೋಧರೊಂದಿಗೆ ಚಹಾ ಕುಡಿಯುತ್ತಾ ಕೆಲವರಿಗೆ ಸಿಹಿ ತಿನ್ನಿಸಿ ಕುಶಲೋಪರಿ ವಿಚಾರಿಸಿದರು. ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರ ಜೊತೆಗಿದ್ದರು. ಜೂನ್ ೧೫ರಂದು ಪೂರ್ವ ಲಡಾಖ್ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಪಡೆಗಳ ನಡುವಣ ಸಂಘರ್ಷದ ಬಳಿಕವೂ ಉಭಯ ರಾಷ್ಟ್ರಗಳ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಗಡಿ ಸಮಸ್ಯೆ ಶಮನಗೊಳಿಸುವ ಸಲುವಾಗಿ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಗಡಿ ವಿವಾದ ಇತ್ಯರ್ಥಕ್ಕಾಗಿ ಪರಸ್ಪರ ಮಾತುಕತೆ ನಡೆಯುತ್ತಿದೆ. ಆದರೆ, ಎಷ್ಟರ ಮಟ್ಟಿಗೆ ಅದು ಫಲಪ್ರದವಾಗಲಿದೆ ಎಂಬುದನ್ನು ಖಚಿತಪಡಿಸಲಾರೆ. ಜಗತ್ತಿನ ಯಾವುದೇ ಶಕ್ತಿಯಿಂದ ನಮ್ಮ ನೆಲದ ಒಂದು ಅಂಗುಲ ಜಾಗವನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬುದರ ಬಗ್ಗೆ ನಾನು ಭರವಸೆ ನೀಡುತ್ತೇವೆ.’ ಎಂದು ರಾಜನಾಥ್ ಸಿಂಗ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ) 

ಇಂದಿನ ಇತಿಹಾಸ  History Today ಜುಲೈ 17  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment