2020: ಬೀಜಿಂಗ್: ಟ್ವಿಟ್ಟರ್ನಂತೆಯೇ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ವೀಬೋ ಖಾತೆಗೆ ಚೀನಾ ಕತ್ತರಿ ಹಾಕಿದೆ. ಖಾತೆಯಿಂದ ಅವರ ಪೋಸ್ಟ್ ಗಳು ಮತ್ತು ಫೊಟೋ ಕಿತ್ತು ಹಾಕಲಾಗಿದ್ದು, ಖಾತೆ ಖಾಲಿ ಖಾಲಿಖಾಲಿಯಾಗಿ ಕಾಣುತ್ತಿದೆ. ಚೀನಾದ ಈ ಕ್ರಮವನ್ನು ಪ್ರಧಾನಿ ಮೋದಿ 2020 ಜುಲೈ 01ರ ಬುಧವಾರ ಖಂಡಿಸಿದರು. ಪ್ರಧಾನಿಯವರ ಹೇಳಿಕೆ ಸೇರಿದಂತೆ ಭಾರತದ ಮೂರು ಅಧಿಕೃತ ಪ್ರಕಟಣೆಗಳನ್ನು ಕಿತ್ತು ಹಾಕಿದ ೧೦ ದಿನಗಳ ಬಳಿಕ ಈ ಬೆಳವಣಿಗೆ ಆಗಿದೆ. ಚೀನಾದ ಜನಪ್ರಿಯ ಸಾಮಾಜಿಕ ಮಾಧ್ಯಮ ವಿಚಾಟ್ನಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ಖಾತೆಯಿಂದ ಹತ್ತು ದಿನಗಳ ಹಿಂದೆ ಪ್ರಧಾನಿ ಹೇಳಿಕೆ ಸೇರಿ ಮೂರು ಅಧಿಕೃತ ಭಾರತೀಯ ಹೇಳಿಕೆಗಳನ್ನು ಅಳಿಸಿಹಾಕಲಾಗಿತ್ತು. ಪ್ರಧಾನಿ ಮೋದಿ ಅವರ ವೀಬೋ ವೈಬೊ ಹ್ಯಾಂಡಲ್ ಡೌನ್ ಲೋಡ್ ಮಾಡಿದಾಗ, ತತ್ ಕ್ಷಣವೇ ಅದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಖಾತೆಯ ಪುಟಗಳು ಖಾಲಿ ಖಾಲಿಯಾಗಿದ್ದವು. ಭದ್ರತೆ ಮತ್ತು ದತ್ತಾಂಶ ಉಲ್ಲಂಘನೆಯ ಕಾರಣಕ್ಕಾಗಿ ಭಾರತವು ಸೋಮವಾರ ೫೯ ಚೀನೀ ಆಪ್ಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಮೋದಿಯವರ ಖಾತೆಯಿಂದ - ಅವರ ಪ್ರೊಫೈಲ್ ಫೋಟೋ ಸೇರಿದಂತೆ ಎಲ್ಲಾ ಮಾಹಿತಿಯನ್ನು ಬುಧವಾರ ತೆಗೆದುಹಾಕಲಾಗಿದೆ. ಮೋದಿಯವರ ವೀಬೊ ಖಾತೆಯನ್ನು ಪ್ರಧಾನ ಮಂತ್ರಿಯಾಗಿ ಚೀನಾಕ್ಕೆ ಮೊದಲ ಬಾರಿಗೆ ಭೇಟಿ ನೀಡುವ ಮುನ್ನ ಹೆಚ್ಚಿನ ಅಭಿಮಾನಿಗಳನ್ನು ಸಂಪರ್ಕಿಸುವ ಸಲುವಾಗಿ ಮತ್ತು ಪ್ರಚಾರದ ಸಲುವಾಗಿ ೨೦೧೫ ರಲ್ಲಿ ಆರಂಭಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪಕ್ಷದ ಒಳಗೆ ತಮ್ಮ ವಿರುದ್ಧದ ಬಂಡಾಯಕ್ಕಾಗಿ ಭಾರತವನ್ನು ದೂಷಿಸಿದ ಬಳಿಕ ನೇಪಾಳೀ ಕಮ್ಯೂನಿಸ್ಟ್ ಪಕ್ಷದಲ್ಲಿ ಪ್ರತ್ಯೇಕಿತರಾಗುತ್ತಿರುವ ಪ್ರಧಾನಿ ಕೆಪಿ ಶರ್ಮ ಒಲಿ ಅವರಿಗೆ ತಮ್ಮ ಬೆಂಬಲವನ್ನು ನೀಡಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 2020 ಜುಲೈ 01ರ ಬುಧವಾರ ನಿರ್ಧರಿಸಿದರು. ಪಕ್ಷದೊಳಗಿನ ತಮ್ಮ ವಿರೋಧಿಗಳು ತಮ್ಮ ಪದಚ್ಯುತಿಗೆ ಯತ್ನಿಸುತ್ತಿದಾರೆ, ತಮ್ಮನ್ನು ಪದಚ್ಯುತಿಗೊಳಿಸುವ ಸಂಚಿನಲ್ಲಿ ಭಾರತ ಮತ್ತು ನೇಪಾಳದ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರ ಪ್ರದೇಶಗಳನ್ನು ನೇಪಾಳೀ ಭೂಭಾಗ ಎಂಬುದಾಗಿ ಬಿಂಬಿಸಿ ಪರಿಷ್ಕೃತ ನಕ್ಷೆ ಪ್ರಕಟಿಸಿದ್ದಕ್ಕಾಗಿ ಈ ಯತ್ನ ನಡೆಯುತ್ತಿದೆ ಎಂದು ಪ್ರಧಾನಿ ಒಲಿ ಅವರು ಭಾನುವಾರ ಆಪಾದಿಸಿದ್ದರು. ಏನಿದ್ದರೂ ಒಲಿ ಅವರಿಗೆ ಈ ಆಪಾದನೆ ತಿರುಗುಬಾಣವಾಗಿ ಪರಿಣಮಿಸಿತ್ತು. ಪ್ರತಿಸ್ಪರ್ಧಿ ನಾಯಕರಾದ ಪುಷ್ಪ ಕಮಲ್ ದಹಲ್ ’ಪ್ರಚಂಡ’ ಅವರಂತಹ ನಾಯಕರು ಪಕ್ಷ ಮತ್ತು ಸರ್ಕಾರದ ನಾಯಕತ್ವ ತ್ಯಜಿಸುವಂತೆ ಆಗ್ರಹಿಸಿದ್ದರು. ಈ ಹಿಂದೆ ಅವರು ಒಲಿ ಅವರಿಗೆ ಎರಡು ಹುದ್ದೆಗಳಲ್ಲಿ ಯಾವುದಾದರೂ ಒಂದನ್ನು ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಅಧಿಕಾರದಲ್ಲಿ ಉಳಿದುಕೊಳ್ಳಲು ತೀವ್ರ ಹೆಣಗಾಡುತ್ತಿರುವ ಹೊತ್ತಿನಲ್ಲಿ ಇಮ್ರಾನ್ ಖಾನ್ ಅವರ ಬೆಂಬಲ ಪ್ರಧಾನಿ ಒಲಿ ಅವರಿಗೆ ಲಭಿಸಿದೆ. ಪ್ರಧಾನಿ ಒಲಿ ಅವರ ಜೊತೆಗೆ ದೂರವಾಣಿ ಸಂಭಾಷಣೆಗೆ ಸಮಯ ನಿಗದಿಪಡಿಸುವಂತೆ ಪಾಕಿಸ್ತಾನವು ನೇಪಾಳೀ ವಿದೇಶಾಂಗ ಸಚಿವಾಲಯಕ್ಕೆ ಔಪಚಾರಿಕ ಸಂದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ವಿವಾದಾತ್ಮಕವಾದ ನೈಜ ನಿಯಂತ್ರಣ ರೇಖೆಯಲ್ಲಿ ತ್ವರಿತ ಹಾಗೂ ಹಂತ ಹಂತವಾಗಿ ಉದ್ವಿಗ್ನತೆ ಶಮನಕ್ಕೆ ಯತ್ನಗಳು ಮುಂದುವರೆಯಬೇಕು ಎಂದು ಲಡಾಖ್ನ ಚುಶುಲ್ನಲ್ಲಿ 2020 ಜೂನ್ 30ರ ಮಂಗಳವಾರ ನಡೆದ ಹಿರಿಯ ಸೇನಾ ಕಮಾಂಡರ್ಗಳ ೧೨ ಗಂಟೆಗಳ ಮಾತುಕತೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಗಡಿ ಉದ್ವಿಗ್ನತೆ ನಿವಾರಣೆಯ ಯತ್ನಗಳಲ್ಲಿ ನಿರಂತರವಾಗಿ ಪಾಲ್ಗೊಂಡಿರುವ, ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಬುಧವಾರ ಈ ವಿಚಾರವನ್ನು ತಿಳಿಸಿದ್ದಾರೆ. ವಿವಾದಿತ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಎರಡೂ ಕಡೆಯ ಬದ್ಧತೆಯನ್ನು ಚರ್ಚೆಗಳು ಪ್ರತಿಬಿಂಬಿಸಿವೆ. ಏನಿದ್ದರೂ ಸೇನೆ ವಾಪಸಾತಿ ಪ್ರಕ್ರಿಯೆಯು ಸಂಕೀರ್ಣವಾದುದಾಗಿದೆ ಎಂದು ಅಧಿಕಾರಿ ನುಡಿದರು. "ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಪರಸ್ಪರ ಸಮ್ಮತಿಸಬಹುದಾದ ಪರಿಹಾರವನ್ನು ತಲುಪಲು ಮತ್ತು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳ ಪ್ರಕಾರ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಭೆಗಳನ್ನು ನಿರೀಕ್ಷಿಸಲಾಗಿದೆ" ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದ ಮಾಜಿ ಅಟಾರ್ನಿ ಜನರಲ್ (ಎಜಿ) ಮುಕುಲ್ ರೋಹಟ್ಗಿ ಅವರು ಚೀನಾದ ವಿಡಿಯೋ ಹಂಚಿಕೆ ವೇದಿಕೆ ಟಿಕ್ ಟಾಕ್ ಪರವಾಗಿ ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಮತ್ತು ಪೂರ್ವ ಲಡಾಖ್ನ ಗಲ್ವಾನ್ ಕಣಿವೆ ಘರ್ಷಣೆಯ ಬಳಿಕ ಚೀನಾ ಸಂಪರ್ಕ ಹೊಂದಿದ ೫೯ ಮೊಬೈಲ್ ಅಪ್ಲಿಕೇಶನ್ಗಳ ಮೇಲೆ ಕೇಂದ್ರ ವಿಧಿಸಿರುವ ನಿಷೇಧವನ್ನು ಪ್ರಶ್ನಿಸಲು 2020 ಜುಲೈ 01ರ ಬುಧವಾರ ನಿರಾಕರಿಸಿದರು. ಹಾಲಿ ಪ್ರಕ್ಷುಬ್ಧ ಸಮಯದಲ್ಲಿ ಚೀನೀ ಸಂಪರ್ಕದ ಆಪ್ಗಳ ಮೇಲೆ ಭಾರತ ಸರ್ಕಾರವು ವಿಧಿಸಿರುವ ನಿಷೇಧವನ್ನು ತಾವು ಪ್ರಶ್ನಿಸುವುದಿಲ್ಲ ಮತ್ತು ಚೀನೀ ಕಂಪೆನಿಯನ್ನು ಪ್ರತಿನಿಧಿಸುವುದಿಲ್ಲ ಎಂಬುದಾಗಿ ರೋಟ್ಗಿ ಹೇಳಿರುವುದಾಗಿ ವರದಿಗಳು ಹೇಳಿದವು. ಸುಪ್ರೀಂ ಕೋರ್ಟಿನ ಮಾಜಿ ಹಿರಿಯ ವಕೀಲರು ನ್ಯಾಯಾಲಯದಲ್ಲಿ ಟಿಕ್ ಟಾಕ್ನ್ನು ಪ್ರತಿನಿಧಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ, ಏಕೆಂದರೆ ಅವರು ಇಂತಹ ಪ್ರಕ್ಷುಬ್ಧ ಸಮಯದಲ್ಲಿ ಚೀನಾ ಕಂಪೆನಿಯೊಂದರ ಪರ ಹಾಜರಾಗಲು ಮತ್ತು ಸರ್ಕಾರದ ವಿರುದ್ಧ ವಾದಿಸಲು ಸಿದ್ಧರಿಲ್ಲ ಎಂದು ರೋಹಟ್ಗಿ ಸಮೀಪವರ್ತಿಗಳೂ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment