Tuesday, July 28, 2020

ಇಂದಿನ ಇತಿಹಾಸ History Today ಜುಲೈ 28

ಇಂದಿನ ಇತಿಹಾಸ  History Today ಜುಲೈ 28

2020: ನವದೆಹಲಿ: ಫ್ರಾನ್ಸಿನಿಂದ ಭಾರತದತ್ತ ಹೊರಟಿರುವ ಮೊದಲ ಕಂತಿನ ಐದು ರಫೇಲ್ ಯುದ್ಧ ವಿಮಾನಗಳಿಗೆ ಫ್ರೆಂಚ್ ವಾಯುಪಡೆಯ ಟ್ಯಾಂಕರಿನಿಂದ ಆಗಸದಲ್ಲೇ ೩೦,೦೦೦ ಅಡಿಗಳ ಎತ್ತರದಲ್ಲಿ ಮರುಇಂಧನ ಭರ್ತಿ ಮಾಡಲಾಗಿದ್ದು, ಆಗಸದಲ್ಲೇ ಇಂಧನ ಭರ್ತಿಮಾಡುವ ಚಿತ್ರಗಳನ್ನು ಫ್ರಾನ್ಸಿನ ಭಾರತೀಯ ರಾಯಭಾರ ಕಚೇರಿ ಟ್ವೀಟ್  2020 ಜುಲೈ 28ರ ಮಂಗಳವಾರ ಮಾಡಿತು. ಭಾರತಕ್ಕೆ ಹೊರಟಿರುವ ನಮ್ಮ ಯುದ್ಧ ವಿಮಾನಗಳಿಗೆ ಫ್ರೆಂಚ್ ವಾಯುಪಡೆಯು ನೀಡಿರುವ ಬೆಂಬಲವನ್ನು ಭಾರತೀಯ ವಾಯುಪಡೆಯು ಶ್ಲಾಘಿಸುತ್ತದೆಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿತು. ಈ ಐದು ಯುದ್ಧ ವಿಮಾನಗಳಲ್ಲಿ ವಿಮಾನಗಳು ಏಕ ಆಸನ (ಸಿಂಗಲ್-ಸೀಟರ್) ವಿಮಾನವಾಗಿದ್ದರೆ, ಎರಡು  ಅವಳಿ ಆಸನಗಳ ವಿಮಾನಗಳಾಗಿವೆ. ರಫೇಲ್ ಯುದ್ಧ ವಿಮಾನಗಳು ಎರಡು ಹಂತಗಳ ಹಾರಾಟದಲ್ಲಿ ೭೦೦೦ ಕಿಮೀ ಕ್ರಮಿಸಲಿವೆ. ಸೋಮವಾರ ಸಂಜೆ ಫ್ರಾನ್ಸ್‌ನಿಂದ ಹೊರಟ ಐವರು ಯೋಧರು ಏಳು ಗಂಟೆಗಳ ಹಾರಾಟದ ನಂತರ ಸುರಕ್ಷಿತವಾಗಿ ಅಲ್ ಧಫ್ರಾಕ್ಕೆ ಆಗಮಿಸಿದರು. ಫ್ರೆಂಚ್ ವಾಯುಪಡೆಯು ತನ್ನ ಏರ್‌ಬಸ್ ೩೩೦ ಮಲ್ಟಿ-ರೋಲ್ ಟ್ಯಾಂಕರ್ ಟ್ರಾನ್ಸ್‌ಪೋರ್ಟ್ (ಎಂಆರ್‌ಟಿಟಿ) ಮೂಲಕ ಅಲ್ ದಫ್ರಾಕ್ಕೆ ಹೋಗುವ ಮಾರ್ಗದಲ್ಲಿ ಭಾರತೀಯ ಯೋಧರಿದ್ದ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಿತು. ಅಲ್ ಧಫ್ರಾದಿಂದ ಅಂಬಾಲಾವರೆಗಿನ ಪ್ರಯಾಣದ ಎರಡನೇ ಹಂತಕ್ಕೆ ಭಾರತೀಯ ವಾಯುಪಡೆಯ (ಐಎಎಫ್) ರಷ್ಯನ್ ಇಲ್ಯುಶಿನ್ -೭೮ ಇಂಧನ ತುಂಬು ಮೂಲಕ ಬೆಂಬಲವನ್ನು ಒದಗಿಸಲಿದೆ.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೋವಿಡ್-೧೯ ಸಾಂಕ್ರಾಮಿಕವು ಕ್ರಮೇಣ ಕುಸಿಯಲು ಆರಂಭಿಸಿದ್ದು, ಸಾವಿನ ಪ್ರಮಾಣ ( ಕೇಸ್ ಫೇಟಾಲಿಟಿ ರೇಟ್ -ಸಿಎಫ್‌ಆರ್) ಪ್ರಸುತ ಶೇಕಡಾ .೨೫ಕ್ಕೆ ಇಳಿದಿದೆ. ಇದು ವಿಶ್ವದ ಅತ್ಯಂತ ಕನಿಷ್ಠ ಮರಣ ಪ್ರಮಾಣವಾಗಿದೆ ಎಂದು ಕೇಂದ್ರ ಸರ್ಕಾರ  2020 ಜುಲೈ 28ರ ಮಂಗಳವಾರ ತಿಳಿಸಿದೆ. "ಭಾರತವು ವಿಶ್ವದ ಅತ್ಯಂತ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರುವ ದೇಶವಾಗಿ ತನ್ನ ಪಯಣವನ್ನು ಮುಂದುವರೆಸಿದೆ. ಸಾಧನೆಯು ಮನೆ-ಮನೆ ಸಮೀಕ್ಷೆ, ಆಕ್ರಮಣಕಾರಿ ಪರೀಕ್ಷೆ ಮತ್ತು ಸಮಗ್ರ ಕಾಳಜಿಯ ಮಾನದಂಡವನ್ನು ಆಧರಿಸಿದ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರಗಳ ಸಂಯೋಜನೆಯ ಪರಿಣಾಮವಾಗಿದೆ ಎಂದು ಸರ್ಕಾರ ಹೇಳಿದೆ. ‘ರೋಗಲಕ್ಷಣಗಳಿಲ್ಲದ ರೋಗಿಗಳಿಗೆ ಮೇಲ್ವಿಚಾರಣೆ ಆಧಾರಿತ ಮನೆ ಪ್ರತ್ಯೇಕತೆ (ಹೋಮ್ ಕ್ವಾರಂಟೈನ್) ವ್ಯವಸ್ಥೆಯು ಆಸ್ಪತ್ರೆಗಳ ಮೇಲಿನ ಹೊರೆಯನ್ನು ತಗ್ಗಿಸಿದೆಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೀವ್ರತರವಾದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಮತ್ತು ದೇಶಾದ್ಯಂತ ಸಾವಿನ ಪ್ರಮಾಣವನ್ನು (ಸಿಎಫ್‌ಆರ್) ಕಡಿಮೆಗೊಳಿಸಿವೆ. ಜೊತೆಗೆ  ಕ್ಷೇತ್ರ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಹೆಚ್ಚಿನ ಅಪಾಯಕ್ಕೆ ಒಳಗಾದವರ ಆರೈಕೆಗೆ ಆದ್ಯತೆ ನೀಡುವ ಮೂಲಕ ಸಾವುನೋವುಗಳನ್ನು ಕಡಿಮೆ ಮಾಡುವತ್ತ ಗಮನ ಹರಿಸಿದೆ ಎಂದು ಅದು ಹೇಳಿದೆ.  ಜೂನ್ ಮಧ್ಯಭಾಗದಲ್ಲಿ ಶೇಕಡಾ .೩೩ರಷ್ಟು ಇದ್ದ ಸಾವಿನ ಪ್ರಮಾಣ  ಇಂದು ಶೇಕಡಾ .೨೫ಕ್ಕೆ ಇಳಿದಿದೆ ಎಂದು ಹೇಳಿಕೆ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಜೈಪುರ: ರಾಜಕೀಯ ಮೇಲಾಟಗಳ ಮಧ್ಯೆರಾಜ್ಯಪಾಲರು ಕುಟುಂಬದ ಮುಖ್ಯಸ್ಥರಾಗಿದ್ದು, ತಾವು ಘರ್ಷಣೆ ಬಯಸುವುದಿಲ್ಲಎಂದು ರಾಜಸ್ಥಾನ ಸರ್ಕಾರ 2020 ಜುಲೈ 28ರ ಮಂಗಳವಾರ ತಿಳಿಸಿದ್ದು, ಜುಲೈ ೩೧ರಂದು ವಿಧಾನಸಭೆ ಅಧಿವೇಶನ ಕರೆಯುವಂತೆ ಕೋರಿ ಮತ್ತೆ ಪರಿಷ್ಕೃತ ಪ್ರಸ್ತಾಪವನ್ನು ಕಳಿಸಿದೆ. ರಾಜಸ್ಥಾನ ಸಚಿವ ಸಂಪುಟದ ಸಭೆಯ ಬಳಿಕ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಅವರು ವಿಷಯ ತಿಳಿಸಿದ್ದಾರೆ. ಸಚಿವ ಸಂಪುಟವು ರಾಜ್ಯಪಾಲ ಕಲರಾಜ್ ಮಿಶ್ರ ಅವರು ವಿಧಾನಸಭೆಯ ಅಧಿವೇಶನ ಕರೆಯಲು ಹಾಕಿದ ಮೂರು ಷರತ್ತುಗಳ ಬಗ್ಗೆ ಚರ್ಚಿಸಿತು. ನಾವ ರಾಜ್ಯಪಾಲರ ಜೊತೆ ಯಾವುದೇ ಷರ್ಷಣೆ ಬಯಸುವುದಿಲ್ಲ. ಅವರು ಕುಟುಂಬದ ಮುಖ್ಯಸ್ಥರು. ರಾಜ್ಯಪಾಲರು ಸಚಿವ ಸಂಪುಟದ ಪ್ರಸ್ತಾಪವನ್ನ ನಿರಾಕರಿಸುವಂತಿಲ್ಲ ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನವನ್ನು ಗೌರವಿಸಿ ರಾಜ್ಯಪಾಲರು ಜುಲೈ ೩೧ರಿಂದ ಅಧಿವೇಶನ ಆರಂಭಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡುತ್ತಾರೆ ಎಂದು ನಾವು ಹಾರೈಸಿದ್ದೇವೆ. ಅಧಿವೇಶನ ನಮ್ಮ ಹಕ್ಕುಎಂದು ಸಿಂಗ್ ಹೇಳಿದರು. ರಾಜ್ಯಪಾಲ ಕಲರಾಜ್ ಮಿಶ್ರ ಅವರು ಎತ್ತಿದ ಎಲ್ಲ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರ ನೀಡಿದೆ ಮತ್ತು ಪ್ರಸ್ತಾಪವನ್ನು ಪುನಃ ಅವರಿಗೆ ಕಳುಹಿಸಿದೆ ಎಂದೂ ಸಚಿವರು ನುಡಿದರು. ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ಜೈಪುರದಲ್ಲಿನ ನಿವಾಸದಲ್ಲಿ ಸಚಿವ ಸಂಪುಟದ ಸಭೆ ನಡೆಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಹಣಕಾಸು ಕ್ಷೇತ್ರದ ಭವಿಷ್ಯದ ದೃಷ್ಟಿ ಮತ್ತು ಮಾರ್ಗಸೂಚಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು 2020 ಜುಲೈ 28ರ ಬುಧವಾರ (ನಾಳೆ) ಸಂಜೆ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಜೊತೆ ಚರ್ಚಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಯವರ ಕಚೇರಿ 2020 ಜುಲೈ 28ರ ಮಂಗಳವಾರ ಟ್ವೀಟ್ ಮಾಡಿತು. "ಸಾಲ ಉತ್ಪನ್ನಗಳು ಮತ್ತು ವಿತರಣೆಗೆ ಸಮರ್ಥ ಮಾದರಿಗಳು, ತಂತ್ರಜ್ಞಾನದ ಮೂಲಕ ಆರ್ಥಿಕ ಸಬಲೀಕರಣ, ಹಣಕಾಸು ಕ್ಷೇತ್ರದ ಸ್ಥಿgತೆಗಾಗಿ ವಿವೇಕಯುತ ಅಭ್ಯಾಸಗಳು ಇವು ಚರ್ಚೆಯ ಕಾರ್ಯಸೂಚಿಯ ವಿಷಯಗಳು  ಎಂದು ಪ್ರಧಾನ ಮಂತ್ರಿ ಕಚೇರಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿತು. ಕೊರೋನವೈರಸ್-ಪ್ರೇರಿತ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಕುಸಿತದ ಮಧ್ಯೆ ಸಾಲದ ಬೆಳವಣಿಗೆಯು ಕುಸಿದಿರುವ ಹಿನ್ನೆಲೆಯಲ್ಲಿ ಸಭೆ ಮಹತ್ವವನ್ನು ಪಡೆದುಕೊಂಡಿದೆ. ವ್ಯವಹಾರಗಳು ಇಷ್ಟು ದಿನ ಸ್ಥಗಿತಗೊಂಡಿರುವುದರಿಂದ, ಕೆಟ್ಟ ಸಾಲಗಳು ರಾಶಿ ಬೀಳುವ ಸಂಭವ ಇದೆ. ಆರ್ಥಿಕತೆಯ ಒತ್ತಡಕ್ಕೆ ಅನುಗುಣವಾಗಿ ಒಟ್ಟು ನಿಷ್ಕ್ರಿಯ ಆಸ್ತಿಗಳು ಮಾರ್ಚ್ ೨೦೨೧ ವೇಳೆಗೆ ಶೇಕಡಾ .೫ರಿಂದ ಶೇಕಡಾ ೧೨.-೧೪. ಕ್ಕೆ ಏರಿಕೆಯಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಇತ್ತೀಚಿನ ಹಣಕಾಸು ಸ್ಥಿರತೆ ವರದಿಯಲ್ಲಿ ಅಂದಾಜಿಸಿದೆ. ದೇಶದ ಕೆಟ್ಟ ಸಾಲ ಅನುಪಾತವು ಈಗಾಗಲೇ ೨೦೨೦ ಮಾರ್ಚ್ ಅಂತ್ಯದ ವೇಳೆಗೆ ಪ್ರಮುಖ ಜಾಗತಿಕ ಆರ್ಥಿಕತೆಗಳಲ್ಲಿ ಶೇಕಡಾ .೫ರಷ್ಟಿದೆ. ಸ್ಥೂಲ-ಆರ್ಥಿಕ ವಾತಾವರಣವು ವರ್ಷದ ನಂತರ ವಿಷಮಿಸಿದರೆ, ಅನುಪಾತವು ಶೇಕಡಾ ೧೪.೭ಕ್ಕೆ ಏರಿಕೆಯಾಗಬಹುದು ಎಂದು ಆರ್‌ಬಿಐ ತನ್ನ ವರದಿಯಲ್ಲಿ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜುಲೈ ೨೯ರ ಬುಧವಾರ ಮಹತ್ವದ ಕೇಂದ್ರ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧದ (ಲಾಕ್ ಡೌನ್) ಮೂರನೇ ಹಂತದ ಬಗ್ಗೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಎರಡನೇ ಹಂತದ ದಿಗ್ಬಂಧನ ಜುಲೈ ೩೧ಕ್ಕೆ ಕೊನೆಯಾಗಲಿದೆ. ಹಿನ್ನೆಲೆಯಲ್ಲಿ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಮುಂದಿನ ದಿನಗಳಲ್ಲಿ ಸೋಂಕು ನಿಯಂತ್ರಣ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಬುಧವಾರ ಬೆಳಗ್ಗೆ ೧೦.೩೦ಕ್ಕೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಮೂರನೇ ಹಂತದ ದಿಗ್ಬಂಧನ ಬಗ್ಗೆ  ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಅಭಿಪ್ರಾಯ ಪಡೆದು ತೀರ್ಮಾನ ಮಾಡಲಾಗುವುದು ನಂಬಲರ್ಹ  ಮೂಲಗಳು 2020 ಜುಲೈ 28ರ ಮಂಗಳವಾರ ತಿಳಿಸಿದವು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಘೋಷಿಸಲಾದ ಕೇಂದ್ರದ ೨೦ ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಯೋಜನೆಯ ಪರಾಮರ್ಶೆ ನಡೆಯುವ ಸಾಧ್ಯತೆಗಳು ಇವೆ ಎಂದು ಸುದ್ದಿ ಮೂಲಗಳು ತಿಳಿಸಿದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 28 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment