ನಾನು ಮೆಚ್ಚಿದ ವಾಟ್ಸಪ್

Sunday, July 12, 2020

ಇಂದಿನ ಇತಿಹಾಸ History Today ಜುಲೈ 13

ಇಂದಿನ ಇತಿಹಾಸ  History Today ಜುಲೈ 13

2020: ನವದೆಹಲಿ: ಮುಂದಿನ ಐದರಿಂದ ಏಳು ವರ್ಷಗಳ ಅವಧಿಯಲ್ಲಿ ಭಾರತವನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವ ಸಲುವಾಗಿ ಮೂಲ ಸವಲತ್ತು ಅಭಿವೃದ್ಧಿಗೆ ಸುಮಾರು ೧೦ ಶತಕೋಟಿ (ಬಿಲಿಯನ್) ಡಾಲರ್ ಬಂಡವಾಳವನ್ನು ಕಂಪೆನಿಯು ಹೂಡಿಕೆ ಮಾಡಲಿದೆ ಎಂದು ಗೂಗಲ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಒ) ಸುಂದರ ಪಿಚೈ  2020 ಜುಲೈ 07ರ ಸೋಮವಾರ ಪ್ರಕಟಿಸಿದರು. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ ಗೂಗಲ್ ಫಾರ್ ಇಂಡಿಯಾದ ಆರನೇ ಸಮಾವೇಶದಲ್ಲಿ ಪಿಚೈ ಮಾತನಾಡುತ್ತಿದ್ದರು. ಗೂಗಲ್ ಪೇಯನ್ನು ಬಳಸಿಕೊಂಡು ಡಿಜಿಟಲ್ ಪಾವತಿಯ ಅವಕಾಶಗಳನ್ನು ವಿಸ್ತರಿಸುವ ಮತ್ತು ಕಡಿಮೆ ವೆಚ್ಚದ ಸ್ಮಾರ್ಟ್ ಫೋನುಗಳ ಅಭಿವೃದ್ಧಿಯಿಂದ ಹಿಡಿದು ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್ ಫೋನ್ ಬಳಕೆದಾರರಾಗಿ ಬದಲಾಯಿಸುವ ನಿಟ್ಟಿನಲ್ಲಿ ತಾನು ಕೈಗೊಳ್ಳಲಿರುವ ಕ್ರಮಗಳನ್ನು ಕೂಡಾ ತಂತ್ರಜ್ಞಾನದ ದೈತ್ಯ ಸಂಸ್ಥೆಯು ಸಮಾವೇಶದಲ್ಲಿ ಪ್ರಕಟಿಸಿತು ಬೆಳಗ್ಗೆ ನಾನು ಸುಂದರ ಪಿಚೈ ಅವರ ಜೊತೆಗೆ ಅತ್ಯಂತ ಫಲಪ್ರದ ಸಂವಹನ ನಡೆಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು. ವಿಸ್ತಾರವಾದ ವಿಷಯಗಳ ಬಗೆಗೆ, ನಿರ್ದಿಷ್ಟವಾಗಿ ತಂತ್ರಜ್ಞಾನದ ಶಕ್ತಿಯನ್ನು ಭಾರತದ ರೈತರು, ಯುವಕರು ಮತ್ತು ಉದ್ಯಮಿಗಳ ಬದುಕು ಬದಲಾವಣೆಗಾಗಿ ಬಳಸುವ ಬಗೆಗೆ ನಾವು ಮಾತನಾಡಿದೆವು ಎಂದು ಮೋದಿ ಬರೆದರು. ಕೋವಿಡ್-೧೯ರ ಕಾಲದಲ್ಲಿ ಉದಯಿಸುತ್ತಿರುವ ನೂತನ ಕೆಲಸದ ಸಂಸ್ಕೃತಿಯ ಬಗ್ಗೆ ಕೂಡಾ ಉಭಯರು ಮಾತನಾಡಿದುದಾಗಿಯೂ ಪ್ರಧಾನಿ ನುಡಿದರು. ಕ್ರೀಡೆಯಂತಹ ಕ್ಷೇತ್ರಗಳಿಗೆ ಜಾಗತಿಕ ಸಾಂಕ್ರಾಮಿಕವು ಎಸೆದಿರುವ ಸವಾಲುಗಳ ಬಗ್ಗೆ ನಾವು ಮಾತನಾಡಿದೆವು. ಡೇಟಾ ಭದ್ರತೆ ಮತ್ತು  ಸೈಬರ್ ಸುರಕ್ಷತೆಯ ಮಹತ್ವದ ಬಗೆಗೂ ನಾವು ಚರ್ಚಿಸಿದೆವು ಎಂದು ಪ್ರಧಾನಿ ಮೋದಿ ಟ್ವೀಟ್ ತಿಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ರಾಜಸ್ಥಾನದಲ್ಲಿ ದಿಢೀರನೆ ಭುಗಿಲೆದ್ದಿರುವ ರಾಜಕೀಯ ಬಿರುಗಾಳಿಗೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತತ್ತರಿಸಿದ್ದು, ಮುಖ್ಯಮಂತ್ರಿಯವರು ತಮ್ಮ ಬೆಂಬಲಿಗ ಶಾಸಕರೊಂದಿಗೆ 2020 ಜುಲೈ 07ರ ಸೋಮವಾರ ರೆಸಾರ್ಟ್ವಾಸಕ್ಕೆ ಶರಣಾದರು. ಉಪ ಮುಖ್ಯಮಂತ್ರಿ ಹಾಗೂ ಪಕ್ಷದ ಮುಖ್ಯಸ್ಥರಾಗಿರುವ ಸಚಿನ್ ಪೈಲಟ್ ಗುಂಪಿನ ಬಂಡಾಯದ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗ ಕಾಂಗ್ರೆಸ್ ಶಾಸಕರನ್ನು ಜೊತೆಯಾಗಿ ಹಿಡಿದಿಟ್ಟುಕೊಳ್ಳುವ ಸಲುವಾಗಿ ಗೆಹ್ಲೋಟ್ ಅವರು ಸೋಮವಾರ ಮಧ್ಯಾಹ್ನ ಪಕ್ಷದ ಶಾಸಕರ ಸಭೆ ಕರೆದಿದ್ದರು. ಸಭೆಯ ಬಳಿಕ ಗೆಹ್ಲೋಟ್ ಅವರು ಬೆಂಬಲಿಗ ಶಾಸಕರೊಂದಿಗೆ ತಾವೂ ರೆಸಾರ್ಟ್ ಕಡೆಗೆ ಹೊರಟ ಬಸ್ಸನ್ನೇರಿದರು ಎಂದು ವರದಿಗಳು ಹೇಳಿವೆ. ಸಭೆಯ ಬಳಿಕ ಬೆಂಬಲಿಗರೊಂದಿಗೆ ಕ್ಯಾಮರಾಗಳನ್ನು ಎದುರಿಸಿದ ಗೆಹ್ಲೋಟ್ ವಿ ಸಂಕೇತವನ್ನು ತೋರಿಸಿದರು. ಗೆಹ್ಲೋಟ್ ಸರ್ಕಾರ ಅಲ್ಪಮತಕ್ಕೆ ಇಳಿದಿದೆ ಎಂದು ಸಚಿನ್ ಪೈಲಟ್ ಅವರು ಭಾನುವಾರ ಸಂಜೆ ಪ್ರತಿಪಾದಿಸಿದ್ದರು. ಪೈಲಟ್ ಅವರ ಗುಂಪು ಭಾನುವಾರ ರಾತ್ರಿ ತಮಗೆ ೩೦ ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸಿತ್ತು. ಪೈಲಟ್ ಹೇಳಿಕೆಯ ಪರಿಣಾಮವಾಗಿ ಕಾಂಗ್ರೆಸ್ ಪಕ್ಷವು ನಡುರಾತ್ರಿ/ ನಸುಕಿನ .೩೦ ಗಂಟೆಗೆ ಪತ್ರಿಕಾಗೋಷ್ಠಿ ಕರೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಸರ್ಕಾರಕ್ಕೆ ೧೦೯ ಶಾಸಕರ ಬೆಂಬಲ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗೆಹ್ಲೋಟ್ ಹೇಳಿದ್ದರು. ೨೦೦ ಸದಸ್ಯಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ ೧೦೧ ಸದಸ್ಯರ ಬೆಂಬಲ ಬೇಕು. ಪೈಲಟ್ ಬಂಡಾಯಕ್ಕಿಂತ ಮುನ್ನ ಸರ್ಕಾರವು ಕಾಂಗ್ರೆಸ್ಸಿನ ೧೦೭ ಸದಸ್ಯರ ಜೊತೆಗೆ ಇತರ ಪಕ್ಷೇತರರ ಬೆಂಬಲವನ್ನೂ ಹೊಂದಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಮತ್ತು ಗಡಿಯಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳ ವಿರುದ್ಧ ಭಾರತದ "ಶೂನ್ಯ ಸಹನೆ" ನೀತಿಯನ್ನು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆ 2020 ಜುಲೈ 07ರ ಸೋಮವಾರ ಪುನರುಚ್ಚರಿಸಿದರು.ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆಯನ್ನು ತೀವ್ರಗೊಳಿಸಿದೆ ಮತ್ತು ಜೂನ್ ೩೦ ರವರೆಗೆ ,೫೪೨ ಉಲ್ಲಂಘನೆಗಳನ್ನು ದಾಖಲಿಸಿದೆ ಎಂದು ಭಾರತೀಯ ಸೇನೆ ತಿಳಿಸಿತು. ೨೦೦೩ರ ನವೆಂಬರಿನಲ್ಲಿ ಸಹಿಹಾಕಲಾ ಪರಸ್ಪರ ಶಾಂತಿ ಒಪ್ಪಂದಕ್ಕೆ ವಿರುದ್ಧವಾಗಿ ,೨೮೯ ಉಲ್ಲಂಘನೆಗಳು ಕಳೆದ ವರ್ಷ ದಾಖಲಾಗಿದ್ದವು. ಇದು ಕಳೆದ ೧೬ ವರ್ಷಗಳಲ್ಲಿ ಅತಿ ಹೆಚ್ಚು. "ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳ ವಿರುದ್ಧ" ಶೂನ್ಯ ಸಹನೆ ನೀತಿಯನ್ನು ಸಿಡಿಎಸ್ (ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು) ಪುನರುಚ್ಚರಿಸಿದ್ದಾರೆ ಎಂದು ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿಕೆಯಲ್ಲಿ ತಿಳಿಸಿದರು. "ಸೇವೆಗಳ ಎಲ್ಲಾ ಏಜೆನ್ಸಿಗಳು ಮತ್ತು ಸರ್ಕಾರವು ಪಟ್ಟುಬಿಡದೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನಮ್ಮ ವಿರೋಧಿಗಳಿಂದ ಉತ್ತೇಜಿಸಲ್ಪಟ್ಟ ಪರೋಕ್ಷ ಯುದ್ಧ ದುಷ್ಕೃತ್ಯದ ಸಂಚನ್ನು ಸೋಲಿಸಲು ಅದೇ ರೀತಿಯ  ನೀತಿ ಮುಂದುವರೆಯುತ್ತದೆ" ಎಂದು ಅವರು ಹೇಳಿದರು. ಜಮ್ಮು-ಪಠಾಣ್ಕೋಟ್ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಸೇನೆಯ ಭದ್ರತಾ ಸನ್ನಿವೇಶ ಮತ್ತು ಸನ್ನದ್ಧತೆಯನ್ನು ಪರಿಶೀಲಿಸಲು ಜನರಲ್ ನರವಾಣೆ ಅವರು ಪಾಕಿಸ್ತಾನ-ಭಾರತ ನಡುವಣ ೧೯೮ ಕಿಲೋಮೀಟರ್ ಉದ್ದದ ಅಂತಾರಾಷ್ಟ್ರೀಯ ಗಡಿಯ ಮುಂಚೂಣಿ ಪ್ರದೇಶಗಳಿಗೆ ಭೇಟಿ ನೀಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಬಯೊಕಾನ್ ಕೋವಿಡ್-೧೯ ರೋಗಿಗಳ ಚಿಕಿತ್ಸೆಗಾಗಿ ವಿಶ್ವದ ಮೊದಲ ಜೈವಿಕ ಮೂಲದ ಔಷಧ’ ಬಿಡುಗಡೆ ಮಾಡುವುದಾಗಿ ಸೋಮವಾರ ಹೇಳಿತು. ಇಟೊಲೈಜುಮ್ಯಾಬ್ (Itolizumab) ಹೆಸರಿನ ಔಷಧ ಪ್ರತಿ ಸೀಸೆಗೆ (vial) ಸುಮಾರು ,೦೦೦ ರೂಪಾಯಿ ಇರಲಿದ್ದು, ೨೫ಎಂಜಿ/ ೫ಎಂಎಲ್ ಇಟೊಲೈಜುಮ್ಯಾಬ್ ಚುಚ್ಚುಮದ್ದು ಮಾರಾಟ ಮಾಡಲು ಭಾರತದ ಪ್ರಧಾನ ಔಷಧಿ ನಿಯಂತ್ರಕದ (ಡಿಸಿಜಿಐ) ಅನುಮತಿಯನ್ನು ಬಯೊಕಾನ್ ಅನುಮತಿ ಪಡೆದುಕೊಂಡಿದೆ. ಕೋವಿಡ್-೧೯ನಿಂದ ಉಂಟಾಗುವ ಉಸಿರಾಟ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಔಷಧ ಸಹಕಾರಿಯಾಗಲಿದೆ. ಸಾಧಾರಣ ಸ್ಥಿತಿಯಿಂದ ಗಂಭೀರ ಪ್ರಕರಣಗಳವರೆಗೂ ಇದನ್ನು ಬಳಸಬಹುದು. ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಮಗೆ ಲಸಿಕೆ ಲಭ್ಯವಾದರೂ, ಮತ್ತೆ ಸೋಂಕು ಹರಡದಿರುವ ಕುರಿತು ಯಾವುದೇ ಖಾತರಿ ಇಲ್ಲ. ಹೀಗಾಗಿ ನಮ್ಮ ನಿರೀಕ್ಷೆಗೆ ತಕ್ಕಂತೆ ಅದು ಉಪಯುಕ್ತವಾಗುವ ಖಾತರಿಯೂ ಇಲ್ಲ, ಆದ್ದರಿಂದ ನಾವು ಎಲ್ಲದಕ್ಕೂ ಸಿದ್ಧ ಸ್ಥಿತಿಯಲ್ಲಿ ಇರಬೇಕು ಎಂದು ತಜ್ಞರು ಹೇಳಿದ್ದಾರೆ. ಸೋಂಕಿನಿಂದ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟಾಗುವ ರೋಗಿಗಳಿಗೆ ಚಿಕಿತ್ಸೆ ನೀಡಲು ಇಟೊಲೈಜುಮ್ಯಾಬ್ ಉಪಯುಕ್ತವಾಗಲಿದೆ. ಔಷಧಿಯ ಬೆಲೆ ಒಂದು ಸೀಸೆಗೆ ,೯೫೦ ರೂಪಾಯಿ ಎಂಬುದಾಗಿ ನಿಗದಿಯಾಗಿದ್ದು, ಒಬ್ಬ ರೋಗಿಗೆ ಗರಿಷ್ಠ ಸೀಸೆಗಳ ಚುಚ್ಚುಮದ್ದು ಬಳಕೆಯಾಗಬಹುದಾಗಿದ್ದು, ಒಟ್ಟು ೩೨,೦೦೦ ರೂಪಾಯಿ ವೆಚ್ಚವಾಗಲಿದೆ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಪ್ರತಿದಿನ ದಾಖಲಾಗುವ ಕೊರೋನವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, 2020 ಜುಲೈ 13ರ ಸೋಮವಾರ ಒಂದೇ ದಿನ ೨೮,೭೦೧ ಹೊಸ ಪ್ರಕರಣಗಳು ಮತ್ತು ೫೦೦ ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಇದೇ ವೇಳೆಗೆ ಚೇತರಿಕೆಯ ಸಂಖ್ಯೆ ಕೂಡಾ ಗಣನೀಯವಾಗಿ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಹಿಂದಕ್ಕೆ ತಳ್ಳಿದೆ. ಭಾರತದಲ್ಲಿ ಕೊರೋನಾವೈರಸ್ ಒಟ್ಟು ಪ್ರಕರಣಗಳ ಸಂಖ್ಯೆ ,೮೯,೩೯೭ಕ್ಕೆ ಏರಿದ್ದರೆ, ಒಟ್ಟು ಸಾವಿನ ಸಂಖ್ಯೆ ೨೩,೩೩೫ಕ್ಕೆ ಏರಿದೆ. ಒಟ್ಟು ಪ್ರಕರಣಗಳ ಪೈಕಿ ಚೇತರಿಸಿ ಗುಣಮುಖರಾದವರ ಸಂಖ್ಯೆ ,೬೦,೪೭೨ಕ್ಕೆ ಏರಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ರಾಜಸ್ಥಾನದಲ್ಲಿ ಬಂಡಾಯ ಎದ್ದಿರುವ ಕಾಂಗ್ರೆಸ್ ರಾಜ್ಯ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ತಮಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಯೋಜನೆಗಳಿಲ್ಲ ಎಂದು 2020 ಜುಲೈ 13ರ ಸೋಮವಾರ ಸಂಜೆ ಸ್ಪಷ್ಟ ಪಡಿಸಿದರು. ಇದರೊಂದಿಗೆ ರಾಜಿಗಾಗಿ ಪಕ್ಷ ನಡೆಸುತ್ತಿರುವ ಯತ್ನಗಳಿಗೆ ತಾವು ಸ್ಪಂದಿಸುವುದಿಲ್ಲ ಎಂಬ ಸುಳಿವನ್ನು ಪೈಲಟ್ ನೀಡಿದರು. ಇದಕ್ಕೆ ಮುನ್ನ ರಾಹುಲ್ ಗಾಂಧಿಯವರ ನಿಕಟವರ್ತಿಗಳು ಸಚಿನ್ ಪೈಲಟ್ ಅವರು ರಾಹುಲ್ ಗಾಂಧಿಯವರ ಹೃದಯದಲ್ಲಿದ್ದಾರೆ. ಅವರು ಮುಕ್ತವಾಗಿ ಮಾತನಾಡುತ್ತಾರೆ ಮತ್ತು ಪರಸ್ಪರ ಗೌರವ ಹಾಗೂ ಒಲವು ಹೊಂದಿದ್ದಾರೆ ಎಂದು ಹೇಳಿದ್ದರು. ಗಾಂಧಿ ಕುಟುಂಬದ ಯಾರ ಜೊತೆಗೂ ಪೈಲಟ್ ನೇರ ಸಂಪರ್ಕದಲ್ಲಿ ಇಲ್ಲ ಎಂದು ಪಕ್ಷದಲ್ಲಿನ ನಾಯಕರೊಬ್ಬರು ಕೂಡಾ ಸ್ಪಷ್ಟ ಪಡಿಸಿದರು. ಈ ಮಧ್ಯೆ ಪೈಲಟ್ ಅವರ ಬಿಜೆಪಿ ಜೊತೆಗಿನ ಮಾತುಕತೆಗಳು ಮುಂದುವರೆದಿವೆ ಎಂದು ಕಾಂಗ್ರಸ್ ಮೂಲಗಳು ಪ್ರತಿಪಾದಿಸಿದವು. ಮಧ್ಯವರ್ತಿಗಳ ಮೂಲಕ ಮಾತುಕತೆಗಳು ನಡೆಯುತ್ತಿವೆ ಎಂದು ನಾಯಕರೊಬ್ಬರು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೇರಳದ ತಿರುವನಂತಪುರದಲ್ಲಿರುವ ಪ್ರಖ್ಯಾತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತದ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂಕೋರ್ಟ್ 2020 ಜುಲೈ 13ರ ಸೋಮವಾರ ಮಹತ್ವದ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಮಲ್ಹೋತ್ರಾ ಮತ್ತು ಯುಯು ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಪ್ರಕಟಿಸಿದ್ದು ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಆಡಳಿತಾತ್ಮಕ ಸಮಿತಿ ದೇವಸ್ಥಾನದ ಆಡಳಿತ ನಿರ್ವಹಣೆ ನೋಡಿಕೊಳ್ಳಲಿದೆ. ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಹೊಸ ಆಡಳಿತಾತ್ಮಕ ಸಮಿತಿ ರಚಿಸಲಾಗುವುದು, ಅಲ್ಲಿಯವರೆಗೆ ಈಗಿರುವ ಆಡಳಿತ ಸಮಿತಿ ಮುಂದುವರಿಯಲಿದೆ ಎಂದು ಹೇಳಿತು. ಕೇರಳ ಹೈಕೋರ್ಟ್ ೨೦೧೧ರ ಜನವರಿ ೩೧ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಿರುವಾಂಕೂರು ರಾಜ ಮನೆತನದ ಕಾನೂನು ಪ್ರತಿನಿಧಿಗಳು ಸೇರಿದಂತೆ ಹಲವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವರ್ಷಗಳ ನಂತರ ತೀರ್ಪು ನೀಡಿತು. ೩೦೦ ಪುಟಗಳ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಇಷ್ಟು ದಿನ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದ ತಿರುವಾಂಕೂರು ರಾಜಮನೆತನದ ಹಕ್ಕನ್ನು ಎತ್ತಿಹಿಡಿಯಿತು. ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ ೧೯೯೧ರಲ್ಲಿ ತೀರಿಕೊಂಡ ನಂತರ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ರಾಜಮನೆತನದ ಸುಪರ್ದಿಗೆ ಕೊನೆಯಾಗುತ್ತದೆ ಎಂದು ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ಇದೀಗ ಸುಪ್ರೀಂ ಕೇರಳ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 13 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


-ಸಂಗ್ರಹ: ನೆತ್ರಕೆರೆ ಉದಯಶಂಕರ


No comments:

Post a Comment