ನಾನು ಮೆಚ್ಚಿದ ವಾಟ್ಸಪ್

Sunday, February 23, 2020

ಇಂದಿನ ಇತಿಹಾಸ History Today ಫೆಬ್ರುವರಿ 23

2020: ಅಲಿಘಡ: (ಉತ್ತರಪ್ರದೇಶ): ಅಲಿಘಡದ ಹಳೆ ನಗರ ಪ್ರದೇಶದಲ್ಲಿ ಮಧ್ಯಾಹ್ನ ಕಲ್ಲೆಸೆತ ಮತ್ತು ಅಗ್ನಿಸ್ಪರ್ಶದ ಘಟನೆಗಳ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಸಂಭವಿಸಿದ ವರದಿ 2020 ಫೆಬ್ರುವರಿ 23ರ ಭಾನುವಾರ ತಡವಾಗಿ ಬಂದಿತುಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟ್ ಮೇಲ್ಭಾಗ ಪ್ರದೇಶದಲ್ಲಿ ಕಲ್ಲೆಸೆತ, ಅಗ್ನಿಸ್ಪರ್ಶದ ಮೂಲಕ ಆಸ್ತಿನಾಶದಲ್ಲಿ ತೊಡಗಿ ಹಿಂಸಾಚಾರಕ್ಕೆ ಇಳಿದ ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಆಶ್ರುವಾಯು ಪ್ರಯೋಗಿಸಿದರು ಎಂದು ಪೊಲೀಸ್ ಮೂಲಗಳು ಹೇಳಿದವು. ಹಿಂಸಾಚಾರದ ಘಟನೆಗಳಲ್ಲಿ ಕೆಲವರು ಗಾಯಗೊಂಡಿರುವ ವರದಿಗಳಿವೆ. ಆದರೆ ಘರ್ಷಣೆಗಳಲ್ಲಿ ಗಾಯಗೊಂಡವರ ನಿಖರ ಅಂಕಿಸಂಖ್ಯೆ ಲಭ್ಯವಾಗಿಲ್ಲ ಎಂದು ಮೂಲಗಳು ಹೇಳಿದವು. ಹಿಂಸಾತ್ಮಕ ಪ್ರತಿಭಟನೆಗಳನ್ನು ಅನುಸರಿಸಿ ನಗರದಲ್ಲಿ ಭಾನುವಾರ ಮಧ್ಯರಾತ್ರಿಯವರೆಗೆ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಲಿಘಡ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದರು. ಕೊತ್ವಾಲಿಯನ್ನು ಸಂಪರ್ಕಿಸುವ ಮೊಹಮ್ಮದ್ ಅಲಿ ರಸ್ತೆಯಲ್ಲಿ ಕೆಲವು ಮಹಿಳೆಯರು ಶನಿವಾರದಿಂದ ಧರಣಿ ನಡೆಸುತ್ತಿರುವ ಸ್ಥಳದಲ್ಲಿ ಕಲ್ಲೆಸೆತ ಮತ್ತು ಅಗ್ನಿಸ್ಪರ್ಶದ ಘಟನೆಗಳ ವರದಿಗಳು ಇನ್ನೂ ಬರುತ್ತಿವೆ ಮತ್ತು ಪೊಲೀಸರು ಪ್ರತಿಭಟನಕಾರರನ್ನು ಸ್ಥಳದಿಂದ ತೆರವುಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿದವು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ಸಲುವಾಗಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ ಈಶಾನ್ಯ ದೆಹಲಿಯ ಜಾಫ್ರಾಬಾದ್ ಸಮೀಪ 2020 ಫೆಬ್ರುವರಿ 23ರ ಭಾನುವಾರ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು, ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಬೆತ್ತ ಪ್ರಹಾರ ಮತ್ತು ಆಶ್ರುವಾಯು ಪ್ರಯೋಗಿಸಿದರು. ಜಾಫ್ರಾಬಾದ್ ಸಮೀಪದ ಮೌಜ್ಪುರದಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲುತೂರಾಟ ನಡೆಸಿದಾಗ ಪ್ರತಿಭಟನಕಾರರನ್ನು ಚದುರಿಸಲು ದೆಹಲಿ ಪೊಲೀಸರು ಆಶ್ರುವಾಯು ಮತ್ತು ಬೆತ್ತ ಪ್ರಹಾರ ಮಾಡಬೇಕಾಯಿತು ಎಂದು ವರದಿಗಳು ತಿಳಿಸಿದವು. ಬಹುತೇಕ ಮಹಿಳೆಯರಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ ಜಾಫ್ರಾಬಾದ್ ಮೆಟ್ರೋ ಸ್ಟೇಷನ್ ಬಳಿ ರಸ್ತೆ ತಡೆ ನಡೆಸಿದಾಗ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಯಿತು. ರಸ್ತೆಯು ಸೀಲಂಪುರ ಮತ್ತು ಮೌಜ್ಪುರ ಹಾಗೂ ಯಮುನಾ ವಿಹಾರವನ್ನು ಸಂಪರ್ಕಿಸುವ ಮಾರ್ಗವಾಗಿದೆ. ಹಿಂಸಾತ್ಮಕ ಘಟನೆಗಳನ್ನು ಅನುಸರಿಸಿ ಪ್ರದೇಶದಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿದವು. ಭಾನುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಮುಂದುವರೆದ ಪರಿಣಾಮವಾಗಿ ದೆಹಲಿ ಮೆಟ್ರೋ ಅಧಿಕಾರಿಗಳು ಮೆಟ್ರೋ ನಿಲ್ದಾಣದ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಿದರು. ಬಳಿಕ ಮೌಜ್ ಪುರ-ಬಾಬರ್ ಪುರ ನಿಲ್ದಾಣಗಳಲ್ಲೂ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ) ಅಧಿಕಾರಿಗಳು ಪ್ರಕಟಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಪಾಕಿಸ್ತಾನಿಗಳು/ ರಾಷ್ಟ್ರ ವಿರೋಧಿಗಳು/ ಹೊರಗಿನವರು/ ದೇಶದ್ರೋಹಿಗಳು ಇತ್ಯಾದಿ ಹಣೆಪಟ್ಟಿಗಳನ್ನು ಅಂಟಿಸಿದ್ದರಿಂದ ತಮಗೆ ಘಾಸಿಯಾಗಿದೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸಿ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಮಾಜಿ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ವಜಾಹತ್ ಹಬೀಬುಲ್ಲಾ ಅವರ ಮೂಲಕ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ (ಅಫಿದವಿತ್) ಸುಪ್ರೀಂಕೋರ್ಟಿಗೆ ತಿಳಿಸಿದರು. ಕೇಂದ್ರ ಸರ್ಕಾರವು ನಮ್ಮ ಕಳವಳವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಯಾವುದೇ ಮಾತುಕತೆಯನ್ನೂ ನಡೆಸಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ವಿವಾದಾತ್ಮಕ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಆದಷ್ಟೂ ಶೀಘ್ರ ಆಲಿಸಬೇಕುಎಂದು ಶಾಹೀನ್ ಬಾಗ್ ಪ್ರತಿಭಟನಾ ನಿರತ ಮಹಿಳೆಯರ ಪ್ರಮಾಣಪತ್ರ ಸುಪ್ರೀಂಕೋರ್ಟಿಗೆ ಮನವಿ ಮಾಡಿದೆ.  ಶಾಹೀನ್ ಬಾಗ್ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ರಸ್ತೆ ತಡೆಯನ್ನು ತೆರವುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಮಧ್ಯವರ್ತಿಯಾಗಿರುವ ಹಬೀಬುಲ್ಲಾ ಅವರುಪ್ರತಿಭಟನೆಯು ಬಹುತೇಕ ಶಾಂತಿಯುತವಾಗಿದ್ದು, ಪ್ರತಿಭಟನಾ ನಿರತ ಮಹಿಳೆಯರು ಅವರ ಅಭಿಪ್ರಾಯಗಳನ್ನು ಕೋರ್ಟಿನ ಮುಂದೆ ಸಲ್ಲಿಸುವಂತೆ ಕೋರಿದ್ದಾರೆಎಂದು ತಮ್ಮ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಪ್ರಮಾಣಪತ್ರವು ಪ್ರತಿಭಟನಾ ನಿರತ ಮಹಿಳೆಯರ ಕಳವಳಗಳನ್ನು ಪಟ್ಟಿ ಮಾಡಿದೆ. ಪ್ರತಿಭಟನಾಕಾರರು ತಾವು ದೇಶದ ಹೆಮ್ಮೆಯ ಪೌರರು ಎಂಬುದಾಗಿ ಪುನರುಚ್ಚರಿಸಿದ್ದು ತಮ್ಮನ್ನು ರಾಷ್ಟ್ರವಿರೋಧಿಗಳು ಮತ್ತು ಪಾಕಿಸ್ತಾನೀಯರು ಎಂಬುದಾಗಿ ಬಣ್ಣಿಸಲಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ರಾಜಧಾನಿಯ ಜಾಫ್ರಾಬಾದ್ ಮತ್ತು ಚಾಂದ್ ಬಾಗ್ ರಸ್ತೆಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ವಾಪಸಾಗುವುದರ ಒಳಗಾಗಿ ತೆರವುಗೊಳಿಸಬೇಕು ಎಂದು ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರ  2020 ಫೆಬ್ರುವರಿ 23ರ ಭಾನುವಾರ ದೆಹಲಿ ಪೊಲೀಸರಿಗೆ ಗಡುವು ನೀಡಿದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ವಾಪಸಾಗುವುದರ ಒಳಗಾಗಿ ಪ್ರತಿಭಟನಕಾರರನ್ನು ಜಾಫ್ರಾಬಾದ್ ಮತ್ತು ಚಾಂದ್ ಬಾಗ್ ರಸ್ತೆಗಳಿಂದ ತೆರವುಗೊಳಿಸದೇ ಇದ್ದಲ್ಲಿ ಜನರೇ ರಸ್ತೆಗಳಿಗೆ ಇಳಿಯುತ್ತಾರೆ ಎಂದು ಮಿಶ್ರ ಎಚ್ಚರಿಸಿದರು. ಕಪಿಲ್ ಮಿಶ್ರ ಅವರು ವಿಡಿಯೋ ಒಂದನ್ನು ಟ್ವಿಟ್ಟರಿನಲ್ಲಿ ಪ್ರಕಟಿಸಿದ್ದಾರೆ. ವಿಡಿಯೋದಲ್ಲಿ ಅವರುಭಾರತ್ ಮಾತಾ ಕೀ ಜೈಮತ್ತುವಂದೇ ಮಾತರಂಘೋಷಣೆ ಕೂಗುತ್ತಿರುವ ಬೆಂಬಲಿಗರ ಮಧ್ಯೆ ನಿಂತುಕೊಂಡು ಪೊಲೀಸರಿಗೆ ಮನವಿ ಮಾಡುತ್ತಿರುವುದು ದಾಖಲಾಗಿದೆ. ಅದೇ ಟ್ವಿಟ್ಟರ್ ಸಂದೇಶದಲ್ಲಿಮೇಲೆ ತಿಳಿಸಿದ ರಸ್ತೆಗಳನ್ನು ಮೂರು ದಿನಗಳ ಒಳಗಾಗಿ ತೆರವುಗೊಳಿಸುವಂತೆ ದೆಹಲಿ ಪೊಲೀಸರಿಗೆ ನಾನು ಗಡುವು ನೀಡುತ್ತಿದ್ದೇನೆಎಂದೂ ಅವರು ಬರೆದರು. ದೆಹಲಿ ಪೊಲೀಸರಿಗೆ ಜಾಫ್ರಾಬಾದ್ ಮತ್ತು ಚಾಂದ್ ಬಾಗ್ ರಸ್ತೆಗಳನ್ನು ತೆರವುಗೊಳಿಸಲು ಮೂರು ದಿನಗಳ ಗಡುವು ನೀಡಲಾಗಿದೆ. (ವಿಫಲರಾದರೆ) ಅವರು ಬಳಿಕ ನಮ್ಮ ಬಳಿ ನೆಪ ಹೇಳುವುದು ಬೇಕಿಲ್ಲ, ನಾವು ನಿಮ್ಮ ಮಾತುಗಳನ್ನೂ ಕೇಳುವುದಿಲ್ಲ, ಕೇವಲ ಮೂರು ದಿನಗಳುಎಂದು ಟ್ವೀಟ್ ಹೇಳಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)



No comments:

Post a Comment