Sunday, February 16, 2020

ಇಂದಿನ ಇತಿಹಾಸ History Today ಫೆಬ್ರುವರಿ 16

2020: ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಮೂರನೇ ಅವಧಿಗೆ  2020 ಫೆಬ್ರುವರಿ 16ರ ಭಾನುವಾರ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆಮ್ ಆದ್ಮಿ ಪಕ್ಷದ (ಎಎಪಿ-ಆಪ್) ನಾಯಕ ಅರವಿಂದ ಕೇಜ್ರಿವಾಲ್ ಅವರು  ’ಕೇಂದ್ರದ ಜೊತೆಗೆ ಸೌಹಾರ್ದಯುತವಾಗಿ ಕೆಲಸ ಮಾಡಲು ಬಯಸುವುದಾಗಿಘೋಷಿಸಿದರುಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಕೇಜ್ರಿವಾಲ್ ರಾಜಧಾನಿಯಲ್ಲಿ ಸುಗಮ ಆಡಳಿತ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಕೋರುವುದಾಗಿ ಹೇಳಿದರು. ‘ನಾನು ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಕಳುಹಿಸಿದ್ದೆ. ಅವರಿಗೆ ಬರಲು ಆಗಿಲ್ಲ. ಅವರು ಬೇರೆ ಏನಾದರೂ ಕಾರ್ಯಕ್ರಮದಲ್ಲಿ ಮಗ್ನರಾಗಿರಬಹುದು. ವೇದಿಕೆಯ ಮೂಲಕ ನಾನು ದೆಹಲಿ ಅಭಿವೃದ್ಧಿ ಮತ್ತು ಸುಲಲಿತ ಆಡಳಿತಕ್ಕಾಗಿ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದಗಳನ್ನು ಕೋರುತ್ತಿದ್ದೇನೆ  ಎಂದು ಹಿಂದಿನ ಅವಧಿಯಲ್ಲಿ ಕೇಂದ್ರದ ಜೊತೆಗೆ ಹಲವಾರು ವಿಷಯಗಳಲ್ಲಿ ಘರ್ಷಿಸಿದ್ದ ಕೇಜ್ರಿವಾಲ್ ನುಡಿದರು. ‘ಚುನಾವಣಾ ಪ್ರಚಾರದ ವೇಳೆಯಲ್ಲಿ ಮಾಡಿದ ಎಲ್ಲ ಟೀಕೆಗಳಿಗಾಗಿ ನನ್ನ ವಿರೋಧಿಗಳನ್ನು ನಾನು ಕ್ಷಮಿಸಿದ್ದೇನೆಎಂದು ಹೇಳಿದ ಕೇಜ್ರಿವಾಲ್, ತಮ್ಮನ್ನುದೆಹಲಿಯ ಪುತ್ರಎಂಬುದಾಗಿ ಉಲ್ಲೇಖಿಸಿದರು. ’ ವಿಜಯ ನನ್ನ ವಿಜಯವಲ್ಲ, ಪ್ರತಿಯೊಬ್ಬ ದೆಹಲಿ ನಿವಾಸಿಯ ವಿಜಯಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ವಾರಾಣಸಿ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀರಾಮನಿಗಾಗಿ ಭವ್ಯ ಮಂದಿರ ನಿರ್ಮಾಣದ ಮೇಲ್ವಿಚಾರಣೆಗಾಗಿ ರಚಿಸಲಾಗಿರುವ ಶ್ರೀರಾಮ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಅಯೋಧ್ಯೆಯಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿರುವ ೬೭ ಎಕರೆ ಭೂಮಿಯನ್ನು ಕೇಂದ್ರ ಸರ್ಕಾರವು ಹಸ್ತಾಂತರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಫೆಬ್ರುವರಿ 16ರ ಭಾನುವಾರ  ವಾರಾಣಸಿಯಲ್ಲಿ  ಘೋಷಿಸಿದರು. ಕೇಂದ್ರವು ಹಿಂದೆ ಅಯೋಧ್ಯೆಯಲ್ಲಿವಿವಾದಿತ ತಾಣಎಂದು ಕರೆಯಲಾಗಿದ್ದ  ೬೭ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ವಿವಾದ ಬಗೆಹರಿಯುವವರೆಗೂ ಭೂಮಿ ಕೇಂದ್ರ ಸರ್ಕಾರದ ಬಳಿ ಇರಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ‘ರಾಮಮಂದಿರಕ್ಕೆ ಸಂಬಂಧಿಸಿದಂತೆ ಸರ್ಕಾರವು ಇನ್ನೊಂದು  ’ದೊಡ್ಡನಿರ್ಣಯ ಕೈಗೊಂಡಿದೆ. ಅಯೋಧ್ಯೆಯಲ್ಲಿ  ಕಾನೂನಿನಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿರುವ ೬೭ ಎಕರೆ ಭೂಮಿಯನ್ನು ಸಂಪೂರ್ಣವಾಗಿ ಹೊಸದಾಗಿ ರೂಪುಗೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಇಲ್ಲಿ  ನಿರ್ಮಿಸಲಾಗಿರುವ ದೇವಾಲಯದ ಭವ್ಯತೆ ಮತ್ತು ದೈವತ್ವ ಹೆಚ್ಚಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಾರಾಣಸಿಯಲ್ಲಿ ಭಾನುವಾರ ನಡೆದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಪ್ರಧಾನಿ ಹೇಳಿಕೆ ನೀಡಿದರು. ‘ಭಾರತದ ಅಸ್ಮಿತೆಯು ಅದರ ಸಮಗ್ರ ಪರಂಪರೆ ಮತ್ತು ಸಂಸ್ಕೃತಿಯಿಂದ ಬಂದಿದೆ ಹೊರತು ಅದನ್ನು ಆಳಿದ ಆಡಳಿತಗಾರರಿಂದ ಅಲ್ಲಎಂದು ಮೋದಿ ವ್ಯಾಖ್ಯಾನಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2020: ಟೋಕಿಯೋ:  ಪ್ರತ್ಯೇಕಿತ ಏಕಾಂಗಿವಾಸಕ್ಕೆ  ಗುರಿಪಡಿಸಲಾಗಿರುವ ಜಪಾನಿನ ವಿಹಾರ ನೌಕೆಯಲ್ಲಿದ್ದ ಇನ್ನಿಬ್ಬರು ಭಾರತೀಯರಿಗೂ ಮಾರಕ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸುದ್ದಿ ಮೂಲಗಳು  2020 ಫೆಬ್ರುವರಿ 16ರ ಭಾನುವಾರ ತಿಳಿಸಿದವು. ಜಪಾನ್ ವಿಹಾರನೌಕೆಯಲ್ಲಿರುವ ತನ್ನ ಎಲ್ಲ ನಾಗರಿಕರಿಗೂ ಸ್ವದೇಶಕ್ಕೆ ವಾಪಸಾಗಲು ಸಾಧ್ಯವಿರುವ ಎಲ್ಲ ನೆರವು ಒದಗಿಸುತ್ತಿರುವುದಾಗಿ ಭಾರತ ಸರ್ಕಾರ ನೀಡಿರುವ ಭರವಸೆಯ ನಡುವೆಯೇ ವರದಿ ಬಂದಿದೆ. ನೌಕೆಯಲ್ಲಿರುವ ಭಾರತೀಯರನ್ನು ಅಂತಿಮ ಕೊರೋನಾವೈರಸ್ ಪರೀಕ್ಷೆಗಳಿಗೆ ಸೋಮವಾರ ಗುರಿಪಡಿಸಲಾಗುವುದು ಬಳಿಕ ಅವರನ್ನು ಸ್ವದೇಶಕ್ಕೆ ಒಯ್ಯಲು ವ್ಯವಸ್ಥೆ ಮಾಡಲಾಗುವುದು ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಇಲ್ಲಿ ತಿಳಿಸಿತು. ೧೩೨ ಮಂದಿ ಸಿಬ್ಬಂದಿ ಮತ್ತು ಆರು ಪ್ರಯಾಣಿಕರು ಸೇರಿದಂತೆ ಒಟ್ಟು ೧೩೮ ಭಾರತೀಯರುಡೈಮಂಡ್ ಪ್ರಿನ್ಸಿಸ್ವಿಹಾರ ನೌಕೆಯಲ್ಲಿರುವ ,೭೧೧ ಮಂದಿ ಪ್ರಯಾಣಿಕರಲ್ಲಿ ಸೇರಿದ್ದಾರೆ. ನೌಕೆಯು ತಿಂಗಳ ಆದಿಯಲ್ಲಿ ಜಪಾನ್ ಕರಾವಳಿಗೆ ಬಂದಿದೆ. ನೌಕೆಯಲ್ಲಿ ಕೊರೋನಾವೈರಸ್ (ಕೋವಿಡ್-೧೯) ಸೋಂಕು ಬಾಧಿತರ ಒಟ್ಟು ಸಂಖ್ಯೆ  ಈದಿನ  ೩೫೫ಕ್ಕೆ ಏರಿತು. ಕಳೆದ ಎರಡು ದಿನಗಳಲ್ಲಿ ಡೈಮಂಡ್ ಪ್ರಿನ್ಸೆಸ್ ಪ್ರಯಾಣಿಕರಲ್ಲಿ ೧೩೭ ಮಂದಿಗೆ ಹೊಸದಾಗಿ ಕೊರೋನಾವೈರಸ್ ಸೋಂಕು ಬಾಧಿಸಿದೆ, ಅವರ ಪೈಕಿ ಇಬ್ಬರು ಭಾರತೀಯರೂ ಸೇರಿದ್ದಾರೆ. ಅವರೆಲ್ಲರನ್ನೂ ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿದೆ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2020: ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು 2020 ಫೆಬ್ರುವರಿ 16ರ ಭಾನುವಾರ ಪೊಲೀಸರು ಅನುಮತಿ ನೀಡದ ಕಾರಣ ಗೃಹ ಸಚಿವ ಅಮಿತ್ ಶಾ ನಿವಾಸದತ್ತ ತೆರಳಲು ಉದ್ದೇಶಿಸಿದ್ದ ಜಾಥಾವನ್ನು ಅಮಾನತುಗೊಳಿಸಿ,  ಶಾಹೀನಾ ಬಾಗ್ನಲ್ಲಿಯೇ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ‘ಶಾಹೀನ್ ಬಾಗ್ ಬಾಗ್ ಪ್ರತಿಭಟನಾಕಾರರು ಗೃಹ ಸಚಿವ ಅಮಿತ್ ಶಾ ಅವರ ಭೇಟಿಗಾಗಿ ಜಾಥಾ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದರು. ಆದರೆ, ಅವರ ಸಂದರ್ಶನಕ್ಕೆ ಸಮಯ ನಿಗದಿಯಾಗದೇ ಜಾಥಾ ಹಮ್ಮಿಕೊಳ್ಳಲು ಸಾಧ್ಯವಿಲ್ಲ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಅವರೊಂದಿಗೆ ಸದ್ಯ ಮಾತುಕತೆ ಮುಂದುವರೆಸಿದ್ದೇವೆ. ಅವರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆಎಂದು ಆಗ್ನೇಯ ದೆಹಲಿಯ ಡಿಸಿಪಿ ಆರ್.ಪಿ ಮೀನಾ ತಿಳಿಸಿದರು. ಪ್ರತಿಭಟನಾಕಾರರು ಜಾಥಾ ನಡೆಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಶಾಹೀನ್ ಬಾಗ್ ನಿಂದ ಗೃಹ ಸಚಿವರ ನಿವಾಸದವರೆಗೆ ಪೊಲೀಸರು ಬಿಗಿ ಭದ್ರತೆ ಮಾಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2020: ನವದೆಹಲಿ: ಮಾರಕ ಕೊರೋನಾವೈರಸ್ ವ್ಯಾಧಿಯ ಕೇಂದ್ರವಾಗಿದ್ದ ಚೀನಾದ ವುಹಾನ್ ನಗರದಿಂದ ಭಾರತಕ್ಕೆ ಮರಳಿ ಕರೆತರಲಾಗಿದ್ದ ಎಲ್ಲ ೪೦೬ ಮಂದಿ ಕೂಡಾ ಕೊರೋನಾವೈರಸ್ ಸೋಂಕಿನಿಂದ ಮುಕ್ತರಾಗಿರುವುದಾಗಿ ಅಂತಿಮ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ವರದಿಗಳು 2020 ಫೆಬ್ರುವರಿ 16ರ ಭಾನುವಾರ ತಿಳಿಸಿದವು.  ಅವರೆಲ್ಲರನ್ನೂ ಭಾರತಕ್ಕೆ ಕರೆತಂದ ಬಳಿಕ ವ್ಯಾಧಿ ಸೋಂಕಿನ ಶಂಕೆಯಿಂದ ಪ್ರತ್ಯೇಕವಾಗಿ ಏಕಾಂತವಾಸದಲ್ಲಿ ಇರಿಸಲಾಗಿತ್ತು. ಎಲ್ಲರನ್ನೂ  2020 ಫೆಬ್ರುವರಿ 17ರ ಸೋಮವಾರದಿಂದ ಹಂತ ಹಂತವಾಗಿ ಅವರವರ ಮನೆಗಳಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿತು. ಇಂಡೋ ಟಿಬೆಟನ್ ಗಡಿ ಪೊಲೀಸರು (ಐಟಿಬಿಪಿ) ಏಕಾಂತವಾಸದಲ್ಲಿ ಇರಿಸಿದ್ದ ಎಲ್ಲ ೪೦೬ ಮಂದಿಯ ಅಂತಿಮ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗಿತ್ತು. ಇದಕ್ಕೂ ಮುನ್ನ  ಕನಿಷ್ಠ ಎರಡು ಬಾರಿ ನಡೆಸಲಾಗಿದ್ದ ಪರೀಕ್ಷೆಗಳ ಸಂದರ್ಭದಲ್ಲೂ ಅವರಲ್ಲಿ ವ್ಯಾಧಿಯ ಸೋಂಕು ಕಂಡು ಬಂದಿರಲಿಲ್ಲ ಎಂದು ವರದಿ ಹೇಳಿತು. ಮೂರು ದಿನಗಳ ಮುನ್ನ ಫೆಬ್ರುವರಿ ೧೩ರಂದು ಚೀನಾದಿಂದ ತೆರವುಗೊಳಿಸಲಾದ ೬೫೪ ಮಂದಿಯನ್ನು ಮಾನೆಸರದಲ್ಲಿ ಮತ್ತು ಐಟಿಬಿಪಿ ಶಿಬಿರಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲ ಪರೀಕ್ಷೆಗಳಲ್ಲೂ ಅವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment