Friday, February 7, 2020

ಇಂದಿನ ಇತಿಹಾಸ History Today ಫೆಬ್ರುವರಿ 07

2020: ನವದೆಹಲಿ/ ಬೀಜಿಂಗ್: ಜಗತ್ತನ್ನು ಬೆಚ್ಚಿ ಬೀಳಿಸಿರುವ ನೂತನ ಕೊರೋನಾವೈರಸ್ ಬಗ್ಗೆ ತನ್ನ ಸರ್ಕಾರಕ್ಕೆ ಮೊತ್ತ ಮೊದಲಿಗೆ ವರದಿ ಮಾಡಿದ್ದ ಚೀನೀ ವೈದ್ಯನೇ ಇದೀಗ (2020 ಫೆಬ್ರುವರಿ 06ರ ಗುರುವಾರ) ಕೊರೋನಾವೈರಸ್ಗೆ ಬಲಿಯಾಗಿರುವ ವರದಿ ಬಂದಿತು.   ವೈದ್ಯ ಮಾರಕ ಸೋಂಕಿನ ಬಗ್ಗೆ ವರದಿ ಮಾಡಿದಾಗ ಅದನ್ನು ನಿರ್ಲಕ್ಷಿಸಲಾಗಿತ್ತು. ಚೀನಾದ ಸರ್ಕಾರಿ ಸ್ವಾಮ್ಯದ  ’ಗ್ಲೋಬಲ್ ಟೈಮ್ಸ್ವರದಿಯ ಪ್ರಕಾರ ಡಾಕ್ಟರ್ ಲೀ ವೆನ್ಲಿಯಾಂಗ್ ಅವರು ಶಂಕಿತ ಸಾರ್ಸ್ ಮಾದರಿಯ ಮಾರಕ ಸೋಂಕು ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಲ್ಲಿ ಹರಡುತ್ತಿರುವ ಬಗ್ಗೆ ಮೊತ್ತ ಮೊದಲಿಗೆ ವರದಿ ಮಾಡಿದ್ದರು. ಬಳಿಕ ಇದೇ ಕೊರೋನಾ ವೈರಸ್ಗೆ ಬಲಿಯಾಗಿ ಅವರು ಸಾವನ್ನಪ್ಪಿದರು.  ೩೪ರ ಹರೆಯದ ವೆನ್ಲಿಯಾಂಗ್ ನೇತ್ರ ತಜ್ಞರಾಗಿದ್ದು ವುಹಾನ್ ಕೇಂದ್ರೀಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಮೊತ್ತ ಮೊದಲಿಗೆ ತಮ್ಮ ಜಿಲ್ಲೆಯಲ್ಲಿ ಸಾಂಕ್ರಾಮಿಕ ವೈರಸ್ ಸೋಂಕು ಹರಡುತ್ತಿರುವ ಬಗ್ಗೆ ತಮ್ಮ ಗೆಳೆಯರಿಗೆ ಡಿಸೆಂಬರ್ ೩೦ರಷ್ಟು ಹಿಂದೆಯೇ ಸಂದೇಶಗಳ (ಮೆಸ್ಸೇಜ್) ಮೂಲಕ ತಿಳಿಸಿದ್ದರು. ಕಳೆದ ವರ್ಷ ಡಿಸೆಂಬರಿನಷ್ಟು ಹಿಂದೆಯೇ ವೈರಸ್ ಬಗ್ಗೆ ವರದಿ ಮಾಡಿದ ಪ್ರಥಮ ವ್ಯಕ್ತಿ ಅವರಾಗಿದ್ದರು. ಕೇಂದ್ರ ಹುಬೇ ಪ್ರಾಂತದ ರಾಜಧಾನಿಯಾದ ವುಹಾನ್ ನಗರದಲ್ಲಿ ವ್ಯಾಧಿ ಮೊತ್ತ ಮೊದಲಿಗೆ ಕಾಣಿಸಿಕೊಂಡು ಹರಡಲು ಆರಂಭವಾದಾಗಲೇ ಅವರು ಬಗ್ಗೆ ಗಮನ ಸೆಳೆದಿದ್ದರು. ತಮ್ಮ ಆಸ್ಪತ್ರೆಗೆ ದಾಖಲಾದ ಮಂದಿ ರೋಗಿಗಳಲ್ಲಿ ಸಾರ್ಸ್ ಮಾದರಿಯ ರೋಗ ಲಕ್ಷಣಗಳು ಕಾಣುತ್ತಿವೆ ಎಂದು ಇನ್ ಸ್ಟಾಂಟ್ ಮೆಸ್ಸೇಜಿಂಗ್ ಆಪ್ ಮೂಲಕ ಅವರು ಇತರ ವೈದ್ಯರಿಗೆ ತಿಳಿಸಿದ್ದರು. ಎಲ್ಲ ಏಳೂ ಮಂದಿ ರೋಗಿಗಳೂ ಹುಬೇಯ ಒಂದೇ ಸಾಗರ ಆಹಾರ ಮಾರುಕಟ್ಟೆಯಿಂದ ಪ್ರಾಣಿಗಳ ಮಾಂಸ ತಿಂದಿದ್ದರು ಎಂದು ನೇತ್ರ ತಜ್ಞ ತಿಳಿಸಿದ್ದರು. ತಾವು ನಡೆಸಿದ ಪರೀಕ್ಷೆಗಳ ಪ್ರಕಾರ ಇದು ವೈರಸ್ ಕುಟುಂಬಕ್ಕೆ ಸೇರಿದಕೊರೋನಾ ವೈರಸ್ಆಗಿದೆ. ಚೀನಾದಲ್ಲಿ ೨೦೦೩ರಲ್ಲಿ ೮೦೦ ಮಂದಿಯನ್ನು ಬಲಿ ತೆಗೆದುಕೊಂಡ ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಇದೇ ವೈರಸ್ ಕುಟುಂಬಕ್ಕೆ ಸೇರಿದ್ದು ಎಂದು ಲೀ ವಿವರಿಸಿದ್ದರುಲೀ ಅವರ ಸಂದೇಶ ಅವರು ವೈದ್ಯಕೀಯ ಗೆಳೆಯರಿಗೆ ಪ್ರೀತಿಪಾತ್ರರ ಬಗ್ಗೆ ಕಾಳಜಿ ವಹಿಸಲು ನೀಡಿದ್ದ ಎಚ್ಚರಿಕೆಯ ಗಂಟೆಯಾಗಿತ್ತು. ಆದರೆ ವೆನ್ ಲಿಯಾಂಗ್ ಅವರು ಮಾಹಿತಿ ನೀಡಿದ ಗಂಟೆಗಳ ಒಳಗಾಗಿ ಚೀನೀ ಸಾಮಾಜಿಕ ಮಾಧ್ಯಮದಲ್ಲಿ ಚಾಟ್ಗಳು ಕಾಳ್ಗಿಚ್ಚಿನಂತೆ ಹರಡಿದ್ದವು. ಅವರ ಹೆಸರು ನೂರಾರು ಮಂದಿಗೆ ಪರಿಚಿತವಾಯಿತು. ’ಆನ್ ಲೈನ್ ನಲ್ಲಿ ವಿಷಯ ಪ್ರಸಾರವಾಗುತ್ತಿರುವುದನ್ನು ಕಂಡಾಗ, ನನಗೆ ಇದು ನನ್ನ ನಿಯಂತ್ರಣ ಮೀರಿದೆ ಎಂಬುದು ಗೊತ್ತಾಯಿತು. ನಾನು ಶಿಕ್ಷೆಗೊಳಗಾಗಬಹುದು ಎಂದು  ದಿಗಿಲಾಯಿತು’  ಎಂದು ಲೀ ಹೇಳಿದ್ದನ್ನು ಸಿಎನ್ಎನ್ ಇತ್ತೀಚೆಗೆ ಉಲ್ಲೇಖಿಸಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದಹೆಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಮತ್ತು ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ 2020 ಫೆಬ್ರುವರಿ ೧೧ರ ಮಂಗಳವಾರ ನಡೆಸಲಿದೆ. ಗಲ್ಲು ಶಿಕ್ಷೆ ಜಾರಿಗೆ ದೆಹಲಿಯ ವಿಚಾರಣಾ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ತನ್ನ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಕೇಂದ್ರವು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿತ್ತು. ಸರ್ಕಾರವು ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳಿಗೆ ನೋಟಿಸ್ಗಳನ್ನು ಕಳುಹಿಸಬೇಕು ಎಂದು ಸರ್ಕಾರ ಬಯಸಿತು. ಆದರೆ, ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠವು ಇದರಿಂದ ವಿಷಯವು ಇನ್ನಷ್ಟು ವಿಳಂಬವಾಗುತ್ತದೆ ಎಂದು ಹೇಳಿ ಸರ್ಕಾರವ ಮನವಿಯನ್ನು ಒಪ್ಪಲಿಲ್ಲ. ‘ರಾಷ್ಟ್ರದ ಸಹನೆಯನ್ನು ಸಾಕಷ್ಟು ಪರೀಕ್ಷೆಗೆ ಒಡ್ಡಲಾಗಿದೆ. ಸುಪ್ರೀಂಕೋರ್ಟ್ ವಿಚಾರವಾಗಿ ಕಾನೂನು ರೂಪಿಸಬೇಕಾಗುತ್ತದೆಎಂದು ಸರ್ಕಾರದ ಪರ ವಕೀಲ ತುಷಾರ ಮೆಹ್ತ ಹೇಳಿದರು. ದೆಹಲಿಯಲ್ಲಿ ನಡೆದ ೨೦೧೨ರನಿರ್ಭಯಾಎಂದೇ ಪರಿಚಿತರಾದ ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿನಯ್ ಶರ್ಮ, ಪವನ್ ಗುಪ್ತ, ಮುಕೇಶ್ ಸಿಂಗ್ ಮತ್ತು ಅಕ್ಷಯ್ ಸಿಂಗ್ ಅವರಿಗೆ ಮರಣದಂಡನೆ ವಿಧಿಸಲಾಗಿದ್ದು ತಿಹಾರ್ ಸೆರೆಮನೆಯಲ್ಲಿ ಫೆಬ್ರುವರಿ ೧ರಂದು ಗಲ್ಲಿಗೆ ಏರಿಸಬೇಕಾಗಿತ್ತು. ಆದರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಎರಡನೇ ಶಿಕ್ಷಿತ ಅಪರಾಧಿ ವಿನಯ್ ಶರ್ಮ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಿದ್ದನ್ನು ಅನುಸರಿಸಿ ದೆಹಲಿಯ ವಿಚಾರಣಾ ನ್ಯಾಯಾಲಯವು ಗಲ್ಲು ಶಿಕ್ಷೆಯ ಜಾರಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿತ್ತು. ವಿನಯ್ ಶರ್ಮ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾಗುತ್ತಿದಂತೆಯೇ ಜೊತೆಗೆ ಇನ್ನೊಬ್ಬ ಅಪರಾಧಿ ಅಕ್ಷಯ್ ಸಿಂಗ್ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಿದ್ದ. ಹಿನ್ನೆಲೆಯಲ್ಲಿ, ಗಲ್ಲು ಜಾರಿಯನ್ನು ವಿಳಂಬಗೊಳಿಸಲು ಪ್ರತಿಯೊಂದು ಲೋಪವನ್ನೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಅಪರಾಧಿಗಳು ಪರಸ್ಪರ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು  ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)
2020: ನವದೆಹಲಿ: ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗುರಿಯಾಗಿರುವ ನಾಲ್ವರು  ಶಿಕ್ಷಿತ ಅಪರಾದಿಗಳ ಗಲ್ಲು ಶಿಕ್ಷೆ ಜಾರಿಗೆ ಹೊಸ ದಿನಾಂಕ ನಿಗದಿ ಪಡಿಸುವಂತೆ ಕೋರಿ ತಿಹಾರ್ ಸೆರೆಮನೆ ಅಧಿಕಾರಿಗಳು ಹೊಸದಾಗಿ ಸಲ್ಲಿಸಿದ ಮನವಿಯನ್ನು ದೆಹಲಿಯ ನ್ಯಾಯಾಲಯ 2020 ಫೆಬ್ರುವರಿ 07ರ ಶುಕ್ರವಾರ ತಿರಸ್ಕರಿಸಿತು.
ಮರಣದಂಡನೆಗೆ
ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತ ದೆಹಲಿ ಹೈಕೋರ್ಟಿನ  ಫೆಬ್ರುವರಿ ೫ರ ಆದೇಶದ ಪ್ರಕಾರ ಒಂದು ವಾರದ ಗಡುವಿನ ಒಳಗಾಗಿ ಯಾವುದೇ ಅರ್ಜಿ ಸಲ್ಲಿಸುವುದಿಲ್ಲ ಎಂಬುದಾಗಿ ನೀವು ಹೇಗೆ ಊಹಿಸಿದಿರಿ? ಎಂದು ಅರ್ಜಿಯ ವಿಚಾರಣೆ ಕಾಲದಲ್ಲಿ ನಾಯಾಲಯವು ತಿಹಾರ್ ಸೆರೆಮನೆ ಅಧಿಕಾರಿಗಳನ್ನು ಪ್ರಶ್ನಿಸಿತು. ‘ಕೇವಲ ಊಹೆ ಅಥವಾ ಕಲ್ಪನೆಗಳನ್ನು ಆಧರಿಸಿ ಡೆತ್ ವಾರಂಟ್ಗಳನ್ನು ಹೊರಡಿಸಲು ಸಾಧ್ಯವಿಲ್ಲಎಂದು ಕೋರ್ಟ್ ಹೇಳಿತು. ‘೨೦೧೮ರಲ್ಲಿ ತನ್ನ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದಂದಿನಿಂದ ಈವರೆಗೂ ಯಾವುದೇ ಕಾನೂನು ಬದ್ಧ ಅರ್ಜಿಯನ್ನು ಸಲ್ಲಿಸಿಲ್ಲ, ಆದ್ದರಿಂದ ಈಗ ಅರ್ಜಿ ಸಲ್ಲಿಸುವ ಸಾಧ್ಯತೆಗಳಿಲ್ಲಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ನ್ಯಾಯಾಲಯವು ಅದನ್ನು ಒಪ್ಪಲಿಲ್ಲ ಮತ್ತು ಶಿಕ್ಷಿತ ಅಪರಾಧಿಗಳ ಎಲ್ಲ ಕಾನೂನುಬದ್ದ ಪರಿಹಾರ ಪಡೆಯುವ ಹಕ್ಕನ್ನು ತಾನು ಎತ್ತಿ ಹಿಡಿಯುವುದಾಗಿ ಹೇಳಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ಕೋಕ್ರಜ್ಹಾರ್ (ಅಸ್ಸಾಂ): ಕೇಂದ್ರದಲ್ಲಿ ಎರಡನೇ ಅವಧಿಗೆ ಪುನರಾಯ್ಕೆಗೊಂಡ ಬಳಿಕ ಇದೇ   ಮೊದಲ   ಬಾರಿಗೆ 2020 ಶುಕ್ರವಾರ ಅಸ್ಸಾಮಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬೋಡೋ ಒಪ್ಪಂದವನ್ನು ಈಶಾನ್ಯದಲ್ಲಿನ ಶಾಂತಿಯ ನವ ಯುಗದ ಆರಂಭ ಎಂಬುದಾಗಿ ಬಣ್ಣಿಸಿ ಶ್ಲಾಘಿಸಿದರು. ಮತ್ತು ರಾಜ್ಯದಲ್ಲಿ ಆಶಾಂತಿ ಸೃಷ್ಟಿಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದರು. ಸ್ವಾತಂತ್ರ್ಯಾನಂತರ ಭಾರತದಲ್ಲೇ ಅತ್ಯಂತ ಬೃಹತ್ ರಾಜಕೀಯ ಸಮಾವೇಶ ಎಂಬುದಾಗಿ ಸ್ವತಃ ಬಣ್ಣಿಸಿದ ಸಭೆಯನ್ನು  ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಭಾಷಣದಲ್ಲಿ ಈಶಾನ್ಯ ಭಾರತದ ಅಭಿವೃದ್ಧಿ ನಿಟ್ಟಿನ ತಮ್ಮ ಸರ್ಕಾರದ ದೃಷ್ಟಿಯನ್ನು ವಿವರಿಸಿದರು. ಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ಭುಗಿಲೆದ್ದ ಭಾರೀ ಪ್ರತಿಭಟನೆಗಳ ಪರಿಣಾಮವಾಗಿ ಹಿನ್ನಡೆ ಕಂಡಿದ್ದಆಕ್ಟ್ ಈಸ್ಟ್ ಪಾಲಿಸಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರ್ಧಾರವನ್ನು ಪ್ರಧಾನಿ ಪ್ರಕಟಿಸಿದರು. ಬೊಡೋಗಳ ಜೊತೆಗೆ ಸಹಿ ಮಾಡಲಾಗಿರುವ ಶಾಂತಿ ಒಪ್ಪಂದವನ್ನುರಾಜ್ಯಕ್ಕೆ ಹೊಸ ಬೆಳಕುಎಂಬುದಾಗಿ ಬಣ್ಣಿಸಿದ ಪ್ರಧಾನಿ ಇದು ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು  ಸ್ಥಾಪಿಸಲಿದೆ ಎಂದು ಹೇಳಿದರು. ’ಬೋಡೋಲ್ಯಾಂಡ್ ಚಳವಳಿಯ ಭಾಗವಾಗಿದ್ದ ಜನರನ್ನು ನಾನು ಭಾರತದ ಮುಖ್ಯ ಪ್ರವಾಹಕ್ಕೆ ಸ್ವಾಗತಿಸುತ್ತೇನೆಎಂದು ಪ್ರಧಾನಿ ನುಡಿದರು. ‘ಅಸ್ಸಾಮಿಗೆ ಭಯೋತ್ಪಾದನೆಯ ಕತ್ತಲು ಮತ್ತೆ ಬರಲು ತಮ್ಮ ಸರ್ಕಾರ ಅವಕಾಶ ನೀಡುವುದಿಲ್ಲಎಂಬುದಾಗಿ ಪ್ರತಿಜ್ಞೆ ಮಾಡಿದ ಮೋದಿ, ’ ಪ್ರದೇಶದಲ್ಲಿ ಇನ್ನೆಂದೂ ಯಾರೇ ಒಬ್ಬ ನಾಗರಿಕ ಹಿಂಸಾಚಾರದ ಕಾರಣಕ್ಕಾಗಿ ಸಾವನ್ನಪ್ಪುವುದಿಲ್ಲಎಂದು ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)


No comments:

Post a Comment