ನಾನು ಮೆಚ್ಚಿದ ವಾಟ್ಸಪ್

Sunday, February 9, 2020

ಇಂದಿನ ಇತಿಹಾಸ History Today ಫೆಬ್ರುವರಿ 09

2020: ನವದೆಹಲಿ: ಚೀನಾದಲ್ಲಿ ಈವರೆಗೆ ೮೦೦ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿರುವ ಮಾರಕ ಕೊರೋನಾವೈರಸ್ನಿಂದ ಸಂಭವಿಸುತ್ತಿರುವ ಸಾವು ನೋವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನೀ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ  2020 ಫೆಬ್ರುವರಿ 02ರ ಭಾನುವಾರ ಪತ್ರ ಬರೆದು ಸಂತಾಪ ವ್ಯಕ್ತ ಪಡಿಸಿದರು ಮತ್ತು ಸಂಕಟ ಎದುರಿಸುವಲ್ಲಿ ಅಧ್ಯಕ್ಷರು ಮತ್ತು ಚೀನಾ ಜನರ ಜೊತೆಗಿರುವುದಾಗಿ  ಭರವಸೆ ನೀಡಿದರು. ಸವಾಲನ್ನು ಎದುರಿಸುವಲ್ಲಿ ಭಾರತವು ನೆರವು ನೀಡಲು ಸಿದ್ಧ ಎಂದು ಪತ್ರದಲ್ಲಿ ತಿಳಿಸಿದ ಪ್ರಧಾನಿ, ಸಾವು ನೋವುಗಳಿಗಾಗಿ ಸಂತಾಪ ವ್ಯಕ್ತ ಪಡಿಸಿದರು. ಈ ತಿಂಗಳ ಆದಿಯಲ್ಲಿ ಹುಬೇ ಪ್ರಾಂತದಿಂದ ಭಾರತೀಯರನ್ನು ತೆರವುಗೊಳಿಸಲು ಚೀನೀ ಸರ್ಕಾರವು ಮಾಡಿಕೊಟ್ಟ ಅವಕಾಶಕ್ಕಾಗಿ ಪ್ರಧಾನಿಯವರು ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.  ಕೊರೋನಾವೈರಸ್ ಕೇಂದ್ರವಾದ ವುಹಾನ್ ನಗರದಿಂದ ೬೦೦ಕ್ಕೂ ಹೆಚ್ಚು ಭಾರತೀಯರನ್ನು ಫೆಬ್ರುವರಿ ಮತ್ತು ೨ರಂದು ಭಾರತ ಸರ್ಕಾರವು ತೆರವುಗೊಳಿಸಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಮತದಾನ ಮುಗಿದು ಹಲವಾರು ತಾಸುಗಳೇ ಕಳೆದುಹೋಗಿದ್ದರೂ ಮತ ಚಲಾಯಿಸಿದವರ ಅಂತಿಮ ಅಂಕಿಸಂಖ್ಯೆಗಳನ್ನು ಚುನಾವಣಾ ಆಯೋಗವೂ ಬಿಡುಗಡೆ ಮಾಡಿಲ್ಲ ಏಕೆ ಎಂಬುದಾಗಿ  2020 ಫೆಬ್ರುವರಿ 02ರ ಭಾನುವಾರ  ಅಚ್ಚರಿ ವ್ಯಕ್ತ ಪಡಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರುಇದು ಸಂಪೂರ್ಣ ಆಘಾತಕಾರಿಎಂದು ಹೇಳಿದರು. ‘ಸಂಪೂರ್ಣ ಆಘಾತಕಾರಿ. ಚುನಾವಣಾ ಆಯೋಗ ಏನು ಮಾಡುತ್ತಿದೆ? ಮತದಾನ ಮುಗಿದು ಇಷ್ಟೊಂದು ಗಂಟೆಗಳು ಕಳೆದರೂ ಒಟ್ಟು ಮತ ಚಲಾಯಿಸಿದವರ ಅಂತಿಮ ಅಂಕಿಸಂಖ್ಯೆಯನ್ನು ಅವರು ಏಕೆ ಬಿಡುಗಡೆ ಮಾಡುತ್ತಿಲ್ಲ?’ ಎಂದು ಕೇಜ್ರಿವಾಲ್ ಅವರು ಟ್ವೀಟ್ ಮೂಲಕ ಪ್ರಶ್ನಿಸಿದರು. ‘ಚುನಾವಣಾ ಆಯೋಗವು  2020 ಫೆಬ್ರುವರಿ 08ರ ಶನಿವಾರ ರಾತ್ರಿ ಒದಗಿಸಿದ ಮಾಹಿತಿ ಪ್ರಕಾರ ಮತದಾನದ ಪ್ರಮಾಣ ಶೇಕಡಾ ೬೧.೪೬. ರಾಷ್ಟ್ರ ರಾಜಧಾನಿಯಲ್ಲಿ ನೂತನ ಸರ್ಕಾರದ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಶನಿವಾರ ಸಂಜೆ ಗಂಟೆಗೆ ಮತದಾನ ಮುಕ್ತಾಯವಾಗಿತ್ತು. ಬೆಳಗ್ಗೆ ಮಂದಗತಿಯಲ್ಲಿದ್ದ ಮತದಾರರ ಸಂಖ್ಯೆ, ಹೊತ್ತೇರಿದಂತೆ ಕ್ರಮೇಣ ಚುರುಕಾಗಿದ್ದು, ದೆಹಲಿಯಲ್ಲಿ ಹೆಚ್ಚು ಮಂದಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ್ದರು. ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರುಚುನಾವಣಾ ಆಯೋಗವು ಚುನಾವಣೆಗಳು ಪೂರ್ಣಗೊಂಡ ಬಳಿಕ ಮತಚಲಾವಣೆಯ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಲು ಸಿದ್ಧವಾಗದೇ ಇರುವುದು ಬಹುಶಃ ರಾಷ್ಟ್ರದಲ್ಲೇ ಇದು ಪ್ರಥಮಎಂದು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ೭೦ ಸದಸ್ಯ ಬಲದ ದೆಹಲಿ ವಿಧಾನಸಭೆಗೆ  2020 ಫೆಬ್ರುವರಿ 08ರ ಶನಿವಾರ ನಡೆದ ಚುನಾವಣೆಯಲ್ಲಿ ಸರಾಸರಿ ಶೇಕಡಾ ೬೨.೫೯ರಷ್ಟು ಮತದಾನ ದಾಖಲಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಅವರು 2020 ಫೆಬ್ರುವರಿ 02ರ ಭಾನುವಾರ  ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದರು.  ಮಾಹಿತಿ ನೀಡುವಲ್ಲಿ ಯಾವುದೇ ವಿಳಂಬವಾಗಿಲ್ಲ, ನಾವು ಊಹೆಗೆ ಬದಲಾಗಿ ನಿಖರ ಅಂಕಿಸಂಖ್ಯೆ ಮತ್ತು ಖಚಿತ ಮತದಾನ ಪ್ರಮಾಣವನ್ನು ನೀಡಲು ಬಯಸಿದ್ದೆವುಎಂದು ಅವರು ಸಮರ್ಥಿಸಿದರು.  ವಿಧಾನಸಭೆಗೆ ನಡೆದ ಚುನಾವಣೆಯಲಿ ಶೇಕಡಾ ೬೨.೫೯ರಷ್ಟು ಮತದಾನವಾಗಿದೆ. ಇದು ಕಳೆದ ವರ್ಷ ನಡೆದ ಲೋಕಸಭಾ ಚುನಾವಣಾ ಮತದಾನ ಪ್ರಮಾಣಕ್ಕಿಂತ ಶೇಕಡಾ ೩ಷ್ಟು ಹೆಚ್ಚು ಎಂದು ಸಿಂಗ್ ಹೇಳಿದರು. ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ-ಆಪ್) ನಾಯಕ ಅರವಿಂದ ಕೇಜ್ರಿವಾಲ್ ಅವರು ಮತದಾನದ ಪ್ರಮಾಣವನ್ನು ಅಧಿಕೃತವಾಗಿ ಬಿಡುಗಡೆ ಮಾಡುವಲ್ಲಿನ ವಿಳಂಬವನ್ನು ಪ್ರಶ್ನಿಸಿದ ಗಂಟೆಗಳ ಬಳಿಕ ಚುನಾವಣಾ ಆಯೋಗದಿಂದ ಮಾಹಿತಿ ಹೊರಬಿದ್ದಿತು. ಚುನಾವಣೆ ಮುಗಿದು ಹಲವಾರು ಗಂಟೆಗಳು ಕಳೆದರೂ ಚುನಾವಣಾ ಆಯೋಗವು ಮತಚಲಾವಣೆಯ ಅಂತಿಮ ಅಂಕಿಸಂಖ್ಯೆಗಳನ್ನು ಬಹಿರಂಗ ಪಡಿಸದೇ ಇರುವುದುಸಂಪೂರ್ಣ ಆಘಾತಕಾರಿ. ಚುನಾವಣಾ ಆಯೋಗ ಏನು ಮಾಡುತ್ತಿದೆ? ಮತದಾನ ಮುಗಿದು ಹಲವಾರು ಗಂಟೆಗಳು ಕಳೆದಿದ್ದರೂ ಅವರು ಏಕೆ ಮತಚಲಾವಣೆಯ ಅಂತಿಮ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡುತ್ತಿಲ್ಲ? ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು. ಚುನಾವಣಾ ಆಯೋಗವು 2020 ಫೆಬ್ರುವರಿ 08ರ ಶನಿವಾರ ರಾತ್ರಿ ಬಿಡುಗಡೆ ಮಾಡಿದ್ದ ಮತದಾನದ ಅಂಕಿಅಂಶದ ಪ್ರಕಾರ ಶೇಕಡಾ ೬೧.೪೬ರಷ್ಟು ಮತದಾನವಾಗಿದೆ ಎಂದು ತಿಳಿಸಲಾಗಿತ್ತು.  ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಸಂಜೆ ಗಂಟೆಗೆ ಮತದಾನ ಮುಕ್ತಾಯಗೊಂಡಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)



No comments:

Post a Comment