ನಾನು ಮೆಚ್ಚಿದ ವಾಟ್ಸಪ್

Saturday, February 1, 2020

ಇಂದಿನ ಇತಿಹಾಸ History Today ಫೆಬ್ರುವರಿ 01

2020: ನವದೆಹಲಿ: ರೈತರ ಆದಾಯವನ್ನು ೨೦೨೨ರ ವೇಳೆಗೆ ದುಪ್ಪಟ್ಟುಗೊಳಿಸುವ ಗುರಿಯೊಂದಿಗೆ ಕೃಷಿ ಪುನಶ್ಚೇತನಕ್ಕೆ ಭಾರೀ ಒತ್ತು, ಮಧ್ಯಮ ವರ್ಗದ ಜನರಿಗೆ ವೈಯಕ್ತಿಕ ಆದಾಯ ತೆರಿಗೆ ಇಳಿಕೆಯ ಸಿಹಿಯ ಜೊತೆಗೇ ಸಾರ್ವಜನಿಕ ಉದ್ಯಮಗಳ ಖಾಸಗೀಕರಣದ ಪ್ರಸ್ತಾವದೊಂದಿಗೆ ಕೈಗಾರಿಕೋದ್ಯಮಕ್ಕೆ ಕಹಿ ಅನುಭವನ್ನು ನೀಡುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ  2020 ಫೆಬ್ರುವರಿ 01ರ ಶನಿವಾರ ಮಂಡಿಸಿದ ೨೦೨೦-೨೧ರ ಸಾಲಿನ ಮುಂಗಡಪತ್ರವು ಜನರಿಗೆ ಮಿಶ್ರ ಅನುಭವವನ್ನು ನೀಡಿತು.  ಕೃಷಿ ಮತ್ತು ಸಂಬಂಧಿತ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಗೆ .೮೩ ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಘೋಷಿಸಿದ ಕೇಂದ್ರ ವಿತ್ತ ಸಚಿವರು ಕೃಷಿಗೆ . ಲಕ್ಷ ಕೋಟಿ ಮೀಸಲು ಮತ್ತು. ಗ್ರಾಮೀಣಾಭಿವೃದ್ಧಿಗೆ .೨೩ ಲಕ್ಷ ಕೋಟಿ ರೂಪಾಯಿಗಳನ್ನು ಘೋಷಿಸಿದರು. ಆದರೆ, ಸಾರ್ವಜನಿಕ ಉದ್ಯಮಗಳ ಖಾಸಗೀಕರಣವನ್ನು ವಿತ್ತ ಸಚಿವರು ಪ್ರಕಟಿಸುತ್ತಿದ್ದಂತೆಯೇ ಷೇರು ಮಾರುಕಟ್ಟೆ ದಿಢೀರನೆ ಕುಸಿದು ಒಂದೇ ದಿನದಲ್ಲಿ . ಲಕ್ಷ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಏರಿರುವ ಹಿನ್ನೆಲೆ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡನೇ ಬಾರಿಗೆ ಮಂಡಿಸಿರುವ ಮುಂಗಡಪತ್ರದಲ್ಲಿ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿರುವ ಕ್ರಮಗಳಲ್ಲಿ ಬೆಂಗಳೂರು ಸಬರ್ಬನ್ ರೈಲು ಯೋಜನೆಗೆ ಒತ್ತು ಮತ್ತು ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ಮಾರ್ಗವು ಕರ್ನಾಟಕಕ್ಕೆ ಲಭಿಸಿರುವ ಪ್ರಮುಖ ಕೊಡುಗೆಗಳಾಗಿವೆ.  ಆರ್ಥಿಕತೆಯ ಕುಸಿತದ ಹಿನ್ನೆಲೆಯಲ್ಲಿ ೨೦೨೦ ಮೇಲೆ ಬಜೆಟ್ ಬಗ್ಗೆ ನಿರೀಕ್ಷೆಗಳ ಮಹಾಪೂರವಿತ್ತು. ಕುಸಿತದತ್ತ ಸಾಗುತ್ತಿರುವ ದೇಶದ ಆರ್ಥಿಕತೆಗೆ ಆಮ್ಲಜನಕ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಿದೆ ತೆರಿಗೆ ನೀತಿಯಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಅಂದಾಜಿಸಲಾಗಿತ್ತು. ಎಲ್ಲ ನಿರೀಕ್ಷೆಗಳ ಮಧ್ಯೆ, ಕೆಲವು ಹೊಸ ಯೋಜನೆಗಳನ್ನು ಘೋಷಿಸಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ ನೀಡಿತಾದರೂ ಉದ್ಯಮಿಗಳಿಗೆ ಕಹಿಯಾಗಿ ಪರಿಣಮಿಸಿತು. ದೇಶದ ಬಹುತೇಕ ಸಾರ್ವಜನಿಕ ಉದ್ಯಮವನ್ನು ಖಾಸಗಿ ಕಂಪೆನಿಗಳಿಗೆ ಧಾರೆ ಎರೆಯಲು ಮುಂದಾದ ಮುಂಗಡಪತ್ರದ ಪರಿಣಾಮವಾಗಿ ಷೇರು ಮಾರುಕಟ್ಟೆ ನೆಲ ಕಚ್ಚಿತು.  ಮಧ್ಯಮ ವರ್ಗಕ್ಕೆ ಸಿಹಿ: ವೈಯಕ್ತಿಕ ಆದಾಯ ತೆರಿಗೆ ಕಡಿತ:  ವೈಯಕ್ತಿಕ ಆದಾಯ ತೆರಿಗೆಯನ್ನು ನಿರೀಕ್ಷೆಯಂತೆಯೇ ಕೇಂದ್ರ ಸರ್ಕಾರ ಇಳಿಕೆ ಮಾಡಿತು. ನೂತನ ಆದಾಯ ತೆರಿಗೆ ನೀತಿ ಘೋಷಿಸುವ ಮೂಲಕ ಆದಾಯ ತೆರಿಗೆ ಸ್ಲ್ಯಾಬ್ ಗಳ ಸಂಖ್ಯೆಯನ್ನು ಹೆಚ್ಚಿಸಿ ವಿವಿಧ ಹಂತಗಳಿಗೆ ವಿವಿಧ ತೆರಿಗೆ ದರ ವಿಧಿಸಿತು. ನಿರ್ಮಲಾ ಸೀತಾರಾಮನ್ ಮುಂಗಡಪತ್ರ ಘೋಷಣೆಯ ಪ್ರಕಾರ ಲಕ್ಷ ರೂಪಾಯಿಗಳವರೆಗಿನ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ರಿಂದ . ಲಕ್ಷದ ರೂಪಾಯಿವರೆಗೆ ಆದಾಯ ಪಡೆಯುತ್ತಿರುವವರಿಗೆ ವಿಧಿಸಲಾಗುತ್ತಿದ್ದ ಶೇ. ೨೦ರಷ್ಟು ತೆರಿಗೆಯನ್ನು ಕಡಿತಗೊಳಿಸಿ ಶೇ. ೧೦ಕ್ಕೆ ಇಳಿಸಲಾಗಿದೆ. .೫ರಿಂದ ೧೦ ಲಕ್ಷ ರೂಪಾಯಿವರೆಗಿನ ಆದಾಯ ಇರುವವರಿಗೆ ಶೇ. ೧೫ ತೆರಿಗೆಯನ್ನು ನಿಗದಿ ಪಡಿಸಲಾಗಿದೆ. ಹಿಂದೆ ೫ರಿಂದ ೧೦ ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇ. ೨೦ರಷ್ಟು ತೆರಿಗೆ ವಿಧಿಸಲಾಗುತ್ತಿತ್ತುಹಾಗೆಯೇ, ೧೦-೧೨. ಲಕ್ಷ ರೂಪಾಯಿ ಆದಾಯಗಳಿಗೆ ಮುಂಚೆ ವಿಧಿಸಲಾಗುತ್ತಿದ್ದ ಶೇ. ೩೦ರಷ್ಟು ತೆರಿಗೆಯನ್ನು ಶೇ ೨೦ಕ್ಕೆ ಇಳಿಕೆ ಮಾಡಲಾಗಿದೆ. ೧೨.-೧೫ ಲಕ್ಷ ರೂಪಾಯಿದವರೆಗಿನ ಆದಾಯಕ್ಕೆ ತೆರಿಗೆಯನ್ನು ಶೇ. ೨೫ಕ್ಕೆ ಇಳಿಸಲಾಗಿದೆ. ಮೊದಲು ೧೦-೧೫ ಲಕ್ಷ ರೂಪಾಯಿ ಆದಾಯಕ್ಕೆ ಶೇ. ೩೦ ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ೧೫ ಲಕ್ಷ ರೂ.ಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರಿಗೆ ಶೇ. ೩೦ ತೆರಿಗೆ ಮುಂದುವರೆಯಲಿದೆ.  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಸಂಸತ್ತಿನಲ್ಲಿ ಮಂಡಿಸಿದ ೨೦೨೦-೨೧ರ ಸಾಲಿನ ಮುಂಗಡಪತ್ರವನ್ನು ’ದೂರದೃಷ್ಟಿಯ ಬಜೆಟ್’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2020 ಫೆಬ್ರುವರಿ 01ರ ಶನಿವಾರ ಶ್ಲಾಘಿಸಿದರು. ’ದೂರದೃಷ್ಟಿ ಮತ್ತು ಕ್ರಮಗಳನ್ನು ಒಳಗೊಂಡಿರುವ ದಶಕದ ಮೊದಲ ಮುಂಗಡಪತ್ರವನ್ನು ಮಂಡಿಸಿದ್ದಕ್ಕಾಗಿ ನಾನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ’ ಎಂದು ಪ್ರಧಾನಿ ಹೇಳಿದರು. ’ಮುಂಗಡಪತ್ರದಲ್ಲಿ ಪ್ರಕಟಿಸಲಾಗಿರುವ ಸುಧಾರಣೆಗಳು ಆರ್ಥಿಕತೆಗೆ ವೇಗ ನೀಡಲಿದ್ದು, ರಾಷ್ಟ್ರದ ನಾಗರಿಕರನ್ನು ಆರ್ಥಿಕವಾಗಿ ಸಬಲಗೊಳಿಸಲಿದೆ ಮತ್ತು ಈ ದಶಕದಲ್ಲಿ ಆರ್ಥಿಕತೆಗೆ ಭದ್ರ ಬುನಾದಿಯನ್ನು ಹಾಕಲಿದೆ. ಈ ವರ್ಷದ ಮುಂಗಡಪತ್ರವು ಕೃಷಿ, ಮೂಲಸವಲತ್ತು, ಜವುಳಿ ಮತ್ತು ತಂತ್ರಜ್ಞಾನ ಈ ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ಪ್ರಧಾನಿ ನುಡಿದರು.  ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಮತ್ತು ನೂತನ ವಿಧಾನಗಳ ಬಗ್ಗೆ ಗಮನ ಹರಿಸುವ ಮೂಲಕ ಸಮಗ್ರ ದೃಷ್ಟಿಕೋನವನ್ನು ಸೀತಾರಾಮನ್ ಅವರು ಅಂಗೀಕರಿಸಿದ್ದನ್ನು ಪ್ರಸ್ತಾಪಿಸಿದ ಮೋದಿ, ’ಇದು ಈ ರಂಗದಲ್ಲಿ ಉದ್ಯೋಗವನ್ನು ಸೃಷ್ಟಿಸಲಿದೆ ಮತ್ತು  ಮೀನು ಸಂಸ್ಕರಣೆ ಮತ್ತು ಮಾರುಕಟ್ಟೆಯಂತಹ ಕ್ಷೇತ್ರಗಳಲ್ಲಿ ಯುವಕರಿಗೆ ಅವಕಾಶಗಳನ್ನು ತೆರೆಯಲಿದೆ’ ಎಂದು ಹೇಳಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಭಾರತಕ್ಕೆ ಜಾಗತಿಕ ಮೌಲ್ಯ ಸರಣಿಯ ಪಾಲುದಾರನಾಗಲು ನೆರವಾಗಲಿದೆ ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಓರ್ವನಾದ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2020 ಫೆಬ್ರುವರಿ 01ರ ಶನಿವಾರ ತಿರಸ್ಕರಿಸಿದರು. ರಾಷ್ಟ್ರಪತಿಯವರು ಶನಿವಾರ ಬೆಳಿಗ್ಗೆ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು.  ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಶನಿವಾರ ಮುಂಜಾನೆ ಗಲ್ಲು ಶಿಕ್ಷೆ ಜಾರಿಗೊಳಿಸಲು  ’ಡೆತ್ ವಾರಂಟ್’ ಹೊರಡಿಸಲಾಗಿತ್ತು. ಆದರೆ ಪಾಟಿಯಾಲ ಹೌಸ್ ಕೋರ್ಟ್ ಶುಕ್ರವಾರ ಸಂಜೆ ಅದಕ್ಕೆ ತಡೆಯಾಜ್ಷೆ ನೀಡಿತ್ತು. ೨೦೧೨ರ ಡಿಸೆಂಬರ್ ೧೬ರಂದು ದೆಹಲಿಯ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ೬ ಮಂದಿ ಚಲಿಸುತ್ತಿದ್ದ ಬಸ್ಸಿನಲ್ಲಿ ಅತ್ಯಾಚಾರ ಮಾಡಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ಲಂಡನ್: ಐರೋಪ್ಯ ಒಕ್ಕೂಟದಿಂದ (ಯುರೋಪಿಯನ್ ಯೂನಿಯನ್)  ಬ್ರಿಟನ್ ದೇಶ 2020 ಫೆಬ್ರುವರಿ 01ರ ಶನಿವಾರ ಅಧಿಕೃತವಾಗಿ ಹೊರಬಂದಿತು. ಇದರೊಂದಿಗೆ ೩-೪ ವರ್ಷಗಳಿಂದ ಹೊಯ್ದಾಡುತ್ತಿದ್ದ ಬ್ರೆಕ್ಸಿಟ್ (ಬ್ರಿಟನ್ ಎಕ್ಸಿಟ್) ಕೊನೆಗೂ ಜಾರಿಗೆ ಬಂದಿತು. ಈ ಚಾರಿತ್ರಿಕ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇದನ್ನು ’ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದರು. “ನಮ್ಮ ಶ್ರೇಷ್ಠ ರಾಷ್ಟ್ರೀಯ ನಾಟಕದ ಹೊಸ ಆಟಕ್ಕೆ ಪರದೆ ತೆರೆಯಲಾಗಿದೆ” ಎಂದು ಜಾನ್ಸನ್ ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸಿದರು. ೪೭ ವರ್ಷಗಳಿಂದ ಅಸ್ತಿತ್ವದಲ್ಲಿರುವ ಯೂರೋಪಿಯನ್ ಯೂನಿಯನ್ ನ  ಸದಸ್ಯತ್ವದಿಂದ ಹೊರ ಬಂದ ಮೊದಲ ರಾಷ್ಟ್ರ ಬ್ರಿಟನ್ ಆಗಿದ್ದು, ಇದರೊಂದಿಗೆ  ಇಂಗ್ಲೆಂಡ್ ಮತ್ತೆ ತನ್ನ ಸಾರ್ವಭೌಮತ್ವವನ್ನು ಹೊಂದಿತು.  ೨೦೧೬ರಲ್ಲೇ ಬ್ರಿಟನ್ನಿನಲ್ಲಿ  ಬ್ರೆಕ್ಸಿಟ್ ವಿಚಾರವಿಟ್ಟುಕೊಂಡು ಜನಮತಗಣನೆ  ನಡೆದಿತ್ತು. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ದೇಶ ಹೊರಬರಬೇಕೆಂಬುದು ಕನ್ಸರ್ವೇಟಿವ್ ಪಕ್ಷದ ನಿಲುವಾಗಿತ್ತು .ಆ ಜನಮತಗಣನೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಬ್ರಿಟನ್ ಪ್ರಜೆಗಳು ಬಹುಮತ ಕೊಟ್ಟಿದ್ದರು.  ಆದರೆ, ಬ್ರೆಕ್ಸಿಟ್ ಒಪ್ಪಂದದ ಕೆಲವು ಅಂಶಗಳ ಕಾರಣದಿಂದ ಅದರ ಜಾರಿ  ಸಾಧ್ಯವಾಗಿರಲಿಲ್ಲ. ಅಧಿಕೃತವಾಗಿ ಬ್ರೆಕ್ಸಿಟ್ ಪೂರ್ಣಗೊಳಿಸಲು ೪ ವರ್ಷ ಬೇಕಾಯಿತು. ಇದೀಗ ಬ್ರೆಕ್ಸಿಟ್ ಜಾರಿಯಾಗಿದ್ದರೂ, ಒಕ್ಕೂಟದಿಂದ ಬ್ರಿಟನ್ ಈಗಿಂದೀಗಲೇ ಸಂಪೂರ್ಣವಾಗಿ ಬೇರ್ಪಡುವುದಿಲ್ಲ. ಬ್ರೆಕ್ಸಿಟ್ ಒಪ್ಪಂದದ ಪ್ರಕಾರ ಡಿಸೆಂಬರಿನವರೆಗೂ  ಬದಲಾವಣೆಯ (ಟ್ರಾನ್ಸಿಷನ್)  ಅವಧಿಯನ್ನು ನಿಗದಿ ಪಡಿಸಲಾಗಿದೆ.  ಬದಲಾವಣೆಯ  ಅವಧಿಯವರೆಗೆ ಬ್ರಿಟನ್ ದೇಶದ ನೀತಿಗಳಲ್ಲಿ ಒಂದೊಂದೇ ಬದಲಾವಣೆ ತರಲಾಗುತ್ತದೆ. ಡಿಸೆಂಬರಿನ ವೇಳೆಗೆ ಐರೋಪ್ಯ ಒಕ್ಕೂಟದಿಂದ ಇಂಗ್ಲೆಂಡ್ ಸಂಪೂರ್ಣವಾಗಿ ಸ್ವತಂತ್ರಗೊಳ್ಳಲಿದೆ.  ಯೂರೋಪ್ ಒಕ್ಕೂಟ ಪ್ರಾರಂಭಗೊಂಡಿದ್ದು ೧೯೫೮ರಲ್ಲಿ. ಇಡೀ ಯೂರೋಪ್ ಖಂಡಕ್ಕೆ ಒಂದೇ ನೀತಿ ನಿಯಮಾವಳಿಗಳನ್ನು ರೂಪಿಸುವುದು ಹಾಗೂ ಒಗ್ಗಟ್ಟು ಸಾಧಿಸುವುದು ಈ ಒಕ್ಕೂಟ ರಚನೆಯ ಉದ್ದೇಶವಾಗಿತ್ತು. ಆಗ ರಾಜಕೀಯ ಮತ್ತು ಆರ್ಥಿಕವಾಗಿ ಸಾಮಾನ್ಯ ನಿಯಮಗಳನ್ನು ರೂಪಿಸಲಾಗಿತ್ತು. ಬ್ರಿಟನ್ ಸೇರಿ ಯೂರೋಪಿನ  ೨೮ ರಾಷ್ಟ್ರಗಳು  ಒಕ್ಕೂಟದ ಸದಸ್ಯತ್ವ ಹೊಂದಿದ್ದವು. ಈಗ ಬ್ರಿಟನ್ ಹೊರಬಂದಿರುವುದಿಂದ ಒಕ್ಕೂಟದಲ್ಲಿ ೨೭ ದೇಶಗಳು ಉಳಿದಂತಾಗಿದೆ. ಒಕ್ಕೂಟದಲ್ಲಿ ಕೃಷಿ, ವಲಸೆ, ವ್ಯಾಪಾರ ಇತ್ಯಾದಿ ಅನೇಕ ವಿಚಾರಗಳಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಅನ್ವಯಿಸುವಂತೆ ಸಾಮಾನ್ಯ ನಿಯಮಾವಳಿಯನ್ನು ರೂಪಿಸಲಾಗಿತ್ತು. ಆದರೆ, ಈ ಸಾಮಾನ್ಯ ನಿಯಮಾವಳಿಗಳ ಬಗ್ಗೆ ಬ್ರಿಟನ್ ದೇಶ ಕೆಲ ವರ್ಷಗಳ ಹಿಂದೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಪ್ರಾರಂಭಿಸಿತು. ವಲಸಿಗರು ಸಮಸ್ಯೆ, ವ್ಯಾಪಾರ ಇತ್ಯಾದಿ ವಿಚಾರಗಳಲ್ಲಿ ಬ್ರಿಟನ್ ಪ್ರತ್ಯೇಕ ನಿಲುವು ಹೊಂದಿತ್ತು. ಅದರಿಂದಾಗಿಯೇ ಇಂಗ್ಲೆಂಡ್ ದೇಶವು ಯೂರೋಪ್ ಒಕ್ಕೂಟದಿಂದ ಹೊರಬಿದ್ದಿತು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ) 




No comments:

Post a Comment