Wednesday, February 12, 2020

ಇಂದಿನ ಇತಿಹಾಸ History Today ಫೆಬ್ರುವರಿ 12

2020: ನವದೆಹಲಿ: ಜಪಾನ್ ಕರಾವಳಿಯಲ್ಲಿರುವ ವಿಹಾರ ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ನೂತನ ಕೊರೋನಾವೈರಸ್  ಸೋಂಕು  ಬಾಧಿಸಿರುವುದು ದೃಢಪಟ್ಟಿದೆ ಎಂದು ಜಪಾನಿನಲ್ಲಿನ ಭಾರತೀಯ ರಾಯಭಾರ ಕಚೇರಿ  2020 ಫೆಬ್ರುವರಿ 13ರ ಬುಧವಾರ ತಿಳಿಸಿದೆ. ನೌಕೆಯಲ್ಲಿದ್ದ ಒಟ್ಟು ೧೭೪ ಮಂದಿಗೆ ಮಾರಕ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತ ಪಟ್ಟಿದೆ ಎಂದೂ ಅಧಿಕಾರಿಗಳು ಹೇಳಿದರು.  ,೭೧೧ ಮಂದಿ ಇದ್ದ ವಿಹಾರ ನೌಕೆ ಡೈಮಂಡ್ ಪ್ರಿನ್ಸೆಸ್ ಜಪಾನೀ ಕರಾವಳಿಗೆ ಕಳೆದ ವಾರಾರಂಭದಲ್ಲಿ ಆಗಮಿಸಿತ್ತು. ಕಳೆದ ತಿಂಗಳು ನೌಕೆಗೆ ಕೊರೋನಾವೈರಸ್ನ್ನು ತಂದಿದ್ದ ಎನ್ನಲಾದ ವ್ಯಕ್ತಿ ಹಾಂಕಾಂಗ್ನಲ್ಲಿ ಇಳಿದ ಬಳಿಕ ನೌಕೆಯನ್ನು ಕಳೆದ ವಾರಾರಂಭದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತುಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ನೌಕೆಯಲ್ಲಿ ಒಟ್ಟು ೧೩೮ ಮಂದಿ ಭಾರತೀಯರು ಇದ್ದರು.  ‘ನೂತನ ಕೊರೋನಾವೈರಸ್ ಸೋಂಕು ಬಾಧಿಸಿದೆ ಎಂಬ ಶಂಕೆಯಲ್ಲಿ ನೌಕೆಯನ್ನು ಜಪಾನೀ ಅಧಿಕಾರಿಗಳು ೨೦೨೦ ಫೆಬ್ರುವರಿ ೧೯ರವರೆಗೆ ಪ್ರತ್ಯೇಕವಾಗಿ ಇರಿಸಿತ್ತುಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ’ಇಬ್ಬರು ಭಾರತೀಯ ಸಿಬ್ಬಂದಿ ಸೇರಿದಂತೆ ಒಟ್ಟು ೧೭೪ ಮಂದಿಗೆ ಕೊರೋನಾವೈರಸ್ ಸೋಂಕು ತಗುಲಿರುವುದ ದೃಢಪಟ್ಟಿದೆಎಂದು ಹೇಳಿಕೆ ತಿಳಿಸಿತು. ಸೋಂಕು ಬಾಧಿತರನ್ನು ಜಪಾನೀಯ ಆರೋಗ್ಯ ಪ್ರೊಟೋಕಾಲ್ ಪ್ರಕಾರ ಇನ್ನಷ್ಟು ಏಕಾಂಗಿವಾಸ ಸೇರಿದಂತೆ ಸೂಕ್ತ ಚಿಕಿತ್ಸೆ ಸಲುವಾಗಿ ಆಸ್ಪತ್ರೆಗಳಿಗೆ ಒಯ್ಯಲಾಗಿದೆ ಎಂದೂ ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪದ್ಮಶ್ರೀ ಪುರಸ್ಕೃತ್ದ ಖ್ಯಾತ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ಅವರು 2020 ಫೆಬ್ರುವರಿ 13ರ ಬುಧವಾರ ತಮ್ಮ ಗೋವಾದ ನಿವಾಸದಲ್ಲಿ ನಿಧನರಾದರು.  ಅವರಿಗೆ ೫೯ ವರ್ಷ ವಯಸ್ಸಾಗಿತ್ತು. ವಿನ್ಯಾಸಗಾರರಾಗಿ ಖ್ಯಾತಿ ಪಡೆದಿದ್ದ ರಾಡ್ರಿಕ್ಸ್ ಅವರು ತಮ್ಮ ಸಾಮಾಜಿಕ ಸೇವಾ ಕಾರ್ಯಗಳಿಗಾಗಿಯೂ ಪರಿಚಿತರಾಗಿದ್ದರು. ೨೦೧೪ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ನೀಡಲಾಗಿತ್ತು. ಬಾಲಿವುಡ್ ನಲ್ಲಿ ಚಿತ್ರ ನಟ, ನಟಿಯರ ಜೊತೆಗಿನ ವೆಂಡೆಲ್ ರಾಡ್ರಿಕ್ಸ್ ಅವರ ಒಡನಾಟ ಅವರ ವಿನ್ಯಾಸಗಳಿಗಷ್ಟೇ ಸೀಮಿತವಾಗಿರಲಿಲ್ಲರಾಡ್ರಿಕ್ಸ್ ಅವರು ೨೦೦೩ರಲ್ಲಿ ಬೂಮ್ ಚಿತ್ರದಲ್ಲಿ ಅತಿಥಿ ಪಾತ್ರ ವಹಿಸಿದ್ದರು. ೨೦೦೨ರಲ್ಲಿ ಅವರು ಟೆಲಿವಿಷನ್ ನಾಟಕಟ್ರು ವೆಸ್ಟ್ನಲ್ಲಿ ನಟಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರ ೨೦೦೮ರ ಫಿಲ್ಮ್ ಫ್ಯಾಷನ್ ನಲ್ಲೂ ಅವರು ಕಾಣಿಸಿಕೊಂಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ೨೦೦೮ರಲ್ಲಿ  ೧೬೬ ಮಂದಿಯನ್ನು ಬಲಿತೆಗೆದುಕೊಂಡ ಮುಂಬೈ ದಾಳಿಗಳ ಸೂತ್ರಧಾರಿ  ಜಮಾತ್-ಉದ್-ದವಾ (ಜೆಯುಡಿ) ಹಾಗೂ ಲಷ್ಕರ್ -- ತೊಯ್ಬಾ (ಎಲ್ಇಟಿ) ಮುಖ್ಯಸ್ಥ ಹಫೀಜ್ ಸಯೀದ್ಗೆ ಪಾಕಿಸ್ತಾನಿ ನ್ಯಾಯಾಲಯವೊಂದು ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ್ದಕ್ಕಾಗಿ 2020 ಫೆಬ್ರುವರಿ 13ರ ಬುಧವಾರ ಐದು ವರ್ಷಗಳ ಸೆರೆವಾಸವನ್ನು ವಿಧಿಸಿತು.
 ೨೦೦೮ರ ಮುಂಬೈ ಭಯೋತ್ಪಾದಕ ದಾಳಿಗಳ ಬಳಿಕ ಹಫೀಜ್ ಸಯೀದ್ ಸೆರೆವಾಸದ ಶಿಕ್ಷೆಗೆ ಗುರಿಯಾಗಿರುವುದು ಇದೇ ಪ್ರಪ್ರಥಮ. ಹಫೀಜ್ ಸಯೀದ್ ನಿಷೇಧಿತ ಭಯೋತ್ಪಾದಕ ಸಂಘಟನೆಯ ಭಾಗವಾಗಿದ್ದ ಮತ್ತು ಅಕ್ರಮ ಸಂಪತ್ತು ಹೊಂದಿದ್ದ ವಿಚಾರಗಳಲ್ಲಿ ತಪ್ಪಿತಸ್ಥ ಎಂಬುದು ಸಾಬೀತಾಗಿದೆ ಎಂದು ಆತನ ವಕೀಲ ಇಮ್ರಾನ್ ಗಿಲ್ ಹೇಳಿದರು. ಪಾಕಿಸ್ತಾನವನ್ನು ಕಪ್ಪು ಪಟ್ಟಿ ಅಥವಾ ಬೂದು ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ಪ್ಯಾರಿಸ್ಸಿನಲ್ಲಿ ನಡೆಯಲಿರುವ ಹಣಕಾಸು ಕಾರ್ ಪಡೆಯ (ಎಫ್ಎಟಿಎಫ್) ವಿಚಾರಣೆಗೆ ಎರಡು ದಿನ ಮುಂಚಿತವಾಗಿ ಪಾಕಿಸ್ತಾನದಲ್ಲಿ ಬೆಳವಣಿಗೆಯಾಗಿದೆ. ‘ಡಾನ್ಪತ್ರಿಕಾ ವರದಿಯ ಪ್ರಕಾರ ಸಯೀದ್ಗೆ ಎರಡೂ ಪ್ರಕರಣಗಳಲ್ಲಿ ಸೆರೆವಾಸದ ಜೊತೆಗೆ ತಲಾ ೧೫,೦೦೦ ರೂಪಾಯಿಗಳ ದಂಡವನ್ನೂ ವಿಧಿಸಲಾಗಿದೆ. ಉಭಯ ಪ್ರಕರಣಗಳ ಶಿಕ್ಷೆಗಳನ್ನೂ ಸಯೀದ್ ಏಕಕಾಲದಲ್ಲೇ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ಮುನ್ನ ಮಂಗಳವಾರ ಲಾಹೋರಿನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು (ಎಟಿಸಿ) ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪಗಳಿಗೆ ಸಂಬಂಧಿಸಿದಂತೆ ತನ್ನ ಹಾಗೂ ನಿಕಟವರ್ತಿಗಳ ವಿರುದ್ಧದ ಎಲ್ಲಆರು ಪ್ರಕರಣಗಳನ್ನು ಒಟ್ಟುಗೂಡಿಸುವಂತೆ ಸಯೀದ್ ಮಾಡಿದ ಮನವಿಯನ್ನು ಅಂಗೀಕರಿಸಿತ್ತು. ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ದೈನಂದಿನ ವಿಚಾರಣೆಗಳ ಬಳಿಕ ಡಿಸೆಂಬರ್ ೧೧ರಂದು ಸಯೀದ್ ಮತ್ತು ಆತನ ನಿಕಟವರ್ತಿಗಳು ಭಯೋತ್ಪಾದನೆಗೆ ನೆರವು ನೀಡಿದ ಪ್ರಕರಣಗಳಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ’ಹಳೆಯ ಮಹಾನ್ ಪಕ್ಷಕ್ಕೆ ಈಗ ಹೋರಾಟದ ಸಮಯಎಂಬುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಳಿಕ ಬುಧವಾರ ಇಲ್ಲಿ ಹೇಳಿದರು.  ‘ಸಾರ್ವಜನಿಕರು ಏನು ಮಾಡುತ್ತಾರೋ ಅದು ಸರಿ. ನಮಗೆ ಇದೀಗ ಹೋರಾಟದ ಸಮಯ. ನಾವು ಬಹಳಷ್ಟು ಹೋರಾಟ ಮಾಡಬೇಕಾಗಿದೆ, ಮತ್ತು ನಾವು ಹೋರಾಡುತ್ತೇವೆಎಂದು ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶಗಳಿಗೆ ಆಜಂಗಢದ ಬಿಲಾರಿಗಂಜ್ನಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಅವರು ಪ್ರತಿಕ್ರಿಯಿಸಿದರು. ಸತತ ಎರಡನೇ ಬಾರಿಗೆ ದೆಹಲಿಯ ವಿಧಾನಸಭಾ ಚುನಾವಣೆಗಳಲ್ಲಿ ಒಂದು ಸ್ಥಾನವನ್ನು ಗಳಿಸಲು ಕೂಡಾ ಕಾಂಗ್ರೆಸ್ ವಿಫಲವಾಗಿದೆ. ೭೦ ಸದಸ್ಯಬಲದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ೬೬ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಮೂವರು ಮಾತ್ರ ತಮ್ಮ ಭದ್ರತಾ ಠೇವಣಿ ಉಳಿಸಿಕೊಳ್ಳಲು ಸಫಲರಾಗಿದ್ದಾರೆ. ಶೇಕಡಾ ೨೧.೪೩ರಷ್ಟು ಮತಗಳ ಪಾಲು ಪಡೆಯುವಲ್ಲಿ ಸಫಲರಾದ ಕಸ್ತೂರ್ಬಾ ನಗರದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ದತ್ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅತ್ಯಂತ ಹೆಚ್ಚು ಮತಪಾಲು ಪಡೆದವರಾಗಿದ್ದಾರೆ. ಪಕ್ಷದ ಪರಾಭವಕ್ಕೆ ಇಬ್ಬರು ಪ್ರಮುಖರು ಈಗಾಗಲೇ ಹೊಣೆ ಹೊತ್ತಿದ್ದಾರೆ. ದೆಹಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿದ ಪಿಸಿ ಚಾಕೋ ಅವರು ತಮ್ಮ ಹುದ್ದೆಗೆ ಚುನಾವಣಾ ಫಲಿತಾಂಶ ಪ್ರಕಟಗೊಂಡ ಮರುದಿನವಾದ ಬುಧವಾರ ರಾಜೀನಾಮೆ ನೀಡಿದ್ದಾರೆ. ದೆಹಲಿ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸುಭಾಶ್ ಛೋಪ್ರಾ ಅವರು ಮಂಗಳವಾರ, ಕಾಂಗ್ರೆಸ್ ದೋಣಿ ಹೇಳಹೆಸರಿಲ್ಲದಂತೆ ಮುಳುಗುತ್ತಿದ್ದಂತೆಯೇ ರಾಜೀನಾಮೆ ನೀಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020; ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನತದೃಷ್ಟ ಸಂತ್ರಸ್ಥೆಯ ತಾಯಿ ಆಶಾದೇವಿ 2020 ಫೆಬ್ರುವರಿ 13ರ ಬುಧವಾರ ಮತ್ತೆ ನ್ಯಾಯಾಲಯದಲ್ಲಿ ಅಳುತ್ತಾ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಗಾಗಿ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸುವಂತೆ ಮನವಿ ಮಾಡಿದರು.  ‘ಒಂದೂವರೆ ವರ್ಷದಿಂದ ನಾನು ಇಲ್ಲಿಗೆ ಬರುತ್ತಿದ್ದೇನೆ. ಅವರು ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಚಲಾಯಿಸಲಿ ಎಂದು ನಾನು ಇಲ್ಲಿ ಕಾಯುತ್ತಾ ಇದ್ದೇನೆ. ಆದಾಗ್ಯೂ, ನಾನು ಸಂತ್ರಸ್ಥೆಯ ತಾಯಿ, ನನಗೂ ಕೆಲವು ಹಕ್ಕುಗಳಿವೆ. ದಯಮಾಡಿ ಡೆತ್ ವಾರಂಟ್ ನೀಡಿ ಎಂದು ನಾನು ನಿಮಗೆ ಮನವಿ ಮಾಡುತ್ತಿದ್ದೇನೆಎಂದು ಆಶಾದೇವಿ ಮೊರೆ ಇಟ್ಟರು. ನ್ಯಾಯಾಲಯವು ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತನಿಗೆ ಕಾನೂನು ನೆರವು ನೀಡಲು ಮುಂದಾದಾಗ ಆಶಾದೇವಿ ಅವರು ಕಣ್ಣೀರುಗರೆಯುತ್ತಾ ಮನವಿ ಮಾಡಿದರು. ನ್ಯಾಯಾಲಯದಲ್ಲಿ ಹಾಜರಾಗಿದ್ದ ಪವನ್ ಗುಪ್ತನ ತಂದೆ ಯಾವ ವಕೀಲರೂ ತನ್ನ ಮಗನ ಪ್ರಕರಣವನ್ನು ತೆಗೆದುಕೊಳ್ಳಲು ಇಷ್ಟ ಪಡುತ್ತಿಲ್ಲ. ಆದ್ದರಿಂದ ತಮಗೆ ಸ್ವಲ್ಪ ಕಾಲಾವಕಾಶ ಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ೨೩ರ ಹರೆಯದ ನತದೃಷ್ಟ ಯುವತಿಯ ತಂದೆ ಪವನ ಗುಪ್ತನಿಗೆ ಕಾನೂನಿನ ನೆರವು ನೀಡಲು ನ್ಯಾಯಾಲಯ ಮುಂದಾದುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಆದರೆ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧಮೇಂದರ್ ರಾಣಾ ತಾವು ಕಾನೂನನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು. ‘ಮರಣದಂಡನೆಗೆ ಗುರಿಯಾದ ಯಾರೇ ಶಿಕ್ಷಿತ ಅಪರಾಧಿಗೂ ತನ್ನ ಉಸಿರಿನ ಕೊನೆಯವರೆಗೂ ಕಾನೂನು ನೆರವು ಪಡೆಯುವ ಅವಕಾಶವಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಡುತ್ತದೆಎಂದು ನ್ಯಾಯಾಧೀಶರು ಹೇಳಿದರು.ಗುಪ್ತನ ಪರವಾಗಿ ವಕೀಲನ ನೇಮಕಾತಿಯನ್ನು ಅಂತಿಮಗೊಳಿಸುವಂತೆ ಸೂಚಿಸಿದ ನ್ಯಾಯಾಲಯ ವಿಷಯವನ್ನು ಗುರುವಾರಕ್ಕೆ ಮುಂದೂಡಿತು. ಆಶಾದೇವಿ ಅವರು ಸಿಟ್ಟಿನಿಂದಲೇ ನ್ಯಾಯಾಲಯದಿಂದ ಹೊರಕ್ಕೆ ನಡೆದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment