Saturday, February 15, 2020

ಇಂದಿನ ಇತಿಹಾಸ History Today ಫೆಬ್ರುವರಿ 15

ಇಂದಿನ ಇತಿಹಾಸ  HistoryToday ಫೆಬ್ರುವರಿ15 

2020: ಮಂಗಳೂರು/ ಬೆಂಗಳೂರುದಕ್ಷಿಣ ಕನ್ನಡಉಡುಪಿ ಒಳಗೊಂಡಂತೆ ಕರಾವಳಿಯ ಜನಪ್ರಿಯ ಕ್ರೀಡೆಯಾದ ಕಂಬಳದಲ್ಲಿ 100 ಮೀಟರ್ ದೂರವನ್ನು ಕೋಣಗಳನ್ನು ಓಡಿಸುತ್ತಾ 9.55 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಮೂಡಬಿದ್ರಿಯ ಶ್ರೀನಿವಾಸ ಗೌಡ ಅವರು ಜಮೈಕಾದ ಅತಿವೇಗದ ಓಟಗಾರ ಉಸೇನ್ ಬೋಲ್ಟ್ ಅವರ  ಜಾಗತಿಕ ಒಲಿಂಪಿಕ್ ದಾಖಲೆಯನ್ನು ಮುರಿದದ್ದು, ಕೇಂದ್ರ ಸಚಿವ ಕಿರಣ್ ರಿಜಿಜು ಸೇರಿದಂತೆ ಸರ್ವತ್ರ  ಗಮನ ಸೆಳೆಯಿತು.  100 ಮೀಟರ್ ದೂರವನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 9.58 ಸೆಕೆಂಡುಗಳಲ್ಲಿ ಕ್ರಮಿಸಿದ ಉಸೇನ್ ಬೋಲ್ಟ್ ಅವರದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು. ಶ್ರೀನಿವಾಸ ಗೌಡ  ಅವರು 142.5 ಮೀಟರ್ ದೂರವನ್ನು ಕೇವಲ 13.62 ಸೆಕೆಂಡುಗಳಲ್ಲಿ ಕ್ರಮಿಸಿದರು. ಕಾರ್ಕಳ ಸಮೀಪ ಐಕಳದಲ್ಲಿ ಫೆಬ್ರುವರಿ  1ರಂದು ಈ  ಕಂಬಳ ಸ್ಪರ್ಧೆ ನಡೆದಿತ್ತು. ಟ್ವಿಟ್ಟರಿನಲ್ಲಿ ಶ್ರೀನಿವಾಸ ಗೌಡ ಅವರ ಸಾಧನೆಗೆ ವ್ಯಾಪಕ ಪ್ರಸಂಸೆ ಲಭಿಸುತ್ತಿದ್ದಂತೆಯೇ ಅವರಿಗೆ ಸೂಕ್ತ ತರಬೇತಿ ನೀಡಿ ಒಲಿಂಪಿಕ್ಸ್ ಗೆ ಕಳಿಸುವ ಸಿದ್ಧತೆಗೆ ಸರ್ಕಾರವು ಸಜ್ಜಾಯಿತು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಲು ಮತ್ತು ಚರ್ಚಿಸಲು ಸಿದ್ಧರಿದ್ದೇವೆ ಎಂದು ಶಾಹೀನ್ ಬಾಗ್ಲ್ ಪ್ರತಿಭಟನಾಕಾರರು 2020 ಫೆಬ್ರುವರಿ 15ರ ಶನಿವಾರ ಹೇಳಿದರು.  2020 ಫೆಬ್ರುವರಿ 16ರ ಭಾನುವಾರ ಶಾ ಅವರ ಜೊತೆಗೆ ಚರ್ಚೆಗೆ ಸಿದ್ಧರಿದ್ದೇವೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ, ಆದರೆ ಅಂತಹ ಯಾವುದೇ ಸಭೆ ಭಾನುವಾರಕ್ಕೆ ನಿಗದಿಯಾಗಿಲ್ಲ ಎಂದು ಗೃಹ ಸಚಿವಾಲಯ ಮೂಲಗಳು ಹೇಳಿದವು. ಆಗ್ನೇಯ ದೆಹಲಿಯಲ್ಲಿನ ಶಾಹೀನ್ ಬಾಗ್ಲ್ಲಿ ಬಹುತೇಕ ಮಹಿಳೆಯರನ್ನೇ ಒಳಗೊಂಡ ಪ್ರತಿಭಟನಾಕಾರರು ಡಿಸೆಂಬರ್ ಮಧ್ಯಭಾಗದಿಂದ ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಬಯಸುವ ಯಾರಾದರೂ ತಮ್ಮ ಕಚೇರಿಯಿಂದ ಅದಕ್ಕಾಗಿ ಸಮಯವನ್ನು ಪಡೆಯಬಹುದು ಎಂದು ಅಮಿತ್ ಶಾ ಅವರು ಹೇಳಿದ ಒಂದು ದಿನದ ನಂತರ ಬೆಳವಣಿಗೆ ನಡೆಯಿತು. "ಮಾತುಕತೆಗಾಗಿ (ನಾವು) ಮೂರು ದಿನಗಳಲ್ಲಿ ಸಮಯವನ್ನು ನೀಡುತ್ತೇವೆ" ಎಂದು ಅಮಿತ್ ಶಾ ಅವರು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ ತಿಳಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಸಾಲಗ್ರಸ್ತ ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಯು ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಬಾಕಿ ಪಾವತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ, ಆದರೆ, ಭಾರತದಲ್ಲಿ ವ್ಯವಹಾರ ಮುಂದುವರಿಕೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿದೆ. ಭಾರತದಲ್ಲಿ ವ್ಯವಹಾರ ಮುಂದುವರಿಕೆಯು ಸುಪ್ರೀಂಕೋರ್ಟ್ ನೀಡುವ ಅನುಕೂಲಕರ ತೀರ್ಪನ್ನು ಅವಲಂಬಿಸಿದೆ ಎಂದು ಸಂಸ್ಥೆಯು  2020 ಫೆಬ್ರುವರಿ 15ರ ಶನಿವಾರ ತಿಳಿಸಿತುಎಜಿಆರ್ ಬಾಕಿಗೆ ಪಾವತಿ ಮಾಡಬಹುದಾದ ಮೊತ್ತವನ್ನು ಸಂಸ್ಥೆಯು ಅಂದಾಜು ಮಾಡುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹೊಂದಾಣಿಕೆಯ ಒಟ್ಟು ಆದಾಯ ಬಾಕಿ ಪಾವತಿಸುವ ಪ್ರಕ್ರಿಯೆಯಲ್ಲಿದೆ ಎಂದು ಕಂಪೆನಿಯು ಹೇಳಿತುಆದಾಗ್ಯೂ, ಭಾರತದಲ್ಲಿ ವ್ಯವಹಾರವನ್ನು ಮುಂದುವರೆಸುವುದು ತಾನು ಸಲ್ಲಿಸಿರುವ ಮಾರ್ಪಾಡು ಮನವಿಯ ಮೇಲೆ ಸುಪ್ರೀಂ ಕೋರ್ಟ್ ನೀಡಬಹುದಾದ ಅನುಕೂಲಕರ ಆದೇಶವನ್ನು ಅವಲಂಬಿಸಿರುತ್ತದೆ ಎಂದು ಕಂಪೆನಿ ಹೇಳಿತು. ‘ಕಂಪನಿಯು ಪ್ರಸ್ತುತ ೨೪ ಅಕ್ಟೋಬರ್ ೨೦೧೯ ಆದೇಶದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದಂತೆ ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಆಧಾರಿತ ಲೆಕ್ಕಾಚಾರದ ಬಾಕಿ ಮೊತ್ತವನ್ನು ಟೆಲಿಕಾಂ ಇಲಾಖೆಗೆ (ಡಿಒಟಿ) ಪಾವತಿಸಲು ಬೇಕಾದ ಅಂದಾಜು ಮೊತ್ತದ ಲೆಕ್ಕ ಹಾಕುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಅಂದಾಜು ಮಾಡಿದ ಮೊತ್ತವನ್ನು ಪಾವತಿಸಲು, ಕ್ರಮ ವಹಿಸುವುದಾಗಿ ವೊಡಾಫೋನ್ ಐಡಿಯಾ ಬಿಎಸ್ ಫೈಲಿಂಗ್ಸ್ ನಲ್ಲಿ ತಿಳಿಸಿದೆ. ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್), ೨೪,೭೨೯ ಕೋಟಿ ರೂಪಾಯಿ ತರಂಗಾಂತರ  ಬಾಕಿ ಮತ್ತು, ೨೮,೩೦೯ ಕೋಟಿ ರೂಪಾಯಿ ಪರವಾನಗಿ ಶುಲ್ಕ ಸೇರಿದಂತೆ ಸುಮಾರು, ೫೩,೦೩೮ ಕೋಟಿ ರೂಪಾಯಿ ಬಾಕಿಯನ್ನು ಪಾವತಿ ಮಾಡಬೇಕಾಗಿದೆ ಎಂದು ಅಂದಾಜಿಸಲಾಗಿದೆ, ಯಾವುದೇ ಪರಿಹಾರ ನೀಡದಿದ್ದರೆ ವ್ಯವಹಾರ ಸ್ಥಗಿತಗೊಳಿಸುವ ಬಗ್ಗೆ ಕಂಪೆನಿ ಈಗಾಗಲೇ ಎಚ್ಚರಿಕೆ ನೀಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ವಿಭಿನ್ನ ತತ್ವ ಸಿದ್ದಾಂತಗಳ ಒಕ್ಕೂಟವಾಗಿರುವ ಮಹಾರಾಷ್ಟ್ರದ ಆಡಳಿತಾರೂಢಮಹಾರಾಷ್ಟ್ರ ವಿಕಾಸ ಅಘಾಡಿಗೆ ಇನ್ನೊಂದು ಪರೀಕ್ಷೆ ಎದುರಾಗಿದ್ದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರುರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ಪಿಆರ್) ರಾಜ್ಯದಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಿದ್ದು, ತನ್ಮೂಲಕ ಮಿತ್ರ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ಸನ್ನು  ಧಿಕ್ಕರಿಸಿದರು. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಪಕ್ಷದ ವಿರೋಧದ ಹೊರತಾಗಿಯೂಮಹಾರಾಷ್ಟ್ರದಲ್ಲಿ ಮೇ ೧ರಿಂದ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅತ್ಯಾಸಕ್ತರಾಗಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು. ರಾಷ್ಟ್ರೀಯ ಜನಸಮಖ್ಯಾ ನೋಂದಣಿಯುಮಾರುವೇಶದಲ್ಲಿ ಬಂದಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)’ ಹೊರತು ಬೇರೇನೂ ಅಲ್ಲ ಎಂದು ಕಾಂಗ್ರೆಸ್ ಪಕ್ಷವು ಮೊದಲೇ ಹೇಳಿತ್ತು ಮತ್ತು ರಾಜ್ಯದಲ್ಲಿ ಎನ್ಪಿಆರ್ ಜಾರಿಗೆ ಆಕ್ಷೇಪ ವ್ಯಕ್ತ ಪಡಿಸಿತ್ತು. ಮಾಧ್ಯಮ ಒಂದರ ಜೊತೆಗೆ ಮಾತನಾಡಿದ ಎನ್ಸಿಪಿಯ ಮಜೀದ್ ಮೆಮನ್ ಅವರುಪಕ್ಷವು ಎನ್ಪಿಆರ್ನ್ನು ಬೆಂಬಲಿಸುವುದಿಲ್ಲ ಎಂಬುದು ಸುಸ್ಪಷ್ಟ. ನಮ್ಮ ಮುಖ್ಯಸ್ಥ ಶರದ್ ಪವಾರ್ ಅವರು ಇದನ್ನು ಸ್ಪಷ್ಟ ಪಡಿಸಿದ್ದಾರೆ. ಅಂತಿಮ ತೀರ್ಮಾನವನ್ನು ಮೂರೂ ಪಕ್ಷಗಳು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ಯಾವುದೇ ಒಂದು ಕಾನೂನಿನ ವಿರುದ್ಧ ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೆ ಅವರನ್ನು ದೇಶದ್ರೋಹಿ ಅಥವಾ ದೇಶ ವಿರೋಧಿಗಳು ಎಂದು ಕರೆಯಬಾರದು ಎಂದು ಬಾಂಬೆ ಹೈಕೋರ್ಟಿನ ಔರಂಗಬಾದ್ ಪೀಠ ತಿಳಿಸಿತು.  ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಧರಣಿ ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕೆಂದು ಕೋರಿ ಮಹಾರಾಷ್ಟ್ರದ ನಿವಾಸಿ ಇಫ್ತಿಕರ್ ಶೇಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಪೀಠ ಆದೇಶ ನೀಡಿತುಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸರು ಶೇಕ್ಗೆ ಪ್ರತಿಭಟನೆ ನಡೆಸಲು ಅನುಮತಿಯನ್ನು ನಿರಾಕರಿಸಿದ್ದರು.  ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಸಂಬದ್ಧ ರೀತಿಯಲ್ಲಿ ಪ್ರತಿಭಟನೆ ಮಾಡಲು ಅವಕಾಶವೇ ಇಲ್ಲ. ಆದರೆ ಇಂತಹ ವ್ಯಕ್ತಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಅವರ ಹಕ್ಕು ಎಂಬುದಾಗಿ ಕೋರ್ಟ್ ಭಾವಿಸುತ್ತದೆ. ಹೀಗಾಗಿ ಇಂತಹ ವ್ಯಕ್ತಿಗಳನ್ನು ದೇಶದ್ರೋಹಿಗಳು ಅಥವಾ ದೇಶ ವಿರೋಧಿಗಳು ಎಂದು ಕರೆಯಬಾರದು. ಇದು ಸರ್ಕಾರದ ವಿರುದ್ಧದ ಪ್ರತಿಭಟನೆ ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿ ಟಿವಿ ನಲವಡೆ ಮತ್ತು  ನ್ಯಾಯಮೂರ್ತಿ ಎಂಜಿ ಸೆವಾಲಿಕರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ತಾವು ದತ್ತು ಪಡೆದ ಉತ್ತರ ಪ್ರದೇಶದ ಹಳ್ಳಿಯ ರಿಕ್ಷಾವಾಲಾನ (ರಿಕ್ಷಾ ಎಳೆಯುವವನು) ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದ ಮೂಲಕ ಶುಭಾಶಯ ಕೋರಿದ್ದಾರೆರಿಕ್ಷಾವಾಲ ತನ್ನ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಾಗಬೇಕೆಂದು ಬಯಸಿದ್ದಡೊಮ್ರಿ ಗ್ರಾಮದ ನಿವಾಸಿ ಮಂಗಲ್ ಕೆವಾತ್ ಅವರು ಮಗಳ ಮದುವೆಯ ಆಮಂತ್ರಣವನ್ನು ದೆಹಲಿಯ ಪ್ರಧಾನ ಮಂತ್ರಿ ಕಚೇರಿಗೆ (ಪಿಎಂಒ) ಕಳುಹಿಸಿದ್ದರು. ಫೆಬ್ರವರಿ ೧೨ ರಂದು ತಮ್ಮ ಮಗಳ ಮದುವೆಗೆ ಆಗಮಿಸುವಂತೆ ಕೆವಾತ್ ತಮ್ಮ ಪತ್ರದಲ್ಲಿ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದರು.  ‘ನನ್ನ ಕೆಲವು ಸ್ನೇಹಿತರು ಮೋದಿಜಿಗೆ ಮದುವೆಯ ಆಹ್ವಾನವನ್ನು ಕಳುಹಿಸಲು ನನಗೆ ಸೂಚಿಸಿದ್ದರು. ಹಾಗಾಗಿ ನಾನು ಒಂದು ಆಹ್ವಾನ ಪತ್ರಿಕೆಯನ್ನು ಪ್ರಧಾನಿಯ ದೆಹಲಿ ಕಚೇರಿ ಮತ್ತು ಇನ್ನೊಂದನ್ನು ಅವರ ವಾರಾಣಸಿ ಕಚೇರಿಗೆ ಕಳುಹಿಸಿದ್ದೆಎಂದು ಕೆವಾತ್ ಸುದ್ದಿ ಸಂಸ್ಥೆಗೆ ತಿಳಿಸಿದರು ವಿವಾಹ ಆಮಂತ್ರಣಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿಯವರು ಕೆವಾತ್ಗೆ ಪತ್ರವೊಂದನ್ನು ಕಳುಹಿಸಿದ್ದು, ಅವರ ಮಗಳ ಮದುವೆಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತುಪ್ರಧಾನಿಯವರು ಮದುಮಗಳು ಮತ್ತು ಕುಟುಂಬವನ್ನು ಆಶೀರ್ವದಿಸಿ ಶುಭ ಹಾರೈಸಿದ್ದಾರೆ ಎಂದು ವರದಿ ತಿಳಿಸಿತು. ಕೆವಾತ್ ಅವರ ಮಗಳ ಮದುವೆಂಯ ದಿನವೇ ಪ್ರಧಾನಿಯವರ ಪತ್ರ ತಲುಪಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಗಗನಕ್ಕೆ ಏರುವ ವೇಳೆಯಲ್ಲಿ ರನ್ ವೇ ನಡುವಿಗೆ ಇದ್ದಕ್ಕಿದ್ದಂತೆ ಬಂದ ವ್ಯಕ್ತಿ ಮತ್ತು ಜೀಪ್ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪೈಲಟ್ ವಿಮಾನವನ್ನು ಧಿಡೀರನೆ ಮೇಲಕ್ಕೆ ಹಾರಿಸಿದ ಪರಿಣಾಮವಾಗಿ ಏರ್ ಇಂಡಿಯಾ ವಿಮಾನದ ಬೆಸುಗೆಯಲ್ಲಿ ಬಿರುಕು ಬಿಟ್ಟ ಘಟನೆ ಪುಣೆ ವಿಮಾನ ನಿಲ್ದಾಣದಲ್ಲಿ 2020 ಫೆಬ್ರುವರಿ 15ರ  ಶನಿವಾರ ಘಟಿಸಿತು.  ಏರ್ ಇಂಡಿಯಾದ ೩೨೧ ವಿಮಾನ ಶನಿವಾರ ಬೆಳಿಗ್ಗೆ ಪುಣೆ ವಿಮಾನ ನಿಲ್ದಾಣದಿಂದ ಹೊರಟಾಗ ಘಟನೆ ಸಂಭವಿಸಿತು ಎಂದು ಡಿಜಿಸಿಎ ಅಧಿಕಾರಿ ಹೇಳಿದರು.  ಆದಾಗ್ಯೂ, ವಿಮಾನವು ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅವರು ತಿಳಿಸಿದರು.  "ಗಗನಕ್ಕೆ ಏರುವ ಸಲುವಾಗಿ ೧೨೦ ಗಂಟೆಗಳ ವೇಗದಲ್ಲಿ ವಿಮಾನ ಓಡುತ್ತಿದ್ದ ವೇಳೆಯಲ್ಲಿ ವಿಮಾನದ ಸಿಬ್ಬಂದಿ ರನ್ ವೇ ಮಧ್ಯಕ್ಕೆ ಒಬ್ಬ ವ್ಯಕ್ತಿ ಮತ್ತು ಜೀಪ್ ಬಂದುದನ್ನು ಗಮನಿಸಿದರು. ವ್ಯಕ್ತಿ ಮತ್ತು ಜೀಪ್ನ್ನು ಪಾರುಮಾಡಲು ವಿಮಾನವನ್ನು ದಿಢೀರನೆ ಬಾನಿಗೆ ಹಾರಿಸಲಾಯಿತು. ಬಳಿಕ ವಿಮಾನ ಸುರಕ್ಷಿತವಾಗಿ ದೆಹಲಿಗೆ ಬಂದಿಳಿಯಿತುಎಂದು ನಾಗರಿಕ ವಿಮಾನ ಆಡಳಿತ ನಿರ್ದೇಶನಾಲಯದ ಹೇಳಿಕೆ (ಡಿಜಿಸಿಎ) ತಿಳಿಸಿತು. ಘಟನೆಯ ವಿಶ್ಲೇಷಣೆಗಾಗಿ ಕಾಕ್ಪಿಟ್ ವಾಯ್ಸ್ ರೆಕಾರ್ಡರನ್ನು (ಸಿವಿಆರ್) ತೆಗೆದು ಇರಿಸುವಂತೆ ಏರ್ ಇಂಡಿಯಾಕ್ಕೆ ಸೂಚಿಸಲಾಗಿದೆ ಎಂದು ಅಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020:  ನವದೆಹಲಿ: ಕಾಶ್ಮೀರ ವಿಷಯದಲ್ಲಿ ಟೀಕೆ ಮಾಡಿದ್ದಕ್ಕಾಗಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರನ್ನು 2020 ಫೆಬ್ರುವರಿ 15ರ  ಶನಿವಾರ ತರಾಟೆಗೆ ತೆಗೆದುಕೊಂಡ ಭಾರತರಾಷ್ಟ್ರದ ಆಂತರಿಕ ವ್ಯವಹಾರಗಳಲ್ಲಿ ಮೂಗುತೋರಿಸಬೇಡಿಎಂದು ಅವರಿಗೆ ಸೂಚಿಸಿತು. ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಅವರುಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಟರ್ಕಿ ಅಧ್ಯಕ್ಷರು ಮಾಡಿದ ಎಲ್ಲ ಉಲ್ಲೇಖಗಳನ್ನು ಭಾರತ ತಿರಸ್ಕರಿಸಿದೆ ಮತ್ತು ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಪರಾಭಾರೆ ಮಾಡಲು ಸಾಧ್ಯವಿಲ್ಲದಂತಹ ಅಂಗವಾಗಿದೆಎಂದು ಹೇಳಿದರು. ಪಾಕಿಸ್ತಾನೀ ಸಂಸತ್ತನ್ನು ಉದ್ದೇಶಿಸಿ ಶುಕ್ರವಾರ ಮಾಡಿದ್ದ ಭಾಷಣದಲ್ಲಿ ಎರ್ಡೋಗನ್ ಅವರುಕಾಶ್ಮೀರಿ ಜನರ ಹೋರಾಟವನ್ನು ಒಂದನೇ ಜಾಗತಿಕ ಸಮರ ಕಾಲದಲ್ಲಿ ವಿದೇಶೀ ಪ್ರಾಬಲ್ಯದ ವಿರುದ್ಧ ಟರ್ಕಿಯ ಜನರು ನಡೆಸಿದ ಹೋರಾಟಕ್ಕೆಹೋಲಿಸಿದ್ದರು.  ‘ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲ ಉಲ್ಲೇಖಗಳನ್ನೂ ಭಾರತವು ತಿರಸ್ಕರಿಸುತ್ತದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಪರಾಭಾರೆ ಮಾಡಲಾಗದಂತಹ ಅಂಗವಾಗಿದೆಎಂದು ಎರ್ಡೋಗನ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾಡಿದ ಟೀಕೆಗಳನ್ನು ಉಲ್ಲೇಖಿಸಿ ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ನುಡಿದರು. ‘ಟರ್ಕಿ ನಾಯಕತ್ವವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಮತ್ತು ಭಾರತ ಮತ್ತು ಪ್ರದೇಶಕ್ಕೆ ಪಾಕಿಸ್ತಾನಿ ಪ್ರಚೋದಿತ ಭಯೋತ್ಪಾದನೆಯ ಭೀಕರ ಬೆದರಿಕೆ ಸೇರಿದಂತೆ ವಾಸ್ತವಾಂಶಗಳ ಬಗ್ಗೆ ಸಮರ್ಪಕ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು ಎಂಬುದಾಗಿ ನಾವು ಟರ್ಕಿಗೆ ಕರೆ ನೀಡುತ್ತೇವೆಎಂದು ರವೀಶ್ ಕುಮಾರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment