Saturday, February 22, 2020

ಇಂದಿನ ಇತಿಹಾಸ History Today ಫೆಬ್ರುವರಿ 22

2020: ನವದೆಹಲಿ: ಅಮೆರಿಕದ ಮೊದಲ ಮಹಿಳೆ ಮೆಲನಿಯಾ ಟ್ರಂಪ್ ಅವರು  2020 ಫೆಬ್ರುವರಿ 25ರ ಮಂಗಳವಾರ ದೆಹಲಿಯ ಸರ್ಕಾರಿ ಶಾಲೆಗೆ ನೀಡಲಿರುವ ಭೇಟಿಯ ವೇಳೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಹಾಜರಿರುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಆಪ್) ಹಿರಿಯ ಕಾರ್ಯಕರ್ತರೊಬ್ಬರು 2020 ಫೆಬ್ರುವರಿ 22ರ ಶನಿವಾರ  ಇಲ್ಲಿ ತಿಳಿಸಿದರುಅಮೆರಿಕದ ಮೊದಲ ಮಹಿಳೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ಫೆಬ್ರುವರಿ ೨೪ರ ಸೋಮವಾರದಿಂದ ಎರಡು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆಮಂಗಳವಾರ ಬೆಳಗ್ಗೆ ಅಮೆರಿಕದ ಮೊದಲ ಮಹಿಳೆ ಮೆಲನಿಯಾ ಟ್ರಂಪ್ ಅವರು ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡುವ ಕಾರ್ಯಕ್ರಮ  ’ಬಿ ಬೆಸ್ಟ್ಉಪಕ್ರಮ ನಿಗದಿಯಾಗಿದೆ. ಅವರ ಶಾಲಾ ಭೇಟಿಯ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಶಿಕ್ಷಣ ಸಚಿವ ಮನಿಶ್ ಸಿಸೋಡಿಯಾ ಅವರು ಶಾಲೆಯಲ್ಲಿ ಮೆಲನಿಯಾ ಟ್ರಂಪ್ ಅವರನ್ನು ಸ್ವಾಗತಿಸಿ ವಿದ್ಯಾರ್ಥಿಗಳು ಪಡೆಯುತ್ತಿರುವಸಂತಸ ಪಠ್ಯಸೂಚಿ (ಹ್ಯಾಪಿನೆಸ್ ಕರಿಕುಲಂ) ಶಿಕ್ಷಣದ ಬಗ್ಗೆ ವಿವರಿಸಬೇಕಾಗಿತ್ತು. ಏನಿದ್ದರೂ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರ ಹೆಸರುಗಳನ್ನು ಶಾಲಾ ಸಮಾರಂಭದಲ್ಲಿ ಹಾಜರಿರುವ ವ್ಯಕ್ತಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದಾಗಿ ಮುಖ್ಯಮಂತ್ರಿಯವರ ಕಚೇರಿಗೆ ಶನಿವಾರ ಬೆಳಗ್ಗೆ ತಿಳಿಸಲಾಗಿದೆ ಎಂದು ದೆಹಲಿ ಸರ್ಕಾರದ ಅಧಿಕಾರಿಗಳು ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ದೂರದೃಷ್ಟಿಯನ್ನು ಹೊಂದಿದ ವ್ಯಕ್ತಿ ಮತ್ತು ಜಾಗತಿಕವಾಗಿ ಚಿಂತಿಸಿ ಸ್ಥಳೀಯವಾಗಿ ಅನುಷ್ಠಾನಗೊಳಿಸುವ ಬಹುಮುಖ ಪ್ರತಿಭಾವಂತ ಎಂಬುದಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರ ಅವರು  2020 ಫೆಬ್ರುವರಿ 22ರ ಶನಿವಾರ ಇಲ್ಲಿ ಶ್ಲಾಘಿಸಿದರು.  ೨೦೨೦ರ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಧನ್ಯವಾದ ಸಮರ್ಪಣೆ ಮಾಡುತ್ತಿದ್ದ ನ್ಯಾಯಮೂರ್ತಿ ಮಿಶ್ರ ಅವರು ಇದೇ ವೇಳೆಗೆ, ಸುಮಾರು ೧೫೦೦ಕ್ಕೂ ಹೆಚ್ಚಿನ ಹಳೆಯ ಕಾನೂನುಗಳನ್ನು ನಿವಾರಿಸಿದ್ದಕ್ಕಾಗಿ ಕೇಂದ್ರದ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರನ್ನೂ ಹೊಗಳಿದರು.  ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಜವಾಬ್ದಾರಿಯುತ ಮತ್ತು ಅತ್ಯಂತ ಸ್ನೇಹಶೀಲ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನ್ಯಾಯಮೂರ್ತಿ ಮಿಶ್ರ ನುಡಿದರು.  ಸುಪ್ರೀಂಕೋರ್ಟಿನಲ್ಲಿನ್ಯಾಯಾಂಗ ಮತ್ತು ಬದಲಾಗುತ್ತಿರುವ ವಿಶ್ವವಿಷಯಕ್ಕೆ ಸಂಬಂಧಿಸಿದಂತೆ ೨೦೨೦ರ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನವನ್ನು ಸಂಘಟಿಸಲಾಗಿತ್ತು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ನೆರೆರಾಷ್ಟ್ರವಾದ ಚೀನಾದಲ್ಲಿ ಕೊರೋನಾವೈರಸ್ ಸೋಂಕಿನಿಂದ ಬಾಧಿತರಾಗಿರುವ ವ್ಯಕ್ತಿಗಳಿಗೆ ಪರಿಹಾರ ಸಾಮಗ್ರಿ ಒಯ್ಯಲು ಮತ್ತು ಸೋಂಕಿನ ಕೇಂದ್ರವಾಗಿರುವ ವುಹಾನ್ ನಗರದಿಂದ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರುವ ಉದ್ದೇಶದಿಂದ ತನ್ನ ವಾಯುಪಡೆ ವಿಮಾನ ಕಳುಹಿಸುವ ಭಾರತದ ಪ್ರಸ್ತಾಪಕ್ಕೆ ಅನುಮತಿ ನೀಡುವುದನ್ನು ಚೀನಾ ವಿಳಂಬಿಸುತ್ತಿದೆ ಎಂದು ಅಧಿಕೃತ ಮೂಲಗಳು 2020 ಫೆಬ್ರುವರಿ 22ರ ಶನಿವಾರ ತಿಳಿಸಿದವು.  ಭಾರತವು ಸಿ-೧೭ ಸೇನಾ ಸಾರಿಗೆ ವಿಮಾನವನ್ನು ವುಹಾನ್ ನಗರಕ್ಕೆ ಫೆಬ್ರುವರಿ ೨೦ರಂದೇ ಕಳುಹಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ ಚೀನಾವು ಇನ್ನೂ ಅನುಮತಿ ನೀಡದ ಕಾರಣ ವಿಮಾನವು ಭಾರತದಿಂದ ಗಗನಕ್ಕೆ ಏರಲು ಸಾಧ್ಯವಾಗಿಲ್ಲ. ‘ಚೀನಾವು ಉದ್ದೇಶಪೂರ್ವಕವಾಗಿಯೇ ತೆರವು ವಿಮಾನದ ಪ್ರವೇಶಕ್ಕೆ ಅನುಮತಿ ಮಂಜೂರಾತಿಯನ್ನು  ವಿಳಂಬಗೊಳಿಸುತ್ತಿದೆಎಂದು ಉನ್ನತ ಮೂಲವೊಂದು ತಿಳಿಸಿತು.  ವಿಮಾನವು ವೈದ್ಯಕೀಯ ನೆರವಿನ ಸಾಮಗ್ರಿಗಳ ಭಾರೀ ಸರಕನ್ನು ಚೀನಾಕ್ಕೆ ಒಯ್ಯಲು ಮತ್ತು ವುಹಾನ್ ನಗರದಿಂದ ಭಾರತೀಯರನ್ನು ಮರಳಿ ಕರೆತರುವ ಉದ್ದೇಶವನ್ನು ಹೊಂದಿದೆ ಎಂದು ಮೂಲ ಹೇಳಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ತಾನು ಮಾನಸಿಕ ಅಸ್ವಸ್ಥತೆ ಮತ್ತು ಖಿನ್ನತೆಯಿಂದ ನರಳುತ್ತಿರುವುದಾಗಿಯೂ ಅದಕ್ಕೆ ಚಿಕಿತ್ಸೆಯ ಅಗತ್ಯವಿದೆ ಎಂಬುದಾಗಿಯೂ ಪ್ರತಿಪಾದಿಸಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯವು 2020 ಫೆಬ್ರುವರಿ 22ರ ಶನಿವಾರ ವಜಾಗೊಳಿಸಿತು. ಅಡಿಷನಲ್ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ವಿನಯ್ ಕುಮಾರ್ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದರು. ಶರ್ಮನಿಗೆ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಬಲತೋಳಿನಲ್ಲಿ ಮೂಳೆ ಮುರಿತ ಸಂಭವಿಸಿದೆ ಮತ್ತು ಆತ ಮಾನಸಿಕ ಅಸ್ವಸ್ಥತೆ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದು ಅರ್ಜಿಯು ಪ್ರತಿಪಾದಿಸಿತ್ತು. ತಿಹಾರ್ ಸೆರೆಮನೆ ಅಧಿಕಾರಿಗಳು ವಿನಯ್ ಕುಮಾರ್ ಶರ್ಮನ ಪ್ರತಿಪಾದನೆಗಳನ್ನುತಿರುಚಿದ ವಾಸ್ತವಾಂಶಗಳ ಮೂಟೆಎಂದು ಬಣ್ಣಿಸಿದ್ದರು ಮತ್ತು ಶಿಕ್ಷಿತ ಅಪರಾಧಿಯು ತನಗೆ ತಾನೇ ಮೇಲ್ನೋಟಕ್ಕೆ ಕಾಣುವಂತಹ ಗಾಯಗಳನ್ನು ಮಾಡಿಕೊಂಡಿದ್ದಾನೆ ಮತ್ತು ಆತ ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿಲ್ಲ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ಸಾಬೀತಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು. ಸೆರೆಮನೆಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಮಾನಸಿಕ ತಜ್ಞರು ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ಪ್ರತಿದಿನವೂ ವೈದ್ಯಕೀಯ ತಪಾಸಣೆಗಳಿಗೆ ಗುರಿಪಡಿಸಲಾಗುತ್ತಿದ್ದು, ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)



No comments:

Post a Comment