Thursday, February 6, 2020

ಇಂದಿನ ಇತಿಹಾಸ History Today ಫೆಬ್ರುವರಿ 06

2020: ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ  ಬಡಿಗೆ ಏಟುಚಾಟಿಗೆ  ಸೂರ್ಯ ನಮಸ್ಕಾರ ಪ್ರತ್ಯಸ್ತ್ರ ಪ್ರಯೋಗ ಸೇರಿದಂತೆ ಕಾಶ್ಮೀರ, ಆಯೋಧ್ಯಾ, ಪೌರತ್ವ ತಿದ್ದುಪಡಿ ಕಾಯ್ದೆ ಸಹಿತವಾಗಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಉಭಯ ಸದನಗಳಲ್ಲೂ  2020 ಫೆಬ್ರುವರಿ 06ರ ಗುರುವಾರ ವಿರೋಧ ಪಕ್ಷಗಳನ್ನು ಹಿಗ್ಗಾಮುಗ್ಗಾ ಜಗ್ಗಾಡಿದರು. ರಾಷ್ಟ್ರಪತಿಯವರ ಭಾಷಣಕ್ಕ ವಂದನಾ ನಿರ್ಣಯದ ಮೇಲೆ ಉಭಯ ಸದನಗಳಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಪ್ರಧಾನಿ ಎನ್ಡಿಎ ಸರ್ಕಾರದ ದೃಢನಿರ್ಧಾರವಲ್ಲದೇ ಹೋಗಿದ್ದರೆ ರಾಷ್ಟ್ರವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಲೂ ಇಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.  ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರಿಗೆ ದೇಶದ ಯುವಕರು ಬಡಿಗೆ ಏಟಿನಮೂಲಕ ಮುಂದಿನ ಆರು ತಿಂಗಳಲ್ಲಿದಂಡವಿಧಿಸಲಿದ್ದಾರೆ ಎಂಬುದಾಗಿ ನೀಡಿದ ಎಚ್ಚರಿಕೆಗೆಸೂರ್ ನಮಸ್ಕಾರ ಪ್ರತ್ಯಸ್ತ್ರ ಎಸೆದ ಮೋದಿ, ’ಕಳೆದ ೨೦ ವರ್ಷಗಳಿಂದ ನಾನು ಸಾಕಷ್ಟು ಅನುಭವಿಸಿದ್ದು ನನ್ನ ಬೆನ್ನುದಂಡ-ನಿರೋಧಕ (ದಂಡ-ಪ್ರೂಫ್)’ ಆಗಿದೆ ಎಂದು ಎದಿರೇಟು ನೀಡಿದರು.  ಕಾಂಗ್ರೆಸ್ ನಾಯಕರೊಬ್ಬರು ಯುವಕರು ಮುಂದಿನ ತಿಂಗಳಲ್ಲಿ ಮೋದಿಯವರನ್ನು ಬಡಿಗೆಗಳಿಂದ ಹೊಡೆಯಲಿದ್ದಾರೆ ಎಂಬುದಾಗಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಬಡಿಗೆ ಏಟುಗಳನ್ನು ತಾಳಿಕೊಳ್ಳುವಷ್ಟು ಬೆನ್ನು ಬಲವಾಗಲು ನಾನು ನನ್ನ ಸೂರ್ಯ ನಮಸ್ಕಾರದ ವೇಗವನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದೇನೆಎಂದು ಪ್ರಧಾನಿ ಚುಚ್ಚಿದರು. ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಮೇಲಿನ ತಮ್ಮ ದಾಳಿಯನ್ನು ಮುಂದುವರೆಸಿದ ಅವರುಕಳೆದ ೨೦ ವರ್ಷಗಳಲ್ಲಿ ನಾನು ಸಾಕಷ್ಟು ನಿಂದನೆಗಳನ್ನು ಕೇಳಿದ್ದೇನೆ ಮತ್ತು ನಿಂದನೆ ನಿರೋಧಕವಾಗಿದ್ದೇನೆ. ಈಗ ನಾನು ನನ್ನನ್ನುದಂಡ ನಿರೋಧಕವನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ‘ರಾಷ್ಟ್ರದ ನಿರುದ್ಯೋಗ ಸಮಸ್ಯೆಯನನು ಬಗೆಹರಿಸದೇ ಇದ್ದಲ್ಲಿ ದೇಶದ ಯುವಕರು ಮುಂದಿನ ಆರು ತಿಂಗಳಲ್ಲಿ ನಿಮ್ಮನ್ನು ಬಡಿಗೆಗಳಿಂದ ಹೊಡೆಯಲಿದ್ದಾರೆಎಂದು ರಾಹುಲ್ ಗಾಂಧಿಯವರು ಬುಧವಾರ ದೆಹಲಿ ಸಭೆಯೊಂದರಲ್ಲಿ ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆ ನೀಡಿದ್ದರು. ’ಪ್ರಧಾನಿಯವರು ಈಗ ಭಾಷಣಗಳನ್ನು ಮಾಡುತ್ತಿದ್ದಾರೆ. ಆದರೆ ಆರು ತಿಂಗಳ ನಂತರ ಅವರು ತಮ್ಮ ಮನೆಯಿಂದ ಹೊರಕ್ಕೆ ಬರಲೂ ಸಾಧ್ಯವಾಗುವುದಿಲ್ಲಎಂದು ರಾಹುಲ್ ಗಾಂಧಿ ಹೇಳಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ದೆಹಲಿಯ ಶಾಹೀನ್ಬಾಗ್ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್) ಹಣ ಒದಗಿಸುತ್ತಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕರು ಪಿಎಫ್ ಮುಖ್ಯಸ್ಥನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಹಿರಂಗ ಪಡಿಸುವ ಮೂಲಕ 2020 ಫೆಬ್ರುವರಿ 08ರ ಶನಿವಾರ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನಗಳು ಉಳಿದಿರುವಾಗ ಜಾರಿ ನಿರ್ದೇಶನಾಲಯ 2020 ಫೆಬ್ರುವರಿ 06ರ ಗುರುವಾರಬಾಂಬ್ಹಾಕಿತು.  ಜಾರಿ ನಿರ್ದೇಶನಾಲಯವು ರಾಷ್ಟ್ರದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆಗಳಿಗೆ ಬಳಸಲಾಗುತ್ತಿದೆ ಎನ್ನಲಾಗಿರುವ ಹಣದ ಮೂಲಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಗೃಹ ವ್ಯವಹಾರಗಳ ಸಚಿವಾಲಯಕ್ಕೆ (ಎಂಎಚ್) ತನ್ನ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಿತು. ತನಿಖೆಗೆ ಸಂಬಂಧಿಸಿದ ದಾಖಲೆಗಳು ತಮಗೆ ಲಭಿಸಿರುವುದಾಗಿ ಪ್ರಕಟಿಸಿರುವ ಕೆಲವು ಮಾಧ್ಯಮಗಳು ಒಟ್ಟು ೧೨೦ ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕುಗಳಲ್ಲಿನ ಪಿಎಫ್ ಮತ್ತು ರೆಹಾಬ್ ಇಂಡಿಯಾ ಫೌಂಡೇಷನ್ಗೆ ಸಂಬಂಧಿಸಿದ ಬಾಂಕ್ ಖಾತೆಗಳಿಗೆ ಜಮಾ ಮಾಡಿರುವುದನ್ನು ಬಹಿರಂಗ ಪಡಿಸಿವೆ ಎಂದು ಹೇಳಿದವು. ೫೦೦೦ ರೂಪಾಯಿಯಿಂದ ೪೯,೦೦೦ ರೂಪಾಯಿಗಳವರೆಗಿನ ವಿವಿಧ ಮೊತ್ತಗಳಲ್ಲಿ ಹಣ ವರ್ಗಾವಣೆಯಾಗಿದ್ದು ಹಣ ಜಮಾ ಮಾಡಲು ನಗದು ಇಲ್ಲವೇ ಖಾತೆಗಳ ತತ್ ಕ್ಷಣ ಪಾವತಿ ಸೇವೆಗಳನ್ನು (ಇಮ್ಮೀಡಿಯೆಟ್ ಪೇಮೆಂಟ್ ಸರ್ವೀಸ್- ಐಎಂಪಿಎಸ್) ಬಳಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿದವು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಬೆಂಗಳೂರು: ಆಂಧ್ರಪ್ರದೇಶದ ಮಾದರಿಯಲ್ಲಿ ಕರ್ನಾಟಕದಲ್ಲೂ ಕನ್ನಡಿಗರಿಗೆ ಶೇ.೭೫ರಷ್ಟು ಉದ್ಯೋಗ ನೀಡುವ ಉದ್ಯೋಗ ಮೀಸಲಾತಿ ಕಾಯ್ದೆ ರೂಪಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಚಿಂತಿಸಿದೆಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲೂ ಸ್ಥಳೀಯರಿಗೆ ಶೇ.೭೫ರಷ್ಟು ಉದ್ಯೋಗವನ್ನು ಕಡ್ಡಾಯವಾಗಿ ಮೀಸಲು ಇಡುವ ಕಾಯ್ದೆ೩ ರೂಪಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಉನ್ನತ ಮೂಲಗಳು  ತಿಳಿಸಿದವು.  ಕಾಯ್ದೆ ರೂಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಕಾಯ್ದೆ ಯಾರ ವಿರುದ್ಧವೂ ಅಲ್ಲ, ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಬೇಕು ಎಂಬ ಆಶಯ ಮಾತ್ರ ಇದರ ಹಿಂದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ  ಕಾರ್ಮಿಕ ಮತ್ತು ಸಕಾಲ ಸಚಿವ ಎಸ್. ಸುರೇಶ ಕುಮಾರ್ ಅವರು ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಾ ತಿಳಿಸಿದರು.  ನೆಲದ ಜನರ ಭಾವನೆಗಳನ್ನು ನಾವು ಸದಾ ಗೌರವಿಸುತ್ತೇವೆ. ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇವೆ. ನಿಟ್ಟಿನಲ್ಲಿಯೇ ಕನ್ನಡಿಗರಿಗೆ ಶೇಕಡಾ ೭೫ರಷ್ಟು ಉದ್ಯೋಗ ಒದಗಿಸುವ ಕಾಯ್ದೆಗೆ ರೂಪ ಕೊಡುವ ಪ್ರಕ್ರಿಯೆ ಆರಂಭಿಸಿದ್ದೇವೆಎಂದು ಸುರೇಶ ಕುಮಾರ್ ಹೇಳಿದರು. ಸ್ಥಳೀಯರಿಗೆ ಶೇ.೭೫ ಉದ್ಯೋಗ ಮೀಸಲಾತಿ ಮಸೂದೆಗೆ ಆಂಧ್ರ ಪ್ರದೇಶದ ವಿಧಾನಸಭೆ ಜುಲೈ ತಿಂಗಳಲ್ಲಿ ಅನುಮೋದನೆ ನೀಡಿದೆ. ಇದೇ ಮಾದರಿಯ ಕಾನೂನನ್ನು ರಾಜ್ಯದಲ್ಲೂ ತರಬೇಕು ಎಂಬುದಾಗಿ ಕನ್ನಡಪರ ಹೋರಾಗಾರರು ಒತ್ತಾಯಿಸಿದ್ದರು. ಹಾಗೆಯೇ ರಾಜ್ಯದ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಗರಿಷ್ಠ ಉದ್ಯೋಗ ಮೀಸಲಾತಿ ಒದಗಿಸಬೇಕು ಎಂಬ ಬೇಡಿಕೆ ಇದೆ ಎಂದು ಸಚಿವರು ನುಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ) 


No comments:

Post a Comment