Friday, February 14, 2020

ಇಂದಿನ ಇತಿಹಾಸ History Today ಫೆಬ್ರುವರಿ 14

2020: ನವದೆಹಲಿ: ಹೊಂದಾಣಿಕೆ ಮಾಡಲಾದ ಒಟ್ಟು ಕಂದಾಯ (ಅಜೆಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪಾವತಿ ಸಂಬಂಧ ತನ್ನ ಆದೇಶವನ್ನು ಪಾಲಿಸದೇ ಇದ್ದುದಕ್ಕಾಗಿ ಸುಪ್ರೀಂಕೋರ್ಟ್ ಟೆಲಿಕಾಂ ಕಂಪನಿಗಳಿಗೆ 2020 ಫೆಬ್ರುವರಿ 14ರ ಶುಕ್ರವಾರ ಛೀಮಾರಿ ಹಾಕಿದ ಕೆಲವೇ ಗಂಟೆಗಳಲ್ಲಿ ಇದೇ ದಿನ ರಾತ್ರಿ ೧೧.೫೯ ಗಂಟೆಯ ಒಳಗಾಗಿ ಬಾಕಿಗಳನ್ನು ಪಾವತಿ ಮಾಡುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕಂಪೆನಿಗಳಿಗೆ ಆದೇಶ ನೀಡಿತು. ಎಜಿಆರ್ ಬಾಕಿ ಪಾವತಿ ಸಂಬಂಧ ತನ್ನ ಆದೇಶದ ಪಾಲನೆ ಮಾಡದೇ ಇದ್ದುದಕ್ಕಾಗಿ ಟೆಲಿಕಾಂ ಕಂಪೆನಿಗಳ ಆಡಳಿತ ಮಂಡಳಿಗಳನ್ನು 2020 ಫೆಬ್ರುವರಿ 14ರ ಶುಕ್ರವಾರ  ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಸ್.ಅಬ್ದುಲ್ ನಜೀರ್ ಮತ್ತು ಎಂ.ಆರ್. ಶಾ ಅವರ ಪೀಠವು, ನ್ಯಾಯಾಲಯ ನಿಂದನೆ ಕ್ರಮಗಳನ್ನು ಏಕೆ ಕೈಗೊಳ್ಳಬಾರದು ಎಂದು ಝಾಡಿಸಿತ್ತುಸುಪ್ರೀಂಕೋರ್ಟ್ ಕೆಂಡಾಮಂಡಲ ಸಿಟ್ಟು ವ್ಯಕ್ತ ಪಡಿಸಿದ ಕೆಲವೇ ಗಂಟೆಗಳಲ್ಲಿ ಸರ್ಕಾರವು ಭಾರ್ತಿ ಏರ್ ಟೆಲ್, ವೊಡಾಫೋನ್ ಐಡಿಯಾದಂತಹ ಟೆಲಿಕಾಂ ಕಂಪೆನಿಗಳಿಗೆ ಎಜಿಆರ್ ಬಾಕಿಗಳನ್ನು 2020 ಫೆಬ್ರುವರಿ 14ರ ಶುಕ್ರವಾರ ರಾತ್ರಿ ೧೧.೫೯ ಗಂಟೆಗಳ ಒಳಗಾಗಿ ಪಾವತಿ ಮಾಡುವಂತೆ ಆದೇಶ ನೀಡಿತು. ಒಟ್ಟು ೧೫ ಟೆಲಿಕಾಂ ಕಂಪೆನಿಗಳು ಸರ್ಕಾರಕ್ಕೆ ಸುಮಾರು .೪೭ ಲಕ್ಷ ಕೋಟಿ ರೂಪಾಯಿ ಹಣ ಪಾವತಿ ಮಾಡಬೇಕಾಗಿದೆ. ಇದರಲ್ಲಿ ೯೨,೬೪೨ ರೂಪಾಯಿಗಳು ಪಾವತಿ ಮಾಡದ ಪರವಾನಗಿ ಶುಲ್ಕವಾಗಿದ್ದರೆ, ೫೫,೦೫೪ ಕೋಟಿ ರೂಪಾಯಿಗಳು ತರಂಗಾಂತರ ಬಳಕೆ ಶುಲ್ಕವಾಗಿದೆ. ಕಂಪೆನಿಗಳು ಸರ್ಕಾರದ ಆದೇಶದಂತೆ ಶುಕ್ರವಾರ ಮಧ್ಯರಾತ್ರಿಯ ಒಳಗೆ ಹೇಗೆ ಹಣ ಪಾವತಿ ಮಾಡುತ್ತವೆ ಎಂಬುದು ಸ್ಪಷ್ಟವಾಗಿಲ್ಲ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2020: ಮುಂಬೈ: ಮಹಾರಾಷ್ಟ್ರ ವಿಕಾಸ ಅಘಾಡಿಯಲ್ಲಿ ಮೊತ್ತ ಮೊದಲ ಬಾರಿಗೆ ಭಿನ್ನಮತ ಸ್ಫೋಟಗೊಂಡಿದ್ದು, ಎಲ್ಗರ್ ಪರಿಷದ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸಲು ರಾಜ್ಯ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೈಗೊಂಡ ನಿರ್ಣಯದ ವಿರುದ್ದ ಅಘಾಡಿಯ ಅಂಗಪಕ್ಷವಾಗಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು 2020 ಫೆಬ್ರುವರಿ 14ರ ಶುಕ್ರವಾರ ಅಸಂತೋಷ ವ್ಯಕ್ತ ಪಡಿಸಿದರು.  ಎಲ್ಗರ್ ಪರಿಷದ್ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ನಿರ್ದೇಶಿಸಿದ ಕೇಂದ್ರ ಸರ್ಕಾರದ ನಿರ್ಧಾರ ಅನ್ಯಾಯದ್ದಾಗಿದ್ದರೆ, ಅದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು ಅದಕ್ಕಿಂತಲೂ ಘೋರ ಅನ್ಯಾಯ ಎಂದು ಪವಾರ್ ಟೀಕಿಸಿದರುಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಅಂಗ ಪಕ್ಷಗಳಾಗಿರುವ ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಸರ್ಕಾರವು ೨೦೧೯ರ ನವೆಂಬರ್ ತಿಂಗಳಲ್ಲಿ  ರಚನೆಯಾದಂದಿನಿಂದ ಪವಾರ್ ಅವರ ಟೀಕೆಗೆ ಗುರಿಯಾದ ಮುಖ್ಯಮಂತ್ರಿಯ ಮೊದಲ ನಿರ್ಣಯ ಇದಾಗಿದೆ.  ಕೇಂದ್ರ ಸರ್ಕಾರವು ಜನವರಿ ೨೫ರಂದು ಕೈಗೊಂಡ ನಿರ್ಧಾಕ್ಕೆ ಅನುಗುಣವಾಗಿ ಎಂವಿಎ ಸರ್ಕಾರವು ೨೦೧೮ರ ಎಲ್ಗರ್ ಪರಿಷದ್ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲು ಒಪ್ಪಿದೆ. ಕೇಂದ್ರ ಸರ್ಕಾರವು ಒಕ್ಕೂಟ ತನಿಖಾ ಸಂಸ್ಥೆಗೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದೆ. ೨೦೧೭ರ ಡಿಸೆಂಬರ್ ೩೧ರಂದು ನಡೆದ ಎಲ್ಗರ್ ಪರಿಷದ್ ಸಮಾವೇಶದಲ್ಲಿ ಭಾಷಣಗಳನ್ನು ಮಾಡಿದ ಎಡ ಮತ್ತು ದಲಿತ ಚಳವಳಿಗಳ ಜೊತೆಗೆ ಸಂಪರ್ಕ ಹೊಂದಿರುವ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರವು ಎನ್ಐಎಗೆ ಸೂಚಿಸಿದೆ.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು: ರಾಜ್ಯ ಸರ್ಕಾರದ ಮುಂಗಡಪತ್ರ (ಬಜೆಟ್) ಮಾರ್ಚ್ ರಂದು ಮಂಡನೆಯಾಗಲಿದ್ದು, ಬಾರಿಯ   ಅಧಿವೇಶನಕ್ಕೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕ್ಯಾಮರಾಗಳಿಗೆ ವಿಧಾನಸಭೆಯ ಒಳಗೆ ಅವಕಾಶವಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ  ಹೇಳಿದರು.  ಮಾಧ್ಯಮಗಳಿಗೆ 2020 ಫೆಬ್ರುವರಿ 14ರ ಶುಕ್ರವಾರ ವಿಷಯ ತಿಳಿಸಿರುವ ಕಾಗೇರಿ, ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯ ವ್ಯವಸ್ಥೆಯನ್ನು ರಾಜ್ಯದಲ್ಲೂ ಪಾಲಿಸಲಾಗುತ್ತದೆ ಎಂದು ಹೇಳಿದರು. ಫೆಬ್ರುವರಿ ೧೭ರಿಂದ ೩೧ರವರಗೆ ವಿಧಾನಮಂಡಲದ ಅಧಿವೇಶನ ನಡೆಯಲಿದೆಮಾರ್ಚ್ ಮತ್ತು ೩ರಂದು ಸಂವಿಧಾನದ ಕುರಿತು ಚರ್ಚೆ ನಡೆಯಲಿದೆ. ಮಾರ್ಚ್ ರಂದು ಬಜೆಟ್ ಮಂಡನೆ ಆಗಲಿದೆ ಎಂದು ಕಾಗೇರಿ ಹೇಳಿದರು.  ಅಧಿವೇಶನದಲ್ಲಿ ಒಟ್ಟು ಮಸೂದೆಗಳು ಮಂಡನೆ ಆಗಲಿವೆ. ಎಲ್ಲಾ ಸದಸ್ಯರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾಗೇರಿ ಸೂಚಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2020: ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಫೆಬ್ರುವರಿ ೧೬ರ ಭಾನುವಾರ ನಡೆಯಲಿರುವ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರವಿಂದ ಕೇಜ್ರಿವಾಲ್ ಆಹ್ವಾನಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿಯ ಎಲ್ಲ ದೆಹಲಿ ಶಾಸಕರು, ಸಂಸತ್ ಸದಸ್ಯರಿಗೂ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ . ಆದರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ನಾಯಕರಿಗೆ ಆಹ್ವಾನ ನೀಡಲಾಗಿಲ್ಲ, ಏಕೆಂದರೆ ಇದು ದೆಹಲಿ ನಗರಕ್ಕೆ ಸಂಬಂಧಿಸಿದ ಕಾರ್ಯಕ್ರಮ ಎಂದು  ವರದಿ ತಿಳಿಸಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಚಂಡ ಜಯಭಾರಿ ಬಾರಿಸಿದ್ದು, ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಫೆಬ್ರುವರಿ ೧೬ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)
2020: ಪುಣೆ: ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಪ್ರಕರಣವಾದ ಭಿಮಾ ಕೋರೆಗಾಂವ್ ಪ್ರಕರಣವನ್ನು ನಗರದ ಸೆಷನ್ಸ್ ನ್ಯಾಯಾಲಯವು 2020 ಫೆಬ್ರುವರಿ 14ರ ಶುಕ್ರವಾರ ಮುಂಬೈಯಲ್ಲಿನ ಎನ್ಐಎ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಅನುಮತಿ ನೀಡಿತು. ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಳ್ಳಲು ತನ್ನ ಆಕ್ಷೇಪವಿಲ್ಲ ಎಂಬುದಾಗಿ ಮಹಾರಾಷ್ಟ್ರ ಸರ್ಕಾರವು ಕೊನೆಯ ಕ್ಷಣದಲ್ಲಿ ತಿಳಿಸಿದ ಬಳಿಕ ಸೆಷನ್ಸ್ ನ್ಯಾಯಾಲಯವು ಪ್ರಕರಣವನ್ನು ಮುಂಬೈಯ ಎನ್ಐಎ ನ್ಯಾಯಾಲಯಕ್ಕೆ ವರ್ಗಾಯಿಸಲು ಅನುಮತಿ ನೀಡಿತುಏನಿದ್ದರೂ, ಸರ್ಕಾರವು ನಿರಾಕ್ಷೇಪಣಾ ಪತ್ರ  (ಎನ್ಒಸಿ) ಕೊಡದೇ ಇದ್ದರೂ ಪ್ರಕರಣವನ್ನು ಮುಂದುವರೆಸುವ ಅಧಿಕಾರ ತನಗೆ ಇಲ್ಲ ಎಂದು ಪುಣೆ ಸೆಷನ್ಸ್ ಕೋರ್ಟ್ ಸ್ಪಷ್ಟ ಪಡಿಸಿತು೨೦೧೭ರ ಡಿಸೆಂಬರ್ ೩೧ರಂದು ಪುಣೆಯ ಶನಿವಾರವಾಡಾದಲ್ಲಿ ನಡೆದ ಎಲ್ಗರ್ ಸಮಾವೇಶದಲ್ಲಿ ಮಾಡಲಾಗಿತ್ತು ಎನ್ನಲಾದ ಪ್ರಚೋದನಕಾರೀ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪ್ರಚೋದನಾಕಾರಿ ಭಾಷಣಗಳ ಪರಿಣಾಮವಾಗಿಯೇ ಜಿಲೆಯ ಕೋರೆಗಾಂವ್ -ಭಿಮಾ ಸಮರ ಸ್ಮಾರಕದಲ್ಲಿ ಮರುದಿನ ಹಿಂಸಾಚಾರ ಭುಗಿಲೆದ್ದಿತು ಎಂದು ಪೊಲೀಸರು ಪ್ರತಿಪಾದಿಸಿದ್ದರು. ಸಮಾವೇಶಕ್ಕೆ ಮಾವೋವಾದಿ ನಕ್ಸಲೀಯರ ಬೆಂಬಲವಿತ್ತು ಎಂದು ಪುಣೆ ಪೊಲೀಸರು ಪ್ರತಿಪಾದಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2020: ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿ ವಿಳಂಬದ ಹಿನ್ನೆಲೆಯಲ್ಲಿ ಮರಣದಂಡನೆ ಸೇರಿದಂತೆ ಕ್ರಿಮಿನಲ್ ಮೇಲ್ಮನವಿಗಳ ತ್ವರಿತ ವಿಚಾರಣೆಗಾಗಿ ಸುಪ್ರೀಂಕೋರ್ಟ್ 2020 ಫೆಬ್ರುವರಿ 14ರ ಶುಕ್ರವಾರ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು. ಮರಣದಂಡನೆ ಪ್ರಕರಣಗಳ ವಿರುದ್ಧದ ಮೇಲ್ಮನವಿಗಳ ವಿಚಾರಣೆಗೆ ಹೈಕೋರ್ಟ್ ತೀರ್ಪಿನ ದಿನಾಂಕದಿಂದ ತಿಂಗಳ ಗಡುವನ್ನು ಸುಪ್ರೀಂಕೋರ್ಟ್ ನಿಗದಿ ಪಡಿಸಿತು.  ಶುಕ್ರವಾರ ಬಹಿರಂಗ ಪಡಿಸಲಾಗಿರುವ ಸುತ್ತೋಲೆಯಲ್ಲಿ ವಿಚಾರವನ್ನು ಪ್ರಕಟಿಸಲಾಗಿದ್ದು, ಹೈಕೋರ್ಟ್ ಮರಣದಂಡನೆಯನ್ನು ಎತ್ತಿ ಹಿಡಿದ/ ದೃಢ ಪಡಿಸಿದ ಪ್ರಕರಣಗಳಲ್ಲಿ ಮತ್ತು ನ್ಯಾಯಾಲಯವು ವಿಶೇಷ ಅರ್ಜಿಗಳಿಗೆ ಅನುಮತಿ ನೀಡಿದ ಕ್ರಿಮಿನಲ್ ಮೇಲ್ಮನವಿಗಳನ್ನು ವಿಶೇಷ ಅರ್ಜಿಗೆ ಅನುಮತಿ ನೀಡಿದ ಬಳಿಕ ತಿಂಗಳುಗಳಿಗಿಂತ ಹೆಚ್ಚು ವಿಳಂಬವಾಗದಂತೆ, ಮೇಲ್ಮನವಿ ಸಿದ್ಧವಾಗಿರಲಿ ಅಥವಾ ಆಗದೇ ಇರಲಿ ವಿಚಾರಣೆಗಾಗಿ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗಾಗಿ ಪಟ್ಟಿ ಮಾಡಬೇಕು ಎಂದು ಫೆಬ್ರುವರಿ ೧೨ರ ದಿನಾಂಕದ ಮಾರ್ಗದರ್ಶಿ ಸೂತ್ರ ತಿಳಿಸಿತು.     ಮರಣದಂಡನೆ ವಿಚಾರವೂ ಇರುವಂತಹ ವಿಶೇಷ ಅರ್ಜಿಯನ್ನು ಸಲ್ಲಿಸಿದ ತತ್ ಕ್ಷಣವೇ ರಿಜಿಸ್ಟ್ರಿಯಿಂದ ನ್ಯಾಯಾಲಯಕ್ಕೆ ಸಕಲ ದಾಖಲೆಗಳ ಸಹಿತವಾಗಿ ಮಾಹಿತಿ ರವಾನೆ ಆಗಬೇಕು ಎಂದು ತಿಳಿಸಿದ ಸುತ್ತೋಲೆ ಇದಕ್ಕೆ ಸಂಬಂಧಿಸಿದ ಕಡತಗಳ ತಯಾರಿ, ಭಾಷಾಂತರ ಇತ್ಯಾದಿ ಸಿದ್ಧತೆಗೆ ಕೂಡಾ ಗಡುವುಗಳನ್ನು ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment