ನಾನು ಮೆಚ್ಚಿದ ವಾಟ್ಸಪ್

Sunday, February 2, 2020

ಇಂದಿನ ಇತಿಹಾಸ History Today ಫೆಬ್ರುವರಿ 02

2020:  ಬೀಜಿಂಗ್:  ಚೀನಾದಲ್ಲಿ ಮಾರಕ ಕೊರೋನಾವೈರಸ್ ೩೦೦ ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡು, ಇತರ ೧೪,೫೬೨ ಮಂದಿಯನ್ನು ವ್ಯಾಧಿಗ್ರಸ್ತರನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಚೀನೀ  ಪ್ರಯಾಣಿಕರು ಮತ್ತು ಚೀನಾದಲ್ಲಿ ವಾಸವಾಗಿರುವ ವಿದೇಶಿಯರಿಗೆ -ವೀಸಾ ಸೌಲಭ್ಯವನ್ನು ಭಾರತ  2020 ಫೆಬ್ರುವರಿ 02ರ ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.  ‘ಭಾರತ, ಅಮೆರಿಕ ಹಾಗೂ ಇಂಗ್ಲೆಂಡ್ ಸೇರಿದಂತೆ ೨೫ ದೇಶಗಳಿಗೂ ಸೋಂಕು ಹರಡಿರುವುದನ್ನು ಅನುಸರಿಸಿ  -ವೀಸಾಗ ಮೂಲಕ ಭಾರತಕ್ಕೆ ಪ್ರಯಾಣ ಮಾಡುವುದನ್ನು ತಾತ್ಕಾಲಿಕವಾಗಿ vತ್ ಕ್ಷಣದಿಂದ ಜಾರಿಯಾಗುವಂತೆ ಸ್ಥಗಿತಗೊಳಿಸಲಾಗಿದೆಎಂದು ಭಾರತೀಯ ರಾಯಭಾರ ಕಚೇರಿ ಇಲ್ಲಿ ಪ್ರಕಟಿಸಿತು. ‘ಇದು ಚೀನಾದ ಪಾಸ್ಪೋರ್ಟ್ಗಳನ್ನು ಹೊಂದಿರುವವರಿಗೆ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ ವಾಸಿಸುವ ಇತರ ರಾಷ್ಟ್ರೀಯತೆಗಳ ಅರ್ಜಿದಾರರಿಗೆ ಅನ್ವಯಿಸುತ್ತದೆ. ಈಗಾಗಲೇ ನೀಡಲಾದ -ವೀಸಾಗಳನ್ನು ಹೊಂದಿರುವವರು ಇವುಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂಬುದನ್ನು ಮೂಲಕ ಗಮನಿಸಬೇಕುಎಂದು ಪ್ರಕಟಣೆ ತಿಳಿಸಿತು.  "ಭಾರತಕ್ಕೆ ಭೇಟಿ ನೀಡಲು ಬಲವಾದ ಕಾರಣವಿರುವ ವ್ಯಕ್ತಿಗಳು ಬೀಜಿಂಗ್ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಅಥವಾ ಶಾಂಘೈ ಇಲ್ಲವೇ ಗುವಾಂಗ್ಜೊವುನಲ್ಲಿರುವ ಭಾರತೀಯ ದೂತಾವಾಸಗಳನ್ನು ಮತ್ತು ನಗರಗಳಲ್ಲಿನ ಭಾರತೀಯ ವೀಸಾ ಅರ್ಜಿ ಕೇಂದ್ರಗಳನ್ನು ಸಂಪರ್ಕಿಸಬಹುದು" ಎಂದು ಪ್ರಕಟಣೆ ಹೇಳಿತುಚೀನಾದ ಕೊರೋನವೈರಸ್ ಪೀಡಿತ ವುಹಾನ್ ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದ ೩೨೩ ಭಾರತೀಯರು ಮತ್ತು  ಏಳು ಮಂದಿ ಮಾಲ್ದೀವ್ ನಾಗರಿಕರನ್ನು ಭಾರತವು ವಿಮಾನದ ಮೂಲಕ ಸ್ಥಳಾಂತರಿಸಿತು. ಇದರೊಂದಿಗೆ  ಒಟ್ಟು ೬೫೪ ಜನರನ್ನು ತೆರವುಗೊಳಿಸಿದಂತಾಗಿದೆ.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮಾರಕ ಕೊರೋನಾವೈರಸ್ ಕೇಂದ್ರವಾದ ಚೀನಾದ ವುಹಾನ್ ನಗರದಿಂದ ವಿಮಾನದ ಮೂಲಕ ಭಾರತಕ್ಕೆ ಸ್ಥಳಾಂತರಗೊಂಡಿರುವ ಕೆಲವು ಭಾರತೀಯರು, ಭಾರತೀಯ ಸೇನಾ ಸಿಬ್ಬಂದಿ ನಿರ್ಮಿಸಿರುವ ಏಕಾಂತವಾಸದ ಸವಲತ್ತು ಸ್ಥಳದಲ್ಲಿ ಕುಶಿಯಿಂದ ನರ್ತಿಸಿದ ವಿಡಿಯೋ  2020 ಫೆಬ್ರುವರಿ 02ರ ಭಾನುವಾರ  ವೈರಲ್ ಆಯಿತು.  ಏರ್ ಇಂಡಿಯಾ ವಕ್ತಾರ ಧನಂಜಯ್ ಕುಮಾರ್ ಅವರು ವಿಡಿಯೋ ಕ್ಲಿಪ್ನ್ನು ಟ್ವೀಟ್ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸುಮಾರು ೭೦೦ ಮಂದಿ ಅದನ್ನು ಲೈಕ್ ಮಾಡಿದ್ದಾರೆ ಮತ್ತು ಕನಿಷ್ಠ ೧೭೯ ಮಂದಿ ರಿಟ್ವೀಟ್ ಮಾಡಿದರು.  ೧೬ ಸೆಕೆಂಡ್ ಅವಧಿಯ ವಿಡಿಯೋ ದೃಶ್ಯಾವಳಿಯಲ್ಲಿ ಮುಖವಾಡ (ಮಾಸ್ಕ್) ಧರಿಸಿದ ಕನಿಷ್ಠ ಮಂದಿ ವಿದ್ಯಾರ್ಥಿಗಳುಬ್ಯಾಹ್ ದಿ ಅನ್ಪಧ್ ಹಲಿಕೆಹರಿಣ ಹಾಡಿಗೆ ಹೆಜ್ಜೆ ಹಾಕುತ್ತಾ ನರ್ತಿಸುತ್ತಿರುವುದು ದಾಖಲಾಗಿದೆ. ಇತರ ಹಲವರು ಅಲ್ಲೇ ನಿಂತುಕೊಂಡಿರುವುದು ಮತ್ತು ಕೆಲವು ಸಹೋದ್ಯೋಗಿಗಳ ನರ್ತನವನ್ನು ಸೆರೆಹಿಡಿಯಲು ತಮ್ಮ ಮೊಬೈಲ್ ಬಳಸುತ್ತಿರುವುದನ್ನೂ ವಿಡಿಯೋ ದೃಶ್ಯಾವಳಿ ತೋರಿಸಿದೆ. ಏರ್ ಇಂಡಿಯಾದ ಎರಡು ವಿಶೇಷ ವಿಮಾನಗಳು ಚೀನಾದ ಹುಬೇ ಪ್ರಾಂತದ ವುಹಾನ್ ನಗರದಿಂದ ಸುಮಾರು ೬೦೦ಕ್ಕೂ ಹೆಚ್ಚು ಮಂದಿ ಭಾರತೀಯರನ್ನು ಶನಿವಾರ ಮತ್ತು ಭಾನುವಾರ ಸ್ವದೇಶಕ್ಕೆ ಮರಳಿ ಕರೆತಂದಿವೆ.  ವುಹಾನ್ ನಿಂದ ಶನಿವಾರ ತೆರವುಗೊಳಿಸಲಾಗಿರುವ ೩೨೪ ಭಾರತೀಯರ ಪೈಕಿ ೨೧೧ ಮಂದಿ ವಿದ್ಯಾರ್ಥಿಗಳಾಗಿದ್ದು, ೧೧೦ ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದ ವೃತ್ತಿ ನಿರತರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಭಾನುವಾರ ೩೨೩ ಭಾರತೀಯರು ವುಹಾನ್ ನಗರದಿಂದ ವಾಪಸಾಗಿದ್ದು ಅವೆರಲ್ಲರನ್ನೂ ಇದೀಗ ಏಕಾಂತವಾಸಕ್ಕೆ ಕಳುಹಿಸಲಾಗಿದೆ.  ಭಾರತೀಯ ಸೇನೆ ಮತ್ತು ಇಂಡೋ -ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ದೆಹಲಿ ಮತ್ತು ನೆರೆಯ ಹರಿಯಾಣದ ಮಾನೆಸರದಲ್ಲಿ ನಿರ್ಮಿಸಿರುವ ಎರಡು ಏಕಾಂತ ಸವಲತ್ತು (ಕ್ವಾರಂಟೈನ್ ಫೆಸಿಲಿಟಿ) ಕೇಂದ್ರಗಳಿಗೆ ತರುವ ಮುನ್ನ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾದ ಎಲ್ಲ ಭಾರತೀಯರನ್ನು ಕೂಡಾ ಕೊರೋನಾವೈರಸ್ ರೋಗ ಲಕ್ಷಣಗಳಿಗಾಗಿ ತಪಾಸಣೆಗೆ ಗುರಿಪಡಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಗೆ ತಡೆ ನೀಡಿದ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿದ ಅರ್ಜಿಯ ಮೇಲಿನ ತನ್ನ ತೀರ್ಪನ್ನು ದೆಹಲಿ ಹೈಕೋರ್ಟ್ 2020 ಫೆಬ್ರುವರಿ 02ರ ಭಾನುವಾರ  ಕಾಯ್ದಿರಿಸಿತುಎಲ್ಲ ಕಕ್ಷಿದಾರರೂ ತಮ್ಮ ವಾದಗಳನ್ನು ಪೂರ್ಣಗೊಳಿಸಿದ ಬಳಿಕ ತಾನು ಆದೇಶ ನೀಡುವುದಾಗಿ ನ್ಯಾಯಮೂರ್ತಿ ಸುರೇಶ್ ಕೈಟ್ ಅವರು ಹೇಳಿದರುಇದಕ್ಕೆ ಮುನ್ನ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳು ತಮ್ಮ ಗಲ್ಲು ಜಾರಿಯನ್ನು ವಿಳಂಬಗೊಳಿಸುವ ಮೂಲಕಕಾನೂನಿನ ಆದೇಶವನ್ನು ವಿಫಲಗೊಳಿಸಲು ಉದ್ದೇಶ ಪೂರ್ವಕವಾದ, ಲೆಕ್ಕಾಚಾರದ ಮತ್ತು ಅತ್ಯಂತ ವ್ಯವಸ್ಥಿತ ಚಂತನೆಯ ಕುತಂತ್ರವನ್ನು ಹೆಣೆದಿದ್ದಾರೆಎಂದು ಹೈಕೋರ್ಟಿಗೆ ತಿಳಿಸಿದರು. ಕ್ಯುರೇಟಿವ್ ಅರ್ಜಿಯನ್ನು ಅಥವಾ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸದೇ ಇರುವ ಶಿಕ್ಷಿತ ಅಪರಾಧಿ ಪವನ್ ಗುಪ್ತ ಕ್ರಮವು ಉದ್ದೇಶಪೂರ್ವಕವಾದ, ಲೆಕ್ಕಾಚಾರದ ನಿಷ್ಕ್ರಿಯತೆಯಾಗಿದೆ ಎಂದು ಮೆಹ್ತ ಅವರು ನ್ಯಾಯಮೂರ್ತಿ ಸುರೇಶ್ ಕೈಟ್ ಅವರಿಗೆ ವಿವರಿಸಿದರುನಿರ್ಭಯಾ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳು ನ್ಯಾಯಾಂಗ ವ್ಯವಸ್ಥೆಯ ಜೊತೆಗೆ ಆಟವಾಡುತ್ತಿದ್ದಾರೆ ಮತ್ತು ರಾಷ್ಟ್ರದ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದು ಮೆಹ್ತ ಹೇಳಿದರು. ‘ಇಲ್ಲಿ ಕಾನೂನಿನ ಆದೇಶವನ್ನು ವಿಫಲಗೊಳಿಸಲು ಹೆಣೆಯಲಾಗಿರುವ ಉದ್ದೇಶಪೂರ್ವಕವಾದ ಮತ್ತು ವ್ಯವಸ್ಥಿತ ಚಿಂತನೆಯ ಕುಟಿಲತೆ ಇದೆಎಂದು ಮೆಹ್ತ ಹೈಕೋರ್ಟಿಗೆ ವಿವರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಶಿಮ್ಲಾ ಭೇಟಿಯಲ್ಲಿದ್ದ ಕಾಂಗೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು  2020 ಫೆಬ್ರುವರಿ 02ರ ಭಾನುವಾರ  ಸಂಜೆ ಡಿಢೀರನೆ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ರಾಷ್ಟ್ರದ ರಾಜಧಾನಿಗೆ ವಾಪಸಾಗಿ  ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾದರು. ಉದರ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಯಿತು.  ೭೦ರ ಹರೆಯದ ಸೋನಿಯಾ ಗಾಂಧಿ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಡಿ.ಎಸ್. ರಾಣಾ ತಿಳಿಸಿದ್ದಾರೆ.  ‘ಸೋನಿಯಾ ಗಾಂಧಿ ಅವರನ್ನು ಭಾನುವಾರ ಸಂಜೆ ಗಂಟೆಗೆ  ಆಸ್ಪತ್ರೆಗೆ ಕರೆತರಲಾಯಿತು. ಅವರು ಉದರ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂತು. ನಿಗಾ ಇಡುವ ಸಲುವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಎಂದು ರಾಣಾ ಅವರು ಹೇಳಿಕೆಯಲ್ಲಿ ತಿಳಿಸಿದರು.  ಮಧ್ಯೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರುತಾಯಿ ಶಿಮ್ಲಾದಲ್ಲಿ ಇದ್ದರು ಮತ್ತು ಹೊಟ್ಟೆ ನೋವಿಗೆ ಒಳಗಾದರು. ನಾವು ಅವರನ್ನು ವಾಪಸ್ ಕರೆಸಿದ್ದೇವೆ. ಚಿಂತಿಸುವಂತಹುದು ಏನೂ ಇಲ್ಲ, ಅವರು ಚೆನ್ನಾಗಿದ್ದಾರೆ. ಎಲ್ಲರ ಅಪೂರ್ವ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳುಎಂದು ಬರೆದರು.  ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರು ವೈಮಾನಿಕ ಆಂಬುಲೆನ್ಸ್ ಮೂಲಕ ಶಿಮ್ಲಾದಿಂದ ದೆಹಲಿಗೆ ಧಾವಿಸಿದರು ಎಂದು ಹೇಳಲಾಗಿದೆ. ಶಿಮ್ಲಾದಲ್ಲಿ ಅವರು ರಜಾಕಾಲದ ವಿಶ್ರಾಂತಿಗಾಗಿ ತೆರಳಿದ್ದರು ಎನ್ನಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಶಾಹೀನ್ ಬಾಗ್ ಪ್ರತಿಭಟನೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅರು ದೆಹಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ನಡೆಸದಂತೆ ನಿಷೇಧಿಸಬೇಕು ಎಂದು ಆಮ್ ಆದ್ಮಿ ಪಕ್ಷವು (ಎಎಪಿ-ಆಪ್) ಚುನಾವಣೆ ಆಯೋಗವನ್ನು  2020 ಫೆಬ್ರುವರಿ 02ರ ಭಾನುವಾರ ಒತ್ತಾಯಿಸಿತು.  ವಾಯುವ್ಯ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಸಭೆಯೊಂದರಲ್ಲಿ  ಪಾಲ್ಗೊಂಡು ಕಾಶ್ಮೀರದಲ್ಲಿ ಉಗ್ರರಿಗೆ ಬೆಂಬಲ ನೀಡುವವರು ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಆಜಾದಿ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳಿದ್ದರು.  ಅಲ್ಲದೆ ಭಿನ್ನಮತೀಯರೊಂದಿಗೆ ವ್ಯವಹರಿಸಲು ಗುಂಡುಗಳ ಬಳಕೆ ಬಗ್ಗೆ ಒಲವು ವ್ಯಕ್ತ ಪಡಿಸಿದ್ದರು ಎನ್ನಲಾಗಿತ್ತು.  ನಾವು ಯಾರೊಬ್ಬರ ಉತ್ಸವ ಅಥವಾ ನಂಬಿಕೆಗೆ ಅಡ್ಡಿ ಪಡಿಸುವುದಿಲ್ಲ. ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಉತ್ಸವಗಳನ್ನು ಆಚರಿಸಲಿ. ಆದರೆ ಶಿವಭಕ್ತರ ಮೇಲೆ ಯಾರೇ ವ್ಯಕ್ತಿ ಗುಂಡು ಹಾರಿಸಿದರೆ, ದಂಗೆ ಎಬ್ಬಿಸಿದರೆ.. ಅವರು ಮಾತುಗಳನ್ನು ಆಲಿಸದೇ ಇದ್ದರೆ, ಅವರು ಖಂಡಿತವಾಗಿ ಗುಂಡುಗಳಿಗೆ ಆಲಿಸುತ್ತಾರೆಎಂದು ಆದಿತ್ಯನಾಥ್ ಸಭೆಯಲ್ಲಿ ಹೇಳಿದರು ಎನ್ನಲಾಗಿತ್ತು.  ಆದಿತ್ಯನಾಥ್ ಅವರು ಭಾಷಣ ಮಾಡುತ್ತಿದ್ದ ವೇಳೆಯಲ್ಲಿಯೇ ಶಾಹೀನ್ ಬಾಗ್ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ವ್ಯಕ್ತಿಯೊಬ್ಬ ಹಿಂದೂಗಳು ಮಾತ್ರವೇ ಆಳ್ವಿಕೆ ನಡೆಸಬೇಕು ಎಂದು ಘೋಷಣೆ ಮೊಳಗಿಸುತ್ತ ಗುಂಡಿನ ದಾಳಿ ನಡೆಸಿದ ಘಟನೆ 2020 ಫೆಬ್ರುವರಿ 01ರ ಶನಿವಾರ ಘಟಿಸಿತ್ತು.   ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಾಹೀನ್ ಬಾಗ್   ಪ್ರತಿಭಟನಾಕಾರರಿಗೆ ಬಿರಿಯಾನಿ ಪೂರೈಸುತ್ತಿದ್ದಾರೆಎಂದು ಕೂಡಾ ತಮ್ಮ ಭಾಷಣಗಳಲ್ಲಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದರು.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)




No comments:

Post a Comment