Tuesday, February 4, 2020

ಇಂದಿನ ಇತಿಹಾಸ History Today ಫೆಬ್ರುವರಿ 04

2020: ನವದೆಹಲಿ: ’ಬಿಜೆಪಿಯ ಪರವಾಗಿ ಎದ್ದಿರುವ ಅಲೆಯು ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಉಳಿದಿರುವ ಹೊತ್ತಿನಲ್ಲಿ ಹಲವಾರು ಜನರ ನಿದ್ದೆಗೆಡಿಸಿದೆಎಂದು ಪ್ರಧಾನಿ ನರೇಂದ್ರ ಮೋದಿ ಅವರು  2020 ಫೆಬ್ರುವರಿ 04ರ ಮಂಗಳವಾರ ಇಲ್ಲಿ ಹೇಳಿದರು.  ದೆಹಲಿ ವಿಧಾನಸಭಾ ಚುನಾವಣೆ ಸಲುವಾಗಿ ದ್ವಾರಕಾದಲ್ಲಿ ತಮ್ಮ ಎರಡನೇ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಪ್ರಧಾನಿಕೊನೆಯ ನಾಲ್ಕು ದಿನಗಳಲ್ಲಿ ಬಿಜೆಪಿ ಪರವಾಗಿ ಎದ್ದಿರುವ ಅಲೆಯು ಹಲವಾರು ಜನರ ನಿದ್ದೆಯನ್ನು ಕೆಡಿಸಿದೆಎಂದು ನುಡಿದರು.  ಆಮ್ ಆದ್ಮಿ ಪಕ್ಷವು ಕೇಂದ್ರವು ಬಡವರಿಗಾಗಿ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯಂತಹ ಕಲ್ಯಾಣ ಯೋಜನೆಗಳಿಗೆ ತಡೆ ಹಾಕಿದೆ ಎಂದು ಪ್ರಧಾನಿ ಆಪಾದಿಸಿದರು. ಆದರೆ, ಫೆಬ್ರುವರಿ ೧೧ರ ಬಳಿಕ ಹೀಗೆ ಆಗುವುದಿಲ್ಲ ಎಂದು ಅವರು ನುಡಿದರು.  ದೆಹಲಿಯ ನಿವಾಸಿಯೊಬ್ಬರು ಗ್ವಾಲಿಯರ್ನಲ್ಲಿ ಪ್ರವಾಸ ಕಾಲದಲ್ಲಿ ಅಸ್ವಸ್ಥನಾದರೆ, ಮೊಹಲ್ಲಾ ಕ್ಲಿನಿಕ್ ಅಲ್ಲಿಗೆ ಹೋಗುತ್ತದೆಯೇ? ಆದರೆ ಆಯುಷ್ಮಾನ್ ಭಾರತ ಅನ್ವಯಗೊಂಡರೆ, ಅದರ ಫಲಾನುಭವಿ ಎಲ್ಲಿಯೇ ಅಸ್ವಸ್ಥನಾಗಲಿ ಅಲ್ಲಿ ಉಚಿತ ಚಿಕಿತ್ಸೆ ಪಡೆಯುತ್ತಾನೆ. ಕನಿಷ್ಠ ಒಬ್ಬ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯವಾದರೆ, ಅದು ಮಹತ್ವದ ಕೆಲಸ. ಆದರೆ ಇಲ್ಲಿ ಹೃದಯರಹಿತ ಸರ್ಕಾರವಿದೆ, ಅದಕ್ಕೆ ನಿಮ್ಮ ಬಗ್ಗೆ ಏನೇನೂ ಕಾಳಜಿ ಇಲ್ಲಎಂದು ಹೇಳುತ್ತಾ ಪ್ರಧಾನಿ ಮೋದಿ ಆಪ್ ಸರ್ಕಾರವು ತಡೆ ಹಿಡಿದ ಕೇಂದ್ರ ಯೋಜನೆಗಳ ಪಟ್ಟಿ ಮಾಡಿದರು. ರಾಷ್ಟ್ರೀಯ ರಾಜಧಾನಿಗೆ ಇತರರನ್ನು ದೂಷಿಸುತ್ತಾ ಕಾಲಹರಣ ಮಾಡದ, ಬದಲಿಗೆ ಬಡವರಿಗಾಗಿ ಕೆಲಸ ಮಾಡುವ ಸರ್ಕಾರ ಬೇಕಾಗಿದೆ, ದ್ವೇಷ ರಾಜಕಾರಣ ಮಾಡುತ್ತಾ ಕಾಲ ಕಳೆಯುವ ಸರ್ಕಾರವಲ್ಲಎಂದು ಪ್ರಧಾನಿ ನುಡಿದರು.  ನಾವು ಮುಂದಿನ ದಶಕಕ್ಕೆ ಹಾದಿ ತೋರಿಸಬೇಕಾಗಿದೆ ಮತ್ತು ಮತದಾರರು ಫೆಬ್ರುವರಿ ೮ರಂದು ನಿರ್ಧಾರ ಕೈಗೊಳ್ಳಬೇಕಾಗಿದೆ. ದೆಹಲಿಗೆ ನಿರ್ದೇಶನಗಳನ್ನು ಕೊಡುವ ಸರ್ಕಾರ ಬೇಕಾಗಿದೆ. ನಾವು ನಮ್ಮೆಲ್ಲ  ಬಲದೊಂದಿಗೆ ಎದ್ದು ನಿಂತುಕೊಳ್ಳಬೇಕಾಗಿದೆಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಶಾಹೀನ್ ಬಾಗ್ ಸಮೀಪ ಶನಿವಾರ ಗುಂಡು ಹಾರಿಸಿರುವ ವ್ಯಕ್ತಿ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ಸದಸ್ಯ ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು 2020 ಫೆಬ್ರುವರಿ 04ರ ಮಂಗಳವಾರ  ಸುದ್ದಿಗಾರರಿಗೆ ತಿಳಿಸಿದ್ದು, ಇದರೊಂದಿಗೆ ಪ್ರಕರಣ ಕುತೂಹಲಕಾರಿ ತಿರುವು ಪಡೆಯಿತು. ಶಾಹೀನ್ ಬಾಗ್ನಲ್ಲಿ ಪೊಲೀಸ್ ಬ್ಯಾರಿಕೇಡ್ ಸಮೀಪದಿಂದಜೈ ಶ್ರೀರಾಮ್ಎಂಬುದಾಗಿ ಕೂಗಿ ಗುಂಡು ಹಾರಿಸಿದ ೨೫ರ ಹರೆಯದ ಕಪಿಲ್ ಗುಜ್ಜಾರ್ ತಾನು ಆಪ್ ಸದಸ್ಯ ಎಂಬುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಹೇಳಿದರು.
ಶನಿವಾರ ನೂರಾರು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ಶಾಹೀನ್ ಬಾಗ್ ಸಮೀಪದ ಬ್ಯಾರಿಕೇಡ್ ಹಿಂಭಾಗದಿಂದ ವ್ಯಕ್ತಿ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಪೊಲೀಸರು ಎಳೆದೊಯ್ಯುವಾಗ ಆತಜೈಶ್ರೀರಾಮ್ಎಂಬುದಾಗಿ ಕೂಗಿದ್ದಲ್ಲದೆ, ’ನಮ್ಮ ದೇಶದಲ್ಲಿ ಹಿಂದುಗಳು ಮಾತ್ರ ಉಳಿಯುತ್ತಾರೆಎಂದು ಹೇಳಿದ್ದು ಕೇಳಿಸಿತ್ತು. ಪೊಲೀಸರು ಆತನನ್ನು ವಿಚಾರಣೆ ಸಲುವಾಗಿ ಎರಡು ದಿನಗಳ ಅವಧಿಗೆ ವಶಕ್ಕೆ ಪಡೆದಿದ್ದರು.  ‘ನಮ್ಮ ಪ್ರಾಥಮಿಕ ತನಿಖೆಯಲ್ಲಿ ನಮಗೆ ಕೆಲವು ಫೋಟೋಗಳು ಕಪಿಲ್ ಗುಜ್ಜಾರನ ಫೋನಿನಲ್ಲಿ ಲಭಿಸಿವೆ. ಅವುಗಳು ಆತ ಅತಿಶಿ ಮತ್ತು ಸಂಜಯ್ ಸಿಂಗ್ ಅವರಂತಹ ಆಪ್ ನಾಯಕರ ಜೊತೆಗೆ ಇದ್ದುದನ್ನು ತೋರಿಸಿವೆ. ಇದಕ್ಕೂ ಮುನ್ನ ಆತ ತಾನು ಮತ್ತು ತನ್ನ ತಂದೆ ವರ್ಷದ ಹಿಂದೆ ಆಫ್ ಸೇರಿದ್ದುದಾಗಿ ಬಹಿರಂಗ ಪಡಿಸಿದ್ದಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿ ರಾಜೇಶ್ ದೇವ್ ಹೇಳಿದರು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಮರಣದಂಡನೆ  ಜಾರಿಗೆ ವಿಚಾರಣಾ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿರುವ ಅರ್ಜಿಯ ಮೇಲಿನ ತನ್ನ ತೀರ್ಪನ್ನು ದೆಹಲಿ ಹೈಕೋರ್ಟ್ 2020 ಫೆಬ್ರುವರಿ 05ರ ಬುಧವಾರ ಪ್ರಕಟಿಸಲಿದೆನ್ಯಾಯಮೂರ್ತಿ ಸುರೇಶ ಕುಮಾರ್ ಕೈಟ್ ಅವರು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಮೇಲೆ ಶನಿವಾರ ಮತ್ತು ಭಾನುವಾರ ವಿಚಾರಣೆ ನಡೆಸಿದ ಬಳಿಕ ಫೆಬ್ರುವರಿ ೨ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ್ದರು. ತಿಹಾರ್ ಸೆರೆಮನೆಯಲ್ಲಿ ಇರಿಸಲಾಗಿರುವ ಪ್ರಕರಣದ ಶಿಕ್ಷಿತ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಕುಮಾರ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ (೩೧) ಅವರ ಮರಣದಂಡನೆಯ ಜಾರಿಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿದು ವಿಚಾರಣಾ ನ್ಯಾಯಾಲಯವು ಜನವರಿ ೩೧ರಂದು ನೀಡಿದ ಆದೇಶವನ್ನು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಹೈಕೋರ್ಟಿನಲ್ಲಿ ಪ್ರಶ್ನಿಸಿವೆ. ಇದಕ್ಕೆ ಮುನ್ನ ನತದೃಷ್ಟ ಸಂತ್ರಸ್ತೆಯ ಹೆತ್ತವರು ಕೇಂದ್ರದ ಅರ್ಜಿ ಬಗ್ಗೆ ತ್ವರಿತವಾಗಿ ನಿರ್ಧರಿಸುವಂತೆ ನ್ಯಾಯಾಲಯವನ್ನು 2020 ಫೆಬ್ರುವರಿ 04ರ ಮಂಗಳವಾರ  ಆಗ್ರಹಿಸಿದ್ದರು. ಆದಷ್ಟೂ ಬೇಗ ಆದೇಶ ನೀಡುವುದಾಗಿ ನ್ಯಾಯಮೂರ್ತಿ ತಿಳಿಸಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 2020 ಫೆಬ್ರುವರಿ 04ರ ಮಂಗಳವಾರ  ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸವಾಲು ಹಾಕಿದರು ಮತ್ತುಯಾರನ್ನಾದರೂ ಹೆಸರಿಸಿ, ನಾನು ಅವರೊಂದಿಗೆ ಚರ್ಚೆಗೆ ಸಿದ್ಧಎಂದು  ಘೋಷಿಸಿದರು.  ವಿರೋಧ ಪಕ್ಷವು  2020 ಫೆಬ್ರುವರಿ 05ರ ಬುಧವಾರ ಮಧ್ಯಾಹ್ನ ಗಂಟೆಯ ಒಳಗಾಗಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಬೇಕು. ಯಾವುದೇ ಹೆಸರು ಪ್ರಕಟವಾಗದೇ ಇದ್ದಲ್ಲಿನಾನು ಇನ್ನೊಂದು ಪತ್ರಿಕಾಗೋಷ್ಠಿ ನಡೆಸುತ್ತೇನೆಎಂದು ಆಮ್ ಆದ್ಮಿ ಪಕ್ಷದ ನಾಯಕ ಹೇಳಿದರು.  ಬಿಜೆಪಿಯು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಬೇಕು ಎಂದು ದೆಹಲಿಯ ಜನತೆ ಬಯಸುತ್ತಾರೆ ಮತ್ತು ನಾನು ಮುಖ್ಯಮಂತ್ರಿ ಅಭ್ಯರ್ಥಿಯ ಜೊತೆಗೆ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಚರ್ಚೆ ಅವರು ಆಯ್ಕೆ ಮಾಡುವ ಯಾವುದೇ ಸ್ಥಳದಲ್ಲಿ ನಡೆಯಬಹುದುಎಂದು ಅರವಿಂದ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಆಪ್) ಚುನಾವಣಾ ಪ್ರಣಾಳಿಕೆ ಬಿಡುಗಡೆಗಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.  ಫೆಬ್ರುವರಿ ೮ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಆಪ್ ನಾಯಕ ಸವಾಲು ಎಸೆದರು. ‘ಅವರ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದಾಗಿ ತಿಳಿಯಲು ಜನರು ಬಯಸಿದ್ದಾರೆ. ಅವರ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಗೊತ್ತಿಲ್ಲದೇ ಇದ್ದರೆ ಅವರಿಗೆ ತಾವು ಯಾಕೆ ವೋಟು ನೀಡಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನೀವು ನಮಗೆ ವೋಟು ಕೊಡಿ, ನಾವು ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ನಿರ್ಧರಿಸುತ್ತೇವೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ನಿರ್ಧರಿಸುವುದು ಜನತೆಎಂದು ಕೇಜ್ರಿವಾಲ್ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ/ ಅಮರಾವತಿ: ತಮ್ಮ ರಾಜಧಾನಿ ನಗರಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ರಾಜ್ಯ ಸರ್ಕಾರಗಳ ವಿಶೇಷಾಧಿಕಾರವಾಗಿದ್ದು, ಕೇಂದ್ರವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವು 2020 ಫೆಬ್ರುವರಿ 04ರ ಮಂಗಳವಾರ  ಸ್ಪಷ್ಟ ಪಡಿಸಿತು.  ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರದ ಗೃಹ ವ್ಯವಹಾರಗಳ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರುತನ್ನ ರಾಜಧಾನಿ ಬಗ್ಗೆ ನಿರ್ಧರಿಸುವುದು ರಾಜ್ಯದ ವಾಪ್ತಿಗೆ ಬರುತ್ತದೆ. ವಿಚಾರದಲ್ಲಿ ಕೇಂದ್ರವು ಮಧ್ಯಪ್ರವೇಶ ಮಾಡುವುದಿಲ್ಲಎಂದು ಹೇಳಿದರು.  ತೆಲುಗುದೇಶಂ ಪಕ್ಷದ (ಟಿಡಿಪಿ) ಸಂಸತ್ ಸದಸ್ಯ ಜಯದೇವ ಗಲ್ಲ ಅವರು ಎತ್ತಿದ ಪ್ರಶ್ನೆಗೆ ಸಚಿವ ರಾಯ್ ಉತ್ತರ ನೀಡುತ್ತಿದ್ದರು. ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) ನೇತೃತ್ವದ ಸರ್ಕಾರವು ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾಪಿಸಿರುವ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಏನು ಎಂದು ಜಯದೇವ ಗಲ್ಲ ಪ್ರಶ್ನಿಸಿದ್ದರು. ಇಂತಹ ನಿರ್ಧಾರಗಳನ್ನು ಕೈಗೊಳ್ಳದಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದೇ ಎಂಬುದಾಗಿಯೂ ತಿಳಿಯಲು ಗಲ್ಲಾ ಬಯಸಿದ್ದರು.  ಇತ್ತೀಚೆಗೆ, ರಾಜ್ಯ ಸರ್ಕಾರವು ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಸೃಷ್ಟಿಸುವ ನಿರ್ಣಯ ಕೈಗೊಂಡಿರುವುದನ್ನು ಸೂಚಿಸಿ ಮಾಧ್ಯಮ ವರದಿಗಳು ಬಂದಿದ್ದವುಎಂದ ನುಡಿದ ರಾಯ್, ’ತನ್ನ ಪ್ರದೇಶದ ವ್ಯಾಪ್ತಿಯಲ್ಲಿ ತನ್ನ ರಾಜಧಾನಿಯ ಬಗ್ಗೆ ನಿರ್ಧರಿಸುವುದು ಆಯಾ ರಾಜ್ಯಕ್ಕೆ ಬಿಟ್ಟದ್ದುಎಂದು ಹೇಳಿದರು. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ವಿಶಾಖಪಟ್ಟಣ, ಕರ್ನೂಲ್ ನಗರಗಳನ್ನು ಕಾರ್ಯಕಾರಿ (ಎಕ್ಸಿಕ್ಯೂಟಿವ್) ಮತ್ತು ನ್ಯಾಯಾಂಗ (ಜುಡಿಷಿಯಲ್) ರಾಜಧಾನಿಗಳನ್ನಾಗಿ ಮಾಡುವ ತಮ್ಮ ಸರ್ಕಾರದ ನಿರ್ಣಯವನ್ನು ಪ್ರಕಟಿಸಿದ ಬಳಿಕ ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಅಮರಾವತಿಯು ಶಾಸಕಾಂಗ ಕೇಂದ್ರ ಸ್ಥಳವಾಗಿಯೂ ಮುಂದುವರೆಯುವುದು ಎಂದು ಜಗನ್ ಸಂದರ್ಭದಲ್ಲಿ ಹೇಳಿದ್ದರು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ಬೆಂಗಳೂರು: ಬೆಂಗಳೂರಿನಲ್ಲಿ ಮಾಡಿದ್ದ ಭಾಷಣದಲ್ಲಿ ತಾವು ಸ್ವಾತಂತ್ರ್ಯ ಹೋರಾಟವನ್ನು ವರ್ಗೀಕರಿಸಿದ್ದುದಾಗಿ  2020 ಫೆಬ್ರುವರಿ 04ರ ಮಂಗಳವಾರ  ಸ್ಪಷ್ಟ ಪಡಿಸಿರುವ ಕೇಂದ್ರ ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಅನಂತಕುಮಾರ ಹೆಗಡೆ ಅವರು ‘ಭಾಷಣದಲ್ಲಿ ತಾವು ಮಹಾತ್ಮ ಗಾಂಧಿ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲಎಂದು ಹೇಳಿದರು.  ಕೆಲವರು ನಡೆಸಿದ್ದುದು ಬ್ರಿಟಿಷರ ಜೊತೆಗಿನ ಹೊಂದಾಣಿಕೆಯ ಹೋರಾಟ, ಉಪವಾಸಕ್ಕೆ ಹೆದರಿ ಬ್ರಿಟಿಷರು ಸ್ವಾತಂತ್ರ ಕೊಟ್ಟದ್ದಲ್ಲಎಂಬ ತಮ್ಮ ಹೇಳಿಕೆಯನ್ನು ಗಾಂಧೀಜಿ ಕುರಿತಾದದ್ದು ಎಂಬುದಾಗಿ ವಾದಿಸಿ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ  ಸುದ್ದಿ ಸಂಸ್ಥೆ ಒಂದರ ಜೊತೆ ಮಾತನಾಡುತ್ತಾ ಸಂಸತ್ ಸದಸ್ಯ ಹೆಗಡೆ ಸ್ಪಷ್ಟನೆ ನೀಡಿದರು. ನನ್ನ ಭಾಷಣದಲ್ಲಿ ನಾನು ಯಾವುದೇ ರಾಜಕೀಯ ಪಕ್ಷವನ್ನಾಗಲಿ, ಮಹಾತ್ಮ ಗಾಂಧೀಜಿ ಅವರನ್ನಾಗಲಿ ಅಥವಾ ಯಾವುದೇ ವ್ಯಕ್ತಿಯನ್ನಾಗಲಿ ಉಲ್ಲೇಖಿಸಿಲ್ಲ. ಸ್ವಾತಂತ್ರ್ಯ ಹೋರಾಟದ ಬಗೆಗಳನ್ನು ನಾನು ವರ್ಗೀಕರಣ ಮಾಡಿದ್ದೆಎಂದು ಹೆಗಡೆ ಹೇಳಿದರು. ‘ನಾನು ಅಂದು ಏನು ಮಾತನಾಡಿದ್ದೆ ಎಂಬುದು ಎಲ್ಲೆಡೆ ಲಭ್ಯವಿದೆ. ನನ್ನ ವೆಬ್ ಸೈಟಿನಲ್ಲಿಯೂ ಇದೆ. ಅಂದಿನ ಭಾಷಣದಲ್ಲಿ ನಾನು ಗಾಂಧೀಜಿ ಅವರನ್ನಾಗಲಿ, ನೆಹರೂ ಅವರನ್ನಾಗಲಿ ಟೀಕಿಸಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಚರ್ಚೆ ಮಾಡಿದ್ದೆಎಂದು ಅನಂತಕುಮಾರ ಹೇಳಿದರು. ‘ನನ್ನ ಹೇಳಿಕೆ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು, ವಿಶ್ಲೇಷಣೆಗಳೆಲ್ಲವೂ ಸುಳ್ಳು. ಈಗ ಚರ್ಚೆಯಾಗುತ್ತಿರುವಂತೆ ನಾನು ಏನನ್ನೂ ಹೇಳಿಲ್ಲ. ಇದು ಅನಗತ್ಯ ವಿವಾದಎಂದು ಅವರು ನುಡಿದರು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)



No comments:

Post a Comment