2020: ನವದೆಹಲಿ:
ಇಡೀ ದೇಶದ ಗಮನ ಸೆಳೆದಿರುವ ಪ್ರತಿಷ್ಠಿತ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ 2020 ಫೆಬ್ರುವರಿ 08ರ ಶನಿವಾರ ಮುಕ್ತಾಯಗೊಳ್ಳುತ್ತಿದ್ದಂತೆಯೇ
ರಾಷ್ಟ್ರ ರಾಜಧಾನಿಯ ಗದ್ದುಗೆಗಾಗಿ ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿದ್ದ ಹಣಾಹಣಿ ನಿರ್ಣಾಯಕ
ಹಂತವನ್ನು ತಲುಪಿದ್ದು, ಆಮ್ ಆದ್ಮಿ ಪಕ್ಷ (ಎಎಪಿ-ಆಪ್) ಮರಳಿ ಅಧಿಕಾರಕ್ಕೆ ಏರುವುದಾಗಿ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದವು. ಆಡಳಿತಾರೂಢ ಆಮ್ ಆದ್ಮಿ
ಪಕ್ಷ ಹಾಗೂ ಭಾರತೀಯ ಜನತಾ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವೇ ಮರಳಿ ಅಧಿಕಾರಕ್ಕೇರುವುದಾಗಿ ಚುನಾವಣಾ ಪೂರ್ವ ಮತದಾನ ಸಮೀಕ್ಷೆಗಳು ತಿಳಿಸಿದ್ದವು. ಇದೀಗ ಮತಗಟ್ಟೆ ಸಮೀಕ್ಷೆಯ ಬಳಿವೂ ಇದೇ ಅಭಿಪ್ರಾಯ ಹೊರಹೊಮ್ಮಿತು. ಹಾಲಿ ಮುಖ್ಯಮಂತ್ರಿ
ಅರವಿಂದ ಕೇಜ್ರಿವಾಲ್ ಅವರೇ ಮುಖ್ಯಮಂತ್ರಿಯಾಗಿ ಪುನರಾಯ್ಕೆಗೊಳ್ಳುವ ನಿರೀಕ್ಷೆಯನ್ನೂ ಮತಗಟ್ಟೆ ಸಮೀಕ್ಷೆಗಳು ವ್ಯಕ್ತ ಪಡಿಸಿದವು. ೭೦ ಸ್ಥಾನಗಳಿಗಾಗಿ ಮುಕ್ತಾಯಗೊಂಡ ಮತದಾನದಲ್ಲಿ ದೆಹಲಿಯ ಮತದಾರರು ಆಮ್ ಆದ್ಮಿ, ಬಿಜೆಪಿ, ಕಾಂಗ್ರೆಸ್, ಇತರೇ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು ೬೭೨ ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂ ಯಂತ್ರದಲ್ಲಿ ಭದ್ರಪಡಿಸಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ 2020 ಫೆಬ್ರುವರಿ
೧೧ರ ಮಂಗಳವಾರ ಹೊರಬೀಳಲಿದೆ. ೭೦ ಸ್ಥಾನಬಲದ ದೆಹಲಿ
ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ೩೬ ಸ್ಥಾನಗಳ ಅಗತ್ಯವಿದೆ.
ಬಹುತೇಕ ಮತದಾನೋತ್ತರ
ಸಮೀಕ್ಷೆಗಳ ಪ್ರಕಾರ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತವನ್ನು ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ೨೦೧೫ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ೬೭ ಸ್ಥಾನಗಳನ್ನು ಗೆದ್ದಿದ್ದ
ಆಮ್ ಆದ್ಮಿ ಪಕ್ಷವು ಪ್ರಚಂಡ ಬಹುಮತದೊಂದಿಗೆ
ದೆಹಲಿಯ ಅಧಿಕಾರದ ಗದ್ದುಗೆಯನ್ನೇರಿತ್ತು. ಭಾರತೀಯ ಜನತಾ ಪಕ್ಷ ಕೇವಲ ೩ ಸ್ಥಾನಗಳಿಗೆ ತೃಪ್ತಿ
ಪಟ್ಟುಕೊಂಡಿದ್ದರೆ ಸುದೀರ್ಘ ಕಾಲ ದೆಹಲಿ ರಾಜ್ಯದಲ್ಲಿ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು. ಇದೀಗ ಶನಿವಾರ ನಡೆದಿರುವ ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿಯ ಬಲ ಸುಧಾರಿಸಿದರೂ, ಅಧಿಕಾರ
ಪಡೆಯುವಲ್ಲಿ ಪಕ್ಷ ಮುಗ್ಗರಿಸಲಿದೆ ಎಂದು ಹೇಳಲಾಗಿದ್ದು, ತನ್ನ ಬಲವನ್ನು ಕಳೆದುಕೊಂಡರೂ ಆಮ್ ಆದ್ಮಿ ಪಕ್ಷವು ಮರಳಿ ಅಧಿಕಾರವನ್ನು ಹಿಡಿಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ನವದೆಹಲಿಯ ಪ್ರತಿಷ್ಠಿತ ವಿಧಾನಸಭೆಗೆ 2020 ಫೆಬ್ರುವರಿ
08ರ ಶನಿವಾರ ನಡೆದ
ಏಕಹಂತದ ಚುನಾವಣೆಯಲ್ಲಿ ಶೇಕಡಾ ೫೭%
ರಷ್ಟು ಮತದಾನವಾಗಿದ್ದು, ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. ಆದರೆ ಮತದಾನ ಪ್ರಮಾಣ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಕಡಾ
೧೦ರಷ್ಟು ಇಳಿಮುಖವಾಯಿತು. ೨೦೧೫ ರ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ೬೭ರಷ್ಟು ಮತದಾನವಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಭಟನೆಗಳ ಹಿನ್ನೆಲೆಯಲಿ ಕಾವೇರಿದ್ದ ದೆಹಲಿಯಲ್ಲಿ ಪ್ರಚಾರವು ಕೋಮಬಣ್ಣವನ್ನು ತಳೆದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಅಲಕಾ ಲಾಂಬಾ ಮತ್ತು ಚಾಂದನಿ ಚೌಕದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ-ಆಪ್) ಕಾರ್ಯಕರ್ತರು
ಘರ್ಷಣೆಯಲ್ಲಿ ಶಾಮೀಲಾದ ಘಟನೆಯನ್ನು ಹೊರತುಪಡಿಸಿ ಮತದಾನವು ಬಹುತೇಕ
ಶಾಂತಿಯುತವಾಗಿತ್ತು. ದೆಹಲಿಯಲ್ಲಿ
ಆಮ್ ಆದ್ಮಿ ಪಕ್ಷ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಕ್ತ ಪಡಿಸಿದರು. ಆಪ್ ಸರ್ಕಾರ ಮಾಡಿದ ಕಾರ್ಯಗಳ ಆಧಾರದ ಮೇಲೆ ದೆಹಲಿಯ ಜನರು ಮತ ಚಲಾಯಿಸಲಿದ್ದಾರೆ ಎಂದು
ಕೇಜ್ರಿವಾಲ್ ಅವರು ತಮ್ಮ ಪತ್ನಿ ಸುನೀತಾ ಮತ್ತು ಮಗ ಪುಲ್ಕಿತ್ ಅವರೊಂದಿಗೆ
ಸಿವಿಲ್ ಲೈನ್ಸ್ ಪ್ರದೇಶದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ಬಳಿಕ
ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
೮೧,೦೫,೨೩೬ ಪುರುಷ
ಮತದಾರರು, ೬೬,೮೦,೨೭೭
ಮಹಿಳಾ ಮತದಾರರು ಮತ್ತು ೮೬೯ ತೃತೀಯ ಲಿಂಗ ಮತದಾrರು ಇರುವ ರಾಷ್ಟ್ರ
ರಾಜಧಾನಿಯ ೨,೬೮೯ ಪ್ರದೇಶಗಳಲ್ಲಿ
೧೩,೫೭೦ ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಿತು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)
2020: ಚಂಡೀಗಢ;
ಪಂಜಾಬ್ ರಾಜ್ಯದ ತರಣ್ ಜಿಲ್ಲೆಯಲ್ಲಿ 2020 ಫೆಬ್ರುವರಿ 08ರ ಶನಿವಾರ ನಡೆಯುತ್ತಿದ್ದ ಧಾರ್ಮಿಕ ಉತ್ಸವದ ಮೆರವಣಿಗೆ ವೇಳೆ ಪಟಾಕಿ ಸ್ಫೋಟಗೊಂಡ ಪರಿಣಾಮವಾಗಿ ೩ ಮಂದಿ ಸಾವನ್ನಪ್ಪಿ,
ಇತರ ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಭೀತಿ ಪಡಲಾಯಿತು. ಪಟಾಕಿ ಸ್ಫೋಟದಿಂದಾಗಿ ೧೪ರಿಂದ ೧೫ ಮಂದಿ ಸಾವನ್ನಪ್ಪಿರಬಹುದು
ಎಂದು ಘಟನಾ ಸ್ಥಳದಲ್ಲಿದ್ದ ಎಸ್‌ಎಸ್‌ಪಿ ಧ್ರುವ್ ದಾಹಿಯಾ ಅನುಮಾನ ವ್ಯಕ್ತ ಪಡಿಸಿದರು. ಪಟಾಕಿಗೆ
ಅತ್ಯುತ್ತಮ ಗುಣಮಟ್ಟ ಪೊಟಾಶಿಯಂ ಬಳಕೆ ಮಾಡಿರುವುದರಿಂದ ಸ್ಫೋಟದ ತೀವ್ರತೆ ಜಾಸ್ತಿಯಾಗಿತ್ತು, ಹೀಗಾಗಿ ಸ್ಫೋಟದಿಂದಾಗಿ ಹೆಚ್ಚಿ ಸಾವು ನೋವು ಆಗಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದವು. ಪಟಾಕಿ ಸ್ಫೋಟ ಆಕಸ್ಮಿಕ ಎಂದು ಭಾವಿಸಲಾಗಿದೆ ಎಂದು ಎಸ್ ಎಸ್ ಪಿ ಹೇಳಿದರು. ದುರಂತದಲ್ಲಿ
ಸಾವು ನೋವಿಗೆ ಈಡಾದ ಹೆಚ್ಚಿನವರು ೧೮-೧೯ ವಯೋಮಾನದವರು
ಎಂದು ಅಧಿಕಾರಿ ತಿಳಿಸಿದರು. ’ನಗರ ಕೀರ್ತನ್’ (ಧಾರ್ಮಿಕ ಮೆರವಣಿಗೆ)
ಸಮಯದಲ್ಲಿ ಟ್ರಾಕ್ಟರ್ ಟ್ರಾಲಿಯಲ್ಲಿ ಸಾಗಿಸಲಾಗುತ್ತಿದ್ದ ಪಟಾಕಿ, ತರಣ್ ತಾರಣ್‌ನಿಂದ ೧೦ ಕಿಮೀ ದೂರದ
ದಾಲೆಕೆ ಗಾಮದ ಬಳಿಕಯ ಪಹು ಗ್ರಾಮದಲ್ಲಿ ಸ್ಫೋಟಗೊಂಡಿತು. ಟ್ರಾಕ್ಟರ್ ಟ್ರಾಲಿಯಲ್ಲಿದ್ದ ಪಟಾಕಿಗಳು ಘರ್ಷಿಸಿದ್ದು ಸ್ಫೋಟಕ್ಕೆ ಕಾರಣವಾಗಿರಬಹುದು ಪೊಲೀಸರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ನವದೆಹಲಿ:
ದೆಹಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿದ್ದು, ಬಿಜೆಪಿಯು ೪೮ ಸ್ಥಾನಗಳಲ್ಲಿ ಗೆಲುವು
ಸಾಧಿಸುವ ಮೂಲಕ ಅಧಿಕಾರಕ್ಕೆ ಏರಲಿದೆ ಎಂದು ದೆಹಲಿ ಬಿಜೆಪಿ ನಾಯಕ ಮನೋಜ್ ತಿವಾರಿ 2020 ಫೆಬ್ರುವರಿ 08ರ ಶನಿವಾರ ಟ್ವೀಟ್
ಮಾಡಿದರು. ’ಎಎಪಿ ಮತ್ತೆ
ಸರ್ಕಾರ ರಚಿಸಲಿದೆ ಎಂದೇ ಸುಮಾರು
ಏಳು ಸಮೀಕ್ಷೆಗಳು ಹೇಳುತ್ತಿವೆ.
ಆದರೆ
ಮತದಾನೋತ್ತರ ಸಮೀಕ್ಷೆಗಳೆಲ್ಲ
ವಿಫಲವಾಗಲಿವೆ ಮತ್ತು ಬಿಜೆಪಿ ಅಧಿಕಾರಕ್ಕೆ ಏರುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದರು. ಬಿಜೆಪಿ ೪೮ ಸ್ಥಾನಗಳಲ್ಲಿ ಗೆಲುವು
ಸಾಧಿಸಲಿದ್ದು, ಸರ್ಕಾರ ರಚಿಸಲಿದೆ. ನನ್ನ ಈ ಟ್ವೀಟ್ ಅನ್ನು
ಉಳಿಸಿ ಇಟ್ಟುಕೊಳ್ಳಿ ಎಂದು ತಿವಾರಿ ಸವಾಲು ಎಸೆದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
No comments:
Post a Comment