Thursday, February 20, 2020

ಇಂದಿನ ಇತಿಹಾಸ History Today ಫೆಬ್ರುವರಿ 20

ಇಂದಿನ ಇತಿಹಾಸ  HistoryToday ಫೆಬ್ರುವರಿ 20 

2020: ನವದೆಹಲಿ/ ಬೆಂಗಳೂರು: ದೀರ್ಘ ಕಾಲದಿಂದ ಬಗೆಹರಿಯದೇ ಉಳಿದಿದ್ದ ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮಹತ್ವದ ಗೆಲುವು ಪ್ರಾಪ್ತವಾಯಿತು.  ಮಹದಾಯಿ ಜಲ ವಿವಾದ ನ್ಯಾಯಮಂಡಳಿಯು (ಮಹದಾಯಿ ನ್ಯಾಯಾಧೀಕರಣ) ನೀರು ಹಂಚಿಕೆ ಮಾಡಿ ನೀಡಿದ್ದ ತೀರ್ಪು ಕುರಿತು ಅಧಿಸೂಚನೆ (ಗೆಜೆಟ್ ನೋಟಿಫಿಕೇಷನ್) ಹೊರಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ 2020 ಫೆಬ್ರುವರಿ 20ರ ಗುರುವಾರ ನಿರ್ದೇಶನ ನೀಡಿತು.  ಇದರೊಂದಿಗೆ ಕರ್ನಾಟಕಕ್ಕೆ ೧೩.೪೨ ಟಿಎಂಸಿ ಅಡಿ ನೀರು ಬಿಡಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದಂತಾಯಿತು.   ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ವಿಧಾನಸಭೆಯಲ್ಲೂ ಪ್ರಕಟಿಸಿದರು. ತೀರ್ಪು ಪ್ರಶ್ನಿಸಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನೂ ಕೈಗೆತ್ತಿಕೊಳ್ಳಲು ಕೋರ್ಟ್ ಸಮ್ಮತಿ ಸೂಚಿಸಿತು. ಜುಲೈ ೧೫ರಿಂದ ಸತತವಾಗಿ ವಿಚಾರಣೆ ನಡೆಸಲು ನಿರ್ಧರಿಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ವಿಚಾರಣೆಯ ನಂತರ ಹೊರಬರುವ ತೀರ್ಪಿನಲ್ಲಿ ಬದಲಾವಣೆ ಆದಲ್ಲಿ ಅಧಿಸೂಚನೆಯನ್ನು ಬದಲಿಸಬೇಕು ಎಂದು ನಿರ್ದೇಶನ ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಮಾರ್ಚ್ ೩ರಂದು ಗಲ್ಲಿಗೇರಿಸಲು ಹೊಸದಾಗಿ ಡೆತ್ ವಾರಂಟ್ ಹೊರಡಿಸಲಾಗಿದ್ದರೂ, ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮ  2020 ಫೆಬ್ರುವರಿ 20ರ ಗುರುವಾರ ಮತ್ತೆ ಕೋರ್ಟ್ ಕಟ್ಟೆ ಏರಿದ. ಬಾರಿ  ಆತನಿಗೆ ಮಾನಸಿಕ ಅಸ್ವಸ್ಥತೆ ಖಿನ್ನತೆ ಮತ್ತು ತಲೆ ಮತ್ತು ಕೈಗಳಿಗೆ ಆಗಿರುವ ಗಾಯಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಯಿತು. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ವಿನಯ್ ಕುಮಾರ್ ಶರ್ಮ ಪರ ಸಲ್ಲಿಸಿದ ಅರ್ಜಿಗೆ ಶನಿವಾರದ ಒಳಗೆ ಉತ್ತರ ನೀಡುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೆರೆಮನೆ ಅಧಿಕಾರಿಗಳ ಪ್ರಕಾರ, ಶರ್ಮ ತಿಹಾರ್ ಸೆರೆಮನೆಯಲ್ಲಿನ ತನ್ನ ಕೊಠಡಿಯಲ್ಲಿ ತಲೆಯನ್ನು ಗೋಡೆಗೆ ಸ್ವತಃ ಜಜ್ಜಿಕೊಂಡು ಗಾಯಮಾಡಿಕೊಂಡಿದ್ದಾನೆ. ಸೆರೆಮನೆಯ ೩ನೇ ಸಂಖ್ಯೆಯ ಸೆಲ್ನಲ್ಲಿ ಭಾನುವಾರ ಮಧ್ಯಾಹ್ನ ಘಟನೆ ಘಟಿಸಿದೆ, ಆತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸೆರೆಮನೆಯೊಳಗೇ ಅದಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಬಾಕಿಗೆ ಸಂಬಂಧಿಸಿದಂತೆಅಭೂತಪೂರ್ವ’  ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೆರಿಗೆಗಳು ಮತ್ತು ಶುಲ್ಕಗಳಲ್ಲಿ ಕಡಿತ ಮಾಡುವ ಮೂಲಕ ಉದ್ಯಮದ ನೆರವಿಗೆ ಬರುವಂತೆ ಭಾರ್ತಿ ಏರ್ ಟೆಲ್ ಅಧ್ಯಕ್ಷ ಹಾಗೂ ಸಂಸ್ಥಾಪಕ ಸುನಿಲ್ ಮಿತ್ತಲ್ ಅವರು 2020 ಫೆಬ್ರುವರಿ 20ರ ಗುರುವಾರ ಕೇಂದ್ರ ದೂರಸಂಪರ್ಕ (ಟೆಲಿಕಾಂ) ಸಚಿವ ರವಿಶಂಕರ ಪ್ರಸಾದ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ‘ಎಜಿಆರ್ ಬಾಕಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲನೆಗೆ ಏರ್ಟೆಲ್ ಬದ್ಧವಾಗಿದೆ ಮತ್ತು ಕಂಪೆನಿಯು ಆದಷ್ಟೂ ಶೀಘ್ರ ಬಾಕಿ ಪಾವತಿ ಮಾಡಲಿದೆಎಂದು ಮಿತ್ರಲ್ ಅವರು ಸಚಿವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ‘ಸರ್ಕಾರವು ನಿರ್ವಹಿಸುತ್ತಿರುವ ಎಜಿಆರ್ ಪ್ರಸ್ತುತ ಉದ್ಯಮದ ಪಾಲಿಗೆ ಹಿಂದೆಂದೂ ಸಂಭವಿಸದ ಬಿಕ್ಕಟ್ಟು ಆಗಿ ಪರಿಣಮಿಸಿದೆಎಂದು ಅವರು ನುಡಿದರು. ‘ಉದ್ಯಮದ ಮೇಲೆ ಅತಿಯಾದ ತೆರಿಗೆ ಹೊರೆ ಇದೆ. ಉದ್ಯಮರಂಗದ ಮೇಲಿನ ತೆರಿಗೆ ಮತ್ತು ಶುಲ್ಕಗಳನ್ನು ಕಡಿತಗೊಳಿಸುವ ಅಗತ್ಯವಿದೆಎಂದು ಅವರು ಸರ್ಕಾರಕ್ಕೆ ಸಲಹೆ ಮಾಡಿದರು. ಬಾಕಿ ಪಾವತಿ ಮಾಡಲು ಏರ್ ಟೆಲ್ಗೆ ಮಾರ್ಚ್ ೧೭ರವರೆಗೆ ಕಾಲಾವಕಾಶ ಇದೆ. ಅದಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಸಂಸ್ಥೆಯು ತನ್ನ ಬಾಕಿಗಳನ್ನು ಪಾವತಿ ಮಾಡಲಿದೆ ಎಂದು ಅವರು ನುಡಿದರು.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಂದ ಮಾತ್ರವೇ ಎಲ್ಲ ರಾಜ್ಯ ಚುನಾವಣೆಗಳಲ್ಲೂ ಗೆಲುವು ಸಾಧಿಸಲು ಸಾಧ್ಯವಿಲ್ಲ, ಆದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಕ್ಷವನ್ನು ಬುಡಮಟ್ಟದಿಂದಲೇ ಬಲಪಡಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) 2020 ಫೆಬ್ರುವರಿ 20ರ ಗುರುವಾರ ಸಲಹೆ ಮಾಡಿತು.  ಆರ್ಎಸ್ಎಸ್ ಮುಖವಾಣಿಯಾಗಿರುವಆರ್ಗನೈಜರ್ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವಂತೆ ಬಿಜೆಪಿಗೆ ಸೂಚಿಸಿತು.. ‘ದೆಹಲಿಯ ವಿಭಿನ್ನ ಆದೇಶಶೀರ್ಷಿಕೆಯ ಸಂಪಾದಕೀಯದಲ್ಲಿ ಸಂಪಾದಕ ಪ್ರಫುಲ್ಲ ಕೇತ್ಕರ್ ಅವರು ವಿಧಾನಸಭಾ ಚುನಾವಣೆಗಳಲ್ಲಿ ಅಮಿತ್ ಶಾ ಮತ್ತು ನರೇಂದ್ರ ಮೋದಿ ಎಲ್ಲಾ ಸಂದರ್ಭಗಳಲ್ಲೂ ಸಹಾಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ದೆಹಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಬಿಟ್ಟು ಬೇರೆ ದಾರಿಯಿಲ್ಲ, ಮತದಾರರು ಕುರಿತು ಸ್ಪಷ್ಟ ತೀರ್ಪು ನೀಡಿದ್ದಾರೆಎಂದು ಬರೆದರು. ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸರ್ಕಾರದ ವಿರುದ್ಧ ಯಾವುದೇ ಅಧಿಕಾರ ವಿರೋಧಿ ಅಲೆ ಗೋಚರಿಸಲಿಲ್ಲ. ನಗರವಾಸಿಗಳಿಗೆ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಕಡಿತಗೊಳಿಸಿದ್ದ ಕ್ರಮ ಆಮ್ ಆದ್ಮಿ ಪಕ್ಷಕ್ಕೆ ನೆರವಾಯಿತು. ೨೦೧೫ ನಂತರ ಸಾಂಸ್ಥಿಕ ರಚನೆಯನ್ನು ತಳಮಟ್ಟದಲ್ಲಿ ಪುನರುಜ್ಜೀವನಗೊಳಿಸುವಲ್ಲಿ ಬಿಜೆಪಿ ವಿಫಲವಾಗಿದೆ, ಇದು ಚುನಾವಣಾ ಸೋಲಿಗೆ ಪ್ರಮುಖ ಕಾರಣವಾಗಿದೆಎಂದು ಪತ್ರಿಕೆಯ ಸಂಪಾದಕೀಯ ಅಭಿಪ್ರಾಯಪಟ್ಟಿತು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಗುಜರಾತಿನ ಅಹ್ಮದಾಬಾದಿನಲ್ಲಿ ಫೆಬ್ರುವರಿ ೨೪ರಂದು ನಡೆಯಲಿರುವನಮಸ್ತೆ ಟ್ರಂಪ್ಕಾರ್ಯಕ್ರಮಕ್ಕೂ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಹ್ಯೂಸ್ಟನ್ನಲ್ಲಿ ನಡೆದಹೌಡಿ ಮೋದಿಕಾರ್ಯಕ್ರಮಕ್ಕೂ ಹಲವಾರು ಸಾಮ್ಯತೆಗಳಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು  2020 ಫೆಬ್ರುವರಿ 20ರ  ಗುರುವಾರ ಇಲ್ಲಿ ವಿವರಿಸಿದರು. ‘ನಾವು ಅತ್ಯಂತ ಕಾತರದಿಂದ ಅಧ್ಯಕ್ಷ ಡೊನಾಡ್ ಟ್ರಂಪ್ ಭೇಟಿಗಾಗಿ ಕಾದಿದ್ದೇವೆ. ಅದು ನಮ್ಮ ಜಾಗತಿಕ ಆಯಕಟ್ಟಿನ ಬಾಂಧ್ಯವ್ಯಗಳನ್ನು ಬಲ ಪಡಿಸಲಿದೆಎಂದು ರವೀಶ್ ಕುಮಾರ್ ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಮೆಲೆನಿಯಾ ಟ್ರಂಪ್ ಅವರು ಎರಡು ದಿನಗಳ ಭೇಟಿ ಸಲುವಾಗಿ ಫೆಬ್ರುವರಿ ೨೪ರಂದು ಭಾರತಕ್ಕೆ ಬರುತ್ತಿದ್ದಾರೆ. ಟ್ರಂಪ್ ದಂಪತಿಯ ಪ್ರಪ್ರಥಮ ಭಾರತ ಭೇಟಿ ಇದಾಗಿದ್ದು, ಭಾರತ- ಅಮೆರಿಕ ಬಾಂಧವ್ಯಕ್ಕೆ ಇದರಿಂದ ಭಾರೀ ಒತ್ತು ಸಿಗಲಿದೆ ಎಂದು ಪರಿಗಣಿಸಲಾಗಿದೆ.  ಟ್ರಂಪ್ ದಂಪತಿ ಗುಜರಾತಿನ ಅಹ್ಮದಾಬಾದ್ ಭೇಟಿಯೊಂದಿಗೆ ತಮ್ಮ ಭಾರತ ಪ್ರವಾಸವನ್ನು ಆರಂಭಿಸಲಿದ್ದಾರೆ. ಮೊದಲ ದಿನ ಅವರು ಅಹ್ಮದಾಬಾದ್ ಮತ್ತು ಉತ್ತರ ಪ್ರದೇಶದ ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಸಂಜೆ ದೆಹಲಿಗೆ ತೆರಳುವ ಅವರು ಔಪಚಾರಿಕ ಸ್ವಾಗತವನ್ನು ಪಡೆಯಲಿದ್ದಾರೆ ಮತ್ತು ದ್ವಿಪಕ್ಷೀಯ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment