Wednesday, July 24, 2019

ಸರ್ಕಾರಗಳು ಸತ್ಯ ಹೇಳಲಿಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಸರ್ಕಾರಗಳು ಸತ್ಯ ಹೇಳಲಿಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದಲ್ಲಿ 40  ಭಯೋತ್ಪಾದಕ  ಗುಂಪುಗಳ ಕಾರ್ಯಾಚರಣೆ
ವಾಷಿಂಗ್ಟನ್: ಪಾಕಿಸ್ತಾನದ ಸರ್ಕಾರಗಳು ನಿರಂತರವಾಗಿ ಕಳೆದ 15 ವರ್ಷಗಳಲ್ಲಿ ಅಮೆರಿಕಕ್ಕೆ ಸತ್ಯ ಹೇಳಲಿಲ್ಲ, ನಮ್ಮ ದೇಶದಲ್ಲಿ 40 ವಿವಿಧ ಭಯೋತ್ಪಾದಕ ಗುಂಪುಗಳು ಕಾರ್ಯಾಚರಿಸುತ್ತಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 2019 ಜುಲೈ 23ರ ಮಂಗಳವಾರ (ಭಾರತದಲ್ಲಿ ಬುಧವಾರ ಜುಲೈ 24) ಇಲ್ಲಿ ಹೇಳಿದರು.
ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದ  ಅಮೆರಿಕದ  ಜೊತೆ ಹೋರಾಟ ನಡೆಸಿದ್ದೆವು. 9/11 ಭಯೋತ್ಪಾದಕ ದಾಳಿಯವರೆಗೆ ಪಾಕಿಸ್ತಾನ ವಿಚಾರಕ್ಕೆ ಕೈಹಾಕಿರಲಿಲ್ಲ.  ಅಲ್ ಖೈದಾ ಆಫ್ಘಾನಿಸ್ಥಾನದಲ್ಲಿತ್ತು. ಪಾಕಿಸ್ತಾನದಲ್ಲಿ ಉಗ್ರಗಾಮಿ ತಾಲಿಬಾನಿಗಳು ಇರಲಿಲ್ಲಆದರೆ  ನಾವು ಹೋರಾಟದಲ್ಲಿ ಅಮೆರಿಕದ ಜೊತೆ ಸೇರಿದೆವು. ದುರದೃಷ್ಟವೆಂದರೆ ಪರಿಸ್ಥಿತಿಗಳು ಬದಲಾದಾಗ ನಾವು ಅಮೆರಿಕಕ್ಕೆ ಪಾಕಿಸ್ತಾನದಲ್ಲಿ ಏನಾಗುತ್ತಿದೆ ಎಂಬ ಸತ್ಯವನ್ನು ಹೇಳಲಿಲ್ಲಇದಕ್ಕೆ ನಾನು ನಮ್ಮ ಸರ್ಕಾರಗಳನ್ನೇ  ದೂಷಿಸಬೇಕಾಗಿದೆ ಎಂದು ಇಮ್ರಾನ್ ಖಾನ್ ನುಡಿದರು.
ಕಾಂಗ್ರೆಸ್ ಸದಸ್ಯೆ ಶೀಲಾ ಜ್ಯಾಕ್ಸನ್ ಲೀ ಅವರ  ಏರ್ಪಡಿಸಿದ್ದ ಕ್ಯಾಪಿಟಲ್ ಹಿಲ್ ಸತ್ಕಾರ ಕೂಟದಲ್ಲಿ ಖಾನ್ ಮಾತನಾಡುತ್ತಿದ್ದರು. ಲೀ ಅವರು ಕಾಂಗ್ರೆಸ್ಸನಲ್ ಪಾಕಿಸ್ತಾನ ಕ್ಯಾಕಸ್ ಅಧ್ಯಕ್ಷರಾಗಿದ್ದಾರೆ. ಅವರು ಭಾರತದ ಕಾಂಗ್ರೆಸ್ಸನಲ್  ಅಂಡ್  ಇಂಡಿಯನ್  ಅಮೆರಿಕನ್ಸ್  ಸಂಸ್ಥೆಯ ಸದಸ್ಯರೂ ಆಗಿದ್ದಾರೆ.
ಪಾಕಿಸ್ತಾನಿ ಸರ್ಕಾರಳಿಗೆ ಭಯೋತ್ಪಾದಕರ ಮೇಲೆ ಯಾವುದೇ ನಿಯಂತ್ರಣವೂ ಇರದಿದ್ದುದೇ ಇದಕ್ಕೆ ಕಾರಣವಾಗಿತ್ತು ಎಂದು ಖಾನ್ ಹೇಳಿದರು.
ವಿವರಗಳಿಗೆ  ಕೆಳಗಿನ ಚಿತ್ರ ಕ್ಲಿಕ್ಕಿಸಿ:


No comments:

Post a Comment